ಇದು ಬಾಗಿಲು ಮುಚ್ಚದ ಸರ್ಕಾರಿ ಶಾಲೆ, ಅಧ್ಯಾಪಕರಿಗೆ ಶಿಫ್ಟ್ನಲ್ಲಿ ಕೆಲಸ! SSLC ಫಲಿತಾಂಶ ಹೆಚ್ಚಿಸಲು ವಿನೂತನ ಪ್ರಯೋಗ – Kannada News | School That Never Closes! Yadgir Govt School’s 24×7 Teaching Experiment to Boost SSLC Results
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಪಟ್ಟಣದ ಸರ್ಕಾರಿ ಪ್ರೌಢಶಾಲೆImage Credit source: tv9 ಯಾದಗಿರಿ, ಫೆಬ್ರವರಿ 6: ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳನ್ನು ಓದಿನೆಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಯಾದಗಿರಿ (Yadgir) ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ವಿನೂತನ ಹೆಜ್ಜೆಯನ್ನಿಟ್ಟಿದ್ದಾರೆ. ಟಿವಿ ಮತ್ತು ಮೊಬೈಲ್‌ನ ಗೀಳಿಗೆ ಬಿದ್ದಿರುವ ವಿದ್ಯಾರ್ಥಿಗಳನ್ನು ಓದಿನ ಕಡೆ ಸೆಳೆಯುವುದು ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ, ಈ ಶಾಲೆಯ ಶಿಕ್ಷಕರು ದಿನಪೂರ್ತಿ ಶಾಲೆಯನ್ನು ತೆರೆದು, ಪಾಳಿಗಳಲ್ಲಿ ಬೋಧಿಸುತ್ತಿದ್ದಾರೆ!…