ಕೊನೆಗೂ ನಿಜವಾಯ್ತಾ ನಂಬಿಕೆ?: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್ ಹಾವು ಪ್ರತ್ಯಕ್ಷ! – Kannada News | Snake Sighted in Lakkundi Village on the Third Day of Excavation
ಲಕ್ಕುಂಡಿಯಲ್ಲಿ ಉತ್ಖನನImage Credit source: Google ಗದಗ, ಜನವರಿ 18: ಮನೆಗಾಗಿ ಅಡಿಪಾಯ ಮಾಡುವ ವೇಳೆ ಗದಗ ತಾಲೂಕಿನ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ವಿಚಾರ ದೇಶಾದ್ಯಂತ ಸುದ್ದಿಯಾಗಿತ್ತು. ಸಿಕ್ಕ ಆಭರಣಗಳನ್ನು ಕುಟುಂಬ ಸರ್ಕಾರಕ್ಕೆ ಹಸ್ತಾಂತರಿಸಿದ ಬಳಿಕ ಹತ್ತಾರು ಬೆಳವಣಿಗೆಗಳು ನಡೆದು ಗ್ರಾಮದಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಲಾಗಿತ್ತು. ಅದರ ಭಾಗವಾಗಿ ಇಂದು ಕೋಟೆ ವೀರಭದ್ರೇಶ್ವರ ದೇವಸ್ಥಾನ ಬಳಿಯ ಆವರಣದಲ್ಲಿ ಮೂರನೇ ದಿನದ ಉತ್ಖನನದ ವೇಳೆ ಕಾರ್ಮಿಕರು ಬೆಚ್ಚಿಬೀಳುವಂತೆ ಘಟನೆಯೊಂದು ನಡೆದಿದೆ. ನಿಧಿಯನ್ನು ಸರ್ಪ ಕಾಯುತ್ತದೆ ಎಂಬ ನಂಬಿಕೆಗೆ ಕಾಕತಾಳೀಯವೆಂಬಂತೆ…