ಅನ್ನ ನೀರಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರೊಳಗೆ ಲಾಕ್ ಆಗಿದ್ದ ಶ್ವಾನವನ್ನು ರಕ್ಷಿಸಿದ ಜನ – Kannada News
ಗುವಾಹಟಿ, ಜೂನ್ 03: ನಾಯಿ(Dog)ಯೊಂದು ಅನ್ನ, ನೀರಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಲಾಕ್ ಮಾಡಿದ್ದ ಕಾರಿನೊಳಗೆ ಕುಳಿತು ಕಷ್ಟ ಎದುರಿಸಿರುವ ವಿಡಿಯೋ ವೈರಲ್ ಆಗಿದೆ. ಕಾರಿನೊಳಗೆ ನಾಯಿಯನ್ನು ಇರಿಸಿ ಮಾಲೀಕ ಲಾಕ್ ಮಾಡಿಕೊಂಡು ಮಾಡಿಕೊಂಡು ಹೋಗಿರುವ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಅದು ಕಾರಿನಲ್ಲಿಯೇ ಇತ್ತು. ತಾಪಮಾನ ಏರಿಕೆಯಾಗುತ್ತಿದ್ದಂತೆ ಉಸಿರುಗಟ್ಟುವ ಸ್ಥಿತಿ ಉದ್ಭವವಾಗಿತ್ತು. ಕೂಡಲೇ ಸ್ಥಳೀಯರು ನಾಯಿಯನ್ನು ರಕ್ಷಿಸಿದ್ದಾರೆ. ಸ್ಥಳೀಯ ನಿವಾಸಿಗಳ ಪ್ರಕಾರ, ಬೆಳಗ್ಗೆಯಿಂದಲೇ ನಾಯಿ ಕಾರೊಳಗೆ ಇತ್ತು. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಗಿ ಕಾರಿನೊಳಗಿನ…