Category Archives: Blog

Your blog category

T20 World Cup 2026: ಸೂಪರ್-8 ಸುತ್ತಿಗೆ 5 ತಂಡಗಳ ಎಂಟ್ರಿ – Kannada News | 5 Teams Qualified For T20 World Cup 2026 Super 8s So Far

ಇನ್ನು ಈ ಬಾರಿ ಟಿ20 ವಿಶ್ವಕಪ್​​ನಿಂದ ಈವರೆಗೆ ಎಲಿಮಿನೇಟ್ ಆದ ತಂಡಗಳೆಂದರೆ… ನಮೀಬಿಯ, ಒಮಾನ್, ಸ್ಕಾಟ್ಲೆಂಡ್, ಇಟಲಿ ಮತ್ತು ನೇಪಾಳ. ಇನ್ನುಳಿದ ಆಸ್ಟ್ರೇಲಿಯಾ, ಪಾಕಿಸ್ತಾನ್, ಝಿಂಬಾಬ್ವೆ, ಅಫ್ಘಾನಿಸ್ತಾನ್, ನ್ಯೂಝಿಲೆಂಡ್, ಐರ್ಲೆಂಡ್, ಯುಎಸ್​ಎ ತಂಡಗಳು ಇನ್ನೂ ಸಹ ಸೂಪರ್-8 ಹಂತಕ್ಕೇರುವ ರೇಸ್​ನಲ್ಲಿದ್ದಾರೆ.

Source link

Bengaluru Air Quality: ಉಡುಪಿಯಲ್ಲಿ ಇನ್ನಷ್ಟು ಹದಗೆಟ್ಟಿದೆ ವಾಯು ಗುಣಮಟ್ಟ – Kannada News | Bangalore Air Pollution Crisis: Udupi’s Air quality dropped more than Bengaluru

ಉಡುಪಿಯಲ್ಲಿ ಇನ್ನಷ್ಟು ಹದಗೆಟ್ಟಿದೆ ವಾಯು ಗುಣಮಟ್ಟ

ಬೆಂಗಳೂರು, ಫೆಬ್ರವರಿ 17: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಉಡುಪಿಯ AQI ಇನ್ನಷ್ಟು ಹದಗೆಟ್ಟಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 175ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಉಡುಪಿಯ ಏರ್ ಕ್ವಾಲಿಟಿ 181 ಆಗಿದೆ. ಜೊತೆಗೆ ಬಳ್ಳಾರಿಯ ವಾಯು ಗುಣಮಟ್ಟವೂ ಸಹ 178 ಆಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –175
  • ಮಂಗಳೂರು-174
  • ಮೈಸೂರು –177
  • ಬೆಳಗಾವಿ – 178
  • ಕಲಬುರ್ಗಿ-146
  • ಶಿವಮೊಗ್ಗ – 174
  • ಬಳ್ಳಾರಿ – 178
  • ಹುಬ್ಬಳ್ಳಿ- 153
  • ಉಡುಪಿ –181
  • ವಿಜಯಪುರ –144

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಅಮೆರಿಕದ ಹಾಕಿ ಕ್ರೀಡಾಂಗಣದಲ್ಲಿ ಗುಂಡಿನ ದಾಳಿ, ಮೂವರು ಸಾವು – Kannada News | Gunfire Erupts at Rhode Island Hockey Game, in US Three Dead

ವಾಷಿಂಗ್ಟನ್, ಫೆಬ್ರವರಿ 17: ಅಮೆರಿಕದ ರೋಡ್ ಐಲೆಂಡ್ ರಾಜ್ಯದ ಹಾಕಿ ಕ್ರೀಡಾಂಗಣದಲ್ಲಿ ನಡೆದ ಗುಂಡಿನ ದಾಳಿಯು ಆ ಪ್ರದೇಶದಲ್ಲಿ ಭೀತಿಯನ್ನು ಸೃಷ್ಟಿಸಿದೆ.ಗುಂಡಿನ ದಾಳಿಯಲ್ಲಿ ಶಂಕಿತ ದಾಳಿಕೋರ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ಸತ್ತವರಲ್ಲಿ ಒಬ್ಬ ಯುವತಿಯೂ ಸೇರಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಘಟನೆಯ ನಂತರ ದಾಳಿಕೋರನು ತನ್ನನ್ನು ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಗುಂಡು ಹಾರಿಸಿದ ವ್ಯಕ್ತಿ ತನ್ನ ಕುಟುಂಬದ ಸದಸ್ಯರನ್ನೇ ಗುರಿಯಾಗಿಸಿಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪಾವ್‌ಟಕೆಟ್‌ನ ಡೆನ್ನಿಸ್ ಎಂ. ಲಿಂಚ್ ಅರೆನಾದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಎರಡು ಪ್ರೌಢಶಾಲಾ ತಂಡಗಳ ನಡುವೆ ಹಾಕಿ ಪಂದ್ಯ ನಡೆಯುತ್ತಿತ್ತು. ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಲಿಯಾ ಭಟ್ ಧರಿಸಿದ ಬಟ್ಟೆ ಮಾಡಲು ಬೇಕಾಯ್ತು 2 ತಿಂಗಳು – Kannada News | Alia Bhatt’s Rahul Mishra Couture: 1370 Hours of Craftsmanship and Eco Message

ಆಲಿಯಾ ಭಟ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ತಮ್ಮ ಉಡುಪುಗಳ ಮೂಲಕ ಯಾವಾಗಲೂ ಗಮನ ಸೆಳೆಯುತ್ತಾರೆ. ಈಗ ಅವರ ಉಡುಪೊಂದು ಗಮನ ಸೆಳೆದಿದೆ. ಝೆಂಡಾಯಾ ಮತ್ತು ಗಿಗಿ ಹಡಿದ್ ಅವರಂತಹ ಅಂತರರಾಷ್ಟ್ರೀಯ ನಟಿಯರಿಂದ ಮೆಚ್ಚುಗೆ ಪಡೆದ ಪ್ರಸಿದ್ಧ ವಿನ್ಯಾಸಕ ವಿನ್ಯಾಸಗೊಳಿಸಿದ್ದಾರೆ.ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿದ ಈ ಅದ್ಭುತ ಉಡುಪಿನ ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ವಿನ್ಯಾಸಕ ರಾಹುಲ್ ಮಿಶ್ರಾ ಈ ಉಡುಪನ್ನು ನೋಯ್ಡಾದಲ್ಲಿರುವ ತಮ್ಮ ಅಟೆಲಿಯರ್‌ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಇದನ್ನು ತಯಾರಿಸಲು 1,370 ಗಂಟೆಗಳು ಬೇಕಾಯಿತು. ಅಂದರೆ ಕುಶಲಕರ್ಮಿಗಳು ಸುಮಾರು ಎರಡು ತಿಂಗಳುಗಳ ಕಾಲ ಇದರ ಮೇಲೆ ಕೆಲಸ ಮಾಡಿದರು. ಗಾಜಿನ ಮಣಿಗಳು, ಸ್ಫಟಿಕ ಮಣಿಗಳು ದಾರದ ಕಸೂತಿಯನ್ನು ಇದರಲ್ಲಿ ಬಳಸಲಾಗಿತ್ತು. ಆಲಿಯಾ ಸ್ಪ್ರಿಂಗ್ 2025 ಕೌಚರ್ ಸಂಗ್ರಹದ ‘ಸಿಟಿಸ್ಕೇಪ್’ ಸಾಲಿನಿಂದ ಈ ತುಣುಕನ್ನು ಆರಿಸಿಕೊಂಡರು. ರಾಹುಲ್ ಮಿಶ್ರಾ ಈ ಸಂಗ್ರಹಕ್ಕೆ ‘ದಿ ಪೇಲ್ ಬ್ಲೂ ಡಾಟ್’ ಎಂದು ಹೆಸರಿಸಿದ್ದಾರೆ.

ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಇಂದಿನ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಮಾನವ ನಿರ್ಮಿತ ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲು ಸಹ ವಿನ್ಯಾಸಗೊಳಿಸಲಾಗಿದೆ ಎಂಬುದು ವಿಶೇಷ. ಆಲಿಯಾ ಭಟ್ ಈ ಗೌನ್‌ಗೆ ವಜ್ರದ ಹಾರ ಮತ್ತು ಅದಕ್ಕೆ ಹೊಂದಿಕೆಯಾಗುವ ಕಿವಿಯೋಲೆಗಳನ್ನು ಜೋಡಿಸಿದ್ದರು.

ರಾಹುಲ್ ಮಿಶ್ರಾ ಅವರ ವಿನ್ಯಾಸಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕ್ರೇಜ್ ಅನ್ನು ಹೊಂದಿವೆ. ಹಿಂದೆ, ಝೆಂಡ್ಯಾ, ಸೆಲೆನಾ ಗೊಮೆಜ್ ಮತ್ತು ಗಿಗಿ ಹಡಿದ್ ಅವರಂತಹ ಹಾಲಿವುಡ್ ಸೆಲೆಬ್ರಿಟಿಗಳು ಸಹ ಅವರ ಬಟ್ಟೆಗಳಲ್ಲಿ ಮಿಂಚಿದ್ದರು. ಇದು ಅವರ ಉಡುಪಿನ ಮೇಲಿನ ಅದ್ಭುತ ಕರಕುಶಲತೆಯನ್ನು ಎತ್ತಿ ತೋರಿಸಿತು. ಕಲಾವಿದರ ಕಠಿಣ ಪರಿಶ್ರಮ ಮತ್ತು ವಿನ್ಯಾಸಕರ ಚಿಂತನೆಯನ್ನು ಪ್ರತಿಬಿಂಬಿಸುವ ಈ ‘ಸಿಟಿಸ್ಕೇಪ್’ ಗೌನ್‌ನಲ್ಲಿ ಆಲಿಯಾ ದೇವತೆಯಂತೆ ಮಿಂಚಿದರು.

ಇದನ್ನೂ ಓದಿ: ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡುತ್ತಾರಂತೆ ಆಲಿಯಾ ಭಟ್

ಆಲಿಯಾ ಭಟ್ ಅವರು ಸದ್ಯ ‘ಆಲ್ಫಾ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಒಣ ಹವೆಯ ವಾತಾವರಣ – Kannada News | Bengaluru temperature: Dry weather all over south and north areas, coastal area of Karnataka

ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಒಣ ಹವೆಯ ವಾತಾವರಣ

ಬೆಂಗಳೂರು, ಫೆಬ್ರವರಿ 17: ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ (Weather Forecast) ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನ ತಕ್ಕಮಟ್ಟಿಗೆ ಇಂದು ಸುಧಾರಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೆಲ ದಿನಗಳಿಂದ ಒಣ ಹವೆಯ ವಾತಾವರಣವಿದೆ. ಇನ್ನೂ ಕೆಲ ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಶುಷ್ಕ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 31°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೀ ಕನ್ನಡದ ಈ ಧಾರಾವಾಹಿ ಶೀಘ್ರವೇ ಪೂರ್ಣ? – Kannada News | Puttakkana Makkalu Ends: Zee Kannada’s TRP King Makes Way for Krishna Rukku

ಜೀ ಕನ್ನಡ ವಾಹಿನಿಯಲ್ಲಿ ಹಲವು ಸೂಪರ್ ಹಿಟ್ ಧಾರಾವಾಹಿಗಳು ಬರುತ್ತಾ ಇವೆ. ಈ ಧಾರಾವಾಹಿಗಳು ಟಿಆರ್ಪಿಯಲ್ಲಿ ಉತ್ತಮ ವಿಮರ್ಶೆ ಪಡೆದು ಮುಂದೆ ಸಾಗುತ್ತಿವೆ. ಈ ರೀತಿ ಉತ್ತಮ ಟಿಆರ್ಪಿ ಪಡೆದ ಧಾರಾವಾಹಿಗಳ ಪೈಕಿ ಒಂದು ಧಾರಾವಾಹಿಯು ಕೊನೆಗೊಳ್ಳುವ ಸಮಯ ಬಂದಿದೆ ಎಂದರೆ ನೀವು ನಂಬಲೇ ಬೇಕು. ಅಷ್ಟಕ್ಕೂ ಯಾವುದು ಆ ಧಾರಾವಾಹಿ? ಪುಟ್ಟಕನ್ನ ಮಕ್ಕಳು.

ಈ ಧಾರಾವಾಹಿ ವೀಕ್ಷಕರ ವಲಯದಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸಿತ್ತು. ಈ ಧಾರಾವಾಹಿ ಭರ್ಜರಿ ಮೆಚ್ಚುಗೆ ಪಡೆಯಿತು. ಧಾರಾವಾಹಿಯನ್ನು ಜನರು ಸಾಕಷ್ಟು ಇಷ್ಟಪಟ್ಟರು. ಟಿಆರ್ಪಿಯಲ್ಲಿ ಈ ಧಾರಾವಾಹಿ ಮೊದಲ ಸ್ಥಾನ ಪಡೆಯಿತು. ಹಲವು ತಿಂಗಳಕಾಲ ಈ ಧಾರಾವಾಹಿ ಮೊದಲ ಸ್ಥಾನದಲ್ಲಿ ಇತ್ತು. ಈ ಧಾರಾವಾಹಿಯನ್ನು ಯಾರು ಕೂಡ ಬೀಟ್ ಮಾಡಲು ಸಾಧ್ಯ ಆಗಿರಲೇ ಇಲ್ಲ.

ಮೊದಲು ಪ್ರೈಮ್ ಟೈಮ್ನಲ್ಲಿ ಪುಟ್ಟಕ್ಕನ ಮಕ್ಕಳು ಪ್ರಸಾರ ಕಾಣುತ್ತಾ ಇತ್ತು. ನಂತರ ಒಂದು ಹಂತದ ಬಳಿಕ ಈ ಧಾರಾವಾಹಿಯ ಟೈಮ್ನಲ್ಲಿ ಬದಲಾವಣೆ ಮಾಡಲಾಯಿತು. ಸಂಜೆ 6 ಗಂಟೆಗೆ ಧಾರಾವಾಹಿ ಪ್ರಸಾರ ಕಾಣಲು ಆರಂಭ ಆಯಿತು. ಈ ಧಾರಾವಾಹಿಯ ಪ್ರಮುಖ ಪಾತ್ರಗಳನ್ನೇ ಕೊನೆ ಮಾಡಿ ವೀಕ್ಷಕರಿಗೆ ಬೇಸರ ಮೂಡುವಂತೆ ಮಾಡಿದರು. ಈಗ ಧಾರಾವಾಹಿ ಕಿನೆ ಆಗೋ ಸಮಯ ಬಂದಿದೆ ಎಂದು ವರದಿ ಆಗಿದೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈಗಾಗಲೇ 1100+ ಎಪಿಸೋಡ್ಗಳು ಪ್ರಸಾರ ಕಂಡಿವೆ. ಇದು ಧಾರಾವಾಹಿ ಹೆಚ್ಚುಗಾರಿಕೆ. ಹಲವು ವರ್ಷಗಳ ಕಾಲ ಧಾರಾವಾಹಿ ಪ್ರಸಾರ ಕಂಡು ಕೊನೆ ಆಗುತ್ತಿದೆ. ಇದು ವೀಕ್ಷಕರಿಗೆ ಬೇಸರ ಮೂಡಿಸುತ್ತಿದೆ.

ಇದನ್ನೂ ಓದಿ: ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಿಡಲು ನಿಜವಾದ ಕಾರಣ ಹೇಳಿದ ಸಂಜನಾ ಬುರ್ಲಿ

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಳಿಕ ‘ಕೃಷ್ಣ ರುಕ್ಕು’ ಹೆಸರಿನ ಧಾರಾವಾಹಿಯು ಪ್ರಸಾರ ಕಾಣುವ ಸಾಧ್ಯತೆ ಇದೆ. ಈ ಧಾರಾವಾಹಿಯ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಕಲರ್ಸ್ ಕನ್ನಡದ ಮೌನ ಗುಡ್ಡೆ ಮನೆ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕುಡಿದ ಅಮಲಿನಲ್ಲಿ ಬಿಳಿ ಚೀಲ ಹೊದ್ದು ರೈಲ್ವೆ ಹಳಿ ಮೇಲೆ ಮಲಗಿ ಗೊರಕೆ ಹೊಡೆದ ವ್ಯಕ್ತಿ – Kannada News | Mumbai Local Halts Just in Time as Drunk Individual Naps on Harbour Line Tracks

ಮುಂಬೈ, ಫೆಬ್ರವರಿ 17: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ನಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಬಿಳಿ ಚೀಲ ಹೊದ್ದು ರೈಲ್ವೆ ಹಳಿ ಮೇಲೆ ಮಲಗಿರುವ ವಿಡಿಯೋ ವೈರಲ್ ಆಗಿದೆ. ಹಾರ್ಬರ್ ಲೈನ್ ರೈಲು ಸೇವೆಗಳಲ್ಲಿ ಸ್ವಲ್ಪ ಸಮಯ ಅಡಚಣೆ ಉಂಟಾಗಿತ್ತು.ಮಧ್ಯಾಹ್ನ 3.30 ರ ಸುಮಾರಿಗೆ ಹಾರ್ಬರ್ ಲೈನ್ ಹಳಿಗೆ ರೈಲು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಹಳಿಗಳ ಮೇಲೆ ಕಸ ಸಂಗ್ರಹಿಸುವ ಅವಿನಾಶ್ ಪ್ರಕಾಶ್ ಕಾರ್ಡಿಲೆ ಇದ್ದಕ್ಕಿದ್ದಂತೆ ರೈಲ್ವೆ ಹಳಿ ಮೇಲೆ ಬಿಳಿ ಹೊದಿಕೆ ಹೊದ್ದು ಮಲಗಿದ್ದ. ರೈಲು ನಿಧಾನವಾಗುತ್ತಿದ್ದಂತೆ ಮತ್ತು ಪದೇ ಪದೇ ಹಾರ್ನ್ ಮಾಡುತ್ತಿದ್ದಂತೆ ಪ್ರಯಾಣಿಕರು ಕೂಡ ಕೂಗಾಡುತ್ತಾ ಕೈ ಬೀಸುತ್ತಿದ್ದರು. ಆದರೆ ಆತ ಮಾತ್ರ ನಿದ್ರೆ ಮಾಡುತ್ತಲೇ ಇದ್ದ. ರೈಲ್ವೆ ರಕ್ಷಣಾ ಪಡೆ ಕೂಡಲೇ ಅಲ್ಲಿಗೆ ಬಂದು ಆತನನ್ನು ರೈಲ್ವೆ ಹಳಿಯಿಂದ ಮೇಲಕ್ಕೆತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಶ್ವಕಪ್ ಇತಿಹಾಸದಲ್ಲೇ ಹೀಗೆ ಆಲೌಟಾದ ಮೊದಲ ತಂಡ ಆಸ್ಟ್ರೇಲಿಯಾ! – Kannada News | Australia Creates New Record In T20 World Cup 2026

ಇದರೊಂದಿಗೆ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿ, ಆ ಬಳಿಕ ದಿಢೀರ್ ಕುಸಿತಕ್ಕೊಳಗಾಗಿ ಆಲೌಟ್ ಆದ ಮೊದಲ ತಂಡ ಎನಿಸಿಕೊಂಡಿತು. ಅಂದರೆ ಟಿ20 ವಿಶ್ವಕಪ್‌ನಲ್ಲಿ ಯಾವುದೇ ತಂಡ ಮೊದಲ ವಿಕೆಟ್‌ಗೆ 100ಕ್ಕೂ ಅಧಿಕ ರನ್ ಗಳಿಸಿದ ಬಳಿಕ ಆಲೌಟ್ ಆದ ನಿದರ್ಶನ ಇರಲಿಲ್ಲ.

Source link

ನಾಲ್ಕು ವಿವಾಹ ಆದ ಕಿರುತೆರೆ ನಟಿಗೆ ಕಿರುಕುಳ; ಬೇಸತ್ತು ಮಾಡಿದ್ದೇನು ನೋಡಿ – Kannada News | Rekha Ratheesh Cries Out: Malayalam Actress Pleads CM Pinarayi Vijayan Over YouTuber Harassment

ಮಲಯಾಳಂ ಕಿರುತೆರೆ ನಟಿ ರೇಖಾ ರತೀಶ್ (Rekha Rateesh) ಅವರು ಈಗ ಕಣ್ಣೀರು ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರೋ ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಇಷ್ಟೇ ಅಲ್ಲ, ತಮ್ಮ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿ ಅವರು ಕೇಳಿಕೊಂಡಿದ್ದಾರೆ. ಯೂಟ್ಯೂಬರ್​​ಗಳಿಂದ ಕಿರುಕುಳ ಆಗುತ್ತಿದೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಸದ್ಯ ಅವರ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ.

‘ಕೇರಳ ಸರ್ಕಾರ ಮತ್ತು ಪಿಣರಾಯ್ ವಿಜಯನ್ ಅವರಲ್ಲಿ ನನ್ನ ಕೋರಿಕೆ. ನಾನು ರೇಖಾ ರತೀಶ್. ವೃತ್ತಿಯಲ್ಲಿ ನಾನು ನಟಿ. ಕಳೆದ 7-8 ತಿಂಗಳಿಂದ ನನಗೆ ಕೆಲಸ ಇಲ್ಲ. ಕಳೆದ 2-3 ತಿಂಗಳಿಂದ ಯೂಟ್ಯೂಬರ್​ಗಳು ನನ್ನ ಬಗ್ಗೆ ತಪ್ಪು ತಪ್ಪಾಗಿ ಥಂಬ್​ನೇಲ್ ಹಾಕಿ ವಿಡಿಯೋ ಮಾಡುತ್ತಿದ್ದಾರೆ. ಸಾಮಾನ್ಯರಂತೆ ಬದುಕಲು ಅವರು ನನಗೆ ಬಿಡುತ್ತಲೇ ಇಲ್ಲ. ನಾನು ನನ್ನ ಮಗುವನ್ನು ನೋಡಿಕೊಳ್ಳಬೇಕು. ಆದರೆ, ನನಗೆ ಸಾಕಷ್ಟು ಮಾನಸಿಕ ಕಿರುಕುಳ ಎದುರಾಗುತ್ತಿದೆ. ಇನ್ನು ಇದನ್ನು ಸಹಿಸಲು ಸಾಧ್ಯವಿಲ್ಲ ’ ಎಂದು ಅವರು ಹೇಳಿದ್ದಾರೆ.

‘ಈ ರೀತಿಯ ಯೂಟ್ಯೂಬರ್​​ಗಳಿಂದ ಇಂಡಸ್ಟ್ರಿಯ ಅನೇಕರು ಜೀವ ಕಳೆದುಕೊಂಡಿದ್ದಾರೆ. ನನಗೆ ಏನಾದರೂ ಆಯಿತು ಎಂದರೆ ಅದಕ್ಕೆ ಕಾರಣ ಯಾರು ಎಂಬುದು ಎಲ್ಲರಿಗೂ ತಿಳಿಯಬೇಕು.ತಪ್ಪು ಕೆಲಸ ಮಾಡುತ್ತಿರುವ ಯೂಟ್ಯೂಬರ್​​ಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಅವರು ಕೋರಿದ್ದಾರೆ.

ಇದನ್ನೂ ಓದಿ: ಸದ್ದಿಲ್ಲದೆ ಮದುವೆ ಆದ ಕಿರುತೆರೆ ನಟಿ ಗೀತಾ ಭಾರತಿ ಭಟ್; ಫೋಟೋ ನೋಡಿ

ರೇಖಾ ಅವರು ಈಗಾಗಲೇ ನಾಲ್ಕು ಬಾರಿ ಮದುವೆ ಆಗಿದ್ದರು. ಯಾವ ಸಂಬಂಧವೂ ಉಳಿದುಕೊಂಡಿಲ್ಲ. 2000ನೇ ಇಸ್ವಿಯಲ್ಲಿ ಯೂಸುಫ್ ಎಂಬುವವರನ್ನು ಮದುವೆ ಆದರು. ಒಂದೇ ವರ್ಷದಲ್ಲಿ ಇವರು ಬೇರೆ ಆದರು 2001-10ವರೆಗೆ ನಿರ್ಮಲ್ ಪ್ರಕಾಶ್ ಜೊತೆ ಜೀವನ ನಡೆಸಿದರು. 2012-17ರವರೆಗೆ ಕಮಲ್ ರಾಯ್ ಹಾಗೂ 2019-20ರ ಅವಧಿಯಲ್ಲಿ ಅಭಿಲಾಶ್ ಜೊತೆ ಅವರು ವಿವಾಹ ಆದರು. ನಟಿಗೆ ಆರ್ಯನ್ ಹೆಸರಿನ ಮಗ ಇದ್ದಾನೆ. 2011ರಲ್ಲಿ ಈತ ಜನಿಸಿದ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೊಲೀಸರ ಮೇಲೆ ಹಲ್ಲೆ ನಡೆಸಿ ಬಾಲಾಪರಾಧಿ ಗೃಹದಿಂದ ಪಾಕ್ ಕೈದಿಗಳು ಪರಾರಿ – Kannada News | Two Pakistanis Escape From Juvenile Custody in Jammu and kashmir

ಕೈದಿ-ಸಾಂದರ್ಭಿಕ ಚಿತ್ರImage Credit source: Telegraph India

ಶ್ರೀನಗರ, ಫೆಬ್ರವರಿ 17: ಜಮ್ಮು ಮತ್ತು ಕಾಶ್ಮೀರದ ಬಾಲಾಪರಾಧಿ ಗೃಹದಿಂದ ಪಾಕಿಸ್ತಾನಿ ಕೈದಿ(Prisoner)ಗಳು ಪರಾರಿಯಾಗಿರುವ ಘಟನೆ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ ಇಬ್ಬರು ಪಾಕಿಸ್ತಾನಿಗಳು ಸೇರಿ ಮೂವರು ಕೈದಿಗಳು ಜೈಲಿಂದ ಓಡಿ ಹೋಗಿದ್ದಾರೆ. ಮೂಲಗಳ ಪ್ರಕಾರ ಸಂಜೆ 5.05ರ ಸುಮಾರಿಗೆ ಜಮ್ಮುವಿನ ಆರ್​​ಎಸ್​ ಪುರದಲ್ಲಿರುವ ಜೈಲಿನಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ದಾಳಿ ಮಾಡಿ ಮೂವರು ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳಾದ ಎಸ್‌ಪಿಒ ವಿನಯ್ ಕುಮಾರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಪರ್ವೀನ್ ಕುಮಾರ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆಂದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.ತಪ್ಪಿಸಿಕೊಂಡ ಕೈದಿಗಳನ್ನು ಅಹ್ಸಾನ್ ಅನ್ವರ್ ಮತ್ತು ಮೊಹಮ್ಮದ್ ಸನಾವುಲ್ಲಾ (ಇಬ್ಬರೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಗಳು) ಮತ್ತು ಜಮ್ಮುವಿನ ನಿವಾಸಿ ಕರಣ್‌ಜಿತ್ ಸಿಂಗ್ ಅಲಿಯಾಸ್ ಗುಗ್ಗಾ ಎಂದು ಗುರುತಿಸಲಾಗಿದೆ.

ಗುಪ್ತಚರ ಮೂಲಗಳ ಪ್ರಕಾರ, ಇಬ್ಬರು ಪಾಕಿಸ್ತಾನಿ ಹುಡುಗರು ಭಾರತದ ಗಡಿಯೊಳಗೆ ಗೊತ್ತಿಲ್ಲದೆ ಬಂದಿದ್ದಾರೆ ಮತ್ತು ಅವರಿಗೆ ಹಾಗೂ ಉಗ್ರರ ಜತೆ ಯಾವುದೇ ನಂಟಿಲ್ಲ. ಬಾಲಕರ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಮತ್ತಷ್ಟು ಓದಿ: ಜೈಲಿನಲ್ಲಿರುವ ಮಗನಿಗೆ ಖಾಸಗಿ ಭಾಗದಲ್ಲಿ ಮೊಬೈಲ್​ ಕೊಂಡೊಯ್ದು ಸಿಕ್ಕಿಬಿದ್ದ ತಾಯಿ

ಭಾರತದಾದ್ಯಂತ 300 ಕ್ಕೂ ಹೆಚ್ಚು ಜೈಲುಗಳು ಅವುಗಳ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ಕಾರ್ಯನಿರ್ವಹಿಸುತ್ತಿವೆ, ಮಲಗುವ ಸ್ಥಳ, ಆರೋಗ್ಯ ರಕ್ಷಣೆ ಮತ್ತು ಮೇಲ್ವಿಚಾರಣೆಯಂತಹ ಮೂಲಭೂತ ವಿಷಯಗಳು ಸಹ ಕಷ್ಟಕರವಾಗುತ್ತಿವೆ. ದೆಹಲಿಯ ಕೇಂದ್ರ ಜೈಲು ಸಂಖ್ಯೆ 4 ರಲ್ಲಿ, 2020 ರಿಂದ ಜನದಟ್ಟಣೆ ಸ್ಥಿರವಾಗಿ ಏರಿದೆ, 2023 ರಲ್ಲಿ 550% ತಲುಪಿದೆ.

ಬಿಹಾರದ ದಾನಾಪುರ್ ಉಪ-ಜೈಲು ಮತ್ತು ಜಾರ್ಖಂಡ್‌ನ ಗುಮ್ಲಾ ಜಿಲ್ಲಾ ಜೈಲು 300% ಕ್ಕಿಂತ ಹೆಚ್ಚುಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಪಶ್ಚಿಮ ಬಂಗಾಳದ ಕಂಡಿ ಉಪ-ಜೈಲು 2022 ರಲ್ಲಿ 450% ಕ್ಕೆ ತಲುಪಿದೆ.ಜೈಲುಗಳು ಇಷ್ಟೊಂದು ಜನದಟ್ಟಣೆಯಿಂದ ಇರುವುದಕ್ಕೆ ದೊಡ್ಡ ಕಾರಣ ಶಿಕ್ಷೆಯ ಹೆಚ್ಚಳವಲ್ಲ, ಬದಲಾಗಿ ವಿಳಂಬ. ಭಾರತದ ಜೈಲು ಜನಸಂಖ್ಯೆಯ ಸುಮಾರು 76% ರಷ್ಟು ವಿಚಾರಣಾಧೀನ ಕೈದಿಗಳಾಗಿದ್ದು, ಅವರಲ್ಲಿ ಹಲವರು ಯಾವುದೇ ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link