Category Archives: Blog

Your blog category

ಪೂರ್ವ ನಾಗಾಲ್ಯಾಂಡ್​ನ ದಶಕಗಳಷ್ಟು ಹಳೆಯದಾದ ಸಮಸ್ಯೆಗೆ ಒಂದು ಒಪ್ಪಂದದ ಮೂಲಕ ಮುಕ್ತಿ – Kannada News | Decades Old Eastern Nagaland Issue Resolved Through Agreement, Says PM Modi

ನವದೆಹಲಿ, ಫೆಬ್ರವರಿ 06: ಭಾರತ ಸರ್ಕಾರ, ನಾಗಾಲ್ಯಾಂಡ್ ಸರ್ಕಾರ ಮತ್ತು ಪೂರ್ವ ನಾಗಾಲ್ಯಾಂಡ್ ಪೀಪಲ್ಸ್​ ಆರ್ಗನೈಸೇಷನ್ (ENPO)ಪ್ರತಿನಿಧಿಗಳ ನಡುವೆ ನಡೆದ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಶ್ಲಾಘಿಸಿದ್ದಾರೆ. ಈ ಒಪ್ಪಂದವು ಜನರಿಗೆ ಹೊಸ ಅವಕಾಶ ಮತ್ತು ಸಮೃದ್ಧಿಯ ಹೊಸ ಮಾರ್ಗವನ್ನು ತೆರೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದು ನಿಜಕ್ಕೂ ಐತಿಹಾಸಿಕ ಒಪ್ಪಂದವಾಗಿದ್ದು, ವಿಶೇಷವಾಗಿ ಪೂರ್ವ ನಾಗಾಲ್ಯಾಂಡ್​ಗೆ ಅಭಿವೃದ್ಧಿಯ ಹಾದಿಯನ್ನು ಸುಧಾರಿಸುತ್ತದೆ ಎಂದು ಬರೆದಿದ್ದಾರೆ.

ಇದು ಈಶಾನ್ಯದ ಎಲ್ಲರಿಗೂ ಶಾಂತಿ ಪ್ರಗತಿ ಮತ್ತು ಅಭಿವೃದ್ಧಿಗೆ ದೃಢ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಂದವನ್ನು ಘೋಷಿಸಿದ್ದಾರೆ. ಪೂರ್ವ ನಾಗಾಲ್ಯಾಂಡ್​​ನಲ್ಲಿ ದಶಕಗಳಿಂದ ಇದ್ದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಭಾರತ ಸರ್ಕಾರ ನ್ಯಾಗಾಲ್ಯಾಂಡ್ ಸರ್ಕಾರ ಮತ್ತು ಇಎಪಿಒ ನಡುವೆ ಐತಿಹಾಸಿಕ ಒಪ್ಪಂದಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.

ಎಲ್ಲಾ ವಿವಾದಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಶಾಂತಿಯುತ ಮತ್ತು ಸಮೃದ್ಧ ಈಶಾನ್ಯಕ್ಕಾಗಿ ನರೇಂದ್ರ ಮೋದಿ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Pariksha Pe Charcha 2026: ಕನಸು ಕಾಣದಿರುವುದು ಒಂದು ಕ್ರೈಂ, ಕನಸ್ಸಿನ ಬಗ್ಗೆ ಮಾತನಾಡುವುದಲ್ಲ, ಸಫಲತೆಯ ಹಾದಿಯಲ್ಲಿ ಸಾಗಬೇಕು: ಮೋದಿ

ಇಎನ್​ಪಿಒ ನಾಗಾಲ್ಯಾಂಡ್​ನ ಮುಖ್ಯಮಂತ್ರಿ ನೀಫಿಯು ರಿಯೊ ಅವರ ಸಮ್ಮುಖದಲ್ಲಿ ಗುರುವಾರ ಓ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವು ನಾಗಾಲ್ಯಾಂಡ್​ನ ಆರು ಜಿಲ್ಲೆಗಳಿಗೆ(ಟ್ಯೂನ್​ಸಾಂಗ್, ಮಾನ್, ಕಿಫಿರೆ, ಲಾಂಗ್ಲೆಂಗ , ನೋಕ್ಲಾಕ್ ಮತ್ತು ಶಮಟೋರ್) ಗಡಿನಾಡು ನಾಗಾಲ್ಯಾಂಡ್ ಪ್ರಾದೇಶಿಕ ಪ್ರಾಧಿಕಾರವನ್ನು ಸ್ಥಾಪಿಸುತ್ತಿದೆ.

ಎಫ್​ಎನ್​ಟಿಎಗೆ 46 ವಿಷಯಗಳ ಮೇಲೆ ಅಧಿಕಾರ ನೀಡಲಾಗುವುದು. ಈ ಒಪ್ಪಂದವು ಎಫ್​ ಎನ್​ಟಿಎಗಾಗಿ ಹೆಚ್ಚುವರು ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಒಂದು ಮಿನಿ-ಸೆಕ್ರೆಟರಿಯೇಟ್ ಅನ್ನು ರಚಿಸಲು ಅವಕಾಶ ನೀಡುತ್ತದೆ. ಇದು ಪೂರ್ವ ನಾಗಾಲ್ಯಾಂಡ್ ಪ್ರದೇಶದ ಅಭಿವೃದ್ಧಿ ವೆಚ್ಚವನ್ನು ಅದರ ಜನಸಂಖ್ಯೆ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಹಂಚಿಕೆ ಮಾಡಲು ಕೂಡ ಅವಕಾಶ ನೀಡುತ್ತದೆ. ಈಶಾನ್ಯ ಜನರ ನಿಜವಾದ ಆಕಾಂಕ್ಷೆಗಳನ್ನು ಪೂರೈಸಲು ಎಲ್ಲಾ ವಿವಾದಾತ್ಮಕ ಸಮಸ್ಯೆಗಳನ್ನು ಸಂವಾದದ ಮೂಲಕ ಪರಿಹರಿಸುವ ಭಾರತ ಸರ್ಕಾರದ ಬದ್ಧತೆಯನ್ನು ಈ ಒಪ್ಪಂದವು ಪ್ರತಿಬಿಂಬಿದುತ್ತದೆ.

ಪರಸ್ಪರ ಗೌರವ ಮತ್ತು ಸಂವಾದದ ಆಧಾರದ ಮೇಲೆ ಸಂವಾದದ ಮೂಲಕ ಮಾತ್ರ ಪರಿಹಾರ ಕಂಡುಕೊಳ್ಳಬಹುದು. ಹಿಂಸೆ ಮತ್ತು ಸಶಸ್ತ್ರ ಸಂಘರ್ಷದ ಮೂಲಕವಲ್ಲ ಎಂಬ ಪ್ರಜಾಪ್ರಭುತ್ವದ ಮೂಲಭೂತ ತತ್ವವನ್ನು ಇದು ಪುನರುಚ್ಚರಿಸುತ್ತದೆ.

ಈ ಒಪ್ಪಂದವು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ FNTA ಗಾಗಿ ಮಿನಿ-ಸೆಕ್ರೆಟರಿಯಟ್ ರಚನೆಗೆ ಅವಕಾಶ ನೀಡುತ್ತದೆ. ಇದಲ್ಲದೆ, ಪೂರ್ವ ನಾಗಾಲ್ಯಾಂಡ್ ಪ್ರದೇಶದ ಅಭಿವೃದ್ಧಿ ವೆಚ್ಚವನ್ನು ಅದರ ಜನಸಂಖ್ಯೆ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಹಂಚಲಾಗುತ್ತದೆ. ಆದಾಗ್ಯೂ, ಒಪ್ಪಂದವು ಭಾರತದ ಸಂವಿಧಾನದ 371 (A) ವಿಧಿಯ ನಿಬಂಧನೆಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾರು ಗುದ್ದಿ ಪರಾರಿ: ಹಿರಿಯ ನಟನ ಬಂಧನ – Kannada News | Malayalam Actor Maniyanpilla Raju arrested in Hit and Run case

ಹಿರಿಯ ಮಲಯಾಳಂ ನಟ ಮತ್ತು ನಿರ್ಮಾಪಕರೂ (Producer) ಆಗಿ ಗುರುತಿಸಿಕೊಂಡಿರುವ ಮಣಿಯನ್‌ಪಿಳ್ಳ ರಾಜು ಅವರ ವಿರುದ್ಧ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ಮಣಿಯನ್‌ಪಿಳ್ಳ ರಾಜು ಓಡಿಸುತ್ತಿದ್ದ ಕಾರು ತಿರುವನಂತಪುರದಲ್ಲಿ ಬೈಕೊಂದಕ್ಕೆ ಢಿಕ್ಕಿ ಆಗಿದ್ದು, ಬೈಕಿನ ಮೇಲೆ ಸವಾರರಾಗಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯು ಫೆಬ್ರವರಿ 5ರಂದು ಗುರುವಾರ ರಾತ್ರಿ ತಿರುವನಂತಪುರದಲ್ಲಿ ನಡೆದಿದೆ.

ಫೆಬ್ರವರಿ 5ರಂದು ತಿರುವನಂತಪುರದ ವಝುತಕಾಡ್‌ನಲ್ಲಿರುವ ‘ತ್ರಿವೇಂಡ್ರಮ್ ಕ್ಲಬ್’ ಬಳಿ ರಾತ್ರಿ ಸುಮಾರು 9:30ಕ್ಕೆ ಈ ಅಪಘಾತ ಸಂಭವಿಸಿದೆ. ಮಣಿಯನ್‌ಪಿಳ್ಳ ರಾಜು ಅವರು ಚಲಾಯಿಸುತ್ತಿದ್ದ ಕಾರು (KL-01-CJ-0004), ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹೋಗುತ್ತಿದ್ದ ಸೂರಜ್ ಮತ್ತು ನಿವೇದಿತ್ ಕೃಷ್ಣ ಎಂಬ ಇಬ್ಬರು ಸುಮಾರು 20 ವರ್ಷದ ಯುವಕರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಯುವಕರು ರಸ್ತೆಗೆ ಬಿದ್ದಿದ್ದು, ಒಬ್ಬರಿಗೆ ಕಾಲಿನ ಮೂಳೆ ಮುರಿತ ಹಾಗೂ ಮತ್ತೊಬ್ಬರಿಗೆ ತಲೆ ಮತ್ತು ಬೆನ್ನುಮೂಳೆಯ ಗಂಭೀರ ಗಾಯಗಳಾಗಿವೆ.

ಅಪಘಾತವಾದ ತಕ್ಷಣ ನಟ ರಾಜು ಅವರು ಗಾಯಾಳುಗಳಿಗೆ ಸಹಾಯ ಮಾಡದೆ ಸ್ಥಳದಿಂದ ಪರಾರಿಯಾಗಿದ್ದರು. ಅಪಘಾತದ ಸ್ಥಳದಲ್ಲಿ ಬಿದ್ದಿದ್ದ ಕಾರಿನ ನಂಬರ್ ಪ್ಲೇಟ್ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಾಥಮಿಕವಾಗಿ ತಲೆಮರೆಸಿಕೊಂಡಿದ್ದ ರಾಜು, ಶುಕ್ರವಾರ ಬೆಳಿಗ್ಗೆ ಮ್ಯೂಸಿಯಂ ಪೊಲೀಸ್ ಠಾಣೆಗೆ ಹಾಜರಾದರು. ಪೊಲೀಸರು ಅವರನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಪಘಾತದ ಸಮಯದಲ್ಲಿ ಮಣಿಯನ್‌ಪಿಳ್ಳ ರಾಜು ಅವರು ಕಾರನ್ನು ವೇಗವಾಗಿ ಮತ್ತು ಅಜಾಗರೂಕವಾಗಿ ಓಡಿಸಿದ್ದು ಖಾತ್ರಿ ಆಗಿದೆ ಎನ್ನಲಾಗುತ್ತಿದೆ. ಪೊಲೀಸರು ನಟನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಿದ್ದು, ಘಟನೆಯ ಸಮಯದಲ್ಲಿ ನಟ ಮದ್ಯ ಸೇವಿಸಿದ್ದು ಖಚಿತವಾದಲ್ಲಿ ಹೆಚ್ಚುವರಿ ಸೆಕ್ಷನ್​​ಗಳ ಅಡಿಯಲ್ಲಿ ದೂರು ದಾಖಲಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ದಿಲೀಪ್ ನಿರ್ದೋಷಿ; ಕೋರ್ಟ್ ತೀರ್ಪು

ಪೊಲೀಸರ ಮುಂದೆ ಹೇಳಿಕೆ ನೀಡಿದ ರಾಜು, “ಬೈಕ್ ಅತಿ ವೇಗವಾಗಿ ಬಂದು ನನ್ನ ಕಾರಿಗೆ ಡಿಕ್ಕಿ ಹೊಡೆಯಿತು. ಅಪಘಾತದ ನಂತರ ನಾನು ಗಾಬರಿಗೊಂಡಿದ್ದೆ, ಆ ಕ್ಷಣದಲ್ಲಿ ಏನು ಮಾಡಬೇಕೆಂದು ತಿಳಿಯದೆ ಅಲ್ಲಿಂದ ಹೊರಟುಹೋದೆ” ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಾನು ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವುದು ಮತ್ತು ಚಿಕನ್ ಗುನ್ಯಾದಿಂದ ಬಳಲುತ್ತಿದ್ದೆ, ಅಲ್ಲದೆ ನನ್ನ ಪತ್ನಿಯೂ ಸಹ ಮನೆಯಲ್ಲಿ ಒಬ್ಬರೇ ಇದ್ದರು. ಹಾಗಾಗಿ ಆ ಸಮಯದಲ್ಲಿ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ‘ನಾನು ಅಲ್ಲಿಂದ ಆ ಕ್ಷಣದಲ್ಲಿ ಹೊರಟು ಹೋದೆನಾದರೂ ಬೇರೊಬ್ಬರಿಗೆ ಕರೆ ಮಾಡಿ ಗಾಯಾಳುಗಳಿಗೆ ಸಹಾಯ ಮಾಡಿರೆಂದು ಸೂಚಿಸಿದ್ದೆ’ ಎಂದಿದ್ದಾರೆ.

ಸದ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಮೋಟಾರು ವಾಹನ ಕಾಯ್ದೆಯಡಿ ನಿರ್ಲಕ್ಷ್ಯದ ಚಾಲನೆ ಮತ್ತು ಅಪಘಾತದ ಬಗ್ಗೆ ಮಾಹಿತಿ ನೀಡದೆ ಪರಾರಿಯಾದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಸಮಯದಲ್ಲಿ ನಟ ಮದ್ಯ ಸೇವಿಸಿರುವುದು ಖಾತ್ರಿ ಆದಲ್ಲಿ ಹೆಚ್ಚುವರಿ ಪ್ರಕರಣಗಳು ನಟನ ವಿರುದ್ಧ ದಾಖಲಾಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:53 am, Fri, 6 February 26

Source link

Rakkasapuradhol First Half Review: ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಫಸ್ಟ್ ಹಾಫ್ ಹೇಗಿದೆ? – Kannada News | Rakkasapuradhol Kannada movie first half review ft Raj B Shetty

ರಾಜ್ ಬಿ. ಶೆಟ್ಟಿ (Raj B Shetty) ಅವರ ಸಿನಿಮಾ ಎಂದರೆ ಖಂಡಿತವಾಗಿಯೂ ಏನಾದರೂ ವಿಶೇಷತೆ ಇರುತ್ತದೆ ಎಂಬ ಭರವಸೆ ಅಭಿಮಾನಿಗಳಿಗೆ ಇದೆ. ಅವರು ನಟಿಸಿದ ‘ರಕ್ಕಸಪುರದೋಳ್’ ಸಿನಿಮಾ ಇಂದು (ಫೆಬ್ರವರಿ 6) ಬಿಡುಗಡೆ ಆಗಿದೆ. ರವಿ ಸಾರಂಗ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರವಿ ವರ್ಮಾ ಅವರು ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಮೂಲಕ ‘ರಕ್ಕಸಪುರದೋಳ್’ (Rakkasapuradhol) ಸಿನಿಮಾ ಬಹಳ ನಿರೀಕ್ಷೆ ಮೂಡಿಸಿತ್ತು. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ. ಒಂದು ಮರ್ಡರ್ ಮಿಸ್ಟರಿ ಕಥೆ ಈ ಸಿನಿಮಾದಲ್ಲಿ ಇದೆ. ‘ರಕ್ಕಸಪುರದೋಳ್’ ಚಿತ್ರದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಅದಕ್ಕೆ ಉತ್ತರ ಇಲ್ಲಿದೆ..

  1. ಸಸ್ಪೆನ್ಸ್ ಮೂಲಕವೇ ರಕ್ಕಸಪುರದೋಳ್ ಸಿನಿಮಾದ‌ ಕಥೆ ಶುರು ಆಗುತ್ತದೆ. ಜೊತೆಗೆ ಕಾಮಿಡಿ ದೃಶ್ಯಗಳು ಕೂಡ ಇದೆ.
  2. ರಾಜ್ ಬಿ. ಶೆಟ್ಟಿ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಪೊಲೀಸ್ ಆದರೂ ಆ ಪಾತ್ರ ಬಹಳ ಡಿಫರೆಂಟ್ ಆಗಿದೆ.
  3. ಸಿದ್ದಯ್ಯ ಸ್ವಾಮಿ ಹಾಡಿನಲ್ಲಿ ಅರ್ಜುನ್ ಜನ್ಯ ಅವರು ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಬಳಿಕ ಕುತೂಹಲ ಹೆಚ್ಚುತ್ತದೆ.
  4. ರಕ್ಕಸಪುರದೋಳ್ ಸಿನಿಮಾದ ಫಸ್ಟ್ ಹಾಫ್‌ನಲ್ಲಿ ಹಾರರ್ ಎಲಿಮೆಂಟ್ ಕೂಡ ಇದೆ. ಕೊಳ್ಳಿ ದೆವ್ವದ ಕಥೆ ಹೇಳಲಾಗಿದೆ.
  5. ಸರಣಿ ಕೊಲೆ ನಡೆಯುತ್ತದೆ. ಸೀರಿಯಲ್ ಕಿಲ್ಲರ್ ಯಾರು ಎಂಬ ಕುತೂಹಲ‌ ಪ್ರತಿ ಹಂತದಲ್ಲೂ ಹೆಚ್ಚುತ್ತಾ ಸಾಗುತ್ತದೆ
  6. ಈ ಸಿನಿಮಾದ ಮೊದಲಾರ್ಧದಲ್ಲೇ ಸಾಕಷ್ಟು ಟ್ವಿಸ್ಟ್‌ಗಳಿವೆ. ಕೊಲೆ ಮಾಡಿದ್ದು ಮನುಷ್ಯನಾ ಅಥವಾ ದೆವ್ವನಾ ಎಂಬ ಕೌತುಕ ಮೂಡುತ್ತೆ.
  7. ಸಖತ್ ಥ್ರಿಲ್ಲಿಂಗ್ ಕಥೆ ಆದ್ದರಿಂದ ಈ ಸಿನಿಮಾದ ಮೊದಲಾರ್ಧ ಪಟಪಟನೆ ಸಾಗುತ್ತದೆ. ಇಂಟರ್‌ವಲ್ ವೇಳೆಗೆ ಮಹತ್ವದ ಟ್ವಿಸ್ಟ್.
  8. ಹಲವು ಪಾತ್ರದ ಮೇಲೆ ಕೊಲೆಯ ಅನುಮಾನ ಮೂಡುತ್ತದೆ. ಕೊಲೆಗಾರ ಸಿಕ್ಕೇ ಬಿಟ್ಟ ಎಂಬಷ್ಟರಲ್ಲಿ ಹೊಸ ಟ್ವಿಸ್ಟ್ ಬರುತ್ತದೆ.
  9. ರಾಜ್ ಬಿ. ಶೆಟ್ಟಿ ಅವರಿಗೆ ಇದೊಂದು ಡಿಫರೆಂಟ್ ಸಿನಿಮಾ. ಅವರ ಆಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ಮೂಡಿಬಂದಿದೆ.
  10. ಮೂಢನಂಬಿಕೆ ವರ್ಸಸ್ ವಿಜ್ಞಾನ ಎಂಬ ಕಾನ್ಸೆಪ್ಟ್ ಮೇಲೆ ರಕ್ಕಸಪುರದೋಳ್ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Pariksha Pe Charcha 2026: ಕನಸು ಕಾಣದಿರುವುದು ಒಂದು ಕ್ರೈಂ, ಕನಸ್ಸಿನ ಬಗ್ಗೆ ಮಾತನಾಡುವುದಲ್ಲ, ಸಫಲತೆಯ ಹಾದಿಯಲ್ಲಿ ಸಾಗಬೇಕು: ಮೋದಿ – Kannada News | PM Modi’s Pariksha Pe Charcha 2026: Dream Big, Achieve Success and Manage Time

ನವದೆಹಲಿ, ಫೆಬ್ರವರಿ 06: ಕನಸು ಕಾಣದಿರುವುದು ಅಪರಾಧ, ಕನಸ್ಸನ್ನು ಪ್ರತಿಯೊಬ್ಬರೂ ಕಾಣಲೇಬೇಕು, ಕೇವಲ ಕನಸ್ಸಿನ ಬಗ್ಗೆ ಮಾತನಾಡುತ್ತಾ ಇರುವುದಲ್ಲ, ಸಫಲತೆಯ ಹಾದಿ ಹಿಡಿದು ಸಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಇಂದು ಪರೀಕ್ಷಾ ಪೆ ಚರ್ಚಾ(Pariksha Pe Charcha) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ನೀವು ಸಮರ್ಥರಾಗಿ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದರು.
ಒಬ್ಬ ವಿದ್ಯಾರ್ಥಿ ಗಗನಯಾತ್ರಿಯಾಗಲು ಬಯಸಿದರೆ, ಸಂಪೂರ್ಣವಾಗಿ ಅಧ್ಯಯನ ಮಾಡಬೇಕು, ಜ್ಞಾನವನ್ನು ವಿಸ್ತರಿಸುವುದನ್ನು ಮುಂದುವರಿಸಬೇಕು. ಕೇವಲ ನನ್ನ ಕನಸು ಇದಿದೆ ಎನ್ನುತ್ತಾ ಜಪ ಮಾಡುತ್ತಿರುವುದಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ನಿಮಗೆ ಸೌಲಭ್ಯಗಳು ಯಶಸ್ಸಿಗೆ ಕಾರಣವಾಗುವುದಿಲ್ಲ: ಮೋದಿ
ಸೌಲಭ್ಯಗಳು ಯಶಸ್ಸಿಗೆ ಕಾರಣವಾಗುವುದಿಲ್ಲ, ನೀವು ಪಂಚತಾರಾ ಹೋಟೆಲ್‌ನಲ್ಲಿ ವಾಸಿಸುತ್ತಿದ್ದೀರಿ ಎಂದ ಮಾತ್ರಕ್ಕೆ ನೀವು ನಿಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನಹರಿಸುತ್ತೀರಿ ಎಂದರ್ಥವಲ್ಲ. ಸೌಲಭ್ಯಗಳು ಗಮನವನ್ನು ಸುಧಾರಿಸುವುದಿಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಟಾಪರ್‌ಗಳಲ್ಲಿ ಹೆಚ್ಚಿನವರು ಬಡತನದಲ್ಲಿ ಬೆಳೆದ ಮಕ್ಕಳೇ ಇರುತ್ತಾರೆ.

ಮಕ್ಕಳಿಗೆ ಹೊಸ ವಿಷಯಗಳನ್ನು ಕಲಿಸಲು ಒತ್ತು
ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಹೊಸ ವಿಷಯಗಳನ್ನು ಕಲಿಯುವತ್ತ ಗಮನಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಕಡಿಮೆ ಅಂಕಗಳನ್ನು ಪಡೆದರೂ ಭಯಪಡಬೇಡಿ, ಬದಲಾಗಿ, ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ ಮತ್ತು ಉತ್ತಮವಾಗಿ ಕೆಲಸ ಮಾಡಿ.

ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸಲು ಪ್ರಧಾನಿ ಮೋದಿ ಸಲಹೆ
ಪ್ರಧಾನಿ ಮೋದಿ ಮಕ್ಕಳು ತಮ್ಮ ದೈನಂದಿನ ಕೆಲಸಗಳನ್ನು ಡೈರಿಯಲ್ಲಿ ಬರೆಯುವಂತೆ ಪ್ರೋತ್ಸಾಹಿಸಿದರು. ನಂತರ, ಮರುದಿನ, ಯಾವ ಕೆಲಸಗಳು ಪೂರ್ಣಗೊಂಡಿವೆ ಮತ್ತು ಯಾವುದನ್ನು ಪೂರ್ಣಗೊಳಿಸಲಾಗಿಲ್ಲ ಎಂಬುದರ ಬಗ್ಗೆ ಆಲೋಚನೆ ಮಾಡಿ, ಇದು ಅವರಿಗೆ ಸಮಯ ನಿರ್ವಹಣೆಯನ್ನು ಕಲಿಯಲು ಸಹಾಯ ಮಾಡುತ್ತದೆ. ಇದು ಅವರ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪೋಷಕರಿಗೆ ಪ್ರಧಾನಿ ಮೋದಿ ಈ ಸಲಹೆ
ಮಕ್ಕಳು ಅಧ್ಯಯನದ ಒತ್ತಡವನ್ನು ಅನುಭವಿಸದಂತೆ ಪೋಷಕರು ಅವರ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

12ನೇ ತರಗತಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಹೇಗೆ?
ಎರಡೆರಡು ಪರೀಕ್ಷೆಗಳಿಗೆ ಒಮ್ಮೆಲೆ ತಯಾರಿ ನಡೆಸುವುದು ಎಂದರೆ ಸುಲಭದ ಮಾತಲ್ಲ, ಆದರೆ ನಿಮಗೆ ಬೋರ್ಡ್​ ಪರೀಕ್ಷೆಗಳು ಅತಿ ಮುಖ್ಯ ಹೀಗಾಗಿ ನೀವು ಬೋರ್ಡ್​ ಪರೀಕ್ಷೆಗಳತ್ತ ಗಮನಗರಿಸಿದರೆ ಬೇರೆ ಪರೀಕ್ಷೆಗಳ ಬಗ್ಗೆಯೂ ಗಮನಹರಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಓದುವಾಗ ಏಕಾಗ್ರತೆ ಕೊರತೆ

ನಾವು ಯಾವುದಾದರೂ ವಿಷಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ಅದನ್ನು ಎಷ್ಟು ವರ್ಷವಾದರೂ ಮರೆಯದೇ ನೆನಪಿಸಿಕೊಳ್ಳುತ್ತೇವೆ. ನಿಮಗಿಂತ ದುರ್ಬಲರಾಗಿರುವ ಮಕ್ಕಳಿಗೆ ನೀವು ಪ್ರತಿದಿನ ಕಲಿಸಬೇಕು ಮತ್ತು ತರಬೇತಿ ನೀಡಬೇಕು. ಇದು ನಿಮ್ಮ ಆಲೋಚನೆಗಳನ್ನು ಪುನರಾವರ್ತಿಸಲು ನಿಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ನಿಮಗಿಂತ ಬುದ್ಧಿವಂತ ಮಕ್ಕಳೊಂದಿಗೆ ಕುಳಿತು ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಉತ್ತಮವಾಗಿರುತ್ತದೆ.

ಜೀವನಕ್ಕೆ ಅಂಕಗಳು ಎಷ್ಟು ಮುಖ್ಯ?
ನಮ್ಮೊಳಗಿನ ವಿದ್ಯಾರ್ಥಿಯನ್ನು ಸದಾ ಎಚ್ಚರವಾಗಿರಿಸಿಕೊಳ್ಳಬೇಕು, ಅರ್ಧಂಬರ್ಧ ಶಿಕ್ಷಣವು ಯಶಸ್ವಿ ಜೀವನಕ್ಕೆ ಕಾರಣವಾಗುವುದಿಲ್ಲವಾದ್ದರಿಂದ ನಾವು ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಕಳೆದ ವರ್ಷದ ಬೋರ್ಡ್ ಪರೀಕ್ಷೆಗಳಲ್ಲಿ ಟಾಪ್ 10 ವಿದ್ಯಾರ್ಥಿಗಳ ಹೆಸರುಗಳು ನಿಮಗೆ ನೆನಪಿದೆಯೇ? ಅವರ ಫೋಟೋಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದರೂ, ನಮಗೆ ಅವರ ನೆನಪಿಲ್ಲ. ಇದರರ್ಥ ಅಂಕಗಳ ಪರಿಣಾಮವು ಸ್ವಲ್ಪ ಸಮಯ ಮಾತ್ರ ಇರುತ್ತದೆ. ಆದ್ದರಿಂದ, ಅಂಕಗಳ ಮೇಲೆ ಕೇಂದ್ರೀಕರಿಸುವ ಬದಲು, ನಾವು ನಮ್ಮ ಜೀವನದ ನಿಜವಾದ ಉದ್ದೇಶದ ಮೇಲೆ ಗಮನಹರಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.

ಪರೀಕ್ಷೆಗೆ  ಓದುವುದು ಹೇಗೆ?
ಶಿಕ್ಷಕರು ತಮಗೆ ಅಂಕಗಳನ್ನು ತಂದುಕೊಡುವ ವಿಷಯಗಳನ್ನು ಕಲಿಸಲು ಪ್ರಯತ್ನಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ, ಉತ್ತಮ ಶಿಕ್ಷಕರು ಇಡೀ ಪಠ್ಯಕ್ರಮದ ಮೇಲೆ ಕೇಂದ್ರೀಕರಿಸುತ್ತಾರೆ, ಇದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೌಲರ್ ಭುಜದ ವ್ಯಾಯಾಮ ಮಾಡುವುದರಿಂದ ಮಾತ್ರ ಫಿಟ್ ಆಗಿರಬಹುದೇ ಎಂದು ಅವರು ಕೇಳಿದರು? ಬೌಲರ್ ಚೆನ್ನಾಗಿ ಬೌಲಿಂಗ್ ಮಾಡಲು ಬಯಸಿದರೆ, ಅವನು ತನ್ನ ಇಡೀ ದೇಹವನ್ನು ಫಿಟ್ ಆಗಿರಿಸಿಕೊಳ್ಳಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಒಬ್ಬ ಕ್ರಿಕೆಟಿಗ ತನ್ನ ದೇಹವನ್ನು ಫಿಟ್ ಆಗಿರಿಸಿಕೊಳ್ಳಬೇಕಾದಂತೆಯೇ, ಶಿಕ್ಷಣವು ನಮ್ಮ ಜೀವನವನ್ನು ಯಶಸ್ವಿಗೊಳಿಸಲು ಒಂದು ಮಾಧ್ಯಮವಾಗಿದೆ. ಅಂತಿಮ ಗುರಿ ಪರೀಕ್ಷೆಯ ಅಂಕಗಳಾಗಿರಬಾರದು. ಅಂತಿಮ ಗುರಿ ಜೀವನದ ಅಭಿವೃದ್ಧಿಯ ಗುರಿಯಾಗಿರಬೇಕು.

ಮಕ್ಕಳಿಗೆ ಕೌಶಲ್ಯ ಮುಖ್ಯವೇ ಅಥವಾ ಅಂಕಗಳೇ ಹೆಚ್ಚು ಮುಖ್ಯವೇ?

ಮಕ್ಕಳಿಗೆ ಕೌಶಲ್ಯ ಹೆಚ್ಚು ಮುಖ್ಯವೇ ಅಥವಾ ಅಂಕಗಳು ಹೆಚ್ಚು ಮುಖ್ಯವೇ ಎಂದು ಕೇಳಿದಾಗ, ಎಲ್ಲದರಲ್ಲೂ ಸಮತೋಲನ ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ಒಂದು ಕಡೆ ವಾಲಿದರೆ, ನಾವು ಬೀಳುತ್ತೇವೆ, ಆದರೆ ಸಮತೋಲನವನ್ನು ಕಾಯ್ದುಕೊಳ್ಳುವುದು ಅದನ್ನು ತಡೆಯುತ್ತದೆ. ಎರಡು ರೀತಿಯ ಕೌಶಲ್ಯಗಳಿವೆ: ಮೊದಲನೆಯದಾಗಿ, ಜೀವನ ಕೌಶಲ್ಯಗಳು ಮತ್ತು ಎರಡನೆಯದಾಗಿ, ವೃತ್ತಿಪರ ಕೌಶಲ್ಯಗಳು. ಎರಡೂ ಕೌಶಲ್ಯಗಳಿಗೆ ಗಮನ ಕೊಡುವುದು ಅತ್ಯಗತ್ಯ. ಅಭ್ಯಾಸವಿಲ್ಲದೆ ಯಾವುದೇ ಕೌಶಲ್ಯವನ್ನು ಪಡೆಯಲು ಸಾಧ್ಯವಿಲ್ಲ, ಮತ್ತು ಎಲ್ಲವೂ ಜ್ಞಾನದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ, ಅಧ್ಯಯನ ಮಾಡದೆ ಯಾವುದೇ ಕೌಶಲ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ವದೇಶಿ ವಸ್ತುಗಳನ್ನು ಗೌರವಿಸಿ
ನಾವೇ ಸ್ವದೇಶಿ ವಸ್ತುಗಳನ್ನು ಗೌರವಿಸದಿದ್ದರೆ ಬೇರೆ ದೇಶದವರು ಅದನ್ನು ಗೌರವಿಸುತ್ತಾರಾ, ವಿಕಸಿತ ಭಾರತ ನಿರ್ಮಾಣ ಮಾಡುವಾಗ ಇದೆಲ್ಲಾ ಅಂಶಗಳ ಕಡೆಗೆ ಹೆಚ್ಚು ಗಮನಹರಿಸಬೇಕು, ನಮ್ಮ ದೇಶದಲ್ಲೇ ಸಿದ್ಧಪಡಿಸಿರುವ ವಸ್ತುಗಳನ್ನು ನಾವು ಗೌರವಿಸಬೇಕು ಎಂದರು. ಭಾರತದಲ್ಲಿ ಇಂಟರ್ನೆಟ್ ಅಗ್ಗವಾಗಿದೆ ಎಂಬ ಕಾರಣಕ್ಕೆ ಸಮಯ ವ್ಯರ್ಥ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಾದಪ್ಪನ ಭಕ್ತರು ಮೂತ್ರ ವಿಸರ್ಜನೆ, ಬಹಿರ್ದೆಸೆಗೆ ಕಾಡಿನ ಒಳ ಹೋಗುವಂತಿಲ್ಲ! ಅರಣ್ಯ ಸಿಬ್ಬಂದಿ ಕಟ್ಟಪ್ಪಣೆ, ಕಾರಣ ಇಲ್ಲಿದೆ – Kannada News | No Entry to Forest for Devotees at Male Mahadeshwara Betta: Safety Alert After Leopard Attack Ahead of Shivaratri Jatra

ಮಲೆ ಮಹದೇಶ್ವರಬೆಟ್ಟ (ಸಂಗ್ರಹ ಚಿತ್ರ)Image Credit source: tv9

ಚಾಮರಾಜನಗರ, ಫೆಬ್ರವರಿ 6: ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟಕ್ಕೆ (Male Mahadeshwara Hills) ಪಾದಯಾತ್ರೆ ತೆರಳುತ್ತಿದ್ದ ಭಕ್ತನೊಬ್ಬ ಇತ್ತೀಚೆಗೆ ಚಿರತೆ ದಾಳಿಗೆ ಬಲಿಯಾದ ಘಟನೆ ಬಳಿಕ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹೈಅಲರ್ಟ್ ಘೋಷಿಸಿದೆ. ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ಪಾದಯಾತ್ರಿಗಳ ಸುರಕ್ಷತೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವೀಣ್ ಎಂಬ ಭಕ್ತ ಇತ್ತೀಚೆಗೆ ಸಾವನ್ನಪ್ಪಿದ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತ ತುರ್ತು ಸಭೆ ನಡೆಸಿ ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಭಕ್ತರ ಮೇಲೆ ಹದ್ದಿನ ಕಣ್ಣು ಇಡಲು ಅರಣ್ಯಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿವೆ.

ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗ ಮಧ್ಯೆ ಹೈಅಲರ್ಟ್ ಘೋಷಿಸಲಾಗಿದ್ದು, ಪ್ರತಿ ಕಿಲೋಮೀಟರ್‌ಗೂ ಒಂದೊಂದು ತಂಡವನ್ನು ನಿಯೋಜಿಸಲಾಗಿದೆ. ಒಟ್ಟು 8 ತಂಡಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ತಂಡಕ್ಕೂ ಬಂದೂಕು, ವಾಕಿಟಾಕಿ, ಮಚ್ಚು, ಲಾಠಿ ಹಾಗೂ ಪಟಾಕಿಗಳನ್ನು ವಿತರಿಸಲಾಗಿದೆ. ಡಿಆರ್‌ಎಫ್‌ಒ, ಪೊಲೀಸ್ ಸಿಬ್ಬಂದಿ, ವಾಚರ್ ಹಾಗೂ ಎಪಿಸಿ ಕ್ಯಾಂಪ್ ಸಿಬ್ಬಂದಿ ಸೇರಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಐದು ಸಿಬ್ಬಂದಿ ಈ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದಾರೆ.

ಪಾದಯಾತ್ರೆ ಮಾಡುವವರು ಗುಂಪುಗುಂಪಾಗಿ ಬೆಟ್ಟ ಏರಲು ಸೂಚನೆ

ಪಾದಯಾತ್ರೆ ಮಾಡುವ ಭಕ್ತರು ಗುಂಪು ಗುಂಪಾಗಿ ಮಾತ್ರ ಬೆಟ್ಟ ಏರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಕಾಡಿನ ಒಳಗೆ ಒಬ್ಬರೇ ತೆರಳಬಾರದು, ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಗೆ ಕಾಡಿನೊಳಗೆ ಹೋಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಡ್ರೋನ್ ಕ್ಯಾಮರಾ ಮೂಲಕವೂ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ.

ಫೆಬ್ರವರಿ 14ರಿಂದ 18ರವರೆಗೆ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರೆ

ಫೆಬ್ರವರಿ 14ರಿಂದ 18ರವರೆಗೆ ನಡೆಯಲಿರುವ ಮಲೆ ಮಹದೇಶ್ವರ ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಯಾವುದೇ ಅನಾಹುತ ಸಂಭವಿಸದಂತೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಮನ್ವಯದಲ್ಲಿ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದೆ.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಜನವರಿ 21 ರಂದು ಮುಂಜಾನೆ ಮಲೆಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನಕ್ಕಾಗಿ ಮಂಡ್ಯದ ಚೀರನಹಳ್ಳಿ ಹಾಗೂ ನೆರೆಯ ಗ್ರಾಮಗಳಿಂದ 150ಕ್ಕೂ ಹೆಚ್ಚು ಜನರು ಪಾದಯಾತ್ರೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಎಂಬವರ ಮೇಲೆ ಮುಗಿಬಿದ್ದಿದ್ದ ಚಿರತೆ ಕತ್ತು ಸೀಳಿ ರಕ್ತ ಹೀರಿ ಬಳಿಕ ಕಾಡಿನೊಳಕ್ಕೆ ಎಳೆದೊಯ್ದಿತ್ತು. ನಂತರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸರೆಹಿಡಿದಿತ್ತು. ಆ ಬಳಿಕ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate Today: ಚಿನ್ನ, ಬೆಳ್ಳಿ ಇನ್ನಷ್ಟು ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 6th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 6: ಚಿನ್ನದ ಬೆಲೆ (Gold Rates) ಮತ್ತೂ ಕುಸಿದಿದೆ. ನಿನ್ನೆ 460 ರೂ ತಗ್ಗಿದ್ದ ಆಭರಣ ಚಿನ್ನದ ಬೆಲೆ ಇವತ್ತು 190 ರೂ ಕಡಿಮೆಗೊಂಡಿದೆ. ಇದರ ಬೆಲೆ ಮತ್ತೊಮ್ಮೆ 14,000 ರೂ ಒಳಗೆ ಬಂದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಇದರ ಬೆಲೆ ಕಡಿಮೆಗೊಂಡಿದೆ. ಇನ್ನು, ಬೆಳ್ಳಿ ಬೆಲೆಯೂ ಭರ್ಜರಿ ಕುಸಿತ ಮುಂದುವರಿಸಿದೆ. ಇವತ್ತು ಶುಕ್ರವಾರ ಇದರ ಬೆಲೆ 20-25 ರೂನಷ್ಟು ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,39,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,39,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 6ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,235 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,965 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,426 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,235 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,965 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,965 ರೂ
  • ಚೆನ್ನೈ: 14,120 ರೂ
  • ಮುಂಬೈ: 13,965 ರೂ
  • ದೆಹಲಿ: 13,980 ರೂ
  • ಕೋಲ್ಕತಾ: 13,965 ರೂ
  • ಕೇರಳ: 13,965 ರೂ
  • ಅಹ್ಮದಾಬಾದ್: 13,970 ರೂ
  • ಜೈಪುರ್: 13,980 ರೂ
  • ಲಕ್ನೋ: 13,980 ರೂ
  • ಭುವನೇಶ್ವರ್: 13,965 ರೂ

ಇದನ್ನೂ ಓದಿ: ರಿಪೋ ಬಡ್ಡಿದರ ಶೇ. 5.25ರಲ್ಲಿ ಮುಂದುವರಿಸಿದ ಆರ್​ಬಿಐ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 577 ರಿಂಗಿಟ್ (13,171 ರುಪಾಯಿ)
  • ದುಬೈ: 541.75 ಡಿರಾಮ್ (13,315 ರುಪಾಯಿ)
  • ಅಮೆರಿಕ: 150.50 ಡಾಲರ್ (13,585 ರುಪಾಯಿ)
  • ಸಿಂಗಾಪುರ: 191.50 ಸಿಂಗಾಪುರ್ ಡಾಲರ್ (13,572 ರುಪಾಯಿ)
  • ಕತಾರ್: 535.50 ಕತಾರಿ ರಿಯಾಲ್ (13,263 ರೂ)
  • ಸೌದಿ ಅರೇಬಿಯಾ: 551 ಸೌದಿ ರಿಯಾಲ್ (13,263 ರುಪಾಯಿ)
  • ಓಮನ್: 58.05 ಒಮಾನಿ ರಿಯಾಲ್ (13,613 ರುಪಾಯಿ)
  • ಕುವೇತ್: 44.44 ಕುವೇತಿ ದಿನಾರ್ (13,127 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 280 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 280 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 280 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಅಪಾರ್ಟ್‌ಮೆಂಟ್‌ಗೆ 50,000 ರೂ. ಬಾಡಿಗೆ, ಆದರೆ ಅಲ್ಲಿನ ಸೌಲಭ್ಯಗಳನ್ನು ಬಳಸಲು ಸಮಯವಿಲ್ಲ – Kannada News | High Rent, No Time: Bangalore IT Pro’s Viral Work Life Balance Dilemma

ಬೆಂಗಳೂರು, ಫೆ.6: ಬೆಂಗಳೂರಿನಲ್ಲಿ ಮನೆಗಳು ದುಬಾರಿ. ಐಟಿ, ಬಿಟಿ ಕಂಪನಿಗಳಲ್ಲಿ ವರ್ಕ್​ ಮಾಡುವವರಿಗೆ ಇಲ್ಲಿ ಈ ದುಬಾರಿ ಮನೆಗಳು ವಾಸಿಸಲು ಸೂಕ್ತ. ಅದಕ್ಕಾಗಿ ಇವರು ಲಕ್ಷ ಲಕ್ಷ ಹಣವನ್ನು ಇದಕ್ಕಾಗಿ ವ್ಯಯ ಮಾಡುತ್ತಾರೆ. ಆದರೆ ಈ ದುಬಾರಿ ಮನೆಗಳಲ್ಲಿರುವ ಎಲ್ಲ ಸೌಕರ್ಯಗಳನ್ನು (Bangalore techie rent) ಸರಿಯಾಗಿ ಉಪಯೋಗ ಮಾಡುವುದಿಲ್ಲ. ಇದೀಗ ಇಂತಹದೇ ವಿಚಾರದ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 50,000 ರೂಪಾಯಿ ಬಾಡಿಗೆ ಪಾವತಿಸುತ್ತಿರುವ ವ್ಯಕ್ತಿಯೊಬ್ಬರು, ತಮಗೆ ಅಪಾರ್ಟ್‌ಮೆಂಟ್‌ನಲ್ಲಿರುವ ಯಾವುದೇ ಸೌಲಭ್ಯಗಳನ್ನು ಬಳಸಲು ಸಮಯವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಶುಭಂ ಲೋಂಧೆ ಎಂಬ ಐಟಿ ಉದ್ಯೋಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ಚರ್ಚೆಗೆ ಗ್ರಾಸವಾಗಿದೆ. ಅವರು ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ಮತ್ತು ಸ್ನೂಕರ್ ಏರಿಯಾದಂತಹ ಐಷಾರಾಮಿ ಸೌಲಭ್ಯಗಳಿವೆ. ಆದರೆ, ದಿನವಿಡೀ ಕೆಲಸದ ಒತ್ತಡ ಮತ್ತು ಆಯಾಸದ ಕಾರಣ ಈ ಯಾವುದೇ ಸೌಲಭ್ಯಗಳನ್ನು ಬಳಸಲು ಅವರಿಗೆ ಸಮಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. “ಬಾಡಿಗೆ ಕಟ್ಟಲು ಹಣವಿದೆ, ಆದರೆ ಸೌಲಭ್ಯ ಅನುಭವಿಸಲು ಸಮಯವಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೆಲಸ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ಯುವಕರು: 100 ಕೆಲಸಕ್ಕೆ ಅರ್ಜಿ, ಎಲ್ಲವೂ ತಿರಸ್ಕಾರ, ಟೆಕ್ಕಿ ಪೋಸ್ಟ್​​ ವೈರಲ್

ವೈರಲ್​​​ ವಿಡಿಯೋ ಇಲ್ಲಿದೆ

ವಾರದ ದಿನಗಳಲ್ಲಿ ಕೆಲಸದ ಜಂಜಾಟ, ವಾರಾಂತ್ಯದಲ್ಲಿ ಕೇವಲ ವಿಶ್ರಾಂತಿ ಪಡೆಯುವುದರಲ್ಲೇ ಸಮಯ ಕಳೆದುಹೋಗುತ್ತಿದೆ. ಇದು ಕೇವಲ ಅವರೊಬ್ಬರ ಸಮಸ್ಯೆಯಲ್ಲ, ಬೆಂಗಳೂರಿನ ಬಹುತೇಕ ಐಟಿ ವೃತ್ತಿಪರರ ಕತೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಸಮಯ ಮತ್ತು ನೆಮ್ಮದಿಯನ್ನು ತಲುಪಲು ಸಾಧ್ಯವಾಗದೆ ನಮ್ಮ ಜೀವನ “ಇಲಿ ಓಟ”ದಂತಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಸಮಯ ಎನ್ನುವುದು ಆದ್ಯತೆಯ ಮೇಲೆ ನಿರ್ಧರಿತವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ಹೇಳಿದ್ದು ಸರಿಯಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.ಪ್ರತಿಯೊಬ್ಬರಿಗೂ ಸಮಯವಿದೆ. ಆದರೆ ಅದನ್ನು ನಿಮಯಕ್ಕೆ ಅನುಗುಣವಾಗಿ ಮಾಡಿಕೊಳ್ಳಬೇಕು ಎಂದು ಒಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಪೋ ಬಡ್ಡಿದರ ಶೇ. 5.25ರಲ್ಲಿ ಮುಂದುವರಿಸಿದ ಆರ್​ಬಿಐ – Kannada News | RBI repo rate remain unchanged on 5.25pc, while GDP and inflation forecast revised

ನವದೆಹಲಿ, ಫೆಬ್ರುವರಿ 6: ಆರ್​ಬಿಐನ ರಿಪೋ ದರದಲ್ಲಿ ಈ ಬಾರಿ ಬದಲಾವಣೆ ಮಾಡಲಾಗಿಲ್ಲ. ರಿಪೋ ದರವನ್ನು ಶೇ 5.25ರಲ್ಲೇ ಮುಂದುವರಿಸಲು ಭಾರತೀಯ ರಿಸರ್ವ್ ಬ್ಯಾಂಕ್​ನ (RBI) ಹಣಕಾಸು ನೀತಿ ಸಮಿತಿಯ ಎಲ್ಲಾ 6 ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ಬುಧವಾರದಿಂದ ನಡೆದ ಎಂಪಿಸಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಶುಕ್ರವಾರ ಪ್ರಕಟಿಸಿದ್ದಾರೆ.

ಆರ್​ಬಿಐ ಪಾಲಿಸಿ ದರಗಳು

  • ರಿಪೋ ದರ: ಶೇ. 5.25
  • ರಿವರ್ಸ್ ರಿಪೋ ದರ: ಶೇ. 3.35
  • ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ ದರ (ಎಸ್​ಡಿಎಫ್): ಶೇ. 5
  • ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್​ಎಫ್): ಶೇ. 5.50
  • ಬ್ಯಾಂಕ್ ದರ: ಶೇ. 5.50
  • ಸಿಆರ್​ಆರ್: ಶೇ. 3
  • ಎಸ್​ಎಲ್​ಆರ್: ಶೇ. 18

ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ

ಜಿಡಿಪಿ ಶೇ. 7.4 ಬೆಳವಣಿಗೆ ಅಂದಾಜು

ಪ್ರಸಕ್ತ ಹಣಕಾಸು ವರ್ಷಕ್ಕೆ (2025-26) ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಎಂಪಿಸಿ ಸಭೆ ಪರಿಷ್ಕರಿಸಿದ್ದು, ಶೇ. 7.4ರಷ್ಟು ಜಿಡಿಪಿ ಹಿಗ್ಗಬಹುದು ಎಂದಿದೆ. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಜಿಡಿಪಿ ಶೇ. 7.3 ಹೆಚ್ಚಬಹುದು ಎಂದು ಅಭಿಪ್ರಾಯ ಪಟ್ಟಿತ್ತು.

ಹಣದುಬ್ಬರ ಶೇ. 2.1 ಇರಬಹುದು

ಪ್ರಸಕ್ತ ಹಣಕಾಸು ವರ್ಷಕ್ಕೆ ಹಣದುಬ್ಬರ ಶೇ. 2.1ರಷ್ಟು ಆಗಬಹುದು ಎಂದು ಆರ್​ಬಿಐನ ಎಂಪಿಸಿ ಸಭೆಯಲ್ಲಿ ವಿಮರ್ಶಿಸಲಾಗಿದೆ. ಈ ಹಿಂದಿನ ಸಭೆಯಲ್ಲಿ ಹಣದುಬ್ಬರ ಶೇ. 2ರಷ್ಟು ಇರಬಹುದು ಎಂದು ಅಂದಾಜಿಸಲಾಗಿತ್ತು. ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ನಲ್ಲಿ ಹಣದುಬ್ಬರ ಶೇ. 3.2ಕ್ಕೆ ಏರಬಹುದು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೇಪಾಳದಲ್ಲಿ ಕುಳಿತು ಭಾರತದಲ್ಲಿ ನೂರಾರು ಕೋಟಿ ರೂ. ವಂಚನೆ ಮಾಡುತ್ತಿದ್ದವರನ್ನು ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸರು! – Kannada News | Massive Cybercrime Ring Led by Chinese Handlers in Nepal Busted by Mangaluru Police

ನೇಪಾಳದಲ್ಲಿ ಕುಳಿತು ಭಾರತದಲ್ಲಿ ನೂರಾರು ಕೋಟಿ ವಂಚನೆ ಮಾಡುತ್ತಿದ್ದವರನ್ನು ಹೆಡೆಮುರಿಕಟ್ಟಿದ ಮಂಗಳೂರು ಪೊಲೀಸರು!

ಮಂಗಳೂರು, ಫೆಬ್ರುವರಿ 06: ನೇಪಾಳದಲ್ಲಿ ಕುಳಿತು ಭಾರತವನ್ನೇ ಗುರಿಯಾಗಿಸಿಕೊಂಡು ನೂರಾರು ಕೋಟಿ ರೂಪಾಯಿ ವಂಚನೆ ಮಾಡುತ್ತಿದ್ದ ಅತಿದೊಡ್ಡ ಸೈಬರ್ ಫ್ರಾಡ್ ನೆಟ್ವರ್ಕ್ ಅನ್ನು (Cyber Fraud Network) ಮಂಗಳೂರು ಪೊಲೀಸರು ಭೇದಿಸಿದ್ದಾರೆ. ನೇಪಾಳ ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ, ಅಲ್ಲಿಯೇ ತಂಗಿ ವಂಚನೆ ನಡೆಸುತ್ತಿದ್ದ 11 ಮಂದಿ ಭಾರತೀಯ ಮೂಲದ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಂಚನೆಯ ಜಾಲವನ್ನು ನಿಯಂತ್ರಿಸುತ್ತಿದ್ದ ಚೀನಾದ ಹ್ಯಾಂಡ್ಲರ್​ಗಳು

ಮಂಗಳೂರಿನ ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಯ ಜಾಡು ಹಿಡಿದು ಆರೋಪಿಗಳವರೆಗೆ ಪೊಲೀಸರು ತಲುಪಿದ್ದರು. ಬಂಧಿತ ತಂಡದಲ್ಲಿ ಭಾರತೀಯರ ಜೊತೆಗೆ ಚೀನಾ ಮೂಲದ ವಂಚಕರು ಸೇರಿದ್ದು, ಇಡೀ ಜಾಲವನ್ನು ಚೀನಾದ ಹ್ಯಾಂಡ್ಲರ್‌ಗಳು ನಿಯಂತ್ರಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಆರೋಪಿಗಳಿಂದ ಲ್ಯಾಪ್‌ಟಾಪ್‌ಗಳು, 21 ಮೊಬೈಲ್ ಫೋನ್‌ಗಳು, 20 ವಿವಿಧ ಕಂಪನಿಯ ಸಿಮ್ ಕಾರ್ಡ್‌ಗಳು ಹಾಗೂ 20 ಬ್ಯಾಂಕ್ ಡೆಬಿಟ್–ಕ್ರೆಡಿಟ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಒಂದೇ ಖಾತೆಯಿಂದ 167 ಕೋಟಿ ರೂ ಹಣ ವರ್ಗಾವಣೆ

ತನಿಖೆಯಲ್ಲಿ ಒಟ್ಟು 624 ಬ್ಯಾಂಕ್ ಖಾತೆಗಳ ವಿವರ ಪತ್ತೆಯಾಗಿದ್ದು, ಈ ಖಾತೆಗಳ ವಿರುದ್ಧ NCRP ಪೋರ್ಟಲ್‌ನಲ್ಲಿ 4580ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಒಂದು ಖಾತೆಯಲ್ಲೇ 167 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ತನಿಖೆ ವೇಳೆ ವಂಚಕರು ಬಳಸಿದ್ದ ಉಳಿದ 10 ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗಿದ್ದು, ಈ ಖಾತೆಗಳ ಮೂಲಕ ಸುಮಾರು 30.70 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: ರಾಜ್ಯಾದ್ಯಂತ ಮೆಗಾ ದಾಳಿ, 13 ಮಾಸ್ಟರ್ ಮೈಂಡ್‌ಗಳ ಬಂಧನ

ಹೇಗೆ ನಡೀತಿತ್ತು ವಂಚನೆ?

ಸಾಮಾಜಿಕ ಜಾಲತಾಣಗಳ ಮೂಲಕ ಖಾತೆದಾರರು ಹಾಗೂ ಏಜೆಂಟರನ್ನು ನೇಮಿಸಿಕೊಂಡು, ದಿನಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚನೆ ಮಾಡಲಾಗುತ್ತಿತ್ತು. ವಂಚನೆಯ ಹಣವನ್ನು ಯುಎಸ್ ಡಾಲರ್‌ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸಲಾಗುತ್ತಿತ್ತು. ಈ ಜಾಲಕ್ಕೆ ಕಾಂಬೋಡಿಯಾದಲ್ಲಿರುವ ವಂಚನಾ ಬಿಪಿಓ ಸಹ ಬೆಂಬಲ ನೀಡುತ್ತಿದ್ದುದೂ ಪತ್ತೆಯಾಗಿದೆ.

ಬಂಧಿತ ಆರೋಪಿಗಳಿವರು!

ಗುಜರಾತಿ​​ನ ಬಾವಾ ನಗರ್ ಜಿಲ್ಲೆ ನಿವಾಸಿ ಮಕವನ್ ವಿಕ್ರಂ(25), ಪಶ್ಚಿಮ ಬಂಗಾಳದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್​​​ನ ಸಿಂಗಬುಮ್ ಜಿಲ್ಲೆಯ ಪುಪ್ಲ ಶಿವಕುಮಾರ್ ರಾವ್(32), ಉತ್ತರಪ್ರದೇಶದ ಮಾವೋ ಜಿಲ್ಲೆ ನಿವಾಸಿ ಗೌರವ್ ಪಾಂಡೆ(24), ಉತ್ತರ ಪ್ರದೇಶದ ಸುಲ್ತಾನ್ ಪುರ್ ಜಿಲ್ಲೆ ಹರ್ಷ್ ಮಿಸ್ರಾ(22), ಜಾರ್ಖಂಡ್​​ ಮೂಲದ ರಾಜೇಶ್ ಮಂಡನ್(30), ಲಖನೌ ಮೂಲದ ಮೊಹಮ್ಮದ್ ಆಕೀಬ್ ಅಲಿ(27), ಬಿಹಾರದ ನಲಂದಾ ಜಿಲ್ಲೆಯ ರಾಜೀವ್ ರಂಜನ್ ಕುಮಾರ್(30), ಜಾರ್ಖಂಡ್​​ ನಿವಾಸಿ ಮಿಥುನ್ ಕುಮಾರ್ ಮಂಗರಾಜ್(38), ರಾಜಸ್ಥಾನದ ಜೈಪುರದ ಓಂ ಪ್ರಕಾಶ್ ಯಾಧವ್ (37), ಝಾನ್ಸಿ ಮೂಲದ ನೌಶಾದ್ ಅಲಿ(34) ಸೇರಿ ಒಟ್ಟು 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಿಹಾರ್ ಜೈಲ್​​ಗೆ ಸರೆಂಡರ್ ಆದ ಬಾಲಿವುಡ್ ಖ್ಯಾತ ಹಾಸ್ಯ ನಟ – Kannada News | Rajpal Yadav Surrenders to Tihar Jail After Delhi HC Denies Relief in Check Bounce Case

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಸ್ಯ ನಟ ರಾಜ್​ಪಾಲ್ ಯಾದವ್ (ರಾಜ್​ಪಾಲ್ ಯಾದವ್) ಅವರಿಗೆ ರಿಲೀಫ್ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಈ ಕಾರಣದಿಂದ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಗುರುವಾರ (ಜನವರಿ 5) ನಾಲ್ಕು ಗಂಟೆಗೆ ಅವರು ಜೈಲಿಗೆ ಆಗಮಿಸಿದರು. ಅಧಿಕಾರಿಗಳು ಆ ಬಳಿಕ ತಮ್ಮ ಪ್ರಕ್ರಿಯೆ ನಡೆಸಿದ್ದಾರೆ. ಅವರನ್ನು ಈಗ ಜೈಲಿನಲ್ಲಿ ಇಡಲಾಗಿದೆ.

ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರಾಜ್​​ಪಾಲ್ ವಿರುದ್ಧ ಕೇಸ್ ದಾಖಲಿಸಿತ್ತು. ನಟ ಹಾಗೂ ಅವನ ಪತ್ನಿ ಕೊಟ್ಟ ಚೆಕ್ ಬೌನ್ಸ್ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್​ ಪಾಲ್ ಯಾದವ್ ಹಾಗೂ ಆತನ ಪತ್ನಿ ಅಪರಾಧಿ ಎಂದು ಘೋಷಣೆ ಮಾಡಿತ್ತು. 2019ರಲ್ಲಿ ಸೆಷನ್ ಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿಯಿತು.

2019ರಲ್ಲಿ ಈ ಪ್ರಕರಣವನ್ನು ದೆಹಲಿ ಕೋರ್ಟ್​​ ಅಲ್ಲಿ ರಾಜ್​​ಪಾಲ್ ಯಾದವ್ ಪ್ರಶ್ನೆ ಮಾಡಿದರು. ಸೆಟಲ್​​ಮೆಂಟ್​ಗೆ ದಾರಿ ಹುಡುಕುತ್ತಿದ್ದೇವೆ ಎಂದು ಹೇಳಿದ ಕಾರಣದಿಂದ 2024ರಲ್ಲಿ ಹೈಕೋರ್ಟ್ ನಟನಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ಈವರೆಗೆ ನಟ ಹಣವನ್ನು ಹಿಂದಿರುಗಿಸಿಲ್ಲ. ಹೀಗಾಗಿ, ಕೋರ್ಟ್ ಈ ಬಗ್ಗೆ ಆದೇಶ ಹೊರಡಿಸಿದೆ.
ಹೆಚ್ಚುವರಿಯಾಗಿ ಕೆಲ ವಾರ ಅವಕಾಶ ಕೊಟ್ಟರೆ ಹಣ ಹೊಂದಿಸಲು ಪ್ರಯತ್ನಿಸೋದಾಗಿ ರಾಜ್​​ಪಾಲ್ ಪರ ವಕೀಲರು ಹೇಳಿದ್ದರು. ಆದರೆ, ಇದಕ್ಕೆ ಹೈಕೋರ್ಟ್ ನಿರಾಕರಿಸಿತ್ತು. ಬುಧವಾರ ನಾಲ್ಕು ಗಂಟೆ ಒಳಗೆ ಸರೆಂಡರ್ ಆಗಲು ಕೋರ್ಟ್ ಸೂಚನೆ ನೀಡಿತ್ತು.

ಇದನ್ನೂ ಓದಿ: ಪತ್ರಕರ್ತನ ಮೊಬೈಲ್ ಕಿತ್ತುಕೊಂಡು ಎಸೆದ ಹಾಸ್ಯ ನಟ ರಾಜ್​ಪಾಲ್ ಯಾದವ್

‘ಯಾವುದೇ ವ್ಯಕ್ತಿ ನಿರ್ದಿಷ್ಟ ಹಿನ್ನೆಲೆ ಅಥವಾ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ಅವರಿಗೆ ವಿಶೇಷ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಬೇಡಿ. ನಿರಂತರವಾಗಿ ಅದೇ ತಪ್ಪು ಆಗುತ್ತಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link