Category Archives: Blog

Your blog category

Horoscope Today 06 February​: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ! – Kannada News | Daily Horoscope for February​ 6th 2025: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 06, 2026, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾಸನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷದ ಪಂಚಮಿ ತಿಥಿ, ಹಸ್ತ ನಕ್ಷತ್ರ, ಧೃತಿ ಯೋಗ ಮತ್ತು ಕೌಲವ ಕರಣಗಳನ್ನೊಳಗೊಂಡಿದೆ.

ಇದು ಮಹಾಲಕ್ಷ್ಮಿಯ ಆರಾಧನೆಗೆ ಪ್ರಶಸ್ತ್ಯವಾದ ಶುಭ ದಿನವಾಗಿದ್ದು, ಸಂಕಲ್ಪಗಳನ್ನು ಈಡೇರಿಸಿಕೊಳ್ಳಲು, ಲಲಿತಾ ಸಹಸ್ರನಾಮ ಅಥವಾ ಮಹಾಲಕ್ಷ್ಮಿ ಅಷ್ಟಕ ಪಾರಾಯಣಕ್ಕೆ ಉತ್ತಮವಾಗಿದೆ. ಔದುಂಬರ ಪಂಚಮಿಯಾಗಿರುವುದರಿಂದ ಅತ್ತಿ ಮರದ ಪೂಜೆ ಅಥವಾ ದತ್ತಾತ್ರೇಯನ ಸ್ತೋತ್ರ ಪಠಿಸುವುದು ಶ್ರೇಯಸ್ಕರ. ಧನಿಷ್ಠ ಮಳೆ ಪ್ರಾರಂಭ, ಉಳ್ಳಾಲತಿ ಜಾತ್ರೆ, ಪಂಚಲಿಂಗೇಶ್ವರ ರಥೋತ್ಸವ ಮತ್ತು ಬಸರೀಕಟ್ಟೆಯಲ್ಲಿ ಜನಾರ್ಧನ ರಥೋತ್ಸವದಂತಹ ಪರ್ವ ದಿನವೂ ಆಗಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

ಇದು ಬಾಗಿಲು ಮುಚ್ಚದ ಸರ್ಕಾರಿ ಶಾಲೆ, ಅಧ್ಯಾಪಕರಿಗೆ ಶಿಫ್ಟ್​ನಲ್ಲಿ ಕೆಲಸ! SSLC ಫಲಿತಾಂಶ ಹೆಚ್ಚಿಸಲು ವಿನೂತನ ಪ್ರಯೋಗ – Kannada News | School That Never Closes! Yadgir Govt School’s 24×7 Teaching Experiment to Boost SSLC Results

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಪಟ್ಟಣದ ಸರ್ಕಾರಿ ಪ್ರೌಢಶಾಲೆImage Credit source: tv9

ಯಾದಗಿರಿ, ಫೆಬ್ರವರಿ 6: ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳನ್ನು ಓದಿನೆಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಯಾದಗಿರಿ (Yadgir) ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ವಿನೂತನ ಹೆಜ್ಜೆಯನ್ನಿಟ್ಟಿದ್ದಾರೆ. ಟಿವಿ ಮತ್ತು ಮೊಬೈಲ್‌ನ ಗೀಳಿಗೆ ಬಿದ್ದಿರುವ ವಿದ್ಯಾರ್ಥಿಗಳನ್ನು ಓದಿನ ಕಡೆ ಸೆಳೆಯುವುದು ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ, ಈ ಶಾಲೆಯ ಶಿಕ್ಷಕರು ದಿನಪೂರ್ತಿ ಶಾಲೆಯನ್ನು ತೆರೆದು, ಪಾಳಿಗಳಲ್ಲಿ ಬೋಧಿಸುತ್ತಿದ್ದಾರೆ! ಈ ವಿಶೇಷ ಯೋಜನೆಯನ್ನು ‘ಬಾಗಿಲು ಮುಚ್ಚದ ಸರ್ಕಾರಿ ಶಾಲೆ’ ಎಂದು ಕರೆಯಲಾಗುತ್ತಿದೆ.

ಯಾದಗಿರಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಯಾವಾಗಲೂ ಪಟ್ಟಿಯಲ್ಲಿ ಕೆಳಗಿರುತ್ತದೆ. ಈ ಹಣೆಪಟ್ಟಿಯನ್ನು ಕಳಚಲು ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಈ ನೂತನ ಕಾರ್ಯಕ್ರಮ ಸಹಕಾರಿಯಾಗಿದೆ. ಶಾಲೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಿಸ್ತು ಮತ್ತು ಪಠ್ಯಕ್ರಮದ ಸಂಪೂರ್ಣ ಕಲಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ತಾವು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಶಾಲೆಗಳು ಬೆಳಗ್ಗೆ 9.30ಕ್ಕೆ ಆರಂಭವಾಗಿ ಸಂಜೆ 4ಕ್ಕೆ ಮುಕ್ತಾಯಗೊಂಡರೆ, ಕಕ್ಕೇರ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮಾತ್ರವಲ್ಲದೆ ರಾತ್ರಿ ವೇಳೆಯೂ ಪಾಠ ಬೋಧನೆ ನಡೆಯುತ್ತದೆ. ಅಂದರೆ, ದಿನದ 24 ಗಂಟೆಯೂ ಶಾಲೆಯ ಬಾಗಿಲು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ತೆರೆದಿರುತ್ತದೆ. 8 ರಿಂದ 10ನೇ ತರಗತಿಯವರೆಗೆ 550ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ 129 ಮಕ್ಕಳು 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.

ರಾತ್ರಿ ಶಾಲೆಯಲ್ಲೇ ಉಳಿಯುತ್ತಾರೆ ಹುಡುಗರು

ಬೆಳಗ್ಗೆ 6 ಗಂಟೆಗೆ ಗ್ರೂಪ್ ಸ್ಟಡಿ ಮೂಲಕ ಶಾಲೆಯಲ್ಲಿ ಅಧ್ಯಯನ ಆರಂಭವಾಗುತ್ತದೆ. ಹೆಣ್ಣುಮಕ್ಕಳು ಸಂಜೆ 6ರವರೆಗೆ ಶಾಲೆಯಲ್ಲಿ ಅಧ್ಯಯನ ಮಾಡಿ ಮನೆಗೆ ತೆರಳಿದರೆ, 74 ಗಂಡುಮಕ್ಕಳಿಗೆ ರಾತ್ರಿ 11ರ ತನಕ ಪಾಠ ಮುಂದುವರೆಯುತ್ತದೆ. ರಾತ್ರಿ ಶಾಲೆಯಲ್ಲಿ ಉಳಿಯುವ ಈ ವಿದ್ಯಾರ್ಥಿಗಳನ್ನು ಬೆಳಗ್ಗೆ 5 ಗಂಟೆಗೆ ಎಬ್ಬಿಸಿ ಮತ್ತೆ ಓದಿಸುವ ವ್ಯವಸ್ಥೆ ಮಾಡಲಾಗಿದೆ. ಕನ್ನಡಕ್ಕೆ 7 ರಿಂದ 8 ಗಂಟೆ, ಇಂಗ್ಲಿಷ್‌ಗೆ 8 ರಿಂದ 9 ಗಂಟೆ, ಗಣಿತಕ್ಕೆ 9 ರಿಂದ 10.30 ಗಂಟೆ ಹಾಗೂ ಬೆಳಗ್ಗೆ 5 ಗಂಟೆಗೆ ವಿಜ್ಞಾನ ವಿಷಯಗಳಿಗೆ ಪಾಠ ಮಾಡಲಾಗುತ್ತದೆ.

ಕಕ್ಕೇರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಿಗೆ ಇದೆ ಶಿಫ್ಟ್!

ಶಿಕ್ಷಕರು ಪಾಳಿ ಪ್ರಕಾರ ರಾತ್ರಿ ಶಿಫ್ಟ್​ಗಳಲ್ಲಿಯೂ ಹಾಜರಿರುತ್ತಾರೆ. ಕಳೆದ ಒಂದು ವಾರದಿಂದ ಈ ವಿನೂತನ ಶೈಕ್ಷಣಿಕ ನೆರವು ಮಕ್ಕಳಿಗಾಗಿ ಲಭ್ಯವಿದ್ದು, ಶಿಕ್ಷಕರ ಈ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಈ ಪ್ರಯತ್ನದಿಂದ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮಹತ್ವದ ಸುಧಾರಣೆ ಕಂಡುಬರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026 Final: ಮೊಟ್ಟ ಮೊದಲ ತಂಡ; ಫೈನಲ್ ಗೆದ್ದು ಇತಿಹಾಸ ಬದಲಿಸಿದ ಆರ್​ಸಿಬಿ – Kannada News | Smriti Mandhana’s RCB Breaks WPL Jinx, Wins 2026 Women’s Premier League

ಈ ಫೈನಲ್ ಪಂದ್ಯದ ಗೆಲುವಿನೊಂದಿಗೆ ಆರ್​ಸಿಬಿ, ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ಸಂಪ್ರದಾಯವನ್ನು ಮುರಿದು ಹೊಸ ಇತಿಹಾಸ ರಚಿಸಿದೆ. ವಾಸ್ತವವಾಗಿ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನೇರವಾಗಿ ಫೈನಲ್​ಗೇರಿದ ತಂಡವು ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ ನಾಲ್ಕನೇ ಆವೃತ್ತಿಯಲ್ಲಿ ನೇರವಾಗಿ ಫೈನಲ್​ಗೇರಿದ್ದ ಆರ್​ಸಿಬಿ ಟ್ರೋಫಿ ಎತ್ತಿಹಿಡಿಯುವುದರಲ್ಲೂ ಯಶಸ್ವಿಯಾಯಿತು.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಎಂದೋ ಮಾಡಿದ‌ ಕಾರ್ಯಕ್ಕೆ ಪ್ರಶಂಸೆ – Kannada News | Horoscope 06 February 2026; Dina Rashi Bhavishya Today, Checkout the details here

ಮೇಷ ರಾಶಿ:

ನಿಮಗೆ ಇಂದು ವೃತ್ತಿ ಕ್ಷೇತ್ರದಲ್ಲಿ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸಲು ಜೊತೆಗಾರರ ಬೆಂಬಲ ಸಿಗುವುದು. ಭೂಮಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ಸುಮ್ಮನೆ ಕುಳಿತಿರುವುದು ನಿಮಗೆ ಆಗದ ಸಂಗತಿ. ಎಲ್ಲರ ಜೊತೆ ಬೆರೆಯುವುದೂ ಆಗದು.

ವೃಷಭ ರಾಶಿ:

ಇಂದು ನಿರ್ಧಾರ ತೆಗೆದುಕೊಳ್ಳುವಾಗ ಆತ್ಮಸಾಕ್ಷಿಯೂ ಅದಕ್ಕೆ ಬೆಂಬಲಿಸಬಹುದು. ಒಡಹುಟ್ಟಿದವರ ಜೊತೆ ಸಂಬಂಧದಲ್ಲಿ ಸವಿಯನ್ನು ಕಾಪಾಡಿಕೊಳ್ಳಿ. ಯಾವುದೇ ರೀತಿಯ ದೂರ ಪ್ರಯಾಣ ಮಾಡುವುದು ಬೇಡ. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ‌‌. ನಿಮ್ಮ ಈ ದಿನವು ಆತ್ಮವಿಶ್ವಾಸದಿಂದ ಇರುತ್ತದೆ. ಕುಟುಂಬದ ಯುವ ಸದಸ್ಯರ ಯಶಸ್ಸಿನಲ್ಲಿ ಹೆಮ್ಮೆ ಪಡುವಿರಿ. ಉದ್ವೇಗದಿಂದ ಕಾರ್ಯಗಳನ್ನು ಮಾಡುವುದಕ್ಕಿಂತ ಏಕಾಗ್ರತೆ ಇರಲಿ.

ಮಿಥುನ ರಾಶಿ:

ಕನಸುಗಳೆಲ್ಲವೂ ನನಸಾಗಿಲ್ಲ ಎಂದು ಹತಾಶರಾಗದೇ ಅದಕ್ಕೆ ಸಮಯವಿದೆ ಎಂದು ಸಕಾರಾತ್ಮಕ ಯೋಚನೆ ಮಾಡಿ. ಸ್ತ್ರೀಯರಿಗೆ ಅನಾರೋಗ್ಯದ ಅಧಿಕವಾಗುವುದು. ಇಂದು ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ನೀವು ಎಲ್ಲರ ಜೊತೆ ಸಭ್ಯತೆಯನ್ನು ಮೀರದೇ ಮಾತನಾಡಬೇಕು. ನಿಮ್ಮದೇ ಕೆಲಸದ ಒತ್ತಡಗಳು ನಿಮಗೆ ಬರುವುದು. ಓಡಾಟವು ಹೆಚ್ಚಾಗಿದ್ದು, ಉತ್ಸಾಹವನ್ನು ಕಳೆದುಕೊಂಡು ಸುಮ್ಮನೆ ಕುಳಿತುಕೊಳ್ಳುವಿರಿ.

ಕರ್ಕಾಟಕ ರಾಶಿ:

ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ಎಂತಹ ಸಮಸ್ಯೆಗೂ ಪರಿಹಾರ ಸಿಗಲಿದೆ. ಮಾನಸಿಕ ಒತ್ತಡ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಳ ಆಗಬಹುದು. ತಂತ್ರಜ್ಞರಿಗೆ ಈ ದಿನವು ಅನುಕೂಲಕರವಾಗಿರುತ್ತದೆ. ಖರೀದಿಯ ಉತ್ಸಾಹದಲ್ಲಿ ಮಾತು ಅತಿಯಾಗುವುದು ಬೇಡ. ಕೌಟುಂಬಿಕ ಜೀವನ ಸುಖಕರವಾಗಿರಬಹುದು. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಸಂಗಾತಿಯಿಂದ ಅನಿರೀಕ್ಷಿತ ಕೊಡುಗೆಯನ್ನು ಪಡೆಯುವಿರಿ.

ಸಿಂಹ ರಾಶಿ:

ಇಂದು ಕೆಲಸದ ಸ್ಥಳದ ಸಮಸ್ಯೆಗಳಿಗೆ ನಿಮ್ಮ ನಿಷ್ಪಕ್ಷಪಾತ ವಿಧಾನವು ನಿಮ್ಮನ್ನು ಜನಪ್ರಿಯಗೊಳಿಸುವುದು. ಇಂದು ಯಾವುದೇ ಕೆಲಸ ಮಾಡುವಾಗ, ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಆಪ್ತರ ಮಾತುಗಳು ನಿಮ್ಮ‌ ತಲೆಯಲ್ಲಿ ಕೊರೆಯಬಹುದು. ಉತ್ತಮ ಕಾರ್ಯಕ್ಕೆ ಎಲ್ಲ ಕಡೆಯಿಂದ ಅಭಿನಂದನೆಗಳು ಹರಿದುಬರಬಹುದು. ಸರ್ಕಾರಿ ಯೋಜನೆಗೆ ಹಣ ಹೂಡುವ ಸಾಧ್ಯತೆಗಳಿವೆ. ಹಣದ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ. ನಿಮ್ಮ ಮಿತವಾದ ಮಾತಿನಿಂದ ಇತರರಿಗೆ ಅಚ್ಚರಿಯಾದೀತು.

ಕನ್ಯಾ ರಾಶಿ:

ಆತುರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ತಪ್ಪು ನಿಮಗೇ ಗೊತ್ತಾದೀತು. ಉದ್ಯೋಗ ಕ್ಷೇತ್ರಗಳಲ್ಲಿ ಕೆಲವು ರೀತಿಯ ರಾಜಕೀಯವನ್ನು ಎದುರಿಸುವಿರಿ. ವೃತ್ತಿಪರರು ಇಂದು ಉತ್ತಮ ಅವಕಾಶಗಳನ್ನು ಕಂಡುಕೊಳ್ಳಬಹುದು. ಹಿತೈಷಿಗಳ ಸಹಾಯದಿಂದ ನಿಮ್ಮ ಯಾವುದೇ ಆಸೆಗಳನ್ನು ಈಡೇರಿಸಲಾಗುವುದು. ಸಣ್ಣ ವ್ಯಾಪಾರಿಗಳು ಅಲ್ಪ ಲಾಭವನ್ನು ಗಳಿಸಿ, ಖುಷಿಪಡುವರು. ನೀವು ಕೆಲವು ವ್ಯವಹಾರ ವಿಷಯಗಳನ್ನು ಜಾಣ್ಮೆಯಿಂದ ನಿಭಾಯಿಸು

ತುಲಾ ರಾಶಿ:

ಯಾವುದೇ ಸಮಾಜಕ್ಕೆ ಸಂಬಂಧಿಸಿದ ವಿಷಯಗಳು ನಿಮ್ಮ ಪರವಾಗಿ ಬರಬಹುದು. ವ್ಯವಹಾರದ ದೃಷ್ಟಿಯಿಂದ ಎಲ್ಲವೂ ಚೆನ್ನಾಗಿರುತ್ತದೆ. ವಾದಗಳ ಕಡೆ ಹೆಚ್ಚು ಗಮನವಿರುವುದು. ನಿಮ್ಮ ವೈಯಕ್ತಿಕ ವಿಚಾರವನ್ನು ಹೊರಗಿನವರಿಗೆ ಹೇಳಬೇಡಿ. ಎಂದೋ ಬರುವ ಸಮಸ್ಯೆಗಳಿಗೆ ಇಂದು ಚಿಂತೆಪಡುವಿರಿ. ವೃತ್ತಿಪರ ಜೀವನದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಸ್ಪಷ್ಟ ನಿಲುವನ್ನು ಇಟ್ಟುಕೊಳ್ಳಿ.

ವೃಶ್ಚಿಕ ರಾಶಿ:

ಕೆಲವು ಜನರು ನಿಮ್ಮ ಸರಳ ಸ್ವಭಾವವನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಆತುರದಲ್ಲಿ ನೀವು ಕೆಲವು ಲಾಭದಾಯಕ ಅವಕಾಶಗಳನ್ನು ಕಳೆದುಕೊಳ್ಳಬಹುದು. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಗಾತಿಯ ಪೂರ್ಣ ಬೆಂಬಲ ಸಿಗುವುದು. ವೃತ್ತಿಪರ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಅವಕಾಶ ದೊರೆಯಲಿದೆ. ಕಠಿಣ ಪರಿಶ್ರಮದ ಆಧಾರದ ಮೇಲೆ, ಕಷ್ಟಕರವಾದ ಕೆಲಸಗಳನ್ನು ಕೂಡ ಸುಲಭವಾಗಿ ಪೂರ್ಣಗೊಳಿಸುವಿರಿ. ಹಿರಿಯರಿಗೆ ಗೌರವವನ್ನು ಕೊಡುವಿರಿ.

ಧನು ರಾಶಿ:

ನೀವು ಉತ್ತಮ ಆರ್ಥಿಕ ಯೋಜನೆಯನ್ನು ಮಾಡಬಹುದು. ಯುವಕರು ಹೊಸ ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಸ್ಥ ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಸಾಧ್ಯವಾಗುತ್ತದೆ. ಹಣಕಾಸಿನ ವಿಷಯದಲ್ಲಿ ಕೆಲವು ರೀತಿಯ ಆತುರ ಉಂಟಾಗಬಹುದು. ಬಂಧುಗಳ ಎದುರು ಸ್ವಾಭಿಮಾನವನ್ನು ಇಟ್ಟುಕೊಳ್ಳುವಿರಿ. ಸ್ಥಗಿತಗೊಂಡ ಕೆಲಸದಲ್ಲಿ ವೇಗವನ್ನು ಪಡೆಯುವುದು ಪ್ರಯೋಜನಕಾರಿಯಾಗಿದೆ.

ಮಕರ ರಾಶಿ:

ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ವಿದ್ಯುತ್ ಉಪಕರಣದಿಂದ ತೊಂದರೆಯಾದೀತು. ಮನೆಯ ಸರಿಯಾದ ಕ್ರಮವನ್ನು ಕಾಪಾಡಿಕೊಳ್ಳಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ತಾಳ್ಮೆಯಿಂದಿರಿ, ನಿಮ್ಮ ಕೋಪವು ನಿಮಗೆ ಹಾನಿಕಾರಕವಾಗಿರುತ್ತದೆ. ಆದಾಯದಲ್ಲಿಯೂ ನಿಮಗೇ ಪೂರ್ಣತೃಪ್ತಿ ಇರದು. ಸಂಗಾತಿಯ ಸೂಕ್ಷ್ಮ ಭಾವಕ್ಕೆ ಪೆಟ್ಟು ಬೀಳಬಹುದು. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ.

ಕುಂಭ ರಾಶಿ:

ನಿಮ್ಮ ತಪ್ಪನ್ನು ಯಾರ ಮೇಲೋ ಹಾಕುವಿರಿ. ಅಧ್ಯಾತ್ಮದ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಅತ್ಯುತ್ತಮ ಜ್ಞಾನವನ್ನೂ ಪಡೆಯುವಿರಿ. ಯುವಕರ ವೃತ್ತಿ ಸಂಬಂಧಿತ ಯೋಜನೆಗಳು ದಾರಿ ತಪ್ಪಬಹುದು. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ. ಇಂದು ಶೈಕ್ಷಣಿಕ ರಂಗದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ.

ಮೀನ ರಾಶಿ:

ವೈಯಕ್ತಿಕ ಚಟುವಟಿಕೆಗಳಲ್ಲಿ ಹೆಚ್ಚು ನಿರತರಾಗಿರುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ತೊಂದರೆ ಸಾಧ್ಯತೆಯೂ ಇದೆ. ತಾಳ್ಮೆಯಿಂದ ಸಮಯ ಕಳೆಯಿರಿ. ಕೈ ತಪ್ಪಿ ಹೋಗಿದೆ ಎಂದುಕೊಂಡಿದ್ದ ಯೋಜನೆಗಳು ಸಿಗಬಹುದು. ಹೂಡಿಕೆಯಿಂದ ಲಾಭವು ಸಿಗಲಿದೆ. ವ್ಯಾಪಾರವನ್ನು ವಿಸ್ತರಿಸಲು ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಬಹುದು. ಎಲ್ಲೋ ಕೊಟ್ಟಿರುವ ಹಣವನ್ನು ನೀವು ಮರಳಿ ಪಡೆಯಬಹುದು. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಅತಿಗಂಡ, ಕರಣ : ಬವ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 24 pm, ಇಂದಿನ ಶುಭಾಶುಭ ಕಾಲ : ರಾಹು 11:12 – 12:39, ಯಮಗಂಡ ಕಾಲ 15:32 – 16:58, ಗುಳಿಕ ಕಾಲ 08:19 – 09:45

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 6ರ ದಿನಭವಿಷ್ಯ

ಈ ದಿನ ಯಾವುದೇ ಮುಖ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮೊದಲಿಗೆ ತುಳಸಿ ಗಿಡಕ್ಕೆ ನಮಸ್ಕಾರ ಮಾಡಿಕೊಂಡು ಹೊರಡಿ. ಸಾಧ್ಯವಾದಲ್ಲಿ ನೀರನ್ನು ಗಿಡಕ್ಕೆ ಹಾಕಿದಲ್ಲಿ ಮತ್ತೂ ಒಳ್ಳೆಯದು. ದೀರ್ಘ ಕಾಲದಿಂದ ಬಾಕಿ ಉಳಿದುಹೋಗಿದ್ದ ಕೆಲಸಗಳು ಸರಾಗವಾಗಿ ಆಗಲಿವೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಹಣಕಾಸಿನ ಹರಿವು ನೀವು ನಿರೀಕ್ಷೆಗೂ ಮೀರಿ ಸರಾಗವಾಗಿ ಆಗಲಿದೆ. ನಿಮ್ಮಲ್ಲಿ ಕೆಲವರು ಸಂಗೀತ ಅಥವಾ ಸಂಗೀತದ ಸಾಧನಗಳನ್ನು ಕಲಿಯುವುದಕ್ಕೆ ಸೇರಿಕೊಳ್ಳುವ ನಿರ್ಧಾರ ಮಾಡುವ ಯೋಗ ಇದೆ. ಅತಿಯಾದ ಖಾರದ ಪದಾರ್ಥಗಳನ್ನು ಸೇವನೆ ಮಾಡುವ ರೂಢಿ ಇರುವವರು ಈ ದಿನ ಸಾಧ್ಯವಾದಷ್ಟು ಆ ರೀತಿ ಆಹಾರ ಪದಾರ್ಥಗಳಿಂದ ದೂರ ಇರುವುದು ಕ್ಷೇಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮ್ಮಲ್ಲಿ ಯಾರು ಈಗಿರುವ ಹುದ್ದೆಯಿಂದ ಕೆಳಗೆ ಇಳಿಯಬೇಕು ಅಂದುಕೊಳ್ಳುತ್ತಾ ಇರುತ್ತೀರೋ ಅಂಥವರು ಆ ಹುದ್ದೆಗೆ ಮುಂದೆ ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಆಪ್ತರಾದವರ ಜೊತೆಗೆ ಚರ್ಚೆಯನ್ನು ಮಾಡಲಿದ್ದೀರಿ. ಈಗಾಗಲೇ ಇಂಟರ್ ವ್ಯೂ ನೀಡಿಯಾಗಿದೆ, ಅದರ ಫಲಿತಾಂಶ ಏನಾಗಿದೆ ಎಂಬುದು ತಿಳಿದಿಲ್ಲ ಎಂದಾಗಿದ್ದಲ್ಲಿ ಆ ಬಗ್ಗೆ ಅಪ್ ಡೇಟ್ ದೊರೆಯುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮಲ್ಲಿ ಕೆಲವರಿಗೆ ಈ ದಿನ ಭಾವನೆಗಳ ಏರಿಳಿತ ಇರುತ್ತದೆ. ಇನ್ನು ನಿಮಗೆ ದೊರೆಯುವ ಯಶಸ್ಸನ್ನು ಹೇಗೆ ನಿಭಾಯಿಸಬೇಕು ಎಂಬುದು ಕೂಡ ಗೊಂದಲ ತಂದೊಡ್ಡುತ್ತದೆ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಂಥ ಸಂಸ್ಥೆಗಳಲ್ಲಿ ಉಪನ್ಯಾಸ ನೀಡುವಂತೆ ನಿಮಗೆ ಆಹ್ವಾನ ಬರುವ ಯೋಗ ಇದೆ. ಪ್ರೀತಿಯಲ್ಲಿ ಇರುವವರು ನೀವು ಪ್ರೀತಿಸುವ ವ್ಯಕ್ತಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡಿಕೊಡುವುದಕ್ಕೆ ಹೆಚ್ಚು ಸಮಯವನ್ನು ಮೀಸಲಿಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 6ರ ದಿನಭವಿಷ್ಯ

ಸಂಪೂರ್ಣ ವಿಷಯ ತಿಳಿಯದೆಯೇ ಅಥವಾ ಗೊತ್ತಿದ್ದೂ ಹಿರಿಯರಿಗೆ ಬೈದಂಥ ಘಟನೆಗಳ ವಿಚಾರವಾಗಿ ನಿಮ್ಮ ಮನಸ್ಸಿನಲ್ಲಿ ಚಿಂತೆ- ಪಾಪ ಪ್ರಜ್ಞೆ ಕಾಡುತ್ತಾ ಇದ್ದಲ್ಲಿ ಅದರ ನಿವಾರಣೆಗೆ ಹಸುವಿಗೆ ಯಥಾ ಶಕ್ತಿ ಬಾಳೇಹಣ್ಣು ನೀಡುವುದು ಒಳ್ಳೆಯದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಸಂತೋಷವೋ ಸಂಭ್ರಮವೋ ಅಥವಾ ಭಾವನಾತ್ಮಕ ಕ್ಷಣಗಳೋ ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಭಾವನಾತ್ಮಕ ಕ್ಷಣಗಳಲ್ಲಿ ಯಾರಿಗೂ ಮಾತು ನೀಡುವುದಕ್ಕೆ ಹೋಗಬೇಡಿ. ಕಡಿಮೆ ಖರ್ಚಿನಲ್ಲಿ ಉಡುಗೊರೆ ನೀಡಬೇಕು ಎಂದು ನೀವು ಅಂದುಕೊಂಡಿರುತ್ತೀರಿ, ನಾನಾ ಕಾರಣಗಳಿಂದ ಅದು ಬಜೆಟ್ ಮೀರಿ ಹೋಗುವಂತೆ ಆಗಲಿದೆ. ಇತರರ ಜೊತೆಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಹಣವನ್ನು ಮಾನದಂಡವಾಗಿ ಇರಿಸಿಕೊಂಡು ಕೆಲವರು ನಿಮ್ಮನ್ನು ನಿರ್ಲಕ್ಷ್ಯ- ತಿರಸ್ಕಾರ ಭಾವನೆಯಿಂದ ನೋಡುತ್ತಾರೆ ಎಂಬ ಭಾವನೆ ಮನದಲ್ಲಿ ಗಟ್ಟಿಯಾಗಿ ಕೂರಲಿದೆ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಡುವ ಮುನ್ನ ಹನುಮಾನ್ ಚಾಲೀಸಾ ಕೇಳಿಸಿಕೊಳ್ಳುವುದು ಅಥವಾ ಪಠಿಸುವುದರಿಂದ ಹಲವು ನಕಾರಾತ್ಮಕ ಬೆಳವಣಿಗೆಗಳು ದೂರವಾಗುತ್ತವೆ. ನಿಮ್ಮ ಜೊತೆಯಲ್ಲಿ ಉದ್ಯೋಗ ಮಾಡುವವರು ಸಹಾಯ ಕೇಳಿಕೊಂಡು ಬಂದಲ್ಲಿ ಅವರಿಗೆ ಸ್ಪಂದಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮಲ್ಲಿ ಯಾರು ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂಥವರು ಸೋಷಿಯಲ್ ಮೀಡಿಯಾದಲ್ಲಿ ಹಾಕುವಂಥ ಪೋಸ್ಟ್ ನಿಂದಲೋ ಅಥವಾ ಮಾಧ್ಯಮಗಳ ಎದುರಿಗೆ ನೀವು ಆಡಿದ ಮಾತಿನಿಂದ ಕೆಲವು ವಿವಾದಕ್ಕೆ ಸಿಲುಕಿಕೊಳ್ಳುವಂತೆ ಆಗಲಿದೆ. ಆಕಸ್ಮಿಕವಾಗಿ ನಿಮಗೆ ಪರಿಚಯ ಆದಂಥ ವ್ಯಕ್ತಿಯೊಬ್ಬರ ಒಡನಾಟದಿಂದ ಉದ್ಯೋಗಕ್ಕೆ ಸಂಬಂಧಿಸಿದ ಕೆಲವು ಮುಖ್ಯವಾದ ರೆಫರೆನ್ಸ್ ಗಳು ದೊರೆಯುವ ಯೋಗ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

WPL 2026 Final: ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದ ಆರ್​ಸಿಬಿ ಸಿಂಹಿಣಿಯರು; ವಿಡಿಯೋ – Kannada News | WPL 2026 Final: RCB Crowned Champions After Thrilling Chase vs Delhi Capitals

ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಅಲಂಕರಿಸಿತು. ಡೆಲ್ಲಿ ನೀಡಿದ 203 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್​​ಸಿಬಿ ಕೊನೆಯ ಓವರ್​ನಲ್ಲಿ ಗೆಲುವು ಸಾಧಿಸಿತು.

ಕೊನೆಕೊನೆಯಲ್ಲಿ ಜಾರ್ಜಿಯಾ ವಾಲ್, ರಿಚಾ ಘೋಷ್ ಹಾಗೂ ಸ್ಮೃತಿ ಮಂಧಾನ ವಿಕೆಟ್ ಕಳೆದುಕೊಂಡು ಆರ್​ಸಿಬಿ ಕೊಂಚ ಒತ್ತಡಕ್ಕೆ ಸಿಲುಕಿತ್ತು. ಅಲ್ಲದೆ ಸ್ಮೃತಿ ವಿಕೆಟ್ ಬಳಿಕ ಬಂದ ರಾಧಾ ಯಾದವ್ ಕೂಡ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಡೆಲ್ಲಿ ತಂಡ ಕ್ಯಾಚ್ ಕೈಚೆಲ್ಲಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರಾಧಾ 20 ನೇ ಓವರ್​ನಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ರಾಧಾ ಎರಡನೇ ಬೌಂಡರಿ ಬಾರಿಸುತ್ತಿದ್ದಂತೆ ಡಗೌಟ್​ನಲ್ಲಿ ಕುಳಿತಿದ್ದ ಇಡೀ ತಂಡ ಗೆಲುವಿನ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿತು. ಒಬ್ಬರನೊಬ್ಬರು ತಬ್ಬಿಕೊಂಡು ಸಂಭ್ರಮಿಸಿದರು. ಇತ್ತ ಬೌಂಡರಿ ಬಾರಿಸಿ ತಂಡವನ್ನು ಗೆಲ್ಲಿಸಿದ ರಾಧಾ ಯಾದವ್, ನಾನ್ ಸ್ಟ್ರೈಕ್​ನಲ್ಲಿದ್ದ ನಡಿನ್ ಡಿ ಕ್ಲರ್ಕ್​ ಅವರನ್ನು ತಬ್ಬಿಕೊಂಡು ಗೆಲುವನ್ನು ಆಚರಿಸಿದರು. ಆ ಬಳಿಕ ಇಡೀ ತಂಡ ಮೈದಾನದಲ್ಲಿ ನೆರೆದು ಗೆಲುವನ್ನು ಸಂಭ್ರಮಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 6ರ ದಿನಭವಿಷ್ಯ

ಈ ದಿನ ಪಾರಿವಾಳಗಳಿಗೆ ಕಾಳು- ಕಡಿ ಹಾಕಿದಲ್ಲಿ ಯತ್ನ ಕಾರ್ಯಗಳಲ್ಲಿ ಅನುಕೂಲಗಳು ಆಗಲಿವೆ. ಇನ್ನು ಏನಾದರೊಂದು ಕಾರಣವನ್ನು ಹೇಳಿ, ನಿಮ್ಮ ಕೆಲಸವನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದಲ್ಲಿ ಅದಕ್ಕೆ ಕೂಡ ಪರಿಹಾರ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಅಜೀರ್ಣ, ವಿಪರೀತ ಜ್ವರ ಈ ರೀತಿ ತೊಂದರೆಗಳು ಮಕ್ಕಳಿಗೆ ಕಾಣಿಸಿಕೊಂಡಲ್ಲಿ ಕೂಡಲೇ ಸೂಕ್ತ ವೈದ್ಯೋಪಚಾರ ಕೊಡಿಸುವ ಕಡೆಗೆ ಗಮನವನ್ನು ನೀಡಿ. ಸಾವಕಾಶವಾಗಿ ಮಾತನಾಡಿ, ಬಗೆಹರಿಸಿದರಾಯಿತು ಎಂದುಕೊಂಡ ಸಮಸ್ಯೆಯೊಂದು ವಿಕೋಪಕ್ಕೆ ಹೋಗುವುದರಿಂದ ಬಹಳ ಹಿಂಸೆ ಆಗಲಿದೆ. ಯಾವ ವ್ಯಕ್ತಿ ನಿಮ್ಮ ಮಾತನ್ನು ಮೀರುವುದಿಲ್ಲ ಎಂದು ಅಂದುಕೊಂಡಿರುತ್ತೀರೋ ಅಂಥವರೇ ಧ್ವನಿ ಏರಿಸಿ, ನಿಮ್ಮ ಅಭಿಪ್ರಾಯಗಳಿಗೆ- ಸಲಹೆಗಳಿಗೆ ವಿರುದ್ಧವಾಗಿ ಮಾತನಾಡಲಿದ್ದಾರೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೆ ಮಾತು ನೀಡಿದವರು ಇನ್ಯಾರಿಗೋ ಅನುಕೂಲ ಮಾಡಿಕೊಡುವ ಸಲುವಾಗಿ ನೀಡಿದ್ದ ಭರವಸೆ ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಹೇಳಲಿದ್ದಾರೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿ, ಮಾಡಿಕೊಂಡ ಸಿದ್ಧತೆ ವ್ಯರ್ಥ ಆಗುತ್ತದೆ ಎಂಬುದು ನಿಮ್ಮನ್ನು ಚಿಂತೆಗೆ ಗುರಿ ಮಾಡಲಿದೆ. ಎರಡು ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇದ್ದಲ್ಲಿ ಅವರ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ವೆಚ್ಚ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಕಾರಣಕ್ಕೆ ನಿಮಗೆ ಅಗತ್ಯವೇ ಇಲ್ಲದಿದ್ದರೂ ಕೆಲವು ವಸ್ತುಗಳನ್ನು ಈ ದಿನ ಖರೀದಿ ಮಾಡುವಂತೆ ಆಗಲಿದೆ. ಇನ್ನು ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಅಂತಾದರೆ ಇನ್ನೂ ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳಬೇಕು. ನೀವಾಗಿಯೇ ದುಂಬಾಲು ಬಿದ್ದು ವಹಿಸಿಕೊಂಡಂಥ ಕೆಲಸಗಳನ್ನು ಗಡುವಿನೊಳಗೆ ಮುಗಿಸಿಕೊಡುವುದಕ್ಕೆ ಪ್ರಯತ್ನಿಸಿ.

ಲೇಖನ- ಸ್ವಾತಿ ಎನ್.ಕೆ.

Source link

WPL 2026 Prize Money: ಚಾಂಪಿಯನ್ ಆರ್​ಸಿಬಿ ಮೇಲೆ ಹಣದ ಸುರಿಮಳೆ; ಡೆಲ್ಲಿಗೂ ಭರ್ಜರಿ ಬಹುಮಾನ – Kannada News | RCB Wins WPL Final, Defeats Delhi Capitals! Champions Again, Secures ₹6 Cr Prize

ಇದರ ಜೊತೆಗೆ, ಪಂದ್ಯಾವಳಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ (ಆರೆಂಜ್ ಕ್ಯಾಪ್), ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ (ಪರ್ಪಲ್ ಕ್ಯಾಪ್) ಮತ್ತು ಪಂದ್ಯಾವಳಿಯ ಶ್ರೇಷ್ಠ ಆಟಗಾರ್ತಿಗೆ ತಲಾ 5 ಲಕ್ಷ ರೂ. ಬಹುಮಾನ ನೀಡಲಾಯಿತು. ಇದಲ್ಲದೆ, ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ್ತಿ ಮತ್ತು ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರ್ತಿಗೂ ತಲಾ 5 ಲಕ್ಷ ರೂ. ಬಹುಮಾನ ನೀಡಲಾಯಿತು.

Source link

ಈ ಕಟ್ಟಡದ ಮುಂಭಾಗ ರೀಲ್ಸ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಜತ್ – Kannada News | This is why Rajath Kishan latest reel creates controversy in Mysore

ಇದು ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ. ಇತಿಹಾಸದ ಸ್ಮಾರಕ, ಸರ್ಕಾರಿ ಆಸ್ತಿ, ಪಾರಂಪರಿಕ ಮಹತ್ವ ಹೊಂದಿರುವ ಕಟ್ಟಡ. ಇದೇ ಕಟ್ಟಡದ ಮುಂದೆ ಬಿಗ್‌ಬಾಸ್ ಖ್ಯಾತಿಯ ರಜತ್ (Rajath Kishan) ಸಿಗರೇಟ್ ಸೇದುತ್ತಾ, ಕಾರಿನಿಂದ ಇಳಿಯುತ್ತಾ ವಿಲನ್ ಲುಕ್‌ನಲ್ಲಿ ವಿಡಿಯೋ ಶೂಟ್ ಮಾಡಿದ್ದಾರೆ. ಕಪ್ಪು ಉಡುಪು, ಬಿಂದಾಸ್ ಸ್ಟೈಲ್, ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು ರೀಲ್ಸ್ ಮತ್ತು ವಿಡಿಯೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಲಕ್ಷ್ಮಿಪುರಂ ಪೊಲೀಸರು ಪ್ರಾಥಮಿಕವಾಗಿ ಎನ್‌ಸಿಆರ್ ದಾಖಲಿಸಿದ್ದಾರೆ. ಅನುಮತಿ ಇಲ್ಲದೇ ಶೂಟಿಂಗ್ ನಡೆದಿದೆಯೇ? ಸಾರ್ವಜನಿಕ ಆಸ್ತಿಗೆ ಧಕ್ಕೆ ಆಗಿದೆಯೇ? ಕಾನೂನು ಉಲ್ಲಂಘನೆ ಆಗಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link