Category Archives: Blog

Your blog category

‘ಕೊರಗಜ್ಜ’ ಸಿನಿಮಾ ಬಿಡುಗಡೆಗೂ ಮೊದಲೇ ನಿರ್ದೇಶಕರಿಗೆ ಸಿಕ್ತು ಫ್ಲ್ಯಾಟ್ ಉಡುಗೊರೆ

ಬಹುನಿರೀಕ್ಷಿತ ‘ಕೊರಗಜ್ಜ’ (Koragajja) ಸಿನಿಮಾಗೆ ಈಗ ಕೊಚ್ಚಿ ಮತ್ತು ಚೆನ್ನೈ ನಲ್ಲಿ 3ಡಿ ಕೆಲಸ ಭರದಿಂದ ಸಾಗುತ್ತಿದೆ. ತಾಂತ್ರಿಕವಾಗಿ ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾಗೂ ಕಡಿಮೆ ಇಲ್ಲ ಎನ್ನುವ ಹಾಗೆ ಈ ಸಿನಿಮಾ ಮೂಡಿಬರುತ್ತಿದೆ ಎಂದು ನಿರ್ದೇಶಕ ಸುಧೀರ್ ಅತ್ತಾವರ್ (Sudheer Attavar) ಅವರು ತಿಳಿಸಿದ್ದಾರೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದ ವಿತರಣಾ ಸಂಸ್ಥೆಗಳು ಈ ಸಿನಿಮಾ ಮೇಲೆ ಆಸಕ್ತಿ ತೋರಿಸುತ್ತಿವೆ ಎಂದು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರಿಗೆ ಖುಷಿ ಆಗಿದೆ. ಇದೇ ಖುಷಿಯಲ್ಲಿ ನಿರ್ದೇಶಕರಿಗೆ ಅವರು ದೊಡ್ಡ ಗಿಫ್ಟ್ ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ‘ಕೊರಗಜ್ಜ’ ಸಿನಿಮಾ ಈ ಮಟ್ಟಕ್ಕೆ ಬೆಳೆಯಲು ಶ್ರಮಿಸುತ್ತಿರುವ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ಮೂರು ಬೆಡ್ ರೂಮಿನ, ಸುಮಾರು 1.75 ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ಫ್ಲಾಟನ್ನು ಉಡುಗೊರೆಯಾಗಿ ನೀಡಲಾಗಿದೆ. ಸಿನಿಮಾದ ಮೇಲೆ ಮತ್ತು ನಿರ್ದೇಶಕರ ಮೇಲೆ ತಮಗಿರುವ ಅಭಿಮಾನವನ್ನು ಈ ರೂಪದಲ್ಲಿ ನಿರ್ಮಾಪಕರು ತೋರಿಸಿದ್ದಾರೆ.

ಈಗಾಗಲೇ ಆರು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾಗೆ ಅಸ್ಸಾಮಿ, ಚೈನಿಸ್ ಮತ್ತು ಇಂಗ್ಲಿಷ್ ಅವತರಣಿಕೆಗಳೂ ಸೇರ್ಪಡೆ ಆಗುತ್ತಿವೆ ಎಂಬ ವಿಷಯವನ್ನು ಕೂಡ ನಿರ್ಮಾಪಕರು ತಿಳಿಸಿದ್ದಾರೆ. ಇತ್ತೀಚೆಗೆ ಹೊಸ ಫ್ಲಾಟ್ ಗೃಹ ಪ್ರವೇಶ ನಡೆಯಿತು. ಬಳಿಕ ಸತ್ಯನಾರಾಯಣ ಪೂಜೆ ಕೂಡ ಮಾಡಲಾಯಿತು. ಇದೇ ವೇಳೆ ಕೊರಗಜ್ಜ ದೈವದ ಅಗೆಲು ಸೇವೆಯನ್ನು ಅತಿಥಿಗಳ ಸಮ್ಮುಖದಲ್ಲಿ ಮಾಡಲಾಯಿತು.

‘ಕೊರಗಜ್ಜ’ ಸಿನಿಮಾದಲ್ಲಿ ಅಭಿನಯಿಸಿರುವ ಹಿರಿಯ ಕಲಾವಿದೆ ಭವ್ಯ ಅವರು ಕೊರಗಜ್ಜ ದೈವದ ಅಗೆಲು ಸೇವೆಗೆ ಇಷ್ಟವಾದ ಕುಚಲಕ್ಕಿ ಅನ್ನ, ಹುರುಳಿ-ಬಸಳೆ ಸಾರು, ಮಿಡಿ ಮಾವಿನ ಉಪ್ಪಿನಕಾಯಿ, ಬಂಗುಡೆ ಮೀನಿನ ಗಸಿ, ಕೋಳಿ ಸುಕ್ಕ, ಕಳ್ಳು ಮೊದಲಾದವುಗಳನ್ನು ಗೆರಸೆಯಲ್ಲಿಟ್ಟು ಸಮರ್ಪಿಸಿದರು. ನಿರ್ದೇಶಕರ ಪತ್ನಿ ರಾಜಶ್ರೀ ಸುಧೀರ್ ಎಲ್ಲಾ ಭಕ್ಷ್ಯಗಳನ್ನು ಅಣಿಗೊಳಿಸಿದರು. ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಅವರು ಭವ್ಯಗೆ ಸಾಥ್ ನೀಡಿದರು.

ಇದನ್ನೂ ಓದಿ: ‘ಕೊರಗಜ್ಜ’ ಸಿನಿಮಾದಲ್ಲಿ ಡ್ಯುಯೆಟ್ ಸಾಂಗ್? ಕುತೂಹಲ ಮೂಡಿಸಿದ ಚಿತ್ರತಂಡ

ಈ ವೇಳೆ ಭವ್ಯ ಮಾತನಾಡಿದರು. ‘ಕೊರಗಜ್ಜ ಸಿನಿಮಾವು ನನ್ನನ್ನು ಹೆಚ್ಚು ದೈವಭಕ್ತಳನ್ನಾಗಿಸಿದೆ. ನಾನು ಈ ಸಿನಿಮಾದ ಎಲ್ಲಾ ಕಾರ್ಯಕ್ರಮಗಳಿಗೂ ಭಾಗಿಯಾಗುತ್ತಾ ಚಿತ್ರತಂಡದ ಅವಿಭಾಜ್ಯ ಅಂಗ ಎನ್ನುವ ರೀತಿಯಲ್ಲಿ ಜೊತೆಗಿದ್ದೇನೆ. ಈ ಸಿನಿಮಾದಲ್ಲಿ ನಾನು ಕೊರಗಜ್ಜನಿಗೆ ಪ್ರಪ್ರಥಮವಾಗಿ ಅಗೆಲು ಸೇವೆ ನೀಡುವ ರಾಣಿ ಪಂಜಂದಾಯಿ ಪಾತ್ರ ವಹಿಸಿದ್ದೇನೆ. ಈಗ ನಿಜ ಜೀವನದಲ್ಲೂ ಕೊರಗಜ್ಜನಿಗೆ ಅಗೆಲು ಸೇವೆ ಮಾಡುವಂತಹ ಸೌಭಾಗ್ಯ ಸಿಕ್ಕಿದೆ’ ಎಂದು ಅವರು ಹೇಳಿದರು.

ಚೈನೀಸ್ ಭಾಷೆಗೂ ಈ ಸಿನಿಮಾ ಡಬ್ ಆಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಹಾಂಕಾಂಗ್ ಮತ್ತು ಬೀಜಿಂಗ್​ನಿಂದ ವಿತರಣಾ ಸಂಸ್ಥೆಗಳು ಮಾತುಕಥೆಗೆ ಮುಂದೆ ಬಂದಿವೆ. ಸಿನಿಮಾದ ಬಜೆಟ್ 40 ಕೋಟಿ ರೂಪಾಯಿ ದಾಟಿದರೂ ವ್ಯಾವಹಾರಿಕವಾಗಿ ವಿಶ್ವಾಸ ಮತ್ತು ಖುಷಿ ಹೆಚ್ಚುತ್ತಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ತೆರೆಕಾಣುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More

Source link

RCB vs GT Final: ಬಿಸಿಸಿಐ ಬ್ಯಾನ್ ಮಾಡಿದ್ದ ಕಾಶ್ಮೀರಿ ಹುಡುಗ ಆರ್​ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026 ರ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆರ್​ಸಿಬಿ ಇತಿಹಾಸ ಸೃಷ್ಟಿಸಿತು. ತಂಡದ ಈ ಅಮೋಘ ಗೆಲುವಿಗೆ ಸಂಘಟಿತ ಪ್ರದರ್ಶನವೇ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ತಂಡದ ಪರ ಬೌಲಿಂಗ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಯುವ ವೇಗಿ ರಸಿಕ್ ಸಲಾಂ ಧರ್ ಫೈನಲ್ ಪಂದ್ಯದಲ್ಲಿ ಪ್ರಮುಖ 3 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಗುಜರಾತ್ ದೊಡ್ಡ ಮೊತ್ತ ಕಲೆಹಾಕದಂತೆ ತಡೆದರು. ಈ ಪಂದ್ಯದಲ್ಲಿ ಮಾತ್ರವಲ್ಲ ಈ ಸೀಸನ್​ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ರಸಿಕ್ ಅವರ ಬೌಲಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಸ್ತುತ ಆರ್​ಸಿಬಿ ಬೌಲಿಂಗ್ ವಿಭಾಗದಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಂಡಿರುವ ರಸಿಕ್ ಈ ಹಂತಕ್ಕೆ ಬರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಯಸ್ಸಿನ ವಂಚನೆಯಲ್ಲಿ ಸಿಕ್ಕಿಬಿದ್ದಿದ್ದ ರಸಿಕ್ ಬಿಸಿಸಿಐನಿಂದ ನಿಷೇಧಕ್ಕೊಳಗಾಗಬೇಕಾಯಿತು. ಇದರಿಂದಾಗಿ ಅವರು ಎರಡು ವರ್ಷಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿಯಬೇಕಾಯಿತು. ಆದರೆ ನಿಷೇಧದ ಅವದಿ ಮುಗಿದ ಬಳಿಕ ಮತ್ತೆ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದಿದ್ದ ರಸಿಕ್ ದೇಶಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದರು. ಅಂತಿಮವಾಗಿ ಆರ್​ಸಿಬಿ ಸೇರಿದ ರಸಿಕ್ ಇದೀಗ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ವಾಸ್ತವವಾಗಿ ಐಪಿಎಲ್‌ನಲ್ಲಿ ರಸಿಕ್ ಅವರ ಮೊದಲ ತಂಡ ಆರ್​ಸಿಬಿ ಅಲ್ಲ. ಜಮ್ಮು ಮತ್ತು ಕಾಶ್ಮೀರದ ರಸಿಕ್ 2019 ರ ಐಪಿಎಲ್‌ನಲ್ಲಿಯೇ ಮುಂಬೈ ಇಂಡಿಯನ್ಸ್ ಪರ ಆಡುವ ಮೂಲಕ ಎಲ್ಲರ ಗಮನ ಸೆಳೆದರು. ಅದೇ ವರ್ಷ ಅವರನ್ನು ಭಾರತ ಅಂಡರ್ -19 ತಂಡಕ್ಕೆ ಆಯ್ಕೆ ಮಾಡಿ ಇಂಗ್ಲೆಂಡ್ ಪ್ರವಾಸಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಅವರ ನಿಜವಾದ ವಯಸ್ಸಿಗೂ, ಜನನ ಪ್ರಮಾಣಪತ್ರದಲ್ಲಿ ನಮೂದಿಸಲಾಗಿದ್ದ ವಯಸ್ಸಿಗೂ ವ್ಯತ್ಯಾಸಗಳಿದ್ದ ಕಾರಣಗಳಿಂದಾಗಿ ಬಿಸಿಸಿಐ, ಅವರಿಗೆ ಎರಡು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿತು. ಎರಡು ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರವಿದ್ದ ರಸಿಖ್ ಮತ್ತೆ ಮೈದಾನಕ್ಕೆ ಕಾಲಿಡಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಆದರೆ ತಮ್ಮ ಛಲ ಬಿಡದ ರಸಿಕ್ ಸ್ಥಳೀಯ ಮೈದಾನಗಳಲ್ಲಿ ಕಠಿಣ ತರಬೇತಿಯನ್ನು ಮುಂದುವರೆಸಿದರು. ಈ ಕಷ್ಟದ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಅವರ ಬೆಂಬಲಕ್ಕೆ ನಿಂತಿತು.

ನಿಷೇಧ ಮುಗಿದ ನಂತರ, 2021-22 ರ ದೇಶೀಯ ಆವೃತ್ತಿಯಲ್ಲಿ ಮಿಂಚಿದ ರಸಿಕ್, ಇದಾದ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಪ್ರತಿನಿಧಿಸುವ ಮೂಲಕ ತಮ್ಮ ಸಾಮರ್ಥ್ಯ ಕಡಿಮೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಇದಾದ ಬಳಿಕ 2025 ರ ಹರಾಜಿನಲ್ಲಿ ಆರ್‌ಸಿಬಿ, ರಸಿಕ್ ಅವರನ್ನು ಆರು ಕೋಟಿ ನೀಡಿ ಖರೀದಿಸಿತು. ಹೀಗೆ ಆರ್​​ಸಿಬಿ ಸೇರಿದ ರಸಿಕ್​ಗೆ ಪಂದ್ಯಾವಳಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ ಆ ಬಳಿಕ ಸಿಕ್ಕ ಅವಕಾಶವನ್ನು ಅವರು ಎರಡೂ ಕೈಗಳಿಂದ ಬಾಚಿಕೊಂಡರು.

ಈ ಆವೃತ್ತಿಯಲ್ಲಿ ರಸಿಕ್ ಒಟ್ಟು 19 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅತ್ಯಂತ ನಿರ್ಣಾಯಕ ಓವರ್‌ಗಳಲ್ಲಿ ಸರಾಸರಿ 21.31 ಮತ್ತು 9.45 ರ ಎಕಾನಮಿ ದರದಲ್ಲಿ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಫೈನಲ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ರಸಿಕ್ ಕೇವಲ 27 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಕೆಲವೇ ವರ್ಷಗಳ ಹಿಂದೆ ನಿಷೇಧಕ್ಕೊಳಗಾಗಿದ್ದ ಸಾಮಾನ್ಯ ಬೌಲರ್, ಇಂದು, ಐಪಿಎಲ್ ಫೈನಲ್‌ನಂತಹ ಪ್ರತಿಷ್ಠಿತ ಪಂದ್ಯದಲ್ಲಿ ಸ್ಮರಣೀಯ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

Source link

ಧಾರವಾಡದಲ್ಲಿ ಮತ್ತೆ ವಿದ್ಯಾರ್ಥಿಗಳ ಕಿಚ್ಚು: ಸತ್ಯಾಗಹಕ್ಕೆ ಪೊಲೀಸ್ ಬ್ರೇಕ್, ಜೂ 9ರವರೆಗೆ ಗಡುವು

ಸತ್ಯಪ್ರತಿಪಾದನಾ ಸತ್ಯಾಗ್ರಹImage Credit source: tv9 kannada

ಧಾರವಾಡ, ಜೂನ್​ 01: ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ (job vacancies) ಆಗ್ರಹಿಸಿ ಇತ್ತೀಚೆಗೆ ನಗರದಲ್ಲಿ  ಉದ್ಯೋಗಾಕಾಂಕ್ಷಿಗಳು ಬೃಹತ್​ ಪ್ರಮಾಣದಲ್ಲಿ ಹೊರಾಟ ಮಾಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿತ್ತು. ಆದರೆ ಖಾಲಿ ಹುದ್ದೆಗಳ ಭರ್ತಿ ವಿಳಂಬವಾಗುತ್ತಿದೆ. ಹೀಗಾಗಿ ಇದೀಗ ಮತ್ತೆ ಸಿಡಿದೆದ್ದಿರುವ ವಿದ್ಯಾರ್ಥಿಗಳು (Student) ಡಿಕೆ ಶಿವಕುಮಾರ್ ಸಿಎಂ ಆದ ಬೆನ್ನಲ್ಲೇ ಸತ್ಯಾಗ್ರಹಕ್ಕೆ ಮುಂದಾಗಿದ್ದು, ಆದರೆ ಉಪನಗರ ಠಾಣೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಮುಖ್ಯಾಂಶಗಳು

  • ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಾಲಿ ಹುದ್ದೆ ಭರ್ತಿ ವಿಳಂಬ
  • ಧಾರವಾಡದಲ್ಲಿ ಸತ್ಯಾಗ್ರಹಕ್ಕೆ ಮುಂದಾಗಿದ್ದವರಿಗೆ ಪೊಲೀಸ್​ ಶಾಕ್​​
  • ಜೂನ್ 9ರೊಳಗೆ ಸರ್ಕಾರದಿಂದ ಚರ್ಚೆಗೆ ಒತ್ತಾಯ

ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು

ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಾಲಿ ಹುದ್ದೆ ಭರ್ತಿ ವಿಳಂಬ ವಿಚಾರವಾಗಿ ಹಿರಿಯ ಹೋರಾಟಗಾರ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ಧಾರವಾಡದ ಮಿಚಿಗನ್ ಕಾಂಪೌಂಡ್​ನಲ್ಲಿ ಜೂನ್ 3 ರಂದು ಸತ್ಯಪ್ರತಿಪಾದನಾ ಸತ್ಯಾಗ್ರಹಕ್ಕೆ ವಿದ್ಯಾರ್ಥಿಗಳು ಮುಂದಾಗಿದ್ದರು. ಆದರೆ ಈ ಹಿಂದಿನ ಘಟನಾವಳಿ ಉಲ್ಲೇಖಿಸಿ ಉಪನಗರ ಠಾಣೆ ಪೊಲೀಸರು ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಿದ್ದಾರೆ.

ಜೂ. 9 ರವರೆಗೆ ಗಡುವು ಎಂದ ಎಕೆಎಸ್​ಎಸ್​ಎ ಸಂಘಟನೆಯ ಗೌರವಾಧ್ಯಕ್ಷ ಬಿ.ಡಿ. ಹಿರೇಮಠ

ಇನ್ನು ಈ ಬಗ್ಗೆ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಕೆಎಸ್​ಎಸ್​ಎ ಸಂಘಟನೆಯ ಗೌರವಾಧ್ಯಕ್ಷ ಬಿ.ಡಿ. ಹಿರೇಮಠ, ನಾವು ಜೂ. 9 ರವರೆಗೆ ಗಡುವು ನೀಡುತ್ತೇವೆ. ಅಷ್ಟರಲ್ಲಿ ಖಾಲಿ ಹುದ್ದೆ ಭರ್ತಿ ವಿಚಾರವಾಗಿ ರಾಜ್ಯದ 31 ಜಿಲ್ಲೆಯ ವಿದ್ಯಾರ್ಥಿ ಮುಖಂಡರೊಂದಿಗೆ ಸರ್ಕಾರ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉದ್ಯೋಗಾಕಾಕ್ಷಿಗಳಿಂದ ಮತ್ತೊಂದು ಸುತ್ತಿನ ಹೋರಾಟಕ್ಕೆ ಕರೆ: ಧಾರವಾಡದಲ್ಲಿ ನಾಳೆ ನಡೆಯಲಿದ್ಯಾ ಹೈಡ್ರಾಮಾ?

ಹೋರಾಟಕ್ಕೆ ಅನುಮತಿ ನಿರಾಕರಿಸಿದ ಕಮಿಷನರ್ ಅವರೇ ಚರ್ಚೆಗೆ ಅವಕಾಶ ಕೊಡಿಸಬೇಕು. ಇಲ್ಲದಿದ್ದರೆ ಜೂ. 9 ರಿಂದ ಡಿಸಿ ಕಚೇರಿ ಎದುರು ವಿದ್ಯಾರ್ಥಿಗಳೊಂದಿಗೆ ಅನಿರ್ದಿಷ್ಟಾವಧಿ ಸತ್ಯಪ್ರತಿಪಾದನಾ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜಾಕ್ವೆಲಿನ್​​ ಕೋರಿಕೆಗೆ ನೋ ಎಂದ ಕೋರ್ಟ್​; ಹೆಚ್ಚಿತು ಸಂಕಷ್ಟ

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಮೇ 30ರಂದು ದೆಹಲಿ ನ್ಯಾಯಾಲಯವು ಜಾಕ್ವೆಲಿನ್, ವಂಚಕ ಸುಕೇಶ್ ಚಂದ್ರಶೇಖರ್ ಮತ್ತು ಇತರ 15 ಜನರ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಹೊರಿಸಲು ಆದೇಶಿಸಿದೆ. ಇದರೊಂದಿಗೆ ನಟಿ ಕೂಡ ವಿಚಾರಣೆಗೆ ಹಾಜರಾಬೇಕಾಗದ ಪರಿಸ್ಥಿತಿ ಎದುರಾಗಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು, ‘ಎಲ್ಲಾ ಆರೋಪಿಗಳ ವಿರುದ್ಧ ಬಲವಾದ ಅನುಮಾನ ಮೂಡುವಂತಹ ಸಾಕ್ಷಿಗಳು ತನಿಖಾ ವರದಿಯಲ್ಲಿ ಲಭ್ಯವಿವೆ’ ಎಂದು ತಿಳಿಸಿದ್ದು, ಜೂನ್ 3 ರಂದು ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದ್ದಾರೆ.

‘ನಾನು ಬಲಿಪಶು’ ಎಂದಿದ್ದ ಜಾಕ್ವೆಲಿನ್; ವಾದ ತಳ್ಳಿಹಾಕಿದ ಕೋರ್ಟ್

ತಾನು ಯಾವುದೇ ತಪ್ಪು ಮಾಡಿಲ್ಲ, ಈ ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಜಾಕ್ವೆಲಿನ್ ಅವರ ಮುಖ್ಯ ವಾದವನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಬಾರದು ಎಂಬ ಜಾಕ್ವೆಲಿನ್ ಕೋರಿಕೆಯನ್ನು ಕೋರ್ಟ್ ಒಪ್ಪಿಲ್ಲ.

ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ನಿರಂತರ ಸಂಪರ್ಕದಲ್ಲಿದ್ದರು. ಸುಕೇಶ್‌ನ ಅಪರಾಧ ಹಿನ್ನೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ಜಾಕ್ವೆಲಿನ್ ಆತನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಗಿಫ್ಟ್‌ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಸುಕೇಶ್‌ನಿಂದ ತಮ್ಮ ಸಹೋದರನಿಗೆ ದೊಡ್ಡ ಮೊತ್ತದ ಹಣಕಾಸಿನ ನೆರವು ಮತ್ತು ಪೋಷಕರಿಗೆ ಐಷಾರಾಮಿ ಕಾರನ್ನು ಉಡುಗರೆಯಾಗಿ ಪಡೆದಿದ್ದರು. ‘ಅಪರಾಧದ ಮೂಲಕ ಗಳಿಸಿದ ಹಣದ ನೇರ ಲಾಭವನ್ನು ಜಾಕ್ವೆಲಿನ್ ಪಡೆದುಕೊಂಡಿರುವುದು ಸ್ಪಷ್ಟವಾಗಿದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ತಾವು ಅಪ್ರೂವರ್ ಆಗೋದಾಗಿ ಏಪ್ರಿಲ್ 16ರಂದು ಜಾಕ್ವೆಲಿನ್ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಕೋರ್ಟ್ ಅನುಮತಿ ನೀಡಿದೆ. ಜಾರಿ ನಿರ್ದೇಶನಾಲಯ (ED) ಈ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿತ್ತು. ಮುಖ್ಯ ಆರೋಪಿಯೊಂದಿಗೆ ನೇರ ಸಂಪರ್ಕದಲ್ಲಿದ್ದ ಜಾಕ್ವೆಲಿನ್‌ಗೆ ಇಂತಹ ಅವಕಾಶ ನೀಡಬಾರದು ಎಂದು ಇಡಿ ವಾದಿಸಿತ್ತು.

ಇದನ್ನೂ ಓದಿ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸಂಕಷ್ಟ; ಅಪ್ರೂವರ್ ಆಗುವ ಮನವಿಗೆ ಇಡಿ ತೀವ್ರ ವಿರೋಧ

ಈ ಹಗರಣದ ಸೂತ್ರಧಾರ ಸುಕೇಶ್ ಚಂದ್ರಶೇಖರ್‌. ಈತನ್ನು ದೆಹಲಿ ಪೊಲೀಸರು 2017 ರಲ್ಲಿ ಮತ್ತು ಇಡಿ 2021 ರಲ್ಲಿ ಬಂಧಿಸಿದ್ದರು. ಸುಕೇಶ್ ಜೈಲಿನಲ್ಲಿದ್ದೂಕೊಂಡೇ ತಂತ್ರಜ್ಞಾನದ ಸಹಾಯದಿಂದ ಪ್ರಧಾನಿ ಕಚೇರಿ , ಗೃಹ ಸಚಿವಾಲಯ ಹಾಗೂ ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಕರೆಗಳನ್ನು ಮಾಡಿದ್ದನು. ಈ ಮೂಲಕ ಉದ್ಯಮಿ ಪತ್ನಿ ಅದಿತಿ ಸಿಂಗ್ ಎಂಬುವವರನ್ನು ಹೆದರಿಸಿ ಸುಮಾರು 200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸುಲಿಗೆ ಮಾಡಿದ್ದನು. ಇದೇ ಹಣದಲ್ಲಿ ಕೋಟ್ಯಂತರ ರೂಪಾಯಿಯನ್ನು ಜಾಕ್ವೆಲಿನ್ ಮತ್ತು ಅವರ ಕುಟುಂಬದವರ ಮೇಲೆ ಖರ್ಚು ಮಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 2:53 pm, Mon, 1 June 26

Source link

ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ ಜಮೀರ್? ಕಾಂಗ್ರೆಸ್‌ನಲ್ಲಿ ಆಡಿಯೋ ಸಂಚಲನ

ಬೆಂಗಳೂರು/ದಾವಣಗೆರೆ, (ಜೂನ್ 01): ಕಾಂಗ್ರೆಸ್‌ (Congress) ಮುಖಂಡ ಜಮೀರ್ ಅಹಮದ್‌ (Zameer Ahmed) ವಿರುದ್ಧ ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ (Davanagere South byelection) ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್​​ನಲ್ಲಿ ಭಾರೀ ಸಂಚಲನ ಮೂಡಿಸಿದೆ. ದಾವಣಗೆರೆಯ ಕಾಂಗ್ರೆಸ್ ಮುಖಂಡ ಸಿರಾಜ್ ಜೊತೆ ಜಮೀರ್ ಅಹಮ್ಮದ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದ್ದು, ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಮಾತನಾಡಲಾಗಿದೆ. ಮುಸ್ಲಿಂ ವೋಟಿಂಗ್ ಕಡಿಮೆ ಇದೆ ಹೊರಗಡೆ ಬಂದ್ರೆ ಅವರನ್ನ ನಂಬೋಕಾಗಲ್ಲ ಕಾಂಗ್ರೆಸ್‌ಗೆ ವೋಟ್ ಹಾಕುತ್ತಾರೆ. ಒತ್ತಾಯ ಮಾಡಿ ಮನೆಯಿಂದ ಕರ್ಕೊಂಡು ಬರಬೇಡಿ. ಪಕ್ಷೇತರರಿಗೆ ಎಸ್‌ಡಿಪಿಐಗೆ ವೋಟ್ ಹಾಕಲಿ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ.

ಇನ್ನು ಈ ಆಡಿಯೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತಿದ್ದಂತೆಯೇ ಸ್ವತಃ ಜಮೀರ್ ಅಹಮ್ಮದ್ ಖಾನ್ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ. ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ. ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು . ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದ್ದು, ಇದು ಕಿಡಿಗೇಡಿಗಳ ಕೃತ್ಯ, ಇದನ್ನು ಯಾರೂ ನಂಬಬಾರದು ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಆ್ಯಂಡಿ ಫ್ಲವರ್’​ನಲ್ಲಿ ಅರಳಿದ RCB | TV9 Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂಬುದು ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದೊಂದು ಭಾವನೆ. ಕಳೆದ 19 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ಹಣೆಬರಹವನ್ನು ಬದಲಾಯಿಸಲು ಸಾರಥಿಗಳಾಗಿ ಬಂದಿದ್ದು ಬರೋಬ್ಬರಿ 8 ಹೆಡ್ ಕೋಚ್‌ಗಳು! ಆದರೆ 7 ಕೋಚ್​ಗಳಿಂದ ಆರ್​ಸಿಬಿ ಅಭಿಮಾನಿಗಳಿಗೆ ಸಿಕ್ಕಿದ್ದು ‘ಈ ಸಲ ಕಪ್ ನಮ್ದಲ್ಲ’ ಎನ್ನುವ ಡೈಲಾಗ್ ಮಾತ್ರ.

ಅದರಲ್ಲೂ 2023 ರಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಚೈತನ್ಯ ನೀಡಿದ್ದು ಝಿಂಬಾಬ್ವೆ ತಂಡದ ಮಾಜಿ ನಾಯಕ ಆ್ಯಂಡಿ ಫ್ಲವರ್. ಹೌದು, 2024 ರಲ್ಲಿ ಆ್ಯಂಡಿ ಫ್ಲವರ್​ ಆರ್​ಸಿಬಿ ತಂಡಕ್ಕೆ ಬಂದಾಗ ಟೀಮ್ ಅಷ್ಟಕ್ಕಷ್ಟೇ ಆಗಿತ್ತು. ಆದರೆ ಯಾವಾಗ ಅವರು ತಂಡಕ್ಕೆ ಮೇಜರ್ ಸರ್ಜರಿ ಮಾಡಿದರೋ ಅಲ್ಲೇ ರಾಯಲ್ ಪಡೆ ಕಪ್ ಗೆಲ್ಲುವ ಸೂಚನೆ ಸಿಕ್ಕಿತ್ತು. ಇಂತಹದೊಂದು ಸೂಚನೆ ಸಿಗಲು ಮುಖ್ಯ ಕಾರಣ ಫ್ಲವರ್​ ಅವರ ಯಶೋಗಾಥೆ.

  • ಝಿಂಬಾಬ್ವೆ ತಂಡ ಮಾಜಿ ಆಟಗಾರ ಮೊದಲ ಬಾರಿಗೆ ಕೋಚಿಂಗ್ ಸ್ಥಾನ ಅಲಂಕರಿಸಿದ್ದು ಇಂಗ್ಲೆಂಡ್​ ತಂಡಕ್ಕೆ ಎಂಬುದು ವಿಶೇಷ. 2007 ರಲ್ಲಿ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಆಗಿ ಆ್ಯಂಡಿ ಫ್ಲವರ್ ಹೊಸ ಇನಿಂಗ್ಸ್ ಆರಂಭಿಸಿದ್ದರು. ಈ ಇನಿಂಗ್ಸ್ ಆರಂಭದೊಂದಿಗೆ ಇಂಗ್ಲೆಂಡ್ ಪಾಲಿಗೆ ಮರೀಚಿಕೆಯಾಗಿದ್ದ ವಿಶ್ವಕಪ್ ಅನ್ನು ತಂದುಕೊಟ್ಟಿದ್ದರು.
  • 2010 ರಲ್ಲಿ ಇಂಗ್ಲೆಂಡ್ ತಂಡವು ತನ್ನ ಮೊದಲ ಐಸಿಸಿ ವಿಶ್ವಕಪ್ ಗೆದ್ದಿತ್ತು. ಈ ವಿಶ್ವಕಪ್ ಗೆಲುವಿನ ಹಿಂದಿದ್ದ ಮಾಸ್ಟರ್ ಮೈಂಡ್ ಆ್ಯಂಡಿ ಫ್ಲವರ್. ಇನ್ನು ಆ್ಯಂಡಿ ಫ್ಲವರ್​ ಅವರ ಮಾರ್ಗದರ್ಶನದಲ್ಲೇ ಇಂಗ್ಲೆಂಡ್ ತಂಡವು ಟೆಸ್ಟ್ ಕ್ರಿಕೆಟ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿತ್ತು.
  • ಅಷ್ಟೇ ಅಲ್ಲದೆ 2009, 2011, 2013 ರಲ್ಲಿ ಇಂಗ್ಲೆಂಡ್ ಆ್ಯಶಸ್​ನಲ್ಲಿ ಇಂಗ್ಲೆಂಡ್ ತಂಡವು ಹ್ಯಾಟ್ರಿಕ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದು ಇಂಗ್ಲೆಂಡ್ ತಂಡ ಕೋಚ್ ಆಗಿದ್ದವರು ಆ್ಯಂಡಿ ಫ್ಲವರ್​. ಆ ಬಳಿಕ ಇಂಗ್ಲೆಂಡ್ ತಂಡ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇದರ ನಡುವೆ BBC ಯ ವರ್ಷದ ಕೋಚ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.
  • 2020 ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ (ಹಿಂದೆ ಸೇಂಟ್ ಲೂಸಿಯಾ ಝೌಕ್ಸ್) ತಂಡ ಮುಖ್ಯ ತರಬೇತುದಾರರಾಗಿ ನೇಮಕಗೊಂಡರು. ಇವರ ಮಾರ್ಗದರ್ಶನದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಎರಡು ಬಾರಿ ಫೈನಲ್ ಆಡಿತ್ತು.
  • 2021 ರಲ್ಲಿ PSL (ಪಾಕಿಸ್ತಾನ್ ಸೂಪರ್ ಲೀಗ್) ನಲ್ಲಿ ಮುಲ್ತಾನ್ ಸುಲ್ತಾನ್‌ಗೆ ಮುಖ್ಯ ತರಬೇತುದಾರರಾಗಿ ಕಾಣಿಸಿಕೊಂಡಿದ್ದರು. ಅದೇ ವರ್ಷ ಮುಲ್ತಾನ್ ಸುಲ್ತಾನ್ ತಂಡವು ಚಾಂಪಿಯನ್ ಪಟ್ಟಕ್ಕೇರಿತ್ತು.
  • ಇನ್ನು 2022 ರಲ್ಲಿ ದಿ ಹ್ರಂಡೆಡ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟ್ರೆಂಟ್ ರಾಕೆಟ್ಸ್ ತಂಡದ ಕೋಚ್ ಕೂಡ ಆ್ಯಂಡಿ ಫ್ಲವರ್.
  • ಹಾಗೆಯೇ 2023 ರಲ್ಲಿ ಇಂಟರ್​ನ್ಯಾಷನಲ್ ಲೀಗ್ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಗಲ್ಫ್ ಜೈಂಟ್ಸ್ ಟೀಮ್​ಗೆ ಯಶಸ್ವಿ ಮಾರ್ಗದರ್ಶನ ನೀಡಿದ್ದ ಆ್ಯಂಡಿ ಫ್ಲವರ್​, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
  • 2023 ರಲ್ಲಿ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಮುಲ್ತಾನ್ ಸುಲ್ತಾನ್ ತಂಡd ಕೋಚ್ ಕೂಡ ಆ್ಯಂಡಿ ಫ್ಲವರ್ ಎಂಬುದು ವಿಶೇಷ.
  • ಹಾಗೆಯೇ ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದ ಆ್ಯಂಡಿ ಫ್ಲವರ್ ಸತತ 2 ಸೀಸನ್​ಗಳಲ್ಲೂ ಹೊಸ ತಂಡವನ್ನು ಪ್ಲೇಆಫ್​ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಈ ಎಲ್ಲಾ ಸಾಧನೆಗಳೊಂದಿಗೆ ಆ್ಯಂಡಿ ಫ್ಲವರ್ ಆರ್​ಸಿಬಿಗೆ ಬಂದಿದ್ದರು. ಬಂದ ವರ್ಷವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ಲೇಆಫ್​ಗೆ ತಲುಪಿಸಿದ್ದರು. ಇದರೊಂದಿಗೆ ಆರ್​ಸಿಬಿ ತಂಡಕ್ಕೆ ಕಪ್ ಗೆಲ್ಲುವ ಕನಸು ಬಿತ್ತಿದ್ದರು. ಈ ಕನಸಿಗಾಗಿ ಆರ್​ಸಿಬಿ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದರು.

ಇಲ್ಲಿ ಆರ್​ಸಿಬಿ ಕೋಚ್ ಮಾಡಿದ ಮೊದಲ ಬದಲಾವಣೆ ಸ್ಟಾರ್ ಆಟಗಾರರ ಮೇಲಿನ ಅತಿಯಾದ ಅವಲಂಬನೆ. ಅಲ್ಲದೆ ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರರನ್ನೇ ಆಯ್ಕೆ ಮಾಡಿ ಪ್ಲೇಯಿಂಗ್ ಇಲೆವೆನ್ ರೂಪಿಸಿದರು. ಈ ಪ್ಲೇಯಿಂಗ್ ಇಲೆವೆನ್​ಗೆ ಬಲವಾದ ಬೆಂಚ್ ಸ್ಟ್ರೆಂಥ್ ಸೃಷ್ಟಿಸಿದರು. ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬದಲಾಯಿತು.

  • ಐಪಿಎಲ್ 2025 ರಲ್ಲಿ ಆರ್​ಸಿಬಿ ತಂಡವು ಪ್ರಚಂಡ ಪ್ರದರ್ಶನ ನೀಡಿತು. ಈ ಪ್ರಚಂಡ ಪ್ರದರ್ಶನದೊಂದಿಗೆ ಆರಂಭದಲ್ಲೇ ಕಪ್ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿತು. ಅದರಂತೆ ಫೈನಲ್​ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಆರ್​ಸಿಬಿ ತಂಡಕ್ಕೆ ಸೊಚ್ಚಲ ಟ್ರೋಫಿ ತಂದು ಕೊಟ್ಟರು. ಅಲ್ಲಿಗೆ ಮೊದಲ ಅಧ್ಯಾಯ ಮುಗಿಯಿತು.
  • ಎರಡನೇ ಅಧ್ಯಾಯದಲ್ಲೂ ಆರ್​ಸಿಬಿ ಮಾತ್ರ ಬದಲಾಗಲಿಲ್ಲ. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಹೊಸ ಹುರುಪಿನಲ್ಲಿ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2026ರ ಫೈನಲ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ.
  • ಅಂದರೆ ಕಳೆದ 17 ವರ್ಷಗಳಲ್ಲಿ ಸಾಧ್ಯವಾಗದೇ ಇರುವುದನ್ನು ಆ್ಯಂಡಿ ಫ್ಲವರ್​ ಮೂರು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಅದು ಕೂಡ ಬ್ಯಾಕ್ ಟು ಬ್ಯಾಕ್ ಪ್ರಶಸ್ತಿ ಗೆಲ್ಲುವ ಮೂಲಕ.

ಅಂದರೆ 17 ವರ್ಷಗಳ ಕಾಲ ಕೇವಲ ‘ಈ ಸಲ ಕಪ್ ನಮ್ದು’ ಎಂಬ ಘೋಷಣೆಗೆ ಸೀಮಿತವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹಣೆಬರಹವನ್ನು ಹೆಡ್ ಕೋಚ್ ಆ್ಯಂಡಿ ಫ್ಲವರ್ ಬದಲಾಯಿಸಿದ್ದಾರೆ. ಈ ಬದಲಾವಣೆಯೊಂದಿಗೆ ಆರ್​ಸಿಬಿ ಪಡೆ ಬ್ಯಾಕ್ ಟು ಬ್ಯಾಕ್ ಟ್ರೋಫಿ ಎತ್ತಿ ಹಿಡಿದಿದೆ.

ಇದನ್ನೂ ಓದಿ: RCB ಗೆಲುವಿನ ಬೆನ್ನಲ್ಲೇ ಅಂಬಾಟಿ ರಾಯುಡು ‘ಬಿಗ್ ಬಾಯ್ಸ್’ ಹೇಳಿಕೆ!

ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎರಡು ಟ್ರೋಫಿ ಗೆಲ್ಲಿಸಿಕೊಟ್ಟಿರುವ ಆ್ಯಂಡಿ ಫ್ಲವರ್ ಇದೀಗ ದಿ ಹಂಡ್ರೆಡ್ ಲೀಗ್​ನತ್ತ ಮುಖ ಮಾಡಿದ್ದಾರೆ. ಮುಂಬರುವ ದಿ ಹಂಡ್ರೆಡ್ ಲೀಗ್​ನಲ್ಲಿ ‘ಆ್ಯಂಡಿ ಫ್ಲವರ್’​ನಲ್ಲಿ ‘ಲಂಡನ್ ಸ್ಪಿರಿಟ್’ ಅರಳಿದೆಯಾ ಕಾದು ನೋಡಬೇಕಿದೆ.

Source link

ತಮಿಳಿನಲ್ಲಿ ಶಿವರಾಜ್​ಕುಮಾರ್ 4ನೇ ಸಿನಿಮಾಗೆ ಮುಹೂರ್ತ; ಭರ್ಜರಿ ಡಿಮ್ಯಾಂಡ್

‘ಟೂರಿಸ್ಟ್ ಫ್ಯಾಮಿಲಿ’ ಮತ್ತು ‘ವಿತ್ ಲವ್’ ಚಿತ್ರಗಳ ಮೂಲಕ ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ-ನಿರ್ದೇಶಕ ಅಭಿಷನ್ ಜೀವಿಂತ್ ಅವರ ಹೊಸ ಚಿತ್ರದಲ್ಲಿ ಶಿವರಾಜ್‌ಕುಮಾರ್ (Shiva Rajkumar) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರವನ್ನು ಅಭಿಷನ್ ಅವರೇ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಅಭಿಷನ್ ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ, ಬದಲಿಗೆ ಶಿವಣ್ಣ (Shivanna) ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇವರಿಬ್ಬರು ತಂದೆ-ಮಗನಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು (ಜೂನ್ 1) ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಚಿತ್ರತಂಡ ಸಂಪೂರ್ಣ ತಾರಾಗಣವನ್ನು ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರವನ್ನು ಗೌತಮ್ ಶಿವರಾಮನ್ ನಿರ್ದೇಶಿಸುತ್ತಿದ್ದಾರೆ. ಅವರು ಈ ಹಿಂದೆ ಅಭಿಷನ್ ಜೀವಿಂತ್ ಅವರ ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರದಲ್ಲಿ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಡ್ರಾಮಾ ಕಂಪನಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ಶಿವಾನಿ ನಾಗರಂ ಮತ್ತು ಯೋಗ ಲಕ್ಷ್ಮಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ನಟ ಗಾನಾ ವಿನೋದ್ ಕೂಡ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಲಿಯೋನ್ ಜೇಮ್ಸ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದ ಶಿವರಾಜ್‌ಕುಮಾರ್, ಆ ಬಳಿಕ ಧನುಷ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಅಬ್ಬರಿಸಿದ್ದರು. ಸದ್ಯದಲ್ಲೇ ಬರಲಿರುವ ‘ಜೈಲರ್ 2’ ನಂತರ, ಪ್ರಸ್ತುತ ಅನೌನ್ಸ್ ಆಗಿರುವ ಚಿತ್ರವು ಶಿವಣ್ಣ ಅವರ ಪೂರ್ಣ ಪ್ರಮಾಣದ 4ನೇ ತಮಿಳು ಸಿನಿಮಾವಾಗಲಿದೆ.

ಇದನ್ನೂ ಓದಿ: ಗುಮ್ಮಡಿ ನರಸಯ್ಯ ನಿವಾಸಕ್ಕೆ ಭೇಟಿ ನೀಡಿದ ಶಿವರಾಜ್​ಕುಮಾರ್: ಫೋಟೋ ಗ್ಯಾಲರಿ

ಸದ್ಯ ಶಿವಣ್ಣ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕರಾಗಿ ನಟಿಸಿರುವ, ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ ಚಿತ್ರದಲ್ಲಿ ಶಿವಣ್ಣ ಗೌರನಾಯ್ಡು ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಇದರ ಜೊತೆಗೆ ‘ಸತ್ಯ ಜ್ಯೋತಿ ಫಿಲ್ಮ್ಸ್’ ಬ್ಯಾನರ್‌ನಲ್ಲಿ ನಿರ್ದೇಶಕ ಶರವಣನ್ ಅವರ ಸಿನಿಮಾವೂ ಸದ್ಯದಲ್ಲೇ ಸೆಟ್ಟೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ, ಮಾಡಿದ್ದು ಬರೋಬ್ಬರಿ 7 ತಾಸು ನಿದ್ರೆ

ಬೀಜಿಂಗ್, ಜೂನ್ 01: ಜಿಮ್​ನಲ್ಲಿ ವರ್ಕೌಟ್ ಮಾಡಿದ ಬಳಿಕ ಸಾಮಾನ್ಯವಾಗಿ ಆಯಾಸವಾಗುತ್ತದೆ. ಚೀನಾದ ಜಿಮ್ ಒಂದರಲ್ಲಿ ನಗು ತರಿಸುವ ವಿಚಿತ್ರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಜಿಮ್‌ನಲ್ಲಿ ವ್ಯಾಯಾಮ ಆರಂಭಿಸುವ ಮುನ್ನವೇ ಕೇವಲ ವಾರ್ಮ್-ಅಪ್ ಮಾಡಿ ಮ್ಯಾಟ್ ಮೇಲೆ ಮಲಗಿದ್ದಾರೆ. ಆದರೆ, ಅವರು ಎಷ್ಟು ದಣಿದಿದ್ದರೆಂದರೆ, ಮಲಗಿದ ತಕ್ಷಣವೇ ಅವರಿಗೆ ಗಾಢ ನಿದ್ದೆ ಹತ್ತಿಬಿಟ್ಟಿದೆ. ಅಚ್ಚರಿಯೆಂದರೆ, ಆ ವ್ಯಕ್ತಿ ಜಿಮ್‌ನಲ್ಲೇ ಸತತ 7 ಗಂಟೆಗಳ ಕಾಲ ಯಾರದೂ ತೊಂದರೆಯಿಲ್ಲದೆ ಆರಾಮವಾಗಿ ನಿದ್ದೆ ಮಾಡಿದ್ದಾರೆ. ಜಿಮ್ ಸಿಬ್ಬಂದಿ ಮತ್ತು ಅಲ್ಲಿಗೆ ಬಂದ ಇತರರು ಅವರ ಗಾಢ ನಿದ್ದೆಯನ್ನು ನೋಡಿ,  ತೊಂದರೆ ಮಾಡುವುದು ಬೇಡವೆಂದು ನಿರ್ಧರಿಸಿದ್ದಾರೆ. ಹೀಗಾಗಿ ಸಂಜೆಯಾಗುವವರೆಗೂ ಯಾರೂ ಅವರನ್ನು ಎಬ್ಬಿಸಲೇ ಇಲ್ಲ. ಬಳಿಕ ಸಂಜೆ ಮಹಿಳೆಯೊಬ್ಬರು ವರ್ಕೌಟ್ ಮುಗಿಸಿ ಮನೆಗೆ ಹೋಗುವಾಗ ಅವರನ್ನು ಎಬ್ಬಿಸಿದ್ದಾರೆ. ಆಗ ತಾನು ಇಷ್ಟು ಹೊತ್ತು ಮಲಗಿದ್ದೆನೇ ಎಂದು ಅವರಿಗೂ ಅಚ್ಚರಿಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026 Awards: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ಗೆ ತೆರೆ ಬಿದ್ದಿದೆ. ಈ ಬಾರಿ ಕೂಡ ಪ್ರಚಂಡ ಪ್ರದರ್ಶನ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದುಕೊಂಡಿದ್ದಾರೆ. ಈ ಟ್ರೋಫಿಯೊಂದಿಗೆ ಆರ್​ಸಿಬಿ 20 ಕೋಟಿ ರೂ. ನಗದು ಬಹುಮಾನ ಪಡೆದಿದ್ದಾರೆ. ಅತ್ತ ಟೂರ್ನಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ವೈಯುಕ್ತಿಕ ಪ್ರಶಸ್ತಿಗಳ ಮೂಲಕ ಒಟ್ಟು 55 ಲಕ್ಷ ರೂ. ಹಾಗೂ ಟಾಟಾ ಸಿಯೆರಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಂತೆ ಈ ಬಾರಿ ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ತಂಡಗಳ ಬಹುಮಾನದ ವಿವರ:

ಸ್ಥಾನ / ಪ್ರಶಸ್ತಿ ವಿಜೇತ ತಂಡ ನಗದು ಬಹುಮಾನ
ವಿನ್ನರ್ಸ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ₹20 ಕೋಟಿ
ರನ್ನರ್ಸ್ ಗುಜರಾತ್ ಟೈಟಾನ್ಸ್ ₹12.5 ಕೋಟಿ
3ನೇ ಸ್ಥಾನ ರಾಜಸ್ಥಾನ್ ರಾಯಲ್ಸ್ ₹7 ಕೋಟಿ
4ನೇ ಸ್ಥಾನ ಸನ್‌ರೈಸರ್ಸ್ ಹೈದರಾಬಾದ್ ₹6.5 ಕೋಟಿ
ಫೇರ್ ಪ್ಲೇ ಪ್ರಶಸ್ತಿ ಪಂಜಾಬ್ ಕಿಂಗ್ಸ್ ₹10 ಲಕ್ಷ

ವೈಯಕ್ತಿಕ ಪ್ರಶಸ್ತಿಗಳು:

  • ಆರೆಂಜ್ ಕ್ಯಾಪ್ (ಹೆಚ್ಚು ರನ್): ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್ – 776 ರನ್) – ₹10 ಲಕ್ಷ
  • ಪರ್ಪಲ್ ಕ್ಯಾಪ್ (ಹೆಚ್ಚು ವಿಕೆಟ್): ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್ – 29 ವಿಕೆಟ್) – ₹10 ಲಕ್ಷ
  • ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ (MVP): ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – ₹15 ಲಕ್ಷ
  • ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – ₹10 ಲಕ್ಷಸೀಸನ್‌ನ
  • ಸೂಪರ್ ಸ್ಟ್ರೈಕರ್: ವೈಭವ್ ಸೂರ್ಯವಂಶಿ (ಸ್ಟ್ರೈಕ್ ರೇಟ್ 237.3) – ₹10 ಲಕ್ಷ + ಟಾಟಾ ಸಿಯೆರಾ ಕಾರ್
  • ಸೂಪರ್ ಸಿಕ್ಸರ್ಸ್ ಪ್ರಶಸ್ತಿ: ವೈಭವ್ ಸೂರ್ಯವಂಶಿ (72 ಸಿಕ್ಸ್) – ₹10 ಲಕ್ಷ
  • ಹೆಚ್ಚು ಫೋರ್ ಬಾರಿಸಿದ ಆಟಗಾರ: ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್ – 75 ಫೋರ್) – ₹10 ಲಕ್ಷ
  • ಫ್ಯಾಂಟಸಿ ಪ್ಲೇಯರ್ ಆಫ್ ದಿ ಸೀಸನ್: ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – ₹10 ಲಕ್ಷ
  • ಗ್ರೀನ್ ಡಾಟ್ ಬಾಲ್ ಪ್ರಶಸ್ತಿ: ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್ – 172 ಡಾಟ್ ಬಾಲ್) – ₹10 ಲಕ್ಷ
  • ಕ್ಯಾಚ್ ಆಫ್ ದಿ ಸೀಸನ್: ಮನೀಶ್ ಪಾಂಡೆ (ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ) – ₹10 ಲಕ್ಷ
  • ಫೈನಲ್ ಪ್ಲೇಯರ್ ಆಫ್ ದಿ ಮ್ಯಾಚ್: ವಿರಾಟ್ ಕೊಹ್ಲಿ (75 ರನ್​ಗಳು)- ₹5 ಲಕ್ಷ.

ಇದನ್ನೂ ಓದಿ: RCB ಗೆಲುವಿನ ಬೆನ್ನಲ್ಲೇ ಅಂಬಾಟಿ ರಾಯುಡು ‘ಬಿಗ್ ಬಾಯ್ಸ್’ ಹೇಳಿಕೆ!

ಇನ್ನಿತರೆ ಪ್ರಶಸ್ತಿಗಳು:

  • ಉತ್ತಮ ಮೈದಾನ (5 ಕ್ಕಿಂತ ಹೆಚ್ಚು ಪಂದ್ಯಗಳು): ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) – ₹50 ಲಕ್ಷ
  • ಉತ್ತಮ ಮೈದಾನ (4 ಅಥವಾ ಕಡಿಮೆ ಪಂದ್ಯಗಳು): ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) – ₹25 ಲಕ್ಷ.

 

 

Source link