Category Archives: Blog

Your blog category

ನಾಳೆ ವರ್ಷದ ಮೊದಲ ಸೂರ್ಯಗ್ರಹಣ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ? – Kannada News | Solar Eclipse on 17 February: here Is What Effects on Zodiac Signs

ವರ್ಷದ ಮೊದಲ ಸೂರ್ಯಗ್ರಹಣ (Solar Eclipse) ನಾಳೆ ಅಂದರೆ ಫೆಬ್ರವರಿ 17 ರಂದು ಸಂಭವಿಸಲಿದೆ. ವರ್ಷದ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೂ ವರ್ಷದ ಮೊದಲ ಸೂರ್ಯಗ್ರಹಣವು ರಾಷ್ಟ್ರ ಮತ್ತು ಪ್ರಪಂಚದ ಮೇಲೆ ಹಾಗೂ ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಸೂರ್ಯಗ್ರಹಣವು ಮೇಷದಿಂದ ಮೀನ ರಾಶಿಯವರಿಗೆ ಯಾವ ಪರಿಣಾಮ ಬೀರುತ್ತದೆ? ಅದಕ್ಕೆ ಪರಿಹಾರವೇನು ಎನ್ನುವುದನ್ನು ತಿಳಿದುಕೊಳ್ಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್ – Kannada News | Kichcha Sudeep reveals real reason for Billa Ranga Baasha movie delay

ಕಿಚ್ಚ ಸುದೀಪ್ ಅವರು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಿಗ್ ಬಾಸ್, ಸಿಸಿಎಲ್ ಮುಗಿಯಿತು. ‘ಬಿಲ್ಲ ರಂಗ ಬಾಷ’ (Billa Ranga Baasha) ಸಿನಿಮಾ ಸೆಟ್ಟೇರುವುದು ತಡ ಆಗುತ್ತಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಸ್ವತಃ ಸುದೀಪ್ ಅವರು ವಿವರಿಸಿದ್ದಾರೆ. ‘ನಾನು ಮಾರ್ಕ್ ಸಿನಿಮಾಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದೆ. ಬಳಿಕ ಸಿಸಿಎಲ್ ನನಗೆ ಸ್ವಲ್ಪ ರಿಲೀಫ್ ನೀಡಿತು. ನಾನು ಕೂಡ ಮನುಷ್ಯ. ಸಿನಿಮಾ ಮಾಡಬೇಕು. ಆದರೆ ಯಾಂತ್ರಿಕವಾಗಿ ಸಿನಿಮಾ ಮಾಡೋಕೆ ನನ್ನಿಂದ ಆಗಲ್ಲ. ನನಗೆ ಒಂದು ಸಣ್ಣ ಬ್ರೇಕ್ ಬೇಕು. ಯಾವುದನ್ನಾದರೂ ನಾವು ತುಂಬಾ ಪ್ರೀತಿಸಿದರೆ ಅದರಿಂದ ನಾವು ಸ್ವಲ್ಪ ದೂರ ಇರಬೇಕು. ಆಗ ಮತ್ತೆ ಪ್ರೀತಿ ಬೆಳೆಯುತ್ತದೆ. ಒಮ್ಮೆ ಬಿಲ್ಲ ರಂಗ ಬಾಷ ಶುರುವಾದರೆ ಮತ್ತೆ ಈ ಕಡೆ ತಿರುಗಿ ನೋಡಲ್ಲ. 8-9 ತಿಂಗಳು ಅದರಲ್ಲೇ ಕಳೆಯುತ್ತದೆ’ ಎಂದು ಸುದೀಪ್ (Kichcha Sudeep) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾರನ್ನೂ ನಂಬಬೇಡಿ; ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸದಂತೆ ಸುಪ್ರೀಂ ಕೋರ್ಟ್ ಸಲಹೆ – Kannada News | Don’t Trust Anyone Before Marriage Supreme Court Advises Cautions Pre Marital Physical Relations

ನವದೆಹಲಿ, ಫೆಬ್ರವರಿ 16: ಮದುವೆಯ ಭರವಸೆ ನೀಡಿ ಅತ್ಯಾಚಾರ ನಡೆಸಿದ ಆರೋಪಗಳನ್ನು ಒಳಗೊಂಡ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ವಿವಾಹಪೂರ್ವ ಸಂಬಂಧಗಳ ಕುರಿತು ಎಚ್ಚರಿಕೆ ನೀಡಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠವು ಇಂದು ಆ ಸಮಯದಲ್ಲಿ ಈಗಾಗಲೇ ಮದುವೆಯಾಗಿದ್ದರೂ, ಆ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ನಂತರ ಆಕೆಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ ಆರೋಪ ಹೊತ್ತಿರುವ ವ್ಯಕ್ತಿಯ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದೆ.

ವಿಚಾರಣೆಯ ಸಂದರ್ಭದಲ್ಲಿ ಸಲಹೆ ನೀಡಿದ ನ್ಯಾಯಮೂರ್ತಿ ನಾಗರತ್ನ, ಮದುವೆಗೂ ಮುನ್ನ ದೈಹಿಕ ಸಂಬಂಧ ಬೆಳೆಸುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. “ಬಹುಶಃ ನಾವು ಹಳೆಯ ಕಾಲದವರಾಗಿರಬಹುದು. ಆದರೆ, ಮದುವೆಗೂ ಮೊದಲು ಒಬ್ಬ ಹುಡುಗ ಮತ್ತು ಹುಡುಗಿ ಅಪರಿಚಿತರಾಗಿರುತ್ತಾರೆ. ಅವರ ಸಂಬಂಧ ಎಷ್ಟೇ ಗಾಢವಾಗಿದ್ದರೂ ಮದುವೆಗೆ ಮೊದಲು ಅವರು ಹೇಗೆ ದೈಹಿಕ ಸಂಬಂಧದಲ್ಲಿರುತ್ತಾರೆ ಎಂಬುದನ್ನು ನಮಗೆ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಹಳೆಯ ಕಾಲದವರಿಗೆ ಇದು ವಿಚಿತ್ರವಾದ ಸಂಗತಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

“ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು. ಮದುವೆಗೆ ಮೊದಲು ಯಾರೂ ಯಾರನ್ನೂ ನಂಬಬಾರದು” ಎಂದು ಅವರು ಸಲಹೆ ನೀಡಿದ್ದಾರೆ. ಆ ಮಹಿಳೆ ಮತ್ತು ಪುರುಷ 2022ರಲ್ಲಿ ಮ್ಯಾಟ್ರಿಮೊನಿ ವೆಬ್‌ಸೈಟ್ ಮೂಲಕ ಭೇಟಿಯಾಗಿದ್ದರು. ಮೊದಲೇ ಮದುವೆಯಾಗಿದ್ದರೂ ಆತ ಮಹಿಳೆಗೆ ತಾನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅದೇ ನಂಬಿಕೆಯಿಂದ ಆಕೆ ಆತನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಳು.

ಅವರ ಲೈಂಗಿಕ ಸಂಭೋಗದ ವೀಡಿಯೊಗಳನ್ನು ಮಹಿಳೆಯ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡಲಾಗಿದೆ. ಅದನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆಕೆ ಆರೋಪಿಸಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೋಷಕರಿಗೆ ದೊಡ್ಡ ಸವಾಲಾದ ಮಕ್ಕಳ ಮೊಬೈಲ್ ಅಡಿಕ್ಷನ್: ನಿಮ್ಹಾನ್ಸ್ ಮೊರೆ ಹೋದ ಹೆತ್ತವರು – Kannada News | Children’s Mobile Addiction: NIMHANS Launches Parent Training and SHUT Clinic

ಪ್ರಾತಿನಿಧಿಕ ಚಿತ್ರImage Credit source: happiesthealth

ಬೆಂಗಳೂರು, ಫೆಬ್ರವರಿ 16: ಕೊರೊನಾ ಬಳಿಕ ಮಕ್ಕಳ ಕಲಿಕೆಯ ಜೊತೆಗೆ ವರ್ತನೆಗಳಲ್ಲಿ ಬದಲಾಗಿ ಹೋಗಿವೆ. ಮನೆಯವರನ್ನು ಮರಿಬಹುದು, ಆದರೆ ಮೊಬೈಲ್ (Mobile) ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎಂಬಂತಾಗಿದೆ ಸದ್ಯದ ಮಕ್ಕಳ ಪರಿಸ್ಥಿತಿ. ಅದರಲ್ಲೂ ಕೋವಿಡ್ (covide) ಸಮಯದಲ್ಲಿ ಮಕ್ಕಳು ಮೊಬೈಲ್​​ನಲ್ಲೇ ಕಳೆದುಹೋಗುತ್ತಿದ್ದರು. ಅತಿಯಾದ ಮೊಬೈಲ್ ಬಳಕೆ ಮಕ್ಕಳನ್ನ ಕೆಟ್ಟ ಚಟಕ್ಕೆ ದುಡುತ್ತಿದೆ. ಹೀಗಾಗಿ ಪೋಷಕರು ನಿಮ್ಹಾನ್ಸ್ ಮೊರೆ ಹೋಗುತ್ತಾರೆ.

ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಅಂತ ದಿನದ 10ಗಂಟೆಗೂ ಹೆಚ್ಚು ಕಾಲ ಮೊಬೈಲ್ ಬಳಸುತ್ತಿದ್ದು. ನಿತ್ಯ ಮೊಬೈಲ್, ಇಂಟರ್ನೆಟ್ ಲೋಕದಲ್ಲಿ ಇರುವ ವಿದ್ಯಾರ್ಥಿಗಳಿಗೆ ಇದೀಗ ಮೊಬೈಲ್ ಚಟವಾಗಿ ಹೋಗಿದೆ. ಮೊಬೈಲ್ ಇಲ್ಲದೆ ಕೆಲಸನೇ ಇಲ್ಲ. ಓದು ಮೊದಲೇ ಇಲ್ಲ ಅಂತಿದ್ದಾರೆ. ಮೊಬೈಲ್ ಅಡಿಕ್ಷನ್​ಗೆ ಬಲಿ ಆಗುತ್ತಿದ್ದಾರೆ. ಇದರಿಂದ ನೊಂದ 8000 ಸಾವಿರಕ್ಕೂ ಹೆಚ್ಚು ಪೋಷಕರು ಮೊಬೈಲ್ ಅಡಿಕ್ಷನ್ ಕಡಿಮೆ ಮಾಡುವಂತೆ ನಿಮ್ಹಾನ್ಸ್ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಮಕ್ಕಳು ಮೊಬೈಲ್, ಟಿವಿ ಮುಂದೆ ಕುಳಿತುಕೊಳ್ಳುವುದನ್ನು ತಡೆಯಲು ಈ ರೀತಿ ಮಾಡಿ

ಮಕ್ಕಳಲ್ಲಿ ಗೇಮಿಂಗ್ ಚಟ ಹೆಚ್ಚಳವಾಗಿದೆ. ಉತ್ತರ ಪ್ರದೇಶದಲ್ಲಿ ಮೊಬೈಲ್ ಅಡಿಕ್ಷನ್​ನಿಂದ ಮೂರು ಮಕ್ಕಳು ಬಲಿಯಾಗಿದ್ದಾರೆ. ಪಬ್​ಜಿ ಗೀಳಿನಿಂದ 23 ವರ್ಷದ ಯುವಕನಿಗೆ ಬ್ರೇನ್ ಅಟ್ಯಾಕ್ ಆಗಿದೆ. ಈ ಬೆನ್ನಲ್ಲೇ ನಿಮ್ಹಾನ್ಸ್ ಕದ ತಟ್ಟುತ್ತಿರುವರ ಪೋಷಕರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹೀಗಾಗಿ ಮೊಬೈಲ್ ಅಡಿಕ್ಷನ್ ಶಾಲಾ ಮಕ್ಕಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನಲೆ ಮೊಬೈಲ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳ ಚಟವನ್ನು ನಿಯಂತ್ರಿಸಲು ನಿಮ್ಹಾನ್ಸ್‌ ‘ಸರ್ವಿಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ SHUT – ಶಟ್’ ಕ್ಲಿನಿಕ್ ಶುರುವಾಗಿದ್ದು, ಪೋಷಕರಿಗಾಗಿಯೇ ವಿಶೇಷ ಆನ್‌ಲೈನ್ ತರಬೇತಿಯನ್ನು ಆಯೋಜನೆ ಮಾಡಲಾಗುತ್ತಿದೆ.

ಮಕ್ಕಳ ಮೊಬೈಲ್ ಅಡಿಕ್ಷನ್ ಬಿಡಿಸುವುದು ಹೇಗೆ ಅಂತ ಆನ್ಲೈನ್ ಸೆಷನ್ ಮೂಲಕ ವೈದ್ಯರು ಪೋಷಕರಿಗೆ ತರಬೇತಿ ನೀಡುತ್ತಿದ್ದಾರೆ. ಗೇಮಿಂಗ್ ಮತ್ತು ಅಶ್ಲೀಲತೆಯ ವ್ಯಸನ ಮುಕ್ತರಾಗುವ ಬಗ್ಗೆಯೂ ವಿಶೇಷ ತರಬೇತಿ ಶುರು ಮಾಡಿದ್ದಾರೆ. ಈಗಾಗಲೇ 8 ಸಾವಿರ ಕರೆಗಳು ರಿಜಿಸ್ಟರ್ ಆಗಿದ್ದು, ಮುಂದಿನ ದಿನಗಳಲ್ಲಿ ಶಾಲೆ ಮತ್ತು ಕಾಲೇಜು ಕ್ಯಾಂಪಸ್​ಗಳಲ್ಲಿ ಆರಂಭ ಮಾಡಲು ನಿಮ್ಹನ್ಸ್ ಮುಂದಾಗಿದೆ.

ಏನಿದು ತರಬೇತಿ ಕಾರ್ಯಕ್ರಮ?

ತಂತ್ರಜ್ಞಾನದ ವ್ಯಸನ ನಿರ್ವಹಣೆಗಾಗಿ ಪೋಷಕರ ಗುಂಪು PGMTA ಎಂಬ ಹೆಸರಿನಲ್ಲಿ ಪ್ರತಿ ಶನಿವಾರ ಆನ್‌ಲೈನ್ ಮೂಲಕ ಪೋಷಕರಿಗೆ ತರಬೇತಿ ನೀಡಲಾಗುತ್ತಿದೆ. ಕಳೆದ ವರ್ಷ ಆರಂಭವಾದ ಈ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಇದುವರೆಗೂ ಸುಮಾರು 8000ಕ್ಕೂ ಹೆಚ್ಚು ಪೋಷಕರು ಇದರ ಲಾಭ ಪಡೆದಿದ್ದಾರೆ.

ಆರಂಭದಲ್ಲೇ ಎಚ್ಚರವಹಿಸಿ: ಪೋಷಕರಿಗೆ ವೈದ್ಯರ ಸಲಹೆ

ಇತ್ತೀಚೆಗೆ ಮೊಬೈಲ್ ಕೊಡದಿದ್ದರೆ ಊಟ ಮಾಡುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸುವುದು, ಸುಳ್ಳು ಹೇಳುವುದು ಅಥವಾ ಆಕ್ರಮಣಕಾರಿಯಾಗಿ ವರ್ತಿಸುವುದು ಮಕ್ಕಳಲ್ಲಿ ಕಂಡುಬರುತ್ತಿದೆ. ಈ ಭಯದಿಂದಲೇ ಪೋಷಕರು ಅಸಹಾಯಕರಾಗಿದ್ದಾರೆ. ಇಂತಹ ಘಟನೆಗಳು ಅನೇಕ ಕುಟುಂಬಗಳಲ್ಲಿ ಗಂಭೀರ ಜಗಳಗಳಿಗೆ ಕಾರಣವಾಗಿದ್ದು, ಕೌನ್ಸಿಲಿಂಗ್‌ಗಾಗಿ ಮನಶಾಸ್ತ್ರಜ್ಞರನ್ನು ಸಂಪರ್ಕಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪೋಷಕರು ಆರಂಭದಲ್ಲೇ ಎಚ್ಚರವಹಿಸುವಂತೆ ಮನೋವೈದ್ಯೆ ಡಾ. ಮಾಲಾ ಮುರಳೀಧರ್​​ ಸಲಹೆ ನೀಡಿದ್ದಾರೆ.

ಇನ್ನು ಕೊರೊನಾದಿಂದ ವಿದ್ಯಾರ್ಥಿಗಳಲ್ಲಿ ಮೊಬೈಲ್ ಅಡಿಕ್ಷನ್​​ಗೆ ತುತ್ತಾಗಿರುವ ಪ್ರಮಾಣ ಏರಿಕೆ ಕಂಡಿದೆ. ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ನಾನಾ ಅವಾಂತರಗಳಿಗೆ ಬಲಿ ಆಗತ್ತಿದ್ದಾರೆ. ಕೋವಿಡ್ ಹಾವಳಿ ತಗ್ಗಿ ಆನ್ಲೈನ್ ಕ್ಲಾಸ್​ನಿಂದ ಶಿಕ್ಷಣ ಇಲಾಖೆ ಹೊರ ಬಂದು ಆಫ್ ಲೈನ್ ಕ್ಲಾಸ್ ಶುರುವಾದರೂ ಮಕ್ಕಳು ಮಾತ್ರ ಮೊಬೈಲ್ ಗೀಳಿನಿಂದ ಹೊರ ಬಂದಿಲ್ಲ. ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಸದ್ಯ ಮಕ್ಕಳಲ್ಲಿ ಹೆಚ್ಚಾದ ಮೊಬೈಲ್ ಗೀಳು ನಾನಾ ಮಾನಸಿಕ, ದೈಹಿಕ ಸಮಸ್ಯೆಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಈ ಸಮಸ್ಯೆಯಿಂದ ಪೋಷಕರಿಗೆ ಮಾನಸಿಕ ಒತ್ತಡ ಹೆಚ್ಚಾಗಿದೆ.

ಇದನ್ನೂ ಓದಿ: ಶಿಶುವಿಗೆ ಹಸುವಿನ ಹಾಲು ನೀಡುವುದಕ್ಕೆ ಸರಿಯಾದ ಸಮಯವಿದೆಯೇ? ಯಾವಾಗ ಆರಂಭ ಮಾಡಬೇಕು ತಿಳಿದುಕೊಳ್ಳಿ

ಒಟ್ಟಿನಲ್ಲಿ ಮಕ್ಕಳು ಮೊಬೈಲ್​​ಗೆ ದಾಸರಾಗಿರುವುದು ಸುಳ್ಳಲ್ಲ. ಮೀತಿಮಿರಿದ ಮೊಬೈಲ್ ಬಳಕೆ ಮಕ್ಕಳ ಮಾನಸಿಕ, ದೈಹಿಕ ಸಮಸ್ಯೆಗೂ ಕಾರಣವಾಗಿದ್ದು, ಪೊಷಕರ ವರ್ಗ ಎಚ್ಚರವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

6,6,6,6,6,6..! ಆಂಗ್ಲರ ವಿರುದ್ಧ 25 ಎಸೆತಗಳಲ್ಲಿ 60 ರನ್ ಚಚ್ಚಿದ ಇಟಲಿ ಬ್ಯಾಟರ್ – Kannada News | T20 World Cup: Ben Manenti’s Explosive 60 Dazzles in Italy’s Brave Fight vs England

2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup) ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಇಟಲಿ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತಿರಬಹುದು. ಆದರೆ ಎಲ್ಲಾ ಪಂದ್ಯಗಳಲ್ಲೂ ಗಮನಾರ್ಹ ಪ್ರದರ್ಶನ ನೀಡಿದೆ. ಚೊಚ್ಚಲ ವಿಶ್ವಕಪ್​ನಲ್ಲೇ ತನ್ನ ಪ್ರದರ್ಶನದಿಂದ ವಿಶ್ವ ಕ್ರಿಕೆಟ್​ನ ಗಮನ ಸೆಳೆದಿರುವ ಇಟಲಿ ಸೋಮವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಕೆಚ್ಚೆದೆಯ ಹೋರಾಟ ನೀಡಿತು. ಅದರಲ್ಲೂ ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಬೆನ್ ಮಾನೆಂಟಿ (Ben Manenti) ಕೇವಲ 25 ಎಸೆತಗಳಲ್ಲಿ 60 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

25 ಎಸೆತಗಳಲ್ಲಿ 60 ರನ್ ಬಾರಿಸಿದ ಬೆನ್

ಇಂಗ್ಲೆಂಡ್ ನೀಡಿದ 203 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಟಲಿ ಆರಂಭದಲ್ಲೇ ಎಡವಿದರೂ, ಮಧ್ಯಮ ಕ್ರಮಾಂಕದಲ್ಲಿ ಬಂದ ಮಾನೆಂಟಿ ತಮ್ಮ ವೀರೋಚಿತ ಪ್ರದರ್ಶನದಿಂದ ಇಂಗ್ಲೆಂಡ್ ಬೌಲರ್‌ಗಳನ್ನು ಭಯಭೀತಗೊಳಿಸಿದರು. ಕೇವಲ 25 ಎಸೆತಗಳಲ್ಲಿ 60 ರನ್ ಬಾರಿಸಿ ಇಂಗ್ಲೆಂಡ್ ತಂಡವನ್ನು ಬಹುತೇಕ ಸೋಲಿನ ಅಂಚಿಗೆ ಕೊಂಡೊಯ್ದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಬೆನ್ ಮಾನೆಂಟಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೃಹತ್ ಸಿಕ್ಸರ್‌ಗಳು ಮತ್ತು 4 ಬೌಂಡರಿಗಳು ಸೇರಿದ್ದವು. ಇದರ ಜೊತೆಗೆ ಜಸ್ಟಿನ್ ಮಾಸ್ಕೋ ಜೊತೆ 92 ರನ್‌ಗಳ ನಿರ್ಣಾಯಕ ಪಾಲುದಾರಿಕೆಯನ್ನು ಹಂಚಿಕೊಂಡರು.

ಮಾನೆಂಟಿ ಕ್ರೀಸ್​ನಲ್ಲಿರುವವರೆಗೂ ಇಟಲಿ ತಂಡಡ ಗೆಲ್ಲುವುದು ಖಚಿತವೆನಿಸಿತ್ತು. ಆದಾಗ್ಯೂ, ವಿಲ್ ಜ್ಯಾಕ್ಸ್ ಅವರ ಬೌಲಿಂಗ್​ನಲ್ಲಿ ದೊಡ್ಡ ಹೊಡೆತವನ್ನು ಹೊಡೆಯಲು ಯತ್ನಿಸಿದ ಮಾನೆಂಟಿ ಕ್ಯಾಚ್ ನೀಡಿ ನಿರ್ಗಮಿಸಿದರು. ಮಾನೆಂಟಿ ವಿಕೆಟ್ ಪತನದ ಬಳಿಕ ಇಟಲಿ ಇನ್ನಿಂಗ್ಸ್ ಹಳಿ ತಪ್ಪಿತು. ಆದಾಗ್ಯೂ, ವಿಶ್ವ ಚಾಂಪಿಯನ್ ಇಂಗ್ಲೆಂಡ್‌ಗೆ ತಮ್ಮ ಚೊಚ್ಚಲ ವಿಶ್ವಕಪ್​ನಲ್ಲೇ ಈ ಮಟ್ಟದಲ್ಲಿ ಸ್ಪರ್ಧೆಯನ್ನು ನೀಡಿದ್ದ ಇಟಲಿ ತಂಡವನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ.

‘ಅಜ್ಞಾನಿ, ಮೂರ್ಖ, ಹೇಡಿ’; ಸಲ್ಮಾನ್, ಬಾಬರ್​ಗೆ ಛೀಮಾರಿ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ

ಇಟಲಿಯ ಗಮನಾರ್ಹ ಪ್ರದರ್ಶನ

ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿರುವ ಇಟಲಿ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೋತರೂ, ನೇಪಾಳವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಮಾಸ್ಕೊ ಸಹೋದರರು ಮತ್ತು ಬೆನ್ ಮಾನೆಂಟಿಯಂತಹ ಹಿಟರ್‌ಗಳ ಸ್ಥಿರ ಆಟದೊಂದಿಗೆ, ಈ ತಂಡವು ಗ್ರೂಪ್-ಸಿಯಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಇಂಗ್ಲೆಂಡ್ ವಿರುದ್ಧ ಮಾನೆಂಟಿಯ ಇನ್ನಿಂಗ್ಸ್ ಇಟಾಲಿಯನ್ ಕ್ರಿಕೆಟ್ ಇತಿಹಾಸದಲ್ಲಿ ಉಳಿಯುತ್ತದೆ.

ಒಂದು ಕಾಲದಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ತಂಡಗಳಿಗೆ ಸೀಮಿತವಾಗಿದ್ದ ಕ್ರಿಕೆಟ್, ಈಗ ಇಟಲಿಯಂತಹ ದೇಶಗಳಲ್ಲಿ ವೇಗವಾಗಿ ವಿಸ್ತರಿಸುತ್ತಿದೆ. ಇಂಗ್ಲೆಂಡ್‌ನ ಬೌಲರ್‌ಗಳನ್ನು ಹೀಗೆ ಹಿಗ್ಗಮುಗ್ಗ ದಂಡಿಸುವುದು ಸಣ್ಣ ಸಾಧನೆಯಲ್ಲ. ಈ ಪಂದ್ಯದ ಫಲಿತಾಂಶ ಏನೇ ಇರಲಿ, ಇಟಲಿಯ ಪ್ರದರ್ಶನವು ವಿಶ್ವ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತ್ರಿವೇಣಿ ಕಾದಂಬರಿ ಆಧಾರಿತ ‘ಸರಳ ಸುಬ್ಬರಾವ್’ ಸಿನಿಮಾ ಫೆ.20ಕ್ಕೆ ರಿಲೀಸ್

Source link

ಅಮೆರಿಕದ ಟ್ಯಾರಿಫ್ ಪರಿಣಾಮ ನಡುವೆಯೂ ಜನವರಿಯಲ್ಲಿ ಭಾರತದ ರಫ್ತು ಶೇ. 13.16 ಹೆಚ್ಚಳ – Kannada News | India’s exports rise on January 2026, and trade deficit too widens

ನವದೆಹಲಿ, ಫೆಬ್ರುವರಿ 16: ಜನವರಿ ತಿಂಗಳಲ್ಲಿ ಭಾರತದ ಒಟ್ಟಾರೆ ಸರಕು ಮತ್ತು ಸೇವೆಗಳ ರಫ್ತು (India total exports) 80.45 ಬಿಲಿಯನ್ ಡಾಲರ್ ಮೊತ್ತದಷ್ಟಿದೆ. ಕಳೆದ ವರ್ಷದ (2025) ಜನವರಿಯಲ್ಲಿ 71.09 ಬಿಲಿಯನ್ ಡಾಲರ್ ರಫ್ತು ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 13.16ರಷ್ಟು ರಫ್ತು ಹೆಚ್ಚಳ ಆಗಿದೆ. ಆದರೆ, ಆಮದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿದೆ. 76.48 ಬಿಲಿಯನ್ ಡಾಲರ್ ಇದ್ದದ್ದು 90.83 ಬಿಲಿಯನ್ ಡಾಲರ್​ಗೆ ಏರಿದೆ. ಇದರಿಂದ ಒಟ್ಟರೆ ವ್ಯಾಪಾರ ಅಂತರ ಅಥವಾ ಟ್ರೇಡ್ ಡೆಫಿಸಿಟ್ 5.39 ಬಿಲಿಯನ್ ಡಾಲರ್​ನಿಂದ 10.38 ಬಿಲಿಯನ್ ಡಾಲರ್​ಗೆ ಏರಿದಂತಾಗಿದೆ.

ಸರಕುಗಳ ವ್ಯಾಪಾರ ಕೊರತೆ ಹೆಚ್ಚಳ

ಜನವರಿಯಲ್ಲಿ ಸರಕುಗಳ ಟ್ರೇಡ್ ಡೆಫಿಸಿಟ್ 34.68 ಬಿಲಿಯನ್ ಡಾಲರ್ ಇದೆ. ಆರ್ಥಿಕ ತಜ್ಞರು 26 ಬಿಲಿಯನ್ ಡಾಲರ್ ಟ್ರೇಡ್ ಡೆಫಿಸಿಟ್ ನಿರೀಕ್ಷಿಸಿದ್ದರು. ಡಿಸೆಂಬರ್ ತಿಂಗಳಲ್ಲಿ ಸರಕುಗಳ ಟ್ರೇಡ್ ಡೆಫಿಸಿಟ್ 25.04 ಬಿಲಿಯನ್ ಡಾಲರ್ ಇತ್ತು.

ಇದನ್ನೂ ಓದಿ: ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು?

ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಡಿಸೆಂಬರ್​ನಲ್ಲಿ 38.51 ಬಿಲಿಯನ್ ಡಾಲರ್ ಇದ್ದ ಸರಕುಗಳ ರಫ್ತು ಜನವರಿಯಲ್ಲಿ 36.56 ಬಿಲಿಯನ್ ಡಾಲರ್​ಗೆ ಇಳಿದಿದೆ. ಆದರೆ, ಹಿಂದಿನ ವರ್ಷದ ಜನವರಿಗೆ ಹೋಲಿಸಿದರೆ ಸರಕು ರಫ್ತು ತುಸು ಏರಿಕೆ ಆಗಿದೆ. ಇದೇ ವೇಳೆ, ಸರಕುಗಳ ಆಮದು 63.55 ಬಿಲಿಯನ್ ಡಾಲರ್​ನಿಂದ 71.24 ಬಿಲಿಯನ್ ಡಾಲರ್​ಗೆ ಏರಿದೆ. ಹೀಗಾಗಿ, ಸರಕುಗಳ ಟ್ರೇಡ್ ಡೆಫಿಸಿಟ್ ನಿರೀಕ್ಷೆಮೀರಿ ಹೆಚ್ಚಿದೆ. ಚಿನ್ನ ಮತ್ತು ಬೆಳ್ಳಿ ಆಮದು ಮೌಲ್ಯ ಹೆಚ್ಚಾದ್ದರಿಂದ ಒಟ್ಟಾರೆ ಸರಕು ಆಮದು ಏರಿಕೆ ಆಗಲು ಕಾರಣ ಎನ್ನಲಾಗಿದೆ.

ಭಾರತದ ಮೇಲೆ ಅಮೆರಿಕ ತನ್ನ ಟ್ಯಾರಿಫ್​ಗಳನ್ನು ಈ ತಿಂಗಳು ಕಡಿಮೆ ಮಾಡಿದೆ. ಶೇ. 50ರಷ್ಟು ಇದ್ದ ಟ್ಯಾರಿಫ್ ಶೇ. 18ಕ್ಕೆ ಇಳಿಕೆ ಆಗಿದೆ. ಆದರೆ, ಜನವರಿಯಲ್ಲಿ ಶೇ. 50 ಟ್ಯಾರಿಫ್ ಕ್ರಮವೇ ಜಾರಿಯಲ್ಲಿದ್ದದ್ದು. ಹೀಗಾಗಿ, ಅಧಿಕ ಟ್ಯಾರಿಫ್ ನಡುವೆಯೂ ಭಾರತದ ಸರಕುಗಳ ರಫ್ತು ತೀರಾ ಹೆಚ್ಚು ಕುಸಿತ ಕಂಡಿಲ್ಲ ಎಂಬುದು ಗಮನಾರ್ಹ.

ಫೆಬ್ರುವರಿಯಲ್ಲಿ ಭಾರತಕ್ಕೆ ಅಮೆರಿಕದ ಟ್ಯಾರಿಫ್ ಶೇ. 25ರಷ್ಟು ಮಾತ್ರವೇ ಇರಲಿದೆ. ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡಲಿರುವುದರಿಂದ ಟ್ಯಾರಿಫ್ ಶೇ. 18ಕ್ಕೆ ಇಳಿಕೆ ಆಗಬಹುದು. ಮಾರ್ಚ್ ತಿಂಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಬಹುದು.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

2026ರ ಜನವರಿಯಲ್ಲಿ ಭಾರತದ ರಫ್ತು ದತ್ತಾಂಶ

  • ಸರಕುಗಳ ರಫ್ತು: 36.56 ಬಿಲಿಯನ್ ಡಾಲರ್
  • ಸೇವೆಗಳ ರಫ್ತು: 43.90 ಬಿಲಿಯನ್ ಡಾಲರ್
  • ಒಟ್ಟಾರೆ ರಫ್ತು: 80.45 ಬಿಲಿಯನ್ ಡಾಲರ್
  • ಒಟ್ಟಾರೆ ಆಮದು: 90.83 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಅಜ್ಞಾನಿ, ಮೂರ್ಖ, ಹೇಡಿ’; ಸಲ್ಮಾನ್, ಬಾಬರ್​ಗೆ ಛೀಮಾರಿ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ – Kannada News | Basit Ali Slams Pakistan Team: Agha “Foolish,” Hesson “Ignorant,” Babar Lacks Etiquette

2026 ರ ಟಿ20 ವಿಶ್ವಕಪ್​ನಲ್ಲಿ (T20 World Cup 2026)  ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡ ಹಾಗೂ ನಾಯಕ ಸಲ್ಮಾನ್ ಆಘಾ (Salman Agha) ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಭಿಮಾನಿಗಳಿಂದ ಹಿಡಿದು ಮಾಜಿ ಆಟಗಾರರು ಇಡೀ ತಂಡದ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ, ಸಲ್ಮಾನ್ ಆಘಾ ಅವರನ್ನು ಅಜ್ಞಾನಿ, ಮೂರ್ಖ ಮತ್ತು ಹೇಡಿ ಎಂದು ಜರಿದಿದ್ದಾರೆ. ಸಲ್ಮಾನ್ ಆಘಾ ಅವರ ತಂತ್ರಗಾರಿಕೆಯ ಲೋಪದಿಂದ ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋತಿತು ಎಂದಿರುವ ಅಲಿ, ಮುಖ್ಯ ಕೋಚ್ ಮೈಕ್ ಹೆಸ್ಸನ್ ಅವರನ್ನು ಅಜ್ಞಾನಿ ಎಂದೂ, ಬಾಬರ್ ಆಝಂ ಬ್ಯಾಟಿಂಗ್ ಶಿಷ್ಟಾಚಾರ ಹೊಂದಿಲ್ಲ ಎಂದು ಟೀಕಿಸಿದ್ದಾರೆ.

ತಾಳ್ಮೆ ಕಳೆದುಕೊಂಡ ಬಸಿತ್ ಅಲಿ

ವೃತ್ತಿಪರ ಕ್ರಿಕೆಟ್‌ನಲ್ಲಿ 27 ಶತಕಗಳನ್ನು ಬಾರಿಸಿರುವ ಬಸಿತ್ ಅಲಿ, ಪಾಕಿಸ್ತಾನಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ ತಂಡವನ್ನು ತೀವ್ರವಾಗಿ ಟೀಕಿಸಿದರು. ‘ನಾನು ಅಳತೆ ಮೀರಿ ಮಾತನಾಡುತ್ತಿದ್ದೇನೆ ನನ್ನನನು ಕ್ಷಮಿಸಿ. ಕೊಲಂಬೊದಲ್ಲಿ ಇದುವರೆಗೆ ಮೂರು ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮೂರನ್ನೂ ಗೆದ್ದಿದೆ ಎಂದು ಆ ಅಜ್ಞಾನಿ ಜನರಿಗೆ ತಿಳಿದಿಲ್ಲ. ನಾವು ಜಿಂಬಾಬ್ವೆ ವಿರುದ್ಧ ಪಂದ್ಯವನ್ನಾಡಿ, ಆಗ ಟಾಸ್ ಗೆದ್ದು ಬೌಲಿಂಗ್ ಮಾಡಿದ್ದರೆ ಓಕೆ, ಏಕೆಂದರೆ ನಮ್ಮ ಸ್ಪಿನ್ ವಿಭಾಗ ಬಲಿಷ್ಠವಾಗಿದೆ. ಹೀಗಾಗಿ ಜಿಂಬಾಬ್ವೆ ತಂಡವನ್ನು ಅಲ್ಪ ರನ್​ಗಳಿಗೆ ಕಟ್ಟಿಹಾಕಬಹುದಿತ್ತು. ಆದರೆ ಭಾರತದಂತಹ ತಂಡದ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಳ್ಳಲು ಇವರಿಗೆ ಹೇಳಿದ್ಯಾರು?

ಸೋಲುತ್ತಾರೆಂದು ಈಗಾಗಲೇ ತಿಳಿದಿತ್ತು

ಅಭಿಷೇಕ್ ಶರ್ಮಾ ಅವರಂತಹ ಆಟಗಾರ ಮೊದಲ ಓವರ್‌ನಲ್ಲೇ ಔಟ್ ಆಗುತ್ತಾರೆ, ಅದು ಕೂಡ ಸಲ್ಮಾನ್ ಆಘಾ ಅವರ ಬೌಲಿಂಗ್‌ನಲ್ಲಿ. ಮೊದಲ ಎರಡು ಓವರ್‌ಗಳಲ್ಲಿ 10 ರನ್‌ಗಳನ್ನು ಬಿಟ್ಟುಕೊಟ್ಟ ಅಘಾ, ಆ ಬಳಿಕ ಬೌಲಿಂಗ್ ಮಾಡಲಿಲ್ಲ. ಅವರು ಮಕ್ಕಳಂತೆ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಸೋಲುತ್ತಾರೆಂದು ನಮಗೆ ಈಗಾಗಲೇ ತಿಳಿದಿತ್ತು. ಹೀಗಾಗಿ ಮಳೆ ಬಂದು ಅಂಕಗಳು ವಿಭಜನೆಯಾಗುತ್ತವೆ ಎಂದು ನಾವು ಆಶಿಸಿದ್ದೆವು. ಮೊದಲು ಬೌಲ್ ಮಾಡಬೇಕೆ ಅಥವಾ ಮೊದಲು ಬ್ಯಾಟ್ ಮಾಡಬೇಕೆ ಎಂದು ತಿಳಿಯದ ಈ ಅಜ್ಞಾನಿಗಳು ಈಗ ಪಾಕಿಸ್ತಾನದ ಮುಖ್ಯ ತರಬೇತುದಾರರಾಗಿದ್ದಾರೆ’.

ENG vs ITA: ಇಟಲಿ ವಿರುದ್ಧ ಇಂಗ್ಲೆಂಡ್​ಗೆ ಪ್ರಯಾಸದ ಗೆಲುವು; ಸೂಪರ್​ 8 ಸುತ್ತಿಗೆ ಎಂಟ್ರಿ

ಬಾಬರ್ ವಿರುದ್ಧ ಕೆರಳಿದ ಅಲಿ

ಇನ್ನು ಬಾಬರ್ ಅವರ ಕಳಪೆ ಆಟದ ಬಗ್ಗೆ ಬಸಿತ್ ಅಲಿ ಪ್ರತಿಕ್ರಿಯಿಸಿ, ‘ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬಾಬರ್ ಅಜಮ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅಕ್ಷರ್ ಪಟೇಲ್ ವಿರುದ್ಧ ಕ್ರಾಸ್ ಶಾಟ್ ಬಾರಿಸುತ್ತಾರೆ. ಯಾರಾದರೂ ಅವರಿಗೆ ಬ್ಯಾಟಿಂಗ್ ಶಿಷ್ಟಾಚಾರವನ್ನು ಕಲಿಸಬೇಕು. ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್, ಅವರು ಹೊಡೆದ ಸಿಕ್ಸರ್‌ಗಳನ್ನು ನೋಡಿ. ಇಶಾನ್ ಔಟಾದ ಬಳಿಕ ಅವರು ಪಾಲುದಾರಿಕೆಯನ್ನು ನಿರ್ಮಿಸಿದರು. ಆದರೆ ಬಾಬರ್ ಜೊತೆಯಾಟ ಕಟ್ಟುವ ಕೆಲಸ ಮಾಡದೆ ಬಿಗ್ ಶಾಟ್ ಆಡಲು ಯತ್ನಿಸಿ ವಿಕೆಟ್ ಕಳೆದುಕೊಂಡರು’ ಎಂದು ಬಸಿತ್ ಅಲಿ ಆಕ್ರೋಶ ಹೊರಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:02 pm, Mon, 16 February 26

Source link

ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ – Kannada News | Vijayalakshmi Darshan happily returns from jail after meeting Darshan

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅವರು ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇಂದು (ಫೆಬ್ರವರಿ 16) ಅವರ ಜನ್ಮದಿನ. ಅವರನ್ನು ನೋಡಲು ಕುಟುಂಬದವರು ಮತ್ತು ಆಪ್ತರು ಬಂದಿದ್ದರು. ಪತ್ನಿ ವಿಜಯಲಕ್ಷ್ಮಿ ದರ್ಶನ್, ಮಗ ವಿನೀಶ್, ಸಹೋದರ ದಿನಕರ್ ತೂಗುದೀಪ್, ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಟ ಧನ್ವೀರ್ ಅವರು ಪರಪ್ಪನ ಅಗ್ರಹಾರ ಜೈಲಿಯಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ವಾಪಸ್ ತೆರಳುವಾಗಿ ವಿಜಯಲಕ್ಷ್ಮಿ (Vijayalakshmi Darshan) ಅವರ ಮುಖದಲ್ಲಿ ನಗು ಕಾಣಿಸಿದೆ. ಅದನ್ನು ಕಂಡು ಅಭಿಮಾನಿಗಳಿಗೆ ಸಮಾಧಾನ ಆಗಿದೆ. ಆದಷ್ಟು ಬೇಗ ದರ್ಶನ್ ಹೊರಗೆ ಬರಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ. ಹುಟ್ಟುಹಬ್ಬದ ಸಲುವಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಗತ್ತಿನೆಲ್ಲೆಡೆ ಎಕ್ಸ್ ಡೌನ್; ಆ್ಯಪ್, ವೆಬ್​ಸೈಟ್ ಲೋಡ್ ಆಗದೆ ಬಳಕೆದಾರರ ಪರದಾಟ – Kannada News | X Down for users Globally Thousands Report Issues Accessing App and Website

ಬೆಂಗಳೂರು, ಫೆಬ್ರವರಿ 16: ಇಂದು (ಸೋಮವಾರ) ಸಂಜೆ ಸಾಮಾಜಿಕ ಮಾಧ್ಯಮ ಬಳಕೆದಾರರು ದೇಶ ಮತ್ತು ಪ್ರಪಂಚದ ವ್ಯವಹಾರಗಳ ಸ್ಥಿತಿಯನ್ನು ಪರಿಶೀಲಿಸಲು ತಮ್ಮ ನೆಚ್ಚಿನ ಅಪ್ಲಿಕೇಶನ್ X (ಹಿಂದಿನ ಟ್ವಿಟರ್) ಅನ್ನು ತೆರೆದಾಗ ಅವರಿಗೆ ನಿರಾಸೆ ಕಾದಿತ್ತು. ಇಂದು ಸಂಜೆಯಿಂದ ಭಾರತದಲ್ಲಿ X.comನ ಸೇವೆಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು. ಈ ಸಮಸ್ಯೆ ಅವರ ಇಂಟರ್ನೆಟ್‌ನಲ್ಲಿದೆಯೇ ಅಥವಾ ಅಪ್ಲಿಕೇಶನ್‌ನಲ್ಲಿದೆಯೇ ಎಂದು ತಿಳಿಯದೆ ಸಾವಿರಾರು ಬಳಕೆದಾರರು ಗೊಂದಲಕ್ಕೊಳಗಾಗಿದ್ದರು.

ಎಕ್ಸ್ ವೆಬ್‌ಸೈಟ್‌ನಲ್ಲಿನ ಗ್ರಾಫ್ ಇಂದು ಸಂಜೆ 7 ಗಂಟೆಯ ಸುಮಾರಿಗೆ ದೂರುಗಳಲ್ಲಿ ಗಮನಾರ್ಹ ಏರಿಕೆಯನ್ನು ತೋರಿಸಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಇಂದು ಸಂಜೆ 7.02ರ ಹೊತ್ತಿಗೆ 3,000ಕ್ಕೂ ಹೆಚ್ಚು ಬಳಕೆದಾರರು X ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ರಿಪೋರ್ಟ್ ಮಾಡಿದ್ದಾರೆ. ಈ ಅಂಕಿ ಅಂಶವು ದೂರುಗಳನ್ನು ಸಲ್ಲಿಸಿದವರನ್ನು ಮಾತ್ರ ಪ್ರತಿನಿಧಿಸುತ್ತದೆ. ಆದರೆ, ಎಕ್ಸ್​ ಪೇಜ್ ಓಪನ್ ಆಗದೆ ತೊಂದರೆ ಅನುಭವಿಸಿದವರ ಸಂಖ್ಯೆ ಇನ್ನೂ ಹೆಚ್ಚಿದೆ.

ಇದನ್ನೂ ಓದಿ: ಅಶ್ಲೀಲ, ಕಾನೂನುಬಾಹಿರ ವಿಷಯಗಳನ್ನು ಡಿಲೀಟ್ ಮಾಡಿ; ಎಕ್ಸ್​​ನ ಗ್ರೋಕ್​ಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಈ ಸಮಸ್ಯೆ ಮೊಬೈಲ್ ಅಪ್ಲಿಕೇಶನ್‌ಗೆ ಸೀಮಿತವಾಗಿಲ್ಲ, ಆದರೆ ಡೆಸ್ಕ್‌ಟಾಪ್ ಆವೃತ್ತಿಯೂ ಸಹ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ಬಳಕೆದಾರರು X.com ಅನ್ನು ತೆರೆದಾಗ, ಸಂಪೂರ್ಣವಾಗಿ ಖಾಲಿ ಪರದೆ ಅಥವಾ ಅದೇ ಹಳೆಯ ಫೀಡ್‌ ಕಂಡುಬರುತ್ತಿದೆ. ಹೊಸ ವಿಷಯ ಲೋಡ್ ಆಗುತ್ತಿಲ್ಲ. ಯಾರ ಪ್ರೊಫೈಲ್ ಕೂಡ ಓಪನ್ ಆಗುತ್ತಿಲ್ಲ. ದೈನಂದಿನ ಸುದ್ದಿ ಮತ್ತು ಅಪ್​ಡೇಟ್​​ಗಳಿಗಾಗಿ ಎಲಾನ್ ಮಸ್ಕ್ ಅವರ ಎಕ್ಸ್​ ಪ್ಲಾಟ್​​ಫಾರ್ಮ್ ಅನ್ನು ಹೆಚ್ಚು ಅವಲಂಬಿಸಿರುವವರಿಗೆ ಇದರಿಂದ ತೊಂದರೆ ಉಂಟಾಗಿದೆ.

ಇದನ್ನೂ ಓದಿ: BitChat: ವಾಟ್ಸ್ಆ್ಯಪ್ ಕ್ರೇಜ್ ಅಂತ್ಯ: ಟ್ವಿಟರ್ ಸಂಸ್ಥಾಪಕನಿಂದ ಸಿಮ್-ಇಂಟರ್ನೆಟ್ ಇಲ್ಲದೆ ಚಾಟಿಂಗ್ ಮಾಡುವ ಆ್ಯಪ್ ಬಿಡುಗಡೆ

X ನಿಜವಾಗಿಯೂ ಡೌನ್ ಆಗಿದೆಯೇ ಅಥವಾ ಅವರ ಫೋನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅನೇಕ ಬಳಕೆದಾರರು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸಹ ಆಶ್ರಯಿಸಿದ್ದಾರೆ. ಈ ಎಕ್ಸ್​ ಸ್ಥಗಿತದ ಹಿಂದಿನ ನಿಜವಾದ ತಾಂತ್ರಿಕ ಕಾರಣದ ಕುರಿತು ಕಂಪನಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ನಿಮಗೂ ಇದೇ ರೀತಿಯ ಸಮಸ್ಯೆ ಎದುರಾಗಿದ್ದರೆ ಪೇಜನ್ನು ಪದೇಪದೆ ರಿಫ್ರೆಶ್ ಮಾಡುವ ಬದಲು ಇನ್ನೂ ಕೊಂಚ ಸಮಯ ಕಾಯುವುದು ಒಳಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link