Headlines

‘ಬಿಗ್ ಬಾಸ್ ಕನ್ನಡ 13’ ಆಡಿಷನ್: ಈ ಸಲ ಸಾಮಾನ್ಯ ಜನರಿಗೂ ಸಿಗಲಿದೆ ಅವಕಾಶ – Kannada News

2026ನೇ ಸಾಲಿನ ‘ಬಿಗ್ ಬಾಸ್ ಕನ್ನಡ’ (Bigg Boss Kannada) ರಿಯಾಲಿಟಿ ಶೋ ಸ್ವಲ್ಪ ಮುಂಚಿತವಾಗಿಯೇ ಆರಂಭ ಆಗಲಿದೆ. ಈ ಬಗ್ಗೆ ‘ಕಲರ್ಸ್ ಕನ್ನಡ’ ವಾಹಿನಿ ಈಗಾಗಲೇ ಮಾಹಿತಿ ಹಂಚಿಕೊಂಡಿದೆ. ವಿಶೇಷ ಏನೆಂದರೆ ಈ ಬಾರಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರವಲ್ಲದೇ ಸಾಮಾನ್ಯ ಜನರಿಗೆ ಕೂಡ ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ. ಅದಕ್ಕಾಗಿ ಆಡಿಷನ್ ನಡೆಸಲಾಗುವುದು. ಈ ಸುದ್ದಿ ಕೇಳಿದ ಬಳಿಕ ಜನಸಾಮಾನ್ಯರಲ್ಲಿ ಆಸೆ…

Read More

ಕೈ ತಪ್ಪಿದ ನಾಯಕತ್ವ… ಸೂರ್ಯಕುಮಾರ್ ಯಾದವ್ ಹೇಳಿದ್ದೇನು? – Kannada News

ಭಾರತ ಟಿ20 ತಂಡದ ನಾಯಕ ಬದಲಾಗಿದ್ದಾರೆ. ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಹಾಗೂ ಏಷ್ಯನ್ ಗೇಮ್ಸ್​ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡಗಳ ನಾಯಕನಾಗಿ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸೂರ್ಯಕುಮಾರ್ ಯಾದವ್ ಯುಗಾಂತ್ಯವಾಗಿದೆ ಎನ್ನಬಹುದು. ಈ ಬಗ್ಗೆ ಮುಂಬೈ ಟಿ20 ಲೀಗ್​ನಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್,  “ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಮುಂಬೈ ಕ್ರಿಕೆಟ್‌ಗೆ ಇದು ಅತ್ಯಂತ ಹೆಮ್ಮೆಯ ಕ್ಷಣ. ಸತತವಾಗಿ ಮುಂಬೈನ ಮೂವರು ಆಟಗಾರರು…

Read More

ಬೆಂಗಳೂರು ಪೂರ್ವ ನಗರ ನಿಗಮದಿಂದ ಬೃಹತ್ ಸ್ವಚ್ಛತಾ ಸಪ್ತಾಹ; 100 ಟನ್ ಕಸ ವಿಲೇವಾರಿ! – Kannada News

ಬೆಂಗಳೂರು ಪೂರ್ವ ನಗರ ನಿಗಮದಿಂದ ನೂರು ಟನ್ ಕಸ ತೆರವುಗೊಳಿಸಲಾಗಿದೆ. ಬೆಂಗಳೂರು, ಜೂನ್ 07: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬೆಂಗಳೂರು (Bengaluru) ಪೂರ್ವ ನಗರ ನಿಗಮವು (ಬಿಇಸಿಸಿ) ಕೆ.ಆರ್. ಪುರಂ ಮತ್ತು ದೊಡ್ಡನೆಕ್ಕುಂದಿ ವಾರ್ಡ್‌ಗಳಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಒಟ್ಟು 100 ಟನ್‌ಗೂ ಹೆಚ್ಚು ಕಟ್ಟಡದ ಅವಶೇಷಗಳು ಮತ್ತು ಕಸವನ್ನು ತೆರವುಗೊಳಿಸಲಾಗಿದ್ದು, 18 ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದು ಬಿಇಸಿಸಿ ಕಮಿಷನರ್ ಡಿ.ಎಸ್. ರಮೇಶ್…

Read More

ಮದುವೆ ಆಗೋದಾಗಿ ನಂಬಿಸಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ – Kannada News

ಪ್ರಾತಿನಿಧಿಕ ಚಿತ್ರImage Credit source: Getty Images ಬೆಂಗಳೂರು, ಜೂನ್​​ 07: ಮದುವೆ ಆಗೋದಾಗಿ ನಂಬಿಸಿ ಯುವಕನೋರ್ವನಿಗೆ ಯುವತಿ (girl) ಬರೋಬ್ಬರಿ 35 ಲಕ್ಷ ರೂ ವಂಚಿಸಿರುವಂತಹ (Fraud) ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಅನಿಲ್ ಎಂಬಾತನಿಗೆ ಲಕ್ಷ್ಮೀ ವಂಚಿಸಿದ್ದಾಳೆ. ಸದ್ಯ ಯುವಕ ನೀಡಿದ ದೂರಿನನ್ವಯ ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಾಂಶಗಳು ವಧುವಿನ ಹುಡುಕಾಟದಲ್ಲಿದ್ದ ಯುವಕನಿಗೆ ಮಹಾ ಮೋಸ ಯುವತಿಯಿಂದ ಬರೋಬ್ಬರಿ 35 ಲಕ್ಷ ರೂ ವಂಚನೆ ಬೆಂಗಳೂರಿನ…

Read More

Video: ಟಿಎಂಸಿ ಶಾಸಕ ಮದನ್ ಮಿತ್ರ ಮೇಲೆ ಮೊಟ್ಟೆ ಎಸೆತ – Kannada News

ಕೋಲ್ಕತ್ತಾ, ಜೂನ್ 07: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ಶಾಸಕ ಮದನ್ ಮಿತ್ರ ಅವರ ವಾಹನದ ಮೇಲೆ ಶನಿವಾರ ರಾತ್ರಿ ಕಮರ್ಹತಿಯ ಅರಿಯದಹ ಪ್ರದೇಶದಲ್ಲಿ ಪ್ರತಿಭಟನಾಕಾರರು ಮೊಟ್ಟೆ ಎಸೆದ ಘಟನೆ ನಡೆದಿದೆ. ಸ್ಥಳೀಯ ಆಟೋ ಮತ್ತು ಇ-ರಿಕ್ಷಾ ಚಾಲಕರು ವಾರ್ಡ್ ಸಂಖ್ಯೆ 14 ರ ಕೌನ್ಸಿಲರ್ ಕಚೇರಿ ಮುಂದೆ ಜಮಾಯಿಸಿ, ಕಳೆದ ಕೆಲವು ವರ್ಷಗಳಿಂದ ಬಲವಂತವಾಗಿ ವಸೂಲಿ ಮಾಡಲಾಗಿರುವ ಕಟ್ ಮನಿ (ಅಕ್ರಮ ಕಮಿಷನ್) ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ…

Read More

ವಿಶ್ವ ದಾಖಲೆ: ಕೇವಲ 5 ಎಸೆತಗಳಲ್ಲಿ ಮುಗಿದ ಟಿ20 ಪಂದ್ಯ – Kannada News

ಮಲೇಷ್ಯಾದಲ್ಲಿ ನಡೆಯುತ್ತಿರುವ 2026ರ ACC ಮಹಿಳಾ ಟಿ20 ಪ್ರೀಮಿಯರ್ ಕಪ್ ಟೂರ್ನಿಯಲ್ಲಿ ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತಹ ಫಲಿತಾಂಶ ಮೂಡಿಬಂದಿದೆ. ಈ ಫಲಿತಾಂಶ ಮೂಡಿಬಂದಿದ್ದು ಕೇವಲ 5 ಎಸೆತಗಳಲ್ಲಿ ಎಂಬುದೇ ಅಚ್ಚರಿ.ಈ ಟೂರ್ನಿಯ ಗ್ರೂಪ್ ‘ಬಿ’ ಪಂದ್ಯದಲ್ಲಿ ಸೌದಿ ಅರೇಬಿಯಾ ಮಹಿಳಾ ತಂಡ ಹಾಗೂ ಯುಎಇ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​​ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೌದಿ ಅರೇಬಿಯಾ ಮಹಿಳಾ ತಂಡ, ಯುಎಇ ಬೌಲರ್‌ಗಳ ಮಾರಕ ದಾಳಿಗೆ ಧೂಳೀಪಟವಾಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ…

Read More

ರೈಲಿನ ಬೋರ್ಡ್​ ಬರೆಸಲು ಕೂಡ ಪಾಕಿಸ್ತಾನದ ಬಳಿ ಹಣವಿಲ್ಲ, ಸೀಮೆ ಸುಣ್ಣದಲ್ಲಿ ಮಾರ್ಗದ ಹೆಸರು ಬರೆದ ರೈಲ್ವೆ ಇಲಾಖೆ – Kannada News

ಕರಾಚಿ, ಜೂನ್ 07: ಇಂದಿನ ಅತ್ಯಾಧುನಿಕ ಡಿಜಿಟಲ್ ಯುಗದಲ್ಲೂ ಕೆಲವೊಮ್ಮೆ ಹಳೆಯ ಕಾಲದ ಸರಳ ಆಚರಣೆಗಳು ಮತ್ತು ಮಿತವ್ಯಯದ ಕ್ರಮಗಳು ಜನರ ಗಮನವನ್ನು ಸೆಳೆಯುತ್ತವೆ. ಲಾಹೋರ್‌ನಿಂದ ಕರಾಚಿಯವರೆಗೆ ಸರಿಸುಮಾರು 1,000 ಕಿಲೋಮೀಟರ್‌ಗಳ ಸುದೀರ್ಘ ಮಾರ್ಗದಲ್ಲಿ 16 ಗಂಟೆಗಳ ಕಾಲ ಯಶಸ್ವಿಯಾಗಿ ಸಂಚರಿಸುವ ಪಾಕಿಸ್ತಾನ ರೈಲ್ವೆ(Railway)ಯ ಎಕ್ಸ್‌ಪ್ರೆಸ್ ರೈಲೊಂದರ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ಕುರಿತು ಎಬಿಪಿ ಲೈವ್ ವರದಿ ಮಾಡಿದೆ. ವಿದ್ಯುತ್ ಅಥವಾ ಡಿಜಿಟಲ್ ಬೋರ್ಡ್‌ಗಳ ದುಬಾರಿ…

Read More

ಮೊದಲ ಭಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್​: ಮೆಟ್ರೋದಲ್ಲಿ ಸಂಚರಿಸಲು ಸಿಎಂ ನಿರ್ಧಾರ – Kannada News

ಬೆಂಗಳೂರು, ಜೂನ್​​ 07: ಸಿಎಂ ಡಿ.ಕೆ. ಶಿವಕುಮಾರ್​ ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಆದ ಬಳಿಕ ಸ್ವಕ್ಷೇತ್ರ ಕನಕಪುರಕ್ಕೆ ಮೊದಲ ಭಾರಿಗೆ ಭೇಟಿ ನೀಡುತ್ತಿರುವ ಡಿಕೆ ಶಿವಕುಮಾರ್​ ಹಾರೋಹಳ್ಳಿ ಮತ್ತು ಕನಕಪುರ ತಾಲೂಕಿನಲ್ಲಿ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾದಲಿದ್ದಾರೆ. ವಿಧಾನಸೌಧದ ಮೆಟ್ರೋ ಸ್ಟೇಷನ್‌ನಿಂದ ಕನಕಪುರ ರಸ್ತೆವರೆಗೂ ಮೆಟ್ರೋದಲ್ಲಿ ಸಿಎಂ ಪ್ರಯಾಣಿಸಲಿದ್ದಾರೆ. ಜೀರೋ ಟ್ರಾಫಿಕ್​ನಿಂದ ವಾಹನ ಸವಾರರಿಗೆ ಆಗುವ ತೊಂದರೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಕನಕಪುರ ರಸ್ತೆ ತಲುಪಿದ ಬಳಿಕ ಅಲ್ಲಿಂದ ರಸ್ತೆ…

Read More

ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟ ಸಲೀಂ ಕುಮಾರ್ ನಿಧನ: ಕಂಬನಿ ಮಿಡಿದ ಮಮ್ಮುಟ್ಟಿ – Kannada News

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಲೀಂ ಕುಮಾರ್ (Salim Kumar) ಶನಿವಾರ (ಜೂನ್ 6) ರಾತ್ರಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ನ್ಯುಮೋನಿಯಾ ಹಾಗೂ ಲಿವರ್ (Liver) ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್‌ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ 10.43ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸಲೀಂ ಕುಮಾರ್ ಅವರು…

Read More

ಕೆಎಲ್ ರಾಹುಲ್ ನಟನೆಗೆ ‘ಆಸ್ಕರ್’ ಪ್ರಶಸ್ತಿ ನೀಡಬೇಕು: ಗ್ರೇಮ್ ಸ್ವಾನ್ – Kannada News

ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಎರಡು ಕಾರಣಗಳಿಂದ ಸುದ್ದಿಯಾಗಿದ್ದಾರೆ. ಮೊದಲಿಗೆ ಡಿಆರ್‌ಎಸ್​ನಿಂದ ಪಾರಾಗಿ ಸುದ್ದಿಯಾಗಿದ್ದ ರಾಹುಲ್, ಆ ಬಳಿಕ ಸೆಂಚುರಿ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಡಿಆರ್​ಎಸ್​​ ಹಾಗೂ ಸೆಂಚುರಿಗಳಿಂದ ಸುದ್ದಿಯಾಗಲು ಮುಖ್ಯ ಕಾರಣ 11ನೇ ಓವರ್​ನಲ್ಲೇ ಸಿಕ್ಕ ಜೀವದಾನ! 11ನೇ ಓವರ್‌ನಲ್ಲಿ ಅಫ್ಘಾನಿಸ್ತಾನ್ ವೇಗಿ ಝಿಯಾವುರ್ ರೆಹಮಾನ್ ಶರೀಫಿ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಪ್ರಯತ್ನಿಸಿದ್ದರು. ಆದರೆ…

Read More