Category Archives: Blog

Your blog category

ಮಧ್ಯರಾತ್ರಿ ಊಟ ಆರ್ಡರ್, ಕೆಳಗೆ ಬನ್ನಿ ಅಂದ್ರೂ ಬಾರದ ಗ್ರಾಹಕ, ತಾನೇ ತಿಂದ ಜೊಮ್ಯಾಟೊ ಏಜೆಂಟ್ – Kannada News | Late Night Food Order Ends in Drama as Delivery Agent Eats Meal

ಗ್ರಾಹಕರೊಬ್ಬರು  ತಡರಾತ್ರಿ ಊಟ ಆರ್ಡರ್ ಮಾಡಿದ್ದರು, ಮನೆಯ ಬಳಿ ಹೋಗಿ ಕೆಳಗೆ ಬನ್ನಿ ಎಂದರೆ ಗ್ರಾಹಕರು ಬಾರದಿದ್ದಕ್ಕೆ ಬೇಸರಗೊಂಡು ಜೊಮ್ಯಾಟೊ ಡೆಲಿವರಿ ಏಜೆಂಟ್ ಆ ಊಟವನ್ನು ತಾವೇ ತಿಂದಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಖುದ್ದಾಗಿ ಅಂಕುರ್ ಠಾಕೂರ್ ಎಂಬ ಡೆಲಿವರಿ ಏಜೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಅವರು ಮಧ್ಯರಾತ್ರಿ 2.30ರ ವೇಳೆಗೆ ಆಹಾರ ಆರ್ಡರ್ ಮಾಡಿದ್ದರು, ರಾತ್ರಿ ಹೊತ್ತು ಬೈಕ್​ ಹೊರಗೆ ನಿಲ್ಲಿಸಿ ಮೇಲಿನ ಮಹಡಿವರೆಗೆ ನಡೆದುಕೊಂಡು ಹೋದರೆ ವಾಪಸ್ ಬರುವಷ್ಟರಲ್ಲಿ ಬೈಕ್ ಅಲ್ಲೇ ಇರುತ್ತೆ ಎಂಬುದಕ್ಕೆ ಯಾವುದೇ ನಂಬಿಕೆಯಿಲ್ಲ ಹೀಗಾಗಿ ಬೈಕ್ ಕಳವಾಗುವ ಭಯದಲ್ಲಿ, ನೀವೇ ಕೆಳಗೆ ಬಂದು ಊಟ ತೆಗೆದುಕೊಂಡು ಹೋಗಿ ಎಂದಿದ್ದಕ್ಕೆ, ಗ್ರಾಹಕ ನಾನು ಹಣ ಕೊಟ್ಟು ಆರ್ಡರ್ ಮಾಡಿದ್ದೇನೆ, ಮನೆ ಬಾಗಿಲವರೆಗೆ ತಂದು ಕೊಡುವುದು ನಿನ್ನ ಕರ್ತವ್ಯ ಎಂದು ಗದರಿದ್ದಾರೆ ಹಾಗಾಗ ಕೋಪಗೊಂಡ ಏಜೆಂಟ್ ಆ ಊಟವನ್ನು ತಾವೇ ಮಾಡಿರುವುದರ ಜತೆಗೆ ವಿಡಿಯೋವನ್ನು ಕೂಡ ಮಾಡಿದ್ದಾರೆ.

ಮಧ್ಯರಾತ್ರಿ ಆರ್ಡರ್ ಮಾಡಿದಾಗ ಗ್ರಾಹಕರು ಕೂಡ ಸ್ವಲ್ಪ ಫ್ಲೆಕ್ಸಿಬಲ್ ಆಗಿ ಇರಬೇಕು, ನಮ್ಮ ಕಷ್ಟವನ್ನು ಕೂಡ ಅರ್ಥಮಾಡಿಕೊಂಡರೆ ಒಳಿತು ಎಂದಿದ್ದಾರೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳುವ್ಯಕ್ತವಾಗಿವೆ. ಕೆಲವರು ನೀವು ಕೆಲಸಕ್ಕೆ ಸೇರುವ ಮುನ್ನ ಇದೆಲ್ಲವನ್ನೂ ಯೋಚಿಸಬೇಕಿತ್ತು, ರೂಲ್ಸ್​ ಪ್ರಕಾರ ಮನೆಗೆ ಬಂದು ಡೆಲಿವರಿ ಮಾಡಬೇಕು ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು ನೀವು ಊಟವನ್ನು ಗೇಟ್​ನಲ್ಲಿ ಇಟ್ಟು ಹೊರಡಬೇಕಿತ್ತು ಎಂದು ಬರೆದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್! ಸಿಬ್ಬಂದಿಯ ಮೇಲೇ ಹಲ್ಲೆ – Kannada News | Bengaluru: Parappana Agrahara Jailer Assaulted Despite Strict Measures

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಪುಂಡಾಟಕ್ಕೆ ಇನ್ನೂ ಬಿದ್ದಿಲ್ಲ ಬ್ರೇಕ್!

ಬೆಂಗಳೂರು, ಜನವರಿ 18: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಪುಂಡಾಟಕ್ಕೆ ಮಿತಿಯಿಲ್ಲದಂತಾಗಿದೆ. ಇತ್ತೀಚೆಗಷ್ಟೇ  ಕೈದಿಗಳ ಐಷಾರಾಇ ಜೀವನದ ವೀಡಿಯೋಗಳು ವೈರಲ್ ಆಗಿದ್ದವು.  ಅದಲ್ಲದೇ  ಕೈದಿಗಳು ಜೈಲಿನಲ್ಲೇ ಮದ್ಯ ತಯಾರಿಸಿ, ಕುಡಿದಿದ್ದಕ್ಕೆ ಸಾಕ್ಷಿಯೂ ದೊರೆತಿತ್ತು.  ಈ ಹಿನ್ನೆಲೆಯಲ್ಲಿ ಇಬ್ಬರು ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅದಲ್ಲದೆ ಹೊಸ ಡಿಜಿಪಿಯಾಗಿ ಅಲೋಕ್ ಕುಮಾರ್ (Alok kumar) ನೇಮಕಗೊಂಡ ಮೇಲೆ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿತ್ತು. ಹೀಗಿದ್ದರೂ ಕ್ಷುಲ್ಲಕ ಕಾರಣಕ್ಕೆ ಅಪರಾಧಿಗಳು ಜೈಲರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಹಾಯಕ ಜೈಲರ್ ಮೇಲೆ ಹಲ್ಲೆ

ಜನವರಿ 7ರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್ ಮೇಲೆ ಸಜಾಬಂಧಿಗಳು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೈದಿಗಳಾದ ಆನಂದ್ ಮತ್ತು ಅಬ್ದುಲ್ ಘನಿ ಅನವಶ್ಯಕವಾಗಿ ಸಜಾಬಂಧಿ ಕಚೇರಿಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಅವರನ್ನು ತಡೆಯಲು ಮುಂದಾದ ಅಸಿಸ್ಟೆಂಟ್ ಜೈಲರ್ ಹಾಗೂ ಜೈಲು ಸಿಬ್ಬಂದಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ನಂತರ ಕರ್ತವ್ಯ ನಿರ್ವಹಣೆಗೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರಭಾರ ಅಧೀಕ್ಷಕರು ತಡವಾಗಿ ನಿನ್ನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಠಿಣ ಕ್ರಮದ ನಂತರವೂ ಅದೇ ಪರಿಸ್ಥಿತಿ

ಕೆಲ ತಿಂಗಳ ಹಿಂದೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಡ್ಯಾನ್ಸ್  ಜೊತೆಗೆ ಜೈಲಿನಲ್ಲಿದ್ದ ಕೈದಿಗಳು ಕೈಯಲ್ಲಿ ಮೊಬೈಲ್ ಹಿಡಿದು, ಐಷಾರಾಮಿ ಜೀವನ ನಡೆಸುತ್ತಿದ್ದ ವೀಡಿಯೋಗಳು ವೈರಲ್ ಆಗಿದ್ದವು. ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಿಸಿದ ವೀಡಿಯೋಗಳೂ ಹಲ್ ಚಲ್ ಎಬ್ಬಿಸಿದ್ದವು. ಈ  ಹಿನ್ನೆಲೆ ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.

ಇದನ್ನೂ ಓದಿ ಜೈಲಲ್ಲಿ ರೌಡಿ ಶೀಟರ್​ ಹುಟ್ಟುಹಬ್ಬ ಆಚರಣೆ: ಇಬ್ಬರು ಅಧಿಕಾರಿಗಳ ತಲೆದಂಡ

ನಂತರ ಡಿಜಿಪಿಯಾಗಿ ಬಂದಿದ್ದ ಅಲೋಕ್ ಕುಮಾರ್, ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಹಾಗೂ ರಾಜಾತಿಥ್ಯಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದರು. ಆದರೂ ಸಹ ಜೈಲಿನ ದುಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಾಣದೆ, ಮತ್ತೊಮ್ಮೆ  ಪುಂಡಾಟದ  ಪ್ರಕರಣ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜಿ.ಟಿ. ದೇವೇಗೌಡರಿಗೆ ಭರ್ಜರಿ ಶಾಕ್​​ ಕೊಡುತ್ತಾ ಜೆಡಿಎಸ್​​? ವರಿಷ್ಠರ ನಡೆಯೇನು? – Kannada News | GT Devegowda Shocked as JDS Prepares SR Mahesh for Chamundeshwari Election

ಜಿ.ಟಿ. ದೇವೇಗೌಡ

ಮೈಸೂರು, ಜನವರಿ 18: ಜೆಡಿಎಸ್​​​ನಿಂದ ಈಗಾಗಲೇ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ. ದೇವೇಗೌಡಗೆ ಮತ್ತಷ್ಟು ಶಾಕ್​​ ಕೊಡಲು ಜಾತ್ಯತೀತ ಜನತಾದಳ ನಾಯಕರು ಮುಂದಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ JDSನಿಂದ ಸಾ.ರಾ.ಮಹೇಶ್ ಸ್ಪರ್ಧಿಸ್ತಾರೆ ಎಂದು ಮೈಸೂರಿನಲ್ಲಿ ಪರಿಷತ್​ನ ಜೆಡಿಎಸ್​ ಸದಸ್ಯ ಮಂಜೇಗೌಡ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಹೆಚ್​​.ಡಿ. ದೇವೇಗೌಡರ ನೇತೃತ್ವದಲ್ಲಿ ಸಭೆ ಇದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಾ.ರಾ.ಮಹೇಶ್​ ಒಪ್ಪಿದ್ದಾರೆ ಎಂದವರು ತಿಳಿಸಿದ್ದಾರೆ.

ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಪಕ್ಷಕ್ಕೆ ಮೋಸ ಮಾಡಿದ್ದಾರೆ . MLC ಚುನಾವಣೆಯಲ್ಲೂ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಹೀಗಾಗಿ 2028ರ ಚುನಾವಣೆಯಲ್ಲಿ ಸಾ.ರಾ.ಮಹೇಶ್​​ರನ್ನು ಅಭ್ಯರ್ಥಿ ಮಾಡ್ತೇವೆ. ಎಲ್ಲಾ ವಿಚಾರವನ್ನು ಜೆಡಿಎಸ್​ ವರಿಷ್ಠರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಇರುವ ವಿಷಯವನ್ನು ಅವರ ಗಮನಕ್ಕೆ ತರುತ್ತಿದ್ದೇವೆ ಅಷ್ಟೇ ಎಂದವರು ತಿಳಿಸಿದ್ದಾರೆ. ಇನ್ನು ಈ ಹಿಂದೆಯೇ ಜಿಟಿಡಿಗೆ ಜೆಡಿಎಸ್​​ ಒಂದು ಹಂತದ ಶಾಕ್​​ ನೀಡಿತ್ತು. ಪಕ್ಷದ ಕೋರ್ ಕಮಿಟಿ ಪುನಾರಚನೆ ವೇಳೆ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ.ದೇವೇಗೌಡರಿಗೆ ಗೇಟ್ ಪಾಸ್ ನೀಡಲಾಗಿತ್ತು. ಆ ಸ್ಥಾನಕ್ಕೆ ಚಿಂತಾಮಣಿ ಮಾಜಿ ಶಾಸಕ ಹಾಗೂ ಮಾಜಿ ಉಪ ಸ್ಪೀಕರ್ ಎಂ. ಕೃಷ್ಣಾರೆಡ್ಡಿ ಅವರನ್ನು ನೇಮಿಸಲಾಗಿತ್ತು. ಇನ್ನು ಅರಕಲಗೂಡು ಶಾಸಕ ಎ. ಮಂಜು ಅವರನ್ನು ಕೋರ್ ಕಮಿಟಿಯ ಸಂಚಾಲಕರನ್ನಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ನೇಮಿಸಿದ್ದರು.

ಇದನ್ನೂ ಓದಿ: ಸಿಎಂ ಪರ ಜಿಟಿ ದೇವೇಗೌಡ ಬ್ಯಾಟಿಂಗ್​; ಜೆಡಿಎಸ್​ ನಾಯಕರಿಂದ ಕ್ರಮಕ್ಕೆ ಆಗ್ರಹ

ಜೆಡಿಎಸ್​​ ಶಾಸಕರಾಗಿರುವ ಜಿಟಿಡಿ ಪದೇ ಪದೇ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರನ್ನು ಹೊಗಳುತ್ತಿದ್ದಿದ್ದು ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಪಕ್ಷಕ್ಕೆ ಮುಜುಗರವನ್ನೂ ತಂದಿದೆ ಎನ್ನಲಾಗಿದೆ. ಈ ಹಿಂದೆಯೂ ಮಾಜಿ ಸಿಎಂ, ಈಗಿನ ಕೇಂದ್ರ ಸಚಿವ ಕಮಾರಸ್ವಾಮಿ ಮತ್ತು ಜಿ.ಟಿ. ದೇವೇಗೌಡರ ನಡುವಿನ ಮನಸ್ತಾಪಗಳು ರಾಜಕೀಯವಾಗಿ ಭಾರಿ ಸುದ್ದಿಯಾಗಿದ್ದವು. ಆದ್ರೆ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದ ದೇವೇಗೌಡರು ಜಿಟಿಡಿ ಮನವೊಲಿಸಿದ್ದರು. ಈ ನಡುವೆ ಮತ್ತೆ ಜಿ.ಟಿ. ದೇವೇಗೌಡರ ವರ್ತನೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿರುವ ಹಿನ್ನೆಲೆ ದೊಡ್ಡ ಗೌಡರ ನಡೆ ಏನು ಎಂಬುದು ಸದ್ಯಕ್ಕಿರುವ ಕುತೂಹಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಆಂಜನೇಯನ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕಿದ್ದ ನಾಯಿ ಈಗ ದೇವರು – Kannada News | Viral Dog at UP Temple Draws Devotees, Sparks Reincarnation Belief

ಲಕ್ನೋ, ಜನವರಿ 18: ಆಂಜನೇಯನ ವಿಗ್ರಹದ ಸುತ್ತ ಪ್ರದಕ್ಷಿಣೆ ಹಾಕಿದ್ದ ನಾಯಿ ಈಗ ಊರಿಗೇ ದೇವರು. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ದೇವಸ್ಥಾನವೊಂದರಲ್ಲಿ ನಾಯಿಯೊಂದು ಆಂಜನೇಯ ವಿಗ್ರಹದ ಸುತ್ತ 20ಕ್ಕೂ ಹೆಚ್ಚು ಬಾರಿ ಪ್ರದಕ್ಷಿಣೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ನಾಯಿಯೇ ದೇವರಾಗಿದೆ. ಭಕ್ತರು ದೇವರ ಜತೆ ನಾಯಿಯನ್ನೂ ಪೂಜಿಸಲು ಶುರು ಮಾಡಿದ್ದಾರೆ ನಗೀನಾ ಪ್ರದೇಶದಲ್ಲಿರುವ ನಂದಪುರ ಗ್ರಾಮದಲ್ಲಿರುವ ಪುರಾತನ ಹನುಮಾನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ವಿಗ್ರಹದ ಸುತ್ತ ನಾಯಿಯ ಪ್ರದಕ್ಷಿಣೆ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದವು.

ಸ್ಥಳೀಯರ ಪ್ರಕಾರ, ನಾಯಿ ಸೋಮವಾರ ಮುಂಜಾನೆ ಮೊದಲು ದೇವಸ್ಥಾನದಲ್ಲಿ ಕಾಣಿಸಿಕೊಂಡು ಹನುಮಂತನ ವಿಗ್ರಹದ ಸುತ್ತಲೂ ನಿರಂತರವಾಗಿ ನಡೆಯಲು ಪ್ರಾರಂಭಿಸಿತು. ಈ ನಡವಳಿಕೆಯು ಗಂಟೆಗಳ ಕಾಲ ಮುಂದುವರೆಯಿತು.
ಬಳಿಕ ನಾಯಿ ದುರ್ಗಾದೇವಿಯ ವಿಗ್ರಹದ ಕಡೆಗೆ ಹೋಯಿತು, ಅದೇ ರೀತಿ ಪ್ರದಕ್ಷಿಣೆ ಹಾಕಿತ್ತು. ಕಳವಳಗೊಂಡ ನಿವಾಸಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದರು, ನಂತರ ಪಶುವೈದ್ಯಕೀಯ ತಂಡವು ನಾಯಿಯನ್ನು ಪರೀಕ್ಷಿಸಿತು ಯಾವುದೇ ಗಾಯಗಳಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಎ.ಆರ್. ರೆಹಮಾನ್ ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿ: ಕಂಗನಾ ಆರೋಪ – Kannada News | Kangana Ranaut says AR Rahman a hateful and prejudiced person

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಅವರು ‘ಛಾವ’ ಸಿನಿಮಾ ಬಗ್ಗೆ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ಆ ಸಿನಿಮಾಗೆ ಎ.ಆರ್. ರೆಹಮಾನ್ ಅವರೇ ಸಂಗೀತ ನೀಡಿದ್ದಾರೆ. ಆದರೂ ಕೂಡ ಅವರಿಗೆ ಈ ಸಿನಿಮಾ ಬಗ್ಗೆ ತಕರಾರು ಇದೆ. ಆ ಚಿತ್ರವು ಜನರ ಒಗ್ಗಟ್ಟನ್ನು ಒಡೆಯುತ್ತದೆ ಎಂಬುದು ಅವರ ಅಭಿಪ್ರಾಯ. ಈ ರೀತಿಯ ಹೇಳಿಕೆಗಳನ್ನು ನೀಡಿದ ಬಳಿಕ ಎ.ಆರ್. ರೆಹಮಾನ್ ಅವರನ್ನು ಕಂಗನಾ ರಣಾವತ್ (Kangana Ranaut) ಟೀಕಿಸಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೋರಿ ಮೂಲಕ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಪ್ರೀತಿಯ ಎ.ಆರ್. ರೆಹಮಾನ್ ಅವರೇ, ನಾನು ಕೇಸರಿ ಪಕ್ಷಕ್ಕೆ ಬೆಂಬಲ ನೀಡುತ್ತೇನೆ ಎಂಬ ಕಾರಣಕ್ಕೆ ನನಗೆ ಚಿತ್ರರಂಗದಲ್ಲಿ ಪಕ್ಷಪಾತ ಆಗುತ್ತದೆ. ಆದರೂ ಕೂಡ ನಾನು ನಿಮ್ಮಷ್ಟು ಪೂರ್ವಾಗ್ರಹ ಪೀಡಿತ ಹಾಗೂ ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ’ ಎಂದು ಕಂಗನಾ ರಣಾವತ್ ಅವರು ಹೇಳಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಇದನ್ನು ಬರೆದುಕೊಂಡಿದ್ದಾರೆ.

‘ನಾನು ನನ್ನ ನಿರ್ದೇಶನದ ಮೊದಲ ಸಿನಿಮಾ ‘ಎಮರ್ಜೆನ್ಸಿ’ ಕಥೆಯನ್ನು ನಿಮಗೆ ಹೇಳಬೇಕು ಎಂದುಕೊಂಡಿದ್ದೆ. ಕಥೆ ಕೇಳುವುದು ಬಿಡಿ, ನೀವು ನನ್ನನ್ನು ಭೇಟಿ ಮಾಡಲು ಕೂಡ ನಿರಾಕರಿಸಿದಿರಿ. ಪ್ರೊಪಗಾಂಡ ಸಿನಿಮಾದ ಭಾಗ ಆಗಲು ನಿಮಗೆ ಇಷ್ಟ ಇರಲಿಲ್ಲ ಅಂತ ನನಗೆ ಯಾರೋ ಹೇಳಿದರು. ವಿಪರ್ಯಾಸ ಏನೆಂದರೆ, ಎಲ್ಲ ವಿಮರ್ಶಕರು ಎಮರ್ಜೆನ್ಸಿ ಸಿನಿಮಾವನ್ನು ಮಾಸ್ಟರ್​ಪೀಸ್ ಅಂತ ಕರೆದರು’ ಎಂದಿದ್ದಾರೆ ಕಂಗನಾ ರಣಾವತ್.

‘ನಿಷ್ಪಕ್ಷಪಾತವಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷದ ಮುಖಂಡರು ಕೂಡ ಎಮರ್ಜೆನ್ಸಿ ಸಿನಿಮಾವನ್ನು ಹೊಗಳಿದರು. ಆದರೆ ನೀವು ನಿಮ್ಮ ದ್ವೇಷದಿಂದ ಕುರುಡಾಗಿದ್ದೀರಿ. ನಿಮ್ಮನ್ನು ಕಂಡರೆ ನನಗೆ ಅಯ್ಯೋ ಎನಿಸುತ್ತದೆ’ ಎಂದು ಕಂಗನಾ ರಣಾವತ್ ಅವರು ಪೋಸ್ಟ್ ಮಾಡಿದ್ದಾರೆ. ಎ.ಆರ್. ರೆಹಮಾನ್ ಹೇಳಿಕೆ ಮತ್ತು ಕಂಗನಾ ರಣಾವತ್ ಆರೋಪದಿಂದ ಚಿತ್ರರಂಗದಲ್ಲಿ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್

ವಸ್ತ್ರ ವಿನ್ಯಾಸಕಿ ಮಸಾಬಾ ಗುಪ್ತಾ ಅವರ ಮೇಲೂ ಕಂಗನಾ ರಣಾವತ್ ಅವರು ಕಿಡಿಕಾರಿದ್ದಾರೆ. ‘ಮಸಾಬಾ ವಿನ್ಯಾಸ ಮಾಡಿದ ಸೀರೆಯನ್ನು ಧರಿಸಿ ನಾನು ರಾಮಜನ್ಮಭೂಮಿಗೆ ಹೋಗಬಾರದು ಎಂದು ಹೇಳಿದ್ದರು. ನಾನು ಕಾರಿನಲ್ಲಿ ಕುಳಿತು ಅತ್ತಿದ್ದೆ’ ಎಂದು ಕಂಗನಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶತಕಗಳ ಮೇಲೆ ಶತಕ… ಬಿಗ್ ಬ್ಯಾಷ್​ನಲ್ಲಿ ಹೊಸ ದಾಖಲೆ ನಿರ್ಮಾಣ

Source link

ಬಿಜೆಪಿ ಸಂಸದ ಮನೋಜ್ ತಿವಾರಿ ಮನೆಯಲ್ಲಿ ಕಳ್ಳತನ – Kannada News | BJP MP Manoj Tiwari’s Mumbai Home Theft, former worker Arrested, Rs 5.4 Lakh Stolen

ಮುಂಬೈ, ಜನವರಿ 18: ಬಿಜೆಪಿ ಸಂಸದ ಮನೋಜ್ ತಿವಾರಿ(Manoj Tiwari) ಮನೆಯಲ್ಲಿ ಕಳ್ಳತನ(Theft) ನಡೆದಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ದೆಹಲಿಯ ಈಶಾನ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮತ್ತು ಪ್ರಸಿದ್ಧ ಗಾಯಕ ಮನೋಜ್ ತಿವಾರಿ ಅವರ ಮುಂಬೈ ನಿವಾಸದಲ್ಲಿ ಕಳ್ಳತನ ನಡೆದಿದೆ. ಅಂಧೇರಿ ಪಶ್ಚಿಮದ ಶಾಸ್ತ್ರಿ ನಗರ ಪ್ರದೇಶದಲ್ಲಿರುವ ಸುಂದರ್‌ಬನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಕಳ್ಳತನದಲ್ಲಿ ಕಳ್ಳರು 5.40 ಲಕ್ಷ ರೂ. ದೋಚಿದ್ದಾರೆ ಎಂಬುದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಅವರ ಮಾಜಿ ಕೆಲಸಗಾರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮನೋಜ್ ತಿವಾರಿ ಅವರ ಮ್ಯಾನೇಜರ್ ಪ್ರಮೋದ್ ಜೋಗೇಂದ್ರ ಪಾಂಡೆ ಈ ಸಂಬಂಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುರೇಂದ್ರ ಕುಮಾರ್ ದೀನನಾಥ್ ಶರ್ಮಾ ಅವರನ್ನು ಬಂಧಿಸಿದ್ದಾರೆ. ಎರಡು ವರ್ಷಗಳ ಹಿಂದೆ ಕೆಲಸದಿಂದ ವಜಾಗೊಳಿಸಲಾಗಿತ್ತು.

ಪೊಲೀಸರ ಪ್ರಕಾರ, ಸಿಸಿಟಿವಿ ದೃಶ್ಯಗಳ ಮೂಲಕ ಆರೋಪಿಯನ್ನು ಗುರುತಿಸಲಾಗಿದೆ. ತನಿಖೆಯಲ್ಲಿ ಆರೋಪಿಗಳು ಕಳ್ಳತನಕ್ಕೆ ನಕಲಿ ಕೀಲಿಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಮೋದ್ ಪಾಂಡೆ ಕಳೆದ 20 ವರ್ಷಗಳಿಂದ ಮನೋಜ್ ತಿವಾರಿ ಅವರ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು ಎಂದು ಅಂಬೋಲಿ ಪೊಲೀಸರು ತಿಳಿಸಿದ್ದಾರೆ. ಮನೆಯ ಒಂದು ಕೋಣೆಯಲ್ಲಿ ಇರಿಸಲಾಗಿದ್ದ ಒಟ್ಟು 5.40 ಲಕ್ಷ ರೂ. ನಗದು ಕಳವಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಶಿವಮೊಗ್ಗದಲ್ಲಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ: ಮಾಜಿ ಪೊಲೀಸರ ಮನೆಯೇ ಈ ಕಳ್ಳರಿಗೆ ಟಾರ್ಗೆಟ್

ಇದರಲ್ಲಿ 4.40 ಲಕ್ಷ ರೂ. ಜೂನ್ 2025 ರಲ್ಲಿ ಕಪಾಟಿನಿಂದ ಕಣ್ಮರೆಯಾಗಿತ್ತು, ಆದರೆ ಆ ಸಮಯದಲ್ಲಿ ಕಳ್ಳನನ್ನು ಗುರುತಿಸಲಾಗಿರಲಿಲ್ಲ. ಕಳ್ಳತನವನ್ನು ಭೇದಿಸಲು, ಡಿಸೆಂಬರ್ 2025 ರಲ್ಲಿ ಮನೆಯೊಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಜನವರಿ 15, 2026 ರಂದು ರಾತ್ರಿ 9 ಗಂಟೆ ಸುಮಾರಿಗೆ ದಾಖಲಾದ ದೃಶ್ಯಗಳಲ್ಲಿ, ಮಾಜಿ ಉದ್ಯೋಗಿ ಸುರೇಂದ್ರ ಕುಮಾರ್ ಶರ್ಮಾ ಕಳ್ಳತನ ಮಾಡುತ್ತಿರುವುದು ಸೆರೆಯಾಗಿದೆ.

ಮನೆ, ಮಲಗುವ ಕೋಣೆ ಮತ್ತು ಕ್ಲೋಸೆಟ್‌ನ ನಕಲಿ ಕೀಲಿಗಳನ್ನು ಅವನ ಬಳಿ ಇದ್ದಿದ್ದನ್ನು ದೃಶ್ಯಗಳಲ್ಲಿ ತೋರಿಸಲಾಗಿದೆ. ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಅಂಬೋಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದರು. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Optical Illusion: ಜೀಬ್ರಾಗಳ ನಡುವೆ ಅಡಗಿರುವ ಸಿಂಹವನ್ನು ನೀವು ಗುರುತಿಸಬಲ್ಲಿರಾ – Kannada News | Optical Illusion: If you are a genius, spot the lion hiding among the zebras

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಈ ಒಗಟಿನ ಚಿತ್ರಗಳು ನೋಡಲು ಸುಲಭದಾಯಕವಾಗಿ ಕಂಡರೂ ಅಷ್ಟೇ ಕಷ್ಟಕರವಾಗಿರುತ್ತದೆ. ಇದೀಗ ನಿಮ್ಮ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸುವ ಸಮಯ. ಜೀಬ್ರಾಗಳ ನಡುವೆ ಅಡಗಿ ಕುಳಿತಿರುವ ಸಿಂಹವನ್ನು 8 ಸೆಕೆಂಡುಗಳಲ್ಲಿ ಗುರುತಿಸುವ ಸವಾಲು ನೀಡಲಾಗಿದೆ.

ಈ ಚಿತ್ರದಲ್ಲಿ ನಿಮಗೆ ಕಾಣಿಸಿದ್ದೇನು?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡುವುದು ಸಹಜ. ಈ ಚಿತ್ರ ಕೂಡ ಹಾಗೆಯೇ ಇದ್ದು, ಈ ಕಾಡಿನಲ್ಲಿ ಜೀಬ್ರಾಗಳ ಗುಂಪೊಂದಿದೆ. ಆದರೆ ಈ ಚಿತ್ರದಲ್ಲೇ ಸಿಂಹವು ಜಾಣತನದಿಂದ ಅಡಗಿ ಕುಳಿತಿದೆ. ನೀವು ಕೇವಲ 8 ಸೆಕೆಂಡುಗಳಲ್ಲಿ ಆ ಸಿಂಹವನ್ನು ಪತ್ತೆ ಹಚ್ಚಿ ಬುದ್ಧಿವಂತರು ಎನಿಸಿಕೊಳ್ಳಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಕೋಳಿ ಮರಿಯನ್ನು ಹುಡುಕಬಲ್ಲಿರಾ

ಸಿಂಹವನ್ನು ಗುರುತಿಸಲು ಸಾಧ್ಯವಾಯಿತೇ?

ಈ ಒಗಟಿನ ಆಟಗಳು ಟೈಮ್‌ ಪಾಸ್‌ ಮಾಡುವ ಜೊತೆಗೆ ಮೆದುಳಿಗೆ ಕೆಲಸ ನೀಡುತ್ತದೆ. ನೀವು ಈ ಒಗಟು ಬಿಡಿಸುವ ಸವಾಲು ಸ್ವೀಕರಿಸಿ ಸೋತಿದ್ದೀರಬಹುದು. ಆದರೆ ಹೆಚ್ಚು ಚಿಂತಿಸಬೇಡಿ, ನಾವು ನಿಮಗೆ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಸಿಂಹ ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಗೆ ಬೀಗ ಜಡಿದ ಖಾಸಗಿ ಫೈನಾನ್ಸ್​: ವಾರದಿಂದ ಬೀದಿ ಬದಿಯೇ ವೃದ್ಧ ದಂಪತಿ ವಾಸ! – Kannada News | Elderly Couple Left on the Street After Home Locked by Private Finance in Hassan

ಹಾಸನ, ಜನವರಿ 18: ರಾಜ್ಯದಲ್ಲಿ ಖಾಸಗಿ ಫೈನಾನ್ಸ್​​ಗಳ ಹಾವಳಿ ಮಿತಿ ಮೀರುತ್ತಿದ್ದು, ಮನೆಗೆ ಬೀಗ ಜಡಿದ ಪರಿಣಾಮ ವೃದ್ಧ ದಂಪತಿ ಬೀದಿಗೆ ಬಂದ ಅಮಾನವೀಯ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ. ಸಾಲ ಕಟ್ಟಿಲ್ಲ ಎಂದು ವೃದ್ಧ ದಂಪತಿ ಸಣ್ಣಯ್ಯ(80), ಜಯಮ್ಮ(75)ರನ್ನ ಫೈನಾನ್ಸ್​​ ಸಿಬಂದಿ ಹೊರಹಾಕಿದ್ದು, ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ವಾಸಮಾಡಬೇಕಾದ ಸ್ಥಿತಿ ಉದ್ಭವಿಸಿದೆ. ಕೋರ್ಟ್ ಆದೇಶ ಎಂದು ಮನೆ ಹಾಗೂ ಕೊಟ್ಟಿಗೆಗೂ ಬೀಗ ಹಾಕಿರುವ ಆರೋಪ ಕೇಳಿಬಂದಿದೆ.

2023ರಲ್ಲಿ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಮನೆ ಅಡಮಾನ ಇಟ್ಟು ಖಾಸಗಿ ಫೈನಾನ್ಸ್​ ಬಳಿ 2 ಲಕ್ಷ ರೂ. ಸಾಲವನ್ನು ವೃದ್ಧ ದಂಪತಿ ಪಡೆದಿದ್ದರು. ಒಂದು ವರ್ಷ ಸಾಲದ ಕಂತುಕೂಡ ಕಟ್ಟಿದ್ದರು ಎನ್ನಲಾಗಿದ್ದು, ಫೈನಾನ್ಸ್ ಕಂಪನಿಯ ಅಮಾನವೀಯ ಕೃತ್ಯಕ್ಕೆ ಜನರ ಆಕ್ರೋಶ ವ್ಯಕ್ತವಾಗಿದೆ. ಒಂದು ವಾರದಿಂದ ಮನೆಯ ಹೊರಗೇ ವಾಸ ಮಾಡ್ತಿರೋ ದಂಪತಿ, ನಾವು ಸಾಲ ಕಟ್ಟುತ್ತೇವೆ ಸಮಯ ಕೊಡಿ ಎಂದು ಕೈ ಮುಗಿದು ಅಂಗಲಾಚುತ್ತಿದ್ದಾರೆ. ಜೊತೆಗೆ ಸಾಲ ತೀರಿಸಲು ತಮಗೆ ಯಾರಾದರೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಚೋರ್​​ ಮಗ ಚಂಡಾಳ್​​ ಅಪ್ಪ; ದೇಗುಲದಲ್ಲಿ ಕದ್ದು ಸಿಕ್ಕಿಬಿದ್ದ ಐನಾತಿಗಳು!

ಸಾಲ ನೀಡಿದ್ದ ಹಣ ವಾಪಸ್ಸು ಕೇಳಿದಕ್ಕೆ ಹಲ್ಲೆ ಆರೋಪ

ಸಾಲ ನೀಡಿದ್ದ ಹಣ ವಾಪಸ್ಸು ಕೇಳಿದಕ್ಕೆ ಸಂಬಂಧಿಕರಿಂದ ಮಹಿಳೆ ಮೇಲೆ ಹಲ್ಲೆ ಆರೋಪ ಹುಣಸೂರು ತಾಲೂಕಿನ ಹಳೆ ವಾರಂಚಿ ಗ್ರಾಮದಲ್ಲಿ ಕೇಳಿಬಂದಿದೆ. ನೀಲಮ್ಮ ಎಂಬ ಮಹಿಳೆ ಮೇಲೆ ಹಲ್ಲೆ ರವಿ, ಅಂಕಿತ, ರೋಷನ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಹಲ್ಲೆಗೊಳಗಾದ ನೀಲಮ್ಮ ಪತಿ ಶಿವರಾಜ್ ಭಾರತೀಯ ಸೇನೆಯಲ್ಲಿದ್ದು, ತಮ್ಮ ಸಂಬಂಧಿ ರವಿ ಪತ್ನಿ ಲೀಲಾವತಿಗೆ 10 ಸಾವಿರ ಹಣವನ್ನು ನೀಡಿದ್ದರು. ಹೀಗಾಗಿ ಪತಿ ನೀಡಿರುವ ಹಣ ಹಿಂತಿರುಗಿ ನೀಡುವಂತೆ ನೀಲಮ್ಮ ಕೇಳಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಏಕಾಏಕಿ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ನೀಲಮ್ಮ ತಲೆಗೆ ಪೆಟ್ಟಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Mouni Amavasya: ಇಂದು ಮೌನಿ ಅಮಾವಾಸ್ಯೆ; ಈ ದಿನದ ಮಹತ್ವ, ಪೂಜಾ ವಿಧಾನ ಹಾಗೂ ಶುಭ ಫಲಗಳ ಬಗ್ಗೆ ತಿಳಿಯಿರಿ – Kannada News | Mouni Amavasya: Significance, Rituals, and Benefits for Ancestral Blessings

ವರ್ಷದಲ್ಲಿ ಬರುವ ಅಮಾವಾಸ್ಯೆಗಳಲ್ಲಿ ಕೆಲವು ವಿಶೇಷ ಪ್ರಾಮುಖ್ಯತೆ ಪಡೆದಿರುತ್ತವೆ. ಅಂತಹ ಒಂದು ಅಮಾವಾಸ್ಯೆಯೇ ಮೌನಿ ಅಮಾವಾಸ್ಯೆ. ಇದನ್ನು ಮಾಘ ಮಾಸದಲ್ಲಿ ಬರುವುದರಿಂದ ಮಾಘ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ಅಮಾವಾಸ್ಯೆಯು ಭಾನುವಾರ ಬಂದರೆ ಅದರ ಪ್ರಾಶಸ್ತ್ಯ ಮತ್ತಷ್ಟು ಹೆಚ್ಚುತ್ತದೆ. ಇಂದು(ಜ.18) ರ ಭಾನುವಾರದಂದು ಬಂದಿರುವುದರಿಂದ ಇದು ಇನ್ನಷ್ಟು ವಿಶೇಷವಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಮೌನಿ ಅಮಾವಾಸ್ಯೆಯನ್ನು ಪೂರ್ವಿಕರಿಗೆ ಸಮರ್ಪಿತವಾದ ದಿನವೆಂದು ಪರಿಗಣಿಸಲಾಗುತ್ತದೆ. ಮಹಾಲಯ ಅಮಾವಾಸ್ಯೆಯಂದು ನಾವು ಪೂರ್ವಿಕರಿಗೆ ಶ್ರಾದ್ಧ, ತರ್ಪಣಗಳನ್ನು ಅರ್ಪಿಸಿದರೆ, ಮೌನಿ ಅಮಾವಾಸ್ಯೆಯಂದು ಪೂರ್ವಿಕರು ಸಾಕ್ಷಾತ್ ನಮ್ಮನ್ನು ನೋಡಲು, ಕನಸುಗಳಲ್ಲಿ ಬರಲು ಮತ್ತು ನಮಗೆ ಮಾರ್ಗದರ್ಶನ ನೀಡಲು ಬರುತ್ತಾರೆ ಎಂದು ನಂಬಲಾಗಿದೆ. ನಮ್ಮ ಹಿರಿಯರು, ಅಥವಾ ಅಗಲಿದ ಆತ್ಮಗಳು ಈ ದಿನ ನಮ್ಮ ಸುತ್ತಲೂ ಇರಬಹುದು. ಅವರು ನಮ್ಮ ಜೀವನದಲ್ಲಿನ ಲೋಪದೋಷಗಳನ್ನು ಸರಿಪಡಿಸಲು, ಆಯುರಾರೋಗ್ಯ ನೀಡಲು ಮತ್ತು ದುಷ್ಟ ಶಕ್ತಿಗಳನ್ನು ಹೋಗಲಾಡಿಸಲು ಸಹಕರಿಸುತ್ತಾರೆ.

ಪೂರ್ವಿಕರನ್ನು ತೃಪ್ತಿಪಡಿಸಲು ಹಲವಾರು ಮಾರ್ಗಗಳಿವೆ. ಈ ದಿನ ನಾವು ದಾನ ಮಾಡುವ ಮೂಲಕ ಬೇರೆಯವರ ಮನಸ್ಸನ್ನು ಸಂತೃಪ್ತಿಪಡಿಸಿದರೆ, ನಮ್ಮ ಪೂರ್ವಿಕರು ಕೂಡ ಸಂತೃಪ್ತರಾಗುತ್ತಾರೆ. ಅನಾಥರು, ಅಶಕ್ತರು, ಪುಟ್ಟ ಮಕ್ಕಳು, ದೀನದಲಿತರು, ರೋಗಿಗಳು, ವೃದ್ಧರಿಗೆ ಕೈಲಾದ ಸಹಾಯ ಅಥವಾ ಮಾರ್ಗದರ್ಶನ ಮಾಡುವುದು ಅತ್ಯಂತ ಪುಣ್ಯದ ಕಾರ್ಯ. ಇಂತಹ ದಾನ ಕಾರ್ಯಗಳು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ.

ಈ ಮಾಘ ಅಮಾವಾಸ್ಯೆಯಂದು ಸ್ನಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. “ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ. ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರು” ಎಂಬ ಮಂತ್ರವನ್ನು ಪಠಿಸುತ್ತಾ ಸಪ್ತ ನದಿಗಳನ್ನು ಸ್ಮರಿಸಿ ಸ್ನಾನ ಮಾಡಬೇಕು. ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಅರಿಶಿಣ ಮತ್ತು ಉಪ್ಪನ್ನು ಸೇರಿಸಿದರೆ ಬಹಳಷ್ಟು ಶುಭ ಫಲಗಳು ಲಭಿಸುತ್ತವೆ. ಈ ಸ್ನಾನವು ಹಲವು ಕಂಟಕಗಳಿಂದ ಮುಕ್ತಿ ನೀಡಿ, ಪಾಪಗಳ ಭಾರವನ್ನು ಕಡಿಮೆ ಮಾಡುತ್ತದೆ. ಮರಣಾನಂತರ ಮೋಕ್ಷ ಪಡೆಯಲು ಮೌನಿ ಅಮಾವಾಸ್ಯೆಯನ್ನು ಸಕ್ರಮವಾಗಿ ಆಚರಿಸುವುದು ಅಗತ್ಯ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಇದೇ ದಿನ ಭಗವದಾರಾಧನೆ, ದೇವರ ಪ್ರಾರ್ಥನೆ ಮತ್ತು ದೇವರ ಸ್ಮರಣೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಲಕ್ಷ್ಮೀ ಅಷ್ಟೋತ್ತರವನ್ನು ಕೇಳುವುದರಿಂದ ಸಾಕಷ್ಟು ಶುಭ ಫಲಗಳು ಮತ್ತು ಪೂರ್ವಿಕರ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ. ಯಥಾವಿಧಿಯಾಗಿ ತರ್ಪಣ, ಶ್ರಾದ್ಧಗಳನ್ನು ಮಾಡುವುದರ ಜೊತೆಗೆ, ಪೂರ್ವಿಕರ ಆತ್ಮಗಳನ್ನು ತೃಪ್ತಿಪಡಿಸಲು ಹಣ್ಣುಗಳು, ತರಕಾರಿಗಳು, ಆಹಾರ ಪದಾರ್ಥಗಳು, ದವಸ ಧಾನ್ಯಗಳು, ಔಷಧಿಗಳು, ಹಾಲು, ಮೊಸರನ್ನು ವಿಪ್ರರು, ಬ್ರಾಹ್ಮಣರು ಅಥವಾ ಅರ್ಚಕರಿಗೆ ದಾನ ಮಾಡಬಹುದು. ಬೆಲ್ಲದ ಅನ್ನವನ್ನು ದಾನ ಮಾಡುವುದರಿಂದಲೂ ಒಳ್ಳೆಯದಾಗುತ್ತದೆ.

ಸಂಜೆ ಸಮಯದಲ್ಲಿ, ನಿಮ್ಮ ಪ್ರದೇಶದ ಮನೆಯ ಸಿಂಹದ್ವಾರದ ಎರಡು ಕಡೆಗಳಲ್ಲಿ ಪ್ಲಾಸ್ಟಿಕ್ ಬೌಲ್‌ನಲ್ಲಿ ಉಪ್ಪು ಹಾಕಿ, ಅದರ ಮೇಲೆ ಮೆಣಸನ್ನು ಇಡುವುದರಿಂದ ಮನೆಯಲ್ಲಿ ಶುಭ ವಾತಾವರಣ ಉಂಟಾಗುತ್ತದೆ. ಈ ಮೌನಿ ಅಮಾವಾಸ್ಯೆ ಪ್ರಾರ್ಥನೆ ಮತ್ತು ಪೂಜೆಗೆ ಅತ್ಯಂತ ಪ್ರಾಶಸ್ತ್ಯವಾದ ದಿನವಾಗಿದೆ. ಈ ದಿನ “ಓಂ ಶ್ರೀ ಲಕ್ಷ್ಮೀ ಗಣಪತಯೇ ನಮಃ” ಎಂಬ ಮಂತ್ರವನ್ನು ಜಪಿಸುವುದರಿಂದ ಎಲ್ಲವೂ ಉತ್ತಮವಾಗಿ ಆಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link