Category Archives: Blog

Your blog category

ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಹಾಡಿ ಜನ ಕುಡಿಯುತ್ತಿರೋದು ಕೊಳಚೆ ನೀರು! – Kannada News | Acute Water Crisis Plagues Chennangi Basavanahalli in Kodagu

ಮಡಿಕೇರಿ ಫೆಬ್ರವರಿ 05: ವಿರಾಜಪೇಟೆ ತಾಲೂಕಿನ ಚೆನ್ನಂಗಿ ಬಸವನಹಳ್ಳಿ ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಾವೇರಿಯ ತವರಾದ ಕೊಡಗಿನಲ್ಲಿ ಫೆಬ್ರವರಿ ತಿಂಗಳ ಮೊದಲ ವಾರದಲ್ಲೇ ನೀರಿನ ಹಾಹಾಕಾರ ಶುರುವಾಗಿದೆ. ಜೀವಜಲಕ್ಕಾಗಿ ಈ ಭಾಗದ ಆದಿವಾಸಿ ಕುಟುಂಬಗಳು ಕಾಡುಮೇಡು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಿನಿಂದ ಕೊಳಚೆ ನೀರನ್ನು ತಂದು ಕುಡಿಯಲು ಮತ್ತು ಇತರೆ ಅಗತ್ಯಗಳಿಗೆ ಬಳಸುತ್ತಿರುವುದರಿಂದ ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳು ಆಗಾಗ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಗ್ರಾಮದಲ್ಲಿರುವ ವಾಟರ್ ಟ್ಯಾಂಕ್ ಮೂರು ತಿಂಗಳಿಂದ ನೀರಿಲ್ಲದೆ ಒಡೆದು ಹೋಗಿದೆ. ಬೋರ್‌ವೆಲ್ ನೀರು ಪಡೆಯಲು ಗಂಟೆಗಟ್ಟಲೆ ಶ್ರಮಿಸಬೇಕಾಗಿದೆ. ಈ ಸಮಸ್ಯೆಗಳ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಬಿಸಿ: ಎಲ್ಲಿಂದ ಎಲ್ಲಿಗೆ ಎಷ್ಟಾಯ್ತು ಟಿಕೆಟ್ ಬೆಲೆ? – Kannada News | Namma Metro Fare Hike: Bengaluru Commuters Face Another 5% Price Rise

ಬೆಂಗಳೂರು, ಫೆ.5: ಬೆಂಗಳೂರಿನ ನಮ್ಮ ಮೆಟ್ರೋ (Bengaluru Metro) ಪ್ರಯಾಣಿಕರಿಗೆ ದರ ಹೆಚ್ಚಳದ ಶಾಕ್ ನೀಡಲಿದೆ. ಮೆಟ್ರೋ ಟಿಕೆಟ್ ದರವನ್ನು 5% ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಮೆಟ್ರೋ ನಿಗಮವು ಈ ಬಗ್ಗೆ ಸಿದ್ಧತೆ ನಡೆಸಿದೆ. ಕಳೆದ ವರ್ಷ ಫೆಬ್ರವರಿ 9 ರಂದು ದಾಖಲೆಯ 101.5% ರಷ್ಟು ದರ ಏರಿಕೆ ಮಾಡಲಾಗಿತ್ತು. ಈ ನಿರ್ಧಾರವು ಪ್ರಯಾಣಿಕರು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ನಂತರ, ಮೆಟ್ರೋ ನಿಗಮವು ದರವನ್ನು ಸುಮಾರು 70% ರಷ್ಟು ಇಳಿಕೆ ಮಾಡಿತ್ತು. ಆದರೆ, ಈಗ ಮತ್ತೊಮ್ಮೆ ಅದೇ ಫೆಬ್ರವರಿ 9 ರಂದು 5% ರಷ್ಟು ದರ ಹೆಚ್ಚಳಕ್ಕೆ ಮೆಟ್ರೋ ನಿಗಮ ಮುಂದಾಗಿದೆ.

ಈ ದರ ಏರಿಕೆಯ ಪ್ರಸ್ತಾವನೆಗೆ ಪ್ರಯಾಣಿಕರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಡೀ ಜೀವನವನ್ನು ತೆರಿಗೆ ಕಟ್ಟಿಕೊಂಡೇ ಬದುಕಬೇಕಾ? ಮಧ್ಯಮ ವರ್ಗದವರು, ಬಡ ವರ್ಗದವರು ಬದುಕೋಕೆ ಆಗೋದಿಲ್ಲವೇ?” ಎಂದು ಲಾಲ್ ಬಾಗ್ ಮೆಟ್ರೋ ಸ್ಟೇಷನ್ ಬಳಿ ಟಿವಿ9 ವರದಿಗಾರರ ಮುಂದೆ ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಪ್ರಸ್ತುತ ಪ್ರತಿಯೊಂದು ದಿನಸಿ ವಸ್ತುಗಳ ಬೆಲೆಯೂ ಏರಿಕೆಯಾಗಿರುವ ಸಂದರ್ಭದಲ್ಲಿ ಮೆಟ್ರೋ ದರ ಹೆಚ್ಚಳ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಒಂದು ಕಡೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಮತ್ತೊಂದು ಕಡೆ ಅಗತ್ಯ ಸೇವೆಗಳ ಬೆಲೆಗಳನ್ನು ಹೆಚ್ಚಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಎದ್ದಿವೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ, ಎಷ್ಟು ಹೆಚ್ಚಳ?

ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್:

ಕಳೆದ ಬಾರಿ ದರ ಹೆಚ್ಚಳದಿಂದಾಗಿ ಅನೇಕ ಪ್ರಯಾಣಿಕರು ಮೆಟ್ರೋ ಬಳಸುವುದನ್ನು ನಿಲ್ಲಿಸಿ, ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಆರಂಭಿಸಿದ್ದರು. ಇದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮತ್ತೆ ಹೆಚ್ಚಾಗಿತ್ತು. ವರದಿಗಳ ಪ್ರಕಾರ, ದೇಶದಲ್ಲೇ ಬೆಂಗಳೂರು ಮೆಟ್ರೋದ ದರ ಅತಿ ಹೆಚ್ಚಿದೆ. ಮೆಟ್ರೋ ನಿಗಮದ ಆಂತರಿಕ ಯೋಜನೆಯ ಪ್ರಕಾರ, ಪ್ರಯಾಣಿಕರು ಈ ಪ್ರಸ್ತಾವಿತ ದರ ಹೆಚ್ಚಳವನ್ನು ವಿರೋಧಿಸದಿದ್ದರೆ ಅದನ್ನು ಮುಂದುವರೆಸುವ ಮತ್ತು ವಿರೋಧಿಸಿದರೆ ನಿಲ್ಲಿಸುವ ಲೆಕ್ಕಾಚಾರವಿದೆ. ಸರ್ಕಾರವೂ ಕೂಡ ಇದೇ ರೀತಿಯ ಸೂಚನೆಯನ್ನು ಮೆಟ್ರೋ ನಿಗಮಕ್ಕೆ ನೀಡಿದೆ ಎನ್ನಲಾಗಿದೆ. ವೇತನ ಕಡಿಮೆ, ಕೆಲಸ ಕಡಿತಗೊಳ್ಳುತ್ತಿರುವ ಇಂತಹ ಸನ್ನಿವೇಶದಲ್ಲಿ ಮತ್ತೆ ಮತ್ತೆ ದರ ಏರಿಸಿದರೆ ಬದುಕುವುದು ಹೇಗೆ ಎಂದು ಪ್ರಯಾಣಿಕರು ಟಿವಿ9 ಕನ್ನಡ ಜತೆಗೆ ಹಂಚಿಕೊಂಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕದಿಯಲು ಹೋಗಿ ಸಿಕ್ಕಿಬಿದ್ದವನಿಂದ ತಾನು ಕಳ್ಳತನಕ್ಕೆ ಯತ್ನಿಸಿದ ಮನೆಯವರ ವಿರುದ್ಧವೇ ದೂರು! – Kannada News | First Time Thief Caught in Bengaluru, Complains of Assault by Victims

ಬೆಂಗಳೂರು, ಫೆಬ್ರವರಿ 05: ಕಳ್ಳತನ ಮಾಡಲು ಹೋದಾಗ ಅವರನ್ನು ಯಾರಾದ್ರೂ ನೋಡಿದ್ರೆ ಅವರ ಮೇಲೆಯೇ ಈ ಖದೀಮರು ಹಲ್ಲೆ ನಡೆಸಿ ಎಸ್ಕೇಪ್​​ ಆಗೋದನ್ನು ನಾವು ನೋಡಿದ್ದೇವೆ. ಇಲ್ಲವೇ ಸಿಕ್ಕಿಬಿದ್ದು ಜೈಲು ಸೇರಿರುವವರ ಕತೆ ಕೇಳಿದ್ದೇವೆ. ಆದರೆ ಸಿಲಿಕಾನ್​​ ಸಿಟಿ ಬೆಂಗಳೂರಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಫಸ್ಟ್​​ ಟೈಂ ಕಳ್ಳತನಕ್ಕೆ ಹೋದ ವ್ಯಕ್ತಿಯೊಬ್ಬ ಮನೆಯವರ ಬಳಿ ಸಿಕ್ಕಿಬಿದ್ದು ಪೆಟ್ಟು ತಿಂದು ಬಂದಿದ್ದಾನೆ. ಸಾಲದ್ದಕ್ಕೆ ಕದಿಯಲು ಹೋದ ವೇಳೆ ಆ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.

ಹೌದು, ಆಟೋ ಓಡಿಸಿಕೊಂಡು ಜೀವನ ಮಾಡ್ತಿದ್ದ ಅಸ್ಗರ್ ಖಾನ್‌‌ ಎಂಬಾತ ಕೆಟ್ಟ ಚಟಗಳಿಗೆ ದಾಸನಾಗಿದ್ದ. ಹೀಗಾಗಿ ದುಡಿಯುವ ಹಣ ಈತನ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಮತ್ತೊಂದೆಡೆ ಈತನ ಖದೀಮ ಸ್ನೇಹಿತರು ಕಳ್ಳತನ ಮಾಡಿ ಖರ್ಚಿಗೆ ದುಡ್ಡು ಮಾಡಿಕೊಳ್ಳುತ್ತಿದ್ದರು. ಇವರಿಂದಾಗಿ ಪ್ರೇರಿತನಾಗಿದ್ದ ಅಸ್ಗರ್​​ ತಾನೂ ಕಳ್ಳತನ ಮಾಡಿ ಹಣ ಮಾಡಬೇಕೆಂದು ನಿರ್ಧರಿಸಿದ್ದ. ಅದರಂತೆ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಕಬ್ಬಿಣ ಕದಿಯಲು ಕಾಂಪೌಂಟ್ ಹಾರಿದ್ದ. ಈ ವೇಳೆ ಇವರನ್ನು ಅಪಾರ್ಟ್​​ಮೆಂಟ್​​ನಲ್ಲಿ ವಾಸವಿದ್ದ ದಂಪತಿ ಗಮನಿಸಿದ್ದು, ಪ್ರಶ್ನೆ ಮಾಡಿದ್ದಾರೆ. ಇದರಿಂದ ಸಿಟ್ಟಾದ ಅಸ್ಗರ್​​ ದಂಪತಿ ಮೇಲೆ ಹಲ್ಲೆ ಮಾಡಿದ್ದಾನೆ. ಜಗಳ ಜೋರಾಗಿದ್ದೇ ತಡ ಅಕ್ಕ ಪಕ್ಕದ ಮನೆಯವರೂ ಸ್ಥಳಕ್ಕೆ ಬಂದಿದ್ದಾರೆ. ಜನ ಸೇರುತ್ತಿರೋದನ್ನು ಕಂಡು ಅಸ್ಗರ್​​ ಆಟೋದಲ್ಲಿ ಸ್ನೇಹಿತರು ಎಸ್ಕೇಪ್​​ ಆಗಿದ್ದರೆ, ಇತ್ತ ಸಿಕ್ಕಿಬಿದ್ದ ಅಸ್ಗರ್​​ಗೆ ಕಳ್ಳತನ ಮಾಡೋಕೆ ಬಂದಿದ್ಯಾ ಎಂದು ಸ್ಥಳೀಯರು ಮರದ ಪೀಸ್​​ನಿಂದ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್, ಇಒ ಹೇಳಿದ್ದೇನು?

ಅಲ್ಲಿಂದ ತಪ್ಪಿಸಕೊಂಡು ಬಂದ ಅಸ್ಗರ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಕಳ್ಳತನ ಮಾಡುವಾಗ ಹಲ್ಲೆ ಮಾಡಿದ್ರು ಎಂದು ಕಂಪ್ಲೇಟ್​​ನಲ್ಲಿ ಈತ ಉಲ್ಲೇಖಿಸಿದ್ದು, ಬಿಯರ್ ಬಾಟಲ್​​ನಿಂದ ಮಹಿಳೆ ಸೇರಿದಂತೆ ಇತರರ ಮೇಲೆ ತಾನು ಹಲ್ಲೆ ಮಾಡಿರುವುದನ್ನು ಕೂಡ ಒಪ್ಪಿಕೊಂಡಿದ್ದಾನೆ. ಸದ್ಯ ಅಸ್ಗರ್​​ನನ್ನು ಅರೆಸ್ಟ್ ಮಾಡಿರುವ ಸಂಪಿಗೆಹಳ್ಳಿ ಪೊಲೀಸರು, ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧನುಶ್ ಹುಟ್ಟೂರಿನ ವಿಷಯ ಬರುತ್ತಿದ್ದಂತೆ ನಾಚಿ ನೀರಾದ ಮೃಣಾಲ್ ಠಾಕೂರ್ – Kannada News | Mrunal Thakur Blushes as Dhanush’s Chennai is Mentioned Amidst Marriage Rumors

ಮೃಣಾಲ್ ಠಾಕೂರ್ ಹಾಗೂ ಧನುಶ್ (Dhanush) ವಿವಾಹ ಆಗುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿದೆ. ಆದರೆ, ಇದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಕೆಲವರು ಇದನ್ನು ಫೇಕ್ ಸುದ್ದಿ ಎನ್ನುತ್ತಿದ್ದಾರೆ. ಹೀಗಿರುವಾಗಲೇ ಮೃಣಾಲ್ ಠಾಕೂರ್ ಅವರಿಗೆ ಧನುಶ್ ಹುಟ್ಟೂರಾದ ಚೆನ್ನೈ ವಿಷಯ ಚರ್ಚೆಗೆ ಬಂದಿದೆ. ಆ ಬಳಿಕ ಮೃಣಾಲ್ ಠಾಕೂರ್ ಅವರು ಅಕ್ಷರಶಃ ನಾಚಿ ನೀರಾಗಿದ್ದಾರೆ. ಅಷ್ಟಕ್ಕೂ ವೇದಿಕೆ ಮೇಲೆ ನಡೆದಿದ್ದು ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮೃಣಾಲ್ ಠಾಕೂರ್ ಅವರು ‘ದೋ ದೀವಾನೆ ಸೆಹೆರ್ ಮೇ’ ಚಿತ್ರದಲ್ಲಿ ನಟಿಸಿದ್ದಾರೆ. ಇದು ಹಿಂದಿ ಸಿನಿಮಾ. ಈ ಚಿತ್ರದಲ್ಲಿ ಸಿದ್ದಾಂತ್ ಚತುರ್ವೇದಿ ನಟಿಸಿದ್ದಾರೆ. ಇಬ್ಬರೂ ಸಿನಿಮಾ ಪ್ರಚಾರ ಮಾಡಲು ವೇದಿಕೆ ಏರಿದ್ದರು. ಆಗ ಅಲ್ಲಿರುವವರು ‘ಚೆನ್ನೈ ವ್ಯಕ್ತಿ ನಿಮಗೆ ಪ್ರಶ್ನೆ ಕೇಳುತ್ತಿದ್ದರು’ ಎಂದು ಹೇಳಿದರು. ಸಿದ್ದಾಂತ್ ತಕ್ಷಣವೇ ಮೃಣಾಲ್ ಕಾಲೆಳೆದರು.

‘ಚೆನ್ನೈ ವ್ಯಕ್ತಿಯ ಪ್ರಶ್ನೆ ನನಗೋ ಅಥವಾ ಮೃಣಾಲ್​​​ಗೋ’ ಎಂದು ಸಿದ್ದಾಂತ್ ಕೇಳಿದರು. ಈ ವೇಳೆ ಮೃಣಾಲ್ ಅವರು, ‘ನಿಮಗೆ’ ಎಂದರು. ಆಗ ಮೃಣಾಲ್ ಹಾಗೂ ಸಿದ್ಧಾಂತ್ ಇಬ್ಬರೂ ನಕ್ಕರು. ವರದಿಗಾರರು, ‘ನಮಗೆ ಅರ್ಥವಾಯಿತು’ ಎಂದರು.

ಧನುಶ್ ಹುಟ್ಟೂರು ಚೆನ್ನೈ. ಅವರು ಈಗ ಅಲ್ಲಿಯೇ ವಾಸವಾಗಿದ್ದಾರೆ. ಧನುಶ್ ಹಾಗೂ ಮೃಣಾಲ್ ಮದುವೆ ಆಗುತ್ತಾರೆ ಎಂಬ ಮಾತು ಜೋರಾಗಿದೆ. ‘ಸನ್ ಆಫ್ ಸರ್ದಾರ್ 2’ ಪ್ರೀಮಿಯರ್ ವೇಳೆ ಧನುಶ್ ಹಾಗೂ ಮೃಣಾಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದು ಕೂಡ ಚರ್ಚೆಯ ಕೇಂದ್ರ ಬಿಂದು ಆಗಿತ್ತು.

ಇದನ್ನೂ ಓದಿ: ಕದ್ದುಮುಚ್ಚಿ ಶಾಸ್ತ್ರೋಕ್ತವಾಗಿ ಮದುವೆ ಆದ್ರಾ ಧನುಶ್-ಮೃಣಾಲ್ ಠಾಕೂರ್?

ಧನುಶ್ ಅವರು ಈ ಮೊದಲು ಐಶ್ವರ್ಯಾ ರಜನಿಕಾಂತ್​​​ನ ವಿವಾಹ ಆಗಿದ್ದರು. ಆ ಬಳಿಕ ಇವರು ವಿಚ್ಛೇದನ ಪಡೆದರು. ಈಗ ಮಗನ ಸಾಕೋ ಜವಾಬ್ದಾರಿ ಇಬ್ಬರ ಮೇಲೂ ಇದೆ. ಹೀಗಾಗಿ, ಎರಡನೇ ಮದುವೆ ಆದರೆ ಮಕ್ಕಳಿಗೆ ತೊಂದರೆ ಆಗುತ್ತದೆ ಎಂಬುದು ಧನುಶ್ ಆಲೋಚನೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಅವರು ಎರಡನೇ ಮದುವೆ ಆಗಲು ಸಿದ್ಧರಿಲ್ಲ ಎಂಬ ವರದಿಗಳೂ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಜನ ನಾಯಗನ್’ ಸಿನಿಮಾದಿಂದಾಗಿ 100 ಕೋಟಿ ನಷ್ಟ ಅನುಭವಿಸಿದ ಚಿತ್ರಮಂದಿರಗಳು – Kannada News | Due to Jana Nayagan movie release delay theaters loss more than 100 crore rs

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 10ಕ್ಕೆ ತೆರೆ ಕಾಣಬೇಕಿತ್ತು. ಆದರೆ ಸಿಬಿಎಫ್​​ಸಿ, ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದು ಅದರ ನಂತರ ನಡೆದ ಬೆಳವಣಿಗೆಗಳ ಕಾರಣದಿಂದಾಗಿ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು, ಸಿನಿಮಾದ ಬಿಡುಗಡೆ ಇನ್ನಷ್ಟು ತಡ ಆಗುವ ಸಾಧ್ಯತೆ ದಟ್ಟವಾಗಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂಬ ಅಭಿಪ್ರಾಯಗಳು ಸಹ ಅಲ್ಲಲ್ಲಿ ಹರಿದಾಡುತ್ತಿವೆ. ಸಿನಿಮಾ ಬಿಡುಗಡೆ ತಡವಾಗಿರುವುದರಿಂದ ನಿರ್ಮಾಪಕ ಕೆವಿಎನ್ ಭಾರಿ ನಷ್ಟ ಅನುಭವಿಸಿದ್ದಾರೆ, ಅನುಭವಿಸುತ್ತಿದ್ದಾರೆ. ಅವರ ಜೊತೆಗೆ ಚಿತ್ರಮಂದಿರಗಳಿಗೂ ಸಹ ಸುಮಾರು 100 ಕೋಟಿ ನಷ್ಟ ಉಂಟಾಗಿದೆ.

‘ಜನ ನಾಯಗನ್’ ಸಿನಿಮಾ ಜನವರಿ 10ಕ್ಕೆ ಬಿಡುಗಡೆ ಆಗಬೇಕಿತ್ತು. ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಇದೆನ್ನಲಾಗಿತ್ತು. ಬೆಂಗಳೂರು ಸೇರಿದಂತೆ ಹಲವೆಡೆ ಸಾವಿರಾರು ಮಂದಿ ಸಿನಿಮಾ ವೀಕ್ಷಿಸಲು ಮುಂಗಡವಾಗಿ ಟಿಕೆಟ್ ಬುಕಿಂಗ್ ಮಾಡಿಕೊಂಡಿದ್ದರು. ಆದರೆ ಹಠಾತ್ತನೇ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿತು. ಇದರಿಂದ ಚಿತ್ರಮಂದಿರಗಳಿಗೆ ಭಾರಿ ಹೊಡೆತ ಬಿದ್ದಿದೆ.

ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ತಮಿಳುನಾಡಿನ ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್ ಬಾಲಾ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ದಳಪತಿ ವಿಜಯ್ ಸಿನಿಮಾ ಬಿಡುಗಡೆ ತಡ ಆಗಿರುವುದರಿಂದ ತಮಿಳುನಾಡು ಚಿತ್ರಮಂದಿರಗಳಿಗೆ ಕನಿಷ್ಟ 100 ಕೋಟಿ ರೂಪಾಯಿ ನಷ್ಟವಾಗಿದೆ. ದಳಪತಿ ವಿಜಯ್ ಸಿನಿಮಾಗಳು ಇತ್ತೀಚೆಗಿನ ವರ್ಷಗಳಲ್ಲಿ ಚಿತ್ರಮಂದಿರಗಳಿಗೆ ಬಂಪರ್ ಲಾಭವನ್ನೇ ತಂದುಕೊಟ್ಟಿವೆ. ಅದರಲ್ಲೂ ‘ಜನ ನಾಯಗನ್’ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಭಾರಿ ಜನ ಪ್ರವಾಹವವನ್ನೇ ಚಿತ್ರಮಂದಿರಗಳು ಎದುರು ನೋಡುತ್ತಿದ್ದವು. ಅಡ್ವಾನ್ಸ್ ನೀಡಿ, ಚಿತ್ರಮಂದಿರಗಳನ್ನು ಅಣಿ ಮಾಡಿ ಕಾಯುತ್ತಿದ್ದವು. ಆದರೆ ಸಿನಿಮಾ ಬಿಡುಗಡೆಯೇ ಆಗಿಲ್ಲ’ ಎಂದಿದ್ದಾರೆ ಬಾಲ.

‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನಿರಾಕರಿಸಿರುವ ಪ್ರಕರಣವನ್ನು ಇದೀಗ ಹೈಕೋರ್ಟ್​​ನ ಏಕಸದಸ್ಯ ಪೀಠಕ್ಕೆ ವರ್ಗಾಯಿಸಾಗಿದೆ. ಆದರೆ ಅಲ್ಲಿ ಪ್ರಕರಣ ಮತ್ತಷ್ಟು ವಿಳಂಬವಾಗಲಿದೆ. ಇದೇ ಕಾರಣಕ್ಕೆ ಇದೀಗ ಸಿನಿಮಾದ ನಿರ್ಮಾಪಕರು, ಹೈಕೋರ್ಟ್​​ಗೆ ತಾವು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲಿದ್ದು, ಸಿನಿಮಾವನ್ನು ಸಿಬಿಎಫ್​​ಸಿ ಮೊದಲು ನಿರ್ಣಯಿಸಿದಂತೆ ರಿವ್ಯೂ ಕಮಿಟಿಗೆ ಕಳಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ಸಿನಿಮಾವನ್ನು ಮತ್ತೆ ರಿವ್ಯೂ ಕಮಿಟಿಗೆ ಕಳಿಸಿದಲ್ಲಿ, ಸಿಬಿಎಫ್​​ಸಿ ಹೇಳಿದ ಎಲ್ಲ ಕಟ್ ಮತ್ತು ಮ್ಯೂಟ್​​ಗಳನ್ನು ಚಿತ್ರತಂಡ ಒಪ್ಪಿಕೊಳ್ಳಬೇಕಿದೆ. ಆದರೆ ಇದರಿಂದ ಆಗುವ ಲಾಭವೆಂದರೆ ರಿವ್ಯೂ ಕಮಿಟಿಗೆ ಹೋದ ಸಿನಿಮಾಗಳಿಗೆ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಪ್ರಮಾಣ ಪತ್ರ ನೀಡಲೇ ಬೇಕಿರುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆ, ಆದೇಶಗಳು ವಿಳಂಬ ಆಗುವ ಭೀತಿ ಇರುವ ಕಾರಣಕ್ಕೆ ಇದೀಗ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸುವ ನಿರ್ಧಾರವನ್ನು ಚಿತ್ರತಂಡ ಮಾಡಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:35 pm, Thu, 5 February 26

Source link

ಬೆಂಗಳೂರು: ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್, ಟ್ರಾಫಿಕ್​ಗೆ ಸಿಗಲಿದೆ ಮುಕ್ತಿ – Kannada News | New Flyover Planned at Ibbaluru Junction in Bengaluru to Ease Traffic Congestion; DPR Preparation Begins

ಬೆಂಗಳೂರು, ಫೆಬ್ರವರಿ 5: ಬೆಂಗಳೂರಿನ ಇಬ್ಬಲೂರು ಜಂಕ್ಷನ್ ವಾಹನ ಸವಾರರಿಗೆ ನಿತ್ಯ ತಲೆನೋವಾಗಿ ಪರಿಣಮಿಸಿದೆ. ಬೆಳ್ಳಂದೂರು, ಸರ್ಜಾಪುರ, ಎಚ್‌ಎಸ್‌ಆರ್ ಲೇಔಟ್ ಮತ್ತು ಕಾಡುಬೀಸನಹಳ್ಳಿಯಂತಹ ಪ್ರದೇಶಗಳಿಂದ ಬರುವ ವಾಹನಗಳು ಇದೇ ಜಂಕ್ಷನ್ ಮೂಲಕ ಹಾದು ಹೋಗುವುದರಿಂದ ಇಲ್ಲಿ ನಿರಂತರವಾಗಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಅಸ್ತಿತ್ವದಲ್ಲಿರುವ ಮೇಲ್ಸೇತುವೆ ಕಿರಿದಾಗಿದ್ದು, ವಾಹನಗಳ ದಟ್ಟಣೆಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿ, ಪೂರ್ವ ಮತ್ತು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಹಾಗೂ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ, ಅಸ್ತಿತ್ವದಲ್ಲಿರುವ ಮೇಲ್ಸೇತುವೆಯ ಸಾಮರ್ಥ್ಯ ಕಡಿಮೆ ಇರುವುದರಿಂದ ಹೆಚ್ಚುವರಿ ಮೇಲ್ಸೇತುವೆಯನ್ನು ನಿರ್ಮಿಸಲು ಅಥವಾ ಈಗಿರುವ ಮೇಲ್ಸೇತುವೆಯನ್ನು ವಿಸ್ತರಿಸಲು ನಿರ್ಧಾರ ಕೈಗೊಂಡಿದ್ದಾರೆ. ಈ ಯೋಜನೆಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ್ ಟ್ಯಾಕ್ಸಿಗೆ ಇಂದು ಅಧಿಕೃತ ಚಾಲನೆ; ಸಹಕಾರಿ ತತ್ವದಲ್ಲಿ ಕ್ಯಾಬ್ ಚಲಾಯಿಸುವವರು ಚಾಲಕರಲ್ಲ, ಸಾರಥಿಗಳು – Kannada News | Official launch of Bharat Taxi, the cab service model that offers win win for both drivers and customers

ನವದೆಹಲಿ, ಫೆಬ್ರುವರಿ 5: ಸಹಕಾರಿ ತತ್ವದಲ್ಲಿ ರೂಪುಗೊಂಡಿರುವ ಕ್ಯಾಬ್ ಸರ್ವಿಸ್ ಕಂಪನಿಯಾದ ಭಾರತ್ ಟ್ಯಾಕ್ಸಿಯ (Bharat Taxi) ಸೇವೆ ಇಂದು ಗುರುವಾರ ಅಧಿಕೃತವಾಗಿ ಚಾಲನೆಗೊಳ್ಳುತ್ತಿದೆ. ಅಮುಲ್ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಬೆಂಬಲಿತವಾಗಿರುವ ಈ ಕ್ಯಾಬ್ ಸರ್ವಿಸ್ ಸದ್ಯ ದೆಹಲಿ ಎನ್​ಸಿಆರ್ (Delhi-NCR) ಪ್ರದೇಶದಲ್ಲಿ ಅಧಿಕೃತವಾಗಿ ಶುರುವಾಗಲಿದೆ. ಗುರುವಾರ ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಅವರು ಭಾರತ್ ಟ್ಯಾಕ್ಸಿ ಸರ್ವಿಸ್​ಗೆ ಚಾಲನೆ ಕೊಡಲಿದ್ದಾರೆ. ಈ ಮೂಲಕ ಕ್ಯಾಬ್ ಸರ್ವಿಸ್ ಕ್ಷೇತ್ರದಲ್ಲಿ ಓಲಾ, ಊಬರ್​ನ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಭಾರತ್ ಟ್ಯಾಕ್ಸಿ ಅಖಾಡಕ್ಕೆ ಇಳಿಯುತ್ತಿದೆ.

ಓಲಾ, ಊಬರ್​ಗಿಂತ ಭಾರತ್ ಟ್ಯಾಕ್ಸ್ ಹೇಗೆ ಭಿನ್ನ?

ಭಾರತ್ ಟ್ಯಾಕ್ಸಿ ಸಹಕಾರಿ ತತ್ವದಲ್ಲಿ ರೂಪುಗೊಂಡಿರುವ ಸೇವೆ. ಈ ಟ್ಯಾಕ್ಸಿ ಸರ್ವಿಸ್​ಗೆ ಸರ್ಕಾರದಿಂದ ನೇರ ಬೆಂಬಲ ಇಲ್ಲವಾದರೂ ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಎನ್ನುವ ಸಹಕಾರಿ ಸಂಸ್ಥೆ ಈ ಕ್ಯಾಬ್ ಸರ್ವಿಸ್ ಅನ್ನು ನಿರ್ವಹಿಸುತ್ತದೆ. ಈ ಸಹಕಾರಿ ಸಂಸ್ಥೆಯು ಲಾಭದ ಉದ್ದೇಶ ಹೊಂದಿಲ್ಲ ಎನ್ನುವುದು ಗಮನಾರ್ಹ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರ ಟೀಕೆ

ಭಾರತ್ ಟ್ಯಾಕ್ಸಿಯಲ್ಲಿ ಡ್ರೈವರ್​ಗಳೇ ಮಾಲೀಕರು. ಪ್ಲಾಟ್​ಫಾರ್ಮ್ ಶುಲ್ಕ ತೆರಬೇಕಿಲ್ಲ. ಓಲಾ, ಊಬರ್​ಗಳು ಚಾಲಕರಿಂದ ಶೇ. 30-40ರಷ್ಟು ಕಮಿಷನ್ ಪಡೆಯುತ್ತವೆ. ಭಾರತ್ ಟ್ಯಾಕ್ಸಿಯಲ್ಲಿ ಈ ಶುಲ್ಕ ಇರುವುದಿಲ್ಲ. ಹೀಗಾಗಿ, ಇದು ಕ್ಯಾಬ್ ಚಾಲಕರು ಹಾಗು ಗ್ರಾಹಕರು ಇಬ್ಬರಿಗೂ ವಿನ್-ವಿನ್ ಸ್ಥಿತಿ. ಕ್ಯಾಬ್ ಚಾಲಕರಿಗೆ ಹೆಚ್ಚಿನ ಆದಾಯ ಸಿಗುತ್ತದೆ. ಗ್ರಾಹಕರಿಗೆ ಬೆಲೆಯೂ ಸ್ವಲ್ಪ ಕಡಿಮೆ ಆಗುತ್ತದೆ.

ಭಾರತ್ ಟ್ಯಾಕ್ಸಿಯಲ್ಲಿ ಚಾಲಕರನ್ನು ಸಾರಥಿಗಳೆಂದು ಕರೆಯಲಾಗುತ್ತದೆ. ಈ ಕ್ಯಾಬ್ ಸರ್ವಿಸ್​ಗೆ ಸೇರಬಯಸುವ ಸಾರಥಿಗಳು ಕೆಲ ಷೇರುಗಳನ್ನು ಖರೀದಿಸಬಹುದು. ಕನಿಷ್ಠ ಐದು ಷೇರುಗಳನ್ನು ಖರೀದಿಸಬಹುದು. ಸುಮಾರು 500 ರೂ ಆಗುತ್ತದೆ. ಆದರೆ, ಸಂಸ್ಥೆಯು ವೃದ್ಧಿಸಿದಂತೆಲ್ಲಾ ಈ ಷೇರುಗಳಿಂದ ಚಾಲಕರಿಗೆ ಡಿವಿಡೆಂಡ್ ಸಿಗುತ್ತಾ ಹೋಗುತ್ತದೆ.

ಇದನ್ನೂ ಓದಿ: ವಿದೇಶದಿಂದ ಬರುವಾಗ ತರುವ ಎಷ್ಟು ಲಗೇಜಿಗೆ ಸುಂಕ ವಿನಾಯಿತಿ ಇರುತ್ತೆ? ಎಷ್ಟು ಆಭರಣ ತರಬಹುದು?

ಸದ್ಯ, ಭಾರತ್ ಟ್ಯಾಕ್ಸಿಯಲ್ಲಿ ಎಸಿ, ನಾನ್-ಎಸಿ ಕ್ಯಾಬ್​ಗಳು, ಎಕ್ಸ್ ಎಲ್ ಕ್ಯಾಬ್​ಗಳು, ಆಟೊ, ಬೈಕ್ ಟ್ಯಾಕ್ಸಿ ಸೇವೆ ಲಭ್ಯ ಇವೆ. ಇದರ ಆ್ಯಪ್​ನ ಇಂಟರ್​ಫೇಸ್ ಕೂಡ ಅತ್ಯಾಧುನಿಕವಾಗಿದೆ ಎನ್ನಲಾಗಿದೆ. 2025ರ ಡಿಸೆಂಬರ್​ನಲ್ಲಿ ದೆಹಲಿ ಮತ್ತು ಗುಜರಾತ್​ನಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿತ್ತು. ಸಾಕಷ್ಟು ರೈಡ್​ಗಳು ಈ ವೇಳೆ ಆಗಿವೆ. ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ಅಧಿಕೃತವಾಗಿ ಇದಕ್ಕೆ ಚಾಲನೆ ಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತು ವರ್ಷಗಳಲ್ಲಿ ದೇಶಾದ್ಯಂತ ಎಲ್ಲಾ ನಗರಗಳಲ್ಲಿ ಇದರ ಸೇವೆ ವಿಸ್ತರಿಸುವ ಉದ್ದೇಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿ ಆರ್​ಟಿಒ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಇಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತೆ!

ಕಲಬುರಗಿ, ಫೆಬ್ರವರಿ 5: ಕಲಬುರಗಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್ಟಿಓ) ನಡೆಯುತ್ತಿರುವ ಭ್ರಷ್ಟಾಚಾರವನ್ನು ‘ಟಿವಿ9’ ಸುದ್ದಿ ವಾಹಿನಿ ಬಯಲು ಮಾಡಿದೆ. ಆರ್​​ಟಿಒ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುತ್ತಿರುವುದು ಮತ್ತು ದಾಖಲೆಗಳನ್ನು ಅನಧಿಕೃತವಾಗಿ ವಿತರಿಸುತ್ತಿರುವುದು ಬಹಿರಂಗವಾಗಿದೆ. ಈ ಕಚೇರಿಯಲ್ಲಿ ಹಣ ನೀಡಿದರೆ ವಾಹನಗಳ ಆರ್​ಸಿ ಕಾರ್ಡ್‌ಗಳು ಸೇರಿದಂತೆ ಎಲ್ಲಾ ಸರ್ಕಾರಿ ದಾಖಲೆಗಳು ಸುಲಭವಾಗಿ ಲಭ್ಯವಾಗುತ್ತವೆ. ಅರ್ಹರಲ್ಲದವರಿಗೂ ಅಥವಾ ಅನಗತ್ಯ ವ್ಯಕ್ತಿಗಳಿಗೂ ಈ ಭೂಪರು ಸರ್ಕಾರಿ ದಾಖಲೆಗಳನ್ನು ನೀಡುತ್ತಾರೆ. ಲಂಚ ಪಡೆದು ಆರ್​​ಸಿ ಕಾರ್ಡ್‌ ವಿತರಿಸುವ ದೃಶ್ಯಾವಳಿಗಳನ್ನು ‘ಟಿವಿ9’ ಸೆರೆಹಿಡಿದಿದೆ. ಒಂದು ಆರ್​ಸಿ ಕಾರ್ಡ್‌ಗೆ 200 ರಿಂದ 300 ರೂಪಾಯಿ ಲಂಚ ಪಡೆದು ವಿತರಣೆ ಮಾಡಲಾಗುತ್ತಿರುವುದ ಬೆಳಕಿಗೆ ಬಂದಿದೆ. ಇದು ಸಾರಿಗೆ ಇಲಾಖೆಯ ಪಾರದರ್ಶಕತೆ ಮತ್ತು ದಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶಿಯರಿಗೆ ನಡುಕ ಶುರು: ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ – Kannada News | Karnataka Launches Special Drive To Identify Illegal Bangladeshi Immigrants

ಬೆಂಗಳೂರು, ಫೆಬ್ರವರಿ 05:  ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರವು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ. ಬಾಂಗ್ಲಾದೇಶ ಮತ್ತು ಇತರ ದೇಶಗಳಿಂದ ಅನಧಿಕೃತವಾಗಿ ನೆಲೆಸಿರುವ ವಿದೇಶಿಯರನ್ನು ಗುರುತಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಹೈಕೋರ್ಟ್‌ನ ಸೂಚನೆಯ ನಂತರ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಅನಧಿಕೃತವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಗರು ಮತ್ತು ವಿದೇಶಿಯರನ್ನು ಹುಡುಕಲು ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ, ಸುಮಾರು 370 ಜನರನ್ನು ಗಡೀಪಾರು ಮಾಡಲಾಗಿದೆ ಎಂದು ಸದನದಲ್ಲಿ ಉತ್ತರ ನೀಡಿದ್ದನ್ನೂ ಈ ವೇಳೆ ಅವರು ಉಲ್ಲೇಖಿಸಿದ್ದಾರೆ. ಎಫ್‌ಆರ್‌ಒ (ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ) ದಾಖಲೆಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಅನಧಿಕೃತ ವಲಸಿಗರು ಕಾಣಸಿಗದಿರುವುದರಿಂದ, ಸರ್ಕಾರವು ಈ ವಿಶೇಷ ಡ್ರೈವ್ ಮೂಲಕ ಅವರನ್ನು ಪತ್ತೆಹಚ್ಚಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟೀಚರ್ ತನ್ನ ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ರಸ್ತೆಯಲ್ಲಿ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ – Kannada News | Mainpuri Shocker: Student Attacks Teacher After Rejection, Biting Lips

ಮೈನ್​ಪುರಿ, ಫೆಬ್ರವರಿ 05: ನಾವು ಪ್ರೀತಿಸಿದವರು ಒಪ್ಪಿಕೊಳ್ಳಲಿಲ್ಲವೆಂದರೆ ಎಲ್ಲೇ ಇರಲಿ ಅವರು ಸುಖವಾಗಿರಲಿ ಎಂದು ಬಯಸುವುದು ನಿಜವಾದ ಪ್ರೀತಿ(Love). ಆದರೆ ಇಲ್ಲೊಬ್ಬ 12ನೇ ತರಗತಿ ವಿದ್ಯಾರ್ಥಿ ಶಿಕ್ಷಕಿ ತನ್ನ ಪ್ರೀತಿ ಮಾಡುವುದಿಲ್ಲ ಎಂದು ಗೊತ್ತಾದ ಬಳಿಕ ಆತ ರಸ್ತೆಯಲ್ಲೇ ಶಿಕ್ಷಕಿಯ ತುಟಿಯ ಕಚ್ಚಿ ತುಂಡರಿಸಿರುವ ಘಟನೆ ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ. ಶಿಕ್ಷಕಿ ತನ್ನ ಪ್ರೀತಿಯನ್ನು ಒಪ್ಪಿಕೊಂಡಿಲ್ಲವೆಂದು ಕ್ರೌರ್ಯದ ಎಲ್ಲಾ ಮಿತಿಗಳನ್ನು ಆತ ದಾಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಿಕ್ಷಕಿಯನ್ನು ಆಗ್ರಾಕ್ಕೆ ಕಳುಹಿಸಲಾಗಿದೆ, ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಆರೋಪಿ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೈನ್‌ಪುರಿಯ ಕೊಟ್ವಾಲಿ ಪ್ರದೇಶದಲ್ಲಿ, 12 ನೇ ತರಗತಿಯ ವಿದ್ಯಾರ್ಥಿ ಅಖಂಡ್ ಪ್ರತಾಪ್ ಸಿಂಗ್ ಕಾಲೇಜಿನಲ್ಲಿ ತನ್ನ ಶಿಕ್ಷಕಿಗೆ ಕಿರುಕುಳ ನೀಡಲು ಶುರು ಮಾಡಿದ್ದ. ಶಿಕ್ಷಕಿಯ ಕುಟುಂಬದವರು ದೂರು ನೀಡಿದ ಬಳಿಕ ಸ್ವಲ್ಪ ಸಮಯದವರೆಗೆ ನಡವಳಿಕೆ ಸಹಜವಾಗಿತ್ತು.

ಆದರೆ ವಿದ್ಯಾರ್ಥಿ ಮತ್ತೆ ಪೀಡಿಸಲು ಶುರು ಮಾಡಿದ್ದ. ಶಿಕ್ಷಕಿ ಹೋದ ಸ್ಥಳದಲ್ಲೆಲ್ಲಾ ಆತ ಹಿಂಬಾಲಿಸುತ್ತಿದ್ದ. ಆಕೆ ಅದನ್ನು ವಿರೋಧಿಸಿದಾಗ ಈತ ಭಯಾನಕ ಹೆಜ್ಜೆ ಇಟ್ಟಿದ್ದ. ಆಕೆ ಆ ಕಾಲೇಜನ್ನೇ ಬಿಟ್ಟು ಬೇರೆಡೆ ಕೆಲಸ ಮಾಡಲು ಶುರು ಮಾಡಿದ್ದಳು, ಆದರೆ ಅಲ್ಲಿಯೂ ಬಂದು ಆತ ತೊಂದರೆ ಕೊಡುತ್ತಿದ್ದ. ಆಕೆಯ ಎರಡೂ ತುಟಿಗಳನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ನಗರದ ಆಗ್ರಾ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ತನ್ನ ಸಹೋದರಿ ಪಾಠ ಮಾಡುತ್ತಿದ್ದಾಳೆ ಎಂದು ಶಿಕ್ಷಕಿಯ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಖಂಡ್ ಪ್ರತಾಪ್ ಸಿಂಗ್ ಎಂಬ 12 ನೇ ತರಗತಿಯ ವಿದ್ಯಾರ್ಥಿ ತನ್ನ ಸಹೋದರಿಯ ಮೇಲೆ ಕಣ್ಣಿಟ್ಟಿದ್ದು, ಆಗಾಗ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ. ಶಿಕ್ಷಕಿ ವಿದ್ಯಾರ್ಥಿಯ ತಾಯಿಗೆ ಈ ಬಗ್ಗೆ ದೂರು ನೀಡಿದ್ದರು ಆಗ ಇಂಥಾ ತಪ್ಪು ಮತ್ತೆ ಆಗುವುದಿಲ್ಲ ಎಂದು ತಾಯಿ ಭರವಸೆ ನೀಡಿದ್ದರು. ಆದರೂ ನಡವಳಿಕೆ ಬದಲಾಗಲಿಲ್ಲ.

ಮತ್ತಷ್ಟು ಓದಿ: ಪ್ರೀತಿ ಪ್ರೇಮದ ಹೆಸರಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ: ಲವ್ ಜಿಹಾದ್​​ಗೆ ಬಲಿಯಾದ ಹಿಂದೂ ಯುವತಿ ರೀಟಾ

ವಿದ್ಯಾರ್ಥಿಯ ಕಿರುಕುಳದಿಂದ ಬೇಸತ್ತ ಶಿಕ್ಷಕಿ ಆಗ್ರಾ ರಸ್ತೆಯ ಕಾಲೇಜನ್ನು ತೊರೆದು ಜ್ಯೋತಿ ರಸ್ತೆಯಲ್ಲಿರುವ ಮತ್ತೊಂದು ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದರು.ಆರೋಪಿ ಅಖಂಡ್ ಪ್ರತಾಪ್ ಧೈರ್ಯಗೆಡಲಿಲ್ಲ. ಹೊಸ ಕಾಲೇಜಿಗೆ ಹೋಗುವಾಗ ಶಿಕ್ಷಕಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಅನೈತಿಕ ಸಂಬಂಧಕ್ಕೆ ಒತ್ತಡ ಹೇರಿದ್ದ.

ಶಿಕ್ಷಕಿಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಫತೇ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link