Daily Devotional: ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆ ಕಟ್ಟುವಾಗ ಅಡಿಪಾಯ ಯಾವ ದಿನ ಕಾಕಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯ ಪ್ರಕಾರ, ಮನೆಯ ನಿರ್ಮಾಣ ಕಾರ್ಯವನ್ನು (ಗೃಹಾರಂಭ) ಪ್ರಾರಂಭಿಸುವ ಸಮಯ ಬಹಳ ಮಹತ್ವಪೂರ್ಣವಾಗಿದೆ. ಸರಿಯಾದ ಮಾಸದಲ್ಲಿ ಗೃಹಾರಂಭ ಮಾಡಿದರೆ ಅದು ನಿರ್ವಿಘ್ನವಾಗಿ ಪೂರ್ಣಗೊಂಡು ಮನೆ ನಿವಾಸಿಗಳಿಗೆ ಶುಭ ಫಲ ನೀಡುತ್ತದೆ. ವೈಶಾಖ, ಫಾಲ್ಗುಣ, ಶ್ರಾವಣ ಮತ್ತು ಮಾಘ ಮಾಸಗಳು ಗೃಹಾರಂಭಕ್ಕೆ ಅತ್ಯಂತ ಶುಭಕರ ಎಂದು ಬಾದರಾಯಣರು ತಮ್ಮ ಗ್ರಂಥಗಳಲ್ಲಿ ಹೇಳಿದ್ದಾರೆ. ನಾರದ ಮಹರ್ಷಿಗಳು ಪುಷ್ಯ…