ಆಸ್ಟ್ರೇಲಿಯಾ ತಂಡದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹಿಂದೆ ಸರಿದಿದ್ದಾರೆ. ಇದಕ್ಕೂ ಮುನ್ನ ಮ್ಯಾಕ್ಸ್ವೆಲ್ ಅವರನ್ನು ಪೇಶಾವರ್ ಝಲ್ಮಿ ಫ್ರಾಂಚೈಸಿಯು ಡೈರೆಕ್ಟನ್ ಸೈನಿಂಗ್ ಆಯ್ಕೆ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ ಎಂದು ವರದಿಯಾಗಿತ್ತು.
Your blog category
ಆಸ್ಟ್ರೇಲಿಯಾ ತಂಡದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹಿಂದೆ ಸರಿದಿದ್ದಾರೆ. ಇದಕ್ಕೂ ಮುನ್ನ ಮ್ಯಾಕ್ಸ್ವೆಲ್ ಅವರನ್ನು ಪೇಶಾವರ್ ಝಲ್ಮಿ ಫ್ರಾಂಚೈಸಿಯು ಡೈರೆಕ್ಟನ್ ಸೈನಿಂಗ್ ಆಯ್ಕೆ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ ಎಂದು ವರದಿಯಾಗಿತ್ತು.
ಶೈನ್ ಶೆಟ್ಟಿ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಕೂಡ ಮಾಡುತ್ತಿರುತ್ತಾರೆ. ಈಗ ಅವರ ಹೊಸ ವಿಡಿಯೋ ಗಮನ ಸೆಳೆದಿದೆ. ಮಕ್ಕಳಾಗದೆ ಕೊರಗುತ್ತಿರುವವರಿಗೆ ಈ ವಿಡಿಯೋ ಸಹಕಾರಿ ಆಗಲಿದೆ. ಕೊಚ್ಚಿಯಿಂದ ಎರಡೂವರೆ ಗಂಟೆ ದೂರದಲ್ಲಿರೋ ದೇವಸ್ಥಾನ ಇದು. ಮನ್ನರಸಲಾ (MANNARASALA) ಎಂಬುದು ದೇವಸ್ಥಾನದ ಹೆಸರು. ಇಲ್ಲಿ ಸೂಚಿಸಿದ ಒಂದು ಸೇವೆ ಕೊಟ್ಟರೆ ಮಕ್ಕಳಾಗುತ್ತದೆ ಎಂಬುದು ನಂಬಿಕೆ. ಮಗು ಆದ ಬಳಿಕ ಐದು ಬಾರಿ ಇಲ್ಲಿಗೆ ಭೇಟಿ ನೀಡಬೇಕಂತೆ. ಮಗು ಆಗದೆ ಇರುವವರು ಮಾತ್ರವಲ್ಲ ನಾಗದೋಷ ಇರುವವರಿಗೂ ಈ ಕ್ಷೇತ್ರ ಬೆಸ್ಟ್ ಎನ್ನುತ್ತಾರೆ ಶೈನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮುಂಬೈ, ಫೆಬ್ರವರಿ 05: ಮುಂಬೈನಲ್ಲಿರುವ ವಸತಿ ಕಟ್ಟಡದ ಲಿಫ್ಟ್ ಒಳಗೆ ಹೈಡ್ರೋಜನ್ ತುಂಬಿದ ಬಲೂನ್ಗಳು ಸ್ಫೋಟಗೊಂಡಿರುವ ವಿಡಿಯೋ ವೈರಲ್ ಆಗಿದೆ. ಬಲೂನ್‌ಗಳಿಂದ ತುಂಬಿದ ಪ್ಲಾಸ್ಟಿಕ್ ಚೀಲವನ್ನು ಹೊತ್ತುಕೊಂಡು ಒಬ್ಬ ವ್ಯಕ್ತಿ ಒಳಗೆ ಬರುವುದನ್ನು ಸಿಸಿ ಕ್ಯಾಮರಾದಲ್ಲಿ ಕಾಣಬಹುದು. ಮತ್ತೊಬ್ಬರು ಟ್ರಾಲಿ ಬ್ಯಾಗ್ ಹೊತ್ತು ಬಂದಿದ್ದರು. ಲಿಫ್ಟ್ ಬಾಗಿಲು ಹಾಕುತ್ತಿದ್ದಂತೆಯೇ ಬಲೂನ್ಗಳು ಸ್ಫೋಟಗೊಂಡಿವೆ. ಬೆಂಕಿ ಇಡೀ ಲಿಫ್ ಒಳಗೆ ಹರಡಿತ್ತು. ಎಲ್ಲರೂ ಲಿಫ್ಟ್ನಿಂದ ಹೊರಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಫೆಬ್ರವರಿ 05: ಮೆಟ್ರೋ ನಿಲ್ದಾಣದಲ್ಲಿ ಹಣ ಕೊಡಲಿಲ್ಲ ಎಂದು ಮಂಗಳಮುಖಿಯೊಬ್ಬರು ಯುವತಿ ಮುಖಕ್ಕೆ ಗುಟ್ಕಾದಿಂದ ಉಗಿದಿರುವ ವಿಡಿಯೋ ವೈರಲ್ ಆಗಿದೆ. ಯುವತಿ ವಿಡಿಯೋ ಮಾಡುತ್ತಿರುತ್ತಾರೆ, ಆಗ ಹಣ ಕೊಡು ಎಂದು ಆಕೆಗೆ ಆಶೀರ್ವಾದ ಮಾಡಲು ಮಂಗಳಮುಖಿ ಮುಂದೆಬರುತ್ತಾರೆ. ಆಗ ಆಕೆ ಕೊಡುವುದಿಲ್ಲ ಎಂದಿದ್ದಕ್ಕೆ ಮಂಗಳಮುಖಿಯರ ಶಾಪ ನಿನಗೆ ತಟ್ಟುತ್ತೆ ಎನ್ನುತ್ತಾರೆ. ಅದಕ್ಕೆ ಯುವತಿ ಗಾಬರಿಗೊಳ್ಳದೆ ನಿಮ್ಮ ಆಶೀರ್ವಾದ ಸಿಗದಿದ್ದರೆ ಏನಾಗುವುದಿಲ್ಲ ಮುಂದಕ್ಕೆ ಹೋಗಿ ಎನ್ನುತ್ತಾಳೆ. ಆ ಯುವತಿ ಕ್ಯಾಮೆರಾವನ್ನು ಎಸ್ಕಲೇಟರ್ ಬಳಿ ಇರಿಸಿ ವಿಷಯವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದಾಗ, ಮಂಗಳಮುಖಿ ಆಕೆಯ ಮೇಲೆ ಗುಟ್ಕಾ ಉಗುಳುತ್ತಾಳೆ. ಇದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಣವೀರ್ ಸಿಂಗ್ ಅವರ ‘ಧುರಂಧರ್’ (Dhurandhar) ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಯಶಸ್ಸನ್ನು ಗಳಿಸಿದ ನಂತರ, ಅದರ ಮುಂದುವರಿದ ಭಾಗದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಫೆಬ್ರವರಿ 3ರಂದು, ‘ಧುರಂಧರ್ 2’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಟೀಸರ್ನಲ್ಲಿ ಆಕ್ಷನ್ ನೋಡಿದ ನಂತರ, ಚಿತ್ರದ ಬಗ್ಗೆ ಕುತೂಹಲ ಉತ್ತುಂಗಕ್ಕೇರಿದೆ. ಹಳೆಯ ದೃಶ್ಯಗಳನ್ನೇ ಮತ್ತೆ ತೋರಿಸಿದ್ದಕ್ಕೆ ಕೆಲವರು ಬೇಸರ ಹೊರಹಾಕಿದ್ದಾರೆ. ‘ಧುರಂಧರ್ 2’ ಚಿತ್ರದ ಟೀಸರ್ ಬಗ್ಗೆ ಪ್ರಸಿದ್ಧ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬರೆದ ಪೋಸ್ಟ್ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.
‘ಧುರಂಧರ್ 2’ ಚಿತ್ರದ ಟೀಸರ್ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ, ‘ಇದು ಸೇಡು ತೀರಿಸಿಕೊಳ್ಳುವ ಮಾತಲ್ಲ, ಇದು ಆದಿತ್ಯ ಧರ್ ಅವರ ಕೋಪ. ಅವರ ದಾರಿಯಲ್ಲಿ ಬರುವವರ ಬಗ್ಗೆ ನನಗೆ ವಿಷಾದವಿದೆ. RIP (ಶಾಂತಿ ಸಿಗಲಿ)’ ಎಂದು ಪೋಸ್ಟ್ ಬರೆದಿದ್ದಾರೆ. ರಾಮ್ ಗೋಪಾಲ್ ವರ್ಮ ಅವರಿಗೆ ಯಶ್ ಮೇಲೆ ಯಾವುದೋ ಹಳೆಯ ಕೋಪ ಇರಬಹುದು ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.
ಮಾರ್ಚ್ 19 ರಂದು, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರದ ಜೊತೆಗೆ, ಯಶ್ ಅವರ ಹೆಚ್ಚು ಚರ್ಚಿಸಲ್ಪಟ್ಟ ‘ಟಾಕ್ಸಿಕ್’ ಕೂಡ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆರ್ಜಿವಿ ಈ ಪೋಸ್ಟ್ ಮೂಲಕ, ಮುಂಬರುವ ‘ಟಾಕ್ಸಿಕ್’ ಚಿತ್ರದ ನಿರ್ಮಾಪಕರಿಗೆ ಅವರು ದೊಡ್ಡ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
This is not REVENGE , it’s @AdityaDharFilms RAMPAGE..I pity the ones who will come in it’s way .. R I P https://t.co/iCZpl70wTm
— Ram Gopal Varma (@RGVzoomin) February 3, 2026
‘ಧುರಂಧರ್’ ಚಿತ್ರದ ಮೊದಲ ಭಾಗವು ಹಿಂದಿಯಲ್ಲಿ ಮಾತ್ರ ಬಿಡುಗಡೆಯಾಯಿತು. ಈ ಚಿತ್ರವು ಹಿಂದಿಯಲ್ಲಿ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಸುವ ಮೂಲಕ ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಚಿತ್ರದ ದಾಖಲೆಯನ್ನು ಮುರಿಯಿತು. ಈಗ ‘ಧುರಂಧರ್ 2’ ಚಿತ್ರವು ಪ್ಯಾನ್-ಇಂಡಿಯಾ, ಅಂದರೆ ಹಿಂದಿಯಲ್ಲಿ ಮತ್ತು ದಕ್ಷಿಣ ಭಾಷೆಗಳಾದ ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಆದ್ದರಿಂದ, ಈ ಚಿತ್ರವು ಯಶ್ ಅವರ ‘ಟಾಕ್ಸಿಕ್’ ಚಿತ್ರಕ್ಕೆ ದೊಡ್ಡ ಸ್ಪರ್ಧೆಯಾಗಲಿದೆ.
ಇದನ್ನೂ ಓದಿ: ‘ಧುರಂಧಂರ್ 2’ ಟೀಸರ್ 9 ಮಿಲಿಯನ್, ‘ಟಾಕ್ಸಿಕ್’ ಟೀಸರ್ 97 ಮಿಲಿಯನ್; ಅಜಗಜಾಂತರ ವ್ಯತ್ಯಾಸ
‘ಧುರಂಧರ್’ ವಿಶ್ವಾದ್ಯಂತ 1300 ಕೋಟಿ ರೂ.ಗಳಷ್ಟು ಹಣವನ್ನು ಸಂಗ್ರಹಿಸಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್. ಮಾಧವನ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ರಣವೀರ್ ಅವರ ವೃತ್ತಿಜೀವನದ ಅತಿದೊಡ್ಡ ಮತ್ತು ಬ್ಲಾಕ್ಬಸ್ಟರ್ ಚಿತ್ರವಾಗಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಹಾಸನ, ಫೆ. 5: ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನಡೆದ ಘಟನೆಗೆ ಭಾರೀ ಅಕ್ರೋಶ ವ್ಯಕ್ತವಾಗಿದೆ. ಹತ್ತು ವರ್ಷಗಳ ಸುಂದರ ಸಂಸಾರ, ಕೋಟಿ ಕೋಟಿ ಆಸ್ತಿ ಮತ್ತು ಮುದ್ದಾದ ಮಗುವಿದ್ದರೂ ಸಹ ಪತ್ನಿಗೆ ಹಿಂಸೆ ನೀಡಿರುವ ಘಟನೆಯೊಂದು ಹಾಸನದಲ್ಲಿ ಬೆಚ್ಚಿ ಬೀಳಿಸಿದೆ. ನಿಧಾ ಮತ್ತು ಮೊಹಮ್ಮದ್ ಉಮೇರ್ಗೆ ಮದುವೆಯಾಗಿ (Hassan domestic dispute) 10 ವರ್ಷಗಳಾಗಿದ್ದು, ಒಂದು ಗಂಡು ಮಗುವಿದೆ. ಪತಿ ಉಮೇರ್ ತನಗೆ ತಲಾಖ್ ನೀಡಲು ಮುಂದಾಗಿದ್ದಾನೆ ಮತ್ತು ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಈ ಕಾರಣಕ್ಕಾಗಿ ತನ್ನನ್ನು ಮನೆಯೊಳಗೆ ಕೂಡಿಹಾಕಿ ಮೂರು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ಪತ್ನಿ ನಿಧಾ ಆರೋಪಿಸಿದ್ದಾಳೆ. ಇದೀಗ ಈ ಗಂಡ -ಹೆಂಡತಿಯ ಜಗಳ ಬೀದಿಗೆ ಬಂದಿದೆ.
ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿರುವ ಸ್ವಂತ ಬಿಲ್ಡಿಂಗ್ನ ಬಾಲ್ಕನಿಯಿಂದಲೇ ತನಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಲ್ಲರಿಗೂ ಕೇಳುವಂತೆ ಕೂಗಿ ಕೂಗಿ ನಿಧಾ ಹೇಳಿದ್ದಾಳೆ. ಇದನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೆ.ಆರ್.ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಪೊಲೀಸರಿಗೆ ಈ ಗಂಡ -ಹೆಂಡತಿ ಜಗಳವನ್ನು ಇತ್ಯರ್ಥ ಮಾಡುವುದು ಅಷ್ಟೊಂದು ಸುಲಭ ಇರಲಿಲ್ಲ. ಹಾಗೂ ಮನೆಯ ಒಳಗೆ ಹೋಗಿ ಆಕೆಯನ್ನು ಕಾಪಾಡಲು ಕೂಡ ಆಗಿಲ್ಲ. ಪೊಲೀಸರು ಬಾಲ್ಕನಿಯಿಂದ ಎಲ್ಲವನ್ನು ವಿಚಾರಿಸಿದ್ದಾರೆ. ಆಕೆ ನನ್ನ ಗಂಡ ಮತ್ತೊಂದು ಮಹಿಳೆ ಜತೆಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳುತ್ತಿದ್ದಾಳೆ. ಆಕೆಯ ಮನೆಯವರು ಕೂಡ ಮೊಹಮ್ಮದ್ ಉಮೇರ್ ಸರಿ ಇಲ್ಲ ಎಂದು ಹೇಳಿದ್ದಾರೆ. ಮತ್ತೊಂದು ಕಡೆ ಮೊಹಮ್ಮದ್ ಉಮೇರ್ ಮನೆಯವರು, ನಿಧಾ ಸರಿ ಇಲ್ಲ, ಅವಳೇ ಬೀದಿ ರಂಪಾಟ ಮಾಡುತ್ತಿದ್ದಾಳೆ ಎಂದು ದೂರುತ್ತಿದ್ದಾರೆ. ಇದೀಗ ಈ ಪ್ರಕರಣ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಪೊಲೀಸರ ಮುಂದೆಯೇ ಎರಡೂ ಕುಟುಂಬದ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಾ ಬೀದಿಯಲ್ಲಿ ಹೈಡ್ರಾಮ ನಡೆಸಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: ಹೊತ್ತಿ ಉರಿದ ಸರ್ವೀಸ್ ಸೆಂಟರ್, 1 ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಕಾರುಗಳು ಭಸ್ಮ
ಮೊಹಮ್ಮದ್ ಉಮೇರ್ ಮಟನ್ ಚಿಕನ್ ವ್ಯಾಪಾರ ಮಾಡಿ ಸ್ವಂತ ಬಿಲ್ಡಿಂಗ್ ಕಟ್ಟಿಸಿ, ಕೋಟಿ ಕೋಟಿ ಹಣ ಮಾಡಿದ್ದಾನೆ.ಮುದ್ದಾದ ಹೆಂಡತಿ, ಮಗು ಖುಷಿಯಾದ ಸಂಸಾರ ನಡೆಸುತ್ತಿದ್ದ, ಆದರೆ ಇದರ ಮಧ್ಯೆ ಮತ್ತೊಂದು ಮಹಿಳೆ ಎಂಟ್ರಿ ಆಗಿರುವ ಶಂಕೆ ವ್ಯಕ್ತವಾಗಿದೆ. ತನ್ನನ್ನು ರೂಮ್ನಲ್ಲಿ ಬಂಧನ ಮಾಡಿ, ಚಿತ್ರಹಿಂಸೆ ನೀಡಿದ್ದಾನೆ ಎಂದು ಪತ್ನಿಯ ಆರೋಪವಾಗಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ನನ್ನನ್ನೂ ಮೂರು ದಿನದಿಂದ ಬಂಧನದಲ್ಲಿ ಇಟ್ಟಿದ್ದಾರೆ. ನನ್ನ ಮನೆಯವರಿಗೆ ಫೋನ್ ಮಾಡಿ, ಊಟ, ತಿಂಡಿ ತರಿಸಿಕೊಳ್ಳುತ್ತಿದ್ದೇ, ಗಂಡನಿಗೆ ಫೋನ್ ಮಾಡಿದ್ರೆ, ಈಗ ಬರ್ತೆನೆ, ಮತ್ತೆ ಬರ್ತೆನೆ ಎಂದು ಹೇಳುತ್ತಾರೆ. ನೀನು ನನಗೆ ತಲಾಖ್ ನೀಡು ಎಂದು ಪ್ರತಿದಿನ ಒತ್ತಾಯ ಮಾಡುತ್ತಾರೆ. ಯಾಕೆ ತಲಾಖ್ ನೀಡಬೇಕು ಎಂದು ಕೇಳಿದ್ರೆ, ನನಗೆ ಬೇರೆ ಸಂಬಂಧ ಇದೆ ಎಂದು ಹೇಳುತ್ತಾರೆ. ಆದರೆ ನನಗೆ ಗಂಡ ಬೇಕು ಎಂದು ಮಹಿಳೆ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಬಕಾರಿ ಇಲಾಖೆಯ ಮತ್ತೊಂದು ಭ್ರಷ್ಟಾಚಾರ ಬಯಲುImage Credit source: tv9
ಬೆಂಗಳೂರು, ಫೆಬ್ರವರಿ 5: ಅಬಕಾರಿ ಇಲಾಖೆಯ (Excise Department) ಬಿಯುಡಿ-3 ವಿಭಾಗದ ಡೆಪ್ಯುಟಿ ಕಮಿಷನರ್ ಕೆಎಸ್ ಮುರುಳಿ ಮನಸೋ ಇಚ್ಚೆ ಸಿಎಲ್-7 ಪರವಾನಗಿ ನೀಡಿರುವ ಆರೋಪ ಕೇಳಿ ಬಂದಿದೆ. ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ಗೆ ನೀಡುವ ಲೈಸೆನ್ಸ್ ಸಿಎಲ್- 7. ನಿಯಮ ಪ್ರಕಾರ ಶಾಲಾ ಆವರಣದಲ್ಲಿ ಅಥವಾ ಶಾಲೆ ಎದುರಿಗೆ ಪರವಾನಗಿ ಕೊಡುವಂತಿಲ್ಲ. ಆದರೆ, ಶಾಲೆ ಎದುರು ಶಾಪ್ ತೆರೆಯಲು ಮುರುಳಿ ಸಿಎಲ್-7 ಲೈಸೆನ್ಸ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 30×40 ಜಾಗಕ್ಕೂ ಸಿಎಲ್- 7 ಲೈಸೆನ್ಸ್ ನೀಡಿದ್ದು, ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 60 ಸಿಎಲ್-7 ಪರವಾನಗಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ (Lokayukta) ಈಗಾಗಲೇ ದೂರು ಸಲ್ಲಿಕೆಯಾಗಿದೆ.
ಇಡೀ ರಾಜ್ಯದಲ್ಲೇ 24 ತಿಂಗಳ ಅವಧಿಯಲ್ಲಿ ಅತಿಹೆಚ್ಚು ಸಿಎಲ್-7 ಲೈಸೆನ್ಸ್ ನೀಡಿರುವ ಡೆಪ್ಯುಟಿ ಕಮಿಷನರ್ ಎಂಬ ಆರೋಪವೂ ಮುರುಳಿ ಮೇಲಿದೆ. 60 ಸಿಎಲ್-7 ಗಳ ಪೈಕಿ, 3 ಸಿಎಲ್-7 ಗಳಿಗೆ ಲೈಸೆನ್ಸ್ ನೀಡಬಾರದು ಎಂಬ ದೂರುಗಳಿದ್ದರೂ ಪರಿಗಣಿಸಿಲ್ಲ. ಅಚ್ಚರಿಯೆಂದರೆ, ಈ ಹಿಂದೆ ಇದೆ ಮುರುಳಿ ಅವುಗಳನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ.
ಇನ್ನು ಸಿಎಲ್- 7 ಲೈಸೆನ್ಸ್ ಪಡೆಯಲು ಮಾಲೀಕರು ಸರಿಯಾಗಿ ದಾಖಲೆಯನ್ನು ಕೂಡ ನೀಡಿಲ್ಲ. ಆದರೂ ಮುರಳಿ ಪರವಾನಗಿ ನೀಡಿದ್ದಾರೆ ಎಂಬ ಆರೋಪವಿದೆ.
ಬೆಂಗಳೂರಿನಿಂದ ತುಮಕೂರಿಗೆ ಸದ್ಯದಲ್ಲೇ ಮುರುಳಿ ವರ್ಗಾವಣೆ ಆಗುವ ಸಾಧ್ಯತೆಯಿದ್ದು, ಎಲ್ಲಾ ಲೈಸೆಸ್ಗಳನ್ನು ನೀಡಯೇ ಹೋಗಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ ಎಂಬುದು ತಿಳಿದುಬಂದಿದೆ.
ಕಳೆದ ಡಿಸೆಂಬರ್ ವರೆಗೆ ಮಾತ್ರ 60 ಸಿಎಲ್-7 ಲೈಸೆನ್ಸ್ ನೀಡಿದ್ದು ಈ ವರ್ಷ ಜನವರಿಯಲ್ಲಿ 10 ಕ್ಕೂ ಹೆಚ್ಚು ಲೈಸೆನ್ಸ್ ನೀಡಿದ್ದಾರೆ ಎಂದು ದೂರುದಾರ ಬಿಎಸ್ ಗೌಡ ಆರೋಪ ಮಾಡಿದ್ದಾರೆ.
ಡೆಪ್ಯುಟಿ ಕಮಿಷನರ್ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ‘ಟಿವಿ9’ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಈ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರದ ದೊಂಬರಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ 40 ರಿಂದ 50 ಮೀಟರ್ ದೂರದಲ್ಲಿ ಸಿಎಲ್-7 ಗೆ ಅನುಮತಿ ನೀಡಿದ್ದು ತಿಳಿದು ಬಂದಿದೆ. ನಿಯಮಗಳ ಪ್ರಕಾರ ಶಾಲಾ-ಕಾಲೇಜುಗಳ ಆವರಣದ 100 ಮೀಟರ್ ಒಳಗೆ ಮದ್ಯಮಾರಾಟ ಮಾಡಲು ಅವಕಾಶವಿಲ್ಲ. ಆದರೂ ಲೈಸೆನ್ಸ್ ನೀಡಲಾಗಿದೆ. ಈ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಇದ್ದು, 70 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆಗೆ ಆದೇಶ: ಆರ್ ಬಿ ತಿಮ್ಮಾಪುರ, ಅಬಕಾರಿ ಸಚಿವ
ಒಟ್ಟಿನಲ್ಲಿ, ಹಣಕ್ಕಾಗಿ ಅಬಕಾರಿ ಇಲಾಖೆ ಈ ಡೆಪ್ಯುಟಿ ಕಮಿಷನರ್ ಲಂಗುಲಗಾಮಿಲ್ಲದೆ ಪರವಾನಗಿ ನೀಡಿದ್ದು, ಈ ಬಗ್ಗೆ ಸರಿಯಾಗಿ ತನಿಖೆಯಾಗಬೇಕಿದೆ.
ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ವಿಷ್ಣುವರ್ಧನ್ (Vishnuvardhan) ಕೂಡ ಒಬ್ಬರು. ಅವರು ಕನ್ನಡವನ್ನು ಉತ್ತಮವಾಗಿ ಮಾತನಾಡುತ್ತಿದ್ದರು. ಅವರು ತಮ್ಮ ಶ್ರೇಷ್ಠ ಗುಣ ಹಾಗೂ ವ್ಯಕ್ತಿತ್ವದಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕ ಹೀರೋಗಳು ಸಾಗುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಕಿಚ್ಚ ಸುದೀಪ್ ಅವರು ವಿಷ್ಣುಗೆ ದೊಡ್ಡ ಅಭಿಮಾನಿ. ವಿಷ್ಣು ಕನ್ನಡದ ಜೊತೆಗೆ ಇಂಗ್ಲಿಷ್ ಕೂಡ ಉತ್ತಮವಾಗಿ ಮಾತನಾಡುತ್ತಿದ್ದರು.
ವಿಷ್ಣುವರ್ಧನ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ‘ನಾನು ಮೈಸೂರಿನಲ್ಲಿ ಶೂಟ್ ಮಾಡುತ್ತಿದ್ದೆ. ಯಜಮಾನ ಸಿನಿಮಾ ನೋಡಿದೆ ಎಂದು ರಾಜ್ಕುಮಾರ್ ಹೇಳಿದ್ದರು. ಸಿನಿಮಾ ನೋಡಿ ರಾಜ್ಕುಮಾರ್ ಶಾಕ್ ಆಗಿದ್ದರು. ನಿಮ್ಮನ್ನು ಭೇಟಿ ಮಾಡಬೇಕು ಎಂದು ರಾಜ್ಕುಮಾರ್ ಹೇಳಿದ್ದರು’ ಎಂದು ವಿಷ್ಣುವರ್ಧನ್ ಹೇಳಿದ್ದರು. ಇದನ್ನು ಅವರು ಇಂಗ್ಲಿಷ್ ಅಲ್ಲಿ ಹೇಳಿದ್ದರು.
‘ಬಸವಣ್ಣ, ಕನಕದಾಸ, ಪುರದಂರ ದಾಸ, ಕೃಷ್ಣದೇವರಾಯ ಅವರನ್ನು ನೋಡಿಲ್ಲ. ರಾಜ್ಕುಮಾರ್ ಅವರು ಈ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದರು. ರಾಜ್ಕುಮಾರ್ ಹಲವು ವರ್ಷಗಳ ಕಾಲ ಜನಪ್ರಿಯತೆ ಪಡೆದು ಒಂದು ಕಡೆ ನಿಂತಿದ್ದರು’ ಎಂದು ವಿಷ್ಣುವರ್ಧನ್ ಅವರು ವಿವರಿಸಿದ್ದರು. ವಿಷ್ಣು ಹಾಗೂ ರಾಜ್ ಸಂಬಂಧ ಆ ರೀತಿಯಲ್ಲಿ ಇತ್ತು.
ವಿಷ್ಣುವರ್ಧನ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜ್ನಲ್ಲಿ ಡಿಗ್ರೀ ಪಡೆದುಕೊಂಡಿದ್ದಾರೆ. ಅವರು ಓದು ಮುಗಿಸಿ ನಂತರ ನಟನೆಗೆ ಬಂದರು. ನಟನೆಯಲ್ಲಿ ಅವರು ಹಲವು ವರ್ಷಗಳ ಕಾಲ ಮೆರೆದರು. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದರು.
ಇದನ್ನೂ ಓದಿ: ವಿಷ್ಣುವರ್ಧನ್ಗೆ ನಾನ್ ವೆಜ್ ತಿನ್ನೋದನ್ನು ಕಲಿಸಿದ್ದು ಯಾರು? ಆರು ತಿಂಗಳು ತಿನ್ನದೇ ಇರುತ್ತಿದ್ದಿದ್ದೇಕೆ?
ರಾಜ್ಕುಮಾರ್ ಹಾಗೂ ವಿಷ್ಣುಗೆ ವೈಮನಸ್ಸು ಇದೆ ಎಂಬ ಮಾತು ಮೊದಲಿನಿಂದಲೂ ಚರ್ಚೆಯಲ್ಲಿರುವ ವಿಷಯ. ಆದರೆ, ಇದನ್ನು ಈ ನಟರು ಅಲ್ಲಗಳೆದಿದ್ದಾರೆ. ಅನೇಕ ವೇದಿಕೆ ಮೇಲೆ ಅವರುಗಳು ಪರಸ್ಪರ ಒಬ್ಬರನ್ನೊಬ್ಬರು ಹೊಗಳಿದ ಉದಾಹರಣೆ ಇದೆ ಎಂದೇ ಹೇಳಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅಂಡರ್-19 ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ (vaibhav suryavanshi) ಆರ್ಭಟಿಸಿದ್ದಾರೆ. ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 50 ಓವರ್ಗಳಲ್ಲಿ 310 ರನ್ ಕಲೆಹಾಕಿದ್ದರು.
ಈ ಗುರಿ ಬೆನ್ನತ್ತಲು ಆಗಮಿಸಿದ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಸಿಡಿಲಬ್ಬರ ಶುರು ಮಾಡಿದ ವೈಭವ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ 33 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 68 ರನ್ ಚಚ್ಚಿದರು.
ಈ ನಾಲ್ಕು ಸಿಕ್ಸರ್ಗಳೊಂದಿಗೆ ಅಂಡರ್-19 ವಿಶ್ವಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಸಂಜು ಸ್ಯಾಮ್ಸನ್ ಹೆಸರಿನಲ್ಲಿತ್ತು.
2014 ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ 6 ಪಂದ್ಯಗಳಲ್ಲಿ ಒಟ್ಟು 12 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಕಿರಿಯರ ವಿಶ್ವಕಪ್ ಪಂದ್ಯಾವಳಿಯ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು.
ಇದೀಗ ವೈಭವ್ ಸೂರ್ಯವಂಶಿ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ 6 ಇನಿಂಗ್ಸ್ ಆಡಿರುವ ವೈಭವ್ ಒಟ್ಟು 15 ಸಿಕ್ಸರ್ ಬಾರಿಸಿದ್ದಾರೆ. ಈ ಮೂಲಕ ಅಂಡರ್-19 ವಿಶ್ವಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಭರ್ಜರಿ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.