Headlines

IND vs AFG: ಅತಿ ವೇಗದ ಶತಕ ಬಾರಿಸಿ ಕ್ರಿಕೆಟ್ ದೇವರನ್ನು ಸರಿಗಟ್ಟಿದ ಇಶಾನ್ ಕಿಶನ್ – Kannada News | Ishan Kishan Blazes Fastest ODI Century, Equals Sachin’s Record vs Afghanistan

ಸುಮಾರು ಮೂರು ವರ್ಷಗಳ ನಂತರ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ 22 ಎಸೆತಗಳಲ್ಲಿ 34 ರನ್​ಗಳ ಇನ್ನಿಂಗ್ಸ್ ಆಡಿದ್ದ ಕಿಶನ್, 2ನೇ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದರು (PC- PTI). Source link

Read More

ಬಿಡುಗಡೆ ಆಯ್ತು ‘ಸ್ಪೈಡರ್ ಮ್ಯಾನ್’ ಟ್ರೈಲರ್, ಗೆಳೆಯರೇ ಈಗ ಶತ್ರುಗಳು – Kannada News | Spiderman Brand new day movie trailer released

ಹೊಸ ‘ಸ್ಪೈಡರ್​ಮ್ಯಾನ್’ (Spiderman) ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾಕ್ಕೆ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಎರಡನೇ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಈ ಹಿಂದಿನ ‘ಸ್ಪೈಡರ್​​ಮ್ಯಾನ್: ನೋ ವೇ ಹೋಮ್​’ ಸಿನಿಮಾನಲ್ಲಿ ಸ್ಪೈಡರ್​​ಮ್ಯಾನ್ ಅನ್ನು ಇಡೀ ಜಗತ್ತೇ ಮರೆತು ಹೋಗುತ್ತದೆ. ಅವನ ಗೆಳೆಯರು, ಕುಟುಂಬದವರು ಎಲ್ಲರೂ ಸ್ಪೈಡರ್​​ಮ್ಯಾನ್ ಇದ್ದನೆಂಬುದನ್ನೇ ಮರೆತಿದ್ದಾರೆ. ಹಾಗಾಗಿ ಇದೀಗ ‘ಸ್ಪೈಡರ್​​ಮ್ಯಾನ್​’ ಒಂಟಿಯಾಗಿದ್ದಾನೆ. ಅವನಿಗೆ ಗೆಳೆಯರಿಲ್ಲ, ಅವನ ಗರ್ಲ್​​ಫ್ರೆಂಡ್ ಸಹ ಬೇರೊಬ್ಬನ ಜೊತೆಗಿದ್ದಾಳೆ. ಇದೀಗ ಬಿಡುಗಡೆ ಆಗಿರುವ ಟ್ರೈಲರ್ ನೋಡಿದರೆ…

Read More

ಕಾಂಗ್ರೆಸ್ ಜೊತೆ ವಿಲೀನಕ್ಕೆ ಉದ್ಧವ್ ಠಾಕ್ರೆ ಪ್ಲಾನ್; ಶಿವಸೇನೆಯ 6 ಬಂಡಾಯ ಸಂಸದರಿಂದ ಸ್ಪೀಕರ್‌ಗೆ ದೂರು – Kannada News | Shiv Sena Congress Merger Plan 6 Rebel MPs Letter to Lok Sabha Speaker Om Birla

ಮುಂಬೈ, ಜೂನ್ 18: ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನೆ (ಯುಬಿಟಿ) ಪಕ್ಷಕ್ಕೆ ಭಾರಿ ಆಘಾತ ಎದುರಾಗಿದ್ದು, ಉದ್ಧವ್ ಠಾಕ್ರೆ ಬಣದ 9 ಲೋಕಸಭಾ ಸಂಸದರ ಪೈಕಿ 6 ಬಂಡಾಯ ಸಂಸದರು ದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಪತ್ರ ಸಲ್ಲಿಸಿದ್ದಾರೆ. ಶಿವಸೇನೆ (UBT) ಪಕ್ಷದಲ್ಲಿ ಮತ್ತೊಮ್ಮೆ ಭಾರಿ ಬಿರುಕು ಉಂಟಾಗಿದ್ದು, 6 ಲೋಕಸಭಾ ಸಂಸದರು ಉದ್ಧವ್ ಠಾಕ್ರೆ (Uddhav Thackeray) ವಿರುದ್ಧ ಬಂಡಾಯವೆದ್ದಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ 4 ಪುಟಗಳ ಸುದೀರ್ಘ ಪತ್ರ…

Read More

ದೂರುದಾರರ ಮೊಬೈಲ್​​ ಸಂಖ್ಯೆ ಪೊಲೀಸರಿಂದಲೇ ದುರುಪಯೋಗ?: ಚರ್ಚೆಗೆ ಗ್ರಾಸವಾದ ಮಹಿಳೆಯ ಪೋಸ್ಟ್​​ – Kannada News | Bengaluru Police Under Fire After Woman Alleges Officer Misused Her Complaint Contact for Private WhatsApp Texts

ಬೆಂಗಳೂರು, ಜೂನ್​​ 18: ನೀಡಿದ್ದ ದೂರಿನಲ್ಲಿದ್ದ ಮೊಬೈಲ್​ ಸಂಖ್ಯೆಯನ್ನು ಪೊಲೀಸರೇ ದುರುಪಯೋಗಪಡಿಸಿಕೊಂಡು ವಾಟ್ಸ್ಯಾಪ್​​ನಲ್ಲಿ ಮೆಸೇಜ್​​ ಮಾಡುತ್ತಿರೋದಾಗಿ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ನಿವಾಸಿ ಜಾನ್ಹವಿ ದೇಸಾಯಿ ಅವರು ಜೂನ್ 17ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ತಾವು 2025ರ ಆಗಸ್ಟ್ 31ರಂದು ಪೊಲೀಸ್ ದೂರು ದಾಖಲಿಸಿದ್ದೆ ಎಂದು ತಿಳಿಸಿದ್ದಾರೆ. ದೂರು ದಾಖಲಿಸಿದ ಹಲವು ತಿಂಗಳ ಬಳಿಕ ತಮ್ಮ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಸಂದೇಶ ಬಂದಿರುವುದನ್ನು ಪ್ರಶ್ನಿಸಿರುವ ಅವರು, ತಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆ ಬಗ್ಗೆ…

Read More

ಒಂದೇ ದಿನ ನಡೆದ 3 ಪಂದ್ಯಗಳನ್ನು ಭಾರಿ ಅಂತರದಲ್ಲಿ ಗೆದ್ದ ಟೀಂ ಇಂಡಿಯಾ

ಜೂನ್ 17 ರಂದು ಕ್ರಿಕೆಟ್ ಪ್ರಿಯರಿಗೆ ರಸದೌತಣವೇ ಸಿಕ್ಕಿತು. ಈ ಒಂದೇ ದಿನದಂದು ಬರೋಬ್ಬರಿ 7 ಅಂತರರಾಷ್ಟ್ರೀಯ ಪಂದ್ಯಗಳು ನಡೆದವು. ಆ 7 ಪಂದ್ಯಗಳಲ್ಲಿ ಟೀಂ ಇಂಡಿಯಾದ್ದೇ ಮೂರು ಪಂದ್ಯಗಳಿದ್ದವು. ಅಚ್ಚರಿಯ ಸಂಗತಿಯೆಂದರೆ ಈ ಮೂರು ಪಂದ್ಯಗಳನ್ನು ಭಾರತ ತಂಡ ಏಕಪಕ್ಷೀಯವಾಗಿ ಹಾಗೂ ಭಾರಿ ಅಂತರದಿಂದ ಗೆದ್ದುಕೊಂಡುವೆ. ಆ ಮೂರು ಪಂದ್ಯಗಳು ಯಾವುವು ಎಂಬುದರ ವಿವರ ಇಲ್ಲಿದೆ (PC- BCCI X). ಮೊದಲಿಗೆ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಭಾರತ ಎ ಹಾಗೂ ಅಫ್ಘಾನಿಸ್ತಾನ ಎ…

Read More

ಬಿಗ್ ಬಜೆಟ್ ಐತಿಹಾಸಿಕ ಸಿನಿಮಾಗಾಗಿ ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್? – Kannada News | Salman Khan and Farhan Akhtar Two Part Historical epic Movie updates

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ಮುಂಬರುವ ಸಿನಿಮಾಗಳ ಲಿಸ್ಟ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಲೇ ಇದೆ. ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸಲ್ಲು ಭಾಯ್, ಇದೀಗ ಭಾರತೀಯ ಇತಿಹಾಸದ ಪ್ರಮುಖ ಪುಟಗಳನ್ನು ತೆರೆಯ ಮೇಲೆ ತರಲು ಸಜ್ಜಾಗುತ್ತಿದ್ದಾರೆ ಎಂಬ ಬಿಗ್ ನ್ಯೂಸ್ ಒಂದು ಬಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ. ಈ ಸಿನಿಮಾಗಾಗಿ ಖ್ಯಾತ ನಟ ಮತ್ತು ನಿರ್ದೇಶಕ ಫರ್ಹಾನ್ ಅಖ್ತರ್ (Farhan Akhtar) ಜೊತೆ ಸಲ್ಮಾನ್ ಖಾನ್ ಕೈಜೋಡಿಸುತ್ತಾರೆ ಎನ್ನಲಾಗಿದೆ. ಕೇಳಿಬರುತ್ತಿರುವ…

Read More

ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕರು – Kannada News | Karnataka MLC Election: Congress Confident of Winning Five Seats Amid Cross Voting Allegations

ಬೆಂಗಳೂರು, ಜೂನ್​ 18: ಪರಿಷತ್​ನ 7 ಸ್ಥಾನ ಗಳಿಗೆ ನಡೆದ ಚುನಾವಣೆ ಮುಕ್ತಾಯಗೊಂಡಿದೆ. 222 ಮತ ಚಲಾವಣೆ ಆಗುವ ಮೂಲಕ ಶೇ.100ರಷ್ಟು ಮತದಾನ ಆಗಿದೆ. ಕೆಲವೇ ಹೊತ್ತಿನಲ್ಲಿ ಮತ ಎಣಿಕೆ ಕಾರ್ಯ ಕೂಡ ಆರಂಭಗೊಳ್ಳಲಿದೆ. ಈ ಮಧ್ಯೆ ಕಾಂಗ್ರೆಸ್​ ನಾಯಕರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮಗೆ ಯಾವುದೇ ಅಡ್ಡಮತದಾನ ಭಯವಿಲ್ಲ. ಕಾಂಗ್ರೆಸ್​​​ನ ಐವರು ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಐಕ್ಯತೆಯನ್ನು ಎತ್ತಿ ಹಿಡಿದು ನಾಯಕತ್ವದಲ್ಲಿ ಪಕ್ಷವು ಒಗ್ಗಟ್ಟನ್ನು ಪ್ರದರ್ಶಿಸಿದೆ. ಸಿಎಲ್‌ಪಿ ಶಾಸಕಾಂಗ ಸಭೆಗಳಲ್ಲಿ…

Read More

2025-26ಕ್ಕೆ ಶೇ. 8.25 ಇಪಿಎಫ್ ಬಡ್ಡಿಗೆ ಅನುಮೋದನೆ; ಸಕ್ರಿಯವಲ್ಲದ ಇಪಿಎಫ್ ಖಾತೆಗಳಿಗೂ ಸಿಗುತ್ತಾ ಹಣ? – Kannada News | EPFO update, govt ratifies epf interest rate for 2025 26 fy, know if non merged accounts get interest credit

ನವದೆಹಲಿ, ಜೂನ್ 18: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ಕೋಟ್ಯಂತರ ಸದಸ್ಯರಿಗೆ ಕೇಂದ್ರ ಸರ್ಕಾರವು ಖುಷಿ ಸುದ್ದಿ ನೀಡಿದೆ. 2025-26ರ ಹಣಕಾಸು ವರ್ಷಕ್ಕೆ (FY26) ನೌಕರರ ಭವಿಷ್ಯ ನಿಧಿ (EPF) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ. 8.25 ರಷ್ಟು ನಿಗದಿಪಡಿಸುವ ಪ್ರಸ್ತಾವನೆಗೆ ಕೇಂದ್ರ ಹಣಕಾಸು ಸಚಿವಾಲಯವು ಅಧಿಕೃತವಾಗಿ ಅನುಮೋದನೆ (Ratify) ನೀಡಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿರುವುದರಿಂದ, ಇಪಿಎಫ್‌ಒ (EPFO) ಸಂಸ್ಥೆಯು ಕಾರ್ಮಿಕ ಸಚಿವಾಲಯದ ನಿರ್ದೇಶನದಂತೆ 2025-26ರ ಸಾಲಿನ ಬಡ್ಡ ಹಣವನ್ನು ದೇಶದ 7…

Read More

ಯತ್ನಾಳ್​​ಗೆ ಕಾಂಗ್ರೆಸ್​​ನಿಂದ ಆಫರ್​​: ಸ್ಫೋಟಕ ಹೇಳಿಕೆ ಕೊಟ್ಟ ಬಿಜೆಪಿ ಉಚ್ಛಾಟಿತ ಶಾಸಕ – Kannada News | Congress Offered Me an Entry, Claims Expelled BJP MLA Yatnal

ಬೆಂಗಳೂರು, ಜೂನ್​​ 18: ಶಾಸಕ ಬಸನಗೌಡ ಪಾಟೀಲ್​​ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದರೂ ತಾವು ಪಕ್ಷಕ್ಕೆ ತೋರುತ್ತಿರುವ ನಿಷ್ಠೆಯನ್ನು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ರಾಜಕೀಯದಲ್ಲಿ ತಮ್ಮ ನಿಲುವು ದೃಢವಾಗಿದೆ ಎಂದು ಹೇಳಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ಮುಕ್ತಿ ಸಿಗುವವರೆಗೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೊಮ್ಮೆ ಎಂಎಲ್‌ಸಿ ಆಗಿದ್ದಾಗ ನಡೆದ ಘಟನೆಯನ್ನು ಯತ್ನಾಳ್ ನೆನಪಿಸಿಕೊಂಡಿದ್ದು, ಶಂಕರ್ ಮೂರ್ತಿ ವಿರುದ್ಧ ಉಗ್ರಪ್ಪನವರು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು…

Read More

ಬಿಗ್​​ಬಾಸ್​​ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು? – Kannada News | Bigg Boss Kannada, Sooraj may enter Bigg Boss house

ಬಿಗ್​​ಬಾಸ್ ಕನ್ನಡ (Bigg Boss) ಹೊಸ ಸೀಸನ್​​ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಸ್ಪರ್ಧಿಗಳ ಆಯ್ಕೆಯೂ ಬಹುತೇಕ ಪೂರ್ಣಗೊಂಡಿದೆ. ಈ ಬಾರಿ ತುಸು ಮುಂಚಿತವಾಗಿಯೇ ಬಿಗ್​​ಬಾಸ್ ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ಪ್ರತಿ ಬಿಗ್​​ಬಾಸ್​​ ಸೀಸನ್​​ಗೂ ಕಡ್ಡಾಯವಾಗಿ ಹಾಸ್ಯನಟರನ್ನು ಸ್ಪರ್ಧಿಗಳಾಗಿ ಕಳಿಸಲಾಗುತ್ತದೆ. ತುಕಾಲಿ, ಮಂಜು ಇನ್ನೂ ಹಲವು ಕಾಮಿಡಿಯನ್​​ಗಳು ಸ್ಪರ್ಧಿಗಳಾಗಿದ್ದಾರೆ ಒಳ್ಳೆಯ ಪ್ರದರ್ಶನ ಸಹ ಮಾಡಿದ್ದಾರೆ. ಈ ಬಾರಿ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಹೆಸರು ಮಾಡಿರುವ ಸೂರಜ್, ಬಿಗ್​​ಬಾಸ್​​ಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಖುದ್ದು ಸೂರಜ್ ಅವರು…

Read More