ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ಚಿತ್ರೀಕರಣ: ಯೂಟ್ಯೂಬರ್ಗೆ ಶಾಕ್ ಕೊಟ್ಟ ಇಲಾಖೆ – Kannada News | Forest Department Files FIR Against YouTuber Over Illegal Entry, Filming in Tiger Reserve
ಯೂಟ್ಯೂಬರ್ ಚಿತ್ರೀಕರಿಸಿದ ದೃಶ್ಯ ಉತ್ತರ ಕನ್ನಡ, ಜನವರಿ 16: ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಅನುಮತಿ ಇಲ್ಲದೆ ತಂಗಿದ ಹಾಗೂ ವೀಡಿಯೊಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಯೂಟ್ಯೂಬರ್ ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿದೆ. ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಇಲಾಖೆ ನೋಟಿಸ್ ನೀಡಿದರೂ, ಆತ ಸಂಪರ್ಕಕ್ಕೆ ಸಿಗದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ @sg_malenadu ಎಂಬ ಹೆಸರಿನಿಂದ ಪರಿಚಿತನಾಗಿರುವ ಯೂಟ್ಯೂಬರ್, ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಂಗಿದ್ದು ಮಾತ್ರವಲ್ಲದೆ ಡ್ರೋನ್ ಹಾಗೂ ವಿಡಿಯೋ ಕ್ಯಾಮೆರಾ…