Category Archives: Blog

Your blog category

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 27ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ದಿನದ ಆರಂಭದಲ್ಲೇ ಮನೆಯ ಹಿರಿಯರಿಂದ ಆಸ್ತಿ ಅಥವಾ ವಿಲ್‌ಗೆ ಸಂಬಂಧಿಸಿದ ಮಹತ್ವದ ದಾಖಲೆ- ಪತ್ರಗಳ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಇಷ್ಟು ಸಮಯ ಇದ್ದಂಥ ಒತ್ತಡ- ಗೊಂದಲಗಳು ದೂರವಾಗುತ್ತದೆ. ಸೌರಶಕ್ತಿ (Solar) ಅಥವಾ ಕೃಷಿ ಉಪಕರಣಗಳ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಸರ್ಕಾರದಿಂದ ದೊಡ್ಡ ಮಟ್ಟದ ಸಬ್ಸಿಡಿ ಅಥವಾ ಆರ್ಡರ್ ದೊರೆಯಲಿದೆ. ವಾರಾಂತ್ಯದ ನಿಮಿತ್ತ ದೂರದ ಊರಿನ ದೇವಸ್ಥಾನಗಳಿಗೆ ಭೇಟಿ ನೀಡಲು ನೀವು ಆಲೋಚನೆ ಮಾಡುವಿರಿ. ಅಥವಾ ಸಂಬಂಧಿಕರು ನಿಮ್ಮ ಮನೆಗೆ ಬಂದು, ಅವರ ಸಲುವಾಗಿ ಪ್ರವಾಸಕ್ಕೆ ತೆರಳಲು ಆಲೋಚನೆ ಮಾಡುತ್ತೀರಿ. ಬಹಳ ದಿನಗಳಿಂದ ನಿಂತುಹೋಗಿದ್ದ ಹಳೆಯ ಮನೆ ನವೀಕರಣದ ಕೆಲಸಕ್ಕೆ ಈ ದಿನ ಸಮಯ ನಿಗದಿ ಆಗಲಿದೆ. ಉದ್ಯೋಗದಲ್ಲಿ ಬಡ್ತಿಗಾಗಿ ನೀವು ನಡೆಸಿದ ಪ್ರಯತ್ನಕ್ಕೆ ಪೂರಕವಾಗಿ ಮೇಲಧಿಕಾರಿಗಳಿಂದ ಖಚಿತವಾದ ಭರವಸೆ ನಿಮಗೆ ಸಿಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಸಿನಿಮಾ ಅಥವಾ ಕಿರುತೆರೆಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಪ್ರತಿಷ್ಠಿತ ಬ್ಯಾನರ್‌ನಿಂದ ಕರೆ ಬರಲಿದೆ. ನಿಮ್ಮ ಈ ಹಿಂದಿನ ಕೆಲಸ- ಕಾರ್ಯಗಳಿಗೆ ಮೆಚ್ಚುಗೆಯ ಜೊತೆಗೆ, ಉತ್ತಮ ಗೌರವಧನ ಸಹ ದೊರೆಯಲಿದೆ. ಇನ್ನು ಹಾಲು ಮತ್ತು ಹೈನುಗಾರಿಕೆ ಕೇಂದ್ರಗಳ ವಿಸ್ತರಣೆಗಾಗಿ ನೀವು ಸಲ್ಲಿಸಿದ್ದ ಸಾಲದ ಅರ್ಜಿಗೆ ಬ್ಯಾಂಕ್‌ನಿಂದ ಮಂಜೂರಾತಿ ಸಿಗಲಿದೆ. ತಾಯಿಯ ಕಡೆಯ ಸಂಬಂಧಿಕರಿಂದ ಬೆಲೆಬಾಳುವ ಉಡುಗೊರೆ ಅಥವಾ ಆಭರಣ ಲಭಿಸುವ ಯೋಗವಿದೆ. ಈ ದಿನ ಯಾವುದಾದರೂ ವಿಷಯದ ಬಗ್ಗೆ ನೀವು ಹೆಚ್ಚು ಮಾತನಾಡುವುದಕ್ಕಿಂತ ಕೇಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದರೆ ಕೌಟುಂಬಿಕ ಕಲಹವೊಂದು ಸುಲಭವಾಗಿ ಬಗೆಹರಿಯಲಿದೆ. ವಿದೇಶದಲ್ಲಿರುವ ಆಪ್ತರಿಂದ ವೀಸಾ ಅಥವಾ ಉದ್ಯೋಗದ ಪ್ರಾಯೋಜಕತ್ವದ ಸುದ್ಧಿ ಬರಲಿದೆ. ಆಯುರ್ವೇದ ಚಿಕಿತ್ಸೆ ಪಡೆದುಕೊಳ್ಳುವ ಬಗ್ಗೆ ಕುಟುಂಬದ ಸದಸ್ಯರ ಜೊತೆಗೆ ಮಾತುಕತೆ ನಡೆಸಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಚಿನ್ನ ಅಥವಾ ಬೆಳ್ಳಿಯ ಮೇಲೆ ದೀರ್ಘಾವಧಿಗೆ ಹಣವನ್ನು ಹೂಡಿಕೆ ಮಾಡುವವರಿಗೆ ಅಥವಾ ಹಳೆಯ ಒಡವೆಗಳನ್ನು ಅಡವಿಟ್ಟು ಹೊಸ ಉದ್ಯಮ ಆರಂಭಿಸುವವರಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ. ಬರವಣಿಗೆ ಮತ್ತು ಪ್ರಕಾಶನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಳೆಯ ಕೃತಿಯೊಂದರ ಮರುಮುದ್ರಣ ದೊಡ್ಡ ಮಟ್ಟದಲ್ಲಿ ಲಾಭವನ್ನು ತಂದುಕೊಡಲಿದೆ. ಇನ್ನು ಹೊಸ ಪುಸ್ತಕವೊಂದರ ರಚನೆ ಸಲುವಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಮನೆಗೆ ಹೊಸದಾಗಿ ಕಂಪ್ಯೂಟರ್ ಅಥವಾ ಓದಿಗೆ ಪೂರಕವಾದ ಪೀಠೋಪಕರಣಗಳನ್ನು ಖರೀದಿಸುವ ಸಾಧ್ಯತೆ ಇದೆ. ಶೀತ ಮತ್ತು ಗಂಟಲಿನ ಸೋಂಕಿನ ಬಗ್ಗೆ ಎಚ್ಚರವಿರಲಿ. ನ್ಯಾಯಾಲಯದ ಹೊರಗಿನ ಸಂಧಾನಗಳಲ್ಲಿ ನಿಮ್ಮ ಮಧ್ಯಸ್ಥಿಕೆಗೆ ಹೆಚ್ಚಿನ ಬೆಲೆ ಸಿಗಲಿದ್ದು, ಇದು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಿಸಲಿದೆ. ಇತರರ ಪ್ರೀತಿ- ದಾಂಪತ್ಯದ ಕಲಹಗಳ ವಿಚಾರಕ್ಕೆ ತಲೆ ಹಾಕಬೇಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ವಿಮಾನಯಾನ ಅಥವಾ ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವವರಿಗೆ ಹಠಾತ್ ಟಿಕೆಟ್ ಬುಕ್ಕಿಂಗ್‌ಗಳ ಮೂಲಕ ಲಾಭ ಹೆಚ್ಚಲಿದೆ. ಆರೋಗ್ಯದ ಕಡೆಗಿನ ನಿಮ್ಮ ಗಮನ ಹಾಗೂ ಅದನ್ನು ಕಾಪಾಡಿಕೊಳ್ಳಲು ಬೇಕಾದ ವ್ಯಾಯಾಮ, ಯೋಗ ಇಂಥವುಗಳಿಗೆ ಸೇರ್ಪಡೆ ಆಗುವುದಕ್ಕೆ ಆಲೋಚಿಸುತ್ತೀರಿ. ಮನೆಯಲ್ಲಿ ಸಿಸಿಟಿವಿ ಅಳವಡಿಕೆ ಅಥವಾ ಸೆಕ್ಯೂರಿಟಿ ಸಿಸ್ಟಮ್ ಅಪ್‌ಗ್ರೇಡ್ ಮಾಡಲು ಹಣವನ್ನು ಖರ್ಚು ಮಾಡಲಿದ್ದೀರಿ. ಕಮಾಡಿಟಿ ಮಾರ್ಕೆಟ್ ಅಥವಾ ಷೇರು ಮಾರುಕಟ್ಟೆಯ ಹೂಡಿಕೆಯಲ್ಲಿ ಉತ್ತಮ ಲಾಭ ಕಾಣುವುದಕ್ಕೆ ಸಲಹೆ- ಮಾರ್ಗದರ್ಶನ ದೊರೆಯುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ನೀವು ನಡೆಸಿದ ಸಂಶೋಧನೆಯೊಂದು ಕೆಲಸದ ಸ್ಥಳದಲ್ಲಿ ದೊಡ್ಡ ಸಮಸ್ಯೆಯನ್ನು ಪರಿಹರಿಸಲಿದೆ. ಸಣ್ಣಪುಟ್ಟ ಗಾಯಗಳಾಗುವ ಸಂಭವವಿರುವುದರಿಂದ ಅಡುಗೆಮನೆಯಲ್ಲಿ ಅಥವಾ ಗಾಜಿನ ವಸ್ತುಗಳ ಜೊತೆ ಕೆಲಸ ಮಾಡುವಾಗ ಜಾಗ್ರತೆ ಇರಲಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಡಿಜಿಟಲ್ ಮಾರ್ಕೆಟಿಂಗ್ ಅಥವಾ ಇ-ಕಾಮರ್ಸ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹೊಸ ಪ್ಲಾಟ್‌ಫಾರ್ಮ್‌ಗಳಿಂದ ಆದಾಯ ಬರಲಿದೆ. ವಾರಾಂತ್ಯದ ಮೋಜಿನ ನಡುವೆಯೂ ವಿದೇಶಿ ಭಾಷೆ ಅಥವಾ ತಂತ್ರಜ್ಞಾನ ಕಲಿಯಲು ಆನ್‌ಲೈನ್ ಕ್ಲಾಸ್‌ಗೆ ಸೇರ್ಪಡೆ ಆಗುವಂಥ ಯೋಗ ಇದೆ. ನಿಮ್ಮ ವಾಹನದ ಇನ್ಶೂರೆನ್ಸ್ ಅಥವಾ ತೆರಿಗೆ ಪಾವತಿಯ ಗಡುವನ್ನು ಒಮ್ಮೆ ಪರಿಶೀಲಿಸಿ, ದಂಡ ಕಟ್ಟುವ ಪರಿಸ್ಥಿತಿ ಬರಬಹುದು. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಂಥವರು ಖರ್ಚಿನ ವಿಚಾರದಲ್ಲಿ ಎಚ್ಚರಿಕೆಯಾಗಿದ್ದರೆ ಮಾತ್ರ ಸಾಲದು, ಕಠಿಣವಾದ ಮಿತಿಯನ್ನು ಸಹ ಹೇರಿಕೊಳ್ಳುವುದು ಒಳ್ಳೆಯದು. ಇನ್ನು ನೀವು ಅಂದುಕೊಳ್ಳದೆಯೇ ಅಥವಾ ಅವರಾಗಿಯೇ ತಿಳಿಸದೆ ದೂರದ ಊರಿನಿಂದ ಹಳೆ ಗೆಳೆಯರು ಮನೆಗೆ ಬರುವುದರಿಂದ ಸಂಜೆ ಪಾರ್ಟಿ ಮೂಡ್ ಇರಲಿದೆ. ಹವಾಮಾನದ ವೈಪರೀತ್ಯದ ಕಾರದಿಂದಾಗಿ ಚರ್ಮದ ಅಲರ್ಜಿ ಕಾಣಿಸಿಕೊಳ್ಳಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ರೆಡಿಮೇಡ್ ಗಾರ್ಮೆಂಟ್ಸ್ ಅಥವಾ ಬ್ಯೂಟಿ ಪಾರ್ಲರ್ ಉದ್ಯಮದಲ್ಲಿ ಇರುವವರಿಗೆ ಮೇಲಿಂದ ಮೇಲೆ ಆರ್ಡರ್‌ಗಳು ಬರಲಿವೆ. ವೈವಾಹಿಕ ಜೀವನದಲ್ಲಿ ಮೂಡಿದ್ದ ಅಸಮಾಧಾನಗಳನ್ನು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ. ಸಂಗಾತಿಯೊಂದಿಗೆ ಏಕಾಂತವಾಗಿ ದೂರದ ರೆಸಾರ್ಟ್‌ಗೆ ಹೋಗುವ ಯೋಜನೆ ಮಾಡುವಿರಿ. ಐಷಾರಾಮಿ ಕಾರು ಅಥವಾ ಗೃಹಾಲಂಕಾರದ ವಸ್ತುಗಳ ಮೇಲೆ ಇಂದು ದೊಡ್ಡ ಮೊತ್ತದ ಹೂಡಿಕೆ ಮಾಡುವಿರಿ. ಹಳೆಯ ಗೆಳತಿಯೊಬ್ಬರಿಂದ ಹಣಕಾಸಿನ ಸಹಾಯ ಅಥವಾ ಹೊಸ ಉದ್ಯೋಗದ ಐಡಿಯಾ ಸಿಗಲಿದೆ. ಲೇವಾದೇವಿ ವ್ಯವಹಾರ ಮಾಡುತ್ತಾ ಇದ್ದಲ್ಲಿ ಸುರಕ್ಷಿತ ಹೂಡಿಕೆ ಕಡೆಗೆ ಗಮನ ನೆಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ಬಾಡಿಗೆ ಆದಾಯ ಬರುವ ರೀತಿಯಲ್ಲಿ ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಹಣವನ್ನು ಹೂಡಿಕೆ ಮಾಡಲಿದ್ದೀರಿ. ಸಕ್ಕರೆ ಕಾಯಿಲೆ ಇರುವವರು ಆಹಾರ ಪದ್ಧತಿಯಲ್ಲಿ ಇಂದು ಶಿಸ್ತು ತಪ್ಪಬೇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಹೆಚ್ಚು ಸುದ್ದಿ ಮಾಡದೆ, ಯಾರಿಗೂ ತಿಳಿಸದೆ ನೀವು ರಹಸ್ಯವಾಗಿ ಮಾಡುತ್ತಿದ್ದ ಭೂಮಿ ವ್ಯವಹಾರವೊಂದು ಅಂತಿಮ ಹಂತಕ್ಕೆ ತಲುಪಲಿದೆ. ಮೊಲ ಸಾಕಣೆ, ಹಸು ಸಾಕಣೆ ಇಂಥದ್ದರಲ್ಲಿ ತೊಡಗಿಕೊಂಡವರಿಗೆ ಆದಾಯದಲ್ಲಿ ಏರಿಕೆ ಆಗುವಂಥ ಯೋಗ ಇದೆ. ಹಳೆ ನಾಣ್ಯಗಳು ಅಥವಾ ಅಪರೂಪದ ವಸ್ತುಗಳ ಸಂಗ್ರಹ ಮಾಡುವವರಿಗೆ ಬೆಲೆಬಾಳುವ ವಸ್ತುವೊಂದು ಲಭ್ಯವಾಗಲಿದೆ. ವೈದ್ಯಕೀಯ ಫಾಲೋಅಪ್ ಪರೀಕ್ಷೆಗಳು ಇದ್ದಲ್ಲಿ ಅದನ್ನು ಮುಂದಕ್ಕೆ ಹಾಕುತ್ತಾ ಹೋಗಬೇಡಿ. ಮಾನಸಿಕ ಅಶಾಂತಿ ಹೋಗಲಾಡಿಸಲು ಸಮುದ್ರ ತೀರ ಅಥವಾ ನದಿ ತೀರದ ಪ್ರವಾಸ ಕೈಗೊಳ್ಳುವಿರಿ. ವಾರಾಂತ್ಯದ ಮೋಜಿನ ನಡುವೆಯೂ ನಿಮ್ಮ ಇನ್ ಟ್ಯೂಷನ್ ಒಂದು ಮೋಸದ ವ್ಯವಹಾರದಿಂದ ನಿಮ್ಮನ್ನು ರಕ್ಷಿಸಲಿದೆ. ನಿಮ್ಮ ಮಕ್ಕಳು ವಿದೇಶಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುವ ಬಗ್ಗೆ ಸಕಾರಾತ್ಮಕ ಮಾಹಿತಿ ದೊರೆಯಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿರ್ಧಾರದ ಧ್ವನಿಯಲ್ಲಿಯೇ ಕೆಲವು ವಿಚಾರಗಳನ್ನು ಹೇಳಿಬಿಡುವುದು ಉತ್ತಮ. ಅದರಲ್ಲೂ ಸಂಬಂಧಿಗಳು- ಸ್ನೇಹಿತರು ಏನಾದರೂ ಕೇಳಿದಲ್ಲಿ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಬೇಡಿ. ಕಾರ್ಖಾನೆ ಅಥವಾ ಗಣಿ ಉದ್ಯಮದಲ್ಲಿ ತೊಡಗಿಕೊಂಡವರಿಗೆ ಯಂತ್ರೋಪಕರಣಗಳ ಬದಲಾವಣೆಗಾಗಿ ದೊಡ್ಡ ಮೊತ್ತದ ಸಾಲ ದೊರೆಯಲಿದೆ. ಮದ್ಯವ್ಯಸನಿಗಳು ಅಥವಾ ತಪ್ಪು ಹಾದಿಯಲ್ಲಿರುವ ಸ್ನೇಹಿತರಿಂದ ದೂರವಿರುವುದು ನಿಮ್ಮ ಇಂದಿನ ನೆಮ್ಮದಿಗೆ ಕಾರಣವಾಗಲಿದೆ. ನಿಮ್ಮ ಹೆಸರಿನಲ್ಲಿದ್ದ ಹಳೆಯ ಮೊಕದ್ದಮೆಯೊಂದು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಜಾ ಆಗುವ ಸಾಧ್ಯತೆ ಇದೆ. ಕೆಲಸದ ಒತ್ತಡದ ನಡುವೆಯೂ ಯೋಗ ಮತ್ತು ಪ್ರಾಣಾಯಾಮಕ್ಕೆ ಸಮಯ ಮೀಸಲಿಡುವಿರಿ. ನಿಮ್ಮ ಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳ ಸಂಬಳದ ವಿಚಾರದಲ್ಲಿ ಉದಾರವಾಗಿ ವರ್ತಿಸುವಿರಿ, ಇದರಿಂದ ಕೆಲಸದ ವೇಗ ಹೆಚ್ಚಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಫೈರ್ ಅಂಡ್ ಸೇಫ್ಟಿ ಅಥವಾ ಸೆಕ್ಯೂರಿಟಿ ಏಜೆನ್ಸಿಗಳಲ್ಲಿ ಕೆಲಸ ಮಾಡುವವರಿಗೆ ಇಂದು ಅತ್ಯಂತ ಜವಾಬ್ದಾರಿಯುತ ದಿನ. ಜಿಮ್ ಅಥವಾ ಕ್ರೀಡಾ ಸಂಕೀರ್ಣಗಳನ್ನು ಆರಂಭಿಸಲು ಬಯಸುವವರಿಗೆ ಸರ್ಕಾರದ ಅನುಮತಿ ದೊರೆಯುವ ಸೂಚನೆ ಸಿಗಲಿದೆ. ಪೆಟ್ರೋಲಿಯಂ ಅಥವಾ ರಾಸಾಯನಿಕ ಉದ್ಯಮದಲ್ಲಿ ಇರುವವರಿಗೆ ಹೊಸ ಟೆಂಡರ್‌ಗಳು ಲಭ್ಯವಾಗಲಿವೆ. ನಿಮ್ಮ ಮನೆಯಲ್ಲಿ ಸಣ್ಣಪುಟ್ಟ ವಿದ್ಯುತ್ ದೋಷಗಳು ಅಥವಾ ಶಾರ್ಟ್ ಸರ್ಕೀಟ್ ಇಂಥವುಗಳು ಆಗದಂತೆ ನೋಡಿಕೊಳ್ಳಿ. ಅಂಥದ್ದೊಂದು ಸೂಚನೆ ಏನಾದರೂ ಸಿಕ್ಕಿದಲ್ಲಿ ಒಮ್ಮೆ ವಯರಿಂಗ್ ಸರಿಯಾಗಿದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಸೋದರರೊಂದಿಗೆ ಭೂಮಿ ಹಂಚಿಕೆ ವಿಚಾರದಲ್ಲಿ ಇದ್ದ ವೈಷಮ್ಯವು ಹಿರಿಯರ ಮಧ್ಯಸ್ಥಿಕೆಯಿಂದ ಸುಖಾಂತ್ಯ ಕಾಣಲಿದೆ. ತೀರ್ಥಕ್ಷೇತ್ರಗಳ ಭೇಟಿಯಿಂದ ಮಾನಸಿಕ ಶಾಂತಿ ದೊರೆಯಲಿದ್ದು, ಕುಟುಂಬ ಸದಸ್ಯರ ಜೊತೆಗ ತೆರಳುವ ಸಾಧ್ಯತೆ ಹೆಚ್ಚಿದೆ.

ಲೇಖನ- ಎನ್‌.ಕೆ.ಸ್ವಾತಿ

Source link

ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್​​​​: ಏಕಾಏಕಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಬಹಿರಂಗ – Kannada News | Twist in Chitradurga Bus Accident: Oil Box Discovery Raises Questions After Fire

ಚಿತ್ರದುರ್ಗ, ಡಿ.26: ಚಿತ್ರದುರ್ಗ ಬಸ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದ ಸೀಬರ್ಡ್ ಖಾಸಗಿ ಬಸ್​​​ವೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ಬೆಂಕಿ ಅನಾಹುತ ಸಂಭವಿಸಿತ್ತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ನಡೆದ ಈ ದುರ್ಘಟನೆಯಲ್ಲಿ, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ತನಿಖೆಯ ವೇಳೆ, ಅಪಘಾತಕ್ಕೀಡಾದ ಬಸ್‌ನೊಳಗೆ ರಾಶಿ ರಾಶಿ ಆಯಿಲ್ ಬಾಕ್ಸ್‌ಗಳು ಪತ್ತೆಯಾಗಿರುವುದು ಹೊಸ ತಿರುವನ್ನು ನೀಡಿದೆ. ಈ ಆಯಿಲ್ ಬಾಕ್ಸ್‌ಗಳ ಉಪಸ್ಥಿತಿಯು ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಬೆಂಕಿ ನಿಯಂತ್ರಿಸಲು ಕಷ್ಟವಾಗಲು ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬಸ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಯಿಲ್ ಬಾಕ್ಸ್‌ಗಳು ಹೇಗೆ ಬಂದವು ಮತ್ತು ಇವುಗಳ ಸಾಗಣೆಗೆ ಅನುಮತಿ ಇತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಬಸ್ ದುರಂತದ ತೀವ್ರತೆಯನ್ನು ಹೆಚ್ಚಿಸಿ, ಹೆಚ್ಚಿನ ಹಾನಿಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಈ ಘಟನೆ ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Snow Removal Job: ಈ ದೇಶದಲ್ಲಿ ಹಿಮ ತೆಗೆಯುವ ಕೆಲಸಗಾಗರಿಗೆ ಸಿಗುತ್ತೆ ಲಕ್ಷಗಳಲ್ಲಿ ಸಂಬಳ! – Kannada News | Canada Snow Removal Jobs: Earn Lakhs! High Salary and Benefits Explained

ಹಿಮ ತೆಗೆಯುವ ಕೆಲಸ ಅಂದರೆ, ಹಿಮದಿಂದ ಆವೃತವಾಗಿರುವ ರಸ್ತೆ, ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಹಿಮದಿಂದ ಮುಕ್ತಗೊಳಿಸುವುದು. ಕೆನಡಾದಲ್ಲಿ ಈ ಕೆಲಸಕ್ಕೆ ಚಳಿಗಾಲದಲ್ಲಿ ಭಾರೀ ಬೇಡಿಕೆಯಿದೆ. ಕೆನಡಾದ ದೈನಂದಿನ ಜೀವನ ಮತ್ತು ಆರ್ಥಿಕತೆಯನ್ನು ನಡೆಸುವಲ್ಲಿ ಹಿಮ ತೆಗೆಯುವ ಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಾರೆ. ಅದಕ್ಕಾಗಿಯೇ ಸರ್ಕಾರ ಮತ್ತು ಖಾಸಗಿ ಕಂಪನಿಗಳು ಈ ಕೆಲಸಕ್ಕೆ ವಿಶೇಷ ಗಮನ ನೀಡುತ್ತವೆ. ಹಿಮ ತೆಗೆಯುವ ಕೆಲಸ ಉದ್ಯೋಗಿಗಳಿಗೆ ಉತ್ತಮ ಸಂಬಳ ನೀಡುವುದರ ಜೊತೆಗೆ ವಿವಿಧ ಪ್ರಯೋಜನಗಳನ್ನು ನೀಡುತ್ತವೆ.

ಯಾವ ಪ್ರದೇಶಗಳಿಗೆ ಹೆಚ್ಚಿನ ಬೇಡಿಕೆಯಿದೆ?

ಕೆನಡಾದಲ್ಲಿ ಹಿಮ ತೆಗೆಯುವ ಕೆಲಸಗಳು ಭಾರೀ ಹಿಮಪಾತ ಉಂಟಾಗುವ ಪ್ರಾಂತ್ಯಗಳಲ್ಲಿ ವಿಶೇಷವಾಗಿ ಸಾಮಾನ್ಯವಾಗಿದೆ. ಇವುಗಳಲ್ಲಿ ಒಂಟಾರಿಯೊ, ಕ್ವಿಬೆಕ್ ಮತ್ತು ಆಲ್ಬರ್ಟಾದಂತಹ ಪ್ರದೇಶಗಳು ಸೇರಿವೆ. ಇಲ್ಲಿ, ಚಳಿಗಾಲದಲ್ಲಿ ಹಿಮವು ಹಲವಾರು ಅಡಿಗಳವರೆಗೆ ಸಂಗ್ರಹವಾಗುತ್ತದೆ. ಅದನ್ನು ತೆಗೆದುಹಾಕುವುದು ಅತ್ಯಗತ್ಯ. ಏಕೆಂದರೆ ಈ ಸಮಯದಲ್ಲಿ, ರಸ್ತೆಗಳು, ಹೆದ್ದಾರಿಗಳು, ಪಾರ್ಕಿಂಗ್ ಸ್ಥಳಗಳು ಮತ್ತು ಖಾಸಗಿ ಕಟ್ಟಡಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುತ್ತವೆ. ಆ ಪ್ರದೇಶಗಳಿಂದ ಹಿಮವನ್ನು ತೆಗೆದುಹಾಕುವ ಮೂಲಕ ಇದನ್ನು ಮಾಡಲಾಗುತ್ತದೆ. ಸ್ನೋ ಪ್ಲೋಗಳು, ಸ್ನೋ ಬ್ಲೋವರ್‌ಗಳು, ಟ್ರಾಕ್ಟರ್‌ಗಳು ಮತ್ತು ಇತರ ಭಾರೀ ಯಂತ್ರೋಪಕರಣಗಳನ್ನು ಇದಕ್ಕಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ರಾತ್ರಿಯಲ್ಲಿ ಈ ಕೆಲಸವನ್ನು ಮಾಡಬೇಕಾಗುತ್ತದೆ.

ಸಂಬಳ ಎಷ್ಟು?

ಮಾಧ್ಯಮ ವರದಿಗಳ ಪ್ರಕಾರ, ಕೆನಡಾದಲ್ಲಿ ಹಿಮ ತೆಗೆಯುವ ನಿರ್ವಾಹಕರ ಗಳಿಕೆಯು ಬಹಳ ಆಕರ್ಷಕವಾಗಿದೆ. ಹಿಮ ತೆಗೆಯುವ ಕೆಲಸಗಾರರ ಸಂಬಳವು ಅವರ ಅನುಭವ, ಕೆಲಸದ ಸ್ಥಳ ಮತ್ತು ಬಳಸುವ ಉಪಕರಣಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ಈ ಕೆಲಸವು ವಾರ್ಷಿಕವಾಗಿ $45,000 ರಿಂದ $85,000 ಗಳಿಸಬಹುದು. ಭಾರತೀಯ ರೂಪಾಯಿಗಳಲ್ಲಿ, ಈ ಮೊತ್ತವು ಸರಿಸುಮಾರು 40 ಲಕ್ಷದಿಂದ 75 ಲಕ್ಷ ರೂ.ಗಳವರೆಗೆ ಇರುತ್ತದೆ.

ಸರಾಸರಿಯಾಗಿ, ಒಬ್ಬ ಉದ್ಯೋಗಿ ವರ್ಷಕ್ಕೆ ಸುಮಾರು $62,000 ಅಂದರೆ ಸುಮಾರು 55 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಇದರ ಜೊತೆಗೆ, ಅನೇಕ ಉದ್ಯೋಗಿಗಳು ವರ್ಷಕ್ಕೆ $10,000 ವರೆಗೆ ಹೆಚ್ಚುವರಿ ಆದಾಯವನ್ನು ಪಡೆಯುತ್ತಾರೆ. ಒಬ್ಬ ವ್ಯಕ್ತಿಯು ಗಂಟೆಯ ಆಧಾರದ ಮೇಲೆ ಕೆಲಸ ಮಾಡಿದರೆ, ಅನುಭವವನ್ನು ಅವಲಂಬಿಸಿ ಅವನಿಗೆ ಗಂಟೆಗೆ $20 ವರೆಗೆ ಸಂಬಳ ಸಿಗಬಹುದು.

ಯಾವ ಸೌಲಭ್ಯಗಳು ಲಭ್ಯವಿದೆ?

ಹಿಮ ತೆಗೆಯುವ ಕೆಲಸದಲ್ಲಿ ಸಂಬಳದ ಜೊತೆಗೆ ಇತರ ಹಲವು ಸೌಲಭ್ಯಗಳು ಲಭ್ಯವಿದೆ. ಕೆಲವು ಕಂಪನಿಗಳು ದೂರದ ಪ್ರದೇಶಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಬೋನಸ್​, ವಸತಿ ಅಥವಾ ಪ್ರಯಾಣ ಭತ್ಯೆಯನ್ನು ಒದಗಿಸುತ್ತವೆ. ಕೆಲವು ದೊಡ್ಡ ಕಂಪನಿಗಳು ದೀರ್ಘಕಾಲ ಕೆಲಸ ಮಾಡುವ ಉದ್ಯೋಗಿಗಳಿಗೆ ಆರೋಗ್ಯ ವಿಮೆಯಂತಹ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತವೆ. ಇದರ ಜೊತೆಗೆ, ಆಧುನಿಕ ಯಂತ್ರಗಳನ್ನು ನಿರ್ವಹಿಸಲು ಉದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತದೆ. ಇದು ಅವರ ಅನುಭವ ಮತ್ತು ಕೌಶಲ್ಯ ಎರಡನ್ನೂ ಹೆಚ್ಚಿಸುತ್ತದೆ. ಕಂಪನಿಗಳು ತೀವ್ರವಾದ ಚಳಿಯಲ್ಲಿ ಕೆಲಸ ಮಾಡಲು ಉದ್ಯೋಗಿಗಳಿಗೆ ಜಾಕೆಟ್‌ಗಳು, ಬೂಟುಗಳು, ಕೈಗವಸುಗಳು ಮತ್ತು ಇತರ ಸುರಕ್ಷತಾ ಸಾಧನಗಳನ್ನು ಸಹ ಒದಗಿಸುತ್ತವೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Belagavi: ಮರ್ಡರ್​​ ಕೇಸ್​​ ತನಿಖೆ ವೇಳೆ ಖಾಕಿಗೇ ಶಾಕ್​​; ಬಯಲಾಗಿದ್ದು ಎರಡು ಪ್ರಕರಣ! – Kannada News | Belagavi Murder Probe Shocks Police, Two Cases Uncovered, Killer Confesse

ಬೆಳಗಾವಿ, ಡಿಸೆಂಬರ್​​ 27: ಗೋಕಾಕ್ ತಾಲೂಕಿನ ಘಟಪ್ರಭಾ ರೈಲ್ವೆ ನಿಲ್ದಾಣದ ಬಳಿ ಹತ್ಯೆಯಾದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆ ಪ್ರಕಣ ತನಿಖೆ ವೇಳೆ ಪೊಲೀಸರೇ ದಂಗಾಗಿದ್ದಾರೆ. ಅಕ್ರಮ ಸಂಬಂಧದ ಕಾರಣಕ್ಕೆ ವ್ಯಕ್ತಿ ಕೊಲೆಯಾಗಿರೋದು ಗೊತ್ತಾಗಿದ್ದರೆ, ಆರೋಪಿ ಈ ಹಿಂದೆ ಮತ್ತೊಂದು ಮರ್ಡರ್​​ ಮಾಡಿ ಎಸ್ಕೇಪ್​​ ಆಗಿದ್ದ ಎಂಬುದೂ ಬಯಲಾಗಿದೆ.

ಅಕ್ಟೋಬರ್ 22ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ರೈಲ್ವೆ ನಿಲ್ದಾಣದ ಬಳಿ ಹತ್ಯೆ ಮಾಡಿದ ರೀತಿಯಲ್ಲಿ ವ್ಯಕ್ತಿಯೋರ್ವರ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತನ ಗುರುತು ಪತ್ತೆಯಾಗದ ಕಾರಣ ಪೊಲೀಸರು ಫಿಂಗರ್ ಪ್ರಿಂಟ್ ಹಾಗೂ ಆತನ ಕೈ ಮೇಲಿದ್ದ ಟ್ಯಾಟೂ ಆಧಾರಿಸಿ ತನಿಖೆಗೆ ಮುಂದಾಗಿದ್ದಾರೆ. ಈ ವೇಳೆ ಮೃತ ವ್ಯಕ್ತಿ ಅಥಣಿ ತಾಲೂಕಿನ ಮಹೇಶವಾಡಿ ಗ್ರಾಮದ ನಿವಾಸಿ ತುಕಾರಾಮ್ ಶಿಂಗೆ ಎಂಬುದು ಗೊತ್ತಾಗಿದೆ. ರಾಯಭಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಮಾವನ ಮನೆಯಲ್ಲೇ ಬೆಳೆದಿದ್ದ ತುಕಾರಾಮ್, ರೇಲ್ವೆ ನಿಲ್ದಾಣದಲ್ಲಿ ಖಾಲಿ ಬಾಟಲ್ ಆರಿಸಿ ಗುಜರಿಗೆ ಹಾಕುವ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ಮದುವೆಯಾಗು ಎಂದಿದ್ದಕ್ಕೆ ಕತ್ತು ಸೀಳಿ ಕೊಂದ ಪ್ರಿಯಕರ; ನರ್ಸ್​ ಮನೆಯಲ್ಲಿ ಹರಿದಿದ್ದು ರಕ್ತದೋಕುಳಿ!

ಮುಂದಿನ ತನಿಖೆ ಭಾಗವಾಗಿ ಅನುಮಾನದ ಆಧಾರದಲ್ಲಿ ಪೊಲೀಸರು ಘಟಪ್ರಭಾದ ಬಾರ್​​ಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ  ಬಾರ್​​ನಲ್ಲಿ ತುಕಾರಾಮ್​​ ಮದ್ಯ ಸೇವನೆ ಮಾಡ್ತಿರೋದು ಪತ್ತೆಯಾಗಿದೆ. ಈತನ ಜೊತೆ ಮತ್ತೊಬ್ಬ ಇರೋದು ಕೂಡ ಕಂಡಿದೆ. ಹೀಗಾಗಿ ಆತ ಯಾರೆಂಬ ಬಗ್ಗೆ ವಿಚಾರಣೆಗೆ ಇಳಿದಾಗ ತುಕಾರಾಮ್ ಜೊತೆಗೆ ಇದ್ದವ ಮಹಾರಾಷ್ಟ್ರ ಮೂಲದ ಆರೀಫ್ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಪ್ರಕರಣ ಸಂಬಂಧ ಈತನ ವಿಚಾರಣೆ ನಡೆಸಿದಾಗ ಕೊಲೆಗೂ ನನಗೂ ಸಂಬಂಧ ಇಲ್ಲ ಎಂದಿದ್ದಾನೆ. ಆದರೆ, ಚಿಕ್ಕೋಡಿ ಮೂಲದ ಪ್ರದೀಪ್ ನಾಯಕ್ ಎಂಬಾತನ ಜೊತೆಗೆ ತುಕಾರಾಮ್​​ ಜಗಳವಾಡಿದ್ದ ಎನ್ನುವ ವಿಷಯ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪ್ರದೀಪ್​​ ಬಗ್ಗೆ ಮಾಹಿತಿ ಸಿಕ್ಕರೆ ತಿಳಿಸುವಂತೆ ಆರೀಫ್​​ಗೆ ಪೊಲೀಸರು ಸೂಚಿಸಿದ್ದಾರೆ.

ರೈಲುಗಳಲ್ಲಿ ಓಡಾಡುತ್ತಾ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದ ಪ್ರದೀಪ್​​​​ ಮಹಾರಾಷ್ಟ್ರದ ಪುಣೆಯ ಬಳಿಯ ನೀರಾ ರೈಲ್ವೆ ನಿಲ್ದಾಣಕ್ಕೆ ಬಂದಿರೋ ಮಾಹಿತಿಯನ್ನು ಆರಿಫ್​​ ಪೊಲೀಸರಿಗೆ ತಿಳಿಸಿದ್ದು, ಖಾಕಿ ಟೀಂ ನೀರಾ ರೈಲು ನಿಲ್ದಾಣ ತಲುಪಿ ಪ್ರದೀಪ್​​ ಬಂಧನಕ್ಕೆ ಮುಂದಾಗಿದೆ. ಆದರೆ ಈ ವೇಳೆ ಆತ ಎಸ್ಕೇಪ್​​ ಆಗಿದ್ದು, ಮಹಾರಾಷ್ಟ್ರದ ಔಟ್ ಪೋಸ್ಟ್ ಪೊಲೀಸರ ಸಹಾಕಾರದಿಂದಾಗಿ ಕೊನೆಗೂ ಆರೋಪಿ ಬಂಧಿಸುವಲ್ಲಿ ಪೊಲೀಸರು ಸಕ್ಸಸ್​​ ಆಗಿದ್ದಾರೆ. ವಿಚಾರಣೆ ವೇಳೆ ತುಕಾರಾಮ್​​ ಸತ್ಯ ಬಾಯ್ಬಿಟ್ಟಿದ್ದು, ತನ್ನ ಪ್ರೇಯಸಿ ಜೊತೆಗೆ ತುಕಾರಾಮ್​​ಗೆ ಅನೈತಿಕ ಸಂಬಂಧ ಇತ್ತು. ಅದೇ ಕಾರಣಕ್ಕೆ ಆತ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಬುಲ್ಲಿ ಮಹಾದೇವ್ ಕೊಲೆ ರಹಸ್ಯವೂ ರಿವೀಲ್​

ಆರೋಪಿ ಪ್ರದೀಪ್​ ವಿಚಾರಣೆ ವೇಳೆ ಮತ್ತೊಂದು ಕೊಲೆ ರಹಸ್ಯವೂ ರಿವೀಲ್​​ ಆಗಿದೆ. 2022ರಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬುಲ್ಲಿ ಮಹಾದೇವ ಎಂಬವರನ್ನು ಕೊಲೆ ಮಾಡಿ ಚರಂಡಿಯಲ್ಲಿ ಎಸೆಯಲಾಗಿತ್ತು. ಸರಿಯಾದ ಸಾಕ್ಷ್ಯಾಧಾರಗಳು ಸಿಗದ ಕಾರಣ ರೈಲ್ವೆ ಪೊಲೀಸರು ಕೇಸ್​​ ಕ್ಲೋಸ್​ ಮಾಡಿದ್ದರು. ಈ ಕೊಲೆಯನ್ನೂ ತಾನೇ ಮಾಡಿರೋದಾಗಿ ಪ್ರದೀಪ್​ ಒಪ್ಪಿಕೊಂಡಿದ್ದು, ಆ ಮೂಲಕ ಹಳೆಯ ಕೇಸ್​ ಕೂಡ ರೀ ಓಪನ್​ ಆಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟಾಂಗ್ ಕೊಟ್ಟರೂ ಸಹ ಧನ್ವೀರ್ ಬಗ್ಗೆ ಪ್ರೀತಿಯ ಮಾತಾಡಿದ ಕಿಚ್ಚ – Kannada News | Sudeep talks lovingly about Dhanveer Gowda despite he tried to insult him

ಸುದೀಪ್ (Sudeep) ಒಳ್ಳೆಯ ನಟ ಮಾತ್ರವಲ್ಲ, ಜವಾಬ್ದಾರಿಯುತ, ಸೆನ್ಸಿಬಲ್ ವ್ಯಕ್ತಿ ಸಹ ಹೌದು. ಇತ್ತೀಚೆಗೆ ಪೈರಸಿ ಬಗ್ಗೆ ಸುದೀಪ್ ಆಡಿದ ಮಾತು ವಿವಾದಕ್ಕೆ ಕಾರಣವಾಗಿತ್ತು. ಆ ವಿವಾದಕ್ಕೆ ತುಪ್ಪ ಸುರಿದು ಬೆಂಕಿಯನ್ನು ಕಾಡ್ಗಿಚ್ಚು ಮಾಡುವ ಪ್ರಯತ್ನವನ್ನು ಕೆಲವರು ಮಾಡಿದರು. ಆದರೆ ಅದನ್ನೆಲ್ಲ ಸುದೀಪ್ ಜಾಣತನದಿಂದಲೇ ಹ್ಯಾಂಡಲ್ ಮಾಡಿದ್ದು, ಆ ಹೇಳಿಕೆ ಬಳಿಕ ಹಲವು ಸಂದರ್ಶನಗಳನ್ನು ನೀಡಿ ಪ್ರತಿ ಸಂದರ್ಶನದಲ್ಲೂ ಜವಾಬ್ದಾರಿಯುತವಾಗಿ ಮಾತನಾಡಿ, ವಿವಾದವನ್ನು ಭುಗಿಲೇಳಲು ಬಿಡದಂತೆ ಜವಾಬ್ದಾರಿಯುತ ವರ್ತನೆ ತೋರಿದ್ದಾರೆ. ತಮ್ಮ ವಿರುದ್ಧ ಮಾತನಾಡಿದ ಯುವನಟರ ಬಗ್ಗೆಯೂ ಪ್ರೀತಿ, ಕರುಣೆಯಿಂದಲೇ ಮಾತನಾಡಿದ್ದಾರೆ ಸುದೀಪ್. ಆ ಮೂಲಕ ದೊಡ್ಡತನ ತೋರಿದ್ದಾರೆ.

ಸುದೀಪ್ ಅವರು ಹುಬ್ಬಳ್ಳಿಯಲ್ಲಿ ಪೈರಸಿ ವಿರುದ್ಧ ಯುದ್ಧದ ಮಾತನಾಡಿದ್ದನ್ನು ದರ್ಶನ್ ಅಭಿಮಾನಿಗಳು ವೈಯಕ್ತಿಕವಾಗಿ ಪರಿಗಣಿಸಿ ಸುದೀಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಪೋಸ್ಟ್​​ಗಳನ್ನು ಹಂಚಿಕೊಂಡರು. ಅದೇ ಸಮಯಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ತಮ್ಮ ಹೇಳಿಕೆ ಮೂಲಕ ವಿವಾದ ಇನ್ನಷ್ಟು ಹೆಚ್ಚಾಗುವಂತೆ ಮಾಡಿದರು. ದರ್ಶನ್ ಆಪ್ತ ಧನ್ವೀರ್ ಸಹ ‘ಕಾಡಲ್ಲಿ ಎಲ್ಲ ಪ್ರಾಣಿಗಳಿರುತ್ತವೆ ಆದರೆ ಸಿಂಹವೇ ರಾಜ’ ಎಂದೆಲ್ಲ ದರ್ಶನ್ ಪರವಾಗಿ ಟ್ವೀಟ್ ಮಾಡಿ, ಸುದೀಪ್ ಅವರನ್ನು ತಗ್ಗಿಸಿ ತೋರಿಸುವ ಪ್ರಯತ್ನ ಮಾಡಿದ್ದರು. ಅದಕ್ಕೆ ಸುದೀಪ್ ಆಪ್ತ ವಿನಯ್ ಸಹ ಸರಿಯಾಗಿಯೇ ಕೌಂಟರ್ ಕೊಟ್ಟರು.

ಇದನ್ನೂ ಓದಿ:ಅಭಿಮಾನಿಗಳ ಸಂಭ್ರಮನ ಕಣ್ತುಂಬಿಕೊಂಡ ಸುದೀಪ್

ಇದೇ ವಿಷಯವಾಗಿ ಸುದೀಪ್ ಅವರಿಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಎದುರಾಗಿದೆ. ಉತ್ತರ ನೀಡಿರುವ ಸುದೀಪ್, ‘ಧನ್ವೀರ್, ವಿನಯ್ ಎಲ್ಲರೂ ನನಗೆ ಒಂದೇ. ಅವರೆಲ್ಲ ನಮ್ಮ ಚಿತ್ರರಂಗದ ಯುವ ನಟರು. ಅವರೆಲ್ಲ ಕೆಲವು ವಿಷಯಗಳನ್ನು ಬಿಡಬೇಕಾಗುತ್ತೆ, ನಾನು ಧನ್ವೀರ್ ಅವರನ್ನು ನೋಡಿದ್ದೀನಿ, ಅವರು ಹೇಗೆ ಓಡಾಡುತ್ತಿದ್ದಾರೆ. ನಾನು ಅದನ್ನು ಮೆಚ್ಚಿಕೊಳ್ಳುತ್ತೀನಿ’ ಎಂದಿದ್ದಾರೆ ಸುದೀಪ್.

ಮುಂದುವರೆದು, ‘ಒಬ್ಬ ಹೀರೋ ಜೊತೆಗೆ ನೀವಿರಬೇಕಾದರೆ, ಅವರು ನಿಮ್ಮನ್ನು ಇಷ್ಟ ಪಡಬೇಕಾದರೆ ಆ ನಿಯತ್ತು, ಲಾಯಲ್ಟಿ, ಆ ಪ್ರೀತಿ ಇರಬೇಕು. ಅದು ಏನಾದರೂ ಆಗಲಿ, ನಾನು ನಮ್ಮ ಹೀರೋ ಜೊತೆಗೆ ನಿಂತುಕೊಳ್ಳುತ್ತೀನಿ ಎಂಬ ಅವರ ಹಠ ಹಿಡಿಸಿತು’ ಎಂದಿದ್ದಾರೆ ನಟ ಸುದೀಪ್. ಆ ಮೂಲಕ ತಮಗೆ ಪರೋಕ್ಷ ಟಾಂಗ್ ಕೊಡುವ ಪ್ರಯತ್ನ ಮಾಡಿದ ಕಿರಿ ನಟನ ಬಗ್ಗೆಯೂ ಪ್ರಶಂಸಾತ್ಮಕ ಮಾತುಗಳನ್ನೇ ಆಡಿ ದೊಡ್ಡತನ ಪ್ರದರ್ಶಿಸಿದ್ದಾರೆ ಕಿಚ್ಚ.

ಸುದೀಪ್ ಅವರು ಧನ್ವೀರ್ ಬಗ್ಗೆ ಆಡಿರುವ ಮಾತುಗಳನ್ನು ಸ್ವತಃ ದರ್ಶನ್ ಅಭಿಮಾನಿಗಳು, ಧನ್ವೀರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮ ಪಡುತ್ತಿದ್ದಾರೆ. ತಮ್ಮ ತೂಕದ ಮಾತುಗಳಿಂದ ವಿರೋಧಿಗಳ ಮನಸ್ಸನ್ನೂ ಗೆದ್ದಿದ್ದಾರೆ ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ & ಭಯೋತ್ಪಾದನೆಗೆ ಖಡಕ್ ಉತ್ತರ – Kannada News | 2025: Bharat Secured, A Year That Redefined India’s Military Resolve Under PM Modi

ಭಾರತದ ಭದ್ರತಾ ದೃಷ್ಟಿಯಿಂದ 2025, ಮಹತ್ವದ ವರ್ಷ. ರಾಷ್ಟ್ರೀಯ ಭದ್ರತಾ ನೀತಿಯಲ್ಲಿ ಮಹತ್ತರ ಮೈಲಿಗಲ್ಲು ತಂದ ವರ್ಷ. ಭಾರತದ ಪ್ರಜೆಗಳ ಮೇಲಿನ ದಾಳಿಯನ್ನು ಸಂಯಮದಿಂದಷ್ಟೇ ಅಲ್ಲ ಕ್ಷಿಪ್ರವಾದ, ನಿಖರವಾದ ಮತ್ತು ನಿರ್ಣಾಯಕವಾದ ಕ್ರಮದಿಂದ ಎದುರಿಸಲಾಗುವುದು ಎಂಬುದನ್ನು ಪಿಎಂ ಮೋದಿ (Narendra Modi) ನಾಯಕತ್ವದ ಭಾರತ ತೋರಿಸಿಕೊಟ್ಟಿದೆ. ಭಯೋತ್ಪಾದನೆ ವಿಚಾರದಲ್ಲಿ ಪಿಎಂ ಮೋದಿ ಅವರು ಐದು ಹೊಸ ಸಹಜ ಕ್ರಮಗಳನ್ನು ತಿಳಿಸಿದ್ದಾರೆ.

ಈ ನೀತಿಗಳು ಇಂತಿವೆ:

  • ಭಯೋತ್ಪಾದನಾ ದಾಳಿಗಳಿಗೆ ಖಡಕ್ ಉತ್ತರ (ಯಾವುದೇ ದಾಳಿಯನ್ನೂ ನಿರ್ಣಾಯಕ ಪ್ರತಿದಾಳಿಯಿಂದ ಉತ್ತರಿಸಲಾಗುವುದು)
  • ಪರಮಾಣು ಬ್ಲ್ಯಾಕ್​ಮೇಲ್​ಗೆ ಬಗ್ಗುವುದಿಲ್ಲ (ಪರಮಾಣು ಬೆದರಿಕೆ ಏನೇ ಇದ್ದರೂ ಭಯೋತ್ಪಾದನಾ ನೆಲೆಗಳ ಮೆಲೆ ಭಾರತದ ಆಕ್ರಮಣ ತಡೆಯಲು ಆಗಲ್ಲ)
  • ಉಗ್ರರಿಗೂ ಹಾಗೂ ಅವರ ಪ್ರಾಯೋಜಕರಿಗೂ ವ್ಯತ್ಯಾಸ ಇಲ್ಲ (ಆ ಇಬ್ಬರೂ ಕೂಡ ಪಾಪ ಕೃತ್ಯದ ಭಾಗಿದಾರರೇ ಎಂದು ಪರಿಗಣಿಸಲಾಗುವುದು)
  • ಯಾವುದೇ ಮಾತುಕತೆಯಲ್ಲಿ ಭಯೋತ್ಪಾದನೆಯದೇ ಮೊದಲು ಪ್ರಸ್ತಾಪ (ಮಾತುಕತೆಗಳಲ್ಲಿ ಭಯೋತ್ಪಾದನೆ ಸಂಬಂಧಿತ ವಿಚಾರಗಳಿಗೆ ಮಾತ್ರ ಗಮನ ಕೊಡಲಾಗುತ್ತದೆ)
  • ಸಾರ್ವಭೌಮತೆಯಲ್ಲಿ ಯಾವುದೇ ರಾಜಿ ಇಲ್ಲ (ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೆ ಆಗಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರವೂ ಒಟ್ಟಿಗೆ ಹೋಗುವುದಿಲ್ಲ).

ಜಾಗತಿಕ ಅನಿಶ್ಚಿತತೆಯ ನಡುವೆ ಭಾರತವು ಸಜ್ಜಿತವಾಗಿ ಮತ್ತು ಆತ್ಮವಿಶ್ವಾಸವಾಗಿ ಸೆಟೆದು ನಿಂತಿತು. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಇರುವುದಿಲ್ಲ, ಹಾಗೂ ಸಾರ್ವಭೌಮತೆಯನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಲಾಗುವುದು ಎಂಬುವನ್ನು ಭಾರತ ಬಹಳ ಸ್ಪಷ್ಟ ಸಂದೇಶದಲ್ಲಿ ತಿಳಿಸಿಕೊಟ್ಟಿದೆ.

ಆಪರೇಷನ್ ಸಿಂದೂರ್: ಭಯೋತ್ಪಾದನಾ ವಿರೋಧಿ ಕ್ರಮದಲ್ಲಿ ಹೊಸ ದಾರಿ

2025ರ ಮೇ 7ರಂದು ಭಾರತ ಆಪರೇಷನ್ ಸಿಂದೂರ್ ಕೈಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಭಾರತ ನಡೆಸಿದ ಅತ್ಯಂತ ಮಹತ್ವದ ಮಿಲಿಟರಿ ಆ್ಯಕ್ಷನ್ ಅದು. ಪಹಲ್ಗಾಂ ಉಗ್ರ ದಾಳಿಗೆ ಭಾರತ ಪ್ರತಿಕ್ರಿಯಿಸಿದ ವಿಧಾನ ಅದು. ಭಯೋತ್ಪಾದನೆಗೆ ಭಾರತದ ಸ್ಪಂದನೆ ಹೇಗಿರುತ್ತೆ ಎಂದು ತೋರಿಸಲಾಗಿತ್ತು. ‘ತನ್ನ ಪ್ರಜೆಗಳನ್ನು ಗುರಿ ಮಾಡಿದ್ದೇ ಆದಲ್ಲಿ ಭಾರತವು ಭಯೋತ್ಪಾದನೆಯ ಎದೆಗೆ, ಶತ್ರು ಪ್ರದೇಶದೊಳಗೆ ಬಹಳ ದೂರದವರೆಗೆ ಪ್ರಹಾರ ಮಾಡುತ್ತದೆ’ ಎನ್ನುವ ಸಂದೇಶ ರವಾನೆಯಾಗಿದೆ.

ಇದನ್ನೂ ಓದಿ: Infra Achievements: 2025ರಲ್ಲಿ ಭಾರತದಲ್ಲಿ ಅದೆಷ್ಟು ಮೂಲಸೌಕರ್ಯ ಯೋಜನೆಗಳು, ಮೈಲಿಗಲ್ಲುಗಳು, ಮೊದಲುಗಳು

ಐದು ದಶಕಗಳಲ್ಲಿ ಪಾಕಿಸ್ತಾನದ ಭೂಭಾಗದೊಳಗೆ ಭಾರತ ನಡೆಸಿದ ಪ್ರಮುಖ ಮಿಲಿಟರಿ ಕಾರ್ಯಾಚರಣೆ ಇದೆನಿಸಿದೆ. ಪರಮಾಣು ಶಕ್ತ ಶತ್ರು ದೇಶದ ಆಳದಲ್ಲಿ ಹಲವು ಸ್ಥಳಗಳನ್ನು ನಿಖರವಾಗಿ ಗುರಿ ಮಾಡಿ ಭಾರತ ದಾಳಿ ಎಸಗಿದ್ದು ಇದೇ ಮೊದಲು. ಇದು ದೇಶದ ಮಿಲಿಟರಿ ಹೊಂದಿರುವ ಆತ್ಮವಿಶ್ವಾಸದ ಸಂಕೇತವಾಗಿದೆ.

1971ರ ನಂತರ ಮೊದಲ ಬಾರಿಗೆ ಭಾರತವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಆಳಕ್ಕೆ ದಾಳಿ ಮಾಡಿ ಬಹುತೇಕ 100 ಉಗ್ರರನ್ನು ಸಂಹರಿಸಿದೆ. ಪಾಕಿಸ್ತಾನದ ಒಳಗೆ ಮತ್ತು ಎಲ್​ಓಸಿ ಗಡಿ ಉದ್ದಕ್ಕೂ ಒಮ್ಮೆಗೇ ಹಲವು ದೊಡ್ಡ ಗುರಿಗಳನ್ನು ಹೊಡೆದು, ಉಗ್ರರ ಶಿಬಿರಗಳನ್ನು ಮತ್ತು ಇನ್​ಫ್ರಾಸ್ಟ್ರಕ್ಚರ್ ಅನ್ನು ನಾಶ ಮಾಡಿದ್ದೂ ಇದೇ ಮೊದಲು.

ಮೇ 10ರಂದು ಭಾರತ 11 ಪಾಕಿಸ್ತಾನೀ ವಾಯುನೆಲೆಗಳ ಮೇಲೆ ನಿಖರವಾಗಿ ದಾಳಿ ಮಾಡಿತು. ಭಾರತದ ಒಂದೂ ಮಿಸೈಲ್ ಅನ್ನೂ ಪಾಕಿಸ್ತಾನದ ವಾಯು ರಕ್ಷಣೆ ವ್ಯವಸ್ಥೆಗೆ ತಡೆಯಲು ಆಗಲಿಲ್ಲ. ‘ಭಾರತೀಯ ಪ್ರಜೆಗಳನ್ನು ಗುರಿ ಮಾಡಿದರೆ, ಭಾರತ ತನ್ನದೇ ರೀತಿಯಲ್ಲಿ ಕ್ಷಿಪ್ರವಾಗಿ ಪ್ರತಿಕ್ರಿಯಿಸಬಲ್ಲುದು, ಶತ್ರು ಪಾಳದೊಳಗೆ ಬೇಕಾದರೂ ನುಗ್ಗಿ ಮರುಘಾತ ಕೊಡಬಹುದು’ ಎಂದು ಆಪರೇಷನ್ ಸಿಂದೂರ ತೋರಿಸಿಕೊಟ್ಟಿದೆ.

ಆಪರೇಷನ್ ಸಿಂದೂರದಲ್ಲಿ ಬಳಕೆ ಆಗಿದ್ದು ಬಹುತೇಕ ಮೇಡ್ ಇನ್ ಇಂಡಿಯಾ ತಂತ್ರಜ್ಞಾನವೇ. ಇದು ಜಾಗತಿಕ ಸಮುದಾಯಕ್ಕೆ ಅಚ್ಚರಿ ಮೂಡಿಸಿದೆ. ಆಪರೇಷನ್ ಸಿಂದೂರ್​ನಲ್ಲಿ ಭಾರತೀಯ ವಾಯುಪಡೆ ಬಹಳ ಸಂಯೋಜಿತ ರೀತಿಯಲ್ಲಿ ನಿಖರ ದಾಳಿ ನಡೆಸಿತು. ಬ್ರಹ್ಮೋಸ್ ಸೂಪರ್​ಸೋನಿ ಕ್ರ್ಯೂಸ್ ಮಿಸೈಲ್, ರಫೇಲ್ ಜೆಟ್​ಗಳಿಂದ ನಿಖರ ದಾಳಿ ನಡೆಸಲಾಯಿತು. ಕಾಮಿಕೇಜ್ ಡ್ರೋನ್, ಲಾಯಿಟರಿಂಗ್ ಡ್ರೋನ್​ಗಳು ಶತ್ರುಪಾಳಯದ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಮತ್ತು ಗುರಿಗಳ ಮೇಲೆ ನಿಖರ ದಾಳಿ ಮಾಡಲು ಬಳಕೆಯಾದವು.

ಭಾರತದ ಹೊಸ ರಕ್ಷಣಾ ನೀತಿ: ಸಂಕಲ್ಪ ಮತ್ತು ಸಾಮರ್ಥ್ಯ ಬೆರೆತಾಗ…

ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದ ರಕ್ಷಣಾ ಕ್ಷೇತ್ರದಲ್ಲಾದ ಪರಿವರ್ತನೆ 2025ರಲ್ಲಿ ಉಚ್ಛ್ರಾಯ ಸ್ಥಿತಿ ಮುಟ್​ಟಿತು. ಡಿಫೆನ್ಸ್ ಪ್ರೊಡಕ್ಷನ್ 2014ರಲ್ಲಿ 40,000 ಕೋಟಿ ರೂ ಇದ್ದದ್ದು ಈಗ 1.54 ಲಕ್ಷ ಕೋಟಿ ರೂಗೆ ಏರಿದೆ. ಇದು ಭಾರತವು ವಿಶ್ವಾಸಾರ್ಹವಾದ ಒಂದು ಜಾಗತಿಕ ರಕ್ಷಣಾ ಉತ್ಪಾದನಾ ಅಡ್ಡೆಯಾಗುತ್ತಿರುವುದನ್ನು ತೋರಿಸುತ್ತದೆ.

ಇದನ್ನೂ ಓದಿ: ಚೀನಾ ಹೇಳೋದು ಬೇರೆ, ವಾಸ್ತವ ಬೇರೆಯಾ? 2025ರಲ್ಲಿ ಚೀನಾ ಆರ್ಥಿಕ ಬೆಳವಣಿಗೆ ಶೇ 3 ಮಾತ್ರವಾ?

ಭಾರತದ ರಕ್ಷಣಾ ಬಜೆಟ್ 2013-14ರಲ್ಲಿ 2.53 ಲಕ್ಷ ಕೋಟಿ ರೂ ಇತ್ತು. 2025-26ರಲ್ಲಿ 6.81 ಲಕ್ಷ ಕೋಟಿ ರೂಗೆ ಏರಿದೆ. ಆಧುನೀಕರಣ, ಇನ್​ಫ್ರಾಸ್ಟ್ರಕ್ಚರ್​ಗೆ ಭಾರತ ಉತ್ತಮ ರೀತಿಯ ಹೂಡಿಕೆ ಮಾಡುತ್ತಿರುವುದನ್ನು ತೋರಿಸುತ್ತದೆ. ಭಾರತದಲ್ಲಿ ತಯಾರಾಗುವ ರಕ್ಷಣಾ ಉಪಕರಣಗಳು 100ಕ್ಕೂ ಅಧಿಕ ದೇಶಗಳಿಗೆ ರಫ್ತಾಗುತ್ತಿವೆ. ಅಮೆರಿಕ, ಫ್ರಾನ್ಸ್, ಆರ್ಮೇನಿಯಾ ಮೊದಲಾದ ದೇಶಗಳಿಗೂ ರಫ್ತಾಗುತ್ತಿವೆ. ಇದರಲ್ಲಿ ಡಿಫೆನ್ಸ್ ಸೆಕ್ಟರ್​ನ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪಾಲೇ ಶೇ. 77ರಷ್ಟಿದೆ.

ಎಲ್ಲಾ ಮೂರು ರಕ್ಷಣಾ ಸೇವೆಗಳ ಬಲವರ್ಧನೆ

2025ರಲ್ಲಿ ಭಾರತದ ರಕ್ಷಣಾ ಕ್ಷೇತ್ರವನ್ನು ಬಹಳ ವೇಗವಾಗಿ ಆಧುನೀಕರಣ ಮಾಡಲಾಯಿತು. ಈ ವರ್ಷ 4.30 ಲಕ್ಷ ಕೋಟಿ ರೂ ಮೌಲ್ಯದ ಖರೀದಿ ಪ್ರಸ್ತಾವಗಳಾದವು. ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಗಳಲ್ಲಿ ಯುದ್ಧ ಸನ್ನದ್ಧ ಸ್ಥಿತಿ ತಲುಪಲು ಸರ್ಕಾರ ಬಹಳ ತ್ವರಿತ ಹೆಜ್ಜೆಗಳನ್ನು ಇಡುತ್ತಿದೆ ಎಂಬುದು ಈ ಖರೀದಿ ಪ್ರಸ್ತಾವಗಳಿಂದ ಗೊತ್ತಾಗುತ್ತದೆ.

2025ರ ಮಾರ್ಚ್​ನಲ್ಲಿ, ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ (ರಕ್ಷಣಾ ಖರೀದಿ ಮಂಡಳಿ) 54,000 ಕೋಟಿ ರೂ ಮೊತ್ತದ ಖರೀದಿ ಪ್ರಸ್ತಾವಕ್ಕೆ ಅನುಮೋನೆ ಕೊಟ್ಟಿತು. ಈ ಪ್ರಸ್ತಾಪದಲ್ಲಿ ಟಿ-90 ಟ್ಯಾಂಕ್​ಗಳಿಗೆ 1,350 ಎಚ್​ಪಿ ಎಂಜಿನ್​ಗಳು, ದೇಶೀಯವಾಗಿ ಅಭಿವೃದ್ಧಿಪಡಿಸಿದ ವರುಣಾಸ್ತ್ರಗಳು, ಆಗಸದಿಂದಲೇ ಮುನ್ನೆಚ್ಚರಿಕೆ ನೀಡುವಂತಹ ಸಿಸ್ಟಂಗಳು ಮೊದಲಾದವು ಒಳಗೊಂಡಿವೆ. ಎಚ್​ಎಎಲ್​ನಿಂದ 156 ಹಗುರ ಯುದ್ಧ ಹೆಲಿಕಾಪ್ಟರ್​ಗಳನ್ನು ಖರೀದಿಸಲು ಸರ್ಕಾರ ಅದೇ ಮಾರ್ಚ್ ತಿಂಗಳಲ್ಲಿ 62,000 ಕೋಟಿ ರೂಗೆ ಡೀಲ್ ಮಾಡಿಕೊಂಡಿತು.

ಏಪ್ರಿಲ್ ತಿಂಗಳಲ್ಲಿ ಭಾರತೀಯ ನೌಕಾಪಡೆಗೆ ಡಸ್ಸೋ ಸಂಸ್ಥೆಯಿಂದ 26 ರಫೇಲ್ ಎಂ ಫೈಟರ್ ಜೆಟ್ ಅನ್ನು ಖರೀದಿಸಲು ಫ್ರಾನ್ಸ್ ಜೊತೆ 63,000 ಕೋಟಿ ರೂಗೆ ಡೀಲ್ ಮಾಡಿಕೊಳ್ಳಲಾಯಿತು. ಜುಲೈ ತಿಂಗಳಲ್ಲಿ 1.05 ಲಕ್ಷ ಕೋಟಿ ರೂ ಮೌಲ್ಯದ 10 ಖರೀದಿ ಪ್ರಸ್ತಾವಗಳಿಗೆ ಅನುಮೋದನೆ ಸಿಕ್ಕಿತು. ಇದರಲ್ಲಿ ಎಲೆಕ್ಟ್ರಾನಿಕ್ ವಾರ್​ಫೇರ್ ಸಿಸ್ಟಂ, ಆರ್ಮರ್ಡ್ ರಿಕವರಿ ವೆಹಿಕಲ್ ಮೊದಲಾದವುಗಳ ಖರೀದಿ ಸೇರಿದೆ.

ಆಗಸ್ಟ್ ತಿಂಗಳಲ್ಲಿ ಸಶಸ್ತ್ರ ಪಡೆಗಳ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸಲು 67,000 ಕೋಟಿ ರೂ ಮೌಲ್ಯದ ವಿವಿಧ ಒಪ್ಪಂದಗಳಿಗೆ ಅನುಮೋದನೆ ಕೊಟ್ಟಿತು ಡಿಎಸಿ. ಅಕ್ಟೋಬರ್​ನಲ್ಲಿ 79,000 ಕೋಟಿ ರೂ ಮೌಲ್ಯದ ಖರೀದಿ ಒಪ್ಪಂದಗಳಿಗೆ ಸಮ್ಮತಿ ಸಿಕ್ಕಿತು. ಇವೆಲ್ಲವೂ ಕೂಡ ದೇಶದ ಮಿಲಿಟರಿ ಸಾಮರ್ಥ್ಯ ವೃದ್ಧಿಸಲು ಸರ್ಕಾರ ಹೊಂದಿರುವ ಬದ್ಧತೆಗೆ ಕನ್ನಡಿ ಹಿಡಿಯುತ್ತವೆ.

ಪ್ರಮುಖ ಸೇರ್ಪಡೆ, ಪರೀಕ್ಷೆ, ದೇಶೀಯ ತಯಾರಿಕೆ

ಭಾರತದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ದೇಶೀಯವಾಗಿ ಎಕೆ-203 ಅಸ್ಸಾಲ್ಟ್ ರೈಫಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅಮೇಥಿಯಲ್ಲಿ ಈ ರೈಫಲ್​ಗಳನ್ನು ತಯಾರಿಸಲಾಗಿದ್ದು 2025ರ ಡಿಸೆಂಬರ್​ನಲ್ಲಿ ಭಾರತೀಯ ಸೇನೆಯ ಬಳಕೆಗೆ ಸಿಗಲಿದೆ. ಈ ವರ್ಷದ ಆರಂಭದಲ್ಲಿ (2025ರ ಜನವರಿ) ಡೆಸ್ಟ್ರಾಯರ್, ಫ್ರಿಗೇಟ್ ಮತ್ತು ಸಬ್​ಮರೀನ್ ಈ ಮೂರು ನೌಕೆಗಳು ಇದೇ ಮೊದಲ ಬಾರಿಗೆ ಒಟ್ಟಿಗೆ ಭಾರತೀಯ ನೌಕೆಗೆ ಸೇರ್ಪಡೆಯಾಗಿವೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಅಂತಿಮ ಪ್ರಸ್ತಾಪ ಸಲ್ಲಿಸಿದ ಭಾರತ; ಕೃಷಿ ತಂಟೆ ಬೇಡ, ಟ್ಯಾರಿಫ್ ನಿಲ್ಲಿಸಿ ಎಂಬುದು ಭಾರತದ ಬೇಡಿಕೆ

2025ರ ಆಗಸ್ಟ್ ತಿಂಗಳಲ್ಲಿ ಮುಕ್ಕಾಲು ಪಾಲು ದೇಶೀಯವಾಗಿ ಅಭಿವೃದ್ಧಿಯಾದ ಐಎನ್​ಎಸ್ ಹಿಮಗಿರಿ ಮತ್ತು ಐಎನ್​ಎಸ್ ಉದಯಗಿರಿ ಈ ಎರಡು ಸ್ಟೀಲ್ತ್ ಫ್ರಿಗೇಟ್​ಗಳನ್ನು ನೌಕಾಪಡೆಗೆ ಸೇರಿಸಲಾಯಿತು.

ಸೆಪ್ಟೆಂಬರ್ ತಿಂಗಳಲ್ಲಿ 2,000 ಕಿಮೀ ದೂರ ಕ್ರಮಿಸಬಲ್ಲ ಪರಮಾಣ ಶಕ್ತ ಅಗ್ನಿ ಪ್ರೈಮ್ ಕ್ಷಿಪಣಿಯ ಪರೀಕ್ಷೆ ನಡೆಸಿತು. ರೈಲ್ ಮೇಲಿನ ಲಾಂಚರ್​ನಿಂದ ಇದರ ಉಡಾವಣೆ ಮಾಡಲಾಯಿತು. ಈ ರೀತಿ ರೈಲ್​ಕಾರ್ ಆಧಾರಿತ ಅಂತರಖಂಡ ಬ್ಯಾಲಿಸ್ಟಿಕ್ ಮಿಸೈಲ್​ಗಳನ್ನು ಉಡಾಯಿಸಬಲ್ಲ ಸಾಮರ್ಥ್ಯ ಇರುವ ರಷ್ಯಾ, ಅಮೆರಿಕ ಮತ್ತು ಚೀನಾ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಗೊಂಡಿತು.

ಈ ವರ್ಷ, ಲಕ್ನೋದ ಇಂಟಿಗ್ರೇಶನ್ ಮತ್ತು ಟೆಸ್ಟಿಂಗ್ ಘಟಕದಲ್ಲಿ ತಯಾರಾದ ಬ್ರಹ್ಮೋಸ್ ಕ್ಷಿಪಣಿಯ ಮೊದಲ ಬ್ಯಾಚ್ ಅನ್ನು ಬಿಡುಗಡೆ ಮಾಡಲಾಯಿತು. ಉತ್ತರಪ್ರದೇಶದ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್​ನಲ್ಲಿ ಈ ಘಟಕವು ಒಂದು ಪ್ರಮುಖ ಭಾಗವಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ತೇಕನ್​ಪುರ್​ನಲ್ಲಿ ಭಾರತದ ಮೊದಲ ಡ್ರೋನ್ ಸಮರ ಶಾಲೆಯನ್ನು ಬಿಎಸ್​ಎಫ್ ಆರಂಭಿಸಿತು. ಡಿಸೆಂಬರ್​ನಲ್ಲಿ ಡಿಆರ್​ಡಿಒ ತನ್ನ ಏಳು ಸುಧಾರಿತ ತಂತ್ರಜ್ಞಾನಗಳನ್ನು ಭಾರತೀಯ ನೌಕಾಸೇನೆ ಮತ್ತು ವಾಯುಸೇನೆಗೆ ಹಸ್ತಾಂತರಿಸಿತು.

ಇದೇ ಡಿಸೆಂಬರ್ ತಿಂಗಳಲ್ಲಿ ಡಿಆರ್​ಡಿಒ ಫೈಟರ್ ಏರ್​ಕ್ರಾಫ್ಟ್ ಎಸ್ಕೇಪ್ ಸಿಸ್ಟಂನ ಹೈಸ್ಪೀಡ್ ರಾಕೆಟ್ ಸ್ಲೆಡ್ ಟೆಸ್ಟ್ ನಡೆಸಿತು. ಈ ಪರೀಕ್ಷೆ ಯಶಸ್ವಿಯಾಯಿತು. ಕೆಲವೇ ದೇಶಗಳಿಗೆ ಮಾತ್ರವೇ ಈ ಪರೀಕ್ಷಾ ಸಾಮರ್ಥ್ಯ ಇರುವುದು.

ಡಿಫೆನ್ಸ್ ಕೈಗಾರಿಕಾ ಇಕೋಸಿಸ್ಟಂ ಮತ್ತು ಸುಧಾರಣೆಗಳು

2025ರ ನವೆಂಬರ್ 1ರಿಂದ ಜಾರಿಯಾಗುವಂತೆ, ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಮ್ಯಾನುಯಲ್​ನಿಂದ ಉದ್ಯಮ ಸ್ನೇಹಿ ಸುಧಾರಣೆಗಳು ಚಾಲ್ತಿಗೆ ಬಂದವು. ಉತ್ತರಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ಮತ್ತು ತಮಿಳುನಾಡು ರಕ್ಷಣಾ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ 9,145 ಕೋಟಿ ರೂ ಮೊತ್ತದ ಹೂಡಿಕೆಗಳು ಬಂದವು. ಇದರಲ್ಲಿ 289 ತಿಳಿವಳಿಕೆ ಒಪ್ಪಂದಗಳಾದವು. ಓಪನ್ ಟೆಂಡರ್​ನಲ್ಲಿ ಖಾಸಗಿ ಕಂಪನಿಗಳುಮತ್ತು ಎಂಎಸ್​ಎಂಇಗಳು ಪಾಲ್ಗೊಳ್ಳಬೇಕಾದರೆ ಡಿಫೆನ್ಸ್ ಸೆಕ್ಟರ್​ನ ಪಬ್ಲಿಕ್ ಸೆಕ್ಟರ್ ಕಂಪನಿಗಳಿಂದ ಎನ್​ಒಸಿ ಪಡೆಯಬೇಕು ಎಂದಿದ್ದ ನಿಯಮವನ್ನು ತೆಗೆದುಹಾಕಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ; ಭುಗಿಲೆದ್ದ ವಿವಾದ – Kannada News | Lord Vishnu statue demolition in Cambodia what is the Controversy 

ಕಾಂಬೋಡಿಯಾ, ಡಿಸೆಂಬರ್ 26: ಥೈಲ್ಯಾಂಡ್-ಕಾಂಬೋಡಿಯಾ ಗಡಿಯಲ್ಲಿ ಮಿಲಿಟರಿ ಘರ್ಷಣೆಗಳು ಮುಂದುವರೆದಿವೆ. ಥೈಲ್ಯಾಂಡ್ ಸೇನೆಯು ಕಾಂಬೋಡಿಯಾ ಗಡಿಯಲ್ಲಿ 9 ಮೀಟರ್ ಎತ್ತರದ ವಿಷ್ಣು ಪ್ರತಿಮೆಯನ್ನು ಕೆಡವಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊ ವೈರಲ್ (Video Viral) ಆಗುತ್ತಿದೆ. ಈ ದೃಶ್ಯಗಳನ್ನು ನೋಡಿದ ನಂತರ ಪ್ರಪಂಚದಾದ್ಯಂತದ ನೆಟಿಜನ್‌ಗಳು ಮತ್ತು ಭಕ್ತರು ತೀವ್ರ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂಬೋಡಿಯಾದಲ್ಲಿ ಹಿಂದೂ ನಂಬಿಕೆಯ ಮೇಲೆ ದಾಳಿ ನಡೆದಿದೆ. ಇದು ಪ್ರಪಂಚದಾದ್ಯಂತ ಹಿಂದೂಗಳ ಕೋಪವನ್ನು ಕೆರಳಿಸುತ್ತಿದೆ. ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಗಡಿ ವಿವಾದದಿಂದ ಪ್ರಭಾವಿತವಾಗಿರುವ ಪ್ರದೇಶದಲ್ಲಿ ಥಾಯ್ ಸೇನೆಯು ವಿಷ್ಣುವಿನ ಪ್ರತಿಮೆಯನ್ನು ಕೆಡವಿದೆ. ಈ ದಾಳಿಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇಂತಹ ಕೃತ್ಯಗಳು ಪ್ರಪಂಚದಾದ್ಯಂತದ ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತವೆ ಎಂದು ಹೇಳಿದ್ದಾರೆ. ಇಂತಹ ದಾಳಿಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ. ಎರಡೂ ದೇಶಗಳು ಮಾತುಕತೆಯ ಮೂಲಕ ಶಾಂತಿಯತ್ತ ಹೆಜ್ಜೆ ಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ. ಡಿಸೆಂಬರ್ 7ರಂದು ಥೈಲ್ಯಾಂಡ್-ಕಾಂಬೋಡಿಯಾ ಗಡಿ ವಿವಾದ ಪುನರಾರಂಭವಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಗಿಲ್ಲಿ ಬಗ್ಗೆ ಗುಟ್ಟಾಗಿ ಮಾತಾಡಿದ ಕಾವ್ಯಾ ಫ್ಯಾಮಿಲಿ: ಕೂಡಲೇ ಹೊರಗೆ ಕಳಿಸಿದ ಬಿಗ್ ಬಾಸ್ – Kannada News | Kavya Shaiva family sent out of Bigg Boss Kannada 12 house for this reason

ಬಿಗ್ ಬಾಸ್ ಮನೆಗೆ ಕಾವ್ಯಾ ಅವರ ಕುಟುಂಬದವರು ಬಂದಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಅವರನ್ನು ವಾಪಸ್ ಕಳಿಸಲಾಗಿದೆ. ಬಿಗ್ ಬಾಸ್ (BBK 12) ಮನೆಯ ಮೂಲ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಈ ಘಟನೆಯಿಂದಾಗಿ ಕಾವ್ಯಾ ಶೈವ (Kavya Shaiva) ಅವರಿಗೆ ತುಂಬಾ ನೋವಾಗಿದೆ. ತಾಯಿ ಮತ್ತು ತಮ್ಮ ದಿಢೀರ್ ಅಂತ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವ ಪರಿಸ್ಥಿತಿ ಬಂತಲ್ಲ ಎಂದು ಕಾವ್ಯಾ ಅವರು ಕಣ್ಣೀರು ಹಾಕಿದ್ದಾರೆ. ಗಿಲ್ಲಿ ನಟ (Gilli Nata) ಬಗ್ಗೆ ಕಾವ್ಯಾ ಕುಟುಂಬದವರು ಗುಟ್ಟಾಗಿ ಮಾತನಾಡಿದ್ದೇ ಇದಕ್ಕೆಲ್ಲ ಕಾರಣ ಆಗಿದೆ.

ಹೊರಗಿನಿಂದ ಬಂದ ಕುಟುಂಬದವರು ಬಿಗ್ ಬಾಸ್ ಮನೆಗೆ ಸಂಬಂಧಿಸಿದ ಹೊರ ಜಗತ್ತಿನ ವಿಷಯಗಳನ್ನು ಇಲ್ಲಿ ಚರ್ಚೆ ಮಾಡುವುದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಇದನ್ನು ಎಲ್ಲರಿಗೂ ಮೊದಲೇ ತಿಳಿಸಲಾಗಿರುತ್ತದೆ. ಆದರೂ ಕೂಡ ಕಾವ್ಯಾ ಕುಟುಂಬದವರು ಆ ನಿಮಯ ಉಲ್ಲಂಘನೆ ಮಾಡಿದರು. ಗಿಲ್ಲಿ ನಟ ಬಗ್ಗೆ ಅವರು ಗುಟ್ಟಾಗಿ ಮಾತನಾಡಿದರು.

‘ನೋಡುವವರಿಗೆ ನೀನು ಆಡುತ್ತಿಲ್ಲ ಅಂತೇನೂ ಕಾಣಿಸುತ್ತಿಲ್ಲ. ನೀನು ಹಾಕುತ್ತಿರುವ ಎಫರ್ಟ್ಸ್ ಕಾಣಿಸುತ್ತಿದೆ. ನೀನು ಜಾಸ್ತಿ ಕಾಣಿಸಿಕೊಳ್ಳಬೇಕು. ತಲೆ ಕೆಡಿಸಿಕೊಳ್ಳಬೇಡ. ನಿನ್ನ ಮತ್ತು ಗಿಲ್ಲಿ ಸ್ನೇಹ ನೆಕ್ಟ್ಸ್​ ಲೆವೆಲ್​​ನಲ್ಲಿ ಇದೆ. ನಾಮಿನೇಷನ್​ನಲ್ಲಿ ಅವನ ಹೆಸರು ತೆಗೆದುಕೊಳ್ಳುತ್ತೀಯ. ಆದರೂ ಅವನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಕಾವ್ಯಾಗೆ ಕಾರ್ತಿಕ್ ಹೇಳಿದರು. ಅಷ್ಟು ಹೊತ್ತಿಗಾಗಲೇ ಬಿಗ್ ಬಾಸ್ ಒಂದು ಬಾರಿ ವಾರ್ನಿಂಗ್ ನೀಡಿದರು!

‘ಗಿಲ್ಲಿಯಿಂದ ಕಾವ್ಯಾ ಅಂತ ಹೇಳಿಸಿಕೊಳ್ಳುವುದು ನನಗೆ ಇಷ್ಟ ಇಲ್ಲ. ಸುದೀಪ್ ಸರ್ ಕೂಡ ಅದನ್ನು ಹೇಳಿದ್ದರು. ಅವರ ಆಟ ಅವರಿಗೆ ಆಡೋಕೆ ಬಿಡು ಅಂತ ಗಿಲ್ಲಿಗೆ ಸುದೀಪ್ ಸರ್ ಹೇಳಿದ್ದರು. ಮತ್ತೆ ಅವನು ಕರೆದಾಗ ಹೋದರೆ ನಾನಾಗಿಯೇ ಇದನ್ನೆಲ್ಲ ಮಾಡುತ್ತಿದ್ದೇನೆ ಅಂತ ಆಗುತ್ತದೆ. ಒಬ್ಬರನ್ನು ಕೆಳಗೆ ಇಟ್ಟು ಮಾತಾಡೋದು ಅವನ ಉದ್ದೇಶ ಆಗಿರಲ್ಲ. ಮಾತಿನ ಭರದಲ್ಲಿ ಹೇಳುತ್ತಾನೆ. ಅದನ್ನು ಕಟ್ ಮಾಡಲು ನಾನು ಅವನನ್ನು ನಾಮಿನೇಟ್ ಮಾಡಿದೆ. ಅದು ಹೊರಗಡೆ ಬೇರೆ ರೀತಿ ಬಿಂಬಿತ ಆಗಿದೆಯಾ’ ಎಂದು ಕಾವ್ಯಾ ಅವರು ಮತ್ತೆ ವಿಚಾರಿಸಿದರು.

‘ಗಿಲ್ಲಿಗೆ ಯಾವಾಗಲೂ ಅಣ್ಣ ಅಣ್ಣ ಅನ್ನೋಕೆ ಹೋಗಬೇಡ. ಅವನು ನಿನ್ನ ಫ್ರೆಂಡ್’ ಎಂದು ಕಾವ್ಯಾ ಅವರ ತಾಯಿ ಹೇಳಿದರು. ‘ಇಷ್ಟು ದಿನ ನಿಮ್ಮಿಬ್ಬರ ಸ್ನೇಹ ಬ್ರೇಕ್ ಆಗದೇ ಬಂದಿದೆ. ಅದು ನೆಕ್ಸ್ಟ್ ಲೆವೆಲ್’ ಎಂದು ಕಾವ್ಯಾ ಅವರ ಸಹೋದರ ಹೇಳಿದರು. ಇದನ್ನೆಲ್ಲ ಮಾತನಾಡಿದ್ದಕ್ಕಾಗಿ ಬಿಗ್ ಬಾಸ್ ಕ್ರಮ ತೆಗೆದುಕೊಳ್ಳಲು ಮುಂದಾದರು. ಆಗ ಎಲ್ಲರಿಗೂ ಶಾಕ್ ಆಯಿತು.

ಇದನ್ನೂ ಓದಿ: ಕಾವ್ಯಾ ಜತೆ ಮದುವೆ ಬಗ್ಗೆ ಮನಸಾರೆ ಮಾತಾಡಿದ ಗಿಲ್ಲಿ: ಆ ಕಡೆಯಿಂದ ಬಂದ ಉತ್ತರ ಏನು?

‘ಹೊರಜಗತ್ತಿನ ಮಾಹಿತಿಯನ್ನು ಈ ಮನೆಯಲ್ಲಿ ಅತಿಥಿಗಳು ಹಂಚಿಕೊಳ್ಳುವಂತಿಲ್ಲ. ಆ ವಿಚಾರವಾಗಿ ಒಂದು ಎಚ್ಚರಿಕೆ ನೀಡಲಾಗಿತ್ತು. ಆದರೂ ಕೂಡ ಅದೇ ತಪ್ಪನ್ನು ಮತ್ತೆ ಮಾಡಿದ್ದೀರಿ. ಈ ಮನೆಯ ಮೂಲ ನಿಯಮದ ಉಲ್ಲಂಘನೆ ಆಗಿದೆ. ಕಾರ್ತಿಕ್ ಹಾಗೂ ಸಾವಿತ್ರಿ ನೀವಿಬ್ಬರು ಈ ಕೂಡಲೇ ಮುಖ್ಯದ್ವಾರದಿಂದ ಹೊರಗೆ ಬರಬೇಕು’ ಎಂದು ಬಿಗ್ ಬಾಸ್ ಆದೇಶಿಸಿದರು. ಕೂಡಲೇ ಅವರಿಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಯಿತು. ಎಲ್ಲರೂ ಕ್ಷಮೆ ಕೇಳಿದರೂ ಕೂಡ ಬಿಗ್ ಬಾಸ್ ಕ್ಷಮಿಸಲಿಲ್ಲ. ಕಾವ್ಯ ಕಣ್ಣೀರು ಹಾಕಿದರೂ ಕೂಡ ಬಿಗ್ ಬಾಸ್ ಮನಸ್ಸು ಬದಲಾಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ – Kannada News | Accident Video of Kadali Gavala Palem Rajole Mandal Konaseema District Young Man died

ಮುಂಬೈ, ಡಿಸೆಂಬರ್ 26: ರಸ್ತೆಗಿಳಿದ ಮೇಲೆ ಸ್ವಲ್ಪ ಯಾಮಾರಿದರೂ ಜೀವವೇ ಹೋಗುತ್ತದೆ. ಹೀಗಾಗಿ, ಎಲ್ಲ ರೀತಿಯಿಂದಲೂ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಮಹಾರಾಷ್ಟ್ರದಲ್ಲಿ ನಡೆದ ಭೀಕರ ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ (Viral Video) ಆಗಿದೆ. ಹಾಲು ತರಲೆಂದು ಬೈಕ್​ನಲ್ಲಿ ಬರುತ್ತಿದ್ದ ಯುವಕನಿಗೆ ಭಾರೀ ವಾಹನವೊಂದು ಜೋರಾಗಿ ಡಿಕ್ಕಿ ಹೊಡೆದಿದೆ. ಈ ದೃಶ್ಯ ಎದುರಿನ ಸಣ್ಣ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅನ್ವೇಶ್ ಎಂಬ 20 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಹಲ್ಗಾಮ್ ದಾಳಿಯ ತನಿಖೆ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ; ಅಮಿತ್ ಶಾ – Kannada News | Terror Plotters Punished and Executors Neutralised by Indias security forces Amit Shah says

ನವದೆಹಲಿ, ಡಿಸೆಂಬರ್ 26: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಯಶಸ್ವಿ ತನಿಖೆ ನಡೆಸುವ ಮೂಲಕ ಪಾಕಿಸ್ತಾನದ ಭಯೋತ್ಪಾದಕ ಮಾಸ್ಟರ್​​ಮೈಂಡ್​​ಗಳಿಗೆ ಬಲವಾದ ಮತ್ತು ಸೂಕ್ತವಾದ ಉತ್ತರವನ್ನು ನೀಡಲಾಗಿದೆ. ಪಹಲ್ಗಾಮ್ ತನಿಖೆಯು ಪಾಕಿಸ್ತಾನದ ಅಸಲಿ ಮುಖವನ್ನು ಜಗತ್ತಿನೆದುರು ಮತ್ತೊಮ್ಮೆ ಬಯಲು ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ದಾಳಿಕೋರರು 26 ಜನರನ್ನು ಕೊಲ್ಲಲಾಗಿತ್ತು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರು. ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ದಿನಗಳ ಕಾಲ ನಡೆದ ಸಂಘರ್ಷಕ್ಕೆ ಕಾರಣವಾಯಿತು.

ರಾಷ್ಟ್ರೀಯ ತನಿಖಾ ಸಂಸ್ಥೆ ಆಯೋಜಿಸಿದ್ದ ಭಯೋತ್ಪಾದನಾ ವಿರೋಧಿ ಸಮ್ಮೇಳನ-2025 ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ ಈ ಹೇಳಿಕೆಗಳನ್ನು ನೀಡಿದ್ದಾರೆ. ಎರಡು ಡೇಟಾಬೇಸ್‌ಗಳ ಜೊತೆಗೆ NIAಯ ನವೀಕರಿಸಿದ ಅಪರಾಧ ಕೈಪಿಡಿಯನ್ನು ಸಹ ಅವರು ಅನಾವರಣಗೊಳಿಸಿದರು.

ಇದನ್ನೂ ಓದಿ: ಅಸಮರ್ಥರನ್ನು ಜಗದೇಕ ವೀರ ಎನ್ನಬೇಕೆ?; ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕಾಪ್ರಹಾರ

ಭಯೋತ್ಪಾದನಾ ಕೃತ್ಯವನ್ನು ಯೋಜಿಸಿದವರನ್ನು ಆಪರೇಷನ್ ಸಿಂಧೂರ್ ಮೂಲಕ ಶಿಕ್ಷಿಸಲಾಯಿತು. ಅವರಿಗೆ ಒದಗಿಸಲಾದ ಶಸ್ತ್ರಾಸ್ತ್ರಗಳಿಂದ ಅದನ್ನು ಕಾರ್ಯಗತಗೊಳಿಸಿದವರನ್ನು ಆಪರೇಷನ್ ಮಹಾದೇವ್ ಮೂಲಕ ತಟಸ್ಥಗೊಳಿಸಲಾಯಿತು ಎಂದು ಹೇಳಿದ್ದಾರೆ.

ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯನ್ನು ಉಲ್ಲೇಖಿಸಿದ ಅಮಿತ್ ಶಾ, ಈ ಘಟನೆಯು ದೇಶವನ್ನು ಬೆಚ್ಚಿಬೀಳಿಸಿದೆ. ಕೋಮು ಸಾಮರಸ್ಯವನ್ನು ಅಡ್ಡಿಪಡಿಸುವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಮೇಲಿನ ನವೀಕೃತ ಗಮನವನ್ನು ಹಳಿತಪ್ಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link