Category Archives: Blog

Your blog category

Karnataka Weather Forecast: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ – Kannada News

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಬೆಂಗಳೂರು, ಜೂನ್ 12: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ (Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿರಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ, ಭಾರಿ ಮಳೆಯ ಮುನ್ಸೂಚನೆ.
  • ಉತ್ತರ ಒಳನಾಡು ಮತ್ತು ಮಲೆನಾಡು ಭಾಗಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
  • ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಹವಾಮಾನ ಇಲಾಖೆ ಸೂಚನೆ.

ಕರಾವಳಿಗೆ ಆರೆಂಜ್ ಅಲರ್ಟ್​

ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಇಂದ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಈ ಭಾಗಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನಲ್ಲಿ ಭಾರೀ ಮಳೆ

ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಉಳಿದಂತೆ ಬಾಗಲಕೋಟೆ, ಬೆಳಗಾವಿ, ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಾಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಮಲೆನಾಡು ಭಾಗಕ್ಕೆ ಹೈ ಅಲರ್ಟ್

ಮಲೆನಾಡು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗಗಳಲ್ಲಿ 30-40 ಕಿ.ಮೀ ವೇಗದ ಗಾಳಿ ಬೀಸಲಿದೆ.

ಭಾರಿ ಮಳೆ ಮತ್ತು ಗಾಳಿಯ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಮತ್ತು ರೈತರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಹಾಗೂ ಹಳೆಯ ಕಟ್ಟಡ/ವಿದ್ಯುತ್ ಕಂಬಗಳ ಬಳಿ ನಿಲ್ಲದಂತೆ ಹವಾಮಾನ ಇಲಾಖೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸೂರ್ಯವಂಶಿ ಟೀಮ್ ಇಂಡಿಯಾ ಡೆಬ್ಯೂ ವಿಳಂಬ? ಎದುರಾಯ್ತು ಅಡಚಣೆ – Kannada News

ಅಂಡರ್-19 ವಿಶ್ವಕಪ್ ಹಾಗೂ ಐಪಿಎಲ್​‌ನಲ್ಲಿ ಅಬ್ಬರಿಸಿದವರು ವೈಭವ್ ಸೂರ್ಯವಂಶಿ (Vaibhav Sooryavamshi). ಕೇವಲ 15ನೇ ವಯಸ್ಸಿಗೆ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಈಗ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಕೊಂಚ ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಭಾರತ ತಂಡ ಜೂನ್ ಕೊನೆಯ ವಾರದಲ್ಲಿ ಐರ್ಲೆಂಡ್ ಪ್ರವಾಸ ಕೈಗೊಳ್ಳಬೇಕಿದೆ. ಆದರೆ, ಸದ್ಯ ಅಲ್ಲಿ ಉಂಟಾಗಿರುವ ಆಂತರಿಕ ಕಲಹದಿಂದ ಈ ಸರಣಿ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಜೂನ್ 26 ಮತ್ತು 28 ರಂದು ಬೆಲ್‌ಫಾಸ್ಟ್‌ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಿಗದಿಯಾಗಿದೆ. ಆದರೆ, ಇತ್ತೀಚೆಗೆ ಅಲ್ಲಿ ನಡೆದ ಹಿಂಸಾತ್ಮಕ ವಲಸೆ ವಿರೋಧಿ ದಂಗೆಗಳಿಂದಾಗಿ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿರುವ ಐರ್ಲೆಂಡ್ ಕ್ರಿಕೆಟ್ ಮಂಡಳಿ, ಆಟಗಾರರು ಮತ್ತು ಪ್ರೇಕ್ಷಕರ ರಕ್ಷಣೆ ನಮಗೆ ಮುಖ್ಯ ಎಂದಿದೆ. ಒಂದು ವೇಳೆ ಬೆಲ್‌ಫಾಸ್ಟ್‌ನಲ್ಲಿ ಪರಿಸ್ಥಿತಿ ಹತೋಟಿಗೆ ಬಾರದಿದ್ದರೆ ಪಂದ್ಯಗಳನ್ನು ಡಬ್ಲಿನ್‌ಗೆ ಸ್ಥಳಾಂತರಿಸುವ ಆಲೋಚನೆಯೂ ಇದೆ. ಹಾಗಾದಲ್ಲಿ ಪಂದ್ಯ ನಿಗದಿತ ಸಮಯಕ್ಕೆ ನಡೆಯದೇ ವಿಳಂಬ ಆಗಬಹುದು.

ಈ ಸರಣಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ವೈಭವ್ ಸೂರ್ಯವಂಶಿ ಈ ಪಂದ್ಯದ ಮೂಲಕ ಭಾರತದ ಕ್ರಿಕೆಟ್ ತಂಡ ಸೇರಿಕೊಳ್ಳಲಿದ್ದಾರೆ. ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ (16 ವರ್ಷ 205 ದಿನಗಳು) ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಮುರಿಯಲಿದ್ದಾರೆ.

ಐರ್ಲೆಂಡ್‌ನ ಈಗಿನ ಪರಿಸ್ಥಿತಿ ಈ ಐತಿಹಾಸಿಕ ಕ್ಷಣಕ್ಕೆ ಸದ್ಯಕ್ಕೆ ಬ್ರೇಕ್ ಹಾಕುವಂತೆ ಕಾಣುತ್ತಿದೆ. ಅಲ್ಲದೆ, ಶ್ರೇಯಸ್ ಅಯ್ಯರ್ ಅವರ ಟಿ20 ನಾಯಕತ್ವದ ಹೊಸ ಇನ್ನಿಂಗ್ಸ್ ಕೂಡ ಈ ಸರಣಿಯಿಂದಲೇ ಆರಂಭವಾಗಬೇಕಿದೆ. ಸದ್ಯಕ್ಕೆ ಪ್ರವಾಸ ರದ್ದಾಗಿಲ್ಲವಾದರೂ, ಮುಂಬರುವ ದಿನಗಳಲ್ಲಿ ಕ್ರಿಕೆಟ್ ಐರ್ಲೆಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ವೈಭವ್ ಭಾರತದ ಪ್ರವಾಸದ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: 200ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ!

ಐರ್ಲೆಂಡ್ ಸರಣಿಗೆ ಭಾರತ ಟಿ20 ತಂಡ:

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿದ್ ಕೃಷ್ಣ, ವೈಭವ್ ಸೂರ್ಯವಂಶಿ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ತೆವಳುತ್ತಾ ಬಂದು ನಡುರಸ್ತೆಯಲ್ಲಿ ಕುಳಿತ ಮಗು, ದೇವರಂತೆ ಬಂದು ರಕ್ಷಿಸಿದ ಬಸ್ ಡ್ರೈವರ್ – Kannada News

ತಿರುವನಂತಪುರಂ, ಜೂನ್ 12: ನಡು ರಸ್ತೆಯಲ್ಲಿ ಬಂದು ಕುಳಿತಿದ್ದ ಮಗುವನ್ನು ಬಸ್(Bus) ಚಾಲಕರೊಬ್ಬರು ದೇವರಂತೆ ಬಂದು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಕೇರಳಂನ ಮಲಪ್ಪುರಂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂನ್ 10ರಂದು ನಡೆದಿದೆ.
ವಾಹನಗಳು ಅತಿ ವೇಗವಾಗಿ ಚಲಿಸುವ ಮುಖ್ಯ ರಸ್ತೆಯೊಂದರ ಮೇಲೆ ಕೇವಲ ಮಗುವೊಂದು ಮನೆಯ ಗೇಟ್ ದಾಟಿ ತೆವಳುತ್ತಾ ಬಂದು ರಸ್ತೆಯ ಮಧ್ಯಕ್ಕೆ ಕುಳಿತಿತ್ತು. ಸರಿಯಾಗಿ ಅದೇ ಕ್ಷಣದಲ್ಲಿ ಆ ರಸ್ತೆಯಲ್ಲಿ ಬಸ್ಸೊಂದು ವೇಗವಾಗಿ ಅದೇ ದಾರಿಯಲ್ಲಿ ಬರುತ್ತಿತ್ತು. ಮಗುವಿನ ಸಮೀಪ ಬರುತ್ತಿದ್ದಂತೆ ಏಕಾಏಕಿ ಚಾಲಕ ಬ್ರೇಕ್ ಹಾಕಿದ್ದಾನೆ.

ಆದರೆ, ಬಸ್ಸಿನ ಸ್ಟೀರಿಂಗ್ ಹಿಡಿದಿದ್ದ ಚಾಲಕನ ದೃಷ್ಟಿ ರಸ್ತೆಯ ಮೇಲಿದ್ದ ಆ ಸಣ್ಣ ಮಗುವಿನ ಮೇಲೆ ಬಿತ್ತು. ಧೃತಿಗೆಡದ ಆತ ಅತ್ಯಂತ ವೇಗವಾಗಿ ಪ್ರತಿಕ್ರಿಯಿಸಿ, ಬಸ್ಸಿನ ಎಮರ್ಜೆನ್ಸಿ ಬ್ರೇಕ್ ಒತ್ತಿದ್ದರೆ. ಚಾಲಕನ ಅದ್ಭುತ ನಿಯಂತ್ರಣದಿಂದಾಗಿ ಬಸ್ಸು ಮಗುವಿನಿಂದ ಕೇವಲ ಕೆಲವೇ ಇಂಚುಗಳ ದೂರದಲ್ಲಿ ನಿಂತಿತ್ತು.

ಬಸ್ಸು ನಿಲ್ಲುತ್ತಿದ್ದಂತೆಯೇ, ಕೃತಜ್ಞತಾ ಭಾವದಿಂದ ಡ್ರೈವರ್ ಬಾಗಿಲು ತೆರೆದು ರಸ್ತೆಯತ್ತ ಧಾವಿಸಿದ್ದಾರೆ. ವಿರುದ್ಧ ದಿಕ್ಕಿನಿಂದ ಬರಬಹುದಾದ ಬೇರೆ ಯಾವುದೇ ವಾಹನಗಳು ಮಗುವಿಗೆ ಡಿಕ್ಕಿ ಹೊಡೆಯುವ ಮುನ್ನವೇ, ಆ ಮಗುವನ್ನು ಎತ್ತಿ ಎದೆಗೆ ಅಪ್ಪಿಕೊಂಡು ಸುರಕ್ಷಿತವಾಗಿ ರಸ್ತೆಯ ಪಕ್ಕಕ್ಕೆ ಕರೆತಂದಿದ್ದಾರೆ.

ಮತ್ತಷ್ಟು ಓದಿ: ಫ್ರೀ ಬಸ್ ಪಾಸ್ ಬೆನ್ನಲ್ಲೇ ರಿಯಾಯಿತಿಯಲ್ಲಿ ಮೆಟ್ರೋ ಪಾಸ್ ನೀಡುವಂತೆ ಬೆಂಗಳೂರು ವಿದ್ಯಾರ್ಥಿಗಳ ಮನವಿ

ಮಗುವನ್ನು ಎತ್ತಿಕೊಂಡು ಹತ್ತಿರದ ಮನೆಗೆ ಹೋಗಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಮಗು ಮನೆಯಿಂದ ಹೇಗೆ ಹೊರಗೆ ಬಂತು ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲವಾದರೂ, ಮಗು ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿರುವುದು ಇಡೀ ದೇಶ ನಿರಾಳವಾಗುವಂತೆ ಮಾಡಿದೆ.

ವಿಡಿಯೋ

ಪ್ರತ್ಯೇಕ ಘಟನೆ: ಮುಂಬೈನಲ್ಲಿ ಬಸ್ ಅಪಘಾತ

ಮುಂಬೈನ ದಾದರ್ ಬಳಿಯ ಪ್ಲಾಜಾ ಸಿನಿಮಾ ಬಳಿ ‘ಬೆಸ್ಟ್’ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ಆಕ್ಟಿವಾ, ಎಲೆಕ್ಟ್ರಿಕ್ ಬೈಕ್ ಮತ್ತು ಕಾರು ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ದುರದೃಷ್ಟಕರ ಘಟನೆಯಲ್ಲಿ 30 ವರ್ಷದ ಡೆಲಿವರಿ ಎಕ್ಸಿಕ್ಯೂಟಿವ್ ನೌಕರರೊಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ವಾಹನವನ್ನು ಮರುಪ್ರಾರಂಭಿಸುವಾಗ ಚಾಲಕ ಆಕಸ್ಮಿಕವಾಗಿ ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿದ್ದೇ ಇದಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Breaking News Today Live: ಸಂಪುಟ ವಿಸ್ತರಣೆ ಕಸರತ್ತಿನ ಬೆನ್ನಲ್ಲೇ ಅಮಿತ್ ಶಾ ಭೇಟಿಯಾಗಲಿರುವ ಸಿಎಂ ಡಿಕೆ ಶಿವಕುಮಾರ್! – Kannada News

ದೆಹಲಿ ಪ್ರವಾಸದಲ್ಲಿರುವ ಸಿಎಂ ಡಿ.ಕೆ. ಶಿವಕುಮಾರ್ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರನ್ನು ಆಡಳಿತಾತ್ಮಕ ವಿಷಯಗಳ ಸಲುವಾಗಿ ಭೇಟಿಯಾಗಲಿದ್ದಾರೆ. ಇನ್ನೊಂದೆಡೆ ಸಚಿವ ಸ್ಥಾನದ ಆಕಾಂಕ್ಷಿಗಳಾದ ಹಲವು ಹಿರಿಯ ಮತ್ತು ಕಿರಿಯ ಶಾಸಕರು ಕೂಡ ದೆಹಲಿಯಲ್ಲೇ ಬೀಡುಬಿಟ್ಟು ತೀವ್ರ ಲಾಬಿ ನಡೆಸುತ್ತಿದ್ದಾರೆ.ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಈ ಬಾರಿ ಸಂಪುಟದಲ್ಲಿ ಹೊಸ ಹಾಗೂ ಯುವ ಶಾಸಕರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

ಹೊಕ್ಕುಳಿಗೆ ರಿಂಗ್ ಚುಚ್ಚಿಸಿಕೊಂಡ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ನೋವಿನಲ್ಲೂ ನಕ್ಕ ನಟಿ – Kannada News

ಕನ್ನಡದ ಸೂಪರ್ ಹಿಟ್ ಸಿನಿಮಾ ‘ಅಧ್ಯಕ್ಷ’ ನೆನಪಿದೆಯೇ? ಅದರಲ್ಲಿ ಶಿವರುದ್ರೇಗೌಡರ (ರವಿಶಂಕರ್) ಮುದ್ದಿನ ಮಗಳು ಐಶ್ವರ್ಯಾ ಆಗಿ, ಶರಣ್ ಪ್ರೇಯಸಿಯಾಗಿ ಕನ್ನಡಿಗರ ಮನಗೆದ್ದಿದ್ದ ನಟಿ ಹೆಬಾ ಪಟೇಲ್ (Hebah Patel) ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಹೊಸ ಸಾಹಸ. ಹೌದು, ನಟಿ ಹೆಬಾ ಪಟೇಲ್ ಇತ್ತೀಚೆಗೆ ತಮ್ಮ ಹೊಕ್ಕುಳಿಗೆ ಬೆಲ್ಲಿ ರಿಂಗ್ ಚುಚ್ಚಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಹೊಕ್ಕುಳಿಗೆ ರಿಂಗ್ ಚುಚ್ಚಿಸಿಕೊಳ್ಳುವಾಗ ವಿಪರೀತ ನೋವಾಗುತ್ತದೆ. ಆದರೆ, ಹೆಬಾ ಪಟೇಲ್ ಈ ಪ್ರಕ್ರಿಯೆಯುದ್ದಕ್ಕೂ ತೋರಿದ ಧೈರ್ಯ ಮತ್ತು ಅವರ ಮುಖದ ಭಾವನೆಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ.

ಸಾಮಾನ್ಯವಾಗಿ ಸೂಜಿ ಹಾಕಿಸಿಕೊಳ್ಳಲು ಹೆದರುವವರ ಮಧ್ಯೆ, ಹೆಬಾ ಪಟೇಲ್ ಅತ್ಯಂತ ಕೂಲ್ ಆಗಿ ನಿಂತು ಹೊಕ್ಕುಳಿಗೆ ಪಿಯರ್ಸಿಂಗ್ ಹಾಕಿಸಿಕೊಂಡಿದ್ದಾರೆ. ರಿಂಗ್ ಚುಚ್ಚುವಾಗ ಕಿರುಚಾಡದೆ, ಅಳದೆ, ಕೇವಲ ಮುಗುಳ್ನಗೆಯೊಂದಿಗೆ ಇಡೀ ಪ್ರಕ್ರಿಯೆಯನ್ನು ಎದುರಿಸಿದ್ದಾರೆ. ಅವರ ಈ ಅಪ್ರತಿಮ ಧೈರ್ಯವನ್ನು ನೋಡಿ ಅಲ್ಲಿದ್ದ ಆರ್ಟಿಸ್ಟ್ ಕೂಡ ‘ನೀವು ತುಂಬಾ ಸ್ಟ್ರಾಂಗ್ ಪ್ರೋ ತರ ತಡೆದುಕೊಂಡಿದ್ದೀರಿ’ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಬಾ ಪಟೇಲ್ ಪೋಸ್ಟ್

ಹೊಕ್ಕುಳಿಗೆ ಸುಂದರವಾದ ರಿಂಗ್ ಚುಚ್ಚುವ ಕೆಲಸ ಮುಗಿಯುತ್ತಿದ್ದಂತೆ ಹೆಬಾ ಪಟೇಲ್ ಸಂತೋಷಕ್ಕೆ ಪಾರವೇ ಇರಲಿಲ್ಲ. ತಕ್ಷಣವೇ ಕನ್ನಡಿಯ ಮುಂದೆ ನಿಂತು ತನ್ನ ಹೊಸ ಬೆಲ್ಲಿ ರಿಂಗ್ ನೋಡಿ ಹಿರಿ ಹಿರಿ ಹಿಗ್ಗಿದ್ದಾರೆ. ‘ಐ ಲವ್ ಇಟ್’ ಎನ್ನುತ್ತಾ ಮಗುವಿನಂತೆ ಸಖತ್ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: 12 ವರ್ಷದ ಬಳಿಕ ಕನ್ನಡಕ್ಕೆ ಮರಳಿದ ‘ಅಧ್ಯಕ್ಷ’ ನಟಿ ಹೆಬಾ ಪಟೇಲ್; ದಿಗಂತ್ ಜೊತೆ ಸಿನಿಮಾ

‘ನನ್ನ ಜೀವನದ ಕಳೆದ 15 ವರ್ಷಗಳಿಂದ ಹೊಕ್ಕುಳಿಗೆ ರಿಂಗ್ ಚುಚ್ಚಿಸಿಕೊಳ್ಳಬೇಕೆಂಬ ಆಸೆಯಿತ್ತು. ನನ್ನ ಹೊಟ್ಟೆಯ ಶೇಪ್ ಬದಲಾಗುವ ಮುನ್ನ ಈ ಆಸೆಯನ್ನು ಈಡೇರಿಸಿಕೊಂಡಿದ್ದೇನೆ’ ಎಂದು ಹೆಬಾ ಹೇಳಿಕೊಂಡಿದ್ದಾರೆ. ಸದ್ಯ ಹೆಬಾ ಪಟೇಲ್ ಅವರ ಈ ಬೆಲ್ಲಿ ಪಿಯರ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಧೈರ್ಯಕ್ಕೆ ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಲ್ಲೂರಿಗೆ ವಿಜಯ್ ಬರ್ತಿರೋದ್ರ ಹಿಂದಿದೆ ವಿಶಿಷ್ಟ ಕಾರಣ: ತಮಿಳುನಾಡಿನ ಗಣ್ಯರಿಗೂ ಮೂಕಾಂಬಿಕೆಗೂ ಇದೆ ಅವಿನಾಭಾವ ನಂಟು! – Kannada News

ಕೊಲ್ಲೂರಿಗೆ ವಿಜಯ್ ಬರ್ತಿರೋದ್ರ ಹಿಂದಿದೆ ವಿಶಿಷ್ಟ ಕಾರಣImage Credit source: tv9

ಉಡುಪಿ, ಜೂನ್ 12: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ಸಿಎಂ ಆದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದು, ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲಕ್ಕೆ (Kollur Sri Mookambika Devi Temple) ಆಗಮಿಸುತ್ತಿದ್ದಾರೆ. ಅವರ ಈ ಭೇಟಿಯು ಹಲವು ಕುತೂಹಲಗಳನ್ನು ಕೆರಳಿಸಿದ್ದು, ರಾಜಕೀಯ ಮತ್ತು ಭಕ್ತಿ ಪರಂಪರೆಯ ಸಂಕೇತವಾಗಿ ಕಂಡುಬರುತ್ತಿದೆ. ಸಿಎಂ ವಿಜಯ್ ವೇಳಾಪಟ್ಟಿಯ ಪ್ರಕಾರ, ಅವರು ಮಧ್ಯಾಹ್ನ 12:30ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲಕ್ಕೆ ಮಧ್ಯಾಹ್ನ 3 ಗಂಟೆಗೆ ತಲುಪಲಿದ್ದಾರೆ. ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದು, ಸುಮಾರು 5 ಗಂಟೆಗೆ ದೇಗುಲದಿಂದ ನಿರ್ಗಮಿಸಲಿದ್ದಾರೆ. ನಂತರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ವಾಪಸಾಗಲಿದ್ದಾರೆ. ಅವರ ಭೇಟಿಯ ಹಿನ್ನೆಲೆಯಲ್ಲಿ ಭಕ್ತರ ದಟ್ಟಣೆಯನ್ನು ನಿರೀಕ್ಷಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸಾರ್ವಜನಿಕವಾಗಿ ‘ಸರ್ವ ಧರ್ಮ ಸಮಾನತೆಯ’ ಸಂದೇಶ ಸಾರುತ್ತಿರುವ ಸಿಎಂ ಜೋಸೆಫ್ ವಿಜಯ್, ಮುಖ್ಯಮಂತ್ರಿಯಾದ ನಂತರ ಚೆನ್ನೈನಲ್ಲಿ ಚರ್ಚ್‌ಗಳಿಗೆ, ಮಸೀದಿಗಳಿಗೆ ಭೇಟಿ ನೀಡಿದ್ದರು. ಇದೀಗ ಪ್ರಸಿದ್ಧ ಶಕ್ತಿಪೀಠವಾದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಗಮನಾರ್ಹ. ದಕ್ಷಿಣ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕೆ ದೇಗುಲವು ಶತಶತಮಾನಗಳಿಂದ ರಾಜರು, ರಾಜಕೀಯ ನಾಯಕರು, ಸಂಗೀತ ಮತ್ತು ಸಿನಿಮಾ ಕ್ಷೇತ್ರದ ಗಣ್ಯರು ಸೇರಿದಂತೆ ಅನೇಕ ಭಕ್ತರನ್ನು ಆಕರ್ಷಿಸಿದೆ.

ವಿಜಯ್ ಭೇಟಿ ಹಿಂದೆ ಸುದೀರ್ಘ ಪರಂಪರೆ

ವಿಜಯ್ ಕೊಲ್ಲೂರು ಭೇಟಿಯ ಹಿಂದೆ ಒಂದು ಸುದೀರ್ಘ ಪರಂಪರೆ ಅಡಗಿದೆ. ತಮಿಳುನಾಡಿನ ಗಣ್ಯರಿಗೂ ಕೊಳ್ಳೂರಿಗೂ ಅವಿನಾಭಾವ ನಂಟಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಮೂಕಾಂಬಿಕೆ ದೇವಿಯ ಪರಮ ಭಕ್ತರಾಗಿದ್ದರು. ಎಂಜಿಆರ್ ಸಿಎಂ ಆಗಿದ್ದಾಗ ಹಲವು ಬಾರಿ ಕೊಲ್ಲೂರಿಗೆ ಭೇಟಿ ನೀಡಿ, ದೇವಿಗೆ ಚಿನ್ನದ ಖಡ್ಗವನ್ನು ಭಕ್ತಿಯ ಕಾಣಿಕೆಯಾಗಿ ಸಮರ್ಪಿಸಿದ್ದರು. ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್ ಮತ್ತು ನಂತರ ಸಿಎಂ ಆದ ಜಯಲಲಿತಾ ಕೂಡ ಮೂಕಾಂಬಿಕೆ ದೇವಿಯ ದರ್ಶನ ಪಡೆದಿದ್ದರು. ಜಯಲಲಿತಾ ಅವರು 2004ರಲ್ಲಿ ಅನ್ನಸಂತರ್ಪಣೆಗಾಗಿ ದೇಣಿಗೆ ನೀಡಿದ್ದರು ಮತ್ತು ತಮ್ಮ ರಾಜಕೀಯ ಗುರು ಎಂಜಿಆರ್ ಸಮರ್ಪಿಸಿದ ಚಿನ್ನದ ಖಡ್ಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದರು.

ಸಂಗೀತ ನಿರ್ದೇಶಕ ಇಳಯರಾಜಗೂ ಕೊಲ್ಲೂರು ಮೂಕಾಂಬಿಕೆ ಆರಾಧ್ಯ ದೈವ

ಸಂಗೀತ ನಿರ್ದೇಶಕ ಇಳಯರಾಜ ಅವರಿಗಂತೂ ಕೊಲ್ಲೂರು ಮೂಕಾಂಬಿಕೆ ಆರಾಧ್ಯ ದೈವ. ಅವರು ಇದುವರೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಕಾಣಿಕೆಗಳನ್ನು ಸಮರ್ಪಿಸಿದ್ದಾರೆ. ಕಳೆದ ವರ್ಷವಷ್ಟೇ ನಾಲ್ಕು ಕೋಟಿ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟ, ಚಿನ್ನಾಭರಣಗಳು ಮತ್ತು ಚಿನ್ನದ ಖಡ್ಗವನ್ನು ಸಮರ್ಪಿಸಿದ್ದರು. ಅಲ್ಲದೆ, ಶ್ರೀ ವೀರಭದ್ರ ದೇವರಿಗೂ ವಜ್ರಖಚಿತ ಬೆಳ್ಳಿಯ ಕಿರೀಟ ಮತ್ತು ಬೆಳ್ಳಿಯ ಖಡ್ಗವನ್ನು ನೀಡಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್, ಮೋಹನ್‌ಲಾಲ್ ಸೇರಿದಂತೆ ಹಲವು ತಮಿಳು ಮತ್ತು ಮಲಯಾಳಂ ಸ್ಟಾರ್‌ಗಳು ಕೂಡ ಮೂಕಾಂಬಿಕೆಯ ಭಕ್ತರಾಗಿದ್ದಾರೆ.

ಕರ್ನಾಟಕದ ಮಾಜಿ ಸಿಎಂ ಗುಂಡೂರಾವ್ ಮತ್ತು ಶ್ರೀಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಕೂಡ ಕೊಲ್ಲೂರಿಗೆ ಭೇಟಿ ನೀಡಿದ ಗಣ್ಯರ ಪಟ್ಟಿಯಲ್ಲಿ ಸೇರಿದ್ದಾರೆ. ಗಣ್ಯರ ಭೇಟಿಯ ಈ ಇತಿಹಾಸವು ವಿಜಯನಗರದ ಕೃಷ್ಣದೇವರಾಯರ ಕಾಲದವರೆಗೂ ವಿಸ್ತರಿಸಿದೆ. ಎಂ.ಜಿ. ರಾಮಚಂದ್ರನ್ ನೀಡಿದ ಚಿನ್ನದ ಖಡ್ಗವು ಇಂದಿಗೂ ವಿಶೇಷ ಪೂಜೆ ಮತ್ತು ಉತ್ಸವಗಳ ಸಂದರ್ಭದಲ್ಲಿ ಬಳಕೆಯಾಗುತ್ತಿದೆ.

ಇದನ್ನೂ ಓದಿ: ಭಕ್ತರೇ ಗಮನಿಸಿ, ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ: ನಾಳೆ ಈ ಸಮಯದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಇರುವುದಿಲ್ಲ

ಸಿಎಂ ಜೋಸೆಫ್ ವಿಜಯ್ ಅವರು ಎಂಜಿಆರ್ ಅವರನ್ನು ತಮ್ಮ ಆದರ್ಶ ಎಂದು ಸ್ವೀಕರಿಸಿದ್ದು, ಅವರ ಹಾದಿಯಲ್ಲೇ ಈಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇದು ತಮಿಳುನಾಡಿನ ರಾಜಕೀಯ ಮತ್ತು ಭಕ್ತಿ ಸಂಪ್ರದಾಯದ ಮುಂದುವರಿಕೆಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಓಜಿ 2’ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಪವನ್ ಕಲ್ಯಾಣ್; ಫ್ಯಾನ್ಸ್ ಕಾಯೋದು ಅನಿವಾರ್ಯ – Kannada News

ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ‘ಓಜಿ’ ಮೂಲಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಅತ್ಯಂತ ಸ್ಟೈಲಿಶ್ ಆಗಿ ಬೆಳ್ಳಿಪರದೆ ಮೇಲೆ ತೋರಿಸಿ ಅಭಿಮಾನಿಗಳಿಗೆ ಭರ್ಜರಿ ರಸದೌತಣ ನೀಡಿದ ನಿರ್ದೇಶಕ ಸುಜೀತ್. ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದ ಈ ಸಿನಿಮಾ, ಸ್ವತಃ ಪವನ್ ಕಲ್ಯಾಣ್ ಅವರಿಗೂ ಭಾರಿ ಖುಷಿ ಕೊಟ್ಟಿತ್ತು. ಒಂದು ವೇಳೆ ಒಳ್ಳೆಯ ಲೈನ್ ಸಿಕ್ಕರೆ ಸೀಕ್ವೆಲ್ ಮಾಡಲು ಸಿದ್ಧ ಎಂದು ಪವನ್ ಆಗಲೇ ಆಸಕ್ತಿ ತೋರಿಸಿದ್ದರು. ಅಂದಿನಿಂದಲೂ ಫ್ಯಾನ್ಸ್ ‘ಓಜಿ 2’ ಅಪ್‌ಡೇಟ್‌ಗಾಗಿ ಕಾದು ಕುಳಿತಿದ್ದಾರೆ.

ಪವನ್ ಕಲ್ಯಾಣ್ ಸದ್ಯ ರಾಜಕೀಯದಲ್ಲಿ ಸಂಪೂರ್ಣ ಬ್ಯುಸಿಯಾಗಿದ್ದರೂ, ಸಿನಿಮಾ ಬಂದೇ ಬರುತ್ತೆ ಎಂಬ ನಂಬಿಕೆಯಲ್ಲಿ ಅಭಿಮಾನಿಗಳಿದ್ದರು. ಇದಕ್ಕೆ ಪೂರಕವೆಂಬಂತೆ ಪವನ್ ಕಲ್ಯಾಣ್ ಅವರ ಸ್ವಂತ ಪ್ರೊಡಕ್ಷನ್ ಹೌಸ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಬಿಗ್ ಹಿಂಟ್ ನೀಡಿದೆ. ನಿರ್ದೇಶಕ ಸುಜೀತ್ ಸದ್ಯ ವಿದೇಶದಲ್ಲಿದ್ದು, ಅವರು ಮರಳಿದ ತಕ್ಷಣ ಪವನ್ ಕಲ್ಯಾಣ್ ಅವರೊಂದಿಗೆ ‘ಓಜಿ 2’ ಚಿತ್ರದ ಶೂಟಿಂಗ್ ಟೈಮ್‌ಲೈನ್ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪ್ರೊಡಕ್ಷನ್ ಹೌಸ್ ತಿಳಿಸಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರಂತೂ ಸಿನಿಮಾ ಈ ವರ್ಷವೇ ಶುರುವಾಗಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.

ಆದರೆ ಕಾಯೋದು ಗ್ಯಾರಂಟಿ; ಕಾರಣಗಳೇನು?

ಸಿನಿಮಾ ಅನೌನ್ಸ್ ಆಗಿದ್ದರೂ, ಸದ್ಯಕ್ಕೆ ಶೂಟಿಂಗ್ ಆರಂಭವಾಗುವುದು ಅಷ್ಟು ಸುಲಭವಲ್ಲ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ:

ರಾಜಕೀಯ ಜವಾಬ್ದಾರಿ: ಪವನ್ ಕಲ್ಯಾಣ್ ಅವರಿಗೆ ಸಿನಿಮಾಕ್ಕಿಂತ ಹೆಚ್ಚಾಗಿ ರಾಜ್ಯದ ಕಲ್ಯಾಣ ಮತ್ತು ರಾಜಕೀಯ ಕೆಲಸಗಳೇ ಮೊದಲ ಆದ್ಯತೆ. ಅದರಲ್ಲೂ ಆಂಧ್ರಪ್ರದೇಶದಲ್ಲಿ ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು, ಪೂರ್ಣ ಪ್ರಮಾಣದಲ್ಲಿ ಶೂಟಿಂಗ್‌ಗೆ ಡೇಟ್ಸ್ ಕೊಡುವುದು ಸದ್ಯಕ್ಕೆ ಅಸಾಧ್ಯ.

ಸುಜೀತ್ ಅವರ ಮುಂದಿನ ಪ್ರಾಜೆಕ್ಟ್: ನಿರ್ದೇಶಕ ಸುಜೀತ್ ಕೇವಲ ಪವನ್ ಕಲ್ಯಾಣ್ ಅವರಿಗಾಗಿ ಕಾಯುತ್ತಾ ಕೂತಿಲ್ಲ. ಅವರು ಈಗಾಗಲೇ ನ್ಯಾಚುರಲ್ ಸ್ಟಾರ್ ನಾನಿ ಜೊತೆ ‘ಬ್ಲಡಿ ರೋಮಿಯೋ’ ಎಂಬ ದೊಡ್ಡ ಬಜೆಟ್ ಚಿತ್ರವನ್ನು ಅಧಿಕೃತವಾಗಿ ಲೈನ್-ಅಪ್ ಮಾಡಿಕೊಂಡಿದ್ದಾರೆ.

ಮತ್ತೊಂದು ಕಮಿಟ್‌ಮೆಂಟ್: ಇನ್ನೊಂದೆಡೆ, ಪವನ್ ಕಲ್ಯಾಣ್ ಅವರು ಮುಂದಿನ ದಿನಗಳಲ್ಲಿ ನಿರ್ದೇಶಕ ಸುರೇಂದರ್ ರೆಡ್ಡಿ ಜೊತೆಗೂ ಸಿನಿಮಾ ಮಾಡುವುದಾಗಿ ಮಾತು ಕೊಟ್ಟಿದ್ದಾರೆ.

ಸುಜೀತ್ ವಿದೇಶದಿಂದ ಬಂದ ನಂತರ ಇಬ್ಬರೂ ಕೂತು ಸ್ಕ್ರಿಪ್ಟ್ ಫೈನಲ್ ಮಾಡಬೇಕಿದೆ. ಪವನ್ ಕಲ್ಯಾಣ್ ಬಿಡುವಿನ ವೇಳೆಯಲ್ಲಿ ಶೂಟಿಂಗ್ ಮಾಡಲು ಒಪ್ಪಿಕೊಂಡರೂ, ಅವರ ಲಭ್ಯತೆಯ ಆಧಾರದ ಮೇಲೆ ಚಿತ್ರೀಕರಣ ತಡವಾಗುತ್ತಾ ಸಾಗುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಡಿಸಿಎಂ ಪವನ್ ಕಲ್ಯಾಣ್​​ರ ಭೇಟಿಯಾದ ನಟ ಅಲ್ಲು ಅರ್ಜುನ್: ಕಾರಣ?

‘OG 2’ ಸಿನಿಮಾ ತಾಂತ್ರಿಕವಾಗಿ ಕನ್ಫರ್ಮ್ ಆಗಿದೆ ಮತ್ತು ಕೊಟ್ಟ ಮಾತಿನಂತೆ ಸಿನಿಮಾ ಮೂಡಿಬರಲಿದೆ ಎಂದು ಪ್ರೊಡಕ್ಷನ್ ಹೌಸ್ ಭರವಸೆ ನೀಡಿದೆ. ಆದರೆ ಬಿಡುಗಡೆ ಯಾವಾಗ ಎಂಬುದಕ್ಕೆ ಸದ್ಯಕ್ಕೆ ಗ್ಯಾರಂಟಿ ಇಲ್ಲ. ಹಾಗಾಗಿ, ಅಲ್ಟಿಮೇಟ್ ಗ್ಯಾಂಗ್‌ಸ್ಟರ್ ಬ್ಯಾಂಗ್ ನೋಡಲು ಫ್ಯಾನ್ಸ್ ಇನ್ನು ದೀರ್ಘಕಾಲ ಕಾಯಲೇಬೇಕಿದೆ!

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಿ ವೆಡ್ಡಿಂಗ್ ಫೋಟೊಶೂಟ್ ವೇಳೆ ಸರೋವರಕ್ಕೆ ಜಾರಿ ಬಿದ್ದು ವರ ಸಾವು – Kannada News

ಜೈಪುರ, ಜೂನ್ 12: ಪ್ರಿ ವೆಡ್ಡಿಂಗ್ ಫೋಟೊಶೂಟ್(Photoshoot) ವೇಳೆ ಸರೋವರಕ್ಕೆ ಜಾರಿ ಬಿದ್ದು ವರ ಮೃತಪಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಚಿತ್ತೋರ್‌ಗಢದ ನಿವಾಸಿಯಾದ ಅರ್ಜುನ್ ದಮಾಮಿ ಎಂಬ ಯುವಕನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು. ಮದುವೆಯ ತಯಾರಿಗಳು ಜೋರಾಗಿ ನಡೆಯುತ್ತಿದ್ದವು. ತಮ್ಮ ವಿವಾಹ ಪೂರ್ವ ಫೋಟೋ ಶೂಟ್‌ಗಾಗಿ ಅರ್ಜುನ್, ತನ್ನ ನಿಶ್ಚಿತ ವಧು ಮತ್ತು ಆಕೆಯ ಚಿಕ್ಕಪ್ಪನೊಂದಿಗೆ ಗೋರಿ ಧಾಮ್‌ಗೆ ಭೇಟಿ ನೀಡಿದ್ದರು.

ಬೆಟ್ಟಗಳ ನಡುವೆ ದೇವಾಲಯದ ಆವರಣದ ಬಳಿ ಚಿಕ್ಕಪ್ಪ ವಿಶ್ರಮಿಸುತ್ತಿದ್ದರೆ, ಈ ಜೋಡಿ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಲು ಬೆಟ್ಟದ ಕೆಳಗಿನ ಸರೋವರದ ತೀರಕ್ಕೆ ತೆರಳಿದ್ದರು. ಸರೋವರದ ಸೌಂದರ್ಯಕ್ಕೆ ಮನಸೋತ ಅರ್ಜುನ್, ಫೋಟೋ ಶೂಟ್ ನಡುವೆಯೇ ಸ್ನಾನ ಮಾಡಲು ನೀರಿನ ಹತ್ತಿರ ತೆರಳಿದ್ದಾರೆ. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಕಾಲು ಜಾರಿ ಅವರು ಸರೋವರದ ಆಳವಾದ ಕಂದಕದಂತಹ ನೀರಿಗೆ ಬಿದ್ದಿದ್ದಾರೆ. ಕಣ್ಣೆದುರೇ ತನ್ನ ಭಾವಿ ಪತಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಆ ಯುವತಿ ಆಘಾತಕ್ಕೊಳಗಾಗಿ, ಜೋರಾಗಿ ಕೂಗುತ್ತಾ ನೆರವಿಗಾಗಿ ಯತ್ನಿಸಿದ್ದಾರೆ. ಆಕೆಯ ಆಕ್ರಂದನ ಕೇಳಿ ಧಾವಿಸಿದ ಪ್ರವಾಸಿಗರು ತಕ್ಷಣವೇ ಪೊಲೀಸರು ಮತ್ತು ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳು ಧಾವಿಸಿ ಶೋಧ ಕಾರ್ಯ ಆರಂಭಿಸಿದರೂ, ಸರೋವರದ ಅತಿ ಆಳ ಮತ್ತು ಕತ್ತಲೆಯ ಕಾರಣದಿಂದಾಗಿ ಮಂಗಳವಾರದ ಕಾರ್ಯಾಚರಣೆಗೆ ಅಡ್ಡಿಯಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಉದಯಪುರದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ವಿಶೇಷ ತಜ್ಞರ ತಂಡವನ್ನು ಕರೆಸಲಾಯಿತು.

ಮತ್ತಷ್ಟು ಓದಿ: ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಬುಧವಾರ ಮುಂಜಾನೆ, ಎಸ್​ಡಿಆರ್​ಎಫ್​ ಮತ್ತು ರಾಜ್‌ಸಮಂದ್ ನಾಗರಿಕ ರಕ್ಷಣಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಿದವು. ಬೆಟ್ಟದ ಕಡಿದಾದ ಮತ್ತು ದುರ್ಗಮ ಹಾದಿಯಾಗಿದ್ದರಿಂದ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು. ಕೊನೆಗೆ ಹಲವಾರು ಗಂಟೆಗಳ ಕಠಿಣ ಶ್ರಮದ ನಂತರ ಅರ್ಜುನ್ ಅವರ ದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.

ವಿಡಿಯೋ

ಈ ಕಷ್ಟದ ಸಮಯದಲ್ಲಿ ಸ್ಥಳೀಯ ಗ್ರಾಮಸ್ಥರು ಮತ್ತು ರಕ್ಷಣಾ ಪಡೆಗಳು ತೋರಿದ ಮಾನವೀಯತೆ ಶ್ಲಾಘನೀಯ. ಕಣಿವೆಯಂತಹ ಸರೋವರದ ಆಳದಿಂದ ಕಡಿದಾದ ಬೆಟ್ಟದ ತುದಿಯವರೆಗೆ ಅರ್ಜುನ್ ಅವರ ಮೃತದೇಹವನ್ನು ಹೊತ್ತು ತರಲು ಗ್ರಾಮಸ್ಥರು ಪೊಲೀಸರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು. ಸದ್ಯ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಇಡೀ ಕುಟುಂಬ ಆಘಾತದಲ್ಲಿ ಮುಳುಗಿದೆ.

ಫೋಟೋ ಶೂಟ್‌ಗಳ ನೆಪದಲ್ಲಿ ನಿಸರ್ಗದ ಆಕರ್ಷಣೆಗೆ ಒಳಗಾಗುವಾಗ ಸುರಕ್ಷತೆಯನ್ನು ಮರೆಯಬಾರದು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಮದುವೆಯ ಮಂಟಪ ಏರಬೇಕಾಗಿದ್ದ ಯುವಕನ ಶವಯಾತ್ರೆ ನೋಡುವಂತಾದದ್ದು ವಿಧಿಯ ಕ್ರೂರ ವೈಪರೀತ್ಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೆಲೆಬ್ರಿಟಿಗಳ ಹೆಸರಲ್ಲಿ ಸೃಷ್ಟಿಯಾಗುತ್ತಿದೆ ನಕಲಿ ಪೋಸ್ಟ್​; ಶೇರ್ ಮಾಡೋ ಮುನ್ನ ಎಚ್ಚರ – Kannada News

ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಎಷ್ಟು ಸಹಾಯಕಾರಿಯೋ, ಅಷ್ಟೇ ಅಪಾಯಕಾರಿಯೂ ಹೌದು. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ‘ಫೇಕ್’ ಹಾಗೂ ‘ಎಡಿಟೆಡ್’ ಸ್ಟೋರಿಗಳನ್ನು ಹರಿಬಿಡುವ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ‘ಆ ಸೆಲೆಬ್ರಿಟಿ ಹಾಗೆ ಅಂದರು, ಈ ಸ್ಟಾರ್ ಹೀಗೆ ಹೇಳಿದರು’ ಎಂದರು ಎಂಬ ಇನ್​​ಸ್ಟಾ ಸ್ಟೋರಿಗಳನ್ನು ಎಡಿಟ್ ಮಾಡಿದ ಸ್ಕ್ರೀನ್‌ಶಾಟ್‌ಗಳು ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿವೆ.

ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನಿಜವಾದ ಸ್ಟೋರಿ ಯಾವುದು ಮತ್ತು ಎಡಿಟ್ ಮಾಡಿದ ಸ್ಟೋರಿ ಯಾವುದು ಎಂದು ಗುರುತಿಸುವುದೇ ನೆಟ್ಟಿಗರಿಗೆ ದೊಡ್ಡ ಸವಾಲಾಗಿದೆ. ಫೋಟೋಶಾಪ್ ಹಾಗೂ ಎಐ ಟೂಲ್‌ಗಳನ್ನು ಬಳಸಿ ಸೆಲೆಬ್ರಿಟಿಗಳ ಅಧಿಕೃತ ಖಾತೆಗಳಿಂದಲೇ ಪೋಸ್ಟ್ ಮಾಡಿದ್ದಾರೇನೋ ಎಂಬಂತೆ ಇನ್‌ಸ್ಟಾ ಸ್ಟೋರಿಗಳನ್ನು ಸೃಷ್ಟಿಸಲಾಗುತ್ತಿದೆ. ದುರದೃಷ್ಟವಶಾತ್, ಇದರ ಹಿಂದಿನ ಸತ್ಯಾಸತ್ಯತೆಯನ್ನು ಪರಿಶೀಲಿಸದ ಲಕ್ಷಾಂತರ ನೆಟ್ಟಿಗರು ಇದನ್ನು ನಿಜವೆಂದೇ ನಂಬಿ, ಶೇರ್ ಮಾಡುತ್ತಿದ್ದಾರೆ.

ಪರಿಣಾಮವೇನು?

ಇಂತಹ ನಕಲಿ ಪೋಸ್ಟ್‌ಗಳು ಕೇವಲ ಸುಳ್ಳು ಸುದ್ದಿಗಳನ್ನು ಹರಡುವುದಿಲ್ಲ, ಬದಲಿಗೆ ವರ್ಷಗಳ ಕಾಲ ಕಷ್ಟಪಟ್ಟು ದುಡಿದ ಸೆಲೆಬ್ರಿಟಿಗಳ ಗೌರವ ಮತ್ತು ಘನತೆಗೆ ಧಕ್ಕೆ ತರುತ್ತಿವೆ. ಅಷ್ಟೇ ಅಲ್ಲದೆ, ಸಮಾಜದಲ್ಲಿ ಅನಗತ್ಯ ವಿವಾದ, ದ್ವೇಷ ಹಾಗೂ ಗೊಂದಲಗಳಿಗೆ ಕಾರಣವಾಗುತ್ತಿವೆ. ಸೆಲೆಬ್ರಿಟಿ ವಾರ್​​ಗಳು ಕೂಡ ಹೆಚ್ಚುತ್ತಿವೆ.

ನುಸ್ರತ್ ಫೇಕ್ ಇನ್​​ಸ್ಟಾ ಸ್ಟೇಟಸ್

ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ

ಈ ಗಂಭೀರ ಸಮಸ್ಯೆಗೆ ಬ್ರೇಕ್ ಹಾಕಲು ಕೇವಲ ಸೆಲೆಬ್ರಿಟಿಗಳ ಸ್ಪಷ್ಟನೆ ಮಾತ್ರ ಸಾಲದು. ಸಾಮಾಜಿಕ ಜಾಲತಾಣದ ಬಳಕೆದಾರರಾದ ತಾವು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ಯಾವುದೇ ಸೆನ್ಸೇಷನಲ್ ಸ್ಟೋರಿ ಕಂಡ ತಕ್ಷಣ ಅದನ್ನು ನಂಬುವ ಮುನ್ನ, ಆಯಾ ಸೆಲೆಬ್ರಿಟಿಗಳ ಅಧಿಕೃತ ಪ್ರೊಫೈಲ್ ಪರಿಶೀಲಿಸುವುದು ಉತ್ತಮ. ಸೈಬರ್ ಕ್ರೈಂ ವಿಭಾಗ ಮತ್ತು ಇನ್‌ಸ್ಟಾಗ್ರಾಮ್ ಸಂಸ್ಥೆಯು ಇಂತಹ ಫೇಕ್ ಕಂಟೆಂಟ್ ಕ್ರಿಯೇಟರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ.

ಇತ್ತೀಚೆಗೆ ನಡೆದಿತ್ತು ಘಟನೆ

ನುಸ್ರತ್ ಬರೂಚಾ ಅವರು ಇತ್ತೀಚೆಗೆ ಅನಗತ್ಯ ವಿವಾದ ಒಂದರಲ್ಲಿ ಸಿಲುಕಿದ್ದರು. ಆರ್​​ಸಿಬಿ ಗೆದ್ದ ವೇಳೆ ಅವರು ಮಾಡಿದ್ದ ಪೋಸ್ಟ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಗೆಲುವಿನ ದೃಶ್ಯವನ್ನು ನುಸ್ರತ್ ಪೋಸ್ಟ್ ಮಾಡಿದ್ದರು. ಆಗ ಹಿನ್ನೆಲೆಯಲ್ಲಿ ಶ್ವಾನ ವಿಚಿತ್ರವಾಗಿ ಕೂಗುತ್ತಿತ್ತು. ಈ ಶಬ್ದವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಯಿತು. ಆ ಬಳಿಕ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂಬ ರೀತಿಯಲ್ಲಿ ನಂಬಿಸುವ ಇನ್​​ಸ್ಟಾ ಸ್ಟೋರಿಯೊಂದು ವೈರಲ್ ಆಗಿತ್ತು. ಇದನ್ನು ಅವರು ಫೇಕ್ ಎಂದು ಈಗ ನಾನಾ ಪಾಟೇಕರ್ ಹೆಸರಲ್ಲಿ ಸ್ಟೋರಿಯೊಂದು ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:30 am, Fri, 12 June 26

Source link

Bengaluru Air Quality: ಇಂದು ಸಿಲಿಕಾನ್ ಸಿಟಿಯಲ್ಲಿ ಶುದ್ಧ ಗಾಳಿ: ಬೆಂಗಳೂರಿನ AQI ಮಟ್ಟದಲ್ಲಿ ಸುಧಾರಣೆ!! – Kannada News

ಬೆಂಗಳೂರು, ಜೂನ್ 12: ಕರ್ನಾಟಕದ ಪ್ರಮುಖ ನಗರಗಳಲ್ಲಿ ಮತ್ತು ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ಅತ್ಯಂತ ಸಮಾಧಾನಕರ ಹಾಗೂ ಆರೋಗ್ಯಕರ ಮಟ್ಟದಲ್ಲಿದೆ. ಮುಂಗಾರು ಮಳೆಯ ಪ್ರಭಾವ ಮತ್ತು ಶುದ್ಧ ಗಾಳಿಯ ಕಾರಣದಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಮುಖ್ಯಾಂಶಗಳು

  • ಮುಂಗಾರು ಮಳೆಯ ಪ್ರಭಾವದಿಂದ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಅತ್ಯಂತ ಉತ್ತಮವಾಗಿದೆ.
  • ಸಿಲಿಕಾನ್ ಸಿಟಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 23-29 ದಾಖಲಾಗಿದೆ.
  • ಮಂಡ್ಯ ಮತ್ತು ಮೈಸೂರು ನಗರಗಳಲ್ಲಿ ಅತ್ಯಂತ ಶುದ್ಧ ಗಾಳಿ ವರದಿಯಾಗಿದೆ.

ಬೆಂಗಳೂರಿನ ಇಂದಿನ ವಾಯು ಗುಣಮಟ್ಟ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟವು ಉತ್ತಮ ವಿಭಾಗದಲ್ಲಿದೆ. ನಗರದ ಸರಾಸರಿ AQI ಪ್ರಮಾಣವು 23 ರಿಂದ 29ರ ಆಸುಪಾಸಿನಲ್ಲಿ ದಾಖಲಾಗಿದೆ. PM2.5 ಕಣಗಳ ಪ್ರಮಾಣ 17 µg/m³ ಮತ್ತು PM10 ಕಣಗಳ ಪ್ರಮಾಣ 21 µg/m³ ನಷ್ಟಿದ್ದು, ಇವು ಸುರಕ್ಷಿತ ಮಿತಿಗಿಂತ ತುಂಬಾ ಒಳಗಿವೆ.

ಬಿಟಿಎಂ ಲೇಔಟ್, ಜಯನಗರ ಮತ್ತು ಸಿಲ್ಕ್ ಬೋರ್ಡ್‌ಗಳಂತಹ ಸದಾ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲೂ ಇಂದು ಮಳೆಯ ಕಾರಣದಿಂದಾಗಿ AQI ಮಟ್ಟವು 55 ಕ್ಕಿಂತ ಕಡಿಮೆ (ಸಾಧಾರಣ) ದಾಖಲಾಗಿದೆ. ಇದು ನಗರದ ಜನರಿಗೆ ಯಾವುದೇ ಆರೋಗ್ಯದ ಅಪಾಯವಿಲ್ಲದೆ ಮುಕ್ತವಾಗಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸೂಕ್ತವಾದ ವಾತಾವರಣವನ್ನು ನಿರ್ಮಿಸಿದೆ.

ಕರ್ನಾಟಕದ ಇತರೆ ಪ್ರಮುಖ ನಗರಗಳ ಸ್ಥಿತಿಗತಿ

ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ಇಂದಿನ ವಾಯು ಗುಣಮಟ್ಟವು ಉತ್ತಮ ಸ್ಥಿತಿಯಲ್ಲಿದೆ. ಇಡೀ ರಾಜ್ಯದಲ್ಲೇ ಅತ್ಯಂತ ಸ್ವಚ್ಛವಾದ ಗಾಳಿಯನ್ನು ಹೊಂದಿರುವ ನಗರಗಳಲ್ಲಿ ಮಂಡ್ಯ ಮುಂಚೂಣಿಯಲ್ಲಿದ್ದು, ಇಲ್ಲಿನ AQI ಕೇವಲ 15ರಷ್ಟು ದಾಖಲಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಕರಾವಳಿಯ ಮಂಗಳೂರಿನಲ್ಲಿ ಇಂದಿನ AQI 25 ರಿಂದ 30ರ ಆಸುಪಾಸಿನಲ್ಲಿದ್ದು, ಸಂಪೂರ್ಣ ಸ್ವಚ್ಛ ಮತ್ತು ಹಸಿರು ಪರಿಸರವನ್ನು ಹೊಂದಿದೆ. ಉತ್ತರ ಕರ್ನಾಟಕದ ಈ ಪ್ರಮುಖ ವಾಣಿಜ್ಯ ನಗರಗಳಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕವು 35 ರಿಂದ 45 ರಷ್ಟಿದ್ದು, ಉತ್ತಮ ಶ್ರೇಣಿಯಲ್ಲೇ ಮುಂದುವರಿದಿದೆ.

ಒಟ್ಟಾರೆಯಾಗಿ, ಜೂನ್ ತಿಂಗಳ ಈ ಮುಂಗಾರು ಅವಧಿಯಲ್ಲಿ ಸುರಿಯುತ್ತಿರುವ ಸತತ ಮಳೆ ಮತ್ತು ಬೀಸುತ್ತಿರುವ ಬಲವಾದ ಗಾಳಿಯು ಕರ್ನಾಟಕದ ನಗರಗಳಲ್ಲಿದ್ದ ಧೂಳು ಮತ್ತು ಹಾನಿಕಾರಕ ಕಣಗಳನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದೆ. ಶ್ವಾಸಕೋಶದ ತೊಂದರೆ ಇರುವವರು ಹಾಗೂ ಮಕ್ಕಳು ಯಾವುದೇ ಆತಂಕವಿಲ್ಲದೆ ಇಂದಿನ ಹಿತಕರವಾದ ವಾತಾವರಣವನ್ನು ಆನಂದಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link