Category Archives: Blog

Your blog category

ಧನಿಷ್ಠಾ ನಕ್ಷತ್ರದಲ್ಲಿ ಸಂಚರಿಸುವ ಸೂರ್ಯನಿಂದ ಯಾವ ರಾಶಿಗಳ ಅನಿಷ್ಟ ದೂರ? – Kannada News | Dhanishta Nakshatra Sun Transit: Which Rashis Face Fortune, Which Need Caution?

ಸೂರ್ಯನು‌ ಎಲ್ಲ ಗ್ರಹಗಳಿಗೂ ಮೂಲ. ಎಲ್ಲ ಬೆಳಕಿಗೂ ಮೂಲ. ಅಷ್ಟೇ ಅಲ್ಲ ಮನುಷ್ಯನಿಗೆ ಆತ್ಮಬಲ, ಆತ್ಮವಿಶ್ವಾಸ ಚೆನ್ನಾಗಿರಬೇಕಾದರೆ ಸೂರ್ಯನ ಅನುಗ್ರಹವಿಲ್ಲದೇ ಸಾಧ್ಯವಾಗದು. ಯಾರ ಬಳಿ ಎಂತಹ ಸಂಪತ್ತಿದ್ದರೂ ಅದನ್ನು ನಿರ್ವಹಣೆ ಮಾಡುವ ಆತ್ಮವಿಶ್ವಾಸ ಅವರಲ್ಲಿ ಇಲ್ಲವಾದರೆ ಪ್ರಯೋಜನವಾಗದು. ಹಾಗಾಗಿ ಸೂರ್ಯ ಗತಿ ಮುಖ್ಯ.

​ಸೂರ್ಯನು ಮಕರ ರಾಶಿಯ ಧನಿಷ್ಠ ನಕ್ಷತ್ರದಲ್ಲಿ ಫೆಬ್ರವರಿ ಆರರಿಂದ ಹತ್ತೊಂಬತ್ತರವರೆಗೆ ಸಂಚರಿಸುವನು. ಮಂಗಳನ ಅಧಿಪತ್ಯವಿರುವ ಈ ಧನಿಷ್ಠಾ ನಕ್ಷತ್ರವು ಸೂರ್ಯನ ತೇಜಸ್ಸಿನೊಂದಿಗೆ ಸೇರಿ ಮಿಶ್ರ ಫಲಗಳನ್ನು ನೀಡುತ್ತದೆ. ವಿವಿಧ ರಾಶಿಗಳ ಮೇಲೆ ಇದರ ಪ್ರಭಾವ ಹೀಗಿದೆ:

​ಶುಭ ಫಲ ರಾಶಿಗಳು

​ಮೇಷ:

ವೃತ್ತಿಜೀವನದಲ್ಲಿ ಅತ್ಯುನ್ನತ ಸ್ಥಾನ ಲಭಿಸಲಿದೆ. ಸರ್ಕಾರಿ ಕೆಲಸಗಳಲ್ಲಿ ಲಾಭ ಮತ್ತು ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

​ಸಿಂಹ ರಾಶಿ :

ಶತ್ರುಗಳ ಮೇಲೆ ಜಯ ಸಿಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ದೊರೆತು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವಿರಿ.

​ವೃಶ್ಚಿಕ ರಾಶಿ :

ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗುತ್ತದೆ. ಸಣ್ಣ ಪ್ರವಾಸಗಳಿಂದ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು.

​ಧನು ರಾಶಿ :

ಭಾಗ್ಯೋದಯದ ಕಾಲ. ಬಾಕಿ ಇದ್ದ ಹಣ ಕೈಸೇರಲಿದೆ ಮತ್ತು ಕುಟುಂಬದಲ್ಲಿ ಆರ್ಥಿಕ ಸ್ಥಿರತೆ ಕಂಡುಬರುತ್ತದೆ.
​ಅಶುಭ/ಎಚ್ಚರಿಕೆ ವಹಿಸಬೇಕಾದ ರಾಶಿಗಳು

​ಮಿಥುನ ರಾಶಿ :

ಅಷ್ಟಮ ಸ್ಥಾನದ ಪ್ರಭಾವದಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ವಾಹನ ಚಾಲನೆ ಮಾಡುವಾಗ ಮತ್ತು ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಅಗತ್ಯ.

​ಕರ್ಕಾಟಕ ರಾಶಿ :

ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

​ಕುಂಭ ರಾಶಿ :

ಹನ್ನೆರಡನೇ ಮನೆಯಲ್ಲಿ ಸೂರ್ಯನಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ಕಣ್ಣಿನ ಆರೋಗ್ಯದ ಬಗ್ಗೆ ಗಮನಹರಿಸಿ.

​ತುಲಾ ರಾಶಿ :

ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಆಸ್ತಿ ವಿಚಾರದಲ್ಲಿ ಗಡಿಬಿಡಿಯ ನಿರ್ಧಾರಗಳು ಬೇಡ.

ಇದನ್ನೂ ಓದಿ: ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಕೇತುವಿನಿಂದ ಯಾರಿಗೆ ಯಾವ ಫಲ?

​ಮಿಶ್ರ ಫಲ ರಾಶಿಗಳು

​ವೃಷಭ, ಕನ್ಯಾ, ಮಕರ ಮತ್ತು ಮೀನ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹೊಸ ಜವಾಬ್ದಾರಿಗಳು ಬಂದರೂ ಸರಿಯಾದ ಯೋಜನೆಯಿಂದ ಯಶಸ್ಸು ಗಳಿಸಬಹುದು.

ದೋಷ ​ಪರಿಹಾರಕ್ಕೆ ಈ ಅವಧಿಯಲ್ಲಿ ಪ್ರತಿ ದಿನ ಸೂರ್ಯಾಷ್ಟಕ ಪಠಿಸುವುದು ಅಥವಾ ಶಿವನಿಗೆ ಜಲಾಭಿಷೇಕ ಮಾಡುವುದು ಅಥವಾ ಮಾಡಿಸುವುದು ಅಶುಭ ಫಲಗಳನ್ನು ತಗ್ಗಿಸಲು ಸಹಕಾರಿ ಆಗುವುದು.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬಾ ಎಷ್ಟು ಅದ್ದೂರಿಯಾಗಿರುತ್ತೆ ನೋಡಿ ರಶ್ಮಿಕಾ ಮದುವೆ; ಸಿದ್ಧತೆಯ ವಿಡಿಯೋ ಲೀಕ್ – Kannada News | Rashmika Mandanna and Vijay Deverakonda’s Secret Udaipur Wedding: Leaked Prep Video!

ರಶ್ಮಿಕಾ ಮಂದಣ್ಣ (Rashmika Mandanna) ಅವರು ವಿಜಯ್ ದೇವರಕೊಂಡ ಜೊತೆ ರಾಜಸ್ಥಾನದ ಉದಯಪುರದಲ್ಲಿ ಮದುವೆ ಆಗುತ್ತಿದ್ದಾರೆ. ಈ ವಿಷಯದಲ್ಲಿ ಈ ಜೋಡಿ ಗುಟ್ಟು ಕಾಯ್ದುಕೊಳ್ಳುತ್ತಾ ಬರುತ್ತಿದೆ. ಈಗ ರಶ್ಮಿಕಾ ಮಂದಣ್ಣ ಅವರು ವಿವಾಹ ಆಗೋ ಹೋಟೆಲ್​ನ ಸಿದ್ಧತೆಯ ವಿಡಿಯೋ ಲೀಕ್ ಆಗಿದೆ. ಈ ವಿಡಿಯೋದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿ ನೆರವೇರಲಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತುಂಬಾನೇ ಖಾಸಗಿಯಾಗಿ ಈ ವಿವಾಹ ನಡೆಯಲಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪರಿಚಯ ಆಗಿ ಹಲವು ವರ್ಷಗಳು ಕಳೆದಿವೆ. ‘ಗೀತ ಗೋವಿಂದಂ’ ಸಿನಿಮಾ ಟೈಮ್ ಅಲ್ಲಿ ಸೆಟ್​ ಅಲ್ಲಿ ಇವರ ಪರಿಚಯ ಆಯಿತು. ಆ ಬಳಿಕ ಇಬ್ಬರ ಮಧ್ಯೆ ಸಾಕಷ್ಟು ಒಳ್ಳೆಯ ಬಾಂಡಿಂಗ್ ಬೆಳೆಯಿತು. ಪರಿಚಯ ಪ್ರೀತಿಗೆ ತಿರುಗಿದೆ. ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ವಿಜಯ್ ನಿವಾಸದಲ್ಲಿ ಗುಟ್ಟಾಗಿಯೇ ನಿಶ್ಚಿತಾರ್ಥ ನಡೆದಿತ್ತು. ವಿವಾಹ ಕೂಡ ಸಾಕಷ್ಟು ರಹಸ್ಯವಾಗಿ ನಡೆಯುತ್ತಿದೆ.

ಉದಯಪುರದ ಸಿಟಿ ಪ್ಯಾಲೇಸ್ ಹೋಟೆಲ್ ಅಲ್ಲಿ ಮದುವೆ ನಡೆಯುತ್ತಿದೆ ಎಂದು ವಿಡಿಯೋ ವೈರಲ್ ಮಾಡಲಾಗಿದೆ. ವಿಡಿಯೋದಲ್ಲಿರುವವರು ಹೇಳುವ ಮಾಹಿತಿ ಪ್ರಕಾರ ಫೆಬ್ರವರಿ 2ರಂದೇ ಈ ಮದುವೆ ನಡೆಯಲಿದೆಯಂತೆ. ಫೆಬ್ರವರಿ 26ರಂದು ಇವರ ಮದುವೆ ಎಂದು ಹೇಳಲಾಗಿತ್ತು. ಆದರೆ, ಈಗ ದಿನಾಂಕ ಬದಲಾಯಿತೇ ಎಂಬ ಪ್ರಶ್ನೆಯೂ ಮೂಡಿದೆ. ಮದುವೆ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದಿರಲಿ ಎಂದು ಕೆಲವೊಮ್ಮೆ ಸೆಲಬ್ರಿಟಿಗಳು ತಪ್ಪು ದಿನಾಂಕ ಸುದ್ದಿಯಾಗುವಂತೆ ನೋಡಿಕೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ಕೂಡ ಇದೇ ತಂತ್ರ ಉಪಯೋಗಿಸಿರಬಹುದು ಎಂಬುದು ಅನೇಕರ ವಾದ.

ಇದನ್ನೂ ಓದಿ: ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಅವರು ಇಂದೇ ಮದುವೆ ಆದರೆ, ಸಂಜೆ ವೇಳೆ ಅವರ ವಿವಾಹದ ಫೋಟೋಗಳು ಅಪ್​​ಲೋಡ್ ಆಗಬಹುದು. ಮದುವೆ ವಿಷಯದಲ್ಲಿ ರಶ್ಮಿಕಾ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆ ಕನಸು ಈಗ ಈಡೇರುತ್ತಿದೆ. ವಿವಾಹ ಸಾಕಷ್ಟು ಖಾಸಗಿಯಾಗಿ ನಡೆಯುತ್ತಿದ್ದು, ಫೋಟೋಗಳು ವೈರಲ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಷ್ಟ್ರತಿಗಳ ಅಂಗಳ ತಲುಪಿದ ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲರು ಕೊಟ್ಟ ಕಾರಣಗಳೇನು ಗೊತ್ತೇ? – Kannada News | Hate Speech Bill Reaches President: Why Karnataka Governor Rejected the Bill Citing 29 Reasons

ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ Image Credit source: tv9

ಬೆಂಗಳೂರು, ಫೆಬ್ರವರಿ 2: ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ಮಸೂದೆ (Hate Speech Bill) ಇದೀಗ ರಾಷ್ಟ್ರಪತಿಗಳ (President of India) ಅಂಗಳಕ್ಕೆ ತಲುಪಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ನಿರಾಕರಿಸಿದ್ದು, ತಮ್ಮ ನಿರ್ಧಾರಕ್ಕೆ ಸ್ಪಷ್ಟನೆಯಾಗಿ 29 ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ದ್ವೇಷ ಭಾಷಣ ಮಸೂದೆ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಣ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಒಯ್ದಿದೆ.

ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡಿದ್ದ ದ್ವೇಷ ಭಾಷಣ ಮಸೂದೆಗೆ ಸಂಬಂಧಿಸಿ ರಾಜ್ಯಪಾಲರು ಸಹಿ ನಿರಾಕರಿಸಿದ್ದು, ಅದೀಗ ರಾಷ್ಟ್ರಪತಿಗಳಿಗೆ ವರ್ಗಾವಣೆಯಾಗಿದೆ. ಈ ಮಸೂದೆ ವಿರುದ್ಧ ಈಗಾಗಲೇ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಗಮನಾರ್ಹ.

ದ್ವೇಷ ಭಾಷಣ ಮಸೂದೆಗೆ ಸಹಿ ನಿರಾಕರಿಸಿ ರಾಜ್ಯಪಾಲರು ನೀಡಿದ ಪ್ರಮುಖ ಕಾರಣಗಳು

ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಈ ಅಸ್ಪಷ್ಟತೆಯಿಂದಾಗಿ ಧರ್ಮ, ಜಾತಿ, ಜನಾಂಗ, ವ್ಯಕ್ತಿಗಳ ಮೇಲೆ ಪೂರ್ವಾಗ್ರಹದಿಂದ ಕ್ರಮ ಜರುಗುವ ಸಾಧ್ಯತೆಯನ್ನು ಹೆಚ್ಚಿಸಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ಉಭಯ ಸದನಗಳಲ್ಲಿ ಅರ್ಥಪೂರ್ಣ ಮತ್ತು ಸಮಗ್ರ ಚರ್ಚೆಗೆ ಒಳಪಡಿಸದೇ ಅಂಗೀಕರಿಸಲಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಇದರ ಪರಿಣಾಮವಾಗಿ ಸಂವಿಧಾನಾತ್ಮಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಮೂಲಭೂತ ಹಕ್ಕನ್ನು ಕಸಿಯುವ ಭೀತಿ

ಇದಲ್ಲದೆ, ಮಸೂದೆಯಲ್ಲಿ ಹಲವಾರು ಕಾನೂನು ತೊಡಕುಗಳು ಇರುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಇದು ಮಿತಿ ಮೀರಿದ ಭಯಾನಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕನ್ನು ಕಸಿಯುವ ಭೀತಿ ಇದರಿಂದ ಉಂಟಾಗಬಹುದು ಎಂಬುದೂ ಅವರ ಪ್ರಮುಖ ಆಕ್ಷೇಪವಾಗಿದೆ.

ಆನ್‌ಲೈನ್ ವಿಷಯಗಳನ್ನು ಅನಿಯಂತ್ರಿತವಾಗಿ ನಿರ್ಬಂಧಿಸುವ ಸಾಧ್ಯತೆ, ಪೊಲೀಸ್ ವ್ಯವಸ್ಥೆಯಿಂದ ಕಾನೂನು ದುರುಪಯೋಗವಾಗುವ ಭೀತಿ ಹಾಗೂ ದೇಶದಲ್ಲಿ ಈಗಾಗಲೇ ದ್ವೇಷ ಭಾಷಣ ನಿಯಂತ್ರಣಕ್ಕೆ ಸಂಬಂಧಿಸಿದ ಹಲವಾರು ಕಾನೂನುಗಳು ಜಾರಿಯಲ್ಲಿರುವುದನ್ನೂ ರಾಜ್ಯಪಾಲರು ತಮ್ಮ ಕಾರಣಗಳಲ್ಲಿ ಉಲ್ಲೇಖಿಸಿದ್ದಾರೆ.

ಬೌದ್ಧಿಕ ಚಿಂತನೆ ಮತ್ತು ಸ್ವತಂತ್ರ ಅಭಿವ್ಯಕ್ತಿಗೆ ಹೆಸರಾದ ಕರ್ನಾಟಕದಲ್ಲಿ, ಇಂತಹ ಮಸೂದೆ ಜಾರಿಯಾದರೆ ಚಿಂತನೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ರಾಜ್ಯಪಾಲರಿಂದ ವ್ಯಕ್ತವಾಗಿದೆ. ಈ ನಿರಾಕರಣೆಯ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ: ದ್ವೇಷ ಭಾಷಣ ಕಾಯ್ದೆಯಾಗುವ ಮುನ್ನವೇ ಬಿಜೆಪಿಗರ ಮೇಲೆ ಪೊಲೀಸ್ ನೋಟಿಸ್ ಅಸ್ತ್ರ, ಶಾಸಕ ಕಿಡಿ

ರಾಜ್ಯಪಾಲರ ಸಹಿ ನಿರಾಕರಣೆ ಮತ್ತು ಮಸೂದೆ ರಾಷ್ಟ್ರಪತಿಗಳಿಗೆ ವರ್ಗಾವಣೆಗೊಂಡಿರುವುದರಿಂದ ದ್ವೇಷ ಭಾಷಣ ಮಸೂದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದೆ ರಾಷ್ಟ್ರಪತಿಗಳು ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿ ಅಪಾಯದಲ್ಲಿ! ಐತಿಹಾಸಿಕ ಲಕ್ಕುಂಡಿ ಬಳಿಯೇ ಇದ್ದರೂ ನಿರ್ಲಕ್ಷ್ಯ – Kannada News | Karnataka’s Tallest Krishna Idol Near Lakkundi Faces Neglect: Why Jantli Shirur Temple Is Rarer Than Udupi Krishna

ಕರ್ನಾಟಕದಲ್ಲೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿImage Credit source: tv9

ಗದಗ, ಫೆಬ್ರವರಿ 2: ಗದಗ (Gadag) ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿಶಿರೂರ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀಕೃಷ್ಣ ದೇವಾಲಯ ಅವ್ಯವಸ್ಥೆಯ ಆಗರವಾಗಿದ್ದು, ಆಡಳಿತದ ನಿರ್ಲಕ್ಷ್ಯದಿಂದ ನಲುಗಿ ಹೋಗಿದೆ. ಇದೀಗ ಗ್ರಾಮಸ್ಥರು ದೇಗುಲದ ಜೀರ್ಣೋದ್ಧಾರಕ್ಕೆ ಆಗ್ರಹಿಸಿದ್ದಾರೆ. ಇಡೀ ಕರ್ನಾಟಕದಲ್ಲೇ ಅತೀ ಎತ್ತರದ ಕೃಷ್ಣನ ಮೂರ್ತಿ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ದೇವಸ್ಥಾನ ಇದಾಗಿದೆ. ಸುಮಾರು ಐದು ಅಡಿ ಎತ್ತರದ ಅಪರೂಪದ ಶ್ರೀ ಕೃಷ್ಣ ಮೂರ್ತಿಯನ್ನು ಹೊಂದಿರುವ ಈ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೂಕ್ಷ್ಮ ಕೆತ್ತನೆಯ ಕಿರೀಟ, ಕಿವಿಯೋಲೆ, ಹಾರ, ಉದರಬಂಧ, ವಸ್ತ್ರ ಅಲಂಕಾರಗಳು ಶಿಲ್ಪಕಲೆಯ ಅದ್ಭುತವನ್ನು ಸಾರುತ್ತವೆ. ಶಂಖ, ಚಕ್ರ, ಗದಾ, ಪದ್ಮ ಹಿಡಿದಿರುವ ಈ ಕೃಷ್ಣ ಮೂರ್ತಿ ವಿಷ್ಣುವಿನ ಅವತಾರ ರೂಪವೆಂದು ಇತಿಹಾಸಜ್ಞರು ಗುರುತಿಸಿದ್ದಾರೆ.

ಬೀಳುವ ಹಂತದಲ್ಲಿ ಅಪರೂಪದ ಕೃಷ್ಣ ಮೂರ್ತಿ

ಆದರೆ, ಇಷ್ಟೊಂದು ಅಪರೂಪದ ದೇವಾಲಯ ಇಂದು ಸಂಪೂರ್ಣ ಅವನತಿ ಹಾದಿಯಲ್ಲಿದೆ. ದೇವಾಲಯದ ಸುತ್ತಮುತ್ತ ಕಸ, ಗಿಡಗಂಟಿಗಳು ಬೆಳೆದಿದ್ದು, ಮಳೆಗಾಲದಲ್ಲಿ ದೇವಸ್ಥಾನ ಸೋರುತ್ತಿರುವುದು ಶಿಲ್ಪ ಮತ್ತು ವಾಸ್ತುಶಿಲ್ಪಕ್ಕೆ ಗಂಭೀರ ಹಾನಿಯಾಗುವ ಭೀತಿ ಹುಟ್ಟುಹಾಕಿದೆ. ಅತೀ ಸುಂದರವಾದ ಕೃಷ್ಣನ ಮೂರ್ತಿ ಬಿಳುವ ಹಂತಕ್ಕೆ ತಲುಪುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಐತಿಹಾಸಿಕ ಲಕ್ಕುಂಡಿ ಸಮೀಪದಲ್ಲೇ ಇದೆ ದೇಗುಲ

ಐತಿಹಾಸಿಕ ಲಕ್ಕುಂಡಿ ಗ್ರಾಮದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಈ ಕೃಷ್ಣ ದೇವಾಲಯವನ್ನು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಸಮಗ್ರ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪಕ್ಕದಲ್ಲೇ ಲಕ್ಕುಂಡಿಯಲ್ಲಿ ಪುರಾತನ ಕಾಲದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ, ನಮ್ಮ ಗ್ರಾಮದ ಐತಿಹಾಸಿಕ ದೇವಸ್ಥಾನ ನಿರ್ಲಕ್ಷ್ಯಕ್ಕೆ ಒಳಗಾಗಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಅಪರೂಪದ ಕೃಷ್ಣ ಮೂರ್ತಿಗೆ ಮನಸೋತಿದ್ದ ಪೇಜಾವರ ಶ್ರೀಗಳು

ಈ ಹಿಂದೆ ಉಡುಪಿಯ ಪೇಜಾವರ ಶ್ರೀಗಳು ಜಂತ್ಲಿಶಿರೂರ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದೇವಾಲಯವನ್ನು ವೀಕ್ಷಿಸಿದ್ದರು. ಅಪರೂಪದ ಕೃಷ್ಣನ ಮೂರ್ತಿಯನ್ನು ನೋಡಿ ಪೇಜಾವರ ಶ್ರೀಗಳೇ ಬೆರಗಾಗಿದ್ದು, ಮೂರ್ತಿಯನ್ನು ಉಡುಪಿಯ ಕೃಷ್ಣ ಮಠಕ್ಕೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಮೂರ್ತಿಯ ಐತಿಹಾಸಿಕ ಮಹತ್ವವನ್ನು ಗಮನಿಸಿ ಗ್ರಾಮಸ್ಥರು ಅದನ್ನು ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.

ಇದ್ನನೂ ಓದಿ: ಶಾಲಾ ಮಕ್ಕಳ ಮೇಲೆ ಲಕ್ಕುಂಡಿ ಉತ್ಖನನದ ಎಫೆಕ್ಟ್​​: ಧೂಳಿನ ಅಬ್ಬರಕ್ಕೆ ಪುಟಾಣಿಗಳು ಹೈರಾಣು

ಇಷ್ಟೊಂದು ಅಪರೂಪದ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಶ್ರೀ ಕೃಷ್ಣ ದೇವಾಲಯವನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಹಾಗೂ ಪ್ರವಾಸೋದ್ಯಮ ಸಚಿವ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಈ ಪುರಾತನ ಧಾರ್ಮಿಕ ಪರಂಪರೆಯನ್ನು ಉಳಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:32 am, Mon, 2 February 26

Source link

ಉಕ್ರೇನ್​ನಲ್ಲಿ ಬಸ್ ಮೇಲೆ ಇಸ್ರೇಲ್ ಡ್ರೋನ್ ದಾಳಿ, 15 ಮಂದಿ ಸಾವು, 7 ಜನರಿಗೆ ಗಾಯ – Kannada News | Fifteen Workers Killed in Russian Strike as Ukraine Sets Peace Talks Timeline

ಕೈವ್, ಫೆಬ್ರವರಿ 02: ರಷ್ಯಾ ಉಕ್ರೇನ್​(Ukraine) ಮೇಲೆ ಡ್ರೋನ್ ದಾಳಿ ನಡೆಸಿದ್ದು, ಘಟನೆಯಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಣಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಖಾಸಗಿ ಕಂಪನಿಯ ಬಸ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದೆ.

ಡ್ರೋನ್ ದಾಳಿಯ ನಂತರ ಬಸ್ ಬೆಂಕಿಗೆ ಹೊತ್ತಿಕೊಂಡಿತ್ತು, ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಬೆಂಕಿ ನಂದಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರಂಭದಲ್ಲಿ ಸಾವಿನ ಸಂಖ್ಯೆ 12 ಎಂದು ವರದಿಯಾಗಿತ್ತು, ಆದರೆ ನಂತರ ಅಧಿಕಾರಿಗಳು ಸಾವಿನ ಸಂಖ್ಯೆ 15 ಕ್ಕೆ ಏರಿದೆ ಎಂದು ದೃಢಪಡಿಸಿದರು. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪಾವ್ಲೋಹ್ರಾದ್ ಜಿಲ್ಲೆಯ ಡಿಟಿಇಕೆ ಕಲ್ಲಿದ್ದಲು ಸ್ಥಾವರದ ಬಳಿ ಈ ದಾಳಿ ನಡೆದಿದೆ. ಬಸ್ ಗಣಿಗಾರರನ್ನು ತಮ್ಮ ಕರ್ತವ್ಯಕ್ಕೆ ಕರೆದೊಯ್ಯುತ್ತಿತ್ತು.ಆಗ ದಾಳಿ ನಡೆದಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ದಾಳಿಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡ್ನಿಪ್ರೊ ಪ್ರದೇಶದ ಟೆರ್ನಿವ್ಕಾ ಪ್ರದೇಶದಲ್ಲಿ ನಾಗರಿಕರನ್ನು ಸಾಗಿಸುತ್ತಿದ್ದ ಬಸ್ ಮೇಲೆ ರಷ್ಯಾದ ಡ್ರೋನ್ ಡಿಕ್ಕಿ ಹೊಡೆದು ಅನೇಕ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ದುರಂತ ಘಟನೆಯ ಮಧ್ಯೆ, ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳ ಕುರಿತು ಮಾಹಿತಿ ನೀಡಿದ್ದಾರೆ. ಉಕ್ರೇನ್, ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಮುಂದಿನ ತ್ರಿಪಕ್ಷೀಯ ಸಭೆ ಫೆಬ್ರವರಿ 4 ಮತ್ತು 5 ರಂದು ಅಬುಧಾಬಿಯಲ್ಲಿ ನಡೆಯಲಿದೆ ಎಂದು ಅವರು ಘೋಷಿಸಿದರು.

ಮತ್ತಷ್ಟು ಓದಿ: ಉಕ್ರೇನ್​​ ಮೇಲಿನ ಯುದ್ಧಕ್ಕೆ ಭಾರತ-ಚೀನಾ ಮುಖ್ಯ ಹೂಡಿಕೆದಾರರು; ವಿಶ್ವಸಂಸ್ಥೆಯಲ್ಲಿ ಮತ್ತೆ ಹಳೇ ರಾಗ ಹಾಡಿದ ಟ್ರಂಪ್

ಉಕ್ರೇನ್ ಅರ್ಥಪೂರ್ಣ ಮಾತುಕತೆಗಳಿಗೆ ಸಂಪೂರ್ಣವಾಗಿ ಸಿದ್ಧವಾಗಿದೆ , ಈ ದಾಳಿಯು ಮತ್ತೊಮ್ಮೆ ಈ ಯುದ್ಧದಲ್ಲಿ ನಾಗರಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಶಾಂತಿ ಪ್ರಯತ್ನಗಳ ಅಗತ್ಯವು ಎಂದಿಗಿಂತಲೂ ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ನೆನಪಿಸುತ್ತದೆ.

ರಷ್ಯಾ ತನ್ನ ನೆರೆಯವರ ಮೇಲೆ ನಡೆಸಿದ ಸಂಪೂರ್ಣ ಆಕ್ರಮಣವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಮಾತುಕತೆಗಳನ್ನು ಮುಂದುವರಿಸಲು ರಷ್ಯಾ, ಉಕ್ರೇನ್ ಮತ್ತು ಅಮೆರಿಕದ ರಾಯಭಾರಿಗಳು ಅಬುಧಾಬಿಯಲ್ಲಿ ಭೇಟಿಯಾಗುವ ನಿರೀಕ್ಷೆಯಿತ್ತು. ಝೆಲೆನ್ಸ್ಕಿ ಮುಂದಿನ ವಾರ ಅವು ನಡೆಯುವುದಾಗಿ ಘೋಷಿಸಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today 02 February​: ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 02 ಫೆಬ್ರುವರಿ​ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಸೋಮವಾರವಾಗಿದ್ದು, ವಿಶ್ವಾಸು ನಾಮ ಸಂವತ್ಸರ, ಆಶ್ಲೇಷ ನಕ್ಷತ್ರ ಮತ್ತು ಆಯುಷ್ಮಾನ್ ಯೋಗವಿರುತ್ತದೆ. ರವಿ ಮಕರ ರಾಶಿಯಲ್ಲೂ, ಚಂದ್ರ ಕಟಕ ರಾಶಿಯ ಆಶ್ಲೇಷ ನಕ್ಷತ್ರದಲ್ಲೂ ಸಂಚಾರ ಮಾಡಲಿದ್ದಾರೆ. ರಾಹುಕಾಲ ಬೆಳಿಗ್ಗೆ 8:11 ರಿಂದ 9:38 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಬೆಳಿಗ್ಗೆ 9:39 ರಿಂದ 11:06 ರವರೆಗೆ ಇರುತ್ತದೆ.

ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದ್ದು, ಆರ್ಥಿಕವಾಗಿ ಹಾಗೂ ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿ ಕಾಣುವರು. ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲದಿಂದ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಮಿಥುನ ರಾಶಿಯವರಿಗೆ ನಾಲ್ಕು ಗ್ರಹಗಳ ಶುಭಫಲವಿದ್ದು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕಟಕ ರಾಶಿಯವರಿಗೆ ಚಂದ್ರನ ಸಂಚಾರದಿಂದ ಐದು ಗ್ರಹಗಳ ಶುಭಫಲವಿದ್ದು, ರಾಜಕೀಯವಾಗಿ ಮತ್ತು ವೃತ್ತಿಪರ ಕ್ಷೇತ್ರದಲ್ಲಿ ಪ್ರಗತಿ ಇದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

IND vs PAK: ಪಾಕಿಸ್ತಾನದ ಬಹಿಷ್ಕಾರದಿಂದ ಭಾರತಕ್ಕೆ ಸಿಗುವ ಅಂಕ ಎಷ್ಟು? – Kannada News | Pakistan Boycott: How many points will India get?

ಟಿ20 ವಿಶ್ವಕಪ್​ನಲ್ಲಿನ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಅದರಂತೆ ಫೆಬ್ರವರಿ 15 ರಂದು ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನ್ ಪಂದ್ಯವು ಜರುಗುವುದು ಅನುಮಾನ. ಒಂದು ವೇಳೆ ಪಂದ್ಯ ನಡೆಯದೇ ಇದ್ದರೆ ಭಾರತಕ್ಕೆ ಸಿಗುವ ಅಂಕ ಎಷ್ಟು ಎಂಬ ಪ್ರಶ್ನೆ ಮೂಡುವುದು ಸಹಜ.

ಸಾಮಾನ್ಯವಾಗಿ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ 2 ಅಂಕಗಳನ್ನು ಹಂಚಿಕೊಳ್ಳುತ್ತವೆ. ಇದೀಗ ಪಾಕಿಸ್ತಾನ್ ಪಂದ್ಯವನ್ನು ಬಹಿಷ್ಕರಿಸುವುದರಿಂದ ಅಂಕಗಳನ್ನು ಹಂಚಿಕೊಳ್ಳಲಾಗುತ್ತದೆಯೇ ಎಂಬುದೇ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರ ಇಲ್ಲ. ಪಾಕಿಸ್ತಾನ್ ತಂಡವು ಪಂದ್ಯವನ್ನು ಬಾಯ್ಕಾಟ್ ಮಾಡುತ್ತಿರುವುದರಿಂದ ಅವರಿಗೆ ಯಾವುದೇ ಅಂಕ ಸಿಗುವುದಿಲ್ಲ. ಇತ್ತ ಟೀಮ್ ಇಂಡಿಯಾ ಪಂದ್ಯವಾಡಲು ಸಿದ್ಧವಾಗಿರುವುದರಿಂದ ಸಂಪೂರ್ಣ ಅಂಕಗಳನ್ನು ಪಡೆಯಲಿದೆ.

ಅಂದರೆ ಗೆಲುವಿಗೆ ನೀಡಲಾಗುವ ಸಂಪೂರ್ಣ ಅಂಕವನ್ನು ಟೀಮ್ ಇಂಡಿಯಾ ಪಡೆಯಲಿದೆ. ಟಿ20 ವಿಶ್ವಕಪ್​ನಲ್ಲಿ ಒಂದು ಗೆಲುವಿಗೆ 2 ಅಂಕಗಳನ್ನು ನೀಡಲಾಗುತ್ತದೆ. ಅಂದರಂತೆ ಪಾಕಿಸ್ತಾನ್ ತಂಡವು ಪಂದ್ಯವನ್ನು ಬಹಿಷ್ಕರಿಸಿದರೆ ಟೀಮ್ ಇಂಡಿಯಾ 2 ಅಂಕಗಳನ್ನು ಪಡೆಯಲಿದೆ.

ಅತ್ತ ಪಂದ್ಯದಿಂದ ಹಿಂದೆ ಸರಿಯುವ ಕಾರಣ ಪಾಕಿಸ್ತಾನ್ ತಂಡಕ್ಕೆ ಯಾವುದೇ ಅಂಕ ಸಿಗುವುದಿಲ್ಲ. ಇದರಿಂದ ಪಾಕಿಸ್ತಾನ್ ತಂಡದ ನೆಟ್ ರನ್ ರೇಟ್ ಮೇಲೆ ನೇರ ಪರಿಣಾಮ ಬೀರಲಿದೆ.

ಪಾಕಿಸ್ತಾನ್ ಪಂದ್ಯವನ್ನು ಬಹಿಷ್ಕರಿಸುತ್ತಿರುವುದೇಕೆ?

ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಾಂಗ್ಲಾದೇಶ್ ತಂಡದ ಪಂದ್ಯಗಳನ್ನು ಭಾರತದಿಂದ ಶ್ರೀಂಕಾಗೆ ಸ್ಥಳಾಂತರ ಮಾಡಬೇಕೆಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಆಗ್ರಹಿಸಿತ್ತು.

ಆದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಈ ಮನವಿಯನ್ನು ಐಸಿಸಿ ತಿರಸ್ಕರಿಸಿತ್ತು. ಅಲ್ಲದೆ ಬಾಂಗ್ಲಾ ತಂಡವು ಭಾರತದಲ್ಲೇ ಆಡಬೇಕೆಂದು ಸೂಚಿಸಿದ್ದರು. ಐಸಿಸಿಯ ಈ ಸೂಚನೆಯನ್ನು ತಿರಸ್ಕರಿಸಿದ್ದರಿಂದ ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್​ನಿಂದ ಕೈ ಬಿಡಲಾಯಿತು.

ಇತ್ತ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವ ಐಸಿಸಿ ಹಾಗೂ ಬಿಸಿಸಿಐ ಕ್ರಮವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಖಂಡಿಸಿದೆ. ಇದೇ ಕಾರಣಕ್ಕೆ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಫೈನಲ್​ನಲ್ಲಿ RCB ತಂಡದ ಎದುರಾಳಿ ಯಾರು?

ಹೀಗಾಗಿ ಫೆಬ್ರವರಿ 15 ಕ್ಕೆ ನಿಗದಿಯಾಗಿರುವ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯುವುದು ಅನುಮಾನ. ಇದಾಗ್ಯೂ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಮನವೊಲಿಸಲು ಐಸಿಸಿ ಯಶಸ್ವಿಯಾಗಲಿದೆಯಾ ಕಾದು ನೋಡಬೇಕಿದೆ.

Source link

Jammu and Kashmir Earthquake: ಜಮ್ಮು ಮತ್ತು ಕಾಶ್ಮೀರದಲ್ಲಿ 4.8 ತೀವ್ರತೆಯ ಭೂಕಂಪ – Kannada News | Moderate Earthquake 4.8 Shakes Jammu and Kashmir, Epicentre in Budgam

ಶ್ರೀನಗರ, ಫೆಬ್ರವರಿ 02: ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಭೂಕಂಪ(Earthquake)ದ ಅನುಭವವಾಗುತ್ತಿದ್ದು, ಭೂಕಂಪದ ಭೀತಿ ಹೆಚ್ಚಾಗಿದೆ. ಸೋಮವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ, ಕಣಿವೆ ಪ್ರದೇಶದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂದು ಮುಂಜಾನೆ ಕಾಶ್ಮೀರ ಕಣಿವೆಯಲ್ಲಿ ಭೂಮಿ ಕಂಪಿಸಿದ ಅನುಭವವಾದ ಕಾರಣ ಬಾರಾಮುಲ್ಲಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿಬಂದಿದ್ದರು. ಇಲ್ಲಿಯವರೆಗೆ ಯಾವುದೇ ಹಾನಿ ಸಂಭವಿಸಿದ ವರದಿಗಳು ಲಭ್ಯವಾಗಿಲ್ಲ.

ಸೋಮವಾರ ಬೆಳಗಿನ ಜಾವ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.8 ರಷ್ಟಿತ್ತು. ಫೆಬ್ರವರಿ 2, 2026 ರಂದು ಬೆಳಗ್ಗೆ 5.35 ಕ್ಕೆ ಭೂಕಂಪ ಸಂಭವಿಸಿದೆ. ರಾಜ್ಯದ ಹಂಜಿವೇರಾ ಪ್ರದೇಶದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಇತ್ತು. ಇಲ್ಲಿಯವರೆಗೆ ಯಾವುದೇ ಸಾವುನೋವು ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ಚಳಿ ಇದೆ. ಇದರ ಜೊತೆಗೆ, ಅನೇಕ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದೆ. ಈ ಭೂಕಂಪವು ನಿವಾಸಿಗಳಲ್ಲಿ ತೊಂದರೆಯನ್ನುಂಟುಮಾಡಿದೆ, ಜನರು ಬೆಳಗ್ಗೆ ಚಳಿಯಲ್ಲಿ ತಮ್ಮ ಮನೆಗಳನ್ನು ಬಿಡಬೇಕಾಯಿತು.

ಸೋಮವಾರ ಮುಂಜಾನೆ ನೆರೆಯ ಬಾಂಗ್ಲಾದೇಶದಲ್ಲಿ ಕಂಪನದ ಅನುಭವವಾಗಿತ್ತು. ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಭೂಕಂಪನವು ಭೂಮಿಯನ್ನು ನಡುಗಿಸಿತು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಭೂಕಂಪವು 20 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ. ಫಿಲಿಪೈನ್ಸ್‌ನ ಮಿಂಡಾನಾವೊ ದ್ವೀಪದಲ್ಲಿ ಬುಧವಾರ ಪ್ರಬಲ ಭೂಕಂಪದ ವರದಿಯಾಗಿದ್ದು, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ.

ಮತ್ತಷ್ಟು ಓದಿ: Assam Earthquake: ಅಸ್ಸಾಂನಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ

ಭೂಮಿಯ ಹೊರಪದರವನ್ನು ರೂಪಿಸುವ ಏಳು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯಿಂದಾಗಿ ಭೂಕಂಪಗಳು ಸಂಭವಿಸುತ್ತವೆ. ಈ ಪ್ಲೇಟ್‌ಗಳು ಆಯಾ ವಲಯಗಳಲ್ಲಿ ತೇಲುತ್ತಲೇ ಇರುತ್ತವೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸೋಮವಾರ ಬೆಳಗ್ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ. ಬೆಳಗಿನ ಜಾವ 3.31 ಕ್ಕೆ ಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ನಿಕೋಬಾರ್ ಪ್ರದೇಶದಲ್ಲಿ 10 ಕಿಲೋಮೀಟರ್ ಆಳದಲ್ಲಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:37 am, Mon, 2 February 26

Source link

ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ನೇಪಾಳಿ ದಂಪತಿ! – Kannada News | Bengaluru’s Rs 18 Crore Gold Heist: Nepali Couple Used Fake IDs as Domestic Help

ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ನೇಪಾಳಿ ದಂಪತಿ!

ಬೆಂಗಳೂರು, ಫೆಬ್ರುವರಿ 02: ಬೆಂಗಳೂರಿನಲ್ಲಿ (Bengaluru) ಇತ್ತೀಚಿಗೆ ಬರೋಬ್ಬರಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳ್ಳತನದ ಪ್ರಕರಣದಲ್ಲಿ ಮಾರತ್ ಹಳ್ಳಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮನೆಕೆಲಸದ ಹೆಸರಿನಲ್ಲಿ ವಿಶ್ವಾಸ ಗಳಿಸಿ ಸುಮಾರು ಬಂಗಾರ ದೋಚುತ್ತಿದ್ದ ಆರೋಪಿಗಳು ನೇಪಾಳಿ ದಂಪತಿ ಎಂಬುದು ತನಿಖೆಯಿಂದ ದೃಢಪಟ್ಟಿದ್ದು, ಕದೀಮರನ್ನು ಹಿಡಿಯಲು ಬಲೆ ಬೀಸಿದ್ದಾರೆ.

ಆರೋಪಿಗಳು ದಿನೇಶ್ ಹಾಗೂ ಕಮಲ ಅಥವಾ ಸಲೀನಾ ಎಂಬ ನಕಲಿ ಹೆಸರುಗಳನ್ನು ಬಳಸಿಕೊಂಡು ಮನೆಕೆಲಸಕ್ಕೆ ಸೇರಿ ಕಳ್ಳತನ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈ ದಂಪತಿ ದೇಶದ ಅನೇಕ ಭಾಗಗಳಲ್ಲಿ ಇದೇ ರೀತಿಯ ಕೃತ್ಯಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿದೆ. 2025ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಯ ಮನೆಯಲ್ಲಿ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರೆಂದು ಕಾರ್ಯಾಚರಣೆ ವೇಳೆ ತಿಳಿದುಬಂದಿದೆ.

ಈ ಹಿಂದೆಯೂ ವಿವಿಧೆಡೆ ಕಳ್ಳತನ ಮಾಡಿದ್ದ ಜೋಡಿ

ಪುಣೆಯ ಭಾವ್ಧಾನ್ ಪ್ರದೇಶದ ವಿಂಡ್ಮಿಲ್ ಸೊಸೈಟಿಯ ರತ್ನಾದೀಪ್ ರಂಗನಾಥ್ ರಾವ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿ ಸುಮಾರು ಆರು ತಿಂಗಳ ಬಳಿಕ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಾಕರ್ ಒಡೆದು ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ನಂತರ ದಿನೇಶ್ ಹಾಗೂ ಸಲೀನಾ ಎಂಬ ಹೆಸರಿನಲ್ಲಿ ಮನೆ ಕೆಲಸಕ್ಕೆ ಸೇರಿ ಬೆಂಗಳೂರಿನಲ್ಲಿ 18 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆಂದು ತಿಳಿದು ಬಂದಿದೆ.

ಈ ಪ್ರಕರಣದ ಬೆನ್ನತ್ತಿರುವ ಮಾರತ್ ಹಳ್ಳಿ ಪೊಲೀಸರು ಸುಮಾರು ಏಳು ವಿಶೇಷ ತಂಡಗಳನ್ನು ರಚಿಸಿ ಮುಂಬೈ, ಕೊಲ್ಕತ್ತಾ ಹಾಗೂ ನೇಪಾಳ ಸೇರಿ ಹಲವು ಕಡೆಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗಿದ್ದರೆ ಅವರನ್ನು ಪತ್ತೆಹಚ್ಚುವುದು ಕಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಸ್ಥಳೀಯವಾಗಿ ಯಾರಾದರೂ ಆರೋಪಿಗಳಿಗೆ ಸಹಾಯ ಮಾಡಿದ್ದಾರೆಯೇ ಎಂಬುದರ ಕುರಿತಾದ ತನಿಖೆಯೂ ಮುಂದುವರಿದಿದೆ ಎಂದು ತಿಳಿಸಲಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೋತು ಸುಣ್ಣವಾಗಿರೋ ನಿರ್ದೇಶಕನ ಜೊತೆ ಕೈ ಜೋಡಿಸಿದ ರಣವೀರ್ ಸಿಂಗ್? – Kannada News | Ranveer Singh Joins Shankar’s Velpari: Bollywood Star in Pan India Historical Epic with Vikram

ರಣವೀರ್ ಸಿಂಗ್ ನಟನೆಯ ‘ಧುರಂಧರ್’ (Dhurandhar) ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುತ್ತಲೇ ಇದೆ. ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಈ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿರುವ ಈ ಚಿತ್ರ ಶುಕ್ರವಾರದಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಲ್ಲಿಯೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈಗ ರಣವೀರ್ ಸಿಂಗ್ ಅವರು ದಕ್ಷಿಣದ ನಿರ್ದೇಶಕನ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದು ವರದಿ ಆಗಿದೆ. ಅದು ಕೂಡ ಸತತ ಸೋಲು ಕಂಡ ನಿರ್ದೇಶಕ.

ಐದು ವರ್ಷಗಳ ಹಿಂದೆಯೇ ರಣವೀರ್ ಸಿಂಗ್ ಹಾಗೂ ಶಂಕರ್ ಸಿನಿಮಾ ಮಾಡಬೇಕಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಅದು ಮುಂದೂಡಲ್ಪಡುತ್ತಲೇ ಇತ್ತು. ಆದರೆ ಈಗ ಶಂಕರ್ ಅವರು ರಣವೀರ್ ಸಿಂಗ್ ಜೊತೆ ಕನಸಿನ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಕಾಲಿವುಡ್‌ನಿಂದ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ದಕ್ಷಿಣ ಭಾರತದ ಬಹುಮುಖ ನಟ ವಿಕ್ರಮ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಈ ಚಿತ್ರದೊಂದಿಗೆ ಶಂಕರ್ ತಮ್ಮ ಹಳೆಯ ಫಾರ್ಮ್ ಅನ್ನು ಮರಳಿ ಪಡೆಯುತ್ತಾರೆಯೇ ಎಂಬುದು ಸದ್ಯದ ಪ್ರಶ್ನೆ?

‘ವೀರ ಯುಗ ನಾಯಗನ್ ವೇಲ್ಪರಿ’ ಎಂಬ ಐತಿಹಾಸಿಕ ಕಾದಂಬರಿಯನ್ನು ಬೆಳ್ಳಿತೆರೆಗೆ ತರುವ ಪ್ರಯತ್ನದಲ್ಲಿ ನಿರ್ದೇಶಕ ಶಂಕರ್ ಬಹಳ ಸಮಯದಿಂದ ಇದ್ದಾರೆ. ಇದು ಅವರ ಕನಸಿನ ಯೋಜನೆ. ತಮಿಳುನಾಡಿನ ಇತಿಹಾಸದಲ್ಲಿ ತಮ್ಮ ಮಹಾನ್ ಔದಾರ್ಯ ಮತ್ತು ಅಪ್ರತಿಮ ಧೈರ್ಯಕ್ಕೆ ಹೆಸರುವಾಸಿಯಾದ ವೇಲ್ಪರಿ ರಾಜು ಅವರ ಕಥೆ ಇದು. ಶಂಕರ್ ಈ ಕಥೆಯನ್ನು ಇಬ್ಬರು ನಾಯಕರನ್ನು ಹೊಂದಿರುವ ಬಹುತಾರಾಗಣ ಚಿತ್ರವನ್ನಾಗಿ ಪರಿವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಲಿವುಡ್ ಮಾಹಿತಿಯ ಪ್ರಕಾರ, ರಣವೀರ್ ಸಿಂಗ್ ಮತ್ತು ಚಿಯಾನ್ ವಿಕ್ರಮ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರಂತೆ. ಪೆನ್ ಮೀಡಿಯಾ ಈ ಬೃಹತ್ ಚಿತ್ರವನ್ನು ನಿರ್ಮಿಸಲು ಮುಂದೆ ಬಂದಿದೆ.

ಐದು ವರ್ಷಗಳ ಹಿಂದೆ, ಶಂಕರ್ ‘ಅಪರಿಚಿತುಡು’ ಚಿತ್ರವನ್ನು ಹಿಂದಿಯಲ್ಲಿ ರಣವೀರ್ ಸಿಂಗ್ ಅವರ ಜೊತೆ ರಿಮೇಕ್ ಮಾಡುವುದಾಗಿ ಘೋಷಿಸಿದರು. ಆದರೆ ಕೆಲವು ಕಾರಣಗಳಿಂದಾಗಿ, ಯೋಜನೆ ಮುಂದುವರಿಯಲಿಲ್ಲ. ಇದಕ್ಕೂ ಮೊದಲು, ಶಂಕರ್ ಅವರ ‘ಇಂಡಿಯನ್ 2’ ಮತ್ತು ‘ಗೇಮ್ ಚೇಂಜರ್’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ನೀಡಲಿಲ್ಲ. ಇದರೊಂದಿಗೆ, ಶಂಕರ್ ತಮ್ಮ ಹಿಂದಿನ ವೈಭವವನ್ನು ತೋರಿಸಲು ಈ ‘ವೆಲ್ಪಾರಿ’ ಕಥೆಯನ್ನು ನಂಬಿದ್ದರು. ರಣವೀರ್ ಸಿಂಗ್ ಅವರ ಪ್ಯಾನ್ ಇಂಡಿಯಾ ಇಮೇಜ್ ಈ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಅವರು ಭಾವಿಸುತ್ತಾರೆ.

ಇದನ್ನೂ ಓದಿ: ‘ಧುರಂಧರ್’ ಗೆಲುವಿನ ಖುಷಿಯಲ್ಲಿರೋ ರಣವೀರ್​​​ಗೆ ಶಾಕ್ ಕೊಟ್ಟ ಬೆಂಗಳೂರು ಪೊಲೀಸರು

ತಮಿಳು ಸಂಸ್ಕೃತಿ ಮತ್ತು ಪದ್ಧತಿಗಳಿಗೆ ಬಹಳ ಹತ್ತಿರವಿರುವ ವೇಲ್ಪಾರಿಯ ಕಥೆಯನ್ನು ಬಾಲಿವುಡ್ ನಾಯಕನೊಂದಿಗೆ ಮಾಡುವ ಬಗ್ಗೆಯೂ ಕೆಲವು ಅನುಮಾನಗಳಿವೆ. ಮಣಿರತ್ನಂ ಅವರ ಹಿಂದಿನ ಚಿತ್ರ ‘ಪೊನ್ನಿಯಿನ್ ಸೆಲ್ವನ್’ ತಮಿಳಿನಲ್ಲಿ ಭಾರಿ ಯಶಸ್ಸನ್ನು ಕಂಡಿತು. ಆದರೆ ನೇಟಿವಿಟಿ ಸಮಸ್ಯೆಯಿಂದಾಗಿ ತೆಲುಗು ಮತ್ತು ಇತರ ಭಾಷೆಗಳಲ್ಲಿ ನಿರೀಕ್ಷೆಯಷ್ಟು ಪ್ರದರ್ಶನ ನೀಡಲಿಲ್ಲ. ಈಗ ಶಂಕರ್ ಕೂಡ ಅಂತಹ ಐತಿಹಾಸಿಕ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದರಿಂದ, ಅದು ಎಲ್ಲರಿಗೂ ಇಷ್ಟ ಆಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link