Category Archives: Blog

Your blog category

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್ – Kannada News | CM Siddaramaiah Reacts on BJP Leader Alleged about Karnataka Governmnet

ಬೆಂಗಳೂರು, ಫೆಬ್ರವರಿ 2): ವಿಧಾನಸಭೆ ಅಧಿವೇಶನದಲ್ಲಿ (Karnataka Assembly Session) ಇಂದು (ಫೆಬ್ರವರಿ 02) ಕಾಂಗ್ರೆಸ್ ಅಧಿಕಾರ ಹಂಚಿಕೆ ಬಗ್ಗೆಯೂ ಸಹ ಪ್ರಸ್ತಾಪವಾಗಿದ್ದು, ಈ ಬಗ್ಗೆ ಆಸಕ್ತಿಕರ ಚರ್ಚೆ ನಡೆದಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಭಾರೀ ಚರ್ಚೆಯಾಗಿದೆ. ಇನ್ನೂ ಇದೇ ವೇಲೆ ವಿರೋಧ ಪಕ್ಷದ ನಾಯಕ ಅಶೋಕ್ ಅವರು ಮಾತನಾಡಿ ರಾಜ್ಯದಲ್ಲಿ ಕಾನುನು ಸುವ್ಯವಸ್ಥೆ ಹದಗೆಟ್ಟಿದೆ. ಸಿಎಂ ಸಹ ಅಸಹಾಯಕರಾಗಿದ್ದಾರೆ ಎಂದರು.

ಇದಕ್ಕೆ ಸಿದ್ದರಾಮಯ್ಯ  (Siddaramaiah) ಪ್ರತಿಕ್ರಿಯಿಸಿ, ಕಾನೂನು ಹದಗೆಟ್ಟಿಲ್ಲ. ಸರ್ಕಾರ ಹಾದಿನೂ ತಪ್ಪಿಲ್ಲ. ನಾನು ಅಸಹಾಯಕ ಸಿಎಂ ಅಲ್ಲ ಎಂದು ಖಡಕ್ ಆಗಿ ಹೇಳಿದರು. ಈ ಮೂಲಕ ವಿರೋಧಿಗಳಿಗೆ ಹೊಸ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ಹೇಗೆಲ್ಲಾ ಖಡಕ್ ಆಗಿ ಉತ್ತರಿಸಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಿಕ್ಕಬಳ್ಳಾಪುರದಲ್ಲಿ ಹೆಲಿಕಾಪ್ಟರ್ ಮೂಲಕ ಚಿನ್ನ ನಿಕ್ಷೇಪ ಹುಡುಕಾಟ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಸಿ – Kannada News | Chikkaballapur: GSI Aerial Survey for gold deposits by helicopter; DC reveals explosive information

ಹೆಲಿಕಾಪ್ಟರ್ ಮೂಲಕ ಶೋಧImage Credit source: tv9 kannada

ಚಿಕ್ಕಬಳ್ಳಾಪುರ, ಫೆಬ್ರವರಿ 02: ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಕಾಪ್ಟರ್ (Helicopter survey) ಮೂಲಕ ಬಂಗಾರ ಸೇರಿದಂತೆ ಭೂಗರ್ಭದಲ್ಲಿರುವ ನಿಧಿ-ನಿಕ್ಷೇಪಗಳ ಶೋಧಕಾರ್ಯ ನಡೆಯುತ್ತಿದೆ. ಇದರಿಂದ ಸ್ಥಳೀಯರಲ್ಲಿ ಕುತೂಹಲ ಹೆಚ್ಚಾಗಿದೆ. ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ವತಿಯಿಂದ ಈ ಏರಿಯಲ್ ಸರ್ವೆ ನಡೆಸಲಾಗುತ್ತಿದೆ. ಹೆಲಿಕಾಪ್ಟರ್ ಹಾಗೂ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳನ್ನು ಬಳಸಿ ಭೂಗರ್ಭದ ಖನಿಜ ಸಂಪತ್ತಿನ ಕುರಿತು ಸಮಗ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ.

ಕೆ.ಜಿ.ಎಫ್. ಗೋಲ್ಡ್ ಮೈನಿಂಗ್ ಬೆಟ್ಟದ ಸಾಲಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಶೋಧಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಬೀಚಗಾನಹಳ್ಳಿ ಕ್ರಾಸ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಹಾಗೂ ಟೇಕಾಫ್ ಸಹಿತವಾಗಿ ಏರಿಯಲ್ ಸರ್ವೆ ನಡೆಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಅಗತ್ಯ ಅನುಮತಿ ಪಡೆಯಲಾಗಿದೆ.

ದಿಢೀರ್​ ಶೋಧಕಾರ್ಯ ಏಕೆ?

ಈ ಹಿಂದೆ ಕೂಡ ಜಿಲ್ಲೆಯಲ್ಲಿ ಬಂಗಾರದ ಕಣಗಳು ಪತ್ತೆಯಾಗಿತ್ತು. ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕಿನ ಕೆಲ ರೈತರ ಜಮೀನುಗಳ ಮಣ್ಣಿನಲ್ಲೇ ಬಂಗಾರದ ಕಣಗಳು ಕಂಡುಬಂದಿದ್ದವು. ಇದೇ ಹಿನ್ನೆಲೆಯಲ್ಲೇ ಇದೀಗ ಹೆಲಿಕಾಪ್ಟರ್ ಮೂಲಕ ಭೂಗರ್ಭ ನಿಧಿ-ನಿಕ್ಷೇಪಗಳ ಶೋಧಕಾರ್ಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಮೇ 31ರವರೆಗೂ ಸರ್ವೆ ನಡೆಯುತ್ತೆ: ಜಿಲ್ಲಾಧಿಕಾರಿ ಜಿ.ಪ್ರಭು 

ಈ ಬಗ್ಗೆ ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿ 2019-2020ರಲ್ಲಿ ಸರ್ವೆ ಕಾರ್ಯ ನಡೆದಿತ್ತು. ಆ ಸರ್ವೆ ಆಧರಿಸಿ ಈಗ ಆಳ ಅಧ್ಯಯನ ನಡೆದಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಭೌಗೋಳಿಕ ಮಾಹಿತಿ ವ್ಯವಸ್ಥೆ ವಿಭಾಗ ಹಾಗೂ ರಿಮೋಟ್ ಸೆನ್ಸಿಂಗ್ ವಿಭಾಗದಿಂದ ಸರ್ವೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ: ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ನಡೆಯಿತು ಶೋಧಕಾರ್ಯ

ಮೂಲ ಲೋಹಗಳು ಸೇರಿದಂತೆ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಸೇರಿದಂತೆ ಲೋಹಗಳ ಇರುವಿಕೆಯ ಬಗ್ಗೆ ಸರ್ವೆ ಮಾಡಲಾಗುತ್ತಿದ್ದು, ಮೇ 31ರವರೆಗೂ ಸರ್ವೆ ನಡೆಯುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ವೆ ನಡೆಯಲಿದ್ದು, ಹೆಲಿಕಾಪ್ಟರ್ ತೀರ ಕೆಳ ಹಂತದಲ್ಲಿ ಸಂಚಾರ ಮಾಡಲಿದೆ. ಹೀಗಾಗಿ ಸಾರ್ವಜನಿಕರು ಭಯ ಬೀಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಎಸ್​​ಪಿ ಕುಶಲ್ ಚೌಕ್ಸೆ ಹೇಳಿದ್ದಿಷ್ಟು 

ಇನ್ನು ಚಿಕ್ಕಬಳ್ಳಾಪುರ ಎಸ್​​ಪಿ ಕುಶಲ್ ಚೌಕ್ಸೆ ಮಾತನಾಡಿದ್ದು, ಸುಮಾರು 15 ದಿನಗಳ ಹಿಂದೆಯೇ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಹೆಲಿಕಾಪ್ಟರ್ ಹಾರಾಟ ಮತ್ತು ಶೋಧ ಕಾರ್ಯ ನೋಡಲು ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:06 pm, Mon, 2 February 26

Source link

ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್​​ ಗರಂ: ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ – Kannada News | Pilikula Zoo Neglect: Karnataka High Court Angry with Government Over Poor Maintenance

ಪಿಲಿಕುಳ ಜೈವಿಕ ಉದ್ಯಾನವನImage Credit source: Google

ಮಂಗಳೂರು, ಫೆಬ್ರವರಿ 02: ಕರಾವಳಿಗರ ಮೆಚ್ಚಿನ ತಾಣ ಪಿಲಿಕುಳ ಝೂ‌‌ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಇಲ್ಲಿಯ ಸ್ಥಿತಿ ಕಂಡು ಸ್ವತಃ ಹೈಕೋರ್ಟ್ ನ್ಯಾಯಾಧೀಶರೇ ಶಾಕ್ ಆಗಿದ್ದಾರೆ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪ್ರಾಣಿಗಳು ನರಳುತ್ತಿರೋ ಫೋಟೋಗಳನ್ನು ನೋಡಿ ನ್ಯಾಯಪೀಠ ಗರಂ ಆಗಿದೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದು ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದೆ.

ಮಂಗಳೂರು ಹೊರ ವಲಯದ ಪಿಲಿಕುಳ ಝೂ, ಸುಮಾರು 370 ಎಕರೆಗಳಷ್ಟು ವಿಶಾಲವಾಗಿರುವ ಪ್ರದೇಶದಲ್ಲಿರುವ ನಿಸರ್ಗಧಾಮ. ಪಶ್ಚಿಮ ಘಟ್ಟಗಳಲ್ಲಿ ಅಳಿವಿನಂಚಿನಲ್ಲಿರೋ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರೋ ಪಿಲಿಕುಳ ವಿದ್ಯಾರ್ಥಿಗಳ, ಪ್ರವಾಸಿಗರ ನೆಚ್ಚಿನ ತಾಣ. ಅಂತಹ ಸುಂದರ ತಾಣ ಇಂದು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ತುಕ್ಕು ಹಿಡಿದ ಪಂಜರ, ಕಲುಷಿತ ನೀರು, ಮೇಲಿಂದ ಮೇಲೆ ಮೃತಪಡುತ್ತಿರುವ ಪ್ರಾಣಿಗಳು, ಅಶುಚಿ ವಾತಾವರಣ ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ. ಮತ್ತೊಂದು ದುರಂತ ಅಂದ್ರೆ ಜನಮನ್ನಣೆ ಪಡೆದ ಈ ಪಾರ್ಕ್‌ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಆದರೂ ಯಾವುದೇ ಪರವಾನಗಿ ಇಲ್ಲದೆ ಪಿಲಿಕುಳ ಮೃಗಾಲಯ ನಡೀತಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಮಲಿನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ ಅನ್ನೋದು ಅರ್ಜಿದಾರರ ಗಂಭೀರ ಆರೋಪ.

ಇದನ್ನೂ ಓದಿ: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ, ತಾತ್ಕಾಲಿಕವಾಗಿ ಮುಚ್ಚಲು ಪಿಐಎಲ್

ಇನ್ನುಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅದು ಪರಿಶೀಲನೆಯಲ್ಲಿದೆ‌ ಎಂದು ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಅಲ್ಲದೆ ಆರೋಪಗಳ ಕುರಿತು ಉತ್ತರಿಸಲು ಸಮಯಾವಕಾಶ ಕೇಳಿದ್ದಾರೆ. ಆದರೆ ನ್ಯಾಯಾಲಯ ಮಾತ್ರ ಪ್ರಾಣಿಗಳಿಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ರೆ ಅದನ್ನು ಮುಚ್ಚಿಬಿಡಿ ಎಂದು ಸರ್ಕಾರಕ್ಕೆ ಎಚ್ಚರಿಸಿ, ಫೆಬ್ರವರಿ 5ಕ್ಕೆ ವಿಚಾರಣೆ ಮುಂದೂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಜೆಟ್ 2026: ಸರ್ಕಾರಕ್ಕೆ ಎಲ್ಲೆಲ್ಲಿಂದ ಆದಾಯ; ಎಲ್ಲೆಲ್ಲಿಗೆ ಖರ್ಚು? ಇಲ್ಲಿದೆ ಆಯ ಮತ್ತು ವ್ಯಯಗಳ ಲೆಕ್ಕ – Kannada News | Union budget 2026 of over Rs 53 trillion size, where govt gets money, where it spends, details here

2026ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು 53.47 ಲಕ್ಷ ಕೋಟಿ ರೂ ಮೊತ್ತದ ಬಜೆಟ್ (Union Budget 2026) ಮಂಡಿಸಿದ್ದಾರೆ. ಇದೂವರೆಗಿನ ಅತಿದೊಡ್ಡ ಗಾತ್ರದ ಬಜೆಟ್ ಇದಾಗಿದೆ. ಕೆಲ ಪ್ರಮುಖ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಯಶಸ್ವಿಯಾದ ಅನೇಕ ಹಳೆಯ ಯೋಜನೆಗಳನ್ನು ಮುಂದುವರಿಸಲಾಗಿದೆ. ನೀತಿ ಸ್ಥಿರತೆಯಿಂದ ಈ ಬಜೆಟ್ ಗಮನ ಸೆಳೆದಿದೆ. ಭವಿಷ್ಯದ ದೃಷ್ಟಿಯಲ್ಲಿ ರೂಪುಗೊಂಡ ಬಜೆಟ್ ಎಂದು ಹಲವು ವಿಶ್ಲೇಷಕರು ಹೇಳುತ್ತಿದ್ದಾರೆ.

ಸರ್ಕಾರಕ್ಕೆ ಆದಾಯ ಎಲ್ಲೆಲ್ಲಿಂದ?

  • ಸಾಲಗಳು ಮತ್ತು ಹೊಣೆಗಾರಿಕೆಗಳು: ಶೇ. 24
  • ಆದಾಯ ತೆರಿಗೆ: ಶೇ. 21
  • ಕಾರ್ಪೊರೇಟ್ ತೆರಿಗೆ: ಶೇ. 18
  • ಜಿಎಸ್​ಟಿ ಮತ್ತಿತರ ತೆರಿಗೆ: ಶೇ. 15
  • ಕೇಂದ್ರ ಅಬಕಾರಿ ಸುಂಕ: ಶೇ. 6
  • ಕಸ್ಟಮ್ಸ್: ಶೇ. 4
  • ತೆರಿಗೆಯೇತರ ಆದಾಯ: ಶೇ. 10
  • ಸಾಲಯೇತರ ಬಂಡವಾಳ ಆದಾಯ: ಶೇ. 2

ಸರ್ಕಾರದ ಹಣ ಎಲ್ಲೆಲ್ಲಿಗೆ ಹೋಗುತ್ತೆ?

  • ರಾಜ್ಯಗಳ ತೆರಿಗೆ ಪಾಲು: ಶೇ. 22
  • ಸಾಲಕ್ಕೆ ಬಡ್ಡಿ ಪಾವತಿ: ಶೇ. 20
  • ಕೇಂದ್ರ ವಲಯ ಯೋಜನೆಗಳು: ಶೇ. 17
  • ರಕ್ಷಣೆ: ಶೇ. 11
  • ಕೇಂದ್ರ ಪ್ರಾಯೋಜಿತ ಯೋಜನೆಗಳು: ಶೇ. 8
  • ಹಣಕಾಸು ಆಯೋಗ ಮತ್ತಿತರ ವರ್ಗಾವಣೆ: ಶೇ. 7
  • ಪ್ರಮುಖ ಸಬ್ಸಿಡಿಗಳು: ಶೇ. 6
  • ನಾಗರಿಕರ ಪಿಂಚಣಿ: ಶೇ. 2

ಇದನ್ನೂ ಓದಿ: ತತ್​ಕ್ಷಣದ ಪರಿಹಾರ ಮತ್ತು ಭವಿಷ್ಯದ ಪ್ರಗತಿ ಮಧ್ಯೆ ನೀತಿ ಸೇತುವಾಗಿರುವ ಬಜೆಟ್ 2026

ಅತಿಹೆಚ್ಚು ಅನುದಾನ ಪಡೆದ ಇಲಾಖೆಗಳು

  • ಸಾರಿಗೆ: 5.98 ಲಕ್ಷ ಕೋಟಿ ರೂ
  • ರಕ್ಷಣೆ: 5.94 ಲಕ್ಷ ಕೋಟಿ ರೂ
  • ಗ್ರಾಮೀಣಾಭಿವೃದ್ಧಿ: 2.73 ಲಕ್ಷ ಕೋಟಿ ರೂ
  • ಗೃಹ ವ್ಯವಹಾರಗಳು: 2.55 ಲಕ್ಷ ಕೋಟಿ ರೂ
  • ಕೃಷಿ ಹಾಗೂ ಪೂರಕ ಚಟುವಟಿಕೆ: 1.62 ಲಕ್ಷ ಕೋಟಿ ರೂ
  • ಶಿಕ್ಷಣ: 1.39 ಲಕ್ಷ ಕೋಟಿ ರೂ
  • ಇಂಧನ: 1.09 ಲಕ್ಷ ಕೋಟಿ ರೂ
  • ಆರೋಗ್ಯ: 1.04 ಲಕ್ಷ ಕೋಟಿ ರೂ
  • ನಗರಾಭಿವೃದ್ಧಿ: 85,522 ಕೋಟಿ ರೂ
  • ಐಟಿ, ಟೆಲಿಕಾಂ: 74,560 ಕೋಟಿ ರೂ
  • ವಾಣಿಜ್ಯ ಮತ್ತು ಕೈಗಾರಿಕೆ: 70,296 ಕೋಟಿ ರೂ
  • ಸಾಮಾಜಿಕ ಕಲ್ಯಾಣ: 62,362 ಕೋಟಿ ರೂ
  • ವೈಜ್ಞಾನಿಕ ವಿಭಾಗಗಳು: 55,756 ಕೋಟಿ ರೂ
  • ತೆರಿಗೆ ಆಡಳಿತ: 45,500 ಕೋಟಿ ರೂ
  • ವಿದೇಶಾಂಗ ವ್ಯವಹಾರಗಳು: 22,119 ಕೋಟಿ ರೂ
  • ಹಣಕಾಸು: 20,649 ಕೋಟಿ ರೂ
  • ಈಶಾನ್ಯ ರಾಜ್ಯಗಳ ಅಭಿವೃದ್ಧಿ: 6,812 ಕೋಟಿ ರೂ
  • ಇತರೆ ವೆಚ್ಚಗಳು: ಶೇ. 7

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ: ಕೊಳೆತ ಸ್ಥಿತಿಯಲ್ಲಿ ಮತದೇಹ ಪತ್ತೆ – Kannada News | 14 Year Old Boy Dies After Falling into BWSSB Pipeline Sump in Bengaluru

ಬೆಂಗಳೂರು, ಫೆಬ್ರವರಿ 02:  ತಾಳಗುಣಿ ಸಮೀಪ ಜಲಮಂಡಳಿ (BWSSB) ಕಾಮಗಾರಿ ವೇಳೆ ಇಲಾಖೆ ನಿರ್ಲಕ್ಷ್ಯಕ್ಕೆ ಬಾಲಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಕನಕಪುರ ರಸ್ತೆಯ ಪೈಪ್ಲೈನ್ ರೋಡ್​​ನಲ್ಲಿ ಕಾಮಗಾರಿ ವೇಳೆ ಮುಚ್ಚಳವಿಲ್ಲದೆ ತೆರೆದಿದ್ದ ಸಂಪಿಗೆ ಬಿದ್ದು ಪ್ರೀತಂ (14) ಮೃತಪಟ್ಟಿದ್ದಾನೆ. ತಾಳಗುಣಿಯ ನಿವಾಸಿ ರಮೇಶ್ ಅವರ ಪುತ್ರ ಪ್ರೀತಂ, ಜನವರಿ 28ರಂದು ನಾಪತ್ತೆಯಾಗಿದ್ದ. ಮೂರು ದಿನಗಳ ಕಾಲ ಕುಟುಂಬಸ್ಥರು ಬಾಲಕನ ಹುಡುಕಾಟ ನಡೆಸಿದ್ದರು. ಜನವರಿ 29ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಕೊಳೆತ ವಾಸನೆ ಬಂದ ಹಿನ್ನೆಲೆಯಲ್ಲಿ  ಪರಿಶೀಲಿಸಿದಾಗ ಪ್ರೀತಂ ಮೃತದೇಹ ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಘಟನೆಗೆ BWSSB ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ: ಸದನದಲ್ಲಿ ಅಶೋಕ್‌-ಸಿದ್ದರಾಮಯ್ಯ ಕಾಮಿಡಿ – Kannada News | CM Siddaramaiah Taunts To R Ashok In Assembly Session about beer Price

ಬೆಂಗಳೂರು, (ಫೆಬ್ರವರಿ 02): ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯನವರು ಇಂದು (ಫೆಬ್ರವರಿ 02) ಅಧಿವೇಶನದಲ್ಲಿ ಉತ್ತರ ನೀಡಿದರು. ಈ ವೇಳೆ ಸಿದ್ದರಾಮಯ್ಯ ಬಿಯರ್ ಬಗ್ಗೆ ಮಾತನಾಡಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮದ್ಯದ ದರ ಏರಿಕೆ ಸಂಬಂಧ ವಿಪಕ್ಷ ನಾಯಕ ಅಶೋಕ್ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ, ನೀನು ಕುಡಿದಿದ್ದೀಯೆನಯ್ಯ? ನೀನು ಕುಡಿದಿದ್ರೆ ತಾನೇ ಗೊತ್ತಾಗೋದು. ಕಿಂಗ್ ಪಿಶರ್ 225 ರೂ ಇದೆ. ತೆಲಂಗಾದಲ್ಲಿ 125  ರೂಪಾಯಿ ಇದೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ – Kannada News | Gilli Nata Singer Mangli Shivarajkumar and others attend Kanakotsava

ಅದ್ದೂರಿಯಾಗಿ ‘ಕನಕೋತ್ಸವ’ (Kanakotsava) ನಡೆಯಿತು. ಕನಕಪುರದಲ್ಲಿ ನಡೆದ ಈ ಉತ್ಸವದ ವೇದಿಕೆಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ, ಗಾಯಕಿ ಮಂಗ್ಲಿ, ಗಾಯಕ ವಿಜಯ್ ಪ್ರಕಾಶ್ ಮುಂತಾದವರು ಕಾಣಿಸಿಕೊಂಡರು. ಅನುಶ್ರೀ ಅವರ ಕಾಲಿಗೆ ಬಿದ್ದ ಗಿಲ್ಲಿ, ‘ಇವರೇ ನನ್ನ ಗಾಡ್ ಮದರ್’ ಎಂದು ಹೇಳಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಎದುರಲ್ಲಿ ಗಿಲ್ಲಿ ನಟ (Gilli Nata) ಅವರು ಭರ್ಜರಿ ಡೈಲಾಗ್ ಹೇಳಿ ರಂಜಿಸಿದರು. ಅನಾರೋಗ್ಯ ಪೀಡಿತ ಮಗುವಿನ ಜೊತೆ ಅವರು ಆ ವೇದಿಕೆಯಲ್ಲೇ ವಿಡಿಯೋ ಕಾಲ್ ಮೂಲಕ ಮಾತನಾಡಿದರು. ಆ ಕ್ಷಣ ಬಹಳ ಎಮೋಷನಲ್ ಆಗಿತ್ತು. ವಿಜಯ್ ಪ್ರಕಾಶ್ ಅವರ ಹಾಡುಗಳನ್ನು ಕೇಳಿ ಜನರು ಎಂಜಾಯ್ ಮಾಡಿದರು. ತೆಲುಗು ಬೆಡಗಿ ಮಂಗ್ಲಿ (Singer Mangli) ಅವರು ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು..’ ಗೀತೆಯನ್ನು ಹಾಡಿ ವೇದಿಕೆಯ ಮೆರುಗು ಹೆಚ್ಚಿಸಿದರು. ರಚಿತಾ ರಾಮ್, ಶಿವರಾಜ್​ಕುಮಾರ್, ಮೇಘಾ ಶೆಟ್ಟಿ ಮುಂತಾದ ಸೆಲೆಬ್ರಿಟಿಗಳು ಕೂಡ ಕನಕೋತ್ಸವದಲ್ಲಿ ಭಾಗಿಯಾಗಿ ಸಿಕ್ಕಾಪಟ್ಟೆ ಮನರಂಜನೆ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಹಿಳೆಯ ಮಾಂಗಲ್ಯ ಸರ ಕದ್ದು ಎಸ್ಕೇಪ್​! – Kannada News | Bengaluru Chain Snatching: Mangalsutra Stolen After Diverting Woman’s Attention

ನೆಲಮಂಗಲ, ಫೆಬ್ಬರವರಿ 02: ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ನಿರಂತರವಾಗಿ ಹೆಚ್ಚಾಗುತ್ತಿದೆ. ಮಾದನಾಯಕನಹಳ್ಳಿಯ ದಾಸನಪುರದಲ್ಲಿ ಇಂತಹದೇ ಒಂದು ಘಟನೆ ನಡೆದಿದ್ದು, ಟೀ ಮತ್ತು ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ವ್ಯಕ್ತಿಯೋರ್ವ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಹಳದಿ ಬೋರ್ಡ್​ ಕಾರಿನಲ್ಲಿ ಇಬ್ಬರು ಬಂದಿದ್ದು, ಆ ಪೈಕಿ ಒಬ್ಬ ಕಾರಿನಿಂದ ಇಳಿದು ಅಂಗಡಿಗೆ ಬಂದು ಟೀ ಮತ್ತು ಸಿಗರೇಟ್ ಬೇಕು ಎಂದು ಕೇಳಿದ್ದಾನೆ. ನಂತರ ಫೋನ್ ಪೇ ಮೂಲಕ ಹಣ ಪಾವತಿಸುವುದಾಗಿ ಹೇಳಿ, ಕ್ಯೂಆರ್​​ ಕೋಡ್​​  ಕೇಳಿದ್ದಾನೆ. ಅಂಗಡಿಯಲ್ಲಿದ್ದ ನಾಗರತ್ನಮ್ಮ ಅವರು ತಮ್ಮ ಮೊಬೈಲ್‌ನಲ್ಲಿ ಸ್ಕ್ಯಾನರ್ ತೆಗೆಯಲು ಸಿದ್ಧರಾದಾಗ, ಆತ ಅವರ ಗಮನವನ್ನು ಬೇರೆಡೆ ಸೆಳೆದು ಏಕಾಏಕಿ ಕತ್ತಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಓಡಿಹೋಗಿದ್ದಾನೆ. ಸಿಸಿಟಿವಿ ಕ್ಯಾಮರಾದಲ್ಲಿ ಘಟನೆ ಸಂಪೂರ್ಣವಾಗಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Chanakya Niti: ಸ್ನೇಹಿತರು, ಸಂಬಂಧಿಕರಿಗೆ ಹಣ ಸಾಲ ನೀಡುವ ಮುನ್ನ ನೀವು ಈ ಪ್ರಶ್ನೆಗಳನ್ನು ಕೇಳಲೇಬೇಕು – Kannada News | Chanakya Niti: Chanakya says you should ask these questions before lending money to friends and relatives

ಇಂದಿನ ಕಾಲದಲ್ಲಿ, ಹಣ ಸಂಪಾದಿಸುವುದು ಎಷ್ಟು ಕಷ್ಟಕರವೋ, ಅದನ್ನು ಉಳಿಸುವುದು ಮತ್ತು ಬುದ್ಧಿವಂತಿಕೆಯಿಂದ ಬಳಸುವುದು ಇನ್ನೂ ಹೆಚ್ಚು ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಣದ (money) ವಿಚಾರವಾಗಿ ತುಂಬಾನೇ ಜಾಗರೂಕರಾಗಿರಬೇಕು. ಅದರಲ್ಲೂ ನಿಮ್ಮ ಫ್ರೆಂಡ್ಸ್‌ ಮತ್ತು ಸಂಬಂಧಿಕರು ಆರ್ಥಿಕ ಸಹಾಯವನ್ನು ಕೇಳಿದಾಗ, ನೀವು ವೃತ್ತಿಪರವಾಗಿ ನಡೆದುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇವರು ತಮ್ಮ ನೀತಿಶಾಸ್ತ್ರದಲ್ಲಿ ಹಣಕಾಸಿನ ವಹಿವಾಟುಗಳ ಕುರಿತು ಸ್ಪಷ್ಟ ಮತ್ತು ಕಠಿಣ ನಿಯಮಗಳ ಬಗ್ಗೆ ತಿಳಿಸಿದ್ದಾರೆ. ಅದರಲ್ಲಿ ಹತ್ತಿರದವರಿಗೆ ಸಾಲ ನೀಡುವ ಮೊದಲು ಏನೆಲ್ಲಾ ಪ್ರಶ್ನೆ ಕೇಳಬೇಕು ಎಂಬುದು ಕೂಡ ಒಂದು.  ಈ ಪ್ರಶ್ನೆಗಳನ್ನು ಕೇಳುವುದರಿಂದ ನಿಮ್ಮ ಹಣ ಮಾತ್ರವಲ್ಲದೆ ಸಂಬಂಧವೂ ಸುರಕ್ಷಿತವಾಗಿರುತ್ತದೆ. ಹಾಗಿದ್ರೆ ಆ ಪ್ರಶ್ನೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಹತ್ತಿರದವರಿಗೆ ಸಾಲ ನೀಡುವ ಮುನ್ನ ನೀವು ಕೇಳಬೇಕಾದ ಪ್ರಶ್ನೆಗಳಿವು:

ಹಣದ ಅವಶ್ಯಕತೆಗೆ ನಿಜವಾದ ಕಾರಣವೇನು? (ಸಾಲದ ಉದ್ದೇಶ)

ಸಂಬಂಧಿಕರು ನಿಮ್ಮಿಂದ ಹಣ ಕೇಳಿದರೆ, ನೀವು ಮೊದಲು ಕೇಳಬೇಕಾದ ಪ್ರಶ್ನೆ ಸಾಲ ಕೇಳಿದ ಉದ್ದೇಶ ಏನು ಎಂಬುದು. ಅನಾರೋಗ್ಯ, ಶಿಕ್ಷಣ ಬಹಳ ಮುಖ್ಯವಾದ ಕಾರಣಕ್ಕಾಗಿ ಹಣದ ಅಗತ್ಯವಿದ್ದಾಗ ಸಾಲ ಕೇಳಿದರೆ, ಅಂತಹ ಸಂದರ್ಭದಲ್ಲಿ ಸಹಾಯ ಮಾಡುವುದು ಧರ್ಮ ಎಂದು ಚಾಣಕ್ಯ ಹೇಳುತ್ತಾರೆ. ಅದೇ ಯಾರಾದರೂ ತಮ್ಮ ಸ್ವಂತ ಸೌಕರ್ಯಗಳಿಗಾಗಿ, ದುಂದುವೆಚ್ಚ, ಶೋಕಿಗಾಗಿ ಹಣವನ್ನು ಸಾಲ ಕೇಳಿದರೆ, ಅಂತಹವರಿಗೆ ಹಣ ನೀಡುವ ಮುನ್ನ ಜಾಗರೂಕರಾಗಿರಬೇಕು. ಇಂತಹ ವ್ಯಕ್ತಿಗಳಿಗೆ  ಹಣವನ್ನು ಸಾಲವಾಗಿ ನೀಡುವುದು ನಿಮ್ಮ ಸ್ವಂತ ಹಣವನ್ನು ಸುಟ್ಟುಹಾಕಿದಂತೆ ಎಂದು ಚಾಣಕ್ಯರು ಹೇಳಿದ್ದಾರೆ.

ಹಣ ಯಾವಾಗ ವಾಪಾಸ್‌ ನೀಡುತ್ತೀರಿ?

ಇದು ಸ್ವಲ್ಪ ಕಠಿಣವಾಗಿ ಕಂಡರೂ ನೀವು ಈ ಪ್ರಶ್ನೆಯನ್ನು ಕೇಳಲೇಬೇಕು. ಯಾರಿಗಾದರೂ ಸಾಲ ನೀಡುತ್ತೀರಿ ಎಂದಾದರೆ ಅವರು ಯಾವ ಮೂಲದಿಂದ ಮತ್ತು ಯಾವಾಗ ಹಣವನ್ನು ಹಿಂದಿರುಗಿಸುತ್ತಾರೆ ಎಂಬ ಪ್ರಶ್ನೆಯನ್ನು ಕೇಳಬೇಕು. ಸಾಲ ಮರುಪಾವತಿಗೆ ಗಡುವನ್ನು ನಿಗದಿಪಡಿಸಲೇಬೇಕು.   ಸ್ಪಷ್ಟ ಯೋಜನೆ ಇಲ್ಲದೆ ಸಾಲ ನೀಡುವುದರಿಂದ ಭವಿಷ್ಯದಲ್ಲಿ ನಿಮಗೆ ತೊಂದರೆ ಉಂಟಾಗಬಹುದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ವಹಿವಾಟನ್ನು ನಾವು ಲಿಖಿತವಾಗಿ ದಾಖಲಿಸಬಹುದೇ?

ಇಂದಿನ ಕಾಲದಲ್ಲಿ ಯಾರನ್ನೂ ಸಹ ಕುರುಡಾಗಿ ನಂಬಬಾರದು. ಅದರಲ್ಲೂ ಸಾಲ ಕೊಡುವ ಮುನ್ನ ಲಿಖಿತ ಪುರಾವೆ ಬಹಳ ಮುಖ್ಯ . ಅದು ನಿಮ್ಮ ಸ್ವಂತ ಸಹೋದರನಾಗಿದ್ದರೂ ಸಹ, ದೊಡ್ಡ ವಹಿವಾಟುಗಳು ಯಾವಾಗಲೂ ಲಿಖಿತ ದಾಖಲೆಗಳೊಂದಿಗೆ ಇರಲೇಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಇದು ನಿಮಗಾಗುವ ಮೋಸವನ್ನು ತಪ್ಪಿಸಲು, ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು  ರಕ್ಷಿಸಲು ಇದು ತುಂಬಾನೇ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸಬಹುದು… ಎಚ್ಚರ!

 ಇದು ನನ್ನ ಸ್ವಂತ ಆರ್ಥಿಕ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಈ ಪ್ರಶ್ನೆಯನ್ನು ನಿಮ್ಮನ್ನು ನೀವೇ ಕೇಳಿಕೊಳ್ಳಬೇಕು. ನಿಮ್ಮ ಬಳಿ ಸಾಕಷ್ಟು ಹಣವಿದ್ದರೆ ಮಾತ್ರ ಇತರರಿಗೆ ಸಾಕ ನೀಡಿ. ನಿಮ್ಮ ತುರ್ತು ನಿಧಿಯನ್ನು ಎಂದಿಗೂ ಇತರರಿಗೆ ಸಾಲವಾಗಿ ನೀಡಬಾರದು ಎಂದು ಚಾಣಕ್ಯ ಹೇಳುತ್ತಾರೆ. ನೀವು ನಿಮ್ಮ ಅಗತ್ಯಕ್ಕಾಗಿ ಕೂಡಿಟ್ಟ ಹಣವನ್ನು ಇನ್ನೊಬ್ಬರಿಗೆ ನೀಡುವುದು ದೊಡ್ಡ ಮೂರ್ಖತನ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತತ್​ಕ್ಷಣದ ಪರಿಹಾರ ಮತ್ತು ಭವಿಷ್ಯದ ಪ್ರಗತಿ ಮಧ್ಯೆ ನೀತಿ ಸೇತುವಾಗಿರುವ ಬಜೆಟ್ 2026 – Kannada News | Union Budget 2026: Driving India’s Manufacturing, AI & Economic Future

ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತಪಡಿಸಿದ ಕೇಂದ್ರ ಬಜೆಟ್ 2026 (Union Budget) ಅನ್ನು ಭಾರತದ ಹಿಂದಿನ ಸಾಧನೆಗಳು ಹಾಗೂ ಭವಿಷ್ಯದ ಆಶೋತ್ತರಗಳ ನಡುವೆ ಕೊಂಡಿಯಾಗುವ ‘ನೀತಿ ಸೇತು’ (Policy Bridge) ಎಂದು ಬಣ್ಣಿಸಲಾಗುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಎಐ ಸನ್ನದ್ಧತೆ (AI preparedness) ಮೇಲೆ ಗಮನ ಹರಿಸುತ್ತಾ ಪ್ರಗತಿಗೆ ಪುಷ್ಟಿ ಕೊಡುವ ಈ ಬಜೆಟ್, ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುವ ಆರ್ಥಿಕತೆ ಎನ್ನುವ ಸ್ಥಾನ ಭಾರತಕ್ಕೆ ಮುಂದುವರಿಯುವಂತೆ ಮಾಡುತ್ತದೆ. ಈ ಬಜೆಟ್​ನಲ್ಲಿ ನೀತಿ ಮುಂದುವರಿಕೆ (ಶೇ. 60-70) ಹೆಚ್ಚಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳಲು ವಿನೂತನವೆನಿಸುವ ನಿರ್ದಿಷ್ಟ ಸ್ಕೀಮ್​ಗಳನ್ನು ತರುವ ಮೂಲಕ ಕೋವಿಡ್ ನಂತರದ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಈ ಬಜೆಟ್ ಅನುವು ಮಾಡಿಕೊಡುತ್ತದೆ.

ಸಾಬೀತಾದ ನೀತಿಗಳ ಮುಂದುವರಿಕೆ ಮತ್ತು ಉನ್ನತೀಕರಣ

2026ರ ಬಜೆಟ್ನಲ್ಲಿ ಹೆಚ್ಚಿನ ಭಾಗವು ಹಿಂದಿನ ವರ್ಷಗಳಲ್ಲಿ ಹಾಕಲಾದ ರಚನಾತ್ಮಕ ತಳಹದಿಗಳ ಮೇಲೆ ನಿರ್ಮಿತವಾಗಿದೆ. ವಿತ್ತೀಯ ಶಿಸ್ತು, ಮೂಲಸೌಕರ್ಯ ಮತ್ತು ಸ್ಥಿರತೆ ಮೇಲೆ ಗಮನ ಕೊಡುತ್ತದೆ.

ವಿತ್ತೀಯ ಸ್ಥಿರತೆ: ಕೋವಿಡ್ ನಂತರ 2021ರಲ್ಲಿ ವಿತ್ತೀಯ ಶಿಸ್ತು ತರಲು ಶುರು ಆದ ಪ್ರಕ್ರಿಯೆ ಈ ಬಜೆಟ್​ನಲ್ಲೂ ಮುಂದುವರಿದಿದೆ. 2026-27ರಲ್ಲಿ ವಿತ್ತೀಯ ಕೊರತೆಗೆ ಜಿಡಿಪಿಯ ಶೇ. 4.3 ಗುರಿ ಹಾಕಲಾಗಿದೆ. 2030-31ರಲ್ಲಿ ಜಿಡಿಪಿ ಮತ್ತು ಸಾಲದ ಅನುಪಾತ ಶೇ. 50ಕ್ಕೆ ಇಳಿಯಬೇಕೆಂಬ ದೂರಗಾಮಿ ಗುರಿಯೊಂದಿಗೆ ಬಜೆಟ್ ಹೆಜ್ಜೆ ಹಾಕಿದೆ. ಹಾಗೆಯೇ, ತೆರಿಗೆ ನಿಯಮಗಳನ್ನು ಸರಳಗೊಳಿಸಲಾಗಿರುವ 2025ರ ಇನ್ಕಮ್ ಟ್ಯಾಕ್ಸ್ ಕಾಯ್ದೆಯನ್ನು ಜಾರಿಗೆ ತಂದು ತೆರಿಗೆ ಸ್ಥಿರತೆ ಕಾಯ್ದುಕೊಂಡಿದೆ ಈ ಬಜೆಟ್. ಕಾರ್ಪೊರೇಟ್ ಟ್ಯಾಕ್ಸಲ್ಲಾಗಲೀ, ವೈಯಕ್ತಿಕ ಇನ್ಕಮ್ ಟ್ಯಾಕ್ಸಲ್ಲಾಗಲೀ ಬದಲಾವಣೆ ಮಾಡದೆಯೇ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಇನ್​ಫ್ರಾಸ್ಟ್ರಕ್ಚರ್ ಶಕ್ತಿ: ಸಾರ್ವಜನಿಕ ಬಂಡವಾಳ ವೆಚ್ಚವನ್ನು ದಾಖಲೆಯ 12.2 ಲಕ್ಷ ಕೋಟಿ ರೂಗೆ (ಜಿಡಿಪಿಯ ಶೇ. 3.1) ಏರಿಸಲಾಗಿದೆ. ಸರಕು ಸಾಗಣೆ ಕಾರಿಡಾರ್​ಗಳ ವಿಸ್ತರಣೆ, 20 ಹೊಸ ಜಲಮಾರ್ಗ, ಏಳು ಹೈಸ್ಪೀಡ್ ರೈಲ್ ಕಾರಿಡಾರ್​ಗಳು ಈ ಬಂಡವಾಳ ವೆಚ್ಚದಲ್ಲಿ ಒಳಗೊಂಡಿವೆ.

ಟೆಕ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಹೆಚ್ಚಿಸುವುದು: 2021ರಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಚಾಲನೆ ಮಾಡಲಾಯಿತು. ಈ ಬಜೆಟ್​ನಲ್ಲಿ ಸೆಮಿಕಂಡಕ್ಟರ್ ಮಿಷನ್ 2.0 ಘೋಷಣೆಯಾಗಿದೆ. ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್​ಗಳ ಉತ್ಪಾದನೆಯ ಸ್ಕೀಮ್​ಗೆ ಬಜೆಟ್ ಅಲೋಕೇಶನ್ 40,000 ಕೋಟಿ ರೂಗೆ ಏರಿಸಲಾಗಿದೆ.

ಎಂಎಸ್​ಎಂಇ ಮತ್ತು ಗ್ರಾಮೀಣ ನೆರವು: 2015ರ ಸ್ಕಿಲ್ ಇಂಡಿಯಾ ಮಿಷನ್ ಮತ್ತು 2023ರ ಕ್ರೆಡಿಟ್ ಗ್ಯಾರಂಟೀ ಸ್ಕೀಮ್​ಗಳ ನೆರವಿನೊಂದಿಗೆ ದೇಶದ ವಿವಿಧೆಡೆ 200 ಕೈಗಾರಿಕಾ ಕ್ಲಸ್ಟರ್​ಗಳ ಮರುಚೇತರಿಕೆಗೆ ಬಜೆಟ್​ನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಎರಡನೇ ಮತ್ತು ಮೂರನೇ ಸ್ತರದ ಪಟ್ಟಣಗಳಲ್ಲಿ ಬ್ಯುಸಿನೆಸ್ ನಿಯಮಗಳನ್ನು ಸರಳಗೊಳಿಸಲು ‘ಕಾರ್ಪೊರೇಟ್ ಮಿತ್ರಾಸ್’ ಯೋಜನೆ ತರಲಾಗಿದೆ. ಅಧಿಕ ಮೌಲ್ಯದ ಬೆಳೆಗಳಿಗೆ ಒತತು ಕೊಡುವ ಮೂಲಕ ಮತ್ತು ನ್ಯಾಷನಲ್ ಫೈಬರ್ ಸ್ಕೀಮ್ ಮೂಲಕ ರೈತರ ಕಲ್ಯಾಣಕ್ಕೆ ನೆರವಾಗುತ್ತಿದೆ.

ಇದನ್ನೂ ಓದಿ: ಭಾರತದ ಬಗ್ಗೆ ಇಲಾನ್ ಮಸ್ಕ್ ಟ್ವೀಟ್; ರಾಹುಲ್ ಮತ್ತು ವಿಪಕ್ಷಗಳನ್ನು ಝಾಡಿಸಿದ ಕೇಂದ್ರ ಸಚಿವರು

ಮುಂದಿ ದಶಕಕ್ಕೆ ಸಜ್ಜಾಗಲು ಬೇಕಾದ ನಾವೀನ್ಯತೆ

ಜಾಗತಿಕ ಪೂರೈಕೆ ಸರಪಳಿ ಮತ್ತು ಹೈಟೆಕ್ ಸೆಕ್ಟರ್​ಗಳಲ್ಲಿ ಭಾರತದ ಸ್ಥಾನ ಭದ್ರಪಡಿಸುವಂತಹ ಹೊಸ ಉಪಕ್ರಮಗಳನ್ನು ಈ ಬಜೆಟ್​ನಲ್ಲಿ ಜಾರಿ ಮಾಡಲಾಗಿದೆ:

ಸಂಪನ್ಮೂಲ ಭದ್ರತೆ: ಒಡಿಶಾ, ಕೇರಳ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳನ್ನು ಒಳಗೊಂಡ ರೇರ್ ಅರ್ಥ್ ಕಾರಿಡಾರ್​ಗಳನ್ನು ಸ್ಥಾಪಿಸಲಾಗುತ್ತಿದೆ. ಮೈನಿಂಗ್ ಮತ್ತು ಸಂಶೋಧನೆಯಲ್ಲಿ ಪೂರೈಕೆ ಸರಪಳಿಯನ್ನು ಬಲಪಡಿಸಲು ಇದು ನೆರವಾಗುತ್ತದೆ.

ವಿಜ್ಞಾನದಲ್ಲಿ ಹೊಸ ಸಾಹಸ: ಬಯೋಫಾರ್ಮಾ ನಾವೀನ್ಯತೆ ಮತ್ತು ಕ್ಲಿನಿಕಲ್ ಟ್ರಯಲ್​ಗಳಿಗೆ ಭಾರತವು ಜಾಗತಿಕ ಅಡ್ಡೆಯಾಗಿಸುವಂತಹ ಗುರಿಯೊಂದಿಗೆ 10,000 ಕೋಟಿ ರೂ ಅನುದಾನದಲ್ಲಿ ಬಯೋಫಾರ್ಮಾ ಶಕ್ತಿ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ.

ಹಣಕಾಸು ಪರಿವರ್ತನೆ: ಹೂಡಿಕೆಗಳಿಗೆ ರಿಸ್ಕ್ ಕಡಿಮೆ ಮಾಡಲು ಹೊಸ ಇನ್​ಫ್ರಾಸ್ಟ್ರಕ್ಚರ್ ರಿಸ್ಕ್ ಗ್ಯಾರಂಟಿ ಫಂಡ್ ರಚಿಸಲಾಗಿದೆ. ಹಾಗೆಯೇ, ವಿಕಸಿತ ಭಾರತದ ನಿರ್ಮಾಣಕ್ಕೆ ನೆರವಾಗುವ ಬ್ಯಾಂಕಿಂಗ್ ಅನ್ನು ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ. ಎಸ್​ಎಂಇ ಗ್ರೋತ್ ಫಂಡ್​ನಿಂದ ಎಂಎಸ್​ಎಂಇಗಳಿಗೆ ಲಾಭವಾಗಲಿದೆ. TReDS ಸೆಕ್ಯೂರಿಟೈಸೇಶನ್ ಮೂಲಕ ಇನ್ವಾಯ್ಸ್​ಗಳಿಗೆ ಸೆಕೆಂಡರಿ ಮಾರ್ಕೆಟ್ ನಿರ್ಮಿತವಾಗಿದ್ದು, ಇದರಿಂದಲೂ ಎಂಎಸ್​ಎಂಇಗಳಿಗೆ ಲಾಭವಾಗಲಿದೆ.

ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ತತ್​ಕ್ಷಣದ ಲಾಭಗಳು: ಇವತ್ತಿನ ಆರ್ಥಿಕ ಹೊರೆ ಇಳಿಸುವುದು

ಬಜೆಟ್​ನಲ್ಲಿ ಭವಿಷ್ಯದ ದೃಷ್ಟಿ ಜೊತೆ ಜೊತೆಗೆ ಉದ್ದಿಮೆಗಳು ಮತ್ತು ಜನಸಾಮಾನ್ಯರಿಗೆ ತತ್​ಕ್ಷಣಕ್ಕೆ ಖುಷಿ ಕೊಡುವ ಸಂಗತಿಗಳೂ ಇವೆ:

ಕುಟುಂಬಗಳಿಗೆ ನೇರ ಪರಿಹಾರ: ವಿದೇಶಗಳಲ್ಲಿ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮತ್ತು ಪ್ರವಾಸ ಪ್ಯಾಕೇಜ್​ಗಳಿಗೆ ಮಾಡುವ ವೆಚ್ಚಕ್ಕೆ ವಿಧಿಸುವ ಟಿಸಿಎಸ್ ತೆರಿಗೆಯನ್ನು ಶೇ. 5ರಿಂದ ಶೇ. 2ಕ್ಕೆ ಇಳಿಸಲಾಗಿರುವುದು ಗಮನಾರ್ಹ. ಇದರಿಂದ ಭಾರತೀಯ ಕುಟುಂಬಗಳಿಗೆ ಹಣದ ಹೊರೆ ಕಡಿಮೆ ಆಗುತ್ತದೆ. ಅಂತಾರಾಷ್ಟ್ರೀಯ ಶಿಕ್ಷಣ ವೆಚ್ಚ ಸ್ವಲ್ಪ ಕಡಿಮೆ ಆಗಲು ಸಾಧ್ಯವಾಗುತ್ತದೆ.

ಆರೋಗ್ಯಪಾಲನೆ ಮತ್ತು ಅನುಭೋಗ ವೆಚ್ಚ ಕಡಿಮೆ: 17 ಪ್ರಮುಖ ಔಷಧಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ. ವೈಯಕ್ತಿಕ ಆಮದು ಸುಂಕಗಳನ್ನು ಶೇ. 20ರಿಂದ ಶೇ. 10ಕ್ಕೆ ಇಳಿಸಲಾಗಿದೆ.

ನಿಯಮ ಬದ್ಧತೆ: ಸಣ್ಣ ತಪ್ಪುಗಳನ್ನು ಅಪರಾಧೀಕರಣ ಮಾಡುವುದನ್ನು ತಪ್ಪಿಸಲಾಗುತ್ತದೆ. ಪೆನಾಲ್ಟಿ ಕ್ರಮಗಳನ್ನು ಮಿಳಿತಗೊಳಿಸಲಾಗುತ್ತದೆ. ಇದರಿಂದ ತೆರಿಗೆ ಪಾವತಿದಾರರಲ್ಲಿ ಇರುವ ಆತಂಕವನ್ನು ಈ ಬಜೆಟ್ ಕಡಿಮೆ ಮಾಡುತ್ತದೆ. ಐಟಿಆರ್ ಪರಿಷ್ಕರಣೆ ಮತ್ತು ನಾನ್-ಆಡಿಟ್ ಬ್ಯುಸಿನೆಸ್ ಫೈಲಿಂಗ್​ಗಳಿಗೆ ಡೆಡ್​ಲೈನ್ ಅನ್ನು ವಿಸ್ತರಿಸಲಾಗಿದೆ.

ಕಾರ್ಮಿಕ ವರ್ಗಕ್ಕೆ ಶಕ್ತಿ: ಮಹಿಳಾ ನೇತೃತ್ವದ ಉದ್ದಿಮೆಗಳಿಗೆ ಒತ್ತು ಕೊಡಲಾಗಿದ್ದು, ಜೆಂಡರ್ ಬಜೆಟ್​ಗೆ ಅನುದಾನವನ್ನು 5 ಲಕ್ಷ ಕೋಟಿ ರೂಗೆ ಏರಿಸಲಾಗಿದೆ.

ತತ್​ಕ್ಷಣದ ಕ್ರಮಗಳ ಬದಲು ದೀರ್ಘಾವಧಿ ಪರಿಹಾರಗಳಿಗೆ ಬಜೆಟ್​ನಲ್ಲಿ ಒತ್ತುಕೊಡಲಾಗಿದೆ. ದೇಶೀಯ ಮೌಲ್ಯ ಸರಪಳಿಯನ್ನು ಬಲಪಡಿಸಲು ಮತ್ತು ದೊಡ್ಡ ಪ್ರಮಾಣದಲ್ಲಿ ಬಹುಕೌಶಲ್ಯ ಉದ್ಯೋಗ ಸೃಷ್ಟಿಸಲು, ಹಾಗೂ ಕಂಪನಿಗಳಿಗೆ ಕಾರ್ಯಾಚರಣೆ ಸಂಘರ್ಷ ಕಡಿಮೆಗೊಳಿಸಲು ಈ ಬಜೆಟ್​ನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಭಾರತದ ಪ್ರಗತಿಗೆ ಪೂರಕವಾಗಿದೆ ಈ ಬಜೆಟ್: ಅಪೋಲೋ ಹಾಸ್ಪಿಟಲ್ಸ್ ಮುಖ್ಯಸ್ಥ ಡಾ. ಪ್ರತಾಪ್ ಸಿ. ರೆಡ್ಡಿ

ಬಜೆಟ್ 2026: ಪ್ರಮುಖ ಘೋಷಣೆಗಳು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link