ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ: ಕೊಳೆತ ಸ್ಥಿತಿಯಲ್ಲಿ ಮತದೇಹ ಪತ್ತೆ – Kannada News | 14 Year Old Boy Dies After Falling into BWSSB Pipeline Sump in Bengaluru
ಬೆಂಗಳೂರು, ಫೆಬ್ರವರಿ 02: ತಾಳಗುಣಿ ಸಮೀಪ ಜಲಮಂಡಳಿ (BWSSB) ಕಾಮಗಾರಿ ವೇಳೆ ಇಲಾಖೆ ನಿರ್ಲಕ್ಷ್ಯಕ್ಕೆ ಬಾಲಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಕನಕಪುರ ರಸ್ತೆಯ ಪೈಪ್ಲೈನ್ ರೋಡ್ನಲ್ಲಿ ಕಾಮಗಾರಿ ವೇಳೆ ಮುಚ್ಚಳವಿಲ್ಲದೆ ತೆರೆದಿದ್ದ ಸಂಪಿಗೆ ಬಿದ್ದು ಪ್ರೀತಂ (14) ಮೃತಪಟ್ಟಿದ್ದಾನೆ. ತಾಳಗುಣಿಯ ನಿವಾಸಿ ರಮೇಶ್ ಅವರ ಪುತ್ರ ಪ್ರೀತಂ, ಜನವರಿ 28ರಂದು ನಾಪತ್ತೆಯಾಗಿದ್ದ. ಮೂರು ದಿನಗಳ ಕಾಲ ಕುಟುಂಬಸ್ಥರು ಬಾಲಕನ ಹುಡುಕಾಟ ನಡೆಸಿದ್ದರು. ಜನವರಿ 29ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ…