Category Archives: Blog

Your blog category

Budget 2026 LIVE: ಕೇಂದ್ರ ಬಜೆಟ್​​ಗೆ ಕೌಂಟ್ ಡೌನ್ ಶುರು, ಜನಸಾಮಾನ್ಯರ ಕನಸುಗಳು ಈಡೇರುತ್ತಾ, ಭಗ್ನವಾಗುತ್ತಾ? – Kannada News | Union Budget 2026 27 session live updates in Parliament today budget announcements Nirmala Sitharaman speech latest news in Kannada

ನವದೆಹಲಿ, ಫೆಬ್ರವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು 2026-27ರ ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ಬಾರಿ ಬಜೆಟ್ ಮೇಲೆ ಎಲ್ಲರ ಕುತೂಹಲ ನಿಂತಿರುವುದು ಆದಾಯ ತೆರಿಗೆ ಮೇಲಾಗಲಿ, ಪೆಟ್ರೋಲ್ ಡೀಸೆಲ್ ಮೇಲಾಗಲಿ ಅಲ್ಲ ಬದಲಾಗಿ ಚಿನ್ನ, ಬೆಳ್ಳಿ ಮೇಲೆ. ಯಾಕೆಂದರೆ ಸತತ ಒಂದು ವರ್ಷದಿಂದ ಚಿನ್ನ ಹಾಗೂ ಬೆಳ್ಳಿ ದರ ಗಗನಕ್ಕೇರಿದೆ.

ಸುಮಾರು ಒಂದು ದಶಕದಲ್ಲಿ ಭಾನುವಾರದಂದು ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಿರುವುದು ಇದೇ ಮೊದಲು. ಸೀತಾರಾಮನ್ ಸತತ ಒಂಬತ್ತು ಬಾರಿ ಬಜೆಟ್ ಮಂಡಿಸುವ ದಾಖಲೆಯನ್ನು ನಿರ್ಮಿಸಲಿದ್ದಾರೆ. ಈ ಬಾರಿ ರಕ್ಷಣೆ, ಹಸಿರು ಇಂಧನ ಮತ್ತು ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಉದ್ಯಮದ ಜೊತೆಗೆ, ಮಹಿಳೆಯರು, ರೈತರು, ಯುವಕರು ಮತ್ತು ತೆರಿಗೆದಾರರು ಸಹ ಈ ಬಜೆಟ್‌ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ.

2026-27ನೇ ಸಾಲಿನ ಸಾಮಾನ್ಯ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಸ್ತುತ ಅಧಿಕಾರಾವಧಿಯಲ್ಲಿ ಪ್ರಮುಖ ಬಜೆಟ್ ಎಂದು ಪರಿಗಣಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2026 ರಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಈ ಬಜೆಟ್ ಅನ್ನು ಮಂಡಿಸಲಿದ್ದಾರೆ. ಕಳೆದ ವರ್ಷದ ಬಜೆಟ್ ಅನ್ನು ಜನಪ್ರಿಯ ಬಜೆಟ್ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ಮಧ್ಯಮ ವರ್ಗಕ್ಕೆ ದೊಡ್ಡ ಪರಿಹಾರ ಸಿಕ್ಕಿತ್ತು.

ಮತ್ತಷ್ಟು ಓದಿ: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ

ಆ ಬಜೆಟ್‌ನಲ್ಲಿ, ಆದಾಯ ತೆರಿಗೆ ವಿನಾಯಿತಿ, ಸಂಬಳ ಪಡೆಯುವ ವರ್ಗಕ್ಕೆ ಪ್ರಮಾಣಿತ ಕಡಿತ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದು, ಅಗ್ಗದ ಔಷಧಿಗಳು ಮತ್ತು ವಿಮಾ ವಲಯದಲ್ಲಿನ ಸುಧಾರಣೆಗಳಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ವರ್ಷ ಸರ್ಕಾರದ ಗಮನ ಆರ್ಥಿಕತೆಯ ಮೇಲೆ.

ಭಾರತೀಯ ಷೇರು ಮಾರುಕಟ್ಟೆ ಇಂದು ಎಂದಿನಂತೆ ವಹಿವಾಟು ನಡೆಸಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಬಜೆಟ್ ಕಾರಣ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (NSE) ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ (BSE) ಭಾನುವಾರ, ಫೆಬ್ರವರಿ 1, 2026 ರಂದು ತೆರೆದಿರುತ್ತವೆ. ವಿವಿಧ ಉದ್ಯಮ ಪಾಲುದಾರರು ಸರ್ಕಾರದೊಂದಿಗೆ ತಮ್ಮ ನಿರೀಕ್ಷೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಜನವರಿ 27ರಂದು ನಾರ್ತ್​ ಬ್ಲಾಕ್​​ನಲ್ಲಿರುವ ಬಜೆಟ್ ಪ್ರೆಸ್​​ನಲ್ಲಿ ಹಲ್ವಾ ಸಮಾರಂಭ ನಡೆಸಲಾಯಿತು. ಈ ಸಮಾರಂಭವು 2026-2ರ ಕೇಂದ್ರ ಬಜೆಟ್​ನ ತಯಾರಿ ಪ್ರಕ್ರಿಯೆಯ ಅಂತಿಮ ಹಂತವೆಂದು ಗುರುತಿಸಲಾಗುತ್ತದೆ. ಕೇಂದ್ರ ಹಣಕಾಸು ಸಚಿವರೊಂದಿಗೆ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಇತರ ಹಿರಿಯ ಅಧಿಕಾರಿಗಳು ಇದ್ದರು.  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್​ನ ಕ್ಷಣ ಕ್ಷಣದ ಅಪ್​ಡೇಟ್​ಗಳಿಗಾಗಿ ಟಿವಿ9 ಕನ್ನಡ ವೆಬ್​ಸೈಟ್ ಫಾಲೋ ಮಾಡಿ.

ಬಜೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತೀಯ ಬ್ಯಾಟರ್​ಗಳ ಸಿಡಿಲಬ್ಬರಕ್ಕೆ ಹೊಸ ವಿಶ್ವ ದಾಖಲೆ ನಿರ್ಮಾಣ

Source link

ಜಿಬಿಎ ಚುನಾವಣೆ: ಬ್ಯಾಲೆಟ್ ಪೇಪರ್ ಬಳಕೆಗೆ ವಿರೋಧ, ಇವಿಎಂ ಬಳಸುವಂತೆ ಸಂಘ-ಸಂಸ್ಥೆಗಳ ಪಟ್ಟು – Kannada News | GBA Elections: Opposition to Ballot Paper Grows, Citizens Demand EVM Voting

ಬೆಂಗಳೂರು, ಫೆಬ್ರವರಿ 1: ಆರೇಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಾಲಿಕೆ (GBA) ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ರೆಡಿಯಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ ಕೆಲಸ ಕಾರ್ಯಗಳು ಭರದಿಂದ ಸಾಗಿದ್ದು, ಮತದಾರರ ಅಂತಿಮ ಪಟ್ಟಿ ಹಾಗೂ ಚುನಾವಣಾ ದಿನಾಂಕ‌ ಘೋಷಣೆ ಆಗೋದೊಂದೇ ಬಾಕಿ ಇದೆ. ಉಳಿದಂತೆ 369 ವಾರ್ಡ್ ಹಾಗೂ ಮೀಸಲಾತಿ ಎಲ್ಲವೂ ನಿಗದಿಯಾಗಿದೆ. ಆದರೆ ಈ ಬಾರಿಯ ಚುನಾವಣೆಗೆ ರಾಜ್ಯ ಚುನಾವಣ ಆಯೋಗ ಬ್ಯಾಲೆಟ್ ಪೇಪರ್ ಬಳಕೆ ಮಾಡಲು ಮುಂದಾಗಿರುವುದು ಸಾರ್ವಜನಿಕ ಸಂಘ, ಸಂಸ್ಥೆಗಳ ಸಿಟ್ಟಿಗೆ ಕಾರಣವಾಗಿದೆ.

ಬಿ ಪ್ಯಾಕ್, ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸೇರಿದ ನಗರದ ಹಲವು ಸಂಘ, ಸಂಸ್ಥೆಗಳು ಬ್ಯಾಲೆಟ್ ಪೇಪರ್​​ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಅಲ್ಲದೆ, ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿಗೆ ಈ ಬಗ್ಗೆ ಮನವಿಯನ್ನೂ ಕೊಟ್ಟಿದ್ದು ಬ್ಯಾಲೆಟ್ ಪೇಪರ್ ಕೈ ಬಿಟ್ಟು ಇವಿಎಂ ಅನ್ನೇ ಬಳಸುವಂತೆ ಕೇಳಿಕೊಂಡಿದೆ. ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಬೆಂಗಳೂರಿನ ಪಾಲಿಕೆ ಚುನಾವಣೆ ಬ್ಯಾಲೆಟ್ ಪೇಪರ್​ನಲ್ಲಿ ನಡೆಸಿದರೆ ಅದು ಬೆಂಗಳೂರಿಗೆ ಅವಮಾನ ಮಾಡಿದಂತೆ ಎಂಬುದು ಸಂಘ, ಸಂಸ್ಥೆಗಳ ವಾದ.

ಆದರೆ, ರಾಜ್ಯ ಚುನಾವಣ ಆಯೋಗ ಬ್ಯಾಲೆಟ್ ಪೇಪರ್ ಕೈ ಬಿಡುವ ಲಕ್ಷಣ ಕಾಣುತ್ತಿಲ್ಲ. ಚುನಾವಣೆಗೆ ಬೇಕಾದ ಸಿದ್ಧತೆಗಳು ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಈವರೆಗೆ ಆಯೋಗದಿಂದ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಬ್ಯಾಲೆಟ್ ಪೇಪರ್​​ನಲ್ಲೇ ಚುನಾವಣೆ ಎಂಬುದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪ್ರತಿಕ್ರಿಯೆ.

ಇದನ್ನೂ ಓದಿ: ಇವಿಎಂ ಬಗ್ಗೆ ಕರ್ನಾಟಕದ ಬಹುಪಾಲು ಜನರಿಗಿದೆ ವಿಶ್ವಾಸ: ಸಿಂ ಸಿದ್ದರಾಮಯ್ಯ, ಖರ್ಗೆ ತವರಲ್ಲೇ ಹೆಚ್ಚು!

ಮಾರ್ಚ್ 26ಕ್ಕೆ ಶಾಲಾ ಮಕ್ಕಳ ಪರೀಕ್ಷೆ ಮುಕ್ತಾಯವಾಗಲಿದೆ. ಹೀಗಾಗಿ ಮಾರ್ಚ್ 16ಕ್ಕೆ ಮತದಾರರ ಅಂತಿಮ ಪಟ್ಟಿ ಬಿಡುಗಡೆಗೊಳಿಸಿ ಜೂನ್ 30ರ ಒಳಗಾಗಿ ನೂತನ ಕೌನ್ಸಿಲ್ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರಬೇಕು ಎನ್ನುವುದು ಸುಪ್ರೀಂ ಕೋರ್ಟ್ ಆದೇಶ. ಇದರ ನಡುವೆ ಕೇಳಿ ಬಂದಿರುವ ಬ್ಯಾಲೆಟ್ ಪೇಪರ್​ಗೆ ವಿರೋಧವನ್ನು ರಾಜ್ಯ ಚುನಾವಣಾ ಆಯೋಗ ಹೇಗೆ ನಿಭಾಯಿಸುತ್ತೆ ಎನ್ನುವುದನ್ನು ಕಾದು ನೋಡಬೇಕು.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಇಂದೇ ಮಾಘ ಹುಣ್ಣಿಮೆ ಇದರ ಮಹತ್ವ ತಿಳಿದುಕೊಳ್ಳಿ – Kannada News | Daily Devotional: Magha Purnima, Significance, Rituals, and Benefits

ಬೆಂಗಳೂರು, ಫೆಬ್ರುವರಿ​ 01: ಮಾಘ ಮಾಸದ ಹುಣ್ಣಿಮೆ ದಿನವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಶಸ್ತ್ಯವನ್ನು ಹೊಂದಿದೆ. ಇಂದಿಗೆ ಮಾಘ ಸ್ನಾನವು ಸಮಾಪ್ತಿಗೊಳ್ಳುತ್ತದೆ. ಮಾಗ ಎಂದರೆ ಕನ್ನಡದಲ್ಲಿ ಮಾಗಿರುವುದು ಅಥವಾ ಪರಿಪೂರ್ಣವಾಗಿರುವುದು ಎಂಬ ಅರ್ಥವಿದೆ.

ಈ ದಿನ ಜಪ, ಪೂಜೆ, ಧ್ಯಾನ ಮತ್ತು ದಾನ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮಾಘ ಹುಣ್ಣಿಮೆಯಂದು ಸಕಲ ದೇವತೆಗಳು ಭೂಮಿಗೆ ಆಗಮಿಸುತ್ತಾರೆ ಎಂಬ ನಂಬಿಕೆ ಇದೆ. ಇದರಿಂದಾಗಿ ಈ ದಿನದಂದು ಮಾಡುವ ಆಚರಣೆಗಳಿಂದ ನವಗ್ರಹ ದೋಷ, ಶನಿ ದೋಷ, ಅಕಾಲ ಮರಣ ಮತ್ತು ಅಪವಾದಗಳಂತಹ ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಬಹುದು ಎಂದು ಹೇಳಲಾಗುತ್ತದೆ.

ವ್ರತಾಚರಣೆಯ ಭಾಗವಾಗಿ ಉಪವಾಸ, ವಿಷ್ಣು, ಲಕ್ಷ್ಮಿ, ಕುಲದೇವರ ಪೂಜೆಗಳನ್ನು ಮಾಡಲಾಗುತ್ತದೆ. ಕೆಲವರು ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಆಚರಿಸುತ್ತಾರೆ. ನದಿ ಅಥವಾ ಗಂಗಾ ಸ್ನಾನಕ್ಕೆ ವಿಶೇಷ ಪ್ರಾಶಸ್ತ್ಯವಿದ್ದು, ಮನೆಯಲ್ಲಿ ಸ್ನಾನ ಮಾಡುವಾಗಲೂ “ಹರ ಹರ ಗಂಗೆ” ಎಂದು ಮೂರು ಬಾರಿ ಹೇಳಿ ನೀರನ್ನು ಪ್ರೋಕ್ಷಿಸಿಕೊಳ್ಳಬಹುದು. ಸಂಜೆ ಚಂದ್ರೋದಯದ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ತಾಯಿಯ ಕೃಪೆಗೆ ಪಾತ್ರರಾಗಬಹುದು. ಈ ದಿನ ಮಾಡುವ ದಾನವು ಅಕ್ಷಯ ದಾನವಾಗಿ ಫಲ ನೀಡುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

Source link

ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ – Kannada News | Ram Charan and Upasana Konidela welcome twins Chiranjeevi shares the news

ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ (Upasana Konidela) ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಜನಿಸಿದೆ. ಈ ಮೊದಲು, ಅಂದರೆ 2023ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರು ಇಟ್ಟಿದ್ದರು. ಈಗ ಅವಳಿ ಮಕ್ಕಳು (Twins) ಜನಿಸಿದ ಸುದ್ದಿಯನ್ನು ರಾಮ್ ಚರಣ್ ತಂದೆ ಮೆಗಾ ಸ್ಟಾರ್ ಚಿರಂಜೀವಿ ಅವರು ಖಚಿತಪಡಿಸಿದ್ದಾರೆ.

ಚಿರಂಜೀವಿ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ‘ರಾಮ್ ಚರಣ್ ಮತ್ತು ಉಪಾಸನಾ ಅವರಿಗೆ ಅವಳಿ ಮಕ್ಕಳು ಜನಿಸಿವೆ ಎಂಬುದನ್ನು ತಿಳಿಸಲು ಬಹಳ ಸಂತೋಷ ಆಗುತ್ತಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಅಜ್ಜ-ಅಜ್ಜಿ ಆದ ನಮಗೆ ಈ ಮಕ್ಕಳನ್ನು ಕುಟುಂಬಕ್ಕೆ ಸ್ವಾಗತಿಸುವುದು ಅತ್ಯಂತ ಖುಷಿಯ ಕ್ಷಣವಾಗಿದೆ’ ಎಂದು ಚಿರಂಜೀವಿ ಪೋಸ್ಟ್ ಮಾಡಿದ್ದಾರೆ.

‘ಎಲ್ಲರ ಪ್ರೀತಿ, ಆಶೀರ್ವಾದ, ಶುಭ ಹಾರೈಕೆ ಮತ್ತು ಪ್ರಾರ್ಥನೆಗಳಿಗಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ’ ಎಂದು ಚಿರಂಜೀವಿ ಹೇಳಿದ್ದಾರೆ. ಕಮೆಂಟ್ ಮಾಡಿರುವ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಿದ್ದಾರೆ.

ಮದುವೆಗೂ ಮುನ್ನ ರಾಮ್ ಚರಣ್ ಮತ್ತು ಉಪಾಸನಾ ಅವರು ಡೇಟಿಂಗ್ ಮಾಡುತ್ತಿದ್ದರು. 2011ರ ಡಿಸೆಂಬರ್​​ನಲ್ಲಿ ಅವರ ಎಂಗೇಜ್​ಮೆಂಟ್ ಆಗಿತ್ತು. 2012ರಲ್ಲಿ ಅವರಿಬ್ಬರು ಮದುವೆ ಮಾಡಿಕೊಂಡಿದ್ದರು. 11 ವರ್ಷಗಳ ನಂತರ ಉಪಾಸನಾ ಅವರು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈಗ ಅವರಿಗೆ ಅವಳಿ ಮಕ್ಕಳು ಜನಿಸಿವೆ.

ಇದನ್ನೂ ಓದಿ: ‘ಚಿಕಿರಿ’ ಹಾಡಿನ ಶೂಟ್​ಗೆ ರಾಮ್ ಚರಣ್ ಹಾಗೂ ತಂಡ ಪಟ್ಟ ಕಷ್ಟ ಅಷ್ಟಿಷ್ಟಲ್ಲ..

ಉಪಾಸನಾ ಕೊನಿಡೆಲಾ ಅವರು ಪ್ರೆಗ್ನೆಂಟ್ ಎಂಬುದನ್ನು 2025ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಿಳಿಸಲಾಗಿತ್ತು. ಅವರಿಗೆ ಅವಳಿ ಮಕ್ಕಳು ಜನಿಸಲಿವೆ ಎಂಬ ಸೂಚನೆ ಕೂಡ ನೀಡಲಾಗಿತ್ತು. ‘ಈ ದೀಪಾವಳಿಯಲ್ಲಿ ಡಬಲ್ ಸಂಭ್ರಮ, ಡಬಲ್ ಪ್ರೀತಿ ಮತ್ತು ಡಬಲ್ ಹಾರೈಕೆ’ ಎಂಬ ಕ್ಯಾಪ್ಷನ್​​ನೊಂದಿಗೆ ಸೀಮಂತದ ವಿಡಿಯೋ ಹಂಚಿಕೊಳ್ಳಲಾಗಿತ್ತು. ಫ್ಯಾನ್ಸ್ ನಿರೀಕ್ಷಿಸಿದಂತೆಯೇ ಈಗ ಅವಳಿ ಮಕ್ಕಳು ಜನಿಸಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 01 February​: ಇಂದು ಈ ರಾಶಿರ ಉದ್ಯೋಗದಲ್ಲಿ ಶುಭ

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 01 ಫೆಬ್ರುವರಿ​ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಭಾನುವಾರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು ಇರುತ್ತದೆ. ಪ್ರಸ್ತುತ ಶುಕ್ಲ ಪಕ್ಷವಿದ್ದು, ನಾಳೆಯಿಂದ ಕೃಷ್ಣ ಪಕ್ಷ ಪ್ರಾರಂಭವಾಗಲಿದೆ. ಈ ದಿನ ಚತುರ್ದಶಿ ಮುಗಿದು ಹುಣ್ಣಿಮೆ ಪ್ರಾರಂಭವಾಗುತ್ತದೆ. ಬೆಳಗಿನ ಜಾವ 5 ಗಂಟೆ 52 ನಿಮಿಷಕ್ಕೆ ಹುಣ್ಣಿಮೆ ಪ್ರಾರಂಭವಾಗಿ, ಮರುದಿನ ಬೆಳಗಿನ ಜಾವ 3 ಗಂಟೆ 38 ನಿಮಿಷದ ತನಕ ಮುಂದುವರಿಯುತ್ತದೆ. ಇದು ಒಂದು ಪ್ರಮುಖ ಪರ್ವಕಾಲವಾಗಿದೆ.

ಇಂದಿನ ರಾಹುಕಾಲ ಸಂಜೆ 4 ಗಂಟೆ 54 ನಿಮಿಷದಿಂದ ಸಂಜೆ 6 ಗಂಟೆ 24 ನಿಮಿಷದ ತನಕ ಇರುತ್ತದೆ. ದಿನದ ಶುಭಕಾಲ ಮತ್ತು ಇತರ ಪ್ರಮುಖ ಪರ್ವ ಕಾಲಗಳ ಬಗ್ಗೆಯೂ ಡಾ. ಬಸವರಾಜ ಗುರೂಜಿ ಮಾಹಿತಿ ಒದಗಿಸಿದ್ದಾರೆ.

 

Source link

ವಿಜಯನಗರ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ! – Kannada News | Kotturu Triple Murder: Honour Killing as Brother Kills Family Over Sister’s Love and Pregnancy

ಸಾಂದರ್ಭಿಕ ಚಿತ್ರ (ಎಡ) ಹಾಗೂ ಆರೋಪಿ ಅಕ್ಷಯ್Image Credit source: tv9

ವಿಜಯನಗರ, ಫೆಬ್ರವರಿ 1: ವಿಜಯನಗರ (Vijayanagara) ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ಭೀಕರ ತ್ರಿವಳಿ ಕೊಲೆ ಪ್ರಕರಣದ ಹಿಂದಿನ ಅಚ್ಚರಿಯ ಹಾಗೂ ಆಘಾತಕಾರಿ ಸತ್ಯವನ್ನು ಬೆಂಗಳೂರು (Bangalore) ಪೊಲೀಸರು ಬಯಲಿಗೆಳೆದಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಕ್ಷಯ್, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವುದು ತಿಳಿದು ಮರ್ಯಾದಾ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ತಂಗಿಗೆ ಬೆಂಬಲ ನೀಡಿದ ತಂದೆ, ತಾಯಿಯನ್ನೂ ಕೊಲೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಅಕ್ಷಯ್, ಇದು ಕೇವಲ ದ್ವೇಷದ ಕೊಲೆಯಲ್ಲ, ಕುಟುಂಬದ ಗೌರವ ಉಳಿಸಿಕೊಳ್ಳಲು ಮಾಡಿದ ಕೃತ್ಯ ಎಂದು ಹೇಳಿಕೊಂಡಿದ್ದಾನೆ.

ತಂಗಿ ಅಮೃತ (18) ಮೂರು ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದ ನಂತರ ಆತ ತೀವ್ರ ಕೋಪಗೊಂಡಿದ್ದ. ತಂಗಿಯ ಪ್ರಿಯತಮ ಅನ್ಯ ಸಮುದಾಯಕ್ಕೆ ಸೇರಿದವನಾಗಿರುವುದೂ ಅಕ್ಷಯ್ ಕೋಪಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪಿಯುಸಿ ಓದುತ್ತಿದ್ದ ಹುಡುಗನೊಂದಿಗೆ ಲವ್: ಮೊಬೈಲ್ ಪರಿಶೀಲನೆಯಿಂದ ಹುಟ್ಟಿದ ಅನುಮಾನ

ನಾಲ್ಕು ತಿಂಗಳ ಹಿಂದೆ ಅಕ್ಷಯ್ ತಂಗಿಯ ಮೊಬೈಲ್ ಪರಿಶೀಲಿಸಿದ ವೇಳೆ ಪಿಯುಸಿ ಓದುತ್ತಿದ್ದ ಯುವಕನೊಂದಿಗೆ ಅವಳು ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಬಳಿಕ ಆ ಯುವಕನಿಗೆ ಕರೆ ಮಾಡಿದ ಅಕ್ಷಯ್, ಇಬ್ಬರ ನಡುವೆ ಪ್ರೇಮ ಸಂಬಂಧ ಇರುವುದನ್ನು ತಿಳಿದುಕೊಂಡಿದ್ದ. ಇದರಿಂದ ಕೋಪಗೊಂಡ ಅಕ್ಷಯ್ ತಂಗಿಗೆ ಹಲ್ಲೆ ಮಾಡಿ ಬೆದರಿಸಿದ್ದಾನೆ. ಬಳಿಕ ಅಮೃತ ‘ನಾನು ಪ್ರೀತಿ ಮಾಡುವುದಿಲ್ಲ’ ಎಂದು ಕ್ಷಮೆ ಕೇಳಿದ್ದರೂ, ಜನವರಿ 26ರಂದು ಅವಳು ಗರ್ಭಿಣಿಯಾಗಿದ್ದಾಳೆ ಎಂಬ ವಿಚಾರ ಹೊರಬಿದ್ದಿದೆ.

ತಂಗಿ ಪರ ವಹಿಸಿದ್ದಕ್ಕೆ ತಂದೆ-ತಾಯಿ ಮೇಲೆ ಸಿಟ್ಟು

ಈ ವಿಷಯವನ್ನು ತಾಯಿ ಅಕ್ಷಯ್‌ಗೆ ತಿಳಿಸಿದ್ದರಿಂದ ಆತ ಇನ್ನಷ್ಟು ಕೋಪಗೊಂಡಿದ್ದಾನೆ. ಗರ್ಭಪಾತ ಮಾಡಿಸೋಣ ಎಂದು ಅಕ್ಷಯ್ ಹೇಳಿದ್ದರೂ, ತಂದೆ-ತಾಯಿ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ತನ್ನ ಮಾತಿಗೆ ಬೆಲೆ ಇಲ್ಲವೆಂದು ಭಾವಿಸಿದ ಅಕ್ಷಯ್, ತಂಗಿಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾನೆ.

ಒಂದೊಂದಾಗಿ ನಡೆಯಿತು ಭೀಕರ ಹತ್ಯೆ

ಪೊಲೀಸ್ ತನಿಖೆ ವೇಳೆ ದೊರೆತಿರುವ ಮಾಹಿತಿ ಪ್ರಕಾರ, ಜನವರಿ 26ರಂದು ಮೊದಲು ಅಕ್ಷಯ್ ತನ್ನ ತಾಯಿಯನ್ನು ಕೊಂದಿದ್ದಾನೆ. ಕೊಲೆ ಬಳಿಕ ಸ್ನಾನ ಮಾಡಿ ರಕ್ತಸಿಕ್ತ ಬಟ್ಟೆಗಳನ್ನು ನಾಶಪಡಿಸಿದ್ದಾನೆ. ಸಂಜೆ ತಂಗಿ ಮನೆಗೆ ಬಂದಾಗ ಆಕೆಯನ್ನೂ ಹತ್ಯೆ ಮಾಡಿ, ತಾಯಿಯ ಮೃತದೇಹದ ಪಕ್ಕದಲ್ಲೇ ಮಲಗಿಸಿದ್ದಾನೆ. ಮತ್ತೆ ಸ್ನಾನ ಮಾಡಿ ಅದೇ ಬಟ್ಟೆ ಧರಿಸಿದ್ದಾನೆ.

ರಾತ್ರಿ 10.30ರ ಸುಮಾರಿಗೆ ಕುಡಿದು ಮನೆಗೆ ಬಂದ ತಂದೆ ಸೋಫಾದ ಮೇಲೆ ಕೂತಿದ್ದಾಗ, ಅಕ್ಷಯ್ ಅವರ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾನೆ. ತಂದೆಯ ಮೃತದೇಹವನ್ನೂ ತಾಯಿ ಹಾಗೂ ತಂಗಿಯ ಪಕ್ಕ ಇಟ್ಟಿದ್ದಾನೆ. ನಂತರ ಆ ಕೊಠಡಿಗೆ ಬೀಗ ಹಾಕಿ, ಮತ್ತೆ ಸ್ನಾನ ಮಾಡಿ ಬೇರೆ ಬಟ್ಟೆ ಧರಿಸಿದ್ದಾನೆ.

ಸಾಕ್ಷಿ ನಾಶಕ್ಕೆ ಸಂಚು, ಮಾವನ ಸಹಾಯ

ಮೂರು ಕೊಲೆಗಳ ಬಳಿಕ ರಾತ್ರಿಯಿಡೀ ಟಿವಿ ನೋಡುತ್ತಾ, ತಪ್ಪಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸಿದ್ದಾನೆ. ಬೆಳಗ್ಗೆ ತಾಯಿ ಹಾಗೂ ತಂಗಿಯ ಮೊಬೈಲ್‌ಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದ ಅಕ್ಷಯ್ (ಆತನ ಮೊಬೈಲ್ ಮನೆಯಲ್ಲೇ ಬಿಟ್ಟುಬಂದಿದ್ದ), ಜಯದೇವ ಆಸ್ಪತ್ರೆ ಬಳಿ ಫೋಟೋ ತೆಗೆದು ತನ್ನ ಮೊಬೈಲ್​ಗೆ ಕಳುಹಿಸಿದ್ದಾನೆ. ನಂತರ ಆ ಮೊಬೈಲ್‌ಗಳನ್ನು ಆಸ್ಪತ್ರೆ ಸಮೀಪದ ಡಸ್ಟ್‌ಬಿನ್‌ನಲ್ಲಿ ಎಸೆದಿದ್ದಾನೆ.

ಶವಗಳನ್ನು ಹೂತು ‘ಮಿಸ್ಸಿಂಗ್’ ನಾಟಕವಾಡಲು ತಂತ್ರ

ಈ ಸಂದರ್ಭದಲ್ಲಿ ಅಕ್ಷಯ್ ತನ್ನ ಮಾವ ವಸಂತನನ್ನು ಭೇಟಿ ಮಾಡಿ ಎಲ್ಲ ವಿಚಾರ ತಿಳಿಸಿದ್ದಾನೆ. ಶವಗಳನ್ನು ಹೂತು ‘ಮಿಸ್ಸಿಂಗ್’ ನಾಟಕ ಆಡೋಣ ಎಂಬ ಐಡಿಯಾ ಮಾವನೇ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಜನವರಿ 27ರ ರಾತ್ರಿ ಕೊಟ್ಟೂರಿಗೆ ವಾಪಸ್ ಆಗಿದ್ದ ಅಕ್ಷಯ್, ಟೈಲ್ಸ್ ಕಟರ್ ಹಾಗೂ ಡ್ರಿಲ್ಲಿಂಗ್ ಯಂತ್ರ ತರಿಸಿ, 5×5 ಅಳತೆಯ ಗುಂಡಿ ತೋಡಿ ಮೂವರ ಶವಗಳನ್ನು ಹೂತಿದ್ದಾನೆ.

ವಿಫಲವಾಯ್ತು ಮಿಸ್ಸಿಂಗ್ ನಾಟಕ

ಜನವರಿ 29ರಂದು ಅಕ್ಷಯ್ ಮಾವನೊಂದಿಗೆ ತಿಲಕನಗರ ಪೊಲೀಸ್ ಠಾಣೆಗೆ ಬಂದು ತಂದೆ-ತಾಯಿ-ತಂಗಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ. ಆದರೆ ಬೆಂಗಳೂರು ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ನಾಟಕ ಬಯಲಾಗಿದ್ದು, ಕೊನೆಗೆ ಅಕ್ಷಯ್ ಮತ್ತು ವಸಂತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ವಿಜಯನಗರ ತ್ರಿವಳಿ ಕೊಲೆಗೆ ಟ್ವಿಸ್ಟ್​​: ಮೂವರನ್ನ ಮನೆಯಲ್ಲೇ ಹೂತುಹಾಕಿದ್ದ, ಲವ್​​ ಮ್ಯಾಟರ್​ ಹತ್ಯೆಗೆ ಕಾರಣವಾಯ್ತಾ?

ಸದ್ಯ ಕೊಲೆ, ಸಾಕ್ಷಿ ನಾಶ ಸೇರಿದಂತೆ ಹಲವು ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತಿಲಕನಗರ ಪೊಲೀಸರು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಶೀಘ್ರವೇ ಪ್ರಕರಣವನ್ನು ಕೊಟ್ಟೂರು ಪೊಲೀಸರಿಗೆ ವರ್ಗಾವಣೆ ಮಾಡಲಾಗುತ್ತದೆ. ತಂಗಿ ನಿಜವಾಗಿಯೂ ಗರ್ಭಿಣಿಯಾಗಿದ್ದಳೇ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿಯಬೇಕಿದೆ. ಆಕೆ ಅಪ್ರಾಪ್ತೆಯಾಗಿದ್ದರೆ ಆಕೆಯ ಪ್ರಿಯತಮನ ವಿರುದ್ಧವೂ ಫೋಕ್ಸೋ ಪ್ರಕರಣವೂ ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಮ್ಮನ್ನು ಕರೆಯಲ್ವಾ’; ಮದುವೆ ಆಮಂತ್ರಣ ಕೇಳಿದ್ದಕ್ಕೆ ರಶ್ಮಿಕಾ ಹೇಳಿದ್ದೇನು? – Kannada News | Rashmika Mandanna Smiles and escape after Question about marriage

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ವೃತ್ತಿ ಜೀವನ ಹಾಗೂ ವೈಯಕ್ತಿಕ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ನಟನೆಯ ‘ಗರ್ಲ್​​ಫ್ರೆಂಡ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಅವರ ನಟನೆಯನ್ನು ಎಲ್ಲರೂ ಕೊಂಡಾಡಿದರು. ಈಗ ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರನ್ನು ಮದುವೆ ಆಗುತ್ತಾರೆ ಎನ್ನಲಾಗಿದೆ. ಈ ವಿಷಯದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಪ್ರಶ್ನೆ ಮಾಡಲಾಗಿದೆ. ವಿಷಯ ಗೊತ್ತಿದ್ದೂ, ಗೊತ್ತಿಲ್ಲದಂತೆ ಅವರು ನಡೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಅವರ ನಿಶ್ಚಿತಾರ್ಥ ಕಳೆದ ವರ್ಷ ನಡೆದಿದೆ ಎನ್ನಲಾಗುತ್ತಿದೆ. ಆದರೆ, ನಟಿಯ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಈ ವಿಷಯದಲ್ಲಿ ಅವರು ತುಂಬಾನೇ ಗುಟ್ಟು ಮಾಡುತ್ತಾ ಬರುತ್ತಿದ್ದಾರೆ. ಈಗ ಮದುವೆ ವಿಷಯದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ನೇರವಾಗಿ ಪ್ರಶ್ನೆ ಎದುರಾಗಿದೆ.

ರಶ್ಮಿಕಾ ಮಂದಣ್ಣ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಆಗ ಅಲ್ಲಿದ್ದ ಪಾಪರಾಜಿಗಳು, ‘ನಮ್ಮನ್ನು ಆಮಂತ್ರಿಸುವುದಿಲ್ಲವೇ’ ಎಂದು ಕೇಳಿದರು. ಆಗ ರಶ್ಮಿಕಾ ಮಂದಣ್ಣ ಅವರು ಮನಸ್ಫೂರ್ತಿಯಾಗಿ ನಗುತ್ತಾ ‘ಯಾವ ವಿಷಯಕ್ಕೆ’ ಎಂದು ಕೇಳಿದರು. ಆಗ ಪಾಪರಾಜಿಗಳು, ‘ನಾನು ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ನನಗೂ ಗೊತ್ತಿದೆ, ನಿಮಗೂ ಗೊತ್ತಿದೆ’ ಎಂದರು.

ರಶ್ಮಿಕಾ ಮಂದಣ್ಣ ಅವರು ಈ ವಿಷಯದಲ್ಲಿ ರಹಸ್ಯ ಕಾಪಾಡಿಕೊಂಡು ಬರುತ್ತಿರುವುದರಿಂದ ಮಾತು ಮರೆಸಲು ಸಿನಿಮಾ ವಿಷಯ ತೆಗೆದರು. ಈ ಮೊದಲು ಕೂಡ ರಶ್ಮಿಕಾಗೆ ಮದುವೆ ವಿಷಯದ ಬಗ್ಗೆ ಪ್ರಶ್ನೆ ಮಾಡಲಾಯಿತು. ಆಗ ಅವರು ಸರಿಯಾದ ಸಮಯಕ್ಕೆ ಹೇಳುತ್ತೇನೆ ಎಂದಿದ್ದರು.

ಇದನ್ನೂ ಓದಿ: ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸಹ ಕಲಾವಿದರು. ಸೆಟ್​​​ನಲ್ಲೇ ಇವರ ಮಧ್ಯೆ ಪ್ರೀತಿ ಮೂಡಿತು ಎನ್ನಲಾಗಿದೆ. ಜನವರಿ 26ರಂದು ಇವರು ಉದಯಪುರದಲ್ಲಿ ಮದುವೆ ಆಗೋ ಸಾಧ್ಯತೆ ಇದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ವಿವಾಹದ ಬಳಿಕ ಫೋಟೋ ಹಂಚಿಕೊಂಡು ಇವರು ಖುಷಿ ಸುದ್ದಿ ಹಂಚಿಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 1ರ ದಿನಭವಿಷ್ಯ

ಕೆಲಸದ ಆರಂಭದಲ್ಲಿ ಇರುವ ಉತ್ಸಾಹ ಅದು ಮುಗಿಯುವ ತನಕ ಉಳಿಯುತ್ತಿಲ್ಲ. ನೀವು ಪ್ರಸ್ತಾವ ಮಾಡಿದ ಪ್ರಾಜೆಕ್ಟ್ ಗಳ ಬಗ್ಗೆ ಆರಂಭದಲ್ಲಿ ಉತ್ಸಾಹ ತೋರುವವರು ನಂತರದಲ್ಲಿ ಆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ನಿಮ್ಮ ವೇಗಕ್ಕೆ ಸರಿಯಾಗಿ ಕೆಲವು ಬಾರಿ ಸರಿಯಾದ ಬೆಂಬಲ ದೊರೆಯುತ್ತಿಲ್ಲ ಎಂದಾದಲ್ಲಿ ಖಡ್ಗ ಮಾಲಾ ಸ್ತೋತ್ರದ ಶ್ರವಣ ಮಾಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಎಲ್ಲ ಸನ್ನಿವೇಶದಲ್ಲಿ ಹಾಕಿದ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ನಿರೀಕ್ಷೆ ಹೆಚ್ಚಾದಷ್ಟೂ ಬೇಸರ ಸಹ ಪಡುವಂತೆ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಒತ್ತಡದ ಸನ್ನಿವೇಶಗಳನ್ನು ಎದುರಿಸುವಂತೆ ಆಗಲಿದೆ. ಚಿನ್ನ- ಬೆಳ್ಳಿ ಅಥವಾ ವಜ್ರಾಭರಣ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡುವ ಯೋಗ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮಗೇನೋ ಅತಿ ಉತ್ಸಾಹ ಇರುತ್ತದೆ. ಆದರೆ ಸುತ್ತಮುತ್ತಲಿನವರ ಪರಿಸ್ಥಿತಿ, ಮನಸ್ಥಿತಿಯನ್ನು ಸಹ ಅರ್ಥ ಮಾಡಿಕೊಂಡು ಮಾತುಕತೆ ಆಡುವುದು ಒಳ್ಳೆಯದು. ಹಣಕಾಸಿನ ವಿಚಾರ ಮಾತನಾಡುತ್ತೀರಿ ಅಂತಾದಲ್ಲಿ ಸಾಧ್ಯಾಸಾಧ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ಇರಬೇಕು. ಮನೆ ನಿರ್ಮಾಣ, ಆಸ್ತಿ ಖರೀದಿಯ ಮಾತುಕತೆಗೆ ತೆರಳುತ್ತಿದ್ದೀರಿ ಅಂತಾದಲ್ಲಿ ಮನೆ ದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ಮುಂದುವರಿಯಿರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಶ್ರಮ ಹಾಗೂ ಶಿಸ್ತಿನ ಜೀವನಕ್ಕೆ ಪ್ರಾಮುಖ್ಯ ನೀಡುವ ದಿನ ಇದಾಗಿರುತ್ತದೆ. ನೀವು ಕೈಗೆತ್ತಿಕೊಂಡಿರುವ ಕೆಲಸ- ಕಾರ್ಯಗಳು ನಿಧಾನವಾಗಿ ಮುಂದಕ್ಕೆ ಸಾಗಿದರೂ ದೃಢವಾಗಿ ಗುರಿಯತ್ತ ತಲುಪುವ ಸೂಚನೆ ದೊರೆಯುತ್ತದೆ. ಸರ್ಕಾರಿ ಕೆಲಸಗಳು ಹಾಗೂ ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬ ಆಗಬಹುದು. ಆದರೆ ತಾಳ್ಮೆ- ಸಂಯಮದಿಂದ ಮುಂದುವರಿದಲ್ಲಿ ಯಶಸ್ವಿಯಾಗಿ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 1ರ ದಿನಭವಿಷ್ಯ

ಆರೋಗ್ಯದ ವಿಚಾರದಲ್ಲಿಯೇ ಒಂದು ಬಗೆಯ ಆತಂಕ ಕಾಡುತ್ತಿದೆ. ಅದು ನಿಮ್ಮದೇ ಆರೋಗ್ಯ ಇರಬಹುದು ಅಥವಾ ನಿಮಗೆ ಸಂಬಂಧಿಸಿದವರ ಆರೋಗ್ಯವೇ ಇರಬಹುದು. ಒಟ್ಟಿನಲ್ಲಿ ದೈಹಿಕ ಆರೋಗ್ಯ ಸರಿಯಾಗಲು ಹಾಗೂ ಮಾನಸಿಕವಾಗಿ ಶಾಂತಿ ದೊರೆಯುವುದಕ್ಕೆ ಆದಿತ್ಯ ಹೃದಯ ಸ್ತೋತ್ರದ ಶ್ರವಣ ಮಾಡಿ. ನಿಮಗೆ ಸಾಧ್ಯವಿದ್ದಲ್ಲಿ ಪಠಣ ಮಾಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಬಹಳ ಚಟುವಟಿಕೆಯಿಂದ ಈ ದಿನ ಕಳೆದು ಹೋಗುತ್ತದೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳಿಗೆ, ಮಾರಾಟ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ, ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ನಿಮಗೆ ಹೊಸದಾಗಿ ಪರಿಚಯ ಆಗುವ ವ್ಯಕ್ತಿಗಳ ಮೂಲಕವಾಗಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನವ ವಿವಾಹಿತರಿಗೆ ಸಂತೋಷವಾಗಿ ಕಳೆಯುವಂಥ ಯೋಗ ಇದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ. ವಿವಾಹಿತರು ಇದ್ದಲ್ಲಿ ಸಂಗಾತಿ ಮೂಲಕ ಹಣಕಾಸಿನ ನೆರವು ದೊರೆಯಲಿದೆ. ಕಲೆ, ಫ್ಯಾಷನ್, ಸೌಂದರ್ಯ, ವಿನ್ಯಾಸ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭ ಫಲ ಸಿಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಸರಿ- ತಪ್ಪುಗಳ ಬಗ್ಗೆ ಆತ್ಮವಿಶ್ಲೇಷಣೆ ಮಾಡಿಕೊಳ್ಳುವುದಕ್ಕೆ ಸೂಕ್ತವಾದ ದಿನ ಇದಾಗಿರುತ್ತದೆ. ಗಂಭೀರವಾದ ಸಂಗತಿಗಳ ಬಗ್ಗೆ ಪ್ಲಾನಿಂಗ್- ಬಜೆಟ್ ಸಿದ್ಧ ಮಾಡಿಕೊಳ್ಳುವುದಕ್ಕಾಗಿ ನೀವು ಒಬ್ಬರೇ ದೂರದ ಪ್ರದೇಶಗಳಿಗೆ ಏಕಾಂಗಿಯಾಗಿ ತೆರಳುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಹೀಗಳೆದು ಮಾತನಾಡುವುದರಿಂದ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link