Category Archives: Blog

Your blog category

IND vs NZ: ವಾರಿಯರ್ ವಿರಾಟ್; ವಿಶ್ವ ದಾಖಲೆಯ ಶತಕ ಸಿಡಿಸಿದ ಕೊಹ್ಲಿ – Kannada News | Virat Kohli’s Historic Century: Record Breaking 54th ODI Ton Steers India vs NZ

ಇಂದೋರ್‌ನ ಹೊಳ್ಕರ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಮತ್ತೆ ಆಪತ್ಭಾಂದವನಾದ ವಿರಾಟ್ ಕೊಹ್ಲಿ (Virat Kohli) ಐತಿಹಾಸಿಕ ಇನ್ನಿಂಗ್ಸ್ ಆಡಿದ್ದಾರೆ. ನ್ಯೂಜಿಲೆಂಡ್ ನೀಡಿದ 338 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪ್ರಮುಖ ವಿಕೆಟ್ ಕಳೆದುಕೊಂಡರೂ, ಇನ್ನೊಂದು ತುದಿಯಲ್ಲಿ ಸಂಯಮದಿಂದ ಬ್ಯಾಟ್ ಬೀಸಿದ ಕೊಹ್ಲಿ 93 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಆರಂಭಿಕ ಆಘಾತಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸುವುದರೊಂದಿಗೆ ಶತಕದ ಗಡಿ ದಾಟಿದ ಕೊಹ್ಲಿ, ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.

54 ನೇ ಏಕದಿನ ಶತಕ

ಇದು ಮಾತ್ರವಲ್ಲದೆ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಕೊಹ್ಲಿಗೆ ಇದು ಚೊಚ್ಚಲ ಶತಕವೂ ಆಗಿದೆ. ಈ ಮೈದಾನದಲ್ಲಿ ಈ ಹಿಂದೆ ಆಡಿದ್ದ ಪ್ರತಿಯೊಂದು ಪಂದ್ಯದಲ್ಲೂ ವಿರಾಟ್ ಕೊಹ್ಲಿ ವಿಫಲರಾಗಿದ್ದರು. ಈ ಮೈದಾನದಲ್ಲಿ ಈ ಹಿಂದಿನ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿಗೆ ಅರ್ಧಶತಕವನ್ನು ಬಾರಿಸಲು ಸಾಧ್ಯವಾಗಿರಲಿಲ್ಲ. 4 ಇನ್ನಿಂಗ್ಸ್​ಗಳಲ್ಲಿ ಒಟ್ಟು 99 ರನ್ ಬಾರಿಸಿದ್ದ ಕೊಹ್ಲಿ, ಈ ಬಾರಿ ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿದ್ದಲ್ಲದೆ, ಶತಕದ ಬರವನ್ನು ನೀಗಿಸಿಕೊಂಡರು. ಇದು ಕೊಹ್ಲಿ ಅವರ 54 ನೇ ಏಕದಿನ ಶತಕ ಮತ್ತು ಅವರ 85 ನೇ ಅಂತರರಾಷ್ಟ್ರೀಯ ಶತಕವಾಗಿದೆ.

88 ರನ್‌ಗಳ ಪಾಲುದಾರಿಕೆ

ಆದಾಗ್ಯೂ, ಈ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಿದ್ದರಿಂದ ಕೊಹ್ಲಿಯ ಶತಕ ಅಸಂಭವವೆಂದು ತೋರುತ್ತಿತ್ತು. ತಂಡದ ಸ್ಕೋರ್ ಕೇವಲ 28 ರನ್​ಗಳಿದ್ದಾಗ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಆ ಬಳಿಕ ಕ್ರೀಸ್‌ಗೆ ಬಂದ ಕೊಹ್ಲಿ ತಮ್ಮ ಎಂದಿನ ಆಟವನ್ನು ಮುಂದುರೆಸಿದರು. ಆದಾಗ್ಯೂ ತಂಡವು ಕೇವಲ 71 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಸೋಲು ಸನ್ನಿಹಿತವೆಂದು ತೋರುತ್ತಿತ್ತು, ಆದರೆ ಕೊಹ್ಲಿಗೆ ಜೊತೆಯಾದ ನಿತೀಶ್ ಕುಮಾರ್ ರೆಡ್ಡಿ 88 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ನಂತರ ಕೊಹ್ಲಿ ಮತ್ತು ನಿತೀಶ್ ತಮ್ಮ ತಮ್ಮ ಅರ್ಧಶತಕಗಳನ್ನು ಪೂರೈಸಿದರು.

91 ಎಸೆತಗಳಲ್ಲಿ ಶತಕ ಪೂರ್ಣ

ಈ ವೇಳೆ ಅರ್ಧಶತಕ ಬಾರಿಸಿದ್ದ ನಿತೀಶ್ ಔಟಾದ ಬಳಿಕ ಬಂದ ರವೀಂದ್ರ ಜಡೇಜಾ ಕೂಡ ಬೇಗನೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಟೀಂ ಇಂಡಿಯಾ 178 ರನ್‌ಗಳಿಗೆ 6 ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಕೊಹ್ಲಿಗೆ, ಹರ್ಷಿತ್ ರಾಣಾ ಅತ್ಯುತ್ತಮ ಬೆಂಬಲ ನೀಡಿದರು. ಇದರ ಲಾಭವನ್ನು ಪಡೆದುಕೊಂಡ ಕೊಹ್ಲಿ, ಅಂತಿಮವಾಗಿ 91 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಸರಣಿಯ ಮೊದಲ ಪಂದ್ಯದಲ್ಲಿ 93 ರನ್‌ಗಳಿಗೆ ಔಟಾಗಿದ್ದ ಕೊಹ್ಲಿ, ಇಂದಿನ ಪಂದ್ಯದಲ್ಲಿ ತಮ್ಮ 54 ನೇ ಏಕದಿನ ಶತಕವನ್ನು ಪೂರೈಸುವಲ್ಲಿ ಯಶಸ್ವಿಯಾದರು.

ಪತ್ನಿ ಜೊತೆ ಸೇರಿ 5 ಎಕರೆ ಭೂಮಿ ಖರೀದಿಸಿದ ವಿರಾಟ್ ಕೊಹ್ಲಿ; ಬೆಲೆ ಎಷ್ಟು ಗೊತ್ತಾ?

ಸಚಿನ್-ಸೆಹ್ವಾಗ್ ದಾಖಲೆ ಧ್ವಂಸ

ಈ ಶತಕದ ಮೂಲಕ ಕೊಹ್ಲಿ ಈಗ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದು ಕಿವೀಸ್ ವಿರುದ್ಧ ಅವರ ಏಳನೇ ಏಕದಿನ ಶತಕವಾಗಿದ್ದು, ಈ ಮೂಲಕ ವೀರೇಂದ್ರ ಸೆಹ್ವಾಗ್ ಮತ್ತು ರಿಕಿ ಪಾಂಟಿಂಗ್ (ಇಬ್ಬರೂ ತಲಾ ಆರು ಶತಕಗಳು) ಅವರನ್ನು ಹಿಂದಿಕ್ಕಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ಪ್ರಸ್ತುತ ಎಲ್ಲಾ ಸ್ವರೂಪಗಳಲ್ಲಿ ನ್ಯೂಜಿಲೆಂಡ್ ವಿರುದ್ಧ 10 ಶತಕಗಳನ್ನು ಬಾರಿಸಿದ್ದು, ಈ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್, ಜೋ ರೂಟ್ ಮತ್ತು ಜಾಕ್ವೆಸ್ ಕಾಲಿಸ್ (ಮೂವರೂ ಒಂಬತ್ತು ಶತಕಗಳು) ಅವರನ್ನು ಹಿಂದಿಕ್ಕಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:17 pm, Sun, 18 January 26

Source link

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್ – Kannada News | Central govt employees get new salary account package, that includes big insurance coverage and other benefits

ನವದೆಹಲಿ, ಜನವರಿ 18: ಕೇಂದ್ರ ಸರ್ಕಾರಿ ನೌಕರರಿಗೆ ಖುಷಿಯ ಸುದ್ದಿ ಇದು. ಒಂದೇ ಅಕೌಂಟ್​ನಲ್ಲಿ ಬ್ಯಾಂಕಿಂಗ್, ಇನ್ಷೂರೆನ್ಸ್ ಮತ್ತು ಕಾರ್ಡ್ ಸಂಬಂಧಿತ ಅನುಕೂಲಗಳು ಒಟ್ಟಿಗೆ ಲಭ್ಯ ಇರುವ ಸಮಗ್ರ ಸ್ಯಾಲರ್ ಅಕೌಂಟ್ ಪ್ಯಾಕೇಜ್ ಅನ್ನು ಸರಕಾರ ಬಿಡುಗಡೆ ಮಾಡಿದೆ. ನೌಕರರ ಹಣಕಾಸು ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸಲು ಸ್ಯಾಲರಿ ಅಕೌಂಟ್ ಪ್ಯಾಕೇಜ್ ಅನ್ನು ಜಾರಿಗೆ ತರುವಂತೆ ಸರ್ಕಾರ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ತಿಳಿಸಿದೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳ ಸ್ಯಾಲರಿ ಅಕೌಂಟ್​ಗಳು ಎಸ್​ಬಿಐ, ಯುಬಿಐ, ಪಿಎನ್​ಬಿ ಇತ್ಯಾದಿ ಸರ್ಕಾರಿ ಬ್ಯಾಂಕುಗಳಲ್ಲೇ ಇರುತ್ತವೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಹಣಕಾಸು ಸೇವೆಗಳ ಇಲಾಖೆ (ಡಿಎಫ್​ಎಸ್) ಈ ಸರ್ಕಾರಿ ಬ್ಯಾಂಕುಗಳಿಗೆ ಸ್ಯಾಲರಿ ಅಕೌಂಟ್ ಪ್ಯಾಕೇಜ್ ಸೌಲಭ್ಯ ಒದಗಿಸುವಂತೆ ತಿಳಿಸಿದೆ. ಕೇಂದ್ರ ಸರ್ಕಾರಿ ಸಂಸ್ಥೆಗಳ ಎ, ಬಿ ಮತ್ತು ಸಿ ಕೇಡರ್​ಗಳ ಎಲ್ಲಾ ಉದ್ಯೋಗಿಗಳಿಗೂ ಈ ಸೌಲಭ್ಯ ಸಿಗುತ್ತದೆ.

ಇದನ್ನೂ ಓದಿ: ಗ್ರೀನ್​ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್​ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?

ಝೀರೋ ಬ್ಯಾಲನ್ಸ್ ಸ್ಯಾಲರಿ ಅಕೌಂಟ್

ಈ ಕಾಂಪೊಸಿಟ್ ಸ್ಯಾಲರಿ ಅಕೌಂಟ್ ಪ್ಯಾಕೇಜ್​ನಲ್ಲಿ ವಿವಿಧ ಸೌಲಭ್ಯಗಳು ಒಳಗೊಂಡಿವೆ. ಝೀರೋ ಬ್ಯಾಲನ್ಸ್ ಅಕೌಂಟ್, ಆರ್​ಟಿಜಿಎಸ್, ನೆಫ್ಟ್, ಯುಪಿಐ ಮೂಲಕ ಉಚಿತ ರೆಮಿಟೆನ್ಸ್ (ವಿದೇಶದಿಂದ ಭಾರತಕ್ಕೆ ಹಣ ರವಾನೆ) ಇತ್ಯಾದಿ ಇದರಲ್ಲಿ ಸೇರಿರುತ್ತವೆ. ಹೌಸಿಂಗ್ ಲೋನ್, ಎಜುಕೇಶನ್ ಲೋನ್, ವೆಹಿಕಲ್ ಲೋನ್ ಮತ್ತು ಪರ್ಸನಲ್ ಲೋನ್​ಗಳಲ್ಲಿ ರಿಯಾಯಿತಿ ದರದ ಬಡ್ಡಿ, ಹಾಗು, ಲೋನ್ ಪ್ರೋಸಸಿಂಗ್ ಶುಲ್ಕದಲ್ಲಿ ಇಳಿಕೆ, ಲಾಕರ್ ಬಾಡಿಗೆಯಲ್ಲಿ ವಿನಾಯಿತಿ, ಫ್ಯಾಮಿಲಿ ಬ್ಯಾಂಕಿಂಗ್ ಸೌಲಭ್ಯ ಇತ್ಯಾದಿಯು ಸರ್ಕಾರಿ ನೌಕರರಿಗೆ ಸಿಗುತ್ತದೆ.

ಎರಡು ಕೋಟಿ ರೂವರೆಗೆ ಉಚಿತ ಇನ್ಷೂರೆನ್ಸ್

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ನೀಡಲಾಗುವ ಸ್ಯಾಲರಿ ಅಕೌಂಟ್ ಪ್ಯಾಕೇಜ್​ನಲ್ಲಿ ಪರ್ಸನಲ್ ಆಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ 1.5 ಕೋಟಿ ರೂವರೆಗೆ ಇರುತ್ತದೆ. ಏರ್ ಆ್ಯಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ 2 ಕೋಟಿ ರೂವರೆಗೂ ಇರುತ್ತದೆ. ಅಷ್ಟೇ ಅಲ್ಲ, 20 ಲಕ್ಷ ರೂವರೆಗೆ ಟರ್ಮ್ ಲೈಫ್ ಇನ್ಷೂರೆನ್ಸ್ ಪ್ರೊಟೆಕ್ಷನ್ ಕೂಡ ಇರುತ್ತದೆ. ಇದಕ್ಕಿಂತ ಹೆಚ್ಚಿನ ಕವರೇಜ್ ಬೇಕೆಂದರೆ ಕಡಿಮೆ ಪ್ರೀಮಿಯಮ್​ಗಳ ಅವಕಾಶವೂ ಇರುತ್ತದೆ. ಹೆಲ್ತ್ ಇನ್ಷೂರೆನ್ಸ್ ಕವರೇಜ್ ಕೂಡ ಇರುತ್ತದೆ.

ಇದನ್ನೂ ಓದಿ: ಸದ್ದಿಲ್ಲದೆ ಟ್ರಂಪ್​ಗೆ ಮೋದಿ ತಿರುಗೇಟು; ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ ಶೇ. 30ರಷ್ಟು ಸುಂಕ ವಿಧಿಸಿದ ಭಾರತ

ಕಾರ್ಡ್ ಬೆನಿಫಿಟ್ಸ್

ಡಿಜಿಟಲ್ ಹಾಗೂ ಕಾರ್ಡ್ ಸಂಬಂಧಿತ ಫೀಚರ್​ಗಳೂ ಈ ಸ್ಯಾಲರಿ ಅಕೌಂಟ್ ಪ್ಯಾಕೇಜ್​ನಲ್ಲಿ ಒಳಗೊಂಡಿವೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬೆನಿಫಿಟ್, ಏರ್​ಪೋರ್ಟ್ ಲಾಂಜ್, ರಿವಾರ್ಡ್, ಕ್ಯಾಷ್​ಬ್ಯಾಕ್, ಝೀರೋ ಮೈಂಟೆನೆನ್ಸ್ ಫೀ ಇತ್ಯಾದಿ ನಾನಾ ರಿಯಾಯಿತಿ, ಸೌಲಭ್ಯಗಳು ಸಿಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಲಿಷ್ಠ ದೇಹ, ಮಗುವಿನ ಮನಸ್ಸು, ಶಿಸ್ತಿನ ಆಟ: ಆದರೆ ಅಷ್ಟೇ ಸಾಕಾಗಲಿಲ್ಲ ಗೆಲ್ಲಲು – Kannada News | Bigg Boss Kannada 12: Raghu evicted as fifth runner up

ಬಿಗ್​​ಬಾಸ್ (Bigg Boss) ಫಿನಾಲೆ ಚಾಲ್ತಿಯಲ್ಲಿದೆ. ಫಿನಾಲೆ ತಲುಪಿದ ಆರು ಮಂದಿಯಲ್ಲಿ ಈಗಾಗಲೇ ಧನುಶ್ ಮನೆಯಿಂದ ಹೊರ ನಡೆದಿದ್ದಾರೆ. ಧನುಶ್, ಟಾಸ್ಕ್ ಮಾಸ್ಟರ್ ಎನಿಸಿಕೊಂಡಿದ್ದರು, ಅದ್ಭುತವಾಗಿ ಆಡಿದ್ದರು, ಒಳ್ಳೆಯ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು, ಅನವಶ್ಯಕ ವಿವಾದ, ಜಗಳಗಳನ್ನು ಮಾಡಿರಲಿಲ್ಲ. ಅದರ ಪ್ರತಿರೂಪದಂತೆ ಇದ್ದವರು ರಘು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟರೂ ಸಹ ತಮ್ಮ ಆಟ, ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು ರಘು. ಇದೀಗ ರಘು ಅವರು ಐದನೇ ಸ್ಪರ್ಧಿಯಾಗಿ ಮನೆಯಿಂದ ಹೊರಗೆ ಬಂದಿದ್ದಾರೆ.

ರಘು ಅವರು ಬಿಗ್​​ಬಾಸ್ ಪ್ರಾರಂಭವಾಗಿ 22 ದಿನಗಳ ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್​​ಬಾಸ್ ಮನೆಗೆ ಬಂದರು. ಬಂದ ಮೊದಲ ದಿನವೇ ಮನೆಯಲ್ಲಿ ಸಖತ್ ಅಬ್ಬರಿಸಿದ್ದರು. ಆರಂಭದಲ್ಲಿಯೇ ಅಶ್ವಿನಿ ಜೊತೆಗೆ ಜೋರು ಜಗಳ ಸಹ ಮಾಡಿಕೊಂಡಿದ್ದರು. ಅವರ ದೈತ್ಯ ದೇಹ, ಫಿಟ್ ಬಾಡಿ ಮತ್ತು ಅಬ್ಬರದ ಧ್ವನಿಯಿಂದ ಮನೆಯವರ ಮೇಲೆ ಕಮಾಂಡ್ ಸಾಧಿಸಿದ್ದರು. ಆದರೆ ಬರ ಬರುತ್ತಾ ರಘು ಅವರು ಕಠಿಣ ದೇಹಿ ಆದರೆ ಮೃದು ಮನಸ್ಸಿನ ವ್ಯಕ್ತಿ ಎಂಬುದು ಗೊತ್ತಾಯಿತು.

ಇದನ್ನೂ ಓದಿ:Bigg Boss 12 Grand Finale Live Updates: ಬಿಗ್​​ಬಾಸ್ ವೇದಿಕೆಗೆ ಬಂದ ಅತಿಥಿ

ಗಿಲ್ಲಿ ನಟ, ರಕ್ಷಿತಾ ಅವರುಗಳೊಡನೆ ಬಹಳ ಆಪ್ತ ಬಂಧ ಹೊಂದಿದ್ದ ರಘು ಅವರು ಅವರು ತಪ್ಪು ಮಾಡಿದಾಗ ಮುಲಾಜಿಲ್ಲದೆ ಹೇಳುತ್ತಿದ್ದರು. ಬಿಗ್​​ಬಾಸ್​​ಗೆ ಬಂದು ಯಾರ ವ್ಯಕ್ತಿತ್ವದಲ್ಲಾದರೂ ಬದಲಾಗಿದೆ ಅಥವಾ ಹೊರಗೆ ತಾನು ನಡೆದುಕೊಳ್ಳುತ್ತಿದ್ದ ರೀತಿ ತಪ್ಪು ಎಂದು ಅನಿಸಿದೆ ಎಂದರೆ ಅದು ರಘು ಅವರಿಗೆ. ಮನೆಯಲ್ಲಿ ತಾನೊಬ್ಬ ಸೋಮಾರಿ, ಮನೆಯವರ ಜೊತೆ ಸಮಯ ಕಳೆಯುತ್ತಿರಲಿಲ್ಲ, ಮನೆಯವರ ಪ್ರೀತಿಯನ್ನು ಗಂಭೀರವಾಗಿಯೇ ಪರಿಗಣಿಸಿರಲಿಲ್ಲ ಆದರೆ ಬಿಗ್​​ಬಾಸ್ ಮನೆಗೆ ಬಂದ ಮೇಲೆ ನಾನು ಮಾಡುತ್ತಿದ್ದ ತಪ್ಪಿನ ಅರಿವಾಗಿದೆ ಎಂದು ರಘು ಹೇಳಿಕೊಂಡಿದ್ದರು. ಇದೀಗ ರಘು ಅವರು ಐದನೇ ಸ್ಪರ್ಧಿಯಾಗಿ ಹೊರಗೆ ಹೋಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದರೂ ಅವರು ಆಡಿದ ಆಟ ನಿಜಕ್ಕೂ ಪ್ರೇಕ್ಷಕರ ಮನಸ್ಸು ಗೆದ್ದಿದೆ.

ಮಾಜಿ ಬಿಗ್​​ಬಾಸ್ ವಿಜೇತರು ಮತ್ತು ಕನ್ನಡದ ಖ್ಯಾತ ನಟಿ ಶ್ರುತಿ ಅವರು ಬಿಗ್​​ಬಾಸ್ ಮನೆಗೆ ಅತಿಥಿಯಾಗಿ ಬಂದು, ಐದನೇ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದರು. ಎಲ್ಲ ಸ್ಪರ್ಧಿಗಳಿಂದ ಆಕ್ಟಿವಿಟಿ ರೂಂನಲ್ಲಿ ಆಟವೊಂದನ್ನು ಆಡಿಸಿದರು. ಆ ಆಕ್ಟಿವಿಟಿಯಲ್ಲಿ ರಘು ಅವರು ಹೊರಗೆ ಹೋಗುತ್ತಿರುವುದು ತಿಳಿಯಿತು. ಎಂದಿನ ತಮ್ಮ ನಗುಮುಖದಲ್ಲಿಯೇ ರಘು ಮನೆಯಿಂದ ಹೊರಗೆ ಬಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ಚರ್ಚೆ: ಜಿಟಿಡಿ ವಿರುದ್ಧ ಸ್ಪರ್ಧೆಗೆ ಸಿದ್ದ ಎಂದ ಸಾರಾ ಮಹೇಶ್​​ – Kannada News | Sa Ra Mahesh Says He Is Ready to Contest Against GT Deve Gowda in Chamundeshwari Constituency

ಬೆಂಗಳೂರು, ಜನವರಿ 18: ವಿಧಾನಸಭೆ ಚುನಾವಣೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಅದಾಗಲೇ ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ಚರ್ಚೆ ಹಾಗೂ ಚುನಾವಣಾ ರಣತಂತ್ರ ಶುರುವಾಗಿದೆ. ಹೀಗಿರುವಾಗ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ವಿರುದ್ಧ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಪಕ್ಷದ ನಿರ್ದೇಶನದಂತೆ ಸ್ಪರ್ಧಿಸಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಹಲವು ಬಾರಿ ಜಿ.ಟಿ. ದೇವೇಗೌಡರನ್ನು ಮನವೊಲಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿರುವ ಸಾ.ರಾ. ಮಹೇಶ್, ಈಗ ಅವರ ಮನವೊಲಿಕೆಯ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs NZ: ‘ಸಾಕು ಹೋಗು’; ಕಿವೀಸ್ ಆಟಗಾರನನ್ನು ಡಗೌಟ್​ಗೆ ತಳ್ಳಿದ ಕೊಹ್ಲಿ – Kannada News | Daryl Mitchell’s ODI Masterclass Troubles India: Kohli’s Reaction to NZ Star’s Centuries

ಭಾರತ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ತಂಡ ದುರ್ಬಲವಾಗಿ ಕಂಡಿರಬಹುದು, ಆದರೆ ಅದರ ಕೆಲವು ಸ್ಟಾರ್ ಆಟಗಾರರು ಇಲ್ಲದಿದ್ದರೂ, ಅದು ಟೀಮ್ ಇಂಡಿಯಾವನ್ನು ತೊಂದರೆಗೊಳಿಸಿತು. ಏಕದಿನ ಸರಣಿಯ ಮೊದಲ ಪಂದ್ಯವನ್ನು ಸೋತ ನಂತರ, ನ್ಯೂಜಿಲೆಂಡ್ ಬಲವಾದ ಪುನರಾಗಮನ ಮಾಡಿ ಎರಡನೇ ಪಂದ್ಯವನ್ನು ಗೆದ್ದಿತು. ಮೂರನೇ ಪಂದ್ಯದಲ್ಲಿ, ಅದು ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಸ್ಕೋರ್ ಗಳಿಸಿತು. ಮೂರು ಪಂದ್ಯಗಳಲ್ಲಿ, ನ್ಯೂಜಿಲೆಂಡ್‌ನ ಒಬ್ಬ ಆಟಗಾರ ಟೀಮ್ ಇಂಡಿಯಾಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದರು: ಡ್ಯಾರಿಲ್ ಮಿಚೆಲ್, ಮೂರನೇ ಪಂದ್ಯದಲ್ಲೂ ಅದ್ಭುತ ಶತಕ ಗಳಿಸಿದರು. ವಿರಾಟ್ ಕೊಹ್ಲಿ ಕಿವೀಸ್ ಬ್ಯಾಟ್ಸ್‌ಮನ್‌ನನ್ನು ತಳ್ಳಿದಾಗ ಮಿಚೆಲ್ ಟೀಮ್ ಇಂಡಿಯಾವನ್ನು ಎಷ್ಟರ ಮಟ್ಟಿಗೆ ತೊಂದರೆಗೊಳಿಸಿದರು ಎಂಬುದು ಸ್ಪಷ್ಟವಾಗಿತ್ತು.

ಜನವರಿ 18 ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲೂ ಡ್ಯಾರಿಲ್ ಮಿಚೆಲ್ ಅದ್ಭುತ ಶತಕ ಗಳಿಸಿದರು. ಕೇವಲ ಐದು ರನ್‌ಗಳಿಗೆ ಎರಡು ವಿಕೆಟ್‌ಗಳು ಬಿದ್ದ ನಂತರ ಕ್ರೀಸ್‌ಗೆ ಬಂದ ಮಿಚೆಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಸರಣಿಯಲ್ಲಿ ಸತತ ಎರಡನೇ ಶತಕ, ಒಟ್ಟಾರೆಯಾಗಿ ಭಾರತದ ವಿರುದ್ಧ ನಾಲ್ಕನೇ ಶತಕ ಮತ್ತು ಅವರ ವೃತ್ತಿಜೀವನದ ಒಂಬತ್ತನೇ ಏಕದಿನ ಶತಕವನ್ನು ಬಾರಿಸಿದರು.

ಹಿಂದಿನ ಪಂದ್ಯದಲ್ಲಿ, ಮಿಚೆಲ್ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾದಿಂದ ಜಯವನ್ನು ಕಸಿದುಕೊಂಡಿದ್ದರು. ಇದೀಗ ಮೂರನೇ ಪಂದ್ಯದಲ್ಲೂ 137 ರನ್‌ ಬಾರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಹೀಗಾಗಿ ಅವರ ವಿಕೆಟ್ ಪಡೆದ ಕೂಡಲೇ ಟೀಂ ಇಂಡಿಯಾ ನಿಟ್ಟುಸಿರುಬಿಟ್ಟಿತ್ತು. ಇದೇ ವೇಳೆ ಮಿಚೆಲ್ ಔಟ್ ಆಗಿ ಪೆವಿಲಿಯನ್​ತ್ತ ಹೆಜ್ಜೆ ಇಡುವಾಗ ಬೌಂಡರಿ ಲೈನ್ ಬಳಿ ನಿಂತಿದ್ದ ವಿರಾಟ್ ಕೊಹ್ಲಿ, ಅವರ ಪ್ರದರ್ಶನವನ್ನು ಚಪ್ಪಾಳೆ ಮೂಲಕ ಶ್ಲಾಘಿಸಿ, ಅವರನ್ನು ಬೌಂಡರಿ ಲೈನ್​ನ ಹೊರಗೆ ತಳ್ಳಿದರು. ಆದರೆ ವಿರಾಟ್ ಕೊಹ್ಲಿ ಕೋಪದಿಂದ ಹೀಗೆ ಮಾಡಲಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ಮನೆಯ ಮುಂದೆ ಹೇಗಿದೆ ಪರಿಸ್ಥಿತಿ: ವಿಡಿಯೋ ನೋಡಿ – Kannada News | Bigg Boss Kannada 12: Fans gathered near Bigg Boss house

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ಚಾಲ್ತಿಯಲ್ಲಿದೆ. ಆರು ಮಂದಿ ಫಿನಾಲೆ ಸ್ಪರ್ಧಿಗಳ ಪೈಕಿ ಇದೀಗ ಧನುಶ್ ಮತ್ತು ರಘು ಹೊರಗೆ ಬಂದಿದ್ದಾರೆ. ಇನ್ನು ನಾಲ್ಕು ಮಂದಿ ಉಳಿದುಕೊಂಡಿದ್ದು, ಅವರಲ್ಲಿ ಒಬ್ಬರು ವಿಜೇತರಾಗಿದ್ದಾರೆ. ಗಿಲ್ಲಿ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಬಿಗ್​​ಬಾಸ್ ಮನೆ ಸೆಟ್ ಹಾಕಿರುವ ಜಾಲಿವುಡ್​ನ ಆವರಣದಲ್ಲಿ ನೂರಾರು ಮಂದಿ ಅಭಿಮಾನಿಗಳು ಸೇರಿದ್ದು, ತಮ್ಮ ನೆಚ್ಚಿನ ಸ್ಪರ್ಧಿಗಳ ಬಗ್ಗೆ ಘೋಷಣೆ ಕೂಗಲು ಆರಂಭಿಸಿದ್ದಾರೆ. ಜಾಲಿವುಡ್ ಎದುರು ಬಿಗಿ ಬಂದೋಬಸ್ತ್ ಸಹ ಮಾಡಲಾಗಿದೆ. ಅಲ್ಲಿನ ಪರಿಸ್ಥಿತಿ ಹೇಗಿದೆ? ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

‘ಗಿಲ್ಲಿನೇ ವಿನ್ನರ್’; ಬಿಗ್ ಬಾಸ್ ಸ್ಟುಡಿಯೋ ಮುಂದೆ ಘೋಷಣೆ ಕೂಗಿದ ಫ್ಯಾನ್ಸ್ – Kannada News | Gilli Is The Bigg Boss Winner Fans shouts Infront Of Jollywood Studio

‘ಬಿಗ್ ಬಾಸ್ ಕನ್ನಡ ಸೀಸನ್ 12’ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಗಿಲ್ಲಿನೇ ವಿನ್ನರ್ ಎಂದು ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಅಭಿಮಾನಿಗಳ ಸಂಖ್ಯೆ ಸ್ಟುಡಿಯೋ ಹೊರ ಭಾಗದಲ್ಲಿ ಹೆಚ್ಚುತ್ತಲೇ ಇದೆ. ಗಿಲ್ಲಿ ನಿಜವಾದ ಕ್ರೇಜ್​​ನ ಈ ವಿಡಿಯೋ ತೋರಿಸುತ್ತದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಸ್ಸಾಮ್​ನಲ್ಲಿ ಬಾಗುರುಂಬಾ ದಹೋವು 2026; 10,000 ಬೋಡೋ ಕಲಾವಿದರ ನೃತ್ಯ ವೀಕ್ಷಿಸಿ ಶ್ಲಾಘಿಸಿದ ಮೋದಿ – Kannada News | Bagurumba Dwhou in Guwahati was an experience I’ll always remember, says PM Narendra Modi

ಗುವಾಹಟಿ, ಜನವರಿ 18: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಸ್ಸಾಮ್ ರಾಜಧಾನಿ ಗುವಾಹಟಿಯಲ್ಲಿ ಬಾಗುರುಂಬಾ ದಹೋವು (Bagurumba Dwhou) 2026 ಉತ್ಸವದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಅಸ್ಸಾಮ್​ನ ಸಾಂಸ್ಕೃತಿ ಪರಂಪರೆ ಅನಾವರಣಗೊಂಡಿತು. ಒಂದು ಕಾಲದಲ್ಲಿ ತುಪಾಕಿ, ಗನ್​ಗಳನ್ನು ಹಿಡಿದು ಪ್ರತ್ಯೇಕತೆಗೆ ಹೋರಾಡುತ್ತಿದ್ದ ಬೋಡೋ ಜನಾಂಗದವರು ಇದೀಗ ತಮ್ಮ ಅದ್ಭುತ ಸಾಂಸ್ಕೃತಿಕ ವೈಭವ ಪ್ರದರ್ಶಿಸಿದರು. ಬೋಡೋ ಸಮುದಾಯದ 10,000ಕ್ಕೂ ಅಧಿಕ ಕಲಾವಿದರು ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿರು. ಪ್ರಧಾನಿ ನರೇಂದ್ರ ಮೋದಿ ಅವರು ಈ ದೃಶ್ಯ ವೈಭವ ಕಂಡು ಮೂಕವಿಸ್ಮಿತರಾದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್​ಗೆ ಎರಡು ದಿನಗಳ ಭೇಟಿ ಪೂರ್ಣಗೊಳಿಸಿದ್ದಾರೆ. ನಿನ್ನೆ ಬೋಡೋ ನೃತ್ಯ ಕಾರ್ಯಕ್ರಮ ಇತ್ತು. ಇವತ್ತು ಭಾನುವಾರ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಪ್ರಾಜೆಕ್ಟ್​ಗೆ ಭೂಮಿಪೂಜೆ ನೆರವೇರಿಸಿದರು. ಎರಡು ಹೊಸ ಅಮೃತ್ ಭಾರತ್ ಎಕ್ಸ್ಪ್ರೆಸ್ ಟ್ರೈನ್​ಗಳಿಗೆ ಚಾಲನೆ ನೀಡಿದರು. ಕಾಲಿಯಾಬಾರ್​ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಷಣದ ಮೂಲಕ ಅಸ್ಸಾಮ್ ಭೇಟಿ ಮುಗಿಸಲಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶರಣಾಗಿ ವರ್ಷಕಳೆದ್ರೂ ಬಿಡುಗಡೆಯಾಗದ ನಕ್ಸಲರು: ಮಗನಿಗಾಗಿ ಜೀವ ಕೈಯಲ್ಲಿ ಹಿಡಿದು ಕುಳಿತ ತಾಯಿ – Kannada News | Surrendered Naxalite Not Released Even After a Year: Mother holds life for her son

ರಾಯಚೂರು, ಜನವರಿ 18: ಅವರೆಲ್ಲಾ ವ್ಯವಸ್ಥೆ ವಿರುದ್ಧ ತೊಡೆ ತಟ್ಟಿ ಶಸ್ತ್ರ ಸಜ್ಜಿತರಾಗಿ ನಕ್ಸಲರು (Naxals) ಅನ್ನೋ ಹಣೆ ಪಟ್ಟಿಕೊಂಡಿರುವವರು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಎದುರು ಕಳೆದ ವರ್ಷ ಶರಣಾಗಿರುವ ಆರು ಜನ ನಕ್ಸಲರಿಗೆ ಈವರೆಗೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಾಗಿ ರಾಯಚೂರಿನ ನಕ್ಸಲ್ ಮಾರೆಪ್ಪ ಅರೋಲಿ ಕುಟುಂಬ ಮಗನ ಬಿಡುಗಡೆಗಾಗಿ ಅಂಗಲಾಚುತ್ತಿದೆ. ಸಾಯುವುದರೊಳಗೆ ಹೆತ್ತ ಮಗನನ್ನ ನೋಡುವ ಬಯಕೆಯಲ್ಲಿ ತಾಯಿ ನಿತ್ಯ ಕಣ್ಣೀರಿಡುತ್ತಿದ್ದಾರೆ.

ನಮಗೆ ಸರ್ಕಾರದ ಸವಲತ್ತು ಬೇಡ; ಮಗ ಬೇಕು

ಶಾಂತಿಗಾಗಿ ನಾಗರಿಕ ವೇದಿಕೆ ಮೂಲಕ 2025ರಲ್ಲಿ ಶರಣಾಗತಿಯಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಡಲು ಮುಂದಾಗಿರುವ ಆರು ಜನ ನಕ್ಸಲರನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕುಟುಂಬಸ್ಥರು ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ. ರಾಯಚೂರಿನ ಮಾರೆಪ್ಪ ಅರೋಲಿ ತಾಯಿ ಗೌರಮ್ಮ ಮಗನ ಬರುವಿಕೆಗಾಗಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ. ನಮಗೆ ಸರ್ಕಾರದ ಸವಲತ್ತು ಬೇಡ ಮಗ ಬೇಕು ಅಂತ ತಾಯಿ ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ: ಶರಣಾಗತಿ ಆಯ್ತು, ಆದರೆ ನಕ್ಸಲರ ಬಳಿ ಇದ್ದ ಶಸ್ತ್ರಾಸ್ತ್ರ ಎಲ್ಲಿ ಹೋಯ್ತು!?

ರಾಯಚೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳು ಗರಿಗೆದರಿದ್ದ ಕಾಲದಲ್ಲಿ ಹೊರಾಟಗಳಲ್ಲಿ ತೊಡಗಿದ್ದ ಯುವಕ ಮಾರೆಪ್ಪ ಅರೋಲಿ. ರಾಯಚೂರಿನ ಮಾನ್ವಿ ತಾಲ್ಲೂಕಿನ ಅರೋಲಿ ಗ್ರಾಮದ ಮಾರೆಪ್ಪ, ನಕ್ಸಲ್ ಚಟುವಟಿಕೆಗಳತ್ತ ಆಕರ್ಷಿತನಾಗಿ ಊರನ್ನ ತೊರೆದು ಹೋಗಿದ್ದ. ಸುಮಾರು 25 ವರ್ಷಗಳ ಬಳಿಕ ಶರಣಾಗತಿ ಮೂಲಕ 2025 ರ ಜನವರಿ‌ 8 ರಂದು ಮುಖ್ಯವಾಹಿನಿಗೆ ಬಂದಿದ್ದರು. ರಾಯಚೂರಿನ ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಮಾರೆಪ್ಪನ ಜೊತೆ ಮುಂಡಗಾರು ಲತಾ, ಸುಂದರಿ ಕುತ್ತೂರು, ವನಜಾಕ್ಷಿ ಬಾಳೆಹೊಳೆ, ಕೆ.ವಸಂತ, ಟಿ.ಎನ್.ಜಿಷಾ ಸೇರಿ ಆರು ಜನ ನಕ್ಸಲರು ಮುಖ್ಯವಾಹಿನಿಗೆ ಮರಳಿ ಒಂದು ವರ್ಷವಾಗಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಈ ಆರು ಜನ ನಕ್ಸಲರು ಶರಣಾಗಿದ್ದರು. ಆದರೆ ಸರ್ಕಾರ ಒಂದು ವರ್ಷವಾದ್ರೂ ಮಗನ ಬಿಡುಗಡೆ ಮಾಡಿಲ್ಲ ಅಂತ ನಕ್ಸಲ್ ಮಾರೆಪ್ಪ ಕುಟುಂಬ ಕಣ್ಣೀರಿಡುತ್ತಿದೆ.

ಸರ್ಕಾರ ನಕ್ಸಲ್ ಮುಕ್ತ ರಾಜ್ಯ ಘೋಷಣೆ ಮಾಡಿ ಒಂದು ವರ್ಷವಾಗಿದೆ. ಹೀಗಾಗಿ ಮಾರೆಪ್ಪನ ಬರುವಿಕೆಗಾಗಿ ಆತನ ಹುಟ್ಟೂರು ಅರೋಲಿ ಗ್ರಾಮದಲ್ಲಿ 81 ವರ್ಷದ ಆತನ ತಾಯಿ ಗೌರಮ್ಮ ಕೊನೆಗಾಲದಲ್ಲಿದ್ದಾರೆ. ಕೊನೆ ಘಳಿಗೆಯಲ್ಲಿ ಮಗನನ್ನ ನೋಡುವ ಅವಕಾಶ ಸಿಗುತ್ತಿದೆ ಅಂತ ನಿಲ್ಲದ ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಸರ್ಕಾರದಿಂದ ನಮಗೆ ಯಾವುದೇ ಸಹಾಯ ಬೇಡ, ನನ್ನ ಮಗ ಕೊನೆಗಾಲದಲ್ಲಿ ನನ್ನ ಜೊತೆ ಇರಲಿ ಸಾಕು ಅಂತ ಮಗನಿಗಾಗಿ ಕಾಯುತ್ತಿದ್ದಾರೆ.

ಶರಣಾಗತಿಯಾದವರನ್ನ ಬಿಡುಗಡೆ ಮಾಡದೆ ಜೈಲಿನಿಂದ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಅವರ 18 ಬೇಡಿಕೆಗಳನ್ನೂ ಈಡೇರಿಸಿಲ್ಲ. ಮುಖ್ಯಮಂತ್ರಿಗಳು ಘೋಷಿಸಿದಂತೆ ಆದಷ್ಟು ಬೇಗ ಶರಣಾದ ಆರು ಜನರನ್ನು ಬಿಡುಗಡೆ ಮಾಡಬೇಕು ಅಂತ ಜಯಣ್ಣನ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಅವರ ಮೇಲಿನ ಮೊಕದ್ದಮೆಗಳನ್ನ ಹಿಂಪಡೆದು ಸಾರ್ವಜನಿಕವಾಗಿ ಬದುಕಲು ಅನುವು ಮಾಡಿಕೊಡುವುದಾಗಿ ಸರ್ಕಾರ ಹೇಳಿತ್ತು. ಈಗ ಅದಕ್ಕೆ ಅವಕಾಶ ಮಾಡಬೇಕು ಅಂತ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸಿಎಂ ಮುಂದೆ 6 ನಕ್ಸಲರು ಶರಣಾಗತಿ, ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲು

ನಕ್ಸಲ್ ಚಟುವಟಿಕೆಯಲ್ಲಿ ಸೇರಿ 25 ವರ್ಷಗಳಿಂದ ದೂರವಾಗಿದ್ದ ಮಗ ಈಗಲಾದರೂ ಮನೆಗೆ ಬರ್ತಾನೆ ಅಂತ ಕಾಯುತ್ತಿದ್ದ ಮಾರೆಪ್ಪನ ತಾಯಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಸರ್ಕಾರ ಕೊಟ್ಟ ಮಾತಿನ ಕಡೆ ಗಮನ ಹರಿಸಬೇಕು ಅಂತ ಕುಟುಂಬಸ್ಥರು ಮನವಿ ಮಾಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs NZ: 14 ವರ್ಷಗಳ ನಂತರ ರೋಹಿತ್​ ಬ್ಯಾಟ್​ನಿಂದ ಬೇಡದ ಪ್ರದರ್ಶನ – Kannada News | Rohit Sharma’s Batting Woes: New Zealand ODI Series Disaster and Career Low as Opener

ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಹೊಸ ವರ್ಷ ಚೆನ್ನಾಗಿ ಆರಂಭವಾಗಿಲ್ಲ. 2027 ರ ಏಕದಿನ ವಿಶ್ವಕಪ್‌ಗಾಗಿ (2027 World Cup) ಟೀಂ ಇಂಡಿಯಾ ತಂಡದಲ್ಲಿ ಭಾಗವಾಗಬೇಕೆಂದು ಆಶಿಸಿದ್ದ ರೋಹಿತ್, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಈ ಸರಣಿಯಲ್ಲಿ ಪರಿಣಾಮ ಬೀರುವಲ್ಲಿ ವಿಫಲರಾಗಿದ್ದಾರೆ. ಇಂದೋರ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿಯೂ ರೋಹಿತ್ ಕೇವಲ 11 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಈ ಮೂಲಕ ರೋಹಿತ್ ಈ ಇಡೀ ಸರಣಿಯಲ್ಲಿ ಕಲೆಹಾಕಲು ಸಾಧ್ಯವಾಗಿದ್ದು ಕೇವಲ 61 ರನ್‌ ಮಾತ್ರ.

3ನೇ ಪಂದ್ಯದಲ್ಲೂ ರೋಹಿತ್ ವಿಫಲ

ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ, ರೋಹಿತ್ ಶರ್ಮಾ ಉತ್ತಮ ಆರಂಭ ಪಡೆದ ಹೊರತಾಗಿಯೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದ್ದರಿಂದ, ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಅಂತಿಮ ಮತ್ತು ನಿರ್ಣಾಯಕ ಪಂದ್ಯದಲ್ಲಿ ಅವರು ತಪ್ಪು ಸರಿಪಡಿಸಿಕೊಳ್ಳುತ್ತಾರೆ ಎಂಬ ಭರವಸೆ ಇತ್ತು. ಇದಕ್ಕೆ ಪೂರಕವಾಗಿ ನ್ಯೂಜಿಲೆಂಡ್ 338 ರನ್‌ಗಳ ಬೃಹತ್ ಗುರಿಯನ್ನು ನೀಡಿದಾಗ ರೋಹಿತ್ ಅವರಿಂದ ಒಂದೊಳ್ಳೆ ಇನ್ನಿಂಗ್ಸ್​ನ ನಿರೀಕ್ಷೆಯಿತ್ತು. ಅದರಂತೆ ರೋಹಿತ್ ಕೂಡ ಮೊದಲ ಎಸೆತದಲ್ಲೇ ಅದ್ಭುತ ಬೌಂಡರಿಯೊಂದಿಗೆ ತಮ್ಮ ಇನ್ನಿಂಗ್ಸ್ ಪ್ರಾರಂಭಿಸಿದರು.

ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ನಂತರ, ಮುಂದಿನ ಐದು ಎಸೆತಗಳಲ್ಲಿ ರನ್ ಗಳಿಸಲು ರೋಹಿತ್​ಗೆ ಸಾಧ್ಯವಾಗಲಿಲ್ಲ. ನಂತರ, ನಾಲ್ಕನೇ ಓವರ್‌ನಲ್ಲಿ, ಜ್ಯಾಕ್ ಫೋಕ್ಸ್ ಅವರ ನಾಲ್ಕನೇ ಎಸೆತದಲ್ಲಿ ವಿಕೆಟ್ ಕೀಪರ್ ಕ್ಯಾಚ್ ಕೈಬಿಡುವ ಮೂಲಕ ರೋಹಿತ್​ಗೆ ಜೀವದಾನವೂ ಸಿಕ್ಕಿತ್ತು. ಆ ಬಳಿಕ ರೋಹಿತ್ ಮುಂದಿನ ಎಸೆತದಲ್ಲೇ ಬೌಂಡರಿ ಬಾರಿಸಿ, ಈ ತಪ್ಪಿಗೆ ನ್ಯೂಜಿಲೆಂಡ್ ಅನ್ನು ಶಿಕ್ಷಿಸುತ್ತಾರೆ ಎಂಬ ಭರವಸೆಯನ್ನು ಹುಟ್ಟುಹಾಕಿದರು. ಆದರೆ ಮುಂದಿನ ಎಸೆತದಲ್ಲೇ ರೋಹಿತ್ ಕ್ಯಾಚಿತ್ತು ಕೇವಲ 11 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

3 ಪಂದ್ಯಗಳಲ್ಲಿ ಕೇವಲ 61 ರನ್

ಹೀಗಾಗಿ, ಸರಣಿಯು ರೋಹಿತ್‌ಗೆ ನಿರಾಶಾದಾಯಕವಾಗಿ ಕೊನೆಗೊಂಡಿತು. ಮೂರು ಪಂದ್ಯಗಳಲ್ಲಿಯೂ ಅವರು ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸಿ ಕ್ಯಾಚ್ ಔಟ್ ಆದರು. ವಡೋದರಾದಲ್ಲಿ ನಡೆದ ಮೊದಲ ಏಕದಿನದಲ್ಲಿ ರೋಹಿತ್ 26 ರನ್ ಗಳಿಸಿದರೆ, ರಾಜ್‌ಕೋಟ್‌ನಲ್ಲಿ 24 ರನ್​ಗಳಿಗೆ ಸುಸ್ತಾಗಿದ್ದರು. ಹೀಗಾಗಿ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್ ಕೇವಲ 20 ರ ಸರಾಸರಿಯಲ್ಲಿ 61 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇದು ರೋಹಿತ್ ಅವರ ಏಕದಿನ ವೃತ್ತಿಜೀವನದಲ್ಲಿ ಆರಂಭಿಕ ಆಟಗಾರನಾಗಿ ಎರಡನೇ ಕೆಟ್ಟ ಸರಣಿಯಾಗಿದೆ. 15 ವರ್ಷಗಳ ಹಿಂದೆ ರೋಹಿತ್ ಜನವರಿ ತಿಂಗಳಲ್ಲಿ ಇಂತಹ ಪರಿಸ್ಥಿತಿಯನ್ನು ಕಂಡಿದ್ದರು. 2011 ರ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಕೇವಲ 49 ರನ್ ಗಳಿಸಿ ಕೆಟ್ಟ ಪ್ರದರ್ಶನ ನೀಡಿದ್ದರು.

IND vs NZ: 650 ಆರು..! ಕ್ರಿಕೆಟ್ ಜಗತ್ತಿನಲ್ಲಿ ಈ ಸಾಧನೆ ಮಾಡಿದ ಏಕೈಕ ಆಟಗಾರ ರೋಹಿತ್ ಶರ್ಮಾ

2013 ರ ಬಳಿಕ ಕೆಟ್ಟ ಪ್ರದರ್ಶನ

ರೋಹಿತ್ ಆ ಒಂದು ಸರಣಿಯಲ್ಲಿ ಮಾತ್ರ ಇನ್ನಿಂಗ್ಸ್ ಆರಂಭಿಸಿದ್ದರೂ, 2013 ರಲ್ಲಿ ಪೂರ್ಣಾವಧಿ ಆರಂಭಿಕ ಆಟಗಾರನಾದ ನಂತರ ಇದು ಅವರ ಅತ್ಯಂತ ಕೆಟ್ಟ ಸರಣಿಯಾಗಿದೆ (ಕನಿಷ್ಠ ಮೂರು ಇನ್ನಿಂಗ್ಸ್). ಇತ್ತೀಚೆಗೆ ರೋಹಿತ್ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸಮಯದಲ್ಲಿ ಅವರಿಂದ ಈ ಪ್ರದರ್ಶನ ಬಂದಿದೆ. ಕಳೆದ ವರ್ಷದ ಆಸ್ಟ್ರೇಲಿಯಾ ಪ್ರವಾಸದಲ್ಲಿ, ಅವರು ಒಂದು ಶತಕ ಸೇರಿದಂತೆ 201 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಕಿವೀಸ್ ವಿರುದ್ಧ ಅದೇ ಪ್ರದರ್ಶನವನ್ನು ಮುಂದುವರೆಸಲು ರೋಹಿತ್​ಗೆ ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:53 pm, Sun, 18 January 26

Source link