ಗ್ಯಾಸ್ ಸ್ಟೋವ್ ಮನೆಯೊಳಗಿನ ಗಾಳಿಯನ್ನು ಮಾಲಿನ್ಯಗೊಳಿಸಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ? – Kannada News
ಇಂದಿನ ಬಹುತೇಕ ಮನೆಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಸ್ಟೋವ್ (Gas Stove) ಬಳಸಲಾಗುತ್ತದೆ. ಆದರೆ ಮನೆಯ ಒಳಗಿನ ಗಾಳಿಯ ಗುಣಮಟ್ಟವೂ ಆರೋಗ್ಯಕ್ಕೆ ಬಹಳ ಮುಖ್ಯ ಎನ್ನಲಾಗುತ್ತದೆ. ವಿಶೇಷವಾಗಿ ಅಡುಗೆ ಮನೆಯಲ್ಲಿ ಉಂಟಾಗುವ ಹೊಗೆ ಮತ್ತು ಅನಿಲಗಳು ಮನೆಯ ಗಾಳಿಯನ್ನು ದುಷಿತಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ (EPA) ಹೇಳಿರುವ ಪ್ರಕಾರ, ಗ್ಯಾಸ್ ಸ್ಟೋವ್ ಬಳಸುವ ವೇಳೆ ಕೆಲವು ಹಾನಿಕಾರಕ ಅನಿಲಗಳು ಮತ್ತು ಸೂಕ್ಷ್ಮ ಕಣಗಳು ಹೊರಬರುತ್ತವೆ. ಇದರಲ್ಲಿ ನೈಟ್ರೋಜನ್ ಡೈಆಕ್ಸೈಡ್…