Category Archives: Blog

Your blog category

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 4ರ ದಿನಭವಿಷ್ಯ

ಈ ದಿನ ನಿಮ್ಮಿಂದ ಸಾಧ್ಯವಾದಲ್ಲಿ ಗ್ರಂಥ ದಾನವನ್ನು ಮಾಡಿ. ಉದಾಹರಣೆಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಹೀಗೆ ಗ್ರಂಥವೊಂದನ್ನು ದಾನ ಮಾಡಿ. ಇನ್ನು ಸಾರ್ವಜನಿಕ ಸಾರಿಗೆಯನ್ನು ಬಳಸುವವರಾಗಿದ್ದಲ್ಲಿ ಮುಖ್ಯವಾದ ಡಾಕ್ಯುಮೆಂಟ್ ಗಳು, ಗ್ಯಾಜೆಟ್ ಗಳನ್ನು ತೆಗೆದುಕೊಂಡುವಾಗ ಜಾಗ್ರತೆಯಿಂದ ಇರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಕ್ಲಿಕ್ ಆಗಿಯೇ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ನೀವು ಆರಂಭಿಸಿದ ವೃತ್ತಿ- ವ್ಯಾಪಾರ ಅಂದುಕೊಂಡ ದಿಕ್ಕಿನಲ್ಲಿಯೇ ಸಾಗಲಿದೆ. ಹಣಕಾಸಿನ ಹೊಂದಾಣಿಕೆ ಮಾಡಬೇಕು ಎಂದಿದ್ದಲ್ಲಿ ಅದು ಕೂಡ ಸಲೀಸಾಗಿ ಆಗಲಿದೆ. ನೀವು ಮುಂಜಾಗ್ರತೆಯಿಂದ ಹಣ ಉಳಿತಾಯ ಮಾಡಿಕೊಂಡು ಬಂದಿದ್ದು ಅಂತೂ ಪ್ರಯೋಜನಕ್ಕೆ ಬಂತು ಎಂಬ ಸಮಾಧಾನ ಈ ದಿನ ನಿಮಗೆ ಸಿಗಲಿದೆ

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಗ್ಯಾರೇಜ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ವಾಹನಗಳ ಬಿಡಿ ಭಾಗಗಳ ಹೋಲ್ ಸೇಲ್ ಮಾರಾಟ ಮಾಡುವಂಥವರಿಗೆ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ರಿಯಾಯಿತಿಯಲ್ಲಿ ಸಿಗುತ್ತಿದೆ ಎಂಬ ಕಾರಣಕ್ಕೋ ಅಥವಾ ಬೇರೆ ಯಾವುದೋ ಆಫರ್ ಗಳಿವೆ ಅಂತಲೋ ವಾಷಿಂಗ್ ಮಶೀನ್, ರೆಫ್ರಿಜರೇಟ್, ಟಿವಿ ಇಂಥವುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮಗೆ ತುಂಬ ಚೆನ್ನಾಗಿ ಗೊತ್ತಿರುವಂಥ- ಅನುಭವ ಇರುವಂಥ ವಿಷಯಗಳಲ್ಲಿಯೇ ನಿರೀಕ್ಷಿತ ಮಟ್ಟದ ಫಲಿತಾಂಶ ಪಡೆದುಕೊಳ್ಳಲು ಹರಸಾಹಸ ಪಡುವಂತೆ ಆಗಲಿದೆ. ನಿಮ್ಮ ಸುತ್ತಮುತ್ತ ಏನೋ ಬದಲಾವನೆ ಆಗುತ್ತಿದೆ ಎಂಬುದು ಬಲವಾಗಿ ಮನಸ್ಸಿನಲ್ಲಿ ಬೇರೂರಲಿದೆ. ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಕೆಲವು ಕೋರ್ಸ್ ಗಳಿಗೆ ಸೇರ್ಪಡೆ ಆಗುವುದಕ್ಕೆ ಆಲೋಚನೆ ಮಾಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರೀತಿ ಪರೀಕ್ಷೆಯ ಕಾಲ – Kannada News | Horoscope 04 February 2026; Dina Rashi Bhavishya Today, Checkout the details here

ಮೇಷ ರಾಶಿ:

ಆದಾಯಕ್ಕೆ ಮೂಲವಾದುದನ್ನು ಹುಡುಕಿಕೊಳ್ಳುವುದು ಭವಿಷ್ಯ ದೃಷ್ಟಿಯಿಂದ ಉತ್ತಮ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ನಿಮಗಾದ ನೋವಿಗೆ ಯಾರ ಸಾಂತ್ವನವೂ ಉಪಯೋಗಕ್ಕೆ ಬಾರದು. ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗಬಹುದು. ನಕಾರಾತ್ಮಕತೆಯನ್ನು ಬುದ್ಧಿಪೂರ್ವಕವಾಗಿ ಹಿಮ್ಮೆಟ್ಟಿಸಿ. ನಿಮ್ಮ ಮನೋಬಲವು ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಇನ್ನೊಬ್ಬರ ಅನುಭವವನ್ನು ನೀವು ಪಾಠವಾಗಿಸಿಕೊಳ್ಳಿ.

ವೃಷಭ ರಾಶಿ:

ಹೊಸ‌ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯ ಸಾಲದು. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಅತಿಥಿಗಳ ಜೊತೆ ಸಲ್ಪ ಸಮಯ ಕಳೆಯಬೇಕಾಗುವುದು. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ನೀವು ಜಯಶಾಲಿಯಾಗುವಿರಿ. ಒಬ್ಬರ ಬಳಿಯೇ ಎಲ್ಲವನ್ನೂ ಹೇಳಿಕೊಳ್ಳಿ.

ಮಿಥುನ ರಾಶಿ:

ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ. ಕುಟುಂಬ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು. ಹೇಗಾದರೂ ಮಾಡಿ ಬೆಳೆಯಬೇಕು ಎನ್ನುವ ಬಯಕೆ ಅತಿಯಾಗಿರುವುದು. ಅಸಹಾಯಕತೆಯು ಸಿಟ್ಟಾಗಿ ಪರಿಣಮಿಸಬಹುದು.

ಕರ್ಕಾಟಕ ರಾಶಿ:

ಸಲ್ಲದ ಆಸೆಗಳಿಂದ ನಿಮಗೆ ಬಂಧನವನ್ನು ಹಾಕಿಕೊಳ್ಳುವಿರಿ. ಎಂದೋ ಬಯಸಿದ ವಸ್ತುವುದು ಇಂದು ನಿಮಗೆ ಅನಿರೀಕ್ಷಿತವಾಗಿ ಸಿಗುವುದು. ಸಂಗಾತಿಯ ಆಯ್ಕೆಯಲ್ಲಿ ಗೊಂದಲ ಇರುವುದು. ಯಾರಿಗಾದರೂ ನಿಜವನ್ನು ತಿಳಿಸಬೇಕಾದರೆ ಮನಸ್ಸಿಗೆ ನೋವಾಗದಂತೆ ತಿಳಿಸಿ. ಎಂದೋ ಆದ ಘಟನೆಯನ್ನು ಮತ್ತೆ ನೆನಪಿಸಿಕೊಂಡು ಮನಸ್ತಾಪವನ್ನು ತಂದುಕೊಳ್ಳುವಿರಿ. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ‌ ಮಾಡಿ.

ಸಿಂಹ ರಾಶಿ:

ದೌರ್ಭಾಗ್ಯಗಳು ನಿಮ್ಮನ್ನು ಯಾವುದಾದರೂ ಒಂದು ರೀತಿಯಲ್ಲಿ ನಿಮ್ಮನ್ನು ಸೇರಬಹುದು.‌ ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನವಿರಲಿದೆ. ನೀವೇ ಆಶ್ಚರ್ಯವಾಗುವಂತೆ ಆಕರ್ಷಕವಾಗಿ‌ ನೀವು ಇಂದು ಕಾಣಲಿದ್ದೀರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ನಿಮ್ಮ ಮಾತಿಗೆ ಕೆಲವರ ಬೆಂಬಲವು ನಿಮಗೆ ಖುಷಿಕೊಡುವುದು. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು.

ಕನ್ಯಾ ರಾಶಿ:

ನಿಮ್ಮ ಸಹಕಾರವನ್ನು ಬಂಧುಗಳು ಮರೆತು ವರ್ತಿಸುತ್ತಾರೆ. ಪ್ರಯಾಣದಲ್ಲಿ ಸುರಕ್ಷತೆಯ ಬಗ್ಗೆ ಗಮನವಿರಲಿ. ಹಣದ ಕೊರೆತೆ ಇಲ್ಲದಿದ್ದರೂ ಹಳೆಯ ಮನೆಯನ್ನೇ ಅವಶ್ಯಕತೆಗೆ ಸರಿಯಾಗಿ ಗಟ್ಟಿ ಮಾಡಿಕೊಳ್ಳಿ. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾಗುವುದು. ವಿದೇಶೀಯ ವಸ್ತುಗಳ ಬಳಕೆಯನ್ನು ಮಾಡುವುದು ಕಾರಣಾಂತರಗಳಿಂದ ಇಷ್ಟವಾಗದು. ಸಂಪನ್ಮೂಲ ವ್ಯಕ್ತಿಗಳಾಗಿ ದೂರದ ಊರಿಗೆ ಹೋಗುವಿರಿ.

ತುಲಾ ರಾಶಿ:

ಉನ್ನತ ಮಟ್ಟದ ಕಾರ್ಯಕ್ಕೆ ಪರಿಚಿತರ ಬೆಂಬಲವನ್ನು ಪಡೆಯುವಿರಿ. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಬೇರೆಯವರ ಕೆಳಗೆ ಕೆಲಸಮಾಡಲು ಇಷ್ಟವಾಗದು. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಎಲ್ಲ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಕಾಣಬೇಕಾಗಬಹುದು. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡುವುದಿಲ್ಲ.

ವೃಶ್ಚಿಕ ರಾಶಿ:

ನಿಮ್ಮ ಮಾತಿನಿಂದ‌ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಜೀವನ ಶೈಲಿ ವಿಶೇಷ ರೀತಿಯಲ್ಲಿ ಕಾಣಿಸಬಹುದು. ಮೇಲಿಂದ‌ ಮೇಲೆ‌ ಬರುತ್ತಿರುವ ಆರೋಗ್ಯದ ತೊಂದರೆಯು ನಿಮಗೆ ಅಸತಂಕವನ್ನು ಉಂಟುಮಾಡಬಹುದು. ಬೇಡವಾದುದನ್ನು ಕಳೆದುಕೊಳ್ಳಲು ಪ್ರಯತ್ನಿಸಿ. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.

ಧನು ರಾಶಿ:

ರಾಜಕೀಯದವರು ತಮ್ಮ ಹೇಳಿಕೆಗಳಿಗೆ ಸ್ಪಷ್ಟತೆಯನ್ನು ನೀಡುವರು. ಸ್ನೇಹಿತರ ನಿರೀಕ್ಷೆಯಲ್ಲಿ ಹೆಚ್ಚಿನ‌ ಸಮಯವು ಕಳೆದುಹೋಗುವುದು. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಿದ್ದೀರಿ. ವೃತ್ತಿಯಲ್ಲಿ ನಿಮಗೆ ವಿರಾಮವು ಇಂದು ಸಿಗದೇ ನಿಮ್ಮ ಸ್ವಂತ ಕಾರ್ಯವನ್ನು ಕೈ ಬಿಡಬೇಕಾಗುವುದು. ನಿಮ್ಮ ಜೀವನ ಪ್ರೀತಿ ಇತರರಿಗೆ ಖುಷಿಕೊಡುವುದು. ಅಗತ್ಯವಿದ್ದಾಗ ಮಾತ್ರ ಸಾಲದ ಬಗ್ಗೆ ಆಲೋಚಿಸಿ. ಸರ್ಕಾರಿ ಉದ್ಯೋಗದವರು ವರ್ಗಾವಣೆಯಿಂದ ದೂರವಿರಬೇಕಾಗಬಹುದು.

ಮಕರ ರಾಶಿ:

ಸಂಗಾತಿಯ ಸಂಪತ್ತಿನಿಂದ ನಿಮಗೆ ಬೇಕಾದುದನ್ನು ಪಡೆಯುವಿರಿ. ಅತಿಯಾದ ಬಾಯಾರಿಕೆ ಆಗಬಹುದು. ಯಾರ ಮಾತನ್ನು ಒಪ್ಪಿಕೊಳ್ಳದೇ ನಿಮ್ಮದೇ ಆದ ದಾರಿಯಲ್ಲಿ ನಡೆಯುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಮಧ್ಯೆ ಅನಗತ್ಯರ ಪ್ರವೇಶದಿಂದ ಕೋಪಗೊಳ್ಳುವಿರಿ. ನಿಮ್ಮ ಮಕ್ಕಳ ವರ್ತನೆಯಿಂದ ಬೇಸರ ಆಗುವುದು. ಮಾಡಬೇಕಾದ ಒಳ್ಳೆಯ ಕೆಲಸದ ಬಗ್ಗೆ ಗಮನವಿರಲಿ. ಬೇರೆಯವರಿಂದ ನಿಮ್ಮವರ ಬಗ್ಗೆ ದೂರನ್ನೂ ಕೇಳಬೇಕಾದೀತು.

ಕುಂಭ ರಾಶಿ:

ಸಹೋದ್ಯೋಗಿಗಳ ಜೊತೆ ವಿವಾಹ ನಿಶ್ಚಯ ಮಾಡಿಕೊಳ್ಳುವಿರಿ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಿದ್ದರೂ ಅದನ್ನು ಬಳಸಿಕೊಳ್ಳುವ ಜಾಣತನವೂ ಅಗತ್ಯವಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಕಾರ್ಯದ ಒತ್ತಡದಿಂದ ಸಾಧ್ಯವಾಗದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ. ಬಂಧುಗಳ ಜೊತೆ ಅನಗತ್ಯ ವಾಗ್ವಾದ ಬೇಡ. ನಿಮ್ಮ ಮೇಲಿನ‌ ಪ್ರೀತಿ ಕಡಿಮೆ‌ ಆಗುವುದು.‌ ಯಾವುದೂ ಬೇಡವೆನ್ನುವ ಭಾವವು ಇರುವುದು.

ಮೀನ ರಾಶಿ:

ಪ್ರೀತಿಯ ವಿಷಯಗಳಲ್ಲಿ ಭಾವನೆಗಳಿಗೆ ಗಮನ ಕೊಡಿ. ಹಣದ ವಿಷಯಗಳಲ್ಲಿ ಯೋಜನೆಗೆ ಆದ್ಯತೆ ನೀಡಬೇಕು. ಹಳೆಯ ದಾಂಪತ್ಯವಾದರೂ ಸಂತೋಷಕ್ಕೆ ಕೊರತೆ ಇಲ್ಲದಂತೆ ಇರುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಕೊಡುಗೆಯನ್ನು ನೀಡುವಿರಿ. ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸುವಿರಿ. ವ್ಯವಹಾರದಲ್ಲಿ ಹೆಚ್ಚಿನ ಲಾಭವು ಬರಬಹುದು. ಪ್ರಸಾರ ಮಾಧ್ಯಮದವರು ಮನೆಯಿಂದ ದೂರ ಹೋಗಬೇಕಾಗಬಹುದು.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಸೌಭಾಗ್ಯ, ಕರಣ : ತೈತಿಲ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 23 pm, ಇಂದಿನ ಶುಭಾಶುಭ ಕಾಲ : ರಾಹು 12:38 – 14:05, ಯಮಗಂಡ ಕಾಲ 08:19 – 09:46, ಗುಳಿಕ ಕಾಲ 11:12 – 12:38

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 4ರ ದಿನಭವಿಷ್ಯ

ನಿಮ್ಮಲ್ಲಿ ಯಾರಿಗೆ ಪದೇಪದೇ ಅಲರ್ಜಿ ಕಾಡುತ್ತಾ ಇದೆ, ರಕ್ತದೊತ್ತಡದಂಥ ತೀವ್ರ ಸಮಸ್ಯೆಗಳು ಕಾಡುತ್ತಾ ಇವೆ ಅಂಥವರು ಸ್ಫಟಿಕದ ಬ್ರೇಸ್ ಲೆಟ್ ಅಥವಾ ಸ್ಫಟಿಕದ ಹಾರವನ್ನು ಧಾರಣೆ ಮಾಡಿಕೊಳ್ಳಿ. ಇಂಟರ್ ವ್ಯೂ, ಮುಖ್ಯ ಕೆಲಸದ ಮೇಲೆ ಪ್ರಯಾಣ ಮಾಡುತ್ತಾ ಇದ್ದೀರಿ ಅಂತಾದಲ್ಲಿ ಒಂದು ರೂಪಾಯಿಯ ಆರು ನಾಣ್ಯಗಳನ್ನು ದೇವಸ್ಥಾನದ ಹುಂಡಿಯಲ್ಲಿ ಹಾಕಿ, ಮುಂದುವರಿಯಿರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮಗೆ ತುಂಬ ಇಷ್ಟವಾಗುವಂಥ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಜೊತೆಗೆ ಸಂತೋಷವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಅಷ್ಟೇ ಅಲ್ಲ, ಕುಟುಂಬ ಸದಸ್ಯರ ಜೊತೆಗೆ ಹೋಟೆಲ್- ರೆಸ್ಟೋರೆಂಟ್ ನಲ್ಲಿ ಸ್ವಾದಿಷ್ಟವಾದ ಭೋಜನ- ಖಾದ್ಯಗಳನ್ನು ಸವಿಯುವಂಥ ಯೋಗ ಸಹ ಇದೆ. ಲೇವಾದೇವಿ ವ್ಯವಹಾರ ಮಾಡುತ್ತಿರುವವರು ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಸಂಯಮ ಹಾಗೂ ತಾಳ್ಮೆ ನಿಮ್ಮ ಪಾಲಿಗೆ ಗಟ್ಟಿಯಾಗಿ ನಿಲ್ಲುವಂಥ ಸ್ವಭಾವ ಆಗಿರುತ್ತವೆ. ನಿಮ್ಮ ಜತೆಗೆ ಇರುವವರು ಇನ್ನು ಇದು ಆಗದು ಎಂದು ಕೆಲವು ಕೆಲಸಗಳಿಂದ ದೂರ ಸರಿದು ನಿಂತ ಮೇಲೂ ನೀವು ಗಟ್ಟಿಯಾಗಿ ನಿಂತು ಯಶಸ್ಸು ಕಾಣುವಂತೆ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡಿಕೊಂಡು ಇರುವವರು ಅದರಲ್ಲಿನ ರಹಸ್ಯಗಳನ್ನು ಯಾರ ಜೊತೆಗೆ ಹಂಚಿಕೊಳ್ಳುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮಗೆ ಏನು ಸಿಗುತ್ತದೋ ಅಷ್ಟರಲ್ಲಿಯೇ ತೃಪ್ತಿ ಪಟ್ಟುಕೊಂಡು ಸುಮ್ಮನಿರಬೇಕು ಎಂದು ಎಚ್ಚರಿಕೆ ಧ್ವನಿಯಲ್ಲಿ ಕೆಲವು ವ್ಯಕ್ತಿಗಳು ಹೇಳಲಿದ್ದಾರೆ. ಭಾವನಾತ್ಮಕವಾಗಿ ನೀವು ಬಹಳ ಹತ್ತಿರವಾದ ವ್ಯಕ್ತಿಯ ಆರ್ಥಿಕ ವಿಚಾರಗಳು ಗಾಬರಿ ಹುಟ್ಟಿಸುತ್ತವೆ. ನೀವು ಊಹಿಸಲು ಕೂಡ ಸಾಧ್ಯವಿಲ್ಲದಂಥ ದೊಡ್ಡ ಸಮಸ್ಯೆ ಅವರ ಬದುಕಿನಲ್ಲಿ ಆಗಿರುವುದು ತಿಳಿದುಬಂದು, ಬೇಸರ ಮೂಡಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 4ರ ದಿನಭವಿಷ್ಯ

ಈ ದಿನ ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ, ನಿಮ್ಮಿಂದ ಸಾಧ್ಯವಾಗುವುದಾದಲ್ಲಿ ಒಮ್ಮೆ ಹೇಳಿಕೊಳ್ಳಿ. ಮುಖ್ಯ ಕೆಲಸದ ಮೇಲೆ ಮನೆಯಿಂದ ಆಚೆ ಹೋಗುವಾಗ ಹಸಿರು ಬಣ್ಣದ ಕರ್ಚೀಫ್ ತೆಗೆದುಕೊಂಡು ಹೋಗಿ. ಕಠಿಣ ಎನಿಸಿದಂಥ ಕೆಲಸಗಳನ್ನು ಸುಲಭವಾಗಿ ಮಾಡುವುದಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಪ್ರಯಾಣದಿಂದ ಆಯಾಸ ಕಾಡಲಿದೆ. ಉದ್ಯೋಗ ಸ್ಥಳದಲ್ಲಿಯೂ ಕೆಲಸದ ಒತ್ತಡ ಇದ್ದು, ಅದರಿಂದ ಮಾನಸಿಕವಾದ ದಣಿವು ಕೂಡ ಜತೆಯಾಗುತ್ತದೆ. ಸಂಬಂಧಿಗಳು ಆಡಿದ ಮಾತುಗಳಿಂದ ಅಥವಾ ಈ ದಿನ ನಿಮಗೆ ಫೋನ್ ಮಾಡಿ, ಆಡುವಂಥ ಕೆಲವು ಮಾತುಗಳಿಂದ ವಿಪರೀತ ಸಿಟ್ಟು ಬರುವಂತೆ ಆಗಲಿದೆ. ವಿವಾಹಿತರಿಗೆ ಸಂಗಾತಿಯು ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ತೀರ್ಮಾನ ಸಿಟ್ಟು ತರಿಸುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಸಂಬಂಧಿಗಳೋ- ಸ್ನೇಹಿತರೋ ತಮ್ಮ ಶಾಪಿಂಗ್ ಗೆ ನೀವೂ ಬರಬೇಕು ಎಂದು ಒತ್ತಡ ಹಾಕಿ, ಕರೆದುಕೊಂಡು ಹೋಗಲಿದ್ದಾರೆ. ಮನೆಗೆ ಬೇಕಾದ ವಸ್ತುಗಳು ಕೆಲವನ್ನು ತರಲೇಬೇಕು ಎಂಬ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸಲಿದ್ದೀರಿ. ಇಷ್ಟು ಕಾಲ ಅಷ್ಟೇನೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದಂಥ ವಸ್ತು- ವಿಷಯಗಳಿಗೆ ಸಿಕ್ಕಾಪಟ್ಟೆ ಪ್ರಾಶಸ್ತ್ಯ ಬಂದುಬಿಡುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮದೆಷ್ಟೋ ಅಷ್ಟು ಕೆಲಸವನ್ನು ಮಾತ್ರ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಅತ್ಯುತ್ಸಾಹದಲ್ಲೋ ಅಥವಾ ಇನ್ನೊಬ್ಬರಿಗೆ ಸಹಾಯ ಆಗಲಿ ಅಂದುಕೊಂಡೋ ಏನಾದರೂ ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದೋ ಅಥವಾ ಕೆಲಸಕ್ಕೆ ತೊಡಗುವುದೋ ಮಾಡಿದರೆ ಆ ನಂತರ ಪರಿತಪಿಸುವಂತೆ ಆಗಲಿದೆ. ವಸ್ತ್ರಾಭರಣಗಳ ಖರೀದಿಗೆ ಹೆಚ್ಚಿನ ಖರ್ಚಾಗುವಂಥ ಯೋಗ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

ಲೋಕಸಭೆ ಅಧಿವೇಶನದಲ್ಲಿ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದ 8 ಸಂಸದರ ಅಮಾನತು – Kannada News | 8 Opposition MPs suspended from Lok Sabha Session for throwing papers at Speaker

ನವದೆಹಲಿ, ಫೆಬ್ರವರಿ 3: ಲೋಕಸಭೆಯಲ್ಲಿ ಸ್ಪೀಕರ್ ಪೀಠದ ಮೇಲೆ ಕಾಗದಗಳನ್ನು ಎಸೆದಿದ್ದಕ್ಕಾಗಿ 8 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ. ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದಕ್ಕಾಗಿ ರಾಜಾ ವಾರಿಂಗ್ ಸೇರಿದಂತೆ 8 ವಿರೋಧ ಪಕ್ಷದ ಸಂಸದರನ್ನು ಲೋಕಸಭೆಯಿಂದ (Lok Sabha Session) ಅಮಾನತುಗೊಳಿಸಲಾಗಿದೆ. ಸದನದ ಕಾರ್ಯವಿಧಾನಗಳಿಗೆ ಅಡ್ಡಿಪಡಿಸಿದ ಮತ್ತು ಪೀಠದ ಕಡೆಗೆ ಕಾಗದಗಳನ್ನು ಎಸೆದ ಆರೋಪದ ಮೇಲೆ ಅಶಿಸ್ತಿನ ವರ್ತನೆಗಾಗಿ 8 ವಿರೋಧ ಪಕ್ಷದ ಸದಸ್ಯರನ್ನು ಲೋಕಸಭೆ ಸ್ಪೀಕರ್ ಅಮಾನತುಗೊಳಿಸಿದ್ದಾರೆ.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಸ್ಪೀಕರ್ ಈ ನಡವಳಿಕೆಯನ್ನು ಸಂಸತ್ತಿನ ಶಿಷ್ಟಾಚಾರದ ಗಂಭೀರ ಉಲ್ಲಂಘನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅದರಲ್ಲೂ ವಿಶೇಷವಾಗಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಇಂತಹ ನಡವಳಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಅವ್ಯವಸ್ಥೆ ಮತ್ತು ಸ್ಪೀಕರ್ ಕಡೆಗೆ ಕಾಗದಗಳನ್ನು ಎಸೆದ ಘಟನೆಯ ಬಗ್ಗೆ ಲೋಕಸಭಾ ಸ್ಪೀಕರ್‌ಗೆ ಔಪಚಾರಿಕ ದೂರು ನೀಡುವುದಾಗಿ ಬಿಜೆಪಿ ಘೋಷಿಸಿತು.

ಇದನ್ನೂ ಓದಿ: ಲೋಕಸಭೆ ಅಧಿವೇಶನದಲ್ಲಿ ಗಣಿ ಮತ್ತು ಖನಿಜ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರ

ಅಮಾನತುಗೊಂಡ ಶಾಸಕರಲ್ಲಿ ಮಾಣಿಕಮ್ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕಿರಣ್ ಕುಮಾರ್ ರೆಡ್ಡಿ, ಎಸ್ ವೆಂಕಟೇಶನ್, ಹಿಬಿ ಈಡನ್, ಡೀನ್ ಕುರಿಯಾಕೋಸ್ ಮತ್ತು ಪ್ರಶಾಂತ್ ಪಡೋಲೆ ಸೇರಿದ್ದಾರೆ. ಈ ಸಂಸದರಲ್ಲಿ 7 ಮಂದಿ ಕಾಂಗ್ರೆಸ್ ಪಕ್ಷದವರಾಗಿದ್ದರೆ, ವೆಂಕಟೇಶನ್ ಮಾತ್ರ ಸಿಪಿಎಂನವರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಸಂಬಂಧ ನಿರ್ಣಯ ಮಂಡಿಸಿದ ನಂತರ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು ತಮ್ಮ ಸಹ ಶಾಸಕರ ಅಮಾನತು ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧನುಷ್ ಜತೆ ಡೇಟಿಂಗ್ ಗಾಸಿಪ್: ಪ್ರೀತಿ ಬಗ್ಗೆ ಮನಸಾರೆ ಮಾತನಾಡಿದ ಮೃಣಾಲ್ ಠಾಕೂರ್ – Kannada News | Mrunal Thakur talks about love amid gossip of her dating with Dhanush

ನಟಿ ಮೃಣಾಲ್ ಠಾಕೂರ್ ಅವರು ನಟ ಧನುಷ್ (Dhanush) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಇದೆ. ಸದ್ಯಕ್ಕಂತೂ ಈ ಬಗ್ಗೆ ಅವರಿಬ್ಬರು ಸಾವರ್ಜನಿಕವಾಗಿ ಮಾತನಾಡಿಲ್ಲ. ಆದರೂ ಹಲವು ಅಂತೆ-ಕಂತೆಗಳು ಕೇಳಿಬರುತ್ತಿವೆ. ಬಾಲಿವುಡ್​​ನಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಡಿಮ್ಯಾಂಡ್ ಹೊಂದಿರುವ ಮೃಣಾಲ್ ಠಾಕೂರ್ (Mrunal Thakur) ಅವರು ಈಗ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಎಲ್ಲರಿಗೂ ಪ್ರೀತಿ ಆಗಬೇಕು ಎಂದು ಅವರು ಹೇಳಿದ್ದಾರೆ. ಅಂದಹಾಗೆ, ಅವರು ಈ ವಿಷಯ ಮಾತನಾಡಿರುವುದು ಹೊಸ ಹಾಡಿನ ಪ್ರಚಾರದ ವೇಳೆ.

ಮೃಣಾಲ್ ಠಾಕೂರ್ ಮತ್ತು ದುಲ್ಕರ್ ಸಲ್ಮಾನ್ ಅವರು ‘ಸೀತಾ ರಾಮಂ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಈಗ ಅವರಿಬ್ಬರು ಜೊತೆಯಾಗಿ ‘ಬೀಗಿ ಬೀಗಿ..’ ಹಾಡಿನಲ್ಲಿ ಅಭಿನಯಿಸಿದ್ದಾರೆ. ಎ.ಆರ್. ರೆಹಮಾನ್ ಅವರು ಈ ಮ್ಯೂಸಿಕ್ ವಿಡಿಯೋಗೆ ಸಂಗೀತ ನೀಡಿದ್ದಾರೆ. ಈ ಲವ್ ಸಾಂಗ್ ಬಗ್ಗೆ ಮಾತನಾಡುವಾಗ ಮೃಣಾಲ್ ಠಾಕೂರ್ ಅವರು ಪ್ರೀತಿ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಪ್ರೀತಿ ಎಂಬುದು ಒಂದು ಸುಂದರವಾದ ಭಾವನೆ. ಈ ಭೂಮಿಯ ಮೇಲಿರುವ ಎಲ್ಲರಿಗೂ ಪ್ರೀತಿ ಆಗಬೇಕು. ಅದು ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ. ನಿಮ್ಮೊಳಗಿನ ಮಗುವಿನಂತಹ ವ್ಯಕ್ತಿತ್ವವನ್ನು ಅವರು ಪೋಷಿಸುತ್ತದೆ. ಜಗತ್ತಿನಲ್ಲಿನ ಸುಂದರವಾಗಿ ಸಂಗತಿಗಳಲ್ಲಿ ಪ್ರೀತಿ ಕೂಡ ಒಂದಾಗಿದೆ. ಎಲ್ಲರಿಗೂ ಜೀವನದಲ್ಲಿ ಪ್ರೀತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಮೃಣಾಲ್ ಠಾಕೂರ್ ಅವರು ಹೇಳಿದ್ದಾರೆ.

ಇಂದಲ್ಲ ನಾಳೆ ಮೃಣಾಲ್ ಠಾಕೂರ್ ಅವರು ಧನುಷ್ ಜೊತೆಗಿನ ಡೇಟಿಂಗ್ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಈಗಾಗಲೇ ಅವರ ಬಗ್ಗೆ ಹಲವು ಬಗೆಯ ಗಾಸಿಪ್ ಹರಿದಾಡಿದೆ. ಶೀಘ್ರದಲ್ಲೇ ಅವರು ಮದುವೆ ಆಗುತ್ತಾರೆ ಎಂದು ಕೂಡ ಸುದ್ದಿ ಹಬ್ಬಿದೆ.

ಇದನ್ನೂ ಓದಿ: ಧನುಷ್ ಜೊತೆ ಮೃಣಾಲ್ ಠಾಕೂರ್ ಮದುವೆ? ಇಬ್ಬರ ನಡುವೆ ವಯಸ್ಸಿನ ಅಂತರ

2025ರ ಆಗಸ್ಟ್ ತಿಂಗಳಲ್ಲಿ ಮೃಣಾಲ್ ಠಾಕೂರ್ ಮತ್ತು ಧನುಷ್ ಅವರು ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗಿನಿಂದ ಅವರಿಬ್ಬರ ಬಗ್ಗೆ ಗುಸುಗುಸು ಹಬ್ಬಲು ಶುರು ಆಯಿತು. ಅವರಿಬ್ಬರು ಪರಸ್ಪರರ ಸಿನಿಮಾಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ಇದರಿಂದ ಕೂಡ ಅನುಮಾನ ಹೆಚ್ಚಲು ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಟಿಟಿಯಲ್ಲಿ ‘ಧುರಂಧರ್’ ನೋಡಿ ಮೆಚ್ಚಿಕೊಂಡ ಪಾಕಿಸ್ತಾನಿ ಪ್ರೇಕ್ಷಕರು – Kannada News | Pakistani viewer review Dhurandhar after watching it on Netflix OTT

ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಸಿನಿಮಾ ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಲಿಲ್ಲ. ಅಲ್ಲದೇ ಹಲವು ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಈಗ ಒಟಿಟಿಯಲ್ಲಿ ‘ಧುರಂಧರ್’ ಬಿಡುಗಡೆ ಆಗಿದೆ. ಪಾಕಿಸ್ತಾನದ (Pakistan) ಜನರು ಕೂಡ ನೆಟ್​ಫ್ಲಿಕ್ಸ್ ಮೂಲಕ ಈ ಸಿನಿಮಾವನ್ನು ನೋಡಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಧುರಂಧರ್’ ಸಿನಿಮಾದ ಪೂರ್ತಿ ಕಥೆ ಪಾಕಿಸ್ತಾನದ ಲಿಯಾರಿ ಪಟ್ಟಣದಲ್ಲಿ ನಡೆಯುತ್ತದೆ. ಆ ದೃಶ್ಯಗಳನ್ನು ಕಂಡು ಪಾಕ್ ಮಂದಿ ಫಿದಾ ಆಗಿದ್ದಾರೆ.

2000ನೇ ಇಸವಿಯ ಆಸುಪಾಸಿನಲ್ಲಿ ಪಾಕಿಸ್ತಾನ ಯಾವ ರೀತಿ ಇತ್ತು ಎಂಬುದನ್ನು ‘ಧುರಂಧರ್’ ಸಿನಿಮಾದಲ್ಲಿ ತೋರಿಸಲಾಗಿದೆ. ಅದನ್ನು ನೋಡಿ ಪಾಕ್ ಪ್ರೇಕ್ಷಕರಿಗೆ ಅಚ್ಚರಿ ಆಗಿದೆ. ಅಷ್ಟು ಕರಾರುವಕ್ಕಾಗಿ ನಿರ್ದೇಶಕ ಆದಿತ್ಯ ಧಾರ್ ಅವರು ಪ್ರತಿ ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ. ‘ನಮಗೆ ಆ ಕಾಲಕ್ಕೆ ಹೋಗಿ ಬಂದ ಅನುಭವ ಆಯಿತು’ ಎಂದು ಪಾಕಿಸ್ತಾನದಲ್ಲಿನ ಪ್ರೇಕ್ಷಕರು ಹೊಗಳಿದ್ದಾರೆ.

ಈ ಸಿನಿಮಾ ಪಾಕ್ ವಿರೋಧಿ ಆಗಿಲ್ಲ ಎಂಬ ಅಭಿಪ್ರಾಯವನ್ನು ಕೂಡ ಅಲ್ಲಿನ ಕೆಲವು ಪ್ರೇಕ್ಷಕರು ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಪಾಕಿಸ್ತಾನದ ಗ್ಯಾಂಗ್​ಸ್ಟರ್ ರೆಹಮಾನ್ ಡಕಾಯಿತ್ ಪಾತ್ರವನ್ನು ಅಕ್ಷಯ್ ಖನ್ನಾ ಅವರು ಮಾಡಿದ್ದಾರೆ. ಅರ್ಜುನ್ ರಾಮ್​​ಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

Saw the movie as a Pakistani born in Karachi
byu/Either-Spray5349 inDhurandhar

ಅಂದಹಾಗೆ, ಪಾಕಿಸ್ತಾನದ ಲಿಯಾರಿ ಪಟ್ಟಣದ ಸೆಟ್ ಹಾಕಿ ‘ಧುರಂಧರ್’ ಸಿನಿಮಾದ ಶೂಟಿಂಗ್ ಮಾಡಲಾಗಿತ್ತು. ಆ ಕಾಲದ ಲಿಯಾರಿಯನ್ನು ತೋರಿಸಲು ಕಲಾ ನಿರ್ದೇಶನದ ತಂಡ ಕಷ್ಟಪಟ್ಟಿದೆ. ನಿಖರವಾಗಿ ಉರ್ದು ಪೋಸ್ಟರ್, ಸೂಚನಾ ಫಲಕ ಮುಂತಾದ್ದನ್ನು ಬಳಸಿಕೊಳ್ಳಲಾಗಿದೆ. ಅದನ್ನೆಲ್ಲ ನೋಡಿ ಪಾಕಿಸ್ತಾನದ ಪ್ರೇಕ್ಷಕರು ಅಚ್ಚರಿಪಟ್ಟಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಚಿತ್ರಕ್ಕಾಗಿ ಮತ್ತೆ ಶೂಟಿಂಗ್ ಮಾಡಲ್ಲ ಅರ್ಜುನ್ ರಾಮ್​ಪಾಲ್

‘ಧುರಂಧರ್’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಈಗ ‘ಧುರಂಧರ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇಂದು (ಫೆಬ್ರವರಿ 3) ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಟ್ರೇಲರ್ ಕೂಡ ಹೊರಬರಲಿದೆ. ಮಾರ್ಚ್ 19ರಂದು ‘ಧುರಂಧರ್ 2’ ತೆರೆಕಾಣಲಿದೆ. ಅಂದು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕೂಡ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು – Kannada News | SP Deepan on Siddapura Murder: Astrologer Kamalakar Bhat Under Scrutiny in Family Dispute

ಸಿದ್ದಾಪುರ, ಫೆ.3: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಇಂದು (ಫೆಬ್ರವರಿ 2) ರಂದು ನಡೆದ ಹಲ್ಲೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ಮತ್ತು ಆಕೆಯ ತಂದೆ ಲೋಕನಾಥ್ ಚೌಳಪ್ಪ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ವಸಂತ್ ನಾಯ್ಕ್ (43) ಮೃತಪಟ್ಟಿದ್ದು, ಮಹೇಶ್ ನಾಯ್ಕ್ (37) ಮತ್ತು ಕುಮಾರ್ (35) ಗಾಯಗೊಂಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಗುಣೇ ನಂಬರ್ 23/26 ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಇದು ಪೂರ್ವಯೋಜಿತ ಕೃತ್ಯ ಎಂದು ತಿಳಿದುಬಂದಿದೆ. ಕಾರಿನಲ್ಲಿ ಅಪರಿಚಿತ ವ್ಯಕ್ತಿಗಳು ಕೂಡ ಬಂದಿದ್ದು, ಅವರ ಪಾತ್ರದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ಅವರಗುಪ್ಪ ಗ್ರಾಮದ ನಿವಾಸಿ ಸಂಧ್ಯಾ ಅವರು ನೀಡಿದ ದೂರಿನಲ್ಲಿ, ತಮ್ಮ ಪತಿ ವಸಂತ್ ನಾಯ್ಕ್ ಅವರ ತಮ್ಮ ಮಹೇಶ್ ನಾಯ್ಕ್ ಅವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಮಹೇಶ್ ಅವರ ಪತ್ನಿ ಸುಚಿತ್ರಾ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಸುಮಶ್ರೀ ಮತ್ತು ಅಮೃತಾ ಆರು ತಿಂಗಳಿಂದ ಮಹೇಶ್ ಅವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅವರು ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಸುಮಶ್ರೀಗೆ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಅವರು ನೀನು ನಿನ್ನ ತಂದೆಯ ಬಳಿ ಹೋಗು, ಇಲ್ಲಿರಬೇಡ, ಇಲ್ಲದಿದ್ದರೆ ವಿಷ ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರವನ್ನು ಸುಮಶ್ರೀ ತನ್ನ ತಂದೆ ಮಹೇಶ್‌ಗೆ ತಿಳಿಸಿದ್ದಳು. ತನ್ನ ಮಗಳನ್ನು ಕರೆತರಲು ಮಹೇಶ್ ನಾಯ್ಕ್ ತನ್ನ ಸಹೋದರ ವಸಂತ್ ನಾಯ್ಕ್ ಮತ್ತು ಅಕ್ಕಪಕ್ಕದ ಮನೆಯವರಾದ ಕುಮಾರ್ ಅವರೊಂದಿಗೆ ಸುಚಿತ್ರಾ ಇದ್ದ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಚೌಳಪ್ಪ, ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಇತರ ನಾಲ್ಕು ಮಂದಿ ಅಲ್ಲಿಗೆ ಆಗಮಿಸಿ ವಾಗ್ವಾದ ನಡೆಸಿದ್ದಾರೆ. ವಾಗ್ವಾದ ತಾರಕಕ್ಕೇರಿ ಹಲ್ಲೆ ನಡೆದಿದೆ.ಈ ಹಲ್ಲೆಯಲ್ಲಿ ವಸಂತ್ ನಾಯ್ಕ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಟೀಂ ಇಂಡಿಯಾವನ್ನು ಬಿಟ್ಟು ಇತರ ತಂಡಗಳಲ್ಲಿ 40 ಭಾರತೀಯ ಮೂಲದ ಕ್ರಿಕೆಟಿಗರು – Kannada News | 2026 T20 World Cup: 40+ Indian Origin Cricketers Set to Shine in Global Squads

2026 ರ ಟಿ20 ವಿಶ್ವಕಪ್ ( T20 World Cup 2026) ಫೆಬ್ರವರಿ 7 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಯಲ್ಲಿ 20 ತಂಡಗಳು ಏಕೈಕ ಟ್ರೋಫಿಗಾಗಿ ಸೆಣಸಾಡಲಿವೆ. ಈ ಆವೃತ್ತಿಯಲ್ಲಿ 55 ಪಂದ್ಯಗಳು ನಡೆಯಲಿದ್ದು, ಮಾರ್ಚ್​ 8 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳಲಿದೆ. ಈ ಬಾರಿಯ ಟಿ20 ವಿಶ್ವಕಪ್​ನ ವಿಶೇಷತೆ ಏನೆಂದರೆ, ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ವಿವಿದ ತಂಡಗಳಲ್ಲಿ ಬರೋಬ್ಬರಿ 40 ಭಾರತೀಯ ಮೂಲದ ಕ್ರಿಕೆಟಿಗರು ಸೇರಿದ್ದಾರೆ.

ಅದರಲ್ಲೂ ಅಮೆರಿಕ, ಕೆನಡಾ, ಯುಎಇ ಮತ್ತು ಓಮನ್ ತಂಡಗಳಲ್ಲಿ ಭಾರತೀಯ ಮೂಲದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆನಡಾ ತಂಡದಲ್ಲಿ 11 ಭಾರತೀಯರು, ಯುಎಸ್ಎ ತಂಡದಲ್ಲಿ 9 ಆಟಗಾರರು ಮತ್ತು ಓಮನ್ ಮತ್ತು ಯುಎಇ ತಂಡಗಳಲ್ಲಿ ತಲಾ ಏಳು ಆಟಗಾರರು ಸೇರಿದ್ದಾರೆ. ಅಂದರೆ, ಈ ನಾಲ್ಕು ದೇಶಗಳ ತಂಡಗಳಲ್ಲಿ ಬರೋಬ್ಬರಿ 34 ಭಾರತೀಯರಿದ್ದಾರೆ. ಇತರ ದೇಶಗಳ ತಂಡಗಳನ್ನು ಸೇರಿಸಿದರೆ, ಈ ಸಂಖ್ಯೆ 40 ದಾಟುತ್ತದೆ.

ಕೆನಡಾ: ದಿಲ್‌ಪ್ರೀತ್ ಬಾಜ್ವಾ (ನಾಯಕ), ಅಜಯ್‌ವೀರ್ ಹುಂಡಾಲ್, ಅಂಶ್ ಪಟೇಲ್, ಹರ್ಷ್ ಠಾಕರ್, ಜಸ್ಕರನ್‌ದೀಪ್ ಬಟ್ಟರ್, ಕನ್ವರ್‌ಪಾಲ್ ತತ್ಗುರ್, ನವನೀತ್ ಧಲಿವಾಲ್, ರವೀಂದರ್‌ಪಾಲ್ ಸಿಂಗ್, ಶಿವಂ ಶರ್ಮಾ, ಶ್ರೇಯಸ್ ಮೊವ್ವಾ ಮತ್ತು ಯುವರಾಜ್ ಸಮ್ರಾ.

ಅಮೆರಿಕ: ಮೋನಾಂಕ್ ಪಟೇಲ್ (ನಾಯಕ), ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನೋಸ್ತುಷ್ ಕೆಂಜಿಗೆ, ಸೈತೀಜಾ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ಸೌರಭ್ ನೇತ್ರವಲ್ಕರ್, ಶುಭಂ ರಂಜನೆ.

ಓಮನ್; ಜತಿಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಕರಣ್ ಸೋನಾವಾಲೆ, ಜೇ ಒಡೆದರ, ಆಶಿಶ್ ಒಡೆದರ, ವಾಸಿಂ ಅಲಿ, ಜಿತೇನ್ ರಾಮನಂದಿ.

ಯುನೈಟೆಡ್ ಅರಬ್ ಎಮಿರೇಟ್ಸ್‌: ಅಲಿಶನ್ ಶರಾಫು, ಆರ್ಯನ್ಶ್ ಶರ್ಮಾ, ಧ್ರುವ್ ಪರಾಶರ್, ಹರ್ಷಿತ್ ಕೌಶಿಕ್, ಮಾಯಾಂಕ್ ಕುಮಾರ್, ಸಿಮ್ರಂಜಿತ್ ಸಿಂಗ್, ಸೊಹೈಬ್ ಖಾನ್.

ನ್ಯೂಜಿಲೆಂಡ್: ಇಶ್ ಸೋಧಿ, ರಚಿನ್ ರವೀಂದ್ರ

ದಕ್ಷಿಣ ಆಫ್ರಿಕಾ: ಕೇಶವ್ ಮಹಾರಾಜ್

ವೆಸ್ಟ್ ಇಂಡೀಸ್: ಗುಡಕೇಶ್ ಮೋತಿ

ಇಟಲಿ: ಜಸ್ಪ್ರೀತ್ ಸಿಂಗ್

ನೆದರ್ಲ್ಯಾಂಡ್ಸ್: ಆರ್ಯನ್ ದತ್

ಟಿ20 ವಿಶ್ವಕಪ್ ಹೀಗಿರಲಿದೆ

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿವೆ. ಇವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಐದು ತಂಡಗಳು ಇರುತ್ತವೆ. ಲೀಗ್ ಹಂತದ ನಂತರ, ಅಗ್ರ-8 ತಂಡಗಳು ಸೂಪರ್-8 ಹಂತಕ್ಕೆ ಮುನ್ನಡೆಯುತ್ತವೆ. ಅಲ್ಲಿಂದ ಸೆಮಿಫೈನಲ್ ನಡೆಯಲಿದ್ದು, ನಂತರ ಮಾರ್ಚ್ 8 ರಂದು ಗ್ರ್ಯಾಂಡ್ ಫೈನಲ್ ನಡೆಯಲಿದೆ. ಈ ಟೂರ್ನಿಯಲ್ಲಿ ಬಾಂಗ್ಲಾದೇಶದ ಬದಲು ಐಸಿಸಿ ಸ್ಕಾಟ್ಲೆಂಡ್‌ಗೆ ಅವಕಾಶ ನೀಡಿದೆ. ಮತ್ತೊಂದೆಡೆ, ಫೆಬ್ರವರಿ 15 ರಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ಯೋಜನೆ ಈಗ ಬಿಸಿ ವಿಷಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:57 pm, Tue, 3 February 26

Source link

ಪ್ರಯಾಣಿಕರಿದ್ದಾಗಲೇ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ, ಇಂಡಿಗೋ ನಡುವೆ ಡಿಕ್ಕಿ – Kannada News | Air India and IndiGo flights wings collide at Mumbai Airport with passengers onboard

ಮುಂಬೈ, ಫೆಬ್ರವರಿ 3: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರಯಾಣಿಕ ವಿಮಾನಗಳು ಡಿಕ್ಕಿ ಹೊಡೆದಿವೆ. ಈ ಘಟನೆಯ ಸಮಯದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರು ಕುಳಿತಿದ್ದರು. ಕೊಯಮತ್ತೂರಿಗೆ ಹೊರಡಲು ರೆಡಿಯಾಗಿ ರಿವರ್ಸ್​ ಹೋಗುತ್ತಿದ್ದ ಏರ್ ಇಂಡಿಯಾ (Air India) ವಿಮಾನ AI 2732 ಮತ್ತು ಹೈದರಾಬಾದ್‌ನಿಂದ ಬಂದ ನಂತರ ಟ್ಯಾಕ್ಸಿ ಮಾಡುತ್ತಿದ್ದ ಇಂಡಿಗೋ (Indigo)  ವಿಮಾನ 6E 791ಗಳ ನಡುವೆ ಡಿಕ್ಕಿ ಉಂಟಾಗಿದೆ.

ಸದ್ಯಕ್ಕೆ ಎರಡೂ ವಿಮಾನಗಳಿಗೆ ಹಾನಿಯಾದ ಪ್ರಮಾಣ, ವಿಮಾನದಲ್ಲಿದ್ದ ಪ್ರಯಾಣಿಕರ ಸಂಖ್ಯೆ ಮತ್ತು ಈ ಘಟನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದರ ಕುರಿತು ವಿವರಗಳು ತಕ್ಷಣ ಲಭ್ಯವಾಗಿಲ್ಲ.

ಇದನ್ನೂ ಓದಿ: IndiGo Crisis: ಡಿಸೆಂಬರ್​ನಲ್ಲಿ ಉಂಟಾದ ವಿಮಾನಗಳ ಹಾರಾಟದ ತೊಂದರೆಗೆ ಇಂಡಿಗೋಗೆ 22 ಕೋಟಿ ರೂ. ದಂಡ!

ಎರಡು ವಿಮಾನಗಳ ನಡುವೆ ಈ ರೀತಿ ಡಿಕ್ಕಿ ಸಂಭವಿಸುವುದು ಬಹಳ ಅಪರೂಪವಾಗಿದ್ದರೂ ಪುಶ್‌ಬ್ಯಾಕ್ ಕಾರ್ಯಾಚರಣೆಗಳ ಸಮಯದಲ್ಲಿ ಅಥವಾ ವಿಮಾನಗಳು ಜನದಟ್ಟಣೆಯ ವಿಮಾನ ನಿಲ್ದಾಣ ಪ್ರದೇಶಗಳಲ್ಲಿ ಚಲಿಸುವಾಗ ಟ್ಯಾಕ್ಸಿ ಮಾಡುವಾಗ ನೆಲದ ಡಿಕ್ಕಿಗಳು ಆಗಾಗ ಸಂಭವಿಸುತ್ತವೆ. ಅಂತಹ ಘಟನೆಗಳಲ್ಲಿ ಸಾಮಾನ್ಯವಾಗಿ ರೆಕ್ಕೆಯ ತುದಿಗೆ ಡಿಕ್ಕಿ ಉಂಟಾಗುತ್ತದೆ. ಕೆಲವೊಮ್ಮೆ ವಿಮಾನದ ಬಾಲಕ್ಕೂ ಡಿಕ್ಕಿ ಆಗುತ್ತದೆ.

ಇದನ್ನೂ ಓದಿ: ಹೈಜಾಕ್ ಬೆದರಿಕೆ: ಕುವೈತ್-ದೆಹಲಿ ಇಂಡಿಗೋ ವಿಮಾನ ಅಹಮದಾಬಾದ್‌ನಲ್ಲಿ ತುರ್ತು ಭೂಸ್ಪರ್ಶ

ಏರ್ ಇಂಡಿಯಾ ಮತ್ತು ಇಂಡಿಗೋ ಎರಡೂ ಘಟನೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಮುಂಬೈ ವಿಮಾನ ನಿಲ್ದಾಣವು ಭಾರತದ ಅತ್ಯಂತ ಜನನಿಬಿಡ ವಾಯುಯಾನ ಕೇಂದ್ರಗಳಲ್ಲಿ ಒಂದಾಗಿದ್ದು, ಅದರ ಎರಡು ರನ್‌ವೇಗಳಲ್ಲಿ ಪ್ರತಿದಿನ ನೂರಾರು ವಿಮಾನಗಳು ಹಾರಾಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link