Category Archives: Blog

Your blog category

ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ ಹವಾ; ಎರಡನೇ ದಿನವೂ ಭರ್ಜರಿ ಗಳಿಕೆ

ಅಬ್ಬರದ ಪ್ರಚಾರದೊಂದಿಗೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ‘ಪೆದ್ದಿ’ ಸಿನಿಮಾ (Peddi Movie), ಈಗ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಮೊದಲ ದಿನದ ಬಂಪರ್ ಓಪನಿಂಗ್ ಬಳಿಕ, ಎರಡನೇ ದಿನವಾದ ಶುಕ್ರವಾರವೂ ಚಿತ್ರವು ಅತ್ಯುತ್ತಮ ಕಲೆಕ್ಷನ್ ಮಾಡುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರಿಸಿದೆ. ಪೆದ್ದಿಯ ಒಟ್ಟಾರೆ ಗಳಿಕೆ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎನ್ನುವ ಕುತೂಹಲ ಮೂಡಿದೆ.

ಬುಧವಾರ (ಜೂನ್ 3) ನಡೆದ ವಿಶೇಷ ಪ್ರೀಮಿಯರ್ ಶೋಗಳಿಂದಲೇ ‘ಪೆದ್ದಿ’ ಭರವಸೆಯ ಆರಂಭ ಪಡೆದುಕೊಂಡಿತ್ತು. ಕೇವಲ 847 ಪ್ರೀಮಿಯರ್ ಶೋಗಳಿಂದ ಶೇಕಡಾ 72 ರಷ್ಟು ಭರ್ತಿ ಪ್ರದರ್ಶನ ಕಂಡು 18.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿತ್ತು. ಇದಾದ ಬಳಿಕ ಮೊದಲ ದಿನವಾದ ಗುರುವಾರ ವಿಶ್ವಾದ್ಯಂತ ಅಬ್ಬರಿಸಿದ್ದ ಚಿತ್ರ, ಭಾರತದಲ್ಲೇ ಬರೋಬ್ಬರಿ 12,412 ಶೋಗಳಿಂದ 51.00 ಕೋಟಿ ಬಾಚಿತ್ತು.

ಸಾಮಾನ್ಯವಾಗಿ ವೀಕ್‌ಡೇಸ್‌ನಲ್ಲಿ ಕಲೆಕ್ಷನ್ ಕೊಂಚ ಕುಸಿಯುವುದು ಸಹಜ. ಆದರೆ, ‘ಪೆದ್ದಿ’ ಚಿತ್ರಕ್ಕೆ ಎರಡನೇ ದಿನವೂ ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮೊದಲ ಶುಕ್ರವಾರದಂದು ದೇಶಾದ್ಯಂತ 10,113 ಶೋಗಳನ್ನು ಪ್ರದರ್ಶನ ಕಂಡಿರುವ ಈ ಸಿನಿಮಾ, ಶೇಕಡಾ 32.8 ರಷ್ಟು ಆಕ್ಯುಪೆನ್ಸಿಯೊಂದಿಗೆ 26.90 ಕೋಟಿ ರೂಪಾಯಿನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ಸಿನಿಮಾ ಭಾರತದಲ್ಲಿ ಒಟ್ಟು 96.40 ಕೋಟಿ ರೂಪಾಯಿ ನೆಟ್ ಗಳಿಕೆ ಹಾಗೂ 114.49 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಪೆದ್ದಿ ಹವಾ ಜೋರಾಗಿದೆ. ಎರಡನೇ ದಿನ ವಿದೇಶಿ ಮಾರುಕಟ್ಟೆಯಿಂದ 8.00 ಕೋಟಿ ರೂಪಾಯಿ ಗಳಿಸಿರುವ ಚಿತ್ರ, ತನ್ನ ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ ಅನ್ನು 36.00 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡಿದೆ. ಈ ಎಲ್ಲಾ ಕಲೆಕ್ಷನ್ ಸೇರಿದರೆ ‘ಪೆದ್ದಿ’ ಸಿನಿಮಾ ವಿಶ್ವಾದ್ಯಂತ ಒಟ್ಟು 150.49 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದಂತಾಗುತ್ತದೆ.

ಇದನ್ನೂ ಓದಿ: ನಾಯಕಿಯ ‘ಅಂಗಾಂಗ’ಗಳ ಮೇಲೆ ‘ಕಣ್ಣು’, ‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ

ಈ ಸಿನಿಮಾ ಶನಿವಾರ ಮತ್ತು ಭಾನುವಾರ ಮತ್ತಷ್ಟು ದೊಡ್ಡ ಮಟ್ಟದ ಗಳಿಕೆ ಮಾಡುವ ಮುನ್ಸೂಚನೆ ನೀಡಿದೆ. ಬುಚ್ಚಿ ಬಾಬು ನಿರ್ದೇಶನದ ಈ ಚಿತ್ರಕ್ಕೆ ರಾಮ್ ಚರಣ್ ಹೀರೋ, ಜಾನ್ವಿ ಕಪೂರ್ ನಾಯಕಿ. ಈ ಚಿತ್ರದಲ್ಲಿ ಕನ್ನಡದ ಶಿವರಾಜ್​​ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಧ್ಯರಾತ್ರಿ ಡಿಕೆಶಿ-ರಾಮಲಿಂಗಾ ರೆಡ್ಡಿ 2.5 ಗಂಟೆ ರಹಸ್ಯ ಸಂಧಾನ ಸಭೆ: ರಾಜೀನಾಮೆ ಹಿಂಪಡೆಯೋ ವಿಚಾರ ಮಾತ್ರ ಸಸ್ಪೆನ್ಸ್! – Kannada News

ಮಧ್ಯರಾತ್ರಿ ಡಿಕೆಶಿ-ರಾಮಲಿಂಗಾ ರೆಡ್ಡಿ 2.5 ಗಂಟೆ ರಹಸ್ಯ ಸಂಧಾನ ಸಭೆImage Credit source: tv9

ಬೆಂಗಳೂರು, ಜೂನ್ 6: ಖಾತೆ ಹಂಚಿಕೆ ಅಸಮಾಧಾನದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ನೀಡಿದ್ದ ದಿಢೀರ್ ರಾಜೀನಾಮೆ ಪರ್ವ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ, ಶುಕ್ರವಾರ ತಡರಾತ್ರಿ ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹಾಗೂ ರಾಮಲಿಂಗಾ ರೆಡ್ಡಿ ಸತತ ಎರಡೂವರೆ ಗಂಟೆಗಳ ಕಾಲ ಸುದೀರ್ಘ ಸಂಧಾನ ಮಾತುಕತೆ ನಡೆಸಿದ್ದಾರೆ.

ಮುಖ್ಯಾಂಶಗಳು

  • ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಮಧ್ಯರಾತ್ರಿ ಮಾತುಕತೆ.
  • 11 ರಿಂದ 1:30ರ ವರೆಗೆ ಮುಖ್ಯಮಂತ್ರಿ ಸುದೀರ್ಘ ಸಂಧಾನ ಸಭೆ.
  • ಇದು ನಮ್ಮ ಫ್ಯಾಮಿಲಿ ಮ್ಯಾಟರ್, ಎಲ್ಲಾ ಸಮಸ್ಯೆ ನಿವಾರಣೆಯಾಗಿದೆ ಎಂದ ನಾಯಕರು.

ಕೊಟ್ಟ ಮಾತು ಮತ್ತು ಮಧ್ಯರಾತ್ರಿಯ ಹೈಡ್ರಾಮಾ

‘ಕೊಟ್ಟರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಿ, ಇಲ್ಲದಿದ್ದರೆ ಸಚಿವ ಸ್ಥಾನವೇ ಬೇಡ’ ಎಂದು ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ, ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. 2023ರಲ್ಲೇ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ (ಡಿಕೆ ಬ್ರದರ್ಸ್) ಮನೆಗೆ ಬಂದು ಬೆಂಗಳೂರು ಅಭಿವೃದ್ಧಿ ಖಾತೆಯ ಭರವಸೆ ನೀಡಿದ್ದರು ಎಂದು ರೆಡ್ಡಿ ಬಹಿರಂಗಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ ಡಿಕೆಶಿ, ‘ಮಾತು ಕೊಟ್ಟಿದ್ದು ನಿಜ, ಆದರೆ ಖಾತೆ ಬದಲಾವಣೆ ವಿಚಾರವನ್ನು ಹೈಕಮಾಂಡ್ ನಿರ್ಧರಿಸಬೇಕು’ ಎನ್ನುತ್ತಲೇ ರಾಮಲಿಂಗಾ ರೆಡ್ಡಿ ಅವರ ಮನವೊಲಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಬಿಟಿಎಂ ಲೇಔಟ್ ಹಾಗೂ ಜಯನಗರದ ಹಿರಿಯ ಆಪ್ತ ಮುಖಂಡರ ಮೂಲಕವೂ ಮನವೊಲಿಕೆಗೆ ಯತ್ನಿಸಲಾಗಿತ್ತು.

‘ಎಲ್ಲವೂ ನಿವಾರಣೆಯಾಗಿದೆ’: ರಹಸ್ಯ ಕಾಯ್ದುಕೊಂಡ ನಾಯಕರು

ಮಧ್ಯರಾತ್ರಿ 1:30ರ ಸುಮಾರಿಗೆ ಮಾತುಕತೆ ಮುಗಿಸಿ ಹೊರಬಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯಾವುದೇ ಆತಂಕ ಬೇಡ, ನಾವೆಲ್ಲಾ ಹಳೆಯ ಸ್ನೇಹಿತರು. ಕೂತು ಮಾತನಾಡಿ ಎಲ್ಲವನ್ನೂ ಬಗೆಹರಿಸಿಕೊಂಡಿದ್ದೇವೆ ಎಂದರು. ರಾಜೀನಾಮೆ ವಾಪಸ್ ಪಡೆದಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಿಮಗೆ ಎಲ್ಲವನ್ನೂ ಹೇಳಬೇಕಾಗಿಲ್ಲ’ ಎಂದರು. ಇತ್ತ ಸಚಿವ ರಾಮಲಿಂಗಾ ರೆಡ್ಡಿ ಕೂಡ ಸಿಎಂ ಧಾಟಿಯಲ್ಲೇ ಉತ್ತರಿಸಿ, ‘ಮುಖ್ಯಮಂತ್ರಿಗಳು ಏನು ಹೇಳಿದ್ದಾರೋ ಅದನ್ನೇ ನಾನು ಹೇಳುವುದು. ಎಲ್ಲ ಗೊಂದಲಗಳು ನಿವಾರಣೆಯಾಗಿವೆ’ ಎಂದು ಹೇಳಿ ಕಾರು ಹತ್ತಿ ನಿರ್ಗಮಿಸಿದರು.

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೊಸ ಬಾಂಬ್: ‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ

ಮತ್ತೊಂದೆಡೆ, ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದಲ್ಲಿ ಇನ್ನೂ ಮೂವರಿಗೆ ಅಸಮಾಧಾನವಿದೆ ಎಂದು ಭವಿಷ್ಯ ನುಡಿದಿದ್ದರೆ, ಮತ್ತೊಂದೆಡೆ ಎಚ್.ಕೆ. ಪಾಟೀಲ್ ಈ ಬೆಳವಣಿಗೆಯನ್ನು ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಎಂದಿದ್ದಾರೆ. ಈ ಎಲ್ಲಾ ಹೈಡ್ರಾಮಾಗಳ ನಡುವೆ, ಮಧ್ಯರಾತ್ರಿಯ ಸಂಧಾನವು ಸಫಲವಾಗಿದೆಯೇ ಮತ್ತು ರಾಮಲಿಂಗಾ ರೆಡ್ಡಿ ಅಧಿಕೃತವಾಗಿ ರಾಜೀನಾಮೆ ವಾಪಸ್ ಪಡೆಯಲಿದ್ದಾರೆಯೇ ಎಂಬ ಕುರಿತ ಸಸ್ಪೆನ್ಸ್ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಜೂನ್ ತಿಂಗಳ ಈ ದಿನದಂದು ವಾಹನ ಖರೀದಿ ಮಾಡಿದರೆ ಶುಭ! – Kannada News

ಟಿವಿ9 ಕನ್ನಡ ಡಿಜಿಟಲ್​ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಈ ದಿನದಂದು ವಾಹನ ಖರೀದಿ ಮಾಡಿದರೆ ಶುಭ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ.ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಯೋಗ್ಯತೆಗೆ ತಕ್ಕಂತೆ ಒಂದು ವಾಹನ ಹೊಂದುವ ಆಸೆ ಇರುತ್ತದೆ. ಆದರೆ, ವಾಹನ ಖರೀದಿಸುವಾಗ ಶುಭ ಮುಹೂರ್ತದ ಬಗ್ಗೆ ಸಾಮಾನ್ಯವಾಗಿ ಜನರಲ್ಲಿ ಅನೇಕ ಅನುಮಾನಗಳು ಇರುತ್ತವೆ. ವಿಶೇಷವಾಗಿ ಜೂನ್ ಮಾಸದಲ್ಲಿ ಅಧಿಕ ಜೇಷ್ಠ ಮಾಸ ಇರುವ ಕಾರಣ, ಈ ಸಮಯದಲ್ಲಿ ವಾಹನ ಖರೀದಿಸಬಹುದೇ ಎಂಬ ಪ್ರಶ್ನೆ ಮೂಡುತ್ತದೆ. ಜೂನ್ 17, ಜೂನ್ 24 ಮತ್ತು ಜೂನ್ 27ನೇ ತಾರೀಕಿನಂದು ನೀವು ವಾಹನ ಖರೀದಿಸಬಹುದೆಂದು ಗುರೂಜಿ ತಿಳಿಸಿದ್ದಾರೆ.

 

 

 

 

Source link

Horoscope Today: ಇಂದು ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಶುಭಸುದ್ದಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಜೂನ್ 06, ಶನಿವಾರದ ದೈನಂದಿನ ರಾಶಿ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಅಧಿಕ ಜೇಷ್ಠ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಷಷ್ಠಿ ತಿಥಿ, ಐಂದ್ರ ಯೋಗ, ಗರಜ ಕರಣ ಮತ್ತು ಧನಿಷ್ಠಾ ನಕ್ಷತ್ರದಿಂದ ಕೂಡಿದೆ.

ರಾಹುಕಾಲವು ಬೆಳಿಗ್ಗೆ 9:05 ರಿಂದ 10:41 ರವರೆಗೆ ಇರಲಿದ್ದು, ಸರ್ವ ಸಿದ್ಧಿ, ಸಂಕಲ್ಪ ಹಾಗೂ ಶುಭಕಾಲವು ಮಧ್ಯಾಹ್ನ 1:54 ರಿಂದ 3:31 ರವರೆಗೆ ಇದೆ. ಇಂದು ಶನಿ ಭಗವಾನ್, ವೆಂಕಟೇಶ್ವರ ಮತ್ತು ಹನುಮಾನ್ ದೇವರ ಆಶೀರ್ವಾದದ ವಿಶೇಷ ದಿನವಾಗಿದೆ. ಜೊತೆಗೆ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿಯಿದ್ದು, ಅನಾರೋಗ್ಯ ಪೀಡಿತರು, ವಿವಾಹ ವಿಷಯಗಳಲ್ಲಿನ ತಡಗಳು, ಗರ್ಭಿಣಿ ಸ್ತ್ರೀಯರು ಸುಬ್ರಹ್ಮಣ್ಯನ ಆರಾಧನೆಯಿಂದ ಶುಭಫಲ ಪಡೆಯುವರು.ಎಂದು ಅವರು ತಿಳಿಸಿದ್ದಾರೆ.

Source link

ದಿನ ಭವಿಷ್ಯ: ಈ ರಾಶಿಯವರು ಇಂದು ಅನ್ಯರ ವಶದಿಂದ ಹೊರಬರುವರು – Kannada News

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಬ್ರಹ್ಮ, ಕರಣ : ವಣಿಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:10 – 10:46, ಯಮಗಂಡ ಕಾಲ 13:59 – 15:37, ಗುಳಿಕ ಕಾಲ 06:56 – 07:33.

ಮೇಷ ರಾಶಿ: ಮನೆಯವರ ಜವಾಬ್ದಾರಿಯು ಹೆಚ್ಚಿನ ಒತ್ತಡ ತರುವ ಸಾಧ್ಯತೆ ಇದೆ. ಪ್ರೀತಿಯ ಅಭಿವ್ಯಕ್ತಿಯು ಸಂಬಂಧಗಳಲ್ಲಿ ಸ್ಪಷ್ಟತೆಯನ್ನು ತಂದೀತು. ಮನಸ್ಸಿನಲ್ಲಿ ದೈವಭಕ್ತಿ ಮೂಡಬಹುದು. ವಿಶೇಷ ಭೋಜನವು ನಿಮ್ಮ ಆರೋಗ್ಯಕ್ಕೆ ತೊಂದರೆಕೊಡುವುದು. ಮನೆಗೆ ಬರುವ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಮಾನಸಿಕವಾಗಿ ಉತ್ಸಾಹವು ಕಡಿಮೆ ಇರುವುದು.

ವೃಷಭ ರಾಶಿ: ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು‌. ಮನಸ್ಸಿನಿಂದ ಬಂದ ಮಾತುಗಳು ಸಂಬಂಧವನ್ನು ಬಲಪಡಿಸುತ್ತವೆ. ಹೊಸದಾಗಿ ಉಂಟಾದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ವೈಯಕ್ತಿಕ ಚಿಂತನೆಗಳಿಗೆ ಅವಕಾಶ ಕೊಡಿ. ಮನಸ್ಸಿನಲ್ಲಿ ನೆಲೆಸಿರುವ ಗೊಂದಲಗಳು ಸಮಾಧಾನವಾಗಬಹುದು. ಕಾನೂನಿನ ಹೋರಾಟದಲ್ಲಿ ಜಯ ಗಳಿಸುವಿರಿ. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ಭೂಮಿಯ ವ್ಯವಹಾರವನ್ನು ಒಬ್ಬೊಂಟಿಯಾಗಿ ನಿರ್ವಹಿಸುವಿರಿ.

ಮಿಥುನ ರಾಶಿ: ಶೈಕ್ಷಣಿಕವಾದ ಪ್ರಗತಿಯನ್ನು ಸಾಧಿಸಬೇಕಾಗಬಹಿದು. ಪ್ರೀತಿಯಲ್ಲಿ ನಂಬಿಕೆ ಕಡಿಮೆಯಾಗಲಿದೆ. ಕೆಲಸದಲ್ಲಿ ನಿರ್ಧಾರ ತೆಗೆದುಕೊಳ್ಳುವ ವೇಳೆ ದಿಟ್ಟತನ ಇರಲಿ. ನಿಮ್ಮ ಆದರ್ಶಗಳು ಇತರರಿಗೆ ಪ್ರೇರಣೆಯಾಗಲಿದೆ. ಧೈರ್ಯವು ಯಶಸ್ಸಿಗೆ ದಾರಿ ತೋರುತ್ತದೆ. ಕೆಲವರು ನಿಮ್ಮ ಸಹಾಯವನ್ನು ಅಪೇಕ್ಷಿಸುತ್ತಿದ್ದಾರೆ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಶಾಶ್ವತ ಪರಿಹಾರದಿಂದ ಮರೆಯರಾಗುತ್ತದೆ. ಸಕಾರಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ.‌

ಕರ್ಕಾಟಕ ರಾಶಿ: ಮಕ್ಕಳಿಂದ ಮಾನಸಿಕ ಹಿಂಸೆ ಆರಂಭವಾಗಲಿದೆ. ನಿಮ್ಮ ಹಳೆಯ ಹಣವು ಕೈಸೇರಬಹುದು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ಗೊಂದಲದಿಂದ ದೂರವಿರುವ ಪ್ರಯತ್ನ ಮಾಡಿ. ಮನಸ್ಸಿಗೆ ಶಾಂತಿ ತರಲು ಸಂಗೀತ ಅಥವಾ ಸಾಹಿತ್ಯ ಸಹಕಾರಿ. ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಿ. ವಿವಾಹದ ಮಾತುಕತೆಗಳನ್ನು ನಡೆಸಲು ದೂರದ ಊರಿಗೆ ಪ್ರಯಾಣ ಮಾಡುವಿರಿ.

ಸಿಂಹ ರಾಶಿ: ಸಣ್ಣ ಪುಟ್ಟ ವಿಷಯಗಳಿಗೂ ಕೋಪಗೊಳ್ಳುವಿರಿ. ಪರರ ಬಿಕ್ಕಟ್ಟಿಗೆ ನೀವು ಪರಿಹಾರವಾಗಬಹುದು. ನಿಮಗೆ ಕಷ್ಟವಾದರೆ ಯಾರಿಲ್ಲ. ನಿಮ್ಮ ಪರಿಶ್ರಮ ಇಂದು ಗಮನ ಸೆಳೆಯಲಿದೆ. ಆತ್ಮಪರಿಶೀಲನೆಗೆ ಈ ದಿನ ಅನುಕೂಲ. ಸಂಬಂಧಗಳನ್ನು ಹೂಡಿಕೆ ಎಂದು ಪರಿಗಣಿಸಿ, ನೆನೆಪಾದ ಹಳೆಯ ಸ್ನೇಹಿತರಿಂದ ಸಹಾಯ ಬರಬಹುದು. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು. ಮುಜುಗರವೂ ನಿಮಗೆ ಆದೀತು. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು.

ಕನ್ಯಾ ರಾಶಿ: ನಿಮ್ಮ ಜೀವನವನ್ನು ನೀವೇ ಲಘುವಾಗಿ ಕಾಣುವುದು ಬೇಡ. ಬಲಾಢ್ಯರ ಜೊತೆ ವೈರ ಕಾಣಿಸಿಕೊಳ್ಳುವುದು. ನಿಮ್ಮ ಮಾನಸಿಕ ಸ್ಥಿತಿ ಬಲಾಢ್ಯವಾಗಿರಲಿ. ಸ್ನೇಹಿತರ ಸಲಹೆಗಳಿಂದ ಹೊಸ ಆಯ್ಕೆಗಳನ್ನು ಪರಿಶೀಲಿಸಬಹುದು. ಪ್ರೀತಿಯ ಸಂಬಂಧದಲ್ಲಿ ನಂಬಿಕೆ ತುಂಬಬೇಕು. ನಿರ್ಧಾರಗಳ ಕುರಿತು ಧೈರ್ಯವಿಟ್ಟು ನಿಲ್ಲಿ. ನಿಮ್ಮ ಆಂತರಿಕ ಶಕ್ತಿಯ ಮೇಲೆ ನಂಬಿಕೆ ಇಡಿ. ವ್ಯವಹಾರದಲ್ಲಿ ಲಾಭದ ಸೂಚನೆಗಳಿವೆ. ನಿಮ್ಮ ಆದಾಯವು ಮೊದಲಿಗಿಂತ ಉತ್ತಮವಾಗಿದ್ದು ಅದನ್ನು ಒಂದು ಕಡೆ ಸ್ಥಿರವಾಗಿಸಿಕೊಳ್ಳಿ.

ತುಲಾ ರಾಶಿ: ಒತ್ತಡದಲ್ಲಿದ್ದಾಗ ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ಮನಸ್ಸಿನ ಶಕ್ತಿ ದ್ವಿಗಣವಾಗುವುದು. ನಕಾರಾತ್ಮಕತೆ ಆಲೋಚನೆಗಳೂ ದೂರವಾಗುವುದು. ಕೆಲವರು ನಿಮ್ಮ ಉಪದೇಶವನ್ನು ಎಲ್ಲರೂ ಮೆಚ್ಚಬಹುದು. ಕುಟುಂಬದ ಸಹಕಾರದಿಂದ ಸಾಧನೆ ಸುಲಭವಾಗುತ್ತದೆ. ಹೊಸ ತಂತ್ರಗಳನ್ನು ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು.

ವೃಶ್ಚಿಕ ರಾಶಿ: ದೂರಪ್ರಯಾಣ ಸುಖಕರವಾಗಿ ಇರುವಿದಾದರೂ ಅನಂತರ ಕಷ್ಟಪಡಬೇಕಾದೀತು. ಯಾರನ್ನೋ ಅವಮಾನಿಸಲು ಹೋಗಿ ಹಳ್ಳಕ್ಕೆ ಬೀಳಬೇಡಿ. ಪ್ರೀತಿಯಿಂದ ಮಾಡಿದ ಕೆಲಸ ಫಲ ನೀಡುತ್ತದೆ. ನಿನ್ನೆ ವಿಫಲವಾದದ್ದನ್ನು ಪುನಃ ಪ್ರಯತ್ನಿಸಿ ಯಶಸ್ಸು ಇಂದು ನಿಮ್ಮದಾಗಬಹುದು. ಮನಸ್ಸು ಉದ್ವಿಗ್ನವಾಗಿದ್ದರೂ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಕಾದಾಟದಿಂದ ಸಮಯವು ವ್ಯರ್ಥವಾಗಲಿದೆ.

ಧನು ರಾಶಿ: ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ನಿಜವಾದ ಸ್ನೇಹಿತರು ನಿಮ್ಮೊಂದಿಗೆ ತಾಳ್ಮೆಯಿಂದ ಇರುತ್ತಾರೆ. ಮನೆಯ ವಿಷಯಗಳಲ್ಲಿ ಜಾಗರೂಕತೆಯ ಅಗತ್ಯವಿದೆ. ನಿಮ್ಮ ಉತ್ಕೃಷ್ಟತೆ ಮಿಂಚಲು ಅವಕಾಶ ದೊರೆಯುತ್ತದೆ. ಸಂಗಾತಿಯ ಜೊತೆ ಸಾಂತ್ವನದ ಮಾತುಗಳು ಸಂಬಂಧ ಬಲಪಡಿಸುತ್ತವೆ. ಸ್ಪರ್ಧೆಯ ವಿಷಯದಲ್ಲಿ ಮುನ್ನುಗ್ಗುವ ಸ್ವಭಾವವು ಇರಲಿದೆ. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ.

ಮಕರ ರಾಶಿ: ನಿಮ್ಮನ್ನು ಗಮನಿಸುವವರು ಹತ್ತಾರು ಮಂದಿಯಿರುತ್ತಾರೆ. ಅವರೇನೇ ಹೇಳಿದರೂ ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಮೌನದಿಂದ ನೀವು ಕೆಲಸವನ್ನು ಸಾಧಿಸಿಕೊಳ್ಳುವಿರಿ ಧೈರ್ಯದಿಂದ ನಿಂತು, ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ. ಬುದ್ಧಿವಂತಿಕೆಯೊಂದಿಗೆ ಸಮಸ್ಯೆಗಳಿಗೆ ಪರಿಹಾರ ಹುಡುಕಿ. ಕೆಲವು ಸಮಸ್ಯೆಗಳು ಮರುಕಳಿಸುತ್ತವೆ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ.

ಕುಂಭ ರಾಶಿ: ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಸ್ನೇಹಿತರ ಮಾತುಗಳ ಹಿಂದಿನ ವ್ಯಂಗ್ಯಾರ್ಥವನ್ನು ಹುಡುಕಲು ಯತ್ನಿಸುವಿರಿ. ಮನೆಯ ತೊಡಕುಗಳನ್ನು ಧೈರ್ಯದಿಂದ ಎದುರಿಸಬೇಕು. ವೈಯಕ್ತಿಕ ಬದ್ಧತೆಗಳು ಬಲವಾದ ನಂಬಿಕೆಯನ್ನು ಹುಟ್ಟುಹಾಕುತ್ತವೆ. ಕೆಲಸದಲ್ಲಿ ಜವಾಬ್ದಾರಿ ಬದಲಾಗಬಹುದು. ಆತ್ಮೀಯ ಸ್ನೇಹಿತರ ಒಡನಾಟ ಮನದ ಸಂತೋಷವನ್ನು ಹೆಚ್ಚಿಸುತ್ತದೆ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ.

ಮೀನ ರಾಶಿ: ಪಾಲುಗಾರಿಕೆಯ ವ್ಯವಹಾರದಲ್ಲಿ ತೊಡಗಿಸಿದ್ದ ಹಣವನ್ನು ಮರಳಿ ಪಡೆಯುವಿರಿ. ಹೊಸ ಪ್ರಸ್ತಾವನೆಗಳನ್ನು ಪಾಲುದಾರರ ಮುಂದೆ ಇಡಬೇಡಿ. ನಿಮ್ಮೊಳಗಿನ ಶಾಂತಿಯೇ ನಿಮ್ಮ ಉತ್ತಮ ಸ್ನೇಹಿತನಾಗಲಿದೆ. ತಾತ್ವಿಕ ಚಿಂತನೆಗಳು ಇಂದು ನಿಮಗೆ ದಾರಿದೀಪವಾಗುತ್ತದೆ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಾಟದಿಂದ ನೀವು ಸಿಟ್ಟಾಗುವಿರಿ.

ಲೋಹಿತ್ ಹೆಬ್ಬಾರ್-8762924271 (what’s app only)

Source link

ಫುಟ್​​ಬಾಲ್ ವಿಶ್ವಕಪ್​​ನಲ್ಲೂ ‘ರಾಮಾಯಣ’, ಇದು ಸಾಮಾನ್ಯ ಸಾಹಸ ಅಲ್ಲ

ಪುಟ್ಬಾಲ್ (Footbal world cup) ವಿಶ್ವಕಪ್, ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜನ ಒಂದೇ ಬಾರಿಗೆ ನೋಡುವ ಕ್ರೀಡಾಕೂಟ. ಇತ್ತೀಚೆಗೆ ಮುಕ್ತಾಯವಾಗಿ ಐಪಿಎಲ್ ಅನ್ನು ಒಂದು ಬಾರಿ ಹಾಟ್​​ಸ್ಟಾರ್​​ನಲ್ಲಿ ಸುಮಾರು 55 ಕೋಟಿ ಜನ ವೀಕ್ಷಿಸಿದ್ದು, ಅದು ಈ ವರೆಗಿನ ದಾಖಲೆ ಎಂದಾಗಿತ್ತು. ಆದರೆ ಫುಟ್​​ಬಾಲ್​​ನ ಒಂದು ಮ್ಯಾಚನ್ನು ಒಂದೇ ಬಾರಿಗೆ ಸುಮಾರು 100 ಕೋಟಿಗೂ ಹೆಚ್ಚು ಜನ ವೀಕ್ಷಿಸುತ್ತಾರೆ. ಐಪಿಎಲ್​​ ಕ್ರೀಡಾಕೂಟದ ಒಟ್ಟು ಖರ್ಚು, ಆಟಗಾರರ ಸಂಬಳವನ್ನೂ ಸೇರಿಸಿ ಗರಿಷ್ಠ ಎಂದರೆ 5000 ಕೋಟಿ ಆಗಿರಬಹದು. ಫಿಫಾ 2026ರ ಒಟ್ಟು ಖರ್ಚು 35 ಸಾವಿರ ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. ಇಂಥಹಾ ವಿಶ್ವ ಜನಪ್ರಿಯ ಕ್ರೀಡಾಕೂಟದ ನಡುವಲ್ಲಿ ಭಾರತದ ಸಿನಿಮಾ ‘ರಾಮಾಯಣ’ದ ಗ್ಲಿಂಪ್ಸ್ ಪ್ರದರ್ಶನ ಆಗಲಿದೆ.

ಹೌದು, ಈ ಬಾರಿಯ ಫೀಫಾ 2026 ಪಂದ್ಯಾವಳಿಯ ಪಂದ್ಯಗಳ ನಡುವೆ ಭಾರತದ ಸಿನಿಮಾ ‘ರಾಮಾಯಣ’ದ ಗ್ಲಿಂಪ್ಸ್ ಪ್ರಸಾರ ಆಗಲಿದೆ. ಆ ಮೂಲಕ ‘ರಾಮಾಯಣ’ ಚಿತ್ರತಂಡ ಹಿಂದೆಂದೂ ಯಾವ ಭಾರತೀಯ ಸಿನಿಮಾ ಮಾಡಿರದ ಪ್ರಚಾರ ಸಾಹಸವನ್ನು ಮಾಡಲು ಮುಂದಾಗಿದೆ. ಕೆಲ ವಾರಗಳ ಹಿಂದಷ್ಟೆ ಅಮೆರಿಕದ ಪ್ರತಿಷ್ಟಿತ ಕಾಮಿಕಾನ್​​ನಲ್ಲಿ ‘ರಾಮಾಯಣ’ದ ಅದ್ಧೂರಿ ಪ್ರಚಾರ ಮಾಡಲಾಗಿತ್ತು. ಈಗ ನೇರವಾಗಿ ವಿಶ್ವದ ಅತ್ಯಂತ ದುಬಾರಿ, ಅತಿ ಹೆಚ್ಚು ಜನರು ನೋಡುವ ಇವೆಂಟ್​​ ನಲ್ಲಿ ಪ್ರಚಾರ ಮಾಡಲು ಮುಂದಾಗಿದೆ.

ಫುಟ್​​ಬಾಲ್ ವಿಶ್ವಕಪ್ ಅತ್ಯಂತ ದುಬಾರಿ ಕ್ರೀಡಾಕೂಟ ಆಗಿರುವ ಕಾರಣ ಇಲ್ಲಿ ಜಾಹೀರಾತಿಗೆ ಅವಕಾಶ ಪಡೆಯಲು ಸಹ ಭಾರಿ ಮೊತ್ತದ ಹಣವನ್ನೇ ಖರ್ಚು ಮಾಡಬೇಕಾಗುತ್ತದೆ. ಹಾಗಿದ್ದಲ್ಲಿಯೂ ‘ರಾಮಾಯಣ’ ಚಿತ್ರತಂಡ ಫುಟ್​​ಬಾಲ್ ಪಂದ್ಯದ ನಡುವೆ ಸಿನಿಮಾದ 20 ರಿಂದ 30 ಸೆಕೆಂಡುಗಳ ದೃಶ್ಯವನ್ನು ಪ್ರದರ್ಶಿಸಲು ಮುಂದಾಗಿದೆ. ಇದು ದೊಡ್ಡ ಖರ್ಚಿನ ಬಾಬತ್ತಾಗಲಿದೆ.

ಇದನ್ನೂ ಓದಿ:ಮ್ಯಾಂಗೋ ಪಚ್ಚ ಸಿನಿಮಾದಲ್ಲಿ ಮಿಂಚಿದ ಕಾಜಲ್ ಕುಂದರ್

‘ರಾಮಾಯಣ’ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಮತ್ತು ಯಶ್ ಅವರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅವರು ನಟಿಸಿದ್ದಾರೆ. ಸಿನಿಮಾವನ್ನು ‘ದಂಗಲ್’ ಖ್ಯಾತಿಯ ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇದೇ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತ್ರಿಕೋನ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಿದ ಭಾರತ ಎ ತಂಡ; ವೈಭವ್ ಹಿಂದೆ ಬಿದ್ದ ಫ್ಯಾನ್ಸ್ – Kannada News

ಒಂದೆಡೆ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರೆ, ಇನ್ನೊಂದೆಡೆ ತಿಲಕ್ ವರ್ಮಾ (Tilak Varma) ನೇತೃತ್ವದ ಭಾರತ ಎ ತಂಡ (India A squad) ತ್ರಿಕೋನ ಸರಣಿಗಾಗಿ ಶ್ರೀಲಂಕಾಗೆ ತೆರಳಿದೆ. ಭಾರತ, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವೆ ಏಕದಿನ ತ್ರಿಕೋನ ಸರಣಿ (Tri-nation series) ನಡೆಯಲಿದೆ. ಈ ಸರಣಿಗಾಗಿ ಬಿಸಿಸಿಐ ಈಗಾಗಲೇ ಭಾರತ ಎ ತಂಡವನ್ನು ಸಹ ಪ್ರಕಟಿಸಿದೆ. ಜೂನ್ 9 ರಿಂದ ಪ್ರಾರಂಭವಾಗಲಿರುವ ತ್ರಿಕೋನ ಸರಣಿಗಾಗಿ ಭಾರತ ಯುವ ಪಡೆ ಇಂದು ಭಾರತದಿಂದ ಶ್ರೀಲಂಕಾಗೆ ತೆರಳಿದೆ ತಂಡದ ಆಟಗಾರರು ಜೊತೆಯಾಗಿ ಶ್ರೀಲಂಕಾಗೆ ಪ್ರಯಾಣಿಸಿರುವ ಫೋಟೋಗಳನ್ನು ಬಿಸಿಸಿಐ ಹಂಚಿಕೊಂಡಿದೆ.

ತಿಲಕ್ ನಾಯಕ, ಪರಾಗ್ ಉಪನಾಯಕ

ಮೇಲೆ ಹೇಳಿದಂತೆ ಈ ಸರಣಿಗೆ ತಿಲಕ್ ವರ್ಮಾ ಅವರನ್ನು ಭಾರತ ಎ ತಂಡದ ನಾಯಕರನ್ನಾಗಿ ನೇಮಿಸಲಾಗಿದ್ದು, ರಿಯಾನ್ ಪರಾಗ್​ಗೆ ಉಪನಾಯಕತ್ವ ನೀಡಲಾಗಿದೆ. ಈ ಸರಣಿಯ ನಂತರ ಭಾರತ ಎ, ಶ್ರೀಲಂಕಾ ಎ ವಿರುದ್ಧ ಎರಡು ಬಹು-ದಿನದ (ರೆಡ್-ಬಾಲ್) ಪಂದ್ಯಗಳನ್ನು ಸಹ ಆಡಲಿದೆ. ಈ ಟೆಸ್ಟ್ ಪಂದ್ಯಗಳಿಗೆ ತಂಡವನ್ನು ನಂತರ ಪ್ರಕಟಿಸಲಾಗುವುದು. ತ್ರಿಕೋನ ಸರಣಿಯು ಜೂನ್ 9 ರಂದು ಪ್ರಾರಂಭವಾಗಲಿದ್ದು, ಜೂನ್ 21 ರಂದು ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿದ್ದು, ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಏಕದಿನ ತ್ರಿಕೋನ ಸರಣಿ ವೇಳಾಪಟ್ಟಿ

  • ಜೂನ್ 9: ಭಾರತ ಎ vs ಶ್ರೀಲಂಕಾ ಎ
  • ಜೂನ್ 11: ಭಾರತ ಎ vs ಅಫ್ಘಾನಿಸ್ತಾನ ಎ
  • ಜೂನ್ 13: ಅಫ್ಘಾನಿಸ್ತಾನ ಎ ವಿರುದ್ಧ ಶ್ರೀಲಂಕಾ ಎ
  • ಜೂನ್ 15: ಭಾರತ ಎ vs ಶ್ರೀಲಂಕಾ ಎ
  • ಜೂನ್ 17: ಭಾರತ ಎ vs ಅಫ್ಘಾನಿಸ್ತಾನ ಎ
  • ಜೂನ್ 19: ಅಫ್ಘಾನಿಸ್ತಾನ ಎ ವಿರುದ್ಧ ಶ್ರೀಲಂಕಾ ಎ
  • ಜೂನ್ 21: ಫೈನಲ್ ಪಂದ್ಯ

ಶ್ರೀಲಂಕಾದಲ್ಲಿ ವೈಭವ್ ಕ್ರೇಜ್ ಹೇಗಿದೆ ನೋಡಿ

ಏಕದಿನ ತ್ರಿಕೋನ ಸರಣಿಗೆ ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ಉಪನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶೆಡ್ಗೆ, ಪ್ರಭುಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಜ್ ನಿಗಮ್, ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅಂಶುಲ್ ಕಾಂಬೋಜ್, ಅರ್ಷದ್ ಖಾನ್, ಅನುಕೂಲ್ ರಾಯ್.

Source link

ಸುದೀಪ್ ಅಕ್ಕನ ಮಗನ ಸಿನಿಮಾನಲ್ಲಿ, ಶ್ರೀಮುರಳಿ ಅಕ್ಕನ ಮಗ

ಸುದೀಪ್ (Sudeep) ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೊ ಪಚ್ಚ’ ಸಿನಿಮಾ ಇಂದು (ಜೂನ್ 4) ಬಿಡುಗಡೆ ಆಗಿದೆ. ಸಿನಿಮಾಕ್ಕೆ ನಟ ಸುದೀಪ್ ಅವರು ಸಿನಿಮಾಕ್ಕೆ ಬೆಂಬಲ ನೀಡಿದ್ದು, ಸಿನಿಮಾಕ್ಕೆ ಸುದೀಪ್ ಅವರ ಪತ್ನಿ ಮತ್ತು ಮಗಳು ಬಂಡವಾಳ ಹೂಡಿದ್ದರು. ವಿಶೇಷವೆಂದರೆ ಇದೇ ಸಿನಿಮಾನಲ್ಲಿ ನಟ ಶ್ರೀಮುರಳಿ ಅವರ ಅಕ್ಕನ ಮಗ ಜೈ ಸಹ ನಟಿಸಿದ್ದಾರೆ. ಅವರಿಗೂ ಇದು ಮೊದಲ ಸಿನಿಮಾ ಅಂತೆ. ತಮ್ಮ ಹಾಗೂ ಸಂಚಿತ್ ಸಂಗೀವ್ ನಡುವಿನ ಬಾಂಧವ್ಯದ ಬಗ್ಗೆ ಜೈ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಮಾಡಲು ಬಿಡಲ್ಲ: ವಾಟಾಳ್ ಕ್ಯಾತೆ – Kannada News

ಪ್ಯಾನ್ ಇಂಡಿಯಾ (Pan India) ಜಮಾನಾನಲ್ಲಿ ಒಂದು ರಾಜ್ಯದ ಸಿನಿಮಾ ಮತ್ತೊಂದು ರಾಜ್ಯದಲ್ಲಿ ಬಿಡುಗಡೆ ಆಗುವುದು ಸಾಮಾನ್ಯ ವಿಷಯ ಎಂದಾಗಿದೆ. ಕರ್ನಾಟಕವಂತೂ ಪ್ಯಾನ್ ಇಂಡಿಯಾ ಮಾರುಕಟ್ಟೆಯ ಬಲು ಪ್ರಮುಖ ನಗರವಾಗಿದೆ. ಐಪಿಎಲ್ ಮುಗಿದಿದ್ದು, ಸಾಲು-ಸಾಲು ಸಿನಿಮಾಗಳು ಬಿಡುಗಡೆಗೆ ತಯಾರಾಗುತ್ತಿವೆ. ಅವುಗಳಲ್ಲಿ ಕೆವಿಎನ್ ನಿರ್ಮಾಣದ ತಮಿಳುನಾಡಿ ಸಿಎಂ ವಿಜಯ್ ನಟನೆಯ ‘ಜನ ನಾಯಗನ್’ ಸಹ ಒಂದು. ಆದರೆ ಇದೀಗ ಕನ್ನಡಪರ ಸಂಘಟನೆಗಳ ಮುಖಂಡ ವಾಟಾಳ್ ನಾಗರಾಜ್ ಮಾತನಾಡಿ, ತಾವು ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಬಿಡುಗಡೆಗೆ ತಡೆಯುತ್ತೇವೆ ಎಂದಿದ್ದಾರೆ.

ಇಂದು (ಜೂನ್ 05) ಮಾಧ್ಯಮಗಳ ಜೊತೆಗೆ ಮಾತನಾಡಿದ ವಾಟಾಳ್ ನಾಗರಾಜ್, ‘ಈಗಿನ ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ನಟರಾಗಿದ್ದವರು ಈಗ ಅಧಿಕಾರಕ್ಕೆ ಬಂದಿದ್ದಾರೆ. ನಟನೆ ಮಾಡುವುದು ಸುಲಭ ಆದರೆ ಅಧಿಕಾರ ನಡೆಸುವುದು ಕಷ್ಟ. ಮೇಕೆದಾಟಿಗೆ ವಿರೋಧ ಮಾಡಿದರೆ ಕರ್ನಾಟಕದಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ’ ಎಂದು ವಾಟಾಳ್ ಹೇಳಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಪಾತ್ರದ ಬಗ್ಗೆ ಟೀಕೆ ಏಕೆ?

ಈಗಾಗಲೇ ಕಮಲ್ ಹಾಸನ್ ಅವರ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಆಗದಂತೆ ತಡೆಯಲು ಯಶಸ್ವಿ ಆಗಿದ್ದೇವೆ. ಕಮಲ್ ಹಾಸನ್, ಕನ್ನಡದ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದನ್ನು ವಿರೋಧಿಸಿ ಅವರಿಗೆ ಬುದ್ಧೀ ಕಲಿಸಿದ್ದೇವೆ. ಅದೇ ರೀತಿ, ಮೇಕೆದಾಟಿಗೆ ವಿರೋಧ ಮಾಡುತ್ತಿರುವ ತಮಿಳುನಾಡು ಸಿಎಂ ಅವರಿಗೂ ನಾವು ಬುದ್ಧಿ ಕಲಿಸುತ್ತೇವೆ’ ಎಂದು ವಾಟಾಳ್ ಹೇಳಿದ್ದಾರೆ. ವಿಜಯ್ ಅವರು ಸಿಎಂ ಆದ ಬಳಿಕ ಮೇಕೆದಾಟು ವಿವಾದದ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ಪುನರ್​​ಪರಿಶೀಲನೆ ಅರ್ಜಿ ಹಾಕಿದ್ದಾರೆ. ಅಲ್ಲದೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆದಾಗ ಮೇಕೆದಾಟು ಬಗ್ಗೆ ಪ್ರಸ್ತಾಪಿಸಿದ್ದು, ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ಈ ಕರ್ನಾಟಕ ವಿರೋಧಿ ಚಿಂತನೆ ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ.

ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಜನವರಿಯಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಕೆವಿಎನ್ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಿದೆ. ಒಂದೊಮ್ಮೆ ‘ಜನ ನಾಯಗನ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗದಿದ್ದಲ್ಲಿ ನಿರ್ಮಾಪಕರಿಗೆ ಭಾರಿ ದೊಡ್ಡ ನಷ್ಟವೇ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಇಲ್ಲ: ಕಡ್ಡಿ ಮುಂರಿದಂತೆ ಹೇಳಿದ ಹೈಕಮಾಂಡ್ – Kannada News

ಬೆಂಗಳೂರು, (ಜೂನ್ 05): ಸರ್ಕಾರ ರಚನೆಯಾಗಿ ಎರಡು ದಿನವಾಯ್ತು. 48 ಗಂಟೆ ಕಳೆಯೊವಷ್ಟರಲ್ಲೇ ಅಸಮಾಧಾನದ ಬಾಂಬ್ ಸಿಡಿದಿದೆ. ಕೊಟ್ಟ ಮಾತು, Word Power is World Power ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದ ಮಾತನ್ನ ಉಲ್ಲೇಖಿಸಿ ರಾಮಲಿಂಗಾರೆಡ್ಡಿ  (DK Shivakumar)  ಬೆಂಬಲಿಗರು ರಾಂಗ್ ಆಗಿದ್ರೆ, ಇನ್ನೊಂದೆಡೆ ಬೆಂಗಳೂರಿನ ಪವರ್ ಫುಲ್ ರಾಜಕಾರಣಿ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೌದು…ಸರ್ಕಾರಕ್ಕೆ ಬಂಗಾರದ ಖಜಾನೆ, ಸರ್ಕಾರದ ಆರ್ಥಿಕತೆಯ ಪವರ್ ಹೌಸ್ ಇದೇ ಪವರ್ ಹೌಸ್‌ಗಾಗಿ ಡಿಕೆ ಸರ್ಕಾರದಲ್ಲಿ ಹಗ್ಗಜಗ್ಗಾಟ ನಡೀತಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಸಿಗುತ್ತೆಂಬ ನಿರೀಕ್ಷೆಯಲ್ಲಿದ್ದ ಸೌಮ್ಯ ಸ್ವಭಾದ ರಾಜಕಾರಣಿ, ಬೆಂಗಳೂರಲ್ಲಿ ಹಿಡಿತ ಹೊಂದಿರುವ ನಾಯಕ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದು, ನೀವು ಕೊಟ್ಟ ಜಲಸಂಪನ್ಮೂಲ ಸಚಿವ ಸ್ಥಾನ ನನಗೆ ಬೇಡ. ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಆಗಲ್ಲ ಅಂತಾ ಮಂತ್ರಿ ಸ್ಥಾನ ತೊರೆದಿದ್ದಾರೆ. ಇದರಿಂದ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಸಿಎಂ ಡಿಕೆ ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ, ಹೈಕಮಾಂಡ್ ಮಾತ್ರ ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಇಲ್ಲ ಎಂದು ಕಡ್ಡಿ ಮುಂರಿದಂತೆ ಹೇಳಿದೆ.

ಮಾತುಕತೆ ಮೂಲಕ ರಾಮಲಿಂಗಾರೆಡ್ಡಿ ಮನವೊಲಿಸುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಸೂಚನೆ ನೀಡಿದೆ. ಆದ್ರೆ, ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಮಾಡಿ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲು ಹೈಕಮಾಂಡ್ ನಿರಾಕರಿಸಿದೆ. ಯಾಕಂದ್ರೆ, ಒಬ್ಬರ ಬೇಡಿಕೆಗೆ ಸ್ಪಂದಿಸಿದರೆ ಇತರೆ ಸಚಿವರು ಸಹ ತಮ್ಮ ಖಾತೆ ಬದಲಾವಣೆ ಮಾಡುವಂತೆ ಒತ್ತಡದ ಹೇರುವ ಸಾಧ್ಯತೆಗಳಿವೆ. ಈಗ ಮಾತ್ರವಲ್ಲ ಮುಂದೆ ಸಂಪುಟ ವಿಸ್ತರಣೆ ವೇಳೆಯೂ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆಗೆ ಹೈಕಮಾಂಡ್ ಒಪ್ಪಿಗೆ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link