Category Archives: Blog

Your blog category

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 1ರ ದಿನಭವಿಷ್ಯ

ನಿಮ್ಮ ಅದೃಷ್ಟ ಹಾಗೂ ಅವಕಾಶಗಳನ್ನು ಲಾಭವಾಗಿ ಪರಿವರ್ತಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಅದಕ್ಕೆ ಭಾಗ್ಯಾ ಸೂಕ್ತವನ್ನು ಕೇಳಿಸಿಕೊಳ್ಳಿ. ಬೆಳಗ್ಗೆ ವೇಳೆಗೆ ಇದನ್ನು ಯೂಟ್ಯೂಬ್ ಅಥವಾ ಬೇರೆ ಯಾವುದೇ ಮಾಧ್ಯಮದಲ್ಲಿ ಕೇಳಿಸಿಕೊಳ್ಳುವುದರಿಂದ ಆರ್ಥಿಕ ಒತ್ತಡದಿಂದ ಕೂಡ ಹೊರಗೆ ಬರುವುದು ಸಾಧ್ಯವಾಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ಬುದ್ಧಿಶಕ್ತಿ ಪ್ರಖರವಾಗಿ ಇರುತ್ತದೆ. ಇನ್ನು ನಿಮ್ಮ ಸಂವಹನ ಕೌಶಲವು ಬಹಳ ಚುರುಕಾಗಿ ಇರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಶಿಕ್ಷಣ, ತರಬೇತಿ, ಬರವಣಿಗೆ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಉತ್ತಮವಾದ ಫಲ ಸಿಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಬಡ್ತಿ, ವೇತನ ಹೆಚ್ಚಳದ ಬಗ್ಗೆ ಇತರರ ಮೂಲಕ ಸುಳಿವು ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಭಾವನಾತ್ಮಕ ದೃಷ್ಟಿಯಿಂದ ಏರುಪೇರಿನಿಂದ ಕೂಡಿರುವ ದಿನ ಇದಾಗಿರುತ್ತದೆ. ಸಣ್ಣ- ಪುಟ್ಟ ವಿಚಾರಗಳಿಗೂ ಮನಸ್ಸು ತೀವ್ರವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಆದ್ದರಿಂದ ನಿರ್ಧಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿನ ಕೆಲವು ಗೊಂದಲಗಳು ಮಾತುಕತೆ ಮೂಲಕ ಬಗೆಹರಿಸಬಹುದು. ನೀವು ಉದ್ಯೋಗಸ್ಥರಾಗಿದ್ದಲ್ಲಿ ಸವಾಲಿನಿಂದ ಕೂಡಿದ ಪ್ರಾಜೆಕ್ಟ್ ಮುನ್ನಡೆಸುತ್ತಾ ಇದ್ದೀರಿ ಅಂತಾದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಈ ದಿನ ನಿಮ್ಮಲ್ಲಿನ ನಾಯಕತ್ವ ಗುಣವು ಹೆಚ್ಚು ಪ್ರಚಾರಕ್ಕೆ ಬರುತ್ತವೆ. ಉದ್ಯೋಗ ಸ್ಥಳದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಇತರರಿಗೆ ಮಾರ್ಗದರ್ಶನ ಆಗಲಿದೆ. ಮೇಲಧಿಕಾರಿಗಳ ಗಮನ ನಿಮ್ಮತ್ತ ಸೆಳೆಯುವ ಸಾಧ್ಯತೆ ಇದೆ. ಹೊಸ ಜವಾಬ್ದಾರಿಗಳು ನಿಮಗೆ ವಹಿಸಬಹುದು. ನೀವು ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದರೂ ಹಣಕಾಸಿನ ವಿಷಯದಲ್ಲಿ ಸ್ಥಿರತೆ ಕಂಡುಬರುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

Horoscope Today February: ಇಂದು ಈ ರಾಶಿಯವರಿಗೆ ಆಪ್ತರ ಮೇಲೆ ಅತಿ ಕೋಪ – Kannada News | Horoscope Today: February 01, Sunday 2026 Daily Zodiac Predictions and Lucky Signs

ಮೇಷ ರಾಶಿ:

ವೇಗದ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯುವಿರಿ. ವಹಿಸಿಕೊಂಡ ಕೆಲಸವನ್ನು ನಿಶ್ಚಿತ ಸಮಯಕ್ಕೆ ಮುಗಿಸಲು ಆಗದು. ಮನೆಯ ನಿರ್ಮಾಣದ ಕನಸನ್ನು ಕಾಣುವಿರಿ. ನಿದ್ರಾಹೀನತೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡಿ. ನಿಮ್ಮ ಕಾರ್ಯದ ಮೇಲೆ ಕಾರಣಾಂತರಗಳಿಂದ ಗಮನವು ಕಡಿಮೆ ಆಗಬಹುದು. ನಿಮ್ಮ ವಿರುದ್ಧದ ಮಾತುಗಳಿಗೆ ನೀವು ಸಿಟ್ಟಾಗುವಿರಿ. ನಿಮ್ಮ ಉತ್ಸಾಹದಲ್ಲಿ ಮಿತಿ ಮೀರುವುದು ಬೇಡ.

ವೃಷಭ ರಾಶಿ:

ವಿದ್ಯಾರ್ಥಿಗಳು ಅಭ್ಯಾಸಕ್ಕೆ ಆಗುವ ತೊಂದರೆಯನ್ನೇ ಯೋಚಿಸುವರು. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರಗಳು ಮತ್ತೆ ಮುಖ್ಯಸ್ಥಾನಕ್ಕೆ ಬರುವುವು. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ನಿಮಗೆ ಕೊಟ್ಟ ಕೆಲಸವನ್ನು ವಿಳಂಬವಾಗಿ ಮಾಡುವಿರಿ. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಬಂಧುಗಳು ಪ್ರಶ್ನಿಸಬಹುದು. ನಿಮ್ಮ ನಮಗೆ ಗೊತ್ತಿರಲಿ. ಕುರುಡನಂತೆ ಹೋಗುವುದು ಬೇಡ.

ಮಿಥುನ ರಾಶಿ:

ಹಿತಶತ್ರುಗಳು ನಿಮ್ಮ ಅವನತಿಯನ್ನು ನಿರೀಕ್ಷಿಸಬಹುದು. ನಿಮ್ಮ ಕಷ್ಟವನ್ನು ಆಲಿಸುವವರಿಲ್ಲ ಎಂಬ ನೋವಿದೆ. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ಗಣ್ಯರ ಭೇಟಿಯನ್ನು ಮಾಡುವಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಭವಿಷ್ಯವನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಮುಂದುವರಿಯಿರಿ.

ಕರ್ಕಾಟಕ ರಾಶಿ:

ಯಾರ ಜೊತೆ ಸ್ಪರ್ಧಿಸಲೂ ನೀವು ತಯಾರಿರುವಿರಿ. ಗಂಭೀರವಾದ ಸಣ್ಣ ವಿಚಾರವೂ ಮುಂದೆ ದೊಡ್ಡದಾಗಬಹುದು. ಇಂದು ಒಂದು ಕಾರ್ಯವನ್ನು ಮಾಡುವುದು ಕಷ್ಟ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗುವುದು. ಸ್ವಂತ ಭೂಮಿಯಲ್ಲಿ ಏನನ್ನಾದರೂ ಬೆಳೆಯುವ ಬಗ್ಗೆ ಯೋಚಿಸುವಿರಿ. ಒಬ್ಬೊಂಟಿಯಾಗಿ ವಿಹಾರ ಮಾಡುವಿರಿ. ವಿವಾಹಕ್ಕೆ ಅಪರಿಚಿತರಿಂದ ತಡೆ ಬರಬಹುದು.

ಸಿಂಹ ರಾಶಿ:

ಮಕ್ಕಳಿಗೆ ನಿಮ್ಮ ಪ್ರೀತಿಯ ಕೊರತೆಯು ಆದೀತು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಒಳಜಗಳದಿಂದ ಮನಸ್ಸಿಗೆ ಎಲ್ಲಿ ಹೋದರೂ ನೆಮ್ಮದಿ ಕಾಣಿಸದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ನಿಮ್ಮ ಪ್ರೇಮಸಂಬಂಧವು ಸಡಿಲಾಗಬಹುದು. ನಿಮ್ಮ‌ ಜವಾಬ್ದಾರಿಗೆ ಬೆನ್ನು ಹಾಕಿಹೋಗುವುದು ಬೇಡ.‌ ಸಣ್ಣ ಅನಾರೋಗ್ಯಕ್ಕೂ ಔಷಧವನ್ನು ಮಾಡಿ.

ಕನ್ಯಾ ರಾಶಿ:

ವೃತ್ತಿಯ ಬದಲಾವಣೆಯಿಂದ ಉತ್ಸಾಹ ಬರಲಿದೆ. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ನಿಮ್ಮನ್ನು ಶ್ರೇಷ್ಠವೆಂದು ಭಾವಿಸಿ, ಕೆಲಸವನ್ನು ಮಾಡಿ. ನಾಜೂಕಿನಿಂದ ಇಂದಿನ ಕಾರ್ಯವನ್ನು ಮಾಡಿಕೊಳ್ಳುವಿರಿ. ಸಮೂಹ ಕಾರ್ಯದಲ್ಲಿ ನೀವು ಹೆಚ್ಚು ಕಾರ್ಯವನ್ನು ಮಾಡಬೇಕಾಗುವುದು. ಮನೆಯಿಂದ ದೂರದಲ್ಲಿ ನಿಮ್ಮ ಹೊಸ ಜೀವನವನ್ನು ನಡೆಸಬಹುದು. ಇಂದು ಅಧಿಕ ಮಾತನ್ನು ಆಡುವುದು ಬೇಡ.

ತುಲಾ ರಾಶಿ:

ಸ್ವಂತಿಕೆಯನ್ನು ಬೆಳೆಸಿಕೊಳ್ಳುವ ಕಡೆ ನಿಮ್ಮ ಪ್ರಯತ್ನವಿರಲಿ. ದುಃಖವನ್ನು ಕಳೆಯಲು ದುರಭ್ಯಾಸಕ್ಕೆ ಹೋಗಬಹುದು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಇಲ್ಲವೇ ಸುಮ್ಮನೆ ಇರುವಿರಿ. ಸಹೋದ್ಯೋಗಿ ಮಿತ್ರರ ಜೊತೆ ಮಸ್ತಿಯಲ್ಲಿ ಕಾಲ ಕಳೆಯುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸವಾಗಬಹುದು. ಕಾರ್ಯದ ಒತ್ತಡದಿಂದ ಪ್ರೀತಿಯು ಸಡಿಲಾಗುವುದು. ವೃತ್ತಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಕಲಹವಾಗುವ ಕಾರಣ ಸ್ಥಾನವು ಬದಲಾಗಬಹುದು.

ವೃಶ್ಚಿಕ ರಾಶಿ:

ಎಲ್ಲಿಗಾದರೂ ಮಕ್ಕಳನ್ನು ಕರೆದುಕೊಂಡು ಹೋಗಲಿದ್ದೀರಿ. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಸಂಗಾತಿಯ ಮಾತುಗಳು ನಿಮ್ಮ ಅಭಿಮಾನಕ್ಕೆ ತೊಂದರೆ ಕೊಡಬಹುದು. ನೀವು ಅಪಮಾನವನ್ನೂ ನುಂಗಿಕೊಂಡು ಕಾರ್ಯದಲ್ಲಿ ಮಗ್ನರಾಗಬೇಕಾಗುವುದು. ನಿಮ್ಮ ಉದ್ಯಮವನ್ನು ವಿಸ್ತಾರಗೊಳಿಸುವ ಆಲೋಚನೆಯು ಬೇರೆಯವರಿಂದ ಸಿಗಬಹುದು.

ಧನು ರಾಶಿ:

ಕಾನೂನಿನ ಬಗ್ಗೆ ನಿಮಗೆ ಸರಿಯಾದ ಜ್ಞಾನವಿರಲಿ. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ನಿಮ್ಮ ವಿರೋಧಿಗಳ ಬಗ್ಗೆ ನೀವು ಯೋಚಿಸುವ ಅಗತ್ಯವಿಲ್ಲ. ನಿಮ್ಮ ಮಾತಿಗೆ ಸಂಗಾತಿ ಸಿಟ್ಟಾಗುವರು. ನೀವು ನಿಮ್ಮ ಪರಿಸ್ಥಿತಿಯನ್ನು ಇತರರಿಗೆ ತಿಳಿಸುವುದು ಕಷ್ಟವಾಗುವುದು. ನಿಮ್ಮ‌ ಮುಂದಿರುವ ಆಯ್ಕೆಯನ್ನು ನಿರ್ಧಿರಿಸಲಾಗದು. ಸಂತಾನದ ಖುಷಿಯು ಇರಲಿದೆ.

ಮಕರ ರಾಶಿ:

ಭೂಮಿಯ ಮೇಲೆ ಹೂಡಿಕೆ ಮಾಡುವಿರಿ. ಅನ್ಯರ ಕುರಿತಾಗಿ ಸಂತಾಪವನ್ನು ವ್ಯಕ್ತಪಡಿಸುವುದು ವ್ಯರ್ಥವಾಗಬಹುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ವಿದ್ಯಾಭ್ಯಾಸದಲ್ಲಿ ಸಾಮಾನ್ಯ ಪ್ರಗತಿಯನ್ನು ಕಾಣಬಹುದು. ವ್ಯಾವಹಾರಿಕ ವಿಭಾಗದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಮಕ್ಕಳ ಯಶಸ್ಸು ನೀವು ನಿರೀಕ್ಷಿಸಿದಂತೆ ಆಗುವುದು ಕಷ್ಟ. ಕೃಷಿಗೆ ಚಟುವಟಿಕೆಗಳಲ್ಲಿ ಸಂತೋಷ ಕಾಣುವಿರಿ.

ಕುಂಭ ರಾಶಿ:

ಪ್ರಯಾಣದಿಂದ ಆಯಾಸಗೊಂಡು ವಿಶ್ರಾಂತಿ ಪಡೆಯುವಿರಿ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ನಿಮ್ಮಿಂದ ಆಗದ ಕೆಲಸಕ್ಕೆ ಸಮಯವನ್ನು ಕೊಡುವುದು ಬೇಡ. ಕುಟುಂಬವನ್ನು ಸಮಾಧಾನವಾಗಿ ಇಟ್ಟುಕೊಂಡು ಮುನ್ನಡೆಸುವಿರಿ. ಇಂದು ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯನ್ನು ಹೆಚ್ಚು ಮಾಡುವಿರಿ. ದಾಂಪತ್ಯದಲ್ಲಿ ಪರಸ್ಪರ ಅನುರಾಗದ ಕೊರತೆ ಕಾಣಿಸಬಹುದು.

ಮೀನ ರಾಶಿ:

ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ತಾಯಿಯ ಜೊತೆ ವಾಗ್ವಾದ ನಡೆಸುವಿರಿ. ಅನಂತರ ಅದಕ್ಕೆ ಬೇಸರಗೊಳ್ಳುವಿರಿ. ಮಾಧ್ಯಮದಲ್ಲಿ ಕೆಲಸ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು. ವಾಹನ ಖರೀದಿಯಲ್ಲಿ ಗೊಂದಲ ಉಂಟಾಗಬಹುದು.

ಫೆಬ್ರವರಿ 01,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪುಷ್ಯ, ಯೋಗ : ವಿಷ್ಕಂಭ, ಕರಣ : ಗರಜ, ಸೂರ್ಯೋದಯ – 06 – 53 am, ಸೂರ್ಯಾಸ್ತ – 06 – 22 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:57 – 18:23 ಯಮಗಂಡ ಕಾಲ 12:38 – 14:04, ಗುಳಿಕ ಕಾಲ 15:30 – 16:57

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಫಿಲಂ ಚೇಂಬರ್ ಚುನಾವಣೆ: ಹೀಗಿತ್ತು ನೋಡಿ ತಾರಾ ಮೇಳ – Kannada News | Karnataka film chamber of commerce election video

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karntaka Film Chamber) ಇಂದು (ಜನವರಿ 31) ಚುನಾವಣೆ ನಡೆಯಿತು. ಫಿಲಂ ಚೇಂಬರ್​​ ಪಕ್ಕದಲ್ಲಿರುವ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನದಿಂದ ಮತದಾನ ಆರಂಭವಾಯ್ತು. ಸ್ಟಾರ್ ನಟ, ನಟಿಯರು ಸೇರಿದಂತೆ ಹಲವು ತಂತ್ರಜ್ಞರು, ನಿರ್ಮಾಪಕರು, ವಿತರಕರುಗಳು ತಮ್ಮಿಷ್ಟದ ಅಭ್ಯರ್ಥಿಗೆ ಮತದಾನ ಮಾಡಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಮಾಲ ಅವರು ವಿಜೇತರಾಗಿ ಹೊರಹೊಮ್ಮಿದರು. ಅಂತೆಯೇ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಂದರ್ ರಾಜು (ನಿರ್ಮಾಪಕರು) ಇನ್ನೂ ಕೆಲವರು ಗೆದ್ದರು. ಮತದಾನದ ವೇಳೆ ಮೇಳೈವಿಸಿದ್ದ ತಾರಾ ಮೇಳದ ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: 4-1 ಅಂತರದಿಂದ ಸರಣಿ ಗೆದ್ದು ಟಿ20 ವಿಶ್ವಕಪ್​ಗೆ ರೆಡಿ ಎಂದ ಟೀಂ ಇಂಡಿಯಾ – Kannada News | India Dominates New Zealand 4 1 in T20 Series Ahead of 2026 World Cup

2026 ರ ಟಿ20 ವಿಶ್ವಕಪ್‌ಗೆ ಮೊದಲು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಟಿ20 ಸರಣಿಯನ್ನು ಆಡಿದ ಭಾರತ ತಂಡ ಐದು ಪಂದ್ಯಗಳ ಟಿ20ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿತು. ಭಾರತ ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಆದಾಗ್ಯೂ, ಕಿವೀಸ್ ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತಕ್ಕೆ ದಿಟ್ಟ ಉತ್ತರ ನೀಡಿತ್ತು. ಇದೀಗ ಐದನೇ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ಟೀಂ ಇಂಡಿಯಾ, ಸರಣಿ ಗೆಲುವಿನೊಂದಿಗೆ ಟಿ20 ವಿಶ್ವಕಪ್​ಗೆ ಕಾಲಿಡುತ್ತಿದೆ. ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 271 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 225 ರನ್​ಗಳಿಗೆ ಆಲೌಟ್ ಆಗುವ ಮೂಲಕ 46 ರನ್‌ಗಳಿಂದ ಪಂದ್ಯವನ್ನು ಸೋತಿತು.

ಕಿಶನ್ ಚೊಚ್ಚಲ ಟಿ20 ಶತಕ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡದ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 271 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರ ಎಂದಿನಂತೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರಾದರೂ ಇಬ್ಬರೂ 42 ರನ್‌ಗಳೊಳಗೆ ಔಟಾದರು. ನಂತರ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಕೇವಲ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಿತ 103 ರನ್​ಗಳ ಸಿಡಿಲಬ್ಬರದ ಶತಕ ಸಿಡಿಸಿದರು.

ಅರ್ಧಶತಕ ಬಾರಿಸಿದ ಸೂರ್ಯ

ಇತ್ತ ಸೂರ್ಯಕುಮಾರ್ ಯಾದವ್ ಕೂಡ ನಾಯಕನ ಇನ್ನಿಂಗ್ಸ್ ಆಡಿ 30 ಎಸೆತಗಳಲ್ಲಿ 63 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 42 ರನ್​ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಏತನ್ಮಧ್ಯೆ, ನ್ಯೂಜಿಲೆಂಡ್ ಬೌಲರ್‌ಗಳಾದ ಲಾಕಿ ಫರ್ಗುಸನ್ ಮತ್ತು ಕೈಲ್ ಜೇಮಿಸನ್ ತಲಾ ಎರಡು ವಿಕೆಟ್ ಪಡೆದರಾದರೂ, ಕಿವೀಸ್​ನ ಯಾವ ಬೌಲರ್​ಗೂ ರನ್​ ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

ಭಾರತದ ಬೌಲರ್​ಗಳ ಪರಾಕ್ರಮ

ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೂಡ ಉತ್ತಮ ಆರಂಭವನ್ನೇ ನೀಡಿತು. ಆರಂಭಿಕ ಫಿನ್ ಅಲೆನ್ 38 ಎಸೆತಗಳಲ್ಲಿ 80 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ರಚಿನ್ ರವೀಂದ್ರ ಕೂಡ 17 ಎಸೆತಗಳಲ್ಲಿ 30 ರನ್​ಗಳ ಕಾಣಿಕೆ ನೀಡಿದರು. ಇಬ್ಬರೂ ಎರಡನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನೀಡಿದರು. ಆದರೆ ಆ ನಂತರ, ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಅರ್ಷದೀಪ್ ಸಿಂಗ್ ಐದು ವಿಕೆಟ್, ಅಕ್ಷರ್ ಪಟೇಲ್ ಮೂರು ಮತ್ತು ವರುಣ್ ಚಕ್ರವರ್ತಿ ಒಂದು ವಿಕೆಟ್ ಪಡೆದರು. ಪರಿಣಾಮವಾಗಿ, ನ್ಯೂಜಿಲೆಂಡ್ 19.4 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:44 pm, Sat, 31 January 26

Source link

ಕೇಸು ಹಿಂಪಡೆಯಲಿರುವ ‘ಜನ ನಾಯಗನ್’ ನಿರ್ಮಾಪಕ: ಕಾರಣ? – Kannada News | Jana Nayagan producer to withdraw application against CBFC

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ರಾಜಕೀಯ ಕಾರಣಗಳಿಂದಾಗಿ ಬಿಡುಗಡೆ ವಿಳಂಬ ಆಗುತ್ತಲೇ ಇದೆ. ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆದ ‘ಜನ ನಾಯಗನ್’ಗೆ ಸಿಬಿಎಫ್​​ಸಿಯು ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಇದನ್ನು ಪ್ರಶ್ನಿಸಿ ‘ಜನ ನಾಯಗನ್’ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದಾರಾದರೂ ಅಲ್ಲಿಯೂ ಸಹ ‘ಜನ ನಾಯಗನ್’ ನಿರ್ಮಾಪಕರಿಗೆ ಸೂಕ್ತವಾಗಿ ನ್ಯಾಯ ದೊರಕಿಲ್ಲ ಬದಲಿಗೆ ನ್ಯಾಯ ವಿತರಣೆ ತಡ ಆಗುತ್ತಲೇ ಸಾಗುತ್ತಿದೆ. ಇದರಿಂದಾಗಿ ರೋಸಿ ಹೋಗಿರುವ ನಿರ್ಮಾಪಕರು ದೂರನ್ನೇ ಹಿಂಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ಕೆವಿಎನ್ ಪ್ರೊಡಕ್ಷನ್​​ನ ವೆಂಕಟ್ ಅವರು ನ್ಯಾಯಾಲಯದಲ್ಲಿ ಆಗುತ್ತಿರುವ ವಿಳಂಬದಿಂದ ಬೇಸತ್ತು ಕೇಸನ್ನೇ ಹಿಂಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಆದೇಶ ಹೊರಡಿಸಿದ್ದ ಹೈಕೋರ್ಟ್, ಪ್ರಕರಣದಲ್ಲಿ ಈ ಹಿಂದೆ ಹೈಕೋರ್ಟ್​​ನ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ಬದಿಗೆ ಸರಿಸಿರುವುದಲ್ಲದೆ, ಪ್ರಕರಣವನ್ನು ಮತ್ತೆ ಏಕಸದಸ್ಯ ಪೀಠಕ್ಕೆ ವರ್ಗಾಯಿಸಿದೆ. ಅಲ್ಲದೆ ಸಿಬಿಎಫ್​​ಸಿಯ ವಾದವನ್ನು ಆಲಿಸುವಂತೆ ಸೂಚಿಸಿದೆ. ಇದರಿಂದಾಗಿ ವಿಚಾರಣೆ ಇನ್ನಷ್ಟು ತಡ ಆಗುವ ಸಾಧ್ಯತೆ ಇದೆ. ಇದರಿಂದ ಸಿನಿಮಾದ ಬಿಡುಗಡೆ ಇನ್ನೂ ಹೆಚ್ಚು ಸಮಯ ಹಿಡಿಯಲಿದೆ.

ಇದನ್ನೂ ಓದಿ:‘ಜನ ನಾಯಗನ್’ ವಿಳಂಬದಿಂದ ‘ಟಾಕ್ಸಿಕ್’,‘ಕೆಡಿ’ಗೆ ದೊಡ್ಡ ಹೊಡೆತ?

ಅದರ ಬದಲಿಗೆ ಕೇಸು ವಾಪಸ್ ಪಡೆದರೆ ಸಿಬಿಎಫ್​​ಸಿ ಯು, ಈ ಮೊದಲು ನಿರ್ಣಯಿಸಿದಂತೆ ರಿವ್ಯೂ ಕಮಿಟಿಗೆ ಸಿನಿಮಾವನ್ನು ಕಳಿಸುತ್ತದೆ. ಅಲ್ಲಿ ಗರಿಷ್ಠ ಹದಿನೈದು ದಿನಗಳಲ್ಲಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲೇ ಬೇಕಾಗುತ್ತದೆ. ಸಿಬಿಎಫ್​​ಸಿ ಹೇಳುವ ಎಲ್ಲ ಕಟ್​​ಗಳಿಗೆ ನಿರ್ಮಾಪಕರು ಈ ಮುಂಚೆಯೇ ಒಪ್ಪಿದ್ದ ಕಾರಣ ಹಾಗೂ ನ್ಯಾಯಾಲಯದಲ್ಲಿ ಪ್ರಕ್ರಿಯೆ ವಿಳಂಬ ಆಗುತ್ತಿರುವ ಕಾರಣ ಇದೀಗ ನಿರ್ಮಾಪಕರು ಈ ನಿರ್ಣಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ನಿರ್ಮಾಪಕರು ತಮ್ಮ ದಾವೆಯನ್ನು ಹಿಂಪಡೆಯಲಿದ್ದಾರೆ ಅಥವಾ ಮುಂದಿನ ವಿಚಾರಣೆಯಲ್ಲಿ ತಮಗೆ ತಮ್ಮ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಲು ಯಾವುದೇ ಆಕ್ಷೇಪ ಇಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಲಿದ್ದಾರೆ.

‘ಜನ ನಾಯಗನ್’ ಸಿನಿಮಾವು ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ರಾಜಕೀಯ ಪಕ್ಷ ಸ್ಥಾಪಿಸಿ, ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿರುವ ವಿಜಯ್ ಅವರು ‘ಜನ ನಾಯಗನ್’ ಸಿನಿಮಾವನ್ನು ತಮ್ಮ ರಾಜಕೀಯ ಅಜೆಂಡ ಪ್ರಚಾರಕ್ಕೆ ಬಳಸುತ್ತಿದ್ದಾರೆ ಎಂಬ ಗುಮಾನಿಯ ಮೇಲೆ ರಾಜಕೀಯ ಒತ್ತಡಗಳನ್ನು ತಂದು ಸಿನಿಮಾದ ಸೆನ್ಸಾರ್ ಪ್ರಮಾಣ ಪತ್ರವನ್ನು ತಡೆ ಹಿಡಿಯಲಾಗಿದೆ ಎನ್ನಲಾಗುತ್ತಿದೆ. ಸಿಬಿಎಫ್​​ಸಿಯ ಈ ನಡೆಯನ್ನು ಕಾಂಗ್ರೆಸ್ ಕಠಿಣ ಶಬ್ದಗಳಲ್ಲಿ ಟೀಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಕೊಹ್ಲಿ ದಾಖಲೆ ಮುರಿದು ವಿಶ್ವ ದಾಖಲೆ ನಿರ್ಮಿಸಿದ ಸೂರ್ಯಕುಮಾರ್ – Kannada News | Suryakumar Yadav Breaks Kohli Record, Sets T20 World Mark for Fastest 3000 Runs

ಈ ದಾಖಲೆಯ ಜೊತೆಗೆ ಮತ್ತೊಂದು ವಿಶ್ವ ದಾಖಲೆಯನ್ನು ಸೃಷ್ಟಿಸಿದ ಸೂರ್ಯ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 3,000 ರನ್‌ ಪೂರೈಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು. ಸೂರ್ಯ 1,822 ಎಸೆತಗಳಲ್ಲಿ 3,000 ಟಿ20ರನ್‌ಗಳನ್ನು ಪೂರ್ಣಗೊಳಿಸಿದರು. ಈ ಹಿಂದೆ, ಈ ದಾಖಲೆಯನ್ನು ಯುಎಇಯ ಮೊಹಮ್ಮದ್ ವಾಸಿಮ್ ಹೊಂದಿದ್ದರು, ಅವರು 1,947 ಎಸೆತಗಳಲ್ಲಿ 3,000 ಟಿ20 ರನ್‌ ಪೂರೈಸಿದ್ದರು.

Source link

ಬಂಧನಕ್ಕೆ ಬಂದ ಪೊಲೀಸರ ಮೇಲೆಯೇ ‘ಕೈ’ ಮುಖಂಡನ ಪುತ್ರನಿಂದ ನಡೀತಾ ಹಲ್ಲೆ? – Kannada News | Minister’s Aide Son Attacks Cops Amidst Hospital Brawl Case In Davanagere

ದಾವಣಗೆರೆ, ಜನವರಿ 31: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಯುವಕರ ಮೇಲೆ ದಾಳಿ ಪ್ರಕರಣ ಸಂಬಂಧ ಬಂಧಿಸಲು ಬಂದ ಪೊಲೀಸರ ಮೇಲೆಯೇ ಕಾಂಗ್ರೆಸ್​​ ಮುಖಂಡ, ಸಚಿವರ ಆಪ್ತನ ಮಗ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಪೈಲ್ವಾನ್ ಪುತ್ರ ಹಸನ್ ಆರೋಪಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಆಪ್ತರೂ ಆಗಿರುವ ಅಯೂಬ್ ಪೈಲ್ವಾನ್ ಮನೆ ಮುಂದೆ ಭಾರಿ ಹೈಡ್ರಾಮಾ ನಡೆದಿದೆ. ಅಂತಿಮವಾಗಿ ಹಸನ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ದಾವಣಗೆರೆ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ ಎರಡು ಗುಂಪು ಬಡಿದಾಡಿಕೊಂಡಿತ್ತು.ಗಲಾಟೆಯಲ್ಲಿ 6 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ಯುವಕರ ಮೇಲೆ ದಾಳಿ ಮಾಡಿರೋದು ಅಯೂಬ್ ಪೈಲ್ವಾನ್ ಪುತ್ರರು ಎಂಬ ಕಾರಣಕ್ಕೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಬಡಾವಣೆ ಠಾಣೆ ಇನ್ಸ್​​ಪೆಕ್ಟರ್​​ ಗಾಯತ್ರಿ, ಕಾನ್ಸ್​ಟೇಬಲ್​​ಗಳಾದ ಕೆಂಚಪ್ಪ ಮತ್ತು ಹರೀಶ್ ಸೇರಿ ತಂಡ ತೆರಳಿತ್ತು. ಈ ವೇಳೆ ಮನೆಯಲ್ಲಿದ್ದ ಆರೋಪಿ ಹಸನ್, ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡಿರೋ ಪೊಲೀಸ್​​ ಸಿಬ್ಬಂದಿಗಳಾದ ಕೆಂಚಪ್ಪ ಮತ್ತು ಹರೀಶ್​​ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ

ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಗಲಾಟೆ ವಿಚಾರವಾಗಿ ಹಳೇ ದಾವಣಗೆರೆಯಲ್ಲಿ ಬಿಗುವಿನ ವಾತಾರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್​​ ಕೈಗೊಳ್ಳಲಾಗಿದೆ. ಇನ್ನು ನಗರದಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳಲ್ಲಿ ಮೇಲಿಂದ ಮೇಲೆ ಸಚಿವರ ಆಪ್ತರ ಹೆಸರು ಕೇಳಿಬರುತ್ತಿದೆ. ಇತ್ತೀಚಿಗೆ ಡ್ರಗ್ಸ್ ಕೇಸ್​​ನಲ್ಲಿ ಶಾಮನೂರು ವೇದಮೂರ್ತಿ, ಅನ್ವರ್ ಪಾಷಾ ಜೈಲು ಸೇರಿದ್ದಾರೆ. ಅಕ್ಕಿ ಸಾಗಾಣಿಕೆಯಲ್ಲಿ ಜಮೀರ್ ಎಂಬಾತ ಸಿಕ್ಕಿ ಬಿದ್ದಿದ್ದ. ಈ ನಡುವೆ ಅಯೂಬ್ ಪೈಲ್ವಾನ್ ಪುತ್ರ ಹಾಡುಹಗಲೇ ಆಸ್ಪತ್ರೆ ಆವರಣದಲ್ಲಿ ಹೊಡೆದಾಟ ನಡೆಸಿದ್ದಾನೆ. ಜೊತೆಗೆ ಪೊಲೀಸರ ಮೇಲೆ ಹಲ್ಲೆಯ ಆರೋಪವೂ ಕೇಳಿಬಂದಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:23 pm, Sat, 31 January 26

Source link

ಬಿಡುಗಡೆ ಆಗಿ ತಿಂಗಳಿಗೂ ಮುಂಚೆಯೇ ಒಟಿಟಿಗೆ ಬಂದ ಪ್ರಭಾಸ್ ಸಿನಿಮಾ – Kannada News | The Raja Saab movie releasing on OTT soon here is the date

ಪ್ರಭಾಸ್ (Prabhas), ಭಾರತದ ಅತಿ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್. ‘ಬಾಹುಬಲಿ’ ಸಿನಿಮಾ ಸರಣಿಯ ಬಳಿಕ ಪ್ರಭಾಸ್ ರೇಂಜ್ ಬಹಳ ಎತ್ತರಕ್ಕೇರಿದೆ. ಯಾವ ಮಟ್ಟಿಗೆಂದರೆ ಅವರ ಕೆಟ್ಟ ಸಿನಿಮಾಗಳು ಸಹ ನೂರಾರು ಕೋಟಿ ಗಳಿಕೆ ಮಾಡುತ್ತವೆ. ಹಾಗೆಂದ ಮಾತ್ರಕ್ಕೆ ಕೆಟ್ಟ ಸಿನಿಮಾಗಳು ಸೂಪರ್ ಹಿಟ್ ಆಗಿಯೇ ತೀರುತ್ತವೆ ಎಂದೇನೂ ಇಲ್ಲ. ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಿದ್ದರು ಸಹ ಕೆಟ್ಟ ಸಿನಿಮಾ ನೀಡಿದರೆ ಸೋಲುವುದು ಖಾತ್ರಿ ಎಂಬುದಕ್ಕೆ ಪ್ರಭಾಸ್ ಅವರ ಇತ್ತೀಚೆಗಿನ ಸಿನಿಮಾ ಉದಾಹರಣೆ ಆಗಿದೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿತ್ತು, ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿದೆ.

‘ದಿ ರಾಜಾ ಸಾಬ್’ ಸಿನಿಮಾ ಜನವರಿ 09 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಹಾರರ್, ಕಾಮಿಡಿ, ರೊಮ್ಯಾನ್ಸ್ ಒಳಗೊಂಡಿದ್ದ ಈ ಸಿನಿಮಾಕ್ಕೆ ಭಾರಿ ಪ್ರಚಾರವನ್ನು ಪ್ರಭಾಸ್ ಮಾಡಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ದಿನ ಮತ್ತು ಅದರ ಮರು ದಿನ ಓಡಿದ್ದು ಬಿಟ್ಟರೆ ಮೂರನೇ ದಿನಕ್ಕೆ ಖಾಲಿ ಚಿತ್ರಮಂದಿರಗಳು ಖಾಲಿ ಆಗಲಾರಂಭಿಸಿದವು. ಇದೀಗ ಈ ಸಿನಿಮಾ ಬಿಡುಗಡೆ ಆದ ಒಂದು ತಿಂಗಳಿಗೂ ಮುಂಚೆಯೇ ಒಟಿಟಿಗೆ ಬರುತ್ತಿದೆ. ಪ್ರಭಾಸ್ ಅವರ ಈ ಹಿಂದಿನ ಇನ್ಯಾವ ಸಿನಿಮಾ ಸಹ ಬಿಡುಗಡೆ ಆಗಿ ಇಷ್ಟು ಬೇಗ ಒಟಿಟಿಗೆ ಬಂದಿದ್ದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ:ಪ್ರಭಾಸ್ ಸಿನಿಮಾನಲ್ಲಿ ನಟಿಸಲಿರುವ ಸಾಯಿ ಪಲ್ಲವಿ ಆದರೆ ಜೋಡಿ ಆಗಿ ಅಲ್ಲ

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಫೆಬ್ರವರಿ 06 ರಂದು ಒಟಿಟಿಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಬೇರೆ ಬೇರೆ ಭಾಷೆಗಳಲ್ಲಿ ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ. ಸಿನಿಮಾ ಜನವರಿ 09 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು, ಇದೀಗ ಕೇವಲ 28 ದಿನಗಳಲ್ಲೇ ಒಟಿಟಿಗೆ ಬರುತ್ತಿದೆ. ಜಿಯೋ ಹಾಟ್​​ಸ್ಟಾರ್ ಈಗಾಗಲೇ ‘ದಿ ರಾಜಾ ಸಾಬ್’ ಒಟಿಟಿ ಬಿಡುಗಡೆಯ ಪ್ರಚಾರ ಮಾಡುತ್ತಿದೆ.

‘ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸುಮಾರು 400-500 ಕೋಟಿ ಬಜೆಟ್ ಹೂಡಲಾಗಿದೆ. ಆದರೆ ಸಿನಿಮಾ ಬಜೆಟ್​ನ ಅರ್ದದಷ್ಟು ಸಹ ಗಳಿಕೆ ಮಾಡಿಲ್ಲ. ಈ ವರೆಗೆ ಸುಮಾರು 250 ಕೋಟಿ ಹಣವನ್ನಷ್ಟೆ ಸಿನಿಮಾ ಗಳಿಸಿದೆ. ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಂಜಯ್ ದತ್, ಬೊಮನ್ ಇರಾನಿ ಇನ್ನೂ ಕೆಲವು ಪ್ರತಿಭಾವಂತ ನಟರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಈ ಸಿನಿಮಾನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲದರ ಹೊರತಾಗಿಯೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಸಂಜು ಬದಲು ಕಿಶನ್ ವಿಕೆಟ್‌ಕೀಪರ್; ಸ್ಯಾಮ್ಸನ್ ವೃತ್ತಿಜೀವನ ಅಂತ್ಯ

Source link

ಶಾಲಾ ಮಕ್ಕಳ ಮೇಲೆ ಲಕ್ಕುಂಡಿ ಉತ್ಖನನದ ಎಫೆಕ್ಟ್​​: ಧೂಳಿನ ಅಬ್ಬರಕ್ಕೆ ಪುಟಾಣಿಗಳು ಹೈರಾಣು – Kannada News | Lakkundi Dig’s Dust Pollution: School Kids Suffer Allergies and Illness in Gadag

ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯImage Credit source: Google

ಗದಗ, ಜನವರಿ 31: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗಿದೆ. 14 ದಿನಗಳಲ್ಲಿ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಆ ಮೂಲಕ ಗ್ರಾಮದ ಪುರಾತನ ಮಹತ್ವ ಮತ್ತಷ್ಟು ಬೆಳಕಿಗೆ ಬಂದಿದೆ. ಆದ್ರೆ ಮತ್ತೊಂದೆಡೆ ಇದೇ ಉತ್ಖನನ ಕಾರ್ಯ ಶಾಲಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಉಂಟುಮಾಡ್ತಿದೆ. ಧೂಳಿನ ಹಿನ್ನೆಲೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿರುವ ವಿವೇಕಾನಂದ ಶಾಲೆಯ ಪುಟಾಣಿ ಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ.

ಉತ್ಖನನದ ವೇಳೆ ಉಂಟಾಗ್ತಿರೋ ಧೂಳಿನಿಂದ ಎಲ್‌ಕೆಜಿ, ಯುಕೆಜಿ ಮಕ್ಕಳಲ್ಲಿ ಡಸ್ಟ್ ಅಲರ್ಜಿ, ಜ್ವರ, ಕೆಮ್ಮು ಕಾಣಿಸಿಕೊಳ್ಳುತ್ತಿದ್ದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದ ಕಾರಣ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇನ್ನು ಶಾಲೆಯ ಶಿಕ್ಷಕರು ಕೂಡ ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿರುವ ಆರೋಪವೂ ಕೇಳಿಬಂದಿದ್ದು, ಈ ಬಗ್ಗೆ ಮುಖ್ಯ ಶಿಕ್ಷಕರು ಶಿಕ್ಷಕಿಯರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಉತ್ಖನನ ಸ್ಥಳದಲ್ಲಿ ನೀರು ಸಿಂಪಡಣೆ ಕಾರ್ಯ ಆರಂಭಿಸಲಾಗಿದೆ.

ಇದನ್ನೂ ಓದಿ: ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!

ಇನ್ನು ಉತ್ಖನನ ಸ್ಥಳಕ್ಕೆ ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಶೆಜೇಶ್ವರ ಅವರು ಭೇಟಿ ನೀಡಿದ್ದು, ಪತ್ತೆಯಾದ ಶಿಲ್ಪಗಳು, ಶಿಲಾ ಅವಶೇಷಗಳು ಹಾಗೂ ಇತರೆ ಪುರಾತನ ವಸ್ತುಗಳನ್ನು ಮಾಹಿತಿ ಕಲೆ ಹಾಕಿದ್ದಾರೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕೂಡ ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ದೇವಸ್ಥಾನಗಳನ್ನು ವೀಕ್ಷಿಸಿದ ಅವರು, ಕುಂಬಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮನೆಗಳ ಶೀಘ್ರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರಿಹಾರ ಹಣ ನೀಡಲಾಗಿದ್ದು, ಸ್ಥಳಾಂತರ ಪ್ರಕ್ರಿಯೆ ಕೇಂದ್ರ ಪುರಾತತ್ವ ಇಲಾಖೆ ಮೂಲಕ ನಡೆಯಲಿದೆ ಎಂದು ತಿಳಿಸಿದ್ದಾರೆ. ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ 2025–26ನೇ ಸಾಲಿನಲ್ಲಿ ಆರು ದೇವಸ್ಥಾನಗಳಿಗೆ ಒಟ್ಟು 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂಬ ಬಗ್ಗೆಯೂ ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link