Category Archives: Blog

Your blog category

ರಾಜ್ಯಸಭಾ ನಾಮಪತ್ರ ತಿರಸ್ಕೃತ, ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ – Kannada News

ನವದೆಹಲಿ, ಜೂನ್ 11: ರಾಜ್ಯಸಭಾ ನಾಮಪತ್ರ(Rajya Sabha Nomination) ತಿರಸ್ಕೃತಗೊಂಡಿರುವ ವಿಚಾರವಾಗಿ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ತೆಲಂಗಾಣ ಉಸ್ತುವಾರಿ ಮೀನಾಕ್ಷಿ ನಟರಾಜನ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ತಮಗೆ ನ್ಯಾಯ ಸಿಗಲಿದೆ ಎಂಬ ದೃಢ ವಿಶ್ವಾಸದೊಂದಿಗೆ ಅವರು ಸಲ್ಲಿಸಿರುವ ಅರ್ಜಿಯು ಇಂದು ಬೆಳಗ್ಗೆ ತುರ್ತು ವಿಚಾರಣೆಗಾಗಿ ಪಟ್ಟಿಯಾಗುವ ಸಾಧ್ಯತೆಯಿದ್ದು, ಅವರ ಉಮೇದುವಾರಿಕೆ ಮರುಸ್ಥಾಪನೆಯಾಗುವ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದೆ.

ಕಾಂಗ್ರೆಸ್ ಸ್ಪಷ್ಟನೆ
ತೆಲಂಗಾಣದಲ್ಲಿ ದಾಖಲಾಗಿರುವ ಖಾಸಗಿ ದೂರಿನ ವಿವರಗಳನ್ನು ನಾಮಪತ್ರದಲ್ಲಿ ಮರೆಮಾಚಿದ್ದಾರೆ ಎಂಬ ಕಾರಣಕ್ಕೆ ಚುನಾವಣಾ ಅಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು. ಆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್  ಈ ಕುರಿತು ಕಾನೂನಾತ್ಮಕವಾಗಿ ಅತ್ಯಂತ ಸ್ಪಷ್ಟ ಹಾಗೂ ತಾರ್ಕಿಕ ವಿವರಣೆ ನೀಡಿದೆ.

ನ್ಯಾಯಾಲಯವು ಈ ಖಾಸಗಿ ದೂರಿನ ಮೇರೆಗೆ ಯಾವುದೇ ಕಾಗ್ನಿಜನ್ಸ್ (ಸ್ವೀಕೃತಿ) ತೆಗೆದುಕೊಂಡಿಲ್ಲ. ಕೇವಲ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 223ರ ಅಡಿಯಲ್ಲಿ ವಿಚಾರಣೆಯನ್ನು ಏಕೆ ಕೈಗೆತ್ತಿಕೊಳ್ಳಬಾರದು? ಎಂದು ವಿವರಣೆ ಕೇಳಿ ಪ್ರಾಥಮಿಕ ನೋಟಿಸ್ ಮಾತ್ರ ನೀಡಲಾಗಿದೆ.

ಮತ್ತಷ್ಟು ಓದಿ: ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದಾಗಿದ್ದೇಕೆ? ಇಲ್ಲಿದೆ ಮಾಹಿತಿ

ಕಾನೂನಿನ ನಿಯಮಗಳ ಪ್ರಕಾರ, ನ್ಯಾಯಾಲಯವು ದೂರಿಗೆ ಕಾಗ್ನಿಜನ್ಸ್ ತೆಗೆದುಕೊಳ್ಳದ ಹೊರತು ವ್ಯಕ್ತಿಯ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವುದಿಲ್ಲ. ಕೇವಲ ಯಾರೋ ಒಬ್ಬರು ಆರೋಪ ಮಾಡಿದ ತಕ್ಷಣ ಅದು ಕ್ರಿಮಿನಲ್ ಪ್ರಕರಣವಾಗುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ನಟರಾಜನ್ ನಡೆ ಸರಿಯಾಗಿದೆ
ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 33ಎ ಪ್ರಕಾರ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಶಿಕ್ಷೆಗೆ ಅರ್ಹವಾದ ಪ್ರಕರಣಗಳಲ್ಲಿ ಅಧಿಕೃತವಾಗಿ ನ್ಯಾಯಾಲಯದಿಂದ ‘ಆರೋಪ ಹೊರಿಸಲ್ಪಟ್ಟಿದ್ದರೆ’ ಮಾತ್ರ ಅದನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿರುತ್ತದೆ.

ಮೀನಾಕ್ಷಿ ನಟರಾಜನ್ ಅವರ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗದ ಅಥವಾ ಕಾಗ್ನಿಜನ್ಸ್ ಹಂತಕ್ಕೆ ಹೋಗದ ಕಾರಣ, ಅವರು ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿದ್ದಾರೆ ಎಂಬುದು ಸಾಬೀತಾಗುತ್ತಿದೆ. ಇದು ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ಕಾನೂನುಬದ್ಧವಾಗಿ ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆಯಿದೆ.

ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 223ರ ಅಡಿಯಲ್ಲಿ ಒಂದು ಮಹತ್ವದ ಸುಧಾರಣೆ ತರಲಾಗಿದೆ. ಇದರ ಪ್ರಕಾರ, ಯಾವುದೇ ಖಾಸಗಿ ವ್ಯಕ್ತಿ ಸಲ್ಲಿಸುವ ದೂರಿನ ಮೇಲೆ ನ್ಯಾಯಾಲಯವು ಆರೋಪಿಯ ವಾದವನ್ನು ಆಲಿಸದೆ ನೇರವಾಗಿ ವಿಚಾರಣೆ ನಡೆಸುವಂತಿಲ್ಲ. ಇದು ಸುಳ್ಳು ಅಥವಾ ರಾಜಕೀಯ ಪ್ರೇರಿತ ದೂರುಗಳಿಂದ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ರಕ್ಷಿಸಲು ಇರುವ ಸುರಕ್ಷಾ ಕವಚವಾಗಿದೆ.

ಚುನಾವಣಾ ಆಯೋಗವನ್ನೂ ಸಂಪರ್ಕಿಸಿರುವ ಕಾಂಗ್ರೆಸ್ ಪಕ್ಷ, ಈಗ ದೇಶದ ಅತ್ಯುನ್ನತ ನ್ಯಾಯಾಲಯದ ಮುಂದೆ ಸರಿಯಾದ ಕಾನೂನು ವ್ಯಾಖ್ಯಾನವನ್ನು ಮಂಡಿಸುತ್ತಿದೆ. ಈ ಹಿಂದೆ ಇಂತಹ ತಾಂತ್ರಿಕ ಕಾರಣಗಳಿಗಾಗಿ ನಾಮಪತ್ರ ತಿರಸ್ಕೃತಗೊಂಡಾಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿದ ಹಲವು ಉದಾಹರಣೆಗಳಿವೆ. ಹೀಗಾಗಿ, ಮೀನಾಕ್ಷಿ ನಟರಾಜನ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ತಡೆ ಸಿಕ್ಕರೆ, ಅವರು ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣಾ ಕಣಕ್ಕೆ ಯಶಸ್ವಿಯಾಗಿ ಮರಳಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

11 ದಿನಕ್ಕೆ 47 ಸಿನಿಮಾ ಸಹಿ ಹಾಕಿದ ನಟ; ನಂತರ ಆಸ್ಪತ್ರೆ ಬಿಲ್ ಕಟ್ಟಲೂ ದುಡ್ಡಿರಲಿಲ್ಲ – Kannada News

1990ರಲ್ಲಿ ಬಿಡುಗಡೆಯಾದ ‘ಆಶಿಕಿ’ ಚಿತ್ರದ ಮೂಲಕ ನಟ ರಾಹುಲ್ ರಾಯ್ ಒಂದೇ ರಾತ್ರಿಯಲ್ಲಿ ಬಾಲಿವುಡ್‌ನ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದರು. ಈ ಚಿತ್ರವು ಭಾರತೀಯ ಚಿತ್ರರಂಗದ ಅತಿ ದೊಡ್ಡ ಮ್ಯೂಸಿಕಲ್ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗುವ ಮೂಲಕ, ಅವರನ್ನು ದೇಶದ ಯುವಕರ ದಿಕ್ಸೂಚಿಯನ್ನಾಗಿ ಮಾಡಿತು. ರಾಹುಲ್ ರಾಯ್ ಅವರ ಕ್ರೇಜ್ ಎಷ್ಟಿತ್ತೆಂದರೆ, ಅಭಿಮಾನಿಗಳು ತಮ್ಮ ಮಲಗುವ ಕೋಣೆಗಳಲ್ಲಿ ಅವರ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದರು. ಈ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಅವರು ಕೇವಲ 11 ದಿನಗಳಲ್ಲಿ ಬರೋಬ್ಬರಿ 47 ಸಿನಿಮಾಗಳಿಗೆ ಸಹಿ ಹಾಕುವ ಮೂಲಕ ಹೊಸ ದಾಖಲೆ ಬರೆದಿದ್ದರು.

ಆದರೆ, ಈ ಕನಸಿನ ಆರಂಭವು ಹೆಚ್ಚು ದಿನ ಉಳಿಯಲಿಲ್ಲ. ದುರದೃಷ್ಟವಶಾತ್, ಅವರು ಸಹಿ ಮಾಡಿದ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾಲು ಸಾಲಾಗಿ ಸೋಲನ್ನು ಕಂಡವು. ‘ಆಶಿಕಿ’ ಸೃಷ್ಟಿಸಿದ ಮ್ಯಾಜಿಕ್ ಅನ್ನು ಮರುಸೃಷ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇದೇ ಕಾರಣದಿಂದಾಗಿ, ಖ್ಯಾತ ನಿರ್ದೇಶಕ ಯಶ್ ಚೋಪ್ರಾ ಅವರು ಆಫರ್ ಮಾಡಿದ್ದ ‘ಡರ್’ (Darr) ಚಿತ್ರದ ನೆಗೆಟಿವ್ ಪಾತ್ರವನ್ನು ಕೈಯಲ್ಲಿದ್ದ ಸಾಲು ಸಾಲು ಸಿನಿಮಾಗಳ ಒತ್ತಡದಿಂದಾಗಿ ರಾಹುಲ್ ತಿರಸ್ಕರಿಸಬೇಕಾಯಿತು. ನಂತರ ಆ ಪಾತ್ರವನ್ನು ಮಾಡಿದ ಶಾರುಖ್ ಖಾನ್ ಸ್ಟಾರ್ ಆದರು.

ಸಿನಿಮಾಗಳಲ್ಲಿ ಹಿನ್ನಡೆ ಅನುಭವಿಸಿದ ನಂತರ, 2006ರಲ್ಲಿ ರಾಹುಲ್ ರಾಯ್ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಹಿಂದಿಯ ಮೊದಲ ಸೀಸನ್‌ನಲ್ಲಿ ಸ್ಪರ್ಧಿಸಿ ವಿಜೇತರಾದರು. ಇದು ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು ಮತ್ತು ಹೊಸ ಪೀಳಿಗೆಯ ಪ್ರೇಕ್ಷಕರಿಗೆ ಅವರನ್ನು ಪರಿಚಯಿಸಿತು. ಸಾರ್ವಜನಿಕರು ಇಂದಿಗೂ ತಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಈ ಗೆಲುವಿನ ಮೂಲಕ ಅವರು ಸಾಬೀತುಪಡಿಸಿದರು.

ಆದರೆ ವಿಧಿಯ ಆಟ ಬೇರೆಯೇ ಇತ್ತು. ನವೆಂಬರ್ 2020ರಲ್ಲಿ ಕಾರ್ಗಿಲ್‌ನಲ್ಲಿ ‘ಎಲ್‌ಎಸಿ: ಲೈವ್ ದಿ ಬ್ಯಾಟಲ್’ ಚಿತ್ರದ ಚಿತ್ರೀಕರಣದಲ್ಲಿದ್ದಾಗ ರಾಹುಲ್ ರಾಯ್ ಅವರಿಗೆ ಹಠಾತ್ತಾಗಿ ಪಾರ್ಶ್ವವಾಯು ಉಂಟಾಯಿತು. ಈ ಗಂಭೀರ ಆರೋಗ್ಯ ಸಮಸ್ಯೆಯು ಇಡೀ ದೇಶದ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತು. ಸುದೀರ್ಘ ಚಿಕಿತ್ಸೆ ಮತ್ತು ಪುನರ್ವಸತಿಯ ನಂತರ ಅವರು ಗುಣಮುಖರಾದರಾದರೂ, ಈ ಅವಧಿಯಲ್ಲಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಯಿತು.

ಇದನ್ನೂ ಓದಿ: ನಿಮಗೆ ಸಹಾಯ ಬೇಕಿದ್ದರೆ ಕೇಳಿ; ಬಾಲಿವುಡ್​​ ನಟನಿಗೆ ನೇರ ಆಫರ್ ಕೊಟ್ಟಿದ್ದ ದಾವೂದ್

ಈ ಕಷ್ಟದ ಸಮಯದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ರಾಹುಲ್ ರಾಯ್ ಅವರ ನೆರವಿಗೆ ಧಾವಿಸಿ, ಅವರ ಆಸ್ಪತ್ರೆಯ ಬಾಕಿ ಬಿಲ್‌ಗಳನ್ನು ಪಾವತಿಸಿದರು. ಸಲ್ಮಾನ್ ಖಾನ್ ಅವರನ್ನು ಡೈಮಂಡ್ ಎಂದು ಕರೆದ ರಾಹುಲ್, ಅವರ ಮಾನವೀಯತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಾಹುಲ್ ರಾಯ್, ತಮಗೆ ಮತ್ತಷ್ಟು ನಟನೆಯ ಅವಕಾಶಗಳು ಸಿಗಲಿ ಎಂದು ಕಾಯುತ್ತಿದ್ದು, ಚಿತ್ರರಂಗಕ್ಕೆ ಭರ್ಜರಿ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸರ್ಪ್ರೈಸ್ ಕೊಡಲು ಬಂದವರಿಗೆ ಸರ್ಪ್ರೈಸ್ ಕೊಟ್ಟ ರಾಜಮೌಳಿ

ಎಸ್ಎಸ್ ರಾಜಮೌಳಿ (Rajamouli), ಭಾರತದ ನಂಬರ್ 1 ನಿರ್ದೇಶಕ. ‘ಆರ್​​ಆರ್​​ಆರ್’ ಮೂಲಕ ವಿಶ್ವಮಟ್ಟದಲ್ಲಿ ಗುರುತು ಪಡೆದುಕೊಂಡಿರುವುದು ಮಾತ್ರವೇ ಅಲ್ಲದೆ, ಹಾಲಿವುಡ್ ನಿರ್ದೇಶಕರು, ನಿರ್ಮಾಣ ಸಂಸ್ಥೆಗಳು ಸಹ ತಮ್ಮೊಟ್ಟಿಗೆ ಕೆಲಸ ಮಾಡುವಂತೆ ರಾಜಮೌಳಿ ಅವರನ್ನು ಕೇಳುತ್ತಿವೆ. ಭಾರತದ ಟಾಪ್ ನಿರ್ದೇಶಕ ಆಗಿದ್ದರೂ ಸಹ ರಾಜಮೌಳಿ ಅವರು ಯಾವುದೇ ಅಹಂ ಇಲ್ಲದೆ, ಬಲು ಸರಳ ಮತ್ತು ವಿನಯವಂತಿಕೆಯಿಂದ ಇರುತ್ತಾರೆ. ಸಹಾಯ ಕೇಳಿ ಬರುವ ಕಿರಿಯ ಸಿನಿಮಾ ಕರ್ಮಿಗಳಿಗೆ ಸಹಾಯ ಮಾಡುತ್ತಾರೆ. ಇದೀಗ ರಾಜಮೌಳಿ ಅವರಿಗೆ ಸರ್ಪ್ರೈಸ್ ನೀಡಲು ಬಂದ ಕಿರಿಯ ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಖುದ್ದು ರಾಜಮೌಳಿ ಸರ್ಪ್ರೈಸ್ ನೀಡಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್, ‘ಸಿಂಗ್ ಗೀತಂ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆ ಸಿನಿಮಾ ನಾಳೆ ಅಂದರೆ ಜೂನ್ 12 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಮೊದಲ ಟಿಕೆಟ್ ಅನ್ನು ರಾಜಮೌಳಿ ಅವರಿಗೆ ಮಾರಾಟ ಮಾಡುವ ಮೂಲಕ ಶುಭಾರಂಭ ಮಾಡಲೆಂದು ನಾಗ್ ಅಶ್ವಿನ್ ಅವರು, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರೊಟ್ಟಿಗೆ ಸೇರಿ ರಾಜಮೌಳಿ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ.

ಆದರೆ ನಾಗ್ ಅಶ್ವಿನ್, ರಾಜಮೌಳಿ ಅವರಿಗೆ ವಿಡಿಯೋ ಕಾಲ್ ಮಾಡುವ ಮುಂಚೆಯೇ ರಾಜಮೌಳಿ, ‘ಸಿಂಗ್ ಗೀತಂ’ ಸಿನಿಮಾದ ಟಿಕೆಟ್ ಖರೀದಿಸಿದ್ದು, ವಿಡಿಯೋ ಕಾಲ್​​ನಲ್ಲಿ ತಾವು ಬುಕ್ ಮಾಡಿಕೊಂಡಿರುವ ಟಿಕೆಟ್ ಅನ್ನು ತೋರಿಸಿದ್ದಾರೆ. ಇದರಿಂದ ನಾಗ್ ಅಶ್ವಿನ್ ಮತ್ತು ದೇವಿ ಶ್ರೀಪ್ರಸಾದ್ ಇಬ್ಬರೂ ಶಾಕ್ ಆಗಿದ್ದಾರೆ. ಇಬ್ಬರಿಗೂ ರಾಜಮೌಳಿ ಆಲ್​​ ದಿ ಬೆಸ್ಟ್ ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:94ನೇ ವಯಸ್ಸಿಗೆ ನಿರ್ದೇಶನ; ‘ಸಿಂಗ್ ಗೀತಂ’ ಸಿನಿಮಾ ಈ ವಾರ ರಿಲೀಸ್

ಬಹಳ ಬ್ಯುಸಿ ನಿರ್ದೇಶಕ ರಾಜಮೌಳಿ ಅವರು ಬಿಡುವು ಮಾಡಿಕೊಂಡು ‘ಸಿಂಗ್-ಗೀತಂ’ ಸಿನಿಮಾ ನೋಡಲು ಹೋಗುತ್ತಿರುವುದಕ್ಕೆ ಮುಖ್ಯ ಕಾರಣ, ಆ ಸಿನಿಮಾದ ನಿರ್ದೇಶಕ. ಭಾರತದ ಅತ್ಯುತ್ತಮ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ಸಿಂಗೀತಂ ಶ್ರೀನಿವಾಸ್ ಅವರು ತಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ರಾಜಮೌಳಿ ಅವರಿಗೆ ಸಿಂಗೀತಂ ಅವರ ನಿರ್ದೇಶನ ಬಲು ಅಚ್ಚು-ಮೆಚ್ಚು ಹಾಗಾಗಿ ರಾಜಮೌಳಿ ಅವರು ಸಿನಿಮಾ ನೋಡಲು ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ.

ಸಿಂಗೀತಂ ಶ್ರೀನಿವಾಸ್ ಅವರು ಅತ್ಯುತ್ತಮ ನಿರ್ದೇಶಕ. ಕನ್ನಡದಲ್ಲಿ ಕ್ಲಾಸ್ ಸಿನಿಮಾಗಳಾದ, ‘ಚಲಿಸುವ ಮೋಡಗಳು’, ‘ಹಾಲು ಜೇನು’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಆನಂದ್’, ‘ಟುವ್ವಿ ಟುವ್ವಿ ಟುವ್ವಿ’, ‘ಎರಡು ನಕ್ಷತ್ರಗಳು’, ‘ಶ್ರಾವಣ ಬಂತು’, ‘ಜ್ವಾಲಾಮುಖಿ’ ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕಮಲ್ ನಟನೆಯ ಕಲ್ಟ್ ಸಿನಿಮಾ ‘ಪುಷ್ಪಕ ವಿಮಾನ’, ‘ರಾಜ ಪಾರ್ವೈ’, ‘ಮುಂಬೈ ಎಕ್ಸ್​​ಪ್ರೆಸ್’, ತೆಲುಗಿನ ‘ಆದಿತ್ಯ 369’ ಇನ್ನೂ ಹಲವು ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ತಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಸಿನಿಮಾ ನಿರ್ದೇಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಎಂಎಲ್ಸಿ ಚುನಾವಣೆ: ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್ – Kannada News

ಬೆಂಗಳೂರು, ಜೂನ್​​ 11: ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಕಣವು ತೀವ್ರ ಕುತೂಹಲ ಮೂಡಿಸಿದೆ. ಜೆಡಿಎಸ್ ನಾಯಕರಿಗೆ ಒಂದು ಲೆಕ್ಕದಲ್ಲಿ ಡಬಲ್ ಟೆನ್ಷನ್ ಶುರುವಾಗಿದೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಪ್ರತಿಷ್ಠೆಯ ಸವಾಲಾಗಿ ಪರಿಣಮಿಸಿದೆ. ಎನ್​ಡಿಎಯ ಮೂರನೇ ಅಭ್ಯರ್ಥಿ ಗೆಲುವಿಗೆ ಸದ್ಯ ನಾಲ್ಕರಿಂದ ಐದು ಮತಗಳ ಕೊರತೆ ಇದೆ. ಈ ಮತಗಳನ್ನು ಕಾಂಗ್ರೆಸ್ ಪಾಳಯದಿಂದ ಸೆಳೆಯಬೇಕಾದ ಅನಿವಾರ್ಯತೆ ಜೆಡಿಎಸ್ ಮೇಲಿದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಪಕ್ಷದೊಳಗೆ ಅಡ್ಡ ಮತದಾನದ ಭೀತಿ ಕಾಡುತ್ತಿದೆ. ಪ್ರಮುಖವಾಗಿ, ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಹನೂರು ಮಂಜುನಾಥ್ ಅವರ ನಡೆ ನಿರ್ಣಾಯಕವಾಗಿದ್ದು, ಅವರ ಮತದಾನದ ಬಗ್ಗೆ ಆತಂಕವಿದೆ. ಈಗಾಗಲೇ ಅವರನ್ನು ಮನವೊಲಿಸುವ ಪ್ರಕ್ರಿಯೆಗಳು ನಡೆಯುತ್ತಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

17ನೇ ವಯಸ್ಸಿಗೆ ನಕ್ಸಲ್ ಆಗ ಹೊರಟಿದ್ದ ಪವನ್ ಕಲ್ಯಾಣ್; ತಡೆದಿದ್ದು ಅಣ್ಣ ಚಿರಂಜೀವಿ – Kannada News

ಟಾಲಿವುಡ್‌ನ ನಟ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ತಮ್ಮ ಹದಿಹರೆಯದ ದಿನಗಳ ಕುರಿತು ಅತ್ಯಂತ ಶಾಕಿಂಗ್ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ತಾವು ಒಂದು ಕಾಲದಲ್ಲಿ ನಕ್ಸಲ್ ಆಗಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಅಣ್ಣ ಮೆಗಾಸ್ಟಾರ್ ಚಿರಂಜೀವಿ ತಮ್ಮನ್ನು ತಡೆದು ದಾರಿ ತೋರಿಸಿದ್ದಾಗಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಪವನ್ ಕಲ್ಯಾಣ್ ಅವರಿಗೆ 17-21 ವರ್ಷ ವಯಸ್ಸಾಗಿದ್ದಾಗ ಸಮಾಜದಲ್ಲಾಗುತ್ತಿದ್ದ ಅನ್ಯಾಯಗಳ ವಿರುದ್ಧ ಭಾರಿ ಸಿಟ್ಟು ಇತ್ತಂತೆ.‘ಆ ವಯಸ್ಸಿನಲ್ಲಿ ನನಗೆ ಗನ್ ಹಿಡಿದು ನಕ್ಸಲೈಟ್ ಸೇರುವ ಹುಚ್ಚು ಆಲೋಚನೆ ಬಂದಿತ್ತು. ಗುಟ್ಟಾಗಿ ವಿದ್ಯಾರ್ಥಿ ಸಂಘಟನೆಗಳ ಸಭೆಗಳಿಗೂ ಹೋಗುತ್ತಿದ್ದೆ. ನನ್ನ ತಲೆಯಲ್ಲಿ ಆಕ್ರೋಶದ ಯೋಚನೆಗಳು ಸ್ಫೋಟಗೊಳ್ಳುತ್ತಿದ್ದವು’ ಎಂದು ಪವನ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ತಮ್ಮನ ಈ ಹುಚ್ಚು ಕೋಪವನ್ನು ಕಂಡು ಮೆಗಾಸ್ಟಾರ್ ಚಿರಂಜೀವಿ ತೀವ್ರ ಆತಂಕಗೊಂಡಿದ್ದರು. ಆಗ ಪವನ್ ಕಲ್ಯಾಣ್ ಅವರನ್ನು ಕೂರಿಸಿ ಚಿರಂಜೀವಿ ಒಂದು ಪ್ರಶ್ನೆ ಕೇಳಿದ್ದರು. ‘ನಾನು ಚಿರಂಜೀವಿ ಆಗಿರದಿದ್ದರೆ, ನಿನ್ನ ಸಂಬಳ ಹಾಗೂ ಕಷ್ಟದ ಮೇಲೆ ಇಡೀ ಕುಟುಂಬ ಅವಲಂಬಿತವಾಗಿದ್ದರೆ ನೀನು ಇದೇ ನಿರ್ಧಾರ ತೂಗುತ್ತಿದ್ದೆಯಾ’ ಎಂದು ಪ್ರಶ್ನಿಸಿದ್ದರು. ಅಣ್ಣನ ಈ ಜವಾಬ್ದಾರಿಯುತ ಮಾತಿಗೆ ಪವನ್ ಬಳಿ ಯಾವುದೇ ಉತ್ತರವಿರಲಿಲ್ಲ. ಆ ಬಳಿಕ ಅವರು ಆ ದಾರಿಯಿಂದ ಹಿಂದೆ ಸರಿದರು.

ಇದನ್ನೂ ಓದಿ: ‘ಈ ಬೆದರಿಕೆ ಬೇಡ’: ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರೈ ಎಚ್ಚರಿಕೆ

ಚಿರಂಜೀವಿ ಅವರೇ ನನ್ನ ಏಕೈಕ ಹೀರೋ:

ತಮ್ಮ ಸಿನಿಮಾಗಳ ಪ್ರಚಾರದ ವೇಳೆ ಪವನ್ ಕಲ್ಯಾಣ್ ಸದಾ ಅಣ್ಣನನ್ನು ಕೊಂಡಾಡುತ್ತಾರೆ. ‘ನನಗೆ ಜಗತ್ತಿನಲ್ಲಿ ಒಬ್ಬರೇ ಹೀರೋ, ಅದು ಮೆಗಾಸ್ಟಾರ್ ಚಿರಂಜೀವಿ. ಅವರ ಪಕ್ಕ ನಿಂತಾಗ ನಾನು ಕೂಡ ಒಬ್ಬ ನಟ ಎಂಬುದನ್ನೇ ಮರೆತುಬಿಡುತ್ತೇನೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 90ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪವನ್ ಕಲ್ಯಾಣ್, ಜನಸೇನಾ ಪಾರ್ಟಿ ಕಟ್ಟಿ ಸದ್ಯ ಆಂಧ್ರಪ್ರದೇಶದ ಡಿಸಿಎಂ ಆಗಿ ಜನಸೇವೆ ಮಾಡುತ್ತಿದ್ದಾರೆ. ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral: ಕಾರ್ಪೊರೇಟ್ ಕೆಲಸದ ಸ್ಥಳಗಳಲ್ಲಿನ ಐದು ವಿಷಕಾರಿ ಅಂಶಗಳನ್ನು ಟೀಕಿಸಿದ ಸ್ಟಾರ್ಟ್ಅಪ್ ಸಂಸ್ಥಾಪಕಿ – Kannada News

ಕಾರ್ಪೊರೇಟ್ (Corporate) ಜಗತ್ತೇ ಹಾಗೆ, ಕೈ ತುಂಬಾ ಸಂಬಳವಿದ್ರೂ ಒತ್ತಡ ಹೆಚ್ಚೇ ಇರುತ್ತದೆ. ಹೀಗಾಗಿ ಈ ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು ಅನುಭವಿಸುವ ಒತ್ತಡ ಹೇಳತೀರದು. ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲಾಗದೇ ಅನಿವಾರ್ಯಕ್ಕೆ ಕೆಲಸ ಮಾಡುವವರು ಇದ್ದಾರೆ. ಇದೀಗ ಬೆಂಗಳೂರು (Bengaluru) ಮೂಲದ ಸ್ಟಾರ್ಟ್ಅಪ್ ಸಂಸ್ಥಾಪಕಿಯೊಬ್ಬರು ಭಾರತೀಯ ಕೆಲಸದ ಸ್ಥಳಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ವಿಷಕಾರಿ ವಿಷಯಗಳನ್ನು ಟೀಕಿಸಿದ್ದಾರೆ. ಲಿಂಕ್ಡ್ ಇನ್ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥಾಪಕಿ ಅಲೂನಾ (Aloona) ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಭಾರತೀಯ ಕೆಲಸದ ಸ್ಥಳಗಳಲ್ಲಿ ಸಾಮಾನ್ಯೀಕರಿಸಲ್ಪಟ್ಟ ವಿಷಕಾರಿ ವಿಷಯಗಳಿವು, ಆದರೆ ಕೆಲಸದ ಸ್ಥಳಗಳಲ್ಲಿ ಈ ರೀತಿಯಾಗಬಾರದು ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಮಧ್ಯರಾತ್ರಿಯಲ್ಲಿ ಉದ್ಯೋಗಿಗಳಿಗೆ ಕರೆ ಮಾಡಲು ನಿರ್ಧರಿಸುವ ವ್ಯಕ್ತಿಯೂ ವೇಳಾಪಟ್ಟಿಯನ್ನು ಅತ್ಯುತ್ತಮವಾಗಿಸಬೇಕಾಗಿದೆ. ವಾರಾಂತ್ಯದ ಸಭೆಗಳು, ಉದ್ಯೋಗಿಗಳ ಮೇಲೆ ಕಿರುಚುವುದು, ಇತರರ ಮುಂದೆ ನಿಂದಿಸುವುದು, ಸಾರ್ವಜನಿಕವಾಗಿ ಅವಮಾನನಿಸುವುದು ಸರಿಯಲ್ಲ ಎಂದಿದ್ದಾರೆ.

ಉದ್ಯೋಗಿಗಳು ಅನಾರೋಗ್ಯದಿಂದ ಬಳಲುತ್ತಿರುವಾಗ, ಆಸ್ಪತ್ರೆಯಲ್ಲಿರುವಾಗ ಕೆಲಸದ ಸ್ಥಳಗಳಿಂದ ಕರೆಗಳು ಬರುವುದು ಸರಿಯಲ್ಲ. ಶುಕ್ರವಾರ-ಸಂಜೆ ಹಠಾತ್ ತುರ್ತು ಪರಿಸ್ಥಿತಿಗಳು ಸೇರಿದಂತೆ ಐದು ಪ್ರಚಲಿತ ವಿಷಕಾರಿ ಅಭ್ಯಾಸಗಳನ್ನು ಕಟುವಾಗಿ ಟೀಕಿಸಿದ್ದಾರೆ. ಇದರಲ್ಲಿ ಯಾವುದು ಸರಿಯಿಲ್ಲ. ಸಮಸ್ಯೆ ಅವರುಗಳದ್ದೇ, ನೀವಲ್ಲ ಎಂಬುದನ್ನು ನೆನಪಿಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಂದೇ ಕಂಪನಿಯಲ್ಲಿ 11 ವರ್ಷ ಕೆಲಸ ಮಾಡಿದ್ರೂ ಜಾಬ್‌ನಿಂದ ತೆಗೆದು ಹಾಕಿದ ಕಂಪನಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿಷಕಾರಿ ವಿಷಯಗಳು ಸರ್ವೇ ಸಾಮಾನ್ಯವಾಗುತ್ತಿದೆ. ಇದು ಉದ್ಯೋಗಿಗಳನ್ನು ಮಾನಸಿಕವಾಗಿ ಹಿಂಸಿಸುತಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ಅನೇಕ ಭಾರತೀಯ ಸಂಸ್ಥೆಗಳಲ್ಲಿ ಕಾಣಸಿಗುವ ವಿಷಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಉದ್ಯೋಗಿಗಳು ರಾಜೀನಾಮೆ ನೀಡಲು ಈ ಅಂಶಗಳೇ ಕಾರಣ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:59 am, Thu, 11 June 26

Source link

ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು, ಬೆಂಗಳೂರು, ಮೈಸೂರು ಜನರಿಗೆ ಕುಡಿಯುವ ನೀರಿನ ಸಂಕಷ್ಟ – Kannada News

ಮೈಸೂರು, ಜೂನ್ 11: ಈ ಬಾರಿ ಜೂನ್ ಅರ್ಧ ತಿಂಗಳು ಕಳೆಯುತ್ತಾ ಬಂದರೂ ಆಗೊಮ್ಮೆ, ಈಗೊಮ್ಮೆ ಒಂದೊಂದು ಮಳೆ ಬಂದಿದೆ ಅಷ್ಟೇ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾಯ ಇರುವ ಕಾರಣ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಆತಂಕಕಾರಿಯಾಗಿ ಕುಸಿದಿದೆ. ಸದ್ಯ ಜಲಾಶಯದ ನೀರಿನ ಮಟ್ಟ 81 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಠ ಸಾಮರ್ಥ್ಯ 124 ಅಡಿಗಳಾಗಿವೆ.

ಸದ್ಯ ಕೆಆರ್‌ಎಸ್‌ನಲ್ಲಿ ಸಂಗ್ರಹವಾಗಿರುವ ನೀರು ಕೇವಲ 11 ಟಿಎಂಸಿ. ಇದರಲ್ಲಿ 4 ರಿಂದ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವುದು ಕೇವಲ 7 ಟಿಎಂಸಿ ಮಾತ್ರ. ಈ ಪರಿಸ್ಥಿತಿಯ ನಡುವೆ, ಜೂನ್ ತಿಂಗಳಿನಲ್ಲಿ ತಮಿಳುನಾಡಿಗೆ ನ್ಯಾಯಾಲಯದ ಸೂಚನೆಯಂತೆ 9 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಇದೆ. ಲಭ್ಯವಿರುವ ನೀರಿಗಿಂತ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವ ಒತ್ತಡ ರಾಜ್ಯದ ಮೇಲಿದೆ.

ಈ ನೀರಿನ ಕೊರತೆಯು ಬೆಂಗಳೂರು, ಮೈಸೂರು ಮತ್ತು ಮಂಡ್ಯ ಭಾಗಗಳಿಗೆ ಕುಡಿಯುವ ನೀರಿನ ಸಂಕಷ್ಟ ತಂದೊಡ್ಡಲಿದೆ. ಕಬಿನಿ ಜಲಾಶಯದಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿರುವುದು ಆತಂಕವನ್ನು ಹೆಚ್ಚಿಸಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಇಷ್ಟರಮಟ್ಟಿಗೆ ನೀರು ಕುಸಿತ ಕಂಡಿರಲಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಸವಾಲನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮ: ಎಕ್ಸ್​​ ಪೋಸ್ಟ್​ ಮೂಲಕ ಕಾಂಗ್ರೆಸ್​​ಗೆ ಕುಟುಕಿದ ಜೆಡಿಎಸ್​​ – Kannada News

ಕ್ಸ್​​ ಪೋಸ್ಟ್​ ಮೂಲಕ ಕಾಂಗ್ರೆಸ್​​ಗೆ ಕುಟುಕಿದ ಜೆಡಿಎಸ್​​
Image Credit source: JDS X Account

ಬೆಂಗಳೂರು, ಜೂನ್​​ 12: ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣ ಪಡೆಯಲು ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ಕೆಲ ದಾಖಲೆಗಳು ಇನ್ನು ಅಗತ್ಯ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಪ್ರಸ್ತುತ ರಾಜ್ಯದಲ್ಲಿ 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಇದರಲ್ಲಿ ಸುಮಾರು 1.48 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗೆ ಕಳೆದ ಐದು ತಿಂಗಳುಗಳಿಂದ ಹಣ ಸಂದಾಯವಾಗುತ್ತಿರುವ ಮಾಹಿತಿಯ ಆಧಾರದಲ್ಲಿ ಕೆಲ ನಿಯಮಗಳ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಈ ಸಂಬಂಧ ರಾಜ್ಯ ಸಕರ್ಕರದ ವಿರುದ್ಧ ಜೆಡಿಎಸ್​​ ವಾಗ್ದಾಳಿ ನಡೆಸಿದ್ದು, ವಚನಭ್ರಷ್ಟ ಕಾಂಗ್ರೆಸ್‌ನ ಗ್ಯಾರಂಟಿಗಳ ಅಸಲಿ ಬಣ್ಣ ಬಯಲಾಗಿದೆ ಎಂದು ಆರೋಪಿಸಿದೆ.

ಎಕ್ಸ್​​ ಪೋಸ್ಟ್​​ ಮೂಲಕ ಜೆಡಿಎಸ್​​ ಕಿಡಿ

ಚುನಾವಣೆಗೂ ಮುನ್ನ ಯೋಜನೆಗೆ ಯಾವ ಷರತ್ತೂ ಇರಲಿಲ್ಲ. ಪ್ರತಿ ಮನೆಯೊಡತಿಗೆ 2,000 ಎಂದು ರಾಜ್ಯದ ತಾಯಂದಿರ ಕಿವಿಗೆ ಹೂವಿಟ್ಟ ಕಾಂಗ್ರೆಸ್​​ ಸರ್ಕಾರ ಇದೀಗ 17 ಜಿಲ್ಲೆಗಳಲ್ಲಿ ಬರೋಬ್ಬರಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕಿತ್ತುಹಾಕಿ ತನ್ನ ನೈಜ ಮುಖವನ್ನು ಬಹಿರಂಗಪಡಿಸಿದೆ. ಬಯೋಮೆಟ್ರಿಕ್, ಸರ್ವರ್ ಪ್ರಾಬ್ಲಮ್ ಎಂದು ಒಂದಿಲ್ಲೊಂದು ನೆಪ ಹೇಳಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಈ ‘ಕೈ’ ಸರ್ಕಾರದ ದ್ರೋಹವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ ಎಂದು ಜೆಡಿಎಸ್​​ ಹೇಳಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮ; ಬಯೋಮೆಟ್ರಿಕ್ ದೃಢೀಕರಣದ ಜೊತೆ ಈ ಎಲ್ಲ ದಾಖಲೆ ಕಡ್ಡಾಯ

‘ಇದು ಕೇವಲ ವೋಟ್ ಬ್ಯಾಂಕ್​​ಗಾಗಿ ಮಾಡಿದ ವಂಚನೆ’

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಎಂದರೆ, ಗೃಹಲಕ್ಷ್ಮಿ ಕಡಿತದ ಬಗ್ಗೆ ಸಾಕ್ಷಾತ್ ಮುಖ್ಯಮಂತ್ರಿಗಳನ್ನೇ ಕೇಳಿದರೆ, ನನಗೆ ಗೊತ್ತಿಲ್ಲ ಎಂಬ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಹಾಗಾದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಯಾರು? ಸಿಎಂ ಅವರಿಗೆ ಗೊತ್ತಿಲ್ಲದೆ ಇಲಾಖೆಗಳಲ್ಲಿ ಇಷ್ಟೆಲ್ಲಾ ನಡೆಯುತ್ತಿದೆಯೇ ಅಥವಾ ಗೊತ್ತಿದ್ದೂ ನಾಟಕವಾಡುತ್ತಿದ್ದಾರೆಯೇ?
5,000 ಕೋಟಿ ರೂ. ಗೃಹಲಕ್ಷ್ಮಿ ಹಣವನ್ನು ತಿಂದು ತೇಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಮತಕ್ಕಾಗಿ ಮಹಿಳೆಯರನ್ನು ಯಾಮಾರಿಸಿ ಅಧಿಕಾರ ಸಿಕ್ಕ ಮೇಲೆ ಅವರನ್ನು ಅನರ್ಹರು ಎಂದು ಬೀದಿಗೆ ತಳ್ಳುವುದು ಯಾವ ರೀತಿಯ ಮಹಿಳಾ ಸಬಲೀಕರಣ? ಇದು ಕೇವಲ ವೋಟ್ ಬ್ಯಾಂಕ್​​ಗಾಗಿ ಮಾಡಿದ ವಂಚನೆಯಾಗಿದ್ದು, ಕಾಂಗ್ರೆಸ್ ಸರ್ಕಾರ ತಾಯಂದಿರ ಕ್ಷಮೆ ಕೇಳಬೇಕು. ಕೊಟ್ಟ ಮಾತಿಗೆ ತಪ್ಪಿದವರನ್ನು ಈ ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಜೆಡಿಎಸ್​​ ವಾಗ್ದಾಳಿ ನಡೆಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧರ್ಮಸ್ಥಳದಲ್ಲಿ ಮಹಾ ವಿಸ್ಮಯ: 26 ವರ್ಷ ಹಿಂದೆ ಓಡಿಹೋಗಿದ್ದ ಹುಡುಗ ಕೊನೆಗೂ ವಾಪಸ್, ಸತೀಶ್ ಈಗ ಮಹಾರಾಷ್ಟ್ರದ ಸಲೀಂ! – Kannada News

ತಾಯಿ ಜತೆ ಸತೀಶ್ ಅಲಿಯಾಸ್ ಸಲೀಂImage Credit source: tv9

ಮಂಗಳೂರು, ಜೂನ್ 11: ದಕ್ಷಿಣ ಕನ್ನಡ (Dakashina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ, ಇದೀಗ ಮನೆಗೆ ಮರಳಿದ್ದಾನೆ. ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಈಗ ಸಲೀಂ ಆಗಿ ಮರಳಿ ಮನೆಗೆ ಬಂದು ತಾಯಿಯನ್ನು ಸೇರಿದ ಅಪರೂಪದ ವ್ಯಕ್ತಿ. 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಆಕರ್ಷಿತನಾಗಿ ಓಡಿಹೋಗಿದ್ದ ಈತ, ಇಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ನೆಲೆಸಿದ್ದ.

ಮುಖ್ಯಾಂಶಗಳು

  • 26 ವರ್ಷಗಳ ಬಳಿಕ ತಾಯಿ-ಮಗನ ಸಮ್ಮಿಲನ.
  • ಸರ್ಕಸ್ ತಂಡದ ಜೊತೆ ಓಡಿಹೋಗಿದ್ದ ಬಾಲಕ ಸತೀಶ್.
  • ಮಹಾರಾಷ್ಟ್ರದಲ್ಲಿ ‘ಸಲೀಂ’ ಆದ ಕರಾವಳಿ ಯುವಕ.

ಊರನ್ನೇ ಮರೆತು ಮಹಾರಾಷ್ಟ್ರದಲ್ಲಿ ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿದ್ದ ಸತೀಶ್!

ಮನೆ ಬಿಟ್ಟು ಹೋದ ಬಳಿಕ ಸರ್ಕಸ್ ತಂಡದ ಜೊತೆ ದೇಶದ ವಿವಿಧೆಡೆ ಸುತ್ತಾಡಿದ ಸತೀಶ್, ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದ. ನಿರಂತರ ದುಡಿಮೆಯ ನಡುವೆ ಆತ ತನ್ನ ಸ್ವಂತ ಊರು, ಭಾಷೆ ಹಾಗೂ ಹೆತ್ತವರನ್ನೇ ಸಂಪೂರ್ಣವಾಗಿ ಮರೆತುಹೋಗಿದ್ದ. ಅಲ್ಲಿಯೇ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದ. ಅಲ್ಲದೆ, ತಾಲೀಮಾ ಎಂಬಾಕೆಯನ್ನು ವಿವಾಹವಾಗಿರುವ ಈತನಿಗೆ ಈಗ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷಗಳ ಕಾಲ ಹೊರ ರಾಜ್ಯದಲ್ಲೇ ಕಳೆದಿದ್ದರಿಂದ ಸತೀಶ್‌ಗೆ ತನ್ನ ಮಾತೃಭಾಷೆಯಾದ ತುಳು ಹಾಗೂ ಕನ್ನಡ ಸಂಪೂರ್ಣವಾಗಿ ಮರೆತುಹೋಗಿದ್ದು, ಈಗ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಮಾತನಾಡುತ್ತಿದ್ದಾನೆ.

ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಬಂದಾಗ ಮರುಕಳಿಸಿದ ನೆನಪು

ಜೂನ್ 9 ರಂದು ಸತೀಶ್ (ಸಲೀಂ) ತನ್ನ ಮಹಾರಾಷ್ಟ್ರದ ಸ್ನೇಹಿತರ ತಂಡದೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ. ಈ ವೇಳೆ ಈ ಹಿಂದೆ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬಂದಾಗ ಆತನಿಗೆ ಹಳೆಯ ನೆನಪುಗಳು ಹಠಾತ್ತಾಗಿ ಮರುಕಳಿಸಿವೆ. ‘ಇದೇ ನನ್ನ ಸ್ವಂತ ಊರು’ ಎಂಬ ಸತ್ಯ ಮನವರಿಕೆಯಾಗಿದೆ. ತಮ್ಮಂದಿರ ಹೆಸರುಗಳು ನೆನಪಿದ್ದ ಕಾರಣ, ಸ್ಥಳೀಯ ಅಂಗಡಿಯವರ ಬಳಿ ವಿಚಾರಿಸಿ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕಿಕೊಂಡು ಹೋಗಿದ್ದಾನೆ. ಮನೆಯ ಬಾಗಿಲಿಗೆ ಬಂದು ನಿಂತ ಹಿರಿಯ ಮಗನನ್ನು ಕಂಡ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ. ಮನೆಯವರೆಲ್ಲರೂ ಸೇರಿ ಮಗನನ್ನು ಅತ್ಯಂತ ಸಂತಸದಿಂದ ಬರಮಾಡಿಕೊಂಡಿದ್ದಾರೆ.

ಕುಟುಂಬದವರ ಜತೆ ಸತೀಶ್ ಅಲಿಯಾಸ್ ಸಲೀಂ

ಭಾಷೆಯ ಮಿತಿ ಮೀರಿದ ತಾಯಿಯ ಪ್ರೀತಿ, ಫಲಿಸಿದ ಹರಕೆ

ಸತೀಶ್‌ಗೆ ಕೇವಲ ಹಿಂದಿ ಮಾತ್ರ ಬರುತ್ತಿದ್ದು, ಇತ್ತ ತಾಯಿಗೆ ಹಿಂದಿ ಗೊತ್ತಿಲ್ಲದ ಕಾರಣ ಇಬ್ಬರ ನಡುವೆ ಭಾಷೆಯ ಸಮಸ್ಯೆ ಎದುರಾಗಿತ್ತು. ಆದರೂ ಭಾಷೆಯ ಹಂಗಿಲ್ಲದೆ ತಾಯಿ ಮತ್ತು ಸಹೋದರರನ್ನು ಸತೀಶ್ ಗುರುತಿಸಿ ಅಪ್ಪಿಕೊಂಡಿದ್ದಾನೆ. ಮಗ ಸಿಗಲಿ ಎಂದು ಧರ್ಮಸ್ಥಳ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಪಣೋಲಿಬೈಲ್ ದೈವಸ್ಥಾನಕ್ಕೆ ತಾಯಿ ವರ್ಷಗಳಿಂದ ಹೊತ್ತಿದ್ದ ಹರಕೆ ಕೊನೆಗೂ ಫಲಿಸಿದೆ.

‘ನಾನು ಸಾಯುವ ಮುನ್ನ ನನ್ನ ಹಿರಿಯ ಮಗನನ್ನು ಒಮ್ಮೆಯಾದರೂ ನೋಡಬೇಕು, ಅವನನ್ನು ಹೇಗಾದರೂ ಕರೆತನ್ನಿ’ ಎಂದು ಇತ್ತೀಚೆಗಷ್ಟೇ ತಾಯಿ ತನ್ನ ಉಳಿದ ಮಕ್ಕಳ ಬಳಿ ಕಣ್ಣೀರಿಟ್ಟಿದ್ದರು. ಹೆತ್ತ ಕರುಳಿನ ಹಂಬಲಕ್ಕೆ ಓಗೊಟ್ಟಂತೆ ಮಗ ಮರಳಿ ಬಂದಿದ್ದು, ಕುಟುಂಬದೊಂದಿಗೆ ಕೆಲವು ದಿನಗಳ ಕಾಲ ಸಂತಸದಿಂದ ಕಾಲ ಕಳೆದ ಸತೀಶ್, ಸದ್ಯ ಮಹಾರಾಷ್ಟ್ರಕ್ಕೆ ಮರಳಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಲಿಂಪಿಕ್ಸ್​ಗೆ ಕೊಹ್ಲಿಯನ್ನು ಆಯ್ಕೆ ಮಾಡಿ: ಮಾಜಿ ಆಟಗಾರನ ಸಲಹೆ! – Kannada News

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ವಿರಾಟ್ ಕೊಹ್ಲಿಯನ್ನು ಕೂಡ ಆಯ್ಕೆ ಮಾಡಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಎಸ್. ಶ್ರೀಶಾಂತ್ ಆಗ್ರಹಿಸಿದ್ದಾರೆ. ‘ಸ್ಪೋರ್ಟ್ಸ್ ವಿತ್ ರವಿಶ್’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀಶಾಂತ್, ಒಲಿಂಪಿಕ್ಸ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ವೈಭವ್ ಸೂರ್ಯವಂಶಿಯನ್ನು ಜೊತೆಯಾಗಿ ಕಣಕ್ಕಿಳಿಸಬೇಕು. ಇದರಿಂದ ಜಾಗತಿಕ ಕ್ರೀಡಾಕೂಟದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್ ಜಗತ್ತಿನ ‘ಡ್ರೀಮ್ ಜೋಡಿ’

128 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮರಳಿ ಸೇರ್ಪಡೆಯಾಗಲು ವಿರಾಟ್ ಕೊಹ್ಲಿ ಅವರ ಜಾಗತಿಕ ಜನಪ್ರಿಯತೆಯೇ ಮುಖ್ಯ ಕಾರಣ ಎಂದು ಶ್ರೀಶಾಂತ್ ಪ್ರತಿಪಾದಿಸಿದ್ದಾರೆ.

“ಒಲಿಂಪಿಕ್ಸ್‌ ವೇದಿಕೆಯಲ್ಲಿ ವಿರಾಟ್ ಕೊಹ್ಲಿ ಅವರ ರನ್ ಹಸಿವು ಮತ್ತು ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಧೂಳೆಬ್ಬಿಸಿದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಒಟ್ಟಿಗೆ ಸೇರಿದರೆ ಅದು ಜಗತ್ತಿಗೆ ಅಪ್ಪಟ ಮನರಂಜನೆ ನೀಡಲಿದೆ”.

“ಭಾರತ ಚಿನ್ನದ ಪದಕ ಗೆಲ್ಲಬೇಕಾದರೆ ಆಯ್ಕೆಗಾರರು ವಯಸ್ಸಿನ ಮಿತಿಯನ್ನು ಬದಿಗಿಟ್ಟು ವಿರಾಟ್ ಕೊಹ್ಲಿ ಹಾಗೂ ವೈಭವ್ ಸೂರ್ಯವಂಶಿ ಇಬ್ಬರನ್ನೂ ಆಯ್ಕೆ ಮಾಡಬೇಕು” ಎಂದು ಶ್ರೀಶಾಂತ್ ಆಗ್ರಹಿಸಿದ್ದಾರೆ.

ಶ್ರೀಶಾಂತ್ ಅವರ ಈ ಆಲೋಚನೆ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದರೂ, ಇದರ ಹಿಂದೆ ದೊಡ್ಡ ಪ್ರಾಯೋಗಿಕ ಸವಾಲುಗಳಿವೆ ಎಂಬುದೇ ಸತ್ಯ.

ಏಕೆಂದರೆ 2028ರ ಒಲಿಂಪಿಕ್ಸ್ ಕ್ರಿಕೆಟ್ ಪಂದ್ಯಗಳು ಟಿ20 ಮಾದರಿಯಲ್ಲಿ ನಡೆಯಲಿವೆ. ಆದರೆ ವಿರಾಟ್ ಕೊಹ್ಲಿ ಅವರು 2024ರ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ . ಅವರು ಒಲಿಂಪಿಕ್ಸ್‌ಗಾಗಿ ತಮ್ಮ ನಿರ್ಧಾರವನ್ನು ಬದಲಿಸುತ್ತಾರಾ ಎಂಬುದು ದೊಡ್ಡ ಪ್ರಶ್ನೆ.

ಅಂದರೆ ಒಲಿಂಪಿಕ್ಸ್​ ವೇಳೆಗೆ ವಿರಾಟ್ ಕೊಹ್ಲಿಯ ವಯಸ್ಸು 39 ಆಗಿರಲಿದೆ. ಈ ವೇಳೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಉಳಿಯಲಿದ್ದಾರಾ? ಒಂದು ವೇಳೆ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಇದ್ದರೆ ಒಲಿಂಪಿಕ್ಸ್​ಗಾಗಿ ಅವರು ಟಿ20 ನಿವೃತ್ತಿಯನ್ನು ಹಿಂಪಡೆಯಲಿದ್ದಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದ್ದರೆ 2027ರ ಏಕದಿನ ವಿಶ್ವಕಪ್​ ಮುಗಿಯಬೇಕು. ಏಕೆಂದರೆ ಈಗಾಗಲೇ ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಕೊಹ್ಲಿ ಏಕದಿನ ವಿಶ್ವಕಪ್​ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದರೂ ಅಚ್ಚರಿಪಡಬೇಕಿಲ್ಲ.

Source link