Category Archives: Blog

Your blog category

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ, ಕಾರ್ಯಕರ್ತರಿಂದ ನ್ಯಾಯಾಲಯದೆದುರು ಪ್ರತಿಭಟನೆ – Kannada News | Unnao case survivor family and activists protest at court police ask them to leave

ನವದೆಹಲಿ, ಡಿಸೆಂಬರ್ 26: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕುಲದೀಪ್ ಸಿಂಗ್ ಸೆಂಗಾರ್ (Kuldeep Singh Sengar) ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಲು ಇಂದು ದೆಹಲಿ ಹೈಕೋರ್ಟ್ ಹೊರಗೆ ಹಲವಾರು ಮಹಿಳಾ ಹಕ್ಕುಗಳ ಕಾರ್ಯಕರ್ತರು ಮತ್ತು ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಜಮಾಯಿಸಿತ್ತು. ತಕ್ಷಣ ಅವರನ್ನು ಆ ಸ್ಥಳದಿಂದ ಆಚೆ ಹೋಗುವಂತೆ ಪೊಲೀಸರು ಎಚ್ಚರಿಕೆ ನೀಡಿದರು.

ದೆಹಲಿ ಹೈಕೋರ್ಟ್ ಹೊರಗೆ ಪ್ರತಿಭಟನಾಕಾರರನ್ನು ಪ್ರತಿಭಟನೆ ನಡೆಸದಂತೆ ತಡೆಯಲಾಯಿತು. ಇದರಿಂದ ನ್ಯಾಯಾಲಯದ ಭದ್ರತೆಯೊಂದಿಗೆ ಕೆಲಕಾಲ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು. ನ್ಯಾಯಾಲಯದ ಗೇಟ್‌ನಲ್ಲಿ ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂದು ಭದ್ರತಾ ಸಿಬ್ಬಂದಿ ಅವರಿಗೆ ತಿಳಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾವಿನಲ್ಲೂ ಒಂದಾದ ಜೀವದ ಗೆಳತಿಯರು: ಸುಟ್ಟು ಕರಕಲಾದ ನವ್ಯ-ಮಾನಸಳ ಗೆಳೆತನ ಬಿಚ್ಚಿಟ್ಟು ಕಣ್ಣೀರಿಟ್ಟ ತಂದೆ – Kannada News | Chitradurga Bus Accident: father Manjappa reveals Hassan Navya And Manasa Friendship

ಹಾಸನ, (ಡಿಸೆಂಬರ್ 26): ಚಿತ್ರದುರ್ಗ (Chitradruga) ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ (Bus Incident)  ಒಟ್ಟು 7 ಮಂದಿ ಪ್ರಾಣ ಕಳೆದುಕೊಂಡಿದ್ದು, ಸದಾ ಜೊತೆಯಲ್ಲೇ ಇರುತ್ತಿದ್ದ ಹಾಸನದ (Hassan) ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಸಹ ಸುಟ್ಟು ಕರಕಲಾಗಿದ್ದಾರೆ. ಇದರೊಂದಿಗೆ ಕುಚಿಕು ಗೆಳೆಯರು ಸಾವಿನಲ್ಲೂ ಜೊತೆಯಾಗಿದ್ದಾರೆ. ಇನ್ನು ಮೃತ ಮಗಳು ನವ್ಯ ತಂದೆ ಮಂಜಪ್ಪ ಮಾತನಾಡಿ, ನಿನ್ನೆ ಬೆಳಿಗ್ಗೆ7 ಗಂಟೆಗೆ ನಮಗೆ ವಿಷಯ ತಿಳಿಯಿತು ಅವರು ಮಾನಸ, ನವ್ಯ, ಮಿಲನ ಮೂರು ಜನರು ಹೋಗಿದ್ರು. ಅದರಲ್ಲಿ ಮಿಲನ ಬದುಕಿದ್ದರಿಂದ ನಮಗೆ ಫೋನ್ ಮಾಡಿ ಹೇಳಿದರು. ಹೋಗಿ ನೋಡಿದಾಗ ನಮ್ಮ ಮಗಳು ಹಾಗೂ ಮಾನಸ ಸಂಪೂರ್ಣ ಸುಟ್ಟು ಹೋಗಿದ್ದರು. ನಮ್ಮ ಮಗಳು ಕೂತಿದ್ದ ಸೀಟ್ ಸಮೀಪಕ್ಕೇ ಲಾರಿ ಡಿಕ್ಕಿಯಾಗಿದೆ. ಅವರು ಅದರೊಳಗೇ ಜ್ಞಾನ ತಪ್ಪಿದಾರೆ. ಹಾಗಾಗಿ ಅಲ್ಲೇ ಸುಟ್ಟು ಹೋಗಿದಾರೆ. ಮೃತದೇಹ ಕಂಡು ಹಿಡಿಯಲು ಆಗದ ರೀತಿ ಆಗಿತ್ತು ಎಂದು ಬಿಕ್ಕಿ ಬಿಕ್ಕಿ ಹತ್ತರು.

ನವ್ಯ-ಮಾನಸದ ಸ್ನೇಹ ಹೇಗಿತ್ತು?

ಇನ್ನು ಮಂಜಪ್ಪ ಅವರು ನವ್ಯ ಹಾಗೂ ಮಾನಸ ಸ್ನೇಹದ ಬಗ್ಗೆ ಎಳೆ ಎಳೆಯಾಗಿ ಬಿಟ್ಟಿದ್ದಾರೆ. ಮಾನಸ ಹಾಗೂ ನವ್ಯ ಒಂದೇ ರೀತಿಯ ಬಟ್ಟೆ ತೆಗೆದುಕೊಳ್ಳುತ್ತಿದ್ದರು. ಒಂದೇ‌ ರೀತಿಯ ಜ್ಯುವೆಲರಿ ಹಾಕಿಕೊಳ್ಳುತ್ತಿದ್ದರು. ಇಬ್ಬರು ಓದಿದ್ದು ಒಂದೇ ಕಾಲೇಜು. ಒಟ್ಟಿಗೆ ಒಂದೇ ಕಡೆ ಕೆಲಸ ಮಾಡುತಿದ್ದರು. ಒಂದೇ ತಟ್ಟೆಯಲ್ಲಿ ಅನ್ನ ತಿನ್ನೋರು. ಎಲ್ಲಿಗೆ ಹೋಗಲಿ ಊರಿಗೆ ಬರಲಿ ಒಟ್ಟಿಗೆ ಓಡಾಡೋರು. ಅವರಿಬ್ಬರು ಒಟ್ಟಿಗೆ ಇದ್ದದ್ದು ನಮಗೂ ಧೈರ್ಯ ಇತ್ತು. ಆದರೆ ದೇವರು ಈ ರೀತಿ ಅನ್ಯಾಯ ಮಾಡಿಬಿಟ್ಟ. ಎರಡು ವರ್ಷದಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಇದ್ದರು. ಜೊತೆಯಲ್ಲೆ ಇದ್ದರು ಈ ಜೊತೆಯಾಗೆ ನಮ್ಮನ್ನ ಬಿಟ್ಟು ಹೋದ್ರು ಎಂದು ಕಣ್ಣೀರಿಟ್ಟರು.

ಇದನ್ನೂ ನೋಡಿ: ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ

ನವ್ಯಳ ಮದ್ವೆ ಫಿಕ್ಸ್ ಆಗಿತ್ತು


ಚಿತ್ರದುರ್ಗ ಪೊಲೀಸರು ತುಂಬಾ ಸಹಾಯ ಮಾಡಿದ್ರು. ಘಟನೆ ಸಂಭವಿಸುವ ಮುನ್ನ ರಾತ್ರಿ 8 ಗಂಟೆಗೆ ಬಸ್ ಹತ್ತಿದಾಗ ಅರ್ಧ ಗಂಟೆ ಮಾತಾಡಿದ್ದಳು.ಆದ್ರೆ, ಬೆಳಿಗ್ಗೆ ಫೋನ್ ಮಾಡಿದ್ರೆ ಸ್ಚಿಚ್ ಆಫ್ ಆಗಿತ್ತು. ಏಪ್ರಿಲ್ 28-29ಕ್ಕೆ ನವ್ಯಳ ಮದುವೆ ನಿಶ್ಚಯ ಮಾಡಿದ್ದು, ಎಲ್ಲಾ ತಯಾರಿ ಮಾಡಿದ್ದೆವು. ಮಂಟಪ ಸಹ ಬುಕ್ ಮಾಡಲಾಗಿತ್ತಿ. ಅಲ್ಲದೇ ಜನವರಿ 25ಕ್ಕೆ ಬೆಂಗಳೂರಿನಲ್ಲಿ ಎಂಗೇಜ್ಮೆಂಟ್ ಕೂಡ ಮಾಡಬೇಕಿತ್ತು ಸರ್ ಎಂದು ಮಗಳನ್ನು ನೆನೆದು ಗೋಳಾಡಿದರು.

ಕುಚಿಕು ಗೆಳೆಯರನ್ನು ಗುರುತಿಸಲು ಡಿಎನ್​ಎ ಟೆಸ್ಟ್

ನವ್ಯ ಹಾಗೂ ಮಾನಸ ಅವರ ಶವಗಳನ್ನು ಗುರುತು ಹಿಡಿಯಲು ಇಬ್ಬರ ತಂದೆ – ತಾಯಿಯನ್ನು ಕರೆಯಿಸಿದ್ದರೂ ಸಾಧ್ಯವಾಗಿಲ್ಲ.  ಕತ್ತಿನಲ್ಲಿದ್ದ ಚೈನ್ ಮೂಲಕ ಪತ್ತೆ ಮಾಡಲು ಮುಂದಾಗಿದ್ದರು . ಆದ್ರೆ, ಇಬ್ಬರೂ ಕುಚಿಕು ಸ್ನೇಹಿತರಾಗಿದ್ದರಿಂದ ಪರಸ್ಪರ ಎಕ್ಸ್​ಚೇಂಜ್ ಮಾಡಿಕೊಳ್ಳುತ್ತಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಹೀಗಾಗಿ ಪತ್ತೆ ಮಾಡಲು ಗೊಂದಲ ಸೃಷ್ಟಿ ಆಗಿದೆ.  ಹಾಗಾಗಿ,  ಅಂತಿಮವಾಗಿ ಇವರಿಬ್ಬರ ಅಸ್ಥಿಪಂಜರದ ಮೂಳೆಗಳನ್ನು ಅವರ ಸಂಬಂಧಿಕರ ರಕ್ತದ ಸ್ಯಾಂಪಲ್ ನಿಂದ ಡಿಎನ್ ಎ ಟೆಸ್ಟ್ ಮಾಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಡಿಎನ್ ಎ ಟೆಸ್ಟ್ ನಿಂದ ಈ ಎರಡು ಅಸ್ಥಿಪಂಜರಗಳಲ್ಲಿ ಯಾರು ನವ್ಯಾ, ಯಾರು ಮಾನಸ ಎಂಬುದು ತಿಳಿದುಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಠಿಣ ಶಿಕ್ಷೆಯಾಗಲಿ; ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ಅಲ್ಪಸಂಖ್ಯಾತರ ಹಿಂಸಾಚಾರಕ್ಕೆ ಭಾರತ ಖಂಡನೆ – Kannada News | India condemns Hindu man lynching and violence against minorities in Bangladesh

ಢಾಕಾ, ಡಿಸೆಂಬರ್ 26: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಇಬ್ಬರು ಹಿಂದೂ ಪುರುಷರ ಹತ್ಯೆಯ ಘಟನೆಗಳನ್ನು ಭಾರತ ಇಂದು ತೀವ್ರವಾಗಿ ಖಂಡಿಸಿದೆ. ಇತ್ತೀಚಿನ ಹತ್ಯೆಯಿಂದ ಭಾರತ ವಿಚಲಿತವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಇದರ ಜವಾಬ್ದಾರಿಯುತರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. “ಬಾಂಗ್ಲಾದೇಶದಲ್ಲಿ (Bangladesh) ಅಲ್ಪಸಂಖ್ಯಾತರ ವಿರುದ್ಧ ನಿರಂತರ ದ್ವೇಷವು ಬಹಳ ಕಳವಳಕಾರಿ ವಿಷಯವಾಗಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂ ಯುವಕನ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಈ ಹತ್ಯೆಯ ಅಪರಾಧಿಗಳ ಸಾವಿಗೆ ನ್ಯಾಯ ದೊರಕುತ್ತದೆ ಎಂದು ನಿರೀಕ್ಷಿಸುತ್ತೇವೆ” ಎಂದು ಜೈಸ್ವಾಲ್ ಹೇಳಿದ್ದಾರೆ.

ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಸುಮಾರು 2,900 ಹಿಂಸಾಚಾರ ಘಟನೆಗಳು ನಡೆದಿವೆ. ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಭೀಕರ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಬಾಂಗ್ಲಾದೇಶ ಹೊರಡಿಸಿದ ಸುಳ್ಳು ನಿರೂಪಣೆಯನ್ನು ತಿರಸ್ಕರಿಸಿ ನಾವು ಈ ಹಿಂದೆಯೂ ಹೇಳಿಕೆಗಳನ್ನು ನೀಡಿದ್ದೇವೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್​ಪಿ ನಾಯಕ ತಾರಿಖ್ ರಹಮಾನ್

ಈ ತಿಂಗಳು ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯನ್ನು ಗುಂಪೊಂದು ಥಳಿಸಿ ಕೊಂದ ಎರಡು ಪ್ರತ್ಯೇಕ ಘಟನೆಗಳು ನಡೆದಿತ್ತು. ಬುಧವಾರ ತಡರಾತ್ರಿ ರಾಜ್‌ಬರಿ ಜಿಲ್ಲೆಯಲ್ಲಿ ಹಿಂದೂ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಂದಿತು. ಅಧಿಕಾರಿಗಳ ಪ್ರಕಾರ, ಈ ಹಿಂಸಾಚಾರವು ಸುಲಿಗೆಗೆ ಸಂಬಂಧಿಸಿದ ಚಟುವಟಿಕೆಗಳಿಂದ ಹುಟ್ಟಿಕೊಂಡಿದೆ ಎಂದು ಆರೋಪಿಸಲಾಗಿದೆ. ಭಾರತ ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಆಧಾರರಹಿತ ಧರ್ಮನಿಂದನೆಯ ಆರೋಪದ ಮೇಲೆ ಗುಂಪೊಂದು ಥಳಿಸಿ, ಬೆಂಕಿ ಹಚ್ಚಿ, ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ ಅವರನ್ನು ಹತ್ಯೆ ಮಾಡಲಾಗಿತ್ತು. ಆದರೆ, ಈ ಹತ್ಯೆಯನ್ನು ಖಂಡಿಸಿದ ಭಾರತ ಈ ಕೃತ್ಯದ ಅಪರಾಧಿಗಳಿಗೆ ನ್ಯಾಯ ನೀಡಲಾಗುವುದು ಎಂದು ಜೈಸ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: Bomb Attack: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಬಾಂಬ್ ದಾಳಿಗೆ ಒಬ್ಬ ಬಲಿ

“ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ನಿರಂತರ ದ್ವೇಷವು ಬಹಳ ಕಳವಳಕಾರಿ ವಿಷಯವಾಗಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂ ಯುವಕನ ಹತ್ಯೆಯನ್ನು ನಾವು ಖಂಡಿಸುತ್ತೇವೆ” ಎಂದು ಅವರು ಉಲ್ಲೇಖಿಸಿದ್ದಾರೆ.

“ಬಾಂಗ್ಲಾದೇಶದ ಜನರೊಂದಿಗೆ ನಮ್ಮ ಸಂಬಂಧಗಳನ್ನು ಬಲಪಡಿಸಲು ಭಾರತವು ಬದ್ಧವಾಗಿದೆ. ನಾವು ಬಾಂಗ್ಲಾದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬೆಂಬಲಿಸುತ್ತೇವೆ. ಬಾಂಗ್ಲಾದೇಶದಲ್ಲಿ ಮುಕ್ತ, ನ್ಯಾಯಯುತ, ಎಲ್ಲರನ್ನೂ ಒಳಗೊಂಡ ಮತ್ತು ಭಾಗವಹಿಸುವ ಚುನಾವಣೆಗಳಿಗೆ ನಿರಂತರವಾಗಿ ಕರೆ ನೀಡುತ್ತಿದ್ದೇವೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹನುಮಂತನಿಗೆ ಪೂಜೆ ಮಾಡಲು ಕಿತ್ತಾಟ: 3 ಕೇಸ್​ ಬುಕ್, ವಿವಾದದ ಕೇಂದ್ರ ಬಿಂದುವಾದ ಅಂಜನಾದ್ರಿ – Kannada News | Koppal: Anjanadri Temple Dispute: Priests Clash Over Puja Rights

ಕೊಪ್ಪಳ, ಡಿಸೆಂಬರ್​ 26: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ (Anjanadri Betta). ಅದು ಹನುಮ ಹುಟ್ಟಿದ ಸ್ಥಳ. ಈ ಕ್ಷೇತ್ರಕ್ಕೆ ದೇಶ-ವಿದೇಶದಿಂದ ಭಕ್ತರು ಬರುತ್ತಾರೆ. 575 ಮೆಟ್ಟಿಲೇರಿ ಹನುಮನ ದರ್ಶನ ಪಡೆದು ಪುನೀತರಾಗುತ್ತಾರೆ. ಇದೇ ಹನುಮ ಹುಟ್ಟಿದ ನಾಡು ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಸ್ವಾಮೀಜಿಗಳಿಬ್ಬರು ಗರ್ಭಗುಡಿಯಲ್ಲಿಯೇ ಜಗಳ ಮಾಡಿಕೊಂಡಿದ್ದಾರೆ. ಖಾವಿಧಾರಿಗಳು ಬಾಯಲ್ಲಿ ಕೀಳುಮಟ್ಟದ ಪದ ಪ್ರಯೋಗವಾಗಿದೆ. ಸದ್ಯ ಪ್ರಕರಣ ಗಂಭೀರವಾಗಿದ್ದು, ಎರಡು ದಿನದ ಅವಧಿಯಲ್ಲಿ ಮೂರು ಕೇಸ್ ದಾಖಲಾಗಿವೆ.

ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಅರ್ಚಕರ ಗಲಾಟೆ

ಈ ಅಂಜನಾದ್ರಿ ಪರ್ವತದಲ್ಲಿ ಹನುಮ ಹುಟ್ಟಿದ ಎನ್ನುವ ಪ್ರತೀತಿ ಇದೆ. ಇದೇ ಅಂಜನಾದ್ರಿ ಕಳೆದ ನಾಲ್ಕು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಸ್ವಾಮೀಜಿಗಳಿಬ್ಬರ ನಡುವಿನ ಗಲಾಟೆ. ಕಳೆದ ನಾಲ್ಕು ದಿನಗಳ ಹಿಂದೆ ಹನುನ ಹುಟ್ಟಿದ ಜಾಗದಲ್ಲಿ ಅರ್ಚಕ ಮಾಹಂತ ವಿದ್ಯಾದಾಸ್ ಬಾಬಾ ಹಾಗೂ ಹಂಪಿಯ ಗೋವಿಂದಾನಂದ ಸರಸ್ವತಿ ಮಧ್ಯೆ ಪೂಜಾ ವಿಚಾರಕ್ಕೆ ಗಲಾಟೆಯಾಗಿತ್ತು. ಮಾತಿಗೆ ಮಾತು ಬೆಳದಿತ್ತು. ಒಂದು ಹಂತಕ್ಕೆ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು.

ಇದನ್ನೂ ಓದಿ: ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್

ಯಾವಾಗ ಅಂಜನಾದ್ರಿಯಲ್ಲಿ ಗಲಾಟೆಯಾಯಿತೋ ಗೋವಿಂದಾನಂದ ಸರಸ್ವತಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ವಿದ್ಯಾದಾಸ್ ಬಾಬಾ ಸೇರಿ 10 ಜನರ ವಿರುದ್ದ ದೂರು ನೀಡಿದ್ದರು. ಇತ್ತ ವಿದ್ಯಾದಾಸ್ ಬಾಬಾ ಕೂಡ ಆನಲೈನ್​ನಲ್ಲಿ ದೂರು ದಾಖಲಿಸಿದ್ದರು. ಆದರೆ ಅದು ಅಧಿಕೃತವಾಗಿಲ್ಲ, ಈ ಮಧ್ಯೆ ಮರುದಿನ ಮತ್ತೆ ಪಂಚನಾಮೆಗೆ ಬಂದಾಗ ವಿದ್ಯಾದಾಸ್ ಬಾಬಾ ಬೆಂಬಲಿಗರು, ಗೋವಿಂದಾನಂದ ಸರಸ್ವತಿ ಮೇಲೆ ಹಲ್ಲೆ ಮಾಡಿದ್ದಾರೆ. ತಲೆಗೆ ಹೊಡೆದು ಕಬ್ಬಿಣದ ಪೈಪ್​ನಿಂದ ಹಲ್ಲೆಗೆ ಮುಂದಾಗಿದ್ದರು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ, ಗಂಗಾವತಿ ಗ್ರಾಮೀಣ ಪೊಲೀಸರು ಹಲ್ಲೆಗೆ ಮುಂದಾಗಿದ್ದ ಐವರನ್ನು ಅರೆಸ್ಟ್ ಮಾಡಿದ್ದಾರೆ.  ವಿದ್ಯಾದಾಸ್ ಬಾಬಾ ವಿರುದ್ದ ಗೋವಿಂದಾನಂದ ಸರಸ್ವತಿ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ದೂರು ದಾಖಲು ಮಾಡಿದ್ದಾರೆ.

ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ಮೂರು ಕೇಸ್

ಇನ್ನು ಪಂಚನಾಮೆಗೆ ಹೋದ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದಡಿ ಪೊಲೀಸರು ವಿದ್ಯಾದಾಸ್ ಬಾಬಾ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲು ಮಾಡಿದ್ದಾರೆ. ಎರಡು ದಿನದ ಅವಧಿಯಲ್ಲಿ ಒಟ್ಟು ಮೂರು ಕೇಸ್ ದಾಖಲಾಗಿವೆ. ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ಮೂರು ಕೇಸ್ ದಾಖಲಾಗಿವೆ.

ಇನ್ನು ಅರ್ಚಕ ಮಹಾಂತ ವಿದ್ಯಾದಾಸ್ ಬಾಬಾ ವಿರುದ್ದ ಎರಡು ದಿನದ ಅವಧಿಯಲ್ಲಿ ಮೂರು ಕೇಸ್ ದಾಖಲಾಗಿದ್ದು, ಪೊಲೀಸರ ನಡೆ ಮೇಲೆ ಅನುಮಾನ ಮೂಡಿದೆ. ಇದುವರೆಗೂ ಅರ್ಚಕ ವಿದ್ಯಾದಾಸ್ ಬಾಬಾ ನೀಡಿದ ದೂರು ದಾಖಲಾಗಿಲ್ಲ, ಆದರೆ ಅಂದು ಗೋವಿಂದಾನಂದ ಸರಸ್ವತಿ ನೀಡಿದ ದೂರು ದಾಖಲಾಗಿದೆ. ಹೀಗಾಗಿ ಈ ಪ್ರಕರಣದ ಹಿಂದೆ ಏನೋ ಇದೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನು ಅದಕ್ಕೆ ಕೋರ್ಟ್ ಕೇಸ್​​ವೊಂದು ಕಾರಣವಾಯಿತಾ ಎನ್ನುವ ಅನುಮಾನವು ವ್ಯಕ್ತವಾಗುತ್ತಿದೆ.

ಕಳೆದ 2018ರಿಂದ ಅರ್ಚಕ ವಿಚಾರವಾಗಿ ಜಿಲ್ಲಾಡಳಿತ ಹಾಗೂ ವಿದ್ಯಾದಾಸ್ ಬಾಬಾ ನಡುವೆ ವ್ಯಾಜ್ಯ ಇದೆ. ಧಾರವಾಡ ಹೈಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದೆ. ಇದೀಗ ಆ ಕೇಸ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಂಜನಾದ್ರಿಯಲ್ಲಿ ಯಾರು ಪೂಜೆ ಮಾಡಬೇಕು ಎನ್ನುವುದು ಇತ್ಯರ್ಥವಾಗಲಿದೆ. ಆದರೆ, ಮುಂಚೆ ಈ ಘಟನೆಗಳು ನಡೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಬೇಕು ಅಂತಲೇ ಕಾಣದ ಕೈಗಳು ವಿವಾದ ಸೃಷ್ಟಿ ಮಾಡತಿದೆಯಾ ಅನ್ನೋ ಅನುಮಾನ ಇದೆ. ಇದೇ ಗೋಂವಿದಾನಂದ ಸರಸ್ವತಿ ಕಿಷ್ಕಿಂಧಾ ಪ್ರದೇಶದಲ್ಲಿ ಬೃಹತ್ ಆಂಜನೇಯನ ಮೂರ್ತಿ ಸ್ಥಾಪನೆ ಮಾಡುವುದಾಗಿ ಹೇಳಿಕೊಂಡು ಓಡಾಡಿದ್ದಾರೆ. ಇಷ್ಟು ದಿನ ಬರಲಾರದ ಗೋವಿಂದಾನಂದ ಸರಸ್ವತಿ ಶ್ರೀ ದಿಢೀರ್ ಪ್ರತ್ಯಕ್ಷವಾಗಿದ್ದು ಏಕೆ ಅನ್ನೋ ಅನುಮಾನ ಹುಟ್ಟಿಕೊಂಡಿದೆ.

ಇದನ್ನೂ ಓದಿ: Koppal: ಹನುಮ‌ಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಅಣಿಯಾದ ಅಂಜನಾದ್ರಿ; ಸಿದ್ಧತೆ ಹೇಗಿದೆ?

ಒಟ್ಟಾರೆ ಅಂಜನಾದ್ರಿಯಲ್ಲಿ ತೀರ್ಪು ಬರುವ ಕೆಲವೇ ದಿನಗಳ ಮುಂಚೆ ವಿವಾದ ಸೃಷ್ಟಿಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಇದುವರೆಗೂ ಅಂಜನಾದ್ರಿ ವಿಚಾರವಾಗಿ ಯಾವುದೇ ಮಾಹಿತಿ ನೀಡಿಲ್ಲ. ಮೂರು ಕೇಸ್​ ದಾಖಲಾದ ಹಿನ್ನಲೆ ಅರ್ಚಕ ವಿದ್ಯಾದಾಸ್ ಬಾಬಾ ಸದ್ಯ ಅಂಜನಾದ್ರಿಯನ್ನು ತೊರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:02 pm, Fri, 26 December 25

Source link

VHT 2025-26: ಕರುಣ್, ಪಡಿಕ್ಕಲ್ ಶತಕ; ಕರ್ನಾಟಕಕ್ಕೆ ಸತತ 2ನೇ ಜಯ – Kannada News | Vijay Hazare: Karnataka Dominates with Padikkal, Nair Centuries!

ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ ಎಡವಿದ್ದ ಕರ್ನಾಟಕ ತಂಡ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಜಾರ್ಖಂಡ್ ನೀಡಿದ್ದ 412 ರನ್​ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿ ಗೆದ್ದ ಕರ್ನಾಟಕ ಇದೀಗ ತನ್ನ ಎರಡನೇ ಪಂದ್ಯದಲ್ಲಿ ಕೇರಳ ವಿರುದ್ಧ 8ವಿಕೆಟ್​ಗಳ ಸುಲಭ ಜಯ ದಾಖಲಿಸಿದೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ದೇವದತ್ ಪಡಿಕ್ಕಲ್‌, ಈ ಪಂದ್ಯದಲ್ಲೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೇರಳ ತಂಡ 284 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನು 10 ಎಸೆತಗಳು ಬಾಕಿ ಇರುವಂತೆಯೇ ಜಯ ದಾಖಲಿಸಿತು. ಕರ್ನಾಟಕ ಪರ ಮಿಂಚಿದ ಪಡಿಕ್ಕಲ್ 124 ರನ್​ಗಳ ಇನ್ನಿಂಗ್ಸ್ ಆಡಿದರೆ, ಕರುಣ್ ನಾಯರ್ ಕೂಡ ಅಜೇಯ 130 ರನ್ ಬಾರಿಸಿದರು.

Source link

‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು? – Kannada News | Piracy problem to 45 Kannada movie producer address the issue

ಅರ್ಜುನ್ ಜನ್ಯ (Arjun Janya) ನಿರ್ದೇಶಿಸಿ, ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವ ‘45’ ಸಿನಿಮಾ ಬಿಡುಗಡೆ ಆಗಿದ್ದು, ಅದ್ಭುತ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಮಂದಿ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅರ್ಜುನ್ ಜನ್ಯ ಒಂದೊಳ್ಳೆ ಸಿನಿಮಾ ಮಾಡಿದ್ದಾರೆಂಬ ಅಭಿಪ್ರಾಯ ಎಲ್ಲೆಡೆ ಹರಿದಾಡುತ್ತಿದೆ. ಸಿನಿಮಾದ ಕಲೆಕ್ಷನ್ ಸಹ ಉತ್ತಮವಾಗಿಯೇ ಇದೆ. ಆದರೆ ಇದೀಗ ‘45’ ಸಿನಿಮಾಕ್ಕೆ ಪೈರಸಿ ಕಾಟ ಶುರುವಾಗಿದೆ. ಸಿನಿಮಾದ ನಿರ್ಮಾಪಕ ರಮೇಶ್ ರೆಡ್ಡಿ ಅವರು ಈ ಬಗ್ಗೆ ಮಾತನಾಡಿದ್ದು, ‘ಸಿನಿಮಾದ ನಿರ್ಮಾಪಕನಾದ ನನಗೇ ಪೈರಸಿ ಲಿಂಕುಗಳನ್ನು ಕಳಿಸಿದ್ದಾರೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಈ ರಾಜ್ಯದ ಶಾಲೆಗಳಲ್ಲಿ ಮಕ್ಕಳು ಪ್ರತಿದಿನ ನ್ಯೂಸ್ ಪೇಪರ್ ಓದುವುದು ಕಡ್ಡಾಯ – Kannada News | Uttar Pradesh government mandates newspaper reading in schools to boost learning and reduce screen time

ನವದೆಹಲಿ, ಡಿಸೆಂಬರ್ 26: ಉತ್ತರ ಪ್ರದೇಶ (Uttar Pradesh) ಸರ್ಕಾರವು ಸರ್ಕಾರಿ ಸ್ವಾಮ್ಯದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ನ್ಯೂಸ್ ಪೇಪರ್ ಓದುವುದನ್ನು ಕಡ್ಡಾಯಗೊಳಿಸಿದೆ. ಮಕ್ಕಳಲ್ಲಿ ನಿಯಮಿತ ಓದುವ ಹವ್ಯಾಸವನ್ನು ಬೆಳೆಸಲು, ಅತಿಯಾದ ಮೊಬೈಲ್ ಸ್ಕ್ರೀನಿಂಗ್ ಸಮಯವನ್ನು ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳು ದೈನಂದಿನ ಶಾಲಾ ಚಟುವಟಿಕೆಗಳ ಅತ್ಯಗತ್ಯ ಭಾಗವಾಗಬೇಕು ಎಂದು ಆದೇಶಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿಯನ್ನು ಉತ್ತೇಜಿಸುವ ಮಾರ್ಗಗಳ ಮೇಲೆ ಕೇಂದ್ರೀಕರಿಸಿದ ನವೆಂಬರ್‌ನಲ್ಲಿ ಹೊರಡಿಸಲಾದ ಹಿಂದಿನ ಆದೇಶವನ್ನು ಈ ನಿರ್ದೇಶನವು ಅನುಸರಿಸುತ್ತದೆ.

ಸರ್ಕಾರದ ಆದೇಶದ ಪ್ರಕಾರ, ಶಾಲೆಗಳು ಬೆಳಗಿನ ಸಭೆಯಲ್ಲಿ ಪತ್ರಿಕೆ ಓದುವಿಕೆಗಾಗಿ 10 ನಿಮಿಷಗಳ ಸಮಯವನ್ನು ನಿಗದಿಪಡಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಸಂಪಾದಕೀಯ ಲೇಖನಗಳು ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಕ್ರೀಡಾಕೂಟಗಳಿಗೆ ಸಂಬಂಧಿಸಿದ ಪ್ರಮುಖ ಸಕಾರಾತ್ಮಕ ಸುದ್ದಿಗಳಿಂದ ಪ್ರಮುಖ ಅಂಶಗಳನ್ನು ಓದಬೇಕಾಗುತ್ತದೆ.

ಇದನ್ನೂ ಓದಿ: ಮೂರು ವರ್ಷಗಳಲ್ಲಿ ಮೂರು ಮದುವೆಯಾಗಿ ಜೈಲುಪಾಲಾದ ವ್ಯಕ್ತಿ

ವಿದ್ಯಾರ್ಥಿಗಳು ಡಿಜಿಟಲ್ ಸ್ವರೂಪಗಳ ಬದಲಿಗೆ ನಿಜವಾದ ನ್ಯೂಸ್ ಪೇಪರ್​​ಗಳನ್ನು ಬಳಸಬೇಕು. ಏಕೆಂದರೆ ಮುದ್ರಿತ ಪತ್ರಿಕೆಗಳನ್ನು ಓದುವುದು ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬ ಉದ್ದೇಶ ಸರ್ಕಾರದ್ದು.

ನಿಯಮಿತ ಪತ್ರಿಕೆ ಓದುವಿಕೆಯು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಏಕೆಂದರೆ, ಇದು ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ತಿಳುವಳಿಕೆಯನ್ನು ಬಲಪಡಿಸುತ್ತದೆ, ಇದು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹ ಮುಖ್ಯವಾಗಿದೆ. ಇದಲ್ಲದೆ, ಶಬ್ದಕೋಶ, ಭಾಷಾ ಶೈಲಿ ಮತ್ತು ಬರವಣಿಗೆಯ ಕೌಶಲ್ಯಗಳನ್ನು ಸಹ ಸುಧಾರಿಸಲಾಗುತ್ತದೆ.

ಇದನ್ನೂ ಓದಿ: Train Fare Hike: ಇಂದಿನಿಂದ ರೈಲು ಪ್ರಯಾಣ ದುಬಾರಿ, ಹೊಸ ಟಿಕೆಟ್ ದರಗಳ ಕುರಿತು ಇಲ್ಲಿದೆ ಮಾಹಿತಿ

ಸುಡೊಕು, ಕ್ರಾಸ್‌ವರ್ಡ್‌ಗಳು ಮತ್ತು ನ್ಯೂಸ್​ ಪೇಪರ್​​ಗಳಲ್ಲಿನ ಪದ ಆಟಗಳು ತಾರ್ಕಿಕ ಚಿಂತನೆ ಮತ್ತು ಸಮಸ್ಯೆ ಪರಿಹಾರಕ್ಕಾಗಿ ಮೆದುಳಿಗೆ ತರಬೇತಿ ನೀಡುತ್ತವೆ ಎಂದು ಆದೇಶವು ತಿಳಿಸಿದೆ. 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ, ಪ್ರಮುಖ ಸುದ್ದಿ ತುಣುಕುಗಳೊಂದಿಗೆ ಸ್ಕ್ರ್ಯಾಪ್‌ಬುಕ್‌ಗಳನ್ನು ನಿರ್ವಹಿಸುವುದು, ಸಂಪಾದಕೀಯಗಳ ಕುರಿತು ಸಾಪ್ತಾಹಿಕ ಚರ್ಚೆಗಳಲ್ಲಿ ಭಾಗವಹಿಸುವುದು ಮತ್ತು ಸುದ್ದಿ ವರದಿಗಳನ್ನು ವಿಶ್ಲೇಷಿಸುವುದನ್ನು ಕಡ್ಡಾಯಗೊಳಿಸುವಂತೆ ಶಾಲೆಗಳಿಗೆ ನಿರ್ದೇಶಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ಪ್ಯಾಲೆಸ್ ಮುಂಭಾಗ ಸ್ಫೋಟ: ಸಾವಿನ ಸಂಖ್ಯೆ 2ಕ್ಕೆ ಏರಿಕೆ, ಪ್ರಕರಣದ ಸುತ್ತ ಅನುಮಾದ ಹುತ್ತ – Kannada News | Mysuru balloon gas cylinder Blast: Death roll rises to 2 as Woman succumbs to injuries

ಮೈಸೂರು, (ಡಿಸೆಂಬರ್ 26): ಮೈಸೂರು ಅರಮನೆ ಮುಂಭಾಗದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ (Mysuru balloon gas cylinder Blast) ಗಾಯಗೊಂಡಿದ್ದ ಮಹಿಳೆ (Woman) ಸಾವನ್ನಪ್ಪಿದ್ದಾರೆ. ನಿನ್ನೆ(ಡಿಸೆಂಬರ್ 25) ಅರಮನೆ (Mysuru Palace) ಜಯಮಾರ್ತಂಡ ದ್ವಾರದ ಬಳಿ ಸಲೀಂ ಎಂಬಾತ ಬಲೂನ್ ಮಾರುತ್ತಿದ್ದ ಈ ವೇಳೆ ಸಿಲಿಂಡರ್ ಸ್ಪೋಟವಾಗಿತ್ತು. ಸ್ಫೋಟದ ತೀವ್ರತೆಗೆ ಉತ್ತರ ಪ್ರದೇಶ ಮೂಲದ 40 ವರ್ಷದ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಂಜುಳಾ ಗಂಭೀರಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು K.R.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಡಿಸೆಂಬರ್ 26) ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ಎರಡಕ್ಕೆ ಏರಿಯಾಗಿದೆ.

ನಿನ್ನೆ(ಡಿಸೆಂಬರ್ 25) ಅರಮನೆ (Mysuru Palace) ಜಯಮಾರ್ತಂಡ ದ್ವಾರದ ಬಳಿ ಉತ್ತರ ಪ್ರದೇಶ ಮೂಲದ ಸಲೀಂ ಎಂಬಾತ ಬಲೂನ್ ಮಾರುತ್ತಿದ್ದ ಈ ವೇಳೆ ಸಿಲಿಂಡರ್ ಸ್ಪೋಟವಾಗಿತ್ತು. ಪರಿಣಾಮ 40 ವರ್ಷದ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದರೆ, ನಾಲ್ವರಿಗೆ ಗಾಯಗಳಾಗಿದ್ದವು. ಅದರಲ್ಲೂ ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಂಜುಳಾ ಎನ್ನುವರಿಗೆ ಗಂಭೀರ ಗಾಯಗಳಾಗಿದ್ದವು.

ಇದನ್ನೂ ಓದಿ: ಮೈಸೂರು ಅರಮನೆ ಮುಂಭಾಗ ಭಾರೀ ಸ್ಫೋಟ, ಓರ್ವ ಸಾವು, ಹಲವರಿಗೆ ಗಂಭೀರ ಗಾಯ

ಪ್ರಕರಣ ಸುತ್ತ ಅನುಮಾನದ ಹುತ್ತ

ಇನ್ನು ಈ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗಿವೆ.  ಯಾಕಂದ್ರೆ ಮೃತ ಸಲೀಂ ಕಳೆದ 15 ದಿನ ಹಿಂದಷ್ಟೇ ಮೈಸೂರಿಗೆ ಬಲೂನ್ ಮಾರಲು ಬಂದಿದ್ದ. ಆದ್ರೆ, ಆತ ಮೈಸೂರಿನ ಲಾಡ್ಜ್​​ವೊಂದರಲ್ಲಿ ತಂಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಓರ್ವ ಬಲೂನ್ ಮಾರುವವ ಕಳೆದ 15 ದಿನಗಳಿಂದ ಲಾಡ್ಜ್​​ ನಲ್ಲಿ ಇರುವಷ್ಟು ಆರ್ಥಿಕವಾಗಿ ಸಬಲನಾಗಿರುತ್ತಾನೆಯೇ ಎನ್ನುವ ಪ್ರಶ್ನೆ ಉದ್ಭವವಾಗುತ್ತೆ. ಬಲೂನ್​​ ಮಾರಾಟದಿಂದ ಹೊಟ್ಟೆ ತುಂಬಿದರೆ ಸಾಕು ಎನ್ನುತ್ತಾರೆ. ಇಂತದರಲ್ಲಿ ಈ ಸಲೀಂ ಲಾಡ್ಜ್​​ನಲ್ಲಿ ತಂಗಿ ಬಲೂನ್ ವ್ಯಾಪಾರ ಮಾಡುತ್ತಿದ್ದ ಎನ್ನುವುದರ   ಹಿಂದೆ ಅನುಮಾನಗಳು ವ್ಯಕ್ತವಾಗಿವೆ. ಹೀಗಾಗಿ ಪೊಲೀಸರು ಮಾತ್ರವಲ್ಲದೇ ಎನ್​ಐಎ ಸಹ ಈ ಕೇಸಿನಲ್ಲಿ ಪ್ರವೇಶ ಮಾಡಿದ್ದು, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:49 pm, Fri, 26 December 25

Source link

ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಶಿವಣ್ಣ, ರಜನಿಕಾಂತ್: ಬಾಯ್ಬಿಟ್ಟ ಸ್ಟಾರ್ ನಟ – Kannada News | Mithun Chakraborty says he is acting with Shah Rukh Khan Shiva Rajkumar Rajinikanth in Jailer 2

ಮಲ್ಟಿಸ್ಟಾರರ್ ಸಿನಿಮಾಗಳ ಬಗ್ಗೆ ಪ್ರೇಕ್ಷಕರು ಯಾವಾಗಲೂ ಒಲವು ತೋರಿಸುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಿದ ಬಳಿಕ ಈ ಟ್ರೆಂಡ್ ಜಾಸ್ತಿ ಆಗಿದೆ. ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ಒಟ್ಟಿಗೆ ನಟಿಸುತ್ತಿದ್ದಾರೆ. ಅಚ್ಚರಿ ಎಂದರೆ, ಈಗ ಒಂದು ಬ್ರೇಕಿಂಗ್ ನ್ಯೂಸ್ ಕೇಳಿಬಂದಿದೆ. ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ರಜನಿಕಾಂತ್, ಶಿವರಾಜ್​​ಕುಮಾರ್ ಮುಂತಾದವರು ನಟಿಸುತ್ತಿದ್ದಾರೆ. ಈ ಬಗ್ಗೆ ಬಾಲಿವುಡ್​ನ ಹಿರಿಯ ನಟ ಮಿಥುನ್ ಚಕ್ರವರ್ತಿ (Mithun Chakraborty) ಅವರು ಬಾಯ್ಬಿಟ್ಟಿದ್ದಾರೆ. ಯಾವುದು ಆ ಸಿನಿಮಾ ‘ಜೈಲರ್ 2’! ಈ ಚಿತ್ರದಲ್ಲಿ ರಜನಿಕಾಂತ್, ಶಿವಣ್ಣ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಶಾರುಖ್ ಖಾನ್ (Shah Rukh Khan) ಕೂಡ ಪಾತ್ರವರ್ಗದಲ್ಲಿ ಇದ್ದಾರೆ ಎಂಬ ಗುಟ್ಟನ್ನು ಮಿಥುನ್ ಚಕ್ರವರ್ತಿ ಈಗ ಬಿಟ್ಟುಕೊಟ್ಟಿದ್ದಾರೆ.

ಇತ್ತೀಚೆಗೆ ನಟ ಮಿಥುನ್ ಚಕ್ರವರ್ತಿ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅವರು ‘ಜೈಲರ್ 2’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಮುಂದಿನ ಸಿನಿಮಾ ಜೈಲರ್ 2. ಅದರಲ್ಲಿ ಎಲ್ಲರೂ ನನ್ನ ಪಾತ್ರದ ವಿರುದ್ಧವಾಗಿ ಇರುತ್ತಾರೆ. ರಜನಿಕಾಂತ್, ಮೋಹನ್​ಲಾಲ್, ಶಾರುಖ್ ಖಾನ್, ರಮ್ಯಾ ಕೃಷ್ಣನ್, ಶಿವರಾಜ್​​ಕುಮಾರ್ ಸೇರಿದಂತೆ ಎಲ್ಲರೂ ನನ್ನ ವಿರುದ್ಧ ಇರುತ್ತಾರೆ’ ಎಂದು ಮಿಥುನ್ ಚಕ್ರವರ್ತಿ ಹೇಳಿದ್ದಾರೆ.

ಈ ಹೇಳಿಕೆ ನೀಡುವ ಮೂಲಕ ತಾವು ‘ಜೈಲರ್ 2’ ಸಿನಿಮಾದಲ್ಲಿ ವಿಲನ್ ಎಂಬುದನ್ನು ಮಿಥುನ್ ಚಕ್ರವರ್ತಿ ಬಹಿರಂಗಪಡಿಸಿದ್ದಾರೆ. ಅಲ್ಲದೇ, ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ಕೂಡ ನಟಿಸುತ್ತಿದ್ದಾರೆ ಎಂಬ ರಹಸ್ಯವನ್ನು ಅವರು ಬಾಯಿಬಿಟ್ಟಿದ್ದಾರೆ. ಈವರೆಗೂ ಚಿತ್ರತಂಡದವರು ಶಾರುಖ್ ಖಾನ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಈಗ ವಿಷಯ ಲೀಕ್ ಆದಂತೆ ಆಗಿದೆ.

ಶಾರುಖ್ ಖಾನ್, ರಜನಿಕಾಂತ್, ಶಿವರಾಜ್​​ಕುಮಾರ್, ಮೋಹನ್​ಲಾಲ್ ಮುಂತಾದವರು ಒಟ್ಟಿಗೆ ನಟಿಸುತ್ತಿರುವುದರಿಂದ ‘ಜೈಲರ್ 2’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ ಜಾಸ್ತಿ ಆಗಿದೆ. ಶಾರುಖ್ ಖಾನ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಬೇಕಿದೆ. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಧ್ಯ ಬೆರಳು ತೋರಿಸಿದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್

‘ಸನ್ ಪಿಕ್ಚರ್ಸ್’ ಮೂಲಕ ‘ಜೈಲರ್ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. 2026ರ ಜೂನ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. 2023ರಲ್ಲಿ ತೆರೆಕಂಡ ‘ಜೈಲರ್’ ಸೂಪರ್ ಹಿಟ್ ಆಗಿತ್ತು. ಅದರ ಮುಂದುವರಿದ ಭಾಗವಾಗಿ ‘ಜೈಲರ್ 2’ ನಿರ್ಮಾಣ ಆಗುತ್ತಿದೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಮೇಲಿನ ಹೈಪ್ ಹೆಚ್ಚುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 4:49 pm, Fri, 26 December 25

Source link

VHT 2025-26: ಶತಕದ ಬಳಿಕ ಸೊನ್ನೆ; ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ರೋಹಿತ್ ಶರ್ಮಾ – Kannada News | Rohit Sharma’s Vijay Hazare Trophy: From Century Hero to Golden Duck

7 ವರ್ಷಗಳ ಬಳಿಕ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಕಣಕ್ಕಿಳಿದಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದ್ದರು. ಸಿಕ್ಕಿಂ ವಿರುದ್ಧದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ರೋಹಿತ್ 155 ರನ್ ಬಾರಿಸಿದ್ದರು. ಪರಿಣಾಮವಾಗಿ, ಎರಡನೇ ಪಂದ್ಯದಲ್ಲಿ ರೋಹಿತ್ ಅವರಿಂದ ಇದೇ ರೀತಿಯ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ನಿರಾಸೆ ಮೂಡಿಸಿದ ರೋಹಿತ್, ಉತ್ತರಾಖಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಔಟಾದರು. ಅಂದರೆ ಈ ಪಂದ್ಯದಲ್ಲಿ ರೋಹಿತ್​ ಖಾತೆ ತೆರೆಯದೆಯೇ ಮೊದಲ ಎಸೆತದಲ್ಲೇ ಔಟಾದರು.

ಡಿಸೆಂಬರ್ 24 ರಂದು ಜೈಪುರದಲ್ಲಿ ಪ್ರಾರಂಭವಾದ ಈ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 62 ಎಸೆತಗಳಲ್ಲಿ ಶತಕ ಸಿಡಿಸಿ, 94 ಎಸೆತಗಳಲ್ಲಿ 155 ರನ್ ಸಿಡಿಸಿದ್ದರು. ರೋಹಿತ್ ತಮ್ಮ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಬಾರಿಸಿದ್ದರು. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವನ್ನು ಸುಮಾರು 20,000 ಪ್ರೇಕ್ಷಕರು ವೀಕ್ಷಿಸಿದ್ದರು.

ಸೊನ್ನೆ ಸುತ್ತಿದ ರೋಹಿತ್ ಶರ್ಮಾ

ಹೀಗಾಗಿ ಎರಡನೇ ಪಂದ್ಯದಲ್ಲಿಯೂ ರೋಹಿತ್ ಅಬ್ಬರಿಸುವುದನ್ನು ನೋಡಲು ಸಾವಿರಾರು ಅಭಿಮಾನಿಗಳು ಸವಾಯಿ ಮಾನ್ಸಿಂಗ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅದರಂತೆ ಮುಂಬೈ ತಂಡ ಕೂಡ ಮೊದಲು ಬ್ಯಾಟಿಂಗ್ ಆರಂಭಿಸಿತು. ಆದರೆ ರೋಹಿತ್ ಬ್ಯಾಟಿಂಗ್‌ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳ ಸಂತೋಷ ಕೇವಲ ಆರು ಎಸೆತಗಳಲ್ಲಿ ಮಾಯವಾಯಿತು. ಇನ್ನಿಂಗ್ಸ್‌ನ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಸ್ಟ್ರೈಕ್‌ಗೆ ಬಂದ ರೋಹಿತ್ ಶರ್ಮಾ, ತಮ್ಮ ಮೊದಲ ಎಸೆತದಲ್ಲೇ ಖಾತೆ ತೆರೆಯದೆಯೇ ವಿಕೆಟ್ ಒಪ್ಪಿಸಿದರು. ಉತ್ತರಾಖಂಡ ವೇಗಿ ದೇವೇಂದ್ರ ಬೋರಾ ಅವರ ಎಸೆತದಲ್ಲಿ ರೋಹಿತ್ ಕ್ಯಾಚಿತ್ತು ನಿರ್ಗಮಿಸಿದರು.

ರೋಹಿತ್, ಕೊಹ್ಲಿಯ ಶತಕಗಳ ಅಬ್ಬರ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು

331 ರನ್ ಕಲೆಹಾಕಿದ ಮುಂಬೈ

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಫಲರಾದರೂ, ತಂಡದ ಉಳಿದ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಇದರ ಪರಿಣಾಮದಿಂದಾಗಿ ಮುಂಬೈ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 331 ರನ್ ಕಲೆಹಾಕಿತು. ತಂಡದ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹಾರ್ದಿಕ್ ತಮೋರೆ 93 ರನ್​ಗಳ ಇನ್ನಿಂಗ್ಸ್ ಆಡಿದರೆ, ಸಹೋದರರಾದ ಸರ್ಫರಾಜ್ ಖಾನ್ ಹಾಗೂ ಮುಶೀರ್ ಖಾನ್ ತಲಾ 55 ರನ್​​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಶಮ್ಸ್ ಮುಲಾನಿ ಕೂಡ 48 ರನ್​ಗಳ ಕಾಣಿಕೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:21 pm, Fri, 26 December 25

Source link