Category Archives: Blog

Your blog category

ಪ್ರಧಾನಿ ಮೋದಿ ಜತೆಗೆ ವೆನೆಜುವೆಲಾ ಅಧ್ಯಕ್ಷೆ ಒಪ್ಪಂದ: ಇಂಧನ ಬೆಲೆ ಕಡಿಮೆಯಾಗುವ ಸಾಧ್ಯತೆ? – Kannada News | India Venezuela Forge Stronger Ties in Oil, Pharma Amid Tensions

ಅಮೆರಿಕ ಮತ್ತು ವೆನೆಜುವೆಲಾ ನಡುವಿನ ರಾಜಕೀಯ ಉದ್ವಿಗ್ನತೆಯ ನಡುವೆ, ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ (Delcy Rodríguez) ಅವರು ಶುಕ್ರವಾರ (ಜನವರಿ 30, 2026) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ.ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಮಿಲಿಟರಿ ವಶಪಡಿಸಿಕೊಂಡ ನಂತರ, ಹಂಗಾಮಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಡೆಲ್ಸಿ ರೊಡ್ರಿಗಸ್ ಮತ್ತು ಪ್ರಧಾನಿ ಮೋದಿ ನಡುವೆ ನಡೆದ ಮೊದಲ ಸಂವಾದ ಇದಾಗಿದೆ. ಭಾರತ ಮತ್ತು ವೆನೆಜುವೆಲಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು “ಹೊಸ ಎತ್ತರಕ್ಕೆ” ಕೊಂಡೊಯ್ಯಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.

ನೆಜುವೆಲಾ ವಿಶ್ವದ ದೊಡ್ಡ ತೈಲ ನಿಕ್ಷೇಪ ಹೊಂದಿದ್ದು, ಇಂಧನ ಕ್ಷೇತ್ರದಲ್ಲಿ ಭಾರತದ ಹೂಡಿಕೆಗೆ ಒತ್ತು ನೀಡಲಾಗಿದೆ. ಜತೆಗೆ ಔಷಧೀಯ ಉತ್ಪನ್ನಗಳ ಪೂರೈಕೆಯಲ್ಲಿ ಸಹಕಾರ ಕೂಡ ನೀಡಲಾಗಿದೆ. ಕೃಷಿ ಸುಧಾರಣೆ ಮತ್ತು ಡಿಜಿಟಲ್ ತಂತ್ರಜ್ಞಾನದ ಹಂಚಿಕೆ.ಗಣಿಗಾರಿಕೆ ಮತ್ತು ಪ್ರವಾಸೋದ್ಯಮದಲ್ಲೂ ಬಹುದೊಡ್ಡ ಪಾಲುದಾರಿಯನ್ನು ವಹಿಸಲಿದೆ. ಪ್ರಧಾನಿ ಮೋದಿ ಅವರು ವೆನೆಜುವೆಲಾದಲ್ಲಿ ಶಾಂತಿ, ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಎರಡೂ ದೇಶಗಳು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ಹಿತಾಸಕ್ತಿ ಕಾಪಾಡಲು ನಿಕಟವಾಗಿ ಕೆಲಸ ಮಾಡಲು ನಿರ್ಧರಿಸಿವೆ.

ಜನವರಿ ಆರಂಭದಲ್ಲಿ ಅಮೆರಿಕವು ವೆನೆಜುವೆಲಾ ಮೇಲೆ ನಡೆಸಿದ ಕಾರ್ಯಾಚರಣೆಯ ನಂತರ ಅಲ್ಲಿನ ರಾಜಕೀಯ ಪರಿಸ್ಥಿತಿ ಅಸ್ಥಿರವಾಗಿದ್ದರೂ, ಭಾರತದೊಂದಿಗೆ ಆರ್ಥಿಕ ಮತ್ತು ಆಯಕಟ್ಟಿನ ಸಂಬಂಧವನ್ನು ಗಟ್ಟಿಗೊಳಿಸಲು ವೆನೆಜುವೆಲಾ ಮುಂದಾಗಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಅಮೆರಿಕವು ವೆನೆಜುವೆಲಾ ಮೇಲಿನ ತೈಲ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದ ನಂತರ, ಭಾರತೀಯ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ (RIL) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ವೆನೆಜುವೆಲಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಆಸಕ್ತಿ ತೋರಿವೆ.

ಷ್ಯಾದ ತೈಲದಂತೆ ವೆನೆಜುವೆಲಾ ಕೂಡ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ನೀಡುವ ಸಾಧ್ಯತೆ ಇದೆ. ಇದು ಭಾರತದ ಇಂಧನ ದರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಭಾರತದ ಸಂಸ್ಕರಣಾಗಾರಗಳು ವೆನೆಜುವೆಲಾದ ‘ಭಾರೀ ಕಚ್ಚಾ ತೈಲ’ವನ್ನು ಸಂಸ್ಕರಿಸಲು ಬೇಕಾದ ಸುಧಾರಿತ ತಂತ್ರಜ್ಞಾನವನ್ನು ಹೊಂದಿವೆ, ಇದು ಉಭಯ ದೇಶಗಳಿಗೆ ಲಾಭದಾಯಕವಾಗಿದೆ. ವೆನೆಜುವೆಲಾದಲ್ಲಿ ಭಾರತದ ONGC ವಿದೇಶ್ ಲಿಮಿಟೆಡ್ (OVL) ಹೂಡಿಕೆ ಮಾಡಿರುವ ಯೋಜನೆಗಳಿಂದ ಬರಬೇಕಾದ ಸುಮಾರು 600 ಮಿಲಿಯನ್ ಡಾಲರ್ ಲಾಭಾಂಶ ಬಾಕಿ ಇದೆ. ಹೊಸ ಒಪ್ಪಂದದ ಪ್ರಕಾರ, ವೆನೆಜುವೆಲಾ ಈ ಬಾಕಿ ಹಣದ ಬದಲಿಗೆ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸಲು ಒಪ್ಪಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಕ್ಯೂಬಾಗೆ ತೈಲ ಪೂರೈಸುವ ದೇಶಗಳಿಗೆ ಟ್ರಂಪ್ ಬೆದರಿಕೆ

ಕೇವಲ ತೈಲವಲ್ಲದೆ, ಔಷಧೀಯ ಉತ್ಪನ್ನಗಳು , ಕೃಷಿ ಯಂತ್ರೋಪಕರಣಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ನೀಡಲು ಉಭಯ ದೇಶಗಳು ಚರ್ಚಿಸಿವೆ. ಡಾಲರ್ ಅವಲಂಬನೆಯನ್ನು ಕಡಿಮೆ ಮಾಡಲು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಮಾಡುವ ಸಾಧ್ಯತೆಗಳ ಬಗ್ಗೆಯೂ ಪ್ರಾಥಮಿಕ ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಿರುವಾಗ, ಭಾರತವು ತನ್ನ ತೈಲ ಪೂರೈಕೆಯನ್ನು ವೈವಿಧ್ಯಗೊಳಿಸಲು ವೆನೆಜುವೆಲಾವನ್ನು ಒಂದು ವಿಶ್ವಾಸಾರ್ಹ ಪಾಲುದಾರನಾಗಿ ನೋಡುತ್ತಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಹ್ಯಾಟ್ರಿಕ್’ ಹೀರೋ ಸ್ಯಾಮ್ ಕರನ್

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಸ್ಯಾಮ್ ಕರನ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ. ಪಲ್ಲೆಕೆಲ್ಲೆ ಸ್ಟೇಡಿಯಂನಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 16.2 ಓವರ್​ಗಳಲ್ಲಿ 133 ರನ್​ಗಳಿಸಿ ಆಲೌಟ್ ಆಯಿತು.

ಹೀಗೆ ಲಂಕಾ ಬ್ಯಾಟರ್​ಗಳು ಬೇಗನೆ ಆಲೌಟ್ ಆಗಲು ಮುಖ್ಯ ಕಾರಣ ಸ್ಯಾಮ್ ಕರನ್. 16ನೇ ಓವರ್​ನ ಕೊನೆಯ ಮೂರು ಎಸೆತಗಳಲ್ಲಿ ದಸುನ್ ಶಾನಕ, ಮಹೀಶ್ ತೀಕ್ಷಣ ಹಾಗೂ ಮತೀಶ ಪತಿರಾಣ ವಿಕೆಟ್ ಕಬಳಿಸಿ ಸ್ಯಾಮ್ ಕರನ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ 2ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಕ್ರಿಸ್ ಜೋರ್ಡನ್ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ವಿಕೆಟ್​​ನ ಸಾಧನೆ ಮಾಡಿದ್ದರು.

ಇನ್ನು ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ, ಈ ಪಂದ್ಯದಲ್ಲಿ 17 ಓವರ್​ಗಳಲ್ಲಿ 133 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 15 ಓವರ್​ಗಳಲ್ಲಿ 125 ರನ್ ಕಲೆಹಾಕಿದ್ದರು. ಈ ವೇಳೆ ಮತ್ತೆ ಮಳೆ ಬಂದಿದ್ದರಿಂದ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಇಂಗ್ಲೆಂಡ್ ತಂಡವನ್ನು 11 ರನ್​ಗಳಿಂದ ವಿಜಯಿ ಎಂದು ಘೋಷಿಸಲಾಯಿತು.

 

 

Source link

ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್

ಧನಂಜಯ್ ಅವರು ತಂದೆ ಆಗುತ್ತಿದ್ದಾರೆ. ಧನ್ಯತಾ ಜೊತೆ ಅವರು ಜೀವನದ ಮತ್ತೊಂದು ಹಂತಕ್ಕೆ ಹೋಗುತ್ತಿದ್ದಾರೆ. ಧನಂಜಯ್ ತಂದೆ ಆಗುತ್ತಿರುವ ವಿಷಯ ಇನ್​​ಸ್​​ಟಾಗ್ರಾಮ್​​ಗೂ ಗೊತ್ತಾಗಿ ಬಿಟ್ಟಿದೆಯಂತೆ! ‘ಇನ್​​ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಈಗ ಮಗುವಿಗೆ ಸಂಬಂಧಿಸಿದ ರೀಲ್ಸ್​​​ಗಳೇ ಬರುತ್ತವೆ. ಈ ಹಂತವನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ’ ಎಂದು ಧನಂಜಯ್ ಅವರು ಖುಷಿಯಿಂದ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಬರಿಮಲೆ ಚಿನ್ನ ಕಳವು ಪ್ರಕರಣ; ‘ಕಾಂತಾರ’ ನಟನ ವಿಚಾರಣೆ – Kannada News | Kantara Actor Jayaram Questioned in Sabarimala Gold Theft Case by SIT

ದೇಶಾದ್ಯಂತ ಸಂಚಲನ ಸೃಷ್ಟಿಸಿದ ಶಬರಿಮಲೆ ಕಳವು ಪ್ರಕರಣದಲ್ಲಿ (Sabarimala Gold Theft Case) ‘ಕಾಂತಾರ: ಚಾಪ್ಟರ್ 1’ ನಟ ಜಯರಾಮ್ ಅವರನ್ನು ಕರೆದು ವಿಚಾರಣೆ ನಡೆಸಲಾಗಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಮೊದಲಾದ ಚಿತ್ರರಂಗದಲ್ಲಿ ಜಯರಾಮ್ ಆ್ಯಕ್ಟೀವ್ ಆಗಿದ್ದಾರೆ. ಶಬರಿಮಲೆಯ ಪ್ರಕರಣದ ಪ್ರಮುಖ ಆರೋಪಿ ಜೊತೆ ಜಯರಾಮ್ ಲಿಂಕ್ ಹೊಂದಿರುವ ಅನುಮಾನ ಇರುವುದರಿಂದ ವಿಶೇಷ ತನಿಖಾ ತಂಡ (ಎಸ್​​ಐಟಿ) ಈ ವಿಚಾರಣೆಯನ್ನು ಕೈಗೊಂಡಿದೆ.

2019ರಲ್ಲಿ ಶಬರಿಮಲೆಯ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ಸಂದರ್ಭದಲ್ಲಿ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಉನ್ನಿಕೃಷ್ಣನ್ ಪೊಟ್ಟಿ ಪ್ರಮುಖ ಆರೋಪಿ ಆಗಿದ್ದಾನೆ. ಆತನ ಜೊತೆ ಜಯರಾಮ್ ಒಡನಾಟ ಹೊಂದಿರುವುದರಿಂದ ವಿಚಾರಣೆ ಎದುರಿಸಬೇಕಾಗಿದೆ. ವಿಚಾರಣೆ ವೇಳೆ ಪರಿಯ ಹಾಗೂ ಭೇಟಿ ಬಗ್ಗೆ ಪ್ರಶ್ನೆ ಮಾಡಲಾಗಿದೆಯಂತೆ.

ಉನ್ನಿಕೃಷ್ಣನ್ 2019ರಲ್ಲಿ ಚೆನ್ನೈನಲ್ಲಿ ಪೂಜೆ ಆಯೋಜನೆ ಮಾಡಿದ್ದ. ಈ ಪೂಜೆಯಲ್ಲಿ ಜಯರಾಮ್ ಕೂಡ ಭಾಗಿ ಆಗಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಎಸ್​​ಐಟಿ ಗಮನಕ್ಕೂ ಬಂದಿದ್ದು, ವಿಚಾರಣೆ ನಡೆಸಿದ್ದಾರೆ.

ಈ ರೀತಿ ಉನ್ನಿಕೃಷ್ಣನ್ ಅವರು ಆಯೋಜನೆ ಮಾಡಿದ ಪೂಜೆಗಳಲ್ಲಿ ಎಷ್ಟು ಬಾರಿ ಜಯರಾಮ್ ಹಾಜರಾಗಿದ್ದರು ಎಂದು ಪ್ರಶ್ನಿಸಲಾಗಿದೆ. ಆರೋಪಿ ಜೊತೆ ಆರ್ಥಿಕ ಅಥವಾ ವೈಯಕ್ತಿಕ ಸಂಬಂಧವಿದೆಯೇ ಎಂದು ಕೇಳಲಾಗಿದೆ. ಸಂಪೂರ್ಣ ವಿಚಾರಣೆ ಆ ಪೂಜೆ ಹಾಗೂ ಅವರ ಪರಿಚಯ ಅಥವಾ ಒಡನಾಟದ ಬಗ್ಗೆ ಮಾತ್ರ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪ ದೇಗುಲ ಚಿನ್ನ ಕಳವು ಪ್ರಕರಣ: ಬೆಂಗಳೂರು, ಬಳ್ಳಾರಿ ಸೇರಿ ಹಲವೆಡೆ ಇಡಿ ದಾಳಿ

ಜಯರಾಮ್ ಅವರು ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರು. ಅವರು ‘ಘೋಸ್ಟ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅವರು ಮಲಯಾಳಂನವರೇ ಆದರೂ ಕನ್ನಡವನ್ನು ಶುದ್ಧವಾಗಿ ಮಾತನಾಡುತ್ತಾರೆ. ಪರಭಾಷೆಯಲ್ಲೂ ಸಿನಿಮಾಗಳಿಗೆ ಅವರೇ ಡಬ್ ಮಾಡುತ್ತಾರೆ. ಇದು ಅವರ ಹೆಚ್ಚುಗಾರಿಕೆ. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಾಜಶೇಖರ ಪಾತ್ರ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಾವನನ್ನು ಜೀವಂತ ಸುಟ್ಟ ಸೊಸೆಯ ಪ್ರಿಯಕರ, ಬೆಂಕಿಯಲ್ಲಿ ಒದ್ದಾಡಿದ ರೈತ – Kannada News | Kadampuliyur Immolation: Farmer Rajendran Killed in Brutal Petrol Attack; Illicit Affair Link

ತಮಿಳುನಾಡು, ಜ.31: ಕಡಲೂರು (Cuddalore) ಜಿಲ್ಲೆಯಲ್ಲಿ ನಡೆದ ಈ ಘಟನೆ ಅತ್ಯಂತ ಭೀಕರವಾಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಡಲೂರು ಜಿಲ್ಲೆಯ ಪನ್ರುಟಿ (Panruti) ಸಮೀಪದ ಕಡಂಪುಲಿಯೂರು (Kadampuliyur) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಲಿಗಂಪಟ್ಟು ಗ್ರಾಮದ ನಿವಾಸಿ ಮತ್ತು ರೈತ ರಾಜೇಂದ್ರನ್ (70) ಸಾವನ್ನಪ್ಪಿದ್ದಾರೆ. ರಾಜೇಂದ್ರನ್ ಅವರು ತಮ್ಮ ಸ್ನೇಹಿತ ಕಂದನ್ ಎಂಬುವವರ ಜೊತೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ವೇಳೆ ಒಂದು ವ್ಯಾನ್‌ನಲ್ಲಿ ಬಂದ ದುಷ್ಕರ್ಮಿಗಳ ತಂಡ ಇವರನ್ನು ಅಡ್ಡಗಟ್ಟಿದ್ದಾರೆ. ಆ ಸಮಯದಲ್ಲಿ ಹೆದರಿದ ಕಂದನ್ ಸ್ಥಳದಿಂದ ಓಡಿಹೋಗಿದ್ದಾರೆ. ಒಂಟಿಯಾದ ರಾಜೇಂದ್ರನ್ ಅವರ ಮೇಲೆ ದಾಳಿ ಮಾಡಿದ ಈ ಅಪರಿಚಿತ ವ್ಯಕ್ತಿಗಳು ಅವರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ರಾಜೇಂದ್ರನ್ ಅವರು ಬೆಂಕಿಯ ಜ್ವಾಲೆಯಲ್ಲಿ ರಸ್ತೆಯಲ್ಲೇ ಓಡುತ್ತಾ ಸಹಾಯಕ್ಕಾಗಿ ಕಿರುಚುತ್ತಿದ್ದಾರೆ.

ಈ ಭೀಕರ ದೃಶ್ಯವು ಸಿಸಿಟಿವಿ ಕೆಮರಾಗಳಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ನಡುಗಿಸುವಂತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದೊಂದು ಕೌಟುಂಬಿಕ ಕಲಹ ಅಥವಾ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಹತ್ಯೆ ಎಂದು ಹೇಳಲಾಗಿದೆ. ರಾಜೇಂದ್ರನ್ ಅವರ ಸೊಸೆಯೊಂದಿಗೆ ಮಣಿಕಂಠನ್ ಎಂಬ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಇದನ್ನು ರಾಜೇಂದ್ರನ್ ಅವರು ಬಲವಾಗಿ ವಿರೋಧಿಸಿದ್ದರು. ಇದೇ ದ್ವೇಷದಿಂದ ಮಣಿಕಂಠನ್ ಮತ್ತು ಅವನ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ರಾಜ್‌ಕೋಟ್ ಬಳಿ ಸೇತುವೆಯಿಂದ ಬಿದ್ದು ಹೊತ್ತಿ ಉರಿದ ಕಾರು; ಮೂವರು ಸಾವು

ಘಟನೆಯ ನಂತರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ನಾಲ್ವರು ಆರೋಪಿಗಳನ್ನು (ಮಣಿಕಂಠನ್ ಮತ್ತು ಅವನ ಸಹಚರರು ಹಾಗೂ ರಾಜೇಂದ್ರನ್ ಅವರ ಸೊಸೆ) ಬಂಧಿಸಿದ್ದಾರೆ.ರಾಜೇಂದ್ರನ್ ಅವರು ಸುಮಾರು 70% ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಕಿಲ್ಪಾಕ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ದುರದೃಷ್ಟವಶಾತ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯು ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ ಎಂದು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ (AIADMK) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರನ್ನು ಕಡಲೂರು ಕೇಂದ್ರ ಕಾರಾಗೃಹಕ್ಕೆ (Cuddalore Central Prison) ರವಾನಿಸಲಾಗಿದೆ. ಘಟನೆಯ ಭೀಕರತೆಯನ್ನು ಗಮನಿಸಿ ಪೊಲೀಸರು ಈ ಪ್ರಕರಣವನ್ನು ‘ಫಾಸ್ಟ್ ಟ್ರ್ಯಾಕ್’ ಕೋರ್ಟ್ ಮೂಲಕ ಶೀಘ್ರವಾಗಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:54 am, Sat, 31 January 26

Source link

ಬೀದರ್​ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ! ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಗಂಭೀರ ಗಾಯ – Kannada News | Suspicious Blast in Bidar’s Molkera Injures 5 Kids

ಬೀದರ್​ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ!

ಬೀದರ್, ಜನವರಿ 31: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೋಳಕೇರಾ (Bidar) ಗ್ರಾಮದಲ್ಲಿ ಶುಕ್ರವಾರ ಬೆಳಂಬೆಳಿಗ್ಗೆ ಸಂಭವಿಸಿದ ಅನುಮಾನಾಸ್ಪದ ವಸ್ತು ಸ್ಫೋಟದಿಂದ ಗ್ರಾಮದಲ್ಲಿ ಆತಂಕ ಮೂಡಿದೆ. ಮೋಳಗಿ ಮಾರಯ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಗೆ ತೆರಳುತ್ತಿದ್ದ ಐದು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೈದ್ರಾಬಾದ್ ಆಸ್ಪತ್ರೆಗೆ ಗಾಯಾಳುಗಳ ರವಾನೆ

ಸ್ಫೋಟದಲ್ಲಿಅನ್ವರ್ ‌ಸಾಬ್(18) ಮತ್ತು ಜಬ್ಬಾರ್ ಸಾಬ್(65) ಎಂಬ ಯುವಕರಿಗೆ ತೀವ್ರ ಗಾಯಗಳಾಗಿದ್ದು,ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ಪರಿಜಾರ್(8), ಅಜೀಜ್(5), ಬುಶ್ರಾ(4)ಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಮಕ್ಕಳಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ಪಡೆದ ತಕ್ಷಣ ಹುಮ್ನಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ್ಕೆ ಕಾರಣವಾದ ವಸ್ತುವಿನ ಮಾದರಿಗಳನ್ನು ಸಂಗ್ರಹಿಸಲು ಶೀಘ್ರದಲ್ಲೇ ಸೋಕೋ (SOCO) ತಂಡವನ್ನು ಸ್ಥಳಕ್ಕೆ ಕರೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತೆರಳಿ ಪರಿಶೀಲನೆ ನಡೆಸಿಸಿದ್ದಾರೆ.

6 ತಿಂಗಳಲ್ಲಿ ಎರಡನೇ ಬಾರಿಗೆ ಸ್ಫೋಟ

ಕಳೆದ ಆರು ತಿಂಗಳ ಅವಧಿಯಲ್ಲಿ ಇದೇ ಗ್ರಾಮದಲ್ಲಿ ಇದು ಎರಡನೇ ಬಾರಿ ಸಂಭವಿಸಿರುವ ಸ್ಫೋಟವಾಗಿದೆ. ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಗ್ರಾಮಸ್ಥರಲ್ಲಿ ಭೀತಿ ಮತ್ತು ಆತಂಕ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾಗೆ ಗುಡ್ ನ್ಯೂಸ್ – Kannada News | T20 World Cup 2026: Tilak Varma, Washington Sundar’s recovery going as per plan

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.

Source link

Gold Rate Today: ಸಿಕ್ಕಾಪಟ್ಟೆ ಕುಸಿದ ಚಿನ್ನ, ಬೆಳ್ಳಿ ಬೆಲೆ; ಇಲ್ಲಿದೆ ಪಟ್ಟಿ – Kannada News | Gold Price Today on 31st January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 31: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಹಾಕುಸಿತ ಮುಂದುವರಿದಿದೆ. ನಿನ್ನೆ ಗ್ರಾಮ್​ಗೆ 800 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ (gold rates) ಇವತ್ತು ಶನಿವಾರ 920 ರೂಗಳಷ್ಟು ತಗ್ಗಿದೆ. ಎರಡು ದಿನದಲ್ಲಿ ಒಂದೂವರೆ ಸಾವಿರ ರೂಗೂ ಅಧಿಕದಷ್ಟು ಬೆಲೆ ಕಡಿಮೆ ಆಗಿದೆ. ವಿದೇಶಗಳಲ್ಲೂ ಅನೇಕ ಕಡೆ ಚಿನ್ನದ ಬೆಲೆ ಕುಸಿದಿದೆ. ಬೆಳ್ಳಿ ಬೆಲೆಯಂತೂ ಮಹಾ ಕುಸಿತ ಕಂಡಿದೆ. ಒಂದೇ ದಿನ 45 ರೂಗಳಷ್ಟು ಬೆಲೆ ಇಳಿಕೆ ಆಗಿದೆ. ಎರಡು ದಿನದಲ್ಲಿ ಬರೋಬ್ಬರಿ 60 ರೂಗಳಷ್ಟು ತಗ್ಗಿದೆ ಬೆಳ್ಳಿ ಬೆಲೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,47,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,60,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 35,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,47,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 35,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 35,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 31ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,058 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,720 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,044 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 350 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,058 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,720 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 350 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,720 ರೂ
  • ಚೆನ್ನೈ: 14,900 ರೂ
  • ಮುಂಬೈ: 14,720 ರೂ
  • ದೆಹಲಿ: 14,735 ರೂ
  • ಕೋಲ್ಕತಾ: 14,720 ರೂ
  • ಕೇರಳ: 14,720 ರೂ
  • ಅಹ್ಮದಾಬಾದ್: 14,725 ರೂ
  • ಜೈಪುರ್: 14,735 ರೂ
  • ಲಕ್ನೋ: 14,735 ರೂ
  • ಭುವನೇಶ್ವರ್: 14,720 ರೂ

ಇದನ್ನೂ ಓದಿ: ಈ ಡೇಂಜರಸ್ ಆ್ಯಪ್​ಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು; ನಿಮ್ಮ ಫೋನ್​ನಲ್ಲಿ ಇವು ಇವೆಯಾ ಪರಿಶೀಲಿಸಿ…

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 655 ರಿಂಗಿಟ್ (15,236 ರುಪಾಯಿ)
  • ದುಬೈ: 546.75 ಡಿರಾಮ್ (13,649 ರುಪಾಯಿ)
  • ಅಮೆರಿಕ: 150 ಡಾಲರ್ (13,754 ರುಪಾಯಿ)
  • ಸಿಂಗಾಪುರ: 201.90 ಸಿಂಗಾಪುರ್ ಡಾಲರ್ (14,550 ರುಪಾಯಿ)
  • ಕತಾರ್: 555 ಕತಾರಿ ರಿಯಾಲ್ (13,964 ರೂ)
  • ಸೌದಿ ಅರೇಬಿಯಾ: 556 ಸೌದಿ ರಿಯಾಲ್ (13,596 ರುಪಾಯಿ)
  • ಓಮನ್: 59.60 ಒಮಾನಿ ರಿಯಾಲ್ (14,195 ರುಪಾಯಿ)
  • ಕುವೇತ್: 43.83 ಕುವೇತಿ ದಿನಾರ್ (11,188 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 350 ರೂ
  • ಚೆನ್ನೈ: 350 ರೂ
  • ಮುಂಬೈ: 350 ರೂ
  • ದೆಹಲಿ: 350 ರೂ
  • ಕೋಲ್ಕತಾ: 350 ರೂ
  • ಕೇರಳ: 350 ರೂ
  • ಅಹ್ಮದಾಬಾದ್: 350 ರೂ
  • ಜೈಪುರ್: 350 ರೂ
  • ಲಕ್ನೋ: 350 ರೂ
  • ಭುವನೇಶ್ವರ್: 350 ರೂ
  • ಪುಣೆ: 350

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ಫಿನಾಯಿಲ್ ಫ್ಯಾಕ್ಟರಿ ಕೇಸ್​ಗೆ ಬಿಗ್ ಟ್ವಿಸ್ಟ್: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಎನ್​ಸಿಬಿ, ಸರ್ಕಾರಕ್ಕೆ ಮುಖಭಂಗ – Kannada News | Mysuru Drug Lab Bust: NCB Exposes Secret MD Factory, Contradicting Karnataka Government’s Phenyl Claim

ಮೈಸೂರು, ಜನವರಿ 31: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ದೆಹಲಿಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ಮಾಡಿದಾಗ ಸಿಕ್ಕಿದ್ದು ಫಿನಾಯಿಲ್ ಫ್ಯಾಕ್ಟರಿ ಎಂಬ ಗೃಹ ಸಚಿವ ಜಿ ಪರಮೇಶ್ವರ (G Prameshwara) ಹೇಳಿಕೆಗೆ ಈಗ ತೀವ್ರ ಹಿನ್ನಡೆಯಾಗಿದೆ. ಅಲ್ಲದೆ, ದಾಳಿ ನಡೆಸಿದ್ದ ದೆಹಲಿಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದು, ಹೈಟೆಕ್ ಡ್ರಗ್ಸ್ ಲ್ಯಾಬ್ ಪತ್ತೆಯಾಗಿರುವುದನ್ನು ಖಚಿತಪಡಿಸಿದೆ. ಇದರೊಂದಿಗೆ, ಕರ್ನಾಟಕ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ.

ಮೈಸೂರು ಡ್ರಗ್ಸ್ ಫ್ಯಾಕ್ಟರಿ ಬಗ್ಗೆ ಎನ್​​ಸಿಬಿ ಹೇಳಿದ್ದೇನು?

ಗುಜರಾತ್ ಮತ್ತು ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ಮಾದಕ ದ್ರವ್ಯ ಜಾಲವನ್ನು ಭೇದಿಸಲಾಗಿದೆ. ಸುಮಾರು 10 ಕೋಟಿ ರೂಪಾಯಿ ಮೌಲ್ಯದ 35 ಕೆಜಿ ಮೆಫೆಡ್ರೋನ್ (MD), 1.8 ಕೆಜಿ ಅಫೀಮು ಮತ್ತು 25.6 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ರಾಜಸ್ಥಾನದ ಜಾಲೋರ್ ಜಿಲ್ಲೆಯ ಮಹೇಂದ್ರ ಕುಮಾರ್ ವಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಎನ್​​ಸಿಬಿ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಫಿನಾಯಿಲ್ ಫ್ಯಾಕ್ಟರಿ ಹೆಸರಲ್ಲಿ ರಹಸ್ಯ ಡ್ರಗ್ಸ್ ಲ್ಯಾಬ್!

ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಫ್ಯಾಕ್ಟರಿ ಸೋಗಿನಲ್ಲಿ ಈ ಡ್ರಗ್ಸ್ ಘಟಕ ಕಾರ್ಯನಿರ್ವಹಿಸುತ್ತಿತ್ತು. ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಅಲ್ಲಿ ಅತ್ಯಾಧುನಿಕ ಉಪಕರಣಗಳು ಮತ್ತು ಡ್ರಗ್ಸ್ ತಯಾರಿಕೆಗೆ ಬಳಸುವ ವಸ್ತುಗಳು ದೊರೆತಿವೆ ಎಂಬುದು ಎನ್​​ಸಿಬಿ ಪತ್ರಿಕಾ ಪ್ರಕಟಣೆಯಿಂದ ತಿಳಿದುಬಂದಿದೆ.

ಜೈಲಿನಿಂದ ಹೊರಬಂದು ಮೈಸೂರಿನಲ್ಲಿ ರಹಸ್ಯ ಪ್ರಯೋಗಾಲಯ ಸ್ಥಾಪಿಸಿದ್ದ ಆರೋಪಿ

ಜೈಲಿನಲ್ಲಿದ್ದಾಗ ಡ್ರಗ್ಸ್ ತಯಾರಿಕೆಯನ್ನು ಕಲಿತಿದ್ದ ಮಾಸ್ಟರ್ ಮೈಂಡ್ ಮಹೇಂದ್ರ ಕುಮಾರ್, ಜಾಮೀನಿನ ಮೇಲೆ ಹೊರಬಂದ ಬಳಿಕ ಮೈಸೂರಿನಲ್ಲಿ ಈ ರಹಸ್ಯ ಪ್ರಯೋಗಾಲಯ ಸ್ಥಾಪಿಸಿದ್ದ ಎಂದು ಎನ್​ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗ

ಈ ಪ್ರಕರಣದ ಆರಂಭದಲ್ಲಿ ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಮೈಸೂರಿನಲ್ಲಿ ಪತ್ತೆಯಾಗಿರುವುದು ಕೇವಲ ಫಿನಾಯಿಲ್ ಫ್ಯಾಕ್ಟರಿ ಎಂದು ಹೇಳಿಕೆ ನೀಡಿದ್ದರು. ಅಲ್ಲಿ ಯಾವುದೇ ಮಾದಕ ವಸ್ತು ಅಥವಾ ತಯಾರಿಕಾ ಕಚ್ಚಾ ವಸ್ತುಗಳು ಸಿಕ್ಕಿಲ್ಲ ಎಂದು ಸ್ಥಳೀಯ ಪೊಲೀಸರ ವರದಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಈಗ ಕೇಂದ್ರ ಸಂಸ್ಥೆಯಾದ ಎನ್​ಸಿಬಿ, ಇದು ಪೂರ್ಣ ಪ್ರಮಾಣದ ‘ರಹಸ್ಯ ಡ್ರಗ್ಸ್ ಲ್ಯಾಬ್’ ಎಂದು ಸಾಕ್ಷ್ಯ ಸಮೇತ ಬಹಿರಂಗಪಡಿಸಿರುವುದು ರಾಜ್ಯ ಸರ್ಕಾರದ ಗುಪ್ತಚರ ಮತ್ತು ಸ್ಥಳೀಯ ತನಿಖಾ ವೈಫಲ್ಯವನ್ನು ಎತ್ತಿ ತೋರಿಸಿದೆ.

ಇದನ್ನೂ ಓದಿ: ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಮೈಸೂರಲ್ಲಿ ದಾಳಿ ಬೆನ್ನಲ್ಲೇ ಅಶೋಕ್ ವಾಗ್ದಾಳಿ

ಬಂಧಿತ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲಾಗಿದೆ. ಮೈಸೂರಿನ ಈ ಘಟಕಕ್ಕೆ ರಾಸಾಯನಿಕ ಪೂರೈಸುತ್ತಿದ್ದ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ. ‘ನಶಾ ಮುಕ್ತ ಭಾರತ’ ಅಭಿಯಾನದಡಿ ದೇಶಾದ್ಯಂತ ಇಂತಹ ರಹಸ್ಯ ಘಟಕಗಳ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ ಎಂದು ಎನ್​ಸಿಬಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುರುಘಾಶ್ರೀಗೆ ಮತ್ತೊಮ್ಮೆ ಎದುರಾದ ಸಂಕಷ್ಟ; ಕೋರ್ಟ್ ನಿರ್ಬಂಧ ಮೀರಿ ಮಠದ ನಿವೇಶನ ಮಾರಾಟ – Kannada News | Murughashree Legal Trouble: Murugha Math Plot Sale Case in Hosadurga

ಮುರುಘಾಶ್ರೀಗೆ ಮತ್ತೊಮ್ಮೆ ಎದುರಾದ ಸಂಕಷ್ಟ

ಚಿತ್ರದುರ್ಗ, ಜನವರಿ 31: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮುರುಘಾಮಠದ ಮಾಜಿ ಪೀಠಾಧಿಪತಿ ಮುರುಘಾಶ್ರೀಗೆ (Murughashree) ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮುರುಘಾಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದಡಿ ಮುರುಘಾಶ್ರೀ ವಿರುದ್ಧ ಹೊಸದುರ್ಗ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.

ಮುರುಘಾಮಠದ ಆಡಳಿತ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಅವರು ಈ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಸರ್ಕಾರದಿಂದ ನೇಮಕಗೊಂಡಿರುವ ಮಠದ ಆಡಳಿತ ಸಮಿತಿಗೆ ಪ್ರಕಾಶ್ ಎಂಬುವರಿಂದ ಈ ಬಗ್ಗೆ ದೂರು ಬಂದಿತ್ತು ಈ ಹಿನ್ನೆಲೆಯಲ್ಲಿ ವಿಷಯವನ್ನು ಪರಿಶೀಲಿಸಲಾಗಿದ್ದು, ಬಳಿಕ ಕೋರ್ಟ್ ಮೊರೆ ಹೋಗಲಾಗಿದೆ.

ಕೋರ್ಟ್ ನಿರ್ಬಂಧ ಇದ್ದರೂ ಮುರುಘಾಶ್ರೀ ಅವರು ಹೊಸದುರ್ಗದ ಎಂ. ಮಂಜುನಾಥ್ ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ನೀಡಿ, ಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಮಮತಾ ಹಾಗೂ ನಳಿನಿ ಎಂಬವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜ.30ರಂದು ಮುರುಘಾಮಠದ ಆಡಳಿತ ಸಮಿತಿ ಅಧಿಕೃತವಾಗಿ ನ್ಯಾಯಾಲಯವನ್ನು ಸಂಪರ್ಕಿಸಿದೆ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿಯಲಿದೆ.

ಈಗಾಗಲೇ A1 ಆರೋಪಿಯಾಗಿರುವ ಮುರುಘಾಶ್ರೀ

ಮುರುಘಾಶ್ರೀ ವಿರುದ್ಧ ಈಗಾಗಲೇ ಫೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದಲ್ಲಿ ಅವರು ಎ1 ಆರೋಪಿಯಾಗಿದ್ದಾರೆ. ಈ ಹಿನ್ನೆಲೆ ಕೋರ್ಟ್ ಅವರ ಮೇಲೆ ಆಸ್ತಿ ವಹಿವಾಟಿಗೆ ಸಂಬಂಧಿಸಿದಂತೆ ನಿರ್ಬಂಧ ವಿಧಿಸಿತ್ತು. ಅದನ್ನೇ ಉಲ್ಲಂಘಿಸಿ ನಿವೇಶನ ಮಾರಾಟ ನಡೆದಿದೆ ಎಂಬುದು ಆಡಳಿತ ಸಮಿತಿಯ ಆರೋಪವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link