Category Archives: Blog

Your blog category

ತನ್ನ ತಂದೆ-ತಾಯಿ, ಸಹೋದರಿಯನ್ನು ಕೊಂದ ಯುವಕ: ಮಿಸ್ಸಿಂಗ್ ಕೇಸ್ ಕೊಡಲು ಹೋಗಿ ಸತ್ಯ ಕಕ್ಕಿದ ಭೂಪ! – Kannada News | Kotturu Family Murder: A Man Brutal Killed his Parents, Sister in Vijayanagara

ವಿಜಯನಗರ, ಜನವರಿ 30: ಹೆತ್ತ ತಂದೆ-ತಾಯಿ ಮತ್ತು ಒಡಹುಟ್ಟಿದ ಸಹೋದರಿಯನ್ನೇ ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆ (murder) ಮಾಡಿರುವಂತಹ ಘಟನೆ ವಿಜಯನಗರ (Vijayanagara) ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ. ಅಕ್ಷಯ ಕುಮಾರ ಕೊಲೆ ಮಾಡಿದ ವ್ಯಕ್ತಿ. ಕೊಲೆಗೈದ ಅಕ್ಷಯ ಕುಮಾರ ಬೆಂಗಳೂರುಗೆ ತೆರಳಿ ತಂದೆ, ತಾಯಿ ಮತ್ತು ಸಹೋದರಿ ನಾಪತ್ತೆ ಆಗಿದ್ದಾರೆ ಎಂದು ಬೆಂಗಳೂರಿನ ತಿಲಕ್​ನಗರ ಠಾಣೆಗೆ ದೂರು ನೀಡಿದ್ದ. ಮೃತರ ಹೆಸರು ಮತ್ತು ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಪೊಲೀಸ್​​ ವಿಚಾರಣೆ ವೇಳೆ ಅಸಲಿ ಸತ್ಯ ಬಾಯ್ಬಿಟ್ಟ ಪುತ್ರ

ಇನ್ನು ಅನುಮಾನಗೊಂಡ ತಿಲಕ್​ನಗರ ಠಾಣೆ ಪೊಲೀಸರು ಪುತ್ರನ ವಿಚಾರಣೆ ಮಾಡಿದ್ದಾರೆ. ಈ ವೇಳೆ ಕೊಲೆ ಬಗ್ಗೆ ಅಸ್ಪಷ್ಟ ಹೇಳಿಕೆ ನೀಡಿದ್ದಾನೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನ ಮನೆಯಲ್ಲಿ ಮೂವರನ್ನು ಕೊಂದು ಹೂತಿದ್ದಾಗಿ ಒಮ್ಮೆ ಹೇಳಿಕೆ ನೀಡಿದರೆ, ಮತ್ತೊಮ್ಮೆ ಸಂಡೂರಲ್ಲಿ ಶವ ಎಸೆದಿರುವುದಾಗಿ ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ: ಗರ್ಭಿಣಿ ಸೊಸೆಯನ್ನು ಮಾವ ಕೊಂದಿದ್ಯಾಕೆ ಗೊತ್ತಾ? ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ!

ಸದ್ಯ ವ್ಯಕ್ತಿ ನೀಡಿದ ಅಸ್ಪಷ್ಟ ಹೇಳಿಕೆ ಬಗ್ಗೆ ಕೊಟ್ಟೂರು ಠಾಣೆಗೆ ತಿಲಕ್​ನಗರ ಠಾಣೆ ಪೊಲೀಸರಿಂದ ಮಾಹಿತಿ ನೀಡಿದ್ದು, ಆ ಮಾಹಿತಿ ಆಧರಿಸಿ ವ್ಯಕ್ತಿ ಹೇಳಿರುವ ಸ್ಥಳದಲ್ಲಿ ಶವಗಳಿಗಾಗಿ ಕೊಟ್ಟೂರು ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ.

ಬೈಕ್​ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ ಪ್ರಾಧ್ಯಾಪಕ ಸಾವು

ಬೈಕ್​ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ ಕಲ್ಯಾಣ ಕರ್ನಾಟಕ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಶರಣಪ್ಪ ಸೈದಾಪುರ ಸಾವನ್ನಪ್ಪಿದ್ದಾರೆ. ಕಲಬುರಗಿ ನಗರದ ಹೊಸ ಆರ್​ಟಿಒ ಕಚೇರಿ ಬಳಿ ಘಟನೆ ನಡೆದಿತ್ತು.

ಇದನ್ನೂ ಓದಿ: ಮದ್ವೆ ಆರತಕ್ಷತೆಗೆ ತೆರಳುತ್ತಿದ್ದ ವರನಿಗೆ ಚೂರಿ ಇರಿತ: ಯುವತಿಯ ಮಾಜಿ ಲವರ್​​ ಕೃತ್ಯ ಶಂಕೆ

ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಧ್ಯಾಪಕರ ಬೇಡಿಕೆಗಾಗಿ ವಿವಿಧ ಹೋರಾಟಗಳಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ಡೇಂಜರಸ್ ಆ್ಯಪ್​ಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು; ನಿಮ್ಮ ಫೋನ್​ನಲ್ಲಿ ಇವು ಇವೆಯಾ ಪರಿಶೀಲಿಸಿ… – Kannada News | These apps can leak data from your phone, tech tips and tricks

ಸ್ಮಾರ್ಟ್‌ಫೋನ್‌ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಂಡಿರುವುದು ಸಾಮಾನ್ಯ. ಖಾಸಗಿ ಫೋಟೋಗಳು, ವಿಡಿಯೋಗಳಿಂದ ಹಿಡಿದು ಗೌಪ್ಯ ಮಾಹಿತಿಯವರೆಗೂ ಫೋನ್​ನಲ್ಲಿ ಇರುತ್ತವೆ. ಫೋನ್ ಕಳುವಾಗದಂತೆ ಜೋಪಾನವಾಗಿಟ್ಟುಕೊಂಡರೆ ಸಾಕು ಎಂದು ನಾವೆಲ್ಲರೂ ಭಾವಿಸಿರುತ್ತೇವೆ. ಆದರೆ, ವಾಸ್ತವವೆಂದರೆ ನಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಮಾಹಿತಿ ನಮಗೆ ಗೊತ್ತಿಲ್ಲದಂತೆ ಸೋರಿಕೆ ಆಗುತ್ತಿರಬಹುದು. ನಾವು ಇನ್​ಸ್ಟಾಲ್ ಮಾಡಿಕೊಂಡಿರುವ ಕೆಲ ಆ್ಯಪ್​ಗಳು ನಮ್ಮ ಡಾಟಾವನ್ನು ಕದ್ದು ಸಾಗಿಸುತ್ತಿರುವ ಸಾಧ್ಯತೆ ಹೆಚ್ಚಿರುತ್ತದೆ. ಫೋನ್​ನಲ್ಲಿರುವ ಫೋಟೋ, ವಿಡಿಯೋ, ನಾವಿರುವ ಸ್ಥಳ, ನಾವು ಅಡ್ಡಾಡಿರುವ ಸ್ಥಳ, ಮೊಬೈಲ್​ನ ಮಾಹಿತಿ, ಬ್ರೌಸಿಂಗ್ ಹಿಸ್ಟರಿ, ನಮ್ಮ ಫೋನ್ ಕಾಲ್ ಇತ್ಯಾದಿ ನಾನಾ ಮಾಹಿತಿಯನ್ನು ನಮಗೆ ಅರಿವಾಗದಂತೆ ಲಪಟಾಯಿಸಬಹುದು.

ನಮ್ಮ ಡಾಟಾ ತೆಗೆದುಕೊಂಡು ಏನು ಮಾಡುತ್ತಾರೆ?

ನಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಮಾಹಿತಿಯನ್ನು ಕದಿಯುವ ಆ್ಯಪ್​ಗಳು, ಅದನ್ನು ಥರ್ಡ್ ಪಾರ್ಟಿ ಸರ್ವರ್​ಗಳಿಗೆ ರವಾನಿಸುತ್ತದೆ. ಆ್ಯಡ್ ಸರ್ವಿಸ್​ನಿಂದ ಹಿಡಿದು ಪ್ರೊಫೈಲಿಂಗ್​ವರೆಗೂ ಎಲ್ಲದಕ್ಕೂ ಈ ಮಾಹಿತಿಯನ್ನು ಬಳಲಾಗುತ್ತದೆ. ಇದಕ್ಕೆ ಸಾಕ್ಷಿ ಎಂದರೆ, ನೀವು ಯಾವುದಾದರೂ ವಿಚಾರದ ಬಗ್ಗೆ ಫೋನ್​ನಲ್ಲಿ ಬ್ರೌಸ್ ಮಾಡಿದಾಗ, ಆ ವಿಚಾರಕ್ಕೆ ಸಂಬಂಧಿಸಿದ ಜಾಹೀರಾತು ನಿಮಗೆ ಕಾಣುತ್ತದೆ. ಇದು ಯಾಕೆಂದರೆ, ನಿಮ್ಮ ಬ್ರೌಸಿಂಗ್ ಮಾಹಿತಿಯನ್ನು ಆ್ಯಪ್​ಗಳು ಜಾಹೀರಾತು ಏಜೆನ್ಸಿಗಳಿಗೆ ಮಾರಿಬಿಟ್ಟಿರಬಹುದು. ಹೀಗಾಗಿ, ತೀರಾ ವೈಯಕ್ತೀಕರಿಸಿದ ಜಾಹೀರಾತು ಕಾಣುತ್ತವೆ. ನಿಮ್ಮ ಸೂಕ್ಷ್ಮ ದತ್ತಾಂಶವನ್ನು ಕದಿಯಬಲ್ಲ ಆ್ಯಪ್​ಗಳು ಎಂಥವಿರಬಹುದು?

ಇದನ್ನೂ ಓದಿ: ಫ್ರಾನ್ಸ್ ಕೊಡಲ್ಲವೆಂದಾಗ ಹುಟ್ಟುಕೊಂಡ ಕಿಚ್ಚು; ಡಿಆರ್​ಡಿಒ ವಿಜ್ಞಾನಿಗಳು ಗ್ಯಾನ್ ಚಿಪ್ ಟೆಕ್ನಾಲಜಿ ರಹಸ್ಯ ಭೇದಿಸಿದ ಕಥೆ

1. ಉಚಿತ VPN ಅಪ್ಲಿಕೇಶನ್‌ಗಳು

ಉಚಿತ VPN ಆ್ಯಪ್​ಗಳು ಬಹಳ ರಿಸ್ಕಿ ಎನಿಸುತ್ತವೆ. ವಿಪಿಎನ್ ಕನೆಕ್ಷನ್​ನಲ್ಲಿ ನಿಮ್ಮ ಗುರುತು ಮತ್ತು ಸ್ಥಳ ಮರೆಮಾಚಿ ಇಂಟರ್ನೆಟ್ ಅನ್ನು ಗೌಪ್ಯವಾಗಿ ವೀಕ್ಷಿಸಲು ಸಾಧ್ಯ. ಆದರೆ, ಉಚಿತ ವಿಪಿಎನ್​ಗಳು ನಿಮ್ಮ ಎಲ್ಲಾ ಬ್ರೌಸಿಂಗ್ ಡಾಟಾ, ನಿಮ್ಮ ಸ್ಥಳ ಇತ್ಯಾದಿಯನ್ನು ಹೊರಗೆಲ್ಲೂ ತೋರಿಸದೇ ಹೋದರೂ ತನ್ನ ಸರ್ವರ್​ನಲ್ಲೇ ಸಂಗ್ರಹಿಸಿಕೊಳ್ಳಬಹುದು. ಈ ಮಾಹಿತಿ ಕಣಜವನ್ನು ಹಣಕ್ಕಾಗಿ ಮಾರಿ, ಅವು ಆದಾಯ ಮಾಡಿಕೊಳ್ಳುತ್ತವೆ.

2. ಅನಗತ್ಯ ಯುಟಿಲಿಟಿ ಆ್ಯಪ್​ಗಳು

ಫ್ಲ್ಯಾಶ್‌ಲೈಟ್, ಕ್ಲೀನರ್ ಮತ್ತು ಬೂಸ್ಟರ್‌ನಂತಹ ಅಪ್ಲಿಕೇಶನ್‌ಗಳು ಸಹ ಅಪಾಯ ಎನಿಸುತ್ತವೆ. ಇಂದು ಎಲ್ಲಾ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಶ್‌ಲೈಟ್ ಅನ್ನು ಇನ್​ಬ್ಯುಲ್ಟ್ ಆಗಿ ಹೊಂದಿರುತ್ತವೆ. ಬೇರೆ ಬೇರೆ ಆಕರ್ಷಣೆಯೊಂದಿಗೆ ಥರ್ಡ್ ಪಾರ್ಟಿ ಫ್ಲ್ಯಾಷ್​ಲೈಟ್ ಆ್ಯಪ್​ಗಳೂ ಮಾರುಕಟ್ಟೆಯಲ್ಲಿವೆ. ಇವು ನಿಮ್ಮ ಡಾಟಾ ಕದಿಯುವ ಅವಕಾಶ ಹೆಚ್ಚು. ಇನ್ನು, ಉಚಿತವಾಗಿ ಸಿಗುವ ಕ್ಲೀನರ್ ಆ್ಯಪ್​ಗಳು ನಿಮ್ಮ ಫೋನ್ ಕ್ಲೀನಪ್ ಮಾಡುವುದರ ಜೊತೆಗೆ ಬ್ರೌಸಿಂಗ್ ಡಾಟಾದಿಂದ ಹಿಡಿದು ಹಲವಾರು ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು ಎಂಬುದು ತಜ್ಞರ ಅನಿಸಿಕೆ.

3. ಎಡಿಟಿಂಗ್ ಅಂಡ್ ಫೇಸ್ ಫಿಲ್ಟರ್ ಆ್ಯಪ್​ಗಳು

ಈಗಂತೂ ಫೇಸ್ ಫಿಲ್ಟರ್ ಆ್ಯಪ್​ಗಳು, ಫೋಟೋ ಎಡಿಟಿಂಗ್, ವಿಡಿಯೋ ಎಡಿಟಿಂಗ್ ಆ್ಯಪ್​ಗಳು ಜನಪ್ರಿಯವಾಗಿವೆ. ಜನರು ತಮ್ಮ ರೀಲ್ಸ್ ವಿಡಿಯೋಗಳು ಮತ್ತು ಫೋಟೋವನ್ನು ಎಡಿಟಿಂಗ್ ಮಾಡಲು ಇಂಥ ಆ್ಯಪ್​ಗಳನ್ನು ಬಳಸುವುದು ಹೆಚ್ಚಾಗಿದೆ. ನಿಮ್ಮ ಮುಖ ಚಹರೆಯ ಸೂಕ್ಷ್ಮ ಮಾಹಿತಿಯು ಈ ಆ್ಯಪ್​ಗಳ ಮೂಲಕ ಯಾವುದೋ ಸರ್ವರ್​ಗಳಲ್ಲಿ ಸ್ಟೋರ್ ಆಗಿ ಇನ್ಯಾವುದಕ್ಕಾದರೂ ಅವುಗಳ ದುರ್ಬಳಕೆ ಆಗಬಹುದು.

ಇದನ್ನೂ ಓದಿ: ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಇಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ

ಅವಶ್ಯಕವಿರುವುದಕ್ಕೆ ಮಾತ್ರವೇ ಅನುಮತಿಸಿ

ಕೆಲ ಆ್ಯಪ್​ಗಳು ಎಲ್ಲಾ ಅಕ್ಸೆಸ್​ಗಳಿಗೂ ಅನುಮತಿ ಕೇಳುತ್ತವೆ. ಫೋಟೋ, ಫೋನ್ ಕಾಲ್, ಸೆಟ್ಟಿಂಗ್ಸ್, ಕ್ಯಾಮರಾ, ಮೆಸೇಜ್, ಬ್ರೌಸಿಂಗ್ ಡಾಟಾ ಇತ್ಯಾದಿ ಎಲ್ಲಾ ಪಡೆಯಲು ಪರ್ಮಿಷನ್ ಕೇಳುತ್ತವೆ. ಒಂದು ಫೋಟೋ ಎಡಿಟಿಂಗ್ ಆ್ಯಪ್​ಗೆ ನಿಮ್ಮ ಮೆಸೇಜ್​ಗಳು ಯಾಕೆ ಬೇಕಾಗುತ್ತವೆ? ಹೀಗಾಗಿ, ಆ್ಯಪ್​ಗಳು ಪರ್ಮಿಷನ್ ಕೇಳಿದಾಗ ಎಲ್ಲದಕ್ಕೂ ಅನುಮತಿಸಬೇಡಿ. ಹಾಗೆಯೇ, ಗಮನಿಸಬೇಕಾದ ಸಂಗತಿ ಎಂದರೆ ನೀವು ಹೊಸ ಆ್ಯಪ್​ವೊಂದನ್ನು ಡೌನ್​ಲೋಡ್ ಮಾಡುತ್ತಿದ್ದರೆ ಮೊದಲು ಪ್ಲೇಸ್ಟೋರ್​ನಲ್ಲಿ ಆ ಆ್ಯಪ್​ಗೆ ರಿವ್ಯೂ ಹೇಗಿದೆ ಎಂದು ನೋಡಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾಶ್ಮೀರದ ಗಡಿಯೊಳಗೆ ಬಂದ ಪಾಕಿಸ್ತಾನಿ ಡ್ರೋನ್​ಗಳು; ಭಾರತೀಯ ಸೇನೆಯಿಂದ ಗುಂಡಿನ ದಾಳಿ – Kannada News | Pakistani drones spotted flying in Kashmir Indian Army opens fire

ಶ್ರೀನಗರ, ಜನವರಿ 30: ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಭಾರತೀಯ ಪ್ರದೇಶದೊಳಗೆ ನುಸುಳಲು ಯತ್ನಿಸಿದ ಹಲವಾರು ಪಾಕಿಸ್ತಾನಿ ಡ್ರೋನ್‌ಗಳನ್ನು ಭಾರತೀಯ ಸೇನೆ (Indian Army) ಇಂದು ಹಿಮ್ಮೆಟ್ಟಿಸಿದೆ ಎಂದು ಮೂಲಗಳು ತಿಳಿಸಿವೆ. ಕೇರನ್ ಸೆಕ್ಟರ್‌ನ ಜೋಧಾ ಮಕಾನ್-ಬಿರಂಡೋರಿ ಪ್ರದೇಶದ ಬಳಿ ಸುಮಾರು 15 ಡ್ರೋನ್‌ಗಳು ಹಾರುತ್ತಿರುವುದು ಕಂಡುಬಂದಿದ್ದು, ಸೇನಾ ಪಡೆಗಳು ತಕ್ಷಣ ಕ್ರಮ ಕೈಗೊಂಡವು.

ಈ ಘಟನೆಯಲ್ಲಿ ಯಾವುದೇ ಸಾವುನೋವು ಅಥವಾ ಹಾನಿ ಸಂಭವಿಸಿಲ್ಲ. ಈ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರಕ್ಷಣಾ ಸಚಿವಾಲಯವು ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಇದನ್ನೂ ಓದಿ: Video: ಜಮ್ಮು-ಕಾಶ್ಮೀರದ ಗಡಿಯಲ್ಲಿ ಐದು ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

ಭಾರತೀಯ ಸೇನೆಯ 6ನೇ ರಾಷ್ಟ್ರೀಯ ರೈಫಲ್ಸ್‌ನ ಸಿಬ್ಬಂದಿ ವಾಯುಪ್ರದೇಶದಲ್ಲಿ ಡ್ರೋನ್‌ಗಳನ್ನು ಗಮನಿಸಿ ಗುಂಡು ಹಾರಿಸಿದರು ಎಂದು ಮೂಲಗಳು ತಿಳಿಸಿವೆ. ಸೇನೆಯ ಪ್ರತಿಕ್ರಿಯೆಯ ನಂತರ ಎಲ್ಲಾ ಡ್ರೋನ್‌ಗಳು ಹಿಂದೆ ಸರಿದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕದ್ದು ಮುಚ್ಚಿ ದರ್ಶನ್​ ಭೇಟಿ: ಜೈಲಿನ CCTV ಕಣ್ತಪ್ಪಿಸಿ ದಾಸನನ್ನ ನೋಡಲು ಹೋಗಿದ್ಯಾರು? – Kannada News | DGP Alok Kumar orders action after constable, Warden illegally meets Actor Darshan Inside Bengaluru jail

ಬೆಂಗಳೂರು (ಜನವರಿ 30):  ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್  (Actor Darshan) ಅವರನ್ನು ನೋಡುವ ಹಂಬಲ ಇದೀಗ ಪೊಲೀಸರಿಗೇ ಮುಳುವಾಗಿದೆ. ನಿಯಮ ಮೀರಿ ದರ್ಶನ್ ನನ್ನು ನೋಡಲು ಹೋದ ಯಲಹಂಕ ಠಾಣೆ ಪೊಲೀಸ್ ಕಾನ್​ಸ್ಟೇಬಲ್ (constable) ಹಾಗೂ ಅವರಿಗೆ ಸಾಥ್ ನೀಡಿದ್ದ ಜೈಲು ವಾರ್ಡನ್ ವಿರುದ್ಧ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ (Alok Kumar) ಕಠಿಣ ಕ್ರಮ ಕೈಗೊಂಡಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರನ್ನು ನಿಯಮಬಾಹಿರವಾಗಿ ಭೇಟಿ ಮಾಡಲು ಪೊಲೀಸ್ ಪೇದೆಯೊಬ್ಬರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಜೈಲು ವಾರ್ಡನ್ ನನ್ನು ವರ್ಗಾವಣೆ ಮಾಡಲಾಗಿದೆ. ಡಿಜಿಪಿ ಅಲೋಕ್ ಕುಮಾರ್ ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಕರ್ತವ್ಯಲೋಪ ಬೆಳಕಿಗೆ ಬಂದಿದೆ. ಕೂಡಲೇ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್​ ಪ್ರಭುಶಂಕರ ಚೌಹಾಣ್​ ಎನ್ನುವರನ್ನು ಚಾಮರಾಜನಗರ ಕಾರಾಗೃಹಕ್ಕೆ ಎತ್ತಂಗಡಿ ಮಾಡಿದ್ದಾರೆ. ಅಲ್ಲದೇ ಇಲಾಖೆ ತನಿಖೆಗೆ ಸೂಚಿಸಿದ್ದಾರೆ.

ನಡೆದಿದ್ದೇನು?

ಕಳೆದ ಜನವರಿ 24 ರಂದು ಯಲಹಂಕ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ಬೇರೊಂದು ಪ್ರಕರಣದ ಆರೋಪಿಗಳನ್ನು ಜೈಲಿಗೆ ಬಿಡಲು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ವಾರ್ಡರ್ ಪ್ರಭಾಕರ್ ಚೌಹಾನ್ ಬಳಿ, ನನಗೆ ನಟ ದರ್ಶನ್ ಅವರನ್ನು ನೋಡಬೇಕು ತೋರಿಸಿ ಪ್ಲೀಸ್ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಪ್ರಭಾಕರ್, ಸಿಸಿಟಿವಿ ಕ್ಯಾಮರಾಗಳ ಕಣ್ಣು ತಪ್ಪಿಸಿ ರಹಸ್ಯವಾಗಿ ಪೇದೆಯನ್ನು ದರ್ಶನ್ ಇದ್ದ ಬ್ಯಾರಕ್‌ ಬಳಿ ಕರೆದೊಯ್ದಿದ್ದರು.

ಇದನ್ನೂ ಓದಿ: ಇದೇ ಮೊದಲ ಬಾರಿಗೆ ಜೈಲಿನಲ್ಲಿ ಹೊಸ ರೂಲ್ಸ್: ದರ್ಶನ್ ಸೇರಿದಂತೆ ಇತರೆ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಬ್ರೇಕ್

ಜೈಲು ಸಿಬ್ಬಂದಿ ಎತ್ತಂಗಡಿ!

ಪ್ರಕರಣವೊಂದರ ಆರೋಪಿಯನ್ನು ಜೈಲಿಗೆ ಬಿಡಲು ಯಲಹಂಕ ಕಾನ್ಸ್​​ಟೇಬಲ್ ಗಣೇಶ್ ಎಂಬುವವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದು, ಈ ವೇಳೆ ಈ ವೇಳೆ ನಟ ದರ್ಶನ್ ನನ್ನು ತೋರಿಸುವಂತೆ ಮನವಿ ಮಾಡಿದ್ದಾರೆ. ಬಳಿಕ ವಾರ್ಡನ್​ ಪ್ರಭುಶಂಕರ ಚೌಹಾಣ್​, ಸಿಸಿ ಕ್ಯಾಮರಾ ಕಣ್ತಪ್ಪಿಸಿ ಪೇದೆಯನ್ನು ದರ್ಶನ್​ ಇರುವ ಬ್ಯಾರಕ್​​​ಗೆ ಬಳಿ ಕರೆದುಕೊಂಡು ಹೋಗಿದ್ದಾರೆ.ಈ ವಿಚಾರ ತಿಳಿದ ಡಿಜಿಪಿ ಅಲೋಕ್ ಕುಮಾರ್, ವಾರ್ಡನ್​​ ಪ್ರಭುಶಂಕರ ಚೌಹಾಣ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚಾಮರಾಜನಗರ ಕಾರಾಗೃಹಕ್ಕೆ ವರ್ಗಾವಣೆ ಮಾಡಿದ್ದಾರೆ. ಅಲ್ಲದೇ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ಇನ್ನು ದರ್ಶನ್​​​ ನೋಡಲು ಹೋಗಿದ್ದ ಕಾನ್ಸ್​​ಟೇಬಲ್ ವಿರುದ್ಧದವೂ ಸಹ ಕ್ರಮಕ್ಕೆ ಸೂಚಿಸಿದ್ದಾರೆ.

ಪೇದೆ ವಿರುದ್ಧವೂ ಕ್ರಮಕ್ಕೆ ಸೂಚನೆ

ಕೇವಲ ಜೈಲು ಸಿಬ್ಬಂದಿ ಮಾತ್ರವಲ್ಲದೆ, ಅನಧಿಕೃತವಾಗಿ ದರ್ಶನ್ ನೋಡಲು ಹೋದ ಯಲಹಂಕದ ಪೊಲೀಸ್ ಪೇದೆಯ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವಂತೆ ಈಶಾನ್ಯ ವಿಭಾಗದ ಡಿಸಿಪಿಗೆ ಅಲೋಕ್ ಕುಮಾರ್ ಅವರು ಖಡಕ್ ಸೂಚನೆ ನೀಡಿದ್ದಾರೆ. ಈ ಮೂಲಕ ಜೈಲಿನೊಳಗೆ ಎಷ್ಟೇ ದೊಡ್ಡ ಸೆಲೆಬ್ರಿಟಿ ಇದ್ದರೂ ನಿಯಮಗಳು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಡಿಜಿಪಿ ಅಲೋಕ್ ಕುಮಾರ್ ಈ ಕ್ರಮದ ಮೂಲಕ ರವಾನಿಸಿದ್ದಾರೆ.

ತಮ್ಮ ಕಚೇರಿಯಿಂದ ವೀಕ್ಷಿಸಿದ್ದ ಡಿಜಿಪಿ

ತಮ್ಮ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿಗಳಿಂದ ದರ್ಶನ್ ಸೆಲ್‌ಗೆ ಖಾಕಿ ಸಮವಸ್ತ್ರದಲ್ಲಿದ್ದ ಸಿಬ್ಬಂದಿ ಭೇಟಿಯನ್ನು ಡಿಜಿಪಿ ಅಲೋಕ್ ಕುಮಾರ್ ವೀಕ್ಷಿಸಿದ್ದರು. ಬಳಿಕ ಗಣರಾಜ್ಯೋತ್ಸವ ನಿಮಿತ್ತ ಜೈಲಿಗೆ ತೆರಳಿದ್ದಾಗ ದರ್ಶನ್‌ಗೆ ತಮ್ಮ ಭೇಟಿಗೆ ಬಂದಿದ್ದವರ ಬಗ್ಗೆ ಡಿಜಿಪಿ ವಿಚಾರಿಸಿದ್ದಾರೆ. ಆಗ ತಮಗೆ ಪರಿಚಯದವರಲ್ಲ. ಬಂದು ಹಾಯ್ ಹೇಳಿದರು. ನಾನು ಮಾತನಾಡಿಸಿದೆ ಅಷ್ಟೇ ಎಂದಿದ್ದಾರೆ. ಆಗ ವಾರ್ಡನ್‌ ಪ್ರಭುರನ್ನು ಕರೆಸಿ ವಿಚಾರಿಸಿದಾಗ ಸತ್ಯ ಬಯಲಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:57 pm, Fri, 30 January 26

Source link

ತಿರುಪತಿ ದೇವಸ್ಥಾನದಲ್ಲಿ ಮುತ್ತು ಕೊಟ್ಟು ಫೋಟೋಶೂಟ್; ವಿವಾದಕ್ಕೆ ಕ್ಷಮೆ ಕೇಳಿದ ನವ ದಂಪತಿ – Kannada News | Newly wed couple apologise for photoshoot at Tirumala Tirupati Temple after Controversy

ತಿರುಮಲ, ಜನವರಿ 30: ತಮಿಳುನಾಡಿನ ತಿರುವಣ್ಣಾಮಲೈನ ನವವಿವಾಹಿತ ದಂಪತಿ ತಿರುಮಲ ತಿರುಪತಿ ದೇವಸ್ಥಾನದ (TTD) ಆವರಣದಲ್ಲಿ ಫೋಟೋಶೂಟ್ ನಡೆಸಿದ್ದರು. ಆಗಷ್ಟೇ ವಿವಾಹವಾಗಿದ್ದ ದಂಪತಿ ಈ ವಿವಾದಕ್ಕೆ ಕ್ಷಮೆ ಯಾಚಿಸಿದ್ದಾರೆ. ತಿರುಮಲ ಮತ್ತು ಗಾಯತ್ರಿ ಎಂಬ ದಂಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ತಿರುಮಲದ ಕಲ್ಯಾಣ ವೇದಿಕೆಯಲ್ಲಿ ವಿವಾಹವಾಗಿದ್ದರು. ಇದಾದ ನಂತರ, ಆ ದಂಪತಿ ನಿಯಮಗಳನ್ನು ಉಲ್ಲಂಘಿಸಿ ಗೊಲ್ಲಮಂಟಪದಲ್ಲಿ ಫೋಟೋಗಳಿಗೆ ಪೋಸ್ ನೀಡಿದರು.

ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ಬಳಿ ನವವಿವಾಹಿತ ದಂಪತಿಗಳನ್ನು ಒಳಗೊಂಡ ಫೋಟೋಶೂಟ್ ಯಾತ್ರಿಕರು ಮತ್ತು ಭಕ್ತರಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತ್ತು. ಈ ಘಟನೆಯು ಮತ್ತೊಮ್ಮೆ ದೇವಾಲಯದ ನಿಯಮಗಳ ಉಲ್ಲಂಘನೆ ಮತ್ತು ಪವಿತ್ರ ಪಟ್ಟಣವಾದ ತಿರುಮಲದಲ್ಲಿ ಭದ್ರತಾ ಲೋಪಗಳ ಬಗ್ಗೆ ಗಮನ ಸೆಳೆದಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನದ ಬುಕಿಂಗ್​ನಲ್ಲಿ ನಾಳೆಯಿಂದಲೇ ಹೊಸ ಬದಲಾವಣೆ

ದೇವಾಲಯದ ಒಳಗೆ ಫೋಟೋಶೂಟ್ ನಿಷೇಧದ ಬಗ್ಗೆ ತಿಳಿಯದೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಅವರು ಕ್ಷಮೆ ಯಾಚಿಸಿದ್ದಾರೆ. ನಿಯಮಗಳನ್ನು ತಿಳಿಸಿದ ನಂತರ ಫೋಟೋಗಳನ್ನು ಡಿಲೀಟ್ ಕೂಡ ಮಾಡಿದ್ದಾರೆ. ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ, ದಂಪತಿಗಳು ಶ್ರೀ ವಾರಿ ಸೇವೆ (ವೆಂಕಟೇಶ್ವರನಿಗೆ ಸೇವೆ) ಮೂಲಕ ಸೇವೆ ಸಲ್ಲಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಭಕ್ತಿ ಸೇವೆಯ ಮೂಲಕ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಬಯಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tirupati Security Breach: ತಿರುಪತಿ ದೇಗುಲದಲ್ಲಿ ಭಾರಿ ಭದ್ರತಾ ಲೋಪ, ಗೋಪುರ ಏರಿ ಕುಡುಕನಿಂದ ಅವಾಂತರ

ಗೊಲ್ಲ ಮಂಟಪದಿಂದ ಅಖಿಲಾಂಡಂ ವಲಯದವರೆಗಿನ ಸೂಕ್ಷ್ಮ ಪ್ರದೇಶಗಳಲ್ಲಿ ದಂಪತಿ ಫೋಟೋಗೆ ಪೋಸ್ ನೀಡಿದರು. ಈ ಸ್ಥಳಗಳು ವೃತ್ತಿಪರ ಫೋಟೋಶೂಟ್, ವೀಡಿಯೊಗ್ರಫಿ ಮತ್ತು ಸಾಮಾಜಿಕ ಮಾಧ್ಯಮ ರೀಲ್ ರೆಕಾರ್ಡ್ ಮಾಡುವುದನ್ನು ಸ್ಪಷ್ಟವಾಗಿ ನಿಷೇಧಿಸುವ ಕಟ್ಟುನಿಟ್ಟಿನ ನಿಯಮಗಳ ಅಡಿಯಲ್ಲಿ ಬರುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭರ್ಜರಿ ಟಿಆರ್​​ಪಿ ಪಡೆದ ‘ಬಿಗ್ ಬಾಸ್ ಫಿನಾಲೆ’ ಎಪಿಸೋಡ್; ಕಲರ್ಸ್ ನಂಬರ್ 1 – Kannada News | Big Boss Kannada Finale Shatters TRP Records; Colors Kannada Dominates Number 1 Spot

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಫಿನಾಲೆ ನಡೆದು ಕೆಲವು ದಿನಗಳು ಕಳೆದಿವೆ. ಆದರೆ, ಶೋನ ಬಗೆಗಿನ ಚರ್ಚೆಗಳು ಮಾತ್ರ ನಿಂತಿಲ್ಲ. ಈಗ ಬಿಗ್ ಬಾಸ್ ಫಿನಾಲೆಯ ಟಿಆರ್​​ಪಿ ಹೊರ ಬಿದ್ದಿದೆ. ಫಿನಾಲೆ ಎಪಿಸೋಡ್​​ಗೆ 16.8 ಟಿವಿಆರ್ ಸಿಕ್ಕಿದೆ. ವಾರಾಂತ್ಯಗಳಲ್ಲಿ ಬಿಗ್ ಬಾಸ್ ಎಪಿಸೋಡ್​​​ಗೆ 10-12 ಟಿವಿಆರ್ ಸಿಗುತ್ತಿತ್ತು. ಆದರೆ, ಫಿನಾಲೆ ಎಪಿಸೋಡ್ ಮಾತ್ರ ಭರ್ಜರಿ ಟಿಆರ್​​ಪಿ ಪಡೆದುಕೊಂಡು ಗಮನ ಸೆಳೆದಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಳೆದ ವರ್ಷ ಸೆಪ್ಟೆಂಬರ್ 28ರಂದು ಆರಂಭ ಆಯಿತು. ಜನವರಿ 18ರಂದು ಫಿನಾಲೆ ನಡೆದಿದೆ. ಈ ಎಪಿಸೋಡ್​​ನ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದಾರೆ. ಇದಕ್ಕೆ ಕಾರಣ ಗಿಲ್ಲಿ ನಟ ಎಂದರೂ ತಪ್ಪಾಗಲಾರದು. ಗಿಲ್ಲಿ ನಟ ಕಪ್ ಎತ್ತೋದನ್ನು ನೋಡಲು ಎಲ್ಲರೂ ಕಾದು ಕುಳಿತಿದ್ದರು. ಹೀಗಾಗಿ, ಒಳ್ಳೆಯ ಟಿಆರ್​ಪಿ ಸಿಕ್ಕಿದೆ.

ಇನ್ನು, ಕಲರ್ಸ್ ಕನ್ನಡ ವಾಹಿನಿ ಜೀ ಕನ್ನಡ ವಾಹಿನಿಯನ್ನು ಹಿಂದಿಕ್ಕಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಕಾರಣವೂ ಇದೆ. ಶನಿವಾರ (ಜನವರಿ 17) ಬಿಗ್ ಬಾಸ್ ಪ್ರೀ ಫಿನಾಲೆ ಹಾಗೂ ಭಾನುವಾರ ಫಿನಾಲೆಯನ್ನು ಜನರು ಸಾಕಷ್ಟು ಶ್ರದ್ಧೆಯಿಂದ ವೀಕ್ಷಿಸಿದ್ದಾರೆ. ಇದು ಸಹಕಾರಿ ಆಗಿದೆ.

ಇದನ್ನೂ ಓದಿ: ಕುಡಿದ ನಶೆಯಲ್ಲಿ ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ ಎಂದಿದ್ದೆ ಅಷ್ಟೇ; ಸ್ಪಷ್ಟನೆ ಕೊಟ್ಟ ಸತೀಶ್

ಧಾರಾವಾಹಿಗಳ ಟಿಆರ್​ಪಿ ನೋಡೋದಾದರೆ, ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ‘ಕರ್ಣ’ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ‘ಅಣ್ಣಯ್ಯ’ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ‘ನಂದ ಗೋಕುಲ’ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ.
ಆರನೇ ಸ್ಥಾನದಲ್ಲಿ ‘ಮುದ್ದು ಸೊಸೆ’ ಧಾರಾವಾಹಿ, ಏಳನೇ ಸ್ಥಾನದಲ್ಲಿ ‘ಆದಿ ಲಕ್ಷ್ಮೀ ಪುರಾಣ’ ಧಾರಾವಾಹಿ ಇದೆ. 8ನೇ ಸ್ಥಾನದಲ್ಲಿ ‘ಭಾರ್ಗವಿ ಎಲ್​​ಎಲ್​ಬಿ’ ಇದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

JEE Main 2026: ಜೆಇಇ ಆಕಾಂಕ್ಷಿಗಳಿಗೆ ಗೂಗಲ್‌ನಿಂದ ಗುಡ್​ ನ್ಯೂಸ್​​; ಉಚಿತ JEE Main ಅಣಕು ಪರೀಕ್ಷೆ ಆರಂಭ – Kannada News | Google Offers Free JEE Main Mock Tests for IIT Aspirants on Gemini

ಐಐಟಿ ಪ್ರವೇಶದ ಕನಸು ಕಾಣುತ್ತಿರುವ ಲಕ್ಷಾಂತರ ಜೆಇಇ ಆಕಾಂಕ್ಷಿಗಳಿಗೆ ಇದೀಗ ದೊಡ್ಡ ಮಟ್ಟದ ಪರಿಹಾರ ಸಿಕ್ಕಿದೆ. ಜೆಇಇ ಮುಖ್ಯ ಪರೀಕ್ಷೆಗೆ ತಯಾರಾಗಲು ಇಷ್ಟು ದಿನಗಳು ದುಬಾರಿ ತರಬೇತಿ ಕೇಂದ್ರಗಳು ಮತ್ತು ಅಣಕು ಪರೀಕ್ಷೆಗಳ ಮೇಲೆಯೇ ಅವಲಂಬಿಸಬೇಕಾಗಿದ್ದ ವಿದ್ಯಾರ್ಥಿಗಳಿಗೆ, ಗೂಗಲ್ ಉಚಿತ ಪೂರ್ಣ ಪ್ರಮಾಣದ ಜೆಇಇ ಅಣಕು ಪರೀಕ್ಷೆಯನ್ನು ಆರಂಭಿಸುವ ಮೂಲಕ ಹೊಸ ಅವಕಾಶವನ್ನು ಒದಗಿಸಿದೆ.

ಈ ಉಪಕ್ರಮದ ಮೂಲಕ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ, ನೈಜ ಜೆಇಇ ಪರೀಕ್ಷೆಯ ಮಾದರಿಯಲ್ಲಿಯೇ ಅಣಕು ಪರೀಕ್ಷೆಯನ್ನು ಬರೆಯಬಹುದು. ಇದರಿಂದ ಪರೀಕ್ಷೆಯ ಮಾದರಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲದೆ, ತಮ್ಮ ಶಕ್ತಿಗಳು ಮತ್ತು ದೌರ್ಬಲ್ಯಗಳನ್ನು ಗುರುತಿಸಿ ಉತ್ತಮ ತಯಾರಿ ತಂತ್ರವನ್ನು ರೂಪಿಸಿಕೊಳ್ಳಲು ಸಹಾಯವಾಗಲಿದೆ.

ನೈಜ ಪರೀಕ್ಷೆಯ ಅನುಭವ ನೀಡುವ ಅಣಕು ಪರೀಕ್ಷೆ:

ಗೂಗಲ್ ಆರಂಭಿಸಿರುವ ಈ ಜೆಇಇ ಅಣಕು ಪರೀಕ್ಷೆಯು ನಿಜವಾದ JEE Main ಪರೀಕ್ಷಾ ಮಾದರಿಯನ್ನು ಆಧರಿಸಿದೆ. ಪರೀಕ್ಷೆಯ ಸಮಯಾವಧಿ, ಪ್ರಶ್ನೆಗಳ ಮಾದರಿ ಮತ್ತು ಕಠಿಣತೆಯ ಮಟ್ಟವು ನೈಜ ಪರೀಕ್ಷೆಯಂತೆಯೇ ರೂಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡವನ್ನು ನಿಭಾಯಿಸುವುದನ್ನು ಮುಂಚಿತವಾಗಿಯೇ ಅಭ್ಯಾಸ ಮಾಡಬಹುದು.

ಈ ಉಪಕರಣದ ಪ್ರಮುಖ ವೈಶಿಷ್ಟ್ಯವೆಂದರೆ, ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳಿಗೆ ವಿಸ್ತೃತ ಕಾರ್ಯಕ್ಷಮತಾ ವಿಶ್ಲೇಷಣೆ ಒದಗಿಸಲಾಗುತ್ತದೆ. ಯಾವ ವಿಷಯಗಳಲ್ಲಿ ವಿದ್ಯಾರ್ಥಿ ಬಲವಾಗಿದ್ದಾರೆ, ಯಾವ ಅಧ್ಯಾಯಗಳಲ್ಲಿ ಇನ್ನಷ್ಟು ಅಭ್ಯಾಸ ಅಗತ್ಯವಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಐಐಟಿ ಪ್ರವೇಶಕ್ಕಾಗಿ ತಯಾರಿ ನಡೆಸುತ್ತಿರುವವರಿಗೆ ಇದು ಅತ್ಯಂತ ಉಪಯುಕ್ತ ವೈಶಿಷ್ಟ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Careers360 ಮತ್ತು Physics Wallah ಜೊತೆಗೂಡಿ ಗೂಗಲ್ ಉಪಕ್ರಮ:

ಈ ಉಚಿತ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಗೂಗಲ್, Careers360 ಹಾಗೂ Physics Wallah ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಗೂಗಲ್‌ನ ಜೆಮಿನಿ (Gemini) ಪ್ಲಾಟ್‌ಫಾರ್ಮ್‌ನಲ್ಲಿ ವಿದ್ಯಾರ್ಥಿಗಳು ಈಗ ಉಚಿತವಾಗಿ ಪೂರ್ಣ ಪ್ರಮಾಣದ JEE Main ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು ಎಂದು ಗೂಗಲ್ ಅಧಿಕೃತವಾಗಿ ತಿಳಿಸಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸ್ವಯಂ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಈ ಉಪಕರಣವು ಅತ್ಯಂತ ಪ್ರಯೋಜನಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರು ಅರ್ಹರು

ಸುಂದರ್ ಪಿಚೈಯಿಂದ ಮಾಹಿತಿ ಹಂಚಿಕೆ:

ಈ ಕುರಿತು ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ವಾರ SAT ಪರೀಕ್ಷೆಗೆ ಉಚಿತ ಅಭ್ಯಾಸ ಪರೀಕ್ಷೆಯನ್ನು ಆರಂಭಿಸಲಾಗಿತ್ತು. ಈಗ ಅದೇ ಮಾದರಿಯಲ್ಲಿ ಭಾರತದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಯಾದ JEE Main ಗಾಗಿಯೂ ಉಚಿತ ಅಣಕು ಪರೀಕ್ಷೆಯನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಜೆಇಇ ಆಕಾಂಕ್ಷಿಗಳಿಗೆ ಇದು ದೊಡ್ಡ ಅವಕಾಶ. ದುಬಾರಿ ಕೋಚಿಂಗ್ ಇಲ್ಲದಿದ್ದರೂ, ಗುಣಮಟ್ಟದ ಅಭ್ಯಾಸ ಮತ್ತು ವಿಶ್ಲೇಷಣೆಯೊಂದಿಗೆ ತಮ್ಮ ತಯಾರಿಯನ್ನು ಬಲಪಡಿಸಿಕೊಳ್ಳಲು ಈ ಗೂಗಲ್ ಉಪಕ್ರಮ ಸಹಾಯ ಮಾಡಲಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chowkidar Review: ಅಪ್ಪನ ಅಗಾಧ ಪ್ರೀತಿಯ ಪ್ಲಸ್, ಮೈನಸ್ ತೋರಿಸುವ ‘ಚೌಕಿದಾರ್’ – Kannada News | Chowkidar Kannada Movie Review: Sai Kumar Pruthvi Ambaar starrer new film is a family entertainer

ಚೌಕಿದಾರ್

UA

  • Time – 145 Minutes
  • Released – January 30, 2026
  • Language – Kannada
  • Genre – Family Drama, Action

Cast – ಸಾಯಿಕುಮಾರ್, ಪೃಥ್ವಿ ಅಂಬಾರ್, ಶ್ವೇತಾ ವಿನೋಧಿನಿ, ಸುಧಾರಾಣಿ, ಧನ್ಯಾ ರಾಮ್​​ಕುಮಾರ್, ಗಿಲ್ಲಿ ನಟ, ಮುನಿ, ಧರ್ಮ ಮುಂತಾದವರು.

Director – ಚಂದ್ರಶೇಖರ್ ಬಂಡಿಯಪ್ಪ

ಪೃಥ್ವಿ ಅಂಬಾರ್, ಸಾಯಿ ಕುಮಾರ್ (Sai Kumar), ಸುಧಾರಾಣಿ, ಶ್ವೇತಾ ವಿನೋಧಿನಿ ಮುಂತಾದವರು ನಟಿಸಿರುವ ‘ಚೌಕಿದಾರ್’ ಸಿನಿಮಾ ರಿಲೀಸ್ (ಜನವರಿ 30) ಆಗಿದೆ. ಈ ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯದ ಕಥೆ ಇದೆ. ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಡಾ. ಕಲ್ಲಹಳ್ಳಿ ಚಂದ್ರಶೇಖರ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುವ ರೀತಿಯಲ್ಲಿ ‘ಚೌಕಿದಾರ್’ ಸಿನಿಮಾ ಮೂಡಿಬಂದಿದೆ. ಸಿನಿಮಾದ ವಿಮರ್ಶೆ (Chowkidar Review) ಇಲ್ಲಿದೆ..

ಸಾಯಿ ಕುಮಾರ್ ಅವರು ಒಂದೇ ರೀತಿಯ ಪಾತ್ರಕ್ಕೆ ಗಂಟುಬಿದ್ದವರಲ್ಲ. ಚಿತ್ರರಂಗದಲ್ಲಿ ಅವರು 50 ವರ್ಷಗಳ ಅನುಭವ ಹೊಂದಿದ್ದಾರೆ. ‘ಚೌಕಿದಾರ್’ ಸಿನಿಮಾದಲ್ಲಿ ಅವರದ್ದೇ ಪ್ರಮುಖ ಪಾತ್ರ. ಹೀರೋ ತಂದೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅಪ್ಪ ಎಂದರೆ ಇಡೀ ಕುಟುಂಬವನ್ನು ಕಾಯುವ ಚೌಕಿದಾರ ಎಂಬುದು ಗೊತ್ತೇ ಇದೆ. ಆ ಎಳೆಯನ್ನೇ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ. ಮಗನ ಪಾತ್ರದಲ್ಲಿ ಪೃಥ್ವಿ ಅಂಬಾರ್ ನಟಿಸಿದ್ದಾರೆ.

ಸಾಯಿ ಕುಮಾರ್ ಅವರಿಗೆ ಹೀರೋ ತಂದೆಯ ಪಾತ್ರ ಹೊಸದಲ್ಲ. ಆದರೆ ‘ಚೌಕಿದಾರ್’ ಸಿನಿಮಾದಲ್ಲಿ ಇರುವ ಅಪ್ಪನ ಪಾತ್ರ ಸ್ವಲ್ಪ ಡಿಫರೆಂಟ್. ಮಗನ ಮೇಲೆ ಈತನಿಗೆ ವಿಪರೀತ ಪ್ರೀತಿ. ಬಾಲ್ಯದಲ್ಲಿ ನಡೆಯಲು ಕಲಿಯುವಾಗ ಮಗ ಬಿದ್ದರೂ ಕೂಡ ಈತನಿಗೆ ವಿಪರೀತ ಸಂಕಟ ಆಗುತ್ತದೆ. ಮಗ ದೊಡ್ಡವನಾಗಿ ಮದುವೆಯ ವಯಸ್ಸಿಗೆ ಬಂದರೂ ತಂದೆಯ ಪ್ರೀತಿ ಕಡಿಮೆ ಆಗಲ್ಲ. ಅಪ್ಪನ ಅತಿಯಾಗಿ ಪ್ರೀತಿಯಿಂದ ಕೆಲವು ಅನಾಹುತಗಳು ನಡೆದುಹೋಗುತ್ತವೆ. ಆ ಸಂಗತಿಗಳು ಏನು? ಅದರಿಂದ ಹೀರೋ ಹೇಗೆ ಹೊರಬರುತ್ತಾನೆ ಎಂಬುದೇ ಈ ಸಿನಿಮಾದ ಕಥೆಯ ತಿರುಳು.

ಪೃಥ್ವಿ ಅಂಬಾರ್ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಕಿಂಚಿತ್ತೂ ಜವಾಬ್ದಾರಿ ಇಲ್ಲದ ಮಗನಾಗಿ ಕಾಣಿಸಿಕೊಂಡಿದ್ದಾರೆ. ಅತಿಯಾದ ಪ್ರೀತಿಯಿಂದ ಬೆಳೆದ ಮಕ್ಕಳು ಹೇಗಿರುತ್ತಾರೆ ಎಂಬುದನ್ನು ಅವರು ಈ ಪಾತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಈ ಪಾತ್ರದ ನೆಗೆಟಿವ್ ಶೇಡ್ ಹೆಚ್ಚಾಗಿ ಕಾಣಿಸುತ್ತದೆ. ಪೃಥ್ವಿ ಅಂಬಾರ್ ಅವರು ಇಮೇಜ್ ಬದಿಗಿಟ್ಟು ಅಂಥ ಪಾತ್ರವನ್ನು ಮಾಡಿದ್ದಾರೆ.

ಒಟ್ಟಾರೆಯಾಗಿ ನೋಡಿದರೆ ಈ ಸಿನಿಮಾದ ಕಥೆಯಲ್ಲಿ ಸಂಪೂರ್ಣ ಹೊಸತನವನ್ನು ನಿರೀಕ್ಷಿಸಲಾಗದು. ಕೆಲವು ದೃಶ್ಯಗಳನ್ನು ಮೊದಲೇ ಊಹಿಸಬಹುದು. ಹಾಗಿದ್ದರೂ ಕೂಡ ಈ ಕಾಲಕ್ಕೆ ಪ್ರಸ್ತುತ ಎಂಬಂತೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಮೊಬೈಲ್​ನಲ್ಲಿ ಮುಳುಗಿದ್ದು, ಜವಾಬ್ದಾರಿ ನಿಭಾಯಿಸದೇ, ಅಪ್ಪ-ಅಮ್ಮನ ಕಷ್ಟ ಅರ್ಥ ಮಾಡಿಕೊಳ್ಳದೇ ತಿರುಗಾಡುವ ಮಕ್ಕಳಿಗೆ ಈ ಸಿನಿಮಾದಲ್ಲಿ ಅಗತ್ಯವಾದ ಸಂದೇಶ ನೀಡಲಾಗಿದೆ.

ಪೃಥ್ವಿ ಅಂಬಾರ್ ಅವರು ಲುಕ್ ಮತ್ತು ನಟನೆಯ ಮೂಲಕ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಡೀ ಸಿನಿಮಾದಲ್ಲಿ ಸಾಯಿ ಕುಮಾರ್ ಮತ್ತು ಪೃಥ್ವಿ ಅಂಬಾರ್ ಅವರ ಕಾಂಬಿನೇಷನ್ ಇಷ್ಟ ಆಗುತ್ತದೆ. ತಾಯಿ ಪಾತ್ರದಲ್ಲಿ ಶ್ವೇತಾ ವಿನೋಧಿನಿ ಅವರು ಮೆಚ್ಚುಗೆ ಗಳಿಸುತ್ತಾರೆ. ಸುಧಾರಾಣಿ, ಧನ್ಯಾ ರಾಮ್​ಕುಮಾರ್ ಅವರು ಕೆಲವು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ನಟರಾದ ಮುನಿ ಮತ್ತು ಧರ್ಮ ಅವರಿಗೆ ಕಡಿಮೆ ಸ್ಕ್ರೀನ್ ಸ್ಪೇಸ್ ಇದ್ದರೂ ಕೂಡ ಗಮನ ಸೆಳೆಯುತ್ತಾರೆ. ಕೇವಲ ಒಂದು ದೃಶ್ಯದಲ್ಲಿ ಗಿಲ್ಲಿ ನಟ ಬಂದು ಹೋಗುತ್ತಾರೆ.

ಇದನ್ನೂ ಓದಿ: ‘ವಲವಾರ’ ಸಿನಿಮಾ ವಿಮರ್ಶೆ; ಹಾಸ್ಯ, ಭಾವನೆಗಳ ಮಿಶ್ರಣ; ಬಾಲ್ಯ ನೆನಪಿಸೋ ಪಯಣ

ತಾಂತ್ರಿಕವಾಗಿ ಈ ಸಿನಿಮಾ ಅಚ್ಚುಕಟ್ಟಾಗಿದೆ. ಅಪ್ಪನ ಕಷ್ಟವನ್ನು ತೋರಿಸಲು ಇಡೀ ಸಿನಿಮಾದಲ್ಲಿ ಹೆಚ್ಚು ಸಮಯ ಮೀಸಲಿಡಲಾಗಿದೆ. ಆದರೆ ತುಂಬಾ ಗಡಿಬಿಡಿಯಲ್ಲಿ ಕ್ಲೈಮ್ಯಾಕ್ಸ್ ತೋರಿಸಲಾಗಿದೆ. ಆ ಬಗ್ಗೆ ನಿರ್ದೇಶಕರು ಒಂದಷ್ಟು ಗಮನ ಹರಿಸುವ ಅಗತ್ಯವಿತ್ತು ಎನಿಸುತ್ತದೆ. ಉಳಿದಂತೆ, ಒಂದು ಫ್ಯಾಮಿಲಿ ಎಂಟರ್​ಟೇನರ್ ಚಿತ್ರವಾಗಿ ‘ಚೌಕಿದಾರ್’ ನೋಡಿಸಿಕೊಳ್ಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾಂಗ್ರೆಸ್ ಆಡಳಿತಕ್ಕೆ 1000 ದಿನಗಳ ಸಂಭ್ರಮ; ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಿರುವ ಸಿಎಂ! – Kannada News | CM Siddaramaiah’s 1000 Days: 1 Lakh Property Titles for Karnataka Residents

ಕಾಂಗ್ರೆಸ್ ಆಡಳಿತಕ್ಕೆ 1000 ದಿನಗಳ ಸಂಭ್ರಮ; ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಿರುವ ಸಿಎಂ!

ಬೆಂಗಳೂರು, ಜನವರಿ 30: ಕಾಂಗ್ರೆಸ್ (Congress) ಸರ್ಕಾರದ ಆಡಳಿತಕ್ಕೆ 1000 ದಿನಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 13ರಂದು ಹಾವೇರಿಯಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಮನೆ ಮಾಲೀಕತ್ವ ಹಕ್ಕುಪತ್ರಗಳನ್ನು ವಿತರಿಸಲು ಮುಂದಾಗಿದ್ದಾರೆ. ದಶಕಗಳಿಂದ ತಮ್ಮ ಮನೆಗಳಲ್ಲಿ ವಾಸಿಸುತ್ತಿದ್ದರೂ ಕಾನೂನುಬದ್ಧ ಹಕ್ಕುಪತ್ರವಿಲ್ಲದೆ ಬದುಕುತ್ತಿದ್ದ ಅಸಹಾಯಕ ಕುಟುಂಬಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಕೃಷ್ಣ ಭೈ​ರೇಗೌಡ ನೇತೃತ್ವದ ಅಭಿಯಾನ

ಈ ಮಹತ್ವಾಕಾಂಕ್ಷಿ ಯೋಜನೆಗೆ ಕಳೆದ ವರ್ಷ ಮೇ ತಿಂಗಳಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಹೊಸಪೇಟೆಯಲ್ಲಿ ಚಾಲನೆ ನೀಡಿದ್ದು, 2015ರಲ್ಲಿ ಕರ್ನಾಟಕ ಪ್ರವಾಸದ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದರು. ಆಗ 1,11,111 ಜನರಿಗೆ ಮನೆ ಹಕ್ಕುಪತ್ರ ವಿತರಿಸಲಾಗಿತ್ತು. ಪ್ರಸ್ತುತ ಈ ಅಭಿಯಾನದ ನೇತೃತ್ವವನ್ನು ಆದಾಯ ಸಚಿವ ಕೃಷ್ಣ ಭೈ​ರೇಗೌಡ ವಹಿಸಿಕೊಂಡಿದ್ದಾರೆ. ಈ ಕುರಿತು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಚಿವರ ಎಕ್ಸ್ ಪೋಸ್ಟ್ ಇಲ್ಲಿದೆ

ನಿಮ್ಮ ಮನೆಗೇ ಬರುತ್ತೆ ಹಕ್ಕುಪತ್ರ

ಗುರುವಾರ ವೀಡಿಯೋ ಸಂವಾದದ ಮೂಲಕ ಉಪ ವಿಭಾಗಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕೃಷ್ಣ ಭೈ​ರೇಗೌಡ, ಮುಂದಿನ ಒಂದು ವಾರದಲ್ಲಿ ಎಲ್ಲ ದಾಖಲೆಗಳು ಮತ್ತು ಹಕ್ಕುಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದ್ದಾರೆ. ಯಾವುದೇ ಅರ್ಜಿ ಆಹ್ವಾನಿಸದೇ, ಮನೆ ಮನೆಗೆ ತೆರಳಿ ಹಕ್ಕುಪತ್ರ ವಿತರಿಸುವುದಾಗಿ ಸಚಿವ ಹೇಳಿದ್ದಾರೆಂದು ದಿ ಎಕನೊಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಈ ಕಾರ್ಯಕ್ರಮದಿಂದ ಸುಮಾರು ನಾಲ್ಕು ಲಕ್ಷ ಜನರಿಗೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ.

ಹಿಂದಿನ ಬಿಜೆಪಿ ಆಡಳಿತದ ಅವಧಿಯ ಆರು ವರ್ಷಗಳಲ್ಲಿ ಕೇವಲ 1.08 ಲಕ್ಷ ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿತ್ತು. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ, ಈ ಯೋಜನೆಯನ್ನು ಆದಾಯ ಇಲಾಖೆ ಪ್ರಮುಖ ಅಭಿಯಾನವಾಗಿ ಕೈಗೆತ್ತಿಕೊಂಡಿದ್ದು, ಸಮಾನ ವಸತಿಗಳನ್ನು ಗುರುತಿಸಿ ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾಗಿದೆ. ಸರ್ಕಾರ ನೀಡುತ್ತಿರುವ ಹಕ್ಕುಪತ್ರಗಳು ಡಿಜಿಟಲ್ ರೂಪದಲ್ಲಿದ್ದು, ದಾಖಲೆ ಕಳೆದುಹೋಗುವ ಅಥವಾ ಹಾನಿಯಾಗುವ ಸಮಸ್ಯೆ ತಪ್ಪಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಾ ಡ್ರೈವರ’: ಆರ್​​ಸಿಬಿ ಕ್ಯಾಂಪ್​​ನಲ್ಲಿ ಮಾಳು ಹಾಡಿನ ಹವಾ – Kannada News | RCB player Shreyanka Patil danced to Naa Drivara Kannada song

‘ನಾ ಡ್ರೈವರ, ನನ ಲವ್ವರ’ ಮಾಳು ನಿಪ್ಪಾಳ (Malu Nippala) ಹಾಡಿರುವ ಈ ಹಾಡು ಇತ್ತೀಚೆಗಿನ ಬಲು ಜನಪ್ರಿಯ ಕನ್ನಡ ಹಾಡುಗಳಲ್ಲಿ ಒಂದು. ಈ ಹಾಡೊಂದರ ಕಾರಣಕ್ಕೆ ಗಾಯಕ ಮಾಳು ನಿಪ್ಪಾಳಗೆ ಹಲವು ಅವಕಾಶಗಳು ಅರಸಿ ಬಂದವು. ಬಿಗ್​​ಬಾಸ್​​ ಶೋಗೂ ಸಹ ಬರುವಂತಾಯ್ತು. ಈ ಜವಾರಿ ಹಾಡು ಇಷ್ಟುದಿನ ಶ್ರಮಿಕರ, ಕಾಲೇಜು ಯುವಕ-ಯುವತಿಯರ ಬಾಯಲ್ಲಿ ನಲಿದಾಡುತ್ತಿತ್ತು, ಆದರೆ ಈಗ ‘ನಾ ಡ್ರೈವರ’ ಹಾಡಯ ಆರ್​​​ಸಿಬಿ ಕ್ಯಾಂಪನ್ನೂ ಸಹ ತಲುಪಿದೆ.

ಹೌದು, ಇದೀಗ ಮಹಿಳಾ ಐಪಿಎಲ್ ಚಾಲ್ತಿಯಲ್ಲಿದ್ದು, ಆರ್​​​ಸಿಬಿ ತಂಡ ಅದ್ಭುತ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿದೆ. ಆರ್​​ಸಿಬಿ ತಂಡ ಮೊದಲಿನಿಂದಲೂ ಕ್ರಿಕೆಟ್​​ನ ಜೊತೆಗೆ ತನ್ನ ಸೋಷಿಯಲ್ ಮೀಡಿಯಾ ಕಂಟೆಂಟ್ ಗೇಮ್​​ನಲ್ಲೂ ಬಹಳ ಮುಂದಿದೆ. ಅದ್ಭುತ ಕಂಟೆಂಟ್ ಅನ್ನು ಅಭಿಮಾನಿಗಳಿಗೆ, ಜನರಿಗೆ ನೀಡುತ್ತಾ ಬಂದಿದೆ. ಆರ್​​ಸಿಬಿ ತಂಡದ ಭಾಗವೇ ಆಗಿರುವ ದಾನಿಷ್ ಸೇಠ್ ನಡೆಸಿಕೊಡುವ ಆರ್​​ಸಿಬಿ ಇನ್​​ಡೈಡರ್​ ಶೋ ವಿಶ್ವಪ್ರಸಿದ್ಧ. ಇದೀಗ ಆರ್​​ಸಿಬಿ ಇನ್​​ಸೈಡರ್​​ನಲ್ಲಿ ಮಾಳುವಿನ ‘ನಾ ಡ್ರೈವರ’ ಹಾಡಿಗೆ ಆರ್​​ಸಿಬಿ ಆಟಗಾರ್ತಿ ಸಖತ್ ಸ್ಟೆಪ್ಪು ಹಾಕಿದ್ದಾರೆ.

ದಾನಿಷ್ ಸೇಠ್, ‘ಆರ್​​ಸಿಬಿ ಇನ್​​ಡೈಡರ್ ಶೋ’ಗಾಗಿ ಆರ್​​ಸಿಬಿಯ ಆಲ್​​ರೌಂಡ್ ಆಟಗಾರ್ತಿ, ಕನ್ನಡತಿಯೂ ಆಗಿರುವ ಶ್ರೆಯಾಂಕಾ ಪಾಟೀಲ್ ಅವರನ್ನು ಸಂದರ್ಶನ ಮಾಡಿದ್ದಾರೆ. ಶ್ರೆಯಾಂಕಾ ಅವರೊಟ್ಟಿಗೆ ಹಾಸ್ಯಮಯ ಸಂದರ್ಶನ ಮಾಡಿರುವ ದಾನಿಷ್, ಸಂದರ್ಶನದ ಕೊನೆಯಲ್ಲಿ ಇಬ್ಬರೂ ಕ್ರೀಡಾಂಗಣದಲ್ಲಿ ಪಿಚ್ ರೋಲ್ ಮಾಡುವ ವಾಹನದ ಮೇಲೆ ಕೂತು ‘ನಾ ಡ್ರೈವರ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ:ವೇದಿಕೆ ಏರಿದ ಮಾಳು ವಿರುದ್ಧ ಸೇಡು ತೀರಿಸಿಕೊಂಡ ಗಿಲ್ಲಿ ಫ್ಯಾನ್ಸ್; ಭಾರೀ ಮುಜುಗರ

ಇನ್​​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ, ಡ್ಯಾನ್ಸ್ ರೀಲ್ಸ್​​ಗಳನ್ನು ಮಾಡಿ ಅನುಭವ ಇರುವ ಶ್ರೆಯಾಂಕಾ ಪಾಟೀಲ್ ‘ನಾ ಡ್ರೈವರ’ ಹಾಡಿಗೆ ಸಖತ್ತಾಗಿ ಸ್ಟೆಪ್ಪುಗಳನ್ನು ಹಾಕಿದ್ದಾರೆ. ಮೂಲ ಹಾಡಿನಲ್ಲಿ ಮಾಳು ಮಾಡಿರುವ ಸ್ಟೆಪ್ಪುಗಳನ್ನು ಅನುಕರಣೆ ಸಹ ಮಾಡಿದ್ದಾರೆ. ಶ್ರೆಯಾಂಕಾ ಹಾಗೂ ದಾನಿಷ್ ಅವರ ಡ್ಯಾನ್ಸ್ ನೋಡಿ ಆರ್​​ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಆಶ್ಚರ್ಯ ಪಟ್ಟಿದ್ದಾರೆ.

ಶ್ರೆಯಾಂಕಾ ಮತ್ತು ದಾನಿಷ್ ಅವರುಗಳು ‘ನಾ ಡ್ರೈವರ’ ಹಾಡಿಗೆ ಹಾಕಿರುವ ಸ್ಟೆಪ್ಪುಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಜವಾರಿ ಹಾಡಾದ ‘ನಾ ಡ್ರೈವರ’ ಆರ್​​ಸಿಬಿ ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೇರಿದೆ ಎಂದು ಕಮೆಂಟುಗಳನ್ನು ಹಾಕುತ್ತಿದ್ದಾರೆ ನೆಟ್ಟಿಗರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link