Category Archives: Blog

Your blog category

ವಿಶ್ವಕಪ್ ಕ್ಯಾಚ್ ನೆನಪಿಸಿದ ವೈಭವ್ ಸೂರ್ಯವಂಶಿ

2024 ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಅನ್ನು ಯಾರು ತಾನೆ ಮರೆಯಲು ಸಾಧ್ಯ. ಅಂತಹದ್ದೇ ಕ್ಯಾಚ್ ಹಿಡಿಯುವ ಮೂಲಕ ವೈಭವ್ ಸೂರ್ಯವಂಶಿ ಎಲ್ಲರ ಗಮನ ಸೆಳೆದಿದ್ದಾರೆ. ಝಿಂಬಾಬ್ವೆಯಲ್ಲಿ ನಡೆದ ಅಂಡರ್-19 ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಿದ್ದವು.

ಮೊದಲು ಬ್ಯಾಟ್ ಮಾಡಿದ ಭಾರತ ಅಂಡರ್-19 ತಂಡವು 48.5 ಓವರ್​ಗಳಲ್ಲಿ 238 ರನ್​ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ಬ್ಯಾಟಿಂಗ್​ಗೆ ಮಳೆ ಅಡ್ಡಿಪಡಿಸಿತು.

ಆ ಬಳಿಕ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶ್ ತಂಡಕ್ಕೆ 29 ಓವರ್​ಗಳಲ್ಲಿ 165 ರನ್​ಗಳ ಗುರಿ ನೀಡಲಾಯಿತು. ಈ ಗುರಿ ಬೆನ್ನತ್ತಿದ ಬಾಂಗ್ಲಾ ಪರ ಸಮ್ಯುನ್ ಬಸೀರ್ ಲಾಂಗ್ ಆಫ್​ನತ್ತ ಸಿಕ್ಸ್ ಬಾರಿಸಲು ಯತ್ನಿಸಿದ್ದರು.

ಈ ವೇಳೆ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ವೈಭವ್ ಸೂರ್ಯವಂಶಿ ಅತ್ಯುತ್ತಮವಾಗಿ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಇದೀಗ ಈ ಕ್ಯಾಚ್ ವಿಡಿಯೋ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ 165 ರನ್​ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 28.3 ಓವರ್​ಗಳಲ್ಲಿ 146 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 18 ರನ್​ಗಳ ಭರ್ಜರಿ ಜಯ ಸಾಧಿಸಿದೆ.

 

Source link

ಕೊನೆಗೂ ನಿಜವಾಯ್ತಾ ನಂಬಿಕೆ?: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್​​ ಹಾವು ಪ್ರತ್ಯಕ್ಷ! – Kannada News | Snake Sighted in Lakkundi Village on the Third Day of Excavation

ಲಕ್ಕುಂಡಿಯಲ್ಲಿ ಉತ್ಖನನImage Credit source: Google

ಗದಗ, ಜನವರಿ 18: ಮನೆಗಾಗಿ ಅಡಿಪಾಯ ಮಾಡುವ ವೇಳೆ ಗದಗ ತಾಲೂಕಿನ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ವಿಚಾರ ದೇಶಾದ್ಯಂತ ಸುದ್ದಿಯಾಗಿತ್ತು. ಸಿಕ್ಕ ಆಭರಣಗಳನ್ನು ಕುಟುಂಬ ಸರ್ಕಾರಕ್ಕೆ ಹಸ್ತಾಂತರಿಸಿದ ಬಳಿಕ ಹತ್ತಾರು ಬೆಳವಣಿಗೆಗಳು ನಡೆದು ಗ್ರಾಮದಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಲಾಗಿತ್ತು. ಅದರ ಭಾಗವಾಗಿ ಇಂದು ಕೋಟೆ ವೀರಭದ್ರೇಶ್ವರ ದೇವಸ್ಥಾನ ಬಳಿಯ ಆವರಣದಲ್ಲಿ ಮೂರನೇ ದಿನದ ಉತ್ಖನನದ ವೇಳೆ ಕಾರ್ಮಿಕರು ಬೆಚ್ಚಿಬೀಳುವಂತೆ ಘಟನೆಯೊಂದು ನಡೆದಿದೆ. ನಿಧಿಯನ್ನು ಸರ್ಪ ಕಾಯುತ್ತದೆ ಎಂಬ ನಂಬಿಕೆಗೆ ಕಾಕತಾಳೀಯವೆಂಬಂತೆ ಹಾವೊಂದು ಸ್ಥಳದಲ್ಲಿ ಪ್ರತ್ಯಕ್ಷವಾಗಿರೋದು ಕೆಲಸಗಾರರನ್ನು ಭೀತಿಗೊಳಿಸಿದೆ.

ಗ್ರಾಮದಲ್ಲಿ ಮಳೆಗಾಲದಲ್ಲಿ ಹಿಂದೆಲ್ಲ ಮಣ್ಣು ಅಗೆಯುವಾಗ ಚಿನ್ನದ ತುಂಡುಗಳು ಕಾಣಿಸುತ್ತಿದ್ದವು. ಇಲ್ಲಿ ಎಲ್ಲೇ ಅಗೆದರೂ ಬಂಗಾರ ಸಿಗುತ್ತಿತ್ತು. ಆದರೆ, ಈ ನಿಧಿ ಆಸೆಯ ಹಿಂದೆ ಹೋದವರು ರಕ್ತಕಾರಿ ಸತ್ತಿದ್ದಾರೆ ಎಂದು ಗ್ರಾಮಸ್ಥರು ಈ ಹಿಂದೆ ಹೇಳಿದ್ದರು. ನಿಧಿಯನ್ನು ಸರ್ಪ ಕಾಯುತ್ತೆ. ಹೀಗಾಗಿ ಅದರ ತಂಟೆಗೆ ಯಾರೂ ಹೋಗಬಾರದು ಎಂಬ ಅಭಿಪ್ರಾಯಗಳು ಕೆಳಿಬಂದಿದ್ದವು. ಈ ನಡುವೆ ಈಗ ಉತ್ಖನನದ ವೇಳೆ ಹಾವು ಪ್ರತ್ಯಕ್ಷವಾಗಿರೋದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ಹಾವು ನೋಡಿ ಜೆಸಿಬಿ ಚಾಲಕ ಗಾಬರಿ ಆಗಿದ್ದಾನೆ. ಹೀಗಾಗಿ ಲಕ್ಕುಂಡಿ ಗ್ರಾಮಕ್ಕೆ ಏನು ಕಂಟಕ ಕಾದಿದೆಯೋ ಎನ್ನುವ ಹೆದರಿಕೆ ಶುರುವಾಗಿರೋದಾಗಿ ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಪ್ರದೇಶಕ್ಕೆ ಲಾಕ್! ಚಿತ್ರೀಕರಣವನ್ನು ಸಂಪೂರ್ಣ ನಿರ್ಬಂಧಿಸಿ ಡಿಸಿ ಆದೇಶ

‘ಎಲ್ಲವೂ ಬರೀ ನಂಬಿಕೆ’

ಇನ್ನು ನಿಧಿಯನ್ನು ಸರ್ಪ, ಕಾಡೆಮ್ಮೆ ಕಾಯುತ್ತದೆ ಎನ್ನುವುದು ಬರೀ ನಂಬಿಕೆ. ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ. ಉತ್ಖನನ ಮಾಡುವ ಅಧಿಕಾರಿಗಳಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಟಿವಿ9ಗೆ ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ತಿಳಿಸಿದ್ದಾರೆ. ರಕ್ತ ಕಾರಿಕೊಂಡು ಸಾಯುತ್ತಾರೆ, ಕೆಟ್ಟದಾಗುತ್ತದೆ ಇದೆಲ್ಲವೂ ನಂಬಿಕೆ ಅಷ್ಟೇ. ಕೇರಳದ ಅನಂತ ಪದ್ಮನಾಭ ದೇಗುಲದ ನಿಧಿ ವಿಚಾರದಲ್ಲೂ ದಿಗ್ಬಂಧನ ಎಂದು ಏನೂ ಇಲ್ಲ. ಬಾಕಿ ಇರುವ ಬಾಗಿಲು ತೆಗೆಯುವ ವಿಧಾನ ಗೊತ್ತಾಗಿಲ್ಲ ಅಷ್ಟೇ. ಎಲ್ಲವೂ ಕೇಳಿರುವುದು, ನಾವು ಯಾರೂ ನೋಡಿಲ್ಲ. ಹಿಂದೆ ನಿಧಿ ಹಾಗೂ ಟಂಕ ಶಾಲೆಯನ್ನು ಊರಿನ ಹೊರಗೆ ಇಡುತ್ತಿದ್ದರು. ರಾಜ್ಯದ ಮೇಲೆ ದಾಳಿಯಾದರೂ ಅವುಗಳ ರಕ್ಷಣೆಗೆ ಈ ಕ್ರಮ ಅನುಸರಿಸಲಾಗುತ್ತಿತ್ತು ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಗಿಲ್ಲಿ ನಟ ಏನ್ ಮಾಡಿದ್ದಾನೆ? ಅಶ್ವಿನಿ ಗೌಡ ಪ್ರಶ್ನೆಗೆ ಉತ್ತರ ಕೊಟ್ಟ ಪಳಾರ್ ಫ್ಯಾನ್ಸ್ – Kannada News | Bigg Boss Kannada Season 12: Gilli Nata fans from Mysore gives counter reaction to Ashwini Gowda

ಈವರೆಗೂ ‘ಬಿಗ್ ಬಾಸ್ ಕನ್ನಡ’ (Bigg Boss Kannada) ರಿಯಾಲಿಟಿ ಶೋನ 12 ಸೀಸನ್​​ಗಳು ನಡೆದಿವೆ. ಇಷ್ಟು ಸೀಸನ್​​ಗಳ ಪೈಕಿ ಅತಿ ಹೆಚ್ಚು ಕ್ರೇಜ್ ಸೃಷ್ಟಿಸಿದ ಸ್ಪರ್ಧಿ ಎಂದರೆ ಅದು ಗಿಲ್ಲಿ ನಟ. ಕಾಮಿಡಿ ಮೂಲಕ ಅವರು ಎಲ್ಲರ ಮನಸ್ಸು ಗೆದ್ದಿದ್ದಾರೆ. ಈ ಬಾರಿ ಗಿಲ್ಲಿ ನಟ (Gilli Nata) ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲುತ್ತಾರೆ ಎಂಬುದು ಬಹುತೇಕ ವೀಕ್ಷಕರ ಅಭಿಪ್ರಾಯ. ಗಿಲ್ಲಿ ಪರವಾಗಿ ರಾಜ್ಯಾದ್ಯಂತ ಇರುವ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ಏನು ಮಾಡಿದ್ದಾನೆ ಎಂದು ಅಶ್ವಿನಿ ಗೌಡ (Ashwini Gowda) ಅವರು ಪ್ರಶ್ನೆ ಮಾಡಿದ್ದರು. ಅವರಿಗೆ ಈಗ ಅಭಿಮಾನಿಗಳೇ ಈ ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ. ದಿನದಿಂದ ದಿನಕ್ಕೆ ಗಿಲ್ಲಿ ನಟ ಅವರ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗುತ್ತಲೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೇತನ ಹಿಂಬಾಕಿಗೆ ಡಿಮ್ಯಾಂಡ್​​: ಜ.29ರಂದು ಸಾರಿಗೆ ನೌಕರರ ಪ್ರತಿಭಟನೆ – Kannada News | Karnataka KSRTC Workers to Protest on Jan 29 Over 38 Months Salary Arrears

ಬೆಂಗಳೂರು, ಜನವರಿ 18: ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಸಿಡಿದೆದ್ದಿದ್ದು, ಅನಂತ್ ಸುಬ್ಬರಾವ್ ನೇತೃತ್ವದಲ್ಲಿ ಬೆಂಗಳೂರು ಚಲೋಗೆ ಕರೆನೀಡಿದ್ದಾರೆ. ಜನವರಿ 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಫ್ರೀಡಂಪಾರ್ಕ್​​ನಲ್ಲಿ ಪ್ರತಿಭಟನೆ ನಡೆಯಲಿದ್ದು, ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜಂಟಿಕ್ರಿಯಾ ಸಮಿತಿ ಪತ್ರ ಬರೆದಿದೆ. 38 ತಿಂಗಳ ವೇತನ ಹಿಂಬಾಕಿ ನೀಡುವಂತೆ ಹಾಗೂ 01.01.2024ರಿಂದ 4 ವರ್ಷಗಳ ವೇತನಕ್ಕೆ ಬೇಡಿಕೆ ಇಡಲಾಗಿದ್ದು, ಪ್ರತಿಭಟನೆಯಲ್ಲಿ 4 ಸಾರಿಗೆ ನಿಗಮಗಳ ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದು ತಿಳಿಸಲಾಗಿದೆ.ನೌಕರರ ಈ ಪ್ರತಿಭಟನೆ ಎಚ್ಚರಿಕೆಗೆ ಸಾರಿಗೆ ಇಲಾಖೆ ಯಾವ ರೀತಿಯಾಗಿ ಸ್ಪಂದಿಸುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಪ್ರತಿಭಟನೆಯ ಮುನ್ನವೇ ನೌಕರರ ಬೇಡಿಕೆಗಳನ್ನು ಈಡೇರಿಸುತ್ತದೆಯೇ ಅಥವಾ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Davanagere: ಚೋರ್​​ ಮಗ ಚಂಡಾಳ್​​ ಅಪ್ಪ; ದೇಗುಲದಲ್ಲಿ ಕದ್ದು ಸಿಕ್ಕಿಬಿದ್ದ ಐನಾತಿಗಳು! – Kannada News | Davangere Temple Robbery: Father Son Duo Arrested for Theft at Duggalli Anjaneya Temple

ಜಪ್ತಿ ಮಾಡಲಾದ ವಸ್ತುಗಳ ಜೊತೆ ಪೊಲೀಸರು

ದಾವಣಗೆರೆ, ಜನವರಿ 18: ಹರಿಹರ ತಾಲೂಕಿನ ದೊಗ್ಗಳ್ಳಿ ಗ್ರಾಮದ ಆಂಜನೇಯ ಸ್ವಾಮೀ ದೇವಸ್ಥಾನದಲ್ಲಿ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆ ಪೈಕಿ ಇಬ್ಬರು ತಂದೆ ಮತ್ತು ಮಗ ಎಂಬುದು ಗೊತ್ತಾಗಿದ್ದು, ತಮಗೆ ಸಹಾಯಕನೋರ್ವನನ್ನು ಇವರು ನೇಮಿಸಿಕೊಂಡಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬಯಲಾಗಿದೆ.

ಶನಿವಾರ ಆಂಜನೇಯ ದೇಗುಲದಲ್ಲಿ ಕೈಚಳಕ ತೋರಿಸಿದ್ದ ಆಸಾಮಿಗಳು, ರಾತ್ರಿ ವೇಳೆ ದೇವಸ್ಥಾನಕ್ಕೆ ನುಗ್ಗಿ ಹತ್ತು ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಆಭರಣ ಎತ್ತಿಕೊಂಡು ಪರಾರಿಯಾಗಿದ್ದರು. ಘಟನೆ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಆರೋಪಿಗಳು ತಗಲಾಕಿಕೊಂಡಿದ್ದಾರೆ. ವೀರೇಶ್​​ (64), ಶಿವಕುಮಾರ್​​ (26) ಮತ್ತು ಮಂಜುನಾಥ್ (40) ಬಂಧಿತರಾಗಿದ್ದು, ಆರೋಪಿಗಳಿಂದ 10.90 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ದೇಗುಲಗಳನ್ನೇ ಟಾರ್ಗೆಟ್​​ ಮಾಡಿ ಕದಿಯುತ್ತಿದ್ದರು ಎನ್ನಲಾಗಿದ್ದು, ಮಲೇಬೆನ್ನೂರಿನ ಶ್ರೀರಾಮ ದೇವಸ್ಥಾನ ಸೇರಿದಂತೆ ಹತ್ತಾರು ದೇವಸ್ಥಾನ ಗಳಲ್ಲಿ ಕಳ್ಳತನ ಮಾಡಿದ್ದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: ಎರಡು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಸಾವು

ಇನ್ನು ಆರೋಪಿಗಳು ಕಳ್ಳತನ ಮಾಡಿದ ಬೆಳ್ಳಿಯನ್ನು ಕರಗಿಸಲು ಪ್ರಯತ್ನಿಸಿದ್ದು, ಈ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪ್ರಕರಣ ಸಂಬಂಧ ಮಂಜುನಾಥ್​​ನನ್ನು ಮೊದಲು ಲಾಕ್​​ ಮಾಡಿದ್ದ ಪೊಲೀಸರು, ಆತನನ್ನು ತಮ್ಮದೇ ಸ್ಟೈಲ್​​ನಲ್ಲಿ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದ. ಹಬ್ಬ ಅಥವಾ ಜಾತ್ರೆಗಳ ಮರುದಿನ ದೇಗುಲಗಳಲ್ಲಿ ದರೋಡೆ ಮಾಡೋದು ಇವರ ಕಾಯಕವಾಗಿದ್ದು, ಇವರ ಪ್ರಕಾರ ದೇವಸ್ಥಾನ ಕಳ್ಳತನ ಸ್ವಲ್ಪ ಸರಳ. ಭಕ್ತರ ವೇಷದಲ್ಲಿ ಹೋದರೆ ಆಯಿತು. ಯಾವುದನ್ನೂ ಹುಡುಕುವ ಅಗತ್ಯ ಇಲ್ಲ. ಆಭರಣಗಳು ದೇವರ ಮೈಮೇಲೆಯೇ ಇದ್ದರೆ, ಹುಂಡಿಯೂ ಕಣ್ಣಿಗೆ ಕಾಣುವ ರೀತಿ ಇರುತ್ತೆ ಎಂಬುದು ಆರೋಪಿಗಳ ಲೆಕ್ಕಾಚಾರವಾಗಿತ್ತು ಎನ್ನಲಾಗಿದೆ. ಆರೋಪಿಗಳು ಮೂಲತಃ ಹರಿಹರ ತಾಲೂಕಿನ ಶಂಷಿಪುರ ಗ್ರಾಮದವರಾಗಿದ್ದು, ಹಾಲಿ ದಾವಣಗೆರೆಯಲ್ಲಿ ವಾಸವಿದ್ದರು ಎಂಬುದು ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ಲೇಆಫ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು? – Kannada News | How many matches to win rcb women to qualify Playoffs 2026

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಈವರೆಗೆ ಆಡಿದ 4 ಮ್ಯಾಚ್​ಗಳಲ್ಲೂ ಭರ್ಜರಿ ಜಯ ಸಾಧಿಸಿರುವ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಅದು ಕೂಡ +1.600 ನೆಟ್ ರನ್​ ರೇಟ್​ನೊಂದಿಗೆ.

Source link

ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ! ಕೂದಲೆಳೆ ಅಂತರದಲ್ಲಿ ಚಾಲಕ ಪಾರು – Kannada News | Yeshwanthpur Car Fire: Driver Escapes Unharmed as Moving Vehicle Catches Blaze

ಬೆಂಗಳೂರು, ಜನವರಿ 18: ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಚಲಿಸುತ್ತಿದ್ದ ಕಾರೊಂದಕ್ಕೆ ಮಧ್ಯರಸ್ತೆಯಲ್ಲೇ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಯಶವಂತಪುರದಿಂದ ಮಲ್ಲೇಶ್ವರಂ ಕಡೆಗೆ ತೆರಳುತ್ತಿದ್ದ ಕಾರಿನ ಒಳಭಾಗದಿಂದ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ಕಾರಿನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ತಕ್ಷಣ ಸ್ಪಂದಿಸಿ ಕಾರಿಗೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಾರಿಗೆ ಬೆಂಕಿ ಹೊತ್ತಿಕೊಂಡ ಕಾರಣ ತಿಳಿದುಬಂದಿಲ್ಲ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ಸಂಭ್ರಮ: ಸರ್ವಜ್ಞ ಪೀಠಾರೋಹಣ ಮಾಡಿದ ಶೀರೂರು ಶ್ರೀ – Kannada News | Shirur Matha’s Vedavardhana Teertha Swamiji Begins 253rd Udupi Krishna Paryaya

ಶ್ರೀ ಕೃಷ್ಣ ಮಠದ ಇತಿಹಾಸದಲ್ಲಿದು 253ನೇ ದ್ವೈವಾರ್ಷಿಕ ಪರ್ಯಾಯವಾಗಿದ್ದು, ವೇದವರ್ಧನ ತೀರ್ಥರ ಪ್ರಥಮ ಪರ್ಯಾಯವಾಗಿದೆ. ಮಧ್ಯರಾತ್ರಿ 1.30ಕ್ಕೆ ಕಾಪು ತಾಲೂಕಿನ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ನಡೆದು, ಬೆಳಗಿನ ಜಾವ 3 ಗಂಟೆಗೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭವಾಗಿದೆ. ನೂರಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳು, ಟ್ಯಾಬ್ಲೋಗಳು, ಭಜನಾ ತಂಡಗಳು ಈ ವೇಳೆ ಗಮನ ಸೆಳೆದಿವೆ.

Source link

ಮಣಿಪುರ: ಎರಡು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಸಾವು – Kannada News | Manipur Kuki Woman’s Tragic Death: Survivor Fights for Justice Until End

ಇಂಫಾಲ, ಜನವರಿ 18: ಎರಡು ವರ್ಷಗಳ ಹಿಂದೆ  ಮಣಿಪುರ(Manipur)ದಲ್ಲಿ ಮೈಥಿ ಹಾಗೂ ಕುಕಿ ಸಮುದಾಯಗಳ ನಡುವೆ ನಡೆದ ಘರ್ಷಣೆ ಸಂದರ್ಭದಲ್ಲಿ ಅಪಹರಣಗೊಂಡು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಯುವತಿ ಇಂಫಾಲದಲ್ಲಿ ಸಾವನ್ನಪ್ಪಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಕುಕಿ ಬುಡಕಟ್ಟು ಜನಾಂಗದ ಯುವತಿ ಆಘಾತಕ್ಕೆ ಒಳಗಾಗಿದ್ದರು. ಅದರಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ. ತಮ್ಮ ಮಗಳು ಜೀವಂತವಾಗಿದ್ದಾಗ ನ್ಯಾಯ ಸಿಗದ ಕಾರಣ ಅವರ ಕುಟುಂಬವು ದುಃಖಿತವಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಆಕೆ ಅನುಭವಿಸಿದ ಆಳವಾದ ಆಘಾತ ಮತ್ತು ದೈಹಿಕ ಗಾಯಗಳಿಂದ ಆಕೆ ಎಂದೂ ಚೇತರಿಸಿಕೊಳ್ಳಲಿಲ್ಲ, ಇದು ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು ಎಂದು ಆಕೆಯ ಕುಟುಂಬ ತಿಳಿಸಿದೆ. ಅವರು ಪವಾಡಸದೃಶವಾಗಿ ಬದುಕುಳಿದಿದ್ದರೂ, ತೀವ್ರವಾದ ದೈಹಿಕ ಗಾಯಗಳು, ಆಳವಾದ ಮಾನಸಿಕ ಆಘಾತ ಮತ್ತು ಗಂಭೀರ ಗರ್ಭಾಶಯದ ತೊಂದರೆಗಳನ್ನು ಅನುಭವಿಸಿದರು. ಅವರಿಗೆ ಗುವಾಹಟಿಯಲ್ಲಿ ಚಿಕಿತ್ಸೆ ನೀಡಲಾಯಿತು ಆದರೆ ಜನವರಿ 10, 2026 ರಂದು ಸಾವನ್ನಪ್ಪಿದ್ದಾರೆ ಎಂದು ಐಟಿಎಲ್ಎಫ್ ತಿಳಿಸಿದೆ.

ತೀವ್ರವಾದ ಗಾಯಗಳಿಂದಾಗಿ ತನ್ನ ಮಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಭಯಾನಕ ದೌರ್ಜನ್ಯಕ್ಕೆ ಒಳಗಾಗುವ ಮೊದಲು ನನ್ನ ಮಗಳು ತುಂಬಾ ಉತ್ಸಾಹಭರಿತ ಮತ್ತು ಮುಕ್ತ ಮನಸ್ಸಿನ ಹುಡುಗಿಯಾಗಿದ್ದಳು. ಅವಳಿಗೆ ನಿಜವಾಗಿಯೂ ಶೈಕ್ಷಣಿಕ ವಿಷಯದಲ್ಲಿ ಆಸಕ್ತಿ ಇರಲಿಲ್ಲ, ಆದರೆ ಅವಳು ನಮ್ಮ ಸಂಬಂಧಿಕರೊಬ್ಬರೊಂದಿಗೆ ಇಂಫಾಲ್‌ನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಅನೇಕ ಸ್ನೇಹಿತರಿದ್ದರು ಮತ್ತು ಆಗಾಗ ಅವರೊಂದಿಗೆ ಸಮಯ ಕಳೆಯುತ್ತಿದ್ದಳು ಎಂದು ತಾಯಿ ಹೇಳಿದ್ದಾರೆ.

ಮತ್ತಷ್ಟು ಓದಿ:ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

20 ವರ್ಷದ ಯುವತಿ ತನ್ನನ್ನು ಕಪ್ಪು ವಸ್ತ್ರದಲ್ಲಿದ್ದ ನಾಲ್ವರು ಪುರುಷರು ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದರು, ಅಲ್ಲಿ ಸರದಿಯಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಆರೋಪಿಸಿದ್ದರು. ನಾಲ್ವರು ಪುರುಷರು ನನ್ನನ್ನು ಬಿಳಿ ಬೊಲೆರೊದಲ್ಲಿ ಕರೆದುಕೊಂಡು ಹೋದರು. ಅವರು ನನ್ನನ್ನು ಕರೆದುಕೊಂಡು ಹೋಗುತ್ತಿದ್ದಾಗ, ಚಾಲಕನನ್ನು ಹೊರತುಪಡಿಸಿ ಮೂವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಂತರ ನನ್ನನ್ನು ಬೆಟ್ಟಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹಲ್ಲೆ ನಡೆಸಿದ್ದಾಗಿ ಎನ್​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಳು.

ತರಕಾರಿಗಳ ರಾಶಿಯ ಕೆಳಗೆ ಅಡಗಿಕೊಂಡಿದ್ದ ಆಕೆಯನ್ನು ಆಟೋರಿಕ್ಷಾ ಚಾಲಕನೊಬ್ಬ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಆಕೆ ತನ್ನ ಮನೆಗೆ ತಲುಪುವಲ್ಲಿ ಯಶಸ್ವಿಯಾದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಬೈಕ್​ಗೆ ಡಿಕ್ಕಿ ಹೊಡೆದು 100 ಮೀಟರ್​ ದೂರ ಎಳೆದೊಯ್ದ ಕಾರು – Kannada News | High Speed Horror in Hyderabad as Car Mows Down Biker, Drags Vehicle 100 Metres

ಹೈದರಾಬಾದ್, ಜನವರಿ 18: ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿ ತಡರಾತ್ರಿ ಹಿಟ್ ಅಂಡ್ ರನ್ ಘಟನೆ ನಡೆದಿದ್ದು28 ವರ್ಷದ ಯುವಕನ ಸ್ಥಿತಿ ಗಂಭೀರವಾಗಿದೆ.ಸ್ನೇಹಿತರನ್ನು ಭೇಟಿಯಾಗಿ ಸುನಿಲ್ ಕುಮಾರ್ ತಮ್ಮ ಮೋಟಾರ್ ಸೈಕಲ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ರಾತ್ರಿ 12.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಕಾರು ಸುನಿಲ್ ಕುಮಾರ್ ಮತ್ತು ಅವರ ಬೈಕ್​ ಅನ್ನು 100 ಮೀಟರ್​ನಷ್ಟು ದೂರದವರೆಗೆ ಎಳೆದೊಯ್ದಿದೆ.ಘಟನಾ ಸ್ಥಳದಲ್ಲಿ ಇರಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ದೃಶ್ಯ ಸೆರೆಯಾಗಿದೆ.ಸುನಿಲ್ ಅವರ ಸ್ಥಿತಿ ಚಿಂತಾಜನಕವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link