Category Archives: Blog

Your blog category

ಕೊಳೆಯಾದ ದಿಂಬುಗಳನ್ನು ತೊಳೆಯದೆ ಕ್ಷಣಾರ್ಧದಲ್ಲಿ ಸ್ವಚ್ಛಗೊಳಿಸಲು ಈ ಸರಳ ಸಲಹೆ ಪಾಲಿಸಿ – Kannada News | You can clean a dirty pillow by following these simple tips

ಬಹುತೇಕ ಹೆಚ್ಚಿನವರು ದಿಂಬು ಕವರ್‌ ಹಾಗೂ ಬೆಟ್‌ಶೀಟ್‌ಗಳನ್ನು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಸ್ವಚ್ಛಗೊಳಿಸುತ್ತಿರುತ್ತಾರೆ. ಆದ್ರೆ ದಿಂಬಿನ (pillow) ಸ್ವಚ್ಛತೆಯ ಕಡೆಗೆ ಗಮನವೇ ಕೊಡುವುದಿಲ್ಲ. ದಿಂಬಿನ ಕವರ್‌ ಕ್ಲೀನ್‌ ಮಾಡುವುದು ಎಷ್ಟು ಮುಖ್ಯವೋ ಅದೇ ರೀತಿ ದಿಂಬನ್ನು ಸಹ ಸ್ವಚ್ಛಗೊಳಿಸಬೇಕಾಗುತ್ತದೆ. ಇಲ್ಲದಿದ್ದರೆ ದಿಂಬಲ್ಲಿ ಸಂಗ್ರಹವಾಗುವ ಧೂಳು ಹಾಗೂ ಕೊಳೆಗಳ  ಕಾರಣದಿಂದ ಅಲರ್ಜಿ, ಉಸಿರಾಟದ ತೊಂದರೆಗಳಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಮೊಡವೆಯ ಸಮಸ್ಯೆಗಳು ಸಹ ಹೆಚ್ಚಾಗಬಹುದು. ಹಾಗಾಗಿ ದಿಂಬನ್ನು ಸ್ವಚ್ಚಗೊಳಿಸುವುದು ಅತ್ಯಗತ್ಯ. ಇವೆಲ್ಲಾ ಸರಿ ಆದ್ರೆ ದಿಂಬನ್ನು ನೀರಿನಿಂದ ತೊಳೆಯದೆ ಹೇಗಪ್ಪಾ ಕ್ಲೀನ್‌ ಮಾಡೋದು ಎಂಬ ಪ್ರಶ್ನೆ ಹಲವರಲ್ಲಿ ಇದ್ದೇ ಇರುತ್ತೆ. ಅದಕ್ಕಾಗಿ ಈ ಸರಳ ಸಲಹೆಗಳನ್ನು ಅನುಸರಿಸಿದರೆ ಸಾಕು.

ದಿಂಬನ್ನು ಸ್ವಚ್ಛಗೊಳಿಸಲು ಈ ಸಲಹೆಗಳನ್ನು ಪಾಲಿಸಿ:

ವ್ಯಾಕ್ಯೂಮ್‌ ಕ್ಲೀನರ್‌ ಬಳಸಿ: ನಿಮ್ಮ ದಿಂಬುಗಳನ್ನು ತೊಳೆಯದೆಯೇ ಸ್ವಚ್ಛಗೊಳಿಸಲು ನೀವು ವ್ಯಾಕ್ಯೂಮ್‌ ಕ್ಲೀನರ್‌ ಬಳಸಬಹುದು. ಇದು ಹೆಚ್ಚು ಸಮಯ ತೆಗೆದುಕೊಳ್ಳದೆ ದಿಂಬಿನಲ್ಲಿ ಸಂಗ್ರಹವಾದ ಯಾವುದೇ ಕೊಳಕು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ಇದಕ್ಕಾಗಿ ಮೊದಲು ದಿಂಬಿನ ಕವರ್‌ಗಳನ್ನು ತೆಗೆದುಹಾಕಿ  ನಂತರ ವ್ಯಾಕ್ಯೂಮ್ ಕ್ಲೀನರ್‌ನ ವೇಗವನ್ನು ಕಡಿಮೆ ಇರಿಸಿ, ಇದರ ಸಹಾಯದಿಂದ ನಿಧಾನವಾಗಿ ಬಿಂಬನ್ನು ಕ್ಲೀನ್‌ ಮಾಡಿ.

ಕೋಲು ಬಳಸಿ: ನಿಮ್ಮ ಬಳಿ ವ್ಯಾಕ್ಯೂಮ್ ಕ್ಲೀನರ್ ಇಲ್ಲದಿದ್ದರೆ, ನೀವು ನಿಮ್ಮ ದಿಂಬುಗಳನ್ನು ಕೋಲಿನಿಂದ ಸ್ವಚ್ಛಗೊಳಿಸಬಹುದು, ಕೋಲಿನಿಂದ ದಿಂಬಿಗೆ ಹೊಡೆಯುವ ಮೂಲಕ ದಿಂಬನ್ನು ಸ್ವಚ್ಛಗೊಳಿಸಬಹುದು. ಇದು ದಿಂಬಿನ ಮೇಲಿನ ಧೂಳು, ಕೊಳೆಯನ್ನು ತೆಗೆದುಹಾಕುತ್ತದೆ.

ಅಡಿಗೆ ಸೋಡಾ: ನಿಮ್ಮ ದಿಂಬುಗಳನ್ನು ಸ್ವಚ್ಛಗೊಳಿಸಲು ನೀವು ಅಡಿಗೆ ಸೋಡಾವನ್ನು ಬಳಸಬಹುದು. ದಿನಕ್ಕಾಗಿ ನೀವು ದಿಂಬಿನ ಮೇಲಿನ ಕೊಳಕು ಅಥವಾ ಕಲೆಗಳ ಮೇಲೆ 1 ಟೀ ಚಮಚ ಅಡಿಗೆ ಸೋಡಾವನ್ನು ಸಿಂಪಡಿಸಿ. ನಂತರ, ಅದನ್ನು ಬ್ರಷ್‌ನಿಂದ ಸ್ಕ್ರಬ್ ಮಾಡಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅದು ಒಣಗಿದ ನಂತರ, ಅದನ್ನು ನಿಮ್ಮ ಕೈಗಳಿಂದ ಸ್ಕ್ರಬ್ ಮಾಡಿ. ಇದು ದಿಂಬನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ ವಾಸನೆಯನ್ನೂ ಹೋಗಲಾಡಿಸುತ್ತದೆ.

ಟೂತ್‌ಪೇಸ್ಟ್:‌ ನಿಮ್ಮ ದಿಂಬನ್ನು ಸ್ವಚ್ಛಗೊಳಿಸಲು ನೀವು ಟೂತ್‌ಪೇಸ್ಟ್‌ ಬಳಸಬಹುದು. ಇದಕ್ಕಾಗಿ ಸ್ವಲ್ಪ ಟೂತ್‌ಪೇಸ್ಟನ್ನು  ಟೂತ್‌ಬ್ರಷ್‌ಗೆ ಹಚ್ಚಿ ಅದನ್ನು ದಿಂಬಿನ ಮೇಲಿನ ಕೊಳೆಗೆ ಹಚ್ಚಿ. ನಂತರ, ಬ್ರಷ್‌ನಿಂದ ಅದನ್ನು ಸ್ಕ್ರಬ್ ಮಾಡಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಟೂತ್‌ಪೇಸ್ಟ್ ಒಣಗಿದ ನಂತರ, ಅದನ್ನು ನಿಮ್ಮ ಕೈಗಳಿಂದ ಸ್ಕ್ರಬ್ ಮಾಡಿ, ಮತ್ತು ದಿಂಬು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.

ಇದನ್ನೂ ಓದಿ: ಗ್ಯಾಸ್‌ನಲ್ಲಿಟ್ಟ ಹಾಲು ಉಕ್ಕಿ ಚೆಲ್ಲಬಾರದೆಂದರೆ ಸಿಂಪಲ್‌ ಸಲಹೆ ಪಾಲಿಸಿದರೆ ಸಾಕು

ಬಿಸಿಲಿನಲ್ಲಿಡಿ: ಇದು ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ಸ್ವಚ್ಛತಾ ವಿಧಾನವಾಗಿದೆ.  ಸೂರ್ಯನ ಬೆಳಕು ನೈಸರ್ಗಿಕ ಸೋಂಕುನಿವಾರಕವಾಗಿದ್ದು,  ದಿಂಬನ್ನು ಬಿಸಿಲಿನಲ್ಲಿ ಇಡಿ ಇದರಿಂದ ತೇವಾಂಶ ಕಡಿಮೆಯಾಗುತ್ತದೆ ಮತ್ತು ಇದು ಬ್ಯಾಕ್ಟೀರಿಯಾ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿ 15 ದಿನಗಳಿಗೊಮ್ಮೆ ಕನಿಷ್ಠ 3 ರಿಂದ 4 ಗಂಟೆಗಳ ಕಾಲ ದಿಂಬನ್ನು ನೇರ ಸೂರ್ಯನ ಬೆಳಕಿನಲ್ಲಿ ಇರಿಸಿ.

ಸ್ಪಾಟ್ ಕ್ಲೀನಿಂಗ್: ದಿಂಬಿನ ಮೇಲೆ ಮೊಂಡುತನದ ಬೆವರು ಅಥವಾ ಎಣ್ಣೆಯ ಕಲೆಗಳಿದ್ದರೆ, ಇಡೀ ದಿಂಬನ್ನು ನೀರಿನಿಂದ ತೊಳೆಯುವ ಅಗತ್ಯವಿಲ್ಲ. ಅದಕ್ಕಾಗಿ ಹತ್ತಿ ಬಟ್ಟೆಯನ್ನು ವಿನೆಗರ್ ಅಥವಾ ಸೌಮ್ಯ ಸೋಪ್‌ನಲ್ಲಿ ಅದ್ದಿ, ಕಲೆಯಾದ ಪ್ರದೇಶವನ್ನು ಮಾತ್ರ ನಿಧಾನವಾಗಿ ಉಜ್ಜಿ. ನಂತರ, ದಿಂಬನ್ನು ಫ್ಯಾನ್ ಅಡಿಯಲ್ಲಿ ಒಣಗಿಸಿ.

 ಸಾರಭೂತ ತೈಲ ಸ್ಪ್ರೇ: ನಿಮ್ಮ ದಿಂಬನ್ನು ಪರಿಮಳಯುಕ್ತವಾಗಿಸಲು ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿಡಲು ನೀವು  ದಿಂಬಿನ ಮೇಲೆ ಸಾರಭೂತ ತೈಲವನ್ನು ಸಿಂಪಡಿಸಬಹುದು. ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಕೆಲವು ಹನಿ ಟೀ ಟ್ರೀ ಎಣ್ಣೆ ಅಥವಾ ಲ್ಯಾವೆಂಡರ್ ಎಣ್ಣೆಯನ್ನು ಮಿಶ್ರಣ ಮಾಡಿ. ಅದನ್ನು ದಿಂಬಿನ ಮೇಲೆ ಲಘುವಾಗಿ ಸಿಂಪಡಿಸಿ. ಇದು ಪರಿಮಳವನ್ನು ನೀಡುವುದು ಮಾತ್ರವಲ್ಲ ಲ್ಯಾವೆಂಡರ್ ಪರಿಮಳವು ನಿಮಗೆ ಆಳವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿ 1979 ಅನ್​ಟೋಲ್ಡ್ ಸ್ಟೋರಿ: ಬಂಗಾಳದ ಕಥೆಯ ಸಿನಿಮಾಗೆ ಕೋಲಾರದಲ್ಲಿ ಶೂಟಿಂಗ್ – Kannada News | The 1979 Untold Story Kannada movie ready for release

ಐತಿಹಾಸಿಕ ಕಥಾಹಂದರ ಹೊಂದಿರುವ ‘ದಿ 1979 ಅನ್ ಟೋಲ್ಡ್ ಸ್ಟೋರಿ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಕನ್ನಡ ಚಿತ್ರ ರಂಗದಲ್ಲಿ (Kannada Film Industry) ಇತ್ತೀಚಿಗೆ ಅನೇಕ ಹೊಸ ಪ್ರಯೋಗಗಳು ನಡೆಯುತ್ತಿವೆ. ಕಥೆ, ಪಾತ್ರಗಳ ಮೂಲಕ ಪ್ರಯೋಗ ಮಾಡಲಾಗುತ್ತಿದೆ. ಹೊಸ ಪ್ರತಿಭೆಗಳು ಹೊಸ ರೀತಿಯಲ್ಲಿ ಜನರಿಗೆ ಕಥೆಗಳನ್ನು ಹೇಳುತ್ತಿದ್ದಾರೆ. ಅಂಥ ತಂಡಗಳ ಸಾಲಿಗೆ ‘ದಿ 1979 ಅನ್ ಟೋಲ್ಡ್ ಸ್ಟೋರಿ’ (The 1979 Untold Story) ಕೂಡ ಸೇರ್ಪಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಬಂಗಾಳದ ಕಥೆಯನ್ನು ತೋರಿಸಲಾಗುತ್ತಿದೆ.

‘ಮನಂ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ‘ದಿ 1979 ಅನ್ ಟೋಲ್ಡ್ ಸ್ಟೋರಿ’ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾಗೆ ಪುಷ್ಪ ರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಬೀರಮಾನಹಳ್ಳಿ ಎಂ. ಶ್ರೀನಿವಾಸ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 1979ರಲ್ಲಿ ಬಂಗಾಳದಲ್ಲಿ ನಡೆದ ರಿಯಲ್ ಘಟನೆಗಳನ್ನು ಆಧರಿಸಿ, ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ.

The 1979 Untold Story Team

‘ದಿ 1979 ಅನ್ ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿನ ಸಂಪೂರ್ಣ ಕಥೆಯು ಬಂಗಾಳದ ಹಿನ್ನೆಲೆಯನ್ನು ನಡೆಯುತ್ತದೆ. ವಿಶೇಷ ಏನೆಂದರೆ, ಕಥೆ ಬಂಗಾಳದ್ದು ಆದರೂ ಈ ಸಿನಿಮಾದ ಶೂಟಿಂಗ್ ನಡೆದಿರುವುದು ಕೋಲಾರದಲ್ಲಿ! ಆ ಕಾರಣದಿಂದಲೂ ಸಿನಿಮಾ ಮೇಲೆ ನಿರೀಕ್ಷೆ ಮೂಡುವಂತಾಗಿದೆ. ಈಗಾಗಲೇ ‘ದಿ 1979 ಅನ್ ಟೋಲ್ಡ್ ಸ್ಟೋರಿ’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ.

‘ದಿ 1979 ಅನ್ ಟೋಲ್ಡ್ ಸ್ಟೋರಿ’ ಟೀಸರ್:

ಜನವರಿ 23ರಂದು ‘ಮ್ಯೂಸಿಕ್ ಬಜಾರ್’ ಯೂಟ್ಯೂಬ್ ಚಾನೆಲ್ ಮೂಲಕ ಟೀಸರ್ ಅನಾವರಣ ಆಯಿತು. ರಾಜಕೀಯ, ಅಧಿಕಾರ, ಆಡಳಿತ, ಸ್ವಾಭಿಮಾನ, ನೋವು, ಹಿಂಸೆ ಮುಂತಾದ ಅಂಶಗಳು ಈ ಟೀಸರ್​​ನಲ್ಲಿ ಕಾಣಿಸಿದೆ. ತಾಂತ್ರಿಕವಾಗಿಯೂ ಈ ಸಿನಿಮಾದ ಮೇಕಿಂಗ್ ಗಮನ ಸೆಳೆದಿದೆ. ಶೀಘ್ರದಲ್ಲೇ ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಆಗಲಿವೆ.

ಇದನ್ನೂ ಓದಿ: ರವಿತೇಜ ನಟನೆಯ 77ನೇ ಸಿನಿಮಾಗೆ ‘ಇರುಮುಡಿ’ ಶೀರ್ಷಿಕೆ: ಫಸ್ಟ್ ಲುಕ್ ರಿಲೀಸ್

ಈ ಚಿತ್ರದ ರಿಲೀಸ್ ಡೇಟ್ ಇನ್ನೂ ಬಹಿರಂಗ ಆಗಿಲ್ಲ. ಆದರೆ ಫೆಬ್ರವರಿ ತಿಂಗಳಲ್ಲೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಅಜ್ಜು, ಪ್ರಾನ್ವಿ ಗೌಡ, ಸುಜಿತ್, ಅಮೃತ ಗೌಡ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಚಲಾಕಿ ಚರಣ್ ಅವರ ಛಾಯಾಗ್ರಹಣ, ಜಶ್ವಂತ್ ವಸುವುಲೇಟಿ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಾವಿನಲ್ಲೂ ಒಂದಾದ ಸಹೋದರರು! ಅಣ್ಣನ ಅಗಲಿಕೆಯ ದುಃಖದಲ್ಲೇ ತಮ್ಮನೂ ವಿಧಿವಶ – Kannada News | Kalaburagi Tragedy: Brother Dies of Grief After Elder Sibling’s Death

ಕಲಬುರಗಿ, ಜನವರಿ 28: ಅಣ್ಣ ಸತ್ತ ಮರು ದಿನವೇ ಆತನ ಸಾವಿನ ದುಃಖವನ್ನು ತಡೆಯಲಾರದೆ ತಮ್ಮನೂ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ. ಅಣ್ಣನ ಅಗಲಿಕೆಯಿಂದ ಮಾನಸಿಕವಾಗಿ ಕುಸಿದಿದ್ದ ಶಿವರಾಯ ಅವರು ಆಘಾತದಿಂದ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ.

ಅಣ್ಣನ ಸಾವಿನ ದುಃಖದಲ್ಲೇ ತಮ್ಮ ಸಾವು

ಗ್ರಾಮದ ಹಿರಿಯ ನಿವಾಸಿ ಬಸವಂತರಾಯ ಸಣ್ಣಕ್ (81) ಜನವರಿ 26ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರವು ಜನವರಿ 27ರಂದು ನೆರವೇರಿತು. ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಅವರ ತಮ್ಮ ಶಿವರಾಯ ಸಣ್ಣಕ್ (79) ಅವರು ಅಣ್ಣನ ಅಗಲಿಕೆಯ ಆಘಾತಕ್ಕೆ ಒಳಗಾಗಿ ಮನೆಗೆ ಮರಳಿದ ಬಳಿಕ ಹಾಸಿಗೆ ಹಿಡಿದ್ದರು. ಅಣ್ಣನ ಸಾವಿನ ದುಃಖ ಶಿವರಾಯ ಸಣ್ಣಕ್ ಮನಸ್ಸಿನ ಮೇಲೆ ತೀವ್ರವಾಗಿ ಪರಿಣಾಮ ಬೀರಿದ್ದು, ಅದೇ ದಿನ ರಾತ್ರಿ ಅವರೂ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸತತ ಎರಡು ದಿನಗಳಲ್ಲಿ ಸಹೋದರರು ಅಗಲಿರುವುದರಿಂದ ಬಡದಾಳ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

ಹೃದಯಾಘಾತದಿಂದ 35 ವರ್ಷದ ಯುವಕ ಸಾವು

ಹೃದಯಘಾತದಿಂದ 35 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ತುರ್ಚಗಟ್ಟ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ರಮೇಶ್ (35) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ರಮೇಶ್ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಲೇ ರಮೇಶ್ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Income Tax Dept Recruitment 2026: ಆದಾಯ ತೆರಿಗೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಉದ್ಯೋಗವಕಾಶ; 97 ಹುದ್ದೆಗೆ ಅರ್ಜಿ ಆಹ್ವಾನ – Kannada News | Income Tax Dept Sports Quota Recruitment 2026: 97 Posts, Apply by Jan 31!

ಆದಾಯ ತೆರಿಗೆ ಇಲಾಖೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​​ ಬಂದಿದೆ. ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರ (Pr. CCIT) ಕಚೇರಿಯು ಕ್ರೀಡಾ ಕೋಟಾದಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 97 ಖಾಲಿ ಹುದ್ದೆಗಳು ಭರ್ತಿಯಾಗಲಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೇವಲ 4 ದಿನಗಳು ಮಾತ್ರ ಉಳಿದಿದ್ದು, ಅರ್ಹ ಅಭ್ಯರ್ಥಿಗಳು ಜನವರಿ 31 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಈ ನೇಮಕಾತಿಯಲ್ಲಿ ಸ್ಟೆನೋಗ್ರಾಫರ್ ಗ್ರೇಡ್–2 (12 ಹುದ್ದೆಗಳು), ತೆರಿಗೆ ಸಹಾಯಕ (47 ಹುದ್ದೆಗಳು) ಹಾಗೂ ಮಲ್ಟಿ–ಟಾಸ್ಕಿಂಗ್ ಸ್ಟಾಫ್ (38 ಹುದ್ದೆಗಳು) ಸೇರಿವೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಅಥ್ಲೆಟಿಕ್ಸ್, ಈಜು, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್, ಲಾನ್ ಟೆನ್ನಿಸ್, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್, ಕಬಡ್ಡಿ, ಫುಟ್‌ಬಾಲ್, ಬಿಲಿಯರ್ಡ್ಸ್ ಸೇರಿದಂತೆ ಮಾನ್ಯತೆ ಪಡೆದ ಕ್ರೀಡೆಗಳಲ್ಲಿ ಭಾಗವಹಿಸಿದ ಪ್ರಮಾಣಪತ್ರ ಹೊಂದಿರಬೇಕು. ಅಭ್ಯರ್ಥಿಗಳ ವಯೋಮಿತಿ 18 ರಿಂದ 27 ವರ್ಷಗಳ ನಡುವೆ ಇರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರು ಅರ್ಹರು

ಅರ್ಜಿ ಶುಲ್ಕವಾಗಿ ಅಭ್ಯರ್ಥಿಗಳು 200 ರೂ ಪಾವತಿಸಬೇಕು. ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಸಂಬಂಧಿತ ಕ್ರೀಡಾ ಸಾಧನೆ ಮತ್ತು ಅರ್ಹತೆಯ ಆಧಾರದಲ್ಲೇ ಅಂತಿಮ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನ ಸೌಲಭ್ಯವೂ ದೊರೆಯಲಿದೆ. ಸ್ಟೆನೋಗ್ರಾಫರ್ ಮತ್ತು ತೆರಿಗೆ ಸಹಾಯಕ ಹುದ್ದೆಗಳಿಗೆ ತಿಂಗಳಿಗೆ 25,500 ರಿಂದ 81,100 ರೂ. ವರೆಗೆ ಹಾಗೂ ಮಲ್ಟಿ–ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ 18,000 ರಿಂದ 56,900 ರೂ. ವರೆಗೆ ವೇತನ ನೀಡಲಾಗುತ್ತದೆ.

ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ, ಕೇಂದ್ರ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನ ತಪ್ಪದೇ ಅರ್ಜಿ ಸಲ್ಲಿಸಿ.

ಆದಾಯ ತೆರಿಗೆ ಇಲಾಖೆಯ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:27 pm, Wed, 28 January 26

Source link

ಮಕ್ಕಳ ಕಿವಿಗೆ ಎಣ್ಣೆ ಹಾಕುವ ಅಭ್ಯಾಸ ನಿಮಗಿದ್ಯಾ, ಇದರಿಂದ ಪ್ರಯೋಜನ ಸಿಗುತ್ತಾ? ಸ್ಟೋರಿಯಲ್ಲಿದೆ ಮಾಹಿತಿ – Kannada News | Oil for Earache in Kids: Home Remedy or Danger?

Ear Infection & Oil Drops What Parents Must KnowImage Credit source: Getty Images

ಸಾಮಾನ್ಯವಾಗಿ ಆಯುರ್ವೇದ ಪದ್ಧತಿಗಳನ್ನು ಅನುಸರಿಸುತ್ತೇವೆ ಎಂದು ಅನೇಕ ಪೋಷಕರು ಮಕ್ಕಳ ಆರೋಗ್ಯ ಹಾಳು ಮಾಡುವ ಮನೆಮದ್ದುಗಳನ್ನು (Home Remedy) ಪ್ರಯತ್ನಿಸುತ್ತಾರೆ. ಇವುಗಳಲ್ಲಿ ಮಗುವಿನ ಕಿವಿಗೆ ಎಣ್ಣೆ ಹಾಕುವ ಪದ್ಧತಿಯೂ ಒಂದು. ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೆ ನಗರಗಳಲ್ಲಿಯೂ ಈ ಒಂದು ವಿಧಾನವನ್ನು ಅನುಸರಿಸುವ ಪಾಲಕರಿದ್ದಾರೆ. ಈ ಮನೆಮದ್ದುಗಳನ್ನು ಪ್ರಯತ್ನಿಸುವುದರ ಹಿಂದೆ ಹಲವಾರು ಕಾರಣಗಳಿರಬಹುದು. ಮಕ್ಕಳಿಗೆ ಕಿವಿ ನೋವು (ear pain) ಬಂದಾಗ, ಪೋಷಕರು ಮಗುವಿನ ಕಿವಿಗೆ ಕೆಲವು ಹನಿ ಸಾಸಿವೆ ಎಣ್ಣೆಯನ್ನು ಹಾಕುತ್ತಾರೆ. ಜೊತೆಗೆ ಮೇಣದ ಶೇಖರಣೆ ಆದಾಗಲೂ ಕೂಡ ಮಕ್ಕಳ ಕಿವಿಗೆ ಎಣ್ಣೆ ಹಾಕುತ್ತಾರೆ. ಇದು ಬಹಳ ಸಾಮಾನ್ಯ ಎಂದು ನಾವೆಲ್ಲರೂ ತಿಳಿದುಕೊಂಡಿದ್ದೇವೆ ಆದರೆ, ಇದು ನಿಜವಾಗಿಯೂ ಕಿವಿ ನೋವನ್ನು ಕಡಿಮೆ ಮಾಡುತ್ತದೆಯೇ, ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ರವಿ ಮೆಹರ್ ಹೇಳುವ ಪ್ರಕಾರ, ಮಗುವಿಗೆ ಕಿವಿ ನೋವು ಇದ್ದರೆ, ಅದಕ್ಕೆ ಸೋಂಕು ಕಾರಣವಾಗಿರಬಹುದು ಅಥವಾ ಬೇರೆ ಯಾವುದಾದರೂ ಸಮಸ್ಯೆಯೂ ಕಾರಣವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ಅವರ ಕಿವಿಗೆ ಎಂದಿಗೂ ಎಣ್ಣೆ ಹಾಕಬಾರದು. ಏಕೆಂದರೆ ಈ ಒಂದು ಅಭ್ಯಾಸ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಬಹುದು. ಎಣ್ಣೆ ಹಾಕುವುದರಿಂದ ಸೋಂಕು ಗುಣವಾಗುವುದಿಲ್ಲ ಅಥವಾ ನೋವು ಕಡಿಮೆಯಾಗುವುದಿಲ್ಲ. ಎಣ್ಣೆ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ನೋವು, ಊತ ಅಥವಾ ಸುಡುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ, ಕಿವಿಯಿಂದ ಕೀವು ಅಥವಾ ನೀರು ಬರುತ್ತಿದ್ದಾಗ ಎಣ್ಣೆ ಹಾಕಬಾರದು. ಮಗುವಿಗೆ ಶೀತ ಅಥವಾ ಜ್ವರ ಇದ್ದಾಗ, ಕಿವಿ ನೋವು ಬರಬಹುದು. ಹಾಗಾಗಿ ಈ ರೀತಿಯಾದಾಗ ಮೊದಲು ವೈದ್ಯರ ಸಲಹೆ ಪಡೆಯಬೇಕು.

ಇದನ್ನೂ ಓದಿ: ಕಿವಿ ನೋವು ಬಂದರೆ ನಿರ್ಲಕ್ಷಿಸದಿರಿ, ಇದು ಹೃದಯಾಘಾತದ ಲಕ್ಷಣ

ಕಿವಿ ನೋವು ಬಂದಾಗ ಏನು ಮಾಡಬೇಕು?

ಮಗುವಿಗೆ ಕಿವಿ ನೋವು ಅಥವಾ ಇನ್ನಾವುದೇ ಸಮಸ್ಯೆ ಇದ್ದರೆ, ಇಎನ್‌ಟಿ ವೈದ್ಯರನ್ನು ಭೇಟಿ ಮಾಡುವುದು ಬಹಳ ಉತ್ತಮ. ಮನೆಮದ್ದುಗಳನ್ನು ಪ್ರಯತ್ನಿಸುವುದು ಗಂಭೀರ ಹಾನಿಯನ್ನುಂಟುಮಾಡಬಹುದು. ನೀವು ಕಿವಿಯನ್ನು ಸ್ವಚ್ಛಗೊಳಿಸಬೇಕಾದರೆ, ಇಯರ್‌ಬಡ್ ಬಳಸಿ, ಆದರೆ ಅದನ್ನು ತುಂಬಾ ಆಳವಾಗಿ ಹಾಕಬಾರದು ಎಂಬುದನ್ನು ಮರೆಯಬೇಡಿ. ಅಲ್ಲದೆ, ವೈದ್ಯರ ಮಾರ್ಗದರ್ಶನವಿಲ್ಲದೆ ಮಕ್ಕಳ ಕಿವಿಗೆ ಡ್ರಾಪ್ಸ್ ಹಾಕಬೇಡಿ. ಮಗುವಿಗೆ ಕಿವಿ ಸಮಸ್ಯೆ ಇದ್ದರೆ, ಅವರು ಪದೇ ಪದೇ ಅಳುತ್ತಾರೆ ಅಥವಾ ಕಿವಿ ಹಿಡಿದುಕೊಳ್ಳುತ್ತಾರೆ. ಜೊತೆಗೆ ಅವರಿಗೆ ಶ್ರವಣ ಸಮಸ್ಯೆ ಕೂಡ ಇರಬಹುದು. ಇಂತಹ ಸಮಯದಲ್ಲಿ ಮಕ್ಕಳ ವೈದ್ಯರು ಅಥವಾ ತಜ್ಞರ ಸಲಹೆಯ ಮೇರೆಗೆ ಔಷಧಿ ನೀಡಿ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಅವಶ್ಯಕ. ಇದೆಲ್ಲದರ ಜೊತೆಗೆ ಮಗು ಸ್ನಾನ ಮಾಡುವಾಗ, ನೀರು ಅಥವಾ ಸೋಪ್ ಆಕಸ್ಮಿಕವಾಗಿ ಕಿವಿಗೆ ಹೋಗದಂತೆ ನೋಡಿಕೊಳ್ಳಿ. ಶೀತ ವಾತಾವರಣದಲ್ಲಿ, ಮಗುವಿನ ಕಿವಿಗಳನ್ನು ಆದಷ್ಟು ಬೆಚ್ಚಗಿಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರಾಜಾಸಾಬ್’ ಸೋಲಿನ ಬಳಿಕ ಬಜೆಟ್ ಉಳಿಸಲು ಹೊಸ ಪ್ಲ್ಯಾನ್ ರೂಪಿಸಿದ ಪ್ರಭಾಸ್ – Kannada News | Prabhas’ Spirit Movie Budget Cut: 95 Day Shoot Plan After ‘Raja Saab’ Loss

ನಟ ಪ್ರಭಾಸ್ (Prabhas) ನಟನೆಯ ‘ರಾಜಾಸಾಬ್’ ಸಿನಿಮಾ ಡಿಸಾಸ್ಟರ್ ಎನಿಸಿಕೊಂಡಿತು. ಚಿತ್ರದ ಬಜೆಟ್ 400 ಕೋಟಿ ರೂಪಾಯಿಗೂ ಅಧಿಕ ಆಗಿತ್ತು. ಸಿನಿಮಾ ಕಲೆಕ್ಷನ್ ಕೂಡ ಕಡಿಮೆ ಇದ್ದಿದ್ದರಿಂದ ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟಾಯಿತು. ಈಗ ಮುಂದಿನ ಸಿನಿಮಾದ ಬಜೆಟ್ ಉಳಿಸಲು ಪ್ರಭಾಸ್ ಹಾಗೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಹೊಸ ಪ್ಲ್ಯಾನ್ ರೂಪಿಸಿದ್ದಾರೆ. ‘ಸ್ಪಿರಿಟ್’ ಚಿತ್ರದ ಬಜೆಟ್​​ ಅನ್ನು ತಗ್ಗಿಸಲು ಈ ಪ್ಲ್ಯಾನ್ ಸಹಕಾರಿ ಆಗಲಿದೆ.

ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಸಿನಿಮಾಗಳ ಬಜೆಟ್ ಮಿತಿ ಮೀರುತ್ತದೆ. ವಿಸ್ತ್ರ ಶೂಟಿಂಗ್ ಶೆಡ್ಯೂಲ್ ಕೂಡ ಇದಕ್ಕೆ ಕಾರಣ. ನಿರ್ದೇಶಕರು ಎಷ್ಟೇ ಪ್ಲ್ಯಾನ್ ಮಾಡಿದರೂ ಹೀರೋಗಳ ಕಾಲ್​​ಶೀಟ್​​ನಲ್ಲಿ ವ್ಯತ್ಯಾಸ ಆಗುತ್ತದೆ. ಇದು ಸಿನಿಮಾದ ಬಜೆಟ್ ಹೆಚ್ಚಿಸುತ್ತದೆ. ಅಲ್ಲದೆ, 150-200 ದಿನ ಶೂಟ್ ನಡೆಯೋದು ಬಜೆಟ್ ಏರಲು ಕಾರಣ. ಆದರೆ, ಇದಕ್ಕೆಲ್ಲ ಬ್ರೇಕ್ ಹಾಕಲು ಪ್ಲ್ಯಾನ್ ರೂಪಿಸಿದ್ದಾರೆ ಪ್ರಭಾಸ್.

ಪ್ರಭಾಸ್ ಅವರಿಂದ ‘ರಾಜಾಸಾಬ್’ ನಿರ್ಮಾಪಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹೀಗಾಗಿ, ‘ಸ್ಪಿರಿಟ್’ ಚಿತ್ರವನ್ನು ಕೇವಲ 95 ದಿನಗಳಲ್ಲಿ ಮಾಡಿ ಮುಗಿಸೋ ಪ್ಲ್ಯಾನ್ ಅಲ್ಲಿದ್ದಾರೆ ಪ್ರಭಾಸ್. ಈ ಎಲ್ಲಾ ಕಾರಣದಿಂದ ನಿರ್ಮಾಪಕರು ಸಾಕಷ್ಟು ಖುಷಿಪಟ್ಟಿದ್ದಾರೆ. ಸಂದೀಪ್ ರೆಡ್ಡಿ ವಂಗ ಅವರು ಪಕ್ಕಾ ಪ್ಲ್ಯಾನ್ ಮಾಡಿ ಶೂಟಿಂಗ್ ಸ್ಥಳ ಹಾಗೂ ದಿನಗಳನ್ನು ನಿಗದಿ ಮಾಡಿದ್ದಾರೆ. ಇದರ ಅನುಸಾರ ಶೂಟ್ ನಡೆಯಲಿದೆ.

ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ನಿರ್ಮಾಪಕ

ಹಾಗಂತ ಒಂದೇ ಸ್ಟ್ರೇಚ್​​ನಲ್ಲಿ 95 ದಿನಗಳ ಕಾಲ ಶೂಟ್ ಮಾಡೋದಿಲ್ಲ. ಹಂತ ಹಂತವಾಗಿ ಈ ಚಿತ್ರೀಕರಣ ನಡೆಯಲಿದೆ. ಒಂದೊಮ್ಮೆ ಅಂದುಕೊಂಡಂತೆ 95 ದಿನಗಳಲ್ಲಿ ಶೂಟ್ ಪೂರ್ಣಗೊಂಡಿದ್ದೇ ಆದಲ್ಲಿ ಈ ಮೊದಲು ನಿಗದಿಪಡಿಸಿದ 2027ರ ಮಾರ್ಚ್ 5ರಂದು ಸಿನಿಮಾ ತೆರೆಗೆ ಬರಲಿದೆ. ಇದರಿಂದ ನಿರ್ಮಾಪಕರಿಗೆ ಒಂದಷ್ಟು ಬಜೆಟ್ ಕೂಡ ಉಳಿತಾಯ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral: ತನ್ನ ಅಜ್ಜಿಗೆ ವಿಡಿಯೋ ಗೇಮ್ ಆಡುವುದು ಹೇಗೆಂದು ಹೇಳಿಕೊಟ್ಟ ಮೊಮ್ಮಗಳು – Kannada News | A man from Nagpur was amazed by the bond between his beloved daughter and his mother.

ಮೊಮ್ಮಕ್ಕಳಿಗೆ ಅಜ್ಜ ಅಜ್ಜಿಯಂದಿರೆಂದರೆ (grandparents) ಹೆಚ್ಚು ಅಚ್ಚು ಮೆಚ್ಚು. ಅಪ್ಪ ಅಮ್ಮಂದಿರಿಗಿಂತ ಹೆಚ್ಚಾಗಿ ಹಿರಿ ಜೀವಗಳ ಜತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದೀಗ ಅಜ್ಜಿ ಹಾಗೂ ಮೊಮ್ಮಗಳ ವಿಡಿಯೋ ವೈರಲ್ ಆಗಿದೆ. ನಾಗ್ಪುರದ ವ್ಯಕ್ತಿಯೊಬ್ಬರು (Nagpur man) ತನ್ನ ಮಗಳು 77 ವರ್ಷದ ಹರೆಯದ ತಾಯಿಗೆ ವಿಡಿಯೋ ಗೇಮ್ ಆಡುವುದು ಹೇಗೆಂದು ಕಲಿಸುತ್ತಿದ್ದಾಳೆ ಎನ್ನುವ ಪೋಸ್ಟ್‌  ಹಂಚಿಕೊಂಡಿದ್ದಾರೆ. ಅಜ್ಜಿಯ ಕುತೂಹಲವು ಈ ಪೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಪೋಟೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಮೈಂಡ್‌ ಎಕ್ಸ್‌ವೇಟರ್‌ (@MindExcavator) ಹೆಸರಿನ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ನಾಗ್ಪುರದ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ತಮ್ಮ ಮಗಳು ತನ್ನ 77 ವರ್ಷದ ತಾಯಿಗೆ ಟಿವಿ ಪರದೆಯಲ್ಲಿ ವೀಡಿಯೊ ಗೇಮ್ ಹೇಗೆ ಆಡಬೇಕೆಂದು ತಾಳ್ಮೆಯಿಂದ ಕಲಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಶೀರ್ಷಿಕೆಯಲ್ಲಿ ನನ್ನ ಮಗಳು ನನ್ನ 77 ವರ್ಷದ ತಾಯಿಗೆ ಮನರಂಜನೆಗೆ ವಿಡಿಯೋ ಗೇಮ್‌ಗಳನ್ನು ಆಡಲು ಕಲಿಸುತ್ತಿದ್ದಾಳೆ. ಈ ಪ್ರೀತಿ ಹಾಗೂ ಕಾಳಜಿ ಶಾಂತ ಭಾಷೆಯಾಗಿದೆ. ನಾನು ಕ್ಲಿಕಿಸಿದಾಗ ನನ್ನ ಹೃದಯವು ತುಂಬಾ ತುಂಬಿ ತುಳುಕುತ್ತದೆ ಎಂದು ಬರೆಯಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ಫೋಟೋದಲ್ಲಿ ಮೊಮ್ಮಗಳು ಅಜ್ಜಿಗೆ ವೀಡಿಯೊ ಗೇಮ್ ಹೇಗೆ ಆಡಬೇಕೆಂದು ಹೇಳಿಕೊಡುತ್ತಿರುವುದನ್ನು ಕಾಣಬಹುದು. ಮೊಮ್ಮಗಳು ಮಾರ್ಗದರ್ಶನ ನೀಡುತ್ತಿದ್ದು, ಅಜ್ಜಿಯು ಟಿವಿ ಪರೆದೆಯನ್ನು ಅತ್ಯಂತ ಕುತೂಹಲದಿಂದ ನೋಡುತ್ತಿರುವುದನ್ನು ನೀವಿಲ್ಲಿ ಕಾಣಬಹುದು.

ಇದನ್ನೂ ಓದಿ: ಅಜ್ಜ ಅಜ್ಜಿಯನ್ನು ಮೊದಲ ಬಾರಿಗೆ ವಿಮಾನ ಹತ್ತಿಸಿ ದುಬೈಗೆ ಕರೆದೊಯ್ದ ಮೊಮ್ಮಗ

ಈ ಪೋಸ್ಟ್ ಹತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಅಜ್ಜಿ ಮತ್ತು ಮೊಮ್ಮಗಳ ನಡುವಿನ ಬಾಂಧವ್ಯಕ್ಕೆ ಇದುವೇ ಸಾಕ್ಷಿ ಎಂದಿದ್ದಾರೆ. ಇನ್ನೊಬ್ಬರು, ಅಮೂಲ್ಯ ಕ್ಷಣಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿದ್ದೀರಿ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:54 pm, Wed, 28 January 26

Source link

Neelam Stone: ನೀಲಿ ನೀಲಮಣಿಯನ್ನು ಧರಿಸುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ – Kannada News | Neelam Stone: Shani’s Power Gem in Vedic Astrology. Benefits and How to Wear it

ನೀಲಿ ನೀಲಮಣಿಯನ್ನು ವೈದಿಕ ಜ್ಯೋತಿಷ್ಯದಲ್ಲಿ ಶನಿ ಗ್ರಹದ ಅತ್ಯಂತ ಶಕ್ತಿಶಾಲಿ ರತ್ನವೆಂದು ಪರಿಗಣಿಸಲಾಗುತ್ತದೆ. ಶನಿಯು ಕರ್ಮ, ಶಿಸ್ತು, ತಾಳ್ಮೆ ಮತ್ತು ನ್ಯಾಯದ ಪ್ರತೀಕವಾಗಿದೆ. ನೀಲಿ ಮಣಿಯು ಇತರ ರತ್ನಗಳಿಗಿಂತ ವೇಗವಾಗಿ ಫಲಿತಾಂಶ ನೀಡುತ್ತದೆ. ಇದರ ಉದ್ದೇಶ ಸೌಕರ್ಯ ನೀಡುವುದಲ್ಲ, ಬದಲಾಗಿ ವ್ಯಕ್ತಿಯನ್ನು ಶಿಸ್ತು, ಜವಾಬ್ದಾರಿ ಮತ್ತು ಕಠಿಣ ಪರಿಶ್ರಮದ ಮಾರ್ಗದಲ್ಲಿ ನಡೆಸುವುದಾಗಿದೆ. ಶನಿಯ ಮಹಾದಶೆ, ಸಾಡೇ ಸಾತಿ ಅಥವಾ ವಿಳಂಬಗಳು ಹೆಚ್ಚಾಗುವ ಸಮಯದಲ್ಲಿ, ಶನಿ ಶುಭವಾಗಿದ್ದರೆ ನೀಲಮಣಿಯನ್ನು ಧರಿಸಲು ಶಿಫಾರಸು ಮಾಡಲಾಗುತ್ತದೆ.

ನೀಲಮಣಿಯನ್ನು ಧರಿಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಇದು ನೈಸರ್ಗಿಕವಾಗಿರಬೇಕು ಮತ್ತು ಯಾವುದೇ ಬಿರುಕುಗಳಿಲ್ಲದಿರಬೇಕು. ಸಾಮಾನ್ಯವಾಗಿ 3 ರಿಂದ 5 ರಟ್ಟಿ ತೂಕವನ್ನು ಶಿಫಾರಸು ಮಾಡಲಾಗುತ್ತದೆ, ಆದರೆ ಜಾತಕ ಪರಿಶೀಲನೆ ಇಲ್ಲದೆ ಧರಿಸುವುದು ಅಪಾಯಕಾರಿ. ತಪ್ಪಾದ ವ್ಯಕ್ತಿಗೆ ನೀಲಮಣಿ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಸರಿಯಾದ ವ್ಯಕ್ತಿಗೆ, ಸರಿಯಾದ ಸಮಯದಲ್ಲಿ ಧರಿಸಿದರೆ, ನೀಲಿಮಣಿಯು ವೃತ್ತಿಜೀವನದಲ್ಲಿ ವೇಗದ ಪ್ರಗತಿ, ಶಿಸ್ತು, ಸ್ಥಿರತೆ ಮತ್ತು ದೀರ್ಘಕಾಲೀನ ಯಶಸ್ಸನ್ನು ನೀಡುತ್ತದೆ. ಆಡಳಿತ, ಕಾನೂನು, ಎಂಜಿನಿಯರಿಂಗ್, ರಾಜಕೀಯ ಮತ್ತು ನಾಯಕತ್ವ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ಇದನ್ನು ವಿಶೇಷವಾಗಿ ಶಿಫಾರಸು ಮಾಡಲಾಗುತ್ತದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ನೀಲಮಣಿ ಧರಿಸುವ ವಿಧಾನ:

  • ಲೋಹ: ಬೆಳ್ಳಿ ಅಥವಾ ಪಂಚಧಾತು
  • ಬೆರಳು: ಮಧ್ಯದ ಬೆರಳು
  • ಕೈ: ಬಲ
  • ದಿನ: ಶನಿವಾರ ಸಂಜೆ (ಸೂರ್ಯಾಸ್ತದ ನಂತರ)
  • ಸಮಯ: ಶುಕ್ಲ ಪಕ್ಷ
  • ಮಂತ್ರ: ಓಂ ಪ್ರಾಂ ಪ್ರೀಂ ಪ್ರಾಂ ಸಾಃ ಶನೈಶ್ಚರಾಯ ನಮಃ (108 ಬಾರಿ)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೃತ IAS ಮಹಾಂತೇಶ್​ ಪುತ್ರಿಗೆ ಯಾವ ಇಲಾಖೆಯಲ್ಲಿ ಕೆಲಸ? ಎಷ್ಟು ಸಂಬಳ? ಇಲ್ಲಿದೆ ವಿವರ

Source link

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ: 25 ಕೋಟಿ ನಾಗರಿಕರು ಬಡತನದ ರೇಖೆಯಿಂದ ಹೊರಬಂದಿದ್ದಾರೆ – Kannada News | President Murmu Highlights Social Justice, Women Empowerment, India’s Growth in Joint Session

ದೆಹಲಿ, ಜ.28: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 28, 2026) ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣ ಮಾಡಿದ್ದಾರೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಸ್ಮರಿಸಿದರು. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತಾರತಮ್ಯವಿಲ್ಲದೆ ಸಮಾನ ಹಕ್ಕುಗಳನ್ನು ನೀಡಿದೆ. ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಾಗಬಾರದು, ಅದು ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ಸರ್ಕಾರದ ಗುರಿಯಾಗಿದೆ ಎಂದು ಅವರು ತಿಳಿಸಿದರು. ಕಳೆದ ಒಂದು ದಶಕದ ಪ್ರಗತಿಯನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು ಒಂದು ಮಹತ್ವದ ಅಂಕಿಅಂಶವನ್ನು ಹಂಚಿಕೊಂಡರು. ಕಳೆದ 10 ವರ್ಷಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲವಾಗಿ 25 ಕೋಟಿ ನಾಗರಿಕರು ಬಡತನದ ರೇಖೆಯಿಂದ ಹೊರಬಂದಿದ್ದಾರೆ. ಬಡವರನ್ನು ಸಶಕ್ತಗೊಳಿಸುವ ಕಾರ್ಯಕ್ರಮಗಳು ಈಗ ಮೊದಲಿಗಿಂತ ಹೆಚ್ಚಿನ ವೇಗದಲ್ಲಿ ಸಾಗುತ್ತಿವೆ. ಭಾರತವು ಶೀಘ್ರದಲ್ಲೇ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ಹಾದಿಯಲ್ಲಿದೆ. ‘ಲಖ್ಪತಿ ದೀದಿ’ ಮತ್ತು ಮಹಿಳಾ ಮೀಸಲಾತಿಯಂತಹ ಕ್ರಮಗಳು ಮಹಿಳೆಯರ ಜೀವನವನ್ನು ಬದಲಿಸುತ್ತಿವೆ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link