Category Archives: Blog

Your blog category

Gold, Silver Price: ಬಜೆಟ್ ಮುನ್ನವೇ ಸಿಹಿ ಸುದ್ದಿ, ಚಿನ್ನ ಮತ್ತು ಬೆಳ್ಳಿ ಬೆಲೆ ಭಾರಿ ಇಳಿಕೆ – Kannada News | Gold, Silver Price Drop Ahead of Budget Brings Relief to Buyers in Bangalore

ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ (Union Budget 2026) ಮಂಡಿಸುವುದಕ್ಕೂ ಕೆಲವೇ ಕ್ಷಣ ಮುನ್ನವೇ, ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಸತತ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ (Gold Price) ಇಂದು (ಫೆಬ್ರವರಿ 1, 2026) ಗಮನಾರ್ಹ ಇಳಿಕೆ ಕಂಡುಬಂದಿದೆ.

ಬೆಂಗಳೂರಿನಲ್ಲೆಷ್ಟಿದೆ ಚಿನ್ನದ ದರ?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಸುಮಾರು 1,47,200 ರೂ. ಆಗಿದೆ. ಅದೇ ರೀತಿ, 24 ಕ್ಯಾರೆಟ್‌ನ (ಅಪರಂಜಿ) 10 ಗ್ರಾಂ ಚಿನ್ನದ ಬೆಲೆ 1,60,580 ರೂ. ನಷ್ಟಿದೆ. ಕಳೆದ ವಾರಕ್ಕೆ ಹೋಲಿಸಿದರೆ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 700 ರಿಂದ 900 ರೂ. ವರೆಗೆ ಇಳಿಕೆಯಾಗಿರುವುದು ಹೂಡಿಕೆದಾರರಲ್ಲಿ ಮತ್ತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ಬೆಳ್ಳಿ ಬೆಲೆಯೂ ಇಳಿಕೆ

ಚಿನ್ನದ ಹಾದಿಯನ್ನೇ ಹಿಡಿದಿರುವ ಬೆಳ್ಳಿಯ ಬೆಲೆಯೂ ಇಂದು ದಾಖಲೆ ಮಟ್ಟದಲ್ಲಿ ಕುಸಿದಿದೆ. ಬೆಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿಯ ಬೆಲೆ ಬರೋಬ್ಬರಿ 45,000 ರೂ.ನಷ್ಟು ಇಳಿಕೆಯಾಗಿ 3,50,000 ರೂ.ಗೆ ತಲುಪಿದೆ. ಅಂದರೆ ಪ್ರತಿ ಗ್ರಾಂ ಬೆಳ್ಳಿಯ ಬೆಲೆ 350 ರೂ. ಆಗಿದೆ.

ಚಿನ್ನ, ಬೆಳ್ಳಿ ಬೆಲೆ ಇಳಿಕೆಗೆ ಕಾರಣಗಳೇನು?

ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಮತ್ತು ಹೂಡಿಕೆದಾರರು ಲಾಭಾಂಶವನ್ನು ಹಿಂಪಡೆಯುತ್ತಿರುವುದು ಈ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇದರೊಂದಿಗೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2026-27ನೇ ಸಾಲಿನ ಬಜೆಟ್‌ನಲ್ಲಿ ಆಮದು ಸುಂಕದ ಕುರಿತು ತೆಗೆದುಕೊಳ್ಳಬಹುದಾದ ನಿರ್ಧಾರಗಳ ನಿರೀಕ್ಷೆಯೂ ಈ ಮಾರುಕಟ್ಟೆ ಚಲನೆಗೆ ಕಾರಣವಾಗಿದೆ.

ಮದುವೆ ಸೀಸನ್ ಆರಂಭವಾಗುತ್ತಿರುವ ಈ ಸಮಯದಲ್ಲಿ ಬೆಲೆ ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ನಿರಾಳ ತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಸರ್ಕಾರದಲ್ಲಿ 12 ವರ್ಷದಲ್ಲಿ ಬಜೆಟ್ ಹೇಗೆಲ್ಲಾ ಪರಿವರ್ತನೆ ಪಡೆದಿದೆ ಗೊತ್ತಾ? – Kannada News | Under Modi government, know how budgets have changed in last few years

ನವದೆಹಲಿ, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಭಾರತದ 88ನೇ ಕೇಂದ್ರ ಬಜೆಟ್ (Union Budget) ಅನ್ನು ಮಂಡಿಸುತ್ತಿದ್ದಾರೆ. ಇದು ಅವರಿಗೆ ಸತತ 9ನೇ ಬಜೆಟ್ ಆಗಿದೆ. ನಿರ್ಮಲಾ ಸೀತಾರಾಮನ್ ಅವರು ಪ್ರತೀ ಬಜೆಟ್​ನಲ್ಲೂ ಬೇರೆ ಬೇರೆ ಪ್ರದೇಶದ ವಿಶೇಷ ರೇಷ್ಮೆ ಸೀರೆ ತೊಟ್ಟುಬರುವ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಈ ಬಾರಿ ತಮಿಳುನಾಡಿನ ಕಾಂಜೀವರಂ ಸೀರೆ ಧರಿಸಿದ್ದಾರೆ. ಬಜೆಟ್ ಭಾಷಣದಲ್ಲೂ ಸ್ವಲ್ಪ ಬದಲಾವಣೆ ಇರಲಿದೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬಜೆಟ್ ಸ್ವರೂಪ ಮತ್ತು ಸಂಪ್ರದಾಯದಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಕೆಲವು ರಚನಾತ್ಮಕ ಬದಲಾವಣೆಯಾದರೆ, ಇನ್ನೂ ಕೆಲವು ಸಾಂಕೇತಿಕ ಬದಲಾವಣೆಗಳಾಗಿವೆ. ಇಂಥ ಕೆಲ ಬದಲಾವಣೆಗಳ ಮಾಹಿತಿ ಇಲ್ಲಿದೆ:

ಬಜೆಟ್ ದಿನಾಂಕದಲ್ಲಿ ಬದಲಾವಣೆ

2017ರಲ್ಲಿ ಬಜೆಟ್ ಓದು ದಿನವನ್ನು ಫೆಬ್ರುವರಿ 1ಕ್ಕೆ ಬದಲಾಯಿಸಲಾಯಿತು. ಅದಕ್ಕೂ ಹಿಂದೆ ಬಜೆಟ್ ಅನ್ನು ಫೆಬ್ರುವರಿ ತಿಂಗಳ ಕೊನೆಯ ಕಾರ್ಯದಿನದಂದು ಮಂಡಿಸಲಾಗುತ್ತಿತ್ತು. ಆದರೆ, ಹೊಸ ಹಣಕಾಸು ವರ್ಷ ಆರಂಭಕ್ಕೆ ಮುನ್ನ ಬಜೆಟ್​ಗೆ ಸಂಸತ್ತಿನ ಅನುಮೋದನೆ ಪಡೆದು ಕಾರ್ಯಗತಗೊಳಿಸಲು ಸಮಯಾವಕಾಶ ಇಲ್ಲದ್ದರಿಂದ ಬಜೆಟ್ ಮಂಡನೆಯನ್ನು ಹಿಂದೂಡುವ ನಿರ್ಧಾರಕ್ಕೆ ಬರಲಾಯಿತು.

ಇದನ್ನೂ ಓದಿ: Union Budget 2026 Live Streaming: ಕೇಂದ್ರ ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ

ಪ್ರತ್ಯೇಕ ರೈಲ್ವೆ ಬಜೆಟ್ ಇಲ್ಲ

2017ರಲ್ಲಿ ತೆಗೆದುಕೊಂಡ ಮತ್ತೊಂದು ಮಹತ್ವಪೂರ್ಣ ನಿರ್ಧಾರದಲ್ಲಿ ಕೇಂದ್ರ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಲಾಗಿದ್ದು. 1924ರಿಂದಲೂ ಬಜೆಟ್ ಜೊತೆ ಜೊತೆಗೆ ರೈಲ್ವೆ ಬಜೆಟ್ ಅನ್ನೂ ಪ್ರತ್ಯೇಕವಾಗಿ ಮಂಡಿಸುತ್ತಾ ಬರಲಾಗಿತ್ತು. ರೈಲ್ವೆ ಕ್ಷೇತ್ರದಲ್ಲಿ ಸುಧಾರಣೆ ತರುವ ಬದಲು ಜನಪ್ರಿಯ ಘೋಷಣೆಗಳಿಗೆ ಒತ್ತು ಕೊಡುತ್ತಾ ಬಂದಿದ್ದರಿಂದ ಪ್ರತ್ಯೇಕ ರೈಲ್ವೆ ಬಜೆಟ್ ಬೇಡ ಎಂದು ಸರ್ಕಾರ ತೀರ್ಮಾನಿಸಿದ್ದಿರಬಹುದು.

ಸೂಟ್​​ಕೇಸ್​ನಿಂದ ಬಹಿಖಾತಾ

2019ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪುಸ್ತಕಗಳನ್ನು ಲೆದರ್ ಸೂಟ್​ಕೇಸ್​ನಲ್ಲಿ ತರುವ ಪರಿಪಾಟ ನಿಲ್ಲಿಸಿದರು. ಸೂಟ್​ಕೇಸ್ ಬದಲು ಭಾರತೀಯ ಸಾಂಪ್ರದಾಯಿಕ ಬಹಿಖಾತಾದಲ್ಲಿ ಬಜೆಟ್ ಪುಸ್ತಕಗಳನ್ನು ತರುವ ಸಂಪ್ರದಾಯ ಶುರು ಮಾಡಿದರು. ಈ ಬದಲಾವಣೆಯು ಭಾರತೀಯತೆಗೆ ಸಾಂಕೇತಿಕವೆಂಬಂತಿದೆ.

ಇದನ್ನೂ ಓದಿ: ಈ ವರ್ಷದ ಬಜೆಟ್ ಭಾಷಣದಲ್ಲಿ ಹೊಸತನ; 75 ವರ್ಷದ ಸಂಪ್ರದಾಯ ಮುರಿಯುತ್ತಾರಾ ನಿರ್ಮಲಾ ಸೀತಾರಾಮನ್?

ಬಜೆಟ್ ಪುಸ್ತಕವು ಕಾಗದದ ಬದಲು ಡಿಜಿಟಲ್

2017ರಲ್ಲಿ ಸೂಟ್​ಕೇಸ್ ಬದಲು ಬಹಿಖಾತಾಗೆ ವರ್ಗವಾದರೆ, 2021ರಲ್ಲಿ ಬಜೆಟ್ ಪುಸ್ಕಕವೇ ಡಿಜಿಟಲ್ ರೂಪ ಪಡೆಯಿತು. ಅಂದು ನಿರ್ಮಲಾ ಸೀತಾರಾಮನ್ ಅವರು ಟ್ಯಾಬ್ಲೆಟ್​ನಲ್ಲೇ ನೋಡಿ ಬಜೆಟ್ ಭಾಷಣ ಓದಿದರು. ಬಜೆಟ್ ಪುಸ್ತಕದ ಬದಲು ಟ್ಯಾಬ್ಲೆಟ್ ಬಂದಿತು. ಆ ಟ್ಯಾಬ್ಲೆಟ್ ಅನ್ನು ಬಹಿಖಾತಾ ಶೈಲಿಯ ಹೊದಿಕೆಯಲ್ಲಿ ಇಟ್ಟುಕೊಂಡು ಸಂಸತ್ತಿಗೆ ಹೋಗುತ್ತಾರೆ ನಿರ್ಮಲಾ ಸೀತಾರಾಮನ್.

2021ರಿಂದ ಬಜೆಟ್ ಡಿಜಿಟಲ್ ಆಗಿ ಹೋಗಿದೆ. ಬಜೆಟ್ ಪುಸ್ತಕ ಮುದ್ರಿಸಲು ಹಣ ಮತ್ತು ಕಾಗದದ ಉಳಿತಾಯ ಆಗುತ್ತದೆ. ಭಾರತದ ಡಿಜಿಟೀಕರಣಕ್ಕೆ ಇದು ಸಾಂಕೇತಿಕವೂ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಈ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಬಲ್ಲಿರಾ – Kannada News | Optical Illusion: Tiger hiding among zebras, find it in just 8 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಸೇರಿದಂತೆ ಟ್ರಿಕ್ಕಿ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಹೀಗಾಗಿ ಹೆಚ್ಚಿನವರು ಒಗಟಿನತ್ತ ಆಸಕ್ತಿ ತೋರಿಸುತ್ತಾರೆ, ಇದೀಗ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಜೀಬ್ರಾಗಳ ಗುಂಪಿನಲ್ಲಿ ಅಡಗಿ ಕುಳಿತಿರುವ ಹುಲಿಯನ್ನು ಎಂಟು ಸೆಕೆಂಡುಗಳಲ್ಲಿ ಹುಡುಕುವ ಸವಾಲು ಇಲ್ಲಿದೆ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಹಚ್ಚ ಹಸಿರಿನ ಪ್ರದೇಶದಲ್ಲಿ ಜೀಬ್ರಾಗಳ ಹಿಂಡು ಓಡುತ್ತಿದೆ. ಇದೆಲ್ಲದರ ನಡುವೆ ಹುಲಿಯೊಂದು ಅಡಗಿ ಕುಳಿತಿದೆ. ಈ ಹುಲಿಯನ್ನು ತಕ್ಷಣಕ್ಕೆ ಹುಡುಕಲು ನಿಮಗೆ ಕಷ್ಟವಾಗಬಹುದು.

ಇದನ್ನೂ ಓದಿ: ಈ ಒಗಟಿನ ಚಿತ್ರದಲ್ಲಿರುವ ಹಲ್ಲಿಯನ್ನು ಹುಡುಕಿದ್ರೆ ನೀವೇ ಜಾಣರು

ಹುಲಿಯನ್ನು ಕಂಡುಹಿಡಿಯಲು ಸಾಧ್ಯವಾಯಿತೇ?

ಈ ಆಪ್ಟಿಕಲ್ ಒಗಟುಗಳಲ್ಲಿನ ವಿನ್ಯಾಸಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಿರಬಹುದು. ಈ ಇಲ್ಯೂಷನ್ ಚಿತ್ರದಲ್ಲಿ ಹುಲಿ ಎಷ್ಟು ವೇಷ ಮರೆಸಿದೆ ಎಂದರೆ ಅದು ಯಾರಿಗೂ ಕಾಣದಂತೆ ಅಡಗಿಕೊಂಡಿದೆ. ನಿಮ್ಮ ಕಣ್ಣಿಗೆ ಹುಲಿಯೂ ಕಾಣದೇ ಇರಬಹುದು. ಈ ಕೆಳಗಿನ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಿದ್ದೇವೆ ನೋಡಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ; ಶಾಕ್ ಆದ ಆ್ಯಂಕರ್ – Kannada News | Gilli Nata Take a Blessing from Anushree On A Stage Anchor Anushree in Shock

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುವುದನ್ನು ಕಾಣಬಹುದು. ಈಗ ಅವರು ಸಾಕಷ್ಟು ವೇದಿಕೆಗಳನ್ನು ಏರುತ್ತಿದ್ದಾರೆ. ಈಗ ಅವರಿಗೆ ವೇದಿಕೆ ಮೇಲೆ ಅನುಶ್ರೀ ಸಿಕ್ಕಿದ್ದಾರೆ. ಆಗ ಅನುಶ್ರೀ ಕಾಲಿಗೆ ಬಿದ್ದು ಅವರು ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಗಿಲ್ಲಿಗೆ ಅನುಶ್ರೀ ಮೇಲಿರುವ ಪ್ರೀತಿ ಎಷ್ಟಿದೆ ಎಂಬುದನ್ನು ತೋರಿಸಿದ್ದಾರೆ.

ಗಿಲ್ಲಿ ನಟ ಹಾಗೂ ಅನುಶ್ರೀ ಅವರು ಮೊದಲಿನಿಂದಲೂ ಪರಿಚಿತರು. ಜೀ ಕನ್ನಡದ ವೇದಿಕೆ ಇವರು ಒಟ್ಟಿಗೆ ಇದ್ದಿದ್ದನ್ನು ಕಾಣಬಹುದಾಗಿತ್ತು. ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಮೊದಲು ಸಂದರ್ಶನ ಒಂದರಲ್ಲಿ ಗಿಲ್ಲಿ ಇರುವಾಗಲೇ ಅನುಶ್ರೀಗೆ ಕರೆ ಮಾಡಲಾಗಿತ್ತು. ಈ ಕರೆ ವೇಳೆ ಅನುಶ್ರೀ ಅವರು ಗಿಲ್ಲಿಯನ್ನು ಭೇಟಿ ಮಾಡಬೇಕು ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ನಾನು ಸಾಯೋವರೆಗೂ ಚಿರಋಣಿ’; ಧನ್ಯವಾದ ಹೇಳಿದ ಆ್ಯಂಕರ್ ಅನುಶ್ರೀ

ಈಗ ಅನುಶ್ರೀ ಹಾಗೂ ಗಿಲ್ಲಿ ಭೇಟಿ ಆಗುವ ಅವಕಾಶ ಸಿಕ್ಕಿದೆ. ಗಿಲ್ಲಿ ನಟ ಅವರು ಹಲವು ವೇದಿಕೆ ಏರುತ್ತಿದ್ದಾರೆ. ಈ ವೇದಿಕೆ ಒಂದರ ಮೇಲೆ ಗಿಲ್ಲಿ ಹಾಗೂ ಅನುಶ್ರೀ ಪರಸ್ಪರ ಭೇಟಿ ಆದರು. ಆಗ ಅನುಶ್ರೀ ಕಾಲಿಗೆ ಬಿದ್ದು ಅವರು ಆಶೀರ್ವಾದ ಪಡೆದರು ಮತ್ತು ಇದರಿಂದ ಗಿಲ್ಲಿ ಅವರು ಖುಷಿಯಾದರು. ಆ ವೇಳೆ ಅನುಶ್ರೀ ಅವರು ಖುಷಿಪಟ್ಟರು. ಅವರಿಗೆ ಶಾಕ್ ಕೂಡ ಆಯಿತು. ಅನುಶ್ರೀ ಹಾಗೂ ಗಿಲ್ಲಿ ಪರಸ್ಪರ ಭೇಟಿ ಮಾಡಿದಾಗ ಸಾಕಷ್ಟು ಎಂಜಾಯ್ ಮಾಡುತ್ತಿದ್ದರಂತೆ. ಇದನ್ನು ಅವರು ಆಗ ಹೇಳಿಕೊಂಡಿದ್ದರು.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಅತ್ಯಧಿಕ ವೋಟ್​​ಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಬಿಗ್ ಬಾಸ್ ಕಡೆಯಿಂದ ಅವರಿಗೆ ಸಾಕಷ್ಟು ಹಣ ಸಿಕ್ಕಿದೆ. ಸುದೀಪ್ ಅವರು ಗಿಲ್ಲಿ ನಟನಿಗೆ 10 ಲಕ್ಷ ರೂಪಾಯಿ ನೀಡಿದ್ದನ್ನು ಕಾಣಬಹುದು. ಗಿಲ್ಲಿ ನಟ ಅವರು ಸಿನಿಮಾಗಳನ್ನು ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಹಾಸ್ಯ ನಟನಾಗಿ ಅವರು ಗಮನ ಸೆಳೆಯುವ ಸಾಧ್ಯತೆ ಇದೆ. ಅವರೇ ಸಂದರ್ಶನದಲ್ಲಿ ಹೇಳಿಕೊಂಡಂತೆ ಅವರಿಗೆ ಸಿನಿಮಾ ಮಾಡುವ ಆಸೆ ಇದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಸದ ರಾಶಿ ನಡುವೆ ಸಿಕ್ತು ನೂರಾರು ಬಾಕ್ಸ್ ಗೋವಾ ಲಿಕ್ಕರ್! ಪುಷ್ಪ ಸಿನೆಮಾ ಸ್ಟೈಲಲ್ಲಿ ಮದ್ಯ ಸಾಗಿಸುತ್ತಿದ್ದ ಗ್ಯಾಂಗ್ ಅಂದರ್ – Kannada News | Belagavi Police Seize Rs.25 Lakh Illegal Goa Liquor Smuggled in Garbage Truck

ಕಸದ ರಾಶಿ ನಡುವೆ ಸಿಕ್ತು ನೂರಾರು ಬಾಕ್ಸ್ ಗೋವಾ ಲಿಕ್ಕರ್! ಪುಷ್ಪ ಸಿನೆಮಾ ಸ್ಟೈಲಲ್ಲಿ ಮದ್ಯ ಸಾಗಿಸುತ್ತಿದ್ದ ಗ್ಯಾಂಗ್ ಅಂದರ್

ಬೆಳಗಾವಿ, ಫೆಬ್ರುವರಿ 01: ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ದರೋಡೆ ಪ್ರಕರಣದ ಬೆನ್ನಲ್ಲೇ ಅದೇ ಮಾರ್ಗದಲ್ಲಿ ಇನ್ನೊಂದು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪುಷ್ಪ ಸಿನೆಮಾವನ್ನು ನೆನಪಿಸುವಂತೆ ಕಸದ ಮಧ್ಯೆ ಮದ್ಯದ ಬಾಕ್ಸ್‌ಗಳನ್ನು ಮರೆಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಗ್ಯಾಂಗ್ ಅನ್ನು ಬೆಳಗಾವಿ (Belagavi) ನಗರದ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

800 ಬಾಕ್ಸ್ ಗೋವಾ ಮದ್ಯ!

ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿತ್ತು ಎಂಬ ಖಚಿತ ಮಾಹಿತಿಯ ಮೇರೆಗೆ, ಸಿಪಿಐ ಬಿ.ಆರ್. ಗಡ್ಡೇಕರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರ ತಲುಪಬೇಕಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದರೊಳಗೆ ಕಸ ತುಂಬಿರುವಂತೆ ಬಿಂಬಿಸಿ, ಕಸದ ರಾಶಿಯ ಒಳಭಾಗದಲ್ಲಿ 800 ಬಾಕ್ಸ್ ಅಕ್ರಮ ಗೋವಾ ಮದ್ಯವನ್ನು ಇಟ್ಟು ಸಾಗಿಸಲಾಗುಯತ್ತಿತ್ತು ಎಂಬುದನ್ನು ಪತ್ತೆಹಚ್ಚಿದ್ದಾರೆ.

ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ

ಎರಡೆರಡು ಚೆಕ್ ಪೋಸ್ಟ್ ದಾಟಿದ್ದ ಗ್ಯಾಂಗ್

ವಶಪಡಿಸಿಕೊಂಡ ಮದ್ಯದ ಅಂದಾಜು ಮೌಲ್ಯ 25 ಲಕ್ಷ ರೂ.ಗಿಂತ ಹೆಚ್ಚು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಕಣ್ಣಿಗೆ ಮಣ್ಣೆರಚುವ ಉದ್ದೇಶದಿಂದ ವಾಹನದ ಹೊರಭಾಗದಲ್ಲಿ ವೆಸ್ಟೇಜ್ ವಸ್ತುಗಳನ್ನು ತುಂಬಿ, ಒಳಭಾಗದಲ್ಲಿ ಮದ್ಯ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಗೋವಾದಿಂದ ಹೊರಡುವಾಗ ಎರಡು ಕಡೆ ಚೆಕ್ ಪೋಸ್ಟ್‌ಗಳಿದ್ದರೂ, ಅಕ್ರಮ ಮದ್ಯ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಿದ್ದು ಹೇಗೆ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ

ಕಣಕುಂಬಿ ಬಳಿ ಚೆಕ್ ಪೋಸ್ಟ್ ಇದ್ದರೂ ರಾಜಾರೋಷವಾಗಿ ಮದ್ಯ ಸಾಗಾಟ ನಡೆದಿರುವುದು ಅಬಕಾರಿ ಇಲಾಖೆ ಮತ್ತು ಜಿಲ್ಲಾ ಪೊಲೀಸರ ಕಾರ್ಯವೈಖರಿಯ ಮೇಲೆ ಅನುಮಾನ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಾಘ ಮಾಸ ಹುಣ್ಣಿಮೆ: ಟಿ ನರಸೀಪುರದ ಕಾವೇರಿ ನದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತರ ದಂಡು – Kannada News | Magha Purnima: Devotees Throng Triveni Sangama at T Narsipur for Holy Dip

ಮೈಸೂರು, ಫೆಬ್ರವರಿ 1: ಟಿ. ನರಸೀಪುರದಲ್ಲಿರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಾಘ ಮಾಸ ಹುಣ್ಣಿಮೆಯ ಪುಣ್ಯಸ್ನಾನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಕಾವೇರಿ, ಕಬಿನಿ ಮತ್ತು ಕಪಿಲಾ ನದಿಗಳು ಸೇರುವ ಈ ಸಂಗಮ ಸ್ಥಳದಲ್ಲಿ ಸ್ನಾನ ಮಾಡಿದರೆ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ, ಮಧ್ಯರಾತ್ರಿಯಿಂದಲೇ ಸಹಸ್ರಾರು ಭಕ್ತರು ಸಂಗಮ ಸ್ಥಳದಲ್ಲಿ ಪವಿತ್ರ ಸ್ನಾನ ಕೈಗೊಂಡರು.

ಪುಣ್ಯಸ್ನಾನದ ನಂತರ, ಭಕ್ತರು ಸಮೀಪದಲ್ಲಿರುವ ಐತಿಹಾಸಿಕ ಗುಂಜಾ ನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಈ ಶುಭ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಟಿ. ನರಸೀಪುರಕ್ಕೆ ದಂಡು ಹರಿದುಬಂದಿತ್ತು. ನದಿತೀರದಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಈ ಸಮೂಹ ಸ್ನಾನವು ಹಿಂದೂ ಧರ್ಮದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪ್ರತಿಬಿಂಬಿಸುತ್ತದೆ.

 

Source link

ಚೆನ್ನೈ ವಿರುದ್ಧ ಗೆದ್ದು ಫೈನಲ್​ಗೆ ಏರಿದ ಕರ್ನಾಟಕ ಬುಲ್ಡೋಜರ್ಸ್​; ಒಲಿಯುತ್ತಾ ಕಪ್? – Kannada News | Karnataka Bulldozers Enters CCL Final After Defeating Karnataka Chennai Kings in semifinal

ಕರ್ನಾಟಕ ಬುಲ್ಡೋಜರ್ಸ್​ಗೆ ಜಯ Image Credit source: Hotstar

ಕಳೆದ ವರ್ಷದ ಸಿಸಿಎಲ್​​ನಲ್ಲಿ (CCL) ರನ್ನರ್ ಅಪ್ ಆಗಿರೋ ಕರ್ನಾಟಕ ಬುಲ್ಡೋಜರ್ಸ್ ತಂಡವು ಒಂದು ಪಂದ್ಯವನ್ನೂ ಸೋಲದೇ ಈ ಬಾರಿ ಫಿನಾಲೆಗೆ ಏರಿರುವುದು ವಿಶೇಷ. ಚೆನ್ನೈ ಕಿಂಗ್ಸ್ ವಿರುದ್ಧ ಜನವರಿ 31ರಂದು ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದರು ಮತ್ತು ಫಿನಾಲೆಗೆ ಏರಿದರು. ಕಿಚ್ಚ ಸುದೀಪ್ ಅವರ ನೇತೃತ್ವದ ತಂಡವು ಸಾಕಷ್ಟು ಉತ್ತಮವಾಗಿ ಕಾಣಿಸುತ್ತಿದೆ. ಈ ಬಾರಿ ಅವರು ಕಪ್ ಗೆಲ್ಲುವ ಎಲ್ಲಾ ಸಾಧ್ಯತೆ ಇದೆ.

ಮೊದಲ ಮೂರು ಪಂದ್ಯಗಳನ್ನು ಗೆದ್ದ ಕರ್ನಾಟಕ ಬುಲ್ಡೋಜರ್ಸ್ ತಂಡವು ನೇರವಾಗಿ ಸೆಮಿಫೈನಲ್​​ಗೆ ಅವಕಾಶ ಪಡೆಯಿತು. ಹಲವು ತಂಡಗಳ ಕನಸನ್ನು ಇವರು ನುಚ್ಚು ನೂರು ಮಾಡಿದರು. ಚೆನ್ನೈನಲ್ಲಿ ನಡೆದ ಸೆಮಿಫೈನಲ್​ ಅಲ್ಲಿ ಕರ್ನಾಟಕ ತಂಡವು ಗೆಲುವು ಕಂಡಿತು.

ಇದನ್ನೂ ಓದಿ: CCL 2025: ತೆಲುಗು ವಾರಿಯರ್ಸ್​ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್​ಗೆ ಬೃಹತ್ ಜಯ

ಚೆನ್ನೈ ಕಿಂಗ್ಸ್ ತಂಡ ಮೊದಲ 10 ಓವರ್​​ಗೆ 108 ರನ್ ಗಳಿಸಿತು. ಆ ಪಂದ್ಯದಲ್ಲಿ ಯಾರಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ. ಆ ಬಳಿಕ ಕರ್ನಾಕಟ ಬುಲ್ಡೋಜರ್ಸ್ 142 ರನ್ ಗಳಿಸಿ, 34 ರನ್​​ಗಳ ಲೀಡ್ ಪಡೆಯಿತು. ನಂತರ ಚೆನ್ನೈ ತಂಡವು ಎರಡನೇ ಇನ್ನಿಂಗ್ಸ್​​ಗೆ ಬ್ಯಾಟಿಂಗ್​​​ಗೆ ಇಳಿಯಿತು. ನಂತರ 103 ರನ್​​ಗಳಿಗೆ ಚೆನ್ನೈ ಆಲ್​ ಔಟ್ ಆಯಿತು. ಕರ್ನಾಟಕ ತಂಡದವರದ್ದು 34 ರನ್ ಲೀಡ್ ಇದ್ದಿದ್ದರಿಂದ, ನಂತರ ತಂಡಕ್ಕೆ ಬೇಕಾಗಿದ್ದುದು 69 ರನ್ ಮಾತ್ರ. ಹೀಗಾಗಿ, ತಂಡದವರು ಸುಲಭದಲ್ಲಿ ಗೆಲುವು ಕಂಡಿತು. ಕೇವಲ 6.5 ಓವರ್​​ಗೆ ಈ ಚೇಸ​ನ ತಲುಪಿದರು. ಈ ಮೂಲಕ ದಾಖಲೆ ಬರೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್ – Kannada News | Arshdeep Singh Creates Unwanted Record With Five fer

ನ್ಯೂಝಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಅರ್ಷದೀಪ್ ಸಿಂಗ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಐದು ವಿಕೆಟ್​ಗಳೊಂದಿಗೆ ಅವರು ಅತ್ಯಂತ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ತಿರುವನಂತಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಅರ್ಷದೀಪ್ ಸಿಂಗ್ 51 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.

ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅರ್ಷದೀಪ್ ಸಿಂಗ್ ಅವರ ಚೊಚ್ಚಲ 5 ವಿಕೆಟ್. ಆದರೆ ಈ ಐದು ವಿಕೆಟ್ ಕಬಳಿಸಲು ಅವರು ನೀಡಿದ್ದು ಬರೋಬ್ಬರಿ 51 ರನ್​ಗಳು. ಇದರೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಿಟ್ಟು ಕೊಟ್ಟು ಐದು ವಿಕೆಟ್ ಪಡೆದ ಬೌಲರ್ ಎಂಬ ಹೀನಾಯ ದಾಖಲೆಯೊಂದು ಅರ್ಷದೀಪ್ ಸಿಂಗ್ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ವೇಗಿ ಅಲ್ಝಾರಿ ಜೋಸೆಫ್ ಹೆಸರಿನಲ್ಲಿತ್ತು. 2023 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಲ್ಝಾರಿ ಜೋಸೆಫ್ 40 ರನ್ ನೀಡಿ 5 ವಿಕೆಟ್ ಕಬಳಿಸಿ ಅನಗತ್ಯ ದಾಖಲೆಗೆ ಕೊರೊಳೊಡ್ಡಿದ್ದರು. ಇದೀಗ 4 ಓವರ್​ಗಳಲ್ಲಿ ಬರೋಬ್ಬರಿ 51 ರನ್ ನೀಡುವ ಮೂಲಕ ಅರ್ಷದೀಪ್ ಸಿಂಗ್ ದುಬಾರಿ 5 ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 271 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 19.4 ಓವರ್​ಗಳಲ್ಲಿ 225 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 46 ರನ್​ಗಳ ಗೆಲುವು ದಾಖಲಿಸಿದೆ.

Source link

ಮಹಿಳೆಯ ಕುತ್ತಿಗೆ ಮುಖ, ಕೈ-ಕಾಲು ಕಚ್ಚಿ ಹಾಕಿದ ಶ್ವಾನ: ಈ ಭೀಕರ ದಾಳಿಗೆ ಬೆಚ್ಚಿಬಿದ್ದ ಬೆಂಗಳೂರು – Kannada News | HSR Layout Dog Attack: Bengaluru Pet Owners Must Follow Muzzle and Leash Rules

ಬೆಂಗಳೂರು, ಜ.1: ಬೆಂಗಳೂರಿನಲ್ಲಿ(Bengaluru dog attack) ಸಾಕು ನಾಯಿಗಳ ದಾಳಿ ಮಾಡುವ ಘಟನೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಬೆಳ್ಳಂಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿದ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಜನವರಿ 26 ರಂದು ಬೆಳಿಗ್ಗೆ 6.54 ರ ಸುಮಾರಿಗೆ ಎಚ್‌ಎಸ್‌ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಹಿಳೆ ವಾಕಿಂಗ್‌ಗೆ ಹೋಗಿದ್ದಾಗ ಸ್ಥಳೀಯ ನಿವಾಸಿ ಅಮರೇಶ್ ರೆಡ್ಡಿ ಎಂಬವರ ನಾಯಿ ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿದೆ. ನಾಯಿ ಮೊದಲು ಮಹಿಳೆಯ ಕುತ್ತಿಗೆಗೆ ಕಚ್ಚಿ, ನಂತರ ಆಕೆಯ ಮುಖ, ಕೈಗಳು ಮತ್ತು ಕಾಲುಗಳ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಈ ಬಗ್ಗೆ ವಿಡಿಯೋವೊಂದು ವೈರಲ್​​ ಆಗಿದೆ. ಮುಂಜಾನೆ ಸುಮಾರು 6:30 ರಿಂದ 7:00 ಗಂಟೆಯ ಸುಮಾರಿಗೆ ಮಹಿಳೆ ವಾಕಿಂಗ್ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ.

ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ನಾಯಿಯು ಏಕಾಏಕಿ ಹಾರಿ ಮುಖ ಮತ್ತು ಕುತ್ತಿಗೆಯ ಭಾಗವನ್ನು ಗುರಿಯಾಗಿಸಿಕೊಂಡು ಕಚ್ಚಿದೆ. ಮಹಿಳೆ ಕೆಳಗೆ ಬಿದ್ದರೂ ನಾಯಿ ಬಿಡದೆ ದಾಳಿ ನಡೆಸಿದೆ. ಈ ದಾಳಿಯಿಂದ ಮಹಿಳೆಯ ಮುಖಕ್ಕೆ ಗಂಭೀರವಾದ ಗಾಯಗಳಾಗಿದ್ದು, ವೈದ್ಯರು ಮುಖದ ಮೇಲೆ ಬರೋಬ್ಬರಿ 50 ಹೊಲಿಗೆಗಳನ್ನು ಹಾಕಿದ್ದಾರೆ. ಇದರ ಜತೆಗೆ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿಯ ಅಗತ್ಯ ಇದೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಯ ಭೀಕರ ದೃಶ್ಯಗಳು ಸಮೀಪದ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಡಿಯೋದಲ್ಲಿ ಮಹಿಳೆ ಸಹಾಯಕ್ಕಾಗಿ ಕಿರುಚುತ್ತಿರುವುದು ಮತ್ತು ನಾಯಿಯನ್ನು ಬಿಡಿಸಲು ಸ್ಥಳೀಯರು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ.

ಇಲ್ಲಿದೆ ನೋಡಿ ವಿಡಿಯೋ:

ನಾಯಿಯನ್ನು ಸರಿಯಾಗಿ ನಿಯಂತ್ರಿಸದ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸದ ಕಾರಣ ನಾಯಿ ಮಾಲೀಕನ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ. ಬಿಬಿಎಂಪಿ ಪಶುಪಾಲನಾ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ ನಾಯಿಯನ್ನು ವಶಕ್ಕೆ ಪಡೆದಿದ್ದು, ಅದಕ್ಕೆ ರೇಬಿಸ್ ಅಥವಾ ಇನ್ಯಾವುದೇ ಕಾಯಿಲೆ ಇದೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾಕು ನಾಯಿಗಳ ಮಾಲೀಕರು ಮಾಸ್ಕ್ (Muzzle) ಮತ್ತು ಲೀಶ್ (Leash) ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ಪ್ರಕರಣದಲ್ಲಿ ಆ ನಿಯಮಗಳ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿಗಳನ್ನು ನೋಡಿದಾಗ ಅಥವಾ ಅಂತಹ ಪರಿಸ್ಥಿತಿ ಎದುರಾದಾಗ ಜಾಗರೂಕರಾಗಿರುವುದು ಅವಶ್ಯಕ. ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಜಪಾನ್ ರಾಯಭಾರಿಗೂ ಇಷ್ಟ ಬೆಂಗಳೂರಿನ ಪಿಜ್ಜಾ! ಓನೋ ಕೈಇಚಿ ಪೋಸ್ಟ್​ಗೆ ತೇಜಸ್ವಿ ಸೂರ್ಯ ರಿಯಾಕ್ಷನ್

ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯದ ನಡವಳಿಕೆ. ಸಾಕುಪ್ರಾಣಿಯಿಂದ ಬೇರೆಯವರಿಗೆ ಅಪಾಯವಾಗಬಹುದು ಎಂದು ತಿಳಿದಿದ್ದರೂ ಸರಿಯಾದ ಮುನ್ನೆಚ್ಚರಿಕೆ ವಹಿಸದಿದ್ದರೆ, ಮಾಲೀಕನಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 5,000 ರೂ. ವರೆಗೆ ದಂಡ, ಎರಡನ್ನೂ ವಿಧಿಸಬಹುದು. ನಿರ್ಲಕ್ಷ್ಯದ ಮೂಲಕ ಇತರರ ಜೀವಕ್ಕೆ ಅಪಾಯ ತರುವುದು ಅಥವಾ ಗಂಭೀರ ಗಾಯಗೊಳಿಸುವುದು. ಇಲ್ಲಿ ಮಹಿಳೆಯ ಮುಖಕ್ಕೆ 50 ಹೊಲಿಗೆ ಬಿದ್ದಿರುವುದರಿಂದ ಇದು ‘ಗಂಭೀರ ಗಾಯ’ದ ವ್ಯಾಪ್ತಿಗೆ ಬರುತ್ತದೆ. ಇದರ ಅಡಿಯಲ್ಲಿ ಮಾಲೀಕನಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಸಾರ್ವಜನಿಕ ಸ್ಥಳದಲ್ಲಿ ನಾಯಿಯಿಂದ ತೊಂದರೆಯಾದರೆ ಅಥವಾ ಪರವಾನಗಿ ಇಲ್ಲದೆ ನಾಯಿ ಸಾಕಿದ್ದರೆ 1,000 ರೂ. ರಿಂದ 5,000 ರೂ. ವರೆಗೆ ಆರಂಭಿಕ ದಂಡ ವಿಧಿಸಲಾಗುತ್ತದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿದ್ದರಾಮಯ್ಯ: ಝೈದ್ ಖಾನ್ ಹೇಳಿದ್ದಿಷ್ಟು.. – Kannada News | Zaid Khan says CM Siddaramaiah got emotional while watching Cult movie

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗಾಗಿ ‘ಕಲ್ಟ್’ ಸಿನಿಮಾದ (Cult movie) ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಿನಿಮಾವನ್ನು ವೀಕ್ಷಿಸುವಾಗ ಮಗನನ್ನು ನೆನಪಿಸಿಕೊಂಡು ಸಿದ್ದರಾಮಯ್ಯ ಭಾವುಕರಾದರು. ಆ ಬಗ್ಗೆ ಝೈದ್ ಖಾನ್ (Zaid Khan) ಅವರು ಮಾಹಿತಿ ನೀಡಿದ್ದಾರೆ. ‘ಇವತ್ತು ಸಿದ್ದರಾಮಯ್ಯ ಸರ್ ನನ್ನ ಸಿನಿಮಾ ನೋಡಿದ್ದಕ್ಕೆ ಬಹಳ ಖುಷಿ ಆಗಿದೆ. ಅವರಿಗೆ ಸಿನಿಮಾ ನೋಡಲು ಕರೆಯಬೇಕೋ ಬೇಡವೋ ಅಂತ ಆಲೋಚನೆ ಇರಲಿಲ್ಲ. ಅವರೇ ನಮ್ಮ ತಂದೆಗೆ ಕರೆ ಮಾಡಿ ನಿಮ್ಮ ಮಗನ ಸಿನಿಮಾ ನೋಡಬೇಕು ಅಂದರು. ಹಂಪಿಯನ್ನು ಬಹಳ ಚೆನ್ನಾಗಿ ತೋರಿಸಿದ್ದರಿಂದ ಅವರಿಗೆ ಸಿನಿಮಾ ನೋಡಬೇಕು ಅನಿಸಿತ್ತು. ಅದಕ್ಕಾಗಿ ಅವರಿಗಾಗಿ ಶೋ ರೆಡಿ ಮಾಡಿದೆವು. ಅವರಿಗೆ ಈ ಸಿನಿಮಾ ಇಷ್ಟ ಆಗಿದೆ. ತುಂಬಾ ಹೊಗಳಿದರು. ಇದು ಫ್ಯಾಮಿಲಿ ಸಿನಿಮಾ. ತಂದೆ-ಮಗನ ಒಂದು ದೃಶ್ಯ ನೋಡುವಾಗ ಅವರು ಕಣ್ಣೀರು ಹಾಕಿದರು. ಮಗನ ನೆನಪು ಆಯಿತು ಎಂದರು. ಅದಕ್ಕಿಂತ ಇನ್ನೇನು ಬೇಕು’ ಎಂದು ಝೈದ್ ಖಾನ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link