Category Archives: Blog

Your blog category

‘ದೊಡ್ಡಣ್ಣ ನಿಧನ’ ಅಂತ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಡುಕ; ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ – Kannada News | Doddanna Fights Fake News: Cyber Police Complaint Against Death Hoax Spreaders

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರು (Doddanna) ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಕಿಡಿಗೇಡಿಗಳಿಗೆ ಈಗ ಸರಿಯಾಗಿಯೇ ಕಾನೂನಿನ ಬಿಸಿ ಮುಟ್ಟಿದೆ. ತಾವಿನ್ನೂ ಆರೋಗ್ಯವಾಗಿ ಬದುಕಿರುವಾಗಲೇ ‘ಸತ್ತಿದ್ದಾರೆ’ ಎಂದು ಸುಳ್ಳು ಪೋಸ್ಟ್ ಹಾಕಿ ವಿಕೃತ ಆನಂದ ಪಟ್ಟವರ ವಿರುದ್ಧ ಹಿರಿಯ ನಟ ದೊಡ್ಡಣ್ಣ ಅವರು ಖುದ್ದಾಗಿ ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಟ ದೊಡ್ಡಣ್ಣ ಅವರ ಈ ದಿಟ್ಟ ಹೆಜ್ಜೆಯಿಂದಾಗಿ, ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವೀವ್ಸ್‌ಗಾಗಿ ಇಂತಹ ಕೆಟ್ಟ ಕೆಲಸ ಮಾಡುತ್ತಿದ್ದ ಕಿಡಿಗೇಡಿಗಳಿಗೆ ಈಗ ಜೈಲು ಪಾಲಾಗುವ ಭಯ ಶುರುವಾಗಿದೆ

ಏನಿದು ಘಟನೆ?

ಇತ್ತೀಚೆಗೆ ಸಾಮಾಜಿಕ ಜಾಲತಾಣದ ‘ಪಬ್ಲಿಕ್ ಫ್ರೆಂಡ್’ (Public Friend) ಎಂಬ ಖಾತೆಯಲ್ಲಿ ನಟ ದೊಡ್ಡಣ್ಣ ಅವರು ಇನ್ನಿಲ್ಲ ಎಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ದೊಡ್ಡಣ್ಣ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಇದಾದ ಬೆನ್ನಲ್ಲೇ ಸ್ವತಃ ದೊಡ್ಡಣ್ಣ ಅವರೇ ಮಾಧ್ಯಮಗಳ ಮುಂದೆ ಬಂದು, ‘ನಾನು ಚೆನ್ನಾಗಿದ್ದೇನೆ, ಆರೋಗ್ಯವಾಗಿದ್ದೇನೆ, ದಯವಿಟ್ಟು ಸುಳ್ಳು ಸುದ್ದಿ ನಂಬಬೇಡಿ’ ಎಂದು ಸ್ಪಷ್ಟನೆ ನೀಡಬೇಕಾಯಿತು.

ಇದೇ ಮೊದಲೇನಲ್ಲ… ಈ ಬಾರಿ ಬಿಡುವ ಮಾತೇ ಇಲ್ಲ

ದೊಡ್ಡಣ್ಣ ಅವರ ಬಗ್ಗೆ ಈ ರೀತಿ ನಿಧನದ ಸುದ್ದಿ ಹರಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಕೆಲವು ವರ್ಷಗಳಿಂದಲೂ ಆಗಾಗ ಇಂತಹ ವಿಕೃತ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಪ್ರತಿ ಬಾರಿಯೂ ಸುಮ್ಮನಾಗುತ್ತಿದ್ದ ದೊಡ್ಡಣ್ಣ, ಈ ಬಾರಿ ಮಾತ್ರ ಕಿಡಿಗೇಡಿಗಳಿಗೆ ಸರಿಯಾದ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿ ಸೈಬರ್ ಠಾಣೆಯ ಮೆಟ್ಟಿಲೇರಿದ್ದಾರೆ.

‘ನಾನು ಬದುಕಿರುವಾಗಲೇ ಸತ್ತಿದ್ದೇನೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಎಐ ಮೂಲಕ ಎಡಿಟ್ ಮಾಡಿ ವೈರಲ್ ಮಾಡಿರುವುದರಿಂದ ನನಗೆ ತೀವ್ರ ಮಾನಸಿಕ ನೋವು ಹಾಗೂ ಅತೀವ ಆಘಾತ ಉಂಟಾಗಿದೆ. ನನ್ನ ಕುಟುಂಬಸ್ಥರು ಮತ್ತು ಅಭಿಮಾನಿಗಳು ಈ ವದಂತಿಯಿಂದ ನೊಂದಿದ್ದಾರೆ. ಆದ್ದರಿಂದ ಇಂತಹ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೊಡ್ಡಣ್ಣ ದೂರಿನಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ನಾನು ಸತ್ತಿಲ್ಲ, ಟಿವಿ9 ನೋಡ್ತಾ ಆರಾಮಾಗಿದ್ದೇನೆ’; ದೊಡ್ಡಣ್ಣ ಸ್ಪಷ್ಟನೆ

ಕಳೆದ ಜೂನ್ 15 ರಂದು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೊಡ್ಡಣ್ಣ ಅವರು ಅಧಿಕೃತವಾಗಿ ದೂರು ನೀಡಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಪೊಲೀಸರು, ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಭರ್ಜರಿ ಬೇಟೆ ಆರಂಭಿಸಿದ್ದಾರೆ. ಆ ‘ಪಬ್ಲಿಕ್ ಫ್ರೆಂಡ್’ ಖಾತೆಯ ಐಪಿ ಅಡ್ರೆಸ್ ಹಾಗೂ ಅದರ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ತನಿಖೆ ಚುರುಕುಗೊಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಣ್ಣ ಕುರಿತು ಇಂತಹ ನಕಲಿ ಪೋಸ್ಟ್‌ಗಳನ್ನು ಕ್ರಿಯೇಟ್ ಮಾಡಿದವರಿಗೆ ಮತ್ತು ಅದನ್ನು ಫಾರ್ವರ್ಡ್ ಮಾಡಿದವರಿಗೆ ನಡುಕ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎನ್‌ಸಿಪಿಐಗೆ ಹೊಸ ಅಧ್ಯಕ್ಷರ ನೇಮಕ: ಟಿಎಂಸಿ ಬಂಡಾಯ ಸಂಸದರ ಅರ್ಜಿ ಸ್ವೀಕರಿಸುತ್ತಾರಾ ಸ್ಪೀಕರ್ ಓಂ ಬಿರ್ಲಾ? – Kannada News | TMC Rebel MPs Join NCPI: Speaker Om Birla’s Merger Decision and NDA Impact

ಕೋಲ್ಕತ್ತಾ, ಜೂನ್ 17: ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ತೀವ್ರ ರಾಜಕೀಯ ಬಿಕ್ಕಟ್ಟಿನ ನಡುವೆ, ಬಂಡಾಯ ಸಂಸದರು ವಿಲೀನಗೊಳ್ಳಲು ಬಯಸಿರುವ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷಕ್ಕೆ ಜ್ಯೋತಿಪ್ರಕಾಶ್ ಚಟರ್ಜಿ ಅವರನ್ನು ಹೊಸ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇತ್ತ, ಟಿಎಂಸಿಯ ಮೂರನೇ ಎರಡರಷ್ಟು ಸಂಸದರೊಂದಿಗೆ ಬಂಡಾಯ ಎದ್ದಿರುವ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ವಿಲೀನದ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಸ್ಪೀಕರ್ ಓಂ ಬಿರ್ಲಾ ಅವರ ಮುಂದಿನ ನಡೆ ಏನು?
ಮೂಲಗಳ ಪ್ರಕಾರ, ಬಂಡಾಯ ಸಂಸದರ ಮನವಿಯನ್ನು ಸ್ವೀಕರಿಸಿರುವ ಸ್ಪೀಕರ್ ಓಂ ಬಿರ್ಲಾ ಅವರು ತಕ್ಷಣವೇ ಯಾವುದೇ ನಿರ್ಧಾರ ಪ್ರಕಟಿಸುವುದಿಲ್ಲ. ಅವರು ಬಂಡಾಯ ಬಣದ ವಾದವನ್ನು ಕೇಳುವುದರ ಜೊತೆಗೆ, ಮಮತಾ ಬ್ಯಾನರ್ಜಿ ನೇತೃತ್ವದ ಅಧಿಕೃತ ಟಿಎಂಸಿ ನಾಯಕರ ಅಭಿಪ್ರಾಯವನ್ನೂ ಪಡೆಯಲಿದ್ದಾರೆ.

ಜುಲೈ ಮೂರನೇ ವಾರದಲ್ಲಿ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಈ ಬಗ್ಗೆ ಅಂತಿಮ ತೀರ್ಮಾನ ಹೊರಬರಲಿದೆ. ಭವಿಷ್ಯದಲ್ಲಿ ಈ ವಿಷಯವು ನ್ಯಾಯಾಲಯದ ಮೆಟ್ಟಿಲೇರಿದರೆ ಯಾವುದೇ ಕಾನೂನು ತೊಡಕು ಎದುರಾಗಬಾರದು ಎಂಬ ಕಾರಣಕ್ಕೆ, ಸ್ಪೀಕರ್ ಅವರು ಕೇಂದ್ರ ಕಾನೂನು ಸಚಿವಾಲಯದಿಂದ ಲಿಖಿತ ಕಾನೂನು ಅಭಿಪ್ರಾಯವನ್ನು ಪಡೆಯಲಿದ್ದಾರೆ.

ಮತ್ತಷ್ಟು ಓದಿ: ಕಾಂಗ್ರೆಸ್ ಜೊತೆ ವಿಲೀನವಾಗುತ್ತಾ ಟಿಎಂಸಿ? ಮಮತಾ ಬ್ಯಾನರ್ಜಿಗೆ ದೊಡ್ಡ ಹುದ್ದೆಯ ಆಫರ್

ಎನ್‌ಡಿಎ (NDA) ಮೈತ್ರಿಕೂಟದಲ್ಲಿ ಬದಲಾಗಲಿದೆ ಸಮೀಕರಣ
ಬಂಡಾಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಅವರ ಪ್ರಕಾರ, ಸದ್ಯಕ್ಕೆ ಅವರ ಬಣದಲ್ಲಿ 20 ಸಂಸದರಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಈ ಸಂಖ್ಯೆ 22 ಕ್ಕೆ ಏರಲಿದೆ. ಈ ಎಲ್ಲಾ ಬಂಡಾಯ ಸಂಸದರನ್ನು ಸೇರಿಸಿಕೊಳ್ಳಲು ಎನ್‌ಸಿಪಿಐ ಒಪ್ಪಿಕೊಂಡಿದೆ.

ಒಂದು ವೇಳೆ ಲೋಕಸಭಾ ಸ್ಪೀಕರ್ ಈ ಬಂಡಾಯ ಗುಂಪನ್ನು ಎನ್‌ಸಿಪಿಐ ಪಕ್ಷದ ಸಂಸದರೆಂದು ಅಧಿಕೃತವಾಗಿ ಗುರುತಿಸಿದರೆ, ಕೇಂದ್ರದಲ್ಲಿರುವ ಎನ್‌ಡಿಎ (NDA) ಮೈತ್ರಿಕೂಟದ ಸಮೀಕರಣವೇ ಬದಲಾಗಲಿದೆ. ಏಕೆಂದರೆ, ಪ್ರಸ್ತುತ ಎನ್‌ಡಿಎ ಮೈತ್ರಿಕೂಟದಲ್ಲಿ ಟಿಡಿಪಿ (16 ಸಂಸದರು) ಮತ್ತು ಜೆಡಿಯು (12 ಸಂಸದರು) ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಹೊಂದುವ ಮೂಲಕ ಎನ್‌ಸಿಪಿಐ ಒಕ್ಕೂಟದ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ.

ಎನ್‌ಸಿಪಿಐ ಪಕ್ಷದೊಳಗೇ ಗೊಂದ
ಎನ್‌ಸಿಪಿಐ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಾಂತನು ಡೇ ಅವರು ಈ ಬೆಳವಣಿಗೆಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ (PTI) ಜೊತೆ ಹೇಳಿದ್ದಾರೆ. ಹೊಸ ಅಧ್ಯಕ್ಷರಾಗಿದ್ದಾರೆ ಎನ್ನಲಾದ ಜ್ಯೋತಿಪ್ರಕಾಶ್ ಚಟರ್ಜಿ ಯಾರೆಂದೇ ನನಗೆ ಗೊತ್ತಿಲ್ಲ. ದೊಡ್ಡ ನಾಯಕರು ನಮ್ಮ ಪಕ್ಷಕ್ಕೆ ಬರುತ್ತಿರುವುದು ಸಂತೋಷವೇ, ಆದರೆ ನಮ್ಮನ್ನು ಕತ್ತಲೆಯಲ್ಲಿ ಇಟ್ಟಿರುವುದು ನಿರಾಶೆ ಮೂಡಿಸಿದೆ ಎಂದು ಡೇ ಹೇಳಿದ್ದಾರೆ.

ಎನ್‌ಸಿಪಿಐ (NCPI) ಪಕ್ಷವನ್ನು 2023 ರಲ್ಲಿ ಸ್ಥಾಪಿಸಲಾಗಿದ್ದು, ಪಶ್ಚಿಮ ಬಂಗಾಳದ ಹೌರಾದಲ್ಲಿ ಇದರ ಪ್ರಧಾನ ಕಚೇರಿ ಇದೆ. ಈ ಪಕ್ಷವು ಈ ಹಿಂದೆ ತ್ರಿಪುರ ವಿಧಾನಸಭಾ ಚುನಾವಣೆಯ ಕೆಲವು ಸ್ಥಾನಗಳಲ್ಲೂ ಸ್ಪರ್ಧಿಸಿತ್ತು. ಸದ್ಯ ಈ ಪಕ್ಷದ ಹೆಸರಿನಲ್ಲೇ ಸಂಸತ್ತಿನಲ್ಲಿ ಪ್ರತ್ಯೇಕ ಮಾನ್ಯತೆ ಪಡೆಯಲು ಬಂಡಾಯ ಸಂಸದರು ಹೋರಾಟ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯಂಗ್ ಇಂಡಿಯಾ ಪಾಲಿಗೆ ಇಂದು ನಿರ್ಣಾಯಕ ಪಂದ್ಯ..! – Kannada News | Do or Die for India A: Afghanistan A Clash to Decide Tri Series Final Fate

ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಇಂದು (ಜೂನ್ 17) ತಿಲಕ್ ವರ್ಮಾ ನೇತೃತ್ವದ ಇಂಡಿಯಾ ‘ಎ’ ತಂಡವು ಇಮ್ರಾನ್ ಮಿರ್ ಸಾರಥ್ಯದ ಅಫ್ಘಾನಿಸ್ತಾನ್ ‘ಎ’ ತಂಡವನ್ನು ಎದುರಿಸಲಿದೆ. ಭಾರತ ತಂಡಕ್ಕೆ ಸರಣಿಯ ಫೈನಲ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಮ್ಯಾಚ್ ಟೀಮ್ ಇಂಡಿಯಾ ಪಾಲಿಗೆ ‘ಮಾಡೂ ಇಲ್ಲವೇ ಮಡಿ’ ಕದನವಾಗಿ ಮಾರ್ಪಟ್ಟಿದೆ.

ಟೀಮ್ ಇಂಡಿಯಾಗೆ ಸತತ ಸೋಲು:

ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಭಾರತ ಎ ತಂಡವು, ಆ ನಂತರದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ.

ಜೂನ್ 11 ರಂದು ನಡೆದ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಭಾರತ 349 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದರೂ, ಮಳೆಯ ಕಾರಣದಿಂದಾಗಿ DLS ನಿಯಮದನ್ವಯ ಕೇವಲ 4 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು.

ಜೂನ್ 14 ರಂದು ನಡೆದ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯವು ಟೈ ಆದ ನಂತರ, ರೋಚಕ ‘ಸೂಪರ್ ಓವರ್’ನಲ್ಲಿ ಭಾರತ ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕಿತು.  ಈ ಎರಡು ಸೋಲುಗಳಿಂದ ಕಂಗೆಟ್ಟಿರುವ ಟೀಮ್ ಇಂಡಿಯಾ ಫೈನಲ್ ರೇಸ್​ನಲ್ಲಿ ಉಳಿಯಲು ಇಂದು ಗೆಲ್ಲಲೇಬೇಕು.

ಅಂಕ ಪಟ್ಟಿಯ ಲೆಕ್ಕಾಚಾರ:

ಪ್ರಸ್ತುತ ಲೀಗ್ ಹಂತದಲ್ಲಿ ಭಾರತ 3 ಪಂದ್ಯಗಳಿಂದ ಕೇವಲ 2 ಅಂಕಗಳನ್ನು ಹೊಂದಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಂದು ವೇಳೆ ಇಂದು ಭಾರತ ಸೋತರೆ, ಕೇವಲ 2 ಅಂಕಗಳೊಂದಿಗೆ ಟೂರ್ನಿಯಿಂದ ಹೊರಬೀಳಲಿದೆ.

ಅಫ್ಘಾನಿಸ್ತಾನ ಈಗಾಗಲೇ 2 ಅಂಕ ಹೊಂದಿದ್ದು, ಅವರಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವುದರಿಂದ ಇಂದಿನ ಪಂದ್ಯ ಗೆದ್ದರೆ ಅವರು ನೇರವಾಗಿ ಶ್ರೀಲಂಕಾ ಜೊತೆ ಫೈನಲ್ ಪ್ರವೇಶಿಸಲಿದ್ದಾರೆ.

ಆದ್ದರಿಂದ ಭಾರತ ಕೇವಲ ಗೆಲ್ಲುವುದಷ್ಟೇ ಅಲ್ಲದೆ, ಉತ್ತಮ ನೆಟ್ ರನ್ ರೇಟ್ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಅಫ್ಘಾನಿಸ್ತಾನ್ ತಂಡಕ್ಕೆ ಇಂದಿನ ಪಂದ್ಯ ಹೊರತುಪಡಿಸಿ ಮತ್ತೊಂದು ಪಂದ್ಯವಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ನೆಟ್ ರನ್ ರೇಟ್ ಅನ್ನು ಟಾರ್ಗೆಟ್ ಮಾಡುವುದು ಅನಿವಾರ್ಯ.

ಅಫ್ಘಾನಿಸ್ತಾನ್ ಎ ತಂಡ: ಇಮ್ರಾನ್ ಮಿರ್ (ನಾಯಕ), ಹಸನ್ ಐಸಾಖಿಲ್, ಖಾಲಿದ್ ತನಿವಾಲ್, ಬಹಿರ್ ಶಾ, ಫರ್ಮಾನುಲ್ಲಾ ಸಫಿ, ಇಜಾಝ್ ಅಹ್ಮದ್ ಅಹ್ಮದ್‌ಝೈ, ಮೊಹಮ್ಮದ್ ಇಶಾಕ್ (ವಿಕೆಟ್ ಕೀಪರ್), ಶಮ್ಸ್ ಉರ್ ರೆಹಮಾನ್, ಅಬ್ದುಲ್ಲಾ ಅಹ್ಮದ್‌ಝಾಹಿ, ಝಹೀರ್ ಖಾನ್, ಖಲೀಲ್ ಗುರ್ಬಾಝ್, ನೂರ್ ಉಲ್ ರೆಹಮಾನ್, ಇಶಾಕ್ ರಹೀಮಿ, ಫೈಸಲ್ ಖಾನ್ಮೊ, ಮೊಹಮ್ಮದ್ ಇಬ್ರಾಹಿಂ.

ಇದನ್ನೂ ಓದಿ: ಮಿಂಚಿನಾಟದೊಂದಿಗೆ ಹೊಸ ಇತಿಹಾಸ ಬರೆದ ಎಂಬಾಪ್ಪೆ!

ಭಾರತ ಎ ತಂಡ: ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ರುತುರಾಜ್ ಗಾಯಕ್‌ವಾಡ್, ತಿಲಕ್ ವರ್ಮಾ (ನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶೆಡ್ಗೆ, ಅನ್ಕೂಲ್ ರಾಯ್, ವಿಪ್ರಾಜ್ ನಿಗಮ್, ಅರ್ಷದ್ ಖಾನ್, ಯಶ್ ಠಾಕೂರ್, ಅಂಶುಲ್ ಕಂಬೋಜ್, ಪ್ರಿಯಾಂಶ್ ಆರ್ಯ, ಕುಮಾರ್ ಕುಶಾಗ್ರ, ಅಶೋಕ್ ಶರ್ಮಾ.

Source link

ಹೊಸ ಫೆರಾರಿ ಕಾರಲ್ಲಿ ಮುಂಬೈ ಸುತ್ತಿದ ರಣವೀರ್; ಇದರ ಬೆಲೆ 6 ಕೋಟಿ ರೂಪಾಯಿ – Kannada News | Ranveer Singh’s New Ferrari 296 GTB: Don 3 Controversy Ignored, Flaunts Luxury Life

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಇತ್ತೀಚೆಗಷ್ಟೇ ತೆರೆಕಂಡ ‘ಧುರಂಧರ್’ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿದ್ದಾರೆ. ಆದರೆ, ಮತ್ತೊಂದೆಡೆ ಬಹುನಿರೀಕ್ಷಿತ ‘ಡಾನ್ 3’ ಚಿತ್ರದಿಂದ ಹೊರಬಂದ ವಿಚಾರವಾಗಿ ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ರಣವೀರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿ ಬಿ-ಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಎಲ್ಲಾ ವಿವಾದ ಹಾಗೂ ಗಾಸಿಪ್‌ಗಳ ನಡುವೆಯೇ ರಣವೀರ್ ಸಿಂಗ್ ಮುಂಬೈ ರಸ್ತೆಗಳಲ್ಲಿ ತಮ್ಮ ಹೊಚ್ಚಹೊಸ ಐಷಾರಾಮಿ ಕಾರಿನಲ್ಲಿ ರೌಂಡ್ಸ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ರಣವೀರ್ ಸಿಂಗ್ ತಮ್ಮ ದುಬಾರಿ ಕಲೆಕ್ಷನ್‌ಗೆ ಸೇರ್ಪಡೆ ಮಾಡಿಕೊಂಡಿರುವ ಕಡುಗಪ್ಪು ಬಣ್ಣದ ‘ಫೆರಾರಿ 296 ಜಿಟಿಬಿ’ ಸೂಪರ್ ಕಾರ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಭಾರತದಲ್ಲಿ ಈ ರೇಸಿಂಗ್ ಕಾರಿನ ಬೆಲೆ ಬರೋಬ್ಬರಿ 6.36 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ‘ಬಾಲಿವುಡ್‌ನಲ್ಲಿ ಪಾಕಿಸ್ತಾನ ಪ್ರೇಮ ಹೆಚ್ಚಿದೆ’: ರಣವೀರ್ ಸಿಂಗ್ ಪರ ಬ್ಯಾಟ್ ಬೀಸಿದ ಕಂಗನಾ ರಣಾವತ್

ರಣವೀರ್ ಗ್ಯಾರೇಜ್‌ನಲ್ಲಿರುವ ಇತರ ದುಬಾರಿ ಕಾರುಗಳು:

ಬಾಲಿವುಡ್‌ನಲ್ಲಿ ಸಖತ್ ಕಾಸ್ಟ್‌ಲಿ ಲೈಫ್‌ಸ್ಟೈಲ್ ಹೊಂದಿರುವ ರಣವೀರ್ ಸಿಂಗ್‌ಗೆ ಕಾರುಗಳೆಂದರೆ ಅಪಾರ ಕ್ರೇಜ್. ಹೊಸ ಫೆರಾರಿ ಮಾತ್ರವಲ್ಲದೆ ಅವರ ಗ್ಯಾರೇಜ್‌ನಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಇನ್ನು ಹಲವು ಕಾರುಗಳಿವೆ.

ಮರ್ಸಿಡಿಸ್-ಮೇಬ್ಯಾಕ್ GLS 600: ಇದರ ಬೆಲೆ ಸುಮಾರು 3.11 ಕೋಟಿಯಿಂದ 3.35 ಕೋಟಿ ರೂ.

ಆಸ್ಟನ್ ಮಾರ್ಟಿನ್ ರೇಪಿಡ್ S: ಇದರ ಬೆಲೆ ಅಂದಾಜು 3.29 ಕೋಟಿ ರೂ.

ಲಂಬೋರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್: ಇದರ ಬೆಲೆ ಬರೋಬ್ಬರಿ 3.98 ಕೋಟಿಯಿಂದ 4.71 ಕೋಟಿ ರೂ.

ರಣವೀರ್ ಸಿಂಗ್ ಮುಂದಿನ ಸಿನಿಮಾಗಳು:

ಸದ್ಯ ‘ಧುರಂಧರ್’ ಸಕ್ಸಸ್ ಬೆನ್ನಲ್ಲೇ ರಣವೀರ್ ಸಿಂಗ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಮುಂದಿನ ದಿನಗಳಲ್ಲಿ ಅವರು ಖ್ಯಾತ ಚಿತ್ರನಿರ್ಮಾಪಕ ಹನ್ಸಲ್ ಮೆಹ್ತಾ ಅವರ ಪುತ್ರ ಜೈ ಮೆಹ್ತಾ ನಿರ್ದೇಶಿಸಲಿರುವ ‘ಪ್ರಳಯ್’ ಎಂಬ ಜಾಂಬಿ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ವಿವಾದ ಏನೇ ಇದ್ದರೂ ರಣವೀರ್ ಮಾತ್ರ ತಮ್ಮದೇ ಸ್ಟೈಲ್‌ನಲ್ಲಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಜಯನಗರ ಸೇರಿ ಬೆಂಗಳೂರಿನ ಹಲವೆಡೆ ವಾಯು ಗುಣಮಟ್ಟ ಉತ್ತಮ – Kannada News | Karnataka AQI Update: Bengaluru Records Moderate Air Quality, Other Cities Clean

ಬೆಂಗಳೂರು, ಜೂನ್ 17: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟವು (AQI) ಸಾಮಾನ್ಯವಾಗಿ ತೃಪ್ತಿದಾಯಕ ಮತ್ತು ಮಧ್ಯಮ ಮಟ್ಟದಲ್ಲಿದೆ. ರಾಜ್ಯದ ಹಲವೆಡೆ ಇತ್ತೀಚೆಗೆ ಬಿದ್ದ ಮಳೆ ಮತ್ತು ಬೀಸುತ್ತಿರುವ ಬಲವಾದ ಬಿರುಗಾಳಿಯಿಂದಾಗಿ ಧೂಳಿನ ಪ್ರಮಾಣ ಕಡಿಮೆಯಾಗಿದ್ದು, ಗಾಳಿಯ ಗುಣಮಟ್ಟ ಸುಧಾರಿಸಲು ಸಹಾಯ ಮಾಡಿದೆ.

ಮುಖ್ಯಾಂಶಗಳು

  • ಬೆಂಗಳೂರು ನಗರದಲ್ಲಿ ಇಂದು ವಾಯು ಗುಣಮಟ್ಟವು ತೃಪ್ತಿದಾಯಕ ಮಧ್ಯಮ ಮಟ್ಟದಲ್ಲಿದೆ.
  • ವಿಜಯಪುರ ಮತ್ತು ಮೈಸೂರು ನಗರಗಳು ಅತ್ಯಂತ ಶುದ್ಧ ಗಾಳಿಯನ್ನು ಹೊಂದಿವೆ.
  • ಮಳೆ ಮತ್ತು ಬಿರುಗಾಳಿಯಿಂದಾಗಿ ರಾಜ್ಯದ ವಾಯು ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 72 ರಿಂದ 78ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದು ಮಧ್ಯಮ ಶ್ರೇಣಿಗೆ ಸೇರುತ್ತದೆ. ನಗರದ ಬಹುತೇಕ ಭಾಗಗಳಲ್ಲಿ ಗಾಳಿ ಶುದ್ಧವಾಗಿದ್ದರೂ, ವಾಹನ ದಟ್ಟಣೆ ಹೆಚ್ಚಿರುವ ಕೆಲವು ಪ್ರಮುಖ ಜಂಕ್ಷನ್‌ಗಳಲ್ಲಿ ಪ್ರದೂಷಣೆ ಕೊಂಚ ಹೆಚ್ಚಿದೆ.

ನಗರದ ವಿವಿಧ ಭಾಗಗಳ ಇಂದಿನ ವಾಯು ಗುಣಮಟ್ಟ

  • ಬಿಟಿಎಂ ಲೇಔಟ್: 63 AQI (ತೃಪ್ತಿದಾಯಕ)
  • ಹೆಬ್ಬಾಳ: 38 AQI (ಉತ್ತಮ/ಶುದ್ಧ ಗಾಳಿ)
  • ಸಿಲ್ಕ್ ಬೋರ್ಡ್: 105 AQI (ಸೂಕ್ಷ್ಮ ಜನರಿಗೆ ಆರೋಗ್ಯ ಸಮಸ್ಯೆ ಉಂಟುಮಾಡಬಹುದಾದ ವಲಯ)
  • ಜಯನಗರ: 86 AQI (ಮಧ್ಯಮ)

ಬೆಂಗಳೂರಿನಲ್ಲಿ ಪ್ರಮುಖ ಮಾಲಿನ್ಯಕಾರಕವಾಗಿ PM 2.5 ಮತ್ತು PM 10 ಕಣಗಳು ಕಂಡುಬಂದಿದ್ದು, ಒಟ್ಟಾರೆಯಾಗಿ ನಗರದ ಹವಾಮಾನವು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಆದರೆ ಸಿಲ್ಕ್ ಬೋರ್ಡ್‌ನಂತಹ ದಟ್ಟಣೆ ಪ್ರದೇಶಗಳಲ್ಲಿ ಉಸಿರಾಟದ ತೊಂದರೆ ಇರುವವರು ಮಾಸ್ಕ್ ಧರಿಸುವುದು ಸೂಕ್ತ.

ಕರ್ನಾಟಕದ ಇತರೆ ಪ್ರಮುಖ ನಗರಗಳ ವಾಯು ಗುಣಮಟ್ಟ

ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಇತರೆ ಪ್ರಮುಖ ನಗರಗಳಲ್ಲಿ ಇಂದು ಗಾಳಿಯ ಗುಣಮಟ್ಟ ಅತ್ಯುತ್ತಮವಾಗಿದೆ. ಬಹುತೇಕ ಕಡೆಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣದಲ್ಲಿದೆ.

  • ವಿಜಯಪುರ: 15
  • ಗದಗ: 24
  • ಮೈಸೂರು: 31
  • ಮಂಗಳೂರು: 33
  • ಯಾದಗಿರಿ: 31

ವಾಯು ಗುಣಮಟ್ಟ ಸೂಚ್ಯಂಕವು 0-50 ಇದ್ದರೆ ‘ಉತ್ತಮ’ (Good), 51-100 ಇದ್ದರೆ ‘ಮಧ್ಯಮ’ (Moderate) ಹಾಗೂ 101-200 ಇದ್ದರೆ ‘ಕಳಪೆ’ (Poor) ಎಂದು ಪರಿಗಣಿಸಲಾಗುತ್ತದೆ. ಸದ್ಯಕ್ಕೆ ಕರ್ನಾಟಕದ ಬಹುತೇಕ ನಗರಗಳು ಹಸಿರು ಮತ್ತು ಹಳದಿ ವಲಯದಲ್ಲಿದ್ದು, ಸುರಕ್ಷಿತವಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಿಂಚಿನಾಟದೊಂದಿಗೆ ಹೊಸ ಇತಿಹಾಸ ಬರೆದ ಎಂಬಾಪ್ಪೆ! – Kannada News | Kylian mbappe’s france beats senegal

FIFA World Cup 2026: ಫಿಫಾ ವಿಶ್ವಕಪ್‌ನ ಗ್ರೂಪ್ ‘ಐ’ (Group I) ಆರಂಭಿಕ ಪಂದ್ಯದಲ್ಲಿ ಫ್ರಾನ್ಸ್ ತಂಡವು ಸೆನೆಗಲ್ ವಿರುದ್ಧ 3–1 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ. ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪ್ಪೆ (Kylian Mbappé) ಪಂದ್ಯದಲ್ಲಿ ಎರಡು ಅದ್ಭುತ ಗೋಲುಗಳನ್ನು ಗಳಿಸುವ ಮೂಲಕ ತಮ್ಮ ದೇಶದ ಪರ ಹೊಸ ಇತಿಹಾಸ ಬರೆದಿದ್ದಾರೆ.

ನ್ಯೂಯಾರ್ಕ್ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ, 27 ವರ್ಷದ ಕಿಲಿಯನ್ ಎಂಬಾಪ್ಪೆ ಫ್ರಾನ್ಸ್ ಪರ ಅತಿ ಹೆಚ್ಚು ಗೋಲು ಗಳಿಸಿದ ಸಾರ್ವಕಾಲಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಅವರು ಮಾಜಿ ಆಟಗಾರ ಒಲಿವಿಯರ್ ಗಿರೌಡ್ ಅವರ ದಾಖಲೆಯನ್ನು ಮೀರಿದ್ದಾರೆ.

ಪಂದ್ಯದ ಮುಖ್ಯಾಂಶಗಳು:

  • ಮೊದಲಾರ್ಧದಲ್ಲಿ ಸೆನೆಗಲ್ ಮೇಲುಗೈ: ಪಂದ್ಯದ ಮೊದಲಾರ್ಧದಲ್ಲಿ ಆಫ್ರಿಕಾದ ಬಲಿಷ್ಠ ತಂಡವಾದ ಸೆನೆಗಲ್ ಭರ್ಜರಿ ಪೈಪೋಟಿ ನೀಡಿತು. ಫ್ರಾನ್ಸ್‌ನ ಮುಂಚೂಣಿ ಆಟಗಾರರಿಗೆ ಗೋಲು ಗಳಿಸಲು ಸೆನೆಗಲ್‌ನ ರಕ್ಷಣಾ ವಿಭಾಗ ಅವಕಾಶ ನೀಡಲಿಲ್ಲ.
  •  ಎಂಬಾಪ್ಪೆ ಮಿಂಚಿನಾಟ: ಪಂದ್ಯದ 66ನೇ ನಿಮಿಷದಲ್ಲಿ ಮೈಕೆಲ್ ಒಲಿಸೆ ನೀಡಿದ ಅದ್ಭುತ ಪಾಸ್ ಅನ್ನು ಬಳಸಿಕೊಂಡ ಕಿಲಿಯನ್ ಎಂಬಾಪ್ಪೆ, ಸೆನೆಗಲ್‌ನ ಗೋಲ್‌ಕೀಪರ್ ಎಡ್ವರ್ಡ್ ಮೆಂಡಿ ಅವರನ್ನು ವಂಚಿಸಿ ಫ್ರಾನ್ಸ್ ಪರ ಮೊದಲ ಗೋಲು ದಾಖಲಿಸಿದರು.
  • ಬಾರ್ಕೋಲಾ ಸಾಥ್: ಪಂದ್ಯದ 82ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದ ಬ್ರಾಡ್ಲಿ ಬಾರ್ಕೋಲಾ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಫ್ರಾನ್ಸ್‌ನ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.
  • ಮೊದಲ ಗೋಲು: ಪಂದ್ಯದ ಇಂಜುರಿ ಟೈಮ್‌ನಲ್ಲಿ (90+5′ ನಿಮಿಷ) ಸೆನೆಗಲ್‌ನ 18 ವರ್ಷದ ಯುವ ಆಟಗಾರ ಇಬ್ರಾಹಿಂ ಎಂಬಾಯೆ ಒಂದು ಗೋಲು ಗಳಿಸಿ ಪಂದ್ಯದ ರೋಚಕತೆ ಹೆಚ್ಚಿಸಿದರು.
  • ಡಲಬ್ ಗೋಲು: ಸೆನೆಗೆಲ್ ಗೋಲು ದಾಖಲಿಸಿದ ಬೆನ್ನಲ್ಲೇ (90+6′ ನಿಮಿಷ) ಕಿಲಿಯನ್ ಎಂಬಾಪ್ಪೆ 30 ಯಾರ್ಡ್ ದೂರದಿಂದ ಸಿಡಿಸಿದ ರಾಕೆಟ್​ನಂತಹ ಲಾಂಗ್-ರೇಂಜ್ ಗೋಲು ಫ್ರಾನ್ಸ್‌ಗೆ 3-1 ಅಂತರದ ಐತಿಹಾಸಿಕ ಜಯ ತಂದುಕೊಟ್ಟಿತು.

ಕಿಲಿಯನ್ ಎಂಬಾಪ್ಪೆ ದಾಖಲೆಗಳು:

ಈ ಪಂದ್ಯದಲ್ಲಿ ದಾಖಲಿಸಿದ ಎರಡು ಗೋಲುಗಳೊಂದಿಗೆ ಕಿಲಿಯನ್ ಎಂಬಾಪ್ಪೆ ಫ್ರಾನ್ಸ್ ಪರ ಅತ್ಯಧಿಕ ಗೋಲು ದಾಖಲಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಒಲಿವಿಯರ್ ಗಿರೌಡ್ ಹೆಸರಿನಲ್ಲಿತ್ತು.

  • ಫ್ರಾನ್ಸ್ ಪರ 137 ಪಂದ್ಯಗಳನ್ನಾಡಿರುವ ಒಲಿವಿಯರ್ ಗಿರೌಡ್ ಒಟ್ಟು 57 ಗೋಲು ದಾಖಲಿಸಿ ದಾಖಲೆ ನಿರ್ಮಿಸಿದ್ದರು.
  • ಫ್ರಾನ್ಸ್ ಪರ ಈವರೆಗೆ 99 ಮ್ಯಾಚ್​ಗಳನ್ನಾಡಿರುವ ಕಿಲಿಯನ್ ಎಂಬಾಪ್ಪೆ 58 ಗೋಲುಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇನ್ನು ಸೆನೆಗೆಲ್ ವಿರುದ್ಧ ಬಾರಿಸಿದ ಎರಡು ಗೋಲುಗಳೊಂದಿಗೆ ಕಿಲಿಯನ್ ಎಂಬಾಪ್ಪೆ ಅವರ ಒಟ್ಟು ವಿಶ್ವಕಪ್ ಗೋಲುಗಳ ಸಂಖ್ಯೆ 14ಕ್ಕೆ ಏರಿದೆ. ಈ ಮೂಲಕ ಅವರು ಜರ್ಮನಿಯ ದಿಗ್ಗಜ ಗೆರ್ಡ್ ಮುಲ್ಲರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ: ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು!

ಮುಂಬರುವ ಮ್ಯಾಚ್​ಗಳಲ್ಲಿ ಎಂಬಾಪ್ಟೆ 3 ಗೋಲುಗಳನ್ನು ದಾಖಲಿಸಿದರೆ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಗೋಲ್ ಬಾರಿಸಿದ ಆಟಗಾರ ಎನಿಸಿಕೊಳ್ಳಬಹುದು. ಸದ್ಯ ಈ ಪಟ್ಟಿಯಲ್ಲಿ ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಮೊದಲ ಸ್ಥಾನದಲ್ಲಿದ್ದಾರೆ. ಫಿಫಾ ವಿಶ್ವಕಪ್​ನಲ್ಲಿ 24 ಪಂದ್ಯಗಳನ್ನಾಡಿರುವ ಕ್ಲೋಸ್ ಒಟ್ಟಿಉ 16 ಗೋಲು ದಾಖಲಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

Source link

ಮಳೆ ಇಲ್ಲದೆ ಬರಿದಾದ ಹೇಮಾವತಿ ಒಡಲು: ಡ್ಯಾಂನಲ್ಲಿ ಲಭ್ಯವಿರೋದು ಕೇವಲ 14 ಟಿಎಂಸಿ ನೀರು! – Kannada News | Onsoon Deficit Leaves Hemavati Dam Nearly Empty; Water Level Plummets to Just 14 TMC

ಮಳೆ ಇಲ್ಲದೆ ಬರಿದಾದ ಹೇಮಾವತಿ ಒಡಲುImage Credit source: Tv9 Kannada

ಹಾಸನ, ಜೂನ್​​ 17: ಮಲೆನಾಡಿನ ಮಡಿಲು ಹಾಸನ ಜಿಲ್ಲೆಯಲ್ಲಿಯೇ ಈ ಬಾರಿ ಮಳೆಯ ಕೊರತೆ ಆಗಿದ್ದು, ಐದಾರು ಜಿಲ್ಲೆಗಳಿಗೆ ನೀರು ಒದಗಿಸುವ ಹೇಮಾವತಿ ಒಡಲು ಬರಿದಾಗುತ್ತಿದೆ. ಹೀಗಾಗಿ ಇದೇ ನೀರನ್ನು ನಂಬಿ ಬದುಕುತ್ತಿರುವವರಲ್ಲಿ ಆತಂಕ ಹೆಚ್ಚಿದ್ದು, ಮಳೆ ಬಂದರೆ ಸಾಕಪ್ಪ ಎನ್ನುವಂತಾಗಿದೆ. ಜಿಲ್ಲೆಯ ಸಕಲೇಶಫುರ ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಮಳೆ ಸುರಿದರೆ ತುಂಬಿ ಹರಿಯುತ್ತಿದ್ದ ಹೇಮಾವತಿ ನದಿ, ಜಲಾಶಯಕ್ಕೆ ನೀರು ತುಂಬಿಸುತ್ತಿತ್ತು. ಆದರೆ ಈ ವರ್ಷ ಮುಂಗಾರು ಮಳೆಯ ತೀವ್ರ ಕೊರತೆ ಬರದ ಛಾಯೆ ಮೂಡಿಸಿದೆ.

37 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ಈಗ ಕೇವಲ 14 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಹೀಗಿದ್ದರೂ ಇದರಲ್ಲಿ ಬಳಕೆಗೆ ಯೋಗ್ಯ ನೀರು ಕೇವಲ 10 ಟಿಎಂಸಿ ಮಾತ್ರವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ಬರೊಬ್ಬರಿ 25 ಟಿಎಂಸಿ ನೀರಿತ್ತು 21 ಟಿಎಂಸಿ ನೀರು ಬಳಕೆಗೆ ಸಿಗುವಂತಿತ್ತು. ಹಾಸನ ಜಿಲ್ಲೆಯ ಹಲವು ತಾಲೂಕುಗಳಿಗೆ ಕುಡಿಯುವ ನೀರಿನ ಮೂಲ ಇದೇ ಜಲಾಶಯವಾಗಿದೆ. ಜೊತೆಗೆ ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಯ ಲಕ್ಷಾಂತರ ರೈತರ ತುತ್ತಿನ ಚೀಲಕ್ಕೆ ಆಸರೆಯಾಗಿರುವ ಹೇಮಾವತಿ ಜಲಾಶಯ ಈ ವರ್ಷ ಖಾಲಿ ಖಾಲಿಯಾಗಿದ್ದು, ಪರಿಸ್ಥಿತಿ ಹೀಗೆಯೇ ಇದ್ದರೆ ಮುಂದೇನೆಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರವಾಸ ಮುಗಿಸಿ ಬರುವಾಗ ದುರಂತ; ಹೇಮಾವತಿ ಹಿನ್ನೀರಿನಲ್ಲಿ ಮೂವರು ಯುವಕರು ಜಲಸಮಾಧಿ

ರೈತರು ಕಂಗಾಲು

ಒಂದೆಡೆ ಮಳೆ ಕೈಕೊಟ್ಟಿದ್ದರೆ ಇತ್ತ ಡ್ಯಾಂ ಕೂಡ ಬರಿದಾಗುತ್ತಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಹದಿನೈದು ದಿನಗಳ ಹಿಂದೆ ಸುರಿದ ಅಲ್ಪ ಮಳೆಯನ್ನೇ ನಂಬಿ ಬಿತ್ತನೆಮಾಡಿದ್ದ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಬೋರ್​​ವೆಲ್​​ಗಳತ್ತ ಮುಖ ಮಾಡಿದ್ದರೂ, ಬಿರು ಬೇಸಿಗೆಯನ್ನೂ ನಾಚಿಸುವಂತೆ ನೆತ್ತಿ ಸುಡುತ್ತಿರುವ ಸೂರ್ಯನ ತಾಪಕ್ಕೆ ಬೆಳೆ ನೆಲಕಚ್ಚುತ್ತಿದೆ. ಕಳೆದ ವರ್ಷ ಅತಿಯಾದ ಮಳೆ ಸುರಿದು ಬೆಳೆ ನೀರುಪಾಲಾಗಿದ್ದರೆ, ಈ ವರ್ಷ ಮಳೆಯೇ ಇಲ್ಲದಿರೋದು ಸಾಲಶೂಲ ಮಾಡಿ ಬಿತ್ತನೆ ಮಾಡಿದ್ದ ರೈತರ ನಿದ್ದೆ ಕಸಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

’ಕಿರುತೆರೆ ನಟಿ ಸಂಚಿತಾ ಉಗಾಳೆ ಆತ್ಮಹತ್ಯೆಗೆ ಕಿರುಕುಳವೇ ಕಾರಣ’; ತಂದೆಯ ಆರೋಪ – Kannada News | Sanchita Ugale Death: Father Reveals Harassment and Mental Stress in Kumkum Bhagya Actress Suicide Case

ಹಿಂದಿಯ ‘ಕುಂಕುಮ್ ಭಾಗ್ಯ’ ಧಾರಾವಾಹಿ ಖ್ಯಾತಿಯ ಪ್ರಮುಖ ಕಿರುತೆರೆ ನಟಿ ಸಂಚಿತಾ ಉಗಾಳೆ ಅವರ ನಿಗೂಢ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಜೂನ್ 14 ರಂದು ನಲಸೋಪಾರಾದ ತಮ್ಮ ನಿವಾಸದಲ್ಲಿ ಸಂಚಿತಾ ಆತ್ಮಹತ್ಯೆಗೆ ಶರಣಾಗಿದ್ದರು. ಸದ್ಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದರ ನಡುವೆ ಸಂಚಿತಾ ತಂದೆ ಮಚ್ಚೀಂದ್ರ ಉಗಾಳೆ ಅವರು ಮಗಳ ಮಾನಸಿಕ ಸ್ಥಿತಿ ಹಾಗೂ ಆಕೆ ಅನುಭವಿಸುತ್ತಿದ್ದ ನರಕಯಾತನೆಯ ಬಗ್ಗೆ ಆಘಾತಕಾರಿ ವಿಷಯಗಳನ್ನು ಹೊರಹಾಕಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸಂಚಿತಾ ಭಾರಿ ಮಾನಸಿಕ ಒತ್ತಡದಲ್ಲಿದ್ದಳು ಮತ್ತು ಯಾರೋ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ನಗುಮುಖದ ಹಿಂದಿತ್ತು ತೀವ್ರ ಖಿನ್ನತೆ: ತಂದೆಯ ಅಳಲು

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಂಚಿತಾ ತಂದೆ ಮಚ್ಚೀಂದ್ರ ಉಗಾಳೆ ಅವರು ಮಗಳ ನೋವನ್ನು ಹಂಚಿಕೊಂಡಿದ್ದಾರೆ. ‘ಸಂಚಿತಾ ಯಾವಾಗಲೂ ಅಸಮಾಧಾನದಿಂದ ಇರುತ್ತಿದ್ದಳು. ಆಕೆ ನಮಗೆ ನಿಖರವಾದ ಕಾರಣವನ್ನು ಎಂದಿಗೂ ಹೇಳಲಿಲ್ಲ, ಆದರೆ ಒಳಗೊಳಗೇ ತುಂಬಾ ನೊಂದಿದ್ದಳು. ಹೊರಗೆ ಚೆನ್ನಾಗಿ ಮೂಡ್‌ನಲ್ಲಿದ್ದಂತೆ ಕಂಡರೂ, ಇದ್ದಕ್ಕಿದ್ದಂತೆ ತೀವ್ರ ಖಿನ್ನತೆಗೆ ಜಾರಿಬಿಡುತ್ತಿದ್ದಳು’ ಎಂದು ಹೇಳಿದ್ದಾರೆ.

ಮಗಳ ನಡವಳಿಕೆಯಲ್ಲಿ ಬದಲಾವಣೆ ಕಂಡಿದ್ದರಿಂದ ಕುಟುಂಬಸ್ಥರು ಆಕೆಯನ್ನು ಯಾವಾಗಲೂ ಒಬ್ಬಳೇ ಬಿಡುತ್ತಿರಲಿಲ್ಲವಂತೆ. ‘ನಾವು ಆಕೆಯ ಪರಿಸ್ಥಿತಿಯನ್ನು ಗಮನಿಸಿದ್ದೆವು. ಅದಕ್ಕಾಗಿಯೇ ಪ್ರತಿದಿನ ಯಾರಾದರೂ ಒಬ್ಬರು ಆಕೆಯ ಜೊತೆಯಲ್ಲೇ ಇರುತ್ತಿದ್ದೆವು. ಘಟನೆ ನಡೆದ ದಿನ ಕೇವಲ ಅರ್ಧ ಗಂಟೆಯಷ್ಟೇ ನಾವು ಆಕೆಯ ಜೊತೆ ಇರಲಿಲ್ಲ, ಬಹುಶಃ ಅದು ನಮ್ಮ ತಪ್ಪು. ಆದರೆ ಆಕೆ ಇಷ್ಟೊಂದು ದೊಡ್ಡ ಹೆಜ್ಜೆ ಇಡುತ್ತಾಳೆ ಎಂದು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ.

ಹಣದ ಬೇಡಿಕೆ, ತೀವ್ರ ಟಾರ್ಚರ್ ಆರೋಪ!

ತಮ್ಮ ಮಗಳಿಗೆ ಯಾರೋ ನಿರಂತರವಾಗಿ ಬ್ಲ್ಯಾಕ್‌ಮೇಲ್ ಅಥವಾ ಕಿರುಕುಳ ನೀಡುತ್ತಿದ್ದರು ಎಂದು ತಂದೆ ಮಚ್ಚೀಂದ್ರ ನೇರವಾಗಿ ಆರೋಪಿಸಿದ್ದಾರೆ. ‘ನಾವು ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೆವು. ಆದರೆ ಆಕೆಗೆ ತೀವ್ರವಾಗಿ ಟಾರ್ಚರ್ ನೀಡಲಾಗುತ್ತಿತ್ತು. ಯಾರೋ ಒಬ್ಬರು ನಿರಂತರವಾಗಿ ಆಕೆಗೆ ತೊಂದರೆ ಕೊಡುತ್ತಿದ್ದರು, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಮತ್ತು ಬೇರೆ ವಿಷಯಗಳಿಗೂ ಒತ್ತಡ ಹೇರುತ್ತಿದ್ದರು. ಇದು ಒಂದಲ್ಲ ಒಂದು ರೂಪದಲ್ಲಿ ನಡೆಯುತ್ತಲೇ ಇತ್ತು. ಸತ್ಯ ಏನೆಂಬುದು ಸದ್ಯದಲ್ಲೇ ನನ್ನ ಮುಂದೆ ಬರಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ

ತಮ್ಮ ಮಗಳಿಗೆ ಹಾಗೂ ದೇಶದ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಇಂತಹ ಪರಿಸ್ಥಿತಿ ಬರಬಾರದು, ನನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ಅವರು ಪೊಲೀಸರ ಬಳಿ ಮನವಿ ಮಾಡಿದ್ದಾರೆ.

ಪೊಲೀಸರ ತನಿಖೆ ಮತ್ತು ಎಐಸಿಡಬ್ಲ್ಯೂಎ (AICWA) ಪತ್ರ:

ಪೊಲೀಸ್ ಮಾಹಿತಿಯ ಪ್ರಕಾರ, ಸಂಚಿತಾ ಅವರ ಮೃತದೇಹ ಒಳಗಡೆಯಿಂದ ಲಾಕ್ ಆಗಿದ್ದ ಕೋಣೆಯಲ್ಲಿ ಪತ್ತೆಯಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಪ್ರಾಥಮಿಕ ತನಿಖೆಯಲ್ಲಿ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತೆಲಂಗಾಣ ಸರ್ಕಾರಿ ಅಧಿಕಾರಿ ನರಹರಿ ಮನೆ ಮೇಲೆ ಎಸಿಬಿ ದಾಳಿ, ಹಾಸಿಗೆಯ ಕೆಳಗಿತ್ತು ಕೋಟಿ ಕೋಟಿ ಹಣ – Kannada News | Telangana ACB Raid: Crores in Cash Found Under Officer Narahari’s Bed

ಹೈದರಾಬಾದ್, ಜೂನ್ 17: ತೆಲಂಗಾಣ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ಹಾವಳಿ ಮಿತಿಮೀರಿದ್ದು, ಭ್ರಷ್ಟಾಚಾರ ನಿಗ್ರಹ ದಳ (ACB) ನಡೆಸುತ್ತಿರುವ ಸರಣಿ ದಾಳಿಗಳು ಅಲ್ಲಿನ ಆಡಳಿತ ವ್ಯವಸ್ಥೆಯಲ್ಲಿರುವ ಕರಾಳ ಮುಖವನ್ನು ಬಯಲಿಗೆಳೆಯುತ್ತಿವೆ. ಇತ್ತೀಚೆಗೆ ಭೂಮಾಪನ ಇಲಾಖೆಯ ಉಪ ನಿರ್ದೇಶಕರಾದ ಸುಂಕರಿ ನರಹರಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ಎಸಿಬಿ ದಾಳಿ ನಡೆದಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆಂಬ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಹೈದರಾಬಾದ್‌ನ ಹಳೇ ನಗರದ ಚತ್ರಿನಕ ಪ್ರದೇಶದಲ್ಲಿರುವ ಸುಂಕರಿ ನರಹರಿ ಅವರ ನಿವಾಸ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು.
ಅವರ ಮನೆಯ ಹಾಸಿಗೆ ಕೆಳಗೆ ಕೋಟಿ ಕೋಟಿ ನಗದು ಪತ್ತೆಯಾಗಿದೆ.

ನರಹರಿ ಅವರ ಮನೆಯಲ್ಲಿ ಬರೋಬ್ಬರಿ 1.10 ಕೋಟಿ ರೂಪಾಯಿ ನಗದು ಹಾಗೂ ಕೆಜಿಗಟ್ಟಲೆ ಚಿನ್ನಾಭರಣಗಳು ಪತ್ತೆಯಾಗಿವೆ. ಹೈದರಾಬಾದ್ ನಗರದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಹಲವು ಮುಕ್ತ ಪ್ಲಾಟ್‌ಗಳು ಹಾಗೂ ರಂಗಾರೆಡ್ಡಿ ಜಿಲ್ಲೆಯಲ್ಲಿ ವಿಶಾಲವಾದ ಕೃಷಿ ಭೂಮಿ ಇರುವುದು ಪತ್ತೆಯಾಗಿದೆ. ಇವುಗಳ ಇಂದಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ರೂಪಾಯಿಗಳಿಗಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಎರಡು ವರ್ಷಗಳಲ್ಲಿ 441 ಪ್ರಕರಣಗಳು
ತೆಲಂಗಾಣದಲ್ಲಿ 2024 ರಿಂದ ಇಂದಿನವರೆಗೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಎಸಿಬಿ ಅಧಿಕಾರಿಗಳು ಬರೋಬ್ಬರಿ 441 ಭ್ರಷ್ಟಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅನೇಕ ಅಧಿಕಾರಿಗಳು ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇತ್ತೀಚೆಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಇತರರ ಹೆಸರಿಗೆ ವರ್ಗಾಯಿಸಲು ಕೋಟಿಗಟ್ಟಲೆ ಲಂಚ ಪಡೆದಿದ್ದ ಡೆಪ್ಯೂಟಿ ಕಲೆಕ್ಟರ್ ರಾಮು ನಾಯಕ್ ಅವರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಿದೆ.

ಮತ್ತಷ್ಟು ಓದಿ: ACB Raid ಟಿಪಿಒ ಜಯರಾಜ್ ಮನೆಯಲ್ಲಿ ಭಾರೀ ಆಸ್ತಿ ಪತ್ತೆ, ಕೇರಳದಲ್ಲಿರುವ ಪತ್ನಿಯ ಕ್ವಾರ್ಟರ್ಸ್‌ ಮೇಲೂ ದಾಳಿ

ಮತ್ತೊಬ್ಬ ಅಧಿಕಾರಿ ಮೋಹನ್ ನಾಯಕ್ ಅವರ ಬಳಿ 100 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ವಿಡಿಯೋ

ಭ್ರಷ್ಟ ಅಧಿಕಾರಿಗಳ ಲೂಟಿಯಿಂದ ಬೇಸತ್ತ ಜನತೆ ಈಗ ಎಸಿಬಿ ದಾಳಿಗಳನ್ನು ಸಂಭ್ರಮಿಸುತ್ತಿದ್ದಾರೆ. ಇತ್ತೀಚೆಗೆ ವಾರಂಗಲ್ ಜಿಲ್ಲೆಯ ನರಸಿಂಹುಲಪೇಟೆ ಮಂಡಲದಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ಮಹಿಳಾ ಎಂಪಿಡಿಒ (MPDO) ಮತ್ತು ಎಂಪಿಒ (MPO) ಅವರನ್ನು ಎಸಿಬಿ ಬಂಧಿಸಿದಾಗ, ಅಲ್ಲಿನ ಸ್ಥಳೀಯ ನಿವಾಸಿಗಳು ರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದ್ದು ಅಧಿಕಾರಿಗಳ ಮೇಲಿರುವ ಸಾರ್ವಜನಿಕರ ಆಕ್ರೋಶಕ್ಕೆ ಸಾಕ್ಷಿಯಾಗಿದೆ. ಆ ಮಹಿಳಾ ಅಧಿಕಾರಿಯು ಲಂಚದ ಹಣ ವಸೂಲಿ ಮಾಡಲೆಂದೇ ವಿಶೇಷವಾಗಿ ತನ್ನ ಮಗನನ್ನು ನೇಮಿಸಿಕೊಂಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತೆಲಂಗಾಣದಲ್ಲಿ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು ಸಾಮಾನ್ಯ ಜನರನ್ನು ತೀವ್ರವಾಗಿ ಲೂಟಿ ಮಾಡುತ್ತಿದ್ದಾರೆ. ಎಸಿಬಿ ಅಧಿಕಾರಿಗಳು ನಿರಂತರವಾಗಿ ಇಂತಹ ಭ್ರಷ್ಟ ತಿಮಿಂಗಿಲಗಳನ್ನು ಬಲೆಗೆ ಬೀಳಿಸಿ ಜೈಲಿಗಟ್ಟುತ್ತಿದ್ದರೂ, ಅಧಿಕಾರಿಗಳ ಲಂಚದ ಹಪಾಹಪಿ ಮಾತ್ರ ಕಮ್ಮಿಯಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಇಂತಹವರ ವಿರುದ್ಧ ಸರ್ಕಾರ ಇನ್ನು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:42 am, Wed, 17 June 26

Source link

ಹಾಲಿ ಚಾಂಪಿಯನ್ನರಿಗೆ ಸೋಲುಣಿಸಿದ ಶ್ರೀಲಂಕಾ..! – Kannada News | Women’s T20 World Cup 2026: Sri Lanka Beat New Zealand

ಇಂಗ್ಲೆಂಡ್‌ನ ರೋಸ್ ಬೌಲ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯದಲ್ಲಿ ಶ್ರೀಲಂಕಾ ತಂಡವು ಹಾಲಿ ಚಾಂಪಿಯನ್ ನ್ಯೂಝಿಲೆಂಡ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಕಿವೀಸ್ ಪಡೆ ವಿರುದ್ಧ ಶ್ರೀಲಂಕಾ ಮಹಿಳಾ ತಂಡದ ಮೊದಲ ಗೆಲುವು ಎಂಬುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡಕ್ಕೆ ಆರಂಭದಲ್ಲೇ ರನ್ ಗಳಿಸಲು ಲಂಕಾ ಬೌಲರ್‌ಗಳು ಸುಲಭವಾಗಿ ಅವಕಾಶ ನೀಡಲಿಲ್ಲ. ಆದರೆ ನಾಯಕಿ ಅಮೆಲಿಯಾ ಕೆರ್ (45 ರನ್, 36 ಎಸೆತ) ಹಾಗೂ ಅನುಭವಿ ಆಟಗಾರ್ತಿ ಸೋಫಿ ಡಿವೈನ್ (45 ರನ್, 30 ಎಸೆತ) ಜವಾಬ್ದಾರಿಯುತ ಆಟದ ಮೂಲಕ ತಂಡಕ್ಕೆ ನೆರವಾದರು.

ಶ್ರೀಲಂಕಾದ ಶಿಸ್ತುಬದ್ಧ ಬೌಲಿಂಗ್ ದಾಳಿಯಿಂದಾಗಿ, ನ್ಯೂಝಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್‌ಗಳ ಸಾಧಾರಣ ಮೊತ್ತವನ್ನಷ್ಟೇ ಕಲೆಹಾಕಲು ಶಕ್ತವಾಯಿತು. ಲಂಕಾ ಪರ ಕವಿಶಾ ದಿಲ್ಹಾರಿ 2 ವಿಕೆಟ್ ಕಸಿದು ಮಿಂಚಿದರು.

151 ರನ್​ಗಳ ಗುರಿ:

151 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ನ್ಯೂಝಿಲೆಂಡ್ ಸ್ಪಿನ್ನರ್‌ಗಳ ದಾಳಿಗೆ ಸಿಲುಕಿ ಕೇವಲ 55 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಶ್ರೀಲಂಕಾ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕೇವಲ 1 ರನ್ ಗಳಿಸಿದ್ದಾಗ ಲಭಿಸಿದ ಜೀವದಾನವನ್ನು ಅದ್ಭುತವಾಗಿ ಬಳಸಿಕೊಂಡ ನಿಲಾಕ್ಷಿ ಡಿ ಸಿಲ್ವಾ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ನ್ಯೂಝಿಲೆಂಡ್ ತಂಡದ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದ ನಿಲಾಕ್ಷಿ ಡಿ ಸಿಲ್ವಾ ಮೈದಾನದ ಮೂಲೆ ಮೂಲೆಗೂ ಬೌಂಡರಿ ಅಟ್ಟಿದರು. ಈ ಮೂಲಕ ಶ್ರೀಲಂಕಾ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇದಾಗ್ಯೂ ಕೊನೆಯ ಹಂತದಲ್ಲಿ ಲಂಕಾ ತಂಡವು ರನ್​ ವೇಗ ಹೆಚ್ಚಿಸುವುದು ಅನಿವಾರ್ಯವಾಗಿತ್ತು. ಈ ವೇಳೆ ಕ್ರೀಸ್‌ಗಿಳಿದ ವಿಕೆಟ್ ಕೀಪರ್ ಬ್ಯಾಟರ್ ಕೌಶಾನಿ ನುತ್ಯಂಗನಾ ಕೇವಲ 14 ಎಸೆತಗಳಲ್ಲಿ 3 ಬೌಂಡರಿ ಸಹಿತ ಅಜೇಯ 24 ರನ್ ಸಿಡಿಸಿ ಪಂದ್ಯವನ್ನು ಶ್ರೀಲಂಕಾದತ್ತ ತಿರುಗಿಸಿದರು.

ಮತ್ತೊಂದೆಡೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ನಿಲಾಕ್ಷಿ ಡಿ ಸಿಲ್ವಾ 37 ಎಸೆತಗಳಲ್ಲಿ ಅಜೇಯ 54 ರನ್ ಬಾರಿಸಿದರು. ಅಲ್ಲದೆ  ಕೌಶಾನಿ ಜೊತೆಗೂಡಿ ಕೊನೆಯ ಓವರ್‌ನ 4ನೇ ಎಸೆತದಲ್ಲಿ ವಿಜಯದ ಬೌಂಡರಿ ಬಾರಿಸಿದರು. ಇದರೊಂದಿಗೆ ಶ್ರೀಲಂಕಾ ಇನ್ನು 2 ಎಸೆತಗಳು ಬಾಕಿ ಇರುವಂತೆಯೇ 153 ರನ್ ಗಳಿಸಿ ಐತಿಹಾಸಿಕ ವಿಜಯೋತ್ಸವ ಆಚರಿಸಿತು.

ಬಲಿಷ್ಠ ನ್ಯೂಝಿಲೆಂಡ್ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದ ನಿಲಾಕ್ಷಿ ಡಿ ಸಿಲ್ವಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಶ್ರೀಲಂಕಾ ಟೂರ್ನಿಯಲ್ಲಿ ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡರೆ, ಸತತ ಎರಡು ಸೋಲು ಕಂಡಿರುವ ನ್ಯೂಝಿಲೆಂಡ್ ಲೀಗ್ ಹಂತದಿಂದಲೇ ಹೊರಬೀಳುವ ಭೀತಿಯಲ್ಲಿದೆ.

ಇದನ್ನೂ ಓದಿ: ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ

ಸಂಕ್ಷಿಪ್ತ ಸ್ಕೋರ್:

  • ನ್ಯೂಝಿಲೆಂಡ್ ಮಹಿಳಾ ತಂಡ: 20 ಓವರ್‌ಗಳಲ್ಲಿ 150/6 (ಸೋಫಿ ಡಿವೈನ್ 45, ಅಮೆಲಿಯಾ ಕೆರ್ 45; ಕವಿಶಾ ದಿಲ್ಹಾರಿ 2/35)
  • ಶ್ರೀಲಂಕಾ ಮಹಿಳಾ ತಂಡ: 19.4 ಓವರ್‌ಗಳಲ್ಲಿ 153/5 (ನಿಲಾಕ್ಷಿ ಡಿ ಸಿಲ್ವಾ 54*, ಕೌಶಾನಿ ನುತ್ಯಂಗನಾ 24*; ನೆನ್ಸಿ ಪಟೇಲ್ 2/23)
  •  ಫಲಿತಾಂಶ: ಶ್ರೀಲಂಕಾ ತಂಡಕ್ಕೆ 5 ವಿಕೆಟ್‌ಗಳ ಜಯ

Source link