Category Archives: Blog

Your blog category

Optical Illusion: ಈ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಬಲ್ಲಿರಾ – Kannada News | Optical Illusion: Tiger hiding among zebras, find it in just 8 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಸೇರಿದಂತೆ ಟ್ರಿಕ್ಕಿ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಹೀಗಾಗಿ ಹೆಚ್ಚಿನವರು ಒಗಟಿನತ್ತ ಆಸಕ್ತಿ ತೋರಿಸುತ್ತಾರೆ, ಇದೀಗ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಜೀಬ್ರಾಗಳ ಗುಂಪಿನಲ್ಲಿ ಅಡಗಿ ಕುಳಿತಿರುವ ಹುಲಿಯನ್ನು ಎಂಟು ಸೆಕೆಂಡುಗಳಲ್ಲಿ ಹುಡುಕುವ ಸವಾಲು ಇಲ್ಲಿದೆ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಹಚ್ಚ ಹಸಿರಿನ ಪ್ರದೇಶದಲ್ಲಿ ಜೀಬ್ರಾಗಳ ಹಿಂಡು ಓಡುತ್ತಿದೆ. ಇದೆಲ್ಲದರ ನಡುವೆ ಹುಲಿಯೊಂದು ಅಡಗಿ ಕುಳಿತಿದೆ. ಈ ಹುಲಿಯನ್ನು ತಕ್ಷಣಕ್ಕೆ ಹುಡುಕಲು ನಿಮಗೆ ಕಷ್ಟವಾಗಬಹುದು.

ಇದನ್ನೂ ಓದಿ: ಈ ಒಗಟಿನ ಚಿತ್ರದಲ್ಲಿರುವ ಹಲ್ಲಿಯನ್ನು ಹುಡುಕಿದ್ರೆ ನೀವೇ ಜಾಣರು

ಹುಲಿಯನ್ನು ಕಂಡುಹಿಡಿಯಲು ಸಾಧ್ಯವಾಯಿತೇ?

ಈ ಆಪ್ಟಿಕಲ್ ಒಗಟುಗಳಲ್ಲಿನ ವಿನ್ಯಾಸಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಿರಬಹುದು. ಈ ಇಲ್ಯೂಷನ್ ಚಿತ್ರದಲ್ಲಿ ಹುಲಿ ಎಷ್ಟು ವೇಷ ಮರೆಸಿದೆ ಎಂದರೆ ಅದು ಯಾರಿಗೂ ಕಾಣದಂತೆ ಅಡಗಿಕೊಂಡಿದೆ. ನಿಮ್ಮ ಕಣ್ಣಿಗೆ ಹುಲಿಯೂ ಕಾಣದೇ ಇರಬಹುದು. ಈ ಕೆಳಗಿನ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಿದ್ದೇವೆ ನೋಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ; ಶಾಕ್ ಆದ ಆ್ಯಂಕರ್ – Kannada News | Gilli Nata Take a Blessing from Anushree On A Stage Anchor Anushree in Shock

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುವುದನ್ನು ಕಾಣಬಹುದು. ಈಗ ಅವರು ಸಾಕಷ್ಟು ವೇದಿಕೆಗಳನ್ನು ಏರುತ್ತಿದ್ದಾರೆ. ಈಗ ಅವರಿಗೆ ವೇದಿಕೆ ಮೇಲೆ ಅನುಶ್ರೀ ಸಿಕ್ಕಿದ್ದಾರೆ. ಆಗ ಅನುಶ್ರೀ ಕಾಲಿಗೆ ಬಿದ್ದು ಅವರು ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಗಿಲ್ಲಿಗೆ ಅನುಶ್ರೀ ಮೇಲಿರುವ ಪ್ರೀತಿ ಎಷ್ಟಿದೆ ಎಂಬುದನ್ನು ತೋರಿಸಿದ್ದಾರೆ.

ಗಿಲ್ಲಿ ನಟ ಹಾಗೂ ಅನುಶ್ರೀ ಅವರು ಮೊದಲಿನಿಂದಲೂ ಪರಿಚಿತರು. ಜೀ ಕನ್ನಡದ ವೇದಿಕೆ ಇವರು ಒಟ್ಟಿಗೆ ಇದ್ದಿದ್ದನ್ನು ಕಾಣಬಹುದಾಗಿತ್ತು. ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಮೊದಲು ಸಂದರ್ಶನ ಒಂದರಲ್ಲಿ ಗಿಲ್ಲಿ ಇರುವಾಗಲೇ ಅನುಶ್ರೀಗೆ ಕರೆ ಮಾಡಲಾಗಿತ್ತು. ಈ ಕರೆ ವೇಳೆ ಅನುಶ್ರೀ ಅವರು ಗಿಲ್ಲಿಯನ್ನು ಭೇಟಿ ಮಾಡಬೇಕು ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ನಾನು ಸಾಯೋವರೆಗೂ ಚಿರಋಣಿ’; ಧನ್ಯವಾದ ಹೇಳಿದ ಆ್ಯಂಕರ್ ಅನುಶ್ರೀ

ಈಗ ಅನುಶ್ರೀ ಹಾಗೂ ಗಿಲ್ಲಿ ಭೇಟಿ ಆಗುವ ಅವಕಾಶ ಸಿಕ್ಕಿದೆ. ಗಿಲ್ಲಿ ನಟ ಅವರು ಹಲವು ವೇದಿಕೆ ಏರುತ್ತಿದ್ದಾರೆ. ಈ ವೇದಿಕೆ ಒಂದರ ಮೇಲೆ ಗಿಲ್ಲಿ ಹಾಗೂ ಅನುಶ್ರೀ ಪರಸ್ಪರ ಭೇಟಿ ಆದರು. ಆಗ ಅನುಶ್ರೀ ಕಾಲಿಗೆ ಬಿದ್ದು ಅವರು ಆಶೀರ್ವಾದ ಪಡೆದರು ಮತ್ತು ಇದರಿಂದ ಗಿಲ್ಲಿ ಅವರು ಖುಷಿಯಾದರು. ಆ ವೇಳೆ ಅನುಶ್ರೀ ಅವರು ಖುಷಿಪಟ್ಟರು. ಅವರಿಗೆ ಶಾಕ್ ಕೂಡ ಆಯಿತು. ಅನುಶ್ರೀ ಹಾಗೂ ಗಿಲ್ಲಿ ಪರಸ್ಪರ ಭೇಟಿ ಮಾಡಿದಾಗ ಸಾಕಷ್ಟು ಎಂಜಾಯ್ ಮಾಡುತ್ತಿದ್ದರಂತೆ. ಇದನ್ನು ಅವರು ಆಗ ಹೇಳಿಕೊಂಡಿದ್ದರು.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಅತ್ಯಧಿಕ ವೋಟ್​​ಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಬಿಗ್ ಬಾಸ್ ಕಡೆಯಿಂದ ಅವರಿಗೆ ಸಾಕಷ್ಟು ಹಣ ಸಿಕ್ಕಿದೆ. ಸುದೀಪ್ ಅವರು ಗಿಲ್ಲಿ ನಟನಿಗೆ 10 ಲಕ್ಷ ರೂಪಾಯಿ ನೀಡಿದ್ದನ್ನು ಕಾಣಬಹುದು. ಗಿಲ್ಲಿ ನಟ ಅವರು ಸಿನಿಮಾಗಳನ್ನು ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಹಾಸ್ಯ ನಟನಾಗಿ ಅವರು ಗಮನ ಸೆಳೆಯುವ ಸಾಧ್ಯತೆ ಇದೆ. ಅವರೇ ಸಂದರ್ಶನದಲ್ಲಿ ಹೇಳಿಕೊಂಡಂತೆ ಅವರಿಗೆ ಸಿನಿಮಾ ಮಾಡುವ ಆಸೆ ಇದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಸದ ರಾಶಿ ನಡುವೆ ಸಿಕ್ತು ನೂರಾರು ಬಾಕ್ಸ್ ಗೋವಾ ಲಿಕ್ಕರ್! ಪುಷ್ಪ ಸಿನೆಮಾ ಸ್ಟೈಲಲ್ಲಿ ಮದ್ಯ ಸಾಗಿಸುತ್ತಿದ್ದ ಗ್ಯಾಂಗ್ ಅಂದರ್ – Kannada News | Belagavi Police Seize Rs.25 Lakh Illegal Goa Liquor Smuggled in Garbage Truck

ಕಸದ ರಾಶಿ ನಡುವೆ ಸಿಕ್ತು ನೂರಾರು ಬಾಕ್ಸ್ ಗೋವಾ ಲಿಕ್ಕರ್! ಪುಷ್ಪ ಸಿನೆಮಾ ಸ್ಟೈಲಲ್ಲಿ ಮದ್ಯ ಸಾಗಿಸುತ್ತಿದ್ದ ಗ್ಯಾಂಗ್ ಅಂದರ್

ಬೆಳಗಾವಿ, ಫೆಬ್ರುವರಿ 01: ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ದರೋಡೆ ಪ್ರಕರಣದ ಬೆನ್ನಲ್ಲೇ ಅದೇ ಮಾರ್ಗದಲ್ಲಿ ಇನ್ನೊಂದು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪುಷ್ಪ ಸಿನೆಮಾವನ್ನು ನೆನಪಿಸುವಂತೆ ಕಸದ ಮಧ್ಯೆ ಮದ್ಯದ ಬಾಕ್ಸ್‌ಗಳನ್ನು ಮರೆಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಗ್ಯಾಂಗ್ ಅನ್ನು ಬೆಳಗಾವಿ (Belagavi) ನಗರದ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

800 ಬಾಕ್ಸ್ ಗೋವಾ ಮದ್ಯ!

ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿತ್ತು ಎಂಬ ಖಚಿತ ಮಾಹಿತಿಯ ಮೇರೆಗೆ, ಸಿಪಿಐ ಬಿ.ಆರ್. ಗಡ್ಡೇಕರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರ ತಲುಪಬೇಕಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದರೊಳಗೆ ಕಸ ತುಂಬಿರುವಂತೆ ಬಿಂಬಿಸಿ, ಕಸದ ರಾಶಿಯ ಒಳಭಾಗದಲ್ಲಿ 800 ಬಾಕ್ಸ್ ಅಕ್ರಮ ಗೋವಾ ಮದ್ಯವನ್ನು ಇಟ್ಟು ಸಾಗಿಸಲಾಗುಯತ್ತಿತ್ತು ಎಂಬುದನ್ನು ಪತ್ತೆಹಚ್ಚಿದ್ದಾರೆ.

ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ

ಎರಡೆರಡು ಚೆಕ್ ಪೋಸ್ಟ್ ದಾಟಿದ್ದ ಗ್ಯಾಂಗ್

ವಶಪಡಿಸಿಕೊಂಡ ಮದ್ಯದ ಅಂದಾಜು ಮೌಲ್ಯ 25 ಲಕ್ಷ ರೂ.ಗಿಂತ ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ವಾಹನದ ಹೊರಭಾಗದಲ್ಲಿ ವೆಸ್ಟೇಜ್ ವಸ್ತುಗಳನ್ನು ತುಂಬಿ, ಒಳಭಾಗದಲ್ಲಿ ಮದ್ಯ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಗೋವಾದಿಂದ ಹೊರಡುವಾಗ ಎರಡು ಕಡೆ ಚೆಕ್ ಪೋಸ್ಟ್‌ಗಳಿದ್ದರೂ, ಅಕ್ರಮ ಮದ್ಯ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಿದ್ದು ಹೇಗೆ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ

ಕಣಕುಂಬಿ ಬಳಿ ಚೆಕ್ ಪೋಸ್ಟ್ ಇದ್ದರೂ ರಾಜಾರೋಷವಾಗಿ ಮದ್ಯ ಸಾಗಾಟ ನಡೆದಿರುವುದು ಅಬಕಾರಿ ಇಲಾಖೆ ಮತ್ತು ಜಿಲ್ಲಾ ಪೊಲೀಸರ ಕಾರ್ಯವೈಖರಿಯ ಮೇಲೆ ಅನುಮಾನ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಾಘ ಮಾಸ ಹುಣ್ಣಿಮೆ: ಟಿ ನರಸೀಪುರದ ಕಾವೇರಿ ನದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತರ ದಂಡು – Kannada News | Magha Purnima: Devotees Throng Triveni Sangama at T Narsipur for Holy Dip

ಮೈಸೂರು, ಫೆಬ್ರವರಿ 1: ಟಿ. ನರಸೀಪುರದಲ್ಲಿರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಾಘ ಮಾಸ ಹುಣ್ಣಿಮೆಯ ಪುಣ್ಯಸ್ನಾನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಕಾವೇರಿ, ಕಬಿನಿ ಮತ್ತು ಕಪಿಲಾ ನದಿಗಳು ಸೇರುವ ಈ ಸಂಗಮ ಸ್ಥಳದಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ, ಮಧ್ಯರಾತ್ರಿಯಿಂದಲೇ ಸಹಸ್ರಾರು ಭಕ್ತರು ಸಂಗಮ ಸ್ಥಳದಲ್ಲಿ ಪವಿತ್ರ ಸ್ನಾನ ಕೈಗೊಂಡರು.

ಪುಣ್ಯಸ್ನಾನದ ನಂತರ, ಭಕ್ತರು ಸಮೀಪದಲ್ಲಿರುವ ಐತಿಹಾಸಿಕ ಗುಂಜಾ ನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಈ ಶುಭ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಟಿ. ನರಸೀಪುರಕ್ಕೆ ದಂಡು ಹರಿದುಬಂದಿತ್ತು. ನದಿತೀರದಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಈ ಸಮೂಹ ಸ್ನಾನವು ಹಿಂದೂ ಧರ್ಮದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

 

Source link

ಚೆನ್ನೈ ವಿರುದ್ಧ ಗೆದ್ದು ಫೈನಲ್​ಗೆ ಏರಿದ ಕರ್ನಾಟಕ ಬುಲ್ಡೋಜರ್ಸ್​; ಒಲಿಯುತ್ತಾ ಕಪ್? – Kannada News | Karnataka Bulldozers Enters CCL Final After Defeating Karnataka Chennai Kings in semifinal

ಕರ್ನಾಟಕ ಬುಲ್ಡೋಜರ್ಸ್​ಗೆ ಜಯ Image Credit source: Hotstar

ಕಳೆದ ವರ್ಷದ ಸಿಸಿಎಲ್​​ನಲ್ಲಿ (CCL) ರನ್ನರ್ ಅಪ್ ಆಗಿರೋ ಕರ್ನಾಟಕ ಬುಲ್ಡೋಜರ್ಸ್ ತಂಡವು ಒಂದು ಪಂದ್ಯವನ್ನೂ ಸೋಲದೇ ಈ ಬಾರಿ ಫಿನಾಲೆಗೆ ಏರಿರುವುದು ವಿಶೇಷ. ಚೆನ್ನೈ ಕಿಂಗ್ಸ್ ವಿರುದ್ಧ ಜನವರಿ 31ರಂದು ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದರು ಮತ್ತು ಫಿನಾಲೆಗೆ ಏರಿದರು. ಕಿಚ್ಚ ಸುದೀಪ್ ಅವರ ನೇತೃತ್ವದ ತಂಡವು ಸಾಕಷ್ಟು ಉತ್ತಮವಾಗಿ ಕಾಣಿಸುತ್ತಿದೆ. ಈ ಬಾರಿ ಅವರು ಕಪ್ ಗೆಲ್ಲುವ ಎಲ್ಲಾ ಸಾಧ್ಯತೆ ಇದೆ.

ಮೊದಲ ಮೂರು ಪಂದ್ಯಗಳನ್ನು ಗೆದ್ದ ಕರ್ನಾಟಕ ಬುಲ್ಡೋಜರ್ಸ್ ತಂಡವು ನೇರವಾಗಿ ಸೆಮಿಫೈನಲ್​​ಗೆ ಅವಕಾಶ ಪಡೆಯಿತು. ಹಲವು ತಂಡಗಳ ಕನಸನ್ನು ಇವರು ನುಚ್ಚು ನೂರು ಮಾಡಿದರು. ಚೆನ್ನೈನಲ್ಲಿ ನಡೆದ ಸೆಮಿಫೈನಲ್​ ಅಲ್ಲಿ ಕರ್ನಾಟಕ ತಂಡವು ಗೆಲುವು ಕಂಡಿತು.

ಇದನ್ನೂ ಓದಿ: CCL 2025: ತೆಲುಗು ವಾರಿಯರ್ಸ್​ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್​ಗೆ ಬೃಹತ್ ಜಯ

ಚೆನ್ನೈ ಕಿಂಗ್ಸ್ ತಂಡ ಮೊದಲ 10 ಓವರ್​​ಗೆ 108 ರನ್ ಗಳಿಸಿತು. ಆ ಪಂದ್ಯದಲ್ಲಿ ಯಾರಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ. ಆ ಬಳಿಕ ಕರ್ನಾಕಟ ಬುಲ್ಡೋಜರ್ಸ್ 142 ರನ್ ಗಳಿಸಿ, 34 ರನ್​​ಗಳ ಲೀಡ್ ಪಡೆಯಿತು. ನಂತರ ಚೆನ್ನೈ ತಂಡವು ಎರಡನೇ ಇನ್ನಿಂಗ್ಸ್​​ಗೆ ಬ್ಯಾಟಿಂಗ್​​​ಗೆ ಇಳಿಯಿತು. ನಂತರ 103 ರನ್​​ಗಳಿಗೆ ಚೆನ್ನೈ ಆಲ್​ ಔಟ್ ಆಯಿತು. ಕರ್ನಾಟಕ ತಂಡದವರದ್ದು 34 ರನ್ ಲೀಡ್ ಇದ್ದಿದ್ದರಿಂದ, ನಂತರ ತಂಡಕ್ಕೆ ಬೇಕಾಗಿದ್ದುದು 69 ರನ್ ಮಾತ್ರ. ಹೀಗಾಗಿ, ತಂಡದವರು ಸುಲಭದಲ್ಲಿ ಗೆಲುವು ಕಂಡಿತು. ಕೇವಲ 6.5 ಓವರ್​​ಗೆ ಈ ಚೇಸ​ನ ತಲುಪಿದರು. ಈ ಮೂಲಕ ದಾಖಲೆ ಬರೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್ – Kannada News | Arshdeep Singh Creates Unwanted Record With Five fer

ನ್ಯೂಝಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಐದು ವಿಕೆಟ್​ಗಳೊಂದಿಗೆ ಅವರು ಅತ್ಯಂತ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ತಿರುವನಂತಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಅರ್ಷದೀಪ್ ಸಿಂಗ್ 51 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.

ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅರ್ಷದೀಪ್ ಸಿಂಗ್ ಅವರ ಚೊಚ್ಚಲ 5 ವಿಕೆಟ್. ಆದರೆ ಈ ಐದು ವಿಕೆಟ್ ಕಬಳಿಸಲು ಅವರು ನೀಡಿದ್ದು ಬರೋಬ್ಬರಿ 51 ರನ್​ಗಳು. ಇದರೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಿಟ್ಟು ಕೊಟ್ಟು ಐದು ವಿಕೆಟ್ ಪಡೆದ ಬೌಲರ್ ಎಂಬ ಹೀನಾಯ ದಾಖಲೆಯೊಂದು ಅರ್ಷದೀಪ್ ಸಿಂಗ್ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ವೇಗಿ ಅಲ್ಝಾರಿ ಜೋಸೆಫ್ ಹೆಸರಿನಲ್ಲಿತ್ತು. 2023 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಲ್ಝಾರಿ ಜೋಸೆಫ್ 40 ರನ್ ನೀಡಿ 5 ವಿಕೆಟ್ ಕಬಳಿಸಿ ಅನಗತ್ಯ ದಾಖಲೆಗೆ ಕೊರೊಳೊಡ್ಡಿದ್ದರು. ಇದೀಗ 4 ಓವರ್​ಗಳಲ್ಲಿ ಬರೋಬ್ಬರಿ 51 ರನ್ ನೀಡುವ ಮೂಲಕ ಅರ್ಷದೀಪ್ ಸಿಂಗ್ ದುಬಾರಿ 5 ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 271 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 19.4 ಓವರ್​ಗಳಲ್ಲಿ 225 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 46 ರನ್​ಗಳ ಗೆಲುವು ದಾಖಲಿಸಿದೆ.

Source link

ಮಹಿಳೆಯ ಕುತ್ತಿಗೆ ಮುಖ, ಕೈ-ಕಾಲು ಕಚ್ಚಿ ಹಾಕಿದ ಶ್ವಾನ: ಈ ಭೀಕರ ದಾಳಿಗೆ ಬೆಚ್ಚಿಬಿದ್ದ ಬೆಂಗಳೂರು – Kannada News | HSR Layout Dog Attack: Bengaluru Pet Owners Must Follow Muzzle and Leash Rules

ಬೆಂಗಳೂರು, ಜ.1: ಬೆಂಗಳೂರಿನಲ್ಲಿ(Bengaluru dog attack) ಸಾಕು ನಾಯಿಗಳ ದಾಳಿ ಮಾಡುವ ಘಟನೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಳ್ಳಂಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಜನವರಿ 26 ರಂದು ಬೆಳಿಗ್ಗೆ 6.54 ರ ಸುಮಾರಿಗೆ ಎಚ್‌ಎಸ್‌ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಹಿಳೆ ವಾಕಿಂಗ್‌ಗೆ ಹೋಗಿದ್ದಾಗ ಸ್ಥಳೀಯ ನಿವಾಸಿ ಅಮರೇಶ್ ರೆಡ್ಡಿ ಎಂಬವರ ನಾಯಿ ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿದೆ. ನಾಯಿ ಮೊದಲು ಮಹಿಳೆಯ ಕುತ್ತಿಗೆಗೆ ಕಚ್ಚಿ, ನಂತರ ಆಕೆಯ ಮುಖ, ಕೈಗಳು ಮತ್ತು ಕಾಲುಗಳ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವಿಡಿಯೋವೊಂದು ವೈರಲ್​​ ಆಗಿದೆ. ಮುಂಜಾನೆ ಸುಮಾರು 6:30 ರಿಂದ 7:00 ಗಂಟೆಯ ಸುಮಾರಿಗೆ ಮಹಿಳೆ ವಾಕಿಂಗ್ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ.

ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ನಾಯಿಯು ಏಕಾಏಕಿ ಹಾರಿ ಮುಖ ಮತ್ತು ಕುತ್ತಿಗೆಯ ಭಾಗವನ್ನು ಗುರಿಯಾಗಿಸಿಕೊಂಡು ಕಚ್ಚಿದೆ. ಮಹಿಳೆ ಕೆಳಗೆ ಬಿದ್ದರೂ ನಾಯಿ ಬಿಡದೆ ದಾಳಿ ನಡೆಸಿದೆ. ಈ ದಾಳಿಯಿಂದ ಮಹಿಳೆಯ ಮುಖಕ್ಕೆ ಗಂಭೀರವಾದ ಗಾಯಗಳಾಗಿದ್ದು, ವೈದ್ಯರು ಮುಖದ ಮೇಲೆ ಬರೋಬ್ಬರಿ 50 ಹೊಲಿಗೆಗಳನ್ನು ಹಾಕಿದ್ದಾರೆ. ಇದರ ಜತೆಗೆ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯ ಇದೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಯ ಭೀಕರ ದೃಶ್ಯಗಳು ಸಮೀಪದ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋದಲ್ಲಿ ಮಹಿಳೆ ಸಹಾಯಕ್ಕಾಗಿ ಕಿರುಚುತ್ತಿರುವುದು ಮತ್ತು ನಾಯಿಯನ್ನು ಬಿಡಿಸಲು ಸ್ಥಳೀಯರು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ.

ಇಲ್ಲಿದೆ ನೋಡಿ ವಿಡಿಯೋ:

ನಾಯಿಯನ್ನು ಸರಿಯಾಗಿ ನಿಯಂತ್ರಿಸದ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸದ ಕಾರಣ ನಾಯಿ ಮಾಲೀಕನ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ. ಬಿಬಿಎಂಪಿ ಪಶುಪಾಲನಾ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ ನಾಯಿಯನ್ನು ವಶಕ್ಕೆ ಪಡೆದಿದ್ದು, ಅದಕ್ಕೆ ರೇಬಿಸ್ ಅಥವಾ ಇನ್ಯಾವುದೇ ಕಾಯಿಲೆ ಇದೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾಕು ನಾಯಿಗಳ ಮಾಲೀಕರು ಮಾಸ್ಕ್ (Muzzle) ಮತ್ತು ಲೀಶ್ (Leash) ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ಪ್ರಕರಣದಲ್ಲಿ ಆ ನಿಯಮಗಳ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿಗಳನ್ನು ನೋಡಿದಾಗ ಅಥವಾ ಅಂತಹ ಪರಿಸ್ಥಿತಿ ಎದುರಾದಾಗ ಜಾಗರೂಕರಾಗಿರುವುದು ಅವಶ್ಯಕ. ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಜಪಾನ್ ರಾಯಭಾರಿಗೂ ಇಷ್ಟ ಬೆಂಗಳೂರಿನ ಪಿಜ್ಜಾ! ಓನೋ ಕೈಇಚಿ ಪೋಸ್ಟ್​ಗೆ ತೇಜಸ್ವಿ ಸೂರ್ಯ ರಿಯಾಕ್ಷನ್

ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯದ ನಡವಳಿಕೆ. ಸಾಕುಪ್ರಾಣಿಯಿಂದ ಬೇರೆಯವರಿಗೆ ಅಪಾಯವಾಗಬಹುದು ಎಂದು ತಿಳಿದಿದ್ದರೂ ಸರಿಯಾದ ಮುನ್ನೆಚ್ಚರಿಕೆ ವಹಿಸದಿದ್ದರೆ, ಮಾಲೀಕನಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 5,000 ರೂ. ವರೆಗೆ ದಂಡ, ಎರಡನ್ನೂ ವಿಧಿಸಬಹುದು. ನಿರ್ಲಕ್ಷ್ಯದ ಮೂಲಕ ಇತರರ ಜೀವಕ್ಕೆ ಅಪಾಯ ತರುವುದು ಅಥವಾ ಗಂಭೀರ ಗಾಯಗೊಳಿಸುವುದು. ಇಲ್ಲಿ ಮಹಿಳೆಯ ಮುಖಕ್ಕೆ 50 ಹೊಲಿಗೆ ಬಿದ್ದಿರುವುದರಿಂದ ಇದು ‘ಗಂಭೀರ ಗಾಯ’ದ ವ್ಯಾಪ್ತಿಗೆ ಬರುತ್ತದೆ. ಇದರ ಅಡಿಯಲ್ಲಿ ಮಾಲೀಕನಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಸಾರ್ವಜನಿಕ ಸ್ಥಳದಲ್ಲಿ ನಾಯಿಯಿಂದ ತೊಂದರೆಯಾದರೆ ಅಥವಾ ಪರವಾನಗಿ ಇಲ್ಲದೆ ನಾಯಿ ಸಾಕಿದ್ದರೆ 1,000 ರೂ. ರಿಂದ 5,000 ರೂ. ವರೆಗೆ ಆರಂಭಿಕ ದಂಡ ವಿಧಿಸಲಾಗುತ್ತದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿದ್ದರಾಮಯ್ಯ: ಝೈದ್ ಖಾನ್ ಹೇಳಿದ್ದಿಷ್ಟು.. – Kannada News | Zaid Khan says CM Siddaramaiah got emotional while watching Cult movie

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗಾಗಿ ‘ಕಲ್ಟ್’ ಸಿನಿಮಾದ (Cult movie) ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಿನಿಮಾವನ್ನು ವೀಕ್ಷಿಸುವಾಗ ಮಗನನ್ನು ನೆನಪಿಸಿಕೊಂಡು ಸಿದ್ದರಾಮಯ್ಯ ಭಾವುಕರಾದರು. ಆ ಬಗ್ಗೆ ಝೈದ್ ಖಾನ್ (Zaid Khan) ಅವರು ಮಾಹಿತಿ ನೀಡಿದ್ದಾರೆ. ‘ಇವತ್ತು ಸಿದ್ದರಾಮಯ್ಯ ಸರ್ ನನ್ನ ಸಿನಿಮಾ ನೋಡಿದ್ದಕ್ಕೆ ಬಹಳ ಖುಷಿ ಆಗಿದೆ. ಅವರಿಗೆ ಸಿನಿಮಾ ನೋಡಲು ಕರೆಯಬೇಕೋ ಬೇಡವೋ ಅಂತ ಆಲೋಚನೆ ಇರಲಿಲ್ಲ. ಅವರೇ ನಮ್ಮ ತಂದೆಗೆ ಕರೆ ಮಾಡಿ ನಿಮ್ಮ ಮಗನ ಸಿನಿಮಾ ನೋಡಬೇಕು ಅಂದರು. ಹಂಪಿಯನ್ನು ಬಹಳ ಚೆನ್ನಾಗಿ ತೋರಿಸಿದ್ದರಿಂದ ಅವರಿಗೆ ಸಿನಿಮಾ ನೋಡಬೇಕು ಅನಿಸಿತ್ತು. ಅದಕ್ಕಾಗಿ ಅವರಿಗಾಗಿ ಶೋ ರೆಡಿ ಮಾಡಿದೆವು. ಅವರಿಗೆ ಈ ಸಿನಿಮಾ ಇಷ್ಟ ಆಗಿದೆ. ತುಂಬಾ ಹೊಗಳಿದರು. ಇದು ಫ್ಯಾಮಿಲಿ ಸಿನಿಮಾ. ತಂದೆ-ಮಗನ ಒಂದು ದೃಶ್ಯ ನೋಡುವಾಗ ಅವರು ಕಣ್ಣೀರು ಹಾಕಿದರು. ಮಗನ ನೆನಪು ಆಯಿತು ಎಂದರು. ಅದಕ್ಕಿಂತ ಇನ್ನೇನು ಬೇಕು’ ಎಂದು ಝೈದ್ ಖಾನ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ – Kannada News | PAK vs AUS: Cameron Green was unhappy with Usman Tariq’s bowling action

ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಸೋಲನುಭವಿಸಿದೆ. ಈ ಬಾರಿ ಸೋತಿದ್ದು ಬರೋಬ್ಬರಿ 90 ರನ್​ಗಳ ಅಂತರದಿಂದ. ಈ ಸೋಲಿನ ಬೆನ್ನಲ್ಲೇ ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಪಂದ್ಯದಲ್ಲಿ 20 ಎಸೆತಗಳನ್ನು ಎದುರಿಸಿದ್ದ ಕ್ಯಾಮರೋನ್ ಗ್ರೀನ್ 2 ಸಿಕ್ಸರ್ ಹಾಗೂ 1 ಫೋರ್​ನೊಂದಿಗೆ 35 ರನ್ ಬಾರಿಸಿದ್ದರು.

ಆದರೆ ಯಾವಾಗ ಉಸ್ಮಾನ್ ತಾರಿಖ್ ಸ್ಪಿನ್ ದಾಳಿ ಶುರು ಮಾಡಿದರೂ ಕ್ಯಾಮರೋನ್ ಗ್ರೀನ್ ರನ್​ಗಳಿಸಲು ತಡಕಾಡಿದರು. ಅದರಲ್ಲೂ ಪಂದ್ಯದ 11ನೇ ಓವರ್​ನ 5ನೇ ಎಸೆತದಲ್ಲಿ ಉಸ್ಮಾನ್ ಎಸೆತದಲ್ಲಿ ಕ್ಯಾಚ್ ನೀಡಿ ಗ್ರೀನ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಅತ್ತ ಡಗೌಟ್​ಗೆ ತಲುಪುತ್ತಿದ್ದಂತೆ ಕ್ಯಾಮರೋನ್ ಗ್ರೀನ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಶೈಲಿ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 198 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 15.4 ಓವರ್​ಗಳಲ್ಲಿ ಕೇವಲ 108 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕ್ ಪಡೆ ಬರೋಬ್ಬರಿ 90 ರನ್​ಗಳ ಜಯ ಸಾಧಿಸಿದೆ.

Source link

Indian Coast Guard Day 2026: ದೇಶದ ಕಡಲ ಗಡಿಗಳನ್ನು ರಕ್ಷಣೆ ಮಾಡುವಲ್ಲಿ ಕರಾವಳಿ ಭದ್ರತಾ ಪಡೆಗಳ ಪಾತ್ರ ಮಹತ್ತರವಾದದ್ದು – Kannada News | Indian Coast Guard Day 2026: Know the history and significance of Indian Coast Guard Day

ಭಾರತೀಯ ಕರಾವಳಿ ಭದ್ರತಾ ಪಡೆ ದಿನImage Credit source: Social Media

ಭಾರತವು  ವಿಶಾಲವಾದ ಕರಾವಳಿ ಪ್ರದೇಶಗಳನ್ನು ಹೊಂದಿರುವ ರಾಷ್ಟ್ರವಾಗಿದ್ದು, 7,500 ಕಿಲೋಮೀಟರ್‌ಗಳಿಗೂ ಹೆಚ್ಚು ಕರಾವಳಿ ಭಾಗವನ್ನು ಹೊಂದಿದೆ. ಮೂರು ಕಡೆಗಳಲ್ಲಿ ಸಾಗರದಿಂದ ಸುತ್ತುವರೆದಿರುವ ನಮ್ಮ ಈ ರಾಷ್ಟ್ರಕ್ಕೆ ಕಡಲ ಗಡಿ ಭದ್ರತೆಯು ತುಂಬಾನೇ ಮುಖ್ಯವಾಗಿದೆ. ಈ ಕಡಲ ಗಡಿಗಳನ್ನು ಸುರಕ್ಷಿತವಾಗಿಡುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ (ICG) ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೇ ಕಡಲ್ಗಳ್ಳತನ, ಕರಾವಳಿ ಪ್ರದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ, ಸಮುದ್ರದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿಯೂ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಭಾರತೀಯ ಕರಾವಳಿ ಭದ್ರತಾ ಪಡೆಯ ಸಿಬ್ಬಂದಿಗಳ ಧೈರ್ಯ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸಲು ಪ್ರತಿವರ್ಷ ಫೆಬ್ರವರಿ 1 ರಂದು ಭಾರತೀಯ ಕರಾವಳಿ ಕಾವಲುಪಡೆ ದಿನವನ್ನು ಆಚರಿಸಲಾಗುತ್ತದೆ.

ಭಾರತೀಯ ಕರಾವಳಿ ಭದ್ರತಾ ಪಡೆ ದಿನದ ಇತಿಹಾಸವೇನು?

ಪ್ರತಿ ವರ್ಷ ಫೆಬ್ರವರಿ 1 ರಂದು ಆಚರಿಸಲಾಗುವ ಭಾರತೀಯ ಕರಾವಳಿ ಕಾವಲು ಪಡೆಯ ದಿನವು 1978 ರಲ್ಲಿ ಕರಾವಳಿ ಕಾವಲು ಪಡೆಯ (ICG) ಸ್ಥಾಪನೆಯ ದಿನವನ್ನು ಸ್ಮರಿಸುತ್ತದೆ. ಭಾರತೀಯ ಕೋಸ್ಟ್ ಗಾರ್ಡ್ ಫೆಬ್ರವರಿ 1, 1977 ರಂದು ಅಸ್ತಿತ್ವಕ್ಕೆ ಬಂದಿತು. ಆ ಸಮಯದಲ್ಲಿ ಅದು ಭಾರತೀಯ ಜಲಪ್ರದೇಶ ಮತ್ತು ವಿಶೇಷ ಆರ್ಥಿಕ ವಲಯದಲ್ಲಿ ಕಣ್ಗಾವಲುಗಾಗಿ ಕೇವಲ ಏಳು ಹಡಗುಗಳ ನೌಕಾಪಡೆಯ ಬಲವನ್ನು ಹೊಂದಿತ್ತು. ನಂತರ ಔಪಚಾರಿಕವಾಗಿ, ಭಾರತೀಯ ಕೋಸ್ಟ್ ಗಾರ್ಡ್ ಅನ್ನು ಆಗಿನ ಪ್ರಧಾನಿ ಶ್ರೀ ಮೊರಾರ್ಜಿ ದೇಸಾಯಿ ಅವರು ಆಗಸ್ಟ್ 19, 1978 ರಂದು ಉದ್ಘಾಟಿಸಿದರು. ಈ ದಿನದ ನೆನಪಿಗಾಗಿ ಪ್ರತಿವರ್ಷ ಫೆಬ್ರವರಿ 1 ರಂದು ಭಾರತೀಯ ಕರಾವಳಿ ಕಾವಲು ಪಡೆ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಭಾರತೀಯ ಕರಾವಳಿ ಭದ್ರತಾಪಡೆ ದಿನದ ಉದ್ದೇಶವೇನು?

  • ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಕರಾವಳಿ ಭದ್ರತಾ ಪಡೆಯ ಸಮರ್ಪಣೆ ಮತ್ತು ಶೌರ್ಯವನ್ನು ಗೌರವಿಸುವುದು.
  • ಭಾರತೀಯ ಕರಾವಳಿ ಕಾವಲು ಪಡೆ ದಿನದ ಉದ್ದೇಶ ಭಾರತೀಯ ಕರಾವಳಿ ಮತ್ತು ಕಡಲ ಪ್ರದೇಶಗಳನ್ನು ರಕ್ಷಿಸುವುದು.
  • ಕಡಲ ಭದ್ರತೆಯನ್ನು ಉತ್ತೇಜಿಸುವುದು.
  • ಕರಾವಳಿ ರಕ್ಷಣಾ ಪಡೆ ಸಿಬ್ಬಂದಿಗಳ ತ್ಯಾಗ, ಕೊಡುಗೆಗಳನ್ನು ಗೌರವಿಸುವುದು.

ಇದನ್ನೂ ಓದಿ:  ಜನವರಿ 30 ರಂದು ಹುತಾತ್ಮರ ದಿನವನ್ನು ಆಚರಿಸುವುದೇಕೆ? ಇಲ್ಲಿದೆ ಮಾಹಿತಿ

ಭಾರತೀಯ ಕರಾವಳಿ ಕಾವಲು ಪಡೆಯ ದಿನದ ಮಹತ್ವವೇನು?

ಐಸಿಜಿಯ ಪಾತ್ರವನ್ನು ಗುರುತಿಸುವುದು: ಕಡಲ ಸುರಕ್ಷತೆ, ಭದ್ರತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ಕರಾವಳಿ ಪಡೆಯ ಪ್ರಮುಖ ಪಾತ್ರವನ್ನು ಗುರುತಿಸಲು ಮತ್ತು ಪ್ರಶಂಸಿಸಲು ಈ ದಿನವು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಐಸಿಜಿ ಸಿಬ್ಬಂದಿಗಳನ್ನು ಗೌರವಿಸುವುದು: ಭಾರತದ ಕಡಲ ಗಡಿಗಳನ್ನು ಅವಿಶ್ರಾಂತವಾಗಿ ರಕ್ಷಿಸುವ ಭಾರತೀಯ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳ ಸಮರ್ಪಣೆ ಮತ್ತು ತ್ಯಾಗವನ್ನು ಗೌರವಿಸಲು ಈ ದಿನ ಒಂದು ವೇದಿಕೆಯಾಗಿದೆ.

ಸಾರ್ವಜನಿಕ ಜಾಗೃತಿ ಮೂಡಿಸುವುದು: ಐಸಿಜಿಯ ವೈವಿಧ್ಯಮಯ ಪಾತ್ರಗಳು, ಜವಾಬ್ದಾರಿಗಳು ಮತ್ತು ಸಾಧನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.

ಭವಿಷ್ಯದ ಪೀಳಿಗೆಗೆ ಸ್ಫೂರ್ತಿ: ಈ ದಿನವು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಐಸಿಜಿಯಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಮತ್ತು ದೇಶದ ಕಡಲ ಭದ್ರತೆಗೆ ಕೊಡುಗೆ ನೀಡಲು ಯುವಜನರನ್ನು ಪ್ರೋತ್ಸಾಹಿಸುತ್ತದೆ.

ಭಾರತೀಯ ಕರಾವಳಿ ಕಾವಲು ಪಡೆಗಳ ಕಾರ್ಯವೇನು?

  • ಕಡಲ ಗಡಿಗಳನ್ನು ರಕ್ಷಿಸುವುದು.
  • ಕಳ್ಳಸಾಗಣೆ ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವುದು.
  • ವಿಪತ್ತು ನಿರ್ವಹಣೆ ಮತ್ತು ಪರಿಹಾರ ಕಾರ್ಯಚರಣೆ
  • ಮಾಲಿನ್ಯ ನಿಯಂತ್ರಣ ಮತ್ತು ಸಮುದ್ರದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ, ಭಾರತೀಯ ಕರಾವಳಿ ಕಾವಲು ಪಡೆ ಭಾರತೀಯ ಕರಾವಳಿಯನ್ನು ಅಕ್ರಮ ಚಟುವಟಿಕೆಗಳಿಂದ ರಕ್ಷಿಸುವ ಕಾರ್ಯವನ್ನೂ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link