Category Archives: Blog

Your blog category

ನೇಪಾಳದಲ್ಲಿ ಕುಳಿತು ಭಾರತದಲ್ಲಿ ನೂರಾರು ಕೋಟಿ ರೂ. ವಂಚನೆ ಮಾಡುತ್ತಿದ್ದವರನ್ನು ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸರು! – Kannada News | Massive Cybercrime Ring Led by Chinese Handlers in Nepal Busted by Mangaluru Police

ನೇಪಾಳದಲ್ಲಿ ಕುಳಿತು ಭಾರತದಲ್ಲಿ ನೂರಾರು ಕೋಟಿ ವಂಚನೆ ಮಾಡುತ್ತಿದ್ದವರನ್ನು ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸರು!

ಮಂಗಳೂರು, ಫೆಬ್ರುವರಿ 06: ನೇಪಾಳದಲ್ಲಿ ಕುಳಿತು ಭಾರತವನ್ನೇ ಗುರಿಯಾಗಿಸಿಕೊಂಡು ನೂರಾರು ಕೋಟಿ ರೂಪಾಯಿ ವಂಚನೆ ಮಾಡುತ್ತಿದ್ದ ಅತಿದೊಡ್ಡ ಸೈಬರ್ ಫ್ರಾಡ್ ನೆಟ್ವರ್ಕ್ ಅನ್ನು (Cyber Fraud Network) ಮಂಗಳೂರು ಪೊಲೀಸರು ಭೇದಿಸಿದ್ದಾರೆ. ನೇಪಾಳ ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ, ಅಲ್ಲಿಯೇ ತಂಗಿ ವಂಚನೆ ನಡೆಸುತ್ತಿದ್ದ 11 ಮಂದಿ ಭಾರತೀಯ ಮೂಲದ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಂಚನೆಯ ಜಾಲವನ್ನು ನಿಯಂತ್ರಿಸುತ್ತಿದ್ದ ಚೀನಾದ ಹ್ಯಾಂಡ್ಲರ್​ಗಳು

ಮಂಗಳೂರಿನ ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಯ ಜಾಡು ಹಿಡಿದು ಆರೋಪಿಗಳವರೆಗೆ ಪೊಲೀಸರು ತಲುಪಿದ್ದರು. ಬಂಧಿತ ತಂಡದಲ್ಲಿ ಭಾರತೀಯರ ಜೊತೆಗೆ ಚೀನಾ ಮೂಲದ ವಂಚಕರು ಸೇರಿದ್ದು, ಇಡೀ ಜಾಲವನ್ನು ಚೀನಾದ ಹ್ಯಾಂಡ್ಲರ್‌ಗಳು ನಿಯಂತ್ರಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಆರೋಪಿಗಳಿಂದ ಲ್ಯಾಪ್‌ಟಾಪ್‌ಗಳು, 21 ಮೊಬೈಲ್ ಫೋನ್‌ಗಳು, 20 ವಿವಿಧ ಕಂಪನಿಯ ಸಿಮ್ ಕಾರ್ಡ್‌ಗಳು ಹಾಗೂ 20 ಬ್ಯಾಂಕ್ ಡೆಬಿಟ್–ಕ್ರೆಡಿಟ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಒಂದೇ ಖಾತೆಯಿಂದ 167 ಕೋಟಿ ರೂ ಹಣ ವರ್ಗಾವಣೆ

ತನಿಖೆಯಲ್ಲಿ ಒಟ್ಟು 624 ಬ್ಯಾಂಕ್ ಖಾತೆಗಳ ವಿವರ ಪತ್ತೆಯಾಗಿದ್ದು, ಈ ಖಾತೆಗಳ ವಿರುದ್ಧ NCRP ಪೋರ್ಟಲ್‌ನಲ್ಲಿ 4580ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಒಂದು ಖಾತೆಯಲ್ಲೇ 167 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ತನಿಖೆ ವೇಳೆ ವಂಚಕರು ಬಳಸಿದ್ದ ಉಳಿದ 10 ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗಿದ್ದು, ಈ ಖಾತೆಗಳ ಮೂಲಕ ಸುಮಾರು 30.70 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: ರಾಜ್ಯಾದ್ಯಂತ ಮೆಗಾ ದಾಳಿ, 13 ಮಾಸ್ಟರ್ ಮೈಂಡ್‌ಗಳ ಬಂಧನ

ಹೇಗೆ ನಡೀತಿತ್ತು ವಂಚನೆ?

ಸಾಮಾಜಿಕ ಜಾಲತಾಣಗಳ ಮೂಲಕ ಖಾತೆದಾರರು ಹಾಗೂ ಏಜೆಂಟರನ್ನು ನೇಮಿಸಿಕೊಂಡು, ದಿನಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಲಾಗುತ್ತಿತ್ತು. ವಂಚನೆಯ ಹಣವನ್ನು ಯುಎಸ್ ಡಾಲರ್‌ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು. ಈ ಜಾಲಕ್ಕೆ ಕಾಂಬೋಡಿಯಾದಲ್ಲಿರುವ ವಂಚನಾ ಬಿಪಿಓ ಸಹ ಬೆಂಬಲ ನೀಡುತ್ತಿದ್ದುದೂ ಪತ್ತೆಯಾಗಿದೆ.

ಬಂಧಿತ ಆರೋಪಿಗಳಿವರು!

ಗುಜರಾತಿ​​ನ ಬಾವಾ ನಗರ್ ಜಿಲ್ಲೆ ನಿವಾಸಿ ಮಕವನ್ ವಿಕ್ರಂ(25), ಪಶ್ಚಿಮ ಬಂಗಾಳದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್​​​ನ ಸಿಂಗಬುಮ್ ಜಿಲ್ಲೆಯ ಪುಪ್ಲ ಶಿವಕುಮಾರ್ ರಾವ್(32), ಉತ್ತರಪ್ರದೇಶದ ಮಾವೋ ಜಿಲ್ಲೆ ನಿವಾಸಿ ಗೌರವ್ ಪಾಂಡೆ(24), ಉತ್ತರ ಪ್ರದೇಶದ ಸುಲ್ತಾನ್ ಪುರ್ ಜಿಲ್ಲೆ ಹರ್ಷ್ ಮಿಸ್ರಾ(22), ಜಾರ್ಖಂಡ್​​ ಮೂಲದ ರಾಜೇಶ್ ಮಂಡನ್(30), ಲಖನೌ ಮೂಲದ ಮೊಹಮ್ಮದ್ ಆಕೀಬ್ ಅಲಿ(27), ಬಿಹಾರದ ನಲಂದಾ ಜಿಲ್ಲೆಯ ರಾಜೀವ್ ರಂಜನ್ ಕುಮಾರ್(30), ಜಾರ್ಖಂಡ್​​ ನಿವಾಸಿ ಮಿಥುನ್ ಕುಮಾರ್ ಮಂಗರಾಜ್(38), ರಾಜಸ್ಥಾನದ ಜೈಪುರದ ಓಂ ಪ್ರಕಾಶ್ ಯಾಧವ್ (37), ಝಾನ್ಸಿ ಮೂಲದ ನೌಶಾದ್ ಅಲಿ(34) ಸೇರಿ ಒಟ್ಟು 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಿಹಾರ್ ಜೈಲ್​​ಗೆ ಸರೆಂಡರ್ ಆದ ಬಾಲಿವುಡ್ ಖ್ಯಾತ ಹಾಸ್ಯ ನಟ – Kannada News | Rajpal Yadav Surrenders to Tihar Jail After Delhi HC Denies Relief in Check Bounce Case

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಸ್ಯ ನಟ ರಾಜ್​ಪಾಲ್ ಯಾದವ್ (ರಾಜ್​ಪಾಲ್ ಯಾದವ್) ಅವರಿಗೆ ರಿಲೀಫ್ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಈ ಕಾರಣದಿಂದ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಗುರುವಾರ (ಜನವರಿ 5) ನಾಲ್ಕು ಗಂಟೆಗೆ ಅವರು ಜೈಲಿಗೆ ಆಗಮಿಸಿದರು. ಅಧಿಕಾರಿಗಳು ಆ ಬಳಿಕ ತಮ್ಮ ಪ್ರಕ್ರಿಯೆ ನಡೆಸಿದ್ದಾರೆ. ಅವರನ್ನು ಈಗ ಜೈಲಿನಲ್ಲಿ ಇಡಲಾಗಿದೆ.

ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರಾಜ್​​ಪಾಲ್ ವಿರುದ್ಧ ಕೇಸ್ ದಾಖಲಿಸಿತ್ತು. ನಟ ಹಾಗೂ ಅವನ ಪತ್ನಿ ಕೊಟ್ಟ ಚೆಕ್ ಬೌನ್ಸ್ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್​ ಪಾಲ್ ಯಾದವ್ ಹಾಗೂ ಆತನ ಪತ್ನಿ ಅಪರಾಧಿ ಎಂದು ಘೋಷಣೆ ಮಾಡಿತ್ತು. 2019ರಲ್ಲಿ ಸೆಷನ್ ಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿಯಿತು.

2019ರಲ್ಲಿ ಈ ಪ್ರಕರಣವನ್ನು ದೆಹಲಿ ಕೋರ್ಟ್​​ ಅಲ್ಲಿ ರಾಜ್​​ಪಾಲ್ ಯಾದವ್ ಪ್ರಶ್ನೆ ಮಾಡಿದರು. ಸೆಟಲ್​​ಮೆಂಟ್​ಗೆ ದಾರಿ ಹುಡುಕುತ್ತಿದ್ದೇವೆ ಎಂದು ಹೇಳಿದ ಕಾರಣದಿಂದ 2024ರಲ್ಲಿ ಹೈಕೋರ್ಟ್ ನಟನಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ಈವರೆಗೆ ನಟ ಹಣವನ್ನು ಹಿಂದಿರುಗಿಸಿಲ್ಲ. ಹೀಗಾಗಿ, ಕೋರ್ಟ್ ಈ ಬಗ್ಗೆ ಆದೇಶ ಹೊರಡಿಸಿದೆ.
ಹೆಚ್ಚುವರಿಯಾಗಿ ಕೆಲ ವಾರ ಅವಕಾಶ ಕೊಟ್ಟರೆ ಹಣ ಹೊಂದಿಸಲು ಪ್ರಯತ್ನಿಸೋದಾಗಿ ರಾಜ್​​ಪಾಲ್ ಪರ ವಕೀಲರು ಹೇಳಿದ್ದರು. ಆದರೆ, ಇದಕ್ಕೆ ಹೈಕೋರ್ಟ್ ನಿರಾಕರಿಸಿತ್ತು. ಬುಧವಾರ ನಾಲ್ಕು ಗಂಟೆ ಒಳಗೆ ಸರೆಂಡರ್ ಆಗಲು ಕೋರ್ಟ್ ಸೂಚನೆ ನೀಡಿತ್ತು.

ಇದನ್ನೂ ಓದಿ: ಪತ್ರಕರ್ತನ ಮೊಬೈಲ್ ಕಿತ್ತುಕೊಂಡು ಎಸೆದ ಹಾಸ್ಯ ನಟ ರಾಜ್​ಪಾಲ್ ಯಾದವ್

‘ಯಾವುದೇ ವ್ಯಕ್ತಿ ನಿರ್ದಿಷ್ಟ ಹಿನ್ನೆಲೆ ಅಥವಾ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ಅವರಿಗೆ ವಿಶೇಷ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಬೇಡಿ. ನಿರಂತರವಾಗಿ ಅದೇ ತಪ್ಪು ಆಗುತ್ತಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯವಿಡೀ ಒಣ ಹವೆಯ ವಾತಾವರಣ, ಬೆಂಗಳೂರಿನಲ್ಲಿ ಚಳಿ – Kannada News | Bengaluru temperature: Dry weather all over Karnataka, cold and clear sky in Bengaluru

ರಾಜ್ಯವಿಡೀ ಒಣ ಹವೆಯ ವಾತಾವರಣ, ಬೆಂಗಳೂರಿನಲ್ಲಿ ಚಳಿ

ಬೆಂಗಳೂರು, ಫೆಬ್ರುವರಿ 06: ರಾಜ್ಯದಲ್ಲಿ ಹಲವು ದಿನಗಳಿಂದ ಒಣ ಹವೆಯ ವಾತಾವರಣವೇ (Weather Forecast) ಕಂಡುಬರುತ್ತಿದ್ದು, ಇಂದೂ ಸಹ ಅದೇ ಹವಾಮಾನವಿರಲಿದೆ ಎಂದು ಇಲಾಖೆ ತಿಳಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನವಿರುವುದರಿಂದ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕ

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಚಳಿಯ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 27°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಫೋರ್ ಹೊಡೆದು ಗೆಲ್ಲಿಸಿದ ರಾಧಾ ಹಿಟ್ ವಿಕೆಟ್ ಆಗಿದ್ರಾ? ನಡೆಯಿತಾ ಮೋಸದಾಟ? – Kannada News | RCB Women Lift Second Title: The Truth Behind Final Over hit wicket Controversy

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಎರಡನೇ ಬಾರಿಗೆ ವುಮನ್ಸ್ ಪ್ರೀಮಿಯರ್ ಲೀಗ್ ಅಲ್ಲಿ ಕಪ್ ಎತ್ತಿದೆ. ಅದ್ಭುತ ರನ್ ಚೇಸ್ ಮೂಲಕ ಆರ್​​ಸಿಬಿ ಮತ್ತೊಮ್ಮೆ ಕಪ್​​​ನ ತನ್ನದಾಗಿಸಿಕೊಂಡಿತು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ ಫೈನಲ್​​ಗೆ ಬಂದು ಸೋತಿದೆ. ಈ ಮಧ್ಯೆ ಆರ್​​ಸಿಬಿ ಕಳ್ಳಾಟ ಆಡಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಈಗ ಸ್ಪಷ್ಟನೆ ಕೂಡ ಸಿಕ್ಕಿದೆ.

ಟಾಸ್​ ಗೆದ್ದ ಆರ್​​ಸಿಬಿ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಉತ್ತಮ ಆರಂಭ ಕಂಡಿತು. ಸಂಘಟಿತ ಆಟದಿಂದ ಡೆಲ್ಲಿ ತಂಡ ಅಂತಿಮವಾಗಿ 20 ಓವರ್​​ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 203 ರನ್​​​ ಕಲೆ ಹಾಕಿತು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಆರ್​​ಸಿಬಿಗೆ ಆರಂಭಿಕ ಆಘಾತ ಎದುರಾಯಿತು. ತಂಡದ ಮೊತ್ತ 9 ರನ್ ಇದ್ದಾಗ ಗ್ರೇಸ್ ಹ್ಯಾರಿಸ್ ಅವರು ವಿಕೆಟ್ ಒಪ್ಪಿಸಿದರು.

ನಂತರ ಸ್ಮೃತಿ ಮಂಧಾನ ಹಾಗೂ ಜಾರ್ಜಿಯಾ ವಾಲ್ ಅವರ ಜೊತೆಯಾಟದಿಂದ ಆರ್​​ಸಿಬಿ ಗೆಲುವಿನ ಹಾದಿ ಹಿಡಿಯಿತು. ಸುಲಭದಲ್ಲಿ ಕಪ್ ನಮ್ಮದಾಯಿತು ಎನ್ನುವಾಗ ಮತ್ತೆ ಸಂಕಷ್ಟ ಎದುರಾಯಿತು. ತಂಡದ ಮೊತ್ತ 174 ರನ್ ಇರುವಾಗ ಆರ್​ಸಿಬಿ 2ನೇ ವಿಕೆಟ್ ಕಳೆದುಕೊಂಡಿತು. ಜಾರ್ಜಿಯಾ ವಾಲ್(54 ಬಾಲ್​​ಗೆ 79 ರನ್) ಔಟ್ ಆದರು. ನಂತರ ರಿಚಾ ಘೋಷ್ ಕೇವಲ 6 ರನ್​​ಗೆ ವಿಕೆಟ್ ಒಪ್ಪಿಸಿದರು. ಸ್ಮೃತಿ ಕೂಡ ಔಟ್ ಆದರು. ತಂಡದ ಮೊತ್ತ 191 ಇರುವಾಗ ನಾಲ್ಕು ವಿಕೆಟ್ ಬಿದ್ದಿತ್ತು.

ಕೊನೆಯ ಓವರ್​​ನಲ್ಲಿ ಬೇಕಿದ್ದಿದ್ದು 10 ರನ್​​ಗಳು. ಆಗ, ಮೊದಲ ಎರಡು ಬಾಲ್, ಎರಡು ಸಿಂಗಲ್ ಬಂತು. ಕ್ರೀಜ್​​ನಲ್ಲಿ ಇದ್ದ ರಾಧಾ ಅವರು ಮೂರನೇ ಬಾಲ್​​ನ ಫೋರ್​​ಗಡಿಗೆ ಅಟ್ಟಿದರು. ನಾಲ್ಕನೇ ಬಾಲ್​ ಕೂಡ ಫೋರ್ ಬಾರಿಸಿದರು. ಈ ವೇಳೆ ರಾಧಾ ಅವರ ಬ್ಯಾಟ್ ಸ್ಟಂಪ್​​ಗೆ ತಾಗಿದೆ ಎಂದು ಕೆಲವರು ಹೇಳಿದ್ದಾರೆ.

ಅಸಲಿಗೆ ಸ್ಟಂಪ್​​ಗೆ ತಾಗಿದ್ದು ಕೀಪರ್ ಕೈ. ವಿಡಿಯೋದಲ್ಲಿ ಅದು ಸ್ಪಷ್ಟವಾಗಿ ಕಾಣಿಸಿದೆ. ಆದಾಗ್ಯೂ ಕೆಲವರು ಈ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:41 am, Fri, 6 February 26

Source link

Video: ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುವಾಗ ಬಿದ್ದ ಮಹಿಳೆ, ಗುದ್ದಿದ್ದು ರೈಲಲ್ಲ, ಮತ್ತೇನು? – Kannada News | Terrifying Moment After Train Hits Log Obstruction on Tracks in Bihar

ಬಿಹಾರ, ಫೆಬ್ರವರಿ 06: ಮಹಿಳೆಯೊಬ್ಬರು ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುವಾಗ ಬಿದ್ದಿದ್ದಾರೆ, ಆದರೆ ಅವರಿಗೆ ಡಿಕ್ಕಿ ಹೊಡೆದಿದ್ದು ರೈಲಲ್ಲ, ಮರದ ದಿಮ್ಮಿ. ರೈಲ್ವೆ ಹಳಿಯ ಅಕ್ಕಪಕ್ಕದಲ್ಲಿ ಸಾಕಷ್ಟು ಮರದ ದಿಮ್ಮಿಗಳನ್ನು ಹಾಕಲಾಗಿತ್ತು. ರೈಲ್ವೆ ಚಕ್ರಕ್ಕೆ ಆ ದಿಮ್ಮಿ ಸಿಲುಕಿ ಬೌನ್ಸ್​ ಆಗಿ ಮಹಿಳೆಗೆ ಹಿಂದಿನಿಂದ ಹೊಡೆದಿದೆ ಆಕೆ ಅಲ್ಲೇ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಬಿಹಾರದ ಪಹರ್‌ಪುರ ಪ್ರದೇಶದಲ್ಲಿ ನಡೆದಿದೆ.

ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ರೈಲ್ವೆ ಹಳಿ ದಾಟಲು ಪ್ರಯತ್ನಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಪಹಾರ್‌ಪುರ ನಿಲ್ದಾಣದ ಬಳಿ ಪ್ಯಾಸೆಂಜರ್ ರೈಲಿನಲ್ಲಿ ಮರಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದಲ್ಲದೆ, ಮರಗಳನ್ನು ಇಳಿಸಿ ರೈಲ್ವೆ ಹಳಿಗಳ ಪಕ್ಕದಲ್ಲಿಯೇ ಸಂಗ್ರಹಿಸಲಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ಸೂರ್ಯನ ಕುಂಭರಾಶಿ ಪ್ರವೇಶದಿಂದ ಯಾರಿಗೆ ಶುಭಾಶುಭ ಫಲ – Kannada News | February 2024 Astrology: Sun Transit in Aquarius and Drekkan Effects

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ರೇಕ್ಕಾಣದ ಮೂಲಕ ಭವಿಷ್ಯದ ಚಿಂತನೆಯನ್ನು ಮಾಡಲು ಸಾಧ್ಯ. ಫೆಬ್ರವರಿ13 ರಿಂದ ಫೆಬ್ರವರಿ 23ರವರೆಗೆ ಸೂರ್ಯನು ಕುಂಭ ರಾಶಿಯಲ್ಲಿದ್ದು ಶನಿಯ ದ್ರೇಕ್ಕಾಣದಲ್ಲಿ (ಅಂದರೆ ಕುಂಭ ರಾಶಿಯ ಮೊದಲ ೧೦ ಡಿಗ್ರಿ) ಇರುತ್ತಾನೆ. ಕುಂಭದ ಮೊದಲ ದ್ರೇಕ್ಕಾಣ ಶನಿಯದ್ದಾಗಿದೆ. ಈ ರಾಶಿಯಲ್ಲಿ ಶನಿಯ ಪ್ರಭಾವ ಅಧಿಕವಾಗಿ ಉಂಟಾಗುವ ಕಾರಣ ಶುಭಾಶುಭ ಫಲಗಳು ಹೀಗಿವೆ.

​ಸೂರ್ಯ ಮತ್ತು ಶನಿ ಪರಸ್ಪರ ಶತ್ರು ಗ್ರಹಗಳು. ಸೂರ್ಯನು ಶನಿಯ ಮನೆಯಾದ ಕುಂಭದಲ್ಲಿ ಸಂಚರಿಸುವಾಗ ಮತ್ತು ಶನಿಯ ದ್ರೇಕ್ಕಾಣದಲ್ಲೇ ಇದ್ದಾಗ ಫಲಗಳು ಕೊಂಚ ಕಠಿಣವಾಗಿರುತ್ತವೆ.

​ಶುಭ ಫಲಗಳು:

​ಮಕರ ಮತ್ತು ಕುಂಭ ರಾಶಿ:

ನಿಮ್ಮ ರಾಶ್ಯಾಧಿಪತಿ ಶನಿಯೇ ಆಗಿರುವುದರಿಂದ, ಕೆಲಸದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹಳೆಯ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.

​ವೃಷಭ ರಾಶಿ:

ಹತ್ತನೇ ಮನೆಯಲ್ಲಿ ಈ ಸ್ಥಿತಿ ಇರುವುದರಿಂದ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಸಿಗುತ್ತವೆ. ಅಧಿಕಾರದಲ್ಲಿರುವವರಿಂದ ಗೌರವ ದೊರೆಯುತ್ತದೆ.

​ತುಲಾ ರಾಶಿ:

ಸಂಶೋಧನೆ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಈ ಕಾಲವು ಬಹಳ ಅನುಕೂಲಕರವಾಗಿದೆ. ಶ್ರಮಕ್ಕೆ ತಕ್ಕಂತೆ ಆರ್ಥಿಕ ಲಾಭವಾಗಲಿದೆ.

​ಮಿಶ್ರ ಫಲಗಳು:

​ಮೇಷ ರಾಶಿ:

ಏಕಾದಶ ರಾಶಿಯಲ್ಲಿ ಸೂರ್ಯ ಇರುವುದರಿಂದ ಆರ್ಥಿಕ ಲಾಭವಿರುತ್ತದೆ, ಆದರೆ ಸ್ನೇಹಿತರೊಂದಿಗೆ ಅಥವಾ ಹಿರಿಯ ಸಹೋದರರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

​ಧನು ರಾಶಿ:

ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಬಹುದು, ಆದರೆ ಕೆಲಸದಲ್ಲಿ ವಿಳಂಬ ಉಂಟಾಗಬಹುದು.

​ಅಶುಭ ಫಲಗಳು:

​ಸಿಂಹ ರಾಶಿ:

ಸೂರ್ಯನು ನಿಮ್ಮ ರಾಶ್ಯಾಧಿಪತಿ. ಸಪ್ತಮ ಸ್ಥಾನದಲ್ಲಿ ಶತ್ರು ರಾಶಿಯಲ್ಲಿದ್ದು ಶನಿ ದ್ರೇಕ್ಕಾಣದಲ್ಲಿರುವುದು ದಾಂಪತ್ಯ ಜೀವನದಲ್ಲಿ ಉದ್ವಿಗ್ನತೆ ಅಥವಾ ಪಾಲುದಾರಿಕೆಯಲ್ಲಿ ನಷ್ಟ ತರಬಹುದು. ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

​ಕರ್ಕಾಟಕ ರಾಶಿ:

ಅಷ್ಟಮ ಸ್ಥಾನದಲ್ಲಿ ಸೂರ್ಯ ಮತ್ತು ಶನಿಯ ಪ್ರಭಾವ ಇರುವುದರಿಂದ ಅನಗತ್ಯ ಮಾನಸಿಕ ಒತ್ತಡ, ಅಪವಾದ ಅಥವಾ ತಂದೆಯ ಆರೋಗ್ಯದಲ್ಲಿ ಏರುಪೇರಾಗಬಹುದು.

​ವೃಶ್ಚಿಕ ರಾಶಿ:

ಚತುರ್ಥದಲ್ಲಿ ಈ ಸ್ಥಿತಿ ಇರುವುದರಿಂದ ಮನೆಯ ಸುಖ-ಶಾಂತಿಗೆ ಭಂಗ ಬರಬಹುದು ಅಥವಾ ಆಸ್ತಿ ವಿಚಾರದಲ್ಲಿ ವಿವಾದಗಳು ತಲೆದೂರಬಹುದು.

​ಸೂರ್ಯ-ಶನಿ ಸಂಬಂಧವು ತಂದೆ-ಮಗನ ನಡುವಿನ ಭಿನ್ನಾಭಿಪ್ರಾಯ ಅಥವಾ ಮೇಲಧಿಕಾರಿಗಳೊಂದಿಗೆ ಸಂಘರ್ಷವನ್ನು ಸೂಚಿಸುತ್ತದೆ.

​ಈ ಸಮಯದಲ್ಲಿ ಪ್ರತಿದಿನ ಶಿವ ಪಂಚಾಕ್ಷರಿ ಮಂತ್ರ ಜಪಿಸುವುದು ಅಥವಾ ಸೂರ್ಯನಿಗೆ ನಮಸ್ಕಾರ ಅಶುಭ ಫಲಗಳನ್ನು ಕಡಿಮೆ ಮಾಡಲು ಸಹಕಾರಿ.

– ಲೋಹಿತ ಹೆಬ್ಬಾರ್

Source link

ಕಪ್ಪತ್ತಗುಡ್ಡದ ನಿಗೂಢ ಗುಹೆಗಳ ಸಾಮ್ರಾಜ್ಯ, ಚಿನ್ನದ ರಹಸ್ಯ ಬಯಲು! – Kannada News | Kappataguddas Mysterious Gold Caves: A TV9 Ground Report Uncovers Historical Mining and Hidden Wealth

ಗದಗ, ಫೆಬ್ರವರಿ 6: ಗದಗ ಜಿಲ್ಲೆಯ ಕಪ್ಪತ್ತಗುಡ್ಡವು ಈಗ ರಾಜ್ಯದ ಗಮನ ಸೆಳೆದಿದೆ. ಐತಿಹಾಸಿಕ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಬೆನ್ನಲ್ಲೇ, ಕಪ್ಪತ್ತಗುಡ್ಡದ ನಿಗೂಢ ಗುಹೆಗಳಲ್ಲಿನ ಚಿನ್ನದ ರಹಸ್ಯ ಬಯಲಾಗುತ್ತಿದೆ. ಮಹಾಲಿಂಗಪುರ ಸಮೀಪದ ಕಪ್ಪತ್ತಗುಡ್ಡದಲ್ಲಿ ‘ಟಿವಿ9’ ಗ್ರೌಂಡ್ ರಿಪೋರ್ಟ್ ನಡೆಸಿದ್ದು, ಈ ಗುಹೆಗಳಲ್ಲಿ ಅಪಾರ ಚಿನ್ನದ ನಿಕ್ಷೇಪವಿರುವ ಸಾಧ್ಯತೆ ಕುರಿತು ಕುತೂಹಲ ಮೂಡಿಸಿದೆ. ಇಲ್ಲಿನ ದುರ್ಗಮ ರಸ್ತೆಗಳು ಮತ್ತು ಭಯಾನಕ ಕಾಡುಗಳ ಮಧ್ಯೆ ಇರುವ ಈ ಗುಹೆಗಳಿಗೆ ತಲುಪುವುದು ಸವಾಲಿನ ಕೆಲಸವಾಗಿದೆ. ಈ ಗುಹೆಗಳು ಒಂದರೊಳಗೊಂದು ಇರುವಂತೆ ಭಾಸವಾಗುತ್ತವೆ, ಪ್ರತಿ ಹೆಜ್ಜೆಯಲ್ಲೂ ಹೊಸ ಕೌತುಕ ಮೂಡಿಸುತ್ತವೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಇಲ್ಲಿ ಚಿನ್ನದ ಗಣಿಗಾರಿಕೆ ನಡೆದಿತ್ತು ಎಂಬ ಐತಿಹಾಸಿಕ ಮಾಹಿತಿಯನ್ನು ಸ್ಥಳೀಯ ಹಿರಿಯರು ಬಹಿರಂಗಪಡಿಸಿದ್ದಾರೆ. ಕಪ್ಪತ್ತಗುಡ್ಡವು ‘ಔಷಧ ಸಸ್ಯಕಾಶಿ’ ಎಂದೂ ಹೆಸರಾಗಿದ್ದು, ಇದೀಗ ನಿಗೂಢ ಗುಹೆಗಳಲ್ಲಿ ಚಿನ್ನದ ನಿಕ್ಷೇಪ ಇದೆಯಾ ಎಂಬ ಕುತೂಹಲ ಹೆಚ್ಚಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಯಲ್ಲಿ ಮಲಗಿದ್ದವರೂ ಇಲ್ಲ, ಜಗಳವಾಡಿ ಹೋದವರೂ ಹಿಂದಿರುಗಿಲ್ಲ, ದೆಹಲಿಯಲ್ಲಿ ಹೆಚ್ಚುತ್ತಿವೆ ಮಕ್ಕಳ ನಾಪತ್ತೆ ಪ್ರಕರಣಗಳು – Kannada News | Every Day Is a Nightmare: Families Await Answers in Delhi Child Disappearances

ನಾಪತ್ತೆಯಾಗಿರುವ ಮಕ್ಕಳುImage Credit source: India TV

ನವದೆಹಲಿ, ಫೆಬ್ರವರಿ 06: ದೆಹಲಿಯಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಮಕ್ಕಳು(Children) ರಾತ್ರಿ ಮಲಗಿದ್ದವರು ಬೆಳಗಾಗುವಷ್ಟರಲ್ಲಿ ಕಾಣುತ್ತಿಲ್ಲ, ಇನ್ನೂ ಕೆಲವರು ಮನೆಯಿಂದ ಜಗಳವಾಡಿ ಹೋದವರು ಹಿಂದಿರುಗಿಲ್ಲ, ಒಟ್ಟಿನಲ್ಲಿ ನಾಪತ್ತೆ ಪ್ರಕರಣಗಳು ತೀರಾ ಹೆಚ್ಚಾಗಿದೆ. ಜನವರಿ ಮೊದಲ 15 ದಿನಗಳಲ್ಲಿ 800ಕ್ಕೂ ಅಧಿಕ ಜನರು ಕಣ್ಮರೆಯಾಗಿದ್ದರೆ.120 ಹುಡುಗಿಯರಿದ್ದರೆ , 137 ಮಂದಿ ಅಪ್ರಾಪ್ತ ಬಾಲಕರಿದ್ದಾರೆ. 27 ದಿನಗಳ ಬಳಿಕವೂ ಅವರ ಒಂದೇ ಒಂದು ಸುಳಿವು ಕೂಡಾ ಸಿಕ್ಕಿಲ್ಲ.

2026ರ ಮೊದಲ 27 ದಿನಗಳಲ್ಲಿ807 ಮಂದಿ ಕಾಣೆಯಾಗಿರುವ ಬಗ್ಗೆ ಅಂಕಿ ಅಂಶಗಳು ಲಭ್ಯವಾಗಿವೆ. ಅದರಲ್ಲಿ 235 ಮಂದಿ ಪತ್ತೆಯಾಗಿದ್ದಾರೆ, 572 ಮಂದಿ ಇನ್ನೂ ಪತ್ತೆಯಾಗಿಲ್ಲ. 191 ಅಪ್ರಾಪ್ತ ವಯಸ್ಕರಲ್ಲಿ 48 ಮಂದಿ ಪತ್ತೆಯಾಗಿದ್ದಾರೆ.137 ಮಂದಿ ಪತ್ತೆಯಾಗಿಲ್ಲ.ಕಳೆದ ದಶಕದಲ್ಲಿ (2016-2026): 60,694 ಮಕ್ಕಳು (0-18) ಕಣ್ಮರೆಯಾಗಿದ್ದಾರೆ. 53,763 ಮಂದಿ ಸಿಕ್ಕಿದ್ದಾರೆ. ಶೇ. 11 ರಷ್ಟು ಮಂದಿ ಹಿಂದಿರುಗಲೇ ಇಲ್ಲ. 2015-2025, 5,559 ಮಕ್ಕಳು ಕಾಣೆಯಾಗಿದ್ದಾರೆ, 695 ಪ್ರಕರಣಗಳು ಇತ್ಯರ್ಥಗೊಂಡಿಲ್ಲ.

8 ವರ್ಷ ವಯಸ್ಸಿನವರು: 9 ಕಾಣೆಯಾಗಿದ್ದಾರೆ (6 ಪತ್ತೆಯಾಗಿದ್ದಾರೆ); ಎಂಟರಿಂದ ಹನ್ನೆರಡು ವರ್ಷದೊಳಗಿನವರಲ್ಲಿ, ಎಂಟು ಗಂಡು ಮಕ್ಕಳು ಮತ್ತು ಐದು ಹೆಣ್ಣು ಮಕ್ಕಳು ಸೇರಿದಂತೆ 13 ಮಕ್ಕಳು ಕಾಣೆಯಾಗಿದ್ದಾರೆ. ಕೇವಲ ಮೂವರು ಗಂಡು ಮಕ್ಕಳು ಪತ್ತೆಯಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಒಂಬತ್ತು ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಪೊಲೀಸರು ಮೂವರು ಗಂಡು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ.

ಮತ್ತಷ್ಟು ಓದಿ: ಪೋಷಕರು ಬೈದಿದ್ದಕ್ಕೆ ಬಸ್​ ಫ್ರೀ ಎಂದು ತಮ್ಮನ ಜೊತೆ ಮನೆಬಿಟ್ಟು ಹೋಗಿ ಊರೂರು ಸುತ್ತಿದ ಬಾಲಕಿ

ಬಿಹಾರದ ಕಿಶನ್‌ಗಂಜ್ ಮೂಲದ ತೆಮುಲ್ ಹಕ್ ಮತ್ತು ರೂಬಿ ದೆಹಲಿಯ ಬುರಾರಿಯ ಮೌರ್ಯ ಎನ್‌ಕ್ಲೇವ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಮೂವರು ಮಕ್ಕಳು , ಹಿರಿಯ ಮಗ ವಾಸಿಮ್ ರಜಾ, ಡಿಸೆಂಬರ್ 27 ರಾತ್ರಿ, ವಾಸಿಮ್ ಮನೆಯಲ್ಲಿ ಮಲಗಿದ್ದ, ಡಿಸೆಂಬರ್ 28 ಬೆಳಗ್ಗೆ 9 ಗಂಟೆಗೆ ಮನೆಬಿಟ್ಟು ಹೋದವನು ಇನ್ನೂ ವಾಪಸಾಗಿಲ್ಲ.

ಇನ್ನು ಬುರಾರಿಯ ಸಂತನಗರದಲ್ಲಿ ರಿತಿಕ್ ಝಾ ಜೆಇಇ ಮೇನ್ಸ್​ಗೆ ತಯಾರಿ ನಡೆಸುತ್ತಿದ್ದ, ಡಿಸೆಂಬರ್ 17ರಂದು ಪರೀಕ್ಷೆಗೆ ಓದಿಕೋ ಎಂದು ಅವನ ತಾಯಿ ಗದರಿದಾಗ ಬೇಸರದಿಂದ ಮನೆಬಿಟ್ಟು ಹೋದವನು ಹಿಂದಿರುಗಿ ಬಂದಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಯಾವುದೇ ಏರಿಕೆ ಇಲ್ಲ – ಜನವರಿ 2026 ರ ವರದಿಗಳು ಕಡಿಮೆಯಾಗಿವೆ.

2025 ರಲ್ಲಿ ದೆಹಲಿಯಲ್ಲಿ 24,508 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಮಹಿಳೆಯರು ನಾಪತ್ತೆಯಾಗಿದ್ದು, 14,870 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದು ಒಂದೇ ವರ್ಷದಲ್ಲಿ ದಾಖಲಾಗಿರುವ ಅತಿ ಹೆಚ್ಚು ಪ್ರಕರಣಗಳು. 9,638 ಪುರುಷರು ನಾಪತ್ತೆಯಾಗಿದ್ದಾರೆ. ಪೊಲೀಸರು 15,421 ವ್ಯಕ್ತಿಗಳನ್ನು ಪತ್ತೆಹಚ್ಚಿದ್ದರೂ, 9,087 ಪ್ರಕರಣಗಳು ಬಗೆಹರಿಯದೆ ಉಳಿದಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಾಗರದ ಮಾರಿಕಾಂಬೆ ದರ್ಶನ ಪಡೆದ ಪಡೆದ ಶಿವರಾಜ್​​ಕುಮಾರ್; ಹೇಳಿದ್ದೇನು? – Kannada News | Actor Shivarajkumar Happy visits Sagara Marikamba Jatre

ಸಾಗರದ ಮಾರಿಕಾಂಬೆ ದರ್ಶನಕ್ಕೆ ಶಿವರಾಜ್​​​ಕುಮಾರ್ ಹಾಗೂ ಗೀತಾ ತೆರಳಿದ್ದಾರೆ. ಅವರು ತಾಯಿ ದರ್ಶನ ಪಡೆದು ತುಂಬಾನೇ ಖುಷಿಪಟ್ಟರು. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನನಗೆ ಇಲ್ಲಿಗೆ ಬರೋದು ಯಾವಾಗ ಖುಷಿ ನೀಡುತ್ತದೆ. ತಾಯಿ ಆಗಾಗ ಕರೆಸಿಕೊಳ್ಳುತ್ತಾಳೆ’ ಎಂದು ಶಿವಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: ರಾಜ್ಯಾದ್ಯಂತ ಮೆಗಾ ದಾಳಿ, 13 ಮಾಸ್ಟರ್ ಮೈಂಡ್‌ಗಳ ಬಂಧನ – Kannada News | Karnataka CID busts 40K+ mule accounts, 13 arrested in major cyber fraud operation

ರಾಜ್ಯದ ವಿವಿಧೆಡೆ ಸಿಐಡಿ ಅಧಿಕಾರಿಗಳ ತನಿಖೆ

ಬೆಂಗಳೂರು, ಫೆಬ್ರುವರಿ 06: ರಾಜ್ಯದಲ್ಲಿ ಸೈಬರ್ ಪ್ರಕರಣಗಳು (Cyber crime) ಹೆಚ್ಚುತ್ತಿರುವ ಬೆನ್ನಲ್ಲೇ ಮ್ಯೂಲ್ ಅಕೌಂಟ್‌ಗಳ ಮೂಲಕ ನಡೆಯುತ್ತಿದ್ದ ಭಾರೀ ಸೈಬರ್ ವಂಚನಾ ದಂಧೆಯನ್ನು ಸಿಐಡಿ ಸೈಬರ್ ಕ್ರೈಂ (CID) ವಿಭಾಗ ಭೇದಿಸಿದೆ. ನೂರಾರು ಕಡೆ ದಾಳಿ ನಡೆಸಿದ್ದ ತಂಡಗಳು, ಅಕ್ರಮಕ್ಕಾಗಿ ಬಳಸಕಾಗುತ್ತಿದ್ದ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್​ಗಗಳನ್ನು ಪತ್ತೆ ಹಚ್ಚಿದೆ.

100ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು

ರಾಜ್ಯದಲ್ಲಿ ಫೆಬ್ರವರಿ 6ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಈ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದೆ. ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ಸಿಐಡಿ ತನಿಖೆ ವೇಳೆ ಬಯಲಾಗಿದೆ. ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು.

ಇದನ್ನೂ ಓದಿ ಮಹಿಳಾ ಅಧಿಕಾರಿಯ ಬೆಡ್‌ರೂಮ್ ದೃಶ್ಯಗಳ ಸ್ಟಿಂಗ್ ಮಾಡಿ 50 ಲಕ್ಷ ರೂ.ಗೆ ಬ್ಲ್ಯಾಕ್‌ಮೇಲ್: ನಕಲಿ ಪತ್ರಕರ್ತರ ಗ್ಯಾಂಗ್ ಬಂಧನ

40 ಸಾವಿರಕ್ಕೂ ಹೆಚ್ಚು ಅಕ್ರಮ ಅಕೌಂಟ್​ಗಳು!

ಖಾತೆ ವಿವರ ನೀಡಿದ ಅಮಾಯಕರಿಗೆ ಈ ವಂಚನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ. ತನಿಖೆಯ ವೇಳೆ ಸುಮಾರು 42 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳು ಬಳಕೆಯಲ್ಲಿರುವುದು ಪತ್ತೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ ಮ್ಯೂಲ್ ಅಕೌಂಟ್‌ಗಳ ವಿರುದ್ಧ ಸಿಐಡಿ ತಂಡ ತೀವ್ರ ನಿಗಾ ವಹಿಸಿತ್ತು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link