ಕೊಬ್ಬರಿಗೆ ಬಂಪರ್ ಬೆಲೆ: ರೈತರಿಗೆ ಸಿಗದ ಲಾಭ, ಭಾರೀ ನಿರೀಕ್ಷೆಯಲ್ಲಿದ್ದ ಅನ್ನದಾತ ನಿರಾಸೆ – Kannada News | Tumakuru copra Price Soars Record High: Farmers not getting any profit
ತುಮಕೂರು, ಫೆಬ್ರವರಿ 04: ಕಲ್ಪತರು ನಾಡು ಎಂದೇ ಹೆಸರಾದ ತುಮಕೂರಿನ (Tumakuru) ಕೊಬ್ಬರಿಗೆ (Coconut) ಇದೀಗ ಎಲ್ಲಿಲ್ಲದ ಬೆಂಬಲ ಬೆಲೆ ಸಿಕ್ಕಿದೆ. ಹಿಂದೆಂದು ಕಂಡರಿಯದ ದಾಖಲೆ ಮೊತ್ತ ದತ್ತ ಕೊಬ್ಬರಿ ಸಮೀಪಿಸಿದೆ. ಹೀಗಿದ್ದರೂ ರೈತರ ಮೊಗದಲ್ಲಿ ಮಂದಹಾಸ ಬದಲಿಗೆ ಬೇಸರ ಮನೆಮಾಡಿದೆ. ತೆಂಗು ಬೆಳೆಗೆ ತಲೆದೂರಿದ ನಾನಾ ಕಾಯಿಲೆಗಳು ಇಳುವರಿ ಕಡಿಮೆ ಮಾಡಿದೆ. ಇದರಿಂದ ಆದಾಯಕ್ಕೆ ತಕ್ಕ ಪ್ರತಿಫಲ ಸಿಕ್ಕರೆ ಹೆಚ್ಚು ಎಂಬುವಂತಾಗಿದೆ ರೈತರ ಬದುಕು. ರೈತರ ಕನಸಿಗೆ ತಣ್ಣೀರೆರಚಿದ ರೋಗ ಬಾಧೆ ಕಲ್ಪತರು ನಾಡಿನ ಹೆಮ್ಮೆಯ…