Headlines

IND vs AFG: ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಗೆದ್ದು ದಿಗ್ಗಜರ ಪಟ್ಟಿಗೆ ಸೇರಿದ ಮಾನವ್ – Kannada News

ಆತಿಥೇಯ ಟೀಂ ಇಂಡಿಯಾ, ಅಫ್ಘಾನಿಸ್ತಾನ (India vs Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಮೂರು ದಿನಗಳಲ್ಲಿ ಗೆದ್ದುಕೊಂಡಿತು. ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ದಾಖಲೆಯನ್ನು ನಿರ್ಮಿಸಿತು. ತಂಡದ ಈ ಐತಿಹಾಸಿಕ ಗೆಲುವಿನ ಪ್ರಮುಖ ಪಾತ್ರವಹಿಸಿದ್ದು, ಚೊಚ್ಚಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ ಮಾನವ್ ಸುತಾರ್ (Manav Suthar). ಈ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು…

Read More

ಇಸ್ರೇಲ್-ಇರಾನ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿವೆ; ಟ್ರಂಪ್ ಘೋಷಣೆ – Kannada News

ಟೆಹ್ರಾನ್, ಜೂನ್ 8: ಇಸ್ರೇಲ್ ಮತ್ತು ಇರಾನ್ ನಡುವೆ ಇತ್ತೀಚೆಗೆ ನಡೆದ ಕ್ಷಿಪಣಿ ದಾಳಿಗಳ ಬಳಿಕ, ಇರಾನ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬೈರೂತ್ ಮತ್ತು ಲೆಬನಾನ್ ಮೇಲಿನ ಇಸ್ರೇಲ್ ದಾಳಿಗೆ ಪ್ರತಿಕಾರವಾಗಿ ಇರಾನ್ (Iran) ಇತ್ತೀಚೆಗೆ ಇಸ್ರೇಲ್ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ಇರಾನ್‌ನ ಮಿಲಿಟರಿ ಜಂಟಿ ಕಮಾಂಡ್, ಇಸ್ರೇಲ್ ವಿರುದ್ಧದ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ….

Read More

ಮೊಬೈಲ್‌ ಇಂಟರ್ನೆಟ್‌ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು – Kannada News

ಇಂದಿನ ಈ ಡಿಜಿಟಲ್‌ ಯುಗದಲ್ಲಿ ಇಂಟರ್‌ನೆಟ್‌ (internet) ಇಲ್ಲದೆ ಜೀವನವೇ ಇಲ್ಲ ಎಂಬಂತಾಗಿದೆ. ಈ ಜಗತ್ತಿನಲ್ಲಿರುವ ಬಹುತೇಕ ಜನರು ತಮ್ಮ ದೈನಂದಿನ ಜೀವನದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಫುಡ್‌  ಆರ್ಡರ್ ಮಾಡುವುದು, ಕ್ಯಾಬ್ ಬುಕ್ ಮಾಡುವುದು, ಹಣ ವರ್ಗಾವಣೆ ಮಾಡುವುದು, ಶಾಪಿಂಗ್‌ ಮಾಡುವುದು ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲಿರುವ  ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಮಾತನಾಡುವುದು ಈ ಎಲ್ಲವೂ ಇಂಟರ್‌ನೆಟ್‌ ಮೂಲಕವೇ ನಡೆಯುತ್ತಿವೆ. ಮುಖ್ಯವಾಗಿ ಉದ್ಯೋಗ ಸ್ಥಳದಲ್ಲೂ ಇಂಟರ್‌ನೆಟ್‌ ಬೇಕೇ ಬೇಕು. ಒಟ್ಟಿನಲ್ಲಿ…

Read More

ದಕ್ಷಿಣ ಅಮೆರಿಕಕ್ಕೆ ಅದಾನಿ ಲಗ್ಗೆ; ಅರ್ಜೆಂಟೀನಾದಲ್ಲಿ 10 ವರ್ಷದ ಗುತ್ತಿಗೆ ಪಡೆದ ಅದಾನಿ ಪೋರ್ಟ್ಸ್ – Kannada News

ನವದೆಹಲಿ, ಜೂನ್ 8: ಭಾರತದ ಅತಿದೊಡ್ಡ ಖಾಸಗಿ ಸಮಗ್ರ ಸಾರಿಗೆ ನಿರ್ವಹಣೆ ಸಂಸ್ಥೆಯಾದ ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಝೋನ್ (APSEZ), ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ದಕ್ಷಿಣ ಅಮೆರಿಕಾದ ಮಾರುಕಟ್ಟೆಗೆ ಮೊದಲ ಪ್ರವೇಶ ಪಡೆದಿದೆ. ಅದಾನಿ ಪೋರ್ಟ್ಸ್ ಸಂಸ್ಥೆಯು ಅರ್ಜೆಂಟೀನಾದಲ್ಲಿ 10 ವರ್ಷಗಳ ಸುದೀರ್ಘ ಅವಧಿಯ ಎಲ್‌ಎನ್‌ಜಿ (LNG – ದ್ರವೀಕೃತ ನೈಸರ್ಗಿಕ ಅನಿಲ) ಸಾಗಣೆ ಮತ್ತು ಮರೈನ್ ಸೇವೆಗಳ (Marine Services) ಗುತ್ತಿಗೆಯನ್ನು ಪಡೆದುಕೊಂಡಿದೆ. ಈ ಒಪ್ಪಂದದೊಂದಿಗೆ ಅದಾನಿ ಪೋರ್ಟ್ಸ್…

Read More

Karnataka Weather Forecast: ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಮುಂದಿನ 6 ದಿನ ಭಾರೀ ಮಳೆ ಎಚ್ಚರಿಕೆ,ಕರಾವಳಿಗೆ ರೆಡ್ ಅಲರ್ಟ್ – Kannada News

ಬೆಂಗಳೂರು (ಜೂ.08): ಕರ್ನಾಟಕದಲ್ಲಿ ಮುಂಗಾರು (Karnataka Monsoon Rain) ಅಬ್ಬರ ಜೋರಾಗಿದ್ದು, ಇಂದಿನಿಂದ ಅಂದರೆ ಜೂನ್ 08ರಿಂದ ಜೂ.13ವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ (Karavali) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 8 ಮತ್ತು 9 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗೇ ಜೂನ್ 10 ಮತ್ತು 11 ರಂದು ಕೂಡ ಭಾರೀ ಮಳೆ ಮುಂದುವರಿಯಲಿದ್ದು, ಇಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ…

Read More

ಭಾರತದ ಆಹಾರ ಕಲಬೆರಕೆ ದಂಧೆ ಬಿಚ್ಚಿಡಲಿದೆ ‘ದಿ ಇಂಡಿಯಾ ಸ್ಟೋರಿ’; ಗಮನ ಸೆಳೆದ ಟೀಸರ್ – Kannada News

ಭಾರತೀಯ ಚಿತ್ರರಂಗದಲ್ಲಿ ಸಮಾಜದ ಕಣ್ಣು ತೆರೆಸುವಂತಹ ಸಾಮಾಜಿಕ ಕಳಕಳಿಯ ಸಿನಿಮಾಗಳು ಆಗಾಗ ಬರುತ್ತಲೇ ಇರುತ್ತವೆ. ಭ್ರಷ್ಟಾಚಾರ, ಬಡತನ, ಗ್ರಾಮೀಣ ಭಾಗದ ಸಮಸ್ಯೆಗಳು, ಲಿಂಗ ತಾರತಮ್ಯ, ಮಹಿಳಾ ಸಬಲೀಕರಣ ಮುಂತಾದ ವಿಷಯಗಳ ಕುರಿತು ಈಗಾಗಲೇ ಹಲವು ಭಾಷೆಗಳಲ್ಲಿ ನೂರಾರು ಸಿನಿಮಾಗಳು ಮೂಡಿಬಂದು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ದೇಶವನ್ನು ತೀವ್ರವಾಗಿ ಕಾಡುತ್ತಿರುವ, ಸರ್ಕಾರಗಳು ಹಾಗೂ ಚಿತ್ರರಂಗವೂ ಅಷ್ಟಾಗಿ ಗಮನಹರಿಸದ ಆಹಾರ ಕಲಬೆರಕೆ ಕುರಿತು ಈಗೊಂದು ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕೆ ‘ದಿ ಇಂಡಿಯಾ ಸ್ಟೋರಿ’ (The…

Read More

ದಾವಣಗೆರೆಯ ಅನಾಥ ಮಕ್ಕಳಿಗೆ ವಿದೇಶಕ್ಕೆ ಹೋಗುವ ಭಾಗ್ಯ: ಇಟಲಿ ದಂಪತಿ ಮಡಿಲು ಸೇರಿದ 1 ವರ್ಷದ ಕಂದಮ್ಮ; ಕಣ್ಣೀರಿಟ್ಟ ವಿದೇಶಿ ದಂಪತಿ – Kannada News

ಅನಾಥ ಮಕ್ಕಳನ್ನು ದತ್ತು ಪಡೆದ ವಿದೇಶಿ ದಂಪತಿ Image Credit source: Tv9 kannada ದಾವಣಗೆರೆ, ಜೂ.8: ಜಿಲ್ಲೆಯ ಅನಾಥ ಹಾಗೂ ಆಶ್ರಯ ರಹಿತ ಮಕ್ಕಳಿಗೆ ಈಗ ಜಾಗತಿಕ ಮಟ್ಟದಲ್ಲಿ ಹೊಸ ಬದುಕು ಸಿಗುವ ‘ವಿದೇಶ ಭಾಗ್ಯ’ ಒದಗಿಬಂದಿದೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯ ನಾಲ್ವರು ಅನಾಥ ಮಕ್ಕಳು ಅಮೆರಿಕಾ, ಇಂಗ್ಲೆಂಡ್ ಹಾಗೂ ಇಟಲಿ ಸೇರಿದಂತೆ ವಿವಿಧ ಪ್ರಮುಖ ದೇಶಗಳ ದಂಪತಿಗಳ ಮಡಿಲು ಸೇರಲು ಸಜ್ಜಾಗಿದ್ದಾರೆ. ಇದರ ಭಾಗವಾಗಿ, ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕೃತ…

Read More

ಮಮತಾ ಬ್ಯಾನರ್ಜಿಗೆ ದೊಡ್ಡ ಶಾಕ್; 20 ಟಿಎಂಸಿ ಸಂಸದರಿಂದ ಸ್ಪೀಕರ್‌ಗೆ ಪತ್ರ, ಹೊಸ ಪಕ್ಷ ಕಟ್ಟುವ ಸಾಧ್ಯತೆ – Kannada News

ನವದೆಹಲಿ, ಜೂನ್ 8: ವಿಧಾನಸಭಾ ಚುನಾವಣೆಯ ಬಳಿಕ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಭಾರೀ ಹೊಡೆತವನ್ನು ಅನುಭವಿಸಿದೆ. ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯ ನಂತರ ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ವಿಭಜನೆಯಾಗಿತ್ತು. ಇದೀಗ ಸಂಸದೀಯ ಪಕ್ಷದಲ್ಲಿ ವಿಭಜನೆ ಬಹುತೇಕ ಖಚಿತವಾಗಿದೆ. ಬಂಡಾಯವೆದ್ದಿರುವ ತೃಣಮೂಲ ಕಾಂಗ್ರೆಸ್ (TMC) ಸಂಸದರು ಕೇಂದ್ರ ಸಚಿವ ಮತ್ತು ಪಕ್ಷದ ವೀಕ್ಷಕ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ…

Read More

WTC Points Table: ದಾಖಲೆ ಜಯ ಸಾಧಿಸಿದರೂ 6ನೇ ಸ್ಥಾನದಲ್ಲೇ ಉಳಿದ ಟೀಂ ಇಂಡಿಯಾ – Kannada News

ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಭಾರತ ಪ್ರವಾಸ ಮಾಡಿರುವ ಅಫ್ಘಾನಿಸ್ತಾನ  (India vs Afghanistan) ತಂಡ ಟೆಸ್ಟ್ ಸೋಲಿನೊಂದಿಗೆ ತನ್ನ ಪ್ರವಾಸವನ್ನು ಆರಂಭಿಸಿದೆ. ಚಂಡೀಗಢದ ಮಹಾರಾಜ ಯಾದವಿಂದರ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ (ಮುಲ್ಲನ್‌ಪುರ) ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ಸಾಧಿಸಿತು. ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಗೆದ್ದು ಏಕೈಕ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ಈ ಟೆಸ್ಟ್ ಪಂದ್ಯವನ್ನು ಭಾರತ ಭಾರಿ ಅಂತರದಿಂದ ಗೆದ್ದುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಏಕೆಂದರೆ ಈ ಪಂದ್ಯವು ವಿಶ್ವ…

Read More

Video: ಕೇಕ್ ತೆಗೆದುಕೊಂಡು ಅತ್ತೆ ಮನೆಗೆ ಹೋಗಿ ನನ್ನ ಹೆಂಡ್ತಿನಾ ವಾಪಸ್‌ ಕಳಿಸಿ ಎಂದ ಅಳಿಯ – Kannada News

ಗಂಡು ಮಕ್ಕಳಿಗೆ ಹೆಂಡ್ತಿ ತವರಿಗೆ ಹೊರಟು ನಿಂತರೆ ಅದೇನೋ ಖುಷಿ. ಹೆಂಡ್ತಿ ಮರಳಿ ಬರುವ ತನಕ ತಮ್ಮ ಸ್ನೇಹಿತರ ಪಾರ್ಟಿ, ಸುತ್ತಾಟ ಎಂದು ಬ್ಯುಸಿಯಾಗಿರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ತವರಿಗೆ ಹೋದ ಹೆಂಡ್ತಿ ಬರ್ತಾಳೆ ಎಂದು ಕಾದು ಕೊನೆಗೆ ಅತ್ತೆ (mother-in-law) ಮನೆಗೆ ಹೋಗಿದ್ದಾನೆ. ಕೇಕ್ ತೆಗೆದುಕೊಂಡು ಹೋಗಿ ನನ್ನ ಹೆಂಡ್ತಿನಾ ಕೊಡಿ ಎಂದು ಕೇಳಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರಿಗೆ ನಗು ತಡೆಯಲಾಗಲಿಲ್ಲ. Karan…

Read More