ಕೆಎಲ್ ರಾಹುಲ್ ನಟನೆಗೆ ‘ಆಸ್ಕರ್’ ಪ್ರಶಸ್ತಿ ನೀಡಬೇಕು: ಗ್ರೇಮ್ ಸ್ವಾನ್ – Kannada News
ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಎರಡು ಕಾರಣಗಳಿಂದ ಸುದ್ದಿಯಾಗಿದ್ದಾರೆ. ಮೊದಲಿಗೆ ಡಿಆರ್ಎಸ್ನಿಂದ ಪಾರಾಗಿ ಸುದ್ದಿಯಾಗಿದ್ದ ರಾಹುಲ್, ಆ ಬಳಿಕ ಸೆಂಚುರಿ ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಡಿಆರ್‌ಎಸ್ ಹಾಗೂ ಸೆಂಚುರಿಗಳಿಂದ ಸುದ್ದಿಯಾಗಲು ಮುಖ್ಯ ಕಾರಣ 11ನೇ ಓವರ್ನಲ್ಲೇ ಸಿಕ್ಕ ಜೀವದಾನ! 11ನೇ ಓವರ್‌ನಲ್ಲಿ ಅಫ್ಘಾನಿಸ್ತಾನ್ ವೇಗಿ ಝಿಯಾವುರ್ ರೆಹಮಾನ್ ಶರೀಫಿ ಎಸೆದ ಚೆಂಡನ್ನು ರಾಹುಲ್ ಕಟ್ ಮಾಡಲು ಪ್ರಯತ್ನಿಸಿದ್ದರು. ಆದರೆ…