Category Archives: Blog

Your blog category

ಅಬಕಾರಿ ಇಲಾಖೆಯ ಮತ್ತೊಂದು ಭ್ರಷ್ಟಾಚಾರ ಬಯಲು: ಲೋಕಾಯುಕ್ತಕ್ಕೆ ಸಲ್ಲಿಕೆಯಾಯ್ತು ದೂರು – Kannada News | Excise Department Corruption Exposed: Complaint Filed with Lokayukta Over Illegal CL 7 Licences

ಅಬಕಾರಿ ಇಲಾಖೆಯ ಮತ್ತೊಂದು ಭ್ರಷ್ಟಾಚಾರ ಬಯಲುImage Credit source: tv9

ಬೆಂಗಳೂರು, ಫೆಬ್ರವರಿ 5: ಅಬಕಾರಿ ಇಲಾಖೆಯ (Excise Department) ಬಿಯುಡಿ-3 ವಿಭಾಗದ ಡೆಪ್ಯುಟಿ ಕಮಿಷನರ್ ಕೆಎಸ್ ಮುರುಳಿ ಮನಸೋ ಇಚ್ಚೆ ಸಿಎಲ್-7 ಪರವಾನಗಿ ನೀಡಿರುವ ಆರೋಪ ಕೇಳಿ ಬಂದಿದೆ. ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್​ಗೆ ನೀಡುವ ಲೈಸೆನ್ಸ್ ಸಿಎಲ್- 7. ನಿಯಮ ಪ್ರಕಾರ ಶಾಲಾ ಆವರಣದಲ್ಲಿ ಅಥವಾ ಶಾಲೆ ಎದುರಿಗೆ ಪರವಾನಗಿ ಕೊಡುವಂತಿಲ್ಲ. ಆದರೆ, ಶಾಲೆ ಎದುರು ಶಾಪ್ ತೆರೆಯಲು ಮುರುಳಿ ಸಿಎಲ್-7 ಲೈಸೆನ್ಸ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 30×40 ಜಾಗಕ್ಕೂ ಸಿಎಲ್- 7 ಲೈಸೆನ್ಸ್ ನೀಡಿದ್ದು, ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 60 ಸಿಎಲ್-7 ಪರವಾನಗಿ ನೀಡಿದ್ದಾರೆ‌. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ (Lokayukta) ಈಗಾಗಲೇ ದೂರು ಸಲ್ಲಿಕೆಯಾಗಿದೆ.

ಇಡೀ ರಾಜ್ಯದಲ್ಲೇ 24 ತಿಂಗಳ ಅವಧಿಯಲ್ಲಿ ಅತಿಹೆಚ್ಚು ಸಿಎಲ್-7 ಲೈಸೆನ್ಸ್ ನೀಡಿರುವ ಡೆಪ್ಯುಟಿ ಕಮಿಷನರ್ ಎಂಬ ಆರೋಪವೂ ಮುರುಳಿ ಮೇಲಿದೆ. 60 ಸಿಎಲ್-7 ಗಳ ಪೈಕಿ, 3 ಸಿಎಲ್-7 ಗಳಿಗೆ ಲೈಸೆನ್ಸ್ ನೀಡಬಾರದು ಎಂಬ ದೂರುಗಳಿದ್ದರೂ ಪರಿಗಣಿಸಿಲ್ಲ. ಅಚ್ಚರಿಯೆಂದರೆ, ಈ ಹಿಂದೆ ಇದೆ ಮುರುಳಿ ಅವುಗಳನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ.

ಇನ್ನು ಸಿಎಲ್- 7 ಲೈಸೆನ್ಸ್ ಪಡೆಯಲು ಮಾಲೀಕರು ಸರಿಯಾಗಿ ದಾಖಲೆಯನ್ನು ಕೂಡ ನೀಡಿಲ್ಲ. ಆದರೂ ಮುರಳಿ ಪರವಾನಗಿ ನೀಡಿದ್ದಾರೆ ಎಂಬ ಆರೋಪವಿದೆ.

ಬೆಂಗಳೂರಿನಿಂದ ತುಮಕೂರಿಗೆ ಸದ್ಯದಲ್ಲೇ ಮುರುಳಿ ವರ್ಗಾವಣೆ ಆಗುವ ಸಾಧ್ಯತೆಯಿದ್ದು, ಎಲ್ಲಾ ಲೈಸೆಸ್​​ಗಳನ್ನು ನೀಡಯೇ ಹೋಗಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ ಎಂಬುದು ತಿಳಿದುಬಂದಿದೆ.

ಕಳೆದ ಡಿಸೆಂಬರ್ ವರೆಗೆ ಮಾತ್ರ 60 ಸಿಎಲ್-7 ಲೈಸೆನ್ಸ್ ನೀಡಿದ್ದು ಈ ವರ್ಷ ಜನವರಿಯಲ್ಲಿ 10 ಕ್ಕೂ ಹೆಚ್ಚು ಲೈಸೆನ್ಸ್ ನೀಡಿದ್ದಾರೆ ಎಂದು ದೂರುದಾರ ಬಿಎಸ್ ಗೌಡ ಆರೋಪ ಮಾಡಿದ್ದಾರೆ.

‘ಟಿವಿ9’ ಗ್ರೌಂಡ್ ರಿಪೋರ್ಟ್​​ನಲ್ಲೂ ಬಯಲಾಯ್ತು ಅಕ್ರಮ

ಡೆಪ್ಯುಟಿ ಕಮಿಷನರ್ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ‘ಟಿವಿ9’ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಈ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರದ ದೊಂಬರಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ 40 ರಿಂದ 50 ಮೀಟರ್ ದೂರದಲ್ಲಿ ಸಿಎಲ್-7 ಗೆ ಅನುಮತಿ ನೀಡಿದ್ದು ತಿಳಿದು ಬಂದಿದೆ. ನಿಯಮಗಳ ಪ್ರಕಾರ ಶಾಲಾ-ಕಾಲೇಜುಗಳ ಆವರಣದ 100 ಮೀಟರ್ ಒಳಗೆ ಮದ್ಯಮಾರಾಟ ಮಾಡಲು ಅವಕಾಶವಿಲ್ಲ. ಆದರೂ ಲೈಸೆನ್ಸ್ ನೀಡಲಾಗಿದೆ. ಈ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಇದ್ದು, 70 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆಗೆ ಆದೇಶ: ಆರ್ ಬಿ ತಿಮ್ಮಾಪುರ, ಅಬಕಾರಿ ಸಚಿವ

ಒಟ್ಟಿನಲ್ಲಿ, ಹಣಕ್ಕಾಗಿ ಅಬಕಾರಿ ಇಲಾಖೆ ಈ ಡೆಪ್ಯುಟಿ ಕಮಿಷನರ್ ಲಂಗುಲಗಾಮಿಲ್ಲದೆ ಪರವಾನಗಿ ನೀಡಿದ್ದು, ಈ ಬಗ್ಗೆ ಸರಿಯಾಗಿ ತನಿಖೆಯಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬಾ, ವಿಷ್ಣುವರ್ಧನ್ ಇಂಗ್ಲಿಷ್ ಎಷ್ಟು ಅದ್ಭುತವಾಗಿತ್ತು ಕೇಳಿ

ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ವಿಷ್ಣುವರ್ಧನ್ (Vishnuvardhan) ಕೂಡ ಒಬ್ಬರು. ಅವರು ಕನ್ನಡವನ್ನು ಉತ್ತಮವಾಗಿ ಮಾತನಾಡುತ್ತಿದ್ದರು. ಅವರು ತಮ್ಮ ಶ್ರೇಷ್ಠ ಗುಣ ಹಾಗೂ ವ್ಯಕ್ತಿತ್ವದಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕ ಹೀರೋಗಳು ಸಾಗುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಕಿಚ್ಚ ಸುದೀಪ್ ಅವರು ವಿಷ್ಣುಗೆ ದೊಡ್ಡ ಅಭಿಮಾನಿ. ವಿಷ್ಣು ಕನ್ನಡದ ಜೊತೆಗೆ ಇಂಗ್ಲಿಷ್ ಕೂಡ ಉತ್ತಮವಾಗಿ ಮಾತನಾಡುತ್ತಿದ್ದರು.

ವಿಷ್ಣುವರ್ಧನ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ‘ನಾನು ಮೈಸೂರಿನಲ್ಲಿ ಶೂಟ್ ಮಾಡುತ್ತಿದ್ದೆ. ಯಜಮಾನ ಸಿನಿಮಾ ನೋಡಿದೆ ಎಂದು ರಾಜ್​​ಕುಮಾರ್ ಹೇಳಿದ್ದರು. ಸಿನಿಮಾ ನೋಡಿ ರಾಜ್​​ಕುಮಾರ್ ಶಾಕ್ ಆಗಿದ್ದರು. ನಿಮ್ಮನ್ನು ಭೇಟಿ ಮಾಡಬೇಕು ಎಂದು ರಾಜ್​​ಕುಮಾರ್ ಹೇಳಿದ್ದರು’ ಎಂದು ವಿಷ್ಣುವರ್ಧನ್ ಹೇಳಿದ್ದರು. ಇದನ್ನು ಅವರು ಇಂಗ್ಲಿಷ್​​ ಅಲ್ಲಿ ಹೇಳಿದ್ದರು.

‘ಬಸವಣ್ಣ, ಕನಕದಾಸ, ಪುರದಂರ ದಾಸ, ಕೃಷ್ಣದೇವರಾಯ ಅವರನ್ನು ನೋಡಿಲ್ಲ. ರಾಜ್​​ಕುಮಾರ್ ಅವರು ಈ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದರು. ರಾಜ್​​ಕುಮಾರ್ ಹಲವು ವರ್ಷಗಳ ಕಾಲ ಜನಪ್ರಿಯತೆ ಪಡೆದು ಒಂದು ಕಡೆ ನಿಂತಿದ್ದರು’ ಎಂದು ವಿಷ್ಣುವರ್ಧನ್ ಅವರು ವಿವರಿಸಿದ್ದರು. ವಿಷ್ಣು ಹಾಗೂ ರಾಜ್ ಸಂಬಂಧ ಆ ರೀತಿಯಲ್ಲಿ ಇತ್ತು.

ವಿಷ್ಣುವರ್ಧನ್ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜ್​​​ನಲ್ಲಿ ಡಿಗ್ರೀ ಪಡೆದುಕೊಂಡಿದ್ದಾರೆ. ಅವರು ಓದು ಮುಗಿಸಿ ನಂತರ ನಟನೆಗೆ ಬಂದರು. ನಟನೆಯಲ್ಲಿ ಅವರು ಹಲವು ವರ್ಷಗಳ ಕಾಲ ಮೆರೆದರು. ಹಲವು ಹಿಟ್ ಚಿತ್ರಗಳನ್ನು ಅವರು ನೀಡಿದರು.

ಇದನ್ನೂ ಓದಿ:  ವಿಷ್ಣುವರ್ಧನ್​​​ಗೆ ನಾನ್​ ವೆಜ್ ತಿನ್ನೋದನ್ನು ಕಲಿಸಿದ್ದು ಯಾರು? ಆರು ತಿಂಗಳು ತಿನ್ನದೇ ಇರುತ್ತಿದ್ದಿದ್ದೇಕೆ?

ರಾಜ್​​ಕುಮಾರ್ ಹಾಗೂ ವಿಷ್ಣುಗೆ ವೈಮನಸ್ಸು ಇದೆ ಎಂಬ ಮಾತು ಮೊದಲಿನಿಂದಲೂ ಚರ್ಚೆಯಲ್ಲಿರುವ ವಿಷಯ. ಆದರೆ, ಇದನ್ನು ಈ ನಟರು ಅಲ್ಲಗಳೆದಿದ್ದಾರೆ. ಅನೇಕ ವೇದಿಕೆ ಮೇಲೆ ಅವರುಗಳು ಪರಸ್ಪರ ಒಬ್ಬರನ್ನೊಬ್ಬರು ಹೊಗಳಿದ ಉದಾಹರಣೆ ಇದೆ ಎಂದೇ ಹೇಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬರೋಬ್ಬರಿ 15 ಸಿಕ್ಸ್​… ವೈಭವ್ ಸೂರ್ಯವಂಶಿಯ ಭರ್ಜರಿ ದಾಖಲೆ

Source link

Karnataka Air Quality Today: ಬೆಂಗಳೂರಿನಲ್ಲಿ ಗಾಳಿಯ ಮಟ್ಟ ಕಳಪೆ​​​​​, ಈ ಜಿಲ್ಲೆಗಳಿಗೆ ಗುಡ್​​​ ನ್ಯೂಸ್ – Kannada News | Bengaluru AQI Surges: Air Quality Alert and Health Tips for Karnataka Cities

ಬೆಂಗಳೂರು, ಫೆ.5: ಬೆಂಗಳೂರು ಹಾಗೂ ರಾಜ್ಯದ ಇತರ ಭಾಗದಲ್ಲಿ ಇಂದು ಬಿಸಿಯ ತಾಪಾಮಾನ ಇದ್ದು, ಇಂದು ಗಾಳಿಯ ಮಟ್ಟದಲ್ಲೂ ಸುಧಾರಣೆ ಕಾಣಲಿದೆ ಎಂದು ತಜ್ಞರು ಹೇಳಿದ್ದಾರೆ. ಇಂದಿನ ವರದಿಯ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳ ವಾಯು ಗುಣಮಟ್ಟದ ಸೂಚ್ಯಂಕ ಹೇಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಇಂದು ವಾಯು ಮಾಲಿನ್ಯದ ಮಟ್ಟ ಸ್ವಲ್ಪ ಹೆಚ್ಚಾಗಿದೆ. ವಿಶೇಷವಾಗಿ ಸಿಲ್ಕ್ ಬೋರ್ಡ್, ಪೀಣ್ಯ, ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ನಿರ್ಮಾಣ ಕಾರ್ಯಗಳು ಮತ್ತು ವಾಹನ ಸಂಚಾರದಿಂದಾಗಿ AQI ಮಟ್ಟ 140 ದಾಟಿದೆ. ಮುಂಜಾನೆ ಮಂಜು ಇರುವುದರಿಂದ ಮಾಲಿನ್ಯಕಾರಕ ಕಣಗಳು (PM2.5) ಕೆಳಮಟ್ಟದಲ್ಲೇ ಉಳಿದು ಉಸಿರಾಟದ ತೊಂದರೆ ಇರುವವರಿಗೆ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು ಎಂದು ಹೇಳಿದ್ದಾರೆ. ಆದರೆ ಇದು ಮಾಧ್ಯಹ್ನದ ಹೊತ್ತಿಗೆ ಬದಲಾಗಬಹುದು.

ಬೆಂಗಳೂರಿನಲ್ಲಿ ಇಂದು ಹೊರಗೆ ಹೋಗುವಾಗ, ವಿಶೇಷವಾಗಿ ಮುಂಜಾನೆ ಮತ್ತು ಸಂಜೆ ವೇಳೆ ಮಾಸ್ಕ್ ಧರಿಸುವುದು ಉತ್ತಮ. ಶ್ವಾಸಕೋಶದ ಸಮಸ್ಯೆ ಅಥವಾ ಅಲರ್ಜಿ ಇರುವವರು ಹೆಚ್ಚು ಮಾಲಿನ್ಯವಿರುವ ಪ್ರದೇಶಗಳಿಂದ ದೂರವಿರಿ ಎಂದು ತಜ್ಞರು ಹೇಳಿದ್ದಾರೆ. ಬೆಂಗಳೂರಿಗೆ ಹೋಲಿಸಿದರೆ ರಾಜ್ಯದ ಇತರೆಡೆ ಮಾಲಿನ್ಯದ ಪ್ರಮಾಣ ಕಡಿಮೆ ಇದೆ. ಕರಾವಳಿ ತೀರದ ಗಾಳಿಯ ವೇಗ ಮತ್ತು ಸಮುದ್ರದ ಸಾಮೀಪ್ಯದಿಂದಾಗಿ ಇಲ್ಲಿ ಮಾಲಿನ್ಯ ಕಡಿಮೆ ಇರುತ್ತದೆ. ಮಂಗಳೂರಿನಲ್ಲಿ ಇಂದು ಗಾಳಿಯ ಮಟ್ಟ 62 ಇದ್ದು, ತೃಪ್ತಿದಾಯಕವಾಗಿದೆ. ಉಡುಪಿಯಲ್ಲಿ ಗಾಳಿಯ ಮಟ್ಟ 55 ಇದೆ. ಅಲ್ಲಿ ಕೂಡ ತೃಪ್ತಿದಾಯಕ. ಕಾರವಾರದಲ್ಲಿ 48 ಇದ್ದು, ಉತ್ತಮವಾಗಿದೆ ಎಂದು ಹೇಳಲಾಗಿದೆ.

ಪ್ರಮುಖ ನಗರಗಳ ಗಾಳಿಯ ಮಟ್ಟದ ವಿವರ:

ಉತ್ತರ ಕರ್ನಾಟಕದಲ್ಲಿ ಮಾತ್ರ ಗಾಳಿಯ ಮಟ್ಟ ಸಾಧಾರಣ ಸ್ಥಿತಿಯಲ್ಲಿದೆ. ಕಲಬುರಗಿಯಲ್ಲಿ 108 ಗಾಳಿಮಟ್ಟ ಇದೆ. ಇಲ್ಲಿ ಸಿಮೆಂಟ್ ಕಾರ್ಖಾನೆಗಳು ಮತ್ತು ಧೂಳಿನಿಂದಾಗಿ ಸ್ವಲ್ಪ ಹೆಚ್ಚಿರುತ್ತದೆ. ಧಾರವಾಡದಲ್ಲಿ 92 ಗಾಳಿಯ ಮಟ್ಟ ಇದ್ದು, ತೃಪ್ತಿದಾಯಕ ಎಂದು ಹೇಳಲಾಗಿದೆ. ಬೆಳಗಾವಿಯಲ್ಲಿ 78, ವಿಜಯಪುರದಲ್ಲಿ ಗಾಳಿಯ ಮಟ್ಟ 85 ಇದೆ. ಇಂದು ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮುಂಜಾನೆ ಮಂಜು (Fog) ಹೆಚ್ಚಿರುವುದರಿಂದ ಇದು ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವವರಿಗೆ ಸ್ವಲ್ಪ ತೊಂದರೆ ನೀಡಬಹುದು. ಬೆಂಗಳೂರನ್ನು ಹೊರತುಪಡಿಸಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶುದ್ಧ ಗಾಳಿ ಇದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಚಳಿ ಮುಗಿಯುತ್ತಾ ಬಂತು, ಬೇಸಿಗೆ ಆರಂಭ ಆಗುವ ಮುನ್ಸೂಚನೆ

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧಂರ್ 2’ ಟೀಸರ್ 9 ಮಿಲಿಯನ್, ‘ಟಾಕ್ಸಿಕ್’ ಟೀಸರ್ 97 ಮಿಲಿಯನ್; ಅಜಗಜಾಂತರ ವ್ಯತ್ಯಾಸ – Kannada News | Toxic Teaser vs Dhurandhar 2: Yash’s Film Dominates with 97M Views, What Went Wrong?

‘ಟಾಕ್ಸಿಕ್’ ಟೀಸರ್ (Toxic Movie) ರಿಲೀಸ್ ಆದಾಗ ಶುರುವಾದ ಒಂದು ಹಲ್​ಚಲ್ ಇದೆಯಲ್ಲ ಅದು ತುಂಬಾನೇ ದೊಡ್ಡದು. ಈ ಟೀಸರ್​​ನಲ್ಲಿ ಬಂದ ಯಾರೂ ಊಹಿಸದ ದೃಶ್ಯದಿಂದ ಟೀಸರ್ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತೆ ಆಯಿತು. ಆದರೆ, ‘ಧುರಂಧರ್ 2’ ಸಿನಿಮಾದ ಟೀಸರ್ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಎರಡೂ ಟೀಸರ್ ವೀಕ್ಷಣೆಯ ವೀವ್ಸ್ ನೋಡಿದರೆ ಅಜಗಜಾಂತರ ವ್ಯತ್ಯಾಸ ಇದೆ. ಹೀಗಾಗಿ, ಯಾವ ಸಿನಿಮಾಗೆ ಹೆಚ್ಚು ಬೇಡಿಕೆ ಇದೆ ಎಂಬುದು ಸ್ಪಷ್ಟವಾಗಿದೆ.

‘ಟಾಕ್ಸಿಕ್’ ಟೀಸರ್ ಜನವರಿ 8ರಂದು ರಿಲೀಸ್ ಆಯಿತು. ಅಂದು ಯಶ್ ಜನ್ಮದಿನ. ಈ ಟೀಸರ್ 24 ಗಂಟೆಯಲ್ಲಿ ಯೂಟ್ಯೂಬ್ ಒಂದರಲ್ಲೇ ಸುಮಾರು 50 ಮಿಲಿಯನ್ಸ್ ವೀವ್ಸ್ ಕಂಡಿತ್ತು. ಅಂದರೆ 5 ಕೋಟಿ. ಇದು ಟಾಕ್ಸಿಕ್ ಚಿತ್ರದ ನಿಜವಾದ ಕ್ರೇಜ್ ಏನು ಎಂಬುದನ್ನು ತೋರಿಸಿತ್ತು. ಈ ಟೀಸರ್ ಈವರೆಗೆ ಸುಮಾರು 97 ಮಿಲಿಯನ್ ವೀಕ್ಷಣೆ ಕಂಡಿದೆ. ಇದು ಚಿತ್ರದ ಹೆಚ್ಚುಗಾರಿಕೆ.

ಇದನ್ನೂ ಓದಿ: ‘ಜನ ನಾಯಗನ್’, ‘ಟಾಕ್ಸಿಕ್’ ಬಳಿಕ ‘ಕೆಡಿ’ ಚಿತ್ರಕ್ಕೆ ಬಂತೊಂದು ಸ್ಟ್ರಾಂಗ್ ಪ್ರತಿಸ್ಪರ್ಧಿ

ಆದರೆ, ಈ ದಾಖಲೆಯ ಹತ್ತಿರ ಬರಲು ‘ಧುರಂಧರ್ 2’ ಟೀಸರ್ ಬಳಿ ಸಾಧ್ಯವಾಗಿಲ್ಲ. ಹಿಂದಿ ಟೀಸರ್ 24 ಗಂಟೆಯಲ್ಲಿ 9 ಮಿಲಿಯನ್​​ಗೂ ಕಡಿಮೆ ವೀಕ್ಷಣೆ ಕಂಡಿದೆ. ಇನ್ನು, ಉಳಿದ ಭಾಷೆಯ ಟೀಸರ್ ಸೇರಿಸಿದರೆ ಹೆಚ್ಚುವರಿಯಾಗಿ ಎರಡು ಮಿಲಿಯನ್ ಸೇರ್ಪಡೆ ಆಗಬಹುದು. ಅಂದರೆ, ಈವರೆಗೆ ಟೀಸರ್ 11 ಮಿಲಿಯನ್ ವೀಕ್ಷಣೆ ಕಂಡಿರಬಹುದು. ‘ಟಾಕ್ಸಿಕ್’ ಟೀಸರ್ ಕಂಡ 50 ಮಿಲಿಯನ್ ವೀಕ್ಷಣೆ ಎಲ್ಲಿ, ‘ಧುರಂಧರ್ 2’ ಕಂಡ 11 ಮಿಲಿಯನ್ ವೀಕ್ಷಣೆ ಎಲ್ಲಿ’ ಎಂದು ಕನ್ನಡ ಸಿನಿಪ್ರಿಯರು ಕೇಳಿಕೊಳ್ಳುತ್ತಿದ್ದಾರೆ.

‘ಧುರಂಧರ್’ ಸಿನಿಮಾದಲ್ಲಿ ಬರೋ ಎಂಡ್ ಕ್ರೆಡಿಟ್ ದೃಶ್ಯಗಳನ್ನೇ ‘ಧುರಂಧರ್ 2’ ಟೀಸರ್ ಎಂದು ರಿಲೀಸ್ ಮಾಡಲಾಗಿದೆ. ಇದು ಚಿತ್ರಕ್ಕೆ ತೀವ್ರ ಹಿನ್ನಡೆ ತಂದಿದೆ. ಇನ್ನು ಹೆಚ್ಚೆಂದರೆ ಟೀಸರ್ 20 ಮಿಲಿಯನ್ ವಿಕ್ಷಣೆ ಕಾಣಬಹುದು. ಅದಾಗಲೇ, ‘ಟಾಕ್ಸಿಕ್’ ಟೀಸರ್ 100 ಮಿಲಿಯನ್ ಕ್ಲಬ್ ಸೇರಿರುತ್ತದೆ ಎಂಬುದು ಪಕ್ಕಾ. ಎರಡೂ ಟೀಸರ್ ಮಧ್ಯೆ ಸುಮಾರು 80 ಮಿಲಿಯನ್ ವ್ಯತ್ಯಾಸ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗದಗ: ರೋಣ ಜಿಗಳೂರು ಕ್ರಾಸ್ ಬಳಿ ಕ್ರೂಸರ್-ಲಾರಿ ಭೀಕರ ಅಪಘಾತ, ಮೂವರು ಸಾವು – Kannada News | Cruiser Lorry Collision in Gadag: 3 Dead, Over 10 Injured Near Jiguluru Cross

ಅಪಘಾತದ ತೀವ್ರತೆಗೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿರುವುದುImage Credit source: tv9

ಗದಗ, ಫೆಬ್ರವರಿ 5: ಕ್ರೂಸರ್ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಜಿಗಳೂರು ಕ್ರಾಸ್ ಬಳಿ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಜೇಂದ್ರಗಡದ ಶಿವಾಜಿ ನಗರ ನಿವಾಸಿಗಳಾದ ಕೂಲಿ ಕಾರ್ಮಿಕರು ಕ್ರೂಸರ್ ವಾಹನದಲ್ಲಿ ಕೆಲಸಕ್ಕಾಗಿ ರೋಣ ಕಡೆಗೆ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತದ ಸ್ಥಳಕ್ಕೆ ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

(ಮಾಹಿತಿ ಅಪ್​ಡೇಟ್ ಆಗಲಿದೆ)

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫ್ಲೋರಿಡಾ ಗಾಲ್ಫ್​ ಕೋರ್ಸ್​​ನಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ – Kannada News | Ryan: Man Convicted in Trump Assassination Attempt Sentenced to Life in Prison

ವಾಷಿಂಗ್ಟನ್, ಫೆಬ್ರವರಿ 05: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಫ್ಲೋರಿಡಾದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಪ್ಟೆಂಬರ್ 15, 2024 ರಂದು ವೆಸ್ಟ್ ಪಾಮ್ ಬೀಚ್‌ನ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಹತ್ಯೆ ಯತ್ನ ನಡೆದಿತ್ತು.

ಯುಎಸ್ ಜಿಲ್ಲಾ ನ್ಯಾಯಾಧೀಶರಾದ ಐಲೀನ್ ಕ್ಯಾನನ್ ಫೋರ್ಟ್​ ಪಿಯರ್ಸ್​ ನ್ಯಾಯಾಲಯದಲ್ಲಿ ರಯಾನ್ ರೌತ್‌ಗೆ ಶಿಕ್ಷೆಯನ್ನು ಪ್ರಕಟಿಸಿದರು. ಸೆಪ್ಟೆಂಬರ್‌ನಲ್ಲಿ ನ್ಯಾಯಾಧೀಶರು ಎಲ್ಲಾ ಆರೋಪಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದ ಸ್ವಲ್ಪ ಸಮಯದ ನಂತರ ರೌತ್ ತನ್ನನ್ನು ತಾನೇ ಇರಿದುಕೊಳ್ಳಲು ಪ್ರಯತ್ನಿಸಿದ್ದ.

ರೌತ್​ಗೆ ಶಿಕ್ಷೆ ವಿಧಿಸುವುದನ್ನ ಆರಂಭದಲ್ಲಿ ಡಿಸೆಂಬರ್​ನಲ್ಲಿ ನಿಗದಿಪಡಿಸಲಾಗಿತ್ತು. ಸಿಎನ್‌ಎನ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಟ್ರಂಪ್ 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರ ಮಾಡುತ್ತಿದ್ದಾಗ, ಟ್ರಂಪ್ ಮೇಲೆ ದಾಳಿ ನಡೆದಿತ್ತು. ಅಧ್ಯಕ್ಷೀಯ ಅಭ್ಯರ್ಥಿಯ ಹತ್ಯೆಗೆ ಯತ್ನಿಸಿದ್ದು ಸೇರಿದಂತೆ ಐದು ಆರೋಪಗಳಲ್ಲಿ ರೌತ್ ತಪ್ಪಿತಸ್ಥನೆಂದು ಸಾಬೀತಾಯಿತು.

59 ವರ್ಷದ ರೌತ್, ಕಳೆದ ವರ್ಷ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಆಗ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಟ್ರಂಪ್ ಅವರನ್ನು ಕೊಲ್ಲಲು ಪ್ರಯತ್ನಿಸಿದ ಆರೋಪದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಈ ಪ್ರಕರಣದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ರೌತ್ ಅವರ ವಕೀಲ ಮಾರ್ಟಿನ್ ರಾಸ್ ಹೇಳಿದ್ದಾರೆ.

ಮತ್ತಷ್ಟು ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್

ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಪದೇ ಪದೇ ತಪ್ಪಾಗಿ ವರ್ತಿಸುತ್ತಿದ್ದರು, ಇದರಲ್ಲಿ ಟ್ರಂಪ್‌ಗೆ ಗಾಲ್ಫ್ ಆಟಕ್ಕೆ ಸವಾಲು ಹಾಕುವುದು ಮತ್ತು ಅಡಾಲ್ಫ್ ಹಿಟ್ಲರ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಉಲ್ಲೇಖಿಸುವುದು ಸೇರಿತ್ತು.

ನ್ಯಾಯಾಧೀಶರು ಅವನನ್ನು ತಪ್ಪಿತಸ್ಥನೆಂದು ಘೋಷಿಸಿದ ಬಳಿಕ ಅಮೆರಿಕದ ಮಾರ್ಷಲ್​ಗಳು ಆತನನ್ನು ನ್ಯಾಯಾಲಯದ ಕೋಣೆಯಿಂದ ಹೊರಗೆ ಕರೆದೊಯ್ಯುವ ಮೊದಲು ರೌತ್ ಕುತ್ತಿಗೆಗೆ ರಿದುಕೊಳ್ಳಲು ಪ್ರಯತ್ನಿಸಿದ್ದ.

ಜುಲೈನಲ್ಲಿ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ನಂತರ, ಫ್ಲೋರಿಡಾದಲ್ಲಿ ನಡೆದ ಈ ಘಟನೆ 2024 ರಲ್ಲಿ ಟ್ರಂಪ್ ಅವರ ಮೇಲೆ ನಡೆದ ಎರಡನೇ ಹತ್ಯೆ ಯತ್ನವಾಗಿತ್ತು. ಗುಂಡಿನ ದಾಳಿಕೋರನನ್ನು ನಂತರ 20 ವರ್ಷದ ಥಾಮಸ್ ಕ್ರೂಕ್ಸ್ ಎಂದು ಗುರುತಿಸಲಾಗಿದ್ದು, ಆತನನ್ನು ಅಧಿಕಾರಿಗಳು ಸ್ಥಳದಲ್ಲೇ ಕೊಂದಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:21 am, Thu, 5 February 26

Source link

‘ಜನ ನಾಯಗನ್’, ‘ಟಾಕ್ಸಿಕ್’ ಬಳಿಕ ‘ಕೆಡಿ’ ಚಿತ್ರಕ್ಕೆ ಬಂತೊಂದು ಸ್ಟ್ರಾಂಗ್ ಪ್ರತಿಸ್ಪರ್ಧಿ – Kannada News | KVN Films in Trouble: Jana Nayagan, Toxic, KD Face Delays, Box Office Clashes

‘ಕೆವಿಎನ್ ಪ್ರೊಡಕ್ಷನ್ಸ್’ ಅಡಿಯಲ್ಲಿ ‘ಜನ ನಾಯಗನ್’, ‘ಟಾಕ್ಸಿಕ್’ (Toxic) ಹಾಗೂ ‘ಕೆಡಿ’ ಸಿನಿಮಾಗಳು ಒಟ್ಟೊಟ್ಟಿಗೆ ಸಿದ್ಧವಾಗಿವೆ. ‘ಜನ ನಾಯಗನ್’ ಜನವರಿ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ‘ಟಾಕ್ಸಿಕ್’ ಚಿತ್ರ ಮಾರ್ಚ್​ 19ರಂದು ತೆರೆಗೆ ಬರುತ್ತಿದೆ. ಇದಕ್ಕೆ ಬಾಲಿವುಡ್​​ನ ‘ಧುರಂಧರ್ 2’ ತೀವ್ರ ಪ್ರತಿಸ್ಪರ್ಧೆ ನೀಡುತ್ತಿದೆ. ಏಪ್ರಿಲ್ 30ಕ್ಕೆ ‘ಕೆಡಿ’ ಸಿನಿಮಾ ಬರುತ್ತಿದ್ದು, ಇದಕ್ಕೆ ದೊಡ್ಡ ಪ್ರತಿಸ್ಪರ್ಧಿ ಒಂದು ಎದುರಾಗಿದೆ. ಅದುವೇ ‘ಪೆದ್ದಿ’ ಸಿನಿಮಾ.

‘ಕೆವಿಎನ್ ಪ್ರೊಕ್ಷನ್ಸ್’ ಕನ್ನಡದ ನಿರ್ಮಾಣ ಸಂಸ್ಥೆ. ‘ಜನ ನಾಯಗನ್’ ಸಿನಿಮಾನ ಇದೇ ಸಂಸ್ಥೆ ಅದ್ದೂರಿ ಬಜೆಟ್ ಅಲ್ಲಿ ನಿರ್ಮಾಣ ಮಾಡಿದೆ. ಈ ಸಿನಿಮಾ ತಿಂಗಳ ಹಿಂದೆಯೇ ತೆರೆಗೆ ಬರಬೇಕಿತ್ತು. ಆದರೆ, ಇನ್ನೂ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡದೆ ಇರುವುದೆ ಇದಕ್ಕೆ ಕಾರಣ. ಇದು ಚಿತ್ರದ ಚಿಂತೆಗೆ ಕಾರಣ ಆಗಿದೆ. ಈ ಚಿತ್ರ ರಿಲೀಸ್ ಆಗದೆ ಇರುವುದರ ಹಿಂದೆ ರಾಜಕೀಯ ಒತ್ತಡಗಳೂ ಇವೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು, ‘ಟಾಕ್ಸಿಕ್’ ಚಿತ್ರಕ್ಕೆ ಬಾಲಿವುಡ್​​ನ ‘ಧುರಂಧರ್ 2’ ಸಿನಿಮಾ ದೊಡ್ಡ ಪ್ರತಿಸ್ಪರ್ಧಿಯಾಗಿ ನಿಂತಿದೆ. ಎರಡೂ ಸಿನಿಮಾಗೆ ಸಾಕಷ್ಟು ಹೈಪ್ ಇದೆ. ಈ ಎರಡೂ ಚಿತ್ರಗಳು ಒಟ್ಟಿಗೆ ರಿಲೀಸ್ ಆಗುತ್ತಿರುವುದರಿಂದ ಬಾಕ್ಸ್ ಆಫೀಸ್​​​ನಲ್ಲಿ ದೊಡ್ಡ ಕ್ಲ್ಯಾಶ್ ನಿರೀಕ್ಷಿಸಬಹುದಾಗಿದೆ. ಸದ್ಯದ ಮಟ್ಟಿಗೆ ಈ ಚಿತ್ರಕ್ಕೆ ಕಾನೂನಾತ್ಮವಾಕವಾಗಿ ಯಾವುದೇ ತೊಂದರೆ ಎದುರಾಗಿಲ್ಲ. ಸೆನ್ಸಾರ್ ಸಮಯದಲ್ಲಿ ಯಾವುದಾದರೂ ಅಡಚಣೆ ಉಂಟಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಬಗ್ಗೆ ಭಯವಿಲ್ಲ ಎಂದಿದ್ದ ಹೀರೋ ಈಗ ಹೆಜ್ಜೆ ಹಿಂದಿಟ್ಟಿದ್ದೇಕೆ?

ಇನ್ನು, ‘ಕೆಡಿ’ ಸಿನಿಮಾ ಕೂಡ ‘ಕೆವಿಎನ್’ ಸಂಸ್ಥೆಯೇ ನಿರ್ಮಿಸಿದೆ. ಇದು ಸೋಲೋ ರಿಲೀಸ್ ಕಾಣೋ ನಿರೀಕ್ಷೆ ಇತ್ತು. ಆದರೆ, ಅದು ಸುಳ್ಳಾಗಿದೆ. ಈ ಚಿತ್ರಕ್ಕೆ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಪ್ರತಿ ಸ್ಪರ್ಧಿಯಾಗಿ ನಿಂತಿದೆ. ಈ ಮೂಲಕ ಕೆವಿಎನ್​​ಗೆ ಇಲ್ಲಿಯೂ ಅಡ್ಡಗಾಲು ಬಿದ್ದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉಚಿತ ಹೆಲ್ಮೆಟ್ ಪಡೆಯಲು ಪ್ರವಾಹದಂತೆ ಮುಗಿಬಿದ್ದ ಜನ: ಲಾರಿಯನ್ನೇ ಏರಿ ಹೇಗೆ ದೋಚುತ್ತಿದ್ದಾರೆ ನೋಡಿ! – Kannada News | Chaos at Free Helmet Distribution in Mulabagilu: Crowd Storms Lorry, Video Goes Viral

ಉಚಿತ ಹೆಲ್ಮೆಟ್ ಪಡೆಯಲು ಮುಗಿಬಿದ್ದ ಜನImage Credit source: tv9

ಕೋಲಾರ, ಫೆಬ್ರವರಿ 5: ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ಪಟ್ಟಣದ ಮೈದಾನ ಜಾತ್ರೆಯಂತಾಗಿತ್ತು. ಡಿಸೆಂಬರ್​ 1 ರಿಂದ ಜಿಲ್ಲೆಯಲ್ಲಿ ಬೈಕ್​ ಸವಾರರಿಗೆ ಹೆಲ್ಮೆಟ್ ಕಡ್ಡಾಯ ರೂಲ್ಸ್ ಜಾರಿಮಾಡಲಾಗಿದೆ. ಹೀಗಾಗಿ ಮುಳಬಾಗಿಲು (Mulabagilu) ಬ್ಲಾಕ್ ಕಾಂಗ್ರೆಸ್ (Congress) ಅಧ್ಯಕ್ಷ, ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಆದಿನಾರಾಯಣ ನೇತೃತ್ವದಲ್ಲಿ ಬುಧವಾರ 25 ಸಾವಿರ ಉಚಿತ ಹೆಲ್ಮೆಟ್​ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೀವಸಂಜೀವಿನಿ ಕಾರ್ಯಕ್ರಮಕ್ಕೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್​ ಚಾಲನೆ ನೀಡಿದರು.

ಬೈಕ್​ಗಳಲ್ಲಿ ಬಂದಿದ್ದ ಸವಾರರಿಗೆ ಹೆಲ್ಮೆಟ್ ವಿತರಿಸಲು 16 ಕೌಂಟರ್ ಓಪನ್ ಮಾಡಲಾಗಿತ್ತು. ಆದರೆ, ಉಚಿತ ಹೆಲ್ಮೆಟ್ ಪಡೆಯಲು ಜನ ‘ನಾ ಮುಂದು ತಾ ಮುಂದು’ ಎಂದು ಮುಗಿಬಿದ್ದರು. ಕೆಲವರಂತೂ ಕ್ಯಾಂಟರ್​​ಗಳನ್ನೇ ಏರಿ ಕೈಗೆ ಸಿಕ್ಕ ಹೆಲ್ಮೆಟ್​​ಗಳನ್ನು ಕೊಂಡೊಯ್ದರು. ಉಚಿತ ಹೆಲ್ಮೆಟ್ ಕೊಡುವ ಸುದ್ದಿ ಕೇಳುತ್ತಿದ್ದಂತೆಯೇ ಮುಳಬಾಗಿಲು ತಾಲೂಕಿನ ಜನ ಸುನಾಮಿಯಂತೆ ನುಗ್ಗಿ ಬಂದರು.

ಉಚಿತ ಹೆಲ್ಮೆಟ್​ಗೆ ಮುಗಿಬಿದ್ದ ಜನ: ವಿಡಿಯೋ ನೋಡಿ

20 ರಿಂದ 25 ಸಾವಿರ ಉಚಿತ ಹೆಲ್ಮೆಟ್​ ಕೊಡುವ ಯೋಜನೆ ಇದಾಗಿತ್ತು. ಆದರೆ 30 ಸಾವಿರಕ್ಕೂ ಹೆಚ್ಚು ಜನ ಲಗ್ಗೆ ಇಟ್ಟಿದ್ದರಿಂದ ಮೈದಾನದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಜನ ಸರದಿ ಬಿಟ್ಟು ಸಿಕ್ಕಿಸಿಕ್ಕ ಕಡೆಯಿಂದ ನುಗ್ಗಿ ಲಾರಿಗಳಲ್ಲಿ ತುಂಬಿಟ್ಟಿದ್ದ ಹೆಲ್ಮೆಟ್ ಬಾಕ್ಸ್​ಗಳನ್ನು ಹೊತ್ತೊಯ್ದರು. ಇನ್ನು ಹೆಲ್ಮೆಟ್ ಪಡೆಯಲು ಸರದಿಯಲ್ಲಿ ನಿಂತಿದ್ದ ಸಾವಿರಾರು ಜನ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆದರು.

ಇದನ್ನೂ ಓದಿ: ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: ಹೊತ್ತಿ ಉರಿದ ಸರ್ವೀಸ್ ಸೆಂಟರ್, 1 ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಕಾರುಗಳು ಭಸ್ಮ

ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಬೈಕ್ ಸವಾರರ ಜೀವ ಉಳಿಸುವುದೇನೋ ನಿಜ. ಆದರೆ, ಉಚಿತ ಸಿಗುತ್ತದೆ ಎಂದು ಜನ ಜೀವವನ್ನೇ ಪಣಕ್ಕಿಟ್ಟು ಮುಗಿಬಿದ್ದಿದ್ದು ವಿಪರ್ಯಾಸ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಚಳಿ ಮುಗಿಯುತ್ತಾ ಬಂತು, ಬೇಸಿಗೆ ಆರಂಭ ಆಗುವ ಮುನ್ಸೂಚನೆ – Kannada News | Bengaluru Weather Today: Fog, 30°C; Coastal Heat Alert and Karnataka Forecast

ಬೆಂಗಳೂರು, ಫೆ.5: ಬೆಂಗಳೂರಿನ ಸೇರಿದಂತೆ ರಾಜ್ಯದಲ್ಲಿ ಇಂದಿನ ವಾತಾವರಣ (Karnataka Weathe) ಹೇಗಿದೆ? ಯಾವೆಲ್ಲ ಜಿಲ್ಲೆಯ ಜನ ಎಚ್ಚರಿಕೆಯಿಂದ ಇರಬೇಕು ಎಂಬುದು ಇಲ್ಲಿದೆ ನೋಡಿ. ನಗರದಲ್ಲಿ ಇಂದು ಮುಂಜಾನೆ ದಟ್ಟವಾದ ಮಂಜು ಮುಸುಕಿದ ವಾತಾವರಣವಿತ್ತು. ದಿನವಿಡೀ ಆಕಾಶವು ಭಾಗಶಃ ಮೋಡದಿಂದ ಕೂಡಿರುತ್ತದೆ. ಗರಿಷ್ಠ ತಾಪಮಾನ 30°C ಮತ್ತು ಕನಿಷ್ಠ ತಾಪಮಾನ 17°C ಆಸುಪಾಸಿನಲ್ಲಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೈಸೂರು ಮತ್ತು ಹಾಸನ ಭಾಗದಲ್ಲಿ ಹವಾಮಾನವು ತುಂಬಾ ಪ್ರಶಾಂತವಾಗಿದ್ದು, ಸಂಜೆಯ ವೇಳೆಗೆ ತಂಪಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಗರಿಷ್ಠ ತಾಪಮಾನವು 33°C ವರೆಗೆ ಏರಿಕೆಯಾಗುವ ಸಾಧ್ಯತೆಯಿದ್ದು, ಮಧ್ಯಾಹ್ನದ ಸಮಯದಲ್ಲಿ ಸೆಕೆ ಹೆಚ್ಚಿರಲಿದೆ. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಮುಂಜಾನೆ ಚಳಿಯ ಅನುಭವವಾಗಲಿದೆ. ಗರಿಷ್ಠ ತಾಪಮಾನವು 31°C – 33°C ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ: ಫೆ.4 ರಿಂದ 9 ರವರೆಗೆ ಈ ಪ್ರದೇಶಗಳಲ್ಲಿ ಪ್ರತಿದಿನ 4 ಗಂಟೆಗಳ ಕಾಲ ವಿದ್ಯುತ್ ಕಡಿತ

ರಾಜ್ಯದ ಕೆಲವು ಪ್ರಮುಖ ನಗರಗಳ ಹವಾಮಾನ ಮಾಹಿತಿ ಇಲ್ಲಿದೆ:

ಉತ್ತರ ಕರ್ನಾಟಕ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಬಯಲು ಪ್ರದೇಶಗಳಲ್ಲಿ ಮುಂಜಾನೆ ದೃಷ್ಟಿಗೋಚರ ಕಡಿಮೆ ಇರಲಿದ್ದು, ವಾಹನ ಸವಾರರು ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ರಾಜ್ಯದ ಯಾವುದೇ ಭಾಗದಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಒಣಹವೆ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಫೆಬ್ರವರಿ ಮೊದಲ ವಾರ ಮುಗಿಯುತ್ತಿದ್ದಂತೆ ಹಗಲಿನ ತಾಪಮಾನವು ಕ್ರಮೇಣ ಏರಿಕೆಯಾಗುತ್ತಿದ್ದು, ಬೇಸಿಗೆ ಆರಂಭ ಆಗುವ ಮುನ್ಸೂಚನೆ ಸಿಗುತ್ತಿದೆ ಎಂದು ಹೇಳಲಾಗಿದೆ. ಇಂದಿನಿಂದ ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್​​ ಕಡಿತವಾಗಲಿದೆ. 4 ಗಂಟೆಗಳ ಕಾಲ ವಿದ್ಯುತ್ ವ್ಯಯ್ಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಆ ಕಾರಣದಿಂದ ಬೆಂಗಳೂರಿನಲ್ಲಿ ಇಂದು ಸೆಕೆಯಿಂದ ಕೂಡಿದ್ದರೆ ಮುನ್ನೆಚ್ಚರಿಕೆ ವಹಿಸುವಂತೆ ಹೇಳಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link