Category Archives: Blog

Your blog category

ಆ ಉಯ್ಯಾಲೆಯಲ್ಲಿ ನಾನೇ ಕೂತಿದ್ದು: ದೈವದ ಕಾರ್ಣಿಕದ ಬಗ್ಗೆ ಅಚ್ಚರಿಯ ಹೇಳಿಕೆ – Kannada News | From Collapse to Grandeur: The Resurgence of Pilichandi Daiva Temple in Mangaluru

ಮಂಗಳೂರು, ಫೆ.17: ಮಂಗಳೂರಿನ ಇತಿಹಾಸ ಪ್ರಸಿದ್ಧ ಪಿಲಿಚಂಡಿ ದೈವಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿತ್ತು. ಪಿಲಿಚಂಡಿ ದೈವದ ನೇಮೋತ್ಸವದ ವೇಳೆ ದೈವದ ಉಯ್ಯಾಲೆ ತನ್ನಿಂದ ತಾನೇ ತೂಗಿದೆ. ಇದೀಗ ಈ ದೇವಸ್ಥಾನದಲ್ಲಿ ಇಂತಹ ಹಲವು ಅಚ್ಚರಿಯ ಘಟನೆಗಳು ನಡೆದಿದೆ. ಒಂದು ಸಂದರ್ಭದಲ್ಲಿ, ಮಳೆಗಾಲದಲ್ಲಿ ದೈವದ ಆಶ್ರಯ ತಾಣವಾಗಿದ್ದ ಮನೆ ಕುಸಿಯುವ ಹಂತ ತಲುಪಿತ್ತು. ಆ ವೇಳೆ, ದೈವವನ್ನು ಹೊರಗೆ ತೆಗೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಮನೆ ನೆಲಕ್ಕುರುಳಿತು. ಈ ಘಟನೆಯ ನಂತರ, ದೈವಿಕ ಮಾರ್ಗದರ್ಶನ ಪಡೆದಾಗ, ಈ ಸ್ಥಳದಲ್ಲಿ ಪಿಲಿಚಂಡಿ ದೈವಸ್ಥಾನವನ್ನು ಪುನಃಸ್ಥಾಪಿಸಬೇಕೆಂಬ ಸೂಚನೆ ದೊರೆಯಿತು. 2018ರಲ್ಲಿ ಕುಡುಪೂರು ತಂತ್ರಿಗಳ ನೇತೃತ್ವದಲ್ಲಿ ಶುದ್ಧೀಕರಣ ಕಾರ್ಯಕ್ರಮಗಳನ್ನು ನಡೆಸಿ, ಅದೇ ವರ್ಷದಲ್ಲಿ ಊರಿನವರು ಮತ್ತು ಕೈಗಾರಿಕೋದ್ಯಮಿಗಳನ್ನು ಒಳಗೊಂಡ ಟ್ರಸ್ಟ್ ಒಂದನ್ನು ರಚಿಸಲಾಯಿತು. 2019ರಿಂದ ಆರಂಭವಾದ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವು, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ವಲ್ಪ ವಿಳಂಬಗೊಂಡಿತು. ಅಂತಿಮವಾಗಿ, 2023ರಲ್ಲಿ ಕಾಮಗಾರಿಗಳು ಪೂರ್ಣಗೊಂಡು, ಪಿಲಿಚಂಡಿ ದೈವದ ಪುನರ್‌ಪ್ರತಿಷ್ಠಾಪನೆ ಅದ್ದೂರಿಯಾಗಿ ನೆರವೇರಿತು. ಈ ಐತಿಹಾಸಿಕ ಜೀರ್ಣೋದ್ಧಾರವು ಹೊಳ್ಳರ ಮನೆತನಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಊರಿನ ಹತ್ತು ಸಮಸ್ತರು ಮತ್ತು ಕೈಗಾರಿಕಾ ವಲಯದವರ ಸಹಭಾಗಿತ್ವದಿಂದ ಇದು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದೆ. ಪಿಲಿಚಂಡಿ ದೈವದ 800 ವರ್ಷಗಳ ಇತಿಹಾಸಕ್ಕೆ ಹೊಸ ಆಯಾಮವನ್ನು ಈ ಜೀರ್ಣೋದ್ಧಾರವು ನೀಡಿದೆ ಎಂದು ಗುತ್ತು ಮನೆಯವರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಂಚ ಪಡೆಯುವಾಗ ಸಿಕ್ಕಿಬಿದ್ದು ಜೈಲು ಸೇರಿದ ಅಧಿಕಾರಿಗೆ ಬಾಳೆಹಣ್ಣು, ಸೊಳ್ಳೆಬತ್ತಿ ಕೊಟ್ಟ ರೈತ – Kannada News | A Chikkamagaluru Farmer Mocks with brings banana And bread to Officer Who In Shivamogga Jail in Bribe Case

ಶಿವಮೊಗ್ಗ (ಫೆಬ್ರವರಿ .17): ಸಾಮಾನ್ಯವಾಗಿ ಜೈಲಿನಲ್ಲಿರುವ ಬಂಧು-ಮಿತ್ರರನ್ನು ನೋಡಲು ಹೋಗುವವರು ಹಣ್ಣು-ಹಂಪಲು ತೆಗೆದುಕೊಂಡು ಹೋಗುವುದು ಸಹಜ. ಆದರೆ, ಲಂಚ (Bribe) ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಭೂಸ್ವಾಧಿನ ಅಧಿಕಾರಿ ಸದ್ಯ ಶಿವಮೊಗ್ಗದ (Shivamogga) ಸೋಗಾನೆ ಕೇಂದ್ರ ಕಾರಾಗೃಹದಲ್ಲಿದ್ದು, ಜೈಲುಪಾಲಾಗಿರುವ ಭೂಸ್ವಾಧಿನ ಅಧಿಕಾರಿ ಸಿದ್ದಲಿಂಗರೆಡ್ಡಿ ಅವರಿಗಾಗಿ ಚಿಕ್ಕಮಗಳೂರಿನ ರೈತರೊಬ್ಬರು ಬ್ರೆಡ್, ಬಾಳೆಹಣ್ಣು ಹಾಗೂ ಸೊಳ್ಳೆಬತ್ತಿಯನ್ನು ನೀಡಿ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ದೃಶ್ಯ ಮಾತ್ರ ಎಲ್ಲರ ಹುಬ್ಬೇರಿಸುವಂತಿತ್ತು. ಈ ಮೂಲಕ ಸಾರ್ವಜನಿಕವಾಗಿ ಕೆಎಎಸ್ ಅಧಿಕಾರಿಯ ಮಾನ ಹರಾಜು ಹಾಕಿರುವ ಪ್ರಸಂಗ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಲಿಂಗರೆಡ್ಡಿ ಇತ್ತೀಚೆಗೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿಗೆ ಒಳಗಾಗಿ ಸದ್ಯ ಜೈಲಿನಲ್ಲಿದ್ದಾರೆ. ಈ ಅಧಿಕಾರಿಯ ಕಾರ್ಯವೈಖರಿಯಿಂದ ನೊಂದಿದ್ದ ಚಿಕ್ಕಮಗಳೂರಿನ ಶ್ರೀಗಂಧ ಬೆಳೆಗಾರ ವಿಶುಕುಮಾರ್ ಎಂಬುವರು ಇಂದು (ಫೆಬ್ರವರಿ 17) ವಿನೂತನ ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ತಲೆ ಮೇಲೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಬಳಸಿದ್ದ ಶ್ರೀಗಂಧದ ಪಾದುಕೆಯನ್ನು ಹೊತ್ತು ಜೈಲಿನ ದ್ವಾರಕ್ಕೆ ಬಂದ ವಿಶುಕುಮಾರ್, ಅಧಿಕಾರಿಯ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ನಟಿಸುತ್ತಾ ವ್ಯಂಗ್ಯವಾಡಿದ್ದಾರೆ.

ಇದನ್ನೂ ನೋಡಿ: ಲಂಚ ನೀಡಲು ಹಣವಿಲ್ಲದ್ದಕ್ಕೆ ಬೆಳೆದ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ

ಶ್ರೀಗಂಧದ ಮರಗಳನ್ನು ಕಷ್ಟಪಟ್ಟು ಬೆಳೆಸಿದ ರೈತರಿಗೆ ಸಿಗಬೇಕಾದ ಸೂಕ್ತ ಪರಿಹಾರವನ್ನು ನೀಡದೆ, ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಯ ವಿರುದ್ಧದ ಈ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಭ್ರಷ್ಟ ಅಧಿಕಾರಿಯೊಬ್ಬ ಜೈಲು ಪಾಲಾದಾಗ ರೈತರು ಪಟಾಕಿ ಸಿಡಿಸಿ ಸಂಭ್ರಮಿಸುವುದು ನೋಡಿದ್ದೇವೆ, ಆದರೆ ಹೀಗೆ ಜೈಲಿಗೇ ಹೋಗಿ ಉಪಚಾರ ಮಾಡುವ ಮೂಲಕ ಅಣಕಿಸಿದ್ದು ಮಾತ್ರ ಹೊಸತಾಗಿತ್ತು. ರೈತ ವಿಶುಕುಮಾರ್ ಅವರ ಈ ನಡೆ ಭ್ರಷ್ಟ ವ್ಯವಸ್ಥೆಗೆ ನೀಡಿದ ದೊಡ್ಡ ಪೆಟ್ಟು ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ವಿಶುಕುಮಾರ್, ಸಿದ್ದಲಿಂಗರೆಡ್ಡಿ ಅವರ ಭ್ರಷ್ಟಾಚಾರ ಮತ್ತು ರೈತ ವಿರೋಧಿ ಧೋರಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸರ್ಕಾರಕ್ಕೆ ಹಣ ಉಳಿಸಲು ಈ ಅಧಿಕಾರಿ ಬಹಳ ಶ್ರಮವಹಿಸಿದ್ದಾರೆ. ನನ್ನ ಅತ್ಯಂತ ಬೆಲೆಬಾಳುವ ಶ್ರೀಗಂಧದ ಮರಕ್ಕೆ ಈ ಅಧಿಕಾರಿ ಕೇವಲ 420 ರೂಪಾಯಿ ದರ ನಿಗದಿ ಮಾಡಿದ್ದರು. ರೈತರಿಗೆ ಅನ್ಯಾಯ ಮಾಡಿ ಸರ್ಕಾರಕ್ಕೆ ಹಣ ಉಳಿಸಿಕೊಡಲು ಮುಂದಾಗಿದ್ದ ಇವರು ಈಗ ಲಂಚದ ಕೇಸಿನಲ್ಲಿ ಜೈಲಿಗೆ ಬಂದಿದ್ದಾರೆ. ಸರ್ಕಾರಕ್ಕೆ 6ನೇ ಗ್ಯಾರಂಟಿ ಕೊಡಲು ಇವರು ಇಷ್ಟು ಹಣ ಉಳಿಸಿರಬೇಕು ಎಂದು ಟಾಂಗ್ ಕೊಟ್ಟರು.

ಜೈಲಿನಲ್ಲಿ ಅವರಿಗೆ ಸೊಳ್ಳೆಗಳು ಕಚ್ಚಿ ತೊಂದರೆಯಾಗಬಾರದು ಎಂದು ಸೊಳ್ಳೆಬತ್ತಿ ತಂದಿದ್ದೇನೆ. ಸ್ನಾನಕ್ಕೆ ಮೈಸೂರು ಸ್ಯಾಂಡಲ್ ಸೋಪ್, ತಿನ್ನಲು ಬ್ರೆಡ್ ಮತ್ತು ಬಾಳೆಹಣ್ಣು ತಂದಿದ್ದೇನೆ. ಅವರಿಗೆ ಆರೋಗ್ಯ ಕೊಡಲಿ ಮತ್ತು ಸರ್ಕಾರಕ್ಕೆ ಇನ್ನಷ್ಟು ಹಣ ಉಳಿಸಲು ಅವರಿಗೆ ದೇವರು ಶಕ್ತಿ ನೀಡಲಿ ಎಂದು ವಿಶುಕುಮಾರ್ ವ್ಯಂಗ್ಯವಾಗಿ ಹಾರೈಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎರಡು ಕಾಲಘಟ್ಟದ ಲವ್ ಸ್ಟೋರಿ ಹೇಳುವ ‘ಮತ್ತೆ ಮಳೆ ಹೊಯ್ಯುತ್ತಿದೆ’ ಸಿನಿಮಾ – Kannada News | Matthe Male Hoyyutthide new Kannada movie songs released

ಮಳೆಗೂ ಚಿತ್ರರಂಗಕ್ಕೂ ಬಿಡದ ನಂಟು. ಮಳೆಯ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಬರುತ್ತಿದೆ. ‘ಮತ್ತೆ ಮಳೆ ಹೊಯ್ಯುತ್ತಿದೆ’ (Matthe Male Hoyyutthide) ಎಂಬುದು ಈ ಸಿನಿಮಾದ ಶೀರ್ಷಿಕೆ. ಇತ್ತೀಚೆಗೆ ಈ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡಲಾಯಿತು. ಚಿತ್ರವನ್ನು ಗಂಗಾಧರ್ ಅವರ ‘ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ‍್ಸ್’ ಬ್ಯಾನರ್ ಮೂಲಕ ಸುಮ ಅವರು ನಿರ್ಮಾಣ ಮಾಡುತ್ತಿದ್ದರೆ. ಶ್ರುತಿ ಅನಿಲ್‌ಕುಮಾರ್ ಅವರು ಸಹ ನಿರ್ಮಾಪಕಿ ಆಗಿದ್ದಾರೆ. ಪರಮ್‌ ಗುಬ್ಬಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇತ್ತೀಚೆಗೆ ಉತ್ಸವ್ ಲೆಗಸಿಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಈ ಸಿನಿಮಾಗೆ ಕಬ್ಬಡಿ ನರೇಂದ್ರ ಬಾಬು ಅವರು ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಸಹ ನಿರ್ಮಾಪಕಿ ಶ್ರುತಿ ಅವರು ಪ್ರಾಧ್ಯಾಪಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಡುಗಳ ಬಿಡುಗಡೆ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

‘ಮತ್ತೆ ಮಳೆ ಹೊಯ್ಯುತ್ತಿದೆ’ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಹಿರಿಯ ನಿರ್ದೇಶಕ ನಾಗಣ್ಣ ಅವರು ಚಾಲನೆ ನೀಡಿದರು. ಈ ವೇಳೆ ಪ್ರಸ್ತುತ ಚಿತ್ರರಂಗವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಇರುವ ಪರಿಹಾರಗಳ ಬಗ್ಗೆ ನಾಗಣ್ಣ ಬೆಳಕು ಚೆಲ್ಲಿದರು. ನಂತರ ಇದೇ ಬ್ಯಾನರ್‌ನಿಂದ ನಿರ್ಮಾಣ ಆಗುತ್ತಿರುವ, ಕಬ್ಬಡ್ಡಿ ನರೇಂದ್ರಬಾಬು ನಿರ್ದೇಶನದ ‘ಭೀಮ ತೀರದ ಹಂತಕರು’ ಸಿನಿಮಾದ ಪೋಸ್ಟರ್‌ನ್ನು ಲೋಕಾರ್ಪಣೆ ಮಾಡಲಾಯಿತು.

ಈ ಸಿನಿಮಾದಲ್ಲಿ ನಿರ್ಮಾಪಕರ ಪುತ್ರ ಜಿ. ಲಿಖಿತ್ ಹೀರೋ ಆಗಿ ನಟಿಸಿದ್ದರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಜಯವರ್ಧನ್ ಅವರು ಎರಡು ಶೇಡ್‌ಗಳಲ್ಲಿ ನಟಿಸಿ ಮತ್ತೋರ್ವ ಹೀರೋ ಆಗಿದ್ದಾರೆ. ಸುಲಕ್ಷಖೈರ, ಭೂಮಿಕಾ ಗೌಡ ಅವರು ಈ ಸಿನಿಮಾದ ನಾಯಕಿಯರು. ಚಂದ್ರಶೇಖರ ರೆಡ್ಡಿ ಎ.ಎಂ, ಕುಮಾರಿ ಸ್ವರ್ಣ, ದಿನಮಣಿ, ಪ್ರಕಾಶ್‌ ಮೂರ್ತಿ, ಕಾವ್ಯ ಕುಮಾರಿ ಮುಂತಾದ ಕಲಾವಿದರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಹಾಸನ ಎಸ್​ಪಿ ಕಚೇರಿ ಹೊರಗೆ ಕಾದು ಕುಳಿತ ಯಶ್ ತಾಯಿ ಪುಷ್ಪಾ

ನಿರ್ದೇಶಕ ಪರಮ್‌ ಗುಬ್ಬಿ ಮಾತನಾಡಿ, ‘ಸಾಹಿತಿ ಕೆ. ಸದಾಶಿವ ವಿರಚಿತ ಸಣ್ಣಕತೆಗಳಲ್ಲಿ ಒಂದಾದ ‘ಮತ್ತೆ ಮಳೆ ಹೂಯ್ಯುತಿದೆ’ ಕೃತಿಯನ್ನು ಬಳಸಲಾಗಿದೆ. ಅವರಿಗೆ ನೀಡಬಹುದಾದ ಸಂಭಾವನೆಯ ಮೊತ್ತವನ್ನು ಸಾಹಿತ್ಯ ಪರಿಷತ್‌ನಲ್ಲಿ ದತ್ತಿಯಾಗಿ ನೀಡಿ, ಪ್ರತಿ ವರ್ಷ ಸದಾಶಿವ ಹೆಸರಿನಲ್ಲಿ ಯುವ ಬರಹಗಾರರಿಗೆ ಪ್ರಶಸ್ತಿ ನೀಡುವ ಯೋಜನೆ ಬಗ್ಗೆ ನಿರ್ಮಾಪಕರಿಗೆ ತಿಳಿಸಿದಾಗ ಖುಷಿಯಿಂದ ಒಪ್ಪಿಕೊಂಡರು’ ಎಂದು ಹೇಳಿದರು. ಶಾಂತಾರಾವ್ ಇಪಿಲಿ ಅವರ ಛಾಯಾಗ್ರಹಣ, ಧನುಷ್ ವೀರ್ ಅವರ ಸಂಕಲನ, ಬಾಬು ಖಾನ್ ಅವರ ಕಲಾ ನಿರ್ದೇಶನ, ನಂದ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ ಅಭೂತಪೂರ್ವ ಯಶಸ್ಸು: 1.06 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ – Kannada News | Karnataka’s 1000 Day Milestone: Haveri Celebrates Bhoo Guarantee with 1.06 Lakh Land Titles

ಹಾವೇರಿ, ಫೆ.17: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ಫೆಬ್ರವರಿ 14 ರಂದು ರಾಜ್ಯ ಸರ್ಕಾರದ ಸಾವಿರ ದಿನಗಳ ಆಡಳಿತದ ಸವಿನೆನಪಿಗಾಗಿ ಆಯೋಜಿಸಿದ್ದ ‘ಸಾಧನಾ ಸಮಾವೇಶ’ ಮತ್ತು ‘ಭೂ ಗ್ಯಾರಂಟಿ ( Bhoo Guarantee Scheme) ಸಮರ್ಪಣಾ ಸಮಾವೇಶ’ ಅಭೂತಪೂರ್ವ ಯಶಸ್ಸು ಕಂಡಿದೆ. ದಶಕಗಳಿಂದ ಹಕ್ಕುಪತ್ರದಿಂದ ವಂಚಿತರಾಗಿದ್ದ ಲಕ್ಷಾಂತರ ಕುಟುಂಬಗಳಿಗೆ ಈ ದಿನ ಹೊಸ ಬದುಕಿನ ಭರವಸೆ ದೊರೆತಿದೆ. ರಾಜ್ಯ ಸರ್ಕಾರವು ತನ್ನ 1,000 ದಿನಗಳ ಆಡಳಿತ ಪೂರೈಸಿದ ಸಂಭ್ರಮದಲ್ಲಿ ಸುಮಾರು 1.06 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ‘ಭೂ ಗ್ಯಾರಂಟಿ’ಯನ್ನು ಈಡೇರಿಸಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಜ್ಜಯ್ಯ ದೇವಸ್ಥಾನದ ಎದುರಿನ 100 ಎಕರೆ ಬಯಲು ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಅಡಿಯಲ್ಲಿ ಈ ಸಮಾವೇಶ ಜರುಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೇರಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಹಸ್ತಾಂತರಿಸಿದರು. ಸಚಿವರಾದ ಕೃಷ್ಣ ಬೈರೇಗೌಡ, ಶಿವಾನಂದ ಪಾಟೀಲ, ಕೆ.ಎಚ್. ಮುನಿಯಪ್ಪ, ಜಿ. ಪರಮೇಶ್ವರ, ಎಚ್.ಕೆ. ಪಾಟೀಲ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಹಾವೇರಿ ಮಾತ್ರವಲ್ಲದೆ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಗದಗ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಲಕ್ಷಾಂತರ ಜನರು ಸಮಾವೇಶದತ್ತ ಧಾವಿಸಿ ಬಂದಿದ್ದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸರ್ಕಾರದ ಸಾಧನೆಯನ್ನು ವಿವರಿಸಿದರು. ಸರಕಾರಿ ಮತ್ತು ಖಾಸಗಿ ಜಾಗಗಳಲ್ಲಿ ಹಲವು ವರ್ಷಗಳಿಂದ ವಾಸವಿದ್ದರೂ ಮಾಲೀಕತ್ವದ ದಾಖಲೆಗಳಿಲ್ಲದ ಕುಟುಂಬಗಳನ್ನು ಮನೆ-ಮನೆಗೆ ತೆರಳಿ ಗುರುತಿಸಿ ಈ ದಾಖಲೆಗಳನ್ನು ನೀಡಲಾಗಿದೆ. ಸರ್ಕಾರವು 2,492 ಹೊಸ ಕಂದಾಯ ಗ್ರಾಮಗಳನ್ನು ಘೋಷಿಸಿದೆ. ಕಳೆದ 1,000 ದಿನಗಳಲ್ಲಿ ಒಟ್ಟು 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ದಾಖಲೆ ಬರೆಯಲಾಗಿದೆ. ಭೂ ಮಾಲೀಕತ್ವಕ್ಕಾಗಿ ಕಚೇರಿ, ಕೋರ್ಟ್‌ಗಳಿಗೆ ಅಲೆದಾಡುತ್ತಿದ್ದ ಬಡವರಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಈ ಸಮಾವೇಶದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸಾವಿರ ದಿನಗಳ ಸಂಭ್ರಮವಲ್ಲ, 1000 ದಿನಗಳ ಸುಳ್ಳಿನ ಸರಮಾಲೆಗಳ ಸಂಭ್ರಮ: ಬಿಜೆಪಿ ವ್ಯಂಗ್ಯ

ಹಕ್ಕುಪತ್ರಗಳನ್ನು ಕೈಯಲ್ಲಿ ಹಿಡಿದ ಫಲಾನುಭವಿಗಳು ಮಾಲೀಕತ್ವದ ಖುಷಿಯನ್ನು ಪರಸ್ಪರ ಹಂಚಿಕೊಂಡರು. ಮುಖ್ಯವೇದಿಕೆಯತ್ತ ಹರಿದು ಬಂದ ಜನಸಂದಣಿಯಿಂದಾಗಿ ನೂಕುನುಗ್ಗಲು ಉಂಟಾದರೂ, ಜನರು ನಿಂತುಕೊಂಡೇ ಸಮಾವೇಶದ ಪ್ರತಿಯೊಂದು ಕ್ಷಣವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ಈ ಸಮಾವೇಶವು ಬಡವರ ಪಾಲಿಗೆ ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ, ಅವರ ಸ್ವಂತ ಸೂರಿನ ಕನಸನ್ನು ನನಸು ಮಾಡಿದ ಸಂಭ್ರಮದ ಹಬ್ಬವಾಗಿ ಮಾರ್ಪಟ್ಟಿತ್ತು ಎಂದು ಕಾಂಗ್ರೆಸ್​​ ಪಕ್ಷ ಹೇಳಿದೆ.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಸನ ಸೈಟ್ ವಿವಾದ: ದೂರು ನೀಡಿದ ಬಳಿಕ ಯಶ್ ತಾಯಿ ಪುಷ್ಪಾ ಮೊದಲ ಪ್ರತಿಕ್ರಿಯೆ – Kannada News | Yash mother Pushpa Arun Kumar first reaction after her complaint to SP office

ಹಾಸನದ ಎಸ್​​ಪಿ ಕಚೇರಿಗೆ ಬಂದು ದೂರು ನೀಡಿದ ಬಳಿಕ ಯಶ್ (Yash) ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಿವೇಶನದ ಗಲಾಟೆಗೆ ಸಂಬಂಧಿಸಿದಂತೆ ಅವರು ದೂರು ನೀಡಿದ್ದಾರೆ. ‘ನಮ್ಮ ಬಳಿ ಇರುವ ಪ್ರತಿಯೊಂದು ದಾಖಲೆಯನ್ನೂ ನೀಡಿದ್ದೇವೆ. ನಮ್ಮ ಮನೆಗೆ ಬಂದು ತೊಂದರೆ ಕೊಟ್ಟಿದ್ದಾರೆ. ಇದುವರೆಗೂ ಜೆಸಿಬಿ ಸೀಜ್ ಮಾಡಿಲ್ಲ. ಆ ಪೇಪರ್​ಗೂ ನಮಗೂ ಸಂಬಂಧ ಇಲ್ಲ. ಏಕಾಏಕಿ ಬಂದು ಒಡೆದಿದ್ದಾರೆ ಎಂಬುದನ್ನು ತಿಳಿಸಿದ್ದೇನೆ. ಮಹಿಳೆಯಾಗಿ ನಾನು ಖದ್ದಾಗಿ ಬಂದಿದ್ದೇನೆ. ನಮಗೇ ಹೀಗೆ ಆದರೆ ಬೇರೆಯವರ ಕಥೆ ಏನು? ನಮಗೆ ತೊಂದರೆ ಕೊಟ್ಟವರನ್ನು ಯಾಕೆ ಬಂಧಿಸಿಲ್ಲ ಎಂಬುದನ್ನು ಕೇಳಿದ್ದೇನೆ. ರಾಘವೇಂದ್ರ ಇದರಲ್ಲಿ ಭಾಗಿ ಆಗಿದ್ದಾರೆ. ಆದ್ದರಿಂದಲೇ ಇದು ಇಲ್ಲಿಯ ತನಕ ಬಂದಿದೆ. ನಮಗೆ ಭದ್ರತೆ ಬೇಕೇ ಬೇಕೂ. ಮನೆಯಲ್ಲಿ ಏನಾದರೂ ಹೆಚ್ಚೂ ಕಡಿಮೆ ಆದರೆ ನಿಮ್ಮ ಜವಾಬ್ದಾರಿ ಅಂತ ಹೇಳಿದ್ದೇನೆ’ ಎಂದ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ಮಾಹಿತಿ ಹಂಚಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್​​ಗೆ ‘ಕೈ’ ಕೊಟ್ಟ ಭೂಪೇನ್ ಬೋರಾ ಬಿಜೆಪಿ ತೆಕ್ಕೆಗೆ; ಫೆ. 22ಕ್ಕೆ ಅಧಿಕೃತ ಸೇರ್ಪಡೆ – Kannada News | Former Assam Congress chief Bhupen Borah to join BJP on February 22 Himanta biswa Sarma says

ನವದೆಹಲಿ, ಫೆಬ್ರವರಿ 17: ಅಸ್ಸಾಂ ರಾಜ್ಯದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಬೋರಾ (Bhupen Borah) ಫೆಬ್ರವರಿ 22ರಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ. ಇಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಂತ ಶರ್ಮಾ, ಭೂಪೇನ್ ಬೋರಾ ಫೆಬ್ರವರಿ 22ರಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಅವರೊಂದಿಗೆ, ಗುವಾಹಟಿ ಮತ್ತು ಉತ್ತರ ಲಖಿಂಪುರದಲ್ಲಿ ಹಲವು ಕಾಂಗ್ರೆಸ್ ನಾಯಕರು ಕೂಡ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದಿದ್ದಾರೆ.”

“ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಲಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಈಗಾಗಲೇ ಭೂಪೇನ್ ಬೋರಾ ಅವರ ಸೇರ್ಪಡೆಯನ್ನು ಅನುಮೋದಿಸಿದ್ದಾರೆ. ನಮ್ಮ ಪಕ್ಷದಲ್ಲಿ ಭೂಪೇನ್ ಬೋರಾ ಅವರಿಗೆ ಎಲ್ಲಾ ಗೌರವ ಮತ್ತು ಘನತೆಯನ್ನು ನೀಡಲಾಗುವುದು. ಭೂಪೇನ್ ಬೋರಾ ಕಾಂಗ್ರೆಸ್‌ನಲ್ಲಿ ದೀರ್ಘಕಾಲದಿಂದ ಕಷ್ಟಪಟ್ಟಿದ್ದಾರೆ. ಈಗ ಅವರು ಬಯಸಿದ್ದನ್ನು ಮಾಡಲು ಬಿಜೆಪಿಯಲ್ಲಿ ಅವರಿಗೆ ವೇದಿಕೆ ಸಿಗಲಿದೆ” ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ನಿರ್ಧಾರ ಬದಲಿಸಿದ ಭೂಪೇನ್ ಬೋರಾ

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ, ಗುವಾಹಟಿಯ ಘೋರಾಮರ ಪ್ರದೇಶದಲ್ಲಿರುವ ಭೂಪೇನ್ ಬೋರಾ ಅವರ ನಿವಾಸಕ್ಕೆ ಸಿಎಂ ಹಿಮಂತ ಬಿಸ್ವ ಶರ್ಮಾ ಭೇಟಿ ನೀಡಿದರು. ಈ ಭೇಟಿಯ ಸಮಯದಲ್ಲಿ ಬೋರಾ ಅವರ ಪತ್ನಿ ಮತ್ತು ಮಗ ಮುಖ್ಯಮಂತ್ರಿಗೆ ಆರತಿ ಮಾಡಿ ಸ್ವಾಗತಿಸಿದರು. ಭೂಪೇನ್ ಬೋರಾ ಸೋಮವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

ಆದರೆ ಪಕ್ಷದ ಹೈಕಮಾಂಡ್ ಅವರ ರಾಜೀನಾಮೆಯನ್ನು ಸ್ವೀಕರಿಸಲಿಲ್ಲ. ರಾಜೀನಾಮೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿತು. ಇದರ ನಂತರ, ಅವರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಸಮಯ ಕೋರಿದ್ದರು. ಆದರೆ, ಅವರು ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಬದಲಾಯಿಸಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

4 ಕೋಟಿ ರೂ. ಶುಲ್ಕ ವಿನಾಯಿತಿ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಹಾಸನ ಒಕ್ಕಲಿಗರ ಸಂಘ – Kannada News | Hassan vokkaligara sangha thanks To Karnataka Congress Government for RS 4 Crore exemption

ಹಾಸನ, (ಫೆಬ್ರವರಿ 17): ಹಾಸನ ಜಿಲ್ಲಾ ಒಕ್ಕಲಿಗರ ಸಂಘದ (Hassan vokkaligara sangha) ನಿವೇಶನಕ್ಕೆ ‌ಸರ್ಕಾರದಿಂದ 4 ಕೋಟಿ ರೂಪಾಯಿ ಶುಲ್ಕ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಹಾಸನ ಜಿಲ್ಲಾ ಒಕ್ಕಲಿಗರ ಸಂಘ ಸುದ್ದಿಗೋಷ್ಠಿ ನಡೆಸಿದ್ದು, ನಿವೇಶನ ಖರೀದಿ‌ ದರ ರಿಯಾಯಿತಿಗೆ ನೆರವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಗೆ ಧನ್ಯವಾದ ತಿಳಿಸಿದೆ. ಮೂರು ವರ್ಷ ದ ಹಿಂದೆ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಸರ್ಕಾರ ಒಂದು ಎಕರೆ ಭೂಮಿ ನೀಡಿತ್ತು. ಇದಕ್ಕೆ ಭೂಮಿಯ ಶೇಕಡಾ 10 ದರ ನೀಡಿ ಖರೀದಿ ಮಾಡಿತ್ತು. ಈಗ ಈ ಒಂದು ಎಕರೆ ನಿವೇಶನದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿದೆ. ಹೀಗಾಗಿ ಒಕ್ಕಲಿಗರ ಸಂಘಕ್ಕೆ ನೆರವು ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಧಾರವಾಡ ಗುಳೇದಕೊಪ್ಪ ಜಾತ್ರೆ 2026: ಐದು ದಿನಗಳ ಕಾಲ ನಡೆದ ಅದ್ಧೂರಿ ಜಾತ್ರೆಗೆ ತೆರೆ – Kannada News | Dharwad Guledakoppa Fair: Historic Shivaratotsava with Aerial Floral Tribute and Sandalwood Stars

ಧಾರವಾಡ, ಫೆ.17: ಗುಳೇದಕೊಪ್ಪ ಗ್ರಾಮದಲ್ಲಿ ಫೆಬ್ರವರಿ 12ರಿಂದ 16ರವರೆಗೆ ಐದು ದಿನಗಳ ಕಾಲ ನಡೆದ ಅದ್ಧೂರಿ ಜಾತ್ರೆಗೆ ಭಕ್ತಿಪೂರ್ವಕ ತೆರೆ ಬಿದ್ದಿದೆ. ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಗ್ರಾಮದಲ್ಲಿ ಮೊದಲ ಬಾರಿಗೆ ನೂತನ ಶಿವರಥೋತ್ಸವ ನೆರವೇರಿತು.ರಥೋತ್ಸವದ ವಿಶೇಷ ಆಕರ್ಷಣೆಯಾಗಿ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿ,ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುನವಳ್ಳಿಯ ಶಿವಪುತ್ರ ಮಹಾಸ್ವಾಮಿಗಳು, ಕಾದ್ರೋಳ್ಳಿಯ ಗುರುಪುತ್ರ ಮಹಾರಾಜರು ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ನೆರವೇರಿಸಿದರು. ಸ್ಯಾಂಡಲ್‌ವುಡ್ ನಟ ಶರಣ್ ಮತ್ತು ನಟಿ ಮಾಲಾಶ್ರೀ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದರು. ರಾಜಾಸ್ಥಾನ, ಒರಿಸ್ಸಾ ಸೇರಿದಂತೆ ವಿವಿಧ ಹೊರರಾಜ್ಯಗಳ ಕಲಾತಂಡಗಳು ಮತ್ತು ಸ್ಥಳೀಯ ಕಲಾವಿದರು ತಮ್ಮ ಪ್ರದರ್ಶನದ ಮೂಲಕ ಜಾತ್ರೆಯ ಮೆರುಗು ಹೆಚ್ಚಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾವಿರ ದಿನಗಳ ಸಂಭ್ರಮವಲ್ಲ, 1000 ದಿನಗಳ ಸುಳ್ಳಿನ ಸರಮಾಲೆಗಳ ಸಂಭ್ರಮ: ಬಿಜೆಪಿ ವ್ಯಂಗ್ಯ – Kannada News | Haveri BJP Leaders Mocks Karnataka Congress government 1000 days Celebration

ಹಾವೇರಿ, (ಫೆಬ್ರವರಿ 17): ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ (Karnataka Congress Government)  ಸಾವಿರ ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ (Haveri) ಅದ್ದೂರಿಯಾಗಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವನ್ನ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಒಂದು ಲಕ್ಷ ಜನರಿಗೆ ಭೂ ಗ್ಯಾರಂಟಿ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಆದ್ರೆ, ಇದಕ್ಕೆ ಬಿಜೆಪಿ ವ್ಯಂಗ್ಯವಾಡಿದ್ದು, ಇದು ಸರ್ಕಾರದ ಸಮಾವೇಶ ಆಗಿರಲಿಲ್ಲ. ಬದಲಾಗಿ ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಸಮಾವೇಶ ಆಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾವಿರ ದಿನಗಳ ಸಂಭ್ರಮವಲ್ಲ, ಸಾವಿರ ದಿನಗಳ ಸುಳ್ಳಿನ ಸರಮಾಲೆಗಳ ಸಂಭ್ರಮ ಎಂದು ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಸಾವಿರ ದಿನಗಳ ಆರ್ಥಿಕ ದಿವಾಳಿಯ ಸಂಕೇತ. ಪೌತಿ ಖಾತೆಗಳಿಗೆ ಪಟ್ಟಾ ಕೊಟ್ಟಿದ್ದಾರೆ.ಅಪ್ಪನ ಆಸ್ತಿ ಮಗನಿಗೆ ಹೋಗುತ್ತದೆ. ಅದನ್ನು ಇವರು ಹಕ್ಕುಪತ್ರ ಕೊಟ್ಟಿದ್ದಾರೆ. ದೂದಿಹಳ್ಳಿ, ಚನ್ನಳ್ಳಿ ಗ್ರಾಮದಲ್ಲಿ ಇಂತಹ ಪ್ರಕರಣಗಳು ನಡೆದಿವೆ. ಐದರಿಂದ ಹತ್ತು ಸಾವಿರದವರೆಗೆ ಹಣ ತೆಗೆದುಕೊಂಡು ಪಟ್ಟಾ ಕೊಟ್ಟಿದ್ದಾರೆ. 40 ಜನರನ್ನು ಕರೆತರಲು ಐದು ಬಸ್ ಗಳು ಹೋಗಿವೆ. ಶಾಲಾ ಬಸ್ ಗಳನ್ನೂ ತೆಗೆದುಕೊಂಡಿದ್ದರು. ಶಾಲಾ ಶಿಕ್ಷಕರನ್ನು ಈ ಸಮಾವೇಶಕ್ಕೆ, ಇಡಿ ಸರಕಾರಿ ಅಧಿಕಾರಿಗಳನ್ನು ಸಮಾವೇಶಕ್ಕೆ ಬಳಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ

ರಟ್ಟೀಹಳ್ಳಿ ಐಬಿ ಕೆಲಸವೇ ಆಗಿಲ್ಲ. ಹೊರಗಡೆ ಸುಣ್ಣ ಹೊಡೆದು ಚಂದವಾಗಿ ಕಾಣುವಂತೆ ಮಾಡಿ ಅದನ್ನು ಉದ್ಘಾಟನೆ ಮಾಡಿದ್ದಾರೆ. ಶಾಸಕರು ಕಲ್ಲಲ್ಲಿ ಹೆಸರು, ಕತ್ರಿ ಪ್ರಯೋಗ ಮಾಡಿದರೆ ಸಾಕು ಅಂತಾ ಹೇಳುತ್ತಾರೆ. ಜಿಲ್ಲಾಧಿಕಾರಿಗಳು ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಸಾರಿಗೆ ಇಲಾಖೆ ಬಸ್ ಅಲ್ಲದೆ, ಖಾಸಗಿ ಶಾಲೆಯ ಬಸ್ ಗಳನ್ನ ಬಳಕೆ ಮಾಡಿಕೊಂಡಿದ್ದಾರೆ. ಶಾಲೆಗೆ ರಜೆ ಕೊಟ್ಟಿದ್ದಾರೆ. ಒಂದೊಂದು ಬಸ್ ನಲ್ಲಿ ಕೇವಲ 8-10 ಜನರು ಬಂದಿದ್ದಾರೆ. ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಸಕ್ರಮ, ಬಗರ್‌ ಹುಕುಂಗೆ ಪಟ್ಟಾ ಕೊಟ್ಟರೆ ತಕರಾರಿಲ್ಲ. ತರಾತುರಿಯಲ್ಲಿ ಸಮಾವೇಶ‌ ಮಾಡಿದ್ದು ಏಕೆ? ತಪ್ಪು ಇದ್ದಲ್ಲಿ ಆರೋಪ ಮಾಡಲೇಬೇಕಲ್ವಾ?ಪಟ್ಟಾ ಕೊಟ್ಟಿದ್ದು ತಪ್ಪು ಅಂತಾ ನಾವು ಹೇಳಿಲ್ಲ.ದೊಡ್ಡ ಸಂಖ್ಯೆ ತೋರಿಸಬೇಕು ಅಂತಾ ಪೌತಿ ಆದವರಿಗೂ ಪಟ್ಟಾ ಕೊಟ್ಟಿದ್ದಾರೆ.ಇ-ಸ್ವತ್ತು ಕೊಡಲು ಸಿಎಂ ಅವರೇ ಬರಬೇಕಾ? ಸರಕಾರಕ್ಕೆ ಇನ್ನೆಷ್ಟು ದಿನ ಆಯುಷ್ಯ ಎಂಬುದು ಗೊತ್ತಿಲ್ಲ. ಸುಳ್ಳೇ ಅವರೆ ಮನೆ ದೇವರು, ಸಿಎಂ ಅವರಿಂದ ಹಿಡಿದು ಎಲ್ಲರೂ ಸುಳ್ಳನ್ನೇ ಹೇಳುತ್ತಾ ಹೊರಟಿದ್ದಾರೆ. ಇಡಿ ಸರಕಾರ, ಆಡಳಿತ ಸತ್ತು ಹೋಗಿದೆ. ತಹಶೀಲ್ದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಈಗ ಹಬ್ಬವಾಗಿದೆ. ಅಲ್ಲದೇ ನ್ಯಾಯಾಲಯದಲ್ಲಿ ಸ್ಟೇ ಇರೋ ಪ್ರಕರಣಗಳಿಗೆ ಹಕ್ಕು ಪತ್ರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಒಟ್ನಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಹಾವೇರಿಯಲ್ಲಿ ಅದ್ದೂರಿಯಾಗಿ ಮಾಡಿ ಸರ್ಕಾರದ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದು ಸರ್ಕಾರದ ಸಮಾವೇಶ ಅಲ್ಲಾ ಕಾಂಗ್ರೆಸ್ ಸಮಾವೇಶ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪುರುಷರಲ್ಲಿ ವಯಸ್ಸಾದಂತೆ ಕಡಿಮೆಯಾಗುತ್ತಿರುವ ವೈ ಕ್ರೋಮೋಸೋಮ್ ಗಂಭೀರ ಕಾಯಿಲೆಗೆ ಕಾರಣವಾಗುತ್ತದೆಯೇ? – Kannada News | Men’s Health Alert: Y Chromosome Vanishing

ಬಹುಕಾಲದಿಂದ ವಿಜ್ಞಾನಿಗಳು ವಯಸ್ಸಾದ ಹಾಗೆ ಪುರುಷರ ದೇಹದ ಕೆಲವು ಕೋಶಗಳಲ್ಲಿ ವೈ ಕ್ರೋಮೋಸೋಮ್ (Y Chromosome) ಅಥವಾ ವೈ ವರ್ಣತಂತು ಕಡಿಮೆಯಾಗುತ್ತಿರುವುದು ಯಾವುದೇ ರೀತಿಯ ದೊಡ್ಡ ಪರಿಣಾಮ ಉಂಟುಮಾಡುವುದಿಲ್ಲ ಎಂದು ಭಾವಿಸಿದ್ದರು. ಈ ವೈ ಕ್ರೋಮೋಸೋಮ್‌ನಲ್ಲಿ ಪುರುಷ ಲಿಂಗ ನಿರ್ಧಾರಕ್ಕೆ ಸಂಬಂಧಿಸಿದ ಕೆಲವು ಜೀನ್ ಗಳು ಮಾತ್ರ ಇರುವುದರಿಂದ, ಇದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಆಗಲಾರದು ಎಂದು ಅಂದುಕೊಂಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅಧ್ಯಯನಗಳು ಇದಕ್ಕೆ ಬೇರೆ ರೀತಿಯ ಚಿತ್ರಣವನ್ನೇ ನೀಡುತ್ತಿವೆ. ಹೌದು, ವೈ ಕ್ರೋಮೋಸೋಮ್ ಕಡಿಮೆಯಾಗುವುದಕ್ಕೂ ಹೃದಯರೋಗ, ಕ್ಷಯ ರೋಗಗಳು, ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುವುದಕ್ಕೂ ಸಂಬಂಧವಿದೇ ಎಂಬುದು ಸಾಕ್ಷ್ಯಗಳಿಂದ ದೃಢವಾಗಿದೆ. ಇದರಿಂದ ಪುರುಷರ ಆಯುಷ್ಯ ಕಡಿಮೆಯಾಗುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳಿಯುವುದು ಅನಿವಾರ್ಯವಾಗಿದೆ.

ಹೊಸ ತಂತ್ರಜ್ಞಾನಗಳ ಮೂಲಕ Y ಕ್ರೋಮೋಸೋಮ್‌ನ ಜೀನ್ ಗಳನ್ನು ಪತ್ತೆಹಚ್ಚುವಲ್ಲಿ ಪ್ರಗತಿ ಕಂಡುಬಂದಿದೆ. ಇದರ ಫಲವಾಗಿ ಪುರುಷರಿಗೆ ವಯಸ್ಸಾದಂತೆ ದೇಹಕೋಶಗಳಲ್ಲಿ Y ನಷ್ಟ ಹೆಚ್ಚಾಗಿರುವುದು ಕಂಡುಬಂದಿದೆ. 60 ವರ್ಷದ ಪುರುಷರಲ್ಲಿ ಸುಮಾರು 40% ಜನರಲ್ಲಿ Y ಕ್ರೋಮೋಸೋಮ್‌ ಕಣ್ಮರೆಯಾಗುತ್ತಿರುವುದು ಕಂಡುಬಂದಿದೆ. ಇನ್ನು 90 ವರ್ಷದವರಲ್ಲಿ ಇದು 57% ರಷ್ಟು ಹೆಚ್ಚುತ್ತದೆ. ಧೂಮಪಾನ ಮತ್ತು ಕಾರ್ಸಿನೋಜೆನ್‌ಗಳಿಗೆ (ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳು) ಒಡ್ಡಿಕೊಳ್ಳುವುದು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. Y ಕ್ರೋಮೋಸೋಮ್‌ ಕಡಿಮೆಯಾಗುವುದು ಎಲ್ಲಾ ಕೋಶಗಳಲ್ಲಿಯೂ ಆಗುವುದಿಲ್ಲ. ಕೆಲವು ಕೋಶಗಳು ಮಾತ್ರ Y ಕಳೆದುಕೊಳ್ಳುತ್ತವೆ. ಹೀಗಾಗಿ ದೇಹದಲ್ಲಿ Y ಇರುವ ಮತ್ತು ಇಲ್ಲದ ಕೋಶಗಳ ಮಿಶ್ರಣ (ಮೋಸಾಯಿಕ್ ಸ್ಥಿತಿ) ಉಂಟಾಗುತ್ತದೆ. ಆದರೆ ಪ್ರಯೋಗಾಲಯದಲ್ಲಿ Y ಇಲ್ಲದ ಕೋಶಗಳು ವೇಗವಾಗಿ ಬೆಳೆಯುವುದನ್ನು ಗಮನಿಸಲಾಗಿದ್ದು ಇದು ಗಡ್ಡೆಗಳು (ಟ್ಯೂಮರ್‌ಗಳು) ಬೆಳೆಯಲು ಸಹಾಯಕವಾಗಬಹುದು.

ಇದನ್ನೂ ಓದಿ: ಬಾಯಿಯ ಆರೋಗ್ಯಕ್ಕೂ ಹೃದಯಕ್ಕೂ ಸಂಬಂಧವಿದೆಯೇ; ಈ ಬಗ್ಗೆ ಮಾಹಿತಿ ನೀಡಿದ್ದಾರೆ ಡಾ. ಅನುಪಮಾ ವಿ. ಹೆಗ್ಡೆ

ಈ ಹಿಂದೆ Y ಕ್ರೋಮೋಸೋಮ್‌ ಲಿಂಗ ನಿರ್ಧಾರ, ವೀರ್ಯ ಉತ್ಪಾದನೆಗಳಿಗೆ ಸಂಬಂಧಿಸಿದೆ. ಆದ್ದರಿಂದ ದೇಹದ ಇತರ ಕೋಶಗಳಿಗೆ ಇದು ಅಗತ್ಯವಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನಗಳು ಇವು ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರುತ್ತದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದದೆ.

ಹೃದಯರೋಗ: ಜರ್ಮನಿಯಲ್ಲಿ ನಡೆದ ದೊಡ್ಡ ಅಧ್ಯಯನವು, 60 ವರ್ಷ ಮೇಲ್ಪಟ್ಟ ಪುರುಷರಲ್ಲಿ Y ನಷ್ಟ ಹೆಚ್ಚಿರುವವರಲ್ಲಿ ಹೃದಯಾಘಾತದ ಅಪಾಯ ಹೆಚ್ಚುತ್ತದೆ ಎಂದು ತೋರಿಸಿದೆ.

ಅಲ್ಜೈಮರ್: ಈ ರೋಗಿಗಳಲ್ಲಿ Y ಕ್ರೋಮೋಸೋಮ್‌ ಕಡಿಮೆಯಾಗಿರುವ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ.

ಮೂತ್ರಪಿಂಡ ಸಮಸ್ಯೆ: Y ಕ್ರೋಮೋಸೋಮ್‌ ಕ್ಷೀಣಿಸಿದಾಗ ಮೂತ್ರಪಿಂಡ ಸಮಸ್ಯೆಗಳು ಹೆಚ್ಚಾಗಿ ಕಂಡುಬರಬಹುದು.

ಕ್ಯಾನ್ಸರ್: ಅನೇಕ ರೀತಿಯ ಕ್ಯಾನ್ಸರ್ ಕೋಶಗಳಲ್ಲಿ Y ಕ್ರೋಮೋಸೋಮ್‌ ಕಡಿಮೆಯಿರುವುದು ಕಂಡುಬರುತ್ತದೆ.

ಆದರೆ Y ಕ್ರೋಮೋಸೋಮ್‌ ಕಡಿಮೆಯಾಗಿರುವುದೇ ಕಾಯಿಲೆಗೆ ಕಾರಣವೇ? ಅಥವಾ ಕಾಯಿಲೆಯಿಂದಲೇ Y ನಷ್ಟವಾಗುತ್ತಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಂದೆ ಬರುವಂತಹ ವರ್ಷಗಳಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುವುದು ಬಹಳ ಅವಶ್ಯಕವಾಗಿದೆ. ಆಗ ಹೃದಯ ಕಾರ್ಯ, ರೋಗನಿರೋಧಕ ಶಕ್ತಿ, ಕ್ಯಾನ್ಸರ್ ಅಪಾಯ ಇವುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇನ್ನಷ್ಟು ಸ್ಪಷ್ಟವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link