Category Archives: Blog

Your blog category

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಬಿರುಗಾಳಿ, ಉದ್ಧವ್ ಬಣದ ಸಂಸದರ ಫೋನ್ ಆಫ್, ದೆಹಲಿಯತ್ತ ಎಲ್ಲರ ಚಿತ್ತ – Kannada News | Maharashtra Politics Turmoil: Uddhav Shiv Sena MPs Switch Off Phones Amid Defection Rumors

ಮುಂಬೈ, ಜೂನ್ 17: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಪ್ರಕ್ಷುಬ್ಧತೆ ಉಂಟಾಗಿದೆ. ಉದ್ಧವ್ ಠಾಕ್ರೆ(Uddhav Thackeray) ನೇತೃತ್ವದ ಶಿವಸೇನೆ ಪಕ್ಷದ ಕೆಲವು ಲೋಕಸಭಾ ಸಂಸದರ ಫೋನ್​ಗಳು ಇದ್ದಕ್ಕಿದ್ದಂತೆ ದ್ವಿಚ್ ಆಫ್ ಆಗಿದ್ದು, ಹಿರಿಯ ನಾಯಕರಿಗೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಆಂತರಿಕ ಭಿನ್ನಾಭಿಪ್ರಾಯದ ಬೆನ್ನಲ್ಲೇ ಎಲ್ಲರ ಚಿತ್ತ ಈಗ ಮುಂಬೈನಿಂದ ದೆಹಲಿಯತ್ತ ನೆಟ್ಟಿದೆ.

ಶಿಂಧೆ ಬಣದ ಜೊತೆ ವಿಲೀನಕ್ಕೆ ಸಿದ್ಧತೆ?
ಮೂಲಗಳ ಪ್ರಕಾರ, ಉದ್ಧವ್ ಬಣದ ಆರು ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ಸಂಜಯ್ ಜಾಧವ್ ಅವರು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜತೆ ಸಂ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಮತ್ತೊಬ್ಬ ಸಂಸದ ರಾಜಭಾವು ವಾಜೆ ಕೂಡ ಇವರನ್ನು ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ಇದೆ. ಈ ಭಿನ್ನಮತೀಯ ಸಂಸದರು ದೆಹಲಿಯಲ್ಲಿ ಶ್ರೀಕಾಂತ್ ಶಿಂಧೆ ನಿವಾಸದಲ್ಲಿ ಸಭೆ ನಡೆಸಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಬಣ ರಚಿಸುವ ಪ್ರಕ್ರಿಯೆ ಮುಗಿಸಿ, ನಂತರ ಶಿಂಧೆ ಶಿವಸೇನೆಯಲ್ಲಿ ವಿಲೀನಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ತಲಾ 15 ಕೋಟಿ ರೂ. ಆಮಿಷ: ಸಂಜಯ್ ರಾವತ್ ಗಂಭೀರ ಆರೋಪ
ಈ ಬೆಳವಣಿಗೆಗಳ ಬೆನ್ನಲ್ಲೇ ದೆಹಲಿಗೆ ಧಾವಿಸಿರುವ ಉದ್ಧವ್ ಬಣದ ಹಿರಿಯ ನಾಯಕ ಸಂಜಯ್ ರಾವತ್, ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಹಾರಾಷ್ಟ್ರದ ಸಂಸದರನ್ನು ಖರೀದಿಸಲು ತಲಾ 15 ಕೋಟಿ ರೂ. ಹಣ ನೀಡಲಾಗುತ್ತಿದೆ. ಈ ಮಾಹಿತಿ ಆಘಾತಕಾರಿ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಪಕ್ಷ ಒಡೆಯುವ ವದಂತಿಗಳನ್ನು ತಳ್ಳಿಹಾಕಿರುವ ಅವರು, ಯಾವುದೇ ಸವಾಲನ್ನು ಎದುರಿಸಲು ತಮ್ಮ 60 ವರ್ಷಗಳ ಇತಿಹಾಸವಿರುವ ಸಂಘಟನೆ ಸಿದ್ಧವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: ಉದ್ಧವ್ ಠಾಕ್ರೆಯವರ ಶಿವಸೇನೆಯಲ್ಲಿ ಬಿರುಕು; ಪ್ರತ್ಯೇಕ ಗುಂಪು ರಚಿಸುತ್ತಾರಾ ಯುಟಿಬಿ ಸಂಸದರು?

ಸಭೆಗೆ ಗೈರಾಗಿದ್ದೇ ಅನುಮಾನಕ್ಕೆ ಕಾರಣ
ಕಳೆದ ಭಾನುವಾರ ಉದ್ಧವ್ ಠಾಕ್ರೆ ಅವರು ಮುಂಬೈನಲ್ಲಿ ಕರೆದಿದ್ದ ಪ್ರಮುಖ ಸಭೆಗೆ ಒಟ್ಟು 9 ಲೋಕಸಭಾ ಸಂಸದರ ಪೈಕಿ ಕೇವಲ ನಾಲ್ವರು ಮಾತ್ರ ಖುದ್ದಾಗಿ ಹಾಜರಾಗಿದ್ದರು. ಉಳಿದ ಐವರು ಸಂಸದರು ವೈಯಕ್ತಿಕ ಕಾರಣ ನೀಡಿ ಕೇವಲ ಫೋನ್ ಅಥವಾ ಆನ್‌ಲೈನ್ ಮೂಲಕ ಭಾಗವಹಿಸಿದ್ದರು. ಅದರಲ್ಲಿಯೂ ಸಂಸದ ಸಂಜಯ್ ದೇಶಮುಖ್ ಅವರು ಉದ್ಧವ್ ಸಭೆಯನ್ನು ತಪ್ಪಿಸಿಕೊಂಡು, ದೆಹಲಿಯಲ್ಲಿ ಕೇಂದ್ರ ಸಚಿವ ಪ್ರತಾಪರಾವ್ ಜಾಧವ್ ಅವರನ್ನು ಭೇಟಿ ಮಾಡಿದ್ದು ಈ ಎಲ್ಲಾ ಅನುಮಾನಗಳಿಗೆ ಪ್ರಮುಖ ಕಾರಣವಾಗಿದೆ.

ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಈ ಬಗ್ಗೆ ಪ್ರತಿಕ್ರಿಯಿಸಿ, ಯಾವ ಜನಪ್ರತಿನಿಧಿಗಳಿಗೆ ಉದ್ಧವ್ ನಾಯಕತ್ವದ ಮೇಲೆ ನಂಬಿಕೆ ಇಲ್ಲವೋ ಮತ್ತು ಯಾರು ಬಾಳಾ ಸಾಹೇಬ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ಅವರ ಆದರ್ಶಗಳನ್ನು ನಂಬುತ್ತಾರೋ, ಅಂತಹವರಿಗೆ ನಮ್ಮ ಶಿವಸೇನೆಯ ಬಾಗಿಲುಗಳು ಯಾವಾಗಲೂ ಮುಕ್ತವಾಗಿರುತ್ತವೆ ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಶ್ಮಿಕಾ-ವಿಜಯ್ ಚಿತ್ರಕ್ಕೆ ವಿಲನ್ ಆದ ಹಾಲಿವುಡ್​ನ ‘ದಿ ಮಮ್ಮಿ’ ಚಿತ್ರದ ಖಳ – Kannada News | The Mummy Star Arnold Vosloo is Villain for Vijay Rashmika Starrer Ranbaali

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಬ್ಯಾಕ್-ಟು-ಬ್ಯಾಕ್ ಸರ್ಪ್ರೈಸ್ ಸಿಗುತ್ತಿದೆ. ‘ಡಿಯರ್ ಕಾಮ್ರೇಡ್’ ಚಿತ್ರ ರಿಲೀಸ್ ಆದ ಏಳು ವರ್ಷಗಳ ನಂತರ, ಈ ಜೋಡಿ ರಾಹುಲ್ ಸಾಂಕೃತ್ಯನ್
ನಿರ್ದೇಶನದ ‘ರಣಬಾಲಿ’ ಚಿತ್ರದ (Ranabaali) ಮೂಲಕ ಮತ್ತೆ ಒಂದಾಗುತ್ತಿದೆ. ಮದುವೆಯ ನಂತರದ ಮೊದಲ ಸಿನಿಮಾ ಇದಾಗಿರುವುದರಿಂದ ಕುತೂಹಲ ಹೆಚ್ಚಿದೆ. ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಚಿತ್ರದ ಪವರ್‌ಫುಲ್ ವಿಲನ್ ಪಾತ್ರವನ್ನು ಪರಿಚಯಿಸಿದ್ದು, ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ. ಹೌದು, ಹಾಲಿವುಡ್‌ನ ಖ್ಯಾತ ವಿಲನ್ ಈಗ ರಣಬಾಲಿಗೆ ಎಂಟ್ರಿ ಕೊಟ್ಟಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ‘ರಣಬಾಲಿ’ ಚಿತ್ರದ ಮುಖ್ಯ ಖಳನಾಯಕ ಸರ್ ಥಿಯೋಡರ್ ಹೆಕ್ಟರ್ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಇದರಲ್ಲಿ ‘ದಿ ಮಮ್ಮಿ’ ಚಿತ್ರದ ಖ್ಯಾತಿಯ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ನಟಿಸಿದ್ದಾರೆ. ಬ್ರಿಟಿಷ್ ಅಧಿಕಾರಿಯ ರಾಯಲ್ ಲುಕ್‌ನಲ್ಲಿ, ಕೈಯಲ್ಲಿ ಚಿನ್ನದ ಕತ್ತಿ ಹಿಡಿದು ಕಾಣಿಸಿಕೊಂಡಿದ್ದಾರೆ. ಇವರ ಹಿನ್ನೆಲೆಯಲ್ಲಿ ಕೋಟೆಯೊಂದು ಧಗಧಗನೆ ಉರಿಯುತ್ತಿರುವುದನ್ನು ಕಾಣಬಹುದು. ಈ ಫಸ್ಟ್ ಲುಕ್ ಹಂಚಿಕೊಂಡಿರುವ ಚಿತ್ರತಂಡ, ‘ದಿ ಡೆಮನ್ ಆಫ್ ಡ್ರಾಟ್, ಸರ್ ಥಿಯೋಡರ್ ಹೆಕ್ಟರ್. ದಿ ಮಮ್ಮಿ ಚಿತ್ರದಲ್ಲಿ ಇಮ್ಹೋಟೆಪ್ ಪಾತ್ರದ ಮೂಲಕ ಜಗತ್ತನ್ನೇ ನಡುಗಿಸಿದ್ದ ಅರ್ನಾಲ್ಡ್ ವೋಸ್ಲೂ ಈಗ ರಣಬಾಲಿ ಚಿತ್ರದಲ್ಲಿ ಕ್ರೂರ ಸರ್ ಥಿಯೋಡರ್ ಹೆಕ್ಟರ್ ಆಗಿ ಅಬ್ಬರಿಸಲಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಸುಸ್ವಾಗತ’ ಎಂದು ಟ್ವೀಟ್ ಮಾಡಿದೆ.

ಚಿತ್ರದ ಫಸ್ಟ್ ಲುಕ್ ಅನ್ನು ರೀ-ಪೋಸ್ಟ್ ಮಾಡಿದ ನಿರ್ದೇಶಕ ರಾಹುಲ್ ಸಾಂಕೃತ್ಯನ್, ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಚಿಕ್ಕವನಿದ್ದಾಗ ‘ದಿ ಮಮ್ಮಿ’ ಆಲ್-ಟೈಮ್ ಫೇವರಿಟ್ ಸಿನಿಮಾ ಆಗಿತ್ತು ಎಂದು ನೆನೆದಿರುವ ಅವರು, ಅದರಲ್ಲಿ ಎಲ್ಲ ಪಾತ್ರಗಳೂ ಇಷ್ಟವಾಗಿದ್ದರೂ, ಆ ವಿಲನ್ ಪಾತ್ರವನ್ನು ನೋಡಿಯೇ ಜಗತ್ತಿನಲ್ಲಿ ರಾಕ್ಷಸರು ನಿಜವಾಗಿಯೂ ಇರುತ್ತಾರೆ ಎಂದು ತಾವು ನಂಬಿದ್ದಾಗಿ ಹೇಳಿದ್ದಾರೆ. ಅಲ್ಲದೆ, ತಮ್ಮ ಬಾಲ್ಯದ ಫೇವರಿಟ್ ವಿಲನ್ ಎದುರು ತಾವೇ ನಿಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ, ಇದು ವಿಧಿ ಬರಹ ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

63 ವರ್ಷದ ಅರ್ನಾಲ್ಡ್ ವೋಸ್ಲೂ ಮೂಲತಃ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದವರು. ಇವರ ಪೋಷಕರೂ ರಂಗಭೂಮಿ ಕಲಾವಿದರಾಗಿದ್ದರಿಂದ ಇವರಿಗೂ ನಟನೆ ರಕ್ತಗತವಾಗಿ ಬಂದಿತ್ತು. 1980ರ ದಶಕದ ಕೊನೆಯಲ್ಲಿ ಅಮೆರಿಕಾಗೆ ವಲಸೆ ಹೋದ ಅರ್ನಾಲ್ಡ್, 1987ರಲ್ಲಿ ‘ಗೋರ್’ ಸಿನಿಮಾ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಇವರಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬ್ರೇಕ್ ನೀಡಿದ್ದು 1999ರಲ್ಲಿ ಬಂದ ಸ್ಟೀಫನ್ ಸೋಮರ್ಸ್ ನಿರ್ದೇಶನದ ಬ್ಲಾಕ್‌ಬಸ್ಟರ್ ಮೂವಿ ‘ದಿ ಮಮ್ಮಿ’. ಇದರಲ್ಲಿ ಇವರು ನಟಿಸಿದ ‘ಇಮ್ಹೋಟೆಪ್’ ಎಂಬ ಪುರಾತನ ಈಜಿಪ್ಟ್ ಅರ್ಚಕನ ಪಾತ್ರ ಇತಿಹಾಸ ಸೃಷ್ಟಿಸಿತು. ಈ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 422.50 ಮಿಲಿಯನ್ ಡಾಲರ್ ಗಳಿಸಿತ್ತು. ನಂತರ 2001ರಲ್ಲಿ ಬಂದ ಇದರ ಸೀಕ್ವೆಲ್ ‘ದಿ ಮಮ್ಮಿ ರಿಟರ್ನ್ಸ್’ 436 ಮಿಲಿಯನ್ ಡಾಲರ್ ಬಾಚಿಕೊಂಡಿತ್ತು. ಆ ಬಳಿಕ ಅವರು ಹಲವು ಸಿನಿಮಾ ಹಾಗೂ ಟಿವಿ ಸೀರಿಸ್​​ಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ? – Kannada News | Garuda Purana: Dreams of Deceased Loved Ones Explained

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸತ್ತವರು ಕನಸಿನಲ್ಲಿ ಯಾವ ರೀತಿ ಬಂದರೆ ಏನರ್ಥ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಕನಸಿನಲ್ಲಿ ಮರಣಿಸಿದ ವ್ಯಕ್ತಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಗರುಡ ಪುರಾಣದ ಪ್ರಕಾರ, ಇಂತಹ ಕನಸುಗಳಿಗೆ ನಿರ್ದಿಷ್ಟ ಅರ್ಥಗಳಿವೆ. ನಮ್ಮ ಪೂರ್ವಜರು ಅಥವಾ ಸಂಬಂಧಿಕರು ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ, ಅವರ ಕಾರ್ಯಗಳನ್ನು ನೆರವೇರಿಸುವಂತೆ ಸೂಚಿಸುತ್ತಾರೆ. ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆ ಸಂದರ್ಭಗಳಲ್ಲಿ ಕಾರ್ಯಗಳನ್ನು ನೆರವೇರಿಸುವುದು ಸೂಕ್ತ.

ಕನಸಿನಲ್ಲಿ ಮರಣಿಸಿದ ವ್ಯಕ್ತಿಗಳು ಕೋಪದಿಂದ, ಕಿರುಚಾಡುತ್ತಾ ಅಥವಾ ಕೂಗಾಡುತ್ತಾ ಕಾಣಿಸಿಕೊಂಡರೆ ಅದು ಅಶುಭದ ಸಂಕೇತ. ಅಂತಹ ಸಮಯದಲ್ಲಿ, ಇಷ್ಟದೇವರ ಅಥವಾ ಕುಲದೇವರ ದರ್ಶನ ಪಡೆದು ಪೂಜೆ ಸಲ್ಲಿಸುವುದು ಉತ್ತಮ. ಉದಾಹರಣೆಗೆ, ಕುಲದೇವರು ವೆಂಕಟೇಶ್ವರನಾಗಿದ್ದರೆ, ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿಸಬಹುದು.

ಮರಣಿಸಿದವರು ಕನಸಿನಲ್ಲಿ ಸೈಲೆಂಟ್ ಆಗಿ ಅಥವಾ ಶಾಂತವಾಗಿ ಕಾಣಿಸಿಕೊಂಡರೆ, ಅದು ನಮಗೆ ಜವಾಬ್ದಾರಿಗಳನ್ನು ನೆನಪಿಸುವ ಅಥವಾ ಎಚ್ಚರಿಕೆ ನೀಡುವ ಸೂಚನೆಯಾಗಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

ರಸ್ತೆ ಗುಂಡಿಗಳ ಪತ್ತೆಗೆ ಎಐ ಮೊರೆಹೋದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ – Kannada News | NHAI Adopts AI and Drones for Smart Pothole Detection and Highway Maintenance

ಬೆಂಗಳೂರು, ಜೂನ್​​ 17: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಕೃತಕ ಬುದ್ಧಿಮತ್ತೆ (AI), ಡ್ರೋನ್‌ಗಳು ಹಾಗೂ ಸುಧಾರಿತ ಡೇಟಾ ವಿಶ್ಲೇಷಣಾ ತಂತ್ರಜ್ಞಾನಗಳನ್ನು ಬಳಸುವ ಪೂರ್ವಾನುಮಾನ ಆಧಾರಿತ ಆಸ್ತಿ ನಿರ್ವಹಣಾ ವ್ಯವಸ್ಥೆ (Predictive Asset Management Framework) ಅಳವಡಿಸಿಕೊಳ್ಳುತ್ತಿದೆ. ಗುಂಡಿಗಳು ಮತ್ತು ಇತರ ರಸ್ತೆ ದೋಷಗಳು ಗಂಭೀರ ಸಮಸ್ಯೆಗಳಾಗುವ ಮುನ್ನವೇ ಅವುಗಳನ್ನು ಪತ್ತೆಹಚ್ಚಿ ದುರಸ್ತಿಗೊಳಿಸುವುದು ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.

ರಾಷ್ಟ್ರೀಯ ಹೆದ್ದಾರಿಗಳ ಸ್ಥಿತಿಯನ್ನು ಪರಿಶೀಲಿಸಲು ನೆಟ್‌ವರ್ಕ್ ಸರ್ವೇ ವೆಹಿಕಲ್ಸ್ (NSVs) ಅನ್ನು ಬಳಸಲಾಗುತ್ತಿದೆ. ಇವು ರಸ್ತೆಯ ಮೇಲ್ಮೈಯ ಅಸಮತೋಲನ, ಬಿರುಕುಗಳು, ಗುಂಡಿಗಳು ಹಾಗೂ ರಚನಾತ್ಮಕ ಹಾನಿಯನ್ನು ಮೌಲ್ಯಮಾಪನ ಮಾಡಲಿವೆ. ಇದರ ಜೊತೆಗೆ ಡ್ರೋನ್ ಅನಾಲಿಟಿಕ್ಸ್ ಮಾನಿಟರಿಂಗ್ ಸಿಸ್ಟಮ್ (DAMS) ಮೂಲಕ ಹೆದ್ದಾರಿ ಆಸ್ತಿಗಳ ಡಿಜಿಟಲ್ ದಾಖಲೆ ಸಿದ್ಧಪಡಿಸುವುದು, ಸೇತುವೆಗಳು ಹಾಗೂ ಇತರ ರಚನೆಗಳ ಮೇಲ್ವಿಚಾರಣೆ ಮತ್ತು ಅತಿಕ್ರಮಣ ಪತ್ತೆಹಚ್ಚುವ ಕಾರ್ಯ ನಡೆಯಲಿದೆ. ಫಾಲಿಂಗ್ ವೇಟ್ ಡಿಫ್ಲೆಕ್ಟೋಮೀಟರ್ (FWD) ಪರೀಕ್ಷೆಗಳ ಮೂಲಕ ರಸ್ತೆಯ ಸಾಮರ್ಥ್ಯ ಅಳೆಯಲಾಗುತ್ತಿದ್ದು, ದುರ್ಬಲಗೊಳ್ಳುತ್ತಿರುವ ರಸ್ತೆ ಭಾಗಗಳನ್ನು ಗುರುತಿಸಲಾಗುತ್ತದೆ.

ಇದನ್ನೂ ಓದಿ: ಭವಾನಿಪುರದ ಸೋಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಾಜಿ ಸಿಎಂ ಮಮತಾ ಬ್ಯಾನರ್ಜಿ

AI ಮೂಲಕ ರಸ್ತೆ ಗುಂಡಿಗಳ ಪತ್ತೆ

ಹೆದ್ದಾರಿಗಳಲ್ಲಿ AI ಆಧಾರಿತ ಡ್ಯಾಶ್‌ಕ್ಯಾಮ್ ಅನಾಲಿಟಿಕ್ಸ್ ಸರ್ವೀಸ್ (DAS) ಅನ್ನು ಕೂಡ ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆ ಸ್ವಯಂಚಾಲಿತವಾಗಿ, ರಸ್ತೆ ಗುಂಡಿಗಳು, ಹಾನಿಗೊಳಗಾದ ಕ್ರ್ಯಾಶ್ ಬ್ಯಾರಿಯರ್‌ಗಳು, ದೋಷಪೂರಿತ ಬೀದಿ ದೀಪಗಳು ಸೇರಿ ಮುಂತಾದ ಸಮಸ್ಯೆಗಳನ್ನು ಪತ್ತೆಹಚ್ಚಲಿದೆ. ಈ ಹೊಸ ವ್ಯವಸ್ಥೆಯಿಂದ ಹೆದ್ದಾರಿಗಳ ಆಯುಷ್ಯ ಹೆಚ್ಚಲಿರುವುದರ ಜೊತೆಗೆ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ. ಪ್ರಯಾಣಿಕರಿಗೆ ಉತ್ತಮ ಸಂಚಾರ ಅನುಭವ ಕೂಡ ದೊರಕಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಪ್ರಯಾಣ ಯೋಗ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 17, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ.ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ, ತದಿಗೆ, ಪುನರ್ವಸು ನಕ್ಷತ್ರ, ಧ್ರುವ ಯೋಗ, ತೈತಲ ಕರಣವಿರುವ ಶುಭ ದಿನವಾಗಿದೆ.

ಈ ದಿನದ ರಾಹುಕಾಲ ಮಧ್ಯಾಹ್ನ 12:19 ರಿಂದ 1:55 ರವರೆಗೆ ಇದ್ದು, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಬೆಳಗ್ಗೆ 10:43 ರಿಂದ 12:19 ರವರೆಗೆ ಇರುತ್ತದೆ. ಇಂದು ಕದಳಿ ಗೌರಿ ವ್ರತ ಮತ್ತು ರಾಣಾ ಪ್ರತಾಪ್ ಸಿಂಹರ ಜನ್ಮದಿನೋತ್ಸವವನ್ನೂ ಆಚರಿಸಲಾಗುತ್ತದೆ. ಪಾರ್ವತಿ ದೇವಿಯನ್ನು ಆರಾಧಿಸುವುದರಿಂದ ಸಾಕಷ್ಟು ಶುಭ ಫಲಗಳು ದೊರೆಯುತ್ತವೆ. ರವಿ ಮತ್ತು ಚಂದ್ರ ಇಬ್ಬರೂ ಮಿಥುನ ರಾಶಿಯ ಪುನರ್ವಸು ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

 

 

 

Source link

ದಿನ ಭವಿಷ್ಯ: ಇಂದು ಈ ರಾಶಿಯವರನ್ನು ಯಾವ ಉಪಾಯದಿಂದಲೂ ಗೆಲ್ಲಲಾಗದು..‌ – Kannada News | Dina Rashi Bhavishya June 17, 2026: Daily Horoscope Predictions for Wednesday

ಮೇಷ ರಾಶಿ:

ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರೇಮ ಜೀವನವು ಉತ್ತಮವಾಗಿರುತ್ತದೆ. ಅತಿಯಾದ ನೋವು ಕೊಡುವುದನ್ನು ಇಟ್ಟಕೊಳ್ಳಲಾರಿರಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಸರಿಯಾದ ಕೆಲಸವನ್ನು ಸರಿ ಇಲ್ಲ‌ ಎಂದು ಹೇಳಿ ನಿಮ್ಮನ್ನು ಕುಗ್ಗಿಸಬಹುದು. ಇದಾವುದಕ್ಕೂ ಬಗ್ಗುವ ಅವಶ್ಯಕತೆ ಇಲ್ಲ. ನ್ಯಾಯಲಯದ ವ್ಯವಹಾರಗಳಲ್ಲಿ ನಿಮಗೆ ಶುಭಸಮಾಚಾರ ಇರುತ್ತದೆ.

ವೃಷಭ ರಾಶಿ:

ಸಂಪತ್ತಿನ ಅನಿರೀಕ್ಷಿತವಾಗಿ ಖರ್ಚಾಗಲಿದೆ. ಪ್ರೇಮ ಜೀವನದಲ್ಲಿ ಹೊಸ ರೋಮಾಂಚಕಾರಿ ತಿರುವುಗಳು ಬರುತ್ತವೆ. ಕಳೆಯದೇ ಇಂದು ಪಡೆದುಕೊಳ್ಳುವ ಆಸೆ ಬೇಡ. ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯ ಬಲವಾಗಿರುತ್ತದೆ. ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ಆಗುವ ಸಾಧ್ಯತೆಗಳಿವೆ. ಧನದ ಆದಾಯವು ನಿರೀಕ್ಷೆಯನ್ನು ಪೂರ್ಣವಾಗಿ ತಲುಪದು.

ಮಿಥುನ ರಾಶಿ:

ಮನೆಗೆ ಅತಿಥಿಗಳ ಆಗಮನವು ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ದಿನವಾಗಿದೆ. ವೃತ್ತಿಪರ ಜೀವನದಲ್ಲಿ ಹೊಸ ಸಾಧನೆಗಳನ್ನು ಸಾಧಿಸಲಾಗುತ್ತದೆ. ನಿಮಗೆ ಇಂದು ಯಾವುದೇ ವಿಚಾರ ಅತಿ ಎಂದು ಕಂಡರೆ ಅದನ್ನು ಬಿಡಿ.‌ ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಯಾವುದೇ ರೀತಿ ವ್ಯತ್ಯಾಸವಿಲ್ಲ. ಪ್ರಯಾಣವು ಅನಿವಾರ್ಯವಾದರೂ ಅದರಿಂದ ಶುಭ ಸುದ್ದಿಯು ನಿಮಗೆ ಇರುವುದು.

ಕರ್ಕಾಟಕ ರಾಶಿ:

ವಿದ್ಯುತ್ ಉಪಕರಣಗಳಿಂದ ಹಣವು ಖರ್ಚಾಗಬಹುದು. ಉದ್ಯಮಿಗಳು ಹೊಸ ಸ್ಥಳದಲ್ಲಿ ವ್ಯವಹಾರ ಪ್ರಾರಂಭಿಸಲು ಹಣವನ್ನು ಪಡೆಯಬಹುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸುವುದು ಸಾಧ್ಯ. ಇದು ಜೀವನದಲ್ಲಿ ಸಂತೋಷವನ್ನು ತರುತ್ತದೆ. ಶ್ರಮಕ್ಕೆ ಯೋಗ್ಯ ಫಲಿತಾಂಶ ಸಿಗದೇ ಇರಬಹುದು. ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ.

ಸಿಂಹ ರಾಶಿ:

ಪ್ರಭಾವಿಗಳ ಸಹಾಯವನ್ನು ಉದ್ಯೋಗಕ್ಕೆ ಬಳಸಿಕೊಳ್ಳುವಿರಿ. ಮನೆ ನಿರ್ಮಾಣ ಮಾಡುತ್ತಿದ್ದವರಿಗೆ ಇದ್ದ ಅಡೆತಡೆಗಳು ಸ್ವಲ್ಪಮಟ್ಟಿಗೆ ದೂರವಾಗಲಿದೆ. ಗುರಿಗಳನ್ನು ಸಾಧಿಸಲು ನೀವು ಪ್ರೇರೇಪಿಸಲ್ಪಡುತ್ತೀರಿ. ಆಸ್ತಿಯನ್ನು ಖರೀದಿಸಲು ಇಂದು ಉತ್ತಮ ದಿನವಾಗಿರುತ್ತದೆ. ವೃತ್ತಿಪರ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ.

ಕನ್ಯಾ ರಾಶಿ:

ಸಂಗಾತಿಯ ಜೊತೆ ಅನೌಪಚಾರಿಕ ಹರಟೆಯಿಂದ ಕಾಲವನ್ನು ಕಳೆಯುವಿರಿ. ಕಾಲಕ್ಷೇಪಕ್ಕೆ ಯಾವುದಾದರೂ ಉತ್ತಮವರ ಸಂಗ ಸಿಗಲಿದೆ. ನಿಮಗೆ ಹೊಸ ಸುವರ್ಣ ಅವಕಾಶಗಳು ಸಿಗುತ್ತವೆ. ನಿಮ್ಮ ಕುಟುಂಬದಲ್ಲಿ ನೀವು ಆಕರ್ಷಣೆಯ ಕೇಂದ್ರಬಿಂದುವಾಗಿ ಉಳಿಯುತ್ತೀರಿ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಕಾರ್ಯದ ಒತ್ತಡದಿಂದ ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರುವರು.

ತುಲಾ ರಾಶಿ:

ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲವನ್ನು ಮಾಡಬೇಕಾಗುವುದು. ತಪ್ಪಿಸಿಕೊಳ್ಳಲು ಅಸತ್ಯವನ್ನು ಹೇಳಬೇಕಾಗುವುದು. ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ನೀವು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಚಿತ್ತ ಚಾಂಚಲ್ಯ ನಿಮ್ಮನ್ನು ಒಂದು ಕಡೆಗೆ ಇರಲು ಬಿಡದು. ವೃತ್ತಿಯಲ್ಲಿ ಹೆಚ್ಚು ತಿರುಗಾಟವಿರಲಿದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ.

ವೃಶ್ಚಿಕ ರಾಶಿ:

ಇಂದು ದೈನಂದಿನ ಸಂಪಾದನೆಯನ್ನು ಮಾಡುವವರಿಗೆ ಕಷ್ಟವಾಗುವುದು. ಜೀವನದಲ್ಲಿ ಎಲ್ಲಾ ಕೆಲಸಗಳ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆರ್ಥಿಕ ಲಾಭಕ್ಕಾಗಿ ನಿಮಗೆ ಹೊಸ ಅವಕಾಶಗಳು ಸಿಗುತ್ತವೆ. ವೃತ್ತಿ ಅಡೆತಡೆಗಳು ದೂರವಾಗುತ್ತವೆ. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಪ್ರಯಾಣಿಸುವ ಸಾಧ್ಯತೆ ಇರುತ್ತದೆ. ಅದನ್ನು ಪಡೆದುಕೊಳ್ಳಲು ಕಷ್ಟವಾದೀತು. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು.

ಧನು ರಾಶಿ:

ವಿವಾಹವು ನಿಮಗೆ ಬಹಳ ವಿಳಂಬವೆಂದು ಅನ್ನಿಸಬಹುದು. ಚಿಂತೆಗೆ ಅವಕಾಶ ಕೊಡದೇ ಗುರಿಯ ಕಡೆ ಗಮನವಿರಲಿ. ಜೀವನದಲ್ಲಿ ಎಲ್ಲಾ ಕೆಲಸಗಳ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆರ್ಥಿಕ ಲಾಭಕ್ಕಾಗಿ ನಿಮಗೆ ಹೊಸ ಅವಕಾಶಗಳು ಸಿಗುತ್ತವೆ. ವೃತ್ತಿ ಅಡೆತಡೆಗಳು ದೂರವಾಗುತ್ತವೆ. ವಸ್ತ್ರಾಭರಣಗಳನ್ನು ಮಿತವಾಗಿ ಖರೀದಿಸಿ. ವಯಸ್ಕರಿಗೆ ವಿವಾಹ ಸಂಬಂಧವು ಒದಗಿ ಬರಬಹುದು.

ಮಕರ ರಾಶಿ:

ಕಚೇರಿಯಲ್ಲಿ ಪ್ರಮುಖ ಕೆಲಸದ ಜವಾಬ್ದಾರಿ ಸಿಗಬಹುದು. ಮನೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭ ಇರುತ್ತದೆ. ತಾಯಿಯ ಆಶೀರ್ವಾದವನ್ನು ಪಡೆದು ಶುಭಕಾರ್ಯಕ್ಕೆ ಮನೆಯಿಂದ ಹೊರಡಿ. ರಾಜಕೀಯ ವ್ಯಕ್ತಿಗಳಿಗೆ ಅವರ ವಿರೋಧಿಗಳಿಂದಲೇ ತೊಂದರೆಯಾಗುವ ಸಾಧ್ಯತೆ ಇದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಹಣಕಾಸಿನ ವಿಚಾರದಲ್ಲಿ ಇನ್ನೊಬ್ಬರನ್ನು ಅನುಸರಿಸುವ ಅವಶ್ಯಕತೆ ಇಲ್ಲ.

ಕುಂಭ ರಾಶಿ:

ಮನೆಯಿಂದ ದೂರದಲ್ಲಿ ವಾಸಿಸುವ ನಿಮ್ಮಿಂದ ಇಂದು ಪೋಷಕರಿಗೆ ಖುಷಿಯಾಗುವುದು. ಕಚೇರಿಯಲ್ಲಿ ಪ್ರಮುಖ ಕೆಲಸದ ಜವಾಬ್ದಾರಿ ಸಿಗಬಹುದು. ಮನೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ. ಹೊಸ ಆದಾಯದ ಮೂಲಗಳಿಂದ ಆರ್ಥಿಕ ಲಾಭ ಇರುತ್ತದೆ. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಏನನ್ನಾದರೂ ಮಾಡಬೇಕು ಎಂಬ ಮಹತ್ತರವಾದ ಯೋಜನೆಯನ್ನು ಮುಂದೂಡುವಿರಿ.

ಮೀನ ರಾಶಿ:

ಹಣವನ್ನು ಉಳಿಸಲು ಯತ್ನದಲ್ಲಿ ಸೋಲಾಗುವುದು. ಪ್ರತಿಯೊಂದು ಕೆಲಸದ ಅಪೇಕ್ಷಿತ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ವ್ಯವಹಾರವು ವಿಸ್ತರಿಸುತ್ತದೆ. ಶೈಕ್ಷಣಿಕ ಕೆಲಸದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಸಾಧ್ಯತೆಗಳಿವೆ. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಮೃಗಶಿರಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಶೂಲಿ, ಕರಣ : ಭದ್ರ, ಸೂರ್ಯೋದಯ – 05 – 55 am, ಸೂರ್ಯಾಸ್ತ – 06 – 46 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:21 – 13:57, ಯಮಗಂಡ ಕಾಲ 07:31 – 09:08, ಗುಳಿಕ ಕಾಲ 10:44 – 12:21

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ಮಸ್ಸೂರಿಗೆ ಗಂಡನೊಂದಿಗೆ ಹನಿಮೂನ್​ಗೆ ಹೋಗಿದ್ದ ಯುವತಿಯ ನಿಗೂಢ ಸಾವು; ಹೋಂ ಸ್ಟೇಯಲ್ಲಿತ್ತು ರಕ್ತಸಿಕ್ತ ಶವ – Kannada News | Mussoorie Tragedy Delhi techie found dead in homestay room during Honeymoon Trip

ಡೆಹ್ರಾಡೂನ್, ಜೂನ್ 16: ಇತ್ತೀಚೆಗಷ್ಟೇ ಮದುವೆಯಾಗಿದ್ದ ಜೋಡಿಯೊಂದು ಉತ್ತರಾಖಂಡದ (Uttarakhand) ಸುಂದರ ಗಿರಿಧಾಮ ಮಸ್ಸೂರಿಗೆ ಪ್ರವಾಸಕ್ಕೆ ಹೋಗಿತ್ತು. ಅಲ್ಲಿ ದುರಂತವೊಂದು ನಡೆದಿದೆ. ಮೇಘಾಲಯದಲ್ಲಿ ಹನಿಮೂನ್​ಗೆ ತೆರಳಿದ್ದ ವೇಳೆ ಗಂಡನನ್ನು ಹೆಂಡತಿಯೇ ಕೊಲೆ ಮಾಡಿಸಿದ್ದ ಘಟನೆಯ ನೆನಪಿನ್ನೂ ಮಾಸಿಲ್ಲ. ಇದೀಗ ಮಸ್ಸೂರಿಯಲ್ಲಿ ಅದೇ ರೀತಿಯ ಅನುಮಾನಾಸ್ಪದ ಸಾವಿನ ಪ್ರಕರಣ ನಡೆದಿದೆ. ಪತಿಯೊಂದಿಗೆ ರಜೆ ಕಳೆಯಲು ಬಂದಿದ್ದ ದೆಹಲಿಯ 27 ವರ್ಷದ ಐಟಿ ಉದ್ಯೋಗಿ ತಂಗಿದ್ದ ಹೋಂಸ್ಟೇ ರೂಮ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉತ್ತರಾಖಂಡ ಪೊಲೀಸರು ಕೋಣೆಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಹೋಂಸ್ಟೇ ಕೋಣೆಯೊಳಗೆ ಮಹಿಳೆಯ ಶವವು ಅತ್ಯಂತ ಸಂಶಯಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವತಿಯ ದೇಹದ ಮೇಲೆ ಬಟ್ಟೆಗಳು ಇರಲಿಲ್ಲ. ಬೆತ್ತಲಾಗಿದ್ದ ಆ ದೇಹದ ಮೇಲೆ ರಕ್ತದ ಕಲೆಗಳಿತ್ತು. ಆಕೆಯ ಮೂಗಿನಿಂದ ತೀವ್ರವಾಗಿ ರಕ್ತ ಸ್ರಾವವಾಗುತ್ತಿತ್ತು. ಬೆಡ್ ಶೀಟ್ ಮತ್ತು ಕೋಣೆಯ ಕೆಲವು ಭಾಗಗಳಲ್ಲಿ ರಕ್ತದ ಕಲೆಗಳು ಹರಡಿದ್ದವು.

ಕೋಣೆಯಲ್ಲಿದ್ದ ವಸ್ತುಗಳು ಸಹ ಅಸ್ತವ್ಯಸ್ತಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸಾವಿನ ಮುನ್ನ ಅಲ್ಲಿ ಏನೋ ನಡೆದಿದೆ ಎಂಬ ಸಂಶಯವನ್ನು ಬಲಗೊಳಿಸಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ಈ ದಂಪತಿ ಕೆಲವು ದಿನಗಳ ಹಿಂದಷ್ಟೇ ಮಸ್ಸೂರಿಗೆ ಬಂದು ಈ ಹೋಂಸ್ಟೇನಲ್ಲಿ ತಂಗಿದ್ದರು. ಈ ಘಟನೆ ನಡೆದ ಸಮಯದಲ್ಲಿ ಪತಿ ಎಲ್ಲಿದ್ದ? ಆಕೆಗೆ ಏನಾಯಿತು? ಎಂಬ ಬಗ್ಗೆ ಪೊಲೀಸರು ಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಮಾಜಿ ಲವರ್ ಮನೆಗೆ ಹೋಗಿ ಆಕೆಯ ಪತಿಯ ಕೈಯಲ್ಲೇ ಕೊಲೆಯಾದ ಯುವಕ!

ಸದ್ಯಕ್ಕೆ ಇದು ಕೊಲೆಯೋ, ಆತ್ಮಹತ್ಯೆಯೋ ಅಥವಾ ಅತಿಯಾದ ಮಾದಕ ದ್ರವ್ಯ ಸೇವನೆಯಂತಹ ಬೇರೆ ಯಾವುದಾದರೂ ಕಾರಣದಿಂದ ಸಂಭವಿಸಿದ ಸಾವೋ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಶವದ ಸ್ಥಿತಿಯನ್ನು ನೋಡಿದರೆ ಇವರ ನಡುವೆ ಜಗಳ ನಡೆದಿರುವ ಅಥವಾ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಆ ಯುವತಿ ದೆಹಲಿಯ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಾರಣ ಮತ್ತು ನವವಿವಾಹಿತೆಯಾಗಿದ್ದರಿಂದ ಈ ಪ್ರಕರಣವನ್ನು ಉತ್ತರಾಖಂಡ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.

ಮೃತಪಟ್ಟ ರಾಧಾ ಗಾಯತ್ರಿ ಹಾಗೂ ಆಕೆಯ ಗಂಡ ಚರಣ್ ಇಬ್ಬರೂ ಆಂಧ್ರ ಪ್ರದೇಶದ ವಿಶಾಖಪಟ್ಟಣದವರು. ಶ್ರೀ ಚರಣ್ ಪುಣೆಯಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ರಾಧಾ ಗಾಯತ್ರಿ ದೆಹಲಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ನವೆಂಬರ್ 8ರಂದು ಹಿರಿಯರ ಸಮ್ಮುಖದಲ್ಲಿ ಇಬ್ಬರೂ ವಿವಾಹವಾದರು. ಅವರು ಜೂನ್ 13ರಂದು ದೆಹಲಿಯಿಂದ ಋಷಿಕೇಶಕ್ಕೆ ರಜೆಗಾಗಿ ಹೊರಟರು. ಮರುದಿನ, ಅವರು ತಡರಾತ್ರಿ ಮಸ್ಸೂರಿಯ ತಿಪ್ರಿಧರ್ ಪ್ರದೇಶದ ಕಿಯಾನಾ ಹೋಂ ಸ್ಟೇ ತಲುಪಿ ಬ್ಲಿಸ್ ಎಂಬ ಕೋಣೆಯಲ್ಲಿ ತಂಗಿದ್ದರು. ಆ ರಾತ್ರಿ ಅವರಿಬ್ಬರೂ ಆಲ್ಕೋಹಾಲ್ ಸೇವಿಸಿದ್ದಾರೆ ಎಂದು ಆಕೆಯ ಗಂಡನೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಬೆಳಿಗ್ಗೆ ಆ ಯುವತಿಯ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ: ಐಎಎಫ್ ಅಧಿಕಾರಿಯ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ, ಬಲವಂತದ ಮತಾಂತರ

ಗಂಡ ಹೆಂಡತಿ ರಾತ್ರಿ ರೂಂನಲ್ಲೇ ಮದ್ಯ ಸೇವಿಸಿದ್ದರು. ಬೆಳಗಿನ ಜಾವ 3.30ಕ್ಕೆ ಅವರು ಮಲಗಲು ಹೋದರು. ಬೆಳಿಗ್ಗೆ ಎದ್ದಾಗ ಗಾಯತ್ರಿ ರಕ್ತದ ಮಡುವಿನಲ್ಲಿ ಬೆತ್ತಲೆಯಾಗಿ ಬಿದ್ದಿರುವುದನ್ನು ನೋಡಿ ಚರಣ್ ಪೊಲೀಸರಿಗೆ ತಿಳಿಸಿದ್ದಾರೆ. ಪತಿಯ ಹೇಳಿಕೆಯ ಆಧಾರದ ಮೇಲೆ, ಉತ್ತರಾಖಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು. ಆಕೆ ಆಲ್ಕೋಹಾಲ್ ಹೆಚ್ಚಾಗಿದ್ದರಿಂದ ಮೃತಪಟ್ಟಿದ್ದಾರಾ? ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಕೊಲೆಯಾಗಿದ್ದಾರಾ? ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಮಾಹಿತಿ ತಿಳಿಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಭಾರತ- ಅಫ್ಘನ್ 2ನೇ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ? ಹೇಗಿರಲಿದೆ ಹವಾಮಾನ? – Kannada News | India vs Afghanistan 2nd ODI: Date, Time, Pitch, Weather Report and Squads

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಎರಡನೇ ಏಕದಿನ ಪಂದ್ಯ ಜೂನ್ 17 ರಂದು ಉತ್ತರ ಪ್ರದೇಶದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಕೂಡ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ. ಮೊದಲನೇ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸುಲಭವಾಗಿ ಮಣಿಸಿದ್ದ ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನ ಕೈವಶ ಮಾಡಿಕೊಳ್ಳಲು ನೋಡುತ್ತಿದೆ. ಇತ್ತ ಅಫ್ಘಾನಿಸ್ತಾನ ಕೂಡ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಲು ಪ್ರಯತ್ನಿಸಲಿದೆ. ಆದಾಗ್ಯೂ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ ಎಂಬ ಆತಂಕ ಅಭಿಮಾನಿಗಳಿಗಿದೆ. ಏಕೆಂದರೆ ಮಳೆಯಿಂದಾಗಿ ಮೊದಲ ಏಕದಿನ ಪಂದ್ಯವನ್ನು ತಲಾ 25 ಓವರ್​ಗಳಿಗೆ ನಿಗದಿಪಡಿಸಲಾಗಿತ್ತು. ಹೀಗಾಗಿ ಈ ಪಂದ್ಯದ ದಿನದಂದು ಹವಾಮಾನ ವರದಿ ಹೇಗಿರಲಿದೆ ಎಂಬುದು ಪ್ರಶ್ನೆ?

ಹವಾಮಾನ ಹೇಗಿರಲಿದೆ?

ಮೇಲೆ ಹೇಳಿದಂತೆ ಎರಡನೇ ಪಂದ್ಯ ಲಕ್ನೋದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಯಾವುದೇ ಮಳೆಯ ಆತಂಕವಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪಂದ್ಯದ ದಿನದಂದು ಲಕ್ನೋದಲ್ಲಿ ಬಿಸಿಲು ಹೆಚ್ಚಿರಲಿದ್ದು, ಮಳೆಯಾಗುವ ಸಾಧ್ಯತೆಗಳಿಲ್ಲ. ಆದರೆ ಬಿಸಿ ತಾಪಮಾನದಿಂದ ಆಟಗಾರರು ತೊಂದರೆಗೊಳಗಾಗಬಹುದು. ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಿರಲಿದ್ದು, 45 ಡಿಗ್ರಿ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.

ಪಿಚ್ ಹೇಗಿರಲಿದೆ?

ಇನ್ನು ಏಕನಾ ಕ್ರೀಡಾಂಗಣದ ಪಿಚ್ ಬಗ್ಗೆ ಹೇಳುವುದಾದರೆ, ಇದು ಸಾಮಾನ್ಯವಾಗಿ ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಪಂದ್ಯ ಮುಂದುವರೆದಂತೆ, ಪಿಚ್ ನಿಧಾನವಾಗುತ್ತದೆ, ಇದರಿಂದಾಗಿ ಬ್ಯಾಟಿಂಗ್ ಕಷ್ಟವಾಗುತ್ತದೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್ ಕಟ್ಟಬೇಕೆಂದರೆ ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್‌ ಮಾಡುವುದು ಅವಶ್ಯಕ. ಈ ಮೈದಾನದಲ್ಲಿ ಏಕದಿನ ಪಂದ್ಯದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 213 ರನ್ ಆಗಿದೆ. ಆದ್ದರಿಂದ, ಈ ಪಂದ್ಯ ಹೆಚ್ಚಿನ ಸ್ಕೋರಿಂಗ್ ಪಂದ್ಯವಾಗುವುದು ಅನುಮಾನ.

IND vs AFG: ಮೊದಲ ಏಕದಿನ ಪಂದ್ಯದ ನಡುವೆ ಟೀಂ ಇಂಡಿಯಾಕ್ಕೆ ಸಿಹಿ ಸುದ್ದಿ

ಉಭಯ ತಂಡಗಳು

ಏಕದಿನ ಸರಣಿಗೆ ಟೀಂ ಇಂಡಿಯಾ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.

ಏಕದಿನ ಸರಣಿಗೆ ಅಫ್ಘಾನಿಸ್ತಾನ ತಂಡ: ಹಸ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ದರ್ವಿಶ್ ರಸೂಲಿ, ರಹಮತ್ ಷಾ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜೈ, ರಶೀದ್ ಖಾನ್, ನಂಗ್ಯಾಲ್ ಖರೋಟೈ, ಎಎಮ್ ಗಜನ್ಫರ್, ಜಿಯಾ ಯು ರೆಹಮಾನ್ ಶರೀಫಿ, ಫರೀದ್ ಮಲಿಕ್, ಬಿಲಾಲ್ ಸಾಮಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ವರ್ಷದಲ್ಲಿ ಮೂರು ಸಿನಿಮಾಗಳ ಬಿಡುಗಡೆಗೆ ರೆಡಿಯಾದ ನಟ ಪ್ರಭಾಸ್? – Kannada News | Pan India Superstar Prabhas Triple Treat for fans in next 12 months

ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ (Prabhas) ಸದ್ಯ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಸದ್ಯ ಮೂರ್ನಾಲ್ಕು ದೊಡ್ಡ ಸಿನಿಮಾಗಳಿದ್ದು, ಅವುಗಳ ಬಿಡುಗಡೆಯ ಬಗ್ಗೆ ಸಿನಿಮಾ ವಲಯದಲ್ಲಿ ಒಂದು ಲೆಕ್ಕಾಚಾರ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕೇವಲ ಒಂದು ವರ್ಷದ ಅಂತರದಲ್ಲಿ ಪ್ರಭಾಸ್ ಅವರ 3 ಮೆಗಾ ಸಿನಿಮಾಗಳು (Prabhas Upcoming Movies) ಥಿಯೇಟರ್​ನಲ್ಲಿ ತೆರೆಕಾಣಲಿವೆ. ಒಂದು ವೇಳೆ ಆ ರೀತಿ ಆಗಿದ್ದೇ ಹೌದಾದರೆ ಪ್ರಭಾಸ್ ಅವರ ಅಭಿಮಾನಿಗಳಿಗೆ ಹಬ್ಬ ಆಗಲಿದೆ. ಬ್ಯಾಕ್ ಟು ಬ್ಯಾಕ್ ಮನರಂಜನೆ ಸಿಗಲಿದೆ.

ಪ್ರಭಾಸ್ ಅವರ ಮುಂಬರುವ ಸಿನಿಮಾಗಳ ಸಂಭಾವ್ಯ ಬಿಡುಗಡೆಯ ಪಟ್ಟಿಯಲ್ಲಿ ‘ಫೌಜಿ’, ‘ಸ್ಪಿರಿಟ್’, ‘ಕಲ್ಕಿ 2’ ಸಿನಿಮಾಗಳಿವೆ. ಈ ಸಾಲಿನಲ್ಲಿ ಮೊದಲಿಗೆ ಥಿಯೇಟರ್‌ಗೆ ಬರಲು ಸಜ್ಜಾಗುತ್ತಿರುವುದು ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಸಿನಿಮಾ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಬಹಳ ವೇಗವಾಗಿ ಮುಂದುವರಿಯಲಿದ್ದು, ಚಿತ್ರತಂಡವು ಡಿಸೆಂಬರ್ ವೇಳೆಗೆ ಸಿನಿಮಾವನ್ನು ತೆರೆಗೆ ತರಲು ಭರ್ಜರಿ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.

‘ಅರ್ಜುನ್ ರೆಡ್ಡಿ’, ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಭಾಸ್ ಕಾಂಬಿನೇಷನ್‌ನ ‘ಸ್ಪಿರಿಟ್’ ಚಿತ್ರದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ. ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರವು 2027ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

2024ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ‘ಕಲ್ಕಿ 2’ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಸಿನಿಮಾದ ಅಧಿಕೃತ ಬಿಡುಗಡೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲವಾದರೂ, ಚಿತ್ರವು 2027ರ ಡಿಸೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: ಭೀಕರ ಅಪಘಾತ: ಪ್ರಭಾಸ್ ನಟನೆಯ ‘ಫೌಜಿ’ ಚಿತ್ರತಂಡದ ಸದಸ್ಯ ಸಾವು; ಶೂಟಿಂಗ್ ಸ್ಥಗಿತ

ಒಂದು ವೇಳೆ ಈ ಬಿಡುಗಡೆಯ ಪ್ಲ್ಯಾನ್ ನಿಜವಾದರೆ, 2026ರ ಡಿಸೆಂಬರ್ ತಿಂಗಳಿಂದ 2027ರ ಡಿಸೆಂಬರ್ ನಡುವಿನ ಕೇವಲ 12 ತಿಂಗಳ ಅವಧಿಯಲ್ಲಿ ಪ್ರಭಾಸ್ ಅವರ ಮೂರು ಬಿಗ್ ಬಜೆಟ್ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿವೆ. ಭಾರತೀಯ ಚಿತ್ರರಂಗದ ಇಂದಿನ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಮಟ್ಟದ ಸಿನಿಮಾಗಳು ಒಂದೇ ವರ್ಷದಲ್ಲಿ ಒಬ್ಬ ಸ್ಟಾರ್ ನಟನಿಂದ ಬರುವುದು ಅಪರೂಪ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೇದಿಕೆ ಮೇಲೆ ಸಮಂತಾಗೆ ‘ಐ ಲವ್ ಯೂ’ ಹೇಳಲು ನಿರಾಕರಿಸಿದ ಪತಿ ರಾಜ್ ನಿಡಿಮೋರು – Kannada News | Samantha Ruth Prabhu Husband Raj Nidimoru Funny Stage Moment at Maa Inti Bangaram

ದೇಶಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ನಟಿ ಸಮಂತಾ ರುತ್ ಪ್ರಭು (Samantha) ಸದ್ಯ ತಮ್ಮ ಮುಂಬರುವ ಚಿತ್ರ ‘ಮಾ ಇಂಟಿ ಬಂಗಾರಂ’ (Maa Inti Bangaram) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಈ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಸಮಂತಾ ಮತ್ತು ಅವರ ಪತಿ, ಖ್ಯಾತ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ವೇಳೆ ವೇದಿಕೆ ಮೇಲೆ ನಡೆದ ಒಂದು ಮಜಾವಾದ ಪ್ರಸಂಗದ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಕಾರ್ಯಕ್ರಮದ ನಿರೂಪಕಿ ಸುಮಾ ಅವರು ವೇದಿಕೆ ಮೇಲಿದ್ದ ರಾಜ್ ನಿಡಿಮೋರು ಅವರಿಗೆ, ‘ಸಮಂತಾ ಅವರಿಗೆ ಸಾರ್ವಜನಿಕವಾಗಿ ಐ ಲವ್ ಯೂ ಅಂತ ಹೇಳಿ’ ಎಂದು ಕೇಳಿಕೊಂಡರು. ಇದಕ್ಕೆ ಅಲ್ಲಿದ್ದ ಅಭಿಮಾನಿಗಳು ಕೂಡ ಜೋರಾಗಿ ಕಿರುಚುತ್ತಾ ಬೆಂಬಲ ನೀಡಿದರು. ಆದರೆ ರಾಜ್ ನಿಡಿಮೋರು ವೇದಿಕೆ ಮೇಲೆ ಪ್ರೀತಿ ವ್ಯಕ್ತಪಡಿಸಲು ನಿರಾಕರಿಸಿದರು.

ಅದಕ್ಕೆ ಅವರು ನೀಡಿದ ಕಾರಣ ಕೇಳಿ ಅಲ್ಲಿದ್ದ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ‘ಈಗಾಗಲೇ ವೇದಿಕೆ ಮೇಲಿಂದ ಮತ್ತು ಆಡಿಯನ್ಸ್ ಕಡೆಯಿಂದ ಸಾಕಷ್ಟು ಜನರು ಸಮಂತಾಗೆ ಐ ಲವ್ ಯೂ ಅಂತ ಹೇಳುತ್ತಿದ್ದಾರೆ. ಹೀಗಾಗಿ ನಾನು ಹೊಸದಾಗಿ ಹೇಳುವುದರಲ್ಲಿ ಏನೂ ವಿಶೇಷತೆ ಇಲ್ಲ’ ಎಂದು ರಾಜ್ ತಮಾಷೆಯಾಗಿ ಉತ್ತರಿಸಿದರು. ಅಲ್ಲದೇ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಿದರು.

ವೇದಿಕೆ ಮೇಲೆ ಪ್ರೀತಿ ವ್ಯಕ್ತಪಡಿಸಲು ಹಿಂಜರಿದರೂ, ರಾಜ್ ನಿಡಿಮೋರು ಅವರು ಸಮಂತಾ ಅವರ ನಟನಾ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ‘ಈ ಸಿನಿಮಾದಲ್ಲಿ ಕೆಲಸ ಮಾಡುವಾಗ ಸಮಂತಾ ಅವರ ನಟನೆಯ ಆಳ ಮತ್ತು ಸೂಕ್ಷ್ಮತೆಗಳು ನನಗೆ ಇನ್ನಷ್ಟು ಹತ್ತಿರದಿಂದ ಅರ್ಥವಾದವು. ಎಷ್ಟೋ ಕಷ್ಟದ ಎಮೋಷನಲ್ ದೃಶ್ಯಗಳನ್ನು ಸಮಂತಾ ಮೊದಲ ಟೇಕ್‌ನಲ್ಲೇ ಅದ್ಭುತವಾಗಿ ನಟಿಸಿ ಇಡೀ ಚಿತ್ರತಂಡಕ್ಕೆ ಆಶ್ಚರ್ಯ ಮೂಡಿಸುತ್ತಿದ್ದರು. ಅವರು ಪ್ರತಿ ಸಿನಿಮಾದಲ್ಲೂ ಹೊಸ ಆಯಾಮವನ್ನು ತೋರಿಸುವ ಅದ್ಭುತ ನಟಿ’ ಎಂದರು.

ಇದನ್ನೂ ಓದಿ: ರಿಲೀಸ್​​ಗೂ ಮೊದಲೇ ಸೇಫ್ ಆದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’

‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಸಮಂತಾ ತಮ್ಮದೇ ‘ಟ್ರಾ ಲಾಲಾ ಮೂವಿಂಗ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ನಟಿಯಾಗಿ ನಟಿಸುವುದು ಸುಲಭ, ಆದರೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗುತ್ತಿರುವುದರಿಂದ ಸಿನಿಮಾ ಬಿಡುಗಡೆಗೂ ಮುನ್ನ ಕೊಂಚ ಒತ್ತಡ ಎದುರಾಗಿದೆ’ ಎಂದು ಹಂಚಿಕೊಂಡರು. ಜೊತೆಗೆ ಸಿನಿಮಾದ ಯಶಸ್ಸಿಗೆ ತೆರೆಮರೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬ ತಂತ್ರಜ್ಞರಿಗೂ ಅವರು ಧನ್ಯವಾದ ಅರ್ಪಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link