Category Archives: Blog

Your blog category

ಪ್ರವಾಸಿಗರೇ ಗಮನಿಸಿ, ಮಂಗಳೂರಿನ ಬೀಚ್​ಗಳಲ್ಲಿ ಹೈಅಲರ್ಟ್: ವಾಟರ್ ಸ್ಪೋರ್ಟ್ಸ್‌ ಸಂಪೂರ್ಣ ಸ್ಥಗಿತ, ಸಮುದ್ರಕ್ಕಿಳಿಯುವಂತಿಲ್ಲ – Kannada News

ಮಂಗಳೂರಿನ ಬೀಚ್​ಗಳಲ್ಲಿ ಹೈಅಲರ್ಟ್Image Credit source: tv9

ಮಂಗಳೂರು, ಜೂನ್ 11: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕರಾವಳಿ ಜಿಲ್ಲೆಗಳಿಗೆ ಪ್ರವಾಸ ಮಾಡಲು ಯೋಜಿಸುತ್ತಿರುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಇಂದಿನಿಂದ ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ (Monsoon) ಚುರುಕುಗೊಂಡಿದ್ದು, ಕಡಲ ತೀರದಲ್ಲಿ ಭಾರಿ ಪ್ರಮಾಣದ ಅಲೆಗಳ ಅಬ್ಬರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರಿನ ಎಲ್ಲಾ ಪ್ರಮುಖ ಬೀಚ್​ಗಳಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಹೈಅಲರ್ಟ್ ಘೋಷಿಸಿದ್ದು, ಕಡಲ ತೀರದ ಮನರಂಜನಾ ಚಟುವಟಿಕೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಬ್ರೇಕ್ ಹಾಕಲಾಗಿದೆ.

ಮುಖ್ಯಾಂಶಗಳು

  • ಮುಂಗಾರು ಚುರುಕು; ಕಡಲ ತೀರದಲ್ಲಿ ಹೈಅಲರ್ಟ್.
  • ವಾಟರ್ ಸ್ಪೋರ್ಟ್ಸ್‌ಗಳು ಸಂಪೂರ್ಣ ಸ್ಥಗಿತ.
  • ಜೀವ ರಕ್ಷಕ ಸಿಬ್ಬಂದಿಯಿಂದ ನಿರಂತರ ಕಣ್ಗಾವಲು.

ತೇಲುವ ಸೇತುವೆ, ಬೋಟಿಂಗ್ ಸೇರಿದಂತೆ ಸಾಹಸ ಕ್ರೀಡೆಗಳು ಬಂದ್

ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮಂಗಳೂರಿನ ಪ್ರಸಿದ್ಧ ಪಣಂಬೂರು ಬೀಚ್ (Panambur Beach), ತಣ್ಣೀರುಬಾವಿ ಹಾಗೂ ಸೋಮೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲಾ ಬೀಚ್‌ಗಳಲ್ಲಿ ಜನಪ್ರಿಯ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಇನ್ನು ಮುಂದೆ ಮುಂಗಾರು ಮುಗಿಯುವವರೆಗೆ ಪ್ರವಾಸಿಗರ ಅತ್ಯಂತ ಆಕರ್ಷಣೆಯಾಗಿದ್ದ ತೇಲುವ ಸೇತುವೆ (Floating Bridge), ಬೋಟಿಂಗ್, ಜೆಟ್ ಸ್ಕೀ (Jet Ski) ಹಾಗೂ ಪ್ಯಾರಾ ಸೈಲಿಂಗ್ ಸೇರಿದಂತೆ ಯಾವುದೇ ಸಾಹಸ ಹಾಗೂ ಮನರಂಜನಾ ಕ್ರೀಡೆಗಳಿಗೆ ಅವಕಾಶ ಇರುವುದಿಲ್ಲ. ಪ್ರವಾಸಿಗರ ಜೀವಕ್ಕೆ ಅಪಾಯ ಎದುರಾಗಬಾರದು ಎನ್ನುವ ಕಾರಣಕ್ಕೆ ಈ ಕಠಿಣ ನಿಯಮವನ್ನು ಜಾರಿಗೊಳಿಸಲಾಗಿದೆ.

ರಕ್ಷಣೆಗೆ ಹಗ್ಗದ ಬ್ಯಾರಿಕೇಡ್: ಪೊಲೀಸರ ಕಠಿಣ ನಿಗಾ

ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಪ್ರವಾಸಿಗರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯದಂತೆ ತಡೆಯಲು ದಡದಲ್ಲೇ ಸುರಕ್ಷತಾ ಹಗ್ಗಗಳನ್ನು (Safety Ropes) ಕಟ್ಟಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ನಿಯಮ ಉಲ್ಲಂಘಿಸಿ ಯಾರಾದರೂ ಸಮುದ್ರಕ್ಕೆ ಇಳಿಯಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಅನಾಹುತಗಳನ್ನು ತಪ್ಪಿಸಲು ಲೈಫ್ ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲುಪಡೆ (Coastal Security Police) ಹಾಗೂ ಸ್ಥಳೀಯ ಪೊಲೀಸರು ಬೀಚ್‌ಗಳಲ್ಲಿ ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು ನಿರಂತರ ಕಾವಲು ಕಾಯುತ್ತಿದ್ದಾರೆ.

ದಡದಲ್ಲೇ ಕುಳಿತು ಅಲೆಗಳ ವೀಕ್ಷಣೆಗೆ ಮಾತ್ರ ಅವಕಾಶ

ಬೀಚ್ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರದೇ ಇದ್ದರೂ, ಕಡಲಿಗೆ ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕರಾವಳಿಗೆ ಬರುವ ಪ್ರವಾಸಿಗರು ಕೇವಲ ದಡದ ಸುರಕ್ಷಿತ ಜಾಗದಲ್ಲಿ ಕುಳಿತು ಮುಂಗಾರು ಮಳೆಯ ಅಬ್ಬರದ ಅಲೆಗಳನ್ನು ವೀಕ್ಷಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರು ಮತ್ತು ಸ್ಥಳೀಯರು ಇಲಾಖೆಯ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಅಧಿಕಾರಿಗಳೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಭಾರತೀಯ..! – Kannada News

ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಈ ತಂಡದಲ್ಲಿ ದೆಹಲಿ ಮೂಲದ ಆಲ್​ರೌಂಡರ್ ನಿಖಿಲ್ ಚೌಧರಿ (Nikhil Chaudhary) ಕಾಣಿಸಿಕೊಂಡಿದ್ದಾರೆ. ನಿಖಿಲ್ ಭಾರತೀಯ ಮೂಲದ ಆಸ್ಟ್ರೇಲಿಯನ್ ಕ್ರಿಕೆಟಿಗ. ಈ ಹಿಂದೆ ಪಂಜಾಬ್ ಪರ ದೇಶೀಯ ಅಂಗಳದಲ್ಲಿ ಕಣಕ್ಕಿಳಿದಿದ್ದರು. ಇದೀಗ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಈ ಹಿಂದೆ ಪ್ರಕಟಿಸಲಾಗಿದ್ದ ಆಸ್ಟ್ರೇಲಿಯಾ ಟಿ20 ತಂಡದಲ್ಲಿ ನಿಖಿಲ್ ಚೌಧರಿ ಸ್ಥಾನ ಪಡೆದಿರಲಿಲ್ಲ. ಆದರೆ ವೈಯುಕ್ತಿಕ ಕಾರಣಗಳಿಮದಾಗಿ ಟ್ರಾವಿಸ್ ಹೆಡ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಇದೀಗ ನಿಖಿಲ್ ಚೌಧರಿಯನ್ನು ಆಸೀಸ್ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ.

62 ವರ್ಷಗಳ ಬಳಿಕ ಭಾರತೀಯನಿಗೆ ಸ್ಥಾನ!

ಆಸ್ಟ್ರೇಲಿಯಾ ತಂಡದಲ್ಲಿ ಈ ಹಿಂದೆ ಭಾರತೀಯ ಮೂಲದ ತನ್ವೀರ್ ಸಂಘ, ಗುರಿಂದರ್ ಸಂಧು ಸೇರಿದಂತೆ ಕೆಲ ಆಟಗಾರರು ಕಾಣಿಸಿಕೊಂಡಿದ್ದರು. ಆದರೆ ಇವರು ಯಾರು ಕೂಡ ಭಾರತದಲ್ಲಿ ಜನಿಸಿದವರಲ್ಲ. ಬದಲಾಗಿ ಅವರ ಪೋಷಕರು ಭಾರತೀಯರಾಗಿದ್ದರಿಂದ ಭಾರತೀಯ ಮೂಲದವರಾಗಿ ಗುರುತಿಸಿಕೊಂಡಿದ್ದರು.

ಆದರೆ ನಿಖಿಲ್ ಚೌಧರಿ ಪಂಜಾಬ್​ನಲ್ಲಿ ಜನಿಸಿ, ಪಂಜಾಬ್​ನಲ್ಲೇ ಕ್ರಿಕೆಟ್ ಆಡಿ ಬೆಳೆದ ಆಟಗಾರ. ಹೀಗಾಗಿ ಆಸ್ಟ್ರೇಲಿಯಾ ತಂಡಕ್ಕೆ ನಿಖಿಲ್ ಆಯ್ಕೆಯು ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಆಸ್ಟ್ರೇಲಿಯಾ ಕ್ರಿಕೆಟ್​ನಲ್ಲಿ 62 ವರ್ಷಗಳ ಬಳಿಕ ಭಾರತೀಯ ಆಟಗಾರನೊಬ್ಬ ಸ್ಥಾನ ಪಡೆದಿರುವುದು ವಿಶೇಷ.

ಇದಕ್ಕೂ ಮುನ್ನ, ಅಂದರೆ 1960 ರ ದಶಕದಲ್ಲಿ ಗುಜರಾತ್ ಮೂಲದ ರುಸಿ ಸುರ್ತಿ ಭಾರತ ತಂಡದ ಪರ ಆಡಿದ ನಂತರ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿ ಅಲ್ಲಿನ ಕ್ವೀನ್ಸ್‌ಲ್ಯಾಂಡ್ ದೇಶಿ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ 6 ದಶಕಗಳ ಬಳಿಕ ಭಾರತೀಯ ಸಂಜಾತ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಇದನ್ನೂ ಒದಿ: 200ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ!

ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್, ಜೋಶ್ ಫಿಲಿಪ್ಪೆ, ಟಿಮ್ ಡೇವಿಡ್, ಮ್ಯಾಟ್ ರೆನ್‌ಶಾ, ನಿಖಿಲ್ ಚೌಧರಿ, ಕ್ಯಾಮರೋನ್ ಗ್ರೀನ್, ಆರೋನ್ ಹಾರ್ಡಿ, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಆ್ಯಡಂ ಝಂಪಾ, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಥ್ಯೂ ಕುಹ್ನೆಮನ್ ಮತ್ತು ರೈಲಿ ಮೆರೆಡಿತ್.

Published On – 12:36 pm, Thu, 11 June 26

Source link

ದಕ್ಷಿಣದ ಸ್ಟಾರ್ ನಟನ ಜೊತೆ ಕೈ ಜೋಡಿಸಲಿದ್ದಾರೆ ‘ಧುರಂಧರ್’ ನಿರ್ದೇಶಕ – Kannada News

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಾಲಿವುಡ್​ನ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದು ಮಾತ್ರವಲ್ಲದೆ, ಸ್ಪೈ ಸಿನಿಮಾ ಹೇಗಿರಬೇಕು ಎಂಬುದಕ್ಕೆ ಹೊಸ ಹಾದಿಯನ್ನೇ ಹಾಕಿಕೊಟ್ಟಿದೆ. ನಿರ್ದೇಶಕ ಆದಿತ್ಯ ಧರ್, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಮೂಲಕ ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಹೋಗಿ ಕೂತಿದ್ದಾರೆ. ಇದೀಗ ಅವರ ಮುಂದಿನ ಪ್ರಾಜೆಕ್ಟ್​​ಗಳ ಬಗ್ಗೆ ಸಿನಿಮಾ ಪ್ರಿಯರಿಗೆ ಅತೀವ ಕುತೂಹಲ ಮೂಡಿದೆ. ಕೆಲ ಸುದ್ದಿಗಳ ಪ್ರಕಾರ, ಆದಿತ್ಯ ಧರ್ ಅವರು ದಕ್ಷಿಣದ ಸ್ಟಾರ್ ನಟನ ಜೊತೆ ಕೈಜೋಡಿಸಲಿದ್ದಾರೆ.

ಆದಿತ್ಯ ಧರ್ ಅವರು ತಮ್ಮ ಮುಂದಿನ ಸಿನಿಮಾ ಅನ್ನು ಸ್ಟಾರ್ ನಟ ಪ್ರಭಾಸ್ ಜೊತೆಗೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದಿತ್ಯ ಧರ್ ಅವರು ಅಶ್ವತ್ಥಾಮ ಹೆಸರಿನ ಸಿನಿಮಾ ಮಾಡುವುದಾಗಿ ‘ಧುರಂಧರ್’ ಸಿನಿಮಾಕ್ಕೆ ಮುಂಚೆಯೇ ಹೇಳಿದ್ದರು. ಆದರೆ ಬಜೆಟ್ ಹಾಗೂ ಇನ್ನಿತರೆ ಕಾರಣಗಳಿಗಾಗಿ ಆ ಸಿನಿಮಾ ಮುಂದೂಡಲಾಗಿತ್ತು. ಈಗ ‘ಧುರಂಧರ್’ ಸರಣಿಯ ದೊಡ್ಡ ಹಿಟ್ ಬಳಿಕ ಆದಿತ್ಯ ಧರ್ ಅವರಿಗೆ ಅಶ್ವತ್ಥಾಮ ಕುರಿತ ಸಿನಿಮಾವನ್ನು ತೆರೆಗೆ ತರುವ ಆತ್ಮವಿಶ್ವಾಸ ಮೂಡಿದ್ದು, ಅವರ ಮುಂದಿನ ಸಿನಿಮಾ ಅಶ್ವತ್ಥಾಮ ಕುರಿತಾದದ್ದೇ ಆಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಅಶ್ವತ್ಥಾಮ ಕುರಿತಾದ ಕತೆಗಾಗಿಯೇ ಪ್ರಭಾಸ್ ಅವರನ್ನು ಆದಿತ್ಯ ಧರ್ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ರಣ್ವೀರ್ ಸಿಂಗ್ ಜೊತೆಗೂ ಹೊಸದೊಂದು ಸಿನಿಮಾವನ್ನು ಆದಿತ್ಯ ಧರ್ ಮಾಡಲಿದ್ದು, ಆ ಸಿನಿಮಾದ ಬಳಿಕ ಪ್ರಭಾಸ್ ಜೊತೆಗಿನ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಪ್ರಭಾಸ್ ಸಹ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಕನಿಷ್ಟ ಎರಡು ವರ್ಷ ಅವರು ಹೊಸ ಸಿನಿಮಾ ಪ್ರಾರಂಭಿಸುವುದು ಬಹುತೇಕ ಸಾಧ್ಯವಿಲ್ಲ.

ಇದನ್ನೂ ಓದಿ:ಸಂಧಾನಕ್ಕೆ ಮುಂದಾಗಿದ್ದ ರಣ್ವೀರ್ ಸಿಂಗ್, ತಿರಸ್ಕರಿಸಿದ ಫರ್ಹಾನ್ ಅಖ್ತರ್

ಪ್ರಭಾಸ್ ಇದೀಗ ‘ಫೌಜಿ’ ಸಿನಿಮಾದ ಚಿತ್ರೀಕರಣ ಮುಗಿಸುತ್ತಿದ್ದಾರೆ. ಅದರ ಜೊತೆಗೆ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಅತ್ತ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಿದ್ದು, ಪ್ರಭಾಸ್ ಅವರು ಶೀಘ್ರವೇ ಆ ಸಿನಿಮಾದ ಶೂಟಿಂಗ್​​ನಲ್ಲಿ ಭಾಗಿ ಆಗಲಿದ್ದಾರೆ. ಇವುಗಳು ಮುಗಿದ ಬಳಿಕ ‘ಸಲಾರ್ 2’ ಸಿನಿಮಾ ಆರಂಭಿಸಲಿದ್ದಾರೆ. ಅದಾದ ಬಳಿಕವಷ್ಟೆ ಪ್ರಭಾಸ್ ಅವರು ಆದಿತ್ಯ ಧರ್ ಸಿನಿಮಾ ಪ್ರಾರಂಭಿಸಬೇಕಿದೆ. ಅಷ್ಟರಲ್ಲಿ ಆದಿತ್ಯ ಧರ್ ಅವರು ರಣ್ವೀರ್ ಸಿಂಗ್ ಜೊತೆಗೆ ಮತ್ತೊಂದು ಸಿನಿಮಾ ಮುಗಿಸಿ ಬರಲಿದ್ದಾರೆ.

ಆದಿತ್ಯ ಧರ್, ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಒಂದೊಮ್ಮೆ ಅವರು ಪ್ರಭಾಸ್ ಜೊತೆ ಕೈಜೋಡಿಸಿದರೆ ಖಂಡಿತ ಅದು ಭಾರತದ ಬಹು ನಿರೀಕ್ಷಿತ ಸಿನಿಮಾ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಲಿಯಾ ಭಟ್ ‘ಆಲ್ಫಾ’ ಹಾಲಿವುಡ್ ಚಿತ್ರದ ಕಾಪಿ? ಸಿಕ್ಕಿತು ಸಾಕ್ಷಿ – Kannada News

ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಅತ್ಯಂತ ಬಿಗ್ ಬಜೆಟ್‌ನ ಆ್ಯಕ್ಷನ್ ಚಿತ್ರ ‘ಆಲ್ಫಾ’ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಲಿಯಾ ಭಟ್ ಹಾಗೂ ಶರ್ವರಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಆದರೆ, ಈ ಟೀಸರ್ ಮೆಚ್ಚುಗೆ ಗಳಿಸುವುದಕ್ಕಿಂತ ಹೆಚ್ಚಾಗಿ ಟ್ರೋಲ್‌ಗಳಿಗೆ ಮತ್ತು ಕೃತಿ ಚೌಚರ್ಯದ ಆರೋಪ ಹೊತ್ತು ವಿವಾದಕ್ಕೆ ಸಿಲುಕಿದೆ. ವೈಆರ್‌ಎಫ್ ಸ್ಪೈ ಯೂನಿವರ್ಸ್‌ನ ಈ ಚಿತ್ರವು 1990ರ ಪ್ರಸಿದ್ಧ ಫ್ರೆಂಚ್ ಥ್ರಿಲ್ಲರ್ ಸಿನಿಮಾ ‘ಲಾ ಫೆಮ್ಮೆ ನಿಕಿತಾ’ ಚಿತ್ರದ ರಿಮೇಕ್ ಇರಬಹುದು ಎಂದು ಊಹಿಸಲಾಗಿದೆ.

ಟೀಸರ್‌ನ ಆರಂಭದಲ್ಲಿ ಬಾಬಿ ಡಿಯೋಲ್ ಮತ್ತು ಆಲಿಯಾ ಭಟ್ ಐಷಾರಾಮಿ ರೆಸ್ಟೋರೆಂಟ್‌ ಒಂದರಲ್ಲಿ ಊಟ ಮಾಡುತ್ತಿರುವ ದೃಶ್ಯವಿದೆ. ಆಲಿಯಾಗೆ 18ನೇ ವರ್ಷದ ಹುಟ್ಟುಹಬ್ಬದ ಶುಭಕೋರುವ ಬಾಬಿ ಡಿಯೋಲ್, ಒಂದು ಕಾರ್ಡ್ ನೀಡಿ ಅದರಲ್ಲಿರುವ ರೂಮ್ ನಂಬರ್ ತೋರಿಸಿ, ಇಷ್ಟು ವರ್ಷ ಪಡೆದ ತರಬೇತಿಯನ್ನು ಬಳಸಿಕೊಳ್ಳುವ ಸಮಯ ಬಂದಿದೆ ಎಂದು ಮೊದಲ ಮಿಷನ್ ನೀಡುತ್ತಾರೆ. ಈ ದೃಶ್ಯವೇ ಈಗ ವಿವಾದಕ್ಕೆ ಕಾರಣವಾಗಿದೆ.
1990ರ ಲ್ಯೂಕ್ ಬೆಸ್ಸನ್ ನಿರ್ದೇಶನದ ‘ಲಾ ಫೆಮ್ಮೆ ನಿಕಿತಾ’ ಚಿತ್ರದಲ್ಲೂ ಇಂತಹುದೇ ದೃಶ್ಯವಿದೆ. ಅಲ್ಲಿಯೂ ನಾಯಕಿಯನ್ನು ರೆಸ್ಟೋರೆಂಟ್‌ಗೆ ಕರೆದೊಯ್ದು ಹುಟ್ಟುಹಬ್ಬದ ಸೋಗಿನಲ್ಲಿ ಗನ್ ನೀಡಿ ಕೊಲೆ ಮಾಡಲು ಕಳುಹಿಸಲಾಗುತ್ತದೆ. ಈ ಎರಡೂ ದೃಶ್ಯಗಳನ್ನು ಹೋಲಿಸಿರುವ ನೆಟ್ಟಿಗರು, ಶೇಕಡಾ 90 ರಷ್ಟು ದೃಶ್ಯಗಳನ್ನು ಹಾಗೆಯೇ ನಕಲು ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಆಲ್ಫಾ ಚಿತ್ರದ ಆರಂಭದ ದೃಶ್ಯವನ್ನು ಫ್ರೆಂಚ್ ಕ್ಲಾಸಿಕ್ ಸಿನಿಮಾ ‘ಲಾ ಫೆಮ್ಮೆ ನಿಕಿತಾ’ದಿಂದ ಮುಕ್ತವಾಗಿ ಕಾಪಿ ಮಾಡಲಾಗಿದೆ. ಕೇವಲ ದೃಶ್ಯ ಮಾತ್ರವಲ್ಲ, ಚಿತ್ರದ ಕಥೆಯೂ ಅದೇ ರೀತಿ ಇರುವಂತೆ ಕಾಣುತ್ತಿದೆ’ ಎಂದು ಬರೆಯಾಲಗಿದೆ. ಕೇವಲ ಫ್ರೆಂಚ್ ಚಿತ್ರ ಮಾತ್ರವಲ್ಲದೆ, ಹಾಲಿವುಡ್‌ನ ಮತ್ತೊಂದು ಪ್ರಸಿದ್ಧ ಚಿತ್ರದ ಸಂಭಾಷಣೆಯನ್ನೂ ಈ ಸಿನಿಮಾದಲ್ಲಿ ಕದಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಟೀಸರ್‌ನಲ್ಲಿ ಬಾಬಿ ಡಿಯೋಲ್ ಅವರು ಆಲಿಯಾಗೆ ತರಬೇತಿ ನೀಡುವಾಗ ‘ತೋಳ ಮತ್ತು ಕುರಿ’ಯ ಉದಾಹರಣೆ ನೀಡಿ ಮಾತನಾಡುವ ಡೈಲಾಗ್ ಇದೆ. ಇದು ಕ್ಲಿಂಟ್ ಈಸ್ಟ್‌ವುಡ್ ನಿರ್ದೇಶನದ, ಬ್ರಾಡ್ಲಿ ಕೂಪರ್ ನಟನೆಯ 2014ರ ಸೂಪರ್ ಹಿಟ್ ವಾರ್ ಡ್ರಾಮಾ ‘ಅಮೆರಿಕನ್ ಸ್ನೈಪರ್’ ಚಿತ್ರದ ಸಂಭಾಷಣೆಯನ್ನು ಹೋಲುತ್ತದೆ ಎಂದು ಸಿನಿಮಾ ಪ್ರೇಮಿಗಳು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: ‘ಆಲ್ಫಾ’ ಚಿತ್ರದ ಮೂಲಕ ಆ್ಯಕ್ಷನ್​​ಗೆ ಇಳಿದ ನಟಿ ಆಲಿಯಾ ಭಟ್; ಇಲ್ಲಿದೆ ಟೀಸರ್

ಸ್ವಂತಿಕೆ ಇಲ್ಲದೆ ಬೇರೆ ದೇಶದ ಸಿನಿಮಾಗಳನ್ನು ಕಾಪಿ ಮಾಡುತ್ತಿರುವ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ವಿರುದ್ಧ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ಬ್ಯಾನರ್ ಮತ್ತು ಸ್ಟಾರ್ ನಟರಿದ್ದರೂ ಕಥೆಗಾಗಿ ಬೇರೆ ಚಿತ್ರಗಳನ್ನು ಅವಲಂಬಿಸಿರುವುದು ಬಾಲಿವುಡ್‌ನ ಸೃಜನಶೀಲತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಟ್ರೋಲ್ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೆಟ್ರೋಲ್ ಬೆಲೆ ಇಳಿಯುತ್ತಾ? ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಸುಂಕ ರದ್ದುಗೊಳಿಸಿರುವುದು ಯಾರಿಗೆ ಲಾಭ? – Kannada News

ನವದೆಹಲಿ, ಜೂನ್ 11: ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪೂರ್ಣ ರದ್ದುಗೊಳಿಸಿದೆ. ಆದರೆ, ಸಾಮಾನ್ಯ ಗ್ರಾಹಕರು ಪೆಟ್ರೋಲ್​ನ ಬೆಲೆಯಲ್ಲಿ ತಕ್ಷಣಕ್ಕೆ ಯಾವುದೇ ಇಳಿಕೆಯಾಗುವುದಿಲ್ಲ. ಹಣಕಾಸು ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಈ ಅಬಕಾರಿ ಸುಂಕ ವಿನಾಯಿತಿಯು ಕೇವಲ ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ (High Ethanol Blended Petrol) ಮಾತ್ರ ಅನ್ವಯಿಸುತ್ತದೆ.

ಇ22, ಇ25, ಇ27 ಮತ್ತು ಇ30 ಪೆಟ್ರೋಲ್​ಗೆ (ಅಂದರೆ ಶೇ. 22 ರಿಂದ ಶೇ. 30 ರವರೆಗೆ ಎಥೆನಾಲ್ ಹೊಂದಿರುವ ಇಂಧನ ಮಿಶ್ರಣಗಳು) ಮಾತ್ರ ಅಬಕಾರಿ ಸುಂಕವನ್ನು ಶೂನ್ಯ (Nil) ಮಾಡಲಾಗಿದೆ. ಸದ್ಯಕ್ಕೆ ಭಾರತದ ಬಹುತೇಕ ಬಂಕ್‌ಗಳಲ್ಲಿ ಸಿಗುತ್ತಿರುವುದು ಇ20 (ಶೇ. 20 ಎಥೆನಾಲ್) ಪೆಟ್ರೋಲ್ ಆಗಿದೆ. ಇದಕ್ಕೆ ಈ ಹೊಸ ವಿನಾಯಿತಿ ಅನ್ವಯಿಸುವುದಿಲ್ಲ.

ಗ್ರಾಹಕರ ಮೇಲಿನ ಪರಿಣಾಮವೇನು? ಪೆಟ್ರೋಲ್ ದರ ಇಳಿಯುವುದೇ?

ತಜ್ಞರ ಪ್ರಕಾರ, ಸಾಮಾನ್ಯ ವಾಹನ ಸವಾರರ ಮೇಲೆ ತಕ್ಷಣಕ್ಕೆ ಇದರ ನೇರ ಪರಿಣಾಮ ಬೀರುವುದಿಲ್ಲ. ಏಕೆಂದರೆ ಶೇ. 22 ಕ್ಕಿಂತ ಹೆಚ್ಚು ಎಥನಾಲ್ ಹೊಂದಿರುವ ಇಂಧನಗಳು ಇನ್ನು ದೇಶಾದ್ಯಂತ ವ್ಯಾಪಕವಾಗಿ ಮಾರುಕಟ್ಟೆಗೆ ಬರಬೇಕಿದೆ.

ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

ಹೆಚ್ಚು ಎಥನಾಲ್ ಮಿಶ್ರಿತ ಇಂಧನವು ಮಾರುಕಟ್ಟೆ ಬಂದರೂ ಬೆಲೆ ಕಡಿಮೆ ಆಗುತ್ತದೆ ಎಂದು ಖಾತ್ರಿ ಇಲ್ಲ. ಯಾಕೆಂದರೆ ಕೈಗಾರಿಕಾ ತ್ಯಾಜ್ಯಗಳಿಂದ ಸಿಗುವ ಎಥನಾಲ್ ಅನ್ನು ಪಡೆಯಲು ಮಾಡುವ ವೆಚ್ಚ ಸಂಸ್ಕರಿತ ಪೆಟ್ರೋಲ್​ಗಿಂತ ಕಡಿಮೆ ಏನಿಲ್ಲ. ಹೀಗಾಗಿ, ಪೆಟ್ರೋಲ್ ಬೆಲೆ ಸದ್ಯಕ್ಕೆ ಇಳಿಕೆ ಕಾಣುವ ಸಾಧ್ಯತೆ ಬಹಳ ಕಡಿಮೆ.

ಸರ್ಕಾರದ ಈ ಕ್ರಮಕ್ಕೆ ಪ್ರಮುಖ ಕಾರಣಗಳು

ಇತ್ತೀಚೆಗಷ್ಟೇ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇ30 ಇಂಧನಕ್ಕೆ ಹೊಸ ಸುರಕ್ಷತಾ ಮತ್ತು ಗುಣಮಟ್ಟದ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಭವಿಷ್ಯದಲ್ಲಿ ದೇಶವು ಶೇ. 30 ಎಥೆನಾಲ್ ಮಿಶ್ರಣದ ಗುರಿ ಹೊಂದಿದ್ದು, ಅದಕ್ಕೆ ಪೂರಕವಾಗಿ ತೈಲ ಕಂಪನಿಗಳಿಗೆ ಈ ತೆರಿಗೆ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ಒಮಾನ್-ಭಾರತ ಗ್ಯಾಸ್ ಪೈಪ್​ಲೈನ್ ಪ್ರಾಜೆಕ್ಟ್​ಗೆ ಮರುಜೀವ; ಸಾಧ್ಯತಾ ವರದಿಗೆ ಸರ್ಕಾರ ಆದೇಶ; ಈ ಯೋಜನೆಯಿಂದ ಭಾರತಕ್ಕಿದೆಯಾ ಲಾಭ?

ಎಥೆನಾಲ್ ಅನ್ನು ಕಬ್ಬು, ಜೋಳ ಹಾಗೂ ಧಾನ್ಯಗಳಿಂದ ತಯಾರಿಸುವುದರಿಂದ, ಇದರ ಬಳಕೆ ಹೆಚ್ಚಾದಂತೆ ದೇಶದ ರೈತರ ಆದಾಯ ಹೆಚ್ಚಾಗಲಿದೆ. ಹಾಗೆಯೇ, ಮತ್ತೊಂದು ಬಹಳ ಮುಖ್ಯವಾದ ಲಾಭ ಎಂದರೆ, ಆಮದು ವೆಚ್ಚ ಕಡಿಮೆ ಆಗುವುದು. ಅಂದರೆ, ಕಚ್ಚಾ ತೈಲದ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ವಿದೇಶಿ ವಿನಿಮಯದ ಮೇಲಿನ ಹೊರೆ ಕಡಿಮೆ ಆಗುತ್ತದೆ. ದೀರ್ಘಾವಧಿಯಲ್ಲಿ ಆರ್ಥಿಕತೆಯ ಮೇಲಿನ ಹೊರೆಯನ್ನೂ ತಗ್ಗಿಸುತ್ತದೆ.

ಎಥನಾಲ್ ಮಿಶ್ರಿತ ಪೆಟ್ರೋಲ್ ಮೇಲೆ ಅಬಕಾರಿ ಸುಂಕವನ್ನು ರದ್ದುಗೊಳಿಸುವ ಈ ನಿರ್ಧಾರದಿಂದ ನಮ್ಮ ಇಂದಿನ ಅಥವಾ ನಾಳೆಯ ಪೆಟ್ರೋಲ್ ಬಿಲ್ ಕಡಿಮೆ ಆಗುವುದಿಲ್ಲ. ಆದರೆ ಭವಿಷ್ಯದಲ್ಲಿ ಇ30 ಇಂಧನ ಲಭ್ಯವಾದಾಗ ಅದು ಸಾಮಾನ್ಯ ಪೆಟ್ರೋಲ್‌ಗಿಂತ ಸ್ವಲ್ಪ ಅಗ್ಗವಾಗಿ ಸಿಗುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

200ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ! – Kannada News

ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡ ನಾಯಕ ಇಮ್ರಾನ್ ಮಿರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ಪರ ವೈಭವ್ ಸೂರ್ಯವಂಶಿ ಹಾಗೂ ಪ್ರಭ್​ಸಿಮ್ರಾನ್ ಸಿಂಗ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ವೈಭವ್ ಸೂರ್ಯವಂಶಿ ಬ್ಯಾಕ್ ಟು ಬ್ಯಾಕ್ ಫೋರ್​ಗಳನ್ನು ಬಾರಿಸುವ ಮೂಲಕ ಗಮನ ಸೆಳೆದರು. ಯುವ ದಾಂಡಿಗನ ಈ ಅಬ್ಬರದೊಂದಿಗೆ ಟೀಮ್ ಇಂಡಿಯಾ ಮೊದಲ 7 ಓವರ್​ಗಳಲ್ಲಿ 74 ರನ್​ ಕಲೆಹಾಕಿತು.

ಆದರೆ 8ನೇ ಓವರ್​ನ ಮೊದಲ ಎಸೆತವನ್ನು ಅಪ್ಪರ್ ಕಟ್ ಮಾಡಿ ಮೈದಾನದ ಹೊರಗೆ ಅಟ್ಟುಲು ಯತ್ನಿಸಿದ ವೈಭವ್ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ ವೈಭವ್ ಸೂರ್ಯವಂಶಿಯ ಸ್ಫೋಟಕ ಇನಿಂಗ್ಸ್ ಅಂತ್ಯಗೊಂಡಿತು.

200ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿದ ವೈಭವ್:

ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 200ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬೀಸಿ 44 ರನ್ ಕಲೆಹಾಕಿದರು. ಇದರ ನಡುವೆ 9 ಭರ್ಜರಿ ಫೋರ್​ಗಳನ್ನು ಬಾರಿಸಿದ್ದರು.

ಆದರೆ ಅರ್ಧಶತಕದ ಅಂಚಿನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಕೇವಲ 6 ರನ್​ಗಳಿಂದ ಭಾರತ ಎ ಪರ ಚೊಚ್ಚಲ ಅರ್ಧಶತಕ ಬಾರಿಸುವ ಅವಕಾಶವನ್ನು ಕೈ ಚೆಲ್ಲಿಕೊಂಡರು.

ಇನ್ನು ವೈಭವ್ ಸೂರ್ಯವಂಶಿ ಔಟಾದ ಬಳಿಕ ಬಂದ ಪ್ರಿಯಾಂಶ್ ಆರ್ಯ ಕೇವಲ 8 ರನ್​ಗಳಿಸಿ ಔಟಾಗಿದ್ದಾರೆ. ಇದೀಗ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಮುಂದುವರೆಸಿದ್ದು, 12 ಓವರ್​ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 104 ರನ್​ ಕಲೆಹಾಕಿದೆ.

ಭಾರತ ಎ ಪ್ಲೇಯಿಂಗ್ 11:  ವೈಭವ್ ಸೂರ್ಯವಂಶಿ ,ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ಪ್ರಿಯಾಂಶ್ ಆರ್ಯ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ), ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ಅರ್ಷದ್ ಖಾನ್, ವಿಪ್ರಾಜ್ ನಿಗಮ್, ಅನ್ಕುಲ್ ರಾಯ್, ಅನ್ಶುಲ್ ಕಂಬೋಜ್.

ಇದನ್ನೂ ಓದಿ: ಒಲಿಂಪಿಕ್ಸ್​ಗೆ ಕೊಹ್ಲಿಯನ್ನು ಆಯ್ಕೆ ಮಾಡಿ: ಮಾಜಿ ಆಟಗಾರನ ಸಲಹೆ!

ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ಇಮ್ರಾನ್ ಮೀರ್ (ನಾಯಕ), ಹಸನ್ ಐಸಾಖಿಲ್, ಖಾಲಿದ್ ತನಿವಾಲ್ , ಇಜಾಝ್ ಅಹ್ಮದ್ ,
ಬಹೀರ್ ಶಾ , ಇಶಾಕ್ ರಹೀಮಿ (ವಿಕೆಟ್ ಕೀಪರ್) , ಖಲೀಲ್ ಗುರ್ಬಾಝ್ , ಝಹೀರ್ ಖಾನ್ , ಅಬ್ದುಲ್ಲಾ ಅಹ್ಮದ್​ಝಾಹಿ,  ಮೊಹಮ್ಮದ್ ಇಬ್ರಾಹಿಂ , ಫರ್ಮಾನುಲ್ಲಾ ಸಫಿ.

Source link

ನಾಪತ್ತೆಯಾಗಿ 26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ – Kannada News

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More

Source link

ದುಡ್ಡು ಕೊಟ್ರೆ ಸಿಗುತ್ತೆ SSLC, PUC, ಡಿಗ್ರಿ ನಕಲಿ ಅಂಕ ಪಟ್ಟಿ! ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆ – Kannada News

‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ ಹಾಗೂ ಒಳಚಿತ್ರದಲ್ಲಿ ಬಂಧಿತ ಆರೋಪಿ ರಾಜಾರೆಡ್ಡಿImage Credit source: tv9

ಬೆಂಗಳೂರು, ಜೂನ್ 11: ಓದದೇ ಇದ್ದರೂ ಪದವಿ ಕೊಡಿಸುವುದಾಗಿ ನಂಬಿಸಿ ನಕಲಿ ಅಂಕಪಟ್ಟಿಗಳನ್ನು (Fake Marks Card) ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ನಗರದ ಕೋರಮಂಗಲದಲ್ಲಿ ಕಚೇರಿ ತೆರೆದು ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸುತ್ತಿದ್ದ ಪ್ರಮುಖ ಆರೋಪಿ ರಾಜಾರೆಡ್ಡಿ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ದಂಧೆಯ ಪ್ರಮುಖ ಸೂತ್ರಧಾರಿಗಳು ಎನ್ನಲಾದ ಕಾರ್ತಿಕ್ ಹಾಗೂ ಆರ್ಯನ್ ಎಂಬುವವರು ಸದ್ಯ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದು, ಅವರಿಗಾಗಿ ಖಾಕಿ ಪಡೆ ಬಲೆ ಬೀಸಿದೆ.

ಮುಖ್ಯಾಂಶಗಳು

  • ಸಿಸಿಬಿ ಪೊಲೀಸರಿಂದ ನಕಲಿ ಅಂಕಪಟ್ಟಿ ಜಾಲ ಪತ್ತೆ.
  • ಕೋರಮಂಗಲದಲ್ಲಿ ರಾಜಾರೆಡ್ಡಿ ಎಂಬ ಆರೋಪಿ ಬಂಧನ.
  • ₹30 ರಿಂದ ₹50 ಸಾವಿರಕ್ಕೆ ಮಾರಾಟ.

ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ ಹೆಸರಿನಲ್ಲಿ ವಂಚನೆ

ಬಂಧಿತ ಆರೋಪಿ ರಾಜಾರೆಡ್ಡಿ ಕೋರಮಂಗಲದಲ್ಲಿ ‘ಡಿಜಿಟಲ್ ಡಿಸ್ಟೆನ್ಸ್ ಎಜುಕೇಶನ್ ಮಿಷನ್ (Digital Distance Education Mission)’ ಹೆಸರಿನಲ್ಲಿ ನಕಲಿ ಕಚೇರಿ ತೆರೆದಿದ್ದ. ವಿವಿಧ ಕಾಲೇಜುಗಳಲ್ಲಿ ಅಡ್ಮಿಷನ್ ಕೊಡಿಸುವುದಾಗಿ ಅಭ್ಯರ್ಥಿಗಳಿಗೆ ಫೋನ್ ಕರೆ ಮಾಡುತ್ತಿದ್ದ ಈತ, ಫ್ಲಾರೆನ್ಸ್, ಕಲಾನಿಕೇತನ್, ಎಂವಿಜೆ (MVJ) ಹಾಗೂ ಟಿಪ್ಪು ಸುಲ್ತಾನ್ ಕಾಲೇಜು ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಕೊಡಿಸುವುದಾಗಿ ಆಮಿಷ ಒಡ್ಡುತ್ತಿದ್ದ. ಕಾಲೇಜಿಗೆ ಹೋಗಿ ಓದದೇ ಇದ್ದರೂ ನೇರವಾಗಿ ಪದವಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತೇವೆ ಎಂದು ನಂಬಿಸಿ, ಹಣ ಪಡೆದು ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿಕೊಡುತ್ತಿದ್ದನು.

ದುಡ್ಡು ಕೊಟ್ರೆ ಮನೆಗೇ ಬರುತ್ತಿತ್ತು ಅಂಕಪಟ್ಟಿಯುಳ್ಳ ಕೊರಿಯರ್

ಆರೋಪಿ ರಾಜಾರೆಡ್ಡಿಯು ತಲೆಮರೆಸಿಕೊಂಡಿರುವ ಆರ್ಯನ್ ಹಾಗೂ ಕಾರ್ತಿಕ್ ಸಹಾಯದಿಂದ ಎಸ್‌ಎಸ್‌ಎಲ್‌ಸಿ (SSLC), ಪಿಯುಸಿ (PUC) ಹಾಗೂ ವಿವಿಧ ಪದವಿಗಳ (Degree) ನಕಲಿ ಅಂಕಪಟ್ಟಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಸಿದ್ಧಪಡಿಸುತ್ತಿದ್ದ. ಈ ನಕಲಿ ಮಾರ್ಕ್ಸ್ ಕಾರ್ಡ್‌ಗಳನ್ನು ಪ್ರತಿಯೊಂದಕ್ಕೆ 30,000 ದಿಂದ 50,000 ರೂ.ವರೆಗಿನ ದರಕ್ಕೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ. ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಹಣ ಪಡೆದು, ನಕಲಿ ಅಂಕಪಟ್ಟಿಗಳನ್ನು ಅವರ ಮನೆ ವಿಳಾಸಕ್ಕೆ ಕೊರಿಯರ್ (Courier) ಮೂಲಕ ತಲುಪಿಸುವ ಮೂಲಕ ಯಾರಿಗೂ ಅನುಮಾನ ಬಾರದಂತೆ ಜಾಲ ನಡೆಸುತ್ತಿದ್ದ.

50ಕ್ಕೂ ಅಧಿಕ ನಕಲಿ ಮಾರ್ಕ್ಸ್ ಕಾರ್ಡ್ ಪತ್ತೆ

ನಗರದಲ್ಲಿ ಇಂತಹದ್ದೊಂದು ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಯುತ್ತಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸಿಸಿಬಿ ಪೊಲೀಸರು ಕೋರಮಂಗಲದ ಕಚೇರಿಯ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಕಚೇರಿಯಲ್ಲಿದ್ದ 50ಕ್ಕೂ ಅಧಿಕ ನಕಲಿ ಅಂಕಪಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಸಿಸಿಬಿ ಪೊಲೀಸರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜಾರೆಡ್ಡಿಯನ್ನು ಜೈಲಿಗಟ್ಟಿದ್ದಾರೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರ ತಂಡ ತನಿಖೆ ಮುಂದುವರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಬಂಗಾರ ಮತ್ತಷ್ಟು ಅಗ್ಗ; ನಿನ್ನೆ 395 ರೂ, ಇವತ್ತು 195 ರೂ ಕುಸಿತ – Kannada News

ನವದೆಹಲಿ, ಜೂನ್ 11: ನಿನ್ನೆ ಬರೋಬ್ಬರಿ 395 ರೂಗಳಷ್ಟು ಭರ್ಜರಿ ಇಳಿಕೆ ಕಂಡಿದ್ದ ಆಭರಣ ಚಿನ್ನದ ಬೆಲೆ (Gold Rates) ಇವತ್ತು ಗುರುವಾರವೂ 195 ರೂ ಕುಸಿತ ಕಂಡಿದೆ. ಎರಡು ದಿನದಲ್ಲಿ ಬಂಗಾರದ ದರ ಸುಮಾರು 600 ರೂಗಳಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಭರ್ಜರಿ ಕುಸಿತವಾಗಿದೆ. ಆದರೆ, ಸತತ ಎರಡು ಬಾರಿ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಗುರುವಾರ ಶಾಂತವಾಗಿದೆ. ಅದರ ಬೆಲೆ ಗ್ರಾಮ್​ಗೆ 250 ರೂನಲ್ಲಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 11ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,564 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,350 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,923 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,564 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,350 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,350 ರೂ
  • ಚೆನ್ನೈ: 13,500 ರೂ
  • ಮುಂಬೈ: 13,350 ರೂ
  • ದೆಹಲಿ: 13,365 ರೂ
  • ಕೋಲ್ಕತಾ: 13,350 ರೂ
  • ಕೇರಳ: 13,350 ರೂ
  • ಅಹ್ಮದಾಬಾದ್: 13,355 ರೂ
  • ಜೈಪುರ್: 13,365 ರೂ
  • ಲಕ್ನೋ: 13,365 ರೂ
  • ಭುವನೇಶ್ವರ್: 13,350 ರೂ

ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 551 ರಿಂಗಿಟ್ (12,954 ರುಪಾಯಿ)
  • ದುಬೈ: 496 ಡಿರಾಮ್ (12,917 ರುಪಾಯಿ)
  • ಅಮೆರಿಕ: 136 ಡಾಲರ್ (13,010 ರುಪಾಯಿ)
  • ಸಿಂಗಾಪುರ: 179.50 ಸಿಂಗಾಪುರ್ ಡಾಲರ್ (13,362 ರುಪಾಯಿ)
  • ಕತಾರ್: 499 ಕತಾರಿ ರಿಯಾಲ್ (13,093 ರೂ)
  • ಸೌದಿ ಅರೇಬಿಯಾ: 514 ಸೌದಿ ರಿಯಾಲ್ (13,098 ರುಪಾಯಿ)
  • ಓಮನ್: 52.85 ಒಮಾನಿ ರಿಯಾಲ್ (13,139 ರುಪಾಯಿ)
  • ಕುವೇತ್: 43.55 ಕುವೇತಿ ದಿನಾರ್ (13,558 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿಯ ಪ್ರಕಾಶ್ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ, ಕೇವಲ ಒಂದು ವಾರದಲ್ಲಿ ಮಮತಾಗೆ ಮೂರನೇ ಆಘಾತ – Kannada News

ಕೋಲ್ಕತ್ತಾ, ಜೂನ್ 11: ಪಶ್ಚಿಮ ಬಂಗಾಳದಲ್ಲಿ ಈಗಷ್ಟೇ ಅಧಿಕಾರದಿಂದ ಕೆಳಗಿಳಿದಿರುವ ತೃಣಮೂಲ ಕಾಂಗ್ರೆಸ್ ಪಕ್ಷ(TMC)ದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಗಳು ಗೋಚರಿಸುತ್ತಿವೆ. ಪಕ್ಷದ ಹಿರಿಯ ನಾಯಕರಾದ ಸುಖೇಂದು ಶೇಖರ್ ರಾಯ್ ಮತ್ತು ಸುಷ್ಮಿತಾ ದೇವ್ ಅವರ ಹಾದಿಯಲ್ಲೇ, ಇದೀಗ ಟಿಎಂಸಿಯ ಮತ್ತೊಬ್ಬ ಪ್ರಮುಖ ನಾಯಕರಾದ ಪ್ರಕಾಶ್ ಚಿಕ್ ಬರೈಕ್ ಅವರು ಗುರುವಾರ ತಮ್ಮ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಂಸತ್ತಿನಲ್ಲಿ ಪ್ರಜಾಪ್ರಭುತ್ವದ ಹೊಸ ಸಮತೋಲನ
ಪ್ರಕಾಶ್ ಚಿಕ್ ಬರೈಕ್ ಅವರು ಬೆಳಗ್ಗೆ 11 ಗಂಟೆಗೆ ರಾಜ್ಯಸಭಾ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ತಮ್ಮ ಔಪಚಾರಿಕ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ. ಈ ರಾಜೀನಾಮೆಯೊಂದಿಗೆ ರಾಜ್ಯಸಭೆಯಲ್ಲಿ ಟಿಎಂಸಿ ಬಲವು 10 ಸದಸ್ಯರಿಗೆ ಇಳಿಕೆಯಾಗಲಿದೆ.

ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲ: ತೆರವಾಗಲಿರುವ ಈ ಸ್ಥಾನಗಳು ಮುಂಬರುವ ದಿನಗಳಲ್ಲಿ ಇತರ ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ತಮ್ಮ ಬಲವನ್ನು ವೃದ್ಧಿಸಿಕೊಳ್ಳಲು ಮತ್ತು ಸಂಸತ್ತಿನಲ್ಲಿ ಪ್ರಮುಖ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಲು ಹೊಸ ಅವಕಾಶವನ್ನು ಸೃಷ್ಟಿಸಿಕೊಡಲಿವೆ.

ರಾಜಕೀಯ ಪಾರದರ್ಶಕತೆ ಮತ್ತು ಹೊಸ ನಾಯಕತ್ವಕ್ಕೆ ವೇದಿಕೆ
ಯಾವುದೇ ಒಂದು ಪ್ರಾದೇಶಿಕ ಪಕ್ಷದಲ್ಲಿ ನಾಯಕರು ಸ್ವತಂತ್ರ ನಿರ್ಧಾರಗಳನ್ನು ಕೈಗೊಂಡು ಹೊರಬರುವುದು ರಾಜಕೀಯ ಮರುಜೋಡಣೆಗೆ ಸಹಕಾರಿಯಾಗುತ್ತದೆ. ಮುಂದಿನ ವಾರದೊಳಗೆ ಇನ್ನೂ ಮೂವರು ಟಿಎಂಸಿ ರಾಜ್ಯಸಭಾ ಸಂಸದರು ರಾಜೀನಾಮೆ ನೀಡುವ ಆಲೋಚನೆಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮತ್ತಷ್ಟು ಓದಿ: ಕಾಂಗ್ರೆಸ್ ಜೊತೆ ವಿಲೀನವಾಗುವ ವದಂತಿ ಸುಳ್ಳು; ಟಿಎಂಸಿ ಸ್ಪಷ್ಟನೆ

ನಾಯಕರು ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಮುಕ್ತವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ರಾಜಕೀಯ ಪಾರದರ್ಶಕತೆಯನ್ನು ತೋರಿಸುತ್ತದೆ. ಹಿರಿಯ ನಾಯಕರ ನಿರ್ಗಮನದಿಂದ ತೆರವಾಗುವ ಸ್ಥಾನಗಳಿಗೆ ಹೊಸ ಆಲೋಚನೆಗಳುಳ್ಳ, ಯುವ ಮತ್ತು ಉತ್ಸಾಹಿ ನಾಯಕರು ಸಂಸತ್ತನ್ನು ಪ್ರವೇಶಿಸಲು ಹೊಸ ಹೆಬ್ಬಾಗಿಲು ತೆರೆದಂತಾಗುತ್ತದೆ.

ಭಾರತೀಯ ಸಂವಿಧಾನದ ನಿಯಮಗಳ ಪ್ರಕಾರ, ರಾಜ್ಯಸಭಾ ಸದಸ್ಯರೊಬ್ಬರು ರಾಜೀನಾಮೆ ನೀಡಿದಾಗ ಅಥವಾ ಸ್ಥಾನ ತೆರವಾದಾಗ, ಆಯಾ ರಾಜ್ಯದ ವಿಧಾನಸಭೆಯ ಸದಸ್ಯರ (MLA) ಮತಗಳ ಆಧಾರದ ಮೇಲೆ ಉಪಚುನಾವಣೆ ನಡೆಸಿ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

ಪಶ್ಚಿಮ ಬಂಗಾಳದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳೂ ಸಹ ಪ್ರಬಲವಾಗುತ್ತಿರುವುದರಿಂದ, ತೆರವಾಗುವ ಈ ಸ್ಥಾನಗಳ ಪೈಕಿ ಕೆಲವು ಸ್ಥಾನಗಳು ಮುಂಬರುವ ಉಪಚುನಾವಣೆಗಳ ಮೂಲಕ ಕೇಂದ್ರದ ಆಡಳಿತಾರೂಢ ಮೈತ್ರಿಕೂಟದ ಪಾಲಾಗುವ ಸಾಧ್ಯತೆಗಳು ಹೆಚ್ಚಿವೆ. ಇದು ದೇಶದ ಶಾಸನ ಸಭೆಗಳಲ್ಲಿ ಮತ್ತಷ್ಟು ದೃಢ ಹಾಗೂ ಅಭಿವೃದ್ಧಿಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ರಾಜಕೀಯ ಸ್ಥಿರತೆಯನ್ನು ತಂದುಕೊಡಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link