Headlines

ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್! ಸಿಬ್ಬಂದಿಯ ಮೇಲೇ ಹಲ್ಲೆ – Kannada News | Bengaluru: Parappana Agrahara Jailer Assaulted Despite Strict Measures

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್! ಬೆಂಗಳೂರು, ಜನವರಿ 18: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಪುಂಡಾಟಕ್ಕೆ ಮಿತಿಯಿಲ್ಲದಂತಾಗಿದೆ. ಇತ್ತೀಚೆಗಷ್ಟೇ  ಕೈದಿಗಳ ಐಷಾರಾಇ ಜೀವನದ ವೀಡಿಯೋಗಳು ವೈರಲ್ ಆಗಿದ್ದವು.  ಅದಲ್ಲದೇ  ಕೈದಿಗಳು ಜೈಲಿನಲ್ಲೇ ಮದ್ಯ ತಯಾರಿಸಿ, ಕುಡಿದಿದ್ದಕ್ಕೆ ಸಾಕ್ಷಿಯೂ ದೊರೆತಿತ್ತು.  ಈ ಹಿನ್ನೆಲೆಯಲ್ಲಿ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅದಲ್ಲದೆ ಹೊಸ ಡಿಜಿಪಿಯಾಗಿ ಅಲೋಕ್ ಕುಮಾರ್ (Alok kumar) ನೇಮಕಗೊಂಡ ಮೇಲೆ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿತ್ತು. ಹೀಗಿದ್ದರೂ ಕ್ಷುಲ್ಲಕ ಕಾರಣಕ್ಕೆ ಅಪರಾಧಿಗಳು ಜೈಲರ್…

Read More

ಜಿ.ಟಿ. ದೇವೇಗೌಡರಿಗೆ ಭರ್ಜರಿ ಶಾಕ್​​ ಕೊಡುತ್ತಾ ಜೆಡಿಎಸ್​​? ವರಿಷ್ಠರ ನಡೆಯೇನು? – Kannada News | GT Devegowda Shocked as JDS Prepares SR Mahesh for Chamundeshwari Election

ಜಿ.ಟಿ. ದೇವೇಗೌಡ ಮೈಸೂರು, ಜನವರಿ 18: ಜೆಡಿಎಸ್​​​ನಿಂದ ಈಗಾಗಲೇ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ. ದೇವೇಗೌಡಗೆ ಮತ್ತಷ್ಟು ಶಾಕ್​​ ಕೊಡಲು ಜಾತ್ಯತೀತ ಜನತಾದಳ ನಾಯಕರು ಮುಂದಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ JDSನಿಂದ ಸಾ.ರಾ.ಮಹೇಶ್ ಸ್ಪರ್ಧಿಸ್ತಾರೆ ಎಂದು ಮೈಸೂರಿನಲ್ಲಿ ಪರಿಷತ್​ನ ಜೆಡಿಎಸ್​ ಸದಸ್ಯ ಮಂಜೇಗೌಡ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಹೆಚ್​​.ಡಿ. ದೇವೇಗೌಡರ ನೇತೃತ್ವದಲ್ಲಿ ಸಭೆ ಇದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಾ.ರಾ.ಮಹೇಶ್​ ಒಪ್ಪಿದ್ದಾರೆ ಎಂದವರು ತಿಳಿಸಿದ್ದಾರೆ. ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ…

Read More

Video: ಆಂಜನೇಯನ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕಿದ್ದ ನಾಯಿ ಈಗ ದೇವರು – Kannada News | Viral Dog at UP Temple Draws Devotees, Sparks Reincarnation Belief

ಲಕ್ನೋ, ಜನವರಿ 18: ಆಂಜನೇಯನ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕಿದ್ದ ನಾಯಿ ಈಗ ಊರಿಗೇ ದೇವರು. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನಾಯಿಯೊಂದು ಆಂಜನೇಯ ವಿಗ್ರಹದ ಸುತ್ತ 20ಕ್ಕೂ ಹೆಚ್ಚು ಬಾರಿ ಪ್ರದಕ್ಷಿಣೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ನಾಯಿಯೇ ದೇವರಾಗಿದೆ. ಭಕ್ತರು ದೇವರ ಜತೆ ನಾಯಿಯನ್ನೂ ಪೂಜಿಸಲು ಶುರು ಮಾಡಿದ್ದಾರೆ ನಗೀನಾ ಪ್ರದೇಶದಲ್ಲಿರುವ ನಂದಪುರ ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ವಿಗ್ರಹದ ಸುತ್ತ ನಾಯಿಯ ಪ್ರದಕ್ಷಿಣೆ…

Read More

ಎ.ಆರ್. ರೆಹಮಾನ್ ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿ: ಕಂಗನಾ ಆರೋಪ – Kannada News | Kangana Ranaut says AR Rahman a hateful and prejudiced person

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಅವರು ‘ಛಾವ’ ಸಿನಿಮಾ ಬಗ್ಗೆ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ಆ ಸಿನಿಮಾಗೆ ಎ.ಆರ್. ರೆಹಮಾನ್ ಅವರೇ ಸಂಗೀತ ನೀಡಿದ್ದಾರೆ. ಆದರೂ ಕೂಡ ಅವರಿಗೆ ಈ ಸಿನಿಮಾ ಬಗ್ಗೆ ತಕರಾರು ಇದೆ. ಆ ಚಿತ್ರವು ಜನರ ಒಗ್ಗಟ್ಟನ್ನು ಒಡೆಯುತ್ತದೆ ಎಂಬುದು ಅವರ ಅಭಿಪ್ರಾಯ. ಈ ರೀತಿಯ ಹೇಳಿಕೆಗಳನ್ನು ನೀಡಿದ ಬಳಿಕ ಎ.ಆರ್. ರೆಹಮಾನ್ ಅವರನ್ನು ಕಂಗನಾ ರಣಾವತ್ (Kangana Ranaut) ಟೀಕಿಸಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೋರಿ…

Read More

ಶತಕಗಳ ಮೇಲೆ ಶತಕ… ಬಿಗ್ ಬ್ಯಾಷ್​ನಲ್ಲಿ ಹೊಸ ದಾಖಲೆ ನಿರ್ಮಾಣ

 BBL 2026: ಬಿಗ್ ಬ್ಯಾಷ್​​ ಲೀಗ್​​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ಬ್ಯಾಟರ್​​​ಗಳ ಸಿಡಿಲಬ್ಬರದೊಂದಿಗೆ. ಈ ಸಿಡಿಲಬ್ಬರದೊಂದಿಗೆ ಬಿಗ್ ಬ್ಯಾಷ್ ಲೀಗ್ ಸೀಸನ್​​ವೊಂದರಲ್ಲಿ ಅತ್ಯಧಿಕ ಸೆಂಚುರಿಗಳು ಮೂಡಿಬಂದಿವೆ. ಅಂದರೆ ಬಿಗ್ ಬ್ಯಾಷ್ ಲೀಗ್​​ ಇತಿಹಾಸದಲ್ಲೇ ಈ ಬಾರಿಯ ಆವೃತ್ತಿಯಲ್ಲಿ ಅತೀ ಹೆಚ್ಚು ಶತಕಗಳು ದಾಖಲಾಗಿವೆ. BBL 2025-26 ರಲ್ಲಿ ಈವರೆಗೆ 8 ಬ್ಯಾಟರ್​​​ಗಳು ಬರೋಬ್ಬರಿ 9 ಸೆಂಚುರಿ ಸಿಡಿಸಿದ್ದಾರೆ. ಇದಕ್ಕೂ ಮುನ್ನ ಬಿಬಿಎಲ್​​ನಲ್ಲಿ ಆರಕ್ಕಿಂತ ಅಧಿಕ ಶತಕ ಮೂಡಿಬಂದಿರಲಿಲ್ಲ ಎಂಬುದು ವಿಶೇಷ. 2022-23 ರ ಸೀಸನ್​​​ನಲ್ಲಿ…

Read More

ಬಿಜೆಪಿ ಸಂಸದ ಮನೋಜ್ ತಿವಾರಿ ಮನೆಯಲ್ಲಿ ಕಳ್ಳತನ – Kannada News | BJP MP Manoj Tiwari’s Mumbai Home Theft, former worker Arrested, Rs 5.4 Lakh Stolen

ಮುಂಬೈ, ಜನವರಿ 18: ಬಿಜೆಪಿ ಸಂಸದ ಮನೋಜ್ ತಿವಾರಿ(Manoj Tiwari) ಮನೆಯಲ್ಲಿ ಕಳ್ಳತನ(Theft) ನಡೆದಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ದೆಹಲಿಯ ಈಶಾನ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಪ್ರಸಿದ್ಧ ಗಾಯಕ ಮನೋಜ್ ತಿವಾರಿ ಅವರ ಮುಂಬೈ ನಿವಾಸದಲ್ಲಿ ಕಳ್ಳತನ ನಡೆದಿದೆ. ಅಂಧೇರಿ ಪಶ್ಚಿಮದ ಶಾಸ್ತ್ರಿ ನಗರ ಪ್ರದೇಶದಲ್ಲಿರುವ ಸುಂದರ್‌ಬನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಕಳ್ಳತನದಲ್ಲಿ ಕಳ್ಳರು 5.40 ಲಕ್ಷ ರೂ. ದೋಚಿದ್ದಾರೆ ಎಂಬುದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಅವರ ಮಾಜಿ ಕೆಲಸಗಾರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ….

Read More

Optical Illusion: ಜೀಬ್ರಾಗಳ ನಡುವೆ ಅಡಗಿರುವ ಸಿಂಹವನ್ನು ನೀವು ಗುರುತಿಸಬಲ್ಲಿರಾ – Kannada News | Optical Illusion: If you are a genius, spot the lion hiding among the zebras

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಈ ಒಗಟಿನ ಚಿತ್ರಗಳು ನೋಡಲು ಸುಲಭದಾಯಕವಾಗಿ ಕಂಡರೂ ಅಷ್ಟೇ ಕಷ್ಟಕರವಾಗಿರುತ್ತದೆ. ಇದೀಗ ನಿಮ್ಮ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸುವ ಸಮಯ. ಜೀಬ್ರಾಗಳ ನಡುವೆ ಅಡಗಿ ಕುಳಿತಿರುವ ಸಿಂಹವನ್ನು 8 ಸೆಕೆಂಡುಗಳಲ್ಲಿ ಗುರುತಿಸುವ ಸವಾಲು ನೀಡಲಾಗಿದೆ. ಈ ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು? ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡುವುದು…

Read More

ಮನೆಗೆ ಬೀಗ ಜಡಿದ ಖಾಸಗಿ ಫೈನಾನ್ಸ್​: ವಾರದಿಂದ ಬೀದಿ ಬದಿಯೇ ವೃದ್ಧ ದಂಪತಿ ವಾಸ! – Kannada News | Elderly Couple Left on the Street After Home Locked by Private Finance in Hassan

ಹಾಸನ, ಜನವರಿ 18: ರಾಜ್ಯದಲ್ಲಿ ಖಾಸಗಿ ಫೈನಾನ್ಸ್​​ಗಳ ಹಾವಳಿ ಮಿತಿ ಮೀರುತ್ತಿದ್ದು, ಮನೆಗೆ ಬೀಗ ಜಡಿದ ಪರಿಣಾಮ ವೃದ್ಧ ದಂಪತಿ ಬೀದಿಗೆ ಬಂದ ಅಮಾನವೀಯ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಸಾಲ ಕಟ್ಟಿಲ್ಲ ಎಂದು ವೃದ್ಧ ದಂಪತಿ ಸಣ್ಣಯ್ಯ(80), ಜಯಮ್ಮ(75)ರನ್ನ ಫೈನಾನ್ಸ್​​ ಸಿಬಂದಿ ಹೊರಹಾಕಿದ್ದು, ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ವಾಸಮಾಡಬೇಕಾದ ಸ್ಥಿತಿ ಉದ್ಭವಿಸಿದೆ. ಕೋರ್ಟ್ ಆದೇಶ ಎಂದು ಮನೆ ಹಾಗೂ ಕೊಟ್ಟಿಗೆಗೂ ಬೀಗ ಹಾಕಿರುವ ಆರೋಪ ಕೇಳಿಬಂದಿದೆ. 2023ರಲ್ಲಿ ಮಗನ ಕ್ಯಾನ್ಸರ್…

Read More

Mouni Amavasya: ಇಂದು ಮೌನಿ ಅಮಾವಾಸ್ಯೆ; ಈ ದಿನದ ಮಹತ್ವ, ಪೂಜಾ ವಿಧಾನ ಹಾಗೂ ಶುಭ ಫಲಗಳ ಬಗ್ಗೆ ತಿಳಿಯಿರಿ – Kannada News | Mouni Amavasya: Significance, Rituals, and Benefits for Ancestral Blessings

ವರ್ಷದಲ್ಲಿ ಬರುವ ಅಮಾವಾಸ್ಯೆಗಳಲ್ಲಿ ಕೆಲವು ವಿಶೇಷ ಪ್ರಾಮುಖ್ಯತೆ ಪಡೆದಿರುತ್ತವೆ. ಅಂತಹ ಒಂದು ಅಮಾವಾಸ್ಯೆಯೇ ಮೌನಿ ಅಮಾವಾಸ್ಯೆ. ಇದನ್ನು ಮಾಘ ಮಾಸದಲ್ಲಿ ಬರುವುದರಿಂದ ಮಾಘ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ಅಮಾವಾಸ್ಯೆಯು ಭಾನುವಾರ ಬಂದರೆ ಅದರ ಪ್ರಾಶಸ್ತ್ಯ ಮತ್ತಷ್ಟು ಹೆಚ್ಚುತ್ತದೆ. ಇಂದು(ಜ.18) ರ ಭಾನುವಾರದಂದು ಬಂದಿರುವುದರಿಂದ ಇದು ಇನ್ನಷ್ಟು ವಿಶೇಷವಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಮೌನಿ ಅಮಾವಾಸ್ಯೆಯನ್ನು…

Read More

ವಿಶ್ವಕಪ್ ಕ್ಯಾಚ್ ನೆನಪಿಸಿದ ವೈಭವ್ ಸೂರ್ಯವಂಶಿ

2024 ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಅನ್ನು ಯಾರು ತಾನೆ ಮರೆಯಲು ಸಾಧ್ಯ. ಅಂತಹದ್ದೇ ಕ್ಯಾಚ್ ಹಿಡಿಯುವ ಮೂಲಕ ವೈಭವ್ ಸೂರ್ಯವಂಶಿ ಎಲ್ಲರ ಗಮನ ಸೆಳೆದಿದ್ದಾರೆ. ಝಿಂಬಾಬ್ವೆಯಲ್ಲಿ ನಡೆದ ಅಂಡರ್-19 ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಭಾರತ ಅಂಡರ್-19 ತಂಡವು 48.5 ಓವರ್​ಗಳಲ್ಲಿ 238 ರನ್​ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಬ್ಯಾಟಿಂಗ್​ಗೆ ಮಳೆ ಅಡ್ಡಿಪಡಿಸಿತು. ಆ ಬಳಿಕ…

Read More