Category Archives: Blog

Your blog category

32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​: 18 ಕೋಟಿ ಸಂಪತ್ತು ಕಳೆದುಕೊಂಡ ಮನೆ ಮಾಲೀಕ ಭಾವುಕ – Kannada News | House Helpers Rob Bengaluru Builder’s Home; Assets Worth 1.8 Crore Stolen

ಬೆಂಗಳೂರು, ಜನವರಿ 28: ಮಾರತ್ತಹಳ್ಳಿಯ ಯಮಲೂರಿನಲ್ಲಿ ಬಿಲ್ಡರ್ ಶಿವಕುಮಾರ್ ಅವರ ಮನೆಯಿಂದ ಸುಮಾರು 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ವಜ್ರ, ಬೆಳ್ಳಿ ಮತ್ತು ನಗದು ಕಳ್ಳತನವಾಗಿದೆ. ಮನೆ ಮಾಲೀಕರು ನೀಡಿದ ಹೇಳಿಕೆಯ ಪ್ರಕಾರ, ದಿನೇಶ್ ಮತ್ತು ಕಮಲಾ ಎಂಬ ನವದಂಪತಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇವರನ್ನು 20-22 ದಿನಗಳ ಹಿಂದಷ್ಟೇ ಕೆಲಸಕ್ಕೆ ನೇಮಿಸಲಾಗಿತ್ತು. ಕಳ್ಳತನದ ಸಮಯಕ್ಕೆ ಮನೆಯಲ್ಲಿದ್ದ ಇತರರೂ ಭೂಮಿ ಪೂಜೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರಿಂದ ಮನೆ ಖಾಲಿಯಾಗಿತ್ತು. ಕಳ್ಳರು ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಲು ವಿದ್ಯುತ್ ಸಂಪರ್ಕ, ಯುಪಿಎಸ್ ಮತ್ತು ವೈಫೈ ಅನ್ನು ಆಫ್ ಮಾಡಿದ್ದರು. ಒಟ್ಟು ಐದು ಮಂದಿ ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಕಳ್ಳತನವಾದ ವಸ್ತುಗಳಲ್ಲಿ 11.5 ಕೆಜಿ ಚಿನ್ನ, ವಜ್ರ, 5 ಕೆಜಿ ಬೆಳ್ಳಿ ಮತ್ತು 11.5 ಲಕ್ಷ ರೂಪಾಯಿ ನಗದು ಸೇರಿವೆ. ಈ ಸಂಪತ್ತು ತನ್ನ ಕಳೆದ 32 ವರ್ಷಗಳ ಶ್ರಮದ ಗಳಿಕೆಯಾಗಿದೆ. ಕುಟುಂಬಕ್ಕೆ ಅವನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದ ದಿನವೇ ಕಳ್ಳತನ ನಡೆದಿದೆ. ಕಳ್ಳತನವಾದ ವಸ್ತುಗಳಲ್ಲಿ ಮಕ್ಕಳಿಗೆ ಸರ್ಪ್ರೈಸ್ ಆಗಿ ನೀಡಲು ಇಟ್ಟಿದ್ದ ಐಫೋನ್‌ಗಳು ಕೂಡ ಸೇರಿವೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕ ಸಾರಿಗೆ ನೌಕರರಿಂದ ಜ. 29ರಂದು ‘ಬೆಂಗಳೂರು ಚಲೋ’: ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೂ ಪ್ಲ್ಯಾನ್​​! – Kannada News | Bengaluru Chalo’ Call by Transport Employees Tomorrow; Strike Threat Looms

ಸಾರಿಗೆ ನೌಕರರಿಂದ ‘ಬೆಂಗಳೂರು ಚಲೋಗೆ ಕರೆ

ಬೆಂಗಳೂರು, ಜನವರಿ 28: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಡಿದೆದ್ದಿದ್ದು, ನಾಳೆ ‘ಬೆಂಗಳೂರು ಚಲೋ’ಗೆ ಕರೆ ನೀಡಲಾಗಿದೆ. ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ಫ್ರೀಡಂ ಪಾರ್ಕ್​​ನಲ್ಲಿ ಪ್ರತಿಭಟನೆ ನಡೆಯಲಿದ್ದು, ಕಳೆದ ವರ್ಷ ಆಗಸ್ಟ್ 5ರಂದು ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆದರೆ ಈ ವರ್ಷದ ಆರಂಭದಲ್ಲೇ ಬೆಂಗಳೂರು ಚಲೋಗೆ ಕರೆ ನೀಡಲಾಗಿದೆ. ನಾಲ್ಕೂ ನಿಗಮಗಳ ವತಿಯಿಂದ ಪ್ರತಿಭಟನೆ ನಡೆಯಲಿದೆ.

ಬೇಡಿಕೆ ಈಡೇರದಿದ್ದರೆ ಮುಷ್ಕರಕ್ಕೆ ಸಿದ್ಧತೆ

ನಾಳೆ ಸಂಜೆ 4 ಗಂಟೆಯೊಳಗೆ ಸಾರಿಗೆ ನೌಕರರ ಬೇಡಿಕೆ ಈಡೇರಿಸಲಿಲ್ಲ ಅಂದರೆ, ಸುದ್ದಿಗೋಷ್ಟಿ ಕರೆದು ಮುಷ್ಕರಕ್ಕೆ ಕರೆ ನೀಡಲು ಪ್ಲ್ಯಾನ್ ಮಾಡಲಾಗಿದೆ. ಇದಕ್ಕೆ ಬೇಕಿರುವ ಅಗತ್ಯ ಸಿದ್ಧತೆಗಳನ್ನೂ ಮುಖಂಡರು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ನೌಕರರಿಗೆ ಕೆಎಸ್​​ಆರ್​​​ಟಿಸಿ ಶಾಕ್ ಕೊಟ್ಟಿದ್ದು, ಸಾರಿಗೆ ನೌಕರರು ಯಾವುದೇ ಮುಷ್ಕರ ಹೂಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ. ಗುರುವಾರ ಡ್ಯೂಟಿಗೆ ಬಂದಿಲ್ಲ ಅಂದರೆ ‘ನೋ ವರ್ಕ್ ನೋ ಪೇ’ ಎಂದು ಎಂಡಿ ಅಕ್ರಂ ಪಾಷ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಜ.29ರಂದು ಬೆಂಗಳೂರು ಚಲೋ ಕೈಗೊಂಡ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ KSRTC

01-01-2020ರಿಂದ 28-02-2023ರ ವರೆಗಿನ 38 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಹಾಗೂ 01.01.2024 ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದಕ್ಕೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿಯು ಜನವರಿ 29ರ ಗುರುವಾರ ಬೆಂಗಳೂರು ಚಲೋಗೆ ಕರೆ ನೀಡಿದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಇಲಾಖೆ ಮುಂಜಾಗೃತೆ ಕೈಗೊಂಡಿದೆ. ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು ಎಂದು ಅಧಿಕಾರಿಗಳಿಗೆ ಎಂಡಿ ಖಡಕ್​​ ಸೂಚನೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:57 am, Wed, 28 January 26

Source link

ಪಾಕಿಸ್ತಾನ್ ಸೂಪರ್ ಲೀಗ್​ಗೆ ಮ್ಯಾಕ್ಸ್​ವೆಲ್ ಎಂಟ್ರಿ… ಎಷ್ಟು ಕೋಟಿಗೆ ಗೊತ್ತಾ?

Source link

‘ಸು ಫ್ರಮ್ ಸೋ’ ಸುಮೇಧ್ ಬತ್ತಳಿಕೆಯಿಂದ ಬಂತು ‘ತುಳಸಿ’; ಹಾಡು ಕಿವಿಗೆ ಇಂಪು – Kannada News | Sumedh’s ‘Tulasi’ Song: A Hit Music Album Reviving Purandara Dasa’s Devotional Works

‘ಸು ಫ್ರಮ್ ಸೋ’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಸುಮೇಧ್ (Sumedh). ಕಾಲೇಜು ಓದುವಾಗಲೇ ಇಂಪಾದ ಹಾಡುಗಳನ್ನು ನೀಡಿ ಗಮನ ಸೆಳೆದವರು ಅವರು. ಅವರು ಈಗ ತಮ್ಮದೇ ಆದ ಕ್ರಿಯೇಷನ್​​​ಗೆ ಇಳಿದಿದ್ದಾರೆ. ಆಲ್ಬಂ ಹಾಡುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ‘ತುಳಸಿ’ ಹಾಡು ಮೆಚ್ಚುಗೆ ಪಡೆದುಕೊಂಡಿದೆ. ನೋಡಲು ಹಾಗೂ ಕೇಳಲೂ ಮುದ ನೀಡುವ ಹಾಡು ಟ್ರೆಂಡ್​​​ನಲ್ಲಿದೆ.

‘ತುಳಸಿ’ ಎಂಬುದು ಪುರಂದರ ದಾಸರ ದಾಸಪದಗಳಿಂದ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಸುಮೇಧ್ ಅವರು. ಹಾಡು ಕೇಳಲು ಎಷ್ಟು ಇಂಪಾಗಿದೆಯೋ, ಛಾಯಾಗ್ರಹಣ ವಿಷಯದಲ್ಲೂ ಅಷ್ಟೇ ಅಚ್ಚುಕಟ್ಟನ್ನು ಪಾಲಿಸಲಾಗಿದೆ. ಬಾಲ ಕಲಾವಿದೆಯಾಗಿ ಪ್ರಣ್ವಿ ಅಕ್ಷಯ್, ಮತ್ತೊಂದು ಪಾತ್ರದಲ್ಲಿ ಸುಷ್ಮಿತಾ ಭಟ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಮೂಲಕ ಸೂಕ್ಷ್ಮ ವಿಷಯಗಳನ್ನು ಹೇಳುವ ಪ್ರಯತ್ನ ನಡಿದೆ.

‘ತುಳಸಿ’ ಹಾಡನ್ನು ನಿರ್ದೇಶನ ಮಾಡಿದ್ದು ವಿಷ್ಣುರಾವ್. ಪುರಂದರ ದಾಸರ ಸಾಲುಗಳಿಗೆ ಎಲ್ಲಿಯೂ ದಕ್ಕೆ ಆಗದಂತೆ ಸುಂದರವಾಗಿ ಹಾಡನ್ನು ಕಟ್ಟಿಕೊಟ್ಟಿದ್ದಾರೆ. ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ನೋಡುತ್ತಾ, ಹಾಡನ್ನು ಕೇಳಿದರೆ ಬೇರೊಂದು ಲೋಕ ತೆರೆದುಕೊಳ್ಳುತ್ತದೆ.

ಹಾಡಿನ ಬಗ್ಗೆ ಮಾತನಾಡಿದ ಸುಮೇಧ್, ‘ರೆಕ್ಟ್ಯಾಂಗಲ್ ತಂಡ ಹಾಡಿನ ಛಾಯಾಗ್ರಗಣ ಮಾಡಿದೆ. ವಿಷ್ಣುರಾವ್ ಅವರು ಇದನ್ನು ನಿರ್ದೇಶನ ಮಾಡಿದರು. ಕನ್ನಡದಲ್ಲಿ ಮ್ಯೂಸಿಕ್ ಆಲ್ಬಂಗಳು ಕಡಿಮೆ. ಅದು ನಮ್ಮ ದುರಾದೃಷ್ಟ. ನಮ್ಮವರು ಯಾವುದಕ್ಕೂ ಕಡಿಮೆ ಇಲ್ಲ. ಒಳ್ಳೆಯ ಸಾಹಿತ್ಯ ಬರೆಯುವವರು ಇದ್ದಾರೆ’ ಎಂದಿದ್ದಾರೆ. ಹೆಚ್ಚೆಚ್ಚು ಆಲ್ಬಂಗಳು ಬರಬೇಕು ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ: ಕಾಲೇಜು ಹೋಗೋ ವಯಸ್ಸಲ್ಲಿ ‘ಸು ಫ್ರಮ್ ಸೋ’ಗೆ ಮ್ಯೂಸಿಕ್​ ಮಾಡಿದ ​ಸುಮೇಧ್; ಇಲ್ಲಿದೆ ಹಿನ್ನೆಲೆ

ಸುಮೇಧ್ ಅವರು ಈ ಮೊದಲು ‘ಮಾಯೆ’, ‘ತಾವರೆ’, ‘ಕರ್ಮ’ ಹಾಡುಗಳನ್ನು ಮಾಡಿದ್ದರು. ಈಗ ‘ತುಳಸಿ’ ಹಾಡು ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವುದರಿಂದ ಉಳಿದ ಹಾಡುಗಳಿಗೆ ವೀಕ್ಷಣೆ ಸಿಗುತ್ತಿದೆ. ಜನಪ್ರಿಯತೆ ಸಿಗಬೇಕು ಎಂದು ಈ ಹಾಡುಗಳನ್ನು ಅವರು ಮಾಡಿಲ್ಲವಂತೆ. ‘ತುಳಸಿ’ ಹಾಡಿಗೆ ಸಿಕ್ಕ ಜನಪ್ರಿಯತೆ ಅವರು ಬೋನಸ್ ಎಂದು ಪರಿಗಣಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಮಾನ ಪತನದಲ್ಲಿ ಅಜಿತ್ ಪವಾರ್ ಸಾವು: 2023ರಲ್ಲಿ ಕೂಡ ಈ ವಿಮಾನ ಪತನಗೊಂಡಿತ್ತು – Kannada News | Ajit Pawar Plane Crash: Learjet’s Dark History and Flight Safety Concerns Emerge

ನಾಗ್ಪುರ, ಜನವರಿ 28: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಇಂದು ಬೆಳಗ್ಗೆ ವಿಮಾನ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಅದೇ ಖಾಸಗಿ ವಿಮಾನವು ಸೆಪ್ಟೆಂಬರ್ 2023 ರಲ್ಲಿ ಕೂಡ ಅಪಘಾತಕ್ಕೀಡಾಗಿತ್ತು ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.ಈ ಹಿನ್ನೆಲೆಯಲ್ಲಿ, ವಿಮಾನದ ತಾಂತ್ರಿಕ ಸುರಕ್ಷತೆ ಮತ್ತು ನಿರ್ವಹಣಾ ಕಾರ್ಯವಿಧಾನಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ , ಲಿಯರ್‌ಜೆಟ್ 45 ಎಂಬ ಖಾಸಗಿ ವಿಮಾನ ನಿಯಂತ್ರಣ ಕಳೆದುಕೊಂಡಿತ್ತು.

ಇಳಿಯುವ ಸಮಯದಲ್ಲಿ, ವಿಮಾನವು ರನ್‌ವೇಗೆ ಡಿಕ್ಕಿ ಹೊಡೆದು ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ಭೀಕರ ಅಪಘಾತದಲ್ಲಿ, ಪೈಲಟ್, ಅಜಿತ್ ಪವಾರ್ ಮತ್ತು ಇತರ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರದ ದೃಶ್ಯಗಳು ತುಂಬಾ ಭಯ ಹುಟ್ಟಿಸುವಂತಿದ್ದವು. ವಿಮಾನದ ತುಣುಕುಗಳು ಎಲ್ಲೆಂದರಲ್ಲಿ ಚದುರಿಹೋಗಿದ್ದವು, ಬೆಂಕಿಯು ವ್ಯಾಪಕ ಹಾನಿಯನ್ನುಂಟುಮಾಡಿತ್ತು.

ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ. ಅದೇ ಲಿಯರ್‌ಜೆಟ್ 45XR ವಿಮಾನವು ಸೆಪ್ಟೆಂಬರ್ 14, 2023 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಯಿತು. ವಿಶಾಖಪಟ್ಟಣದಿಂದ ಮುಂಬೈಗೆ ಬರುತ್ತಿದ್ದ ವಿಮಾನವು ಭಾರೀ ಮಳೆ ಮತ್ತು ಕಡಿಮೆ ಗೋಚರತೆಯ ಪರಿಸ್ಥಿತಿಯಲ್ಲಿ ರನ್‌ವೇಯಿಂದ ಜಾರಿತ್ತು.

ಮತ್ತಷ್ಟು ಓದಿ: Ajit Pawar Death: ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ, ಡಿಸಿಎಂ ಅಜಿತ್ ಪವಾರ್ ಸಾವು

ಅದೃಷ್ಟವಶಾತ್, ಆ ಸಮಯದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿರಲಿಲ್ಲ. ನಾಗರಿಕ ವಿಮಾನಯಾನ ಸಚಿವಾಲಯದ ವರದಿಯ ಪ್ರಕಾರ, ಆ ಸಮಯದಲ್ಲಿ ವಿಮಾನದ ಹಾರಾಟ ಸುಗಮವಾಗಿತ್ತು. ಆದಾಗ್ಯೂ, ಭಾರೀ ಮಳೆ, ಕಡಿಮೆ ಗೋಚರತೆ ಮತ್ತು ಗಾಳಿಯ ದಿಕ್ಕನ್ನು ಬದಲಾಯಿಸುವುದರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಪರಿಸ್ಥಿತಿಗಳು ಜಟಿಲವಾಗಿದ್ದವು. ಆದಾಗ್ಯೂ, ಈ ಅಪಘಾತದ ನಂತರ ವಿಮಾನವನ್ನು ಮತ್ತೆ ಸೇವೆಗೆ ಹೇಗೆ ತರಲಾಯಿತು ಎಂಬ ಪ್ರಶ್ನೆಗಳು ಈಗ ಎದ್ದಿವೆ.

ಇಂದಿನ ಅಪಘಾತದ ನಂತರ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮತ್ತು ಸಂಬಂಧಿತ ಸಂಸ್ಥೆಗಳು ತನಿಖೆಯನ್ನು ಪ್ರಾರಂಭಿಸಿವೆ. ವಿಮಾನದ ನಿರ್ವಹಣಾ ಇತಿಹಾಸ, ತಾಂತ್ರಿಕ ತಪಾಸಣೆ ವರದಿಗಳು ಮತ್ತು ಪೈಲಟ್‌ಗಳಿಗೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಕಪ್ಪು ಪೆಟ್ಟಿಗೆ ಕಂಡುಬಂದರೆ, ಅಪಘಾತದ ನಿಖರವಾದ ಕಾರಣ ಸ್ಪಷ್ಟವಾಗುವ ಸಾಧ್ಯತೆಯಿದೆ.

ಅಜಿತ್ ಪವಾರ್ ಅವರ ನಿಧನವು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಅನೇಕ ರಾಜಕೀಯ ಮುಖಂಡರು ಮತ್ತು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪದೇ ಪದೇ ಅಪಘಾತಗಳ ಇತಿಹಾಸದ ಹೊರತಾಗಿಯೂ ವಿಮಾನವನ್ನು ಸೇವೆಯಲ್ಲಿ ಇರಿಸಲಾಗುತ್ತಿರುವುದರಿಂದ ವಿಮಾನ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಹಾಂತೇಶ್​​ ಬೀಳಗಿ ಪುತ್ರಿಗೆ ಅನುಕಂಪದ ನೌಕರಿ: ಕೆಲಸ ಎಲ್ಲಿ? ಮಾಹಿತಿ ಇಲ್ಲಿದೆ – Kannada News | Mahantesh Bilagi’s Daughter Appointed to Karnataka Govt Job on Compassionate Grounds

ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪುತ್ರಿಗೆ ನೌಕರಿ ನೀಡಿ ಆದೇಶ

ಬೆಂಗಳೂರು, ಜನವರಿ 28: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ, ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಬೀಳಗಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗ ನೀಡಲಾಗಿದ್ದು, ಜ.2ರಂದು ಸಿಎಂ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಅನುಕಂಪದ ಉದ್ಯೋಗ ನೀಡಲು ನಿರ್ಧರಿಸಲಾಗಿತ್ತು.

ಆದೇಶ ಪತ್ರದಲ್ಲಿ ಏನಿದೆ?

ಭಾರತೀಯ ಆಡಳಿತ ಸೇವೆಗೆ ಸೇರಿದ ಅಧಿಕಾರಿಯಾದ ದಿವಂಗತ ಮಹಾಂತೇಶ್ ಬೀಳಗಿ ಅವರು ಸೇವೆಯಲ್ಲಿರುವಾಗಲೇ 2025ರ ನವೆಂಬರ್​​ 25ರಂದು ನಿಧನ ಹೊಂದಿರುವುದರಿಂದ, ಇವರ ಪುತ್ರಿಯಾದ ಚೈತನ್ಯಾ ಎಮ್. ಬೀಳಗಿ, ಇವರನ್ನು ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996ರ ನಿಯಮ 6(1)ರನ್ವಯ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕ ಹುದ್ದೆಗೆ ಎರಡು ವರ್ಷಗಳ ಪರೀಕ್ಷಾರ್ಥಾವಧಿಯ ಮೇರೆಗೆ ಹಾಗೂ ಷರತ್ತುಗಳಿಗೆ ಒಳಪಟ್ಟು ಅನುಕಂಪದ ಆಧಾರದ ಮೇಲೆ ನೇಮಕ ಮಾಡಲಾಗಿರೋದಾಗಿ ತಿಳಿಸಲಾಗಿದೆ. 15 ದಿನಗಳ ಒಳಗೆ ಕೆಲಸಕ್ಕೆ ಹಾಜರಾಗುವಂತೆಯೂ ಸೂಚಿಸಲಾಗಿದೆ.

ಇದನ್ನೂ ಓದಿ: ಮೃತ IAS ಅಧಿಕಾರಿ ಮಹಾಂತೇಶ್‌ ಬೀಳಗಿ ಪುತ್ರಿಗೆ ಅನುಕಂಪದ ನೌಕರಿ ನೀಡಲು ಸಂಪುಟ ಒಪ್ಪಿಗೆ, ಯಾವ ಹುದ್ದೆ?

ನವೆಂಬರ್ 25ರಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್​​ ಬಳಿ ಕಾರು ಅಪಘಾತ ನಡೆದು ಮಹಾಂತೇಶ ಬೀಳಗಿ ಮೃತಪಟ್ಟಿದ್ದರು. ಏಕಾಏಕಿ ಅಡ್ಡ ಬಂದ ಶ್ವಾನವನ್ನು ಚಾಲಕ ಉಳಿಸಲು ಹೋದ ಪರಿಣಾಮ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಅಪಘಾತಕ್ಕೀಡಾಗಿತ್ತು. ಈ ವೇಳೆ ಮಹಾಂತೇಶ್ ಬಿಳಗಿ ಸೇರಿದಂತೆ ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಕೂಡ ಮೃತಪಟ್ಟಿದ್ದರು.

ವರದಿ: ಈರಣ್ಣಾ ಬಸವ, ಟಿವಿ9 ಕನ್ನಡ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯೂರೋಪಿಯನ್ ಒಕ್ಕೂಟದೊಂದಿಗಿನ ಒಪ್ಪಂದದಿಂದ ಭಾರತಕ್ಕೆ ಹೆಚ್ಚು ಲಾಭ: ಜೇಮಿಸನ್ – Kannada News | India comes out on top in deal with European Union, says US trade representative Jamieson Greer

ನವದೆಹಲಿ, ಜನವರಿ 28: ಭಾರತ ಮತ್ತು ಯೂರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಅಮೆರಿಕದವರು ಪ್ರತಿಕ್ರಿಯಿಸಿದ್ದಾರೆ. ಭಾರತಕ್ಕೆ ಒಳ್ಳೆಯ ಒಪ್ಪಂದ ದಕ್ಕಿತು ಎಂದು ಅಮೆರಿಕದ ಟ್ರೇಡ್ ರೆಪ್ರೆಸೆಂಟೇಟಿವ್ ಆದ ಜೇಮೀಸನ್ ಗ್ರೀರ್ (Jamieson Greer) ಅಭಿಪ್ರಾಯಪಟ್ಟಿದ್ದಾರೆ. ‘ಈ ಒಪ್ಪಂದದಲ್ಲಿ ಭಾರತ ಹೆಚ್ಚು ಅನುಕೂಲ ಪಡೆದಿದೆ. ಹೆಚ್ಚು ಮಾರುಕಟ್ಟೆ ಪ್ರವೇಶ ಮತ್ತು ವಲಸೆಗೆ ಅವಕಾಶ ಪಡೆದಿದೆ’ ಎಂದು ಖಾಸಗಿ ವಾಹಿನಿಯೊಂದಕ್ಕೆ ಗ್ರೀರ್ ಪ್ರತಿಕ್ರಿಯಿಸಿದ್ದಾರೆ.

ಭಾರತ ಹಾಗೂ ಐರೋಪ್ಯ ಒಕ್ಕೂಟದ ಒಪ್ಪಂದವು ಅಮೆರಿಕದ ಟ್ಯಾರಿಫ್ ಕ್ರಮದ ಪರಿಣಾಮ ಎಂದು ಜೇಮಿಸನ್ ಗ್ರೀರ್ ಬಣ್ಣಿಸಿದ್ದಾರೆ. ಅಮೆರಿಕವು ದೇಶೀಯ ಉತ್ಪಾದನೆಗೆ ಒತ್ತುಕೊಡುತ್ತಿದೆ. ಬೇರೆ ದೇಶಗಳು ತಮ್ಮ ಹೆಚ್ಚುವರಿ ಉತ್ಪಾದನೆ ಸಾಗಿಸಲು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿವೆ ಎಂದೂ ಅಮೆರಿಕದ ವ್ಯಾಪಾರ ಪ್ರತಿನಿಧಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದದಿಂದ ಹೊರಗುಳಿದಿವೆ ಈ ಮೂರು ಸೆಕ್ಟರ್​ಗಳು; ಇಲ್ಲಿದೆ ಡೀಲ್​ನ ಹೈಲೈಟ್ಸ್

ಭಾರತದ ಮೇಲೆ ಟ್ಯಾರಿಫ್ ಇಳಿಕೆ ಇಲ್ಲ?

ರಷ್ಯನ್ ತೈಲ ಖರೀದಿ ಮಾಡಲಾಗುತ್ತಿರುವ ಕಾರಣಕ್ಕೆ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 25 ಟ್ಯಾರಿಫ್ ಅನ್ನು ಅಮೆರಿಕ ಹಾಕುತ್ತಿದೆ. ಒಟ್ಟು ಶೇ. 50 ಟ್ಯಾರಿಫ್ ಇದೆ. ಈಗ ಭಾರತೀಯ ತೈಲ ಕಂಪನಿಗಳು ರಷ್ಯನ್ ತೈಲ ಖರೀದಿ ಕಡಿಮೆ ಮಾಡಿವೆ. ಅಮೆರಿಕದ ವಾಣಿಜ್ಯ ಕಾರ್ಯದರ್ಶಿಯಾದ ಸ್ಕಾಟ್ ಬೆಸೆಂಟ್ ಅವರು ಭಾರತದ ಮೇಲೆ ಟ್ಯಾರಿಫ್ ಅನ್ನು ಇಳಿಸಬಹುದು ಎಂದು ಸುಳಿವು ನೀಡಿದ್ದರು. ಆದರೆ, ಜೇಮಿಸನ್ ಗ್ರೀರ್ ಅವರು ಬೇರೆಯೇ ಹೇಳಿಕೆ ನೀಡಿದ್ದಾರೆ.

ಭಾರತವು ರಷ್ಯದಿಂದ ತೈಲ ಆಮದನ್ನು ಕಡಿಮೆ ಮಾಡಿರುವುದು ಹೌದು. ಆದರೂ ಟ್ಯಾರಿಫ್ ಕ್ರಮ ಮುಂದುವರಿಯುತ್ತದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿಯಾದ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ಯೂರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದಕ್ಕೆ ಸಹಿ; ಹೊಸ ಇತಿಹಾಸ

‘ರಷ್ಯನ್ ತೈಲ ವಿಚಾರದಲ್ಲಿ ಭಾರತದ ಕ್ರಮಗಳ ಮೇಲೆ ಅಮೆರಿಕ ನಿಕಟವಾಗಿ ಕಣ್ಣಿಟ್ಟಿದೆ. ಭಾರತದ ವಾಣಿಜ್ಯ ಸಚಿವರ ಜೊತೆ ಸಂಪರ್ದಲ್ಲಿದ್ದೇವೆ’ ಎಂದೂ ಜೇಮಿಸನ್ ಗ್ರೀರ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅರಿಜಿತ್ ಸಿಂಗ್ ಹಾಡು ನಿಲ್ಲಿಸಿದ್ದು ಏಕೆ? ಕೊಟ್ಟ ಕಾರಣ ಏನು? – Kannada News | Why really Arijit Singh quit singing here is the reason

ಅರಿಜಿತ್ ಸಿಂಗ್ (Arijit Singh), ಭಾರತದ ಮಾತ್ರವಲ್ಲ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಕೇಳುಗರನ್ನು ಹೊಂದಿರುವ ಹಾಡುಗಾರರಲ್ಲಿ ಒಬ್ಬರು. ವಿಶ್ವದ ಅತ್ಯಂತ ಜನಪ್ರಿಯ, ದುಬಾರಿ ಗಾಯಕಿ ಟೇಲರ್ವ ಸ್ವಿಫ್ಟ್​ಗಿಂತಲೂ ಅತಿ ಹೆಚ್ಚು ಅಭಿಮಾನಿಗಳನ್ನು ಅವರು ಸ್ಪಾಟಿಫೈ ಹಾಗೂ ಇತರೆ ವೇದಿಕೆಗಳಲ್ಲಿ ಹೊಂದಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಕೇಳಲಾಗುವ ಹಾಡುಗಳು ಸಹ ಅರಿಜಿತ್ ಸಿಂಗ್ ಅವರದ್ದೇ ಆಗಿರುತ್ತವೆ. ಅರಿಜಿತ್ ಸಿಂಗ್ ಪ್ರಸ್ತುತ ಭಾರತ ಅತ್ಯಂತ ಬೇಡಿಕೆಯ ಗಾಯಕರು. ವೃತ್ತಿ ಜೀವನದ ಪರಮೋಚ್ಛ ಸ್ಥಿತಿಯಲ್ಲಿ ಅರಿಜಿತ್ ಸಿಂಗ್ ಇದ್ದರು, ಇಂಥಹಾ ಸಮಯದಲ್ಲಿ ಅವರು ಗಾಯಕನದಿಂದ ಹಠಾತ್ ನಿವೃತ್ತಿ ಘೋಷಣೆ ಮಾಡಿದ್ದಾರೆ.

ನಿನ್ನೆ ರಾತ್ರಿ ಹಠಾತ್ತನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಅರಿಜಿತ್ ಸಿಂಗ್, ತಾವು ಗಾಯನ ನಿಲ್ಲಿಸುತ್ತಿರುವುದಾಗಿಯೂ, ಮುಂದೆ ಯಾವುದೇ ಹೊಸ ಪ್ರಾಜೆಕ್ಟ್​​ಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಘೋಷಿಸಿದ್ದಾರೆ. ಇದು ಸಂಗೀತ ಪ್ರೇಮಿಗಳಿಗೆ ತೀವ್ರ ಆಘಾತ ತಂದಿದೆ. ಅರಿಜಿತ್ ಅವರ ಈ ನಿರ್ಣಯವನ್ನು ಅವರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಆದರೆ ಅರಿಜಿತ್ ಅವರು ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್​ನಲ್ಲಿ ತಮ್ಮ ಈ ನಿರ್ಣಯಕ್ಕೆ ಸ್ಪಷ್ಟ ಕಾರಣ ನೀಡಿಲ್ಲ ಆದರೆ ಟ್ವಿಟ್ಟರ್​​ನಲ್ಲಿ ಈ ಬಗ್ಗೆ ತುಸು ವಿವರವಾಗಿ ಬರೆದುಕೊಂಡಿದ್ದಾರೆ.

ಖಾಸಗಿತನ ಇಷ್ಟಪಡುವ ಅರಿಜಿತ್ ಸಿಂಗ್, ತಮ್ಮ ಟ್ವಿಟ್ಟರ್ ಖಾತೆಯನ್ನು ಪಬ್ಲಿಕ್ ಮಾಡಿಲ್ಲ, ಅವರು ಅನುಮತಿ ನೀಡುವ ಫಾಲೋವರ್​​ಗಳಿಗೆ ಮಾತ್ರವೇ ಅವರ ಪೋಸ್ಟ್ ಕಾಣುತ್ತದೆ. ಅರಿಜಿತ್ ಸಿಂಗ್ ಅವರ ನಿವೃತ್ತಿ ಘೋಷಣೆಯನ್ನು ಅವರ ಕೆಲವು ಫಾಲೋವರ್​​ಗಳು ವಿರೋಧಿಸಿದ್ದು, ಫಾಲೋವರ್​​ಗಳಿಗೆ ಅರಿಜಿತ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಣಯಕ್ಕೆ ಕಾರಣವನ್ನು ಅವರು ತಮ್ಮ ಪೋಸ್ಟ್ ಒಂದಲ್ಲಿ ತಿಳಿಸಿದ್ದು, ಪೋಸ್ಟ್​ನ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:ಸಿನಿಮಾ ಹಾಡು ಹೇಳಲು ಹಣ ಕೇಳಲ್ಲ ಅರಿಜಿತ್ ಸಿಂಗ್; ವಿವರಿಸಿದ ಗಾಯಕ

‘ನನ್ನ ಈ ನಿರ್ಣಯಕ್ಕೆ ಒಂದು ಕಾರಣ ಎಂದು ಇಲ್ಲ, ಬದಲಿಗೆ ಹಲವು ಕಾರಣಗಳಿವೆ. ಈ ನಿರ್ಧಾರವನ್ನು ಬಹಳ ಹಿಂದಿನಿಂದ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ ಆದರೆ ಈಗ ಸರಿಯಾದ ಧೈರ್ಯವನ್ನು ಒಗ್ಗೂಡಿಸಿಕೊಂಡು ನಿರ್ಣಯ ಪ್ರಕಟಿಸಿದ್ದೇನೆ. ನನ್ನ ಈ ನಿರ್ಣಯಕ್ಕೆ ಹಲವು ಕಾರಣಗಳಿದ್ದು, ಅವುಗಳಲ್ಲಿ ಒಂದೆಂದರೆ ನನಗೆ ಯಾವುದೇ ವಿಷಯ ಬಹಳ ಬೇಗ ಬೋರ್ ಎನಿಸುತ್ತದೆ. ಇದೇ ಕಾರಣಕ್ಕೆ ನಾನು ಲೈವ್ ಶೋ ಮಾಡುವಾಗಲೂ ಸಹ ಪದೇ ಪದೇ ಸಂಗೀತ, ರಾಗಗಳನ್ನು ಬದಲಾಯಿಸುತ್ತಾ ಇರುತ್ತೇನೆ. ಈಗ ನನಗೆ ಬೋರ್ ಆಗಿದೆ, ಹಾಡುಗಾರಿಕೆ ಏಕತಾನತೆ ಎನಿಸಿದೆ, ಈಗ ನಾನು ಜೀವನ ಸಾಗಿಸಲು ಬೇರೆ ಸಂಗೀತ ಮಾಡಬೇಕು ಎಂದಿದ್ದಾರೆ. ಮತ್ತೊಂದು ಟ್ವೀಟ್​​ನಲ್ಲಿ, ‘ಹೊಸ ಗಾಯಕರ ಕೆಲಸಗಳನ್ನು ನೋಡಲು ನಾನು ಉತ್ಸುಕನಾಗಿದ್ದೇನೆ, ಯಾರಾದರೂ ಹೊಸ ಗಾಯಕರು, ನಿಜಕ್ಕೂ ನನಗೆ ಹಾಡಿನ ಮೂಲಕ ಸ್ಪೂರ್ತಿ ತುಂಬಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ ಅರಿಜಿತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate Today: 16,500 ರೂ ಗಡಿದಾಟಿದ ಅಪರಂಜಿ ಚಿನ್ನದ ಬೆಲೆ – Kannada News | Gold Price Today on 28th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 28: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯದ್ವಾತದ್ವಾ ಏರುತ್ತಿವೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ 295ರೂನಿಂದ 305 ರೂವರೆಗೆ ಏರಿದೆ. ಬೆಳ್ಳಿ ಬೆಲೆಯಂತೂ ಕಿಲೋಗೆ ನಾಲ್ಕು ಲಕ್ಷ ರೂ ಬೆಲೆ ಮುಟ್ಟಿದೆ. ಆಭರಣ ಚಿನ್ನದ ಬೆಲೆ 15,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆ 16,500 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,51,400 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,65,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 38,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,51,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 38,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 40,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 28ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,517 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,140 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,146 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 380 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,517 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,140 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 380 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 15,140 ರೂ
  • ಚೆನ್ನೈ: 15,330 ರೂ
  • ಮುಂಬೈ: 15,140 ರೂ
  • ದೆಹಲಿ: 15,155 ರೂ
  • ಕೋಲ್ಕತಾ: 15,140 ರೂ
  • ಕೇರಳ: 15,140 ರೂ
  • ಅಹ್ಮದಾಬಾದ್: 15,145 ರೂ
  • ಜೈಪುರ್: 15,155 ರೂ
  • ಲಕ್ನೋ: 15,155 ರೂ
  • ಭುವನೇಶ್ವರ್: 15,140 ರೂ

ಇದನ್ನೂ ಓದಿ: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್​ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 637 ರಿಂಗಿಟ್ (14,890 ರುಪಾಯಿ)
  • ದುಬೈ: 566.25 ಡಿರಾಮ್ (14,125 ರುಪಾಯಿ)
  • ಅಮೆರಿಕ: 158.50 ಡಾಲರ್ (14,521 ರುಪಾಯಿ)
  • ಸಿಂಗಾಪುರ: 204.90 ಸಿಂಗಾಪುರ್ ಡಾಲರ್ (14,887 ರುಪಾಯಿ)
  • ಕತಾರ್: 563.50 ಕತಾರಿ ರಿಯಾಲ್ (14,164 ರೂ)
  • ಸೌದಿ ಅರೇಬಿಯಾ: 575 ಸೌದಿ ರಿಯಾಲ್ (14,048 ರುಪಾಯಿ)
  • ಓಮನ್: 60.10 ಒಮಾನಿ ರಿಯಾಲ್ (14,301 ರುಪಾಯಿ)
  • ಕುವೇತ್: 46.19 ಕುವೇತಿ ದಿನಾರ್ (13,872 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 380 ರೂ
  • ಚೆನ್ನೈ: 400 ರೂ
  • ಮುಂಬೈ: 380 ರೂ
  • ದೆಹಲಿ: 380 ರೂ
  • ಕೋಲ್ಕತಾ: 380 ರೂ
  • ಕೇರಳ: 400 ರೂ
  • ಅಹ್ಮದಾಬಾದ್: 380 ರೂ
  • ಜೈಪುರ್: 380 ರೂ
  • ಲಕ್ನೋ: 380 ರೂ
  • ಭುವನೇಶ್ವರ್: 400 ರೂ
  • ಪುಣೆ: 380

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಅಜಿತ್ ಪವಾರ್ ಇದ್ದ ವಿಮಾನ ಪತನಗೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | DGCA Investigates Ajit Pawar Plane Crash: Baramati CCTV Footage Key to Unraveling Mystery

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಅಥವಾ ಫೋಟೋಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಾರಾಮತಿ ವಿಮಾನ ನಿಲ್ದಾಣದ ಸಮೀಪವಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ವಿಮಾನವು ರನ್‌ವೇ ಹತ್ತಿರ ಬರುತ್ತಿದ್ದಂತೆ ದಿಢೀರ್ ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಳ್ಳುವುದನ್ನಿ ಈ ವಿಡಿಯೋದಲ್ಲಿ ನೋಡಬಹುದು. ವಿಮಾನವು ಎರಡನೇ ಬಾರಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ (Second Approach) ಈ ಘಟನೆ ಸಂಭವಿಸಿದೆ. ಸಿಸಿಟಿವಿ ದೃಶ್ಯದಲ್ಲಿ ವಿಮಾನವು ನಿಯಂತ್ರಣ ಕಳೆದುಕೊಂಡು ವೇಗವಾಗಿ ಭೂಮಿಗೆ ಅಪ್ಪಳಿಸುವುದು ಮತ್ತು ನಂತರದ ಕ್ಷಣದಲ್ಲೇ ಭಾರಿ ಸ್ಫೋಟದೊಂದಿಗೆ ದಟ್ಟವಾದ ಹೊಗೆ ಏರುವುದು ದಾಖಲಾಗಿದೆ. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಈಗ ಡಿಜಿಸಿಎ (DGCA) ಮತ್ತು ತನಿಖಾ ಸಂಸ್ಥೆಗಳು ವಿಮಾನ ಪತನದ ನಿಖರ ಕಾರಣವನ್ನು ಪತ್ತೆಹಚ್ಚಲು ಬಳಸಿಕೊಳ್ಳುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link