ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸುವ ಸಲುವಾಗಿ, ಭಾರತದ ವಿರುದ್ಧ ಕಣಕ್ಕಿಳಿಯದಿರಲು ಪಾಕಿಸ್ತಾನ್ ನಿರ್ಧರಿಸಿದೆ. ಅತ್ತ ಪಾಕಿಸ್ತಾನ್ ತಂಡ ಕಣಕ್ಕಿಳಿಯದಿದ್ದರೂ, ಸೂರ್ಯಕುಮಾರ್ ಯಾದವ್ ಮೈದಾನಕ್ಕಿಳಿಯಲೇಬೇಕು. ಏಕೆಂದರೆ…
Your blog category
ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸುವ ಸಲುವಾಗಿ, ಭಾರತದ ವಿರುದ್ಧ ಕಣಕ್ಕಿಳಿಯದಿರಲು ಪಾಕಿಸ್ತಾನ್ ನಿರ್ಧರಿಸಿದೆ. ಅತ್ತ ಪಾಕಿಸ್ತಾನ್ ತಂಡ ಕಣಕ್ಕಿಳಿಯದಿದ್ದರೂ, ಸೂರ್ಯಕುಮಾರ್ ಯಾದವ್ ಮೈದಾನಕ್ಕಿಳಿಯಲೇಬೇಕು. ಏಕೆಂದರೆ…
ಬೆಂಗಳೂರು, ಫೆಬ್ರವರಿ 04: ವಿಧಾನಸೌಧದ ಮುಖ್ಯ ರಸ್ತೆಯಲ್ಲಿಯೇ ತಡರಾತ್ರಿ ಪುಂಡರು ವ್ಹೀಲಿಂಗ್ ನಡೆಸಿ ಹುಚ್ಚಾಟ ನಡೆಸಿದ್ದಾರೆ. ಹೈಗ್ರೌಂಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ, ರಾತ್ರಿ 2:30ರ ಸುಮಾರಿಗೆ ಘಟನೆ ನಡೆದಿದ್ದು, ರಾಶ್ ಡ್ರೈವಿಂಗ್ ಮಾಡಿದ್ದಲ್ಲದೆ, ವ್ಹೀಲಿಂಗ್ ಕೂಡ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹೆಲ್ಮೆಟ್ ಧರಿಸದೆ, ತ್ರಿಬಲ್ ರೈಡಿಂಗ್ ಮಾಡಲಾಗಿರುವ ದೃಶ್ಯಗಳು ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿವೆ. ಬೈಕ್ಗಳ ಸೈಲೆನ್ಸರ್‌ಗಳನ್ನು ಆಲ್ಟರ್ ಮಾಡಿ ಕರ್ಕಶ ಶಬ್ದದೊಂದಿಗೆ ಪುಂಡಾಟ ನಡೆಸಲಾಗಿದ್ದು, ಕ್ಯಾಮೆರಾ ಕಂಡ ತಕ್ಷಣ ನಂಬರ್ ಪ್ಲೇಟ್‌ಗಳನ್ನು ಕೈಯಿಂದ ಮರೆಮಾಚುವ ಪ್ರಯತ್ನವೂ ನಡೆದಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
‘ಧುರಂಧರ್ 2’ ಸಿನಿಮಾದ ಟೀಸರ್ (Dhurandhar 2) ನೋಡಿದ ಅನೇಕರು ಬೇಸರ ಹೊರಹಾಕಿದ್ದಾರೆ. ಇದಕ್ಕೆ ಕಾರಣ ಹಳೆಯ ವಿಷಯವನ್ನೇ ತೋರಿಸಿದ್ದು. ‘ಧುರಂಧರ್’ ಸಿನಿಮಾ ಕೊನೆಯಲ್ಲಿ ತೋರಿಸಿದ ದೃಶ್ಯವನ್ನೇ ಮತ್ತೊಮ್ಮೆ ಟೀಸರ್ ಎಂದು ಬಿಡಲಾಗಿದೆ. ಈ ಎಲ್ಲಾ ಕಾರಣದಿಂದ ಸಿನಿಮಾಗೆ ಹಿನ್ನಡೆ ಆಗಿದೆ. ಈ ಮಧ್ಯೆ ರಣವೀರ್ ಚಿತ್ರಕ್ಕಿಂತ ಯಶ್ ನಟನೆಯ ‘ಟಾಕ್ಸಿಕ್’ ಮೇಲು ಎಂದು ಹಿಂದಿಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಯಶ್ ಚಿತ್ರದ ಹೆಚ್ಚುಗಾರಿಕೆ ಎಂದು ಯಶ್ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ಮಾರ್ಚ್ 19ರಂದು ‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಗಾಗಲೇ ‘ಧುರಂಧರ್’ ಚಿತ್ರ ತನ್ನನ್ನು ತಾನು ಸಾಬೀತು ಮಾಡಿಕೊಂಡಿದೆ. ಈ ಚಿತ್ರ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಕೂಡ ಮಾಡಿದೆ. ಇದು ಸೀಕ್ವೆಲ್ ಬಗ್ಗೆ ನಿರೀಕ್ಷೆ ಹುಟ್ಟುಹಾಕಲು ಸಹಕಾರಿ ಆಗಿದೆ. ಆದರೆ, ಬಿಡುಗಡೆ ಆದ ಟೀಸರ್ ನಿರಾಸೆ ಮೂಡಿಸಿದೆ. ಆದರೆ, ‘ಟಾಕ್ಸಿಕ್’ ಟೀಸರ್ ಸೃಷ್ಟಿಸಿದ್ದ ಹವಾ ಬೇರೆಯದೇ ರೀತಿಯಲ್ಲಿ ಇದೆ. ಹೀಗಾಗಿ ರೇಸ್ನಲ್ಲಿ ‘ಟಾಕ್ಸಿಕ್’ ಮುಂದಿದೆ.
ಇದನ್ನೂ ಓದಿ: ‘ಧುರಂಧರ್ 2’ ಪೋಸ್ಟರ್ಗೆ ಯಶ್ ಸಿನಿಮಾ ಸ್ಫೂರ್ತಿ? ಟ್ರೆಂಡ್ ಸೆಟ್ಟರ್ ಆದ ರಾಕಿಭಾಯ್
ಹಿಂದಿ ಯೂಟ್ಯೂಬರ್ಗಳು ಅಲ್ಲಿನ ಪ್ರೇಕ್ಷಕರ ಬಳಿ ‘ಧುರಂಧರ್ 2’ ಬೆಸ್ಟ್ ಅಥವಾ ‘ಟಾಕ್ಸಿಕ್’ ಬೆಸ್ಟ್ ಎಂದು ಕೇಳಿದ್ದಾರೆ. ಇದಕ್ಕೆ ‘ಟಾಕ್ಸಿಕ್’ ಎಂಬ ಉತ್ತರವನ್ನು ಪ್ರೇಕ್ಷಕರು ನೀಡಿದ್ದಾರೆ. ‘ಧುರಂಧರ್ ಸೀಕ್ವೆಲ್ನ ಟೀಸರ್ ನೋಡಿದೆ. ಮತ್ತೆ ಮತ್ತೆ ಅದನ್ನೇ ತೋರಿಸಿದರೆ ಯಾರಿಗೆ ಇಷ್ಟ ಆಗುತ್ತದೆ ಹೇಳಿ? ಧುರಂಧರ್ ಎಂಡ್ ಕಾರ್ಡ್ ದೃಶ್ಯಗಳನ್ನು ಟೀಸರ್ ಎಂದು ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಟಾಕ್ಸಿಕ್ ಸಿನಿಮಾ ಗೆಲ್ಲಬಹುದು ಎಂದು ಅನಿಸುತ್ತಿದೆ’ ಎಂದು ಕೆಲವರು ಹೇಳಿದ್ದಾರೆ. ‘ಮೊದಲ ದಿನ ಟಾಕ್ಸಿಕ್ ಸಿನಿಮಾ ನೋಡೋದು’ ಎನ್ನುತ್ತಾರೆ ಅವರು.
Yash fan base in Bollywood is on another level They’re almost choosing #Toxic over #Dhurandhar2
BIGGEST PAN INDIA SUPERSTAR @TheNameIsYash BOSS👑#Yash #YashBOSS #ToxicTheMovie pic.twitter.com/uenFyCtZwO
— ಬ್ರಹ್ಮಚಾರಿ (@mythicMosaic0) February 3, 2026
‘ಟಾಕ್ಸಿಕ್ ಸಿನಿಮಾ ಈಗಾಗಲೇ ಧುರಂಧರ್ ಚಿತ್ರವನ್ನು ನುಂಗಿ ಹಾಕಿಯಾಗಿದೆ. ಮತ್ತೆ ಈ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಟಾಕ್ಸಿಕ್ ಸಿನಿಮಾ ಮುಂದೆ ಹೋಗುತ್ತದೆ’ ಎಂದು ಹಿಂದಿ ಫ್ಯಾನ್ಸ್ ಹೇಳಿಕೊಂಡಿದ್ದಾರೆ. ‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ಚಿತ್ರಗಳು ಮಾರ್ಚ್ 19ರಂದು ತೆರೆಗೆ ಬರಲಿವೆ. ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಕಾಣಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪೊಲೀಸರಿಂದ ಸ್ಥಳ ಪರಿಶೀಲನೆImage Credit source: Tv9 Kannada
ಬೆಳಗಾವಿ, ಫೆಬ್ರವರಿ 04: ಚಲಿಸುತ್ತಿದ್ದ ಲಾರಿ ಏರಿ ಸಿನಿಮಾ ಸ್ಟೈಲ್ನಲ್ಲಿ ಡ್ರೈವರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಗಾವಿ ನಗರದ ಕ್ಲಬ್ ರಸ್ತೆಯ ಶಂಕರಾನಂದ ಪುತ್ಥಳಿ ಬಳಿ ನಡೆದಿದೆ. ರುಕ್ಮಿಣಿ ನಗರದ ನಿವಾಸಿ ಅಯಾಜ್ ಸವಣೂರ(36) ದಾಳಿಗೊಳಗಾದ ವ್ಯಕ್ತಿಯಾಗಿದ್ದು, ಎಂಟು ಜನರಿಂದ ಮಾರಣಾಂತಿಕ ಹಲ್ಲೆ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ ಹಿಂಡಲಗಾ ಬಳಿ ನಡೆದ ಅಪಘಾತವೇ ಘಟನೆಗೆ ಕಾರಣ ಎನ್ನಲಾಗಿದೆ. ಆ್ಯಕ್ಸಿಡೆಂಟ್ ಮಾಡಿ ಲಾರಿ ನಿಲ್ಲಿಸದೇ ಬಂದ ಕಾರಣ, ಬೆನ್ನುಹತ್ತಿ ಬಂದು ಚಾಲಕನ ಮೇಲೆ ನಡೆಸಿರುವ ಮಾಹಿತಿ ಇದೆ.
ಲಾರಿ ಚಾಲಕ ಅಯಾಜ್ ಸವಣೂರ ತೊಡೆ, ಕಿವಿ, ಬೆನ್ನು ಮತ್ತು ತಲೆ ಭಾಗಕ್ಕೆ ದುಷ್ಕರ್ಮಿಗಳು ಚಾಕುವಿನಿಂದ ಮನಬಂತೆ ಇರಿದಿದ್ದು, ಲಾರಿ ಮೇಲೂ ಕಲ್ಲು ತೂರಾಟ ನಡೆಸಿ, ಗಾಜು ಒಡೆದು ಅಟ್ಟಹಾಸ ಮೆರೆದಿದ್ದಾರೆ. ಗಂಭೀರ ಗಾಯಗೊಂಡ ಅಯಾಜ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಘಟನಾ ಸ್ಥಳಕ್ಕೆ ಬೆಳಗಾವಿ ಪೊಲೀಸರ ತಂಡ ಮತ್ತು ಸೋಕೋ ಟೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಆಸ್ತಿಗಾಗಿ ಒಡಹುಟ್ಟಿದವನನ್ನೇ ಕೊಂದ ಪಾಪಿ; ಒಂದೂವರೆ ಎಕರೆ ಜಮೀನಿಗಾಗಿ ಹರಿದ ನೆತ್ತರು
ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಪುಟ್ಪಾಕ್ ಗ್ರಾಮದಲ್ಲಿ ಕೇಸರಿ ಧ್ವಜದ ವಾಟ್ಸ್ಯಾಪ್ ಸ್ಟೇಟಸ್ ವಿಚಾರಕ್ಕೆ ತಾಯಿ ಮತ್ತು ಮಗನ ಮೇಲೆ ಅನ್ಯ ಕೋಮಿನವರಿಂದ ಹಲ್ಲೆ ನಡೆದಿದೆ. ಮಸೀದಿ ಮೇಲೆ ಕೇಸರಿ ಧ್ವಜ ಕಟ್ಟಿದ ರೀತಿಯಲ್ಲಿ ಸ್ಟೇಟಸ್ ಹಾಕಿದ ಆರೋಪ ಹಿನ್ನೆಲೆ ಮನೆಗೆ ಹೋಗಿ ಸ್ಟೇಟಸ್ ಹಾಕಿದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಮಗನನ್ನ ಹೊಡೆದಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ತಾಯಿ ಮೇಲೆಯೂ ಹಲ್ಲೆ ನಡೆಸಲಾಗಿದೆ. ಶಿವ ಮಾಲಾಧಾರಿಗಳ ಕಾರ್ಯಕ್ರಮಕ್ಕಾಗಿ ಕೇಸರಿ ಧ್ವಜ ಹಾಕಲಾಗಿತ್ತು. ಇದೇ ದೃಶ್ಯಗಳನ್ನು ಎಡಿಟ್ ಮಾಡಿ ಯುವಕ ಸ್ಟೇಟಸ್ ಹಾಕಿದ್ದ. ಇನ್ನು ಹಲ್ಲೆ ಖಂಡಿಸಿ ಪ್ರತಿಭಟನೆ ಪುಟ್ಪಾಕ್ ಗ್ರಾಮಸ್ಥರು ಹಾಗೂ ಶಿವಮಾಲಾಧಾರಿಗಳು ಕೈಯಲ್ಲಿ ಶಿವ ಪಾರ್ವತಿ ಹಾಗೂ ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಗುರುಮಠಕಲ್ ಠಾಣೆ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಮ್ಯಾಂಚೆಸ್ಟರ್, ಫೆಬ್ರವರಿ 04: ಗ್ರೇಟರ್ ಮ್ಯಾಂಚೆಸ್ಟರ್ನಲ್ಲಿ ಲಘು ವಿಮಾನ ಪತನಗೊಂಡಿದ್ದು, ಇಬ್ಬರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. 11.00 ಗಂಟೆಯ ಸುಮಾರಿಗೆ ರೋಚ್‌ಡೇಲ್‌ನ ಲಿಟಲ್‌ಬರೋದಲ್ಲಿರುವ ಕೃಷಿ ಭೂಮಿಗೆ ವಿಮಾನ ಅಪ್ಪಳಿಸಿತ್ತು. ಕೂಡಲೇ ಅಲ್ಲಗೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ಏರ್ ಆಂಬ್ಯುಲೆನ್ಸ್ ಅನ್ನು ಕಳುಹಿಸಲಾಯಿತು. ಪತನಗೊಂಡ ವಿಮಾನವು ಸಣ್ಣ ಸಿರಸ್ ಎಸ್‌ಆರ್ 20 ಆಗಿದ್ದು, ಬರ್ಮಿಂಗ್ಹ್ಯಾಮ್‌ನಿಂದ ಹೊರಟಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಫೆಬ್ರುವರಿ 04: ನಮ್ಮ ದೈನಂದಿನ ಪೂಜೆಗಳಲ್ಲಿ ಮತ್ತು ಸಮಾಜದಲ್ಲಿ ಕುಂಕುಮ ಹಾಗೂ ವಿಭೂತಿಗೆ ವಿಶೇಷ ಸ್ಥಾನವಿದೆ. ಇದು ಕೇವಲ ಒಂದು ಧಾರ್ಮಿಕ ಸಂಪ್ರದಾಯವಲ್ಲ, ಬದಲಿಗೆ ನಮ್ಮ ಬಾಂಧವ್ಯಗಳನ್ನು ಬಲಪಡಿಸುವ ಮತ್ತು ಶುಭಫಲಗಳನ್ನು ತರುವ ಒಂದು ಮಾರ್ಗವಾಗಿದೆ. ನಾವು ಕುಂಕುಮವನ್ನು ಹಚ್ಚುವಾಗ ಯಾವ ಬೆರಳನ್ನು ಬಳಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ನಮ್ಮ ಬಲಗೈಯ ಐದು ಬೆರಳುಗಳು ಐದು ವಿಭಿನ್ನ ಗ್ರಹಗಳನ್ನು ಪ್ರತಿನಿಧಿಸುತ್ತವೆ. ಶುಕ್ರ, ಗುರು, ಶನಿ, ರವಿ ಮತ್ತು ಬುಧ ಗ್ರಹಗಳ ಪ್ರತೀಕವಾಗಿರುವ ಈ ಬೆರಳುಗಳ ಸರಿಯಾದ ಬಳಕೆಯಿಂದ ನಾವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ಸ್ವತಃ ಕುಂಕುಮ ಅಥವಾ ವಿಭೂತಿಯನ್ನು ಹಚ್ಚಿಕೊಳ್ಳುವಾಗ ಮಧ್ಯದ ಬೆರಳು (ಶನಿಯ ಬೆರಳು) ಬಳಸುವುದರಿಂದ ಶನಿಯ ಕಾಟ ಕಡಿಮೆಯಾಗಿ, ಆಯುಷ್ಯ ವೃದ್ಧಿಯಾಗುತ್ತದೆ ಹಾಗೂ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಮುತ್ತೈದೆಯರಿಗೆ, ಹಿರಿಯರಿಗೆ, ಅತಿಥಿಗಳಿಗೆ ಅಥವಾ ಮಕ್ಕಳಿಗೆ ಕುಂಕುಮ ಹಚ್ಚುವಾಗ ಹೆಬ್ಬೆರಳನ್ನು ಬಳಸಬೇಕು. ಇದು ಬಾಂಧವ್ಯಗಳನ್ನು ವೃದ್ಧಿಸುತ್ತದೆ ಎಂದು ಗುರೂಜಿ ಹೇಳಿದ್ದಾರೆ.
ಈಗ ಎಲ್ಲೆಲ್ಲೂ ‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ‘ಟಾಕ್ಸಿಕ್’ ಸಿನಿಮಾ (Toxic Movie) ಪರ ವಹಿಸಿಕೊಂಡು ಬಂದರೆ ಇನ್ನೂ ಕೆಲವರು ‘ಧರುಂಧರ್ 2’ ಚಿತ್ರದ ಪರವಾಗಿ ಮಾತನಾಡುತ್ತಿದ್ದಾರೆ. ಹೀಗಿರುವಾಗಲೇ ‘ಧುರಂಧರ್ 2’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಚಿತ್ರದಿಂದ ಸ್ಫೂರ್ತಿ ಪಡೆದು ಇದನ್ನು ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
‘ಕೆಜಿಎಫ್’ ಹಾಗೂ ‘ಕೆಜಿಎಫ್ ಚಾಪ್ಟರ್ 1’ ಚಿತ್ರದಲ್ಲಿ ರಕ್ತದ ಹೊಳೆ ಹರಿದಿದೆ. ಇದನ್ನು ಸೂಚ್ಯವಾಗಿ ತೋರಿಸಲು ಕೆಜಿಎಫ್ ಪೋಸ್ಟರ್ನಲ್ಲಿ ರಕ್ತದ ಬಣ್ಣದ ಬ್ಯಾಕ್ಗ್ರೌಂಡ್ ನೀಡಲಾಗಿತ್ತು. ಸಿನಿಮಾದ ಕಥೆಗೆ ಪೋಸ್ಟರ್ ಸರಿಯಾಗಿ ಹೊಂದಿಕೆ ಆಗಿತ್ತು. ಈಗ ‘ಧುರಂಧರ್ 2’ ಕೂಡ ಇದನ್ನು ಫಾಲೋ ಮಾಡಿದೆ. ‘ಧುಂಧರ್ 2’ ಚಿತ್ರದಲ್ಲಿ ರಿವೇಂಜ್ ಇರುವುದರಿಂದ, ಈ ಪೋಸ್ಟರ್ ಕೂಡ ಕೆಂಪು ಬಣ್ಣದಲ್ಲೇ ಬಂದಿದೆ. ಇದು ಚರ್ಚೆಯ ಕೇಂದ್ರಬಿಂದು ಆಗಿದೆ. ಯಶ್ ಅವರನ್ನು ಅನೇಕರು ಟ್ರೆಂಡ್ ಸೆಟ್ಟರ್ ಎಂದು ಕರೆದಿದ್ದಾರೆ. ‘ಧುರಂಧರ್ 2’ ಚಿತ್ರವನ್ನು ಟ್ರೆಂಡ್ ಫಾಲೋವರ್ ಎಂದು ಕರೆಯಲಾಗಿದೆ.
Trend Setter Trend Follower pic.twitter.com/kD4p7PbZSv
— Tha7a fan (@ExposeDhonifan) February 3, 2026
Royalty 👑 Municipality😭 pic.twitter.com/wCsvo1eIAs
— Tha7a fan (@ExposeDhonifan) February 3, 2026
ಸಿನಿಮಾ ವಿಷಯದಲ್ಲಿ ಯಶ್ ಅವರು ತಮ್ಮನ್ನು ತಾವು ಟ್ರೆಂಡ್ ಸೆಟ್ಟರ್ ಆಗಿ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ‘ಕೆಜಿಎಫ್’ ರೀತಿಯ ಗ್ಯಾಂಗ್ಸ್ಟರ್ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿರಲಿಲ್ಲ. ಈ ಕಾರಣದಿಂದಲೇ ಆ ಸಿನಿಮಾ ಸೂಪರ್ ಹಿಟ್ ಆಯಿತು. ‘ಕೆಜಿಎಫ್ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ‘ಕೆಜಿಎಫ್’ ಶೈಲಿಯನ್ನು ಅನುಸರಿಸಿ ಅನೇಕ ಸಿನಿಮಾಗಳು ಬಂದವು. ‘ಕೆಜಿಎಫ್’ ಚಿತ್ರದ ಕಥೆಯ ಪ್ಯಾಟರ್ನ್ನ ‘ಪುಷ್ಪ’ದವರೂ ಫಾಲೋ ಮಾಡಿದ್ದಾರೆ ಎಂಬ ಮಾತು ಕೂಡ ಇದೆ.
ಇದನ್ನೂ ಓದಿ: ‘ಧುರಂಧರ್ 2’ ಟೀಸರ್ ನೋಡಿದವರಿಗೆ ಭಾರೀ ನಿರಾಸೆ; ರಿಲೀಸ್ ದಿನಾಂಕವೂ ರಿವೀಲ್
‘ಧುರಂಧರ್ 2’ ಚಿತ್ರದ ಟೀಸರ್ ಫೆಬ್ರವರಿ 3ರಂದು ರಿಲೀಸ್ ಆಯಿತು. ಈ ಟೀಸರ್ ಅಷ್ಟಾಗಿ ಗಮನ ಸೆಳೆದಿಲ್ಲ. ‘ಧುರಂಧರ್’ ಸಿನಿಮಾ ಕೊನೆಯಲ್ಲಿ ಬರೋ ಎಂಡ್ ಕಾರ್ಡ್ ಅನ್ನೇ ಟೀಸರ್ ಮಾಡಿ ಬಿಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 6:58 am, Wed, 4 February 26
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 04 ಫೆಬ್ರುವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಬುಧವಾರವಾಗಿದ್ದು, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘಮಾಸದ ಕೃಷ್ಣ ಪಕ್ಷದ ತದಿಗೆಯಾಗಿದ್ದು, ಬುಧವಾರವಾಗಿದೆ. ಚಂದ್ರನು ಸಿಂಹ ರಾಶಿಯ ಪುಬ್ಬಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ಇಂದು ವಿಶ್ವ ಕ್ಯಾನ್ಸರ್ ದಿನವಾಗಿದ್ದು, ಕ್ಯಾನ್ಸರ್ ಕುರಿತು ಅರಿವು ಮೂಡಿಸಲು, ಪೀಡಿತರಿಗೆ ಸಹಾಯ ಮಾಡಲು ಮತ್ತು ಮಾನಸಿಕ ಧೈರ್ಯ ತುಂಬಲು ಗುರೂಜಿ ಕರೆ ನೀಡಿದ್ದಾರೆ. ಶೃಂಗೇರಿ ಹಾಗೂ ಹೆಚ್.ಡಿ.ಕೋಟೆಯಲ್ಲಿ ರಥೋತ್ಸವಗಳು ನಡೆಯುತ್ತಿವೆ. ಮೇಷದಿಂದ ಮೀನದವರೆಗಿನ ರಾಶಿಗಳಿಗೆ ವೃತ್ತಿ, ವ್ಯವಹಾರ, ಶಿಕ್ಷಣ, ಕುಟುಂಬ, ಆರೋಗ್ಯ ಮತ್ತು ಹಣಕಾಸು ಮುಂತಾದ ಕ್ಷೇತ್ರಗಳಲ್ಲಿನ ಸಂಭವನೀಯ ಫಲಗಳನ್ನು ವಿವರಿಸಲಾಗಿದ್ದು, ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ 04: ರಾಜ್ಯ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು, ಸಚಿವ ಆರ್.ಬಿ.ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿವೆ. ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಶಾಸಕರು ಜಾಗಟೆ ಬಾರಿಸಿ, ಹಾಡು ಹಾಡಿ ವಿಭಿನ್ನವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆ ಆವರಣದಲ್ಲೇ ರಾತ್ರಿ ಊಟ ಮಾಡಿ, ವಿಶ್ರಮಿಸುವ ಮೂಲಕ ಸರ್ಕಾರದ ವಿರುದ್ಧ ನಾಯಕರು ಕಿಡಿಕಾರಿದ ಪ್ರಸಂಗ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಉಡುಪಿ, ಫೆಬ್ರವರಿ 04: ಕೇರಳದಿಂದ ಉಡುಪಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಗುಂಪೊಂದು ಹೆಜಮಾಡಿ ಟೋಲ್ ಬಳಿ ಪುಂಡಾಟ ನಡೆಸಿರುವ ಘಟನೆ ನಡೆದಿದೆ. ಎರಡು ಬಸ್ಸುಗಳಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ಟೋಲ್ ಗೇಟ್ ಬಳಿ ಬಸ್ ನಿಲ್ಲಿಸಿ ಮದ್ಯಸೇವಿಸಿ, ರಸ್ತೆಯ ಮಧ್ಯದಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದಾರೆ. ಇವರ ಈ ಕಿರಿಕ್ ಮತ್ತು ಪುಂಡಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ. ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಇಂತಹ ಅನಗತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವುದಲ್ಲದೆ, ಸ್ಥಳೀಯ ಕಾನೂನು ಸುವ್ಯವಸ್ಥೆಗೂ ಭಂಗ ತರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.