Category Archives: Blog

Your blog category

IND vs AFG: ಟೀಂ ಇಂಡಿಯಾ ವಿರುದ್ಧ ಸ್ಮರಣೀಯ ಶತಕ ಬಾರಿಸಿದ ಹಶ್ಮತುಲ್ಲಾ ಶಾಹಿದಿ – Kannada News | Hashmatullah Shahidi’s Maiden Century: Lone Battle vs India in Chennai ODI

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಟೀಂ ಇಂಡಿಯಾ ಬೌಲರ್​ಗಳ ಎದುರು ಏಕಾಂಗಿ ಹೋರಾಟ ನೀಡಿ ಸ್ಮರಣೀಯ ಶತಕ ಸಿಡಿಸಿದರು. ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಶತಕ ಬಾರಿಸಿದ ಶಾಹಿದಿ ತಂಡವನ್ನು 200 ರನ್​ಗಳ ಗಡಿ ದಾಟಿಸುವಲ್ಲು ಯಶಸ್ವಿಯಾದರು. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 126 ಎಸೆತಗಳನ್ನು ಎದುರಿಸಿದ ಶಾಹಿದಿ 13 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಸುಂದರ್ ಎಸೆದ 44ನೇ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಹಶ್ಮತುಲ್ಲಾ ಶಾಹಿದಿ ತಮ್ಮ ಶತಕದ ಗಡಿ ದಾಟಿದರು. ಭಾರತದ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ ಶಾಹಿದಿಗೆ ಇದು ಅವರ ಏಕದಿನ ವೃತ್ತಿಜೀವನದ ಮೊದಲ ಶತಕವೂ ಆಗಿದೆ.

Source link

Job Alert: ಶಿವಮೊಗ್ಗದ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; 31,000 ರೂ. ಸಂಬಳದ ಹುದ್ದೆಗೆ ಅರ್ಜಿ ಆಹ್ವಾನ – Kannada News | Shivamogga Job Alert: Senior Microbiologist Hiring on Outsourcing Basis | Apply by June 30

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್Image Credit source: Facebook

ಶಿವಮೊಗ್ಗ: ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಶಿವಮೊಗ್ಗದ ಡಿ.ಸಿ ಕಚೇರಿ ಆವರಣದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ರವರ ಕಚೇರಿಯು ಖಾಲಿ ಇರುವ ಹುದ್ದೆಯ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯದಲ್ಲಿ ಕಿರಿಯ ಹಾಗೂ ಹಿರಿಯ ತಜ್ಞರ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಹೊರಗುತ್ತಿಗೆ ಆಧಾರದ ಮೇಲೆ ಸೀನಿಯರ್ ಮೈಕ್ರೋಬಯಾಲಜಿಸ್ಟ್ ಹುದ್ದೆ ಭರ್ತಿ:

ನೇಮಕಾತಿ ಪ್ರಕಟಣೆಯ ಪ್ರಕಾರ, ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಇಲಾಖಾ ಕಚೇರಿಯಲ್ಲಿ ಸೀನಿಯರ್ ಮೈಕ್ರೋಬಯಾಲಜಿಸ್ಟ್ (Senior Microbiologist) ಹುದ್ದೆಯನ್ನು ತಾತ್ಕಾಲಿಕವಾಗಿ ಹೊರಗುತ್ತಿಗೆ (Outsourcing) ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹತೆ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ರೂ. 31,000 ಗಳ ಆಕರ್ಷಕ ಸ್ಥಿರ ವೇತನವನ್ನು ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಕಟ್ಟುನಿಟ್ಟಿನ ಮಾನದಂಡಗಳು:

ಈ ಪ್ರಮುಖ ಹುದ್ದೆಗೆ ಅರ್ಜಿ ಸಲ್ಲಿಸಲು ವಿಜ್ಞಾನ ವಿಭಾಗದ ವಿವಿಧ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಅವಕಾಶವಿದ್ದು, ವಿಷಯಕ್ಕೆ ಅನುಗುಣವಾಗಿ ಪ್ರತ್ಯೇಕ ಅನುಭವದ ಅಗತ್ಯವಿದೆ:

  • M.Sc ಮೈಕ್ರೋಬಯಾಲಜಿ: ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಕುಡಿಯುವ ನೀರು ಗುಣಮಟ್ಟ ಪರೀಕ್ಷಾ ಪ್ರಯೋಗಾಲಯದ ಅದೇ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವವಿರಬೇಕು.
  • M.Sc ಬಯೋಕೆಮಿಸ್ಟ್ರಿ / ಬಯೋಟೆಕ್ನಾಲಜಿ / ಎನ್ವಿರಾನ್‌ಮೆಂಟಲ್ ಸೈನ್ಸ್: ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ ಸಂಬಂಧಿಸಿದ ಪರೀಕ್ಷಾ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವ ಕಡ್ಡಾಯವಾಗಿದೆ.
  • B.Sc ಮೈಕ್ರೋಬಯಾಲಜಿ: ಕೇವಲ ಪದವಿ (B.Sc) ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅದೇ ನೀರಿನ ಗುಣಮಟ್ಟ ಪರೀಕ್ಷಾ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಅನುಭವದ ಅಗತ್ಯವಿರುತ್ತದೆ.
  • B.Sc ಬಯೋಕೆಮಿಸ್ಟ್ರಿ / ಬಯೋಟೆಕ್ನಾಲಜಿ / ಎನ್ವಿರಾನ್‌ಮೆಂಟಲ್ ಸೈನ್ಸ್: ಈ ಪದವೀಧರರು ಅರ್ಜಿ ಸಲ್ಲಿಸಬೇಕಿದ್ದಲ್ಲಿ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸುದೀರ್ಘ ಅನುಭವವನ್ನು ಹೊಂದಿರಬೇಕಾದುದು ಅತ್ಯಗತ್ಯ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ವಯೋಮಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 45 ವರ್ಷಗಳ ಒಳಗಿರಬೇಕು (Below 45 years) ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯ ಅಧಿಕೃತ ಸರ್ಕಾರಿ ಜಾಲತಾಣವಾದ https://shivamogga.nic.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ:

ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ಕೊನೆಯ ದಿನದ ಗಡುವಿನ ಒಳಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ನೇಮಕಾತಿ ಕುರಿತು ಯಾವುದೇ ಹೆಚ್ಚಿನ ಮಾಹಿತಿ, ಗೊಂದಲ ಅಥವಾ ಅಧಿಕೃತ ವಿಚಾರಣೆಗಳಿಗಾಗಿ ಅಭ್ಯರ್ಥಿಗಳು ಇಲಾಖೆಯ ಕಚೇರಿ ದೂರವಾಣಿ ಸಂಖ್ಯೆ: 08182-248044 ಅಥವಾ ಅಧಿಕೃತ ಇಮೇಲ್ ಐಡಿ: eesmgrdws@gmail.com ಮೂಲಕ ನೇರವಾಗಿ ಸಂಪರ್ಕಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

CCTV ಕಣ್ಗಾವಲು, ಜಾಮರ್ ಅವಳವಡಿಕೆ: ನೀಟ್ ಮರುಪರೀಕ್ಷೆಗೆ ಫುಲ್ ಟೈಟ್ ಸೆಕ್ಯೂರಿಟಿ – Kannada News | NEET UG Re Exam On June 21: Mock Drill In bengaluru, NTA Safety Advisory For Re NEET

ಬೆಂಗಳೂರು, (ಜೂನ್ 20): ದೇಶಾದ್ಯಂತ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವತಿಯಿಂದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET UG Re Exam 2026) ನಾಳೆ ಮಧ್ಯಾಹ್ನ 02ರಿಂದ ಸಂಜೆ 05:15ರವರೆಗೆ ನಡೆಯಲಿದೆ. ರಾಜ್ಯದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಹಾಗೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನ ಎಸ್ ಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈಗಾಗಲೇ ರೋಲ್ ನಂಬರ್ ಹಾಕಿದ್ದು, ನಾಳೆ ಬೆಳಗ್ಗೆಯಿಂದ‌ ‌CRPF ಮತ್ತು ಸ್ಥಳೀಯ ಪೊಲೀಸರ ಭದ್ರತೆ ಇರಲಿದೆ. ಕಳೆದ ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ದೊಡ್ಡ ರದ್ದಾಂತವೇ ಆಗಿದೆ. ಅಲ್ಲದೇ ಕೆಲ ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಬಿಗಿ ಕ್ರಮಕೈಗೊಳ್ಳಲಾಗಿದೆ.

Source link

32ನೇ ವಯಸ್ಸಿಗೆ ನಿವೃತ್ತಿ; ಯುಎಇ ಪರ ಕಣಕ್ಕಿಳಿಯಲಿರುವ ಭಾರತದ ಕ್ರಿಕೆಟಿಗ – Kannada News | KS Bharat Retires From India, Eyes UAE Cricket: New International Journey Begins

ಆದರೀಗ ತಮ್ಮ ವೃತ್ತಿಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಹೊರಟಿರುವ ಭರತ್, ದೇಶವನ್ನು ತೊರೆದಿದ್ದು ಬೇರೆ ದೇಶದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಭರತ್ ಪ್ರಸ್ತುತ ದುಬೈನಲ್ಲಿ ನೆಲೆಸಿದ್ದು, ಯುಎಇ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ.

Source link

ಮೋದಿಯನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿಗೆ ಶಶಿ ತರೂರ್​​ ಜನ್ಮದಿನ ಗಿಫ್ಟ್ ನೀಡಿದ್ದಾರೆ; ಬಿಜೆಪಿ ಲೇವಡಿ – Kannada News | Shashi Tharoor supports PM Modi on interaction with Trump BJP Leaders said Rahul Gandhi exposed

ನವದೆಹಲಿ, ಜೂನ್ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗಿನ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಟೀಕಿಸಿದ್ದರೆ, ಅದೇ ಪಕ್ಷದ ಹಿರಿಯ ನಾಯಕ ಶಶಿ ತರೂರ್ (Shashi Tharoor) ಮಾತ್ರ ಪ್ರಧಾನಿ ಮೋದಿಯವರ ನಿಲುವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಶಶಿ ತರೂರ್ ಅವರ ಈ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕತ್ವದ ವಿರುದ್ಧ ಕಟು ವಾಗ್ದಾಳಿ ನಡೆಸಿದೆ.

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಎಕ್ಸ್​ (ಟ್ವಿಟರ್) ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಶಶಿ ತರೂರ್ ಅವರ ಹೇಳಿಕೆಗಳು ರಾಹುಲ್ ಗಾಂಧಿಗೆ ಸಿಕ್ಕ ಜನ್ಮದಿನದ ಉಡುಗೊರೆ ಯಾಗಿದೆ. ಈ ಹೇಳಿಕೆ ಕಾಂಗ್ರೆಸ್​ ಹಾಗೂ ರಾಹುಲ್ ಗಾಂಧಿಯ ಸುಳ್ಳು ನಿರೂಪಣೆಯನ್ನು ಧ್ವಂಸಗೊಳಿಸಿದೆ ಎಂದು ಹೇಳಿದ್ದಾರೆ. “ನಿನ್ನೆ ರಾಹುಲ್ ಗಾಂಧಿ ಅವರ ಜನ್ಮದಿನವಾಗಿತ್ತು. ಸಂಸದ ಶಶಿ ತರೂರ್ ಅವರು ರಾಹುಲ್ ಗಾಂಧಿಯವರ ಸುಳ್ಳು ನಿರೂಪಣೆಯನ್ನು ಬಯಲು ಮಾಡುವ ಮೂಲಕ ಜನ್ಮದಿನದ ಉಡುಗೊರೆಯನ್ನು ನೀಡಿದ್ದಾರೆ” ಎಂದು ಪೂನಾವಾಲಾ ಬರೆದಿದ್ದಾರೆ. ಹಾಗೇ, “ರಾಹುಲ್ ಗಾಂಧಿ ಅವರು ಶಶಿ ತರೂರ್ ಅವರನ್ನು ಪಕ್ಷದಿಂದ ವಜಾ ಮಾಡುವುದಿಲ್ಲ ಎಂದು ಭಾವಿಸುತ್ತೇನೆ!” ಎಂದು ಪೂನಾವಾಲಾ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಸಂಸದ ಶಶಿ ತರೂರ್ ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

“ನಿನ್ನೆ ರಾಹುಲ್ ಗಾಂಧಿ ಅವರ ಜನ್ಮದಿನವಾಗಿದ್ದರೂ ಅವರಿಗೆ ಯಾವುದೇ ಉಡುಗೊರೆಗಳು ಸಿಗದಿರುವುದು ಮುಜುಗರದ ಸಂಗತಿ. ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೇ ಪ್ರಧಾನಿ ಮೋದಿಯವರನ್ನು ಶ್ಲಾಘಿಸುವ ನಿಲುವು ತಳೆದಿದ್ದಾರೆ. ಇದು ರಾಹುಲ್ ಗಾಂಧಿ ಸಾರ್ವಜನಿಕ ಬೆಂಬಲವನ್ನು ಕಳೆದುಕೊಂಡಿರುವುದನ್ನು ತೋರಿಸುತ್ತದೆ ಎಂದು ಪೂನಾವಾಲಾ ಹೇಳಿದ್ದಾರೆ.

ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾಂಗ್ರೆಸ್ ಸಂಸದ ತರೂರ್ ಮತ್ತು ರಾಹುಲ್ ಗಾಂಧಿ ನಡುವಿನ ವ್ಯತ್ಯಾಸವನ್ನು ಶಶಿ ತರೂರ್ ಅವರ ಮಾತುಗಳು ಬಹಿರಂಗಪಡಿಸಿವೆ ಎಂದು ಹೇಳಿದ್ದಾರೆ. “ಕಾಂಗ್ರೆಸ್ ನಾಯಕರೇ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆಯನ್ನು ಶ್ಲಾಘಿಸುತ್ತಿದ್ದಾರೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವ ವಿಷಯ ಬಂದಾಗ ಪ್ರಧಾನಿ ಮೋದಿ ಮೊದಲಿಗರಾಗಿ ನಿಲ್ಲುತ್ತಾರೆ. ಅದೇ ಭಾರತದ ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧ ಮಾತನಾಡುವ ವಿಷಯ ಬಂದಾಗ ರಾಹುಲ್ ಗಾಂಧಿ ಎಲ್ಲರಿಗಿಂತ ಮುಂದೆ ಇರುತ್ತಾರೆ” ಎಂದು ಭಂಡಾರಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ಕಾಂಗ್ರೆಸ್​​​​​ ನಿಯಮವನ್ನು ಉಲ್ಲಂಘಿಸಿಲ್ಲ: ಈ ವಿಚಾರದಲ್ಲಿ ಕೇಂದ್ರವನ್ನು ಬೆಂಬಲಿಸುವೆ ಎಂದ ಶಶಿ ತರೂರ್

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ವಿಫಲರಾಗಿದ್ದಾರೆ ಮತ್ತು ಅತ್ಯಂತ ಮುಜುಗರದ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿತ್ತು. ಭಾರತೀಯ ಪ್ರಜೆಗಳ ಸಾವಿನ ಬಗ್ಗೆ ಸರ್ಕಾರ ಮೌನ ವಹಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು.

ಸಂಘರ್ಷ ಪೀಡಿತ ಪಶ್ಚಿಮ ಏಷ್ಯಾ ವಲಯದಲ್ಲಿ ಭಾರತೀಯ ನಾವಿಕರ ಸಾವುಗಳ ಕುರಿತು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಮತ್ತು ಈ ವಿಷಯದಲ್ಲಿ ಪ್ರಧಾನಮಂತ್ರಿಯವರ ಪ್ರತಿಕ್ರಿಯೆಯನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಹೈಕಮಾಂಡ್ ನಿಲುವಿಗೆ ತದ್ವಿರುದ್ಧವಾಗಿ ಶಶಿ ತರೂರ್ ಅವರ ಈ ಹೇಳಿಕೆಗಳು ಹೊರಬಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬರ್ತಿದ್ದೀನಿ ಚಿನ್ನ’ ಆರು ತಿಂಗಳ ಬಳಿಕ ದರ್ಶನ್ ಅಭಿಮಾನಿಗಳಿಗೆ ಖುಷಿ ಸುದ್ದಿ – Kannada News | Darshan starrer Devil movie Releasing on OTT and Tv

ನಟ ದರ್ಶನ್ (Darshan), ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಕನಿಷ್ಟ ಇನ್ನೊಂದು ವರ್ಷ ಅವರು ಜಾಮೀನಿಗೆ ಅರ್ಜಿ ಸಲ್ಲಿಸದಂತಾಗಿದೆ. ಪ್ರಕರಣದಲ್ಲಿ ನಟ ದರ್ಶನ್ ಒಟ್ಟಾರೆಯಾಗಿ ಈಗಾಗಲೇ ವರ್ಷಕ್ಕೂ ಅಧಿಕ ಸಮಯ ಜೈಲು ವಾಸ ಅನುಭವಿಸಿದ್ದಾರೆ. ಇನ್ನೂ ಒಂದು ವರ್ಷ ದರ್ಶನ್ ಜೈಲಿನಲ್ಲಿಯೇ ಇರಬೇಕಿದೆ. ಆದರೆ ಇದೀಗ ದರ್ಶನ್ ಅಭಿಮಾನಿಗಳಿಗೆ ಸಣ್ಣ ಖುಷಿಯ ಸುದ್ದಿಯೊಂದು ದೊರೆತಿದೆ. ನಟ ದರ್ಶನ್ ಅವರ ಸಿನಿಮಾ ಇದೀಗ ಒಟಿಟಿ ಹಾಗೂ ಟಿವಿಗೆ ಬರಲು ಸಜ್ಜಾಗಿದೆ.

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗುವಷ್ಟರಲ್ಲಿ ದರ್ಶನ್ ಅವರ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿ ತಿಂಗಳುಗಳಾಗಿತ್ತು. ದರ್ಶನ್ ಜೈಲಿನಲ್ಲಿದ್ದಾಗಲೇ ಬಿಡುಗಡೆ ಆದ ಈ ಸಿನಿಮಾ ಸಾಧಾರಣ ಯಶಸ್ಸು ಕಂಡಿತ್ತು. ಸಿನಿಮಾ ಬಿಡುಗಡೆ ಆಗಿ ಆರು ತಿಂಗಳಾದರು ಈ ಸಿನಿಮಾ ಯಾವುದೇ ಒಟಿಟಿ ಅಥವಾ ಟಿವಿಗಳಲ್ಲಿ ಪ್ರಸಾರ ಆಗಿರಲಿಲ್ಲ. ಆದರೆ ಇದೀಗ ಕೊನೆಗೂ ‘ಡೆವಿಲ್’ ಸಿನಿಮಾ ಒಟಿಟಿ ಮತ್ತು ಟಿವಿಗೆ ಬರಲು ಸಜ್ಜಾಗಿದೆ.

ಜೀ5 ಇದೀಗ ‘ಡೆವಿಲ್’ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕು ಖರೀದಿ ಮಾಡಿದ್ದು, ಸಿನಿಮಾವನ್ನು ಅದ್ಧೂರಿಯಾಗಿ ಒಟಿಟಿಯಲ್ಲಿ ಹಾಗೂ ಟಿವಿಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿದೆ. ಈ ಸಂಬಂಧ ಜೀ5 ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದೆ. ಪೋಸ್ಟ್​​ನಲ್ಲಿ ನಟ ದರ್ಶನ್ ಅವರ ‘ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ಬರ್ತಾ ಇದೀನಿ ಚಿನ್ನ’ ಎಂಬ ಡೈಲಾಗ್ ಅನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:‘ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ’; ದರ್ಶನ್​​ಗೆ ಬಾಸ್ ನಿರ್ದೇಶಕನ ಮನವಿ

2024ರಲ್ಲಿ ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿರುವಾಗಲೇ ರೇಣುಕಾ ಸ್ವಾಮಿ ಕೊಲೆ ನಡೆದು ನಟ ದರ್ಶನ್ ಬಂಧನವಾಗಿತ್ತು. ಹಾಗಾಗಿ ಸಿನಿಮಾದ ಚಿತ್ರೀಕರಣ ವಿಳಂಬವಾಗಿತ್ತು. ಬಳಿಕ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದಾಗ ದರ್ಶನ್, ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮತ್ತು ಡಬ್ಬಿಂಗ್ ಮುಗಿಸಿದರು. ಬಳಿಕ ಸುಪ್ರೀಂಕೋರ್ಟ್​​ನಲ್ಲಿ ದರ್ಶನ್ ಜಾಮೀನು ರದ್ದಾಯಿತು. ದರ್ಶನ್ ಜೈಲಿನಲ್ಲಿರುವಾಗಲೇ ಸಿನಿಮಾ ಬಿಡುಗಡೆ ಆಯ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ಕೆಲವು ಗೆಳೆಯರು ಮುಂದೆ ನಿಂತು ಸಿನಿಮಾದ ಪ್ರಚಾರ ಮಾಡಿದರು. ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಗಳಿಸಿತು. ಸಿನಿಮಾ ಅನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದರು. ಸಿನಿಮಾನಲ್ಲಿ ನಾಯಕಿಯಾಗಿ ರಚನಾ ರೈ ನಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಟಿಟಿಗೆ ಬಂದಿವೆ ಜಬರ್ದಸ್ಥ್ ಸಿನಿಮಾಗಳು, ಪಟ್ಟಿ ಇಲ್ಲಿದೆ – Kannada News | OTT release this week from June 13 to June 20

ಮೋಹನ್​​ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿತ್ತು. ಕಳೆದ ತಿಂಗಳಷ್ಟೆ ಬಿಡುಗಡೆ ಆದ ಈ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಮೋಹನ್​​ಲಾಲ್ ನಟಿಸಿ, ಜೀತು ಜೋಸೆಫ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಇದೀಗ ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದಾಗಿದೆ.

Source link

ಬೀದರ್ ಬ್ರಿಮ್ಸ್ ಆಸ್ಪತ್ರೆ ಅವ್ಯವಸ್ಥೆ: ಕಂತೆ-ಕಂತೆ ಹಣ ನೋಡಿ ಉಪ ಲೋಕಾಯುಕ್ತರು ಶಾಕ್ – Kannada News | Bidar Brims Hospital chaos: Deputy Lokayukta shocked to see huge money

ಬ್ರಿಮ್ಸ್​ಗೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಭೇಟಿ

ಬೀದರ್, ಜೂನ್​​ 20: ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಫೀಲ್ಡ್‌ಗೆ ಇಳಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ತಂಡ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕ ಸೇವೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಮಾಡಿದರು. ಅದರಲ್ಲೂ ಬೀದರ್​ನ (bidar) ಬ್ರಿಮ್ಸ್ ಆಸ್ಪತ್ರೆಯಲ್ಲಿನ ದಿಂಬು, ಬೆಡ್​ ಅವ್ಯವಸ್ಥೆ ಕಂಡು ನ್ಯಾ.ವೀರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈ ವೇಳೆ ಲ್ಯಾಬ್ ಟೆಕ್ನಿಷಿಯನ್ ಬಳಿ ಕಂತೆ ಕಂತೆ ಹಣ ಪತ್ತೆ ಆಗಿದೆ.

ಮುಖ್ಯಾಂಶಗಳು

  • ಬೆಳ್ಳಂಬೆಳಗ್ಗೆ ಫೀಲ್ಡ್‌ಗಿಳಿದ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ನೇತೃತ್ವದ ತಂಡ
  • ಬೀದರ್​ನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ
  • ಬ್ರಿಮ್ಸ್ ವೈದ್ಯಾಧಿಕಾರಿಗಳಿಗೆ ತರಾಟೆ

ಕೋಟಿ ಕೋಟಿ ಹಣವನ್ನು ಏನು ಮಾಡುತ್ತಿದ್ದೀರಿ: ನ್ಯಾ. ಬಿ. ವೀರಪ್ಪ ಪ್ರಶ್ನೆ

ದಿಂಬು, ಬೆಡ್ ನೋಡಿದರೆ ಜೈಲಿನಲ್ಲೂ ಈ ರೀತಿ ಇರುವುದು. ಏ ಡಾಕ್ಟರ್ರೆ ಇಂತಹ ಬೆಡ್ ಮೇಲೆ ನೀವು ಮಲಗುತ್ತೀರಾ ಕೋಟಿ ಕೋಟಿ ಹಣವನ್ನು ಏನು ಮಾಡುತ್ತಿದ್ದೀರಿ. 6 ಅಂತಸ್ತಿನ ಕಟ್ಟಡದಲ್ಲಿ ಬೆಡ್ ಇಲ್ಲ, ನೀರಿಲ್ಲಾ ಅಂದ್ರೆ ಹೇಗೆ? ರೋಗಿಗಳ ಸಂಬಂಧಿಕರಿಗೆ ಆಸನ ವ್ಯವಸ್ಥೆ ಕೂಡ ಇಲ್ಲ. ಹೇಗೆ ಆಸ್ಪತ್ರೆ ನಡೆಸುತ್ತಿದ್ದೀರಿ ಎಂದು ಬ್ರಿಮ್ಸ್ ನಿರ್ದೇಶಕಿ ಶಾಂತಲಾ ಕೌಜಲಗಿ, ಡಿಸ್ಟ್ರಿಕ್ ಸರ್ಜನ್‌ ಎಮ್‌ಎಸ್ ಬಾಳಿಗೆ ತರಾಟೆ ತೆಗೆದುಕೊಂಡರು. ವಾರಕ್ಕೊಮ್ಮೆ ಇಲ್ಲಿ ವಿಸಿಟ್ ಮಾಡಿದರೆ ಮಾತ್ರ ವ್ಯವಸ್ಥೆ ಸುಧಾರಣೆ ಆಗುತ್ತೆ ಎಂದರು.

ಲ್ಯಾಬ್ ಟೆಕ್ನಿಷಿಯನ್ ಬಳಿ ಕಂತೆ ಕಂತೆ ಹಣ ಪತ್ತೆ 

ಇನ್ನು ಇದೇ ವೇಳೆ ಬೀದರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಸಂಜುಕುಮಾರ್ ಬಳಿ ಕಂತೆ ಕಂತೆ ಹಣ ಪತ್ತೆ ಆಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅದರಲ್ಲೂ ಲ್ಯಾಬ್ ಟೆಕ್ನಿಷಿಯನ್ ಬಳಿ ಒಂದು ಲಕ್ಷ ನಗದು ಮತ್ತು ಒಂದು ಲಕ್ಷ ರೂ ಮೊತ್ತದ ಚೆಕ್​​ ಹೇಗೆ ಬಂತು ಎಂದು ವೈದ್ಯರಿಗೆ ನ್ಯಾ.ಬಿ.ವೀರಪ್ಪ ತರಾಟೆ ತೆಗೆದುಕೊಂಡರು. ಹಣದ ಮಾಹಿತಿ ಕೇಳಿದಾಗ ಲ್ಯಾಬ್ ಟೆಕ್ನಿಷಿಯನ್ ತಡಬಡಾಯಿಸಿದ್ದಾನೆ. ಸದ್ಯ ಪತ್ತೆಯಾದ ಹಣವನ್ನು ಜಪ್ತಿ ಮಾಡಿ ಸ್ವಯಂಪ್ರೇರಿತ ಕೇಸ್​ ದಾಖಲಿಸಿಕೊಳ್ಳುವಂತೆ ನ್ಯಾಯಮೂರ್ತಿ ಸೂಚನೆ ನೀಡಿದರು.

ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಕಂಡು ಗರಂ ಆದ ಉಪ ಲೋಕಾಯುಕ್ತರು

ಇನ್ನು ಉಪ ಲೋಕಾಯುಕ್ತ ತಂಡ ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಭೇಟಿ ಅಲ್ಲಿನ ಸ್ವಚ್ಛತೆ ಹಾಗೂ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಬಸ್ ನಿಲ್ದಾಣದ ಆವರಣದಲ್ಲಿ ಅಸ್ವಚ್ಛತೆ ಹಾಗೂ ಅವ್ಯವಸ್ಥೆ ಕಂಡು ಬಂದ ಹಿನ್ನೆಲೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ಡಿಪೋ ವ್ಯವಸ್ಥಾಪಕರನ್ನು ತರಾಟೆ ತೆಗೆದುಕೊಂಡರು.

ಇದನ್ನೂ ಓದಿ: ಹಗಲು ದರೋಡೆ: ಬೀದರ್​ನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಕೆಂಪು ಕಲ್ಲು ಗಣಿಗಾರಿಕೆ

ಬಳಿಕ ಬಸ್ ನಿಲ್ದಾಣದಲ್ಲಿರುವ ಹೋಟೆಲ್‌ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ಹೋಟೆಲ್‌ಗಳಲ್ಲಿ ಅಗತ್ಯ ಮಟ್ಟದ ಸ್ವಚ್ಛತೆ ಕಾಪಾಡದಿರುವುದನ್ನು ಕಂಡು ಗರಂ ಆದ ತಂಡ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs AFG: ಜೊತೆಗೂಡಿ 3 ವಿಕೆಟ್ ಉರುಳಿಸಿದ ಪ್ರಸಿದ್ಧ್- ರೋಹಿತ್ – Kannada News | Rohit Sharma’s Catch Hat Trick Powers Prasidh Krishna’s Afghan Wicket Spree

ಫ್ಘಾನಿಸ್ತಾನ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಅವರ ಮಾರಕ ಬೌಲಿಂಗ್ ಅಫ್ಘನ್ ತಂಡವನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ಪರಿಣಾಮವಾಗಿ, ಅಫ್ಘಾನಿಸ್ತಾನದ ಅಗ್ರ ಕ್ರಮಾಂಕದ ನಾಲ್ಕು ವಿಕೆಟ್​ಗಳು ಪವರ್​ಪ್ಲೇನಲ್ಲೇ ಉರುಳಿದವು. ಪ್ರಸಿದ್ಧ್ ಪಡೆದ ಈ ನಾಲ್ಕು ವಿಕೆಟ್​ಗಳಲ್ಲಿ ಮೂರು ವಿಕೆಟ್​ಗಳು ಉರುಳಿಸುವುದರ ಹಿಂದೆ ರೋಹಿತ್ ಶರ್ಮಾ (Rohit Sharma) ಅವರ ಪಾತ್ರವೂ ಅಪಾರವಾಗಿತ್ತು. ಅಂದರೆ ಪ್ರಸಿದ್ಧ್ ಉರುಳಿಸಿದ ಮೊದಲ 3 ವಿಕೆಟ್​ಗಳು ರೋಹಿತ್ ಹಿಡಿದ ಅದ್ಭುತ ಕ್ಯಾಚ್​ನಿಂದಲೇ ಬಂದವು.

ಕ್ಯಾಚ್‌ಗಳ ಹ್ಯಾಟ್ರಿಕ್

ಈ ಮೂಲಕ ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಅನ್ನು ಸಹ ಪೂರ್ಣಗೊಳಿಸಿದರು. ಇದರೊಂದಿಗೆ ವಿವಿಎಸ್ ಲಕ್ಷ್ಮಣ್ ಮತ್ತು ಶಿಖರ್ ಧವನ್ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಪಂದ್ಯದಲ್ಲಿ ಮೊದಲ ಸ್ಲಿಪ್​ನಲ್ಲಿ ಫಿಲ್ಡಿಂಗ್​ಗೆ ನಿಂತಿದ್ದ ರೋಹಿತ್ ಮೊದಲಿಗೆ ಅಫ್ಘನ್ ಆರಂಭಿಕ ರಹಮಾನಲ್ಲಾ ಗುರ್ಬಾಜ್ ಅವರ ಕ್ಯಾಚ್ ತೆಗೆದುಕೊಂಡರು. ನಂತರ ರಹಮತ್ ಶಾ ನೀಡಿದ ಕ್ಯಾಚ್ ಕೂಡ ರೋಹಿತ್ ಕೈ ಸೇರಿತು. ಮೂರನೇ ಕ್ಯಾಚ್ ರೂಪದಲ್ಲಿ ರೋಹಿತ್, ಇಬ್ರಾಹಿಂ ಜದ್ರಾನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ರೋಹಿತ್ ಅಫ್ಘಾನಿಸ್ತಾನದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಕ್ಯಾಚ್‌ಗಳನ್ನು ಪೂರ್ಣಗೊಳಿಸಿದರು.

ಲಕ್ಷ್ಮಣ್, ಧವನ್ ದಾಖಲೆ ಸರಿಗಟ್ಟಿದ ರೋಹಿತ್

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಒಂದೇ ಬೌಲರ್​ನ ಬೌಲಿಂಗ್​ನಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದು, ಈ ಸಾಧನೆ ಮಾಡಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, ವಿವಿಎಸ್ ಲಕ್ಷ್ಮಣ್ ಮತ್ತು ಶಿಖರ್ ಧವನ್ ಏಕದಿನ ಪಂದ್ಯಗಳಲ್ಲಿ ಒಬ್ಬ ಬೌಲರ್​ನ ಬೌಲಿಂಗ್​ನಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರರಾಗಿದ್ದರು. ಲಕ್ಷ್ಮಣ್ 2004 ರಲ್ಲಿ ಇರ್ಫಾನ್ ಪಠಾಣ್ ಬೌಲಿಂಗ್​ನಲ್ಲಿ ಈ ಸಾಧನೆ ಮಾಡಿದ್ದರೆ, ಶಿಖರ್ ಧವನ್ 2018 ರಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಈ ಸಾಧನೆ ಮಾಡಿದ್ದರು. ಈಗ, 8 ವರ್ಷಗಳ ನಂತರ, ಅಂದರೆ 2026 ರಲ್ಲಿ, ರೋಹಿತ್ ಈ ಸಾಧನೆ ಮಾಡಿದ್ದಾರೆ.

IND vs AFG: 6 ರನ್​ಗೆ 4 ವಿಕೆಟ್..! ಕನ್ನಡಿಗ ಪ್ರಸಿದ್ಧ್ ದಾಳಿಗೆ ತತ್ತರಿಸಿದ ಅಫ್ಘನ್

ಪವರ್‌ಪ್ಲೇನಲ್ಲಿ ಪ್ರಸಿದ್ಧ್ ಅತ್ಯುತ್ತಮ ಪ್ರದರ್ಶನ

ಅಫ್ಘಾನಿಸ್ತಾನ ವಿರುದ್ಧದ ಪವರ್‌ಪ್ಲೇನಲ್ಲಿ ಪ್ರಸಿದ್ಧ್ ಕೃಷ್ಣ ಐದು ಓವರ್‌ಗಳನ್ನು ಬೌಲ್ ಮಾಡಿ ಕೇವಲ ಆರು ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಪ್ರಸಿದ್ಧ್ ಕೃಷ್ಣ ಏಕದಿನ ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದು ಇದೇ ಮೊದಲು. ಹಾಗೆಯೇ ಪವರ್‌ಪ್ಲೇನಲ್ಲಿ ಭಾರತೀಯ ಬೌಲರ್‌ನ ಎರಡನೇ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿರುವ ಮೊಹಮ್ಮದ್ ಸಿರಾಜ್, ಕೇವಲ ಏಳು ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Health Dept Recruitment 2026: ಆರೋಗ್ಯ ಇಲಾಖೆಯಲ್ಲಿ 800 ಹುದ್ದೆಗಳಿಗೆ ಅರ್ಜಿ ಆಹ್ವಾನ; ಗುತ್ತಿಗೆ ಆಧಾರದ ನೇಮಕಾತಿ – Kannada News | Karnataka Health Dept Recruitment 2026: 800 Lab Technician and Pharmacist Contract Posts

ಆರೋಗ್ಯ ಇಲಾಖೆಯಲ್ಲಿ ನೇಮಕಾತಿImage Credit source: hfwcom

ಬೆಂಗಳೂರು, ಜೂ.20: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಒಟ್ಟು 800 ಸ್ಥಾನಗಳ ಭರ್ತಿಗೆ ಗುತ್ತಿಗೆ ಆಧಾರದ ನೇಮಕಾತಿಗೆ ಅನುಮತಿ ನೀಡಿದೆ. ಈ ನೇಮಕಾತಿಯ ಅಡಿಯಲ್ಲಿ ಕಿರಿಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ (ಲ್ಯಾಬ್ ಟೆಕ್ನಿಷಿಯನ್) ಹುದ್ದೆಗಳ 400 ಸ್ಥಾನಗಳು ಹಾಗೂ ಫಾರ್ಮಸಿ ಅಧಿಕಾರಿಗಳ (ಫಾರ್ಮಾಸಿಸ್ಟ್) 400 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳ ಸೇವಾ ಅವಧಿಯು ಒಂದು ವರ್ಷ ಅಥವಾ ನೇರ ನೇಮಕಾತಿಯಿಂದ ಹುದ್ದೆ ಭರ್ತಿಯಾಗುವವರೆಗೆ ಮಾತ್ರ ಇರಲಿದ್ದು, ಇದಕ್ಕೆ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.

ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಫಾರ್ಮಾಸಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಡಿ.ಫಾರ್ಮಾ (D.Pharma) ಪೂರ್ಣಗೊಳಿಸಿರಬೇಕು ಮತ್ತು ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಕಿರಿಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಡಿಪ್ಲೊಮಾ ಇನ್ ಲ್ಯಾಬೊರೇಟರಿ ತಾಂತ್ರಿಕ (DMLT) ವಿದ್ಯಾರ್ಹತೆಯನ್ನು ಪಡೆದಿರಬೇಕಾಗುತ್ತದೆ. ಇನ್ನು ವಯೋಮಿತಿಗೆ ಸಂಬಂಧಿಸಿದಂತೆ, ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷದೊಳಗಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಸಾರ್ವಜನಿಕರ ಕುಂದು ಕೊರತೆ ನಿರ್ವಹಣೆಗೆ ಡಿಕೆಶಿ ದಿಟ್ಟ ಹೆಜ್ಜೆ: ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಸೇವೆ ಇಲಾಖೆ ಸ್ಥಾಪನೆ

ಆಯ್ಕೆ ವಿಧಾನ ಮತ್ತು ಸಮಿತಿ ರಚನೆ:

ಈ ಹುದ್ದೆಗಳ ಆಯ್ಕೆಯನ್ನು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಆಯಾ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು (DHO) ಸದಸ್ಯ ಕಾರ್ಯದರ್ಶಿಯಾಗಿದ್ದು, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರು, ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಆರ್‌ಸಿಹೆಚ್ ಅಧಿಕಾರಿಗಳು ಈ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.

ಹೆಚ್ಚು ಹುದ್ದೆಗಳಿರುವ ಪ್ರಮುಖ ಜಿಲ್ಲೆಗಳ ವಿವರ:

ಈ ನೇಮಕಾತಿಯಲ್ಲಿ ಜಿಲ್ಲಾವಾರು ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ಪ್ರಮುಖ ಜಿಲ್ಲೆಗಳ ವಿವರ ಇಂತಿದೆ: ಹಾಸನ ಜಿಲ್ಲೆಯಲ್ಲಿ 20 ಲ್ಯಾಬ್ ಟೆಕ್ನಿಷಿಯನ್ ಮತ್ತು 51 ಫಾರ್ಮಾಸಿಸ್ಟ್ ಹುದ್ದೆಗಳಿವೆ. ಮೈಸೂರಿನಲ್ಲಿ 23 ಲ್ಯಾಬ್ ಟೆಕ್ನಿಷಿಯನ್ ಮತ್ತು 30 ಫಾರ್ಮಾಸಿಸ್ಟ್, ಮಂಡ್ಯದಲ್ಲಿ 25 ಲ್ಯಾಬ್ ಟೆಕ್ನಿಷಿಯನ್ ಮತ್ತು 15 ಫಾರ್ಮಾಸಿಸ್ಟ್, ದಕ್ಷಿಣ ಕನ್ನಡದಲ್ಲಿ 22 ಲ್ಯಾಬ್ ಟೆಕ್ನಿಷಿಯನ್ ಮತ್ತು 12 ಫಾರ್ಮಾಸಿಸ್ಟ್ ಹುದ್ದೆಗಳಿವೆ. ಚಿಕ್ಕಮಗಳೂರಿನಲ್ಲಿ 14 ಮತ್ತು 29, ಚಾಮರಾಜನಗರದಲ್ಲಿ 28 ಮತ್ತು 22, ಉತ್ತರ ಕನ್ನಡದಲ್ಲಿ 27 ಮತ್ತು 23, ಕಲಬುರಗಿಯಲ್ಲಿ 13 ಮತ್ತು 26, ಶಿವಮೊಗ್ಗದಲ್ಲಿ 18 ಮತ್ತು 24, ತುಮಕೂರಿನಲ್ಲಿ 25 ಮತ್ತು 18 ಹುದ್ದೆಗಳಿವೆ. ಯಾದಗಿರಿಯಲ್ಲಿ 15 ಮತ್ತು 11, ಕೊಡಗಿನಲ್ಲಿ 13 ಮತ್ತು 11, ರಾಯಚೂರಿನಲ್ಲಿ 19 ಮತ್ತು 8, ಚಿಕ್ಕಬಳ್ಳಾಪುರದಲ್ಲಿ 23 ಮತ್ತು 7 ಹಾಗೂ ಚಿತ್ರದುರ್ಗದಲ್ಲಿ 1 ಲ್ಯಾಬ್ ಟೆಕ್ನಿಷಿಯನ್ ಮತ್ತು 24 ಫಾರ್ಮಾಸಿಸ್ಟ್ ಹುದ್ದೆಗಳು ಖಾಲಿ ಇವೆ.

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link