T20 World Cup 2026: ಟಿ20 ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. 20 ತಂಡಗಳಲ್ಲಿ ಈಗಾಗಲೇ 7 ಟೀಮ್ಗಳು ಸೂಪರ್-8 ಹಂತಕ್ಕೇರಿದೆ. ಗ್ರೂಪ್-ಎ ಯಿಂದ ಈಗಾಗಲೇ ಭಾರತ ತಂಡವು ಮುಂದಿನ ಸುತ್ತಿಗೆ ಪ್ರವೇಶಿಸಿದ್ದು, ದ್ವಿತೀಯ ಸುತ್ತಿನಲ್ಲಿ ಮೂರು ತಂಡಗಳನ್ನು ಎದುರಿಸಲಿದೆ. ಅದರಂತೆ ಸೂಪರ್-8 ಸುತ್ತಿನಲ್ಲಿ ಟೀಮ್ ಇಂಡಿಯಾ ಎದುರಿಸಲಿರುವ ತಂಡಗಳಾವುವು ಎಂದು ನೋಡುವುದಾದರೆ…
ಬೆಂಗಳೂರು, ಫೆಬ್ರವರಿ 18: ಬೆಂಗಳೂರಿನಲ್ಲಿ (Bangalore)ಪೌರಕಾರ್ಮಿಕರು ಒಂದು ದಿನ ಕಸ ಎತ್ತಿಲ್ಲ ಎಂದರೂ ಗಬ್ಬೆದ್ದು ನಾರಲು ಶುರುವಾಗುತ್ತದೆ. ರಸ್ತೆ ರಸ್ತೆಗಳಲ್ಲೂ ಕಸ ಚೆಲ್ಲಾಡಿರುತ್ತದೆ. ಪ್ರತಿನಿತ್ಯ ಬೆಂಗಳೂರು ನಗರದಾದ್ಯಂತ ಸಂಗ್ರಹವಾಗುವ ಸಾವಿರಾರು ಟನ್ ಕಸವನ್ನು ವಿಲೇವಾರಿ ಮಾಡುವುದೇ ಸವಾಲು. ಇಂಥದ್ದರ ನಡುವೆ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಇದಕ್ಕೆ ಕಾರಣ ನೂರಾರು ಕಸತುಂಬಿರುವ ಲಾರಿಗಳು ನಿಂತಲ್ಲೇ ನಿಲ್ಲುವಂತಾಗಿರುವುದು! ಬೆಂಗಳೂರಿನ ಕಸವನ್ನು ತುಂಬಿಕೊಂಡು ವಿಲೇವಾರಿಗೆ ಹೊರಟ್ಟಿದ್ದ ಲಾರಿಗಳಿಗೆ ಗ್ರಾಮಸ್ಥರು ತಡೆ ನೀಡಿದ್ದಾರೆ. ಮಹದೇವಪುರ ವ್ಯಾಪ್ತಿಯ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತೆರಳುತ್ತಿದ್ದ ಲಾರಿಗಳಿಗೆ ಅಲ್ಲಿನ ಸ್ಥಳೀಯರು ದಿಗ್ಬಂಧನ ಹಾಕಿದ್ದಾರೆ.
ಗ್ರಾಮ ಅಭಿವೃದ್ದಿ ನಿಧಿ ಕೊಡಲಿಲ್ಲವೆಂದು ಆಕ್ರೋಶ
2 ವರ್ಷಗಳಿಂದ ಗ್ರಾಮ ಅಭಿವೃದ್ಧಿ ನಿಧಿ ಕೊಡಲಿಲ್ಲ ಎಂದು ಜಿಬಿಎ ವಿರುದ್ಧ ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಸ್ಥಳೀಯ ಶಾಸಕಿ ಮಂಜುಳ ಅರವಿಂದ ಲಿಂಬಾವಳಿ ಸೂಚನೆ ಮೇರೆಗೆ ಗ್ರಾಮಸ್ಥರು ಕಸದ ಲಾರಿಗಳನ್ನು ತಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರ ಪ್ರತಿಭಟನೆ ಮುಂದುವರಿದಿದ್ದೇ ಆದಲ್ಲಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣವಾಗುವುದು ನಿಶ್ಚಿತವಾಗಿದೆ.
ಬಾಗಲೂರು ರಸ್ತೆಯಲ್ಲಿ ಬಾಲಕನ ದುರ್ಮರಣ ಬಳಿಕ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ಕಸ ಸಾಗಿಸುತ್ತಿದ್ದ ಲಾರಿಗೆ ತಡೆಯೊಡ್ಡಿದ್ದಾರೆ. ಹೀಗಾಗಿ ಇಲ್ಲೂ ಗಾರ್ಬೆಜ್ ತುಂಬಿದ ಲಾರಿಗಳು ನಿಂತಲ್ಲೇ ನಿಲ್ಲುವಂತಾಗಿವೆ.
ಇನ್ನು ಮಿಟ್ಟಗಾನಹಳ್ಳಿ, ಬೆಳ್ಳಹಳ್ಳಿ ಗ್ರಾಮಗಳಲ್ಲಿ ಕಸ ವಿಲೇವಾರಿಗೆ ಬ್ರೇಕ್ ಬೀಳುತ್ತಿದ್ದಂತೆಯೇ, ಹೆಚ್ಚುವರಿಯಾಗಿ 400 ಗಾಡಿಗಳನ್ನು ದೊಡ್ಡಬಳ್ಳಾಪುರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಲು ಪ್ಲ್ಯಾನ್ ಮಾಡಲಾಗಿತ್ತು. ಇದನ್ನು ಅರಿತ ಶಾಸಕ ಧೀರಜ್ ಮುನಿರಾಜು ಮಂಕಲಾಳ ಬಳಿ ಕಸದ ಲಾರಿಗಳಿಗೆ ತಡೆಯೊಡ್ಡಿದ್ದಾರೆ.
ಬೆಂಗಳೂರು, ಫೆಬ್ರವರಿ 18: ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ (Weather Forecast) ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನ ತಕ್ಕಮಟ್ಟಿಗೆ ಇಂದು ಸುಧಾರಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೆಲ ದಿನಗಳಿಂದ ಒಣ ಹವೆಯ ವಾತಾವರಣವಿದೆ. ಇನ್ನೂ ಕೆಲ ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಒಣಹವೆ?
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಶುಷ್ಕ ವಾತಾವರಣ
ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 31°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದೆ. ಈ ಚಿತ್ರದ ಮುಂದುವರಿದ ಭಾಗಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ‘ಧುರಂಧರ್ 2’ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗ ಸಿನಿಮಾ ಬಗ್ಗೆ ದೊಡ್ಡ ವಿವಾದ ಹುಟ್ಟಿಕೊಂಡಿದೆ. ಈ ವಿವಾದವು ಧುರಂಧರ್ ನಿರ್ಮಾಪಕರು ಮತ್ತು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಡುವೆ ಇದೆ. ಚಿತ್ರೀಕರಣದ ಸಮಯದಲ್ಲಿ ತಂಡವು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ಆರೋಪಿಸಿದೆ. ನಿರ್ಮಾಣ ಕಂಪನಿಯ ವಿರುದ್ಧ ಮುನ್ಸಿಪಲ್ ಕಾರ್ಪೊರೇಷನ್ ಹಲವು ಆರೋಪಗಳನ್ನು ಮಾಡಿದೆ.
ನಿರ್ಮಾಣ ತಂಡವು ಅನುಮತಿ ಇಲ್ಲದ ಕಡೆ ಚಿತ್ರೀಕರಣ ನಡೆಸುತ್ತಿದೆ ಎಂದು ಮುನ್ಸಿಪಲ್ ಕಾರ್ಪೊರೇಷನ್ ಆರೋಪಿಸಿದೆ. ಈ ನಿಟ್ಟಿನಲ್ಲಿ, ನಿರ್ದೇಶಕ ಆದಿತ್ಯ ಧರ್ ಅವರ ನಿರ್ಮಾಣ ಕಂಪನಿ ಬಿ62 ಸ್ಟುಡಿಯೋಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಒತ್ತಾಯ ಕೇಳಿ ಬಂದಿದೆ. ‘ಧುರಂಧರ್ 2’ ಚಿತ್ರೀಕರಣದ ಸಮಯದಲ್ಲಿ ಸುರಕ್ಷತೆ ಮತ್ತು ನಿಯಮಗಳನ್ನು ಪದೇ ಪದೇ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.
ಶೂಟಿಂಗ್ ಸಮಯದಲ್ಲಿ ಭದ್ರತಾ ಪ್ರದೇಶದಲ್ಲಿ ದೊಡ್ಡ ದೊಡ್ಡ ಟಾರ್ಚ್‌ಗಳನ್ನು ಬಳಸಲಾಗಿದೆ. ಇದನ್ನು ಅತ್ಯಂತ ಗಂಭೀರ ಭದ್ರತಾ ಲೋಪವೆಂದು ಪರಿಗಣಿಸಲಾಗಿದೆ. ಮುಂಬೈ ಪೊಲೀಸರು ಕೂಡ ಮಧ್ಯಪ್ರವೇಶಿಸಿ ಆ ಉಪಕರಣಗಳನ್ನು ವಶಪಡಿಸಿಕೊಂಡರು. ಇದಲ್ಲದೆ, ಚಿತ್ರದ ಸಿಬ್ಬಂದಿ ಅನುಮತಿಯಿಲ್ಲದೆ ಶೂಟಿಂಗ್ ಸ್ಥಳವನ್ನು ಬದಲಾಯಿಸಿದರು ಮತ್ತು ಅಗತ್ಯ ಅನುಮತಿಯನ್ನು ಪಡೆಯದೆ ಕಟ್ಟಡದ ಟೆರೇಸ್ ಅನ್ನು ಬಳಸಿದರು. ಇದರೊಂದಿಗೆ, ಸ್ಥಳೀಯ ಆಡಳಿತದಿಂದ ಮಾನ್ಯ ಅನುಮತಿಯನ್ನು ಪಡೆಯದೆ ಎರಡು ಜನರೇಟರ್ ವ್ಯಾನ್‌ಗಳು ಸಹ ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದವು.
ಈ ನಿಟ್ಟಿನಲ್ಲಿ ಪಾಲಿಕೆಯು ಜಿಲ್ಲಾಧಿಕಾರಿಗಳಿಗೆ ಔಪಚಾರಿಕ ಪತ್ರವನ್ನು ಕಳುಹಿಸಿದ್ದು, ರಾಜ್ಯದ ಏಕ-ವಿಂಡೋ ಚಿತ್ರೀಕರಣ ಪೋರ್ಟಲ್ ಮೂಲಕ ಸ್ಟುಡಿಯೋವನ್ನು ಚಿತ್ರೀಕರಣದಿಂದ ಶಾಶ್ವತವಾಗಿ ನಿಷೇಧಿಸುವ ಪ್ರಸ್ತಾಪವನ್ನು ಸಲ್ಲಿಸಿದೆ. ಈ ಕ್ರಮದ ಭಾಗವಾಗಿ, ಪಾಲಿಕೆಯು ಈಗಾಗಲೇ 25,000 ರೂ.ಗಳ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಮತ್ತು 1 ಲಕ್ಷ ರೂ.ಗಳ ಹೆಚ್ಚುವರಿ ದಂಡವನ್ನು ವಿಧಿಸಲು ಪ್ರಸ್ತಾಪಿಸಿದೆ. ಆದಿತ್ಯ ಧರ್ ಅವರ ಸ್ಟುಡಿಯೋವನ್ನು ಇನ್ನೂ ಅಧಿಕೃತವಾಗಿ ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ.
ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ರಣವೀರ್ ಜೊತೆಗೆ, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ರಾಕೇಶ್ ಬೇಡಿ ಕೂಡ ಇದರಲ್ಲಿ ನಟಿಸಿದ್ದಾರೆ.
ನವದೆಹಲಿ, ಫೆಬ್ರವರಿ 18: ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರೀ ಹಿಮಪಾತ ಸಂಭವಿಸಿದೆ, ಹಿಮದಲ್ಲಿ ಸಿಲುಕಿಕೊಂಡಿದ್ದ ವಾಹನವನ್ನು ತಳ್ಳಲು ಕೇಂದ್ರ ಸಚಿವ ಕಿರಣ್ ರಿಜಿಜು ಸಹಾಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶೋಂಗಟ್ಸರ್ ಸರೋವರ ಮತ್ತು ಪಿಟಿ ತ್ಸೋ ಪ್ರದೇಶದ ನಡುವೆ ಈ ಘಟನೆ ನಡೆದಿದ್ದು, ಭಾರಿ ಹಿಮಪಾತವು ಪ್ರಮುಖ ರಸ್ತೆ ತಡೆಗೆ ಕಾರಣವಾಯಿತು. ಹಿಮದಿಂದ ಆವೃತವಾದ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ವಾಹನವನ್ನು ಸ್ಥಳಾಂತರಿಸಲು ಮತ್ತು ದಾರಿಯನ್ನು ತೆರವುಗೊಳಿಸಲು ಸ್ಥಳೀಯರು ಮತ್ತು ಕಾರ್ಮಿಕರೊಂದಿಗೆ ತಾವು ಕೂಡ ಸೇರಿ ವಾಹನವನ್ನು ತಳ್ಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಖುದ್ದಾಗಿ ಅವರೇ ಹಂಚಿಕೊಂಡಿದ್ದಾರೆ.
T20 World Cup 2026: ಟಿ20 ವಿಶ್ವಕಪ್ 2026 ರಿಂದ ಆಸ್ಟ್ರೇಲಿಯಾ ತಂಡ ಹೊರಬಿದ್ದಿದೆ. ಐರ್ಲೆಂಡ್ ಮತ್ತು ಝಿಂಬಾಬ್ವೆ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಇದರಿಂದ ಉಭಯ ತಂಡಗಳು ಒಂದೊಂದು ಅಂಕಗಳನ್ನು ಪಡೆದುಕೊಂಡಿದೆ. ಅತ್ತ ಝಿಂಬಾಬ್ವೆ ತಂಡವು ಒಂದು ಅಂಕ ಪಡೆಯುವುದರೊಂದಿಗೆ ಒಟ್ಟು 5 ಪಾಯಿಂಟ್ಸ್ನೊಂದಿಗೆ ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಇತ್ತ ಆಸ್ಟ್ರೇಲಿಯಾ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಒಮಾನ್ ವಿರುದ್ಧ ಗೆದ್ದರೂ ಗರಿಷ್ಠ 4 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯ. ಹೀಗಾಗಿ 6 ಅಂಕಗಳನ್ನು ಪಡೆದಿರುವ ಶ್ರೀಲಂಕಾ ಮತ್ತು 5 ಅಂಕಗಳಿಸಿರುವ ಝಿಂಬಾಬ್ವೆ ಗ್ರೂಪ್-ಸಿ ಯಿಂದ ಸೂಪರ್-8 ಹಂತಕ್ಕೇರಿದೆ.
15 ವರ್ಷಗಳ ಬಳಿಕ ನಾಕೌಟ್:
ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡವು ಕೇವಲ 2 ಬಾರಿ ಮಾತ್ರ ಗ್ರೂಪ್ ಸ್ಟೇಜ್ನಿಂದ ಹೊರಬಿದ್ದಿದೆ. 2009 ರ ವಿಶ್ವಕಪ್ನಲ್ಲಿ ಆಸೀಸ್ ಪಡೆ ಎರಡೂ ಪಂದ್ಯಗಳಲ್ಲೂ ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ದ್ವಿತೀಯ ಸುತ್ತಿಗೇರದೇ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿದೆ.
8 ಬಾರಿ ಮೊದಲ ಸುತ್ತಿನಲ್ಲೇ ಔಟ್:
ಆಸ್ಟ್ರೇಲಿಯಾ ತಂಡವು ಐಸಿಸಿ ಪ್ರಮುಖ ಟೂರ್ನಿಗಳ ಗುಂಪು ಹಂತದಲ್ಲಿ ಈವರೆಗೆ ಒಟ್ಟು 8 ಬಾರಿ ಹೊರಬಿದ್ದಿದೆ. ಮೊದಲ ಬಾರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದು 1979 ರಲ್ಲಿ. ಇದಾದ ಬಳಿಕ 1983 ರ ಏಕದಿನ ವಿಶ್ವಕಪ್ನಲ್ಲೂ ದ್ವಿತೀಯ ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ. ಇನ್ನು 1992 ರ ಏಕದಿನ ವಿಶ್ವಕಪ್ನಲ್ಲೂ ಆಸೀಸ್ ಪಡೆ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದರು.
ಇದಾದ ಬಳಿಕ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ನಲ್ಲಿ ಒಮ್ಮೆಯೂ ಮೊದಲ ಸುತ್ತಿನಲ್ಲೇ ಹೊರಬಿದ್ದಿಲ್ಲ ಎಂಬುದು ಉಲ್ಲೇಖಾರ್ಹ. ಆದರೆ 2009ರ ಟಿ20 ವಿಶ್ವಕಪ್ನಲ್ಲಿ ದ್ವಿತೀಯ ಸುತ್ತಿಗೇರಲು ವಿಫಲವಾಗಿತ್ತು.
ಇನ್ನು 2013ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಗ್ರೂಪ್ ಸ್ಟೇಜ್ನಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಿದ್ದರು. ಇದಾದ ಬಳಿಕ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು.
ಇದೀಗ 2026ರ ಟಿ20 ವಿಶ್ವಕಪ್ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಆಸ್ಟ್ರೇಲಿಯಾ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ.
ಸಾಮಾನ್ಯವಾಗಿ ಬಿಗ್ ಬಜೆಟ್ ಸಿನಿಮಾಗಳನ್ನು ಕೈಗೆತ್ತಿಕೊಂಡಾಗ ಅದನ್ನು ಅಂದುಕೊಂಡ ದಿನಾಂಕದಂದು ತೆರೆಗೆ ತರೋದು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೂ ಕೆಲವರು ಆ ಬಗ್ಗೆ ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ, ಇದು ಅಷ್ಟು ಸುಲಭ ಅಲ್ಲ. ಈಗ ಜೂನಿಯರ್ ಎನ್ಟಿಆರ್ (Jr NTR) ಸಿನಿಮಾ ವಿಷಯದಲ್ಲೂ ಹಾಗೆಯೇ ಆಗಿದೆ. ಸಿನಿಮಾ ಅಂದುಕೊಂಡ ದಿನಾಂಕದಂದು ತೆರೆಗೆ ತರಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ, ದೀಪಾವಳಿ ಅಥವಾ ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತರುವ ಬಗ್ಗೆ ತಂಡ ಪ್ಲ್ಯಾನ್ ಮಾಡಿದೆ.
ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ಈ ಮೊದಲು ಘೋಷಣೆ ಮಾಡಲಾಗಿತ್ತು. ಆದರೆ, ಇನ್ನೂ ಸಿನಿಮಾದ ಶೂಟ್ ಪೂರ್ಣಗೊಂಡಿಲ್ಲ. ಸದ್ಯ ತಂಡ ಜೋರ್ಡನ್ ಅಲ್ಲಿದ್ದು, ಕೊನೆಯ ಹಂತದ ಶೂಟ್ನಲ್ಲಿ ತೊಡಗಿಕೊಂಡಿದೆ. ಆ ಬಳಿಕ ತಂಡ ಹೈದರಾಬಾದ್ಗೆ ಮರಳಲಿದೆ.
ಜೋರ್ಡನ್ ಅಲ್ಲಿ ನಡೆಯೋದು ಕೊನೆಯ ಹಂತದ ಔಟ್ಡೋರ್ ಶೂಟ್. ನಂತರ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇಂಡೋರ್ ಶೂಟ್ ನಡೆಯಲಿದೆಯಂತೆ. ಅದಕ್ಕೂ ಸ್ವಲ್ಪ ಸಮಯ ಹಿಡಿಯಲಿದೆ. ಇದೆಲ್ಲ ಸೇರಿದರೆ ಇನ್ನೂ ಎರಡು ತಿಂಗಳು ಶೂಟಿಂಗ್ಗೆ ಸಮಯ ವ್ಯರ್ಥ ಆಗಲಿದೆ. ಹೀಗಾಗಿ, ಜೂನ್ ಸಮಯಕ್ಕೆ ಸಿನಿಮಾ ರಿಲೀಸ್ ಆಗೋದು ಅನುಮಾನ ಎನ್ನಲಾಗುತ್ತಿದೆ.
ಈ ಮೊದಲು ಸಿನಿಮಾ ಬಗ್ಗೆ ಸಾಕಷ್ಟು ನೆಗೆಟಿವ್ ಮಾತುಗಳು ಕೇಳಿ ಬಂದಿದ್ದವು. ಸಿನಿಮಾ ದೃಶ್ಯಗಳ ಬಗ್ಗೆ ಜೂನಿಯರ್ ಎನ್ಟಿಆರ್ ಅವರಿಗೆ ಖುಷಿ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಸಿನಿಮಾ ವಿಳಂಬವಾದರೂ ಟ್ರ್ಯಾಕ್ನಲ್ಲಿ ಇದೆಯಲ್ಲ ಎಂಬ ಖುಷಿಯಲ್ಲಿ ಅಭಿಮಾನಿಗಳು ಇದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಕೊನೆಯ ಸಿನಿಮಾ ‘ಸಲಾರ್’ ಸಾಧಾರಣ ಎನಿಸಿಕೊಂಡಿತು. ಈ ಚಿತ್ರದ ಮೂಲಕ ಅವರಿಗೆ ಗೆಲ್ಲುವ ಅನಿವಾರ್ಯತೆ ಇದೆ. ಅವರು ಡಾರ್ಕ್ ಸ್ಟೈಲ್ ಅಲ್ಲಿ ಸಿನಿಮಾ ಮಾಡೋ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ.
ಬೆಂಗಳೂರು, ಫೆಬ್ರವರಿ 18: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆಯ ಆಯಸ್ಸು ಎಷ್ಟು ವರ್ಷ ಅದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಮನೆ ಕಟ್ಟುವಾಗ ನಾವು ಜಾತಕ, ವಾಸ್ತುಪುರುಷನ ಸ್ಥಿತಿ ಮತ್ತು ಎಂಟು ಆಯಗಳಾದ ಧ್ವಜಾಯ, ಧೂಮ್ರಾಯ, ಕಾಕಾಯ, ಸಿಂಹಾಯ, ವೃಷಭಾಯ, ಗಜಾಯ, ಖರಾಯ ಇವುಗಳನ್ನು ಪರಿಗಣಿಸುತ್ತೇವೆ. ಆದರೆ, ಇವುಗಳ ಆಧಾರದ ಮೇಲೆ ಮಾತ್ರ ಮನೆಯ ನಿಜವಾದ ಆಯಸ್ಸನ್ನು ನಿರ್ಧರಿಸುವುದು ಕಷ್ಟ ಎಂದು ವಿವರಿಸಲಾಗಿದೆ.
ಮನೆಯ ದೀರ್ಘಾಯುಷ್ಯಕ್ಕೆ ಪ್ರಮುಖವಾಗಿ ಮನೆ ನಿರ್ಮಾಣವನ್ನು ಪ್ರಾರಂಭಿಸುವಾಗ ಗ್ರಹಗಳ ಗೋಚರವನ್ನು ಪರಿಗಣಿಸಬೇಕು. ಗ್ರಹಗಳ ಪ್ರಭಾವವು ಮನೆಯ ಆಯಸ್ಸನ್ನು ನಿರ್ಧರಿಸುತ್ತದೆ. ನೂರಾರು ವರ್ಷಗಳಷ್ಟು ಹಳೆಯದಾದ ಮನೆಗಳು ಇಂದಿಗೂ ಭದ್ರವಾಗಿರುವುದಕ್ಕೆ ಇದೇ ಕಾರಣ. ಅಪಾರ್ಟ್‌ಮೆಂಟ್‌ಗಳಿಗೆ ವೈಯಕ್ತಿಕ ಫ್ಲ್ಯಾಟ್‌ನ ಆಯಸ್ಸು ಹೇಳುವುದು ಕಷ್ಟ. ಜ್ಯೋತಿಷ್ಯದ ಪ್ರಕಾರ, ಲಗ್ನದಲ್ಲಿ ಬುಧನಿದ್ದರೆ 50 ವರ್ಷ, ಲಗ್ನದಿಂದ ನಾಲ್ಕರಲ್ಲಿ ಗುರು ಮತ್ತು 11ರಲ್ಲಿ ಚಂದ್ರನಿದ್ದರೆ 80 ವರ್ಷ, ಲಗ್ನದಲ್ಲಿ ಗುರು, ನಾಲ್ಕರಲ್ಲಿ ಶುಕ್ರ ಮತ್ತು ಆರರಲ್ಲಿ ರವಿ ಇದ್ದರೆ 120 ವರ್ಷದ ಪೂರ್ಣಾಯುಸ್ಸು ಇರುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರುImage Credit source: tv9
ಬೆಂಗಳೂರು, ಫೆಬ್ರವರಿ 18: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಬದಲಾವಣೆ ಎಂಬ ಚರ್ಚೆಯೇ ಗೊಂದಲದ ಗೂಡಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ (Siddaramaiah) ಆಪ್ತ ಬಣದ ಬಹುಪಾಲು ಶಾಸಕರು (Congress MLAs) ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ. ಮೊದಲು ಸರ್ಕಾರಿ ಪ್ರಾಯೋಜಿತ ಎಂಬ ಅರ್ಥದಲ್ಲಿ ಹೊರಬಿದ್ದಿದ್ದ ಈ ಟೂರ್ ವಿಚಾರ, ಈಗ ಖಾಸಗಿ ಟ್ರಿಪ್ ಎಂಬುದು ಗೊತ್ತಾಗಿದೆ. ಮಂಗಳವಾರ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್ಸಿಗಳು ವಿದೇಶಕ್ಕೆ ಹಾರಿದ್ದಾರೆ.
ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರು ಯಾರೆಲ್ಲ?
ದೇವೇಂದ್ರಪ್ಪ, ಜಗಳೂರು ಶಾಸಕ
ಹೆಚ್.ಡಿ ತಮ್ಮಯ್ಯ, ಚಿಕ್ಕಮಗಳೂರು ಶಾಸಕ
ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ
ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ
ಬಿ.ಎಂ ನಾಗರಾಜ್, ಸಿರಗುಪ್ಪ ಶಾಸಕ
ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ
ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ
ಶರಣಗೌಡ ಬಯ್ಯಾಪುರ, ಎಂಎಲ್ಸಿ
ವಸಂತ್ ಕುಮಾರ್, ಎಂಎಲ್ಸಿ
ನಾಗರಾಜ್ ಯಾದವ್, ಎಂಎಲ್ಸಿ
ಡಾ. ಡಿ. ತಿಮಯ್ಯ, ಎಂಎಲ್ಸಿ
ಮಲೇಷಿಯನ್ ಏರ್‌ಲೈನ್ಸ್‌ನ MH 193 ವಿಮಾನದಲ್ಲಿ ಶಾಸಕರು ತೆರಳಿದ್ದಾರೆ. ಆಸ್ಟ್ರೇಲಿಯಾಗೆ ನೇರ ವಿಮಾನ ಇಲ್ಲದ ಕಾರಣ ಟ್ರಾನ್ಸಿಟ್ ಫ್ಲೈಟ್ ಮೂಲಕ ತೆರಳಲು ಪ್ಲ್ಯಾನ್ ಮಾಡಿದ್ದಾರೆ. ಬೆಂಗಳೂರಿನಿಂದ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ತೆರಳುವ ಶಾಸಕರು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುತ್ತಾರೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಹೋಗುವ ಶಾಸಕರು ಮಾರ್ಚ್ 1ರವರೆಗೆ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ವಿಚಾರ ಎಂದರೆ, ಆರಂಭದಲ್ಲಿ 35 ಶಾಸಕರು ಸಿದ್ಧರಾಗಿದ್ದರು. ಬಳಿಕ ಶಾಸಕರ ಸಂಖ್ಯೆ 21ಕ್ಕೆ ಇಳಿದಿತ್ತು. ಆದರೆ ರಾತ್ರಿಯಾಗ್ತಿದ್ದಂತೆಯೇ 11 ಶಾಸಕರು ಮಾತ್ರ ವಿದೇಶಕ್ಕೆ ಹಾರಿದ್ದಾರೆ.
ಮತ್ತೊಂದೆಡೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪತ್ನಿ ಹಾಗೂ ಸಂಬಂಧಿಕರ ಜೊತೆಗೆ ಕೊಲಂಬಿಯಾಗೆ ತೆರಳಿದ್ದಾರೆ. ಮಂಗಳವಾರ ಬೆಳಗ್ಗೆ 7 ಸ್ನೇಹಿತರು, ಸಂಬಂಧಿಕರು, ಪತ್ನಿ ಜತೆ ಎಸ್ಎಸ್ ಮಲ್ಲಿಕಾರ್ಜುನ ಕೆಂಪೇಗೌಡ ಏರ್ಪೋರ್ಟ್ನಿಂದ ಥೈಲ್ಯಾಂಡ್ನ ಪುಕೆಟ್ ನಗರಕ್ಕೆ ತೆರದ್ದು, ಅಲ್ಲಿಂದ ದಕ್ಷಿಣ ಅಮೆರಿಕಾದ ಕೊಲಂಬಿಯಾಗೆ ಪ್ರಯಾಣ ಬೆಳೆಸಿದ್ದಾರೆ.
ಶಾಸಕರು ವಿದೇಶಕ್ಕೆ ತೆರಳುವ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಮಾಹಿತಿ ನೀಡಿದ್ದಾರೆ. ಅವರು ಏನೇ ಮಾಹಿತಿ ನೀಡಿದರೂ, ಖಾಸಗಿ ಟೂರ್ ಈಗ ಪೊಲಿಟಿಕಲ್ ಟೂರ್ ಎನ್ನುವ ರೀತಿಯ ಬಿಂಬಿತವಾಗಿದೆ. ಯಾಕೆಂದರೆ, ಶಾಸಕರೆಲ್ಲ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲೇ ಪ್ರವಾಸ ಹೊರಟಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್, ನಾನು ವಿದೇಶಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ. ಶಾಸಕರನ್ನು ವಿದೇಶಕ್ಕೆ ಕಳುಹಿಸಲು ನಾನೇನು ಸಿಎಂ ಆಗಬೇಕಾ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ, ಸಿಎಂ ಕುರ್ಚಿ ಉಳಿಸಿಕೊಳ್ಳುವವರು ಫಾರಿನ್‌ಗೆ ಕಳುಹಿಸುತ್ತಿದ್ದಾರಾ ಎಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂದು ನುಣುಚಿಕೊಂಡಿದ್ದಾರೆ.
ಶಾಸಕರ ವಿದೇಶ ಪ್ರವಾಸದ ಬಗ್ಗೆ ಯಾರ್ಯಾರು ಏನಂದರು?
ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾರು ಸ್ಪಾನ್ಸರ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಸಚಿವ ದಿನೇಶ್ ಗುಂಡೂರಾವ್, ಸ್ಪಾನ್ಸರ್ ಎಂಬುದು ಊಹಾಪೋಹ ಎಂದಿದ್ದಾರೆ.
ಇನ್ನು ಶಾಸಕ ಶಿವಗಂಗಾ ಬಸವರಾಜ್, ಶಾಸಕರ ವಿದೇಶಿ ಪ್ರವಾಸಕ್ಕೆ ನನ್ನ ಆಕ್ಷೇಪ ಇಲ್ಲ ಎನ್ನುತ್ತಲೇ, ಬಜೆಟ್ ಸಮಯದಲ್ಲಿ ಹೋಗುವುದು ಸೂಕ್ತ ಅಲ್ಲ ಎಂದಿದ್ದಾರೆ. ಮತ್ತೊಂದೆಡೆ ಯತೀಂದ್ರ ಸಿದ್ದರಾಮಯ್ಯ, ಹೋಗುವವರಿಗೆ ಬೇಡ ಎನ್ನಲು ಆಗಲ್ಲ ಎಂದಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್, ರಾಮನಗರವೇ ನನ್ನ ಪಾಲಿನ ಫಾರಿನ್ ಎಂದಿದ್ದು, ಕೆಎನ್ ರಾಜಣ್ಣ ಲೋಕೋ ಭಿನ್ನ ರುಚಿಃ ಅಂತಾ ವಿಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ನಾಯಕತ್ವ ಎಂಬ ಬೆಂಕಿಯಲ್ಲಿ ಧಗಧಗಿಸುತ್ತಿರುವ ಕಾಂಗ್ರೆಸ್‌ನಲ್ಲಿ ಈಗ ಶಾಸಕರ ಫಾರಿನ್ ಟ್ರಿಪ್ ಬೇರೆಯದ್ದೇ ಗಾಳಿ ಬೀಸುವಂತೆ ಮಾಡಿದೆ. ಗೊಂದಲಕ್ಕೆ ತೆರೆ ಎಳೆಯಬೇಕಿದ್ದ ಹೈಕಮಾಂಡ್, ಸ್ಥಳೀಯ ಸಮಸ್ಯೆ ಎಂದು ಕೈತೊಳೆದುಕೊಂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬಾಲಿವುಡ್ ಅಲ್ಲಿ ಪಿಆರ್ ತಂತ್ರಗಳು ಹೆಚ್ಚು ಕೆಲಸ ಮಾಡುತ್ತವೆ. ಕೆಲವು ಸಿನಿಮಾ ಹಿಟ್ ಅಥವಾ ಫ್ಲಾಪ್ನ ನಿರ್ಧಾರ ಮಾಡೋದು ಇವರೇ. ಆದರೆ, ಈಗ ಆಡಿಯನ್ಸ್ ಬದಲಾಗಿದ್ದಾರೆ. ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ಸ್ಪಷ್ಟವಾಗಿ ಕಂಡು ಹಿಡಿಯುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಬಾಲಿವುಡ್ ಅಲ್ಲಿ ಪಿಆರ್ ಟೆಕ್ನಿಕ್ ಮೂಲಕ ಗೆಲ್ಲುವ ಪ್ರಯತ್ನವನ್ನು ‘ಓ ರೋಮಿಯೋ’ ಸಿನಿಮಾ ಮಾಡಿತ್ತು. ಆದರೆ, ಈ ತಂತ್ರಕ್ಕೆ ಬ್ರೇಕ್ ಬಿದ್ದಿದೆ. ಈ ಸಿನಿಮಾ ಹೀನಾಯವಾಗಿ ಸೋಲುವ ಸೂಚನೆ ಸಿಕ್ಕಿದೆ.
‘ಓ ರೋಮಿಯೋ’ ಚಿತ್ರದಲ್ಲಿ ಶಾಹಿದ್ ಕಪೂರ್, ತೃಪ್ತಿ ದಿಮ್ರಿ ಮೊದಲಾದವರು ನಟಿಸಿದ್ದಾರೆ. ಫೆಬ್ರವರಿ 13ರಂದು ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ನೋಡಿದ ಅನೇಕ ವಿಮರ್ಶಕರು ಹಾಡಿ ಹೊಗಳಿದರು. ‘ಸಿನಿಮಾ ಅದ್ಭುತವಾಗಿದೆ, ಮತ್ತೊಂದು ಅನಿಮಲ್ ರೀತಿಯಲ್ಲಿ ಸಿನಿಮಾ ಇದೆ’ ಎಂದೆಲ್ಲ ವಿಮರ್ಶೆ ಕೊಟ್ಟರು. ಮೊದಲ ದಿನ ಈ ಚಿತ್ರ 8.5 ಕೋಟಿ ರೂಪಾಯಿ ಗಳಿಕೆ ಮಾಡಿತು.
ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಎರಡನೇ ದಿನ ಪ್ರೇಕ್ಷಕರು ಥಿಯೇಟರ್ಗೆ ತೆರಳಿದರು. ಇದರಿಂದ ಸಿನಿಮಾ 12.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಭಾನುವಾರ ಕೂಡ ಸಿನಿಮಾ ಒಳ್ಳೆಯ ಗಳಿಕೆ ಮಾಡಿತು. ಚಿತ್ರದ ಒಟ್ಟಾರೆ ಕಲೆಕ್ಷನ್ 32 ಕೋಟಿ ರೂಪಾಯಿ ಆಗಿದೆ.
ಆ ಬಳಿಕ ಗೊತ್ತಾಯ್ತು ನೋಡಿ ಸಿನಿಮಾದ ನಿಜವಾದ ಬಣ್ಣ. ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಥಿಯೇಟರ್ಗೆ ತೆರಳಿದ ಅನೇಕರು ಸಿಟ್ಟಲ್ಲಿ ಮರಳಿದ್ದಾರೆ. ‘ಇದು ಮೀಶೋ ಅನಿಮಲ್’ ಎಂದು ಹೇಳಿದ್ದಾರೆ. ಚಿತ್ರದಲ್ಲಿ ತುಂಬಾನೇ ಹಿಂಸೆ ಇದೆ ಎಂದು ಹೇಳಿದ್ದಾರೆ. ಸಿನಿಮಾ ಸದ್ಯ ಸೋಲಿನ ಹಾದಿಯಲ್ಲಿ ಸಾಗುತ್ತಿದೆ. ಇದು ಪಿಆರ್ ತಂತ್ರ ಎಂದು ಅನೇಕರು ಆರೋಪಿಸಿದ್ದಾರೆ.
ಐಎಂಡಿಬಿಯಲ್ಲಿ ಚಿತ್ರಕ್ಕೆ 6.4 ರೇಟಿಂಗ್ ಸಿಕ್ಕಿದೆ. ಬುಕ್ ಮೈ ಶೋನಲ್ಲಿ ನೆಗೆಟಿವ್ ವಿಮರ್ಶೆ ಸಿಗುತ್ತಿದ್ದಂತೆ ಕೋರ್ಟ್ನಿಂದ ಆದೇಶ ತಂದ ನಿರ್ಮಾಣ ಸಂಸ್ಥೆ ರೇಟಿಂಗ್ ನೀಡುವ ಆಯ್ಕೆಯನ್ನೇ ನಿಷ್ಕ್ರಿಯ ಗೊಳಿಸಿದೆ.