Category Archives: Blog

Your blog category

ನನ್ನೊಳಗೆ ಎಲ್ಲರೂ ಇದ್ದಾರೆ, ಪ್ರೇಕ್ಷಕರೆದುರು ಇದ್ದಿದ್ದು ಇದ್ದಹಾಗೆ ಹೇಳಿದ ಕಿಚ್ಚ ಸುದೀಪ್ – Kannada News | Bigg Boss Kannada: Sudeep talks about how he handles the show

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss) ಶೋ. ಕನ್ನಡ ಮಾತ್ರವೇ ಅಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಶೋ ಪ್ರಸಾರ ಆಗುತ್ತದೆ. ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಸೆಲೆಬ್ರಿಟಿಗಳು ಈ ಶೋ ನಡೆಸಿಕೊಟ್ಟಿದ್ದಿದೆ. ಆದರೆ ಕನ್ನಡದಲ್ಲಿ ಬಿಗ್​​ಬಾಸ್ ಶೋ ಪ್ರಾರಂಭ ಆದಾಗಿನಿಂದಲೂ ಸುದೀಪ್ ಅವರೇ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಬಿಗ್​​ಬಾಸ್ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್​​ಬಾಸ ಎಂದಾಗಿದೆ. ಕಳೆದ ಸೀಸನ್​​ನಲ್ಲಿ ಸುದೀಪ್ ಅವರು ಇದು ನನ್ನ ಕೊನೆಯ ಸೀಸನ್ ಎಂದಿದ್ದರು. ಆದರೆ ಅವರ ಸ್ಥಾನ ತುಂಬಬಲ್ಲ ಮತ್ತೊಬ್ಬ ವ್ಯಕ್ತಿ ಇಡೀ ಕರ್ನಾಟಕದಲ್ಲಿ ಸಿಗಲಿಲ್ಲ. ಇದೀಗ ಸುದೀಪ್ ದಾಖಲೆಯ 12ನೇ ಸೀಸನ್ ಅನ್ನು ಸಹ ಯಶಸ್ವಿಯಾಗಿ ಮುಗಿಸಿದ್ದಾರೆ. ಆದರೆ ಈ ವೇಳೆ ಪ್ರೇಕ್ಷಕರೊಟ್ಟಿಗೆ ಕೆಲವು ವಿಷಯಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಾರೆ.

12ನೇ ಸೀಸನ್ ಮುಗಿಯುವ ಮುಂಚೆ ಬಿಗ್​​ಬಾಸ್ ಮಾತನಾಡಿ, ಸುದೀಪ್ ಅವರಿಗೆ ಧನ್ಯವಾದ ಹೇಳಿದರು. ‘ಸುದೀಪ್ ಅವರೇ ಈ ಶೋಗೆ ಹೃದಯ ಕೊಟ್ಟವರು ನೀವು, ಗೋಡೆಗಳಿಗೆ ಜೀವ ತುಂಬಿದವರು ನೀವು. ಶೋಗೆ 12 ವರ್ಷಗಳು ತುಂಬಿವೆ, 12 ವರ್ಷದಿಂದಲೂ ನಿಮ್ಮ ಸಾರಥ್ಯದಲ್ಲಿ ಈ ಶೋ ನಡೆಯುತ್ತಿದೆ. ಇದು ದಾಖಲೆಯೇ ಆಗಿದೆ. ನಿಮ್ಮದು ಈಗ ಕೇವಲ ನಿರೂಪಣೆ ಮಾತ್ರವೇ ಅಲ್ಲ, ಅದೊಂದು ಪರಂಪರೆ ಆಗಿದೆ. ಸ್ಪರ್ಧಿಗಳು ನೊಂದಾಗ ಭರವಸೆ ತುಂಬಿದ್ದೀರಿ, ಸೋತಾಗ ಹುರಿದುಂಬಿಸಿದ್ದಿಈರಿ, ಖುಷಿಯಲ್ಲಿ ಸಂತಸ ಪಟ್ಟವರು, ಪ್ರೀತಿಯನ್ನು ಉಣಬಡಿಸಿದವರು ನೀವು, ಮಾತ್ರವಲ್ಲದೆ ಈ ಶೋಗೆ ಮಾರ್ಗದರ್ಶಕರಾಗಿದ್ದೀರಿ. ಈ ಶೋ ಅಲುಗಾಡಿದ ಅಡಿಪಾಯವನ್ನು ಕೈ ಹಿಡಿದು ನಿಲ್ಲಿಸಿದ್ದೀರಿ, ಈ ಶೋ ಧ್ವನಿ ಕಳೆದುಕೊಂಡಾಗ ಅದಕ್ಕೆ ಧ್ವನಿ ನೀಡಿದ್ದೀರಿ, ಈ ಕಾರ್ಯಕ್ರಮವನ್ನು ಹೆಗಲ ಮೇಲೆ ಹೊತ್ತು ಯಶಸ್ವಿಗೊಳಿಸಿದ್ದೀರಿ, ಮನದಾಳದ ಧನ್ಯವಾದ. ಥ್ಯಾಂಕ್ಯೂ ಸುದೀಪ್’ ಎಂದರು.

ಬಳಿಕ ಮಾತನಾಡಿದ ಸುದೀಪ್, ‘ನಾನು ಈ ಶೋ ಅನ್ನು ಕಾನ್ಫಿಡೆಂಟ್ ಆಗಿ ನಡೆಸಿಕೊಡಲು ಮುಖ್ಯ ಕಾರಣ ಸ್ಪರ್ಧಿಗಳು ನೀಡುವ ಗೌರವ ಮತ್ತು ಪ್ರೀತಿ. ಅದಿಲ್ಲದೇ ಹೋಗಿದ್ದಿದ್ದರೆ ನಾನು ನಡೆಸಿಕೊಡಲು ಆಗುತ್ತಿರಲಿಲ್ಲ. ನಾನು ಕಲಿತಿರುವುದು ಏನೆಂದರೆ ಏನನ್ನೇ ಗಳಿಸಬೇಕು, ಸಾಧಿಸಬೇಕು ಎಂದರೆ ಭಯ, ಹೆದರಿಕೆಯಿಂದ ಆಗಲ್ಲ, ಅದು ಪ್ರೀತಿಯಿಂದ ಮಾತ್ರ ಸಾಧ್ಯ. ನಾನು ನಿಮ್ಮನ್ನು ಸಾಕಷ್ಟು ಪ್ರೀತಿಸಿದ್ದೀನಿ, ಅದಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನು ನೀವು ನನಗೆ ನೀಡಿದ್ದೀರಿ, ನೀವು ತೋರುವ ಗೌರವ, ಪ್ರೀತಿಯಿಂದಲೇ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಡಲು ಆಗುತ್ತಿದೆ’ ಎಂದರು ಸುದೀಪ್.

ಇದನ್ನೂ ಓದಿ:ಬಿಗ್​ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಮುಂದುವರೆದು, ಕೆಲವೊಂದು ವಿಷಯ ಪ್ರೇಕ್ಷಕರಿಗೆ ಅರ್ಥವಾಗಲ್ಲ ಆದರೆ ಹೇಳಲೇ ಬೇಕಾಗುತ್ತದೆ. ನಿನ್ನೆ ಕ್ರಿಕೆಟ್ ಮುಗಿಸಿಕೊಂಡು ನಾನು ಬಂದಿದ್ದೇ ರಾತ್ರಿ 3:30ಗೆ ಸುಸ್ತಾಗಿರುತ್ತದೆ ಏನೋ ಸಮಸ್ಯೆ ಇರುತ್ತದೆ ಆದರೆ ನಾನು ಮಾಡುವ ಕೆಲಸ ಮಾಡಲೇ ಬೇಕಾಗುತ್ತದೆ. ನನ್ನನ್ನು ನಂಬಿಕೊಂಡು ಅಷ್ಟು ಜನ ಒಳಗೆ ಕುಳಿತಿರುವಾಗ ನಾನು ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯವಿಲ್ಲ. ಅವರ ಕೈಬಿಡಲು ಸಾಧ್ಯವಿಲ್ಲ’ ಎಂದರು ಸುದೀಪ್.

‘ನಾನು ಕಳೆದ 11 ವರ್ಷದಿಂದ ಈ ಶೋ ಜೊತೆಗೆ ಇರಲು ಕಾರಣ ಈ ವೇದಿಕೆ ಬಹಳ ಶುದ್ಧವಾದುದು. ಈ ವೇದಕೆಯಿಂದ ಹೋದ ಎಷ್ಟೋ ಮಂದಿ ಜೀವನದಲ್ಲಿ ಸಾಕಷ್ಟು ಎತ್ತರಕ್ಕೆ ಏರಿದ್ದಾರೆ. ಎಷ್ಟೋ ಜನ ಸ್ಪರ್ಧಿಗಳು ತಮ್ಮ ವೃತ್ತಿಯಲ್ಲಿ ಮೇಲಕ್ಕೇರಿದ್ದಾರೆ. ಇದೆಲ್ಲ ಸಾಧ್ಯವಾಗಿರುವುದು ಈ ವೇದಿಕೆಯ ಶುದ್ಧತೆಯಿಂದ, ಪ್ರಮಾಣಿಕತೆಯಿಂದ ಹಾಗಾಗಿ ಈ ವೇದಿಕೆ ಇನ್ನೂ ಸಾಕಷ್ಟು ವರ್ಷಗಳು ಇರಬೇಕು. ಇದೇ ಕಾರಣಕ್ಕೆ ನಾನು ಈ ಶೋನ ಜೊತೆಗೆ ಇದ್ದೇನೆ’ ಎಂದರು.

ತೆರೆಯ ಮೇಲೆ ನಾನು ಕೂಲ್ ಆಗಿ ಕಾಣಬಹುದು, ಆದರೆ ನನ್ನೊಳಗೂ ಮನುಷ್ಯ ಇದ್ದಾನೆ. ನನ್ನೊಳಗೂ ಒಬ್ಬ ಗಿಲ್ಲಿ ಇದ್ದಾನೆ, ರಜತ್ ಇದ್ದಾನೆ, ಅಶ್ವಿನಿ ಇದ್ದಾರೆ, ರಕ್ಷಿತಾ ಇದ್ದಾರೆ. ನನಗೂ ಮೂಡ್ ಸ್ವಿಂಗ್​​ಗಳು ಆಗುತ್ತಿರುತ್ತವೆ. ನನಗೂ ಬೇಸರ ಆಗುತ್ತದೆ, ಸಿಟ್ಟೂ ಬರುತ್ತದೆ. ಆದರೆ ನೀವು ಅದನ್ನೆಲ್ಲ ನೋಡುವುದಿಲ್ಲ. ಅದನ್ನೆಲ್ಲ ಸಹಿಸಿಕೊಂಡು ನನ್ನನ್ನು ಒಳ್ಳೆಯ ಮೂಡ್​​ನಲ್ಲಿ ವೇದಿಕೆ ಮೇಲೇರುವಂತೆ ಮಾಡುವುದು ನಿರ್ದೇಶಕ ಪ್ರಕಾಶ್ ಅವರಿಗೆ ದೊಡ್ಡ ಧನ್ಯವಾದ ಎಂದ ಸುದೀಪ್, ಬಳಿಕ ತಮ್ಮ ಸಿಬ್ಬಂದಿಗಳೆಲ್ಲರಿಗೂ ಧನ್ಯವಾದ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಲಕ್ಷ? – Kannada News | How much money did Bigg Boss Kannada 12 Runner Up Rakshita Shetty got

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss) ಅಂತ್ಯವಾಗಿದೆ. 113 ದಿನಗಳ ಕಾಲ ನಡೆದ ಈ ಶೋನಲ್ಲಿ ಅಂತಿಮವಾಗಿ ಗಿಲ್ಲಿ ವಿನ್ನರ್ ಆಗಿದ್ದಾರೆ. ಕೋಟ್ಯಂತರ ವೋಟುಗಳು ಗಿಲ್ಲಿಗೆ ಬಂದಿವೆ. ರನ್ನರ್ ಅಪ್ ಆಗಿದ್ದು ರಕ್ಷಿತಾ ಶೆಟ್ಟಿ. ಬಿಗ್​​ಬಾಸ್ ಮನೆಗೆ ಬಂದ ಮೊದಲ ದಿನವೇ ಶೋನಿಂದ ಹೊರಗೆ ಅಟ್ಟಲ್ಪಟ್ಟ ರಕ್ಷಿತಾ ವಾರದ ಬಳಿಕ ಮರು ಎಂಟ್ರಿ ಆಗಿದ್ದು ಮಾತ್ರವಲ್ಲದೆ ಬಿಗ್​​ಬಾಸ್ ಸೀಸನ್​ನ ಕೊನೆಯ ದಿನದ ವರೆಗೆ ಬಂದಿದ್ದಾರೆ. ಅದೂ ಯಾವ ಹಿನ್ನೆಲೆಯೂ ಇಲ್ಲದೆ. ಫಿನಾಲೆ ವರೆಗೆ ಬಂದ ಅವರ ಪ್ರಯಾಣವೇ ಒಂದು ಸಾಧನೆ.

ಬಿಗ್​​ಬಾಸ್​​ನಲ್ಲಿ ಗೆದ್ದವರಿಗೆ 50 ಲಕ್ಷ ರೂಪಾಯಿ ಹಣ ನೀಡುವುದು ವಾಡಿಕೆ. ಅದರ ಜೊತೆಗೆ ಕಳೆದ ಕೆಲ ಸೀಸನ್​​ಗಳಿಂದ ಗೆದ್ದವರಿಗೆ ಕಾರೊಂದನ್ನು ಸಹ ಉಡುಗೊರೆಯಾಗಿ ನೀಡಲಾಗುತ್ತಿದೆ. ಆದರೆ ರನ್ನರ್ ಅಪ್ ಆದವರಿಗೆ ಏನೂ ಸಿಗುತ್ತಿರಲಿಲ್ಲ. ಇದರ ಬಗ್ಗೆ ಹಿಂದೆ ಕೆಲವು ಬಾರಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ರನ್ನರ್ ಅಪ್​​ ಆದವರಿಗೂ ನಗದು ಬಹುಮಾನ ನೀಡಲಾರಂಭಿಸಿದರು. ಇದೀಗ ಈ ಸೀಸನ್​​ನಲ್ಲಿ ರನ್ನರ್ ಅಪ್ ಆದ ರಕ್ಷಿತಾ ಅವರಿಗೂ ಸಹ ದೊಡ್ಡ ಮೊತ್ತವೇ ಬಹುಮಾನವಾಗಿ ದೊರೆತಿದೆ.

ವಿನ್ನರ್ ಘೋಷಣೆ ಮಾಡುವ ಮುಂಚೆ ಸುದೀಪ್ ಅವರು ರಕ್ಷಿತಾ ಬಳಿ, 50 ಲಕ್ಷ ಗೆದ್ದರೆ ಏನು ಮಾಡುತ್ತೀರಿ ಎಂದು ಕೇಳಿದರು. ಅದಕ್ಕೆ ರಕ್ಷಿತಾ 20 ಹಸು ಖರೀದಿ ಮಾಡುತ್ತೀನಿ ಎಂದರು. ಒಂದು ಹಸುವಿಗೆ ಎಷ್ಟು? ಎಂದರೆ ಒಂದು ಹಸುವಿಗೆ 1 ಲಕ್ಷ ರೂಪಾಯಿ ಎಂದರು. ಉಳಿದ ಹಣವನ್ನು ಖರ್ಚು ಮಾಡುತ್ತೀನಿ ಎಂದಿದ್ದರು. ಅಸಲಿಗೆ ರಕ್ಷಿತಾಗೆ 50 ಲಕ್ಷ ರೂಪಾಯಿ ಸಿಗಲಿಲ್ಲ. ಆದರೆ ಸಿಕ್ಕ ಹಣ ಕಡಿಮೆಯಂತೂ ಅಲ್ಲ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯ ಬೆಂಕಿಯುಂಡೆ ಅಶ್ವಿನಿಗೆ ಧಕ್ಕಲಿಲ್ಲ ಗೆಲುವು

ರಕ್ಷಿತಾ ಅವರಿಗೆ ಸಾಯಿ ಗೋಲ್ಡ್ ಪ್ಯಾಲೆಸ್ ವತಿಯಿಂದ 20 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯ್ತು. ಖುದ್ದು ಟಿಎ ಶರವಣ ಅವರು ವೇದಿಕೆಗೆ ಆಗಮಿಸಿ ರಕ್ಷಿತಾ ಅವರಿಗೆ 20 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರ ಮಾಡಿದರು. ಅದಾದ ಬಳಿಕ ಜಾರ್ ಅಪ್ಲಿಕೇಶನ್​​ನ ವತಿಯಿಂದ ರಕ್ಷಿತಾ ಅವರಿಗೆ ಐದು ಲಕ್ಷ ರೂಪಾಯಿ ನಗದು ಹಣವನ್ನು ಉಡುಗೊರೆಯಾಗಿ ಸಹ ನೀಡಲಾಯ್ತು. ಬಹಳ ಕಷ್ಟಪಟ್ಟು ಆಡಿದ ರಕ್ಷಿತಾಗೆ ಒಳ್ಳೆಯ ಮೊತ್ತವನ್ನೇ ಬಹುಮಾನವಾಗಿ ನೀಡಲಾಯ್ತು. ಮಧ್ಯಮ ವರ್ಗದ ಕುಟುಂಬದವರಾದ ರಕ್ಷಿತಾಗೆ ಇದು ಸಹಕಾರಿ ಆಗುವುದಂತೂ ಗ್ಯಾರೆಂಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿಗೆ ಬಂಪರ್; 50 ಲಕ್ಷದ ಜೊತೆ ಐಷಾರಾಮಿ ಕಾರು, ಸುದೀಪ್ ಕಡೆಯಿಂದ ಬಿಗ್ ಅಮೌಂಟ್

Source link

ರನ್ನರ್ ಅಪ್ ಆದರೂ ಕಡಿಮೆಯಲ್ಲ ಕರಾವಳಿ ಚಿನಕುರಳಿಯ ಸಾಧನೆ – Kannada News | Bigg Boss Kannada 12: Rakshita Shetty became first Runner Up

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆ ಮುಗಿದಿದೆ. ಸುದೀಪ್ ಅವರು ಈ ಸೀಸನ್​​ನ ವಿನ್ನರ್​ನ ಘೋಷಣೆ ಮಾಡಿದ್ದಾರೆ. ಬಹುತೇಕರು ಮೊದಲೇ ಊಹಿಸಿದ್ದಂತೆ ಗಿಲ್ಲಿ ನಟ ಅವರು 12ನೇ ಸೀಸನ್​​ನ ವಿನ್ನರ್ ಆಗಿದ್ದಾರೆ. ತಮ್ಮ ಹಾಸ್ಯದಿಂದ ಅವರು ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಬಿಗ್​​ಬಾಸ್ 12ರ ಮನೆಗೆ ಒಟ್ಟು 24 ಮಂದಿ ಬಂದಿದ್ದರು. ಅವರಲ್ಲಿ ಬಹುತೇಕರು ನಟರು, ಆದರೆ ನಟನೆಯ ಸಣ್ಣ ಹಿನ್ನೆಲೆಯೂ ಇಲ್ಲದೆ, ಉಡುಪಿಯ ಹಳ್ಳಿಯೊಂದರಲ್ಲಿ ತಮಗೆ ತೋಚಿದಂತೆ ಅಡುಗೆ ವಿಡಿಯೋಗಳ ಮಾಡುತ್ತಿದ್ದ ಕನ್ನಡ ಭಾಷೆಯೂ ಸಹ ಸರಿಯಾಗಿ ಬಾರದ ಸಾಮಾನ್ಯ ಹುಡುಗಿಯೊಬ್ಬಾಕೆ ಬಿಗ್​​ಬಾಸ್​​ಗೆ ಬಂದು ಫಿನಾಲೆವರೆಗೂ ಬಂದಿರುವುದು ಸಾಮಾನ್ಯ ಸಾಧನೆಯಂತೂ ಅಲ್ಲವೇ ಅಲ್ಲ.

ಬಿಗ್​​ಬಾಸ್​​ ಮನೆಗೆ ಬಂದ ಮೊದಲ ದಿನವೇ ಮನೆಯಿಂದ ಎವಿಕ್ಟ್ ಆಗಿದ್ದ ರಕ್ಷಿತಾ, ಆ ನಂತರ ಮತ್ತೆ ಮನೆಗೆ ಎಂಟ್ರಿ ಕೊಟ್ಟು ಈಗ ಕೊನೆಯ ದಿನ ಮನೆಯಿಂದ ಹೊರಗೆ ಬಂದಿರುವುದು ಕಡಿಮೆ ಸಾಧನೆಯಲ್ಲ. ರಕ್ಷಿತಾ, ಆ ಮನೆಯಲ್ಲಿ ಹಲವು ರೀತಿಯ ನೋವು, ಅವಮಾನಗಳನ್ನು ಅನುಭವಿಸಿದ್ದಾರೆ. ರಕ್ಷಿತಾ, ತಮ್ಮ ಮುಗ್ಧತೆಯಿಂದ ಪ್ರೇಕ್ಷಕರ ಮನಸ್ಸು ಗೆದ್ದರೂ ಸಹ ಅಲ್ಲಿದ್ದ ಸ್ಪರ್ಧಿಗಳಿಗೆ ಅದು ಅಸಹನೀಯ ಅನಿಸಿ ಹಲವರು ರಕ್ಷಿತಾ ಮೇಲೆ ಜಗಳ ಮಾಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ

ರಕ್ಷಿತಾರನ್ನು ಎಂಟರ್ಟೈನ್​​ಮೆಂಟ್​​ಗೆ ಬಳಸಿಕೊಂಡರು, ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ನೌಕರಳಂತೆ ನಡೆಸಿಕೊಂಡರು, ತಮಾಷೆ ಮಾಡಲು ಬಳಸಿಕೊಂಡರು, ಫುಟೇಜ್ ತೆಗೆದುಕೊಳ್ಳಲು ಪುಕ್ಕಟೆ ಜಗಳ ಮಾಡಲು ಪಂಚಿಂಗ್ ಬ್ಯಾಗ್​​ನಂತೆ ನಡೆಸಿಕೊಂಡರು. ರಕ್ಷಿತಾರ ಬಣ್ಣದ ಬಗ್ಗೆ ಆಡಿಕೊಳ್ಳಲಾಯ್ತು, ಸ್ಲಂ ಎಂದು ಕರೆಯಲಾಯ್ತು, ‘ಸೆಡೆ’ ಎಂದು ಬೈಯ್ಯಲಾಯ್ತು, ರಕ್ಷಿತಾರ ಹಿನ್ನೆಲೆಯನ್ನು ಟೀಕಿಸಲಾಯ್ತು, ಆಕೆ ಧರಿಸುವ ಬಟ್ಟೆಗಳನ್ನು ಟೀಕಿಸಲಾಯ್ತು ಎಲ್ಲ ಅವಮಾನಗಳನ್ನು ಎದುರಿಸಿಯೂ ರಕ್ಷಿತಾ ಫಿನಾಲೆ ವರೆಗೆ ಬಂದರು. ಮಾತ್ರವಲ್ಲ, ಘಟಾನುಘಟಿಗಳನ್ನೇ ಹಿಂದಿಕ್ಕಿ ರನ್ನರ್ ಅಪ್ ಆಗಿದ್ದಾರೆ.

ಇಡೀ ಬಿಗ್​​ಬಾಸ್ ಮನೆಯಲ್ಲಿ ಕಿರಿಯ ವ್ಯಕ್ತಿ, ಅನುಭವವೂ ಕಡಿಮೆ ಆದರೆ ಹಲವು ಸಂದರ್ಭದಲ್ಲಿ ಘನತೆಯಿಂದ ನಡೆದುಕೊಂಡಿದ್ದಾರೆ. ಘನತೆಯಿಂದ ವರ್ತಿಸಿದ್ದಾರೆ. ತಪ್ಪಿದ್ದಲ್ಲಿ ತಪ್ಪು ಎಂದಿದ್ದಾರೆ, ವಿರೋಧಿಗಳನ್ನೂ ಸಹ ಹೊಗಳಿದ್ದು ಸಹ ಇದೆ. ಯಾವ ನಾಟಕೀಯತೆಯೂ ಇಲ್ಲದೆ ಎಲ್ಲರೊಂದಿಗೆ ಬೆರೆತರು ಅವರ ಪ್ರಯಾಣ ನಿಜಕ್ಕೂ ಅಸಾಮಾನ್ಯಾಗಿತ್ತು. ಅವರು ರನ್ನರ್ ಅಪ್ ಆಗಿದ್ದರೂ ಸಹ ಅವರೇ ವಿನ್ನರ್, ‘ಗೊತ್ತಾಯ್ತಲ್ಲ’

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಸಾಯೋವರೆಗೆ ನಿಮ್ಮ ಮರೆಯಲ್ಲ’; ಸುದೀಪ್​​ಗೆ ತಲೆಬಾಗಿ ನಮಸ್ಕರಿಸಿ ಧನ್ಯವಾದ ಹೇಳಿದ ಗಿಲ್ಲಿ – Kannada News | Gilli Nata Special Thanks To Kichcha Sudeep Ahead of Winning Announcment

‘ಬಿಗ್ ಬಾಸ್ ಕನ್ನಡ ಸೀಸನ್ 12’ ಅಂತಿಮ ಹಂತಕ್ಕೆ ಬಂದಿದೆ. ಗಿಲ್ಲಿ ಕಪ್ ಎತ್ತಿದ್ದಾರೆ ಎಂದು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಇದು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಹೀಗಿರುವಾಗಲೇ ಗಿಲ್ಲಿ ಅವರು ಸುದೀಪ್​​ಗೆ ಧನ್ಯವಾದ ಹೇಳಿದ್ದಾರೆ. ತಲೆಬಾಗಿ ಅವರು ನಮಸ್ಕರಿಸಿದ್ದಾರೆ. ಇದಕ್ಕೆ ಕಾರಣವನ್ನು ಅವರು ನೀಡಿದ್ದಾರೆ.

ಗಿಲ್ಲಿ ನಟ ಅವರ ವಿಟಿಯನ್ನು ಹಾಕಿದರು. ಇದು ತುಂಬಾನೇ ಅದ್ಭುತವಾಗಿತ್ತು. ಈ ವಿಡಿಯೋ ಗಮನ ಸೆಳೆಯಿತು. ಗಿಲ್ಲಿ ಅವರಿಗೆ ಇದನ್ನು ನೋಡಿ ಒಂದು ಸಿನಿಮಾ ನೋಡಿದಂತೆ ಆಯಿತು. ಆ ಬಳಿಕ ಮಾತನಾಡಿದ ಗಿಲ್ಲಿ, ‘ಇದು ಶೋ ಅಲ್ಲ, ಜೀವನ ಅಂತ ಗೊತ್ತಾಯ್ತು. ತಪ್ಪನ್ನು ತಿದ್ದಿ ಇಲ್ಲಿವರೆಗೆ ಕರೆದುಕೊಂಡು ಬಂದಿದ್ದೀರಿ. ಸಾಯೋವರೆಗೆ ನಿಮ್ಮ ಮರೆಯಲ್ಲ’ ಎಂದರು ಗಿಲ್ಲಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಭಾಗಿ – Kannada News | Union Minister Pralhad Joshi to attend World Economic Forum meeting Davos 2026

ದಾವೋಸ್, ಜನವರಿ 18: ಹೊಸ ವರ್ಷದ ಹೊಸತರಲ್ಲಿ ಸ್ವಿಜ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ (WEF) ಸಭೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್​ ಜೋಶಿ (Pralhad Joshi) ಭಾಗಿಯಾಗಿದ್ದಾರೆ.

ವಿಶ್ವ ಆರ್ಥಿಕ ವೇದಿಕೆ 2026ರ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿರುವ ಕೇಂದ್ರ ಸಚಿವ ಜೋಶಿ ಅವರಿಗೆ ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ರಾಯಭಾರಿ ಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು.

ಸಚಿವ ಪ್ರಲ್ಹಾದ್​ ಜೋಶಿ ಟ್ವೀಟ್​

ಇನ್ನು ಈ ವೇಳೆ ಪ್ರತಿಕ್ರಿಯಿಸಿರುವ ಸಚಿವ ಪ್ರಲ್ಹಾದ ಜೋಶಿ, ಭಾರತದಲ್ಲಿನ ಆಹಾರ ವ್ಯವಸ್ಥೆ, ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಮ್ಮ ಕ್ರಾಂತಿ, ಆಡಳಿತ ಸುಧಾರಣೆ ಹಾಗೂ ಕಾರ್ಯವೈಖರಿಯು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂಬುದರ ಸಂಕೇತ ಇದಾಗಿದೆ. ಅಲ್ಲದೇ, ಹೆಚ್ಚಿನ ಹೂಡಿಕೆಯನ್ನು ಸೆಳೆಯಲು ಅವಕಾಶವಾಗಿದೆ ಎಂದು ಹೇಳಿದ್ದಾರೆ.

ಸಚಿವ ಎಂಬಿ ಪಾಟೀಲ್​​​ ನೇತೃತ್ವದ ನಿಯೋಗ ಕೂಡ ದಾವೋಸ್​ಗೆ

ಇನ್ನು ಇದೇ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಲು ಬೃಹತ್​​​ ಕೈಗಾರಿಕಾ ಸಚಿವ
ಎಂ.ಬಿ ಪಾಟೀಲ್​​​ ನೇತೃತ್ವದ ರಾಜ್ಯ ಉನ್ನತ ಮಟ್ಟದ ನಿಯೋಗವು ಭಾನುವಾರದಂದು ಪ್ರಯಾಣ ಬೆಳೆಸಿದ್ದಾರೆ.

ಸಚಿವ ಎಂ.ಬಿ ಪಾಟೀಲ್ ಟ್ವೀಟ್​ 

ಅಮೆಜಾನ್​ ವೆಬ್​​ ಸರ್ವೀಸಸ್​, ಲೆನೊವೊ, ವಾಸ್ಟ್​​ ಸ್ಪೇಸ್​​, ಕೋಕಾ-ಕೋಲಾ, ಫಿಲಿಪ್​​ ಮಾರಿಸ್​​​, ಇಂಪೀರಿಯಲ್​​ ಕಾಲೇಜ್​​ ಲಂಡನ್​​​, ಸಿಂಗಪುರ ಆರ್ಥಿಕ ಅಭಿವೃದ್ಧಿ ಮಂಡಳಿ ಜೊತೆಗೆ ರಾಜ್ಯದ ನಿಯೋಗ ಮಾತುಕತೆ ನಡೆಸಲಿದೆ ಎಂದು ಟ್ವೀಟ್ ಮೂಲಕ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ​​​

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

35 ಹಾಡುಗಳ ಚಿತ್ರದೊಂದಿಗೆ ಬಂದ ರವಿಚಂದ್ರನ್; ಬಿಗ್ ಬಾಸ್ ವೇದಿಕೆ ಮೇಲೆ ಘೋಷಣೆ – Kannada News | Ravichandran’s ‘I Am God’: AI Powered Film with 35 Songs Set to Amaze Kannada Audience

ರವಿಚಂದ್ರನ್ ಸಿನಿಮಾಗಳಲ್ಲಿ ಹಾಡುಗಳೇ ಹೈಲೈಟ್ ಆಗಿರುತ್ತವೆ. ಅವರು ನೀಡಿದ ಹಲವು ಸಿನಿಮಾಗಳಲ್ಲಿ ಇದು ಕಾಣಿಸಿದೆ. ಈಗ ಅವರು 35 ಹಾಡುಗಳು ಇರು ಸಿನಿಮಾ ಮೂಲಕ ಬರಲು ರೆಡಿ ಆಗಿದ್ದಾರೆ. ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

‘ಐ ಆ್ಯಮ್ ಗಾಡ್’ ಎಂಬುದು ಚಿತ್ರದ ಟೈಟಲ್. ಇದು ಸಂಪೂರ್ಣವಾಗಿ ಎಐ ತಂತ್ರಜ್ಞಾನದಿಂದ ಮಾಡಲ್ಪಟ್ಟ ಸಿನಿಮಾ ಅನ್ನೋದು ವಿಶೇಷ. ಈ ಬಗ್ಗೆ ರವಿಚಂದ್ರನ್ ಅವರು ಮಾಹಿತಿ ನೀಡಿದ್ದಾರೆ. ಒಬ್ಬರನ್ನು ಎಲಿಮಿನೇಟ್ ಮಾಡಲು ರವಿಚಂದ್ರನ್ ಅವರು ಬಿಗ್ ಬಾಸ್ ವೇದಿಕೆಗೆ ಬಂದಿದ್ದರು. ಈ ವೇಳೆ ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು.

‘ಎರಡೂವರೆ ವರ್ಷದಿಂದ ಒಂದು ಸಿನಿಮಾ ಮಾಡ್ತಾ ಇದೀನಿ.400 ದಿನ ಶೂಟ್ ಮಾಡಿದ್ದೇನೆ. ಈ ಸಿನಿಮಾನ ಒಬ್ಬನೇ ಮಾಡಿದ್ದೇನೆ. ಎಐ ಇದೆ. ಕ್ಯಾಮೆರಾಮೆನ್ ಬಿಟ್ರೆ ಉಳಿದೆಲ್ಲವನ್ನೂ ನಾನೋಬ್ನೇ ಮಾಡಿದ್ದು. ಐ ಆ್ಯಮ್ ಗಾಡ್ ಚಿತ್ರದ ಹೆಸರು. ಇದಕ್ಕೆ ಮ್ಯೂಸಿಕ್ ಡೈರೆಕ್ಟರ್ ಕೂಡ ಇಲ್ಲ’ ಎಂದರು ರವಿಚಂದ್ರನ್.

ಇದನ್ನೂ ಓದಿ: ರವಿಚಂದ್ರನ್ ಎದುರೇ ರಾಜಾರೋಷವಾಗಿ ಸುಳ್ಳು ಹೇಳಿದ ಗಿಲ್ಲಿ; ಕಂಡು ಹಿಡಿದ ಕ್ರೇಜಿಸ್ಟಾರ್

‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 30-35 ಹಾಡು ಬರುತ್ತೆ. ನನ್ನ ಬರ್ತ್​​​ಡೇಗೆ (ಮೇ 30) ಸಿನಿಮಾ ತರಬೇಕು ಎಂಬ ಉದ್ದೇಶ ಇದೆ. ನಾನೇ ಎಲ್ಲವನ್ನೂ ಮಾಡಬೇಕು. ಹೀಗಾಗಿ ಟೈಮ್ ಆಗ್ತಾ ಇದೆ’ ಎಂದು ರವಿಚಂದ್ರನ್ ಮಾಹಿತಿ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಿಲ್ಲಿಯ ನೆರಳಿನಲ್ಲಿ ಅಲ್ಲ ಸ್ವಂತ ಬಲದಲ್ಲಿ ಫಿನಾಲೆಗೆ ಬಂದಿದ್ದ ಕಾವ್ಯಾ ಈಗ ಹೊರಗೆ – Kannada News | Bigg Boss Kannada 12: Kavya evicted as 3rd runner up

ಬಿಗ್​​ಬಾಸ್ (Bigg Boss) ಕನ್ನಡ ಫಿನಾಲೆ ಚಾಲ್ತಿಯಲ್ಲಿದೆ. ಸಮಯ ಕಳೆದಂತೆ ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಹೆಚ್ಚಾಗುತ್ತಿದೆ. ಗಿಲ್ಲಿ, ಅಶ್ವಿನಿ, ಧನುಶ್, ರಘು, ರಕ್ಷಿತಾ, ಕಾವ್ಯಾ ಆರು ಮಂದಿ ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈಗಾಗಲೇ ಧನುಶ್ ಮತ್ತು ರಘು ಅವರು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ಕಾವ್ಯಾ ಅವರು ಸಹ ಬಿಗ್​​ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಕಾವ್ಯಾ ಅವರು ಮೂರನೇ ರನ್ನರ್ ಅಪ್ ಆಗಿ ಹೊರಗೆ ಬಂದಿದ್ದಾರೆ.

ಗಿಲ್ಲಿ ಜೊತೆಗೆ ಜೋಡಿಯಾಗಿ ಬಿಗ್​​ಬಾಸ್ ಮನೆ ಒಳಗೆ ಹೋದ ಕಾವ್ಯಾ ಮೊದಲ ದಿನದಂದ ಕೊನೆಯ ವಾರದ ವರೆಗೆ ಗಿಲ್ಲಿ ಜೊತೆ ಒಳ್ಳೆಯ ಗೆಳೆತನ ಕಾಯ್ದುಕೊಂಡಿದ್ದರು. ಗಿಲ್ಲಿ ಮತ್ತು ಕಾವ್ಯಾ ಅವರ ಗೆಳೆತನ ರಾಜ್ಯದಾದ್ಯಂತ ಜನಪ್ರಿಯ ಆಗಿಬಿಟ್ಟಿದೆ. ಅವರಿಬ್ಬರ ತಮಾಷೆ, ಪರಸ್ಪರ ಕಾಲೆಳೆಯುವ ರೀತಿ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ಇದೇ ಕೆಲವೊಮ್ಮೆ ಕಾವ್ಯಾಗೆ ನೆಗೆಟಿವ್ ಆಗಿದ್ದೂ ಉಂಟು. ಗಿಲ್ಲಿ ಇಂದ ಮಾತ್ರವೇ ಕಾವ್ಯಾಗೆ ಹೆಸರು, ಗಿಲ್ಲಿ ಇಲ್ಲದ ಹೊರತು ಕಾವ್ಯಾ ಏನೂ ಅಲ್ಲ ಎಂಬ ಅಭಿಪ್ರಾಯ ಮನೆಯಲ್ಲಿ ಉಂಟಾಗಿತ್ತು.

ಇದನ್ನೂ ಓದಿ:ಬಲಿಷ್ಠ ದೇಹ, ಮಗುವಿನ ಮನಸ್ಸು, ಶಿಸ್ತಿನ ಆಟ: ಆದರೆ ಅಷ್ಟೇ ಸಾಕಾಗಲಿಲ್ಲ ಗೆಲ್ಲಲು

ಆದರೆ ಕಾವ್ಯಾ ತಮ್ಮ ಸ್ವಂತ ಶಕ್ತಿಯ ಪ್ರದರ್ಶಿಸುತ್ತಲೇ ಬಂದರು. ಅವಕಾಶ ಸಿಕ್ಕಾಗೆಲ್ಲ ಟಾಸ್ಕ್​​ಗಳಲ್ಲಿ ಒಳ್ಳೆಯ ಪ್ರದರ್ಶನವನ್ನು ಸಹ ನೀಡಿದರು. ಜೊತೆಗೆ ಗಿಲ್ಲಿಯ ಜೊತೆಗೆ ಸ್ನೇಹ ಕಾಯ್ದುಕೊಳ್ಳುವ ಜೊತೆಗೆ ಗಿಲ್ಲಿಯ ಆಟವನ್ನು, ವ್ಯಕ್ತಿತ್ವವನ್ನೂ ಸಹ ತಿದ್ದುವ ಕಾರ್ಯ ಮಾಡಿದರು. ಕಾವ್ಯಾ ಮನೆಗೆ ಹೋಗುತ್ತಾರೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿ ಎಷ್ಟೋ ವಾರಗಳ ಬಳಿಕ ಇದೀಗ ಕಾವ್ಯಾ ಫಿನಾಲೆ ವರೆಗೆ ಬಂದಿದ್ದು ಮಾತ್ರವೇ ಅಲ್ಲದೆ, ಮೂರನೇ ರನ್ನರ್ ಅಪ್ ಸಹ ಆಗಿದ್ದಾರೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಬಿಗ್​​ಬಾಸ್ ಮನೆಗೆ ಹೋಗಿ ನಾಲ್ಕನೇ ಸ್ಪರ್ಧಿಯನ್ನು ಕರೆದುಕೊಂಡು ಬರಲು ಬಂದಿದ್ದರು. ಸೂಟ್​ಕೇಸ್ ಜೊತೆಗೆ ಬಂದಿದ್ದ ಅವರು ಐದು ಲಕ್ಷ ರೂಪಾಯಿ ಹಣದ ಆಸೆಯನ್ನು ಸಹ ತೋರಿಸಿದರು. ಆದರೆ ರಕ್ಷಿತಾ ಆಗಲಿ, ಕಾವ್ಯಾ ಆಗಲಿ ಯಾರೂ ಸಹ ಹಣ ಪಡೆದುಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಆಕ್ಟಿವಿಟಿ ರೂಂನಲ್ಲಿ ನಡೆದ ಆಕ್ಟಿವಿಟಿಯಲ್ಲಿ ಕಾವ್ಯಾ ಅವರು ಎವಿಕ್ಷನ್ ಆದರು. ಕಾವ್ಯಾ ಅವರಿಗೆ ಇಂಡಸ್ 555 ಸಂಸ್ಥೆಯಿಂದ ಹತ್ತು ಲಕ್ಷ ರೂಪಾಯಿ ನಗದು ಬಹುಮಾನ ಸಹ ನೀಡಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಕೊಹ್ಲಿ ಹೋರಾಟ ವ್ಯರ್ಥ; ಏಕದಿನ ಸರಣಿ ಸೋತ ಟೀಂ ಇಂಡಿಯಾ – Kannada News | NZ Makes History: Beats India 2 1 in ODI Series at Indore! First Win in India

ಇಂದೋರ್‌ನ ಹೊಳ್ಕರ್ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 41 ರನ್​ಗಳಿಂದ ಸೋಲಿಸಿದ ನ್ಯೂಜಿಲೆಂಡ್ ತಂಡ 2-1 ಅಂತರದಿಂದ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಭಾರತದ ನೆಲದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿರುವ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಇದೀಗ ಮೊದಲ ಬಾರಿಗೆ ಭಾರತೀಯ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದಿದೆ. ಡ್ಯಾರಿಲ್ ಮಿಚೆಲ್ ಅವರ ಸತತ ಎರಡನೇ ಶತಕ ಮತ್ತು ಗ್ಲೆನ್ ಫಿಲಿಪ್ಸ್ ಅವರ ಮೊದಲ ಶತಕದ ಸಹಾಯದಿಂದ ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್ 337 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪ್ರಮುಖ ಬ್ಯಾಟ್ಸ್‌ಮನ್​ಗಳ ವೈಫಲ್ಯದಿಂದಾಗಿ ಸೋಲಿಗೆ ಕೊರಳೊಡ್ಡಿತು. ತಂಡದ ಪರ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನೀಡಿದರಾದರೂ, ಅವರಿಗೆ ಪ್ರಮುಖ ಬ್ಯಾಟ್ಸ್‌ಮನ್​ಗಳು ಸಾಥ್ ನೀಡಲಿಲ್ಲ. ಹೀಗಾಗಿ ತಂಡಕ್ಕೆ ಸರಣಿ ಸೋಲಿನ ಆಘಾತ ಎದುರಾಯಿತು.

Published On – 9:42 pm, Sun, 18 January 26

Source link

ದಾವಣಗೆರೆ ಕಿರು ಮೃಗಾಲಯದಲ್ಲಿ 4 ಚುಕ್ಕೆ ಜಿಂಕೆಗಳು ಸಾವು: ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ – Kannada News | Davangere Mini Zoo: Four Spotted Deer Die; Public Entry Restricted

ದಾವಣಗೆರೆ, ಜನವರಿ 18: ದಾವಣಗೆರೆಯ ಆನಗೋಡ ಬಳಿ ಇರುವ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಸಾವನ್ನಪ್ಪಿವೆ. ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಜಿಂಕೆಗಳು ಸಾವನ್ನಪ್ಪಿರುವಂತಹ ಶಂಕೆ ವ್ಯಕ್ತವಾಗಿದೆ. ಸದ್ಯ ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ‌ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ.

Source link