ಬಾಲಯ್ಯ ಜನ್ಮದಿನಕ್ಕೆ ‘NBK 111’ ಧಮಾಕಾ: ‘ನ್ಯೂ ಏಜ್’ ಲುಕ್ನಲ್ಲಿ ಬಂದ ನಂದಮೂರಿ – Kannada News
ನಟ ನಂದಮೂರಿ ಬಾಲಕೃಷ್ಣ ಅವರ 65ನೇ ಜನ್ಮದಿನದ (ಜೂನ್ 10) ಅಂಗವಾಗಿ, ಅವರ ನಟನೆಯ 111ನೇ ಚಿತ್ರದ (NBK111) ಮೊದಲ ಝಲಕ್ ಬಿಡುಗಡೆಯಾಗಿದೆ. ‘ಎಂಟ್ರಿ ಆಫ್ ಆನ್ ಎರಾ’ ಹೆಸರಿನ ಈ ಗ್ಲಿಂಪ್ಸ್ ವೀಡಿಯೋ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಬಾಲಯ್ಯ ಎನರ್ಜಿ ನೋಡಿ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ. ‘ನೋ ಮೋರ್ ವಿಂಟೇಜ್, ಓನ್ಲಿ ನ್ಯೂ ಏಜ್’ ಹೆಸರಿನ ಟ್ಯಾಗ್‌ಲೈನ್‌ನೊಂದಿಗೆ ಈ ವೀಡಿಯೋ ಹೊರಬಂದಿದೆ. ಬಾಲಕೃಷ್ಣ ಅವರ ಎಂದಿನ ಸಾಂಪ್ರದಾಯಿಕ ಮಾಸ್ ಶೈಲಿಗಿಂತ ಇದು…